Hindi/Tamil/English/Telugu/Kannada/Malayalam/Ilangai Tamil/Sinhala
24/08/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ ಮಕ್ಕಳೇ - ಎಲ್ಲಿಯ ತನಕ ಜೀವಿಸಿರಬೇಕಾಗಿದೆಯೋ ಅಲ್ಲಿಯ ತನಕ
ಪವಿತ್ರತೆಯ ವ್ರತವನ್ನು ಪಕ್ಕಾ ಇಟ್ಟುಕೊಳ್ಳಬೇಕಾಗಿದೆ ಏಕೆಂದರೆ ಇದು ಅಂತಿಮ ಜನ್ಮವಾಗಿದೆ, ಪವಿತ್ರರಾಗಿ ಪವಿತ್ರ
ಪ್ರಪಂಚದಲ್ಲಿ ಹೋಗಬೇಕಾಗಿದೆ”
ಪ್ರಶ್ನೆ:
ತಂದೆಯ
ಪ್ರೀತಿ ಹಾಗೂ ಅಧಿಕಾರ ಎಂತಹ ಮಕ್ಕಳ ಮೇಲಿರುತ್ತದೆ?
ಉತ್ತರ:
ಯಾರು
ಒಳ್ಳೆಯ ರೀತಿಯಲ್ಲಿ ಓದುತ್ತಾರೆ ಮತ್ತು ಓದಿಸುತ್ತಾರೆ, ತಂದೆಗೆ ರಿಟರ್ನ್ ಕೊಡುತ್ತಾರೆ ಅಂತಹವರ ಮೇಲೆ
ತಂದೆಗೆ ಎಲ್ಲರಿಗಿಂತ ಅಧಿಕ ಪ್ರೀತಿ ಇರುತ್ತದೆ. ಯಾರು ಒಳ್ಳೆಯ ರೀತಿಯಲ್ಲಿ ಓದುವವರಿದ್ದಾರೆ
ಅವರೇ ಮಾಲೆಯಲ್ಲಿ ಪೆÇೀಣಿಸಲ್ಪಡುತ್ತಾರೆ.
ಪ್ರಶ್ನೆ:
ಭವಿಷ್ಯದ
ದೇವ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ತಮ್ಮ ಯಾವ ಪರಿಶೀಲನೆಯನ್ನು ಮಾಡಿಕೊಳ್ಳಬೇಕಾಗಿದೆ?
ಉತ್ತರ:
ದೈವೀ
ಗುಣಗಳನ್ನು ಧಾರಣೆ ಮಾಡುವುದರಲ್ಲಿ ಎಂತಂತಹ ವಿಘ್ನಗಳು ಬರುತ್ತವೆ, ಆ ವಿಘ್ನಗಳನ್ನು ಹೇಗೆ
ಯುಕ್ತಿಯಿಂದ ಪಾರು ಮಾಡಬೇಕಾಗಿದೆ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿ. ನಾವು ಎಲ್ಲಿಯ ತನಕ
ಪಾವನರಾಗಿದ್ದೇವೆ! ಯಾವುದೇ ಮುಳ್ಳು ಅಡಚಣೆಯಂತೂ ಮಾಡುತ್ತಿಲ್ಲವೇ! ಎಂದು ತಮ್ಮನ್ನು
ನೋಡಿಕೊಳ್ಳಬೇಕಾಗಿದೆ.
ಗೀತೆ: ಆಕಾಶ ಸಿಂಹಾಸನವನ್ನು ಬಿಟ್ಟು
ಬಾ...........
ಓಂ ಶಾಂತಿ, ಭಕ್ತರು ಭಗವಂತನನ್ನು ಅರ್ಥಾತ್
ತಂದೆಯನ್ನು ಕರೆಯುತ್ತಾರೆ, ಏಕೆ ಕರೆಯುತ್ತಾರೆ? ಏಕೆಂದರೆ ದುಃಖಿ ಆಗಿದ್ದಾರೆ. ದುಃಖದ
ನಂತರ ಸುಖವು ಅವಶ್ಯವಾಗಿ ಬರಬೇಕಾಗಿದೆ ಎನ್ನುವುದನ್ನೂ ನೀವು ತಿಳಿದುಕೊಂಡಿದ್ದೀರಿ. ಸುಖವಿತ್ತು
ಅದು ಈಗಿಲ್ಲ. ಪುನಃ ಬಂದು ಸಹಜ ರಾಜಯೋಗವನ್ನು ಕಲಿಸಿ ಎಂದು ಕರೆಯುತ್ತಾರೆ. ಕಲಿಸುವವರಂತೂ
ಅವಶ್ಯವಾಗಿ ತಂದೆಯು ಬೇಕು. ತಂದೆಯು ತಿಳಿಸುತ್ತಾರೆ - ಹೇಗೆ ನೀವು ಆತ್ಮಗಳು ಗರ್ಭದಲ್ಲಿ ಬಂದು
ಶರೀರವನ್ನು ಪಡೆಯುತ್ತೀರಿ, ಹಾಗೆ ನಾನು ಪಡೆಯುವುದಿಲ್ಲ. ನಾನಂತೂ
ಪತಿತರನ್ನು ಪಾವನ ಮಾಡಬೇಕಾಗಿದೆ, ಆದ್ದರಿಂದ ನನಗೆ ಅನುಭವಿ ಹಿರಿಯ ಶರೀರವು ಬೇಕು. ಪಾವನರನ್ನಾಗಿ ಮಾಡಲು ನಾನು ಬರಲೇ
ಬೇಕಾಗುತ್ತದೆ. ಮಾಯಾ ರಾವಣ ನಿಮ್ಮನ್ನು ಪತಿತರನ್ನಾಗಿ ಮಾಡಿದ್ದಾರೆ, ಆದ್ದರಿಂದ ಈಗ ಈ ಪಂಚ ವಿಕಾರಗಳನ್ನು ದಾನ
ಕೊಡುವುದರಿಂದ ಗ್ರಹಣವು ಬಿಟ್ಟು ಹೋಗುತ್ತದೆ. ಮೊದಲನೆಯದಾಗಿ ದೇಹಾಭಿಮಾನವು ಮುಖ್ಯವಾಗಿದೆ.
