Hindi/Tamil/English/Telugu/Kannada/Malayalam/Ilangai Tamil/Sinhala
18/09/22 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 15/04/92
<
Listen to the Murli audio file
ಬ್ರಾಹ್ಮಣರ ಎರಡು ಚಿಹ್ನೆಗಳು - ನಿಶ್ಚಯ ಹಾಗೂ ವಿಜಯ.
ಇಂದು ಬಾಪ್ದಾದಾ ನಾಲ್ಕಾರು ಕಡೆಯ ಬ್ರಾಹ್ಮಣ ಮಕ್ಕಳ ವಿಶೇಷ ಎರಡು ಲಕ್ಷಣಗಳನ್ನು ನೋಡುತ್ತಿದ್ದೆವು. ಬ್ರಾಹ್ಮಣರು ಅರ್ಥಾತ್ ನಿಶ್ಚಯಬುದ್ಧಿ ಮತ್ತು ನಿಶ್ಚಯಬುದ್ಧಿ ಅರ್ಥಾತ್ ವಿಜಯಿಗಳು ಅಂದಾಗ ಪ್ರತಿಯೊಬ್ಬ ಬ್ರಾಹ್ಮಣರು ಎಲ್ಲಿಯವರೆಗೆ ನಿಶ್ಚಯಬುದ್ಧಿಯವರಾಗಿದ್ದೀರಿ ಮತ್ತು ಎಷ್ಟು ವಿಜಯಿಗಳಾಗಿದ್ದೀರಿ? ಏಕೆಂದರೆ ಬ್ರಾಹ್ಮಣ ಜೀವನದ ತಳಹದಿಯೇ ನಿಶ್ಚಯವಾಗಿದೆ ಮತ್ತು ನಿಶ್ಚಯದ ಪ್ರಮಾಣವಾಗಿದೆ- ವಿಜಯ ಅಂದಾಗ ನಿಶ್ಚಯ ಮತ್ತು ವಿಜಯ ಎರಡರ ಪರ್ಸೆಂಟೇಜ್ ಒಂದೇ ಆಗಿದೆಯೋ ಅಥವಾ ಅಂತರವಿದೆಯೋ? ಫಲಿತಾಂಶದಲ್ಲಿ ಏನನ್ನು ನೋಡಿರಬಹುದು? ನಿಶ್ಚಯದ ಪರ್ಸೆಂಟೇಜನ್ನು ಎಲ್ಲರೂ ಹೆಚ್ಚಿಗೆ ಅನುಭವ ಮಾಡುತ್ತಾರೆ ಮತ್ತು ವಿಜಯದ ಪರ್ಸೆಂಟೇಜ್ ನಿಶ್ಚಯಕ್ಕಿಂತಲೂ ಕಡಿಮೆ ಅನುಭವ ಮಾಡುತ್ತಾರೆ. ಎಷ್ಟು ನಿಶ್ಚಯವಿದೆ ಎಂದು ಯಾರೊಂದಿಗಾದರೂ ಕೇಳಿದರೆ ಎಲ್ಲರೂ 100% ಇದೆಯೆಂದು ಹೇಳುತ್ತಾರೆ ಮತ್ತು ನಿಶ್ಚಯದ ಚಿಹ್ನೆ ವಿಜಯವು ಎಷ್ಟಿದೆ ಎಂದು ಕೇಳಿದಾಗ ಅದರಲ್ಲಿ 100% ಎಂದು ಹೇಳುತ್ತೀರಾ? ತಮ್ಮ ಸ್ಲೋಗನ್ ಆಗಿದೆ- ನಿಶ್ಚಯಬುದ್ಧಿ ವಿಜಯಂತಿ ಅಂದಮೇಲೆ ಮತ್ತೆ ನಿಶ್ಚಯ ಮತ್ತು ವಿಜಯದಲ್ಲಿ ಅಂತರವೇಕೆ? ನಿಶ್ಚಯ ಮತ್ತು ವಿಜಯ ಎರಡೂ ಲಕ್ಷಣಗಳು ಸಮಾನವಾಗಿರಬೇಕಲ್ಲವೆ ಆದರೆ ಅಂತರವೇಕೆ ಆಗುತ್ತದೆ? ಇದಕ್ಕೆ ಕಾರಣವೇನು? ಯಾವುದೇ ತಳಪಾಯವನ್ನು ಯಾವಾಗ ಪಕ್ಕಾ ಮಾಡುವರೋ ಆಗ ಆ ಸ್ಥಾನವನ್ನು ನಾಲ್ಕೂಕಡೆ ಗಮನ ನೀಡಿ ಬಲಪಡಿಸಲಾಗುತ್ತದೆ. ಒಂದುವೇಳೆ ನಾಲ್ಕೂಕಡೆಗಳಲ್ಲಿ ಯಾವುದಾದರೂ ಒಂದು ಮೂಲೆಯು ನಿರ್ಬಲವಾದರೂ ಸಹ ಅದು ಪಕ್ಕಾ ಆಗಿರುವುದೋ ಅಥವಾ ಅಲುಗಾಡುತ್ತಾ ಇರುವುದೋ? ಹಾಗೆಯೇ ನಿಶ್ಚಯದ ತಳಪಾಯವು ನಾಲ್ಕೂಕಡೆ ಅರ್ಥಾತ್ ವಿಶೇಷವಾಗಿ ನಾಲ್ಕು ಮಾತುಗಳ ಸಂಪೂರ್ಣ ನಿಶ್ಚಯವಿರಬೇಕು. ಆ ನಾಲ್ಕುಮಾತುಗಳನ್ನು ಮೊದಲೂ ತಿಳಿಸಿದ್ದೇವೆ:- ಒಂದನೆಯದಾಗಿ- ತಂದೆಯಲ್ಲಿ ಸಂಪೂರ್ಣ ನಿಶ್ಚಯ. ಅವರು ಹೇಗಿದ್ದಾರೆ, ಯಾರಾಗಿದ್ದಾರೆ, ಯಾವ ಶ್ರೀಮತವನ್ನು ಹೇಗೆ ಕೊಟ್ಟಿದ್ದಾರೆಯೋ ಅದರಂತೆ ವಿಧಿಪೂರ್ವಕವಾಗಿ ಯಥಾರ್ಥವಾಗಿ ಅರಿತುಕೊಳ್ಳುವುದು, ಒಪ್ಪಿಕೊಳ್ಳುವುದು ಮತ್ತು ಅದರಂತೆ ನಡೆಯುವುದು. ಎರಡನೆಯ ಮಾತು- ತಮ್ಮ ಶ್ರೇಷ್ಠ ಸ್ವಮಾನ ಸಂಪನ್ನ ಶ್ರೇಷ್ಠಭಾಗ್ಯಶಾಲಿ ಆತ್ಮನ ಸ್ವರೂಪವನ್ನು ಅರಿತುಕೊಳ್ಳುವುದು, ಒಪ್ಪಿಕೊಳ್ಳುವುದು ಮತ್ತು ಅದರಂತೆಯೇ ನಡೆಯುವುದು. ಮೂರನೆಯ ಮಾತು- ತನ್ನ ಶ್ರೇಷ್ಠ ಬ್ರಾಹ್ಮಣ ಪರಿವಾರವನ್ನು ಯಥಾರ್ಥವಿಧಿಯಿಂದ ಹೇಗಿದ್ದಾರೆಯೋ ಹಾಗೆಯೇ ತಿಳಿದು, ಒಪ್ಪಿ ಮತ್ತು ಅದರಂತೆಯೇ ನಡೆಯುವುದು. ನಾಲ್ಕನೇ ಮಾತು- ಇಡೀ ಕಲ್ಪದಲ್ಲಿ ಈ ಶ್ರೇಷ್ಠ ಪುರುಷೋತ್ತಮ ಯುಗ ಅಥವಾ ಸಮಯವನ್ನು ಅದೇ ಮಹತ್ವಿಕೆಯಿಂದ ತಿಳಿದುಕೊಂಡು ಅದನ್ನು ಒಪ್ಪಿ ನಡೆಯುವುದು. ಈ ನಾಲ್ಕುಮಾತುಗಳಲ್ಲಿ ಯಾರು ಅಟಲ ನಿಶ್ಚಯಬುದ್ಧಿಯವರಾಗಿದ್ದಾರೆಯೋ ಮತ್ತು ನಾಲ್ಕರಲ್ಲಿಯೂ ಸಂಪನ್ನ ಪರ್ಸೆಂಟೇಜ್ ಇದೆಯೋ ಅವರನ್ನೇ ಸಂಪೂರ್ಣ ಯಥಾರ್ಥ ನಿಶ್ಚಯಬುದ್ಧಿಯವರೆಂದು ಹೇಳಲಾಗುವುದು.
