Hindi/Tamil/English/Telugu/Kannada/Malayalam/Ilangai Tamil/Sinhala
30/09/22 ಪ್ರಾತಃಮುರುಳಿ
ಓಂಶಾಂತಿ ಬಾಪ್ದಾದಾ
ಮಧುಬನ
“ಮಧುರ ಮಕ್ಕಳೇ - ಈ ಸಮಯದಲ್ಲಿ ಎಲ್ಲರ
ಅದೃಷ್ಟವು ಕೆಟ್ಟಿದೆ, ಏಕೆಂದರೆ ಎಲ್ಲರೂ ಪತಿತರಾಗಿದ್ದಾರೆ, ನೀವೀಗ ಶ್ರೀಮತದನುಸಾರ ಎಲ್ಲರ
ಅದೃಷ್ಟವನ್ನು ಜಾಗೃತಗೊಳಿಸಬೇಕಾಗಿದೆ, ಪಾವನರಾಗುವ ಯುಕ್ತಿಯನ್ನು ತಿಳಿಸಬೇಕಾಗಿದೆ”
ಪ್ರಶ್ನೆ:
ಎಲ್ಲದಕ್ಕಿಂತ ಕೆಟ್ಟ ನಡತೆ
ಯಾವುದಾಗಿದೆ, ಯಾವುದರಿಂದ ತುಂಬಾ ನಷ್ಟವಾಗುತ್ತದೆ?
ಉತ್ತರ:
ಒಬ್ಬರು ಇನ್ನೊಬ್ಬರಿಗೆ ಕಲ್ಲು
ಹೊಡೆಯುವುದು ಅಂದರೆ ಕಠಿಣವಾದ ಮಾತುಗಳನ್ನು ಮಾತನಾಡಿ ಗಾಯಗೊಳಿಸುವುದು ಎಲ್ಲದಕ್ಕಿಂತ ಕೆಟ್ಟ
ನಡತೆ ಆಗಿದೆ. ಇದರಿಂದ ತುಂಬಾ ನಷ್ಟವಾಗುತ್ತದೆ. ತಾವು ಮಕ್ಕಳು ಈಗ ರೂಪ ಬಸಂತರಾಗಬೇಕಾಗಿದೆ.
ಒಳ್ಳೆಯ ಮಾನವೀಯತೆಯನ್ನು ಧಾರಣೆ ಮಾಡಬೇಕಾಗಿದೆ. ನಿಮ್ಮ ಬಾಯಿಂದ ಸದಾ ಅವಿನಾಶಿ ಜ್ಞಾನರತ್ನಗಳು
ಹೊರ ಬರಬೇಕು ಆತ್ಮವನ್ನೂ ಸಹ ನೆನಪಿನಿಂದ ರೂಪವಂತರನ್ನಾಗಿ ಮಾಡಬೇಕಾಗಿದೆ ಮತ್ತು ತಂದೆಯು ಯಾವ
ಜ್ಞಾನರತ್ನಗಳನ್ನು ಕೊಡುತ್ತಾರೆ ಅವುಗಳ ದಾನ ಮಾಡಬೇಕಾಗಿದೆ. ತುಂಬಾ ಮಧುರ ಮಾತುಗಳನ್ನು
ಮಾತನಾಡಬೇಕಾಗಿದೆ. ಕಠಿಣ ಮಾತುಗಳನ್ನು ಮಾತನಾಡುವವರಿಂದ ದೂರ ಇರಬೇಕಾಗಿದೆ.
ಗೀತೆ: ಭೋಲಾನಾಥನಿಗಿಂತ ಭಿನ್ನ ಯಾರೂ ಇಲ್ಲ..
ಓಂ ಶಾಂತಿ:
ತಂದೆಯು ಯಾವಾಗಲೂ ಭೋಲಾ ಅರ್ಥಾತ್ ಮುಗ್ದರಾಗಿರುತ್ತಾರೆ. ಒಬ್ಬರು ಹದ್ದಿನ ತಂದೆಯಾಗಿದ್ದಾರೆ.
ಇನ್ನೊಬ್ಬರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆಯರಂತೂ ಇದ್ದೇ ಇರುತ್ತಾರೆ - ಒಬ್ಬರು ಲೌಕಿಕ
ಮತ್ತು ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ನೀವು
ಬ್ರಾಹ್ಮಣರು ಲೌಕಿಕ ತಂದೆ ಹಾಗೂ ಪಾರಲೌಕಿಕ ತಂದೆ ಇಬ್ಬರನ್ನೂ ಅರಿತುಕೊಂಡಿದ್ದೀರಿ. ಲೌಕಿಕ
ತಂದೆಯೂ ಸಹ ಮುಗ್ದರಾಗುತ್ತಾರೆ ಏಕೆಂದರೆ ಮಕ್ಕಳಿಗೆ ಜನ್ಮ ಕೊಟ್ಟು, ಅವರ ಸಂಭಾಲನೆ ಮಾಡಿ
ಪರಿಶ್ರಮ ಪಟ್ಟು ಮತ್ತೆ ಎಲ್ಲವನ್ನೂ ಮಕ್ಕಳಿಗೆ ಕೊಟ್ಟುಬಿಡುತ್ತಾರೆ. ಸುಳ್ಳು ಇತ್ಯಾದಿಗಳನ್ನು
ಹೇಳಿ ಸಂಪಾದಿಸುತ್ತಾರೆ, ಅಂತ್ಯದಲ್ಲಿ ಮಕ್ಕಳು, ಮೊಮ್ಮಕ್ಕಳಿಗೂ ಆಗುವಷ್ಟು ಬಿಟ್ಟು
ಹೋಗೋಣವೆಂದು. ತಂದೆಗೆ ಮಕ್ಕಳ ಮೇಲೆ ತುಂಬಾ ಪ್ರೀತಿ ಇರುತ್ತದೆ. ಬಾಲ್ಯದಲ್ಲಿಯೇ ಮಕ್ಕಳು
ಅಪ್ಪಾ-ಅಪ್ಪಾ ಎಂದು ಹೇಳಲು ತೊಡಗುತ್ತಾರೆ. ನೀವು ಮಕ್ಕಳು ಈಗ ಬೇಹದ್ದಿನ ತಂದೆಯನ್ನೂ ಸಹ
ಅರಿತುಕೊಂಡಿದ್ದೀರಿ. ಬೇಹದ್ದಿನ ತಂದೆಯಂತೂ ಚಮತ್ಕಾರ ಮಾಡಿದ್ದಾರೆ. ಬೇಹದ್ದಿನ ಎಷ್ಟೊಂದು
ಜ್ಞಾನವನ್ನು ತಿಳಿಸುತ್ತಾರೆ. ಲೌಕಿಕ ತಂದೆಯಂತೂ ಈ ರೀತಿ ತಿಳಿಸಲು ಸಾಧ್ಯವಿಲ್ಲ. ಭಲೆ ಹಣ
ಇತ್ಯಾದಿಯನ್ನು ಕೊಡುತ್ತಾರೆ, ಆದರೆ ಕೆಟ್ಟು ಹೋಗುವವರನ್ನು ಸರಿಪಡಿಸಲು ಸಾಧ್ಯವಿಲ್ಲ.
