Hindi/Tamil/English/Telugu/Kannada/Malayalam/Ilangai Tamil/Sinhala
29/07/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
"ಮಧುರ ಮಕ್ಕಳೇ- ನೀವು ನಿಮ್ಮ ಸಹವರ್ಗದವರನ್ನು ಉದ್ಧಾರ ಮಾಡಬೇಕು, ತಂದೆಯು ಮಾತೆಯರ ಮೇಲೆ ಜ್ಞಾನದ
ಕಳಶವನ್ನಿಟ್ಟಿದ್ದಾರೆ ಆದ್ದರಿಂದ ಮಾತೆಯರ ಮೇಲೆ ಬಹಳ ದೊಡ್ಡ ಜವಾಬ್ದಾರಿಯಿದೆ"
ಪ್ರಶ್ನೆ:
ನೀವು ಮಾತೆಯರು ಯಾವ ವಿಶೇಷ ಕಾರ್ಯಕ್ಕೆ ನಿಮಿತ್ತರಾಗಿದ್ದೀರಿ? ನಿಮ್ಮ ಮೇಲೆ ಯಾವ ಜವಾಬ್ದಾರಿಯಿದೆ?
ಉತ್ತರ:
ನೀವು ಈ ಪತಿತ ಜಗತ್ತನ್ನು ಪಾವನ ಜಗತ್ತನ್ನಾಗಿ, ನರಕವನ್ನು ಸ್ವರ್ಗವನ್ನಾಗಿ ಮಾಡಲು
ನಿಮಿತ್ತರಾಗಿದ್ದೀರಿ. ತಂದೆಯು ನೀವು ಮಾತೆಯರ ಮೇಲೆ ಜ್ಞಾನದ ಕಳಶವನ್ನಿಟ್ಟಿದ್ದಾರೆ ಆದ್ದರಿಂದ
ಎಲ್ಲರಿಗೂ ಸದ್ಗತಿಯನ್ನು ನೀಡುವ ಜವಾಬ್ದಾರಿ ನಿಮ್ಮ ಮೇಲಿದೆ. ನೀವು ಶಿವಶಕ್ತಿ
ಸೇನೆಯಾಗಿದ್ದೀರಿ. ನೀವು ಈಗ ತಮ್ಮ ಸಹವರ್ಗದವರ ಕಲ್ಯಾಣ ಮಾಡಬೇಕು. ಎಲ್ಲರನ್ನು
ಪತಿತರಾಗುವುದರಿಂದ ರಕ್ಷಿಸಬೇಕು. ವೇಶ್ಯೆಯರನ್ನೂ ಸಹ ಉದ್ಧಾರ ಮಾಡಬೇಕು.
ಗೀತೆ: ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ........
ಓಂ ಶಾಂತಿ. ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಈಗ ವತನದ ಕಡೆ ನಡೆಯಿರಿ ಅರ್ಥಾತ್
ಸುಖಧಾಮದ ಕಡೆ. ಸುಖಧಾಮದ ಸ್ಥಾಪನಾರ್ಥವಾಗಿ ಮಾತೆಯರನ್ನು ಇಡಲಾಗಿದೆ. ಜ್ಞಾನಾಮೃತ ಕಳಶವನ್ನು
ಮಾತೆಯರ ಮೇಲೆ ಇಡಲಾಗಿದೆ. ಹೇಗೆ ಪ್ರಾರಂಭೋತ್ಸವ ಅಥವಾ ಸ್ಥಾಪನೆಯ ಉತ್ಸವವನ್ನು
ಮಾಡಲಾಗುತ್ತದೆಯಲ್ಲವೇ. ಪರಮಪಿತ ಪರಮಾತ್ಮ ವೈಕುಂಠದ ಪ್ರಾರಂಭೋತ್ಸವವನ್ನು ಮಾತೆಯರ ಮೂಲಕ
ಮಾಡಿಸುತ್ತಾರೆ. ಕಳಶವನ್ನು ಮಾತೆಯರ ಮೇಲೆ ಇಡಲಾಗುತ್ತದೆ. ಈಗ ಕುಮಾರಿಯರು ಎದ್ದು
ನಿಲ್ಲಬೇಕಾಗಿದೆ. ಶಕ್ತಿಸೈನ್ಯವಾಗಿದೆಯಲ್ಲವೇ. ಮಕ್ಕಳ ಮೇಲೆ ತಂದೆ ಜವಾಬ್ದಾರಿಯನ್ನು
ಇಡುತ್ತಾರೆ. ತಂದೆ ಸರ್ವರಿಗೆ ಸದ್ಗತಿ ನೀಡುವ ಜವಾಬ್ದಾರಿಯನ್ನು ಗುರುಗಳಿಗೆ ಕೊಟ್ಟಿಲ್ಲ. ಈಗ
ನೀವು ತಿಳಿದುಕೊಂಡಿದ್ದೀರಿ- ಸದ್ಗತಿ ಕೊಡುವುದು ಈ ಮಾತೆಯರ ಕೆಲಸವಾಗಿದೆ. ಜ್ಞಾನದಿಂದಲೇ
ಸದ್ಗತಿಯಾಗುತ್ತದೆ. ಜ್ಞಾನದ ಕಳಶವನ್ನು ಮಾತೆಯರಿಗೆ ಸಿಕ್ಕಿದೆ. ಮೊಟ್ಟಮೊದಲು ಜಗದಂಬನ ಮೇಲೆ
ಕಳಶವನ್ನು ತೋರಿಸುತ್ತಾರೆ. ಶಾಸ್ತ್ರಗಳಲ್ಲಂತೂ ಲಕ್ಷ್ಮಿಯ ಹೆಸರನ್ನು ಇಟ್ಟುಬಿಟ್ಟಿದ್ದಾರೆ. ಈ
ಅಂತರವಾಗಿಬಿಟ್ಟಿದೆ. ನೀವು ಮಾತೆಯರ ಮೇಲೆ ಕಳಶವನ್ನಿಡಲಾಗಿದೆ. ಕಾಳಿಯ ಮೇಲೂ ಸಹ
ಕಳಶವನ್ನಿಟ್ಟಿದ್ದಾರೆ. ಕಾಳಿಯ ಮಹಿಮೆ ಇದೆಯಲ್ಲವೇ. ಅನೇಕ ಚಿತ್ರಗಳನ್ನಂತೂ ಮಾಡಿಬಿಟ್ಟಿದ್ದಾರೆ
ಎಂದಾಗ ಮಾತೆಯರ ಮೇಲೆ ಏಕೆ ಕಳಶವನ್ನು ಇಟ್ಟಿದ್ದಾರೆಂದರೆ ಈ ಸಮಯದಲ್ಲಿ ನಿಮ್ಮ ಜೊತೆಗಾರ ಮಾತೆಯರ
ದುರ್ಗತಿಯಾಗಿದೆ. ನೀವು ಶಿವಶಕ್ತಿಯರೆಂದು ಕರೆಸಿಕೊಳ್ಳುತ್ತೀರಿ. ನೀವು ಗುಪ್ತಸೈನ್ಯವಾಗಿದ್ದೀರಿ.
