Header Ads Widget

Header Ads

KANNADA MURLI 11.10.22

Hindi/Tamil/English/Telugu/Kannada/Malayalam/Ilangai Tamil/Sinhala

11/10/22  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ತಾವು ಆತ್ಮಿಕ ಬ್ರಾಹ್ಮಣರಿಗೆ ಪರಸ್ಪರ ಬಹಳ-ಬಹಳ ಪ್ರೀತಿ ಇರಬೇಕು. ಪರಸ್ಪರ ಎಲ್ಲರೂ ಸೇರಿ ಹೇಗೆ ಸತ್ಯ ತಂದೆಯ ಪರಿಚಯವನ್ನು ಕೊಡಬೇಕೆಂದು ಸಲಹೆಯನ್ನು ತೆಗೆದುಕೊಳ್ಳಬೇಕು

ಪ್ರಶ್ನೆ:

ಮಕ್ಕಳು ಯಾವ ನಿಶ್ಚಯದ ಆಧಾರದ ಮೇಲೆ ತಮ್ಮ ಭಾಗ್ಯವನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳಬಹುದು?

ಉತ್ತರ:

ಯಾವಾಗ ಮೊದಲು ಬುದ್ಧಿಯಲ್ಲಿ ನಮ್ಮನ್ನು ಓದಿಸುವಂತಹವರು ಸ್ವಯಂ ಪರಮಾತ್ಮ ಆಗಿದ್ದಾರೆ, ಅವರಿಂದಲೇ ನಾವು ಸೌಭಾಗ್ಯವನ್ನು ತೆಗೆದುಕೊಳ್ಳಬೇಕು ಎಂದು ನಿಶ್ಚಯ ಆಗುತ್ತದೋ ಆಗ ವಿದ್ಯೆಯನ್ನು ಪ್ರತಿದಿನ ಓದುತ್ತಾರೆ ಹಾಗೂ ತಮ್ಮ ಸೌಭಾಗ್ಯವನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ತಂದೆಯ ಶ್ರೀಮತವಾಗಿದೆ ಮಕ್ಕಳೇ-ತಾವು ಯಾವುದೇ ಪರಿಸ್ಥಿತಿಯಲ್ಲಿ ಪ್ರತಿ ನಿತ್ಯ ವಿದ್ಯೆಯನ್ನು ಓದಬೇಕು. ಒಂದುವೇಳೆ ಕ್ಲಾಸ್ಗೆ ಬರಲು ಸಾಧ್ಯವಿಲ್ಲ ಅಂದರೆ ಮನೆಯಲ್ಲಿ ಮುರಳಿಯನ್ನು ಓದಿರಿ.

ಗೀತೆನೀನು ಪ್ರೀತಿಯ ಸಾಗರ.....



ಓಂ ಶಾಂತಿ : ನಾವು ಆತ್ಮರು ಬಿಂದು ಸಮಾನರಾಗಿದ್ದೇವೆ ಎಂದು ಆತ್ಮರು ಅರ್ಥಾತ್ ಮಕ್ಕಳು ತಿಳಿದುಕೊಂಡಿದ್ದೀರಿ. ಒಂದು ನಕ್ಷತ್ರ ಸಮಾನ ಇದ್ದೇವೆ. ಆದರೆ ಯಾರು ಆತ್ಮರಾಗಿದ್ದಾರೋ ಅವರು ಸ್ವಯಂನ ತಂದೆಯನ್ನು ಹೇಗೆ ಅನುಭೂತಿ ಮಾಡುವುದು. ಪ್ರಪಂಚದವರು ಸ್ವಯಂ ಹಾಗೂ ತಮ್ಮ ತಂದೆಯ ಬಗ್ಗೆ ತಿಳಿದಿಲ್ಲ. ನಾವು ಆತ್ಮರು ಬಿಂದು ಆಗಿದ್ದೇವೆಂದು ತಾವು ತಿಳಿದುಕೊಂಡಿದ್ದೀರಿ. ಆತ್ಮ ಎಷ್ಟು ಚಿಕ್ಕದಾಗಿದೆಯೋ ತಂದೆಯೂ ಸಹ ಅಷ್ಟೇ ಚಿಕ್ಕದಾಗಿದ್ದಾರೆ. ಆತ್ಮಗಿಂತಲೂ ಪರಮಾತ್ಮ ತಂದೆ ದೊಡ್ಡದಾಗಿರುವುದಿಲ್ಲ. ಶರೀರವಂತೂ ಚಿಕ್ಕದು-ದೊಡ್ಡದು ಇರುತ್ತದೆ. ಈಗ ನೀವು ತಂದೆಯ ನೆನಪಿನಲ್ಲಿ ಇದ್ದೀರಿ. ಭಲೆ ಯಾರಾದರೂ ತಿಳಿದುಕೊಳ್ಳಲಿ ಆತ್ಮ ಚಿಕ್ಕ ಬಿಂದು ಆಗಿದೆ ಎಂದು ಆದರೆ ಇದರಲ್ಲಿ 84 ಜನ್ಮಗಳ ಪಾರ್ಟ್ ಅಡಕವಾಗಿದೆ, ವಿಚಿತ್ರವಾಗಿದೆಯಲ್ಲವೇ. ಎಲ್ಲಿಯ ತನಕ ಆತ್ಮ ಶರೀರದ ಆಧಾರವನ್ನು ಪಡೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಪಾರ್ಟ್ ಮಾಡಲು ಸಾಧ್ಯವಿಲ್ಲ. ಪರಮಾತ್ಮನೂ ಸಹ ನಾವು ಆತ್ಮರ ಹಾಗೆಯೇ ಚಿಕ್ಕ ಬಿಂದು ಆಗಿದ್ದಾರೆ. ಆದರೆ ತಂದೆ ಎಂದು ಏಕೆ ಕರೆಯಲಾಗುತ್ತದೆ? ಏಕೆಂದರೆ ಅವರು ಸದಾ ಪಾವನವಾಗಿರುತ್ತಾರೆ. ಪ್ರಪಂಚದವರು ಪರಮಾತ್ಮನ ಪರಿಚಯ ತಿಳಿದುಕೊಂಡಿಲ್ಲ ಆದರೂ ಸಹ ತಂದೆ ಎಂದು ಹೇಳುತ್ತಾರೆ. ಹೇಗೆ ನೀವು ತಿಳುವಳಿಕೆಯಿಂದ ನೆನಪು ಮಾಡುತ್ತೀರೋ ಅವರೂ ಸಹ ನೆನಪು ಮಾಡುತ್ತಾರೆ. ಇಷ್ಟೆಲ್ಲಾ ಭಕ್ತರಿಗೆ ಭಗವಂತ ಒಬ್ಬರೇ ಆಗಿದ್ದಾರೆ, ಅವರಿಗೆ ಪತಿತಪಾವನ ಎಂದು ಕರೆಯಲಾಗುತ್ತದೆ. ಅಂದಾಗ ಪತಿತರು ಅನೇಕರು, ಪತಿತಪಾವನ ಒಬ್ಬರೇ ಆಗಿದ್ದಾರೆ. ಸಾಧು-ಸಂತರು, ಮಹಾತ್ಮರೂ ಸಹ ಕರೆಯುತ್ತಾರೆ ಅವರಿಗೆ ಗಾಡ್ ಫಾದರ್ ಎಂದು ಹೇಳುತ್ತಾರೆ. ಅಂದಾಗ ಎಲ್ಲರಿಗೂ ತಂದೆ ಆಗಿದ್ದಾರಲ್ಲವೇ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡಲು ಬರಬೇಕಾಗುತ್ತದೆ. ಪಾವನರಾಗುವ ಉಪಾಯವನ್ನು ಅವರೇ ತಿಳಿಸಬೇಕಾಗುತ್ತದೆ ಏಕೆಂದರೆ ಆತ್ಮನ ಮೇಲೆ ಪಾಪದ ಹೊರೆ ಇದೆ. ನಾವು ಕೇವಲ ಬಿ ಹೋಲಿ (ಪವಿತ್ರರಾಗಿ) ಎಂದು ಬರೆಯಬಹುದು ಆದರೆ ಅಂತಹ ಸ್ಲೋಗನ್ ಹಾಕುವುದರಿಂದ ಯಾವುದೇ ಲಾಭವಿಲ್ಲ ಏಕೆಂದರೆ ಹೊರಗಿನವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಬಾಕಿ ನಿಮಗಂತೂ ತಿಳಿಸಲಾಗಿದೆ, ನಿಮಗೆ ಸ್ಲೊಗನ್ನ ಅವಶ್ಯಕತೆ ಇಲ್ಲ. ಪವಿತ್ರರಾಗಿ ತಂದೆಯನ್ನು ನೆನಪು ಮಾಡಿ ಎಂದು ಸ್ಲೋಗನ್ನ ಅರ್ಥವಾಗಿದೆ. ಎಲ್ಲಿಯವರೆಗು ತಿಳಿಸುವುದಿಲ್ಲವೋ ಅಲ್ಲಿಯವರೆಗೂ ಸ್ವಲ್ಪವೂ ಸಹ ಅರ್ಥ ಆಗುವುದಿಲ್ಲ. ಯೋಗ ಮಾಡುವುದರಿಂದ ಪವಿತ್ರರಾಗಬಹುದು. ಪರಮಪವಿತ್ರತೆ (ಹಿಜ್ ಹೊಲಿನೆಸ್ಸ್) ಎನ್ನುತ್ತಾರೆ. ಇದು ಪವಿತ್ರೆತೆಯ ಟೈಟಿಲ್ (ಬಿರುದು) ಆಗಿದೆ. ಸನ್ಯಾಸಿಗಳಿಗೆ ಪವಿತ್ರರು ಎನ್ನುತ್ತಾರೆ ಏಕೆಂದರೆ ವಿಕಾರದಲ್ಲಿ ಹೋಗುವುದಿಲ್ಲ. ಭಲೆ ಅವರು ಪವಿತ್ರವಾಗಿರುತ್ತಾರೆ, ಬ್ರಹ್ಮತತ್ವವನ್ನು ನೆನಪು ಮಾಡುತ್ತಾರೆ ಆದರೆ ವಿಕಾರಿಗಳ ಹತ್ತಿರ ಜನ್ಮ ಪಡೆಯಬೇಕಾಗುತ್ತದೆ. ನಿಮಗಂತೂ ಪವಿತ್ರರಾಗಿ ಶಿವಬಾಬಾನನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಸನ್ಯಾಸಿಗಳು ತಮಗೆ ಕರ್ಮ ಸನ್ಯಾಸಿ ಎಂದು ಕರೆಸಿಕೊಳ್ಳುವುದಿಲ್ಲ. ಆದರೆ ಕರ್ಮ ಸನ್ಯಾಸ ಆಗುವುದಿಲ್ಲ. ಯಾವಾಗ ದೇಹ ಇರುವುದಿಲ್ಲವೋ ಆಗ ಕರ್ಮಸನ್ಯಾಸ ಆಗುತ್ತದೆ. ದೇಹವಿಲ್ಲದೇ ಮನೆಯಲ್ಲಿ ಅರ್ಥಾತ್ ಪರಮಧಾಮದಲ್ಲಿ ಇರುತ್ತಾರೆ. ಇಲ್ಲಿ ಕರ್ಮ ಸನ್ಯಾಸ ಹೇಗೆ ಆಗುತ್ತದೆ? ರೀತಿ ಹೇಳುವುದೂ ಸಹ ತಪ್ಪಾಗಿದೆ. ಗೃಹಸ್ಥಿ ಯಾವ ಕರ್ಮ ಮಾಡುತ್ತಾರೋ ಅದು ನಾವು ಮಾಡುವುದಿಲ್ಲ ಎಂದು ಹೇಳುತ್ತಾರೆ. ಗೃಹಸ್ಥಿಯರ ಕರ್ಮವೂ ಬಹಳ ಇರುತ್ತದೆ-ಯಜ್ಞ, ತಪ, ತೀರ್ಥಯಾತ್ರೆ ಮುಂತಾದವೆಲ್ಲಾ ಮಾಡುತ್ತಾರೆ. ಅದನ್ನು ಸನ್ಯಾಸಿಗಳೂ ಸಹ ಮಾಡುತ್ತಾರೆ. ಬಾಕಿ ಕೇವಲ ಇದೇ ಅಂತರ ಇದೆ - ಗೃಹಸ್ಥಿಯರು ಸಂಪಾದನೆ ಮಾಡಿ ಮನೆಯಲ್ಲೇ ಊಟ ತಯಾರು ಮಾಡಿಕೊಳ್ಳುತ್ತಾರೆ, ಸನ್ಯಾಸಿಗಳು ರೀತಿ ಮಾಡುವುದಿಲ್ಲ. ಅವರು ಬೇಡಿಕೊಂಡು ತಿನ್ನುತ್ತಾರೆ ಏಕೆಂದರೆ ಅವರದು ಹಠಯೋಗವಾಗಿದೆ. ಹಠಯೋಗದಿಂದ ಪರಮಾತ್ಮ ಸಿಗುವುದಿಲ್ಲ. ಯಾವಾಗ ತಂದೆ ಬರುತ್ತಾರೋ ಆಗ ಅವರೊಂದಿಗೆ ಮಿಲನ ಮಾಡಲು ಸಾಧ್ಯ ಹಾಗೂ ಎಲ್ಲಿಯವರೆಗೆ ತಂದೆ ಬರುವುದಿಲ್ಲವೋ ಅಲ್ಲಿಯವರೆಗೂ ಪಾವನ ಪ್ರಪಂಚದ ಸ್ಥಾಪನೆಯೂ ಸಹ ಆಗುವುದಿಲ್ಲ. ಎಷ್ಟು ತಿಳಿಸಿದರೂ ತಿಳಿದುಕೊಳ್ಳುವುದಿಲ್ಲ. ಇಷ್ಟು ಜನ ಬಂದಿದ್ದಾರೆ ಎಂದು ಮಕ್ಕಳು ಸಮಾಚಾರವನ್ನು ಬರೆಯುತ್ತಾರೆ. ಈಗ ಯಾರು ತಮ್ಮ ಸೌಭಾಗ್ಯವನ್ನು ಪಡೆದುಕೊಳ್ಳುತ್ತಾರೋ ನೋಡೋಣ. ಬಹಳ ಜನ ಬರುತ್ತಾರೆ ಆದರೆ ನಮ್ಮನ್ನು ಓದಿಸುವವರು ಪರಮಪಿತ ಪರಮಾತ್ಮ ಆಗಿದ್ದಾರೆ, ನಾವು ಅವರಿಂದ ಸೌಭಾಗ್ಯವನ್ನು ಪಡೆದುಕೊಳ್ಳಬೇಕೆಂದು ಬುದ್ಧಿಯಿಂದ ತಿಳಿದುಕೊಳ್ಳುವುದಿಲ್ಲ. ತಂದೆ ರಿಜಿಸ್ಟರನ್ನೂ ಸಹ ನೋಡುತ್ತಾರೆ. ಕೆಲವರು ತಿಂಗಳಿನಲ್ಲಿ 8-10 ದಿನಗಳು ಬರುತ್ತಾರೆ, ಕೆಲವರು ಬರುವುದೇ ಇಲ್ಲ ಅಂದರೆ ಅದನ್ನು ಬರೆಯುವುದಿಲ್ಲ. ಒಂದುವೇಳೆ ಬರುವುದಿಲ್ಲ ಅಂದರೆ ಮುರಳಿ ಓದುತ್ತಾರೋ ಇಲ್ಲವೋ, ಯಾವುದೇ ಪರಿಸ್ಥಿತಿಯಲ್ಲಿ ಪ್ರತಿ ದಿನ ಓದಲೇಬೇಕು. ಹೇಗಾದರೂ ಸ್ವಲ್ಪ ಓದಲಿ ಎಂದು ಜಪಸಾಹೆಬ್, ಸುಖಮಣಿ ಎನ್ನುವ ಚಿಕ್ಕ-ಚಿಕ್ಕ ಗ್ರಂಥಗಳನ್ನು ಮಾಡುತ್ತಾರೆ. ವಿದ್ಯೆಯಿಂದ ಯಾವ ಪ್ರಾಪ್ತಿಯಾಗುತ್ತದೆ ಎಂದು ನಿಮಗೆ ಗೊತ್ತಿದೆ. ಏನೂ ಪ್ರಾಪ್ತಿಯಾಗುವುದಿಲ್ಲ. ಸ್ವಲ್ಪ ಸಮಯಕ್ಕಾಗಿ ಬುದ್ಧಿ ಸರಿಯಾಗುತ್ತದೆ. ಅವರು ತಂದೆಯಿಂದ ಏನನ್ನೂ ಪಡೆಯಲು ಸಾಧ್ಯವಿಲ್ಲ. ಮತ್ತೆ ಪುನಃ ವಿಕಾರದಲ್ಲಿ ಸಿಲುಕಿಹಾಕಿಕೊಂಡರೆ ಅದರಿಂದ ಏನೂ ಪ್ರಾಪ್ತಿಯಾಗುವುದಿಲ್ಲ. ವಿನಾಶಕಾಲ ವಿಪರೀತಿ ಬುದ್ಧಿ ಎಂದು ಹೇಳುತ್ತಾರೆ, ಈಗ ವಿನಾಶದ ಸಮಯವಾಗಿದೆ ಹಾಗೂ ಪರಮಾತ್ಮನನ್ನು ಯಾರೂ ತಿಳಿದುಕೊಂಡಿಲ್ಲ. ನಾವು ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಬಗ್ಗೆ ತಿಳಿದುಕೊಂಡಿಲ್ಲ ಎಂದು ಹೇಳುತ್ತಾರೆ. ಆದರೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ಬಗ್ಗೆ ತಿಳಿದುಕೊಳ್ಳಬೇಕಲ್ಲವೇ. ತಂದೆಯು ತಿಳಿಸುತ್ತಾರೆ-ಸತ್ಯಯುಗ ಆದಿಯಾಗಿದೆ, ಕಲಿಯುಗ ಅಂತ್ಯ ಆಗಿದೆ. ಅಂದಾಗ ಮೂರು ಕಾಲ, ಮೂರು ಲೋಕದ ಬಗ್ಗೆ ತಿಳಿದುಕೊಳ್ಳಬೇಕಲ್ಲವೇ. ಸ್ಥೂಲವತನ, ಸೂಕ್ಷ್ಮವತನ, ಸಾಕಾರವತನಕ್ಕೆ ಮೂರು ಲೋಕ ಎಂದು ಹೇಳುತ್ತಾರೆ-ಶಾಸ್ತ್ರ ಅನಾದಿಯಾಗಿದೆ ಆದರೆ ತಂದೆ ತಿಳಿಸುತ್ತಾರೆ ಯಾವಾಗ ರಾವಣರಾಜ್ಯ ಪ್ರಾರಂಭವಾಗುತ್ತದೋ ಆಗ ಶಾಸ್ತ್ರ ಶುರು ಆಗುತ್ತದೆ, ಅಂದಾಗ ದ್ವಾಪರಯುಗ ಮಧ್ಯಯುಗವಾಗಿದೆ. ಆರ್ಧಕಲ್ಪ ಸತ್ಯಯುಗ, ಅರ್ಧಕಲ್ಪ ಕಲಿಯುಗ ಆಗಿದೆ. ಅರ್ಧದ ಲೆಕ್ಕವಾಗಿದೆ. ಅವರು ಮಧ್ಯಯುಗದ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಏಕೆಂದರೆ ಕಲ್ಪದ ಆಯಸ್ಸು ಲಕ್ಷಾಂತರ ವರ್ಷ ಎಂದು ಕರೆಯಲಾಗುತ್ತದೆ. ತಂದೆಯನ್ನು ತಿಳಿದುಕೊಳ್ಳಿ, ಬ್ರಹ್ಮಾಕುಮಾರ-ಕುಮಾರಿ ಆಗಿ ಆಗ ಆಸ್ತಿ ಸಿಗುತ್ತದೆ ಎಂದು ತಿಳಿಸಬೇಕು. ಯಾರಾದರು ಬರುತ್ತಾರೆಂದರೆ ಮೊದಲು ಎಲ್ಲಿಗೆ ಬಂದಿದ್ದೀರಿ ಎಂದುಕೇಳಬೇಕು. ಬಿ.