Header Ads Widget

Header Ads

KANNADA MURLI 21.07.22

  Hindi/Tamil/English/Telugu/Kannada/Malayalam/Ilangai Tamil/Sinhala

21/07/22  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ

Listen to the Murli audio file



 

"ಮಧುರ ಮಕ್ಕಳೇ - ಸದಾ ಖುಷಿಯಲ್ಲಿದ್ದಾಗ ಸ್ವರ್ಗದ ರಾಜ್ಯಭಾಗ್ಯದ ನಶೆಯು ಎಂದೂ ಮರೆತುಹೋಗಲು ಸಾಧ್ಯವಿಲ್ಲ"

ಪ್ರಶ್ನೆ:

ತಂದೆಯು ಯಾವ ಒಂದು ವಿಚಿತ್ರವಾದ ಸಸಿಯನ್ನು ನೆಡುತ್ತಾರೆ?

ಉತ್ತರ:

ಪತಿತ ಮನುಷ್ಯರನ್ನು ಪಾವನದೇವತೆಗಳನ್ನಾಗಿ ಮಾಡುವುದು- ಈ ಅದ್ಭುತವಾದ ಸಸಿಯನ್ನು ತಂದೆಯೇ ನೆಡುತ್ತಾರೆ, ಯಾವ ಧರ್ಮವು ಪ್ರಾಯಃಲೋಪವಾಗಿದೆ, ಅದರ ಸ್ಥಾಪನೆ ಮಾಡುವುದು ಅದ್ಭುತವಾಗಿದೆ.

ಪ್ರಶ್ನೆ:

ತಂದೆಯ ಚರಿತ್ರೆಯು ಯಾವುದಾಗಿದೆ?

ಉತ್ತರ:

ಚತುರತೆಯಿಂದ ಮಕ್ಕಳನ್ನು ಕವಡೆಯಿಂದ ವಜ್ರಸಮಾನರನ್ನಾಗಿ ಮಾಡುವುದು- ಇದು ತಂದೆಯ ಚರಿತ್ರೆಯಾಗಿದೆ. ಬಾಕಿ ಕೃಷ್ಣನ ಚರಿತ್ರೆಯಂತೂ ಯಾವುದೂ ಇಲ್ಲ. ಕೃಷ್ಣನಂತೂ ಚಿಕ್ಕ ಮಗುವಾಗಿದ್ದಾನೆ.

ಗೀತೆ:   ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ.......

