Header Ads Widget

Header Ads

KANNADA MURLI 07.09.22

Hindi/Tamil/English/Telugu/Kannada/Malayalam/Ilangai Tamil/Sinhala

07/09/22  ಪ್ರಾತಃಮುರುಳಿ  ಓಂಶಾಂತಿ   ಬಾಪ್ದಾದಾ  ಮಧುಬನ

Listen to the Murli audio file



 

ಮಧುರ ಮಕ್ಕಳೇ- ನೀವು ತಂದೆಯ ಶಿಕ್ಷಣಗಳನ್ನು ಧಾರಣೆ ಮಾಡಿಕೊಂಡು ಗುಣವಂತ ಹೂವಾಗಬೇಕು, ನಿಮಗೆ ಜ್ಞಾನದ ಬೆಳಕು ಸಿಕ್ಕಿದೆ ಆದ್ದರಿಂದ ಸದಾ ಹರ್ಷಿತವಾಗಿರಬೇಕು

ಪ್ರಶ್ನೆ:

ನೀವು ಮಕ್ಕಳದು ಯಾವ ಗುಹ್ಯ ರಮಣೀಕವಾದ ಮಾತುಗಳಿವೆ, ಅದನ್ನು ಮನುಷ್ಯರು ಕೇಳಿಸಿಕೊಂಡು ತಬ್ಬಿಬ್ಬಾಗುತ್ತಾರೆ?

ಉತ್ತರ:

ನೀವು ಹೇಳುತ್ತೀರಿ- ಈಗ ನಾವು ಬ್ರಾಹ್ಮಣ ಕುಲಭೂಷಣ ಸ್ವದರ್ಶನ ಚಕ್ರಧಾರಿ ಆಗಿದ್ದೇವೆ. ನಾವು ಜ್ಞಾನದ ಶಂಖುಧ್ವನಿ ಮಾಡುವವರಾಗಿದ್ದೇವೆ. ನಾವು ತ್ರಿನೇತ್ರಿ, ತ್ರಿಕಾಲದರ್ಶಿ ಆಗಿದ್ದೇವೆ. ಈ ದೇವತೆಗಳಿಗೇನು ಅಲಂಕಾರವನ್ನು ಕೊಟ್ಟಿದ್ದಾರೆ, ಅದೆಲ್ಲವೂ ನಮ್ಮದಾಗಿದೆ. ಈ ಮಾತುಗಳನ್ನು ಕೇಳಿಸಿಕೊಂಡು ಮನುಷ್ಯರು ತಬ್ಬಿಬ್ಬಾಗುತ್ತಾರೆ. 2. ನೀವು ಹೇಳುತ್ತೀರಿ- ತಂದೆಯು ಮುಖದಿಂದ ಯಾವ ಜ್ಞಾನವನ್ನು ಕೊಡುತ್ತಾರೆಯೋ ಅದು ಶಂಖುಧ್ವನಿಯಾಗಿದೆ. ಇದರಿಂದ ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆ. ಇದನ್ನೇ ಮುರುಳಿ ಎಂದು ಹೇಳಲಾಗುತ್ತದೆ. ಕಟ್ಟಿಗೆಯ ಮುರುಳಿಯಲ್ಲ. ಇದೂ ಸಹ ಬಹಳ ಗುಹ್ಯ ರಮಣೀಕವಾದ ಮಾತುಗಳಾಗಿವೆ, ಇದನ್ನು ತಿಳಿಯುವುದರಲ್ಲಿ ಮನುಷ್ಯರಿಗೆ ಕಷ್ಟವೆನಿಸುತ್ತದೆ.

ಗೀತೆ:  ಇದೇ ವಸಂತ ಋತುವಾಗಿದೆ......