ತಮ್ಮನ್ನು ಈಗ ಆತ್ಮಾಭಿಮಾನಿ ಎಂದು ತಿಳಿಯಿರಿ. ನಾನು ಈ ದೇಹದಲ್ಲಿ ಇರುವಂತಹ ಆತ್ಮ ಅನ್ಯ
ಆತ್ಮಗಳೊಂದಿಗೆ ಮಾತನಾಡುತ್ತೇನೆ, ಅವರಿಗೆ ಜ್ಞಾನವನ್ನು ಕೊಡುತ್ತೇನೆ. 5000 ವರ್ಷಗಳ ಹಿಂದೆಯು ಸಹ ಈ ಜ್ಞಾನವನ್ನು
ತಿಳಿಸಿದ್ದೆನು. ರಾಜಯೋಗವನ್ನು ಕಲಿಸಿದ್ದೆನು. ಕಲ್ಪ-ಕಲ್ಪವು ಕಲಿಸುತ್ತೇನೆ. ಬರುತ್ತಿದಂತೆಯೇ
ಪತಿತರನ್ನು ಪಾವನ ಮಾಡುವ ಕರ್ತವ್ಯ ನನ್ನದಾಯಿತು. ಬಂದು ಮಕ್ಕಳನ್ನು ಪಾವನ ಮಾಡುವುದು ತಂದೆಯ
ಪಾತ್ರವಾಗಿದೆ. ನಾವೇ ದೇವತೆಗಳು ಪಾವನರಾಗಿದ್ದೆವು, ಈಗ ಪುನಃ ಪಾವನರಾಗಬೇಕಾಗಿದೆ. ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ ಎನ್ನುವುದನ್ನು ನೀವು
ತಿಳಿದುಕೊಂಡಿದ್ದೀರಿ. ಭವಿಷ್ಯದಲ್ಲಿ ನೀವು ಸೂರ್ಯವಂಶೀ , ಚಂದ್ರವಂಶೀ ರಾಜಕುಮಾರ-ಕುಮಾರಿಯರು ಆಗುವವರಿದ್ದೀರಿ. ಇದು ಭವಿಷ್ಯದ
ರಾಜಕುಮಾರ-ಕುಮಾರಿಯರಾಗುವಂತಹ ಜ್ಞಾನವಾಗಿದೆ. ಆದ್ದರಿಂದ ಯಾವಾಗ ದೈವೀ ಗುಣಗಳನ್ನು ಧಾರಣೆ
ಮಾಡುತ್ತೀರೋ, ಆಗ ರಾಜಕುಮಾರ-ಕುಮಾರಿಯರಾಗುತ್ತೀರಿ.
ನಾನು ಧಾರಣೆ ಮಾಡುತ್ತೇನೆಯೇ? ಯಾವ-ಯಾವ ವಿಘ್ನಗಳು ಬರುತ್ತವೆ? ಎಂದು ತಮ್ಮನ್ನು ನೋಡಿಕೊಳ್ಳಬೇಕಾಗಿದೆ. ಆ
ವಿಘ್ನಗಳನ್ನು ಯುಕ್ತಿಯಿಂದ ಪಾರು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೇ ಕರ್ಮಾತೀತ ಸ್ಥಿತಿಯನ್ನು
ಪಡೆಯಬೇಕಾಗಿದೆ. ಮುಳ್ಳುಗಳು ಯಾವುದೇ ಬರಲಿ ಅವುಗಳನ್ನು ತೆಗೆದುಹಾಕುತ್ತಾ ಮುಂದೆ-ಮುಂದೆ
ಹೋಗಬೇಕಾಗಿದೆ. ದೇಹದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗಿ ತಂದೆಯನ್ನು ನೆನಪು
ಮಾಡಬೇಕಾಗಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಮಾರ್ಗವು ಸ್ವಚ್ಚವಾಗುತ್ತಾ ಹೋಗುವುದು.
ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲಪುಷ್ಪ ಸಮಾನರಾಗಬೇಕಾಗಿದೆ. ಎಂದೂ ವಿಕಾರದಲ್ಲಿ
ಹೋಗಬಾರದಾಗಿದೆ. ಮೂಲ ಮಾತು ವಿಕಾರದ್ದಾಗಿದೆ. ವಿಕಾರದಲ್ಲಿ ಹೋಗುವುದನ್ನು ನಿಲ್ಲಿಸಬೇಕಾಗಿದೆ.
ಭಲೆ ಎಷ್ಟೇ ವಿಘ್ನಗಳು ಬರಲಿ ಆದರೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಜಾಸ್ತಿ ವಿಘ್ನಗಳು
ಸ್ತ್ರೀಯರಿಗೆ ಬರುತ್ತವೆ. ನಾವು ಪವಿತ್ರರಾಗಿರಬೇಕೆಂದು ಅವರು ಇಚ್ಛಿಸುತ್ತಾರೆ.
ಕೃಷ್ಣಪುರಿಯಲ್ಲಿ ಹೋಗಲು ಇಚ್ಛಿಸುತ್ತಾರೆ. ಕೃಷ್ಣ ಜಯಂತಿಯಂದು ತುಂಬಾ ಪ್ರೇಮದಿಂದ ಕೃಷ್ಣನನ್ನು
ತೂಗುತ್ತಾರೆ. ಪೂಜೆ ಮಾಡುತ್ತಾರೆ, ವ್ರತ ಮುಂತಾದವುಗಳನ್ನು ಇಟ್ಟುಕೊಳ್ಳುತ್ತಾರೆ. ಅದಂತೂ ಕೇವಲ 7 ದಿನದ ವ್ರತ ನಿಯಮವಾಯಿತು.
ತಂದೆಯು ತಿಳಿಸುತ್ತಾರೆ - ಈಗ ನೀವು ವಿಕಾರದಲ್ಲಿ ಎಂದೂ ಹೋಗುವುದಿಲ್ಲವೆಂಬ ವ್ರತವನ್ನು ಇಡಿ.