ಓಂ ಶಾಂತಿ. ಮಧುರಾತಿ ಮಧುರಮಕ್ಕಳು ತಿಳಿದುಕೊಂಡಿದ್ದೀರಿ. ಈ ಗೀತೆಯು ಇಲ್ಲಿ ಮಾಡಲ್ಪಟ್ಟಿರುವುದಿಲ್ಲ. ಯಾವಾಗ ಗೀತೆಯನ್ನು ಕೇಳುತ್ತೀರೆಂದರೆ ಅವಶ್ಯವಾಗಿ ತಂದೆಯು ನಮ್ಮನ್ನು ಕರೆದುಕೊಂಡು ಹೋಗುತ್ತಾರೆಂದು ತಿಳಿಯುತ್ತೀರಿ. ಹೇಗೆ ಚಿಕ್ಕಮಕ್ಕಳು ತಿಳಿಯುತ್ತಾರೆ, ಕೈಯನ್ನು ಹಿಡಿದುಕೊಳ್ಳುವುದರಿಂದ ಬೀಳುವುದಿಲ್ಲ ಎಂದು. ಹಾಗೆಯೇ ಈಗ ಘೋರಅಂಧಕಾರವಾಗಿದೆ ಎನ್ನುವುದನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಅಂಧಕಾರದಲ್ಲಿ ಮೋಸ ಹೋಗುತ್ತಿರುತ್ತಾರೆ. ಬುದ್ಧಿಯೂ ಹೇಳುತ್ತದೆ- ಒಬ್ಬ ತಂದೆಯೇ ಸ್ವರ್ಗದ, ಸತ್ಯಖಂಡದ ಸ್ಥಾಪನೆ ಮಾಡುವವರಾಗಿದ್ದಾರೆ. ಅವರು ಶ್ರೇಷ್ಠಾತಿಶ್ರೇಷ್ಠ ಸತ್ಯ ತಂದೆಯಾಗಿದ್ದಾರೆ. ಅನ್ಯರನ್ನು ನಿಶ್ಚಯಬುದ್ಧಿಯವರನ್ನಾಗಿ ಮಾಡುವುದಕ್ಕೋಸ್ಕರ ತಂದೆಯ ಮಹಿಮೆಯನ್ನು ಮಾಡಬೇಕಾಗುತ್ತದೆ. ತಂದೆಯೇ ಸ್ವರ್ಗದ ಸ್ಥಾಪನೆ ಮಾಡುವವರು ಅಥವಾ ಸ್ವರ್ಗದ ರಚಯಿತನಾಗಿದ್ದಾರೆ. ಅವರೇ ನೀವು ಮಕ್ಕಳಿಗೆ ಓದಿಸುತ್ತಾರೆ. ಸ್ವರ್ಗದ ರಚಯಿತನೆಂದರೆ ಸತ್ಯಯುಗದ ಸ್ಥಾಪನೆ ಮಾಡುವವರು ಎಂದರ್ಥ. ಅವಶ್ಯವಾಗಿ ಸ್ವರ್ಗದ ಸ್ಥಾಪನೆ ಮಾಡುತ್ತಾರೆ ನಂತರ ಶ್ರೀಕೃಷ್ಣನು ಸ್ವರ್ಗದ ಮಾಲೀಕನಾಗುತ್ತಾರೆ. ತಂದೆಯು ಸ್ವರ್ಗವನ್ನು ರಚಿಸುವಂತಹವರಾದರು ಮತ್ತು ಕೃಷ್ಣನು ಸತ್ಯಯುಗದ ರಾಜಕುಮಾರನಾದನು. ರಚಯಿತನಂತು ಒಬ್ಬ ತಂದೆಯೇ ಆಗಿದ್ದಾರೆ. ಸ್ವರ್ಗದ ರಾಜಕುಮಾರರಾಗಬೇಕಾಗಿದೆ. ಕೇವಲ ಒಬ್ಬರಂತೂ ಅಲ್ಲಿ ಇರುವುದಿಲ್ಲ. 8 ಪೀಳಿಗೆಗಳೆಂದು ಎಣಿಕೆ ಮಾಡಲಾಗುತ್ತದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎನ್ನುವ ನಿಶ್ಚಯವೂ ಇದೆ. ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ ಮತ್ತೆ ನಾವು ಅವರಿಂದ ಕಲ್ಪ-ಕಲ್ಪವೂ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. 84 ಜನ್ಮಗಳನ್ನು ಪೂರ್ಣ ಮಾಡುತ್ತೇವೆ. ಅರ್ಧಕಲ್ಪ ಸುಖವಿರುತ್ತದೆ. ಇನ್ನೂ ಅರ್ಧಕಲ್ಪ ದುಃಖವಿರುತ್ತದೆ. ಅರ್ಧಕಲ್ಪ ರಾಮರಾಜ್ಯ, ಅರ್ಧಕಲ್ಪ ರಾವಣರಾಜ್ಯ. ಈಗ ನಾವು ಪುನಃ ಶ್ರೀಮತದಂತೆ ನಡೆದು ಸ್ವರ್ಗದ ಮಾಲೀಕರಾಗುತ್ತಿದ್ದೇವೆ. ಇದು ಮರೆಯುವ ಮಾತಲ್ಲ. ಒಳಗೆ ತುಂಬಾ ಖುಷಿಯಿರಬೇಕು. ಆತ್ಮಕ್ಕೆ ಒಳಗೆ ಖುಷಿಯಾಗುತ್ತದೆ. ಆತ್ಮನ ದುಃಖ ಹಾಗೂ ಸುಖ ಚೆಹರೆಯ ಮೇಲೆ ಬರುತ್ತದೆ. ದೇವತೆಗಳ ಚೆಹರೆಯು ಎಷ್ಟೊಂದು ಹರ್ಷಿತಮುಖವಿದೆ ಆದ್ದರಿಂದ ಅವರು ಸ್ವರ್ಗದ ಮಾಲೀಕನಾಗಿದ್ದರೆಂದು ತಿಳಿಯುತ್ತಾರೆ. ತಿಳಿಸುವುದಕ್ಕೋಸ್ಕರ ತಂದೆಯು ಬೋರ್ಡ್ ಮುಂತಾದವುಗಳನ್ನು ಮಾಡಿಸುತ್ತಿದ್ದಾರೆ. ಸ್ವರ್ಗದ ರಚಯಿತನ ಮಹಿಮೆಯೇ ಬೇರೆ ಮತ್ತು ಸ್ವರ್ಗದ ರಾಜಕುಮಾರನ ಮಹಿಮೆಯೇ ಬೇರೆಯಾಗಿದೆ. ತಂದೆಯು