Hindi/Tamil/English/Telugu/Kannada/Malayalam/Ilangai Tamil/Sinhala
03/09/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ ಮಕ್ಕಳೇ- ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಆದ್ದರಿಂದ ಯಾವ
ಶುಭಕಾರ್ಯವನ್ನು ಮಾಡಬೇಕಾಗಿದೆಯೋ ಅದನ್ನು ಇಂದೇ ಮಾಡಿಬಿಡಿ. ನಾಳೆ ಎಂದು ಹೇಳಬೇಡಿ”
ಪ್ರಶ್ನೆ:
ತಮ್ಮ ಆಹಾರವು ಸದಾ ಸಂಪನ್ನವಾಗುವ ಯುಕ್ತಿಯೇನಾಗಿದೆ?
ಉತ್ತರ:
ಶಿವತಂದೆಯನ್ನು ತಮ್ಮ ವಾರಸುದಾರ(ಮಗ)ನನ್ನಾಗಿ ಮಾಡಿಕೊಂಡಾಗ ಇವರು
ನಿಮ್ಮನ್ನು 21
ಜನ್ಮಗಳಿಗೋಸ್ಕರ
ಸಂಪನ್ನ ಮಾಡುತ್ತಾರೆ. ಇವರೊಬ್ಬರೇ ಎಲ್ಲರ ಮಗನಾಗಿ ಎಲ್ಲರ ಆಹಾರವನ್ನು (ಖಜಾನೆಯನ್ನು)
ಸಂಪನ್ನವನ್ನಾಗಿ ಮಾಡುತ್ತಾರೆ. ಆದರೆ ಕೆಲವರು ಬಹುಶಃ ಶಿವತಂದೆಗೆ ಎಲ್ಲವನ್ನು
ಕೊಡಬೇಕಾಗುತ್ತದೆಯೇನೋ ಎಂದು ಹೆದರುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಹೆದರುವ
ಮಾತಿಲ್ಲ. ನೀವು ತಮ್ಮ ಮಕ್ಕಳು ಮುಂತಾದವರನ್ನು ಸಂಭಾಲನೆ ಮಾಡಿ. ಅವರ ಪಾಲನೆಯನ್ನು ಮಾಡಿ. ಆದರೆ
ಮಗನಾದ ನನ್ನನ್ನು ನೆನಪು ಮಾಡುವುದರಿಂದ ನಿಮ್ಮನ್ನು ಸಂಪನ್ನರನ್ನಾಗಿ ಮಾಡುತ್ತೇನೆ. ಒಂದುವೇಳೆ
ನನ್ನ ಮೇಲೆ ಬಲಿಹಾರಿಯಾಗುತ್ತೀರಿ ಎಂದರೆ ನಿಮ್ಮ ಬಹಳ ಸೇವೆಯನ್ನು ನಾನು ಮಾಡುತ್ತೇನೆ.
ಓಂ ಶಾಂತಿ.
ಈ ಸಮಯದಲ್ಲಿ ಎಲ್ಲಾ ಸೇವಾಕೇಂದ್ರಗಳಲ್ಲಿ ಯಾರೆಲ್ಲ ಮಕ್ಕಳು ಕುಳಿತಿದ್ದೀರಿ. ಎಲ್ಲರೂ ನಾವು
ಶಿವತಂದೆಯ ಮಹಾವಾಕ್ಯಗಳನ್ನು ಕೇಳುತ್ತೇವೆಂದು ಅವಶ್ಯವಾಗಿ ತಿಳಿದುಕೊಂಡಿರುತ್ತೀರಿ.
ಮತ್ತ್ಯಾವುದೇ ಇಂತಹ ಸಂಸ್ಥೆಯಿಲ್ಲ. ಏಕೆಂದರೆ ತುಂಬಾ ಶಾಖೆಗಳಿವೆ. ಅದರಲ್ಲೂ ಸಹ
ಪ್ರಧಾನಕೇಂದ್ರವಿರುತ್ತದೆ. ಅಲ್ಲಿ ಅವರ ಗುರುಗಳು ಸಹ ಇರುತ್ತಾರೆ. ಅವರನ್ನೇ ನೆನಪು
ಮಾಡುತ್ತಾರೆ. ಆದರೆ ನಿರಾಕಾರ ಪರಮಪಿತ ಪರಮಾತ್ಮನನ್ನು ನಿಮ್ಮ ವಿನಃ ಮತ್ತ್ಯಾರು ನೆನಪು
ಮಾಡುವುದಿಲ್ಲ. ಈ ಸಂಗಮದ ಸಮಯದಲ್ಲಿಯೇ ಪಾರಲೌಕಿಕ ತಂದೆಯು ಬಂದು ಮಕ್ಕಳಿಗೆ ತನ್ನ ಪರಿಚಯವನ್ನು
ಕೊಡುತ್ತಾರೆ ಮತ್ತು ಮಕ್ಕಳು ಸಹ ನಿಶ್ಚಯ ಬುದ್ಧಿಯವರಾಗಿ ಅದೇ ಗುಂಗಿನಲ್ಲಿರುತ್ತಾರೆ. ಪರಮಪಿತ
ಪರಮಾತ್ಮ ಈ ಸಮಯದಲ್ಲೇ ಮುರುಳಿಯನ್ನು ನುಡಿಸುತ್ತಾರೆ. ಶಾಸ್ತ್ರಗಳಲ್ಲಿಯೂ ಸಹ ಕೃಷ್ಣನು
ಮಧುಬನದಲ್ಲಿ ಮುರುಳಿಯನ್ನು ಊದುತ್ತಾನೆ ಎಂದು ಇದೆ. ಮಧುಬನವಂತೂ ಮುಖ್ಯವಾಗಿ ಒಂದೇ ಆಗಿದೆ.