ನಿಮ್ಮ ಬುದ್ಧಿಯಲ್ಲಿ ನಶೆಯೇರಬೇಕು. ನೀವು ತಮ್ಮ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ.
ವಂದೇಮಾತರಂ ಎನ್ನುವ ಗಾಯನವೂ ಇದೆ. ಭಾರತಖಂಡದ ಹೆಸರನ್ನೇ ಗಾಯನ ಮಾಡಲಾಗುತ್ತದೆ. ಭಾರತ ಮಾತೆಗೆ ಜಯವಾಗಲಿ ಅರ್ಥಾತ್
ಭಾರತದಲ್ಲಿರುವಂತಹ ಮಾತೆಯರಿಗೆ ಜಯವಾಗಲಿ ಎಂದು ಹೇಳುತ್ತಾರೆ. ಯಾವ ಮಾತೆಯರು ವಿಶ್ವವನ್ನು ಸ್ವರ್ಗವನ್ನಾಗಿ
ಮಾಡುತ್ತಾರೆ ಅಂತಹ ಮಾತೆಯರಿಗೆ ಜಯವಾಗಲಿ. ಅವರು ಇದನ್ನು ಮರೆತು ಕೇವಲ ಭಾರತಮಾತೆ ಎಂದು
ಹೇಳಿಬಿಡುತ್ತಾರೆ. ತಂದೆಯು ನೀವು ಮಾತೆಯರ ಹೆಸರನ್ನು ಪ್ರಸಿದ್ಧ ಮಾಡುತ್ತಾರೆ. ಸ್ವರ್ಗದ
ಉದ್ಘಾಟನಾ ಸಮಾರಂಭವನ್ನು ಮಾಡಿಸುತ್ತಾರೆ. ನೀವು ಹೇಳುತ್ತೀರಿ- ಶಿವಬಾಬಾ ನಾವು ಮಾತೆಯರ ಮುಖಾಂತರ
ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಭೀಷ್ಮ ಪಿತಾಮಹ ಮುಂತಾದವರಿಗೂ ಸಹ ನೀವು
ಜ್ಞಾನಬಾಣವನ್ನು ಹೊಡೆದಿದ್ದೀರಿ ಆದ್ದರಿಂದ ತಂದೆಯು ಹೇಳುತ್ತಾರೆ ಜ್ಞಾನಬಾಣ ಹೊಡೆಯುವುದರಲ್ಲಿ
ಹೆದರಬೇಡಿ. ಓದಬೇಕು ಮತ್ತು ಓದಿಸಬೇಕಾಗಿದೆ. ನೀವು ಸೈನಿಕರೇ ನಿಮಿತ್ತರಾಗಿದ್ದೀರಿ. ಮಾ||ಜ್ಞಾನಪೂರ್ಣರಾಗಿದ್ದೀರಲ್ಲವೇ.
ಸರಸ್ವತಿಗೆ ದೊಡ್ಡ ವೀಣೆಯನ್ನು ಕೊಟ್ಟಿದ್ದಾರೆ ಏಕೆಂದರೆ ಸರಸ್ವತಿಯು ಎಲ್ಲರಿಗಿಂತ
ತೀಕ್ಷ್ಣವಾಗಿದ್ದಾರೆ, ಇದನ್ನು ಪ್ರಪಂಚವಂತೂ ಅರಿತುಕೊಂಡಿಲ್ಲ.