ಕೆಟ್ಟಿರುವವರನ್ನು ಅರ್ಥಾತ್ ಪತಿತರನ್ನು ಸರಿ ಪಡಿಸುವವರು ಭಗವಂತ ಭೋಲಾನಾಥನೇ ಆಗಿದ್ದಾರೆ. ಅವರು
ಕಲ್ಪ-ಕಲ್ಪವು ಸರ್ವ ಪತಿತರನ್ನು ಪಾವನ ಮಾಡುವವರು.... ಸರ್ವರಿಗೆ ಗತಿ-ಸದ್ಗತಿಯನ್ನು
ಕೊಡುವವರಾಗಿದ್ದಾರೆ. ಲೌಕಿಕ ತಂದೆ, ಶಿಕ್ಷಕ, ಗುರು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡಲು
ಸಾಧ್ಯವಿಲ್ಲ. ಬೇಹದ್ದಿನ ತಂದೆಯನ್ನು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು
ಅರಿತುಕೊಂಡಿದ್ದೀರಿ, ಮತ್ತ್ಯಾರೂ ಅರಿತುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ಈ ಬೇಹದ್ದಿನ ಚಕ್ರವು
ಹೇಗೆ ಸುತ್ತುತ್ತದೆ ಎನ್ನುವುದು ನಂಬರ್ವಾರ್ ಪುರುಷಾರ್ಥ ಅನುಸಾರ ಮಕ್ಕಳ ಬುದ್ಧಿಯಲ್ಲಿ ಇದೆ.
ಇದು ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ, ಇದೇ ನಮ್ಮ ಪುರುಷಾರ್ಥವನ್ನು ಮಾಡಿಸುತ್ತದೆ. ನಾವು
ಅವಶ್ಯವಾಗಿ ಪುರುಷಾರ್ಥ ಮಾಡುತ್ತೇವೆ. ಕಲ್ಪ-ಕಲ್ಪವು ಶ್ರೀಮತದನುಸಾರ ಪುರುಷಾರ್ಥ ಮಾಡಿದ್ದೆವು,
ಹಾಗೆಯೇ ಈಗಲೂ ಪತಿತರಿಂದ ಪಾವನರಾಗಲು ಪ್ರತಿಯೊಬ್ಬರೂ ಪುರುಷಾರ್ಥ ಮಾಡುತ್ತಿದ್ದೇವೆ ಎಂದು
ಮಕ್ಕಳು ಅರಿತುಕೊಂಡಿದ್ದೀರಿ. ಸಹೋದರ ಹಾಗೂ ಸಹೋದರಿ ಇಬ್ಬರೂ ಸಹ ಪಾವನರಾಗಲು ಪುರುಷಾರ್ಥದಲ್ಲಿ
ತೊಡಗಿದ್ದಾರೆ ಎಂದು ತಂದೆಯು ನೋಡುತ್ತಾರೆ. ಭಾರತವಾಸಿಗಳೇ ಕರೆಯುತ್ತಾರೆ - ಕೆಟ್ಟು
ಹೋಗಿರುವವರನ್ನು ಸರಿ ಪಡಿಸುವಂತಹ ತಂದೆಯೇ, ಹೇ! ಪತಿತ ಪಾವನನೇ ಬನ್ನಿ ಎಂದು. ರಾವಣನು
ಕೆಡಿಸಿದ್ದಾನೆ, ರಾವಣನಿಂದಲೇ ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾಗಿಬಿಟ್ಟಿದ್ದೀರಿ. ಈಗ ನೀವು
ಮಕ್ಕಳು ಇದೆಲ್ಲವನ್ನೂ ತಂದೆಯ ಮುಖಾಂತರ ತಿಳಿದಿದ್ದೀರಿ. ಮನುಷ್ಯ ಸೃಷ್ಟಿ, ಇದರ ಹೆಸರು
ಕಲ್ಪವೃಕ್ಷವಾಗಿದೆ, ಇದು ತುಂಬಾ ಹೆಸರು ವಾಸಿಯಾಗಿದೆ. ಇದರ ರಹಸ್ಯವೂ ಬುದ್ಧಿಯಲ್ಲಿ
ಕುಳಿತುಬಿಟ್ಟಿದೆ. ಮನುಷ್ಯರು ಯಾವಾಗ ನಿಮ್ಮ ಚಿತ್ರಗಳನ್ನು ನೋಡುತ್ತಾರೆಯೋ, ಆಗ ಈ 5000 ವರ್ಷಗಳ
ಯಾವ ಕಲ್ಪ ವೃಕ್ಷವನ್ನು ಮಾಡಿದ್ದಾರೆಯೋ, ಇದು ಕಲ್ಪನೆ ಅಗಿದೆ ಎಂದು ಹೇಳುತ್ತಾರೆ. ನಾವಂತೂ ಇದರ
ಮೇಲೆ ತುಂಬಾ ಚೆನ್ನಾಗಿ ತಿಳಿಸುತ್ತೇವೆ. ಕಲ್ಪ ವೃಕ್ಷ, ಇದನ್ನು ಆಲದ ಮರಕ್ಕೂ ಹೋಲಿಸಬಹುದು. ಆದಿ
ಸನಾತನ ದೇವೀ-ದೇವತಾ ಧರ್ಮವಿತ್ತು, ಅದು ಈಗ ಪ್ರಾಯಃಲೋಪವಾಗಿದೆ ಎಂದು ತಂದೆಯು ತಿಳಿಸುತ್ತಾರೆ.
ನಾಟಕದ ಉಪಾಯದನುಸಾರ ಮತ್ತೆಲ್ಲಾ ಧರ್ಮಗಳಿವೆ. ಪ್ರಪಂಚದ ಇತಿಹಾಸ ಭೂಗೋಳ ಅದರಲ್ಲೂ ಮುಖ್ಯವಾಗಿ
ಸ್ವರ್ಗವನ್ನು ಗಾಯನ ಮಾಡಲಾಗುತ್ತದೆ, ಅದು ಪುನಃ ಪುನರಾವರ್ತನೆ ಆಗಬೇಕಾಗಿದೆ. ಒಳ್ಳೆಯ ಇತಿಹಾಸ
ಭೂಗೋಳವೇ ಸ್ವರ್ಗದ್ದಾಗಿದೆ. ನಮಗೆ ರಾಮರಾಜ್ಯ ಬೇಕು, ಎಲ್ಲಿ ದುಃಖದ ಹೆಸರು-ಗುರುತೇ ಇರುವುದಿಲ್ಲ
ಎಂದು ಎಲ್ಲರೂ ಹೇಳುತ್ತಾರೆ. ಏಕೆಂದರೆ ಈಗಂತೂ ರಾವಣರಾಜ್ಯವಾಗಿದೆ. ಈ ಎಲ್ಲಾ ಮಾತುಗಳು ನೀವು
ಮಕ್ಕಳ ಬುದ್ಧಿಯಲ್ಲಿ ಮಾತ್ರ ಇವೆ. ಮನುಷ್ಯರಿಗೆ ಏನೂ ಗೊತ್ತಿಲ್ಲ. ಪತಿತರನ್ನು ಪಾವನರನ್ನಾಗಿ
ಮಾಡುವವರು ಹೇಗೆ ಬರುತ್ತಾರೆ, ಹೇಗೆ ಪಾವನರನ್ನಾಗಿ ಮಾಡುತ್ತಾರೆ! ಪತಿತರಿಗೆ ಕೆಟ್ಟು
ಹೋಗಿರುವವರೆಂದು ಹೇಳಲಾಗುತ್ತದೆ. ನಮ್ಮ ಬುದ್ಧಿ ಅಥವಾ ಅದೃಷ್ಟವು ಹೇಗೆ ಕೆಟ್ಟು ಹೋಗುತ್ತದೋ, ಈಗ
ಇದೆಲ್ಲವೂ ನಿಮ್ಮ ಬುದ್ಧಿಯಲ್ಲಿ ಇದೆ. ಮನುಷ್ಯರ ರೀತಿ ಪದ್ಧತಿಗಳೇ ರಾವಣನದ್ದಾಗಿವೆ. ನಿಮ್ಮ
ರೀತಿ ಪದ್ಧತಿಗಳು ರಾಮನದ್ದಾಗಿದೆ. ರಾಮನೆಂದರೆ ತ್ರೇತಾಯುಗದ ರಾಮನಲ್ಲ. ಅವರು ಗೀತೆಯನ್ನು
ತಿಳಿಸಿರಲಿಲ್ಲ. ಇಂದಿನ ಕಾಲದಲ್ಲಿ ವಿದೇಶದಲ್ಲಿಯೂ ಸಹ ರಾಮಾಯಣ ಇತ್ಯಾದಿಗಳನ್ನು ತಿಳಿಸುತ್ತಾರೆ.
ಕೆಲ-ಕೆಲವರಂತೂ ಕಾವಿ ಬಟ್ಟೆಯನ್ನು ಧರಿಸಿ ಹೋಗಿ ಕುಟೀರಗಳಲ್ಲಿ ಇರುತ್ತಾರೆ. ಈಗ ನೀವು ಮಕ್ಕಳು
ಯಾವುದೇ ಕುಟೀರ ಮುಂತಾದವುಗಳಲ್ಲಿ ಇರಬೇಕಾಗಿಲ್ಲ. ಕುಟೀರಗಳಲ್ಲಿ ಎಂದಾದರೂ ಪಾಠಶಾಲೆ
ಇರುತ್ತದೆಯೇನು? ಅಲ್ಲಿ ಸನ್ಯಾಸಿಗಳು ಇರುತ್ತಾರೆ. ನಿಮ್ಮದು ಇದು ವಿದ್ಯೆಯಾಗಿದೆ, ಆದರೆ ಇದು
ಹೊಸ ಸರ್ಕಾರವಾಗಿದೆ, ಆದ್ದರಿಂದ ನೀವು ಯಾರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಒಬ್ಬರು
ಅಧ್ಯಕ್ಷರಿಗೆ ತಿಳಿಸುತ್ತೀರೆಂದರೆ ಅನ್ಯರು ನೀವು ಅಮಾಯಕರು ಎಂದು ಹೇಳುತ್ತಾರೆ. ಇವು
ಸಂಪೂರ್ಣವಾಗಿ ಹೊಸ ಮಾತುಗಳಾಗಿವೆ. ತಂದೆಯು ತಿಳಿಸುತ್ತಿರುತ್ತಾರೆ. ಸರಿಪಡಿಸುತ್ತಾ ಹೋಗಿ.
ಬ್ರಹ್ಮಾಕುಮಾರ-ಕುಮಾರಿ ಅಕ್ಷರದ ಮುಂದೆ ಪ್ರಜಾಪಿತ ಎಂದು ಅವಶ್ಯವಾಗಿ ಬರೆಯಬೇಕು. ಪ್ರಜಾಪಿತ
ಎಂದು ಹೇಳುವುದರಿಂದ ತಂದೆಯು ಸಿದ್ಧವಾಗಿಬಿಡುತ್ತಾರೆ. ನಾವು ಪ್ರಶ್ನೆಯನ್ನು ಕೇಳುತ್ತೇವೆ -
ಪ್ರಜಾಪಿತ ಬ್ರಹ್ಮನೊಂದಿಗೆ ನಿಮ್ಮ ಸಂಬಂಧವೇನು? ಏಕೆಂದರೆ ಬ್ರಹ್ಮಾ ಎನ್ನುವ ಹೆಸರು
ಅನೇಕರಿಗಿದೆ. ಕೆಲವು ಸ್ತ್ರೀಯರ ಹೆಸರೂ ಸಹ ಬ್ರಹ್ಮಾ ಎಂದು ಇರುತ್ತದೆ. ಪ್ರಜಾಪಿತ ಹೆಸರಂತೂ ಯಾರಿಗೂ
ಇರುವುದಿಲ್ಲ. ಆದ್ದರಿಂದ ಪ್ರಜಾಪಿತ ಹೆಸರೂ ತುಂಬಾ ಅವಶ್ಯವಾಗಿದೆ. ಪ್ರಜಾಪಿತನನ್ನು ಆದಿದೇವ
ಎಂದು ಹೇಳುತ್ತಾರೆ. ಆದರೆ ಆದಿದೇವನ ಅರ್ಥವನ್ನು ತಿಳಿದುಕೊಂಡಿಲ್ಲ. ಪ್ರಜಾಪಿತ ಎಂದರೆ
ಅವಶ್ಯವಾಗಿ ಇಲ್ಲಿಯೇ ಇರಬೇಕಲ್ಲವೇ. ಆದಿದೇವಾ ನಂತರ ಅವರೇ ಬ್ರಹ್ಮಾ [ಸೂಕ್ಷ್ಮ]
ಆಗಿಬಿಡುತ್ತಾರೆ. ಆದಿ ಎಂದರೆ ಪ್ರಾರಂಭ. ಪ್ರಜಾಪಿತ ಬ್ರಹ್ಮನಿಗೆ ಸರಸ್ವತಿಯು ಮಗಳಾಗಿದ್ದಾರೆ.