ಉಳಿದೆಲ್ಲಾ ಸ್ಥಳಗಳಿಗೆ ಮುರುಳಿಯು ಹೋಗುತ್ತದೆ. ಮನುಷ್ಯರ ಬುದ್ಧಿಯಲ್ಲಂತೂ ಕೃಷ್ಣನು
ಮುರುಳಿಯನ್ನು ಊದುತ್ತಾರೆ ಎನ್ನುವುದು ಇರುತ್ತದೆ. ಶಿವತಂದೆಯು ಮುರುಳಿಯನ್ನು ನುಡಿಸುತ್ತಾರೆ
ಎನ್ನುವುದು ಯಾರ ಬುದ್ಧಿಯಲ್ಲೂ ಸಹ ಬರುವುದಿಲ್ಲ. ಇದು ಯಾರಿಗೂ ಗೊತ್ತಿಲ್ಲ. ಎಲ್ಲೆಲ್ಲಿ ನಿಮ್ಮ
ಸೇವಾಕೇಂದ್ರಗಳು ತೆರೆಯುತ್ತವೆ. ಅಲ್ಲಿ ಎಲ್ಲರೂ ಸಹ ಬ್ರಹ್ಮಾರವರ ಮುಖಾಂತರ ಶಿವತಂದೆಯು
ಮುರುಳಿಯನ್ನು ನುಡಿಸುತ್ತಾರೆ ಎಂದು ತಿಳಿಯುತ್ತಾರೆ. ಈ ಮುರುಳಿಯನ್ನು ಎಲ್ಲಾ ಜ್ಞಾನಗಂಗೆಯರು
ಕೇಳಿ ಅನ್ಯರಿಗೆ ತಿಳಿಸುತ್ತಾರೆ. ಆದರೂ ಸಹ ಬುದ್ಧಿಯಲ್ಲಿ ಶಿವತಂದೆಯ ನೆನಪೇ ಇರುತ್ತದೆಯಲ್ಲವೆ.
ಶಿವತಂದೆಯನ್ನು ಭಗವಂತನೆಂದು ಹೇಳಲಾಗುತ್ತದೆ. ಶಿವತಂದೆಯು ಮುರುಳಿಯನ್ನು ನುಡಿಸುತ್ತಾರೆ
ಎನ್ನುವುದು ಯಾವುದೇ ಶಾಸ್ತ್ರಗಳಲ್ಲಿಲ್ಲ. ನೀವು ಮಕ್ಕಳು ಎಲ್ಲಿಯೇ ಇರಿ. ಈ ಮುದ್ರಿತವಾಗಿ
ಬಂದಿರುವ ಮುರುಳಿಯು ಶಿವತಂದೆಯ ಮುರುಳಿಯೇ ಬಂದಿದೆ ಎಂದು ತಿಳಿಯುತ್ತಾರೆ. ಶಿವತಂದೆಯ ವಿನಹ
ಮತ್ತ್ಯಾರೂ ಸಹ ಈ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ನೀವು ನನ್ನನ್ನು ನೆನಪು ಮಾಡಿದಾಗ ನಾನು
ಆಸ್ತಿಯನ್ನು ಕೊಡುತ್ತೇನೆಂದು ತಂದೆಯೇ ತಿಳಿಸುತ್ತಾರೆ. ಮಕ್ಕಳಿಗೆ ತಂದೆಯು ಇದನ್ನು ಯಾವಾಗಲೂ
ತಿಳಿಸುತ್ತಾರೆ. ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ಇನ್ನ್ಯಾವುದೇ ನಾಮ, ರೂಪವನ್ನು (ದೇಹಧಾರಿಗಳನ್ನು) ನೆನಪು
ಮಾಡಬೇಡಿ. ಸಾಕಾರಿ ಮನುಷ್ಯರ ಚಿತ್ರಗಳು ಮುಂತಾದುವುಗಳಂತೂ ಜನ್ಮ-ಜನ್ಮಾಂತರದಿಂದ
ಜೊತೆಗೂಡಿಸುತ್ತಾ ಬಂದಿದ್ದೀರಿ. ಉಪಾಸನೆಗಳನ್ನು ಮಾಡುತ್ತಾ ಬಂದಿದ್ದೀರಿ. ದೇವತೆಗಳು ಮುಂತಾದವರ
ಚಿತ್ರಗಳನ್ನು ಇಟ್ಟುಕೊಳ್ಳುವುದು ಇದೆಲ್ಲವೂ ಸಹ ಬಿಟ್ಟು ಹೋಗುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ
ಆತ್ಮಗಳು ತಂದೆಯನ್ನು ನೆನಪು ಮಾಡುತ್ತಾರೆ. ಯಾವಾಗ ದೇಹಾಭಿಮಾನಿಗಳಾಗಿರುತ್ತಾರೆ ಆಗಲೇ
ಶರೀರವನ್ನು ನೆನಪು ಮಾಡುತ್ತಾರೆ. ತಂದೆಯು ಗಳಿಗೆ-ಗಳಿಗೆಯೂ ಸಹ ತಿಳಿಸುತ್ತಾರೆ. ತಮ್ಮನ್ನು
ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ. ಆತ್ಮನೇ ಪತಿತ, ದುಃಖಿ ಆಗಿದೆ ಮತ್ತು ಆತ್ಮನೇ ನಾನು
ಮಹಾರಾಜನಾಗಿದ್ದೆ. ಈಗ ಗುಲಾಮನಾಗಿಬಿಟ್ಟಿದ್ದೇನೆ ಎಂದು ಹೇಳುತ್ತದೆ. ನಾವು ತಂದೆಯ
ಮಕ್ಕಳಾಗಿದ್ದೇವೆ. ತಂದೆಯಿಂದ ನಾವು ಆಸ್ತಿಯನ್ನು ಪಡೆದಿದ್ದೆವು ಎನ್ನುವ ಸ್ಮೃತಿಯು ನಿಮಗೆ
ಬಂದಿದೆ. ಈಗ ತಂದೆಯು ತಿಳಿಸುತ್ತಾರೆ-ಎಲ್ಲರಿಗೆ ತಂದೆಯ ಪರಿಚಯ ಕೊಡಿ. ಇದರಂತಹ ಶುಭಕಾರ್ಯವು
ಮತ್ತ್ಯಾವುದೂ ಇಲ್ಲ. ಈ ಶುಭಕಾರ್ಯವನ್ನು ಮಾಡುವುದರಲ್ಲಿ ನಿಧಾನಿಸಬಾರದು. ಈ ಶರೀರದ ಮೇಲಂತೂ
ಭರವಸೆ ಇಲ್ಲ. ಯುವಕರ ಮೇಲಾಗಲೀ ವೃದ್ಧರ ಶರೀರದ ಮೇಲಾಗಲೀ ಭರವಸೆ ಇಲ್ಲ. ಆದ್ದರಿಂದ ಏನೆಲ್ಲ
ಮಾಡಬೇಕಾಗಿದೆ ಅದನ್ನು ಇಂದೇ ಮಾಡಬೇಕಾಗಿದೆ. ಇಂದು ನಾಳೆ ಎಂದು ಹೇಳುತ್ತಾ ಹೇಳುತ್ತಾ ಮೃತ್ಯುವು
ಕಬಳಿಸಿ ಬಿಡುತ್ತದೆ. ತಂದೆಯು ಎಷ್ಟು ದೊಡ್ಡ ಹಾಸ್ಪಿಟಲ್ ಮತ್ತು ಯೂನಿವರ್ಸಿಟಿಯನ್ನು
ತೆರೆದಿದ್ದಾರೆ. ಇದರಿಂದ ಆರೋಗ್ಯ, ಭಾಗ್ಯ,
ಸಂತೋಷ
ಎಲ್ಲವೂ ಸಿಗುತ್ತದೆ. ಆರೋಗ್ಯ,
ಭಾಗ್ಯವಿದ್ದಾಗ
ಸಂತೋಷವು ಇದ್ದೇ ಇರುತ್ತದೆ. ನಿರೋಗಿ ಶರೀರ ಮತ್ತು ಹಣವಿದ್ದಾಗ ಮನುಷ್ಯರು ಸುಖೀಯಾಗಿರುತ್ತಾರೆ.