ರಚಯಿತನಾಗಿದ್ದಾರೆ, ಇವರು ರಚನೆಯಾಗಿದ್ದಾರೆ. ನೀವು ಮಕ್ಕಳಿಗೆ ತಿಳಿಸಿಕೊಡಲು ತಂದೆಯು ಯುಕ್ತಿಯಿಂದ ಬರೆಯುತ್ತಾ ಇರುತ್ತಾರೆ, ಇದರಿಂದ ಮನುಷ್ಯರಿಗೆ ಒಳ್ಳೆಯ ರೀತಿಯಲ್ಲಿ ಅರ್ಥವಾಗಲಿ ಎಂದು. ಯಾರನ್ನು ಪರಮಪಿತ ಪರಮಾತ್ಮ ಎಂದು ಹೇಳುತ್ತಾರೆ ಅವರೇ ಪತಿತ-ಪಾವನಾಗಿದ್ದಾರೆ, ಬೇಹದ್ದಿನ ರಚಯಿತನಾಗಿದ್ದಾರೆ. ಅವಶ್ಯವಾಗಿ ಸ್ವರ್ಗವನ್ನೇ ರಚಿಸುತ್ತಾರೆ. ಸತ್ಯಯುಗ, ತ್ರೇತಾವನ್ನು ಮನುಷ್ಯರು ಸ್ವರ್ಗವೆಂದು ಹೇಳುತ್ತಾರೆ. ಸ್ವರ್ಗ ಮತ್ತು ನರಕ ಅರ್ಧ-ಅರ್ಧ ಇರುತ್ತದೆ. ಸೃಷ್ಟಿಯೂ ಸಹ ಅವಶ್ಯವಾಗಿ ಅರ್ಧ ಹೊಸದು, ಅರ್ಧ ಹಳೆಯದಾಗಿದೆ. ಆ ಜಡವೃಕ್ಷದ ಆಯಸ್ಸು ನಿಗಧಿತವಾಗಿರುವುದಿಲ್ಲ. ಈ ವೃಕ್ಷದ ಆಯಸ್ಸು ನಿಗಧಿಯಾಗಿದೆ. ಮನುಷ್ಯಸೃಷ್ಟಿ ವೃಕ್ಷದ ಆಯಸ್ಸು ಪೂರ್ಣ ಆಕ್ಯೂರೇಟ್ ಆಗಿದೆ. ಈ ರೀತಿ ಮತ್ತ್ಯಾವುದೂ ಇರುವುದಿಲ್ಲ. ಒಂದು ಸೆಕೆಂಡಿನ ಅಂತರವೂ ಸಹ ಆಗುವುದಿಲ್ಲ, ವಿಚಿತ್ರ ವೃಕ್ಷವಾಗಿದೆ. ಆಕ್ಯೂರೇಟ್ ಮಾಡಿ-ಮಾಡಲ್ಪಟ್ಟಂತಹ ನಾಟಕವಾಗಿದೆ. ಈ ನಾಟಕವೂ ನಾಲ್ಕುಭಾಗಗಳಾಗಿ ಹಂಚಲ್ಪಟ್ಟಿದೆ. ಜಗನ್ನಾಥಪುರಿಯಲ್ಲಿ ಅನ್ನದ ನೈವೇದ್ಯವನ್ನಿಡುತ್ತಾರೆ, ಅದರಲ್ಲಿ ನಾಲ್ಕು ಭಾಗಗಳಾಗಿಬಿಡುತ್ತದೆ. ಈ ಸೃಷ್ಟಿಯೂ ಸಹ ನಾಲ್ಕು ಭಾಗಗಳಲ್ಲಿ ವಿಭಾಗಿಸಲ್ಪಟ್ಟಿದೆ. ಇದರಲ್ಲಿ ಒಂದು ಸೆಕೆಂಡ್ ಸಹ ಹೆಚ್ಚುಕಡಿಮೆ ಆಗಲು ಸಾಧ್ಯವಿಲ್ಲ. ತಂದೆಯು 5000 ವರ್ಷಗಳ ಹಿಂದೆಯೂ ಸಹ ತಿಳಿಸಿದ್ದರು. ಚಾಚೂತಪ್ಪದೆ ಪುನಃ ಅದೇರೀತಿ ತಿಳಿಸುತ್ತಿದ್ದಾರೆ. ನಿಶ್ಚಯವಿದೆ- 5000 ವರ್ಷಗಳ ನಂತರ ಪುನಃ ಸ್ವರ್ಗದ ರಚಯಿತ ಸ್ವರ್ಗವನ್ನು ಸ್ಥಾಪನೆ ಮಾಡುವವರು ನಮಗೆ ಸ್ವರ್ಗದ ರಾಜ್ಯಭಾಗ್ಯ ಪ್ರಾಪ್ತಿ ಮಾಡಿಸಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ರಾವಣ ಅಯೋಗ್ಯರನ್ನಾಗಿ ಮಾಡುತ್ತಾನೆ, ಯಾವುದರಿಂದ ಭಾರತ ಕವಡೆಯ ಸಮಾನವಾಗುತ್ತದೆ. ಬಾಬಾ ನಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡುತ್ತಾರೆ ಯಾವುದರಿಂದ ವಜ್ರಸಮಾನವಾಗುತ್ತದೆ. ನಂಬರ್ವಾರ್ ಮಹಿಮೆಯಂತೂ ಆಗಿಯೇ ಆಗುತ್ತದೆ. ಪ್ರತಿಯೊಬ್ಬರದ್ದು ತಮ್ಮ-ತಮ್ಮ ಕರ್ಮಬಂಧನದ ಲೆಕ್ಕಾಚಾರವಿರುತ್ತದೆ. ಕೆಲವರು ಕೇಳುತ್ತಾರೆ- ಬಾಬಾ ನಾವು ವಾರಸಧಾರರು ಆಗುತ್ತೇವೋ ಅಥವಾ ಪ್ರಜೆಗಳಾಗುತ್ತೇವೋ? ಅದಕ್ಕೆ ತಂದೆಯು ತಿಳಿಸುತ್ತಾರೆ- ತಮ್ಮ ಕರ್ಮಬಂಧನವನ್ನು ನೋಡಿಕೊಳ್ಳಿ. ಕರ್ಮ-ಅಕರ್ಮ-ವಿಕರ್ಮದ ಗತಿಯಂತೂ ತಂದೆಯೇ ತಿಳಿಸಿಕೊಡುತ್ತಾರೆ. ಬಾಬಾ ಸದಾ ಹೇಳುತ್ತಾರೆ- ತಮಗಾಗಿ ಭಿನ್ನ-ಭಿನ್ನ ರೀತಿಯ ಸಲಹೆಗಳನ್ನು ಕೇಳಿ. ನಿಮ್ಮದು ಲೆಕ್ಕಾಚಾರ ಯಾವ ಪ್ರಕಾರದ್ದಾಗಿದೆ. ನೀವು ಯಾವ ಪದವಿಯನ್ನು ಪಡೆದುಕೊಳ್ಳಬಹುದು ಎಂದು ಬಾಬಾ ಹೇಳುತ್ತಾರೆ. ರಾಜಧಾನಿ ಸ್ಥಾಪನೆಯಾಗುತ್ತಿದೆ. ತಂದೆ ಒಬ್ಬರೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಉಳಿದವರೆಲ್ಲರೂ ತಮ್ಮ-ತಮ್ಮ ಧರ್ಮದ ಸ್ಥಾಪನೆ ಮಾಡುತ್ತಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೇ. ಆ ರಾಜ್ಯವೂ ಅವರ ಪ್ರಾಲಬ್ಧವಾಗಿದೆ, ಆದರೂ ಸಹ ನಂಬರ್ವಾರ್. ಅವರು ಆ ಪ್ರಾಲಬ್ಧವನ್ನು ಹೇಗೆ ಪಡೆದಿರಬಹುದು? ಅದನ್ನು ನೀವೀಗ ನೋಡುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ, ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಇಂತಹ ಅನೇಕ ಕಲ್ಪಗಳ ಸಂಗಮಗಳು ಕಳೆದಿವೆ, ಕಳೆಯುತ್ತಲೇ ಇರುತ್ತದೆ. ಅದಕ್ಕೆ ಯಾವುದೇ ಅಂತ್ಯವಿಲ್ಲ. ಬುದ್ಧಿಯೂ ಸಹ ಹೇಳುತ್ತದೆ, ಪತಿತ-ಪಾವನ ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಆಗ ಪತಿತರಾಜ್ಯದ ವಿನಾಶ ಮಾಡಿಸಿ ಪಾವನರಾಜ್ಯದ ಸ್ಥಾಪನೆ ಮಾಡಬೇಕಾಗುತ್ತದೆ. ಈ ಸಂಗಮಯುಗಕ್ಕೇ ಮಹಿಮೆಯಿದೆ. ಸತ್ಯಯುಗ-ತ್ರೇತಾದ ಸಂಗಮದಲ್ಲಿ ಏನೂ ಆಗುವುದಿಲ್ಲ. ಅಲ್ಲಂತೂ ಕೇವಲ ರಾಜ್ಯ ಬದಲಾವಣೆಯಾಗುತ್ತದೆ. ಲಕ್ಷ್ಮೀ-ನಾರಾಯಣರ ರಾಜ್ಯ ಬದಲಾಗಿ ರಾಮ-ಸೀತೆಯರ ರಾಜ್ಯವಾಗುತ್ತದೆ ಅಷ್ಟೆ ಆದರೆ ಇಲ್ಲಂತೂ ಎಷ್ಟೊಂದು ಏರುಪೇರುಗಳಾಗುತ್ತವೆ ಆದ್ದರಿಂದ ತಂದೆಯು ಹೇಳುತ್ತಾರೆ- ಈಗ ಈ ಪತಿತಪ್ರಪಂಚವೂ ಸಮಾಪ್ತಿ ಆಗುವುದಿದೆ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ನಾನು ಎಲ್ಲರ ಮಾರ್ಗದರ್ಶಕನಾಗುತ್ತೇನೆ. ದುಃಖದಿಂದ ಮುಕ್ತರನ್ನಾಗಿ ಮಾಡಿ ಸದಾಕಾಲಕ್ಕೋಸ್ಕರ ಸುಖ-ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ನಾವು ಸುಖಧಾಮದಲ್ಲಿ ಹೋಗುತ್ತೇವೆ, ಉಳಿದೆಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಈ ಸಮಯದಲ್ಲಿ ಮನಸ್ಸಿಗೆ ಶಾಂತಿಯು ಹೇಗೆ ಸಿಗುತ್ತದೆ? ಎಂದು ಮನುಷ್ಯರು ಕೇಳುತ್ತಾರೆ, ಆದರೆ ಸುಖ ಹೇಗೆ ಸಿಗುತ್ತದೆ ಎನ್ನುವುದನ್ನು ಎಂದೂ ಕೇಳುವುದಿಲ್ಲ. ಶಾಂತಿಗಾಗಿಯೇ ಹೇಳುತ್ತಾರೆ. ಎಲ್ಲರೂ ಶಾಂತಿಯಲ್ಲಿಯೇ ಹೋಗುವವರಿದ್ದಾರೆ ನಂತರ ತಮ್ಮ-ತಮ್ಮ ಧರ್ಮದಲ್ಲಿ ಬರುತ್ತಾರೆ. ಧರ್ಮದ ವೃದ್ದ್ಜಿಯಂತೂ ಆಗಲೇಬೇಕಾಗಿದೆ. ಅರ್ಧಕಲ್ಪ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಿರುತ್ತದೆ. ಮತ್ತೆ ಅನ್ಯಧರ್ಮದವರು ಬರುತ್ತಾರೆ. ಈಗ ಆದಿಸನಾತನ ದೇವೀ-ದೇವತಾ ಧರ್ಮದವರು ಯಾರೂ ಇಲ್ಲ. ಧರ್ಮವೇ ಪ್ರಾಯಃಲೋಪವಾಗಿಬಿಡುತ್ತದೆ, ಮತ್ತೆ ಸ್ಥಾಪನೆಯಾಗುತ್ತದೆ. ಈಗ ಸಸಿಯನ್ನು ನೆಡಲಾಗುತ್ತದೆ. ತಂದೆಯೇ ಈ ಸಸಿಯನ್ನು ಹಾಕುತ್ತಾರೆ. ಮನುಷ್ಯರು ವೃಕ್ಷ ಮುಂತಾದವುಗಳ ಸಸಿಗಳನ್ನು ನೆಡುತ್ತಾರೆ ಆದರೆ ಈ ದೇವೀ-ದೇವತಾ ಧರ್ಮದ ಸಸಿಯು ಎಂತಹ ಅದ್ಭುತವಾಗಿದೆ. ಈ ಧರ್ಮದವರೇ ತಮ್ಮನ್ನು ದೇವೀ-ದೇವತಾ ಧರ್ಮದವರನ್ನು ಹೇಳುವುದಿಲ್ಲ. ಯಾವಾಗ ಇಂತಹ ಸ್ಥಿತಿಯುಂಟಾಗುತ್ತದೆ ಆಗ ನಾನು ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ನಾನು ಎಲ್ಲಾ ಶಾಸ್ತ್ರಗಳ ರಹಸ್ಯವನ್ನು ತಿಳಿಸುತ್ತೇನೆ. ಯಾರು ಸತ್ಯ ಆಗಿದ್ದಾರೆ ಎನ್ನುವುದನ್ನು ನೀವೀಗ ಪರಿಶೀಲನೆ ಮಾಡಿ. ರಾವಣನು ಅಸತ್ಯಮತವನ್ನು ಕೊಡುವವನಾಗಿದ್ದಾನೆ ಆದ್ದರಿಂದ ಅಸತ್ಯವೆಂದು ಹೇಳಲಾಗುತ್ತದೆ. ತಂದೆಯಂತೂ ಸತ್ಯ ಆಗಿದ್ದಾರೆ. ಸತ್ಯತಂದೆಯು ಸತ್ಯವನ್ನೇ ತಿಳಿಸುತ್ತಾರೆ. ಸತ್ಯಖಂಡಕ್ಕೋಸ್ಕರ ಸತ್ಯಜ್ಞಾನವನ್ನು ತಿಳಿಸುತ್ತಾರೆ. ಉಳಿದ ಈ ವೇದ-ಶಾಸ್ತ್ರಗಳು ಭಕ್ತಿಮಾರ್ಗದ್ದಾಗಿದೆ. ಮನುಷ್ಯರು ಎಷ್ಟೊಂದು ಓದುತ್ತಾರೆ. ಲಕ್ಷಾಂತರ ಗೀತಾಪಾಠಶಾಲೆಗಳು ಅಥವಾ ವೇದ ಪಾಠಶಾಲೆಗಳು ಇರುತ್ತವೆ. ಜನ್ಮ-ಜನ್ಮಾಂತರಗಳಿಂದ ಓದುತ್ತಲೇ ಬರುತ್ತಾರೆ. ಕೊನೆಗೂ ಯಾವುದಾದರೂ ಒಂದು ಗುರಿಯಿರಬೇಕು. ಪಾಠಶಾಲೆಗೋಸ್ಕರ ಒಂದು ಗುರಿಯು ಬೇಕು. ಶರೀರ ನಿರ್ವಾಹಣಾರ್ಥವಾಗಿ ಓದುತ್ತಾರೆ. ಈ ಗುರಿ ಇರುತ್ತದೆ. ಏನೆಲ್ಲಾ ಓದುತ್ತಾರೆ, ಶಾಸ್ತ್ರಗಳನ್ನು ತಿಳಿಸುವುದರಿಂದ ಶರೀರ ನಿರ್ವಹಣೆಯೂ ನಡೆಯುತ್ತದೆ ಆದರೆ ಇವರು ಮುಕ್ತಿ-ಜೀವನ್ಮುಕ್ತಿಯನ್ನು ಪಡೆಯುತ್ತಾರೆ ಅಥವಾ ಭಗವಂತನನ್ನು ಪಡೆದುಕೊಳ್ಳುತ್ತಾರೆ ಎಂದಲ್ಲ. ಇವರು ಏನನ್ನೂ ಪಡೆಯುವುದಿಲ್ಲ. ಮನುಷ್ಯರು ಭಗವಂತನನ್ನು ಪಡೆಯಲು ಭಕ್ತಿ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಸಾಕ್ಷಾತ್ಕಾರವಾಗುತ್ತದೆ ಎಂದರೆ ಭಗವಂತನನ್ನು ಪಡೆದುಬಿಟ್ಟೆವು, ಇಷ್ಟೇ ಸಾಕು ಎಂದು ತಿಳಿಯುತ್ತಾರೆ, ಇದರಲ್ಲಿಯೇ ಖುಷಿಯಾಗಿಬಿಡುತ್ತಾರೆ. ಭಗವಂತನನ್ನಂತೂ ತಿಳಿದುಕೊಂಡೇ ಇಲ್ಲ. ಹನುಮಂತ, ಗಣೇಶ ಎಲ್ಲರಲ್ಲೂ ಭಗವಂತ ಇದ್ದಾರೆಂದು ತಿಳಿಯುತ್ತಾರೆ ಏಕೆಂದರೆ ಸರ್ವವ್ಯಾಪಿಯ ಜ್ಞಾನವು ಬುದ್ಧಿಯಲ್ಲಿ ಕುಳಿತುಬಿಟ್ಟಿದೆಯಲ್ಲವೇ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಯಾರ್ಯಾರು ಯಾವ ಭಾವನೆಯಿಂದ ಯಾರ ಭಕ್ತಿಯನ್ನು ಮಾಡುತ್ತಾರೆ, ಆ ಭಾವನೆಯನ್ನು ಪೂರ್ಣ ಮಾಡುವುದಕ್ಕೋಸ್ಕರ ನಾನು ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ. ಅದಕ್ಕೆ ಅವರು ನಮಗೆ ಭಗವಂತನೇ ಸಿಕ್ಕಿಬಿಟ್ಟರು ಎಂದು ತಿಳಿದು ಖುಷಿಯಾಗಿಬಿಡುತ್ತಾರೆ. ಜ್ಞಾನಮಾಲೆಯು ಬೇರೆಯಾಗಿದೆ ಮತ್ತು ಭಕ್ತಿಮಾಲೆಯೇ ಬೇರೆಯಾಗಿದೆ. ಈ ಜ್ಞಾನಮಾಲೆಯನ್ನು ರುದ್ರಮಾಲೆ ಎಂದು ಹೇಳಲಾಗುತ್ತದೆ ಹಾಗೂ ಎರಡನೆಯದು ಭಕ್ತಿಮಾಲೆಯಾಗಿದೆ. ಯಾರು ಜಾಸ್ತಿ ಜ್ಞಾನವನ್ನು ಪಡೆದುಕೊಂಡರು ಅವರದೇ ಜ್ಞಾನ ಮಾಲೆಯಾಗಿದೆ ಮತ್ತು ಯಾರು ಹೆಚ್ಚಿನ ಭಕ್ತಿಯನ್ನು