28/11/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ- ವಿದ್ಯೆಯನ್ನು
ಚೆನ್ನಾಗಿ ಓದಿ
ಅದರ ಪ್ರತ್ಯಕ್ಷ
ಪ್ರಮಾಣವನ್ನು ಕೊಡಿ,
ಸೇವೆ ಮಾಡಿ
ಅನ್ಯರನ್ನು ಯೋಗ್ಯರನ್ನಾಗಿ
ಮಾಡಿ ಆಗ
ಶ್ರೇಷ್ಠ ಪದವಿಗೆ
ಅಧಿಕಾರಿಗಳಾಗುತ್ತೀರಿ”
ಪ್ರಶ್ನೆ:
ಈ ಬೇಹದ್ದಿನ ಶಾಲೆಯಲ್ಲಿ ಯಾರದು ವಾಹ್ ವಾಹ್ ಆಗುತ್ತದೆ?
ಉತ್ತರ:
ಯಾರು ಸ್ವಯಂ ಚೆನ್ನಾಗಿ ಓದುತ್ತಾರೆ ಮತ್ತು ಅನ್ಯರನ್ನೂ ತಮ್ಮ ಸಮಾನರನ್ನಾಗಿ
ಮಾಡುವ ಸೇವೆ ಮಾಡುತ್ತಾರೆ. ಆತ್ಮೀಕ ಸಂಪಾದನೆಯಲ್ಲಿ
ತತ್ಪರರಾಗಿರುತ್ತಾರೆ, ಕೇವಲ ಅನ್ಯರನ್ನು ನೋಡಿ ಖುಷಿಯಾಗುವುದಿಲ್ಲ
ಆದರೆ ಮಾತ-ಪಿತಾರವರ ಸಮಾನ ಸೇವೆ ಮಾಡಿ ಅವರ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ, ಅವರ ಮಹಿಮೆಯನ್ನು (ವಾಹ್ ವಾಹ್) ಮಾತಾ-ಪಿತಾ ಹಾಗೂ ಅನನ್ಯ ಮಕ್ಕಳು ಮಾಡುತ್ತಾರೆ. ಯಾರು ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ, ವಿದ್ಯೆಯ ಮೇಲೆ ಗಮನ ಕೊಡುವುದಿಲ್ಲ.
ಮಾತಾ-ಪಿತಾರವರನ್ನು
ಅನುಕರಣೆ ಮಾಡುವುದಿಲ್ಲ.
ನಮಗೆ ಯೋಗವು ಹಿಡಿಸುವುದಿಲ್ಲ ಎಂದು ಅವರು ದೂರು ಕೋಡುತ್ತಾರೆ.
ಗೀತೆ: ತಾಳ್ಮೆಯನ್ನು ತಾಳು ಮಾನವನೇ......
ಓಂ ಶಾಂತಿ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ-ನಿಮ್ಮ ಸುಖದ ದಿನಗಳು ಬರುತ್ತದೆ. ಒಂದುವೇಳೆ ಶ್ರೀಮತದಂತೆ ನಡೆಯುತ್ತೀರೆಂದರೆ ಎಷ್ಟು ಶ್ರೀಮತದ ಮೇಲೆ ನಡೆಯುತ್ತೀರೋ ಅಷ್ಟು ಶ್ರೇಷ್ಠರಾಗುತ್ತೀರಿ. ಏಕೆಂದರೆ ಶ್ರೇಷ್ಠ ಅರ್ಥಾತ್ ಶ್ರೇಷ್ಠಾಚಾರಿಗಳಂತೂ ಎಲ್ಲರೂ ಆಗುತ್ತಾರೆ ಆದರೆ ಯಾರು ಒಳ್ಳೆಯ ರೀತಿಯಲ್ಲಿ ಶ್ರೀಮತದ ಮೇಲೆ ನಡೆಯುತ್ತಾರೋ ಒಳ್ಳೆಯ ಶ್ರೇಷ್ಠಾಚಾರಿಗಳಾಗುತ್ತಾರೆ. ವಿದ್ಯೆಯಲ್ಲೂ ಸಹ ಕೆಲವರು ಒಳ್ಳೆಯ ರೀತಿಯಲ್ಲಿ ಓದುತ್ತಾರೆ, ಇನ್ನೂ ಕೆಲವರು ಕಡಿಮೆ ಓದುತ್ತಾರೆ, ಅವರು ಅನ್ಯರಿಗೂ ಓದಿಸಲು ಯೋಗ್ಯರಾಗುತ್ತಾರೆ. ಆದರೆ ಕೆಲವರು ಗಮನವನೇ ಕೊಡುವುದಿಲ್ಲ. ಇದನ್ನೂ ಸಹ ಮಕ್ಕಳು ತಿಳಿಯುತ್ತಾರೆ- ಒಂದುವೇಳೆ ನಾವು ವಿದ್ಯೆಯನ್ನು ಒಳ್ಳೆಯ ರೀತಿಯಲ್ಲಿ ಓದುತ್ತೇವೆಂದರೆ ಹಾಗೆಯೇ ಯೋಗ್ಯರೂ ಆಗುತ್ತೇವೆ. ಇಲ್ಲವೆಂದರೆ ಯೋಗ್ಯವಲ್ಲದವರಾಗುತ್ತೇವೆ. ಯೋಗ್ಯರಿಗೆ ಅವಶ್ಯವಾಗಿ ಒಳ್ಳೆಯ ದರ್ಜೆ ಸಿಗುತ್ತದೆ. ನೀವೀಗ ಸುಖಧಾಮಕ್ಕೋಸ್ಕರ ಓದುತ್ತೀರಿ, ಮತ್ತೆ ಅದರಲ್ಲಿಯೂ ನಂಬರ್ವಾರ್ ಪದವಿಗಳಿದೆ. ಪದವಿಗಾಗಿ ಮನುಷ್ಯರು ಎಷ್ಟೊಂದು ತಲೆಕೆಡಿಸಿಕೊಳ್ಳುತ್ತಾರೆ. ಅದು ಅಲ್ಪಕಾಲದ ಸುಖ, ಕಾಗವಿಷ್ಟ ಸಮಾನ ಸುಖವಾಗಿದೆ. ಆದರೆ ಇದು ಅಪಾರ ಸುಖವಾಗಿದೆ. ಯಾವ ಮಕ್ಕಳು ಶ್ರೀಮತದ ಮೇಲೆ ನಡೆಯುತ್ತಾರೆ, ಅವರೇ ಅಪಾರ ಸುಖವನ್ನು ಪಡೆಯುತ್ತಾರೆ ಮತ್ತು ಅವರು ಬ್ರಾಹ್ಮಣಕುಲದಲ್ಲಿಯೂ ತಮ್ಮ ಹೆಸರನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ತಂದೆಯ ಆಜ್ಞೆಯಾಗಿದೆ-ಸರ್ವೀಸ್ ಮಾಡಿ, ಅನ್ಯರನ್ನೂ ಸಹ ಶ್ರೇಷ್ಠಾತಿ ಶ್ರೇಷ್ಠ ಪದವಿಧರರನ್ನಾಗಿ ಮಾಡಿ, ಆಗ ನಿಮ್ಮ ಪದವಿಯೂ ಶ್ರೇಷ್ಠವಾಗುತ್ತದೆ. ಚೆನ್ನಾಗಿ ಓದಿ ತಂದೆಗೆ ಪ್ರತ್ಯಕ್ಷ ಪ್ರಮಾಣವನ್ನು ನೀಡಬೇಕು. ಬಾಬಾ ನಾನು ಇಷ್ಟು ಜನರಿಗೆ ತಂದೆಯ ಪರಿಚಯವನ್ನು ಕೊಟ್ಟೆನು. ಪ್ರದರ್ಶನಿಯಲ್ಲೂ ಸಹ ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಡುತ್ತೀರಿ. ಪರಿಚಯ ಕೊಟ್ಟ ನಂತರ ಬರೆಸಿಕೊಳ್ಳಿ. ತಿಳಿಸಿಕೊಡುವುದು ಬಹಳ ಸಹಜವಾಗಿದೆ. ಲೌಕಿಕ ಮತ್ತು ಅಲೌಕಿಕ ತಂದೆಯಿರುತ್ತಾರೆ. ಲೌಕಿಕ ತಂದೆಯಿಂದ ಬೇಹದ್ದಿನ ಆಸ್ತಿ ಸಿಗುತ್ತದೆ. ಅದನ್ನೇ ಕಾಗವಿಷ್ಟ ಸಮಾನ ಸುಖವೆಂದು ಹೇಳಲಾಗುತ್ತದೆ. ಬೇಹದ್ದಿನ ತಂದೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಮಕ್ಕಳು ಸೇವೆಯನ್ನು ಮಾಡಿ ತಮ್ಮ ಸಮಾನ ಮಾಡಿಕೊಳ್ಳಬೇಕು. ಕೇವಲ ತಂದೆಯನ್ನು ನೆನಪು ಮಾಡುವುದಷ್ಟೇ ಅಲ್ಲ, ಆದರೆ ಅವರ ಹಾಗೆ ಸೇವೆಯನ್ನು ಮಾಡಿ ತಮ್ಮ ಸಮಾನ ಮಾಡಬೇಕು. ಕೃಷ್ಣ ಅಥವಾ ಯಾರದೇ ನೆನಪು ಮಾಡಿದರೆ, ಅವರ ಗುಣವನ್ನು ಧಾರಣೆ ಮಾಡಲಿಲ್ಲವೆಂದರೆ ಆ ನೆನಪು ಯಾವ ಕೆಲಸಕ್ಕೆ ಬರುತ್ತದೆ. ಆದರಿಂದ ಯಾವುದೇ ಫಲ ಸಿಗುವುದಿಲ್ಲ. ಭಕ್ತಿಮಾರ್ಗದಲ್ಲೂ ಸಹ ದೇವತೆಗಳನ್ನು ನೆನಪು ಮಾಡುತ್ತಾ, ಕೆಳಗಡೆ ಇಳಿಯುತ್ತಾ ಹೋಗುತ್ತೀರಿ. ಈಗ ಮಮ್ಮಾ-ಬಾಬಾರವರೂ ಸಹ ಸದ್ಗತಿಯಲ್ಲಿ ಹೋಗುವ ಸೇವೆಯಲ್ಲಿ ತೊಡಗಿದ್ದಾರೆ. ಯಾರು ತಾಯಿ-ತಂದೆಯರ ರೀತಿ ಸೇವೆಯನ್ನು ಮಾಡುತ್ತಾರೆ ಅವರೇ ಸತ್ಯ ಮಾತಾ-ಪಿತನ ಮಕ್ಕಳಾಗುತ್ತಾರೆ. ಇಲ್ಲವೆಂದರೆ ಕಚ್ಚಾ ಎಂದು ಹೇಳಲಾಗುತ್ತದೆ. ಮಕ್ಕಳನ್ನು ನೋಡಿ ನನ್ನ ಮುದ್ದಾದ ಮಕ್ಕಳು ನನ್ನ ಸಮಾನ ಸೇವೆಯನ್ನು ಮಾಡುತ್ತಾರೆ ಎಂದು ತಂದೆಗೂ ಸಹ ಖುಷಿಯಾಗುತ್ತದೆ. ಲೌಕಿಕದಲ್ಲೂ ಸಹ ಯಾವ ಮಕ್ಕಳು ಚೆನ್ನಾಗಿ ಓದುತ್ತಾರೆ ಅವರು ತಂದೆಯ ಹೃದಯವನ್ನು ಏರುತ್ತಾರೆ. ಒಳ್ಳೆಯ ಸಂಪಾದನೆಯನ್ನು ಮಾಡಿಕೊಳ್ಳುತ್ತಾರೆ. ಇಲ್ಲೂ ಸಹ ನೀವು ಆತ್ಮೀಯ ಸಂಪಾದನೆ ಮಾಡಿಕೊಳ್ಳಬೇಕು. ಕೇವಲ ಅನ್ಯರನ್ನು ನೋಡಿ ಖುಷಿಯಾಗುವುದಲ್ಲ. ವಿದ್ಯೆಯನ್ನು ಓದಿ ಮತ್ತು ಓದಿಸಿ ಶ್ರೇಷ್ಠ ಪದವಿಯನ್ನು ಪಡೆಯಬೇಕು. ಆಗ ತಾಯಿ-ತಂದೆ ಅನನ್ಯ ಮಕ್ಕಳಿಗೆ ವಾಹ್ ವಾಹ್ ಎಂದು ಹೇಳುತ್ತಾರೆ.