ಈಗ ನಾವು ಶ್ಯಾಮನಿಂದ ಸುಂದರರಾಗುತ್ತೇವೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಕಾಳಿಯ
ಹತ್ತಿರ ಹೋಗುತ್ತಾರೆ. ಅವರು ಅಮ್ಮಾ-ಅಮ್ಮಾ ಎಂದು ಹೇಳಿ ಎಷ್ಟೊಂದು ಅಳುತ್ತಾರೆ, ಅದರ ಮಾತೆ ಕೇಳಬೇಡಿ. ಆಗುವುದಂತೂ ಏನೂ
ಇಲ್ಲ. ಕಲ್ಕತ್ತಾದಲ್ಲಿ ಕಾಳಿಯ ಮಹಿಮೆ ತುಂಬಾ ಇದೆ. ಈಗ ಈ ಬ್ರಹ್ಮಾರವರಂತೂ ತಾಯಿಯಲ್ಲ ಆದ್ದರಿಂದ
ಕಳಶವು ಮಾತೆಯರಿಗೆ ಸಿಗುತ್ತದೆ. ನೀವು ತಾಯಿಯ ಸೇನೆಯ ಜೊತೆಗಾರರಾಗಿದ್ದೀರಿ. ನೀವು ಹೇಳುತ್ತೀರಿ
ಬಾಬಾ ನಾನು ಹೇಗಿದ್ದೇನೆಯೋ ಹಾಗೆಯೇ ನಿಮ್ಮವನಾಗಿದ್ದೇನೆ. ಇದಕ್ಕೆ ತಂದೆಯು ಹೇಳುತ್ತಾರೆ- ಹೇಗೆ
ಇದ್ದೀರೋ ಹಾಗೆಯೇ ನನ್ನವರಾಗಿದ್ದೀರಿ ಆದರೆ ಶ್ರೀಮತದ ಮೇಲೆ ನಡೆಯಬೇಕಾಗುತ್ತದೆ. ಪ್ರಿಯತಮೆಯರಂತೂ
ಎಲ್ಲರೂ ಆಗಿದ್ದಾರೆ. ಎಲ್ಲರೂ ಸಹ ನಾವು ಈಶ್ವರನ ಮಕ್ಕಳಾಗಿದ್ದೇವೆ ಎಂದು ಹೇಳುತ್ತಾರೆ. ಎಲ್ಲರೂ
ಶಿವಬಾಬಾರವರ ಸಂತಾನರಾಗಿದ್ದಾರೆ ಎನ್ನುವ ತಿಳುವಳಿಕೆಯನ್ನು ಈಗ ನಿಮಗೆ ಕೊಡುತ್ತಿದ್ದಾರೆ.
ಎಲ್ಲರಿಗಿಂತ ಮೊಟ್ಟಮೊದಲು ಶಿವನ ಮಹಿಮೆಯಾಗಿದೆ ಅವರೇ ಶ್ರೇಷ್ಠಾತಿಶ್ರೇಷ್ಠ ಆಗಿದ್ದಾರೆ, ಅವರನ್ನೇ ಪರಮಾತ್ಮನೆಂದು ಹೇಳುತ್ತಾರೆ
ಎನ್ನುವುದನ್ನು ಸಿದ್ಧ ಮಾಡಬೇಕಾಗಿದೆ. ಶಿವತಂದೆಯೇ ಆಸ್ತಿಯನ್ನು ಕೊಡುತ್ತಾರೆ. ಅವರು
ನಿರಾಕಾರನಾಗಿದ್ದಾರೆ. ಎಲ್ಲಾ ಆತ್ಮಗಳ ತಂದೆ ಅವರಾಗಿದ್ದಾರೆ ಎಂದಾಗ ಈಗ ನೀವು ಮಕ್ಕಳು ತಮ್ಮ
ಜೊತೆಗಾರರ ಉದ್ಧಾರ ಮಾಡಬೇಕಾಗಿದೆ. ಮಾತೆಯರ ಮೇಲೆಯೇ ಎಲ್ಲಾ ಜವಾಬ್ದಾರಿಯಿದೆ. ವಂದೇಮಾತರಂ ಎಂದು
ತಂದೆಯೂ ಸಹ ಹೇಳುತ್ತಾರೆ, ಶಿವ ಬಾಲಕನಾಗಿದ್ದಾರೆಂದರೆ ವಂದೇಮಾತರಂ
ಎಂದು ಹೇಳಬೇಕಾಗುತ್ತದೆಯಲ್ಲವೇ. ವಂದನೆ ಎಂದು ನೀವು ತಂದೆಗೆ ಹೇಳುತ್ತೀರಿ, ತಂದೆ ನಿಮಗೆ ಹೇಳುತ್ತಾರೆ-
ವಿಚಿತ್ರವಾಗಿದೆಯಲ್ಲವೇ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ನಿಮಗೆ ತಿಳಿದಿದೆ, ಶಿವತಂದೆಯು ಸಾಕ್ಷಾತ್ಕಾರವನ್ನು
ಮಾಡಿಸುತ್ತಾರೆ. ಮನೆಯಲ್ಲಿ ಕುಳಿತಿದ್ದರೂ ಸಹ ನವಿಲುಗರಿಯ ಕಿರೀಟಧಾರಿಯ
ಸಾಕ್ಷಾತ್ಕಾರವಾಗುತ್ತದೆ. ಕಿರೀಟವಂತು ಎಲ್ಲರಿಗೂ ಇರುತ್ತದೆ. ಈ ಒಂದು ಮುದ್ರೆಯನ್ನು
ಇಟ್ಟುಬಿಟ್ಟಿದ್ದಾರೆ. ಕೃಷ್ಣನಿಗೆ ಎಷ್ಟು ದೊಡ್ಡಕಿರೀಟವನ್ನು ಇಟ್ಟಿದ್ದಾರೆ ಇಲ್ಲವೆಂದರೆ ಇಷ್ಟು
ದೊಡ್ದ ಕಿರೀಟವನ್ನು ಧರಿಸುವುದಿಲ್ಲ. ತಂದೆಯು ಕುಳಿತು ಮಾತೆಯರಿಗೆ ಗುರಿ-ಧ್ಯೇಯದ
ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ. ನೀವು ರಾಜಕುಮಾರನ ತಾಯಿಯಾಗುತ್ತೀರಿ. ಕೃಷ್ಣನ ತಾಯಿಯಂತೂ
ಎಲ್ಲರೂ ಆಗುವುದಿಲ್ಲ. ರಾಜಕುಮಾರ-ಕುಮಾರಿಯರಂತೂ ಅನೇಕರಿರುತ್ತಾರಲ್ಲವೇ. ರಾಜಕುಮಾರರ ತಾಯಿ
ಅರ್ಥಾತ್ ಮಹಾರಾಜಾ-ಮಹಾರಾಣಿಯಾಗುತ್ತೀರಿ. ನಿಮ್ಮದು ಎಷ್ಟು ಒಳ್ಳೆಯ ಲಕ್ಷ್ಯವಾಗಿದೆ. ನಿಮ್ಮ
ಮಡಿಲಿನಲ್ಲಿ ರಾಜಕುಮಾರರಿರುತ್ತಾರೆ. ಆದ್ದರಿಂದ ನೀವು ಮಕ್ಕಳ ಮೇಲೆ ತುಂಬಾ ಜವಾಬ್ದಾರಿಯಿದೆ.