ಮಾಡುವವರಿದ್ದಾರೆ ಅವರದ್ದು ಭಕ್ತಿಮಾಲೆಯಾಗಿದೆ. ಭಕ್ತಿಯ ಸಂಸ್ಕಾರವನ್ನೇ ತೆಗೆದುಕೊಂಡು ಹೋಗುವುದರಿಂದ ಮತ್ತೆ ಭಕ್ತಿಯಲ್ಲಿ ಹೊರಟುಹೋಗುತ್ತಾರೆ. ಆ ಒಂದು ಸಂಸ್ಕಾರವು ಒಂದು ಜನ್ಮ ಜೊತೆಯಲ್ಲಿ ಬರುತ್ತದೆ. ಅವರು ಎರಡನೆಯ ಜನ್ಮದಲ್ಲೂ ಸಹ ಆ ಸಂಸ್ಕಾರವು ಜೊತೆ ಬರುತ್ತದೆ ಎಂದಲ್ಲ, ಆದರೆ ನಿಮ್ಮ ಈ ಸಂಸ್ಕಾರವಂತೂ ಅವಿನಾಶಿಯಾಗಿಬಿಡುತ್ತದೆ. ಈ ಸಮಯದಲ್ಲಿ ಯಾವ ಸಂಸ್ಕಾರದಲ್ಲಿ ಹೋಗುತ್ತೀರಿ, ನಂತರ ಅದೇ ಸಂಸ್ಕಾರದನುಸಾರವಾಗಿ ಹೋಗಿ ರಾಜ-ರಾಣಿ ಆಗುತ್ತೀರಿ. ಮತ್ತೆ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈಗ ನೀವು ಮಧ್ಯದಲ್ಲಿ ಇದ್ದೀರಿ, ಬುದ್ಧಿಯು ಅಲ್ಲಿ ಸಿಕ್ಕಿಹಾಕಿಕೊಂಡಿದೆ. ಭಲೆ ನಾವಿಲ್ಲಿ ಕುಳಿತಿದ್ದೇವೆ ಆದರೆ ಬುದ್ಧಿಯೋಗವು ಅಲ್ಲಿದೆ ಏಕೆಂದರೆ ಈಗ ನಾವು ಹೋಗುತ್ತಿದ್ದೇವೆ ಎನ್ನುವುದು ಆತ್ಮನಿಗೆ ಜ್ಞಾನವಿದೆ. ತಂದೆಯನ್ನೇ ನೆನಪು ಮಾಡುತ್ತೇವೆ. ನಮ್ಮ ಆತ್ಮವು ದೂರವಾಗುತ್ತಾ ಇದೆ, ಈ ಶರೀರವನ್ನು ಈ ದಡದಲ್ಲಿಯೇ ಬಿಟ್ಟುಬಿಡುತ್ತೇವೆ. ಈ ದಡದಲ್ಲಿ ಹಳೆಯ ಶರೀರವಿದೆ ಮತ್ತು ಆ ದಡದಲ್ಲಿ ಸುಂದರ ಶರೀರವಿದೆ. ಇದು ಹುಸ್ಸೇನ್ನ ರಥವಾಗಿದೆ. ಹುಸೇನ್, ಇದನ್ನೇ ಅಕಾಲಮೂರ್ತಿ ಎಂದು ಹೇಳುತ್ತಾರೆ, ಇದರ ಸಿಂಹಾಸನವು ಈ ರಥವಾಗಿದೆ. ಆತ್ಮವು ಅಕಾಲವಾಗಿದೆ. ಆತ್ಮವು ಗೋಲ್ಡೆನ್, ಸಿಲ್ವರ್ನಲ್ಲಿ ಬರಬೇಕಾಗಿದೆ. ಹಂತಗಳಿವೆಯಲ್ಲವೇ. ತಂದೆಯಂತೂ ಶ್ರೇಷ್ಠಾತಿಶ್ರೇಷ್ಠ ಆಗಿದ್ದಾರೆ. ಅವರು ಈ ಹಂತಗಳಲ್ಲಿ ಬರುವುದಿಲ್ಲ. ಆತ್ಮಗಳು ಈ ಹಂತಗಳಲ್ಲಿ ಬರುತ್ತಾರೆ. ಸ್ವರ್ಣಯುಗದಲ್ಲಿದ್ದವರು ನಂತರ ಬೆಳ್ಳಿಯುಗದಲ್ಲಿ ಬರಬೇಕಾಗುತ್ತದೆ. ಈಗ ನಿಮ್ಮನ್ನು ತಂದೆಯು ಕಬ್ಬಿಣದ ಯುಗದಿಂದ ಸ್ವರ್ಣಿಮಯುಗಕ್ಕೆ ಕರೆದುಕೊಂಡು ಹೋಗುತ್ತಾರೆ. ತಮ್ಮ ಪರಿಚಯವನ್ನೂ ಕೊಡುತ್ತಾ ಇರುತ್ತಾರೆ. ಅವರನ್ನೇ ಸ್ವರ್ಗದ ರಚಯಿತನೆಂದು ಹೇಳುತ್ತಾರೆ. ಅವರದು ಅಲೌಕಿಕ ದಿವ್ಯಜನ್ಮವಾಗಿದೆ, ತಾನು ಹೇಗೆ ಪ್ರವೇಶ ಮಾಡುತ್ತೇನೆ ಎನ್ನುವುದನ್ನು ತಾವೇ ತಿಳಿಸುತ್ತಾರೆ. ಇದಕ್ಕೆ ಜನ್ಮವೆಂದು ಹೇಳುವುದಿಲ್ಲ. ಯಾವಾಗ ಸಮಯವು ಪೂರ್ಣವಾಗುತ್ತದೆ, ಆಗ ನಾನು ಹೋಗಿ ರಚನೆಯನ್ನು ರಚಿಸೋಣ ಎಂದು ಸಂಕಲ್ಪವು ತಂದೆಗೆ ಬರುತ್ತದೆ. ನಾಟಕದಲ್ಲಿ ಅವರ ಪಾತ್ರವಿದೆಯಲ್ಲವೇ. ಪರಮಪಿತ ಪರಮಾತ್ಮನೂ ಸಹ ನಾಟಕಕ್ಕೆ ಅಧೀನ ಆಗಿದ್ದಾರೆ. ಭಕ್ತಿಯ ಫಲವನ್ನು ಕೊಡುವುದೇ ತಂದೆಯ ಪಾತ್ರವಾಗಿದೆ. ಪರಮಪಿತ ಪರಮಾತ್ಮನನ್ನು ಸುಖ ಕೊಡುವವರೆಂದು ಹೇಳಲಾಗುತ್ತದೆ. ಒಳ್ಳೆಯ ಕರ್ತವ್ಯ ಮಾಡುವುದರಿಂದ ಅಲ್ಪಕಾಲಕ್ಕೋಸ್ಕರ ಅದರ ರಿಟರ್ನ್ ಸಿಗುತ್ತದೆ. ನೀವು ಎಲ್ಲರಿಗಿಂತ ಒಳ್ಳೆಯ ಕರ್ತವ್ಯ ಮಾಡುತ್ತೀರಿ. ಎಲ್ಲರಿಗೆ ತಂದೆಯ ಪರಿಚಯ ಕೊಡುತ್ತೀರಿ.