ಎಲ್ಲಿಯತನಕ ಜೀವಿಸಿರಬೇಕಾಗಿದೆಯೋ, ಅಲ್ಲಿಯತನಕ ಪವಿತ್ರತೆಯ ವ್ರತವನ್ನು ಇಟ್ಟುಕೊಳ್ಳಬೇಕಾಗಿದೆ. ಈ ಹಳೆಯ ಪ್ರಪಂಚದಲ್ಲಿ ಈಗ ಇದು
ನಮ್ಮ ಅಂತಿಮ ಜನ್ಮವಾಗಿದೆ. ಕೇವಲ ನಮ್ಮದಷ್ಟೇ ಅಲ್ಲ, ಇಡೀ ಪ್ರಪಂಚದ ಅಂತಿಮ ಜನ್ಮವಾಗಿದೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಈಗ ನಾವು
ಪವಿತ್ರರಾಗಿ ಪವಿತ್ರ ಪ್ರಪಂಚದಲ್ಲಿ ಹೋಗುತ್ತೇವೆ. ನಂತರದ ಜನ್ಮವು ನಮ್ಮದು ಪವಿತ್ರ
ಪ್ರಪಂಚದಲ್ಲಿ ಆಗುತ್ತದೆ. ಆ ಹಠಯೋಗಿ ಸನ್ಯಾಸಿಗಳು ಯಾರೂ ಇದು ನಮ್ಮ ಅಂತಿಮ ಜನ್ಮವಾಗಿದೆ ಎನ್ನುವ
ವಿಚಾರದಿಂದ ಪವಿತ್ರರಾಗುವುದಿಲ್ಲ. ಇಲ್ಲಂತೂ ಪರಿಶ್ರಮವಿದೆ. ಜೊತೆಯಲ್ಲಿ ಇದ್ದರೂ ಸಹ ಎಂದೂ
ವಿಕಾರದಲ್ಲಿ ಹೋಗಬಾರದಾಗಿದೆ. ಇಬ್ಬರೂ ಸಹ ವ್ರತವನ್ನು ತೆಗೆದುಕೊಳ್ಳಬೇಕಾಗಿದೆ. ಅಬಲಯೆರ ಮೇಲೆ
ಎಷ್ಟೊಂದು ಅತ್ಯಾಚಾರಗಳು ಆಗುತ್ತವೆ. ಅವರೇ ತಂದೆಯನ್ನು ಕೂಗುತ್ತಾರೆ. ಪ್ರಭು ನಮ್ಮ
ಮರ್ಯಾದೆಯನ್ನು ಕಾಪಾಡಿ ಎಂದು ಪುರುಷರು ಎಂದೂ ಕೂಗುವುದಿಲ್ಲ. ಪತಿತರಾಗುವುದರಿಂದ ರಕ್ಷಣೆ ಮಾಡಿ, ಇದು ಮಾತೆಯರ ಕೂಗು ಆಗಿದೆ. ಮಾತೆಯರೇ
ತಂದೆಯನ್ನು ಹೇ ತಂದೆಯೇ ನನ್ನನ್ನು ಪತಿತರಾಗುವುದರಿಂದ ರಕ್ಷಿಸಿ ಎಂದು ಕರೆಯುತ್ತಾರೆ. ಇವು ಅದೇ
ಗೀತಾ ಭಾಗವತದ ಮಾತುಗಳಾಗಿವೆ. ಕೇವಲ ಹೆಸರನ್ನು ಮರೆತು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ.
ಕೃಷ್ಣನು ಪತಿತ ಪಾವನನಲ್ಲ. ಪತಿತ ಪಾವನ ತಂದೆ ಒಬ್ಬರೇ ಆಗಿದ್ದಾರೆ. ಪವಿತ್ರರಾಗುವುದಕ್ಕೋಸ್ಕರ
ಏಟುಗಳನ್ನು ಸಹ ತಿನ್ನಬೇಕಾಗುತ್ತದೆ. ಕಲ್ಪದ ಹಿಂದೆಯೂ ಸಹ ಹೀಗೆಯೇ ಆಗಿತ್ತು, ಈಗ ಪುನಃ ಆಗುತ್ತಾ ಇದೆ ಎನ್ನುವುದನ್ನು
ನೀವು ಅರಿತುಕೊಂಡಿದ್ದೀರಿ. ಒಬ್ಬ ದ್ರೌಪದಿಯಲ್ಲ, ನೀವು ಎಷ್ಟೊಂದು ದ್ರೌಪದಿಯರಿದ್ದೀರಿ. ಅನೇಕ ಪತಿತರನ್ನು ಪಾವನ ಮಾಡಬೇಕಾಗಿದೆ. ಪವಿತ್ರರಾಗಿ
ಪವಿತ್ರರನ್ನಾಗಿ ಮಾಡಲು ನೀವು ಮಾತೆಯರೇ ನಿಮಿತ್ತರಾಗಿದ್ದೀರಿ. ನೀವು ಇನ್ನೂ ಹೆಚ್ಚಿನ ಗಮನವನ್ನು
ವಿದ್ಯೆಯ ಮೇಲೆ ಕೊಡಬೇಕಾಗಿದೆ. ತಮ್ಮ ಜೊತೆಗಾರರನ್ನು ಮೇಲೆತ್ತಬೇಕಾಗಿದೆ. ಸನ್ಯಾಸಿಗಳದು
ನಿವೃತ್ತಿ ಮಾರ್ಗವಾಗಿದೆ. ಇದು ಪ್ರವೃತ್ತಿ ಮಾರ್ಗವಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಇದ್ದು
ಪವಿತ್ರರಾಗಬೇಕಾಗಿದೆ, ಓದಬೇಕು ಹಾಗೂ ಓದಿಸಬೇಕಾಗಿದೆ. ಇದರಿಂದ
ಉತ್ತಮ ಪದವಿಯು ಸಿಗಬೇಕು. ವಿದ್ಯೆಯು ಬಹಳ ಸಹಜವಾಗಿದೆ. ತಿಳಿಸಬೇಕಾಗಿದೆ - ಭಾರತವು ವಜ್ರ
ಸಮಾನವಾಗಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ
ಇಷ್ಟೊಂದು ಏಕೆ ಕೆಳಗೆ ಬಂದಿದ್ದೇವೆ ಎನ್ನುವ ಬೇಹದ್ದಿನ ಇತಿಹಾಸ, ಭೂಗೋಳವನ್ನು ನಾವು ನಿಮಗೆ
ತಿಳಿಸುತ್ತೇವೆ. ನಂತರ ಸ್ವರ್ಗವು ಹೇಗಾಗುತ್ತದೆ ಎನ್ನುವುದು ಮನುಷ್ಯರಿಗೆ ವಿಚಾರದಲ್ಲಿಯೂ ಇಲ್ಲ.
ಲಕ್ಷ್ಮೀ-ನಾರಾಯಣರು ಯಾರು ಪೂಜ್ಯರಾಗಿದ್ದರು ಅವರೇ ಪೂಜಾರಿಗಳಾಗಿದ್ದಾರೆ ಎನ್ನುವುದು ಯಾರಿಗೂ
ತಿಳಿದಿಲ್ಲ. ತಾವೇ ಪೂಜ್ಯ, ತಾವೇ ಪೂಜಾರಿ........ಇದು
ಪರಮಾತ್ಮನಿಗಲ್ಲ. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿ ತಮೋಪ್ರಧಾನರಾಗಿದ್ದಾರೆ ಎನ್ನುವುದು
ಯಾರಿಗೂ ತಿಳಿದಿಲ್ಲ. ಪೂಜ್ಯರಾಗಿದ್ದವರು ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಂಡಿರಬಹುದು.
ಇದೂ ಸಹ ತಿಳಿದಿಲ್ಲ. ಸತ್ಯಯುಗದಲ್ಲಿ ಯಾರು ಬರುತ್ತಾರೋ ಅವರು ಪುನರ್ಜನ್ಮವನ್ನು
ತೆಗೆದುಕೊಳ್ಳಬೇಕಾಗಿದೆ ಎನ್ನುವುದನ್ನು ತಂದೆಯು ತಿಳಿಸಿಕೊಡುತ್ತಾರೆ. ನಾವು ಸೂರ್ಯವಂಶೀ ನಂತರ
ಚಂದ್ರವಂಶಿಯರಾದೆವು, ಈಗ ಬ್ರಾಹ್ಮಣ ವಂಶಿಯರಾಗುತ್ತೇವೆ, ನಂತರ ದೇವತಾ ವಂಶಿಯರಾಗುತ್ತೇವೆ. ಹೇಗೆ
ಇವರನ್ನು ತಂದೆಯು ದತ್ತು ಮಾಡಿಕೊಂಡು ಬ್ರಹ್ಮಾನನ್ನಾಗಿ ಮಾಡಿದ್ದಾರೆ. ನೀವು ಹೇಗಾದ್ದೀರಿ? ಎಂದು ಯಾರೇ ಕೇಳಲಿ. ಹೇಳಿ, ಬ್ರಹ್ಮಾರವರ ಮುಖದಿಂದ ಪರಮಪಿತ
ಪರಮಾತ್ಮನು ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯೇ ಪತಿತರನ್ನು ಪಾವನರನ್ನಾಗಿ
ಮಾಡುತ್ತಾರೆ. ಈಗ ನಾವು ಪವಿತ್ರತೆಯ ಪ್ರತಿಜ್ಞೆ ಮಾಡುತ್ತೇವೆ. ತಂದೆಯನ್ನು ನೆನಪು
ಮಾಡುವುದರಿಂದಲೇ ನಾವು ಪಾವನರಾಗುತ್ತೇವೆ. ತಂದೆಯು ಕೃಪೆ ಮಾಡುತ್ತಾರೆಯೇ? ಕೃಪೆಯನ್ನಂತೂ ಮಾಡಿದ್ದಾರಲ್ಲವೇ.
ಪರಮಧಾಮದಿಂದ ಪತಿತ ಪ್ರಪಂಚದಲ್ಲಿ, ಪತಿತ ಶರೀರದಲ್ಲಿ ಬಂದಿದ್ದಾರೆ. ಆ ತಂದೆಯು ತಿಳಿಸುತ್ತಾರೆ - ಈಗ ನಾನು ಬಂದಿದ್ದೇನೆ, ನಾನು ಏನನ್ನು ಕಲಿಸುತ್ತೇನೆಯೋ ಅದನ್ನು
ಕಲಿಯಿರಿ, ನನ್ನನ್ನು ನೆನಪು ಮಾಡಿ, ಆಗ ನಿಮಗೆ ಶಕ್ತಿಯು ಸಿಗುತ್ತದೆ. ವಿಕರ್ಮ
ವಿನಾಶವಾಗುತ್ತದೆ. ಇದರಲ್ಲಿ ಆಶೀರ್ವಾದದ ಮಾತೇ ಇಲ್ಲ. ತಾವು ಕೃಪೆ ಮಾಡಿ ಆಗ ನಾವು ನೂರು
ಅಂಕಗಳಿಂದ ಉತ್ತೀರ್ಣರಾಗಿ ಬಿಡುತ್ತೇವೆ ಎಂದು ಶಿಕ್ಷಕರಿಗೆ ಹೇಳುತ್ತೀರೇನು!! ಇವರೂ ಸಹ
ಬೇಹದ್ದಿನ ಶಿಕ್ಷಕರಾಗಿದ್ದಾರೆ - ಓದಿಸುತ್ತಾರೆ. ಯಾರಿಗೇ ಆಗಲಿ, ಜ್ಞಾನವು ಧಾರಣೆ ಆಗುವುದಿಲ್ಲವೆಂದರೆ ಏನು
ಮಾಡುತ್ತಾರೆ! ಶಿಕ್ಷಕರು ಎಲ್ಲರ ಮೇಲೆ ಕೃಪೆ ಮಾಡಿದರೆ ಎಲ್ಲರೂ ಉತ್ತೀರ್ಣರಾಗಿ ಬಿಡುತ್ತಾರೆಂದರೆ
ರಾಜಧಾನಿ ಹೇಗಾಗುತ್ತದೆ. ನೀವು ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ. ಆದ್ದರಿಂದ ತಂದೆ-ತಾಯಿಯನ್ನು
ಅನುಕರಣೆ ಮಾಡಿ, ತಂದೆಯನ್ನು ನೆನಪು ಮಾಡಿ. ಮತ್ತ್ಯಾವುದೇ
ಉಪಾಯವಿಲ್ಲ. ಇಲ್ಲವೆಂದರೆ ತಂದೆಯನ್ನು ಏಕೆ ಕರೆಯುತ್ತೀರಿ! ಸಾಧು-ಸಂತ ಮುಂತಾದವರೆಲ್ಲರೂ ಬಂದು
ನಮ್ಮನ್ನು ದುಃಖದಿಂದ ಬಿಡಿಸಿ ಎಂದು ಕರೆಯುತ್ತಾರೆ. ತುಂಬಾ ಸಂಕಟ ಬರುವುದಿದೆ, ಯಾವಾಗ ವಿನಾಶವು ಪ್ರಾರಂಭವಾಗಿ ಬಿಡುತ್ತದೆಯೋ, ಆಗ ಅವಶ್ಯವಾಗಿ ಎಲ್ಲಿಯೋ ಭಗವಂತನು ಗುಪ್ತ
ವೇಷದಲ್ಲಿ ಬಂದಿದ್ದಾರೆ ಎನ್ನುವುದನ್ನು ತಿಳಿಯುತ್ತಾರೆ. ಒಂದು ವೇಳೆ ಕೃಷ್ಣನು ಭಗವಂತನಾಗಿ
ಬಂದಿದ್ದರೆ ಇಡೀ ಪ್ರಪಂಚದಲ್ಲಿ ಡಂಗೂರವನ್ನು ಸಾರುತ್ತಿದ್ದರು. ಕೃಷ್ಣನಂತೂ ಬರಲು ಸಾಧ್ಯವಿಲ್ಲ.
ಇಲ್ಲಿ ತಂದೆಯೇ ಬರಬೇಕಾಗುತ್ತದೆ. ಅಂತ್ಯದ ತನಕ ತಂದೆಯು ಜ್ಞಾನವನ್ನು ತಿಳಿಸಬೇಕಾಗಿದೆ, ಅವರು ಗುಪ್ತ ರೂಪದಲ್ಲಿಯೇ ಬರುತ್ತಾರೆ.