ನಿಮ್ಮದು ದೊಡ್ಡ ಸಂಘಟನೆ ಇರಬೇಕು. ನಿವೇದನಾ ಪತ್ರಿಕೆಯನ್ನು ಮಾಡಿಸಬೇಕು. ನಾವು ಶಿವಶಕ್ತಿ
ಭಾರತಮಾತೆಯರಾಗಿದ್ದೇವೆ. ನಾವು ಭಾರತವನ್ನು ಕಲ್ಪದ ಮೊದಲೂ ಸಹ ಶ್ರೀಮತದನುಸಾರ ಸ್ವರ್ಗವನ್ನಾಗಿ
ಮಾಡಿದ್ದೆವು ಎಂದು. ಮಾತೆಯರು ತುಂಬಾ ಬುದ್ಧಿವಂತರಾಗಬೇಕು. ಇಂದಿನ ದಿನಗಳಲ್ಲಿ ನಿಮ್ಮ ಜೊತೆಗಾರರ
ಮೇಲೂ ಸಹ ವಿಕಾರಕ್ಕೋಸ್ಕರ ತುಂಬಾ ಪೆಟ್ಟು ಬೀಳುತ್ತದೆ ಆದ್ದರಿಂದ ಗಂಟೆ ಹೊಡೆಯಬೇಕು.
ಸರ್ಕಾರಕ್ಕೂ ಸಹ ಹೇಳಬೇಕಾಗಿದೆ- ನಾವು ಕಲ್ಪ-ಕಲ್ಪ ಭಾರತವನ್ನು ಪವಿತ್ರತೆಯ ಬಲದಿಂದ
ಸ್ವರ್ಗವನ್ನಾಗಿ ಮಾಡುತ್ತೇವೆ, ಇದರಲ್ಲಿ ಇವರು ನಿಮಗೆ ವಿಘ್ನ ಹಾಕುತ್ತಾರೆ.
ನಾವು ಪವಿತ್ರರಾಗುವುದಕ್ಕೆ ಇಚ್ಛಿಸುತ್ತೇವೆ. ಜೊತೆಯಲ್ಲಿ ಈ ಪುರುಷರೂ ಸಹ ಅವಶ್ಯವಾಗಿ
ಪವಿತ್ರತೆಯು ಒಳ್ಳೆಯದೆಂದು ಹೇಳುತ್ತಾರೆ. ಎಲ್ಲರೂ ಔಷಧಿ ಮುಂತಾದವುಗಳಿಂದ ಮಕ್ಕಳಿಗೆ ಜನ್ಮ
ಕೊಡುವುದನ್ನು ಬಂಧ್ ಮಾಡುತ್ತಾರೆ ಆದರೆ ಇದರಿಂದಂತೂ ಏನೂ ಆಗುವುದಿಲ್ಲ. ತಂದೆಯು ತಿಳಿಸುತ್ತಾರೆ, ಮಕ್ಕಳೇ ಪವಿತ್ರರಾಗಿ. ಮಾತೆಯರ ಜೊತೆ ಈ
ಗೋಪರೂ ಸಹ ಸಹಯೋಗಿಗಳಾಗಿದ್ದಾರೆ. ಮಕ್ಕಳು ಎದ್ದು ನಿಲ್ಲಬೇಕು. ನಿಮ್ಮ ಬಲವನ್ನು ತೋರಿಸಬೇಕು.
ಸರ್ಕಾರಕ್ಕೂ ಹೇಳಬೇಕು, ಭಗವಂತ ತಂದೆಯು ಪವಿತ್ರರಾಗಿ ಎಂದು
ಹೇಳುತ್ತಾರೆ. ಎಲ್ಲರೂ ಶಿವತಂದೆಯ ಮಕ್ಕಳಾಗಿದ್ದಾರೆ ಎಂದಾಗ ಸಹೋದರ-ಸಹೋದರರಾಗಿಬಿಟ್ಟರು ನಂತರ
ಪ್ರಜಾಪಿತ ಬ್ರಹ್ಮಾರವರ ಸಂತಾನರಾಗುವುದರಿಂದ ಸಹೋದರ-ಸಹೋದರಿಯರಾಗುತ್ತೀರಿ. ಈಗ ಹೊಸಪ್ರಪಂಚದ
ಸ್ಥಾಪನೆಯಾಗುತ್ತಿದೆ. ಶಿವತಂದೆಯ ಸಂತಾನ ಪ್ರಜಾಪಿತ ಬ್ರಹ್ಮಾರವರ ಮಕ್ಕಳು
ಸಹೋದರ-ಸಹೋದರಿಯರಾಗಿರುವ ಕಾರಣ ವಿಕಾರದ ಲೇವಾದೇವಿ ಮಾಡಲು ಸಾಧ್ಯವಿಲ್ಲ. ಇದು ಯುಕ್ತಿಯಾಗಿದೆ.