ಓಂ ಶಾಂತಿ. ಮಧುರಾತಿ ಮಧುರ ಈಶ್ವರನ ಸಂತಾನರು ತಿಳಿದಿದ್ದಾರೆ- ನಮಗಾಗಿ ಇದು ಅತಿಶ್ರೇಷ್ಠವಾದ ವಸಂತಋತು ಆಗಿದೆ. ವಸಂತಋತುವಿನಲ್ಲಿ ಹೂ ಮುಂತಾದವೆಲ್ಲವೂ ಅರಳಿಬಿಡುತ್ತದೆ. ಇದು ಬೇಹದ್ದಿನ ವಸಂತಋತುವಾಗಿದೆ. ನಿಮ್ಮ ಮೇಲೆ ಜ್ಞಾನದ ಮಳೆಯಾಗುತ್ತಿದೆ. ಅದರಿಂದ ಒಣಗಿರುವ ಮುಳ್ಳಿನಿಂದ ನೀವು ಹೂವಾಗಿಬಿಡುತ್ತೀರಿ. ಇದನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ, ನಂಬರ್ವಾರ್ ಪುರುಷಾರ್ಥದನುಸಾರ. ಕೆಲವರಂತು ಬಹಳ ಖುಷಿಯಲ್ಲಿರುತ್ತಾರೆ- ನಾವು ಈ ಜ್ಞಾನದ ಆಸ್ತಿಯಿಂದ ಮುಳ್ಳಿನಿಂದ ಹೂವಾಗುತ್ತೇವೆ. ಯಾವಾಗ ವೃಕ್ಷವು ಸಂಪೂರ್ಣವಾಗಿ ಒಣಗಿಬಿಡುತ್ತದೆಯೋ, ಆಗ ಒಂದುಎಲೆಯೂ ಇರುವುದಿಲ್ಲ. ಪ್ರತೀವರ್ಷವೂ ಇದೇ ರೀತಿಯಾಗುತ್ತದೆ ನಂತರ ಮಳೆಗಾಲದಲ್ಲಿ ಎಲೆಗಳೂ ಸುಂದರ, ಹೂವೂ ಸಹ ಬಹಳ ಸುಂದರವಾಗಿರುತ್ತದೆ. ಅಂದಮೇಲೆ ಈ ಜ್ಞಾನದ ಮಳೆಯ ವಸಂತಋತುವಿನಿಂದ ಹೂಗಳ ವೃಕ್ಷವಾಗುತ್ತೇನೆ. ನೀವು ಒಬ್ಬೊಬ್ಬರೂ ಚೈತನ್ಯ ವೃಕ್ಷವಾಗಿದ್ದೀರಲ್ಲವೆ. ಈಗ ನಿಮಗೆ ಜ್ಞಾನದ ಬೆಳಕು ಸಿಕ್ಕಿದೆ, ಇದರಿಂದ ನೀವು ಶ್ರೇಷ್ಠವಾದ ಪದವಿಯನ್ನು ಪಡೆಯುತ್ತೀರಿ. ನೀವು ಎಂತಹವರಿಂದ ಎಂತಹವರಾಗಿಬಿಡುತ್ತೀರಿ. ನೀವು ತಿಳಿದಿದ್ದೀರಿ- ಈಗ ನಾವು ಅಪವಿತ್ರರಿಂದ ಪವಿತ್ರರಾಗುತ್ತೇವೆ. ವಿಷ್ಣು ಸಹ ಯುಗಲ್ ರೂಪವಲ್ಲವೆ. ಸಾಕ್ಷಾತ್ಕಾರವು ಜೋಡಿ ರೂಪದಲ್ಲಾಗುತ್ತದೆ. ವಿಷ್ಣುವಿಗೆ 4 ಭುಜಗಳನ್ನು ತೋರಿಸುತ್ತಾರಲ್ಲವೆ. ಆದರೆ ಅವರಲ್ಲಿ ಜ್ಞಾನವಂತು ಏನೂ ಇಲ್ಲ. ತಂದೆಯು ತಿಳಿಸುತ್ತಾರೆ- ದೀಪಾವಳಿಯಾಗುತ್ತದೆ ಎಂದರೆ ಮಹಾಲಕ್ಷ್ಮಿಯು ಬರುತ್ತಾಳೆ. ನೀವು ಇಬ್ಬರನ್ನೂ ಕರೆಯುತ್ತೀರಿ. ಮುಂದೆ ಲಕ್ಷ್ಮೀ, ಹಿಂದೆ ನಾರಾಯಣನಿರುತ್ತಾನೆ. ಲಕ್ಷ್ಮಿಯ ಎರಡು ಭುಜದವರು, ಮಹಾಲಕ್ಷ್ಮಿಯು 4 ಭುಜಗಳಿರುವವರಾಗಿದ್ದಾರೆ. ಆದರೆ ಈ ಮಾತುಗಳನ್ನು ನೀವು ಈಗ ತಿಳಿಯುತ್ತೀರಿ, ಮುಂಚೆಯಂತು ಏನನ್ನೂ ತಿಳಿದುಕೊಂಡಿರಲಿಲ್ಲ. ಸಂಪೂರ್ಣವಾಗಿ ಮುಳ್ಳುಗಳಾಗಿದ್ದೆವು, ಈಗ ಹೂವಾಗುತ್ತಿದ್ದೇವೆ. ಗ್ರಂಥದಲ್ಲಿಯೂ ಹೇಳಲಾಗಿದೆ- ಮನುಷ್ಯರಿಂದ ದೇವತೆಗಳನ್ನು ಮಾಡಿದರು..... ದೇವತೆಗಳಿರುವುದು ಸತ್ಯಯುಗದಲ್ಲಿ. ಅವರು ದೈವೀಗುಣವಿರುವವರು. ಈ ಸಮಯದಲ್ಲಿನ ಮನುಷ್ಯರು ಆಸುರೀ ಗುಣವಿರುವವರಾಗಿದ್ದಾರೆ, ನೀವು ಈಶ್ವರನ ಗುಣವಿರುವವರು. ಈಶ್ವರನೇ ಕುಳಿತುಕೊಂದು ನಮ್ಮನ್ನು ಗುಣವಂತರನ್ನಾಗಿ ಮಾಡುತ್ತಾರೆ. ಬಾಬಾರವರ ಶಿಕ್ಷಣಗಳಿಂದ ನಾವು ಸರ್ವಗುಣ ಸಂಪೂರ್ಣ..... ಆಗುತ್ತೇವೆ. ಭಾರತದ ಮಹಿಮೆಯಿದೆ ಅರ್ಥಾತ್ ಭಾರತದಲ್ಲಿರುವವರ ಶ್ರೇಷ್ಠ ಮಹಿಮೆಯನ್ನು ಗಾಯನ ಮಾಡುತ್ತಾರೆ. ಆದರೆ ಅವರಿಗೆ ಇದು ಗೊತ್ತಿಲ್ಲ- ಅವರನ್ನು ಹೀಗೆ ಮಾಡಿರುವವರು ಯಾರಾಗಿದ್ದಾರೆ? ದೊಡ್ಡ-ದೊಡ್ಡ ಮಂದಿರಗಳನ್ನು ಕಟ್ಟುತ್ತಾರೆ ಆದರೆ ಅವರ ಕರ್ತವ್ಯವೇ ಗೊತ್ತಿಲ್ಲ. ನಿಮಗಂತು ಬಹಳ ಪ್ರಕಾಶತೆಯು ಸಿಕ್ಕಿದೆ. ನೀವು ಬಹಳ ಹರ್ಷಿತವಾಗಿರಬೇಕು. ಅಲ್ಲಿಯೂ 21 ಜನ್ಮಗಳಿಗಾಗಿ ಹರ್ಷಿತವಾಗಿರುತ್ತೀರಿ. ನೀವು ಸೂರ್ಯವಂಶಿ ಮನೆತನದ ಮಾಲೀಕರಾಗುತ್ತೀರಿ ಅಂದರೆ ಸ್ವರ್ಗದ ಮಾಲೀಕರಾಗುತ್ತೀರಿ. ಪಾವನ ಪ್ರಪಂಚದಲ್ಲಿಯೂ ಎಲ್ಲರಿಗೂ ಒಂದೇ ರೀತಿಯ ಪದವಿಯನ್ನಂತು ತೆಗೆದುಕೊಳ್ಳುವುದಿಲ್ಲ. ಕೇವಲ ಒಬ್ಬ ಲಕ್ಷ್ಮೀ-ನಾರಾಯಣರಂತು ರಾಜ್ಯಾಡಳಿತವನ್ನು ಮಾಡುವುದಿಲ್ಲ. ಇದೂ ಸಹ ಯಾರಿಗೂ ಗೊತ್ತಿಲ್ಲ, ಕೇವಲ ರಾಜಧಾನಿಯಾಗುತ್ತದೆ ಮತ್ತು ರಾಜ್ಯಡಳಿತವು ನಡೆಯುತ್ತದೆ. ಸೂರ್ಯವಂಶಿ, ಚಂದ್ರವಂಶಿಯಿದ್ದರು, ಶಿವತಂದೆಯು ಹೊಸ ಪ್ರಪಂಚದ ಸ್ಥಾಪನೆ ಮಾಡಿದ್ದಾರೆ. ಪ್ರಪಂಚದವರ ಬುದ್ಧಿಯಲ್ಲಂತು ಅಂಧಕಾರವಿದೆ. ನಿಮ್ಮ ಬಳಿಯಂತು ಪ್ರಕಾಶತೆ(ಜ್ಞಾನ)ಯಿದೆ. ಪತಿತ ಪ್ರಪಂಚ ಮತ್ತು ಪಾವನ ಪ್ರಪಂಚ ಇದೆ. ಪಾವನ ಪ್ರಪಂಚದಲ್ಲಿಯೂ ನಂಬರ್ವಾರ್ ಪದವಿಗಳಿರುತ್ತವೆ. ಪ್ರಜೆಗಳಲ್ಲಿಯೂ ಇರುತ್ತದೆ. ಅಲ್ಲಂತು ಎಲ್ಲರಿಗೂ ಸುಖವೇ ಸುಖವಿರುತ್ತದೆ. ಪ್ರತಿಯೊಬ್ಬರದೂ ತನ್ನ-ತನ್ನ ರಾಜಧಾನಿ, ಜವಾಬ್ದಾರಿ ಮುಂತಾದವಿರುತ್ತದೆ. ಪತಿತ ಪ್ರಪಂಚದಲ್ಲಿ ಎಲ್ಲರೂ ಪತಿತರಿದ್ದಾರೆ ಆದರೆ ಅದರಲ್ಲಿಯೂ ನಂಬರ್ವಾರ್ ಇದ್ದಾರೆ. ಹೇಗೆ ಸತ್ಯಯುಗದಲ್ಲಿ ಸರ್ವಶ್ರೇಷ್ಠವಾದ ರಾಜಧಾನಿಯು ಲಕ್ಷ್ಮೀ-ನಾರಾಯಣನದಾಗಿರುತ್ತದೆ. ರಾಧೆ-ಕೃಷ್ಣ ರಾಜಕುಮಾರ-ರಾಜಕುಮಾರಿಯ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣನಾಗುತ್ತಾರೆ. ಲಕ್ಷ್ಮೀ-ನಾರಾಯಣನ ರಾಜಧಾನಿ ಎಂದು ಹೇಳಲಾಗುತ್ತದೆ. ರಾಧೆ-ಕೃಷ್ಣನ ರಾಜಧಾನಿ ಎಂದು ಹೇಳುವುದಿಲ್ಲ. ರಾಜರುಗಳ ಹೆಸರುಗಳನ್ನು ತೆಗೆದುಕೊಳ್ಳಲಾಗುತ್ತದೆ. ಇಷ್ಟು ಸ್ವಲ್ಪ ಮಾತನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನೀವೆಲ್ಲರೂ ತಿಳಿದಿದ್ದೀರಿ, ಅದೂ ಸಹ ನಂಬರ್ವಾರ್. ರಾಜಧಾನಿಯಲ್ಲಂತು ನಂಬರ್ವಾರ್ ಪದವಿಗಳಿರುತ್ತವೆಯಲ್ಲವೆ. ಎಲ್ಲಿ ಸೂರ್ಯವಂಶಿಯ ರಾಜನು ಮತ್ತು ಪ್ರಜೆಗಳಲ್ಲಿಯೂ ಚಂಡಾಲ ಮುಂತಾದವರಾಗುತ್ತಾರೆ ಅವರೆಲ್ಲಿ! ಪತಿತ ಪ್ರಪಂಚದಲ್ಲಿಯೂ ನಂಬರ್ವಾರ್ ಆಗುತ್ತದೆ.

ಈಗ ತಂದೆಯು ನಿಮಗೆ ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಿದ್ದಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ಶ್ರೀಮತದಂತೆ ನಡೆಯಿರಿ. ಬಹಳ ಮಕ್ಕಳಿದ್ದಾರೆ, ಅವರು ತಂದೆಯನ್ನು ಎಂದೂ ನೋಡಿಯೇ ಇಲ್ಲ. ಪರಸ್ಪರದಲ್ಲಿ ಬಹಳ ಒಳ್ಳೆಯ ಸರ್ವೀಸನ್ನು ಮಾಡುತ್ತಿದಾರೆ. ತಂದೆಯ ಪರಿಚಯವನ್ನು ಕೊಡುತ್ತಿರುತ್ತಾರೆ. ಬ್ರಾಹ್ಮಣಿಯನ್ನು ನಿಮಿತ್ತ ಮಾಡದಿದ್ದರೂ ಸಹ ಸೇವಾಕೇಂದ್ರವನ್ನು ನಡೆಸುತ್ತಿದ್ದಾರೆ. ಸನ್ಮುಖದ ಮಿಲನವಾಗಿಲ್ಲ ಆದರೂ ಸರ್ವೀಸನ್ನು ಮಾಡುತಾ, ತಮ್ಮ ಸಮಾನರನ್ನಾಗಿ ಮಾಡುತ್ತಿದ್ದಾರೆ. ಸನ್ಮುಖದಲ್ಲಿರುವವರು ಇಷ್ಟೂ ಸರ್ವೀಸನ್ನು ಮಾಡುವುದಿಲ್ಲ. ಆತ್ಮಿಕ ಯಾತ್ರೆಯನ್ನು ಕಲಿಸಬೇಕಲ್ಲವೆ. ನೀವು ಆತ್ಮಿಕ ಮಾರ್ಗದರ್ಶಿಗಳು. ನೀವೂ ಸಹ ಮಾರ್ಗವನ್ನು ತಿಳಿಸುತ್ತೀರಿ- ಹೇ ಆತ್ಮರೇ ತಂದೆಯನ್ನು ನೆನಪು ಮಾಡಿರಿ. ಹೇಳುತ್ತಾರಲ್ಲವೆ- ಆತ್ಮರು ಪರಮಾತ್ಮನು ಬಹಳ ಕಾಲ ಅಗಲಿದ್ದರು..... ಅದರದೂ ಲೆಕ್ಕವಿದೆಯಲ್ಲವೆ. ಬಹಳ ಕಾಲವನ್ನೂ ಸಿದ್ಧ ಮಾಡಿ ತಿಳಿಸುತ್ತೀರಲ್ಲವೆ. ನೀವೇ ಎಲ್ಲರಿಗಿಂತಲೂ ಹೆಚ್ಚು ಬಹಳ ಕಾಲದಿಂದ ಅಗಲಿದ್ದವರಾಗಿದ್ದೀರಿ. ಸೂರ್ಯವಂಶಿ, ಚಂದ್ರವಂಶಿ ಮನೆತನದವರಾಗಿದ್ದಿರಿ ನಂತರ ಪುನರ್ಜನ್ಮದ ಚಕ್ರದಲ್ಲಿ ಬರುತ್ತಾ 84 ಜನ್ಮಗಳಾಯಿತು. ಅದೂ ಎಲ್ಲರದೂ 84 ಜನ್ಮಗಳಾಗಲು ಸಾಧ್ಯವಿಲ್ಲ. ಈ ಜ್ಞಾನದ ರಿಮ್ಜಿಮ್ನಲ್ಲಿ ನೀವು ಮಕ್ಕಳಿರುತ್ತೀರಿ. ಇದು ನಿಮ್ಮದು ವಿದ್ಯಾರ್ಥಿ ಜೀವನವಾಗಿದೆ. ಯಾರೇ ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡುತ್ತಿದ್ದರೂ, ಮತ್ತೊಂದು ಕೋರ್ಸ್ನ್ನು ಮಾಡುತ್ತಾರೆ. ಇಲ್ಲಂತು ಕೇವಲ ಪವಿತ್ರತೆಯ ಮಾತಾಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ ಮತ್ತು ಓದಬೇಕಾಗಿದೆ. ಅವಶ್ಯವಾಗಿ ಪವಿತ್ರರಾಗಿರಬೇಕಾಗುತ್ತದೆ. ಹೇಳುತ್ತಾರೆ- ಹುಲಿಯ ಹಾಲನ್ನು ಚಿನ್ನದ ಪಾತ್ರೆಯಲ್ಲಿಯೇ ನಿಲ್ಲುತ್ತದೆ. ತಂದೆಯೂ ಸಹ ಹೇಳುತ್ತಾರೆ- ಪವಿತ್ರತೆಯಿಲ್ಲದೆ ಧಾರಣೆಯಾಗಲು ಸಾಧ್ಯವಿಲ್ಲ ಆದ್ದರಿಂದ ಈ ಕಾಮ ಮಹಾಶತ್ರುವಿನ ಮೇಲೆ ವಿಜಯಿಗಳಾಗಿರಿ ಎಂದು ತಂದೆಯು ಹೇಳುತ್ತಾರೆ. ನೀವು ಪವಿತ್ರರಾಗಿರಿ. ನನ್ನನ್ನು ಗುರುತಿಸುತ್ತೀರೆಂದರೆ, ನಾನು ನಿಮ್ಮ ಬುದ್ಧಿಯ ಬೀಗವನ್ನು ತೆರೆಯುತ್ತೇನೆ. ಎಲ್ಲಿಯವರೆಗೆ ಪವಿತ್ರ ಬ್ರಾಹ್ಮಣ ಕುಲಭೂಷಣರಾಗುವುದಿಲ್ಲವೋ, ಅಲ್ಲಿಯವರೆಗೆ ಧಾರಣೆಯೂ ಆಗುವುದಿಲ್ಲ.