ಸೂಕ್ಷ್ಮವತನದಲ್ಲಂತೂ ಮಗಳು ಆಗಲು ಸಾಧ್ಯವಿಲ್ಲ. ರಚಯಿತನಂತೂ ಇಲ್ಲಿಯೇ ಆಗಿದ್ದಾರಲ್ಲವೇ. ಈ
ಗುಹ್ಯ ಮಾತುಗಳನ್ನು ವಿಶಾಲ ಬುದ್ಧಿಯವರೇ ಧಾರಣೆ ಮಾಡುತ್ತಾರೆ. ಧಾರಣೆಯ ಜೊತೆಗೆ ಮಾನವೀಯತೆಯು
ಬೇಕು. ಇವರನ್ನು ಯಾರು ನೋಡಿದರೂ ಖುಷಿಯಾಗಬೇಕು. ನಿಮ್ಮಿಂದ ಹೊರ ಬರುವ ಮಾತುಗಳು ರತ್ನಗಳೆಂದು
ಹೇಳಲಾಗುತ್ತದೆ. ರೂಪಬಸಂತರು (ಜ್ಞಾನದಮಳೆ ಸುರಿಸುವಂತಹವರು) ಆಗಬೇಕಾಗಿದೆ. ಆತ್ಮನನ್ನು
ರೂಪವಂತನನ್ನಾಗಿ ಮಾಡುತ್ತಾರೆ. ಈಗಂತೂ ಆತ್ಮವು ಕಪ್ಪು ಕುರೂಪವಾಗಿದೆ. ಅದನ್ನು ಯೋಗದಿಂದ
ರೂಪವಂತನನ್ನಾಗಿ ಮಾಡಬೇಕಾಗಿದೆ.
ನೀವು ಮಕ್ಕಳು
ಈಗ ಜ್ಞಾನದಮಳೆ ಸುರಿಸುವಂತಹವರಾಗುತ್ತೀರಿ. ಬಾಯಿಂದ ಸದಾ ಅವಿನಾಶಿ ಜ್ಞಾನರತ್ನಗಳು
ಹೊರಬರುತ್ತವೆ. ಮಕ್ಕಳ ನಡವಳಿಕೆಯು ತುಂಬಾ ಮಧುರವಾಗಿರಬೇಕು. ಬಾಯಿಂದ ಯಾವಾಗಲೂ ರತ್ನಗಳೇ
ಹೊರಬರಬೇಕು. ಅನೇಕರು ಕಲ್ಲುಗಳನ್ನೇ ಹೊಡೆಯುತ್ತಾರೆ ಅರ್ಥಾತ್ ಕಠಿಣವಾಗಿ ಮಾತನಾಡುತ್ತಾರೆ.
ತಂದೆಯು ಜ್ಞಾನರತ್ನಗಳನ್ನು ಕೊಡುತ್ತಾರೆ ಎಂದಾಗ ನೀವು ಮಕ್ಕಳದ್ದೂ ಸಹ ಇದೇ ವ್ಯಾಪಾರವಾಗಿದೆ.
ಒಬ್ಬರು ಇನ್ನೊಬ್ಬರಿಗೆ ಕಲ್ಲು ಹೊಡೆಯುವುದು, ಇದು ತುಂಬಾ ಕೆಟ್ಟ ನಡತೆ ಆಗಿದೆ. ತಮ್ಮ
ನಷ್ಟವನ್ನೇ ಮಾಡಿಕೊಳ್ಳುತ್ತಾರೆ. ತಂದೆಯು ಜ್ಞಾನಸಾಗರನಾಗಿದ್ದಾರೆ. ಅವರ ರೂಪವೂ ಸಹ ತುಂಬಾ
ಸೂಕ್ಷ್ಮವಾಗಿದೆ. ಇದನ್ನು ಮನುಷ್ಯರು ಲಿಂಗವೆಂದು ಹೇಳಿಬಿಡುತ್ತಾರೆ. ಆದ್ದರಿಂದ ಮೊದಲು ತಂದೆಯ
ಪರಿಚಯವನ್ನು ಕೊಡಬೇಕಾಗಿದೆ. ಭಲೆ ಅವರು ಜ್ಯೋತಿರ್ಲಿಂಗಂ ಎಂದೇ ತಿಳಿದುಕೊಳ್ಳಲಿ. ಆಳವಾದ
ಮಾತನ್ನು ನಂತರ ತಿಳಿಸಬಹುದಾಗಿದೆ. ಮತ್ತೆ ಕೇಳಬೇಕು - ಆತ್ಮನ ರೂಪವು ಏನಾಗಿದೆ. ಭೃಕುಟಿಯ
ಮಧ್ಯದಲ್ಲಿ ಆತ್ಮವು ಹೊಳೆಯುತ್ತದೆ ಎಂದು ಎಲ್ಲರೂ ಹೇಳುತ್ತಾರೆ. ಅಂದಾಗ ಅವಶ್ಯವಾಗಿ
ಚಿಕ್ಕದಾಗಿಯೇ ಇರುತ್ತದೆ. ದೊಡ್ಡ ಲಿಂಗವಂತೂ ಇಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮೊದಲು ತಂದೆ
ಮತ್ತು ಮಕ್ಕಳ ಸಂಬಂಧವನ್ನು ಬುದ್ಧಿಯಲ್ಲಿ ಕೂರಿಸಬೇಕು. ಅವರಂತೂ ಬೇಹದ್ದಿನ ತಂದೆಯಾಗಿದ್ದಾರೆ.