ಆದ್ದರಿಂದ ತಂದೆಯು ತಿಳಿಸುತ್ತಾರೆ. ಯಾವ ಶುಭಕಾರ್ಯವನ್ನು ಮಾಡಬೇಕಾಗಿದೆಯೋ ಅದನ್ನು ಮಾಡಿಬಿಡಿ.
ಕೇವಲ ಮೂರು ಹೆಜ್ಜೆಗಳ ಸ್ಥಳವನ್ನು ತೆಗೆದುಕೊಂಡು ಈ ಆತ್ಮಿಕ ಆಸ್ಪತ್ರೆಯನ್ನು ತೆರೆಯಿರಿ.
ಎಲ್ಲರಿಗೆ ತಂದೆಯ ಪರಿಚಯ ಕೊಡಿ. ತಂದೆಯು ಸ್ವರ್ಗದ ರಚೈತನಾಗಿರುವುದರಿಂದ ಅಂತಹ ತಂದೆಯಿಂದ
ಅವಶ್ಯವಾಗಿ ಸ್ವರ್ಗದ ಆಸ್ತಿಯು ಸಿಗಬೇಕು ಎಂದಾಗ ಭಾರತವಾಸಿಗಳಿಗೆ ಆಸ್ತಿಯು ಸಿಕ್ಕಿತಲ್ಲವೇ? ಈ ಮಾತುಗಳನ್ನು ಭಾರತವಾಸಿಗಳು
ಸಹಜವಾಗಿ ಅರ್ಥಮಾಡಿಕೊಳ್ಳುತ್ತಾರೆ. ಭಗವಂತನನ್ನು ಹುಡುಕುವುದಕ್ಕೋಸ್ಕರ ಈ ಮಂದಿರಗಳಿವೆ.
ಆರ್ಯಸಮಾಜಗಳು ದೇವತೆಗಳನ್ನು ಒಪ್ಪುವುದಿಲ್ಲ. ಆದ್ದರಿಂದ ಈ ಚಿತ್ರಗಳನ್ನು ಮುಂತಾದ ಯಾವುದೆಲ್ಲ
ಮಾಡಿಸಿದ್ದಾರೆ,
ಇವೆಲ್ಲವೂ
ಅಟಮಟ ಎಂದು ತಿಳಿಯುತ್ತಾರೆ. ವಿಘ್ನಗಳಂತೂ ತುಂಬಾ ಬರುತ್ತಾ ಇರುತ್ತವೆ. ತಿಳಿಸುವುದಂತೂ ತುಂಬಾ
ಸಹಜವಾಗಿದೆ. ತಂದೆಯ ಆಜ್ಞೆಯಾಗಿದೆ - ಬೇಗ ಬೇಗ ನನ್ನ ಜೊತೆ ನಿಶ್ಚಿತಾರ್ಥವನ್ನು ಮಾಡಿಸಿಬಿಡಿ, ನಿಶ್ಚಿತಾರ್ಥವನ್ನು ಮಾಡಿಸುವುದರಿಂದ
ಆಸ್ತಿಗೆ ಹಕ್ಕುದಾರರಾಗಲು ಸಾಧ್ಯ.
ತಂದೆಯು
ಆತ್ಮಿಕ ಸರ್ಜನ್ ಆಗಿದ್ದಾರೆ. ನೀವು ಅವರ ಮಕ್ಕಳೆಂದು ಕರೆಸಿಕೊಳ್ಳುತ್ತೀರಿ ಎಂದಾಗ ನೀವು ಸಹ
ಸರ್ಜನ್ ಆಗಿದ್ದೀರಿ. ಅವಶ್ಯವಾಗಿ ಈ ಸಮಯದಲ್ಲಿ ಆತ್ಮಗಳಿಗೆ ಜ್ಞಾನದ ಇಂಜೆಕ್ಷನ್ನ್ನು
ಹಾಕಬೇಕಾಗಿದೆ. ಮನ್ಮನಾಭವ-ಇದು ದೊಡ್ಡದಕ್ಕಿಂತ ದೊಡ್ಡ ಇಂಜೆಕ್ಷನ್ ಆಗಿದೆ. ತಂದೆಯ ನೆನಪಿನಿಂದಲೇ
ಎಲ್ಲಾ ದುಃಖವೂ ದೂರವಾಗಿಬಿಡುತ್ತದೆ. ಯೋಗದಿಂದ ಪುಣ್ಯಾತ್ಮರಾಗಿಬಿಡುತ್ತೀರಿ. ಇದಕ್ಕೆ ಯೋಗದ
ಔಷಧಿಯೊಂದೇ ಆಗಿದೆ. ಮಗುವು ಜನ್ಮ ಪಡೆಯುತ್ತದೆ. ತಂದೆಯ ಮಗುವಿನ ಜನ್ಮವಾಗುತ್ತದೆ. ತಂದೆಯ
ಮಡಿಲಲ್ಲಿ ಹೋಗುತ್ತದೆಯೆಂದರೆ ಆಸ್ತಿಗೆ ಮಾಲೀಕನಾಗುತ್ತದೆ. ಹಾಗೆಯೇ ನಾವು ನೆನಪಿನಿಂದ ನಾವು
ಬೇಹದ್ದಿನ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಈಗ ನಿಮಗೆ ತಿಳಿದಿದೆ.
ನೆನಪಿನಲ್ಲಿಯೇ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ಆದ್ದರಿಂದ ನೆನಪನ್ನು ಪಕ್ಕಾ
ಮಾಡಿಕೊಳ್ಳುತ್ತಾ ಹೋಗಿ. ಕೇವಲ ಮೂರು ಹೆಜ್ಜೆಗಳ ಸ್ಥಳವನ್ನು ತೆಗೆದುಕೊಂಡು ಆಸ್ಪತ್ರೆಯನ್ನು
ತೆರೆಯಿರಿ. ಇದು ಮೂರು ಹೆಜ್ಜೆಗಳದ್ದಾಗಿದೆಯಲ್ಲವೆ! ಇಲ್ಲವೆಂದರೆ ಇಂತಹ ಶ್ರೇಷ್ಠ ಕಾಲೇಜಿಗೋಸ್ಕರ
50-60 ಎಕರೆ ಜಮೀನ ಇರಬೇಕು. ಇಲ್ಲಿ ಅನೇಕ ಮನುಷ್ಯರು ಬಂದು ಓದಬೇಕು ಮತ್ತು ಜ್ಞಾನದ
ಇಂಜೆಕ್ಷನ್ನ್ನು ಹಾಕುತ್ತಾ ಹೋಗಬೇಕು. ಗಾಯನವೂ ಇದೆ. ಮೂರು ಹೆಜ್ಜೆಗಳ ಸ್ಥಳವೂ ಸಿಕ್ಕಿರಲಿಲ್ಲ.
ಆದರೆ ವಿಶ್ವದ ಮಾಲೀಕರಾಗಿಬಿಟ್ಟರು ಎಂದು. ನೀವು ವಿಶ್ವದ ಮಾಲೀಕರಾಗುತ್ತಿರಲ್ಲವೇ. ಮೂರು
ಹೆಜ್ಜೆಗಳ ಸ್ಥಳದ್ದೇನೂ ದೊಡ್ಡ ಮಾತಲ್ಲ, ಮತ್ತೆ ನಿಧಾನ ನಿಧಾನವಾಗಿ ವೃದ್ಧಿಯಾಗುತ್ತಾ
ಹೋಗುತ್ತದೆ. ತಳಪಾಯವನ್ನು ಹಾಕಿದ ಕಾರಣ ಎಷ್ಟೊಂದು ಸೇವಾಕೇಂದ್ರಗಳು ತೆರೆಯಲ್ಪಟ್ಟಿತು.
ಎಷ್ಟೊಂದು ಆತ್ಮಗಳು ಕವಡೆಯ ಸಮಾನ ಇದ್ದವರು ವಜ್ರದ ಸಮಾನ ಆಗುತ್ತಾರೆ. ಈ ರೀತಿ ಮಾಡುವವರಿಗೂ ಸಹ
ಅನೇಕರ ಉದ್ಧಾರಕ್ಕೋಸ್ಕರ ಆಸ್ಪತ್ರೆ ಅಥವಾ ವಿಶ್ವವಿದ್ಯಾಲಯಗಳನ್ನು ತೆರೆಯಲ್ಪಡುತ್ತದೆ. ಇದೂ ಸಹ
ಹಾಗೆಯೇ ಇದೆ. ಆದ್ದರಿಂದ ಹೊರಗಡೆ ಬೋರ್ಡ್ ಹಾಕಿ. ಕ್ಲಿನಿಕ್ ಫಾರ್ ಹೆಲ್ತ್-ವೆಲ್ತ್ 21
ಜನರೇಷನ್. ನೂರು ಪ್ರತಿಶತ ಪವಿತ್ರತೆ, ಸುಖ-ಶಾಂತಿಯ ಚಿಕಿತ್ಸಾಲಯವಾಗಿದೆ. ಆದರೆ ಮಕ್ಕಳಲ್ಲಿ ಸೇವೆ ಮಾಡುವ ಆಸಕ್ತಿಯೇ ಇಲ್ಲ. ಸಂಸಾರ
ಜಾಲವನ್ನು ಜೇಡರ ಬಲೆಯೆಂದು ಹೇಳಲಾಗುತ್ತದೆ. ಈ ಬಲೆಯಲ್ಲಿ ತಾವೇ ಸಿಕ್ಕಿಹಾಕಿಕೊಳ್ಳುತ್ತಾರೆ.
ತಂದೆಯು ಬಂದು ರಾವಣರೂಪಿ ಜೇಡರ ಬಲೆಯಿಂದ ಹೊರತೆಗೆಯುತ್ತಾರೆ. ಸತ್ಯಯುಗದಲ್ಲಿ ಸಂಸಾರವನ್ನು ಜೇಡರ
ಬಲೆಯೆಂದು ಹೇಳಲಾಗುವುದಿಲ್ಲ. ಇಲ್ಲಿ ತಾವೇ ತಮ್ಮ ಜಾಲದಲ್ಲಿ ಸಿಕ್ಕಿಹಾಕಿಕೊಂಡು ಸಾಯುತ್ತಾರೆ.
ಇದು ರಾವಣನ ರಾಜ್ಯವಾಗಿದೆ. ಇಡೀ ಸೃಷ್ಠಿಯಲ್ಲಿ ಎಷ್ಟು ದೊಡ್ಡ ದೊಡ್ಡ ರಾವಣನ ಜಾಲವಿದೆ. ಎಲ್ಲರೂ
ಸಹ ಶೋಕ ವಾಟಿಕೆಯಲ್ಲಿ ಕುಳಿತಿದ್ದಾರೆ. ಈ ರಾವಣನ ಜಾಲದಲ್ಲಿ ಎಲ್ಲ ಸಾಧು-ಸಂತ ಮುಂತಾದವರು
ಸಿಕ್ಕಿಹಾಕಿಕೊಂಡಿದ್ದಾರೆ. ಈಗ ಇವರೆಲ್ಲರನ್ನು ಮರೆತು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು
ಎಲ್ಲರಿಗೆ ಇದೇ ಮಾರ್ಗವನ್ನು ತಿಳಿಸುತ್ತಾ ಇರಿ ಎಂದು ತಂದೆಯು ತಿಳಿಸುತ್ತಾರೆ. ಈ ಸೃಷ್ಠಿಚಕ್ರದ
ರಹಸ್ಯವನ್ನು ಅನ್ಯರು ಯಾರು ತಿಳಿಸಲು ಸಾಧ್ಯವಿಲ್ಲ. ಇವರೆಲ್ಲರನ್ನು ಬಿಟ್ಟು ನನ್ನೊಬ್ಬನನ್ನೇ
ನೆನಪು ಮಾಡಿ. ನೆನಪಿನಿಂದಲೇ ನಿಮ್ಮ ಎಲ್ಲಾ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು
ತಿಳಿಸುತ್ತಾರೆ. ಈ ಶುಭಕಾರ್ಯದಲ್ಲಿ ನಿಧಾನ ಮಾಡಬಾರದು. ಇದಕ್ಕೆ ಒಂದು ಉದಾಹರಣೆ ಕೊಡುತ್ತಾರೆ.
ನಿಧಾನ ಮಾಡುತ್ತಾ ಮಾಡುತ್ತಾ ಇಂದು-ನಾಳೆ ಎನ್ನುತ್ತಾ ಶರೀರ ಬಿಟ್ಟರು. ನಂತರ ಭೋಗವನ್ನಿಟ್ಟಾಗ ಆ
ಆತ್ಮವು ಬರುತ್ತದೆಯೆಂದರೆ ತುಂಬಾ ಅಳುತ್ತದೆ. ನೀನು ತುಂಬಾ ನಿಧಾನ ಮಾಡಿದೆ ಎಂದು
ಹೇಳಲಾಗುತ್ತದೆ. ಇಂದು ನಾಳೆ ಎಂದು ಹೇಳುತ್ತಾ ಹೇಳುತ್ತಾ ಮೃತ್ಯು ಬಂದು ಬಿಟ್ಟಿತು. ಈಗ ಜ್ಞಾನವಂತೂ
ತೆಗೆದುಕೊಳ್ಳಲು ಸಾಧ್ಯವಿಲ್ಲ. ಆತ್ಮವು ದೂರುಗಳನ್ನು ಕೊಡಲಾಗುತ್ತದೆ. ಬಹಳ ಮಕ್ಕಳು ವಿಚಾರ
ಮಾಡುತ್ತಾರೆ,
ನಾಳೆ
ಮಾಡೋಣವೆಂದು ತಿಳಿಯುತ್ತಾರೆ. ನಂತರ ಶರೀರ ಬಿಟ್ಟುಹೋಗುತ್ತಾರೆ. ಆದ್ದರಿಂದ ಮಮತ್ವವನ್ನು ಬಿಡಿ
ಎಂದು ತಿಳಿಸಲಾಗುತ್ತದೆ. ಲೌಕಿಕ ಸಂಭಂದಿಗಳು ನೀವಾತ್ಮಗಳ ಕಲ್ಯಾಣವನ್ನು ಮಾಡಬೇಕಾಗಿದೆ. ಈಗ ಶಿವತಂದೆ
ನಿಮ್ಮ ಮಗನಾಗುತ್ತಾರೆ. ತಿಳಿಸುತ್ತಾರೆ - ನೀವು ನನ್ನನ್ನು ವಾರಸುದಾರನನ್ನಾಗಿ ಮಾಡಿಕೊಂಡಾಗ
ನಾನು ನಿಮ್ಮ ತುಂಬಾ ಸೇವೆಯನ್ನು ಮಾಡುತ್ತೇನೆ. ಆದ್ದರಿಂದ ತಂದೆ ಕೇಳುತ್ತಾರೆ-ನಿಮಗೆ ಎಷ್ಟು
ಮಕ್ಕಳಿದ್ದಾರೆ?
ಶಿವತಂದೆಯನ್ನು
ತಮ್ಮ ಮಗುವನ್ನಾಗಿ ಮಾಡಿಕೊಂಡಾಗ 21 ಜನ್ಮಗಳಿಗೆ ಸಂಪನ್ನರಾಗುತ್ತೀರಿ. ಕನ್ಯೆಯಂತೂ ತನ್ನ ಮನೆಗೆ
ಹೋಗುತ್ತಾಳೆ ಎಂದರೆ ಮತ್ತೆ ಮಕ್ಕಳಿಗೋಸ್ಕರ ಎಷ್ಟು ಚಿಂತೆ ಪಡುತ್ತಾರೆ. ಮಕ್ಕಳು ಆಗದೇ ಇದ್ದರೆ
ಎರಡು ಅಥವಾ ಮೂರು ಮದುವೆಗಳನ್ನು ಮಾಡಿಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ ಆ ಲೌಕಿಕ ಮಕ್ಕಳು
ನಿಮ್ಮ ಸೇವೆಯನ್ನು ಮಾಡುವುದಿಲ್ಲ. ಶಿವತಂದೆಯೇ ಎಲ್ಲರ ಮಗುವಾಗುತ್ತಾರೆ, ಒಂದೇ ಬಾರಿಯಲ್ಲಿ ನಿಮ್ಮ ಭಂಡಾರ ಸಂಪನ್ನ
ಮಾಡುತ್ತಾರೆ. ಆದರೆ ಎಲ್ಲವನ್ನೂ ಕೊಡಬೇಕೇನೋ! ಏನಾಗುತ್ತದೆಯೋ! ಎಂದು ಕೆಲವರು ಭಯಪಡುತ್ತಾರೆ
ತಂದೆ ತಿಳಿಸುತ್ತಾರೆ - ತಮ್ಮ ಮಕ್ಕಳನ್ನೂ ಸಹ ಪಾಲನೆ ಮಾಡಲೇಬೇಕಾಗಿದೆ. ಆದರೆ ನೆನಪನ್ನಂತೂ ಈ
ಮಗನನ್ನೇ ಮಾಡಿ. ಇವರಂತೂ ನಿಮ್ಮನ್ನು ಪ್ರೀತಿ ಮಾಡುತ್ತಾರೆ. ಕಾಶಿಯ ಮಂದಿರದಲ್ಲಿ ಹೋಗಿ
ಬಲಿಹಾರಿಯಾಗುತ್ತಾರೆ. ಶಿವನಿಗೆ ಬಲಿಹಾರಿಯಾಗುವುದರಿಂದ ಜೀವನ್ಮುಕ್ತಿ ಸಿಗುತ್ತದೆಯೆಂದು
ತಿಳಿಯುತ್ತಾರೆ. ವಾಸ್ತವದಲ್ಲಿ ಈ ಮಾತು ಇಲ್ಲಿಯದಾಗಿದೆ. ಎಲ್ಲಿಯ ಮಾತು ಎಲ್ಲಿಗೆ ತೆಗೆದುಕೊಂಡು
ಹೋಗಿದ್ದಾರೆ. ಅಂದರೆ ಈ ಮಗುವಿನ (ಶಿವತಂದೆಯ) ಮೇಲೆ ಬಲಿಹಾರಿಯಾದರೆ ನಿಮ್ಮ ತುಂಬಾ ಸೇವೆಯನ್ನು
ಮಾಡುತ್ತಾರೆ. ಸ್ವರ್ಗದ ಮೆಹಲ್ನ್ನು ಕೊಡುತ್ತಾರೆ. ಲೌಕಿಕದ ಮಕ್ಕಳಂತೂ ಏನನ್ನೂ ಮಾಡುವುದಿಲ್ಲ.