ಇದು ಬೇಹದ್ದಿನ ಶಾಲೆಯಾಗಿದೆ. ಸಾವಿರಾರು ಜನ ಇಲ್ಲಿ ಓದುತ್ತಾರೆ. ಯಾರು ಚೆನ್ನಾಗಿ ಓದುವುದಿಲ್ಲ, ನನ್ನ ಯೋಗ ಸರಿಯಾಗಿಲ್ಲವೆಂದು ಅವರೂ ಸಹ ತಿಳಿದುಕೊಳ್ಳಬಹುದು. ಅಂತಹ ಮಕ್ಕಳು ತಂದೆಯ ಹೃದಯವನ್ನು ಏರಲು ಸಾಧ್ಯವಿಲ್ಲ. ಮಕ್ಕಳಾಗುತ್ತಾರೆಂದರೆ ತಾಯಿ-ತಂದೆ ಪಾಲನೆ ಮಾಡುತ್ತಾರಲ್ಲವೆ. ಆದರೂ ಸಹ ತಂದೆಯು ತಿಳಿಸುತ್ತಾರೆ-ಮಾತಾ-ಪಿತಾ ಮತ್ತು ಅನನ್ಯ ಮಕ್ಕಳನ್ನು ಅನುಕರಣೆ ಮಾಡಿ. ಬಹಳಷ್ಟು ಸೇವೆ ಮಾಡಬೇಕು. ಆ ಸಮಾಜ ಸೇವಕರು ಕೋಟಿಗಟ್ಟಲೆ ಇರುತ್ತಾರೆ. ಜ್ಞಾನವಿದ್ದಿದ್ದೇ ಆದರೆ ನೀವು ಆತ್ಮೀಯ ಸಮಾಜ ಸೇವಕರಾಗಬೇಕು. ಇಲ್ಲವೆಂದರೆ ಪೂರ್ಣ ಜ್ಞಾನವಿಲ್ಲವೆಂದು ತಿಳಿಯಲಾಗುತ್ತದೆ. ಜ್ಞಾನಕ್ಕೆ ಬದಲಾಗಿ ಅಜ್ಞಾನ ಹೆಚ್ಚಾಗಿ ಇರುವ ಕಾರಣ ಪದವಿಭ್ರಷ್ಟವಾಗಿಬಿಡುತ್ತದೆ. ಶ್ರೇಷ್ಠ ಪದವಿಯು ಪಡೆಯಲು ಸಾಧ್ಯವಿಲ್ಲ. ತಂದೆಗೆ ಕನಿಕರ ಬರುತ್ತದೆ. ಪ್ರತಿಯೊಂದು ವಿದ್ಯೆಯಲ್ಲೂ ಪುರುಷಾರ್ಥವನ್ನು ಮಾಡಲೇಬೇಕು. ಪುರುಷಾರ್ಥವಿಲ್ಲದೇ ಉತ್ತೀರ್ಣರಾಗಲು ಸಾಧ್ಯವಿಲ್ಲ. ಕೆಲವರು 2-3 ಸಾರಿ ಅನುತ್ತೀರ್ಣರಾಗುತ್ತಾರೆಂದರೆ ತನ್ನ ಸಮಯವನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಾರೆ. ಯಾರು ಕಡಿಮೆ ಓದುತ್ತಾರೆ ಅವರು ಚೆನ್ನಾಗಿ ಓದುವವರ ಬಗ್ಗೆ ಗೌರವವನ್ನಿಡಬೇಕು ಏಕೆಂದರೆ ಅವರು ದೊಡ್ಡ ಸಹೋದರ-ಸಹೋದರಿಯಾಗುತ್ತಾರೆ. ಮಮ್ಮಾ-ಬಾಬಾರವರ ರೀತಿಯಲ್ಲಿ ಸೇವೆ ಮಾಡುತ್ತಾರೆ. ಚೆನ್ನಾಗಿ ಸೇವೆ ಮಾಡುವವರನ್ನು ಎಲ್ಲಾ ಕಡೆಯಲ್ಲೂ ಕರೆಯುತ್ತಾರೆ. ಅಂದಾಗ ನಾವೂ ಈ ಪುರುಷಾರ್ಥವನ್ನು ಮಾಡಿ ಅವರ ಹಾಗೆ ಏಕೆ ಆಗಬಾರದು ಎಂದು ವಿಚಾರ ಬರಬೇಕು. ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳೋಣ. ಬೇಹದ್ದಿನ ತಂದೆಯಿಂದ ಬೆಹದ್ದಿನ ಆಸ್ತಿಯು ಹೇಗೆ ಸಿಗುತ್ತದೆಯೆಂದು ತಂದೆಯ ಪರಿಚಯವನ್ನು ಕೊಡಬೇಕು. ಆ ತಂದೆಯು ಜನನ-ಮರಣ ರಹಿತ, ಸದಾ ಸುಖವನ್ನು ಕೊಡುವವರಾಗಿದ್ದಾರೆ. ತಂದೆಯಂತೂ ಇಬ್ಬರಿದ್ದಾರೆ. ಒಬ್ಬರು ಆತ್ಮದ ತಂದೆ ಮತ್ತೊಬ್ಬರು ಅಲೌಕಿಕ ತಂದೆ. ಅವರನ್ನು ನೀವು ಬಾಪ್ದಾದಾ ಎಂದು ಹೇಳುತ್ತೀರಿ. ಲೌಕಿಕ ಸಂಬಂಧದಲ್ಲೂ ಸಹ ಬಾಪ್ದಾದಾ ಇರುತ್ತಾರೆ. ಇವರು ಪಾರಲೌಕಿಕ ಬಾಪ್ದಾದಾ (ತಂದೆ ಮತ್ತು ತಾತಾ) ಆಗಿದ್ದಾರೆ. ಲೌಕಿಕದಿಂದ ಅಲ್ಪಕಾಲದ ಸುಖದ ಆಸ್ತಿಯನ್ನು ಜನ್ಮ-ಜನ್ಮಾಂತರ ಸಿಗುತ್ತದೆ. ಜನ್ಮ ತೆಗೆದುಕೊಂಡಂತೆ ತಂದೆಯು ಸಿಗುತ್ತಾರೆ. ಸತ್ಯಯುಗ, ತ್ರೇತಯುಗದಲ್ಲಿ ಇಲ್ಲಿನ ಆಸ್ತಿಯು 21 ಜನ್ಮದವರೆಗೆ ನಡೆಯುತ್ತದೆ. ಬೇರೆ ಬೇರೆ ತಂದೆಯರು ಸಿಗಬಹುದು ಆದರೆ ನಾವು ಸುಖಧಾಮದಲ್ಲೇ ಇರುತ್ತೇವೆ ನಂತರ ದ್ವಾಪರಯುಗದಿಂದ ಮಾಯೆಯ ರಾಜ್ಯ ಪ್ರಾರಂಭವಾಗುತ್ತದೆ. ನಂತರ ನಿಧಾನವಾಗಿ ನಮ್ಮದು ಇಳಿಯುವ ಕಲೆಯಾಗುತ್ತದೆ. ಇದು ಬುದ್ಧಿಯಲ್ಲಿರಬೇಕು. ಯಾವಾಗ ಇಳಿಯುತ್ತೇವೆ ಆಗ ಬೇಗ ಬೇಗ ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ, ಇನ್ನು ಅರ್ಧ ಕಲ್ಪದಲ್ಲಿ 83 ಜನ್ಮಗಳೇಕೆ? ಪತಿತರಾಗುವ ಕಾರಣ ಬೇಗ ಬೇಗ ಇಳಿಯುತ್ತಾ ಹೋಗುತ್ತೇವೆ. ಯಾವಾಗ ತಂದೆಯು ಬಂದರು, ಆಗ ನಾವು ಸಂಪೂರ್ಣ ಇಳಿದುಬಿಟ್ಟಿದ್ದೇವು. ಈಗ ನೀವು ಸಂಗಮಯುಗೀ ಬ್ರಾಹ್ಮಣರಾಗಿದ್ದೀರಿ. ಇಂದು ನಿಮಗೆ ಕಲಿಯುಗದ ಜೊತೆ ಸಂಬಂಧವಿರಬಹುದು. ಆದರೆ ತಮ್ಮನ್ನು ಸಂಗಮಯುಗೀ ಎಂದು ತಿಳಿಯುತ್ತೀರಿ. ನಿಮಗೆ ತಿಳಿದಿದೆ - ಬಾಬಾ ನಮ್ಮನ್ನು ಪರಂಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ನಾವು ಸಂಗಮಯುಗದಲ್ಲಿದ್ದೇವೆ. ಉಳಿದ ಮನುಷ್ಯರು ಕಲಿಯುಗದಲ್ಲಿದ್ದಾರೆಂದು ತಿಳಿಯುತ್ತೀರಿ. ಮನುಷ್ಯರು ವಿಕಾರೀ ಕ್ಕೊಕ್ಕರೆಗಳಾಗಿದ್ದಾರೆ, ನಾವು ನಿರ್ವಿಕಾರಿ ಹಂಸಗಳಾಗಿದ್ದೇವೆ. ಕೇವಲ ಹೊರಗಡೆಯಿಂದ ತೋರಿಸುವುದಿಲ್ಲ. ಅಂತರ್ಯಾಮಿ ತಂದೆಯು ಆಂತರ್ಯವನ್ನು ತಿಳಿದುಕೊಂಡಿದ್ದಾರೆ.