ಈಗ ನೋಡಿ, ರಕ್ಷಾಬಂಧನದ ಹಬ್ಬವೂ ಬರುವುದರಿಂದ ಇದರ ಮೇಲೂ ಸಹ ತಿಳಿಸಬೇಕಾಗುತ್ತದೆ. ರಕ್ಷಾಬಂಧನವು ಪತಿತರು ಪಾವನರಾಗುವ ಪ್ರತಿಜ್ಞೆಗೋಸ್ಕರವಾಗಿದೆ. ಇದು ಅಪವಿತ್ರರನ್ನು ಪವಿತ್ರರನ್ನಾಗಿ ಮಾಡುವ ರಕ್ಷಾಬಂಧನವಾಗಿದೆ. ನೀವು ಮೊಟ್ಟಮೊದಲು ಪತಿತ-ಪಾವನ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ಎಲ್ಲಿಯತನಕ ತಂದೆಯು ಬರುವುದಿಲ್ಲವೋ ಅಲ್ಲಿಯತನಕ ಮನುಷ್ಯರು ಪಾವನರಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಪವಿತ್ರರಾಗುವಂತಹ ಪ್ರತಿಜ್ಞೆ ಮಾಡಿಸುತ್ತಾರೆ. ಅವಶ್ಯವಾಗಿ ಇದು ಎಂದೋ ಆಗಿದೆ ಆದ್ದರಿಂದಲೇ ಆ ರೀತಿ-ಪದ್ಧತಿಗಳು ನಡೆಯುತ್ತಾ ಬಂದಿವೆ, ಈಗ ಪ್ರತ್ಯಕ್ಷದಲ್ಲಿ ನೋಡಿ, ಬ್ರಹ್ಮಾಕುಮಾರ-ಕುಮಾರಿಯರು ರಕ್ಷಾಬಂಧನವನ್ನು ತೊಟ್ಟು ಪವಿತ್ರರಾಗಿರುತ್ತಾರೆ. ಜನಿವಾರ, ಕಂಕಣ ಮುಂತಾದವುಗಳೆಲ್ಲವೂ ಪವಿತ್ರತೆಯ ಸಂಕೇತವಾಗಿದೆ. ಪತಿತಪಾವನ ತಂದೆಯು ಹೇಳುತ್ತಾರೆ- ಮಕ್ಕಳೇ ಕಾಮ ಮಹಾಶತ್ರುವಾಗಿದೆ. ನಾವು ಪವಿತ್ರರಾಗಿರುತ್ತೇವೆ ಎಂದು ನನ್ನೊಂದಿಗೆ ಈಗ ಪ್ರತಿಜ್ಞೆ ಮಾಡಿ. ಬಾಕಿ ಯಾವುದೇ ಕಂಕಣ ಮುಂತಾದವುಗಳನ್ನು ತೊಡಬೇಕಾಗಿಲ್ಲ. ತಂದೆಯು ಹೇಳುತ್ತಾರೆ- ಪ್ರತಿಜ್ಞೆ ಮಾಡಿ, ನನಗೆ ಪಂಚವಿಕಾರಗಳನ್ನು ದಾನ ಮಾಡಿ. ಈ ರಕ್ಷಾಬಂಧನವೂ 5000 ವರ್ಷಗಳ ಹಿಂದೆಯೂ ಸಹ ಆಗಿತ್ತು. ಪತಿತಪಾವನ ತಂದೆಯೂ ಬಂದಿದ್ದರು, ಬಂದು ರಕ್ಷಾಬಂಧನವನ್ನು ಪವಿತ್ರರಾಗಲೆಂದು ಕಟ್ಟಿದ್ದರು ಏಕೆಂದರೆ ಪವಿತ್ರ ಪ್ರಪಂಚದ ಸ್ಥಾಪನೆ ಆಗಿತ್ತು. ಈಗಂತೂ ನರಕವಾಗಿದೆ, ನಾವು ಪುನಃ ಬಂದಿದ್ದೇವೆ. ಈಗ ಶ್ರೀಮತದನುಸಾರ ಪ್ರತಿಜ್ಞೆ ಮಾಡಿ ಮತ್ತು ತಂದೆಯನ್ನು ನೆನಪು ಮಾಡುತ್ತೀರೆಂದರೆ ನೀವು ಪಾವನರಾಗಿಬಿಡುತ್ತೀರಿ. ಈಗ ಪತಿತರಾಗಬೇಡಿ. ನಾವು ಬ್ರಾಹ್ಮಣರು ಪ್ರತಿಜ್ಞೆ ಮಾಡಿಸಲು ಬಂದಿದ್ದೇವೆ ಎಂದು ನೀವೂ ಸಹ ಹೇಳಿ. ನಾವು ಪ್ರತಿಜ್ಞೆ ಮಾಡುತ್ತೇವೆ, ನಾವು ಎಂದೂ ಪತಿತರಾಗುವುದಿಲ್ಲ ಆದರೆ ಈ ರೀತಿಯಾಗಿ ಅನೇಕರು ಬರೆದೂ ಸಹ ಸಮಾಪ್ತಿಯಾಗಿಬಿಟ್ಟರು. ಪತಿತಪಾವನ ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ. ಬ್ರಹ್ಮಾರವರ ಮುಖಾಂತರ ಬಂದು ಮಕ್ಕಳಿಗೆ ಪವಿತ್ರರಾಗಿ ಎಂದು ಸಲಹೆಯನ್ನು ಕೊಡುತ್ತಾರೆ. ಇಲ್ಲಿ ಎಲ್ಲರೂ ಪ್ರತಿಜ್ಞೆ ಮಾಡುತ್ತಾರೆ ನೀವೂ ಸಹ ನಿರ್ಣಯ ಮಾಡಿ ಆಗಲೇ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವು ಪವಿತ್ರ ಬ್ರಾಹ್ಮಣರಾಗುತ್ತೀರೆಂದರೆ ನಂತರ ದೇವತೆಗಳಾಗಿಬಿಡುತ್ತೀರಿ. ನಾವು ಬ್ರಾಹ್ಮಣರ ಪ್ರತಿಜ್ಞೆಯು ಮಾಡಲ್ಪಟ್ಟಿದೆ. ಈ ರಕ್ಷಾಬಂಧನದ ಪದ್ಧತಿಯೂ ಯಾವಾಗಿನಿಂದ ಶುರುವಾಗಿತ್ತು ಎಂದು ಆಲ್ಬಮ್ನ್ನೂ ಸಹ ತೋರಿಸಬೇಕು. ಈಗ ಸಂಗಮಯುಗದಲ್ಲಿ ಈ ಪವಿತ್ರತೆಯ ಪ್ರತಿಜ್ಞೆಯು ಮಾಡಲ್ಪಟ್ಟಿದೆ, ಮತ್ತೆ ನೀವು 21 ಜನ್ಮಗಳತನಕ ಪವಿತ್ರರಾಗಿರುತ್ತೀರಿ. ಈಗ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಇಂತಿಂತಹ ವಿಷಯಗಳನ್ನು ತೆಗೆದು ಮೊದಲೇ ಭಾಷಣವನ್ನು ತಯಾರಿಸಬೇಕು. ಈ ಪದ್ಧತಿಯೂ ಯಾವಾಗಿನಿಂದ ಪ್ರಾರಂಭವಾಯಿತು? 5000 ವರ್ಷಗಳ ಮಾತಾಗಿದೆ. ಕೃಷ್ಣಜನ್ಮಾಷ್ಟಮಿಯೂ ಸಹ 5000 ವರ್ಷಗಳ ಮಾತಾಗಿದೆ. ಕೃಷ್ಣನ ಚರಿತ್ರೆಯಂತೂ ಏನೂ ಇಲ್ಲ. ಕೃಷ್ಣನಂತು ಚಿಕ್ಕಮಗುವಾಗಿದ್ದಾನೆ. ಚರಿತ್ರೆಯಂತೂ ಒಬ್ಬ ತಂದೆಯದಾಗಿದೆ, ಅವರೇ ಚತುರತೆಯಿಂದ ಮಕ್ಕಳನ್ನು ಕವಡೆಯಿಂದ ವಜ್ರಸಮಾನವಾಗಿ ಮಾಡುತ್ತಾರೆ. ಬಲಿಹಾರಿಯೂ ಆ ಒಬ್ಬ ತಂದೆಯದೇ ಆಗಿದೆ ಮತ್ತ್ಯಾರದೇ ಜನ್ಮದಿನವನ್ನು ಆಚರಿಸುವುದು ಯಾವುದೇ ಕೆಲಸಕ್ಕಿಲ್ಲ. ಒಬ್ಬ ಪರಮಪಿತ ಪರಮಾತ್ಮನ ಜನ್ಮದಿನವನ್ನು ಆಚರಿಸಬೇಕು, ಅಷ್ಟೇ. ಮನುಷ್ಯರಂತೂ ಸ್ವಲ್ಪವೂ ಅರಿತುಕೊಂಡಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1) ವಾರಸಧಾರರಾಗಲು ತಮ್ಮ ಎಲ್ಲಾ ಲೆಕ್ಕಾಚಾರ, ಕರ್ಮಬಂಧನವನ್ನು ಸಮಾಪ್ತಿ ಮಾಡಬೇಕಾಗಿದೆ. ತಂದೆಯ ಯಾವ ಸಲಹೆಯು ಸಿಗುತ್ತದೆ, ಅದರಂತೆಯೇ ನಡೆಯಬೇಕಾಗಿದೆ.