ತಿಥಿಯ ದಿನದಂದು ಕೆಲವು ಬ್ರಾಹ್ಮಣರಿಗೆ ತಿನ್ನಿಸುತ್ತಾರಷ್ಟೇ. ಮನುಷ್ಯರು ತಮಗೋಸ್ಕರ ದಾನ-ಪುಣ್ಯ
ಇತ್ಯಾದಿಗಳನ್ನು ಮಾಡುತ್ತಾರೆ. ಹಾಗಾದರೆ ಆತ್ಮಿಕ ಆಸ್ಪತ್ರೆ ತೆರೆಯುವುದು ಎಷ್ಟು ಪುಣ್ಯದ
ಕಾರ್ಯವಾಗಿದೆ. ಸಾಹುಕಾರರಂತೂ 10-15 ಆಸ್ಪತ್ರೆಗಳನ್ನು ತೆರೆಯಬಹುದಾಗಿದೆ. ದೊಡ್ಡದಾದಂತಹ ಮನೆಯನ್ನು
ಮಾಡಿ ಎಂದಲ್ಲ. ಅದಕ್ಕೂ ಸಹ ತುಂಬಾ ಹಣವು ಖರ್ಚಾಗಿ ಬಿಡುತ್ತದೆ. ಆದ್ದರಿಂದ ಬಾಡಿಗೆಗೆ ಮನೆಯನ್ನು
ತೆಗೆದುಕೊಂಡು 50 ಸಾವಿರ ರೂಪಾಯಿಗಳಲ್ಲಿ 50 ಆತ್ಮಿಕ ಆಸ್ಪತ್ರೆಗಳನ್ನು ತೆರೆಯಿರಿ. ನಂತರ ತಾವೇ
ತಮ್ಮ ಕಾಲಿನ ಮೇಲೆ ನಿಲ್ಲುತ್ತೀರಿ. ತಂದೆಯು ಸರ್ವೀಸಿನ ಎಷ್ಟೊಂದು ಸಹಜ ಯುಕ್ತಿಗಳನ್ನು
ತಿಳಿಸುತ್ತಾರೆ. ಗಂಗಾ ನದಿಯ ತೀರಕ್ಕೆ ಹೋಗಿ ಸರ್ವೀಸ್ ಮಾಡಿ. ತಮ್ಮ ಬೆನ್ನಿನ ಮೇಲೆ ತಂದೆಯ
ಪರಿಚಯವನ್ನು ಹಾಕಿಕೊಳ್ಳಿ. ಎಲ್ಲರೂ ತಾನಾಗಿಯೇ ಓದುತ್ತಾ ಇರುತ್ತಾರೆ. ದೇಹದ ಅಭಿಮಾನವನ್ನು
ಬಿಡಬೇಕಾಗಿದೆ. ಯಾವುದೇ ಸಾಹುಕಾರರು ಹೀಗೆ ಮಾಡಿದಾಗ ಎಲ್ಲರೂ ವಾಹ್! ಇವರಿಗಂತೂ ದೇಹಾಭಿಮಾನವು
ಇಲ್ಲವೇ ಇಲ್ಲ ಎಂದು ಹೇಳುತ್ತಾರೆ. ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯು ಸ್ವರ್ಗದ
ರಚೈತನಾಗಿದ್ದಾರೆ ಎಂದರೆ ಮತ್ತೆ ನಾವು ನರಕದಲ್ಲಿ ಏಕೆ ಇದ್ದೇವೆ! ಈಗ ತಂದೆಯು ಬಂದು
ತಿಳಿಸುತ್ತಾರೆ- ದೇಹದ ಎಲ್ಲಾ ಸಂಭಂದವನ್ನು ಬಿಟ್ಟು ನನ್ನನ್ನು ನೆನಪು ಮಾಡಿ ಎಂದು. ಈ ಭಾರತವು
ಸ್ವರ್ಗದಿಂದ ನರಕ ಹೇಗಾಯಿತು?
ಲಕ್ಷ್ಮೀನಾರಾಯಣರು
84 ಜನ್ಮಗಳನ್ನು ಹೇಗೆ ತೆಗೆದುಕೊಂಡರು, ಎನ್ನುವುದನ್ನು ತಾವು ಬಂದರೆ ಈ ಕತೆಯನ್ನು ನಾವು ತಿಳಿಸುತ್ತೇವೆ. ಪತಿತ-ಪಾವನಿ ಎಂದು
ಗಂಗಾನದಿಗೆ ಹೇಳುತ್ತಾರೆ ಮತ್ತು ಜಮುನಾ ನದಿಗೂ ಹೇಳುತ್ತಾರೆ. ಒಳ್ಳೆಯದು ಗಂಗೆಯು ಪತಿತ-ಪಾವನಿ
ಆಗಿದೆ ಎಂದರೆ ಅದೊಂದನ್ನೇ ಹಿಡಿದುಕೊಳ್ಳಬೇಕಲ್ಲವೇ!
ಈಗ ನೀವು
ಮಕ್ಕಳು ನಾಟಕವನ್ನು ತಿಳಿದುಕೊಂಡಿದ್ದೀರಿ ಎಂದರೆ ಅನ್ಯರಿಗೆ ತಿಳಿಸಬೇಕಾಗಿದೆ. ಒಂದುವೇಳೆ
ಅನ್ಯರಿಗೆ ಜ್ಞಾನದ ಬೆಳಕನ್ನು ಕೊಡುವುದಿಲ್ಲವೆಂದರೆ ಇವರ ಬುದ್ಧಿಯಲ್ಲಿ ಜ್ಞಾನದ ಬೆಳಕಿದೆಯೆಂದು
ಯಾರು ಹೇಳುತ್ತಾರೆ. ಸರ್ಜನ್ ಇಂಜೆಕ್ಷನ್ನ್ನು ಹಾಕಲು ಬರುವುದಿಲ್ಲವೆಂದರೆ ಅವರನ್ನು ಸರ್ಜನ್
ಎಂದು ಯಾರು ಹೇಳುತ್ತಾರೆ?
ನೀವು
ಮಕ್ಕಳಿಗೆ ಪೂರ್ತಿ ಬೆಳಕು ಸಿಕ್ಕಿದೆ. 84 ಜನ್ಮಗಳ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ನೀವು ಈ
ನಾಟಕವನ್ನು ಮತ್ತು ಪಾತ್ರಧಾರಿಗಳ ಪಾತ್ರವನ್ನು ಅರಿತುಕೊಂಡಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ
ಪಾತ್ರವು ತಂದೆಯದಾಗಿದೆ. ತಂದೆಯು ಮಕ್ಕಳ ಜೊತೆ ಪಾತ್ರವನ್ನು ಅಭಿನಯಿಸುತ್ತಾರೆ. ನೀವು
ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ಆದರೆ ಗುಪ್ತವಾಗಿದ್ದೀರಿ. ಗುಪ್ತ, ಅಹಿಂಸಾತ್ಮಕ, ಶಿವಶಕ್ತಿ ಸೇನೆಯಾಗಿದ್ದೀರಿ.