ತಂದೆಯು ತಿಳಿಸುತ್ತಿರುತ್ತಾರೆ- ಮಕ್ಕಳೇ ಯಾವುದೇ ಪಾಪಕರ್ಮವನ್ನು ಮಾಡಬೇಡಿ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂದು ಹೇಳಲಾಗುತ್ತದೆ. ಒಂದು ಬಾರಿ ಕಳ್ಳತನ ಮಾಡುತ್ತಾರೆಂದರೆ ನಂತರ ಒಂದೆರಡು ವರ್ಷಗಳು ಅದನ್ನು ಮಾಡುವ ಸಂಭವವಿರುತ್ತದೆ. ಪುನಃ ಮಾಡುವ ಸಂಭವವಿರುತ್ತದೆ. ಇದು ಪರಿಶ್ರಮದಿಂದ ಬಿಟ್ಟುಹೋಗುತ್ತದೆ. ಆದ್ದರಿಂದ ಇಂತಹ ಕೆಲಸವನ್ನು ಮಾಡುವುದಾದರೂ ಏಕೆ! ಇದೆಲ್ಲಾ ಕೆಲಸವನ್ನು ಮಾಯೆಯು ಮಾಡಿಸುತ್ತದೆ. ಯಾವಾಗ ಮಾಯೆಯು ತಲೆಯನ್ನು ತಿರುಗಿಸುತ್ತದೆ ಆಗ ಸ್ಮೃತಿಯು ಬರುತ್ತದೆ. ನಾವು ಏನನ್ನು ಮಾಡಿದೆವು ಎಂದು? ನಂತರ ತಂದೆಯೊಂದಿಗೆ ಕ್ಷಮೆ ಕೇಳುತ್ತಾರೆ. ತಂದೆಯು ಹೇಳುತ್ತಾರೆ-ಒಳ್ಳೆಯದು. ಮಕ್ಕಳೇ ಪರವಾಗಿಲ್ಲ. ಆದರೆ ಪುನಃ ಮಾಡಬಾರದು. ತಪ್ಪನ್ನು ತಿಳಿಸಿದ್ದೂ ಒಳ್ಳೆಯದಾಯಿತು, ಇಲ್ಲದಿದ್ದರೆ ವೃದ್ಧಿಯಾಗಿಬಿಡುತ್ತಿತ್ತು. ತಂದೆಗೆ ಬರೆಯುತ್ತಾರೆ-ನಾವು ಕ್ರೋಧ ಮಾಡಿದೆವು, ಮುಖವನ್ನು ಕಪ್ಪು ಮಾಡಿಕೊಂಡೆವು ಮತ್ತು ಸ್ತ್ರೀ ಮುಖವನ್ನು ಕಪ್ಪು ಮಾಡಿಬಿಟ್ಟೆವು. ಅದಕ್ಕೆ ತಂದೆಯು ಬರೆಯುತ್ತಾರೆ - ತಂದೆಯ ಮಕ್ಕಳಾಗಿ ಪ್ರತಿಜ್ಞೆ ಮಾಡಿ, ಕಪ್ಪು ಮಾಡಿಕೊಂಡಿರಿ. ಬ್ರಾಹ್ಮಣಕುಲಕ್ಕೆ ಕಳಂಕ ತಂದಿರಿ, ಶಿಕ್ಷೆಗೆ ಅಧಿಕಾರಿಗಳಾಗಿಬಿಡುತ್ತೀರಿ. ಬ್ರಾಹ್ಮಣಕುಲವು ಶ್ರೇಷ್ಠಾತಿ ಶ್ರೇಷ್ಠವಾಗಿದೆ. ದೇವತೆಗಳಿಗಿಂತಲೂ ಶ್ರೇಷ್ಠವಾಗಿದೆ. ನೀವು ಬ್ರಾಹ್ಮಣರು ಪತಿತ ಭಾರತವನ್ನು ಪಾವನವನ್ನಾಗಿ ಮಾಡುತ್ತೀರಿ. ನೀವು ಸತ್ಯಯುಗ, ತ್ರೇತಯುಗದಲ್ಲಿ 21 ಜನ್ಮಗಳು ರಾಜ್ಯ ಮಾಡಿದಿರಿ. ಆ ಸಮಯದಲ್ಲಿ ಸುಂದರರಾಗಿದ್ದಿರಿ ನಂತರ 63 ಜನ್ಮಗಳು ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿಬಿಟ್ಟಿರಿ ಅಂದರೆ ಶ್ಯಾಮ ಆದಿರಿ. ಆದ್ದರಿಂದಲೇ ಸಾಗರನ ಮಕ್ಕಳು ಕಾಮಚಿತೆಯ ಮೇಲೆ ಕುಳಿತು ಸಮಾಪ್ತಿಯಾದರು. ನಂತರ ಸಾಗರನು ಜ್ಞಾನದ ಮಳೆಯನ್ನು ಸುರಿಸಿದಾಗ ಜಾಗೃತರಾದರು ಮತ್ತು ಸುಂದರರಾದರು. ಈ ಕೃಷ್ಣನ ಆತ್ಮವು 84 ಜನ್ಮಗಳನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗಿದೆ. 