ಕೆ ಹತ್ತಿರ ಬಂದಿದ್ದೇವೆಂದು ಹೇಳುತ್ತಾರೆ. ಆಗ ವಿಚಾರ ಮಾಡಿ ಇಷ್ಟೊಂದು ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆಂದರೆ ಬ್ರಹ್ಮಾ ತಂದೆಯೂ ಸಹ ಇರಬೇಕಲ್ಲವೇ ಎಂದು ಹೇಳಿ. ಎಷ್ಟು ಸೇವಾಕೇಂದ್ರಗಳು ಇದೆ, ಬಹಳ ಬ್ರಹ್ಮಾಕುಮಾರ-ಕುಮಾರಿಯರು ಇದ್ದಾರೆ. ಭಲೆ ಇಷ್ಟು ಜನ ಮಕ್ಕಳು ಒಬ್ಬ ತಂದೆಗೆ ಹೇಗೆ ಇರಲು ಸಾಧ್ಯ? ಬರೆಯಲಾಗಿದೆ ಪ್ರಜಾಪಿತ ಇದ್ದಾರೆಂದರೆ ಇಷ್ಟು ಬ್ರಹ್ಮಾಕುಮಾರ-ಕುಮಾರಿಯರು ಇರುತ್ತಾರೆ. ಹೀಗೆ ತಿಳಿಸುತ್ತಾ ಅವರನ್ನು ನಿಲ್ಲಿಸಬೇಕು. ಮತ್ತೆ ಪ್ರಜಾಪಿತ ಬ್ರಹ್ಮಾ ಯಾರ ಮಗು ಆಗಿದ್ದಾರೆ? ಎಂದು ಯೋಚನೆ ಮಾಡಿ. ಇಷ್ಟು ಜನ ಮಕ್ಕಳನ್ನು ರಚನೆ ಮಾಡುವುದು ತಂದೆಯ ಕಾರ್ಯವಾಗಿದೆ. ಅಂದಾಗ ಪರಮಾತ್ಮ ಬರುತ್ತಾರಲ್ಲವೇ. ನೀವೇ ತಂದೆ-ತಾಯಿ ಆಗಿದ್ದೀರಿ ಎಂದು ಗಾಯನವೂ ಸಹ ಇದೆ ಅಂದಾಗ ಬ್ರಹ್ಮಾ ತಂದೆಯಾಗಿದ್ದಾರಲ್ಲವೇ. ಅಂದಾಗ ಪರಮಾತ್ಮ ಬ್ರಹ್ಮನ ಮೂಲಕ ರಚನೆ ಮಾಡುತ್ತಾರೆ, ಪರಿವರ್ತನೆ ಮಾಡುತ್ತಾರೆ. ದತ್ತು ತೆಗೆದುಕೊಳ್ಳುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ಪಾವನರನ್ನಾಗಿ ಮಾಡುತ್ತಾರೆ, ಹೇಗೆ? ನೆನಪಿನಿಂದ. ಎಲ್ಲಾ ಧರ್ಮಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಎಲ್ಲರೂ ನನ್ನನ್ನು ಕರೆಯುತ್ತಾರೆ, ನಾನು ಜ್ಞಾನಸಾಗರ, ಆನಂದಸಾಗರ, ಮುಕ್ತಿದಾತ, ಮಾರ್ಗದರ್ಶಕನಾಗಿದ್ದೇನೆ. ಅಂದಾಗ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಸುಖ ಎಲ್ಲಿದೆ? ಸುಖಧಾಮದಲ್ಲಿ ಇದೆ. ಈಗ ತಂದೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ ಪುನಃ ಸುಖಧಾಮಕ್ಕೆ ಬರುತ್ತೇವೆ. ಮಾತುಗಳನ್ನು ಹೇಗೆ ನೆನಪು ಮಾಡುವುದು. ಪ್ರತಿ ದಿನ ಹೇಳುತ್ತಿದ್ದರೆ ಅನ್ಯರಿಗೆ ತಿಳಿಸುತ್ತಿದ್ದರೆ ಪಾಯಿಂಟ್ಸ್ ಬುದ್ಧಿಯಲ್ಲಿ ಬರುತ್ತಿರುತ್ತದೆ. ಯಾವಾಗ ಯಾರಿಗಾದರೂ ತಿಳಿಸಿದ್ದೇ ಆದರೆ ಅವರಿಂದ ಬರವಣಿಗೆಯನ್ನು ತೆಗೆದುಕೊಳ್ಳಬೇಕು. ಪರಮಾತ್ಮ ಯಾರು ಆತ್ಮರಿಗೆ ತಂದೆ ಆಗಿದ್ದರೆ -ಅವರ ವಿಳಾಸವನ್ನು ಹಾಗೂ ತಂದೆ ಶಿವ ಆಗಿದ್ದಾರೆಂದರೆ ಅವರಿಂದ ಆಸ್ತಿಯನ್ನು ಪಡೆದುಕೊಳ್ಳುತ್ತೀರಾ ಎಂದು ಬರೆಸಬೇಕು. ಅಂದಾಗ ಪರಿಶ್ರಮ ಪಡಬೇಕಾಗುತ್ತದೆ. ಆದರೆ ಯಾರು ಪರಿಶ್ರಮ ಮಾಡುತ್ತಾರೆ? ಆದ್ದರಿಂದ ಮಕ್ಕಳು ಸ್ವಯಂ ತಾನು ನಿಂತುಕೊಂಡು ಅನ್ಯರನ್ನು ನಿಲ್ಲಿಸಬೇಕು ಹಾಗೂ ಸೇವೆಗೋಸ್ಕರ ಪ್ಲಾನ್ ಮಾಡಬೇಕಾಗಿದೆ. ಹೇಗೆ ಮಿಲಟರಿಯಲ್ಲಿ ದೊಡ್ಡ ಕಮಾಂಡರ್ಸ್ (ಸೇನಾಪತಿಗಳು) ಪರಸ್ಪರ ಸೇರುತ್ತಾರಲ್ಲವೇ. ಇಲ್ಲಿಯೂ ಸಹ ಮಕ್ಕಳು ಸೇರಬೇಕು. ಆದರೆ ಏನು ಮಾಡುವುದು, ಪರಸ್ಪರ ಸೇರುವುದೇ ಇಲ್ಲ. ವಾಸ್ತವಿಕವಾಗಿ ತಾವು ಬ್ರಾಹ್ಮಣರು ಪರಸ್ಪರ ಬಹಳ ಪ್ರೀತಿಯಿಂದ ಇರಬೇಕು. ಯಾರಿಗೆ ಹೇಗೆ ತಿಳಿಸುವುದು ಎಂದು ಯೋಜನೆ ಮಾಡಬೇಕು.