ಮನುಷ್ಯರ ಎಲ್ಲಾ ಮಾತುಗಳು ಶಾರೀರಿಕ ಮಾತುಗಳಾಗಿವೆ. ಕುಂಭಮೇಳಕ್ಕೆ ಅನೇಕರು ಹೋಗುತ್ತಾರೆ. ಆದರೆ
ಇಲ್ಲಿ ಯಾವುದೇ ಶಾರೀರಿಕ ಮಾತಿಲ್ಲ. ನಿಮ್ಮ ಯಾತ್ರೆಯು ಏಳುತ್ತಾ - ಕುಳಿತುಕೊಳ್ಳುತ್ತಾ, ನಡೆದಾಡುತ್ತಾ ಮಾಡಬಹುದಾಗಿದೆ.
ನೆನಪಿನಿಂದಲೇ ನೀವು ಪಾವನರಾಗುತ್ತೀರಿ. ನೀವು ಕಾರ್ಯವನ್ನು ಮಾಡುವ ಸಮಯದಲ್ಲಿಯೂ ನನ್ನನ್ನು
ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದಕ್ಕೆ ಮನುಷ್ಯರು ಎಲ್ಲದರಲ್ಲಿ
ಪರಮಾತ್ಮನಿದ್ದಾರೆಂದು ಹೇಳಿಬಿಡುತ್ತಾರೆ. ಎಂದಾಗ ಎಷ್ಟೊಂದು ಅಂತರವಾಯಿತಲ್ಲವೇ! ತಂದೆಯು
ತಿಳಿಸುತ್ತಾರೆ - ಎಲ್ಲಿಯೇ ಕುಳಿತುಕೊಳ್ಳಿ ಆದರೆ ನನ್ನನ್ನು ನೆನಪು ಮಾಡಬೇಕು ಮತ್ತೆ
ಸರ್ವೀಸ್ನ್ನೂ ಸಹ ಮಾಡಬೇಕಾಗಿದೆ. ಮಂದಿರಗಳಿಗೆ ಅನೇಕ ಭಕ್ತರು ಹೋಗುತ್ತಾರೆ. ಈ ಚಿತ್ರಗಳನ್ನು
ಬೆನ್ನಿನ ಮೇಲೆ ಹಾಕಿಕೊಂಡು ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ತಂದೆಯು ಅನೇಕ ಯುಕ್ತಿಗಳನ್ನು
ತಿಳಿಸುತ್ತಾರೆ. ಸ್ಮಶಾನದಲ್ಲಿ ಹೋಗಿ ನನ್ನ ಪರಿಚಯವನ್ನು ಕೊಡಿ. ನಿರಾಕಾರ ತಂದೆಯ ಮಹಿಮೆ ಮತ್ತು
ಶ್ರೀ ಕೃಷ್ಣನ ಮಹಿಮೆಯನ್ನು ತಿಳಿಸಿ. ಈಗ ಹೇಳಿ ಗೀತೆಯ ಭಗವಂತ ಯಾರು? ಎಂದು ಅವರನ್ನು ಕೇಳಿ. ಜೊತೆಯಲ್ಲಿ
ಚಿತ್ರಗಳೂ ಇರಲಿ. ನೀವು ತುಂಬಾ ಸೇವೆಯನ್ನು ಮಾಡಬಲ್ಲಿರಿ. ಸ್ತ್ರೀಯರೇ ಮಾಡಲಿ ಅಥವಾ ಯಾವುದೇ
ಕುಮಾರಿಯರೇ ಮಾಡಿದರೂ ಸಹ ಅಹೋ ಸೌಭಾಗ್ಯ. ಕನ್ಯೆಯಂತೂ ಎಲ್ಲರಿಗಿಂತ ಉತ್ತಮವಾಗಿದ್ದಾರೆ. ಕನ್ಯೆಯರ
ಕನ್ನಯ್ಯ ನಿರಾಕಾರ ತಂದೆಯಾಗಿದ್ದಾರೆ. ಕನ್ನಯ್ಯ ಕೃಷ್ಣನಾಗಿರಲಿಲ್ಲ, ಈ ತಂದೆಯಾಗಿದ್ದಾರೆ. ತಂದೆಗೆ
ವಿಚಾರವು ಬರುತ್ತದೆ - ಮಕ್ಕಳಿಗೆ ಹೇಗೆ ಕಲಿಸಲಿ! ಎಂದು. ಕಲ್ಪದ ಹಿಂದೆಯೂ ಸಹ ನಾಟಕದನುಸಾರ
ಹೀಗೆಯೇ ತಿಳಿಸಿದ್ದೇನು ಮತ್ತೆ ಇಂದು ಸಹ ತಿಳಿಸುತ್ತೇನೆ. ಆದ್ದರಿಂದ ನೀವು ಮಕ್ಕಳು ಅಂಧರಿಗೆ
ಊರುಗೋಲಾಗಬೇಕು. ಯಾವ ಮಕ್ಕಳಿಗೆ ಪರಿಚಯ ಸಿಗುತ್ತದೆ. ಅವರು ಮತ್ತೆ ಅನ್ಯರನ್ನು ಕರೆದುಕೊಂಡು
ಬರುತ್ತಾರೆ ಅಂದಾಗ ಅದರ ಪುಣ್ಯವೂ ಸಹ ಆಗುತ್ತದೆ. ತಮ್ಮ ಬಳಿ ಲೆಕ್ಕವನ್ನು ಇಡಿ. ಎಷ್ಟು
ಮಾಡುತ್ತೀರೋ ಅಷ್ಟು ಫಲವಂತೂ ಸಿಗುತ್ತದೆಯಲ್ಲವೇ. ಯಾರನ್ನಾದರೂ ಕರೆದುಕೊಂಡು ಬರುತ್ತೀರೆಂದರೆ
ಅವರ ಕಲ್ಯಾಣವೂ ಆಗುತ್ತದೆ. ಈ ವ್ಯವಹಾರದಲ್ಲಿ ಮಕ್ಕಳು ತುಂಬಾ ಗಮನ ಇಡಬೇಕು. ಸರ್ವೀಸ್
ಮಾಡುವುದಿಲ್ಲವೆಂದರೆ ಏನು ಸಿಗುತ್ತದೆ? ಸರ್ವೀಸ್,
ಸರ್ವೀಸ್
ಮತ್ತು ಸರ್ವೀಸ್. ನಾವು ಭಗವಂತನ ಸೇವೆಯಲ್ಲಿದ್ದೇವೆಂದು ನೀವು ಹೇಳುತ್ತೀರಿ. ಮನೆಯ ಸೇವೆಯನ್ನೂ
ಸಹ ಭಲೇ ಮಾಡಿ.