ಕೃಷ್ಣನಂತೂ ಇರಲು ಸಾಧ್ಯವಿಲ್ಲ. ಎಲ್ಲರಿಗೂ ನಿರಾಕಾರ ತಂದೆ ಒಬ್ಬರೇ ಆಗಿದ್ದಾರೆ. ಅವರು
ಪತಿತರನ್ನು ಪಾವನ ಮಾಡಿ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಎಲ್ಲರಿಗೆ ತಿಳಿಸುವುದು ನಿಮ್ಮ
ಕರ್ತವ್ಯವಾಗಿದೆ. ಕೇಳಬೇಕಾಗಿದೆ - ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು! ತಂದೆಗೆ
ಎಷ್ಟೊಂದು ಜನ ಮಕ್ಕಳಿದ್ದಾರೆ. ಪರಮಪಿತ ಪರಮಾತ್ಮನ ಆದೇಶವಾಗಿದೆ - ಮೊದಲನೆಯದಂತೂ ನನ್ನನ್ನು
ನೆನಪು ಮಾಡಿ ಮತ್ತು ಒಳ್ಳೆಯ ರೀತಿಯಲ್ಲಿ ಓದಿ. ತಂದೆಯನ್ನು ಒಳ್ಳೆಯ ರೀತಿಯಲ್ಲಿ ನೆನಪು ಮಾಡಿ
ಉತ್ತಮ ಆಸ್ತಿಯನ್ನು ಪಡೆಯಬೇಕಾಗಿದೆ. ಬೇಹದ್ದಿನ ಇತಿಹಾಸ ಭೂಗೋಳವನ್ನು ನಿಮಗೆ ತಿಳಿಸುತ್ತಾ
ಇರುತ್ತಾರೆ. ಆದ್ದರಿಂದ ಚಿತ್ರಗಳ ಮೇಲೂ ಸಹ ನೀವು ತಿಳಿಸಿಕೊಡಿ. ಭಾರತವು ಸತ್ಯಯುಗದಲ್ಲಿ
ಸಂಪತ್ತಿವಂತವಾಗಿತ್ತು. ಸೂರ್ಯವಂಶಿ ದೇವೀ-ದೇವತೆಗಳು ರಾಜ್ಯ ಮಾಡುತ್ತಿದ್ದರು ನಂತರ ಚಂದ್ರವಂಶಿ
ರಾಜ್ಯವಾಯಿತು, ಕಲೆಗಳು ಕಡಿಮೆ ಆಗುತ್ತಾ ಹೋಯಿತು.
ಇದನ್ನೂ ಸಹ ನೋಡಬೇಕಾಗುತ್ತದೆಯಲ್ಲವೇ. ಒಳ್ಳೆಯ ರೀತಿಯಲ್ಲಿ ಓದುತ್ತೀರಿ ಎಂದರೆ ಅವಶ್ಯವಾಗಿ ಕಲಿಯುತ್ತೀರಿ.
ಓದುವುದಿಲ್ಲವೆಂದರೆ ಅನುತ್ತೀರ್ಣರಾಗಿ ಬಿಡುತ್ತೀರಿ. ಎಚ್ಚರಿಕೆಯನ್ನು ಯಾರು ಕೊಡಬೇಕು. ಇಂದಿನ
ದಿನಗಳಲ್ಲಿ ಮಾಯೆಯು ತುಂಬಾ ಎಚ್ಚರ ತಪ್ಪಿಸುತ್ತದೆ. ಇಲ್ಲಿ ಸುಳ್ಳು ಮುಚ್ಚಿಡಲು ಸಾಧ್ಯವಿಲ್ಲ.
ಯಾವುದೇ ವಿಕರ್ಮವನ್ನು ಮಾಡುತ್ತೀರೆಂದರೆ ಅದು ಜಮಾ ಆಗುತ್ತಾ ಹೋಗುವುದು. ಪಾಪ ಅಥವಾ ಪುಣ್ಯ
ಅವಶ್ಯವಾಗಿ ಜಮಾ ಆಗುತ್ತದೆ. ಅದರ ಅನುಸಾರವೇ ಇನ್ನೊಂದು ಜನ್ಮವು ಸಿಗುತ್ತದೆ. ಯಾವುದೇ ಪಾಪವನ್ನು
ಮಾಡುತ್ತೀರೆಂದರೆ ಜನ್ಮವೂ ಸಹ ಹಾಗೆಯೇ ಸಿಗುತ್ತದೆ. ಆದ್ದರಿಂದ ಯಾವುದೇ ಪಾಪವನ್ನು
ಮಾಡುತ್ತೀರೆಂದರೆ ತಕ್ಷಣ ತಿಳಿಸಿ ಎಂದು ತಂದೆಯು ಹೇಳುತ್ತಾರೆ. ಈಶ್ವರನಂತೂ ಎಲ್ಲವನ್ನು
ತಿಳಿದುಕೊಂಡಿರುತ್ತಾರೆ ಎಂದು ಮುಚ್ಚಿಡಬಾರದು. ತಂದೆಗೆ ತಿಳಿಸಬೇಕಾಗಿದೆ. ಈ ಜನ್ಮದಲ್ಲಿ ಯಾವ
ಪಾಪ ಕರ್ಮಗಳನ್ನು ಮಾಡಿದ್ದೀರಿ ಅದನ್ನು ಆತ್ಮವು ತಿಳಿದುಕೊಂಡಿದೆ. ನಾವು ಏನೇನು ಕರ್ಮಗಳನ್ನು
ಮಾಡಿದೆವು ಎಂದು ಎಲ್ಲವೂ ನೆನಪಿರುತ್ತದೆ. ನಾವು ಇಂತಿಂತಹದನ್ನು ಮಾಡಿದೆವು ಎಂದು
ಬಾಪ್ದಾದಾರವರಿಗೆ ತಿಳಿಸಿ. ಮುಖ್ಯ ಮಾತು ವಿಕಾರದ್ದಾಗಿದೆ. ಕಳ್ಳತನ ಮಾಡುವುದು, ಮೋಸ ಮಾಡುವುದು ಇವಂತೂ ಚಿಕ್ಕ-ಚಿಕ್ಕ
ಮಾತುಗಳಾಯಿತು. ವಿಕಾರದ ಮಾತು ಮುಖ್ಯವಾಗಿದೆ, ಕಾಮ ಮಹಾ ಶತ್ರುವಾಗಿದೆ. ವಿಕಾರದಲ್ಲಿ ಹೋಗುವವರನ್ನೇ ಪತಿತರೆಂದು ಹೇಳಲಾಗುತ್ತದೆ. ಈ