ನೀವು ಬ್ರಾಹ್ಮಣರು ಕುಲಭೂಷಣ ಸ್ವದರ್ಶನ ಚಕ್ರಧಾರಿಯಾಗಿದ್ದೀರಿ, ಇದನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಮನುಷ್ಯರು ತಿಳಿಯುತ್ತಾರೆ- ಸ್ವದರ್ಶನ ಚಕ್ರಧಾರಿಗಳೆಂದರೆ ದೇವತೆಗಳಾಗಿದ್ದಾರೆ, ಮತ್ತೆ ಇವರು ಯಾರು, ನಾವು ಬ್ರಾಹ್ಮಣ ಕುಲಭೂಷಣ ಸ್ವದರ್ಶನ ಚಕ್ರಧಾರಿಗಳೆಂದು ಹೇಳುತ್ತಾರೆ! ಈ ಮಾತುಗಳನ್ನು ನೀವು ಮಕ್ಕಳೇ ತಿಳಿಯುತ್ತೀರಿ. ಇದು ಬಹಳ ಗುಹ್ಯ ರಮಣೀಕವಾದ ಮಾತುಗಳಾಗಿವೆ. ಜ್ಞಾನದ ಶಂಖುಧ್ವನಿಯನ್ನು ನೀವು ಮಾಡುತ್ತೀರಿ. ದೇವತೆಗಳಂತು ಮಾಡುವುದಿಲ್ಲ. ಅವರಂತು ಶಿವತಂದೆಯ ಶಂಖುಧ್ವನಿಯನ್ನು ಕೇಳಿ ದೇವತೆಗಳಾಗುತ್ತಾರೆ. ಶಿವತಂದೆಯಂತು ಜ್ಞಾನಸಾಗರನಾಗಿದ್ದಾರೆ. ಆದರೆ ಅವರಿಗೆ ಹೇಗೆ ಶಂಖುವನ್ನು ಕೊಡುವುದು. ಜ್ಞಾನವಂತು ಅವಶ್ಯವಾಗಿ ಯಾರದಾದರೂ ಮುಖದಿಂದ ಕೊಡುತ್ತಾರಲ್ಲವೆ. ಅದಕ್ಕೇ ಮುರುಳಿ ಎಂದು ಹೇಳಲಾಗುತ್ತದೆ. ಬಾಕಿ ಯಾವುದೇ ಕಟ್ಟಿಗೆ ಕೊಳಲಲ್ಲ. ಖಂಡಿತವಾಗಿಯೂ ಜ್ಞಾನದ ಮುರುಳಿಯನ್ನು ನುಡಿಸಲಾಗುತ್ತಿದೆ. ಮನುಷ್ಯರಂತು ತಿಳಿಯುತ್ತಾರೆ- ಈ ಪೂಜೆ, ಭಕ್ತಿ ಮುಂತಾದವೆಲ್ಲವೂ ಪರಂಪರೆಯಿಂದ ನಡೆಯುತ್ತಾ ಬಂದಿದೆ. ಆದರೆ ಪರಂಪರೆಯಿಂದ ಯಾವುದೇ ವಸ್ತುವೂ ನಡೆದುಬರಲು ಸಾಧ್ಯವಿಲ್ಲ. ಹೇಳುತ್ತಾರೆ- ಈ ರಕ್ಷಾಬಂಧನ ಮುಂತಾದವೆಲ್ಲವೂ ಪರಂಪರೆಯಿಂದ ನಡೆಯುತ್ತಾ ಬರುತ್ತಿದೆ. ಒಳ್ಳೆಯದು- ಪರಂಪರೆಯಿಂದ ಎಂದರೆ ಯಾವಾಗಿನಿಂದ? ಇದನ್ನು ತಿಳಿಸಿರಿ. ಪರಮಾತ್ಮನು ಈ ಪತಿತ ಪ್ರಪಂಚವನ್ನು ರಚಿಸಿದನೇ? ಹಾಗಾದರೆ ಅವರನ್ನೇಕೆ ಪತಿತ-ಪಾವನನೆಂದು ಹೇಳುತ್ತೀರಿ. ಓದಿಸಿರುವ ಮಾತುಗಳು ಪ್ರತಿನಿತ್ಯವೂ ಬುದ್ಧಿಯಲ್ಲಿ ಬರಬೇಕಾಗಿದೆ. ಮುಖವನ್ನು ತೆರೆಯುವ ಅಭ್ಯಾಸವನ್ನು ಮಾಡಿಕೊಳ್ಳಬೇಕಾಗಿದೆ. ನೀವಂತು ಅನ್ಯರಿಗೂ ತಿಳಿಸಬಲ್ಲಿರಿ. ತಮ್ಮ ಉನ್ನತಿಗಾಗಿ ಪ್ರಬಂಧವನ್ನು ರಚಿಸಬೇಕಾಗಿದೆ. ಹೇಗೆ ತಂದೆಯು ಎಲ್ಲರಿಗೂ ಮಾರ್ಗವನ್ನು ತಿಳಿಸುತ್ತಾರೆ, ನಾವು ಮತ್ತೆ ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ, ಆಗಲೇ ತಂದೆಯಿಂದ ಆಸ್ತಿಯನ್ನು ಪಡೆಯಬಹುದು. ಬಾಕಿ ಗಲಾಟೆಯನ್ನು ಎಬ್ಬಿಸುವುದರಿಂದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಗೆ ಬಹಳ ಕರುಣೆ ಬರುತ್ತದೆ, ಎಷ್ಟೊಂದು ತಿಳಿಸುತ್ತಾರೆ ಆದರೆ ಅದೃಷ್ಟದಲ್ಲಿ ಇಲ್ಲ. ಎಷ್ಟೊಂದು ರತ್ನಗಳು ಸಿಗುತ್ತವೆ, ರತ್ನಗಳದೂ ಬಹಳ ವಿಸ್ತಾರವಿರುತ್ತದೆಯಲ್ಲವೆ. ರತ್ನಗಳಲ್ಲಿಯೂ ಬಹಳ ವ್ಯತ್ಯಾಸವಾಗುತ್ತದೆ. ಕೆಲವುದರ ಬೆಲೆಯು ಲಕ್ಷಾಂತರ ರೂಪಾಯಿಗಳಾದರೆ, ಇನ್ನೂ ಕೆಲವುದರ ಬೆಲೆಯು ಒಂದು ರೂಪಾಯಿಯಾಗಿರುತ್ತದೆ. ಇದೂ ಸಹ ಅವಿನಾಶಿ ಜ್ಞಾನರತ್ನಗಳಾಗಿವೆ, ಅದನ್ನು ಧಾರಣೆ ಮಾಡಿಕೊಂಡು ಅನ್ಯರಿಗೆ ಮಾಡಿಸುತ್ತೀರೆಂದರೆ, ಎಷ್ಟೊಂದು ಶ್ರೇಷ್ಠವಾದ ಪದವಿಯನ್ನು ಪಡೆಯುತ್ತೀರಿ. ಮಕ್ಕಳ ಮುಖದಿಂದ ಸದಾ ಜ್ಞಾನರತ್ನಗಳೇ ಬರುತ್ತಿರಬೇಕು. ಬುದ್ಧಿಯು ತಿಳಿದುಕೊಳ್ಳುತ್ತದೆ ಆದರೆ ಮುಖದಿಂದ ಹೇಳುವುದಿಲ್ಲವೆಂದರೆ, ಅದರ ಬೆಲೆಯೇನಾಗುತ್ತದೆ. ಯಾರು ಪರಿಶ್ರಮಪಡುತ್ತಾರೆ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತಾರೆ, ಅದರ ಫಲವೂ ಬಹಳಷ್ಟು ಸಿಗುತ್ತದೆ. ಈ ಸರ್ವೀಸ್ ಮಾಡುವುದು ಮತ್ತು ಅನ್ಯರಿಗೆ ಕಲಿಸಿಕೊಡುವುದೂ ಸಹ ಕಡಿಮೆ ಸರ್ವೀಸೇನು? ನಿಮ್ಮ ಬುದ್ಧಿಯಲ್ಲೀಗ ಪ್ರಕಾಶತೆಯು