ಕಲ್ಪದ ಹಿಂದೆಯೂ ಸಹ ಹೀಗೆಯೇ ಪವಿತ್ರರನ್ನಾಗಿ ಮಾಡಿದ್ದರು. ನಾವು ಮಾಯಾರಾವಣನ ಮೇಲೆ ವಿಜಯವನ್ನು
ಪಡೆಯುತ್ತೇವೆ. ಈ ರಾವಣನೇ ಭಾರತದ ದೊಡ್ಡಶತ್ರು ಆಗಿದ್ದಾನೆ. ರಾವಣನೊಂದಿಗೆ ಸೋಲುವುದೇ
ಸೋಲಾಗಿದೆ. ರಾಮನು ಬಂದು ರಾವಣನ ಮೇಲೆ ಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಆದರೆ ಇಲ್ಲಿಯತನಕ
ಕೆಲವರಿಗೆ ಪತಿ ಮುಂತಾದವರಲ್ಲಿ ಮೋಹವೂ ಹೀಗಿದೆ, ಅದರ ಮಾತೇ ಕೇಳಬೇಡಿ. ಈಗ ನೀವು ಮಾತೆಯರಿಗೆ ಕಳಶವು ಸಿಗುತ್ತದೆ. ನಾವಂತೂ ಸ್ವರ್ಗದ ಬಾಗಿಲನ್ನು
ತೆರೆಯುತ್ತೇವೆ ಎನ್ನುವುದನ್ನು ತಿಳಿಸಬೇಕಾಗಿದೆ. ಅವರು ಕಳಶವನ್ನು ಲಕ್ಷ್ಮಿಗೆ ತೋರಿಸಿದ್ದಾರೆ
ಆದರೆ ಲಕ್ಷ್ಮಿಯಂತೂ ಪವಿತ್ರವಾಗಿಯೇ ಇದ್ದಾರೆ. ಅವರು ಜ್ಞಾನ ಕಳಶವನ್ನು ಇಟ್ಟುಕೊಂಡು ಏನು
ಮಾಡುತ್ತಾರೆ. ಜ್ಞಾನದ ಕಳಶವು ಜಗದಂಬಾರವರ ಮೇಲಿದೆ. ಈಗ ಪರಮಪಿತ ಪರಮಾತ್ಮನು ಆಜ್ಞೆಯನ್ನು
ಹೊರಡಿಸಿದ್ದಾರೆ- ಕಾಮ ಮಹಾಶತ್ರುವಾಗಿದೆ, ಯಾರು ಇದರ ಮೇಲೆ ಜಯವನ್ನು ಪಡೆಯುತ್ತಾರೆ ಅವರೇ ಶ್ರೇಷ್ಠಾಚಾರಿಯಾಗಿ ಸ್ವರ್ಗದ
ಮಾಲೀಕರಾಗುತ್ತಾರೆ.
ನೀವು ಮಕ್ಕಳಿಗೆ ಪರಸ್ಪರ ತುಂಬಾ ಪ್ರೀತಿಯಿರಬೇಕು. ಬ್ರಹ್ಮಾಕುಮಾರ-ಕುಮಾರಿಯರ ಸೈನ್ಯವು
ಜೊತೆ-ಜೊತೆ ಇದ್ದೀರಿ. ಯಾರು ಯಾರು ಎಲ್ಲಿದ್ದಾರೆ ಎಂದು ಯಾರಿಗೂ ತಿಳಿಯುವುದಿಲ್ಲ. ಎಲ್ಲಾ
ಸೇವಾಕೇಂದ್ರಗಳ ಮಕ್ಕಳನ್ನಂತೂ ಕರೆಸಲು ಸಾಧ್ಯವಿಲ್ಲ. ಮಾತೆಯರಿಗೆ ತುಂಬಾ ಬಂಧನವಿರುತ್ತದೆ.
ಮಕ್ಕಳನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ. ಇಲ್ಲವೆಂದರೆ ಪುರುಷರು ರಿಪೋರ್ಟ್ ಮಾಡಿಬಿಡುತ್ತಾರೆ.
ಪುರುಷರು ಹೊರಟುಹೋಗುತ್ತಾರೆಂದರೆ ಮನೆ-ಮಠವನ್ನು ಯಾರು ಸಂಭಾಲನೆ ಮಾಡುತ್ತಾರೆ? ನೀವು ತೋರಿಸಬೇಕಾಗಿದೆ- ಅವರಂತೂ
ಹಠಯೋಗವನ್ನು ಕಲಿಸುತ್ತಾರೆ, ನಾವು ರಾಜಯೋಗವನ್ನು ಕಲಿಸುತ್ತೇವೆ
ಆದ್ದರಿಂದ ನಮಗೆ ಪರಿಹಾರ ಸಿಗಬೇಕಾಗಿದೆ. ತಂದೆಯು ತಿಳಿಸಿದ್ದರು, ನೀವು ವೇಶ್ಯೆಯರಿಗೂ ಸಹ ತಿಳಿಸಿ, ಈ ಕೊಳಕು ವ್ಯವಹಾರವನ್ನು ಈಗ ಬಂಧ್ ಮಾಡಿ.
ನೀವು ಸ್ವರ್ಗದ ಬಾಗಿಲನ್ನು ತೆರೆಯುವವರಾಗಿ. ನೀವು ಈ ಕಾರ್ಯವನ್ನು ಮಾಡಿ ತೋರಿಸಿದಾಗ ನಿಮ್ಮ
ಹೆಸರು ತುಂಬಾ ಪ್ರಸಿದ್ಧವಾಗುತ್ತದೆ ಎಂದು ತಿಳಿಸಬೇಕು. ಅವರ ಕಲ್ಯಾಣವನ್ನೂ ಸಹ ಮಾಡಬೇಕಾಗಿದೆ. ಈ
ಸಂಗಮಯುಗವೇ ಕಲ್ಯಾಣಕಾರಿಯಾಗಿದೆ. ಪವಿತ್ರತೆಯ ಮೇಲೆ ಹೆಚ್ಚಿನ ಡಮರುಗವನ್ನು ಸಾರಬೇಕಾಗಿದೆ. ಈ
ವೇಶ್ಯೆಯರ ಮೇಲೆ ದಯೆ ತೋರಿಸಬೇಕಾಗಿದೆ. ಸರ್ಕಾರವೂ ಸಹ ಈಗ ಅವರನ್ನು ಒಂದಲ್ಲ ಒಂದು ಕಾರ್ಯದಲ್ಲಿ
ತೊಡಗಿಸುತ್ತಾ ಇರುತ್ತದೆ. ನೀವು ಈ ರೀತಿಯಾಗಿ ತಿಳಿಸಿ, ಅದರಿಂದ ಪತ್ರಿಕೆಯಲ್ಲಿಯೂ ಸಹ ಬರಲಿ- ಬ್ರಹ್ಮಾಕುಮಾರ-ಕುಮಾರಿಯರಂತೂ ವೇಶ್ಯೆಯರಿಗೂ ಸಹ
ಜ್ಞಾನವನ್ನು ಕೊಟ್ಟು ಈ ಕೊಳಕು ವ್ಯವಹಾರದಿಂದ ಬಿಡಿಸುತ್ತಾರೆ ಏಕೆಂದರೆ ಕಾಮ ಮಹಾಶತ್ರುವಾಗಿದೆ.
ಇದರಿಂದ ನೀವು ಪತಿತ ಕೊಳಕರಾಗುತ್ತೀರಿ. ಈ ಪ್ರಪಂಚವೇ ಭ್ರಷ್ಟವಾಗಿದೆಯಲ್ಲವೇ. ತಂದೆಯು ಬಂದು
ಮಾತೆಯರನ್ನು ಮೇಲೆತ್ತುತ್ತಾರೆ. ಗೋಪರ ಕರ್ತವ್ಯವು ಸಹಯೋಗಿಗಳಾಗುವುದಾಗಿದೆ. ಯಾರು
ಪರಿಶ್ರಮಪಡುತ್ತಾರೋ ಅವರು ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ತಮ್ಮ ಜೊತೆಗಾರರ ಮೇಲೆ
ದಯೆತೋರಿಸಬೇಕು, ಇದರ ಹೆಸರೇ ವೇಶ್ಯಾಲಯವಾಗಿದೆ. ತಂದೆಯೇ
ಬಂದು ಶಿವಾಲಯವನ್ನಾಗಿ ಮಾಡುತ್ತಾರೆ. ವಾಸ್ತವದಲ್ಲಿ ಇವು ಜ್ಞಾನದ ಮಾತುಗಳಾಗಿವೆ. ತಂದೆಯು ಈ
ಮನುಷ್ಯನ ತನುವಿನಲ್ಲಿ ಬಂದು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ನಿಮಗೆ ತಿಳಿದಿದೆ, ನಾವೀಗ ಸ್ಮಶಾನವಾಸಿಗಳಿಂದ
ಸ್ವರ್ಗವಾಸಿಗಳಾಗುತ್ತಿದ್ದೇವೆ. ಇದು ಜ್ಞಾನ ಮಾನಸಸರೋವರವಾಗಿದೆ. ಜ್ಞಾನದಲ್ಲಿ ಈಜಾಡುತ್ತಾ
ಇರುತ್ತಾರೆ ಆದರೆ ನೀರಿನ ಮಾತಿಲ್ಲ. ತೀರ್ಥಸ್ಥಾನಗಳಲ್ಲಿ ಹೋಗಿ ತುಂಬಾ ಪರಿಶ್ರಮಪಡುತ್ತಾರೆ.
ಪಾದಯಾತ್ರೆ ಮಾಡುವುದು, ಸಾಮಾನು ಮುಂತಾದವು ಹೊರುವುದು ತುಂಬಾ
ಪರಿಶ್ರಮವಾಗುತ್ತದೆ. ಈಗ ನಿಮಗೆ ಅರ್ಥವಾಗಿಬಿಟ್ಟಿದೆ- ತಂದೆಯು ಮನುಷ್ಯನ ಶರೀರದಲ್ಲಿ ಕುಳಿತು
ಜ್ಞಾನಸ್ನಾನವನ್ನು ಮಾಡಿಸುತ್ತಾರೆ. ಬಾಕಿ ದೇವತೆಗಳು ಮುಂತಾದವರು ಯಾರೂ ಇಲ್ಲ. ನಿಮ್ಮನ್ನು
ಜ್ಞಾನದೇವತೆಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ಎಷ್ಟು ಒಳ್ಳೊಳ್ಳೆಯ ಮಾತುಗಳು ಧಾರಣೆ
ಮಾಡುವಂತದ್ದಾಗಿವೆ. ಮಕ್ಕಳು ಎದ್ದು ನಿಲ್ಲುತ್ತಾರೆಂದರೆ ತುಂಬಾ ಕಾರ್ಯವನ್ನು ಮಾಡಬಲ್ಲರು. ನೀವು
ಮಾತೆಯರು ಹೋಗಿ ತಿಳಿಸಬೇಕಾಗಿದೆ- ಎಲ್ಲಿಯೇ ವೇಶ್ಯೆಯರಿದ್ದರೂ ಸಹ ಅವರ ಸಂಘಟನೆಯನ್ನು ಮಾಡಿ.