ಈಗ ಬ್ರಹ್ಮಾ ಎಲ್ಲಿಂದ ಬರುತ್ತಾರೆ? ತಂದೆಯು ಬಂದು ಇವರನ್ನು ದತ್ತು ಮಾಡಿಕೊಳ್ಳುತ್ತಾರೆ
ಅರ್ಥಾತ್ ಇವರಲ್ಲಿ ಪ್ರವೇಶ ಮಾಡುತ್ತಾರೆ. ಇವರ ದತ್ತು ಬೇರೆ ಆಗಿದೆ, ನಿಮ್ಮ ದತ್ತು ಬೇರೆ
ಆಗಿದೆ. ತಂದೆ ಇವರಲ್ಲಿ ಪ್ರವೇಶ ಮಾಡುತ್ತಾರೆ, ತಂದೆ ತಿಳಿಸುತ್ತಾರೆ - ಇವರು ನನ್ನ ಸ್ತ್ರೀ
ಆಗಿದ್ದಾರೆ, ನಾನು ಇವರನ್ನು ದತ್ತು ಮಾಡಿಕೊಂಡಿದ್ದೇನೆ. ನಾನು ಇವರಲ್ಲಿ ಪ್ರವೇಶ ಆಗಿ ನೀವು
ನಮ್ಮ ಮುಖವಂಶಾವಳಿ ಆಗಿದ್ದೀರಿ ಎಂದು ಹೇಳುತ್ತಾರೆ. ನಾನು ನಿಮ್ಮನ್ನು ಬ್ರಹ್ಮಾರವರ ಮುಖದಿಂದ
ರಚಿಸಿದ್ದೇನೆ. ನನಗೆ ನನ್ನದೇ ಆದ ಶರೀರವಿಲ್ಲ. ನನ್ನ ಮುಖವಂಶಾವಳಿ ಎಂದು ಶಿವನು ಹೇಗೆ ಹೇಳುತ್ತಾರೆ.
ಇವೆಲ್ಲವನ್ನೂ ಎಷ್ಟು ಚೆನ್ನಾಗಿ ತಿಳಿಸಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವೆಲ್ಲಾ
ಆತ್ಮಗಳು ನನ್ನ ಮಕ್ಕಳಾಗಿದ್ದೀರಿ, ಸಹೋದರ-ಸಹೋದರಿಯರಾಗಿದ್ದೀರಿ. ಇದು ಬುದ್ಧಿಯಲ್ಲಿ ಬರಬೇಕು.
ತಂದೆಯು ಸ್ವರ್ಗವನ್ನು ರಚಿಸುವವರು ಆಗಿದ್ದಾರೆ ಅಂದಾಗ ನನಗೆ ಸ್ವರ್ಗದ ರಾಜ್ಯಭಾಗ್ಯವು ಏಕೆ
ಸಿಗಬಾರದು! ಸ್ವರ್ಗದಲ್ಲಂತೂ ಎಲ್ಲರೂ ಹೋಗಲು ಸಾಧ್ಯವಿಲ್ಲ. ನಾನು ಸರ್ವರ ಸದ್ಗತಿ ಮಾಡುತ್ತೇನೆ,
ನೀವು ಮುಕ್ತಿಯಲ್ಲಿ ಹೋಗಿ ಪುನಃ ಪಾತ್ರವನ್ನು ಅಭಿನಯಿಸಲು ಪುನಃ ನಂಬರ್ವಾರ್ ಬರುತ್ತೀರಿ ಎಂದು
ತಂದೆಯು ತಿಳಿಸುತ್ತಾರೆ. ಮುಕ್ತಿಯು ಎಲ್ಲರಿಗೂ ಸಿಗುತ್ತದೆ. ಮಾಯೆಯ ದುಃಖದಿಂದ ಎಲ್ಲರೂ ಬಿಡುಗಡೆ
ಆಗುತ್ತಾರೆ. ಪುನಃ ನಂಬರ್ವಾರ್ ಪಾತ್ರವನ್ನು ಅಭಿನಯಿಸಲು ಬರಬೇಕಾಗುತ್ತದೆ. ಜೀವನ್ಮುಕ್ತಿಯಲ್ಲಿ
ಮೊಟ್ಟ-ಮೊದಲು ನೀವು ಹೋಗುತ್ತೀರಿ, ಏಕೆಂದರೆ ನೀವು ರಾಜಯೋಗವನ್ನು ಕಲಿಯುತ್ತೀರಲ್ಲವೇ. ಕಲ್ಪದ
ಹಿಂದೆ ಬಂದು ಯಾರು ಕಲಿತಿದ್ದರೂ ಅವರೇ ಬಂದು ನಾಟಕದನುಸಾರ ಕಲಿಯುತ್ತಾರೆ. ನಾಟಕವು ಸಮ್ಮುಖದಲ್ಲಿ
ನಿಂತಿದೆ. ಈಗಂತೂ ಅನೇಕ ಧರ್ಮಗಳಿವೆ. ಸತ್ಯಯುಗದಲ್ಲಿ ಒಂದು ಧರ್ಮವಿತ್ತು ಅಂದಾಗ ಸೂರ್ಯವಂಶೀ,
ಚಂದ್ರವಂಶೀ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು ಎಂದು ಯಾರೂ ತಿಳಿದುಕೊಂಡಿಲ್ಲ. ಪರಮಪಿತ
ಪರಮಾತ್ಮನೇ ಬ್ರಾಹ್ಮಣ, ದೇವತಾ, ಕ್ಷತ್ರೀಯ ಧರ್ಮದ ಸ್ಥಾಪನೆ ಮಾಡುತ್ತಾರೆಂದು ನೀವು
ತಿಳಿದುಕೊಂಡಿದ್ದೀರಿ. ಕೆಟ್ಟಿರುವವರನ್ನು ಸುಧಾರಣೆ ಮಾಡುವವರು ಅವಶ್ಯವಾಗಿ ತಂದೆ ಒಬ್ಬರೇ
ಆಗಿದ್ದಾರೆ. ಪತಿತಪಾವನ ಬನ್ನಿ ಎಂದು ಸತ್ಯಯುಗದಲ್ಲಂತೂ ಕರೆಯುವುದಿಲ್ಲ. ಆದರೆ ಇಲ್ಲಿ ಅದೃಷ್ಟವೂ
ಕೆಟ್ಟು ಹೋಗಿದೆ. ರಾಹುವಿನ ದಶೆಯು ಕುಳಿತುಕೊಂಡಿದೆ. ಸತ್ಯಯುಗದಲ್ಲಿ ಶ್ರೇಷ್ಠಾತಿಶ್ರೇಷ್ಠ
ಬೃಹಸ್ಪತಿ ದಶೆ ಇತ್ತು. ಈಗ ಬಂದು ರಾಹುವಿನ ದಶೆಯು ಕುಳಿತುಕೊಂಡಿದೆ. ಇಡೀ ವಿಶ್ವದ ಮೇಲೆ