ಈ ನಾಲ್ಕು ನಿಶ್ಚಯದ ತಳಪಾಯದ ಸ್ತಂಭಗಳಾಗಿದೆ. ಕೇವಲ ಒಬ್ಬ ತಂದೆಯಲ್ಲಿ ನಿಶ್ಚಯವಿದ್ದರೆ ಇನ್ನು ಮೂರು ಮಾತುಗಳಲ್ಲಿ ಯಾವುದೇ ಸ್ತಂಭವು ನಿರ್ಬಲವಾಗಿದೆ. ಸದಾ ಬಲವಾಗಿಲ್ಲ, ಕೆಲವೊಮ್ಮೆ ಅಚಲವಾಗಿರುತ್ತದೆ, ಕೆಲವೊಮ್ಮೆ ಅಲುಗಾಡುತ್ತದೆ ಎಂದರೂ ಸಹ ಅದು ಸೋಲುಂಟು ಮಾಡಿಸುತ್ತದೆ, ವಿಜಯಿಗಳನ್ನಾಗಿ ಮಾಡುವುದಿಲ್ಲ. ಯಾವುದೇ ಏರುಪೇರು ನಿರ್ಬಲರನ್ನಾಗಿ ಮಾಡುತ್ತದೆಯೆಂದರೆ ನಿರ್ಬಲರು ಸದಾ ವಿಜಯಿಗಳಾಗಲು ಸಾಧ್ಯವಿಲ್ಲ ಆದ್ದರಿಂದ ನಿಶ್ಚಯ ಮತ್ತು ವಿಜಯದಲ್ಲಿ ಅಂತರವಾಗಿಬಿಡುತ್ತದೆ. ಬಾಪ್ದಾದಾರವರ ಮುಂದೆ ಬಹಳಮಕ್ಕಳು ಮುಗ್ದರಾಗಿ ವಾರ್ತಾಲಾಪ ಮಾಡುತ್ತಾರೆ- ನಮಗೆ ನಿಶ್ಚಯವಂತೂ ಪೂರ್ಣವಾಗಿದೆ, ಬಾಬಾ ನಾನು ನಿಮ್ಮವನು ಮತ್ತು ತಾವು ನನ್ನವರಾಗಿದ್ದೀರಿ, ಇದು ಪಕ್ಕಾ ಇದೆ. 100% ಅಲ್ಲ, 500% ನಿಶ್ಚಯವಿದೆ.... ಆದರೆ ಏರುಪೇರೂ ಸಹ ಇದೆ ಮತ್ತು ಒಪ್ಪಿಸುವುದಕ್ಕಾಗಿಯೂ ಹೇಳುತ್ತಾರೆ- ತಾವಂತೂ ನಮ್ಮವರಾಗಿದ್ದೀರಲ್ಲವೆ ಎಂದು ಪಕ್ಕಾ ಮಾಡಿಸುತ್ತಾರೆ. ಬಹಳ ಮುಗ್ಧಮಾತುಗಳಲ್ಲಿ ಮಾತನಾಡುತ್ತಾರೆ- ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ತಮ್ಮವನಾಗಿದ್ದೇನೆ ಎಂದು. ಮತ್ತು ತಂದೆಯೂ ಹೇಳುತ್ತೇವೆ- ತಾವು ಹೇಗಿದ್ದೀರೋ, ಯಾರಾಗಿದ್ದೀರೋ, ನೀವು ನನ್ನವರಾಗಿದ್ದೀರಿ ಆದರೆ ತಂದೆಯು ಹೇಗಿದ್ದಾರೆ, ಯಾರಾಗಿದ್ದಾರೆಯೋ ಹಾಗೆಯೇ ತಮ್ಮವರಾಗಿದ್ದಾರೆಯೇ? ಮುಗ್ಧರಾಗುವುದು ಒಳ್ಳೆಯದೇ ಆಗಿದೆ, ಹೃದಯದಿಂದ ಮುಗ್ಧರಾಗಿದೆ ಆದರೆ ಮಾತುಗಳಲ್ಲಿ ಹಾಗೂ ಕರ್ಮದಲ್ಲಿ ಮುಗ್ಧರಾಗಬೇಡಿ. ಹೃದಯದಿಂದ ಭೋಲಾ ಮಕ್ಕಳು ಭೋಲಾನಾಥ£ಗೆ ಪ್ರಿಯರಾಗಿದ್ದಾರೆ. ಮಾತುಗಳಲ್ಲಿ ಭೋಲಾ ಆಗಿರುವವರು ಸ್ವಯಂಗೂ ಮೋಸ ಮಾಡಿಕೊಳ್ಳುತ್ತಾರೆ ಮತ್ತು ಅನ್ಯರಿಗೂ ಮೋಸ ಮಾಡುತ್ತಾರೆ. ಮತ್ತು ಕರ್ಮದಿಂದ ಭೋಲಾ ಆಗಿರುವವರು ತನಗೂ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ ಮತ್ತು ಸೇವೆಯಲ್ಲಿಯೂ ನಷ್ಟ ಮಾಡುತ್ತಾರೆ ಆದ್ದರಿಂದ ಭಲೆ ಹೃದಯದಿಂದ ಭೋಲಾ (ಮುಗ್ಧ) ಆಗಿರಿ ಆದರೆ ಮಾತು, ಕರ್ಮದಲ್ಲಿ ಸಂಪೂರ್ಣ ಸೇಂಟ್ ಆಗಿರಿ. ಸೇಂಟ್ ಅರ್ಥಾತ್ ಮಹಾನ್ ಆತ್ಮ. ಆದರೆ ಮಾತುಗಳಲ್ಲಿ ತ್ರಿಕಾಲದರ್ಶಿಯಾಗಿ ಮಾತನಾಡಿ ಮತ್ತು ಕೇಳಿರಿ- ಕರ್ಮದಲ್ಲಿ ಪ್ರತೀ ಕರ್ಮದ ಪರಿಣಾಮವನ್ನು ಜ್ಞಾನಪೂರ್ಣರಾಗಿ ಅರಿತುಕೊಂಡು ನಂತರ ಮಾಡಿರಿ. ಇದು ಆಗಬಾರದಾಗಿತ್ತು ಆದರೆ ಆಗಿಹೋಯಿತು, ಇದನ್ನು ಮಾತನಾಡಬಾರದಾಗಿತ್ತು ಆದರೆ ಮಾತನಾಡಿಬಿಟ್ಟೆವು, ಈ ರೀತಿಯಿದ್ದರೆ ಇದರಿಂದಲೇ ಸಿದ್ಧವಾಗುತ್ತದೆ- ಕರ್ಮದ ಪರಿಣಾಮವನ್ನು ಅರಿತುಕೊಳ್ಳದೇ ಭೋಲಾತನದಲ್ಲಿ ಕರ್ಮ ಮಾಡಿಬಿಡುತ್ತೀರಿ. ನಾವಂತೂ ಭೋಲಾ ಆಗಿದ್ದೇವೆ ಆದ್ದರಿಂದ ಈ ರೀತಿ ಆಗಿಬಿಡುತ್ತದೆಯೆಂದು ತಿಳಿದುಕೊಂಡು ತಮ್ಮನ್ನು ಜಾರಿಸಿಕೊಳ್ಳಬೇಡಿ. ಹೃದಯದಿಂದ ಯಾರು ಭೋಲಾ ಆಗಿರುವರೋ ಅವರೇ ಎಲ್ಲರಿಗೂ ಪ್ರಿಯರಾಗುವರು ಅಂದಾಗ ಯಾವುದರಲ್ಲಿ ಭೋಲಾ ಆಗಬೇಕೆಂದು ತಿಳಿಯಿತೆ! ನಿಶ್ಚಯ ಮತ್ತು ವಿಜಯವನ್ನು