2) ಎಲ್ಲರಿಗೆ ತಂದೆಯ ಸತ್ಯಪರಿಚಯವನ್ನು ಕೊಟ್ಟು ಪತಿತರಿಂದ ಪಾವನರನ್ನಾಗಿ ಮಾಡುವ ಶ್ರೇಷ್ಠಕರ್ತವ್ಯವನ್ನು ಮಾಡಬೇಕಾಗಿದೆ. ಪವಿತ್ರತೆಯ ರಕ್ಷಾಬಂಧನವನ್ನು ತೊಟ್ಟು ಪವಿತ್ರಪ್ರಪಂಚದ ಮಾಲೀಕತನದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.

ವರದಾನ:

ಒಂದು ಪಾಸ್ ಶಬ್ದದ ಸ್ಮೃತಿಯ ಮೂಲಕ ಯಾವುದೇ ಪೇಪರ್ನಲ್ಲಿ ಸಂಪೂರ್ಣ ಪಾಸ್ ಆಗುವಂತಹ ಗೌರವಾನ್ವಿತ ತೇರ್ಗಡೆ (ಪಾಸ್ ವಿತ್ ಆನರ್) ಭವ
ಯಾವುದೇ ಪೇಪರ್ನಲ್ಲಿ ಫುಲ್ ಪಾಸ್ ಆಗಲು ಆ ಪೇಪರ್ನ ವಿಸ್ತಾರದಲ್ಲಿ ಹೋಗಬಾರದು, ಏಕೆ ಆಯಿತು, ಹೇಗೆ ಆಯಿತು, ಯಾರು ಮಾಡಿದರೆಂದು ಯೋಚಿಸಬಾರದು. ಇದರ ಬದಲಾಗಿ ಪಾಸಾಗುವದನ್ನು ಯೋಚಿಸಿ ಪೇಪರ್ ಅನ್ನು ಪೇಪರ್ ಎಂದು ತಿಳಿದುಕೊಂಡು ಪಾಸ್ ಮಾಡಿ. ಕೇವಲ ಒಂದು ಪಾಸ್ ಶಬ್ದವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ನಾನು ಪಾಸ್ ಆಗಬೇಕು, ಪಾಸ್ ಮಾಡಬೇಕು ಮತ್ತು ತಂದೆಯ ಹತ್ತಿರ ಇರಬೇಕೆಂದರೆ ಗೌರವಾನ್ವಿತ ತೇರ್ಗಡೆ (ಪಾಸ್ ವಿತ್ ಆನರ) ಆಗಬೇಕು.

ಸ್ಲೋಗನ್:

ಸ್ವಯಂನ್ನು ಪರಮಾತ್ಮ ಪ್ರೀತಿಯ ಹಿಂದೆ ಬಲಿಹಾರಿಯಾಗುವವರೇ ಸಫಲತಾಮೂರ್ತಿ ಆಗುತ್ತಾರೆ.

 Download PDF

 Hindi/Tamil/English/Telugu/Kannada/Malayalam/Ilangai Tamil/Sinhala

Post a Comment

0 Comments