ತಂದೆಯು
ಶಿಕ್ಷಣವನ್ನು ಕೊಡುತ್ತಾರೆ - ಮಕ್ಕಳನ್ನು ಎಂದೂ ವಿಕಾರದಲ್ಲಿ ಹೋಗಲು ಬಿಡಬಾರದು. ಒಂದುವೇಳೆ
ಅವರು ನಿಮ್ಮ ಆಜ್ಞೆಯನ್ನು ಪಾಲಿಸುವುದಿಲ್ಲವೆಂದರೆ ಅಪ್ರಾಮಾಣಿಕರಾಗುತ್ತಾರೆ. ಒಂದುವೇಳೆ ನೀವು
ಅವರಿಗೆ ಹಣವನ್ನು ಕೊಡುತ್ತೀರಿ,
ಅದರಿಂದ
ಅವರು ಪಾಪದ ಕಾರ್ಯವನ್ನು ಮಾಡಿದರೆ ಅದರ ಹೊರೆಯು ನಿಮ್ಮ ತಲೆಯ ಮೇಲೆ ಬಂದುಬಿಡುತ್ತದೆ. ತಂದೆಯಂತೂ
ಸಲಹೆಯನ್ನು ಕೊಡುತ್ತಾರೆ. ಆದರೆ ಅನೇಕರು ಈ ರೀತಿ ಇದ್ದಾರೆ ಅವರು ಮಾಡಿದ ನಂತರ ತಿಳಿಸುತ್ತಾರೆ.
ಮಕ್ಕಳಿಗೆ ಸೇವೆ ಮಾಡಲು ಅನೇಕ ಪ್ರಕಾರದ ಯುಕ್ತಿಗಳನ್ನು ತಿಳಿಸುತ್ತಾರೆ. ನೀವು ಮಕ್ಕಳು ಇದೇ ವ್ಯಾಪಾರವನ್ನು
ಮಾಡಬೇಕಾಗಿದೆ. ರೈಲಿನಲ್ಲಿಯೂ ಸಹ ಇದೇ ಸೇವೆಯನ್ನು ಮಾಡುತ್ತಾ ಇರಿ. ಆಗ ತಂದೆಯೂ
ಖುಷಿಯಾಗುತ್ತಾರೆ ಮತ್ತು ಭವಿಷ್ಯ 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯು ಸಿಕ್ಕಿಬಿಡುವುದು.
ಒಳ್ಳೆಯದು.
ಮಧುರಾತಿ
ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ
ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಮಾಯೆಯು
ತುಂಬಾ ದೊಡ್ಡ ಜಾಲವನ್ನು ಬೀಸಿದೆ, ಈಗ ತಂದೆಯ ನೆನಪಿನಿಂದ ಆ ಜಾಲದಿಂದ ಬಿಡುಗಡೆಯಾಗಬೇಕಾಗಿದೆ. ಶುಭಕಾರ್ಯದಲ್ಲಿ
ತೊಡಗಬೇಕಾಗಿದೆ. ಯಾವುದೇ ದೇಹಧಾರಿಗಳ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬಾರದಾಗಿದೆ, ಎಲ್ಲದರಿಂದ ಮಮತ್ವವನ್ನು ತೆಗೆಯಬೇಕಾಗಿದೆ.
2. ಜ್ಞಾನದ
ಯಾವ ಪ್ರಕಾಶತೆಯು ಸಿಕ್ಕಿದೆ ಅದನ್ನು ಎಲ್ಲರಿಗೆ ಕೊಡಬೇಕಾಗಿದೆ. ದೇಹದ ಅಭಿಮಾನವನ್ನು ಬಿಟ್ಟು
ಭಿನ್ನ - ಭಿನ್ನ ಯುಕ್ತಿಗಳಿಂದ ಸೇವೆ ಮಾಡಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
ವರದಾನ:
ಅನೇಕ ಪ್ರಕಾರದ ಭಾವಗಳನ್ನು ಸಮಾಪ್ತಿ ಮಾಡಿ ಆತ್ಮೀಕಭಾವವನ್ನು ಧಾರಣೆ
ಮಾಡುವಂತಹ ಸರ್ವರ ಸ್ನೇಹಿ ಭವ
ದೇಹ-ಭಾನದಲ್ಲಿ
ಇರುವುದರಿಂದ ಅನೇಕ ಪ್ರಕಾರದ ಭಾವನೆಗಳು ಉತ್ಪನ್ನವಾಗುವುದು. ಕೆಲವೊಮ್ಮೆ ಕೆಲವು
ಒಳ್ಳೆಯದೆನ್ನಿಸಿದರೆ,
ಕೆಲವು
ಕೆಟ್ಟದೆನ್ನಿಸುತ್ತದೆ. ಆತ್ಮರೂಪದಲ್ಲಿ ನೋಡುವುದರಿಂದ ಆತ್ಮೀಯ ಪ್ರೀತಿ ಹುಟ್ಟಿಕೊಳ್ಳುವುದು.
ಆತ್ಮೀಕ ಭಾವ,
ಆತ್ಮೀಕ
ದೃಷ್ಟಿ,
ಆತ್ಮೀಕ
ವೃತ್ತಿಯಲ್ಲಿರುವುದರಿಂದ ಪ್ರತಿಯೊಬ್ಬರ ಸಂಬಂಧದಲ್ಲಿ ಬರುತ್ತಾ ಅತೀ ನ್ಯಾರಾ(ಭಿನ್ನ) ಮತ್ತು
ಪ್ಯಾರಾ(ಪ್ರಿಯ) ಆಗಿರುವಿರಿ. ಆದ್ದರಿಂದ ನಡೆಯುತ್ತಾ ತಿರುಗಾಡುತ್ತಾ ಅಭ್ಯಾಸ ಮಾಡಿ-”ನಾನು ಆತ್ಮನಾಗಿದ್ದೇನೆ” ಇದರಿಂದ ಅನೇಕ ಪ್ರಕಾರದ
ಭಾವ-ಸ್ವಭಾವ ಸಮಾಪ್ತಿಯಾಗಿಬಿಡುವುದು ಮತ್ತು ಎಲ್ಲರ ಸ್ನೇಹಿ ಸ್ವತಃ ಆಗಿಬಿಡುವುದು.
ಸ್ಲೋಗನ್:
ಯಾರ ಬಳಿ ಉಮಂಗ-ಉತ್ಸಾಹದ ರೆಕ್ಕೆಯಿದೆ ಅದರಿಂದ ಸಫಲತೆ ಸಹಜವಾಗಿ
ಪ್ರಾಪ್ತಿಯಾಗುವುದು.
Hindi/Tamil/English/Telugu/Kannada/Malayalam/Ilangai Tamil/Sinhala


0 Comments