ಸಮಾನ ಮಾಡಿಕೊಳ್ಳುವ ವಿಧಿಯೇನಾಯಿತು? ನಾಲ್ಕೂಕಡೆ ನಾಲ್ಕುಮಾತುಗಳ ಸಮಾನ ಪರ್ಸೆಂಟೇಜಿನ ನಿಶ್ಚಯವಿರಬೇಕು. ಕೆಲವು ಮಕ್ಕಳು ಮತ್ತೇನು ಹೇಳುತ್ತಾರೆಂದರೆ- ಬಾಬಾ, ತಮ್ಮಲ್ಲಿ ಪೂರ್ಣನಿಶ್ಚಯವಿದೆ ಆದರೆ ತನ್ನಲ್ಲಿ ತನಗೆ ಅಷ್ಟು ನಿಶ್ಚಯವಿಲ್ಲ. ಕೆಲವೊಮ್ಮೆ ಇರುತ್ತದೆ, ಇನ್ನೂ ಕೆಲವೊಮ್ಮೆ ನಿಶ್ಚಯವು ಕಡಿಮೆಯಾಗಿಬಿಡುತ್ತದೆ. ಮತ್ತೆ ಅಂತಹವರ ಭಾಷೆ ಹೇಗಿರುತ್ತದೆ? ಒಂದೇ ಗೀತೆಯನ್ನು ಹಾಡುತ್ತಾರೆ- ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ... ಹೀಗೇಕೆ ಆಗುತ್ತದೆಯೋ ಗೊತ್ತಿಲ್ಲ. ನನಗೆ ಭಾಗ್ಯವು ಇದೆಯೋ ಇಲ್ಲವೋ ಗೊತ್ತಿಲ್ಲ. ತಂದೆಯ ಸಹಯೋಗವು ಸಿಗುವುದೋ ಇಲ್ಲವೋ ಗೊತ್ತಿಲ್ಲ, ಸಫಲತೆಯಾಗುವುದೋ ಇಲ್ಲವೋ ಗೊತ್ತಿಲ್ಲ.. ಹೀಗೆ ಹಾಡುತ್ತಾ ಇರುತ್ತಾರೆ. ಯಾವಾಗ ಮಾ||ಸರ್ವಶಕ್ತಿವಂತರಾಗಿದ್ದೀರಿ ಅಂದಮೇಲೆ ಈ ನಿಶ್ಚಯದಲ್ಲಿ ಕೊರತೆಯಿದೆ ಆದ್ದರಿಂದಲೇ ಗೊತ್ತಿಲ್ಲ, ಗೊತ್ತಿಲ್ಲ ಎಂಬ ಹಾಡನ್ನು ಹಾಡುತ್ತೀರಿ ಮತ್ತು ಮೂರನೆಯದಾಗಿ ಇನ್ನೇನು ಹೇಳುತ್ತಾರೆ? - ಬಾಬಾ, ನಾವಂತೂ ತಮ್ಮನ್ನು ನೋಡಿ ವ್ಯಾಪಾರ ಮಾಡಿದೆವು, ನೀವು ನಮ್ಮವರಾಗಿದ್ದೀರಿ, ನಾವು ನಿಮ್ಮವರಾಗಿದ್ದೇವೆ. ನಾವು ಈ ಬ್ರಾಹ್ಮಣ ಪರಿವಾರವನ್ನು ನೋಡಿ ವ್ಯಾಪಾರ ಮಾಡಲಿಲ್ಲ. ಬ್ರಾಹ್ಮಣ ಪರಿವಾರವು ಕಿರಿಕಿರಿ ಮಾಡುವಂತದ್ದಾಗಿದೆ, ತಾವು ಮಾತ್ರ ಸರಿಯಿದ್ದೀರಿ. ಬ್ರಾಹ್ಮಣರ ಸಂಘಟನೆಯಲ್ಲಿ ನಡೆಯುವುದು ಕಷ್ಟಕರವಾಗಿದೆ. ತಾವು ಒಬ್ಬರೊಂದಿಗೆ ನಡೆಯುವುದು ಸಹಜವಾಗಿದೆ, ಆಗ ಬಾಪ್ದಾದಾ ಏನು ಹೇಳುವರು? ಬಾಪ್ದಾದಾ ಮುಗುಳ್ನಗುತ್ತೇನೆ, ಇಂತಹ ಮಕ್ಕಳೊಂದಿಗೆ ಬಾಪ್ದಾದಾರವರ ಒಂದು ಪ್ರಶ್ನೆಯಿದೆ ಏಕೆಂದರೆ ಇಂತಹ ಆತ್ಮರು ಪ್ರಸನ್ನಚಿತ್ತರಾಗಿರುವುದಿಲ್ಲ. ಹೀಗೇಕೆ, ಹಾಗೇಕೆ ಎಂದು ಬಹಳ ಪ್ರಶ್ನೆಗಳನ್ನು ಮಾಡುತ್ತಾರೆ ಅಂದಮೇಲೆ ಅವರು ಪ್ರಸನ್ನಚಿತ್ತ ಆತ್ಮರಲ್ಲ, ಪ್ರಶ್ನಚಿತ್ತ ಆತ್ಮರಾಗುತ್ತಾರೆ. ಬಾಪ್ದಾದಾರವರೊಂದಿಗೆ ಪ್ರಶ್ನೆ ಮಾಡುತ್ತೇನೆ- ತಾವಾತ್ಮರು ಮುಕ್ತಿಧಾಮದಲ್ಲಿ ಇರುವವರಾಗಿದ್ದೀರೋ ಅಥವಾ ಜೀವನ್ಮುಕ್ತಿಯಲ್ಲಿ ಬರುವವರಾಗಿದ್ದೀರೋ? ಮುಕ್ತಿಯಲ್ಲಿರಬೇಕು ನಂತರ ಜೀವನ್ಮುಕ್ತಿಯಲ್ಲಿ ಬರಬೇಕಲ್ಲವೆ. ಅಂದಮೇಲೆ ಜೀವನ್ಮುಕ್ತಿಯಲ್ಲಿ ಕೇವಲ ಬ್ರಹ್ಮಾತಂದೆ ಇರುವರೋ ಅಥವಾ ರಾಜಧಾನಿಯಿರುವುದೋ? ಕೇವಲ ಬ್ರಹ್ಮಾ ಮತ್ತು ಸರಸ್ವತಿಯು ರಾಜಾ-ರಾಣಿಯಾಗುವರೇ? ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಬೇಕಲ್ಲವೆ. ತಾವು ಛಾಲೆಂಜ್ ಮಾಡುತ್ತೀರಿ- ಆದಿಸನಾತನ ಧರ್ಮ ಮತ್ತು ಅನ್ಯಧರ್ಮಗಳಲ್ಲಿ ಎಲ್ಲದಕ್ಕಿಂತ ದೊಡ್ಡ ಅಂತರವಿದೆ, ಅವರು ಕೇವಲ ಧರ್ಮಸ್ಥಾಪನೆ ಮಾಡುತ್ತಾರೆ ಮತ್ತು ತಾವು ಧರ್ಮ ಮತ್ತು ರಾಜ್ಯ ಎರಡರ ಸ್ಥಾಪನೆ ಮಾಡುತ್ತಿದ್ದೀರಿ. ಇದು ಪಕ್ಕಾ ಇದೆಯಲ್ಲವೆ. ಧರ್ಮಸ್ಥಾಪನೆ ಮತ್ತು ರಾಜ್ಯವನ್ನೂ ಸ್ಥಾಪನೆ ಮಾಡುತ್ತಿದ್ದೀರಲ್ಲವೆ ಅಂದಮೇಲೆ ರಾಜ್ಯದಲ್ಲಿ ಏನಿರುವುದು? ಕೇವಲ ಒಬ್ಬ ರಾಜಾ, ಒಬ್ಬಳು