21 ಜನ್ಮ ಸುಂದರ, 63 ಜನ್ಮ ಶ್ಯಾಮ. ಈಗ ಅವರ ಕಾಲು ಹಳೆಯ ಪ್ರಪಂಚದ ಕಡೆ ಇದೆ, ಮುಖವು ಹೊಸ ಪ್ರಪಂಚದ ಕಡೆ ಇದೆ. ಯಾರು ನಂಬರ್ವನ್ ಪೂಜ್ಯರಾಗಿದ್ದೆರೋ ಅವರೇ ಈಗ ಪೂಜಾರಿಗಳಾಗಿ ಕೊನೆಯ ನಂಬರಿನಲ್ಲಿದ್ದಾರೆ. ತಾವೇ ಪೂಜಾರಿಗಳಾಗಿ ನಾರಾಯಣನ ಪೂಜೆ ಮಾಡುತ್ತಿದ್ದರು. ಈಗ ತಾವೇ ಪೂಜ್ಯ ನಾರಾಯಣ ಆಗುತ್ತಾರೆ, ಇವರೇ ಮೊದಲನೇ ನಂಬರಿನಲ್ಲಿ ಹೋಗಬೇಕಾಗಿದೆ. ಬ್ರಹ್ಮನ ರಾತ್ರಿ ನರಕವಾಗಿದೆ. ರಾತ್ರಿಯನ್ನು ದಿನವನ್ನಾಗಿ ಮಾಡಲು ಶಿವತಂದೆಯು ಬರುತ್ತಾರೆ. ಈಗ ಅರ್ಧಕಲ್ಪದ ರಾತ್ರಿಯು ಪೂರ್ಣವಾಗಿ ದಿನವಾಗುತ್ತದೆ. ಶಿವರಾತ್ರಿಯಿಂದ ಹೇಳುತ್ತಾರೆ ಆದರೆ ಶಿವನ ಬದಲು ಕೃಷ್ಣನ ಹೆಸರನ್ನು ಹೇಳಿಬಿಟ್ಟಿದ್ದಾರೆ-ಕೃಷ್ಣನ ಜನ್ಮವು ರಾತ್ರಿಯಲ್ಲಿ ಆಯಿತು ಎಂದು ಹೇಳುತ್ತಾರೆ. ಇದು ಶಿವತಂದೆಯ ಮಾತಾಗಿದೆ. ಶಿವತಂದೆಯು ಯಾವ ಸಮಯದಲ್ಲಿ ಬಂದರು ಎಂದು ತಿಥಿ, ತಾರೀಖು, ವೇಳೆ ಏನೂ ಗೊತ್ತಿಲ್ಲ. ಕೃಷ್ಣನ ವೇಳೆಯಿದೆ, ಅವರು ಪುನರ್ಜನ್ಮದಲ್ಲಿ ಬರುವವರಾಗಿದ್ದಾರೆ. ಶಿವತಂದೆಯಂತೂ ತಕ್ಷಣ ಬಂದು ಪರಿಚಯವನ್ನು ಕೊಡಲು ತೊಡಗುತ್ತಾರೆ. ಯಾರು ಬಂದಿದ್ದಾರೆ? ಯಾರು ಮಾತನಾಡುತ್ತಿದ್ದಾರೆ? ಎಂದು ಸ್ವಲ್ಪ ಸಮಯ ಗೊತ್ತಾಗಲ್ಲೇ ಇಲ್ಲ. ನಂತರ ಇವರು ಶಿವತಂದೆ ಜ್ಞಾನಸಾಗರನಾಗಿದ್ದಾರೆ ಎಂದು ಗೊತ್ತಾಯಿತು. ಶಿವತಂದೆಯು ಬ್ರಹ್ಮರವರ ಮುಖಾಂತರ ವಿಷ್ಣುಪುರಿಯ ಸ್ಥಾಪನೆ ಮಾಡುತ್ತಾರೆ. ಬ್ರಹ್ಮ ಇಲ್ಲಿದ್ದಾರೆ. ಕೃಷ್ಣಪುರಿಯೂ ಇಲ್ಲೇ ಇದೆ. ಲಕ್ಷ್ಮೀ-ನಾರಾಯಣರ ಸಿಂಹಾಸನದ ಹಿಂದೆ ವಿಷ್ಣುವಿನ ಚಿತ್ರವಿರುತ್ತದೆ, ಆದರೆ ಜ್ಞಾನವೆನೂ ಇರುವುದಿಲ್ಲ. ಹೇಗೆ ಸರ್ಕಾರಕ್ಕೆ ತ್ರಿಮೂರ್ತಿಯ ಚಿತ್ರವಿದೆ. ಇದು ತಿಳಿದುಕೊಳ್ಳುವ ಮಾತಾಗಿದೆ. ಮಕ್ಕಳುಹೆಚ್ಚಿಗೆ ತಿಳಿದುಕೊಳ್ಳದಿದ್ದರೂ ಲೌಕಿಕ, ಪಾರಲೌಕಿಕ ತಂದೆಯ ಅಂತರವನ್ನಂತು ತಿಳಿದುಕೊಳ್ಳುತ್ತೀರಲ್ಲವೇ. ಹೇ ಪತಿತ-ಪಾವನ, ಹೇ ದಯಾಸಾಗರ, ಹೇ ದುಃಖಹರ್ತ-ಸುಖಕರ್ತ ಎಂದು ನನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ತಂದೆಯು ಇಲ್ಲಿಯೇ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಸತ್ಯಯುಗದಲಿ ನಿಮಗೆ ಇಷ್ಟು ಅಪಾರ ಹಣವು ಸಿಗುತ್ತದೆ, ಅಲ್ಲಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಆದ್ದರಿಂದ ನೀವು ಶ್ರೀಮತದ ಮೇಲೆ ನಡೆಯಬೇಕು. ಯಾರು ನಡೆಯುವುದಿಲ್ಲವೋ ಅವರು ನಿರ್ಧನಿಕರು, ಅವರನ್ನು ಕ್ಕೊಕ್ಕರೆಗಳೆಂದು ಹೇಳಲಾಗುತ್ತದೆ. ಆದ್ದರಿಂದ ಇಂತಹವರು ಜಗಳ ಮಾಡಿದರು ಎಂದು ದೂರು ಬರುತ್ತದೆ. ಪ್ರಪಂಚದಲ್ಲಿ ಜಗಳವೇ ಜಗಳವಿದೆ. ಪವಿತ್ರತೆಯ ಮೇಲೂ ಜಗಳವು ನಡೆಯುತ್ತದೆ. ಆಹಾರ ಪದಾರ್ಥಗಳ ಪತ್ಯೆವನ್ನಿಡಬೇಕಾಗುತ್ತದೆ. ಆದ್ದರಿಂದ ಅನೇಕರು ಕಷ್ಟವಾಗುತ್ತದೆ. ನೆನಪಿನಲ್ಲಿದ್ದು ಭೋಜನವನ್ನು ಸ್ವೀಕರಿಸಿ ಎಂದು ತಂದೆಯು ಎಷ್ಟೊಂದು ತಿಳಿಸುತ್ತಾರೆ. ಆದರೆ ಆದೇಶವನ್ನು ಕಾರ್ಯದಲ್ಲಿ ತರುವುದಿಲ್ಲ. ಅಭ್ಯಾಸ ಮಾಡಬೇಕು ಏಕೆಂದರೆ ನೀವು ಪತಿತ ಪ್ರಪಂಚವನ್ನು ಪಾವನ ಮಾಡುವಂತಹ ಶಕ್ತಿಯರಾಗಿದ್ದೀರಿ. ನೆನಪಿನಿಂದ ಪಾಪಗಳು ಭಸ್ಮವಾಗುತ್ತದೆ. ಇದು ತುಂಬಾ ಪರಿಶ್ರಮವಾಗಿದೆ. ಆದ್ದರಿಂದ ಕೋಟಿಯಲ್ಲಿ ಕೆಲವರೇ ಬರುತ್ತಾರೆ. ಪುರುಷಾರ್ಥ ಮಾಡುತ್ತಲೂ ಅನುತ್ತೀರ್ಣರಾಗಿಬಿಡುತ್ತಾರೆ. ಆಶ್ಚರ್ಯವಾಗಿ ಬಂದು ತಂದೆಯ ಮಕ್ಕಳಾಗುತ್ತಾರೆ, ಬಾಬಾ ಬಾಬಾ ಎನ್ನುತ್ತಾರೆ, ಆದರೂ ಸಹ ಶ್ರೀಮತದ ಮೇಲೆ ನಡೆಯುತ್ತಾರೋ ಅವರೇ ಧಾರಣೆ ಮಾಡುತ್ತಾರೆ, ಮಮ್ಮಾ-ಬಾಬಾ ಎಂದು ಅನುಕರಣೆ ಮಾಡುವುದಿಲ್ಲವೆಂದರೆ ದುರ್ಗತಿಯನ್ನು ಪಡೆಯುತ್ತಾರೆ. ಅಂದರೆ ಕಡಿಮೆ ಪದವಿಯನ್ನು ಪಡೆಯುತ್ತಾರೆ. ವಿದ್ಯಾವಂತರು ವಿದ್ಯಾವಂತರ ಮುಂದೆ ತಲೆಬಾಗುತ್ತಾರೆ. ನೌಕರ ಚಾಕರಾಗುತ್ತಾರೆ. ಯಾರು ಬ್ರಾಹ್ಮಣರಾಗುವುದಿಲ್ಲವೋ ಅವರು ಪ್ರಜೆಗಳಲ್ಲಿ ಕಾಸಿಗೂ ಬೆಲೆಯಿಲ್ಲದ ಪದವಿಯನ್ನು ಪಡೆಯುತ್ತಾರೆ. ಮತ್ತೆ ಯಾವುದೇ ಧರ್ಮವನ್ನು ಸ್ಥಾಪನೆ ಮಾಡುವವರು ರಾಜ್ಯವನ್ನು ಸ್ಥಾಪನೆ ಮಾಡುವುದಿಲ್ಲ ಬೇಹದ್ದಿನ ತಂದೆಯೇ ಭವಿಷ್ಯಕ್ಕಾಗಿ ರಾಜ್ಯದ ಸ್ಥಾಪನೆ ಮಾಡುತ್ತಾರೆ. ಪವಿತ್ರರಾಗುವ ಪುರುಷಾರ್ಥ ಮಾಡಬೇಕಾಗುತ್ತದೆ. ನೀವು ಹೂಗಳಾಗುತ್ತೀರಿ, ಯಾರು ವಿಕಾರದಲ್ಲಿ ಹೋಗುತ್ತಾರೆ ಅವರು ಮುಳ್ಳುಗಳಾಗುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತಾರೆ. ಇದು ಮುಳ್ಳುಗಳ ಪ್ರಪಂಚವಾಗಿದೆ. ಈಗ ನೀವು ಸಂಗಮದಲ್ಲಿ ಕಾಡಿನಿಂದ ಹೂದೋಟವಾಗುತ್ತದೆ. ಈಗ ನೀವು ತಿಳಿದುಕೊಂಡಿದ್ದಿರಿ- ನಾವು ಪರಮಪಿತ ಪರಮಾತ್ಮನಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ರಾಜ್ಯಭಾಗ್ಯವನ್ನು