ವಿಕಾರಗಳ ಮೇಲೆ ಮೊದಲು ಜಯವನ್ನು ಪಡೆಯಬೇಕಾಗಿದೆ. ನಿಮ್ಮ ಶತ್ರು ರಾವಣನಾಗಿದ್ದಾನೆ. ಈ ರಾವಣ
ಪತಿತರನ್ನಾಗಿ ಮಾಡುತ್ತಾನೆ. ಈಗ ಪಾವನರಾಗಲು ತಂದೆಯನ್ನು ನೆನಪು ಮಾಡಿ. ತಂದೆಯ ಮಕ್ಕಳಾದ ನಂತರವೂ
ಸಹ ವಿಕಾರದಲ್ಲಿ ಬೀಳುತ್ತಾರೆಂದರೆ ತುಂಬಾ ಪೆಟ್ಟು ಬೀಳುತ್ತದೆ. ಮೊದಲಂತೂ ದೇಹಾಭಿಮಾನವನ್ನು
ಬಿಡಬೇಕಾಗಿದೆ ನಂತರ ಕಾಮ ಮಹಾಶತ್ರುವಾಗಿದೆ. ಇಡೀ ಯುದ್ಧವು ಇದರ ಮೇಲಿದೆ. ಎಂದಾಗ ಈ ಎಲ್ಲಾ
ಮಾತುಗಳನ್ನು ತಿಳಿದುಕೊಂಡು ನಂತರ ಅನ್ಯರಿಗೂ ತಿಳಿಸಬೇಕಾಗಿದೆ. ನೀವು ಎಷ್ಟು ಆತ್ಮಗಳಿಗೆ ಸತ್ಯ
ಗೀತೆ ಅಥವಾ ಸತ್ಯನಾರಾಯಣನ ಕಥೆ, ಅಮರ ಕಥೆಯನ್ನು ತಿಳಿಸಿದ್ದೀರಿ! ಎಂದು
ತಂದೆಯು ಕೇಳುತ್ತಾರೆ. ಪಾಪಾತ್ಮರಂತೂ ಅನೇಕರಿದ್ದಾರೆ. ಎಂದಾಗ ಈ ಲೆಕ್ಕವನ್ನೂ ಸಹ ತಿಳಿಸಿ, ಆಗ ನೀವು ಬ್ರಾಹ್ಮಣರಾಗಿದ್ದೀರಿ
ಎನ್ನುವುದು ತಿಳಿಯುತ್ತದೆ. ಎಷ್ಟು ಆತ್ಮಗಳನ್ನು ತಮ್ಮ ಸಮಾನ ಮಾಡಿಕೊಂಡಿದ್ದೀರಿ! ಎನ್ನುವುದನ್ನು
ತಿಳಿಸಿ. ಇವು ಸಹಜ ರಾಜಯೋಗದ ಮಾತುಗಳಾಗಿವೆ. ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ಪ್ರಪಂಚದಲ್ಲಿ
ಇದನ್ನಂತೂ ಯಾರೂ ಅರಿತುಕೊಂಡಿಲ್ಲ. ತಂದೆಯ ಬಳಿ ಅನೇಕರ ಸರ್ಟಿಫಿಕೆಟ್ ಬರುತ್ತದೆ. ಇಂತಹವರು ಹೀಗೆ
ತಿಳಿಸಿದರು ಸ್ವರ್ಗದ ಮಾಲೀಕರಾಗಲು ಅವರೇ ಗುರುವಾಗಿ ನಿಮಿತ್ತರಾದರು ಎಂದು ಬರೆಯುತ್ತಾರೆ.
ಬ್ರಹ್ಮಾಕುಮಾರ-ಕುಮಾರಿಯರು ತಂದೆಗೆ ಪ್ರತಿಯನ್ನು ಕೊಡುತ್ತಾರೆ, ಆದರೆ ಯಾರು ಆಗುತ್ತಾರೆಯೋ, ಅವರು ಯಾರಿಗೆ ತಿಳಿಸುತ್ತಾರೆ? ಯಾರನ್ನು ಕರೆತರುತ್ತಾರೆ? ಕರೆದುಕೊಂಡಂತೂ ಬರಬೇಕಲ್ಲ! ಯಾರಿಗೆ
ನಿಶ್ಚಯವಿರುತ್ತದೆಯೋ ಅವರು ತಕ್ಷಣ ಹೇಳುತ್ತಾರೆ - ಮೊದಲು ತಂದೆಯ ಮಡಿಲನ್ನು ತೆಗೆದುಕೊಳ್ಳಿ
ಎಂದು. ಕ್ರಿಶ್ಚಯನ್ನರಲ್ಲಿ ಮಗು ಜನ್ಮವಾಗುತ್ತದೆ ಎಂದರೆ ಕ್ರಿಶ್ಚಯನೈಸ್ ಮಾಡಿಸುತ್ತಾರೆ.
ನಾವಂತೂ ಈಶ್ವರನ ಮಡಿಲಿನ ಮಕ್ಕಳಾದೆವು. ಸದ್ಗುರುವಿನ ಮಡಿಲನ್ನಂತೂ ತೆಗೆದುಕೊಂಡೆವು. ಮಡಿಲು
ಸಿಕ್ಕಿತು, ತಂದೆಯೊಂದಿಗೆ ಸೇರಿದೆವೆಂದರೆ ಇದು ನಮ್ಮ
ಆಸ್ತಿ ಆಗಿಬಿಟ್ಟಿತು. ಹೀಗೆ ಮಸ್ತರಾಗಿರುವವರು ಕೆಲವರಷ್ಟೇ ಇರುತ್ತಾರೆ. ತಿಳಿಸಿಕೊಡಬೇಕಲ್ಲವೇ.
ಮುಂದೆ ನಡೆದಂತೆ ಚೆನ್ನಾಗಿ ತಿಳಿಯುತ್ತಾರೆ. ನಿಮ್ಮಲ್ಲಿ ತುಂಬಾ ಶಕ್ತಿ ತುಂಬುತ್ತದೆ. ಮತ್ತೆ
ತಂದೆಯನ್ನು ಮಿಲನ ಮಾಡದೇ ನಿಲ್ಲಲು ಸಾಧ್ಯವಿಲ್ಲ. ಓಡಿ ಹೋಗುತ್ತೀರಿ. ಅಂದಾಗ ತಂದೆ-ತಾಯಿಯು
ಆಗಿದ್ದಾರೆ, ಶಿಕ್ಷಕರೂ ಆಗಿದ್ದಾರೆ, ಮತ್ತೆ ಸದ್ಗುರುವೂ ಆಗಿದ್ದಾರೆ.