ಬಂದುಬಿಟ್ಟಿದೆ. ಎಲ್ಲರಿಗಿಂತಲೂ ಹೆಚ್ಚು ಸಾಹುಕಾರರು ಯಾರಾಗಿದ್ದಾರೆ? ಅಂದರೆ 10-12 ಹೆಸರುಗಳನ್ನು ತೆಗೆದುಕೊಂಡುಬಿಡುತ್ತಾರೆ. ನೀವೂ ಸಹ ತಿಳಿದಿದ್ದೀರಿ- ಈ ಡ್ರಾಮಾದಲ್ಲಿ ಮುಖ್ಯ-ಮುಖ್ಯವಾಗಿರುವವರು ಯಾರಾಗಿದ್ದಾರೆ. ಪರಮಪಿತ ಪರಮಾತ್ಮನು ಶಿವ ರಚೈತ, ನಿರ್ದೇಶಕ, ಪ್ರಾಂಶುಪಾಲ ಪಾತ್ರಧಾರಿಯಾಗಿದ್ದಾರೆ. ಸರ್ವಶ್ರೇಷ್ಠನು ಶಿವತಂದೆಯಾಗಿದ್ದಾರೆ ನಂತರ ಸೂಕ್ಷ್ಮವತನ, ಸ್ಥೂಲವತನವಾಸಿಗಳು. ಇದೆಲ್ಲಾ ಮಾತುಗಳನ್ನು ನೀವೀಗ ತಿಳಿದುಕೊಂಡಿದ್ದೀರಿ. ಕಲ್ಪದ ಆಯಸ್ಸು ಲಕ್ಷಾಂತರವ ವರ್ಷಗಳಾಗುವುದಿಲ್ಲ. ಕಲ್ಪದ ಆಯಸ್ಸೇ 5 ಸಾವಿರ ವರ್ಷಗಳಾಗಿದೆ. ಮನುಷ್ಯ ಮಾತ್ರರಂತು ಎಷ್ಟೊಂದು ಘೋರ ಅಂಧಕಾರದಲ್ಲಿದ್ದಾರೆ. ನೀವೆಲ್ಲರೂ ಈಗ ಅಜ್ಞಾನ ಅಂಧಕಾರದಿಂದ ಹೊರಬಂದು ಎಷ್ಟೊಂದು ಪ್ರಕಾಶತೆಯಲ್ಲಿ ಬಂದುಬಿಟ್ಟಿದ್ದೀರಿ. ಕೆಲವರಂತು ಪ್ರಕಾಶತೆಯಲ್ಲಿ ಬಂದಿದ್ದಾರೆ, ಕೆಲವರು ಮತ್ತೆ ಅಂಧಕಾರದಲ್ಲಿಯೇ ಬಿದ್ದಿದ್ದಾರೆ. ಇದರಲ್ಲಿ ಇರುವುದೆಲ್ಲವೂ ಬುದ್ಧಿಯ ಮಾತಾಗಿದೆ. ಕೆಲವರಂತು ವಿಶಾಲಬುದ್ಧಿಯವರು ತಕ್ಷಣವೇ ತಿಳಿದುಕೊಂಡುಬಿಡುತ್ತಾರೆ. ಆತ್ಮವಂತು ಇರುವುದೇ ನಕ್ಷತ್ರದಂತೆ. ಭೃಕುಟಿಯ ಮಧ್ಯದಲ್ಲಿ ದೊಡ್ಡ ವಸ್ತುವು ನಿಲ್ಲಲು ಸಾಧ್ಯವಿಲ್ಲ. ಅವಶ್ಯವಾಗಿ ಇಂತಹ ವಸ್ತುವಾಗಿದೆ- ಅದನ್ನು ಈ ಕಣ್ಣುಗಳಿಂದ ನೋಡುವುದಕ್ಕಾಗುವುದಿಲ್ಲ. ದೊಡ್ಡ ವಸ್ತುವಾಗಿದ್ದರೆ ಕಾಣಿಸಲಿ. ಆತ್ಮವಂತು ಅತಿಸೂಕ್ಷ್ಮವಾಗಿದೆ, ಬಿಂದುವಿನಂತಿದೆ. ಇದು ಅತಿಗುಹ್ಯವಾದ ಮಾತಾಗಿದೆ. ಪ್ರಾರಂಭದಲ್ಲಿ ಅಖಂಡ ಜ್ಯೋತಿ ತತ್ವವೆಂದು ಹೇಳುತ್ತಿದ್ದರು. ಪ್ರಾರಂಭದಲ್ಲಿ ನಕ್ಷತ್ರವೆಂದು ಹೇಳಿದಾಗ ಅರ್ಥವಾಗಲು ಸಾಧ್ಯವಿಲ್ಲ. ಸಂಪೂರ್ಣ ಜ್ಞಾನವನ್ನು ಒಂದೇ ದಿನದಲ್ಲಿ ಕೊಡಲಾಗುತ್ತದೆಯೇನು! ದಿನಕಳೆದಂತೆ ಗುಹ್ಯವಾದ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಜ್ಞಾನಸಾಗರನಿಂದ ಅಪಾರ ಹಣವು ಸಿಗುತ್ತದೆ. ಎಲ್ಲಿಯವರೆಗೆ ಬದುಕಿರುತ್ತೇವೆ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ನೀರಿನ ಮಾತಲ್ಲ. ಜ್ಞಾನಸಾಗರನಿಂದ ಜ್ಞಾನಗಂಗೆಯರು ಹೊರಬರುತ್ತಾರೆ. ಅದಂತು ನೀರಿನ ಸಾಗರವಾಗಿದೆ, ಹೇಳುತ್ತಾರೆ- ಗಂಗೆಯು ಅನಾದಿಯಾಗಿದೆ. ಈ ಸ್ನಾನ ಮುಂತಾದವು ನಡೆಯುತ್ತಾ ಬಂದಿದೆ. ನೀವು ನೋಡುತ್ತಿದ್ದಿರಿ- ಮಕ್ಕಳು ಧ್ಯಾನದಲ್ಲಿ ಹೋಗುತ್ತಿದ್ದರು, ಆಗ ಗಂಗಾ-ಜಮುನಾ ನದಿಯಲ್ಲಿ ಹೋಗಿ ರಾಸವಿಲಾಸವನ್ನು ಮಾಡುತ್ತಿದ್ದರು. ಇಲ್ಲಂತು ಎಲ್ಲಿಯೂ ಮುಳುಗಿಬಿಡಬಾರದು ಎಂದು ಭಯವೆನಿಸುತ್ತದೆ. ಅಲ್ಲಂತು ಮುಳುಗುವ ಮುಂತಾದ ಯಾವುದೇ ಮಾತಿರುವುದಿಲ್ಲ. ಎಂದಿಗೂ ಅಪಘಾತಗಳೂ ಆಗಲು ಸಾಧ್ಯವಿಲ್ಲ. ಅಂದಮೇಲೆ ಇದೇ ವಸಂತಋತುವಾಗಿದೆ, ಯಾವಾಗ ನೀವು ಕವಡೆಯಿಂದ ವಜ್ರ ಅಥವ ಪತಿತರಿಂದ ಪಾವನರಾಗುತ್ತೀರಿ. ಪಾವನಪ್ರಪಂಚವಾಗುತ್ತದೆ ಎಂದರೆ ಅವಶ್ಯವಾಗಿ ಪತಿತಪ್ರಪಂಚದ ವಿನಾಶವಾಗುತ್ತದೆ. ಮಹಾಭಾರತದಲ್ಲಂತು ಸಂಪೂರ್ಣವಾಗಿ ತೋರಿಸಿಲ್ಲ. ತೋರಿಸುತ್ತಾರೆ- ಪಾಂಡವರು ಬೆಟ್ಟಗಳ ಮೇಲೆ ಹೋಗಿ ಕರಗಿಹೋದರು, ಜೊತೆಯಲ್ಲಿ ನಾಯಿಯನ್ನೂ ಕರೆದುಕೊಂಡು ಹೋದರು. ಏಕೆ ಪಾಂಡವರು ನಾಯಿಯನ್ನೂ ಪಾಲನೆ ಮಾಡುತ್ತಿದ್ದರೇ? ನೀವಂತು ನಾಯಿಯನ್ನು ಪಾಲನೆ ಮಾಡುವುದಿಲ್ಲ. ನಾಯಿಯ ಮಾನ್ಯತೆಯನ್ನೂ ಎಷ್ಟೊಂದಿಟ್ಟಿದ್ದಾರೆ. ಬಹಳ ಜನರು ನಾಯಿಯನ್ನೂ ಸಾಕುತ್ತಾರೆ.

ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ- ನೀವು ಮಕ್ಕಳು ಬಹಳ ಹರ್ಷಿತವಾಗಿರಬೇಕು. ನಿಮ್ಮ ಮೇಲೆ ನಿತ್ಯವೂ ಜ್ಞಾನದ ಮಳೆಯಾಗುತ್ತಿದೆ. ನೀವು ತಿಳಿದಿದ್ದೀರಿ- ಬಾಬಾರವರು ಹೇಗೆ ಬರುತ್ತಾರೆ ಎಂದು. ಜ್ಞಾನದ ಮಳೆಯನ್ನು ಸುರಿಸುತ್ತಾರೆ ಮತ್ತು ಭಾರತದಲ್ಲಿಯೇ ಬರುತ್ತಾರೆ ಆದ್ದರಿಂದ ಭಾರತದ್ದು ಬಹಳ ಮಹಿಮೆಯಿದೆ. ಭಾರತವೇ ಅವಿನಾಶಿ ಖಂಡವಾಗಿದೆ. ಭಾರತವೇ ಅವಿನಾಶಿ ತಂದೆಯ ಜನ್ಮಸ್ಥಾನವಾಗಿದೆ, ಆ ಶಿವತಂದೆಯೇ ಎಲ್ಲರನ್ನೂ ಪಾವನರನ್ನಾಗಿ ಮಾಡುವವರಾಗಿದ್ದಾರೆ ಮತ್ತ್ಯಾರೂ ತಿಳಿದುಕೊಂಡಿಲ್ಲ. ಪರಮಾತ್ಮನು ನಾಮ-ರೂಪದಿಂದ ಭಿನ್ನವಾಗಿದ್ದಾರೆ, ಸರ್ವವ್ಯಾಪಿಯಾಗಿದ್ದಾರೆ ಎಂದು ಅವರು ಹೇಳಿಬಿಡುತ್ತಾರೆ. ಎಷ್ಟೊಂದು ಮಾತುಗಳನ್ನು ಹೇಳಿಬಿಟ್ಟಿದ್ದಾರೆ. ತಂದೆಯು ಹೇಳುತ್ತಾರೆ- ನಾನು ಬರುತ್ತೇನೆ, ನಾನು ಬ್ರಾಹ್ಮಣರನ್ನು ಅವಶ್ಯವಾಗಿ ರಚಿಸಬೇಕು. ಹೇಳುವುದೂ ಸಹ- ನಾವು ಬ್ರಹ್ಮಾರವರ ಮಕ್ಕಳಾಗಿದ್ದೇವೆ, ಆದ್ದರಿಂದಲೇ ಬ್ರಾಹ್ಮಣರೆಂದು ಕರೆಸಿಕೊಳ್ಳಲಾಗುತ್ತದೆ. ಆದರೆ ಈ ಮಾತುಗಳನ್ನು ಮರೆತುಬಿಟ್ಟಿದ್ದಾರೆ. ಶಿವತಂದೆಯು ಬಂದು ಏನು ಮಾಡಿದರು! ಬ್ರಹ್ಮಾ ಮುಖವಂಶಾವಳಿಯನ್ನಾಗಿ ಹೇಗೆ ಮಾಡಿದರು! ಇದನ್ನೀಗ ನೀವು ತಿಳಿದಿದ್ದೀರಿ- ಶಿವತಂದೆಯು ಬಂದಿದ್ದಾರೆ, ಅವರು ರಚೈತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚವನ್ನೇ ರಚಿಸಿರಬೇಕು. ಇದು ಯಾರಿಗೂ ಗೊತ್ತಿಲ್ಲ. ತಿಳಿಯದೇ ಇರುವ ಕಾರಣದಿಂದ ಗ್ಲಾನಿಯನ್ನು ಮಾಡುತ್ತಿರುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ- ಯದಾ ಯದಾಹೀ ಧರ್ಮಸ್ಯ..... ಇದನ್ನು ಯಾರು ಹೇಳಿದರು? ಕೃಷ್ಣನಂತು ಹೇಳಲಿಲ್ಲ. ಕೃಷ್ಣನ ಆತ್ಮನಿಗೂ ಸಹ ಈಗ ಗೊತ್ತಾಗಿದೆ- ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ನೀವು ಯಾರು ಮೊದಲು ಉತ್ತೀರ್ಣರಾಗಿ ವರ್ಗಾವಣೆ ಆಗುತ್ತೀರಿ, ಅವರೇ ಮೊದಲ ಜನ್ಮವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಬುದ್ಧಿಯಲ್ಲಿ ಎಷ್ಟೊಂದು ಪ್ರಕಾಶತೆಯಿದೆ. ಆಪರೇಷನ್ ಮಾಡುತ್ತಾರೆಂದರೆ, ಒಂದು ಕಣ್ಣನ್ನು ತೆಗೆದು ಇನ್ನೊಂದನ್ನು ಇಡುತ್ತಾರೆ, ಅದರಿಂದ ಕಣ್ಣು ಕಾಣಿಸುತ್ತದೆ. ಕೆಲವರದು ಡಿಫೆಕ್ಟ್ ಉಳಿದುಕೊಳ್ಳುತ್ತದೆ. ನೀವು ಆತ್ಮರಿಗೆ ಜ್ಞಾನದ ಚಕ್ಷುವೇ ಸಮಾಪ್ತಿಯಾಗಿಬಿಟ್ಟಿದೆ, ಅದನ್ನು ಕೊಡುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ನಿಮ್ಮ ಜ್ಞಾನದ ಚಕ್ಷುವೀಗ ತೆರೆಯುತ್ತಿದೆ. ಮೂರನೆಯೇ ನೇತ್ರವು ಜ್ಞಾನದ್ದಾಗಿದೆ. ಈಗ ಆ ಮೂರನೇ ನೇತ್ರವನ್ನು ದೇವತೆಗಳಿಗೆ ಕೊಟ್ಟುಬಿಟ್ಟಿದ್ದಾರೆ. ಅಲಂಕಾರ ಚಕ್ರ ಮುಂತಾದವರೂ ಸಹ ವಿಷ್ಣುವಿಗೆ ಕೊಟ್ಟಿದ್ದಾರೆ. ವಾಸ್ತವದಲ್ಲಿ ಮೂರನೇ ನೇತ್ರವು ನೀವು ಬ್ರಾಹ್ಮಣರದಾಗಿದೆ. ನೀವೇ ಸರ್ವೋತ್ತಮ ಬ್ರಾಹ್ಮಣ ಕುಲಭೂಷಣರು. ದೈವೀಕುಲ ಮತ್ತು ಆಸುರಿಕುಲವಿದೆ. ವರ್ಣವೆಂದಾದರೂ ಹೇಳಿರಿ, ಕುಲವೆಂದಾದರೂ ಹೇಳಿರಿ, ಮಾತಂತು ಒಂದೇ ಆಗಿದೆ, ಜ್ಞಾನವು ಒಂದೇ ಆಗಿದೆ. ಎಷ್ಟೊಂದು ಒಳ್ಳೆಯ ಮಾತುಗಳಾಗಿವೆ, ಇದು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ನೀವೀಗ ತ್ರಿಕಾಲದರ್ಶಿ, ತ್ರಿನೇತ್ರಿ, ಸ್ವದರ್ಶನ ಚಕ್ರಧಾರಿಯಾಗಿದ್ದೀರಿ. ಕಮಲಪುಷ್ಪ ಸಮಾನ ಪವಿತ್ರರಾಗಿರುವ ಪುರುಷಾರ್ಥವನ್ನು ಮಾಡುವವರಾಗಿದ್ದೀರಿ. ನೀವು ತಿಳಿದಿದ್ದೀರಿ- ಕೆಲವರ ಕಣ್ಣು ಬಹಳ ಚೆನ್ನಾಗಿ ತೆರೆದಿದೆ, ಕೆಲವರದು ತೆರೆಯುತ್ತಿದೆ. ಕೊನೆಗೆ 100% ತೆರೆದುಬಿಡುತ್ತದೆ. ಮುಖದಿಂದ ಜ್ಞಾನರತ್ನಗಳು ಬರುತ್ತಿದ್ದರೆ ರೂಪಭಸಂತರೆಂದು ಕರೆಸಿಕೊಳ್ಳುತ್ತೀರಿ. ಈಗ ನೀವು ಪರಿಶ್ರಮಪಡಬೇಕು. ಪುರುಷಾರ್ಥವನ್ನು ಮಾಡಬೇಕಾಗಿದೆ, ಎಷ್ಟು ಸಾಧ್ಯವೋ ಅಷ್ಟು ಜ್ಞಾನದಲ್ಲಿ ಬಹಳ ಹರ್ಷಿತಮುಖ, ಗಂಭೀರ, ವಿಶಾಲಬುದ್ಧಿಯವರಾಗಿದ್ದು ಸುಖದ ಅನುಭೂತಿಯನ್ನು ಮಾಡುತ್ತಿರಬೆಕಾಗಿದೆ. ಸ್ವರ್ಗದ ಆಸ್ತಿಯು ಸಿಗುತ್ತಿದೆ ಅಂದಮೇಲೆ ಮತ್ತೇನು ಬೇಕು! ಎಷ್ಟೊಂದು ಖುಷಿಯಾಗಬೇಕು! ಒಳ್ಳೆಯದು.