ರಾಣಿಯಿರುತ್ತಾರೆಯೇ? ಒಬ್ಬ ರಾಜಾ-ರಾಣಿ ಮತ್ತು ತಾವು ಒಬ್ಬ ಮಗು, ಈ ರೀತಿಯ ರಾಜ್ಯವಿರುತ್ತದೆಯೇ? ಅಂದಮೇಲೆ ನಾವು ರಾಜಧಾನಿಯಲ್ಲಿ ಬರಬೇಕಾಗಿದೆ ಎಂದು ನೆನಪಿಟ್ಟುಕೊಳ್ಳಿರಿ. ರಾಜಧಾನಿಯಲ್ಲಿ ಬರುವುದು ಎಂದರೆ ಬ್ರಾಹ್ಮಣ ಪರಿವಾರದಲ್ಲಿ ಸಂತುಷ್ಟರಾಗಿರುವುದು ಮತ್ತು ಸಂತುಷ್ಟಪಡಿಸುವುದು, ಶ್ರೇಷ್ಠ ಸಂಬಂಧದಲ್ಲಿ ಬರುವುದು. ಈಗ ಬಾಪ್ದಾದಾ ಎಲ್ಲರೊಂದಿಗೆ ಕೇಳುತ್ತೇವೆ- ತಾವು ಮಾಲೆಯಲ್ಲಿ ಬರಲು ಇಚ್ಛಿಸುತ್ತೀರಾ? ಅಥವಾ ಮಾಲೆಯಿಂದ ಹೊರಗಿದ್ದರೂ ಸರಿಯೇ ಪರವಾಗಿಲ್ಲ ಎಂದು ಹೇಳುತ್ತೀರಾ? ಮಾಲೆಯಲ್ಲಿ ಬರಬೇಕಲ್ಲವೆ. 1ಂ8ರ ಮಾಲೆಯಲ್ಲಾದರೂ ಬನ್ನಿರಿ, 16,000ದ ಮಾಲೆಯಲ್ಲಾದರೂ ಬನ್ನಿರಿ ಆದರೆ ಬರಲೇಬೇಕಾಗಿದೆ. ಅಥವಾ ಇಲ್ಲವೇನು? (ಹಾಂಜಿ) ಅಂದಮೇಲೆ ಈಗ ಬ್ರಾಹ್ಮಣ ಪರಿವಾರದಿಂದ ಏಕೆ ಗಾಬರಿಯಾಗುತ್ತೀರಿ? ಯಾವುದೇ ಮಾತು ಬಂದರೆ ಏನು ಹೇಳುತ್ತೀರಿ? ಬಾಬಾ ನಮ್ಮವರಾಗಿದ್ದಾರೆ. ಸಹೋದರ-ಸಹೋದರಿಯರು ಏನು ಮಾಡುತ್ತಾರೆ? ನಾವು ಸಹೋದರ-ಸಹೋದರಿಯರೊಂದಿಗೆ ಪ್ರತಿಜ್ಞೆ ಮಾಡಿಲ್ಲ ಎಂದು ಹೇಳುತ್ತೀರಿ ಆದರೆ ಈ ಬ್ರಾಹ್ಮಣ ಜೀವನವು ಶುದ್ಧ ಸಂಬಂಧದ ಜೀವನವಾಗಿದೆ, ಮಾಲೆಯ ಜೀವನವಾಗಿದೆ. ಮಾಲೆಯ ಅರ್ಥವೇ ಆಗಿದೆ- ಸಂಘಟನೆ. ಬ್ರಾಹ್ಮಣ ಪರಿವಾರದ ನಿಶ್ಚಯದಲ್ಲಿ ಒಂದುವೇಳೆ ಯಾವುದೇ ಸಂಶಯ ಬಂದುಬಿಡುತ್ತದೆ, ವ್ಯರ್ಥಸಂಕಲ್ಪ ಬರುತ್ತದೆಯೆಂದರೆ ಅದು ನಿಶ್ಚಯವನ್ನು ಅಲುಗಾಡಿಸಿಬಿಡುತ್ತದೆ, ಏರುಪೇರಿನಲ್ಲಿ ತರುತ್ತದೆ. ಬಾಬಾ ಒಳ್ಳೆಯವರು, ಜ್ಞಾನ ಒಳ್ಳೆಯದು ಆದರೆ ಈ ದಾದಿಯರು ಒಳ್ಳೆಯವರಲ್ಲ, ನಿಮಿತ್ತ ಶಿಕ್ಷಕಿಯರು ಒಳ್ಳೆಯವರಲ್ಲ, ಪರಿವಾರ ಒಳ್ಳೆಯದಲ್ಲ..... ಇವು ನಿಶ್ಚಯಬುದ್ಧಿಯವರ ಮಾತುಗಳೇ? ಆ ಸಮಯದಲ್ಲಿ ನಿಶ್ಚಯಬುದ್ಧಿಯವರೆಂದು ಹೇಳುವುದೇ? ಅಥವಾ ಸಂಕಲ್ಪಬುದ್ಧಿಯವರೆಂದು ಹೇಳುವುದೇ? ವ್ಯರ್ಥ ಸಂಕಲ್ಪಗಳು ಪ್ರಸನ್ನಚಿತ್ತ ಬುದ್ಧಿಯವರನ್ನಾಗಿ ಇರಲು ಬಿಡುವುದಿಲ್ಲ ಅಂದಮೇಲೆ ನಿಶ್ಚಯದ ವಿಶೇಷತೆ ಏನೆಂದು ತಿಳಿಯಿತೆ?
ನಾಲ್ಕನೆಯದಾಗಿ ಇನ್ನೇನು ವಾರ್ತಾಲಾಪ ಮಾಡುತ್ತಾರೆ? ಸಮಯವೂ ಶ್ರೇಷ್ಠವಾಗಿದೆ, ಪುರುಷೋತ್ತಮ ಯುಗವಾಗಿದೆ, ಆತ್ಮ-ಪರಮಾತ್ಮನ ಮಿಲನದ ಯುಗವಾಗಿದೆ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಆದರೆ ಮತ್ತೇನು ಹೇಳುತ್ತಾರೆ? ಇನ್ನೂ ಸ್ವಲ್ಪಸಮಯವು ಇದ್ದೇ ಇದೆ. ಅಷ್ಟರಲ್ಲಿಯೇ ವಿನಾಶವಂತೂ ಆಗುವುದಿಲ್ಲ. ವಿನಾಶವಾಗುವುದು ನಂತರದ ದೀಪಾವಳಿಯನ್ನು ನೋಡುವುದಿಲ್ಲ ಎಂಬ ಮಾತನ್ನು ಸ್ಥಾಪನೆಯ ಸಮಯದಿಂದಲೂ ಹೇಳುತ್ತಲೇ ಬಂದಿದ್ದಾರೆ, ವಿನಾಶದ ಮಾತುಗಳು ಯಜ್ಞಸ್ಥಾಪನೆಯ ಸಮಯದಿಂದಲೂ ನಡೆಯುತ್ತಾ ಬಂದಿದೆ. ವಿನಾಶವೆಂದು ಹೇಳುತ್ತಾ-ಹೇಳುತ್ತಾ ಎಷ್ಟೊಂದು ವರ್ಷಗಳಾಗಿಹೋಯಿತು, ಇನ್ನೂ ಯಾವಾಗ ವಿನಾಶವಾಗುವುದೋ ಗೊತ್ತಿಲ್ಲ. ಸ್ವಲ್ಪ ಹುಡುಗಾಟಿಕೆಯ ಆಲಸ್ಯದ, ಡೀಲಾ ಪುರುಷಾರ್ಥದ ಡನ್ಲಪ್ ಹಾಸಿಗೆಯಲ್ಲಿ ವಿಶ್ರಾಂತಿ ಪಡೆಯೋಣ, ಸಮಯದಲ್ಲಿ ಸರಿಹೋಗುತ್ತೇವೆ ಎಂದು ತಿಳಿಯುತ್ತಾರೆ. ತಂದೆಗೂ ಸಹ ಇದನ್ನು ಪಕ್ಕಾ ಮಾಡಿಸುತ್ತಾರೆ- ಬಾಬಾ, ಬೇಕಾದರೆ ತಾವು ನೋಡಿರಿ ನಾವು ಸಮಯದಲ್ಲಿ ಬಹಳ ಮುಂದೆ ಹೋಗಿಬಿಡುತ್ತೇವೆ ಆದರೆ ಬಾಪ್ದಾದಾ ಇಂತಹ ಮಕ್ಕಳಿಗೆ ಸದಾ ಸಾವಧಾನ ನೀಡುತ್ತಾರೆ- ಸಮಯ ಬಂದಾಗ ಜಾಗೃತರಾಗುವುದು ಮತ್ತು ಸಮಯ ಪ್ರಮಾಣ ಪರಿವರ್ತನೆ ಮಾಡಿಕೊಂಡರೆ ಅದೇನೂ ದೊಡ್ಡ ಮಾತಲ್ಲ ಆದರೆ ಸಮಯಕ್ಕಿಂತ ಮೊದಲೇ ಪರಿವರ್ತನೆ ಮಾಡಿಕೊಂಡರೆ ತಮ್ಮ ಪುರುಷಾರ್ಥದಲ್ಲಿ ಈ ಪುರುಷಾರ್ಥದ ಅಂಕಗಳು ಜಮಾ ಆಗುವುದು ಮತ್ತು ಒಂದುವೇಳೆ ಸಮಯ ಬಂದಾಗ ಪರಿವರ್ತನೆಯಾದರೆ ಸಮಯಕ್ಕೆ ಅಂಕಗಳು ಸಿಗುವುದು, ತಮಗೆ ಸಿಗುವುದಿಲ್ಲ ಅಂದಾಗ ಪೂರ್ಣ ಫಲಿತಾಂಶದಲ್ಲಿ ಹುಡುಗಾಟಿಕೆ ಮತ್ತು ಆಲಸ್ಯದ ನಿದ್ರೆಯ ಕಾರಣ ಮೋಸಹೋಗುತ್ತೀರಿ. ಇದೂ ಸಹ ಕುಂಭಕರ್ಣನ ನಿದ್ರೆಯ ಅಂಶವಾಗಿದೆ. ದೊಡ್ಡ ಕುಂಭಕರ್ಣನಲ್ಲ, ಚಿಕ್ಕ ಕುಂಭಕರ್ಣ. ಮತ್ತೆ ಕುಂಭಕರ್ಣನಿಗೆ ಏನಾಯಿತು? ತನ್ನನ್ನೇ ಉಳಿಸಿಕೊಳ್ಳಲಾಗಲಿಲ್ಲ ಅಲ್ಲವೆ! ಹಾಗೆಯೇ ಅಂತಿಮ ಸಮಯದಲ್ಲಿಯೂ ತಮ್ಮನ್ನು ಪೂರ್ಣ ಉತ್ತೀರ್ಣರಾಗಲು ಯೋಗ್ಯರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಿಳಿಯಿತೆ- ಕೆಲವೊಮ್ಮೆ ಬಹಳ ಸಾಹಸದ ವಾರ್ತಾಲಾಪ ಮಾಡುತ್ತೀರಿ, ಕೆಲವೊಮ್ಮೆ ತುಂಟಾಟದ ವಾರ್ತಾಲಾಪ ಮಾಡುತ್ತೀರಿ, ಇನ್ನೂ ಕೆಲವೊಮ್ಮೆ ಕಿರಿಕಿರಿಯ ವಾರ್ತಾಲಾಪ ಮಾಡುತ್ತೀರಿ.
ಇಂದು ಈ ವರ್ಷದ ಸೀಜûನ್ನಿನ ಸಮಾಪ್ತಿಯಾಗಿದೆ. ಸಮಾಪ್ತಿಯೆಂದು ಹೇಳುವುದಿಲ್ಲ ಸಂಪನ್ನವಾಗುತ್ತಿದೆ ಆದ್ದರಿಂದ ಫಲಿತಾಂಶವನ್ನೂ ತಿಳಿಸುತ್ತಿದ್ದೇವೆ ಅಂದಮೇಲೆ ಈಗ ಏನು ಮಾಡಬೇಕಾಗಿದೆ? ಪರಿಶೀಲನೆ ಮಾಡಿಕೊಳ್ಳಿರಿ- ನಿಶ್ಚಯದ ತಳಪಾಯದ ನಾಲ್ಕೂಕಡೆ ಬಲವಾಗಿದೆಯೇ ಅಥವಾ ನಾಲ್ಕರಲ್ಲಿ ಯಾವುದೇ ಮಾತಿನಲ್ಲಿ ಧೃಡತೆಯ ಬದಲು ಮಾತುಗಳ ಕಾರಣ ನಿರ್ಬಲವಾಗಿದ್ದರೆ ಅದನ್ನು ಪರಿಶೀಲನ ಮಾಡಿಕೊಳ್ಳಿರಿ. ಈಗ ಇನ್ನೂ ತಪಸ್ಸು ಮಾಡಬೇಕಲ್ಲವೆ. ಮೊದಲೂ ತಿಳಿಸಿದೆವು- ಪ್ರೀತಿಗೆ ಪ್ರತ್ಯಕ್ಷ ಪ್ರಮಾಣವನ್ನು ಕೊಡಬೇಕಾಗಿದೆ ಮತ್ತು ಪ್ರೀತಿಯ ಪ್ರತ್ಯಕ್ಷ ಪ್ರಮಾಣವು ಸಮಾನರಾಗುವುದಾಗಿದೆ ಮತ್ತು ಎರಡನೆಯದಾಗಿ ಇನ್ನೇನು ಮಾಡಬೇಕಾಗಿದೆ? ಈ ವರ್ಷದ ಹೋಮ್ವರ್ಕ್ ಕೊಡುತ್ತಿದ್ದೇವೆ- ಒಂದು ಮಾತನ್ನಂತೂ ಕೇಳಿದಿರಿ, ಎರಡನೆಯ ಮಾತು- ತಮ್ಮ ನಾಲ್ಕೂ ಕಡೆಯ ತಳಪಾಯವನ್ನು ಬಲಪಡಿಸಿಕೊಳ್ಳಿರಿ. ಒಂದು ಮಾತಿನಲ್ಲಿಯೂ ನಿರ್ಬಲತೆಯಿರಬಾರದು ಆಗ ಮಾಲೆಯ ಮಣಿಯಾಗಿ ಪೂಜ್ಯ ಆತ್ಮ ಹಾಗೂ ರಾಜ್ಯಾಧಿಕಾರಿ ಆತ್ಮನಾಗುವಿರಿ ಏಕೆಂದರೆ ಬ್ರಾಹ್ಮಣರಿಂದ ದೇವತೆಗಳಾಗಬೇಕಾಗಿದೆ. ಬ್ರಾಹ್ಮಣರಾಗದೆ ದೇವತೆಗಳಾಗಲು ಸಾಧ್ಯವಿಲ್ಲ. ಬ್ರಾಹ್ಮಣರೊಂದಿಗೆ ನಿಭಾಯಿಸುವುದು ಎಂದರೆ ದೈವೀರಾಜ್ಯದ ಅಧಿಕಾರಿಗಳಾಗುವುದು ಆದ್ದರಿಂದ ಪರಿವಾರದೊಂದಿಗೆ ನಿಭಾಯಿಸಬೇಕಾಗುವುದು. ಏರುಪೇರುಗಳನ್ನು ಸಮಾಪ್ತಿ ಮಾಡಬೇಕಾಗುವುದು ಆಗಲೇ ನಿಶ್ಚಯ ಮತ್ತು ವಿಜಯ ಎರಡರ ಸಮಾನತೆಯಾಗುವುದು. ಈ ಅಂತರವನ್ನು ಕಳೆಯುವ ಮಹಾಮಂತ್ರವಾಗಿದೆ- ನಾಲ್ಕೂಕಡೆ ಬಲಶಾಲಿ ಆಗುವುದು, ನಾಲ್ಕುಮಾತುಗಳ ನಿಶ್ಚಯದ ಪರ್ಸೆಂಟೇಜನ್ನು ಸಮಾನ ಮಾಡಿಕೊಳ್ಳುವುದು. ತಿಳಿಯಿತೆ- ಹೋಮ್ವರ್ಕ್ ಸ್ಪಷ್ಟವಾಯಿತಲ್ಲವೆ. ಒಳ್ಳೆಯ ವಿದ್ಯಾರ್ಥಿಗಳಾಗಿದ್ದೀರಲ್ಲವೆ! ಅಥವಾ ನಮ್ಮ ಸೇವಾಕೇಂದ್ರಕ್ಕೆ ಹೋದೆವು, ಪ್ರವೃತ್ತಿಯ ಮನೆಯಲ್ಲಿ ಹೋಗುತ್ತಿದ್ದಂತೆಯೇ ಮನೆಯಲ್ಲಿಯೇ ಹೋಮ್ವರ್ಕನ್ನು ಇಟ್ಟು ಬಂದೆವು ಎಂದು ಹೇಳುವುದಿಲ್ಲ ತಾನೆ. ಬುದ್ಧಿವಂತ ವಿದ್ಯಾರ್ಥಿಗಳ ಲಕ್ಷಣವೇನು? ಹೋಮ್ವರ್ಕ್ನಲ್ಲಿಯೂ ನಂಬರ್ವನ್ ಮತ್ತು ಪ್ರಾಕ್ಟಿಕಲ್ ವಿದ್ಯೆಯಲ್ಲಿಯೂ ನಂಬರ್ವನ್ ಏಕೆಂದರೆ ಅಂಕಗಳು ಜಮಾ ಆಗುತ್ತವೆ. ಒಳ್ಳೆಯದು- ಮತ್ತ್ಯಾವ ಫಲಿತಾಂಶವನ್ನು ನೋಡಿದೆವು? ವರ್ತಮಾನ ಸಮಯದಲ್ಲಿ ಮಕ್ಕಳ ಎರಡು ಬುದ್ಧಿವಂತಿಕೆಗಳನ್ನು ನೋಡಿದೆವು- ತಮ್ಮ ಬುದ್ಧಿವಂತಿಕೆಯನ್ನು ತಿಳಿದುಕೊಂಡಿರುತ್ತೀರಲ್ಲವೇ? ಮೊದಲನೆಯದಾಗಿ ಯಾವ ಬುದ್ಧಿವಂತಿಕೆಯನ್ನು ನೋಡಿರಬಹುದು, ಸ್ವಯಂನ್ನು ನೋಡಿಕೊಳ್ಳುವುದು ಮತ್ತು ಪರರನ್ನು ನೋಡುವುದು. ಸ್ವದರ್ಶನ ಚಕ್ರಧಾರಿಗಳಾಗುವುದು ಹಾಗೂ ಪರದರ್ಶನ ಚಕ್ರಧಾರಿಗಳಾಗುವುದು. ಎರಡು ಮಾತುಗಳಿದೆಯಲ್ಲವೆ. ಮೆಜಾರಿಟಿ ಯಾವುದರಲ್ಲಿ ಬುದ್ಧಿವಂತರಾಗಿದ್ದಾರೆ? ಬಾಪ್ದಾದಾ ಮೊದಲೂ ತಿಳಿಸಿದ್ದೇವೆ- ಕೆಲವು ಮಕ್ಕಳ ಸಮೀಪ ದೃಷ್ಟಿಯು ತೀಕ್ಷ್ಣವಾಗುತ್ತಿದೆ ಮತ್ತು ಇನ್ನೂ ಕೆಲವರ ದೂರದೃಷ್ಟಿಯು ತೀಕ್ಷ್ಣವಾಗುತ್ತಿದೆ ಆದರೆ ಮೆಜಾರಿಟಿ ಮಕ್ಕಳ ದೂರದೃಷ್ಟಿಯು ತೀಕ್ಷ್ಣವಾಗಿದೆ, ಸಮೀಪ ದೃಷ್ಟಿಯು ಸ್ವಲ್ಪ ಸಡಿಲವಾಗಿದೆ. ನೋಡಿಕೊಳ್ಳಬಯಸುತ್ತಾರೆ ಆದರೆ ಸ್ಪಷ್ಟವಾಗಿ ನೋಡಿಕೊಳ್ಳಲು ಆಗುವುದಿಲ್ಲ ಮತ್ತು ಯಾವ ಬುದ್ಧಿವಂತಿಕೆ ತೋರಿಸುತ್ತಾರೆ? ಯಾವುದೇ ಮಾತು ಬಂದಾಗ ತಮ್ಮನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಅನ್ಯರ ಮಾತುಗಳನ್ನು ದೊಡ್ಡದು ಮಾಡಿ ಸ್ಪಷ್ಟವಾಗಿ ತಿಳಿಸುತ್ತಾರೆ. ತಮ್ಮ ದೊಡ್ಡಮಾತನ್ನು ಚಿಕ್ಕದು ಮಾಡುತ್ತಾರೆ ಮತ್ತು ಅನ್ಯರ ಚಿಕ್ಕಮಾತನ್ನು ದೊಡ್ಡದಾಗಿ ಮಾಡಿ ಹೇಳುತ್ತಾರೆ. ಮೆಜಾರಿಟಿ ಮಕ್ಕಳಲ್ಲಿ ಈ ಬುದ್ಧಿವಂತಿಕೆಯನ್ನು ನೋಡಿದೆವು. ಎರಡನೇ ಬುದ್ಧಿವಂತಿಕೆ ಏನಿರಬಹುದು? ಇತ್ತೀಚೆಗೆ ಒಂದು ವಿಶೇಷ ಭಾಷೆಯನ್ನು ಬಹಳ ಉಪಯೋಗಿಸುತ್ತಾರೆ- ನಮ್ಮಿಂದ ಅಸತ್ಯವನ್ನು ನೋಡಲಾಗುವುದಿಲ್ಲ, ಅಸತ್ಯವನ್ನು ಕೇಳಲಾಗುವುದಿಲ್ಲ ಆದ್ದರಿಂದ ಅಸತ್ಯವನ್ನು ನೋಡಿ, ಅಸತ್ಯವನ್ನು ಕೇಳಿ ಒಳಗಡೆ ಆವೇಶ ಬಂದುಬಿಡುತ್ತದೆ ಅಂದಮೇಲೆ ಈ ಭಾಷೆಯು ಸರಿಯೇ? ಒಂದುವೇಳೆ ಅವರು ಅಸತ್ಯವಾಗಿದ್ದಾರೆ ಮತ್ತು ಅವರ ಅಸತ್ಯವನ್ನು ನೋಡಿ ತಮಗೆ ಆವೇಶ ಬರುತ್ತದೆಯೆಂದರೆ ಆವೇಶವು ಸತ್ಯವೋ ಅಥವಾ ಅಸತ್ಯವೋ? ಆವೇಶವಂತೂ ಅಸತ್ಯವಲ್ಲವೆ! ನಾವು ಇದನ್ನು ಮಾಡಿ ತೋರಿಸುತ್ತೇವೆ, ಈ ಛಾಲೆಂಜ್ ಮಾಡುವುದು ಸರಿಯೇ? ಸದಾ ಇದನ್ನು ನೆನಪಿಟ್ಟುಕೊಳ್ಳಿ- ಸತ್ಯತೆಯ ಚಿಹ್ನೆ ಏನಾಗಿದೆ! ಯಾರು ಸ್ವಯಂ ಸತ್ಯತೆಯಲ್ಲಿರುತ್ತಾರೆಯೋ ಅವರು ಅಸತ್ಯವನ್ನು ಸಮಾಪ್ತಿ ಮಾಡಲು ಬಯಸುತ್ತಾರೆ. ಲಕ್ಷ್ಯವಂತೂ ಬಹಳ ಚೆನ್ನಾಗಿದೆ ಆದರೆ ಅಸತ್ಯತೆಯನ್ನು ಸಮಾಪ್ತಿ ಮಾಡಲು ತಮ್ಮಲ್ಲಿಯೂ ಸತ್ಯತೆಯ ಶಕ್ತಿಯು ಬೇಕು. ಆವೇಶ ಅಥವಾ ರೋಷವು ಇದು ಸತ್ಯತೆಯ ಚಿಹ್ನೆಯೇ? ಸತ್ಯತೆಯಲ್ಲಿ ಆವೇಶ ಬರುವುದೇ? ಅಂದಾಗ ಒಂದುವೇಳೆ ಅಸತ್ಯವನ್ನು ನೋಡಿ ನನಗೆ ಕೋಪ ಬರುತ್ತದೆಯೆಂದರೆ ಅದು ಸರಿಯೇ? ಯಾರಾದರೂ ಬೆಂಕಿ ಹಚ್ಚಿದರೆ ಶಾಖವು ಬರುವುದಿಲ್ಲವೇ ಅಥವಾ ಶಾಖದಿಂದ ಮುಕ್ತರಾಗಬಲ್ಲಿರಾ? ಒಂದುವೇಳೆ ಇದು ಅಸತ್ಯತೆಯ ಬೆಂಕಿಯಾಗಿದೆ ಎಂಬುದು ನಮ್ಮಲ್ಲಿ ಜ್ಞಾನವು ಇದ್ದಿದ್ದೇ ಆದರೆ ಮತ್ತು ಆ ಬೆಂಕಿಯ ಶಾಖ ತಗುಲಿದರೆ ಮೊದಲೇ ತಮ್ಮನ್ನು ಅದರಿಂದ ಸುರಕ್ಷಿತ ಮಾಡಿಕೊಳ್ಳುತ್ತೀರಲ್ಲವೆ ಅಥವಾ ಬೆಂಕಿಯಲ್ಲಿ ಸ್ವಲ್ಪ ಸುಟ್ಟುಹೋದರೂ ಪರವಾಗಿಲ್ಲ ಎಂದು ಹೇಳುತ್ತೀರಾ? ಆದ್ದರಿಂದ ಸದಾ ಇದನ್ನು ನೆನಪಿಟ್ಟುಕೊಳ್ಳಿರಿ- ಸತ್ಯತೆಯ ಚಿಹ್ನೆಯು ಸಭ್ಯತೆಯಾಗಿದೆ. ಒಂದುವೇಳೆ ತಾವು ಸತ್ಯವಾಗಿದ್ದೀರಿ, ತಮ್ಮಲ್ಲಿ ಸತ್ಯತೆಯ ಶಕ್ತಿಯಿದೆ ಎನ್ನುವುದಾದರೆ ಸಭ್ಯತೆಯನ್ನು ಎಂದೂ ಬಿಡುವುದಿಲ್ಲ. ಸತ್ಯತೆಯನ್ನು ಸಿದ್ಧ ಮಾಡಿರಿ ಆದರೆ ಸಭ್ಯತಾಪೂರ್ವಕವಾಗಿ ಸಿದ್ಧ ಮಾಡಿ. ಒಂದುವೇಳೆ ಸಭ್ಯತೆಯನ್ನು ಬಿಟ್ಟು ಅಸಭ್ಯತೆಯಲ್ಲಿ ಬಂದು ಸತ್ಯತೆಯನ್ನು ಸಿದ್ಧ ಮಾಡಬಯಸುತ್ತೀರೆಂದರೆ ಆ ಸತ್ಯವು ಸಿದ್ಧವಾಗುವುದಿಲ್ಲ. ತಾವು ಸತ್ಯವನ್ನು ಸಿದ್ಧ ಮಾಡಲು ಬಯಸುತ್ತೀರಿ ಆದರೆ ಸಭ್ಯತೆಯನ್ನು ಬಿಟ್ಟು ಒಂದುವೇಳೆ ಸತ್ಯತೆಯನ್ನು ಸಿದ್ಧಮಾಡುತ್ತೀರೆಂದರೆ ಅದು ಜಿದ್ದು ಆಗಿಬಿಡುವುದು, ಸಿದ್ಧವಲ್ಲ. ಅಸಭ್ಯತೆಯ ಚಿಹ್ನೆಯಾಗಿದೆ- ಜಿದ್ದು ಮಾಡುವುದು ಮತ್ತು ಸಭ್ಯತೆಯ ಚಿಹ್ನೆಯಾಗಿದೆ- ನಿರ್ಮಾನರಾಗಿರುವುದು. ಸತ್ಯತೆಯನ್ನು ಸಿದ್ಧ ಮಾಡುವವರು ಸದಾ ಸ್ವಯಂ ನಿರ್ಮಾನರಾಗಿ ಸಭ್ಯತಾಪೂರ್ವಕವಾಗಿ ವ್ಯವಹರಿಸುವರು. ಎರಡನೇ ಬುದ್ಧಿವಂತಿಕೆ ತಿಳಿಯಿತೆ- ಇಂತಹ ಬುದ್ಧಿವಂತರಾಗಬೇಡಿ, ಇದೂ ಸಹ ಹೋಮ್ವರ್ಕ್ ಆಗಿದೆ- ಇಂತಹ ಬುದ್ಧಿವಂತಿಕೆಯನ್ನು ಬಿಟ್ಟು ನಿರ್ಮಾನರಾಗಿರಿ. ಸಂಪೂರ್ಣ ನಿರ್ಮಾನರಾಗಿರಿ, ನಾನು ಸರಿಯಾಗಿದ್ದೇನೆ ಇವರು ತಪ್ಪಾಗಿದ್ದಾರೆ ಇದು ನಿರ್ಮಾನತೆಯಲ್ಲ. ಪ್ರಪಂಚದವರೂ ಸಹ ಇದನ್ನು ಹೇಳುತ್ತಾರೆ- ಒಂದುವೇಳೆ ಯಾರಾದರೂ ಸತ್ಯವನ್ನು ಸಿದ್ಧ ಮಾಡುತ್ತಾರೆಂದರೆ ಅದರಲ್ಲಿ ಬೇರೇನೋ ಅಲ್ಪಸ್ವಲ್ಪ ಸಮಾವೇಶವಾಗಿದೆ ಎಂದು. ಕೆಲವು ಮಕ್ಕಳದು ಇದೇ ಭಾಷೆಯಾಗಿಬಿಟ್ಟಿದೆ- ನಾನು ಸಂಪೂರ್ಣ ಸತ್ಯವನ್ನು ಹೇಳುತ್ತೇನೆ, 100% ಸತ್ಯವನ್ನು ಹೇಳುತ್ತೇನೆ ಎನ್ನುತ್ತಾರೆ ಆದರೆ ಸತ್ಯವನ್ನು ಸಿದ್ಧ ಮಾಡುವ ಅವಶ್ಯಕತೆಯಿಲ್ಲ. ಸತ್ಯತೆಯೆಂಬುದು ಇಂತಹ ಸೂರ್ಯನಾಗಿದೆ, ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಭಲೆ ಎಷ್ಟಾದರೂ ಗೋಡೆಗಳು ಯಾವುದೇ ಬೆಂಕಿಯನ್ನು ತರಲಿ ಆದರೆ ಸತ್ಯತೆಯ ಪ್ರಕಾಶವೆಂದೂ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯವಾದ ವ್ಯಕ್ತಿಯು ಎಂದೂ ಸಹ ತನ್ನನ್ನು ನಾನು ಸತ್ಯವಂತನಾಗಿದ್ದೇನೆ ಎಂದು ಹೇಳಿಕೊಳ್ಳುವುದಿಲ್ಲ, ಅವರನ್ನು ನೋಡಿ ತಾವು ಸತ್ಯವಂತರಾಗಿದ್ದೀರಿ ಎಂದು ಅನ್ಯರು ಹೇಳುವರು. ಒಳ್ಳೆಯದು.