ಮಾತಾ-ಪಿತಾರವರ ಮಡಿಲನ್ನು ತೆಗೆದುಕೊಳ್ಳಿ. ಗುರುವಿನ ಬಳಿ ಹೋಗುತ್ತಾರೆ. ಆದರೆ ಅವರಂತೂ ಯಾವುದೇ
ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುವುದಿಲ್ಲ. ತಂದೆಯಿಂದಲೇ ರಾಜ್ಯಭಾಗ್ಯವು ಸಿಗುತ್ತದೆ. ತಂದೆಯೇ
ಶಿಕ್ಷಕ, ಸದ್ಗುರು ಆಗಿರುವುದರಿಂದ ಈ ಮೂವರಿಂದ
ಆಸ್ತಿಯನ್ನೇಕೆ ಪಡೆಯಬಾರದು! ಇದು ಅದ್ಬುತವಾಗಿದೆಯಲ್ಲವೇ! ಕೃಷ್ಣನಿಗೆ ತಂದೆ, ಟೀಚರ್, ಗುರು ಮೂರೂ ಆಗಿದ್ದರು ಎಂದು
ಹೇಳುತ್ತಾರೇನು? ಕೃಷ್ಣನಂತೂ ಚಿಕ್ಕ
ರಾಜಕುಮಾರನಾಗಿದ್ದಾರೆ. ಇವರು ತಂದೆಯು ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ ಆಗಿದ್ದಾರೆ ಎನ್ನುವುದು ನೀವು ಮಕ್ಕಳ
ಬುದ್ಧಿಯಲ್ಲಿ ಇದೆ. ಈ ತಂದೆಗೆ ಯಾರೂ ತಂದೆ, ಶಿಕ್ಷಕ, ಗುರುಗಳಿಲ್ಲ. ಕೃಷ್ಣನಿಗಂತೂ ತಂದೆ-ತಾಯಿ
ಇದ್ದರಲ್ಲವೇ. ಪತಿತ ಪಾವನ ತಂದೆ ಒಬ್ಬರೇ ಆಗಿದ್ದಾರೆ, ಯಾರಿಗೆ ತಂದೆ-ತಾಯಿ ಇರುತ್ತಾರೋ ಅವರು ಪತಿತ ಪಾವನನಾಗಲು ಸಾಧ್ಯವಿಲ್ಲ. ಅವರನ್ನು
ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಭಗವಂತನಿಗೆ ಯಾರು ತಂದೆ-ತಾಯಿ ಇಲ್ಲ. ಭಗವಂತ ತಂದೆಗೆ ಯಾರೂ
ತಂದೆ ಇರಲು ಸಾಧ್ಯವಿಲ್ಲ. ಭಗವಂತ ತಂದೆಯನ್ನು ಪತಿತ ಪಾವನ, ಮುಕ್ತಿದಾತ ಎಂದು ಹೇಳಲಾಗುತ್ತದೆ. ಅವರನ್ನು ಮುಕ್ತ ಮಾಡುವವರು ಯಾರೂ ಇಲ್ಲ. ಇದು ತಂದೆಯದೇ
ಕರ್ತವ್ಯವಾಗಿದೆ. ಮನುಷ್ಯರನ್ನು ಭಗವಂತನೆಂದು ಹೇಳಲು ಸಾಧ್ಯವಿಲ್ಲ.
ಬ್ರಹ್ಮಾ-ವಿಷ್ಣು-ಶಂಕರರನ್ನು ರಚಿಸುವಂತಹವರು ಆ ರಚಯಿತ ತಂದೆಯಾಗಿದ್ದಾರೆ. ಶ್ರೇಷ್ಠಾತಿ
ಶ್ರೇಷ್ಠ ಭಗವಂತನೆಂದು ಗಾಯನ ಮಾಡಲಾಗುತ್ತದೆ. ಅವರು ನಮ್ಮೆಲ್ಲರ ತಂದೆಯಾಗಿದ್ದಾರೆ. ಕೃಷ್ಣನನ್ನು
ಎಲ್ಲರ ತಂದೆ ಎಂದು ಹೇಳುತ್ತಾರೇನು? ನಾವು ಒಬ್ಬ ನಿರಾಕಾರ ತಂದೆಗೆ ಮಕ್ಕಳಾಗಿದ್ದೇವೆ. ಅವರೇ ಹೊಸ ಪ್ರಪಂಚದ ರಚಯಿತನಾಗಿದ್ದಾರೆ.
ಹೊಸ ಪ್ರಪಂಚವನ್ನು ಸುಖಧಾಮವೆಂದು ಹೇಳಲಾಗುತ್ತದೆ. ನಂತರ ಹೊಸದರಿಂದ ಹಳೆಯ ಪ್ರಪಂಚವಾಗುತ್ತದೆ.
ರಾವಣ ರಾಜ್ಯವಾಗಿದೆಯಲ್ಲವೇ. ರಾವಣನನ್ನು ಸುಡುತ್ತಾರೆ, ಆದರೆ ಏನನ್ನೂ ಅರಿತುಕೊಂಡಿಲ್ಲ. ಯಾವುದೆಲ್ಲಾ ಹಬ್ಬಗಳನ್ನು ಆಚರಿಸುತ್ತಾರೆ, ಅದರ ಅರ್ಥವನ್ನೂ ಸಹ ತಿಳಿದುಕೊಂಡಿಲ್ಲ.
ನಿಮ್ಮದು ಇದು ಬಹಳ ಜನ್ಮಗಳ ಅಂತ್ಯದ ಅಂತಿಮ ಜನ್ಮವಾಗಿದೆ ಎಂದು ತಂದೆಯು ತಿಳಿಸುತ್ತಾರೆ.
ರಾವಣನಿಗೂ ಸಹ ಈಗ ಅಂತ್ಯವಾಗಿದೆ. ನಂತರ ಸತ್ಯ ಯುಗದಲ್ಲಿ ರಾವಣನನ್ನು ಸುಡುವುದಿಲ್ಲ. ಈ ಶತ್ರು
ಯಾವ ಪ್ರಕಾರದವನಾಗಿರಬಹುದು, ಈ ರಾವಣನನ್ನು ಸುಡುತ್ತಲೇ ಇರುತ್ತಾರೆ.
ರಾವಣನ ಜನ್ಮ ಯಾವಾಗ ಆಯಿತು? ಯಾರಿಗೂ ಗೊತ್ತಿಲ್ಲ. ಶಿವ ಜಯಂತಿಯನ್ನು
ಆಚರಿಸುತ್ತಾರೆಂದರೆ ರಾವಣನ ಜಯಂತಿಯನ್ನು ಆಚರಿಸಬೇಕಲ್ಲವೇ. ಏನನ್ನೂ ಅರಿತುಕೊಂಡಿಲ್ಲ. ಈ
ವಿಸ್ತಾರದ ಮಾತುಗಳನ್ನು ತಿಳಿಸಲಾಗುತ್ತದೆ. ಇದನ್ನೂ ಸಹ ಬುದ್ಧಿಯಲ್ಲಿ ಧಾರಣೆ ಮಾಡಬೇಕಾಗುತ್ತದೆ.
ಕ್ಲಾಸಿಗೆ ಬರುವುದಿಲ್ಲವೆಂದರೆ ಏನು ಓದುತ್ತಾರೆ. ಓದಿ-ಓದಿಸುವುದಿಲ್ಲವೆಂದರೆ ಪದವಿಯನ್ನು ಏನು
ಪಡೆಯುತ್ತಾರೆ? ಯಾರು ಚೆನ್ನಾಗಿ ಓದಿ-ಓದಿಸುತ್ತಾರೋ ಅವರೇ
ಮಕ್ಕಳಾಗಿದ್ದಾರೆ. ಮಕ್ಕಳಂತೂ ಎಲ್ಲರೂ ಆಗಿದ್ದಾರೆ. ಆದರೆ ತಂದೆಗೆ ಪ್ರತಿಯಾಗಿ ಕೊಡಬೇಕಾಗಿದೆ.