ನೋಡಿ ಲಕ್ಷ್ಮೀ-ನಾರಾಯಣರಿಗೆ ಎಷ್ಟೊಂದು ಮಂದಿರಗಳು ಇದೆ. ಅಂದಾಗ ಮಂದಿರಗಳನ್ನು ಮಾಡುವವರನ್ನು ತಾವು ಮಂದಿರವಂತೂ ಮಾಡಿದಿರಿ ಆದರೆ ಇವರ ರಾಜ್ಯ ಯಾವಾಗ ಇತ್ತು? ಏಂದು ಕೇಳಬೇಕು. ಮತ್ತೆ ಹೇಗೆ ರಾಜ್ಯವನ್ನು ಕಳೆದುಕೊಂಡಿದ್ದಾರೆ? ಶ್ರೀ ಕೃಷ್ಣನ ಚಿತ್ರ ಬಹಳ ಚೆನ್ನಾಗಿತ್ತು, ಇದರಲ್ಲಿ 84 ಜನ್ಮಗಳ ಕಥೆ ಬಹಳ ಚೆನ್ನಾಗಿತ್ತು. ಕೇವಲ ಚಿತ್ರವನ್ನು ದೊಡ್ಡದನ್ನಾಗಿ ಮಾಡಬೇಕು. ಯಾರಾದರೂ ಬಂದರೆ ತಾವು ಗೀತೆಯನ್ನು ಓದಿದ್ದೀರಾ? ಎಂದು ಯುಕ್ತಿಯಿಂದ ಕೇಳಬೇಕು. ಮತ್ತೆ ಗೀತೆಯ ಭಗವಂತ ಯಾರಾಗಿದ್ದಾರೆ ಹೇಳಿ? ಎಂದು ಕೇಳಬೇಕು. ನೀವು ಮಾತಾ-ಪಿತಾ ಎಂದಮೇಲೆ ಬ್ರಹ್ಮಾ ಮಾತೆ ಆಗಿದ್ದಾರೆಂದಾಗ ಅವರ ಜೊತೆ ಸಂಬಂಧವನ್ನು ಇಟ್ಟುಕೊಳ್ಳಬೇಕು. ಒಂದುವೇಳೆ ಅವರ ಮೇಲೆ ಪ್ರೀತಿ ಇಲ್ಲವೆಂದರೆ ಆಟ ಸಮಾಪ್ತಿಯಾಗುತ್ತದೆ, ತಂದೆಯಿಂದ ಹೇಗೆ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ? ನಿಮ್ಮ ಯುದ್ಧ ಹಳೆಯ ಶತ್ರುವಿನ ಜೊತೆಯಾಗಿದೆ. ರಾವಣನ ಜೊತೆಯಲ್ಲೂ ಸಹ ಯುದ್ಧ ಆಗುತ್ತದೆ ಎಂದು ಕೆಲವರಿಗೆ ಗೊತ್ತಿಲ್ಲ. ಸತ್ಯದ ದೋಣಿ ಅಲುಗಾಡುತ್ತದೆ ವಿನಃ ಮುಳುಗುವುದಿಲ್ಲ ಎಂದು ಹೇಳುತ್ತಾರೆ. ಅಂದಾಗ ಎಷ್ಟು ಅಲುಗಾಡುತ್ತದೆ. ಬೇರೆ ಸತ್ಸಂಗದಲ್ಲಿ ಅಲುಗಾಡುವ ಮಾತೇ ಇಲ್ಲ. ಇಲ್ಲಾದರೆ ಮಾಯೆಯ ಜೊತೆ ಯುದ್ಧವಾಗುತ್ತದೆ. ಎಲ್ಲಿಯತನಕ ತಂದೆಯನ್ನು ತಿಳಿದುಕೊಂಡಿಲ್ಲವೋ ಅಲ್ಲಿಯವರೆಗು ಬರೆದುಕೊಡಿ ಆದರೆ ಗಿಣಿ ಹಾಗೆ ಆಗಿಲ್ಲತಾನೆ. ಕಾಡಿನ ಗಿಣಿ ಬಂದಿತ್ತು ಮತ್ತು ಹೋಗಿದೆ. ತಂದೆಯನ್ನು ತಿಳಿದುಕೊಳ್ಳಬೇಕು. ರೀತಿ ಪ್ರಜೆಗಳಾದರೆ ಬಹಳ ಇದ್ದಾರೆ, ಬಾಕಿ ರಾಜ್ಯಕ್ಕೋಸ್ಕರ ಯಾರೂ ನಿಂತಿಲ್ಲ. ದೀಪಕ್ಕೆ ಬಲಿಯಾಗುವುದರಲ್ಲಿ ಬಹಳ ಪರಿಶ್ರಮವಿದೆ.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್:

ಮಕ್ಕಳೇ ತಂದೆಯನ್ನು ನೆನಪು ಮಾಡಿ ಎಂದು ನೀವು ಮಕ್ಕಳಿಗೆ ತಂದೆಯ ಆದೇಶ ಸಿಕ್ಕಿದೆ. ಸಮಯವು ಸಿಗುವುದಿಲ್ಲವೆಂದು ಮಕ್ಕಳು ಹೇಳುತ್ತಾರೆ. ಈಗ ಸಮಯವು ಎಲ್ಲಿ ಹೋಗಿ ಬಿಡುತ್ತದೆ? ಅವಶ್ಯವಾಗಿ ಮಾಯೆಯು ನಿಮ್ಮ ಸಮಯವನ್ನು ತೆಗೆದುಕೊಂಡು ಬಿಡುತ್ತದೆ.

ಧಾರಣೆಗಾಗಿ ಮುಖ್ಯಸಾರ:

1. ಪರಸ್ಪರ ಬಹಳ ಪ್ರೀತಿಯಿಂದ ಇರಬೇಕು, ಎಲ್ಲರೂ ಸೇರಿ ಯಾವ ಯುಕ್ತಿಯಿಂದ ಪ್ರತಿಯೊಬ್ಬರಿಗೂ ತಂದೆಯ ಸಂದೇಶವನ್ನು ತಲುಪಿಸಬೇಕೆಂದು ಪ್ಲಾನ್ ಮಾಡಬೇಕು.