ಈಗ ಏನು ಮಾಡುವಿರಿ? ಸ್ವ ಪರಿವರ್ತನೆ ಮಾಡಿಕೊಳ್ಳುವುದು. ಬೇರೆಯವರ ಪರಿವರ್ತನೆಯ ಚಿಂತೆಯನ್ನು ಮಾಡಬೇಡಿ, ಇದನ್ನು ಶುಭಚಿಂತಕವೆಂದು ಹೇಳಲಾಗುವುದು. ನಂತರ ಹೇಳುತ್ತಾರೆ - ನಾವು ಚಿಂತೆಯನ್ನು ಮಾಡುವುದಿಲ್ಲ, ಶುಭಚಿಂತಕರಾಗಿದ್ದೀವಲ್ಲವೇ! ಆದರೆ ಸ್ವಯಂನ್ನು ಮರೆತು ಬೇರೆಯವರ ಶುಭಚಿಂತಕರಾಗುವುದಕ್ಕೆ ಶುಭಚಿಂತಕರೆಂದು ಹೇಳಲಾಗುವುದಿಲ್ಲ. ಸರ್ವರ ಜೊತೆಯಲ್ಲಿ ಮೊದಲು ಸ್ವ ಇರಬೇಕು. ಸ್ವವಿಲ್ಲದೆ ಮತ್ತು ಸರ್ವರ ಶುಭಚಿಂತಕರಾಗುವುದಕ್ಕೆ ಹೋದರೆ ಬಾಣ ನಾಟುವುದಿಲ್ಲ, ಸಫಲತೆಯು ಸಿಗುವುದಿಲ್ಲ. ಮೊದಲು ಸ್ವ ಮತ್ತು ಸ್ವ ಜೊತೆಯಲ್ಲಿ ಸರ್ವ ಇದೇ ಬಾಪ್ದಾದಾರವರ ಮಕ್ಕಳೊಂದಿಗೆ ಹೃದಯದ ಪ್ರೀತಿಯಾಗಿದೆ. ಪ್ರೀತಿಯ ಲಕ್ಷಣವಾಗಿದೆ - ಪ್ರೀತಿ ಮಾಡುವವರ ಯಾವುದೇ ಕೊರತೆಗಳನ್ನು ನೋಡುವುದಿಲ್ಲ. ಯಾವುದೇ ಕೊರತೆಯನ್ನು ಕೇಳಲಾಗುವುದಿಲ್ಲ, ಅವರನ್ನೂ ಸಹ ಸಂಪನ್ನರನ್ನಾಗಿ ಮಾಡುತ್ತಾರೆ. ಇದಾಗಿದೆ ಹೃದಯದ ಸತ್ಯ ಪ್ರೀತಿ. ಬಾಪ್ದಾದಾರವರು ದಿಲ್ವಾಲಾ(ಹೃದಯದವರಾಗಿದ್ದಾರೆ)ಆಗಿದ್ದಕ್ಕೆ ಹೃದಯದ ಪ್ರೀತಿಯಿದೆ, ಪ್ರತಿಯೊಂದು ಮಗುವನ್ನು ಸಮಾನ ಮತ್ತು ಶ್ರೇಷ್ಠರನ್ನಾಗಿ ನೋಡಲು ಬಯಸುತ್ತಾರೆ. ಪ್ರತಿಯೊಂದು ಮಗುವನ್ನು ಸಫಲತಾಮೂರ್ತರನ್ನಾಗಿ ನೋಡಲು ಬಯಸುತ್ತಾರೆ. ಪರಿಶ್ರಮ ಮೂರ್ತರಲ್ಲ, ಸಫಲತಾಮೂರ್ತರು.
ನಾಲ್ಕಾರುಕಡೆಯ ಸದಾ ನಿಶ್ಚಯಬುದ್ಧಿ ಶ್ರೇಷ್ಠ ಆತ್ಮರು, ಸದಾ ನಿಶ್ಚಯ ಮತ್ತು ವಿಜಯವನ್ನು ಸಮಾನತೆಯಲ್ಲಿ ತರುವವರು, ತೀವ್ರ ಪುರುಷಾರ್ಥಿ ಆತ್ಮರು, ಸದಾ ಸ್ವಮಾನದಲ್ಲಿರುತ್ತ ಸ್ವ ಪರಿವರ್ತನೆ ಮತ್ತು ಸರ್ವರ ಪರಿವರ್ತನೆಯ ಯಥಾರ್ಥ ಭಾವನೆಯನ್ನಿಟ್ಟುಕೊಳ್ಳುವಂತಹ ಆತ್ಮರು, ಸದಾ ತಂದೆಯ ಸಮಾನರಾಗಿ ಪ್ರೀತಿಯ ಪುರಾವೆ ಕೊಡುವಂತಹ ಆತ್ಮರಿಗೆ, ಸದಾ ಯಥಾರ್ಥ ಆತ್ಮಿಕ ವಾರ್ತಾಲಾಪ ಮಾಡಿ ವ್ಯರ್ಥ ಮಾತುಗಳನ್ನು ಸಮಾಪ್ತಿ ಮಾಡುವಂತಹ ಆತ್ಮಗಳಿಗೆ ದಿಲ್ವಾಲಾ ಬಾಪ್ದಾದಾರವರ ನೆನಪು, ಪ್ರೀತಿ ಮತ್ತು ನಮಸ್ತೆ.
ವರದಾನ:
ವರದಾನ:-ನೆಗೆಟೀವ್ ಅನ್ನು ಪಾಸಿಟೀವ್ನಲ್ಲಿ ಪರಿವರ್ತನೆ ಮಾಡುವಂತಹ ಸ್ವ ಪರಿವರ್ತಕರಿಂದ
ವಿಶ್ವ ಪರಿವರ್ತಕ ಭವ
ಯಾವುದೇ ಸಂಕಲ್ಪ ಅಥವ ಸಂಸ್ಕಾರ ಸೆಕೆಂಡ್ನಲ್ಲಿ
ನೆಗೆಟೀವ್ನಿಂದ ಪಾಸಿಟೀವ್ನಲ್ಲಿ
ಪರಿವರ್ತನೆಯಾಗಿಬಿಡಬೇಕು-ಅದಕ್ಕಾಗಿ ಇಡೀ ದಿನದಲ್ಲಿ ಟ್ರಾಫಿಕ್ ಬ್ರೇಕ್ನ ಅಭ್ಯಾಸ ಬೇಕಾಗಿದೆ, ಎಕೆಂದರೆ ವ್ಯರ್ಥ ಅಥವಾ ನೆಗೆಟೀವ್ ಸಂಕಲ್ಪಗಳ ಗತಿ ಬಹಳ ವೇಗವಾಗಿರುವುದು. ವೇಗವಾಗಿ ಹೋಗುತ್ತಿರುವ ಸಮಯದಲ್ಲಿ ಶಕ್ತಿಶಾಲಿ ಬ್ರೇಕ್ ಹಾಕಿ ಪರಿವರ್ತನೆ ಮಾಡುವ ಅಭ್ಯಾಸಮಾಡಿ. ಆಗ ಸ್ವಯಂನ ವ್ಯರ್ಥವನ್ನು ಪರಿವರ್ತನೆ ಮಾಡಿ ಸ್ವ ಪರಿವರ್ತಕರಿಂದ
ವಿಶ್ವ ಪರಿವರ್ತಕರಾಗಲು
ಸಾಧ್ಯ ಹಾಗೂ ತಮ್ಮ ಫರಿಸ್ಥಾ ಸ್ವರೂಪದ ಮುಖಾಂತರ ಅನೇಕ ಆತ್ಮಗಳಿಗೆ ಸುಖ-ಶಾಂತಿಯ ವರದಾನವನ್ನು ಕೊಡಲುಸಾಧ್ಯ.
ಸ್ಲೋಗನ್:
ಸ್ಲೋಗನ್:-ಡ್ರಾಮದ ಜ್ಞಾನವನ್ನು ಸ್ಮøತಿಯಲ್ಲಿಡುವಂತಹವರೇ
ನತಿಂಗ್ ನ್ಯೂವಿನ ವಿಧಿಯಿಂದ ವಿಜಯಿ ಆಗಲು ಸಾಧ್ಯ.
Hindi/Tamil/English/Telugu/Kannada/Malayalam/Ilangai Tamil/Sinhala


0 Comments