ನಾವು ತುಂಬಾ ಸೇವೆ ಮಾಡುತ್ತೇವೆ, ಅನೇಕರನ್ನು ತಮ್ಮ ಸಮಾನ ಮಾಡಿಕೊಳ್ಳುತ್ತೇವೆಂದರೆ ತಂದೆಗೆ ತುಂಬಾ ಒಳ್ಳೆಯ ಪ್ರೀತಿ
ಇರುತ್ತದೆ ಎನ್ನುವುದನ್ನು ತಿಳಿಯಬೇಕು. ಮಕ್ಕಳೇ ಚೆನ್ನಾಗಿ ಓದಿ ಎಂದು ತಂದೆಯು ಹೇಳುತ್ತಲೇ
ಇರುತ್ತಾರೆ. ಗಿಳಿಯೂ ಸಹ ಓದುತ್ತದೆ, ಇದಕ್ಕೆ ಮಾಲೆ ಇರುತ್ತದೆ. ಇಲ್ಲಿಯೂ ಸಹ ಯಾರು ಚೆನ್ನಾಗಿ ಓದುತ್ತಾರೆಯೋ, ಅವರೇ ಮಾಲೆಯಲ್ಲಿ ಪೆÇೀಣಿಸಲ್ಪಡುತ್ತಾರೆ. ಓದುವುದೇ
ಇಲ್ಲವೆಂದರೆ ಅವರು ಕಾಡು ಜನರೆಂದರ್ಥ. ಅವರು ವಿಜಯ ಮಾಲೆಯಲ್ಲಿ ಬರಲು ಸಾಧ್ಯವಿಲ್ಲ. ನೀವು
ಮಕ್ಕಳಂತೂ ಒಳ್ಳೆಯ ರೀತಿಯಲ್ಲಿ ಓದಬೇಕು ಮತ್ತು ಓದಿಸಬೇಕು. ಇದು ಸತ್ಯ ಕಥೆಯಾಗಿದೆ, ಇದನ್ನು ಸತ್ಯ ತಂದೆಯೇ ತಿಳಿಸುತ್ತಾರೆ.
ಸತ್ಯ ಖಂಡದ ಸ್ಥಾಪನೆ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಎಂದೂ ಅಸತ್ಯವನ್ನು
ಹೇಳುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ
ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ - ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ
ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ
ಮುಖ್ಯಸಾರ:
1. ಗೃಹಸ್ಥ
ವ್ಯವಹಾರದಲ್ಲಿ ಇದ್ದು ಕಮಲಪುಷ್ಪ ಸಮಾನ ಇರಬೇಕಾಗಿದೆ. ಎಲ್ಲಿಯತನಕ ಜೀವಿಸಿರಬೇಕಾಗಿದೆಯೋ ಅಲ್ಲಿಯ
ತನಕ ಪವಿತ್ರತೆಯ ವ್ರತವನ್ನು ಅವಶ್ಯವಾಗಿ ಇಟ್ಟುಕೊಳ್ಳಬೇಕಾಗಿದೆ.
2. ಕೃಪೆಯನ್ನು
ಬೇಡುವ ಬದಲಾಗಿ ಮಾತಾ-ಪಿತರನ್ನು ಅನುಕರಣೆ ಮಾಡಬೇಕಾಗಿದೆ. ವಿದ್ಯೆಯನ್ನು ಗಮನವಿಟ್ಟು ಓದಬೇಕು
ಮತ್ತು ಓದಿಸಬೇಕಾಗಿದೆ.
ವರದಾನ:
ಕರ್ಮ ಮತ್ತು ಯೋಗದ ಬ್ಯಾಲೆನ್ಸ್ ಮುಖಾಂತರ ಸರ್ವರ ಬ್ಲೆಸ್ಸಿಂಗ್
ಪ್ರಾಪ್ತಿ ಮಾಡಿಕೊಳ್ಳುವಂತಹ ಸಹಜ ಸಫಲತಾ ಮೂರ್ತಿ ಭವ.
ಕರ್ಮದಲ್ಲಿ
ಯೋಗ ಮತ್ತು ಯೋಗದಲ್ಲಿ ಕರ್ಮ- ಇಂತಹ ಕರ್ಮಯೋಗಿ ಅರ್ಥಾತ್ ಶ್ರೇಷ್ಠ ಸ್ಮೃತಿ, ಶ್ರೇಷ್ಠ ಸ್ಥಿತಿ ಮತ್ತು
ಶ್ರೇಷ್ಠ ವಾಯುಮಂಡಲ ರಚಿಸುವಂತಹವರು ಸರ್ವರ ಆಶೀರ್ವಾದಕ್ಕೆ ಅಧಿಕಾರಿಯಾಗಿ ಬಿಡುವರು. ಕರ್ಮ
ಮತ್ತು ಯೋಗದ ಬ್ಯಾಲೆನ್ಸ್ನಿಂದ ಪ್ರತಿ ಕರ್ಮದಲ್ಲಿ ತಂದೆಯ ಮೂಲಕ ಬ್ಲೆಸ್ಸಿಂಗ್ಸ್ ಅಂತು
ಸಿಗುವುದು ಆದರೆ ಯಾರೇ ಇವರ ಸಂಬಂಧ- ಸಂಪರ್ಕದಲ್ಲಿ ಬರುತ್ತಾರೆ ಅವರಿಂದಲೂ ಆಶೀರ್ವಾದ ಸಿಗುವುದು, ಎಲ್ಲರೂ ಅವರನ್ನು ಒಳ್ಳೆಯವರು
ಎಂದು ಒಪ್ಪುತ್ತಾರೆ. ಒಳ್ಳೆಯವರು ಎಂದು ಒಪ್ಪಿಕೊಳ್ಳುವುದೂ ಸಹ ಆಶೀರ್ವಾದವಾಗಿದೆ. ಆದ್ದರಿಂದ
ಎಲ್ಲಿ ಆಶೀರ್ವಾದವಿರುವುದು ಅಲ್ಲಿ ಸಹಯೋಗವಿರುವುದು ಮತ್ತು ಈ ಆಶೀರ್ವಾದ ಅಥವಾ ಸಹಯೋಗವೇ ಸಫಲತಾ
ಮೂರ್ತಿಗಳನ್ನಾಗಿ ಮಾಡುವುದು.
ಸ್ಲೋಗನ್:
ಸದಾ ಖುಷಿಯಾಗಿರುವುದು ಮತ್ತು ಖುಷಿಯ ಖಜಾನೆಯನ್ನು ಹಂಚುತ್ತಿರುವುದು, ಇದೇ ಸತ್ಯ ಸೇವೆಯಾಗಿದೆ.


0 Comments