ರಾಹುವಿನ ಗ್ರಹಣ ಹಿಡಿದಿದೆ. ಇಡೀ ಪ್ರಪಂಚವೂ ಕಪ್ಪಾಗಿಬಿಟ್ಟಿದೆ. ಚಿನ್ನದ ಸಮಾನ ಪ್ರಪಂಚಕ್ಕೆ
ಗ್ರಹಣವೂ ಹಿಡಿಯುತ್ತಾ-ಹಿಡಿಯುತ್ತಾ ಕಲೆಗಳು ಕಡಿಮೆ ಆಗುತ್ತಾ ಕೊನೆಗೆ ಕಬ್ಬಿಣದ ಸಮಾನ
ಪ್ರಪಂಚವಾಗಿಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ - ದಾನವನ್ನು ಕೊಟ್ಟರೆ ಗ್ರಹಣವು ಬಿಟ್ಟು
ಹೋಗುತ್ತದೆ. ಯೋಗಬಲದಿಂದ ಮಾಯಾರಾವಣನನ್ನು ಜಯಿಸಬೇಕಾಗಿದೆ. ವಿಕಾರಗಳ ದಾನವನ್ನು ಕೊಡಿಸಿದಾಗ ಗ್ರಹಣವೂ
ಬಿಟ್ಟು ಹೋಗುತ್ತದೆ. ನಾವು ಸರ್ವಗುಣಸಂಪನ್ನ... ಆಗಿಬಿಡುತ್ತೇವೆ. ಇದು ಬೇಹದ್ದಿನ
ಮಾತಾಯಿತಲ್ಲವೆ. ಈಗ ಆತ್ಮನಲ್ಲಿ ಯಾವುದೇ ಕಲೆಗಳು ಉಳಿದಿಲ್ಲ. ಆದ್ದರಿಂದ ಶರೀರವೂ ಸಹ ಇಂತಹ
ತಮೋಪ್ರಧಾನವಾದದ್ದು ಸಿಗುತ್ತದೆ. ಹೇಗೆ 14 ಕ್ಯಾರೆಟ್, 18 ಕ್ಯಾರೆಟ್ ಚಿನ್ನವಿರುತ್ತದೆ, ಈಗಂತೂ
ಮನುಷ್ಯರಲ್ಲಿ ಯಾವುದೇ ಕ್ಯಾರೆಟ್ ಉಳಿದಿಲ್ಲ. ಸ್ವಲ್ಪವೂ ತಿಳುವಳಿಕೆ ಇಲ್ಲ. ಅದಕ್ಕೆ ತಂದೆಯು
ತಿಳಿಸುತ್ತಾರೆ, ನಾನು ನಿಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡಿದೆನು, ನಿಮ್ಮನ್ನು
ಸ್ವರ್ಗದಲ್ಲಿ ಕಳುಹಿಸಿದ್ದೆನು. ಮತ್ತೆ ನೀವು 84 ಜನ್ಮಗಳನ್ನು
ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಏನಾಗಿಬಿಟ್ಟಿದ್ದೀರಿ. ಅನೇಕ ಬಾರಿ ಈ ಚಕ್ರವನ್ನು
ಸುತ್ತಿದ್ದೀರಿ. ಕಲ್ಪ-ಕಲ್ಪವು ರಾಜ್ಯವನ್ನು ತೆಗೆದುಕೊಳ್ಳುತ್ತೀರಿ ಮತ್ತು
ಕಳೆದುಕೊಳ್ಳುತ್ತೀರಿ. ಪುನರ್ಜನ್ಮವನ್ನು ತೆಗೆದುಕೊಳ್ಳುವುದರಿಂದ ಎಲ್ಲರ ವೃದ್ಧಿಯಂತೂ
ಆಗುತ್ತಿರುತ್ತದೆ. ಮಕ್ಕಳ ಬುದ್ಧಿಯಲ್ಲಿ ತುಂಬಾ ನಶೆ ಏರಬೇಕು ಏಕೆಂದರೆ ಈಗ ರಾಜಧಾನಿಯೂ ಸ್ಥಾಪನೆ
ಆಗುವುದಿದೆ. ಹೂಗಳ ಉದ್ಯಾನವನವೂ ಸಂಗಮದಲ್ಲಿಯೇ ಸ್ಥಾಪನೆ ಆಗುತ್ತದೆ. ಸಂಗಮವನ್ನು ನೀವು
ಬ್ರಾಹ್ಮಣರೇ ಅರಿತಿದ್ದೀರಿ. ಇಲ್ಲಿ ನೀವು ಮಕ್ಕಳಿಗೆ ರತ್ನಗಳು ಸಿಗುತ್ತವೆ ಮತ್ತೆ ಹೊರಗಡೆ
ಹೋಗುವುದರಿಂದ ಕಲ್ಲು ಹೊಡೆಯಲು ತೊಡಗುತ್ತಾರೆ. ಮಾಯೆಯು ಗಾಯ ಮಾಡಿಬಿಡುತ್ತದೆ. ಅವರನ್ನು
ಪಾಪಾತ್ಮರೆಂದು ಹೇಳುತ್ತಾರೆ. ಅವಿನಾಶಿ ಜ್ಞಾನರತ್ನಗಳನ್ನು ದಾನ ಮಾಡಿ ಒಬ್ಬರು ಇನ್ನೊಬ್ಬರಿಗೆ
ನೀವು ಕಲ್ಲು ಹೊಡೆಯುತ್ತಾ-ಹೊಡೆಯುತ್ತಾ ಸಂಪೂರ್ಣ ಕಲ್ಲು ಬುದ್ಧಿಯವರಾಗಿಬಿಟ್ಟಿದ್ದೀರಿ. ಈಗ
ನಿಮ್ಮ ಬುದ್ಧಿಯೂ ಕಬ್ಬಿಣದಿಂದ ಚಿನ್ನದ ಸಮಾನವಾಗುತ್ತಿದೆ. ಮತ್ತೆ ನೀವು ಕಲ್ಲು ಹೊಡೆಯಲು ಏಕೆ
ಹೋಗುತ್ತೀರಿ? ಎಂದು ತಂದೆಯು ತಿಳಿಸುತ್ತಾರೆ. ಒಂದುವೇಳೆ ಯಾವುದೇ ಉಲ್ಟಾ ಮಾತುಗಳನ್ನು ಯಾರಾದರೂ
ತಿಳಿಸುತ್ತಾರೆಂದರೆ ಇವರು ನಮ್ಮ ಶತ್ರು ಆಗಿದ್ದಾರೆ ಎಂದು ತಿಳಿಯಿರಿ. ಇಂತಹ ಸಂಗವನ್ನು ಎಂದೂ
ಮಾಡಬಾರದು, ಕೇಳಬಾರದು. ಒಬ್ಬರು ಇನ್ನೊಬ್ಬರ ನಿಂದನೆಯ ಮಾತುಗಳನ್ನು ತಿಳಿಸುತ್ತಾರೆ.