ಪಡೆಯುವುದರಲ್ಲಿ ಖುಷಿಯಿದೆ. ಆದರೆ ಅದೃಷ್ಠದಲ್ಲಿದ್ದರೆ ಆಗುತ್ತದೆ, ಸಿಗುತ್ತದೆ ಎಂದು ಹೇಳಿದರೆ ಇದರಿಂದ ಏನಾಗುತ್ತದೆ. ಬೇಹದ್ದಿನ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ನೀವು ಅನುಭವಿಗಳಾಗಿದ್ದೀರಿ ಆದ್ದರಿಂದ ಸರ್ವೀಸ್ ಮಾಡಬೇಕಾಗಿದೆ. ನಾವು ಎಷ್ಟು ಸರ್ವೀಸ್ ಮಾಡಿದೆವೆಂದು ತಮ್ಮೊಂದಿಗೆ ಕೇಳಿಕೊಳ್ಳಬೇಕಾಗಿದೆ. ಜ್ಞಾನವಿದೆಯೆಂದರೆ ಸರ್ವೀಸ್ನಲ್ಲಿ ತೊಡಗಬೇಕಾಗಿದೆ. ಜ್ಞಾನವಿಲ್ಲದಿದ್ದರೆ ಸೇವೆಯೂ ಇಲ್ಲ, ಶ್ರೇಷ್ಠ ಪದವಿಯೂ ಇಲ್ಲ. ಅದೃಷ್ಠದಲ್ಲಿ ಇಲ್ಲದಿದ್ದರೆ ಪುರುಷಾರ್ಥವನ್ನು ಮಾಡುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ತಂದೆಯ ಆದೇಶವನ್ನು ಕಾರ್ಯದಲ್ಲಿ ತರಬೇಕಾಗಿದೆ. ಆಹಾರ, ಪಾನೀಯಗಳ ಪೂರ್ತಿ ವ್ರತವನ್ನಿಡಬೇಕಾಗಿದೆ. ನೆನಪಿನಲ್ಲಿದ್ದೂ ಭೋಜನವನ್ನು ಸ್ವೀಕರಿಸುವ ಅಭ್ಯಾಸ ಮಾಡಬೇಕಾಗಿದೆ.
2.
ಮಾತಾ-ಪಿತಾರವರ ತರಹ ಸೇವೆ ಮಾಡಬೇಕಾಗಿದೆ. ತಮಗಿಂತ ಹಿರಿಯರಿಗೆ ಅವಶ್ಯವಾಗಿ ಗೌರವ ಕೊಡಬೇಕಾಗಿದೆ. ಆತ್ಮಿಕ ಸಮಾಜ ಸೇವಕರಾಗಿ ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಬೇಕಾಗಿದೆ.
ವರದಾನ:
ಕಲ್ಯಾಣಕಾರಿ ಸಮಯದ
ಸ್ಮೃತಿಯಿಂದ ತಮ್ಮ
ಭವಿಷ್ಯವನ್ನು ತಿಳಿದಿರುವಂತಹ
ಮಾಸ್ಟರ್ ತ್ರಿಕಾಲದರ್ಶಿ
ಭವ
ಒಂದುವೇಳೆ ಯಾರಾದರೂ ನಿಮ್ಮನ್ನು ನಿಮ್ಮ ಭವಿಷ್ಯ ಏನು? ಎಂದು ಕೇಳಿದರೆ ಹೇಳಿ ನಮಗೆ ಗೊತ್ತು-ಭವಿಷ್ಯ ಬಹಳ ಚೆನ್ನಾಗಿದೆ ಏಕೆಂದರೆ ನಮಗೆ ತಿಳಿದಿದೆ ನಾಳೆ ಏನಾಗುವುದು ಅದು ತುಂಬಾ ಚೆನ್ನಾಗಿರುವುದು, ಏನಾಯಿತು ಅದೂ ಚೆನ್ನಾಗಿತ್ತು, ಏನಾಗುತ್ತಿದೆ
ಅದು ಇನ್ನೂ ಚೆನ್ನಾಗಿದೆ ಏನು ಆಗ ಬೇಕಿದೆ ಅದು ಇನ್ನೂ ಬಹಳ ಚೆನ್ನಾಗಿಆಗುತ್ತೆ. ಯಾರು ಮಾಸ್ಟರ್ ತ್ರಿಕಾಲದರ್ಶಿ ಮಕ್ಕಳಿದ್ದಾರೆ
ಅವರಿಗೆ ನಿಶ್ಚಯವಿರುತ್ತದೆ
ಇದು ಕಲ್ಯಾಣಕಾರಿ ಸಮಯವಾಗಿದೆ, ತಂದೆ ನಮ್ಮ ಕಲ್ಯಾಣಕಾರಿಯಾಗಿದ್ದಾರೆ ಮತ್ತು ನಾವು ವಿಶ್ವಕಲ್ಯಾಣಕಾರಿಗಳಾಗಿದ್ದಾಗ ನಮ್ಮ ಅಕಲ್ಯಾಣ ಆಗಲು ಸಾಧ್ಯವೇ ಇಲ್ಲ.
ಸ್ಲೋಗನ್:
ಸಮಾಪ್ತಿಯ ಸಮಯವನ್ನು ಸಮೀಪತರಬೇಕಾದರೆ ಸಂಪೂರ್ಣರಾಗುವ ಪುರುಷಾರ್ಥ ಮಾಡಿ.


0 Comments