2. ಇದು ವಿನಾಶದ ಸಮಯವಾಗಿದೆ, ಆದ್ದರಿಂದ ಒಬ್ಬ ತಂದೆಯ ಮೇಲೆ ಸತ್ಯ ಪ್ರೀತಿಯನ್ನು ಇಟ್ಟುಕೊಳ್ಳಬೇಕು. ಯೋಗದಿಂದ ಆತ್ಮನನ್ನು ಪಾವನವನ್ನಾಗಿ ಮಾಡಿಕೊಳ್ಳಬೇಕು.

ವರದಾನ:

ಸ್ವರಾಜ್ಯದ ಜೊತೆ ಬೇಹದ್ದಿನ ವೈರಾಗ್ಯ ವೃತ್ತಿಯನ್ನು ಧಾರಣೆ ಮಾಡುವಂತಹ ಸತ್ಯ-ಸತ್ಯ ರಾಜಋಷಿ ಭವ
ಒಂದು ಕಡೆ ರಾಜ್ಯ ಮತ್ತು ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ದಿನ ವೈರಾಗಿ. ರೀತಿ ರಾಜಋಷಿಗೆ ಎಲ್ಲೂ ಸಹ- ಒಂದುವೇಳೆ ತಮ್ಮಲ್ಲಿ ಅಥವಾ ಒಂದು ವೇಳೆ ವ್ಯಕ್ತಿಯಲ್ಲಿ, ಇಲ್ಲಾ ಒಂದು ವೇಳೆ ವಸ್ತುವಿನಲ್ಲಿ..... ಸೆಳೆತ ಇರಲು ಸಾಧ್ಯವಿಲ್ಲ ಏಕೆಂದರೆ ಸ್ವರಾಜ್ಯವಿದ್ದಲ್ಲಿ ಮನಸ್ಸು-ಬುದ್ಧಿ-ಸಂಸ್ಕಾರ ಎಲ್ಲವೂ ತನ್ನ ವಶದಲ್ಲಿರುತ್ತದೆ ಮತ್ತು ವೈರಾಗ್ಯ ವಿದ್ದಲ್ಲಿ ಹಳೆಯ ಪ್ರಪಂಚದ ಕಡೆ ಸಂಕಲ್ಪ ಮಾತ್ರದಲ್ಲಿಯೂ ಸಹ ಸೆಳೆತ ಹೋಗಲು ಸಾದ್ಯವಿಲ್ಲ, ಆದ್ದರಿಂದ ಸ್ವಯಂ ಅನ್ನು ರಾಜಋಷಿ ಎಂದು ತಿಳಿಯುವುದು ಅರ್ಥಾತ್ ರಾಜನ ಜೊತೆ-ಜೊತೆ ಬೇಹದ್ದಿನ ವೈರಾಗಿಯಾಗುವುದು.

ಸ್ಲೋಗನ್:

ತಿಳುವಳಿಕಸ್ತರು ಯಾರಾಗಿದ್ದಾರೆಂದರೆ ಯಾರು ಎಲ್ಲಾ ಆಧಾರ ಕತ್ತರಿಸಿಹೊಗುವ ಮೊದಲು ಒಬ್ಬ ತಂದೆಯನ್ನು ತಮ್ಮ ಆಧಾರವನ್ನಾಗಿ ಮಾಡಿಕೊಳ್ಳುವರು.

 Download PDF

Hindi/Tamil/English/Telugu/Kannada/Malayalam/Ilangai Tamil/Sinhala

  

Post a Comment

0 Comments