ಕೆಲ-ಕೆಲವರಲ್ಲಿ ನಿಂದನೆ ಮಾಡುವ ಅಭ್ಯಾಸವಿರುತ್ತದೆ ಅಂದಾಗ ಅವರು ಎಂದೂ ಕಲ್ಯಾಣ ಆಗುವಂತಹ
ಒಳ್ಳೆಯ ಮಾತುಗಳನ್ನು ತಿಳಿಸುವುದಿಲ್ಲ. ಜ್ಞಾನರತ್ನಗಳ ದಾನ ಮಾಡುತ್ತಾ ಇರಿ ಎಂದು ತಂದೆಯು
ಯಾವಾಗಲೂ ತಿಳಿಸುತ್ತಾರೆ. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಅನ್ಯರಿಗೂ ತಿಳಿಸಿ.
ಸೇವೆಯ ಫಲವಂತೂ ಮಕ್ಕಳಿಗೆ ಅವಶ್ಯವಾಗಿ ಸಿಗುತ್ತದೆ. ತಾವೇ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.
ಯಾರ ನಿಂದನೆಯನ್ನೂ ಮಾಡಬಾರದಾಗಿದೆ. ನೀವು ಮಕ್ಕಳ ಮೇಲೆ ಅತಿ ದೊಡ್ಡ ಜವಾಬ್ದಾರಿ ಇದೆ. ಹೇಗೆ
ತಂದೆಯು ಮುಳ್ಳುಗಳಿಂದ ಹೂಗಳನ್ನಾಗಿ ಮಾಡಲು ಬಂದಿದ್ದಾರೆಂದರೆ ಮಕ್ಕಳದೂ ಸಹ ಇದೇ
ವ್ಯವಹಾರವಾಗಿದೆ. ತಂದೆಯು ಈ ವ್ಯಾಪಾರವನ್ನು ಕಲಿಸುತ್ತಾರೆ. ಆದ್ದರಿಂದ ಇದು ಮನುಷ್ಯರನ್ನು
ದೇವತೆ, ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಕಾರ್ಖಾನೆ ಆಯಿತಲ್ಲವೇ. ನಿಮ್ಮ ಜ್ಞಾನವು
ಮೆಟೀರಿಯಲ್ ಆಗಿದೆ. ಇದರಿಂದ ನೀವು ಮನುಷ್ಯರಿಂದ ದೇವತೆ ಆಗುತ್ತೀರಿ ಎಂದಾಗ ಈ ಕಲೆಯನ್ನು
ಕಲಿಯಬೇಕಲ್ಲವೇ. ಪತಿತರನ್ನು ಪಾವನ ಮಾಡುತ್ತಾ ಇರಿ. ಕಲ್ಲುಬುದ್ಧಿಯವರನ್ನು ಪಾರಸ
ಬುದ್ಧಿಯವರನ್ನಾಗಿ ಮಾಡಿ.
ಇದು ನಿಮ್ಮ
ಈಶ್ವರೀಯ ಮೆಷಿನರಿಯಾಗಿದೆ. ಹೇಗೆ ಕ್ರಿಶ್ಚಯನ್ನರ ಮೆಷಿನರಿ ಇದೆ. ಅದು ಅನ್ಯರನ್ನು
ಕ್ರಿಶ್ಚಯನ್ನರನ್ನಾಗಿ ಮಾಡುತ್ತಾರೆ. ಹಾಗೆಯೇ ನಿಮ್ಮದು ಪತಿತರನ್ನು ಪಾವನರನ್ನಾಗಿ ಮಾಡುವಂತಹ
ಈಶ್ವರೀಯ ಮೆಷಿನರಿಯಾಗಿದೆ. ಪತಿತಪಾವನ ಎಂದು ಹಾಡುತ್ತಾರೆಂದರೆ ಅವಶ್ಯವಾಗಿ ಬಂದಿರಬಹುದು.
ಮೆಷಿನರಿ ಉಪಯೋಗಿಸಿರಬಹುದು, ಆದ್ದರಿಂದಲೇ ಪತಿತರಿಂದ ಪಾವನರಾದರು. ಪಾವನರನ್ನು ಪತಿತರನ್ನಾಗಿ
ಮಾಡುವುದು ರಾವಣನ ಮೆಷಿನರಿಯಾಗಿದೆ. ಪತಿತರನ್ನು ಪಾವನರನ್ನಾಗಿ ಮಾಡುವುದು ರಾಮನ
ಮೆಷಿನರಿಯಾಗಿದೆ. ಯೋಗವು ಮುಖ್ಯವಾಗಿದೆ. ಬಾಪ್ದಾದಾ ಯಾರಿಂದ ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯು
ಸಿಗುತ್ತದೆ, ಅವರನ್ನು ಏಕೆ ನೆನಪು ಮಾಡುವುದಿಲ್ಲ. ಇಡೀ ಕಲ್ಪದಲ್ಲಂತೂ ದೇಹಧಾರಿಗಳನ್ನು ನೆನಪು
ಮಾಡಿದ್ದೀರಿ, ಆದರೆ ಈಗ ವಿದೇಹಿಯನ್ನು, ವಿಚಿತ್ರವನ್ನು ನೆನಪು ಮಾಡಬೇಕಾಗಿದೆ. ಇವರಿಗೆ ಯಾವುದೇ
ಚಿತ್ರವಿಲ್ಲ, ಅವರು ಅವಶ್ಯವಾಗಿ ಬರಬೇಕಾಗುತ್ತದೆ. ಬ್ರಹ್ಮಾರವರ ಮುಖಾಂತರ ಬ್ರಹ್ಮಣ, ದೇವತಾ,
ಕ್ಷತ್ರೀಯ ಧರ್ಮದ ಸ್ಥಾಪನೆ ಎಂದು ಗಾಯನ ಮಾಡಲಾಗುತ್ತದೆ. ಇದಂತೂ ನೇರ ಮಾತಾಗಿದೆ. ಬ್ರಾಹ್ಮಣರಿಗೆ
ಮತ್ತ್ಯಾರೂ ಇಲ್ಲವೇ ಇಲ್ಲ. ಶಿವತಂದೆಯು ನಮ್ಮ ಶಿಕ್ಷಕರೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ
ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಸದ್ಗುರುವಂತೂ ಒಬ್ಬರೇ ಆಗಿದ್ದಾರೆ. ಬ್ರಹ್ಮನಿಗೂ ಸಹ ಅವರು
ಗುರುವಾದರು. ಆದರೆ ವಿಷ್ಣುವಿನ ಗುರು ಎಂದು ಹೇಳುವುದಿಲ್ಲ ಏಕೆಂದರೆ ಬ್ರಹ್ಮನ ಗುರುವಾಗಿ,
ಅವರನ್ನೇ ವಿಷ್ಣು ದೇವತೆಯನ್ನಾಗಿ ಮಾಡಿದ್ದಾರೆ. ಶಂಕರನಿಗೂ ಸಹ ಗುರುವಾಗಲು ಹೇಗೆ ಸಾಧ್ಯ?