ಮಧುರಾತಿ ಮಧುರ ಅಗಲಿಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸದಾ ಜ್ಞಾನದ ರಿಮ್ಜಿಮ್ನಲ್ಲಿರಬೇಕು. ಆತ್ಮಿಕ ಮಾರ್ಗದರ್ಶಿಯಾಗಿದ್ದು ಎಲ್ಲರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಮುಖದಿಂದ ಜ್ಞಾನರತ್ನಗಳೇ ಬರುತ್ತಿರಬೇಕು.

2. ಜ್ಞಾನದ ಮನನ ಮಾಡುತ್ತಾ ಸದಾ ಹರ್ಷಿತಮುಖ, ಗಂಭೀರ ಮತ್ತು ವಿಶಾಲಬುದ್ಧಿಯವರಾಗಿರುತ್ತ, ಸುಖದ ಅನುಭವವನ್ನು ಮಾಡಬೇಕು ಮತ್ತು ಅನ್ಯರಿಗೆ ಮಾಡಿಸಬೇಕಾಗಿದೆ.

ವರದಾನ:

ಹಣ ಸಂಪಾದನೆ ಮಾಡುತ್ತಾ ಅಥವಾ ಸಂಬಂಧವನ್ನು ನಿಭಾಯಿಸುತ್ತಾ ದುಃಖದಿಂದ ಮುಕ್ತರಾಗಿರುವಂತಹ ನಷ್ಟಾಮೋಹ, ಟ್ರಸ್ಟಿ ಭವ


ಲೌಕಿಕ ಸಂಬಂಧಗಳ ಮಧ್ಯದಲ್ಲಿರುತ್ತಾ ಸಂಬಂಧ ನಿಭಾಯಿಸುವುದು ಬೇರೆ ಮಾತಾಗಿದೆ ಮತ್ತು ಅವರ ಕಡೆ ಆಕರ್ಷಿತರಾಗುವುದು ಬೇರೆ ಮಾತಾಗಿದೆ. ಟ್ರಸ್ಟಿಯಾಗಿರುತ್ತಾ ಹಣ ಸಂಪಾದನೆ ಮಾಡುವುದು ಬೇರೆ ಮಾತಾಗಿದೆ, ಸೆಳೆತದಿಂದ ಸಂಪಾದಿಸುವುದು, ಮೋಹದಿಂದ ಸಂಪಾದಿಸುವುದು ಬೇರೆ ಮಾತಾಗಿದೆ. ನಷ್ಟಾಮೋಹ ಅಥವಾ ಟ್ರಸ್ಠಿಯ ನಿಶಾನಿಯಾಗಿದೆ-ದುಃಖ ಮತ್ತು ಅಶಾಂತಿಯ ಹೆಸರು ಗುರುತೂ ಸಹಾ ಇರಬಾರದು. ಕೆಲವೊಮ್ಮೆ ಸಂಪಾದಿಸುವುದರಲ್ಲಿ ಲಾಭ-ನಷ್ಟವಾಗಲಿ ಅಥವಾ ಸಂಬಂಧ ನಿಭಾಯಿಸುವಾಗ ಯಾರೇ ಖಾಯಿಲೆ ಬೀಳಲಿ, ಆದರೂ ಸಹಾ ದುಃಖದ ಅಲೆ ಬರಬಾರದು. ಸದಾ ನಿಶ್ಚಿಂತ ಚಕ್ರವರ್ತಿ.

ಸ್ಲೋಗನ್:

ಯಾರು ನಿರ್ಬಲರಿಗೆ ಸಾಹಸ ಮತ್ತು ಬಲ ನೀಡುತ್ತಿರುತ್ತಾರೆ ಅವರಿಗೆ ದಯಾಹೃದಯಿಗಳು ಎಂದು ಹೇಳಲಾಗುವುದು.

 Download PDF

Hindi/Tamil/English/Telugu/Kannada/Malayalam/Ilangai Tamil/Sinhala

  

Post a Comment

0 Comments