ದೊಡ್ಡ-ದೊಡ್ಡವರಿಗೆ ತಿಳಿಸಿ ಆದರೆ ಈ ರೀತಿಯೂ ಅಲ್ಲ ಹೊರಗಡೆ ಮಾತ್ರ ನಮ್ಮವರಂತೂ ಒಬ್ಬ ತಂದೆ
ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಹೇಳುತ್ತಾ ಇರುವುದು ಮತ್ತು ಒಳಗೆ ಮತ್ತ್ಯಾರಾದರೂ ಸೆಳೆಯತ್ತಾ
ಇರುವುದು, ಈ ರೀತಿಯ ಕೆಲಸವೂ ನಡೆಯಲು ಸಾಧ್ಯವಿಲ್ಲ.
ತಂದೆಗೆ ಸತ್ಯಮಕ್ಕಳಾಗಬೇಕಾಗಿದೆ. ಅಂತಹ ಖುಷಿಯಿಂದ ಕೂಡಿದ ಚೆಹರೆ ಎಲ್ಲಿ? ಅರೇ! ಬೇಹದ್ದಿನ ತಂದೆಯೊಂದಿಗೆ ಮಿಲನ
ಮಾಡಲು ಹೋಗುತ್ತಾರೆಂದರೆ ಓಡೋಡಿ ಬಂದು ಖುಷಿಯಿಂದ ಮಿಲನ ಮಾಡಬೇಕು. ನಾವಂತು ಹೋಗಿ ತಂದೆಯ ಕೊರಳಿನ
ಹಾರವಾಗಬೇಕು. ಸುಸ್ತಾಗಬಾರದಾಗಿದೆ. ನಿಮ್ಮ ನೆನಪೇ ಓಟವಾಗಿದೆ. ಅವರದು ಶಾರೀರಿಕ ಓಟವಾಗಿದೆ. ಇದು
ನಿಮ್ಮ ಆತ್ಮಿಕ ಓಟವಾಗಿದೆ. ಚಹರೆಯು ಖುಷಿಯಲ್ಲಿ ಅರಳಬೇಕು. ಯಾರ ಪತಿಯಾದರೂ ಮರೆಯಾಗಿ ಮತ್ತೆ
ಬಂದು ಸೇರುತ್ತಾರೆಂದರೆ ಸ್ತ್ರೀಯು ಓಡೋಡಿ ಹೋಗಿ ಅಪ್ಪಿಕೊಳ್ಳುತ್ತಾಳೆ. ತಂದೆಯು ಬೇಹದ್ದಿನ
ಪತಿಯರ ಪತಿಯಾಗಿದ್ದಾರೆ. ಹೆದರುವುದು ಏನಿದೆ? ಯಾರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಅವರೊಂದಿಗಂತೂ ಓಡೋಡಿ ಬಂದು ಮಿಲನ ಮಾಡಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ
ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ತಂದೆಗೆ ಸತ್ಯಮಕ್ಕಳಾಗಬೇಕಾಗಿದೆ, ಒಳಗೊಂದು, ಹೊರಗೆ ಇನ್ನೊಂದು ಇರಬಾರದಾಗಿದೆ. ನೆನಪಿನ
ಆತ್ಮಿಕ ಓಟದಲ್ಲಿ ಮುಂದೆ ಹೋಗಬೇಕಾಗಿದೆ. ಖುಷಿಯ ಸ್ವಭಾವದವರಾಗಬೇಕಾಗಿದೆ.
2) ಶಿವಶಕ್ತಿ ಸೇನೆಯ ಸಂಘಟನೆಯನ್ನು ತಯಾರು ಮಾಡಿ ತಮ್ಮ ಜೊತೆಗಾರರನ್ನು ರಕ್ಷಿಸಬೇಕಾಗಿದೆ.
ಪವಿತ್ರರಾಗುವ ಮತ್ತು ಪವಿತ್ರರನ್ನಾಗಿ ಮಾಡುವ ಯುಕ್ತಿಯನ್ನು ರಚಿಸಬೇಕಾಗಿದೆ.
ವರದಾನ:
ಶ್ರೇಷ್ಠ ಸ್ಮೃತಿಯ ಮೂಲಕ ಸುಖಮಯ ಸ್ಥಿತಿ ಮಾಡುವಂತಹ ಸುಖ ಸ್ವರೂಪ ಭವ
ಸ್ಥಿತಿಯ
ಆಧಾರ ಸ್ಮೃತಿಯಾಗಿದೆ. ನೀವು ಕೇವಲ ಸ್ಮೃತಿ ಸ್ವರೂಪರಾಗಿ, ಆಗ ಸ್ಮೃತಿ ಬರುವುದರಿಂದ ಎಂತಹ ಸ್ಮೃತಿ ಅಂತಹ
ಸ್ಥಿತಿ ಸ್ವತಃವಾಗಿ ಆಗುತ್ತದೆ. ಖುಷಿಯ ಸ್ಮೃತಿಯಲ್ಲಿ ದ್ದಾಗ ಸ್ಥಿತಿಯು ಖುಷಿಯದಾಗಿ ಬಿಡುತ್ತದೆ
ಮತ್ತು ದುಃಖದ ಸ್ಮೃತಿ ಮಾಡಿದಾಗ ದುಃಖದ ಸ್ಥಿತಿ ಆಗಿಬಿಡುತ್ತದೆ. ಸಂಸಾರದಲ್ಲಿ ದುಃಖವಂತೂ
ವೃದ್ಧಿಯಾಗಲೇಬೇಕು,
ಈಗ
ಅತೀಯಲ್ಲಿ ಹೋಗಬೇಕು ಆದರೆ ನೀವು ಸುಖದ ಸಾಗರನ ಮಕ್ಕಳು ಸದಾ ಖುಷಿಯಲ್ಲಿರುವಂತಹ ದುಃಖಗಳಿಂದ
ಭಿನ್ನ ಸುಖ ಸ್ವರೂಪರಾಗಿದ್ದೀರಾ,
ಇದಕ್ಕಾಗಿ
ಏನೇ ಆಗುತ್ತಿರಲಿ ಆದರೆ ನೀವು ಸದಾ ಮಜದಲ್ಲಿರಿ.