ಶಂಕರನಂತೂ ಪತಿತ ಆಗುವುದೇ ಇಲ್ಲ. ಶಂಕರನಿಗೆ ಗುರುವಿನ ಅವಶ್ಯಕತೆ ಏನಿದೆ. ಬ್ರಹ್ಮನಂತೂ 84
ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ವಿಷ್ಣು ಹಾಗೂ ಶಂಕರರಿಗೆ 84 ಜನ್ಮಗಳೆಂದು ಹೇಳುವುದಿಲ್ಲ.
ಎಷ್ಟೊಂದು ಚೆನ್ನಾಗಿ ಧಾರಣೆ ಮಾಡಿ ಮತ್ತು ಮಾಡಿಸುವ ಮಾತುಗಳಾಗಿವೆ. ಯಾರು ಧಾರಣೆ ಮಾಡುತ್ತಾರೆ
ಹಾಗೂ ಮಾಡಿಸುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಧಾರಣೆ ಮಾಡುವುದಿಲ್ಲವೆಂದರೆ
ಪದವಿಯು ಕಡಿಮೆಯಾಗಿಬಿಡುತ್ತದೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ:
1. ನಿಂದನೆ
ಮಾಡುವವರ ಸಂಗವನ್ನು ಎಂದೂ ಮಾಡಬಾರದಾಗಿದೆ. ನಿಂದನೆ ಮಾಡಲೂಬಾರದು, ಕೇಳಲೂಬಾರದಾಗಿದೆ.
ಬುದ್ಧಿಯನ್ನು ಪಾರಸವನ್ನಾಗಿ ಮಾಡುವುದಕ್ಕೋಸ್ಕರ ಮುಖದಿಂದ ಜ್ಞಾನರತ್ನಗಳನ್ನು ದಾನ
ಮಾಡಬೇಕಾಗಿದೆ.
2. ಜ್ಞಾನದ
ಮೆಟೀರಿಯಲ್ ನಿಂದ ಮನುಷ್ಯರನ್ನು ದೇವತಾ, ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ
ಮಾಡಬೇಕಾಗಿದೆ. ತಮ್ಮ ಮತ್ತು ಸರ್ವರ ಕಲ್ಯಾಣ ಮಾಡುವ ಕಾರ್ಯವನ್ನೇ ಮಾಡಬೇಕಾಗಿದೆ.
ವರದಾನ:
ಪ್ರತ್ಯಕ್ಷತೆ ಮತ್ತು ಪ್ರತಿಜ್ಞೆಯ
ಬ್ಯಾಲೆನ್ಸ್ ಮುಖಾಂತರ ಸರ್ವರಿಗೆ ತಂದೆಯ ಬ್ಲೆಸ್ಸಿಂಗ್ಸ್ ಪ್ರಾಪ್ತಿ ಮಾಡಿಸುವಂತಹ ವಿಜಯೀ ರತ್ನ
ಭವ.
ಪ್ರತ್ಯಕ್ಷತೆಯ ಡಂಗುರ
ಭಾರಿಸುವುದಕ್ಕಾಗಿ ಧೃಡತಾ ಸಂಪನ್ನರಾಗಿ ಪ್ರತಿಜ್ಞೆ ಮಾಡಿ. ಪ್ರತಿಜ್ಞೆ ಮಾಡುವುದು ಎಂದರೆ ಜೀವದ
ಮೇಲೆ ಪಂದ್ಯ ಕಟ್ಟುವುದು. ಜೀವ ಹೋಗಲಿ ಆದರೆ ಪ್ರತಿಜ್ಞೆ ಹೋಗಲು ಸಾಧ್ಯವಿಲ್ಲ. ದೃಢ
ಪ್ರತಿಜ್ಞೆಯುಳ್ಳವರು ಎಂತಹದೇ ಪರಿಸ್ಥಿತಿಯಲ್ಲಿ ಸೋಲನುಭವಿಸಲು ಸಾಧ್ಯವಿಲ್ಲ, ಅವರು ಕೊರಳಿನ ಹಾರ
ಅರ್ಥಾತ್ ವಿಜಯಿ ರತ್ನಗಳಾಗಿ ಬಿಡುವರು. ಆದ್ದರಿಂದ ಯಾವಾಗ ಇಂತಹ ಪ್ರತಿಜ್ಞೆ ಮಾಡುವಿರಿ ಆಗ
ಪ್ರತ್ಯಕ್ಷತೆಯಾಗಲಿ. ಪ್ರತ್ಯಕ್ಷತೆ ಮತ್ತು ಪ್ರತಿಜ್ಞೆ-ಈ ಎರಡರ ಬ್ಯಾಲೆನ್ಸ್ ಸರ್ವ
ಆತ್ಮರುಗಳಿಗೆ ಬಾಪ್ದಾದಾರವರ ಮುಖಾಂತರ ಬ್ಲೆಸ್ಸಿಂಗ್ಸ್ ಪ್ರಾಪ್ತಿಯಾಗುವ ಆಧಾರವಾಗಿದೆ.
ಸ್ಲೋಗನ್:
ಲವಲೀನ ಸ್ಥಿತಿಯ ಅನುಭವ ಮಾಡಿದಾಗ
ಸ್ಮೃತಿ-ವಿಸ್ಮೃತಿಯ ಯುದ್ಧದಲ್ಲಿ ಸಮಯ ಹೋಗುವುದಿಲ್ಲ.


0 Comments