ಸ್ಲೋಗನ್:
ಸಮಯ ರೂಪಿ ಖಜಾನೆಯನ್ನು ವ್ಯರ್ಥದಿಂದ ರಕ್ಷಿಸಿ - ಇದೇ ತೀವ್ರ ಪುರುಷಾರ್ಥದ ಲಕ್ಷಣವಾಗಿದೆ.
ಮಾತೇಶ್ವರೀಯವರ ಅಮೂಲ್ಯ ಮಹಾವಾಕ್ಯ
“ಭಾರತದ ಪ್ರಾಚೀನ ಯೋಗ ಪರಮಾತ್ಮನ ಮೂಲಕ ಕಲಿಸಲಾಗಿದೆ”
ನಮ್ಮ ಈ ಈಶ್ವರೀಯ ಯೋಗ ಭರತದಲ್ಲಿ ಪ್ರಾಚೀನ ಯೊಗದ ಹೆಸರಲ್ಲಿ ಪ್ರಸಿದ್ಧವಾಗಿದೆ. ಈ
ಯೋಗವನ್ನು ಅವಿನಾಶಿ ಯೋಗವೆಂದು ಏಕೆ ಹೇಳಲಾಗುತ್ತದೆ? ಏಕೆಂದರೆ ಅವಿನಾಶಿ ಪರಮಪಿತ ಪರಮಾತ್ಮನಿಂದ ಕಲಿಸಿಕೊಡಲಾಗಿದೆ. ಭಲೆ ಯೋಗವನ್ನು ಅನ್ಯ ಮನುಷ್ಯ
ಆತ್ಮರು ಸಹ ಕಲಿಸುತ್ತಾರೆ ಹಾಗಾಗಿ ಯೋಗಾಶ್ರಮ ಇತ್ಯಾದಿಗಳನ್ನು ತೆರೆಯುತ್ತಿರುತ್ತಾರೆ ಆದರೆ
ಅವರು ಪ್ರಾಚೀನ ಯೊಗವನ್ನು ಕಲಿಸಲು ಸಾಧ್ಯವಿಲ್ಲ. ಒಂದುವೇಳೆ ಇಂತಹ ಯೋಗವಿದ್ದರೆ ಆ ಬಲ ಎಲ್ಲಿ!
ಭಾರತವು ದಿನ ಪ್ರತಿದಿನ ನಿರ್ಬಲವಾಗುತ್ತ ಹೋಗುತ್ತದೆ ಇದರಿಂದ ಸಿದ್ಧವಾಗುತ್ತದೆ ಆ ಯೋಗ ಅವಿನಾಶಿ
ಯೊಗವಲ್ಲ, ಯಾರ ಜೊತೆಯಲ್ಲಿ ಯೋಗ ಜೋಡಿಸ ಬೇಕಾಗಿದೆ
ಅವರೇ ಕಲಿಸಲು ಸಾಧ್ಯ. ಬೇರೆಯವರ ಜೋತೆಯಲ್ಲಿ ಯೋಗವನ್ನು ಜೋಡಿಸುವುದೇ ಇಲ್ಲವೆಂದರೆ ಕಲಿಸುವುದು
ಹೇಗೆ? ಇದನ್ನು ಸ್ವಯಂ ಪರಮಾತ್ಮನೆ ಮಾಡಲು ಸಾಧ್ಯ, ಅವರೇ ಪೂರ್ಣ ರಹಸ್ಯವನ್ನು ಹೇಳಲು ಸಾಧ್ಯ.
ಉಳಿದೆಲ್ಲರು ಹೇಳುತ್ತಿರುತ್ತಾರೆ - ನಾವು ಯೋಗವನ್ನು ಕಲಿಸುತ್ತೇವೆ. ಇದಂತೂ ನಾವು ತಿಳಿದುಕೊಂಡಿದ್ದೇವೆ
ಸತ್ಯ ಯೋಗವನ್ನು ಸ್ವಯಂ ಪರಮಾತ್ಮನೇ ಕಲಿಸಿ ಸೂರ್ಯವಂಶಿ, ಚಂದ್ರವಂಶಿ ಮನೆತನದ ಸ್ಥಾಪನೆ ಮಾಡಿ ದೈವೀ ರಾಜ್ಯದ ಸ್ಥಾಪನೆ ಮಾಡುತ್ತಿರುತ್ತಾರೆ. ಈಗ ಆ
ಪ್ರಾಚೀನ ಯೋಗವನ್ನು ಸಹ ಪರಮಾತ್ಮ ಕಲ್ಪ-ಕಲ್ಪ ನಮಗೆ ಕಲಿಸುತ್ತಾರೆ. ನೀವು ಆತ್ಮರು ನಾನು
ಪರಮಾತ್ಮನ ಜೊತೆ ನಿರಂತರ ಯೋಗವನ್ನು ಜೋಡಿಸಿ ಆಗ ನಿಮ್ಮ ಪಾಪ ನಷ್ಟವಾಗುತ್ತದೆ. ಒಳ್ಳೆಯದು. ಓಂ
ಶಾಂತಿ.
Hindi/Tamil/English/Telugu/Kannada/Malayalam/Ilangai Tamil/Sinhala


0 Comments