Hindi/Tamil/English/Telugu/Kannada/Malayalam/Ilangai Tamil/Sinhala
20/07/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
ಮಧುರ ಮಕ್ಕಳೇ- ನೀವು ಆತ್ಮಿಕ ಸೈನಿಕರಾಗಿದ್ದೀರಿ,
ನಿಮ್ಮ ವಿನಃ ರಾವಣದಿಂದ ಇಡೀ ವಿಶ್ವದ ರಕ್ಷಣೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ, ಇದೇ ಶುದ್ಧ ನಶೆಯಲ್ಲಿರಬೇಕಾಗಿದೆ"
ಪ್ರಶ್ನೆ:
ಬಾಪ್ದಾದಾರವರು ಎಂತಹ ಮಕ್ಕಳ ಬಲಿಹಾರಿಯ ಗಾಯನವನ್ನು ಮಾಡುತ್ತಾರೆ?
ಉತ್ತರ:
ತಂದೆಯು ತಿಳಿಸುತ್ತಾರೆ-
ಬಲಿಹಾರಿಯು ಬಂಧನದಲ್ಲಿರುವ ಮಕ್ಕಳದಾಗಿದೆ, ಅವರು ಪೆಟ್ಟನ್ನು ತಿನ್ನುತ್ತಲೂ ಸಹ ಶಿವಬಾಬಾರವರನ್ನು ನೆನಪು ಮಾಡುತ್ತಾರೆ. ಪೆಟ್ಟನ್ನು ತಿನ್ನುವುದರಿಂದ ಇನ್ನೂ ನಷ್ಟಮೋಹೀಗಳಾಗುತ್ತಾ ಹೋಗುತ್ತಾರೆ, ಆ ಕಾರಣದಿಂದ ಅವರ ಪದವಿಯು ಇನ್ನೂ ಶ್ರೇಷ್ಠವಾಗಿಬಿಡುತ್ತದೆ. ತಂದೆಯು ಇಂತಹ ಮಕ್ಕಳಿಗೆ ಧೈರ್ಯ ಕೊಡುತ್ತಾರೆ. ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ದೇಹ ನಿಮ್ಮದಲ್ಲ. ನೀವು ತಂದೆಯ ಮಕ್ಕಳಾಗಿಬಿಟ್ಟಿದ್ದೀರಿ ಆದ್ದರಿಂದ ಸ್ಥಿತಿಯು ಪಕ್ಕಾ ಆಗುತ್ತಾ ಹೋಗುತ್ತದೆ. ಸತ್ಯಹೃದಯದವರಿಗೆ ತಂದೆ ರಾಜಿಯಾಗುತ್ತಾರೆ.
ಗೀತೆ: ನಿಮ್ಮನ್ನು ಪಡೆದ ನಾವು ಈ ಜಗತ್ತನ್ನೇ ಪಡೆದವು.......
ಓಂ ಶಾಂತಿ. ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದರೂ ನಾವು ಸೈನಿಕರಾಗಿದ್ದೇವೆ ಎನ್ನುವುದನ್ನೂ ಸಹ ತಿಳಿದುಕೊಂಡಿದ್ದೀರಿ. ಯಾರ ಸೈನ್ಯವಾಗಿದೆ? ಈಶ್ವರನ ಸೈನ್ಯ ಅಂದಾಗ ಏನು ಮಾಡುತ್ತಿದ್ದೀರಿ? ರಾವಣನ ಮೇಲೆ ನಾವು ವಿಜಯವನ್ನು ಪಡೆಯುತ್ತಿದ್ದೇವೆಂದರೆ ಇಡೀ ಸೃಷ್ಟಿಯನ್ನು ರಾವಣನರಾಜ್ಯದಿಂದ ಬಿಡಿಸಿ ನಮ್ಮ ರಾಜ್ಯದ ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ, ನೀವು ಎಷ್ಟು ಸಾಧಾರಣರೀತಿಯಲ್ಲಿ ಕುಳಿತಿದ್ದೀರಿ. ಸೈನಿಕರೆಂದರೆ ಯಾವುದೇ ಕೈ-ಕಾಲನ್ನು ಆಡಿಸಿ ಯುದ್ಧ ಮಾಡುವುದಿಲ್ಲ ಆದರೆ ತುಂಬಾ ಜಬರ್ದಸ್ತ್ ಸೈನಿಕರಾಗಿದ್ದೀರಿ. ನೀವು ಈಶ್ವರನ ಸಹಯೋಗಿಗಳಾಗಿದ್ದೀರಿ. ಈಶ್ವರನೂ ಗುಪ್ತವಾಗಿದ್ದಾರೆ, ನೀವೂ ಗುಪ್ತವಾಗಿದ್ದೀರಿ. ಅವರನ್ನು ರಾಜರಿಗೇ ರಾಜನೆಂದು ಹೇಳುತ್ತಾರೆ ಆದರೆ ತಾನು ರಾಜನಾಗುವುದಿಲ್ಲ. ನಿಮ್ಮ ಯುದ್ಧವು ತುಂಬಾ ಜಬರ್ದಸ್ತ್ ಆಗಿದೆ. ನಿಮ್ಮ ಮುಖಾಂತರ ಇಡೀ ವಿಶ್ವದ ಮೇಲೆ ಜಯವನ್ನು ಪಡೆಯುತ್ತಾರೆ. ನಿಮಗೆ ಅನುಭವವಾಗುತ್ತದೆ- ಹೇಗೆ ಆ ಸೈನ್ಯವಿದೆ ಹಾಗೆಯೇ ನಮ್ಮದೂ ಸಹ ಸೈನ್ಯವಾಗಿದೆ. ಭಾರತದ ಇಡೀ ಆಧಾರವು ಸೈನ್ಯದ ಮೇಲಿದೆ. ಸೈನ್ಯವಿಲ್ಲದಿದ್ದರೆ ಬೇರೆಯವರು ಜಯವನ್ನು ಪಡೆದುಕೊಳ್ಳುತ್ತಾರೆ. ಅವರು ತುಂಬಾ ಗರ್ವಿಷ್ಟರಾಗಿರುತ್ತಾರೆ. ರಾಜರು ಮುಂತಾದವರನ್ನೂ ಸಹ ಓಡಿಸಿ ಮಿಲಿಟರಿಯ ರಾಜ್ಯ ಮಾಡಿಬಿಡುತ್ತಾರೆ. ನಮ್ಮ ವಿನಃ ಮತ್ತ್ಯಾರೂ ದೇಶದ ರಕ್ಷಣೆ ಮಾಡಲು ಸಾಧ್ಯವಿಲ್ಲವೆಂದು ಮಿಲಿಟರಿಯು ತಿಳಿಯುತ್ತದೆ. ನಿಮಗೂ ಸಹ ಶುದ್ಧ ಅಹಂಕಾರವಿದೆ. ನಮ್ಮ ಈಶ್ವರೀಯ ಸೈನ್ಯದ ವಿನಃ ಮತ್ತ್ಯಾರೂ ರಾವಣನಿಂದ ರಕ್ಷಣೆ ಮಾಡಲು ಸಾಧ್ಯವಿಲ್ಲ. ಈಗ ಆ ಮಿಲಿಟರಿಯನ್ನು ನೋಡಿ ಮತ್ತು ನಿಮ್ಮನ್ನು ನೋಡಿಕೊಳ್ಳಿ. ನೀವು ಹೇಗಿದ್ದೀರೋ ಹಾಗೆಯೇ ಇದ್ದೀರಿ. ನಿಮ್ಮ ಹತ್ತಿರ ಯಾವುದೇ ಡ್ರಸ್ಸ್ ಅಥವಾ ಆಯುಧಗಳ ಶಕ್ತಿಯಿಲ್ಲ. ಅವರಂತೂ ಎಷ್ಟೊಂದು ಡ್ರಸ್ಸ್ಗಳನ್ನು ಧರಿಸುತ್ತಾರೆ. ಹೇಗೆ ಹೋಲಿಯಲ್ಲಿಯೂ ಸಹ ಹಾಡನ್ನು ಹಾಡುತ್ತಾರೆ. ರಾಮನ ಸೈನ್ಯವನ್ನು ತೋರಿಸುತ್ತಾರೆ. ಅವರಿಗೆ ಕಪಿಯ ಮುಖವನ್ನು ಕೊಟ್ಟಿದ್ದಾರೆ. ಅವರಂತೂ ಕೇವಲ ಗೊಂಬೆಗಳ ಆಟವನ್ನು ಆಡುತ್ತಾರೆ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ನಾವು ರಾವಣರೂಪಿ ಪಂಚವಿಕಾರಗಳ ಜೈಲಿನಿಂದ ಬಿಡುಗಡೆಯನ್ನು ಪಡೆಯುತ್ತಿದ್ದೇವೆ ಒಂದಂತೂ ರಾವಣನ ಜೈಲು ಮತ್ತು ರಾವಣನ ಮತದ ಮೇಲೆ ನಡೆಯುವವರ ಜೈಲು. ಭಕ್ತಿಯ ಸರಪಳಿಗಳು, ಗುರುಗಳ ಸರಪಳಿಗಳು, ಪತಿಯ ಸರಪಳಿ ಅರ್ಥಾತ್ ಬಂಧನ. ರಾವಣನ ಮತದಂತೆ ನೀವು ತುಂಬಾ ದುಃಖಿಯಾಗುತ್ತೀರಿ. ತುಂಬಾ ಕರೆಯುತ್ತೀರಿ- ರಾವಣನು ನಮ್ಮನ್ನು ತುಂಬಾ ಸತಾಯಿಸುತ್ತಾನೆ ಎಂದು.
ನೀವು ಅರಿತುಕೊಂಡಿದ್ದೀರಿ- ಎಷ್ಟೆಷ್ಟು ನಾವು ಯೋಗದಲ್ಲಿರುತ್ತೇವೆ ಅಷ್ಟು ನಮ್ಮ ಆತ್ಮವೂ ದುಃಖದಿಂದ ಬಿಡುಗಡೆಯಾಗುತ್ತದೆ. ಅಬಲೆಯರ ಮೇಲೆ ಅತ್ಯಾಚಾರಗಳಂತೂ ತುಂಬಾ ಆಗುತ್ತವೆ. ತುಂಬಾ ಪೆಟ್ಟನ್ನು ತಿನ್ನುತ್ತಾರೆ. ನಾವೀಗ ಏನು ಮಾಡಬೇಕೆಂದು ಅಬಲೆಯರು ತಂದೆಯನ್ನು ಕರೆಯುತ್ತಾರೆ. ತಂದೆಯು ಅವರಿಗೆ ಧೈರ್ಯವನ್ನು ಕೊಡುತ್ತಾರೆ. ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ದೇಹವು ನಮ್ಮದಲ್ಲ. ನಾವು ಈ ಶರೀರದಿಂದ ಸತ್ತುಹೋಗಿದ್ದೇವೆ. ತಂದೆಯ ಮಕ್ಕಳಾಗಿಬಿಟ್ಟಿದ್ದೇವೆ. ಮತ್ತ್ಯಾವುದೇ ಉಪಾಯವಿಲ್ಲ. ನಾವಂತೂ ಶಿವತಂದೆಯ ಮಕ್ಕಳಾಗಿದ್ದೇವೆ ಎಂದು ತಿಳಿದುಕೊಳ್ಳಿ. ಯಾರು ಸತ್ಯಮಕ್ಕಳಾಗಿರುತ್ತಾರೆ ಅವರ ಸ್ಥಿತಿಯು ಪಕ್ಕಾ ಆಗಿರುತ್ತದೆ. ಸ್ವಲ್ಪವೂ ಸಹ ವಿಕಾರದಕಡೆ ವಿಚಾರವು ಹೋಗುವುದಿಲ್ಲ. ಇಂತಹ ಮಕ್ಕಳ ಮೇಲೆ ಒಂದುವೇಳೆ ಯಾರಾದರೂ ಜಬರ್ದಸ್ತಾಗಿ ಹತ್ಯಾಚಾರ ಮಾಡುತ್ತಾರೆಂದರೆ ಇಂತಹ ಅಬಲೆಯರಮೇಲೆ ಪಾಪವು ಏರುವುದಿಲ್ಲ ಏಕೆಂದರೆ ಅವರು ಕರೆಯುತ್ತಾರೆ- ಬಾಬಾ ನಾವಂತೂ ತಮ್ಮವರಾಗಿದ್ದಾರೆ. ಶರೀರವಂತೂ ಶವ ಆಗಿಬಿಟ್ಟಿದೆ. ಇಂತಹ ನಿಶ್ಚಯಬುದ್ಧಿಯವರು ಯಾರಿರುತ್ತಾರೆ ಅವರೂ ಸಹ ತುಂಬಾ ಶ್ರೇಷ್ಠಪದವಿಯನ್ನು ಪಡೆಯುತ್ತಾರೆ. ಒಂದುವೇಳೆ ಸತ್ಯಹೃದಯದವರಾಗಿದ್ದಾಗ ಇಂತಹ ಸತ್ಯಹೃದಯದವರ ಮೇಲೆ ಅವಶ್ಯವಾಗಿ ಸಾಹೇಬ್ ರಾಜಿಯಾಗುತ್ತಾರೆ. ಯಾರು ಪೆಟ್ಟನ್ನು ತಿನ್ನುತ್ತಾರೆ ಅವರು ನೆನಪು ಮಾಡುವಷ್ಟು ಇಲ್ಲಿನ ಮಕ್ಕಳೂ ಸಹ ನೆನಪು ಮಾಡುವುದಿಲ್ಲ. ತಂದೆಯ ಬಳಿ ಅವರ ಕೂಗು ಬರುತ್ತದೆ, ಬಾಬಾ ಬಂಧನವಿದೆ. ಈ ಬಂಧನದಿಂದ ಬಿಡಿಸಿ. ಬಂಧನದಲ್ಲಿರುವವರು ಎಷ್ಟು ನೆನಪು ಮಾಡುತ್ತಾರೆಯೋ ಅಷ್ಟು ಯಾರು ಬಂಧನ ಮುಕ್ತರಾಗಿರುತ್ತಾರೆ ಅವರೂ ಸಹ ಅಷ್ಟು ನೆನಪು ಮಾಡುವುದಿಲ್ಲ. ಶಿವತಂದೆಯ ನೆನಪಿನಿಂದಲೇ ದೋಣಿಯೂ ಪಾರಾಗುತ್ತದೆ. ಕೆಲವರು ಹೇಳುತ್ತಾರೆ, ಬಾಬಾ ನಮಗೆ ಮುರಳಿಯನ್ನೂ ಸಹ ಓದಲು ಬಿಡುವುದಿಲ್ಲ. ತಂದೆಯು ಹೇಳುತ್ತಾರೆ, ಅರೇ! ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ. ಮುರಳಿಯಲ್ಲಿಯೂ ಸಹ ಪ್ರತೀದಿನ ಇದನ್ನೇ ತಿಳಿಸಲಾಗುತ್ತದೆ. ಮೂಲಮಾತಾಗಿದೆ- ನೆನಪಿನ ಚಾರ್ಟ್ ಇಡಿ. ನಾವು ತಂದೆಯನ್ನು ಎಷ್ಟು ಸಮಯ ನೆನಪು ಮಾಡುತ್ತೇವೆ ಎಂದು. ಅನೇಕರು ಈ ಪರಿಶ್ರಮಪಡುವುದಿಲ್ಲ. ಗಳಿಗೆ-ಗಳಿಗೆಯು ನೆನಪು ಮರೆತುಹೋಗುತ್ತದೆ, ಬಂಧನದಲ್ಲಿ ಇರುವ ಮಕ್ಕಳಂತೂ ಪೆಟ್ಟನ್ನು ತಿನ್ನುತ್ತಾ-ತಿನ್ನುತ್ತಾ ಇನ್ನೂ ಜಾಸ್ತಿ ನೆನಪು ಮಾಡುತ್ತಾರೆ. ಯಾರು ಪೆಟ್ಟನ್ನು ತಿನ್ನುತ್ತಿದ್ದರೂ ಸಹ ನೆನಪು ಮಾಡುತ್ತಾರೋ ಅಂತಹ ಅಬಲೆಯರದೇ ಬಲಿಹಾರಿಯಾಗಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡುತ್ತಾ ಇರಿ. ಎಷ್ಟು ಜಾಸ್ತಿ ಹೊಡೆಯುತ್ತಾರೋ ಅಷ್ಟು ನೀವು ನಷ್ಟಮೋಹಿಗಳಾಗುತ್ತಾ ಹೋಗುತ್ತೀರಿ. ಆ ಪೆಟ್ಟುಗಳೂ ಸಹ ಒಳ್ಳೆಯ ಪದವಿಯನ್ನು ಪಡೆಯಲು ಸಹಾಯವಾಗುತ್ತದೆ. ತಂದೆಗೂ ಸಹ ಇಂತಿಂತಹ ಮಕ್ಕಳು ನೆನಪಿಗೆ ಬರುತ್ತಾರೆ. ಹಾ! ಕೆಲವರು ತುಂಬಾ ಒಳ್ಳೆಯ ಮಹಾರಥಿಗಳೂ ಇದ್ದಾರೆ, ಅವರು ಅನೇಕರ ಸೇವೆ ಮಾಡುತ್ತಾರೆ ಯೋಗಿಗಳನ್ನಾಗಿ ಮಾಡುತ್ತಾರೆ. ಯೋಗಕ್ಕೆ ತುಂಬಾ ಮಹಿಮೆ ಇದೆ. ನಿಮಗಂತೂ ಎಲ್ಲರ ಮೇಲೆ ದಯೆ ಬರಬೇಕಾಗಿದೆ.
ನೀವು ಮಕ್ಕಳು ಗೀತೆಯನ್ನು ಓದುತ್ತೀರಿ, ಆ ಮನುಷ್ಯರ ಬುದ್ಧಿಯಲ್ಲಿ ಕೃಷ್ಣ ಭಗವಂತನು ರಾಜಯೋಗವನ್ನು ಕಲಿಸಿದರು ಎನ್ನುವುದು ಇರುತ್ತದೆ. ಆದರೆ ಪರಮಪಿತ ಪರಮಾತ್ಮನೇ ರಾಜಯೋಗವನ್ನು ಕಲಿಸದರು ಎಂದು ನೀವು ಹೇಳುತ್ತೀರಿ. ಇದನ್ನು ಸಿದ್ಧ ಮಾಡುವದಕ್ಕೋಸ್ಕರವೇ ನೀವು ಕೇಳುತ್ತೀರಿ. ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು? ಅವರು ತಂದೆಯಾಗಿದ್ದಾರೆ ಎಂದು ಹೇಳುತ್ತಾರೆ ಎಂದಾಗ ತಂದೆಯ ಆಜ್ಞೆಯೇ ಆಗಿದೆ, ನನ್ನ ಜೊತೆ ಯೋಗವನ್ನು ಜೋಡಿಸಿದಾಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ಯಾವುದೇ ಮನುಷ್ಯಮಾತ್ರರ ಜೊತೆ ಬುದ್ಧಿಯೋಗವನ್ನು ಜೋಡಿಸಬಾರದಾಗಿದೆ. ಒಂದುವೇಳೆ ಕಲಿಸುವವರೇ ಮನುಷ್ಯರಾಗಿದ್ದರೆ ನಿಮ್ಮ ಕಲ್ಯಾಣವಾಗುವುದಿಲ್ಲ. ಗೀತೆಯಲ್ಲಿಯೂ ಸಹ ದೇಹಧಾರಿಯ ಹೆಸರನ್ನು ಇಟ್ಟಿಬಿಟ್ಟಿದ್ದಾರೆ. ನಾವು ತಿಳಿಸುತ್ತೇವೆ, ನಮಗೆ ನಿರಾಕಾರ ಪರಮಪಿತ ಪರಮಾತ್ಮನು ಯೋಗವನ್ನು ಕಲಿಸುತ್ತಾರೆ. ನೀವು ಯಾರ ನಿಂದನೆಯನ್ನು ಮಾಡುವುದಿಲ್ಲ. ನೀವು ತಂದೆಯ ಮಹಿಮೆ ಮಾಡುತ್ತೀರಿ ಆದರೆ ತಿಳಿಸಿಕೊಡುವವರು ತುಂಬಾ ತೀಕ್ಷ್ಣ ಮತ್ತು ಬುದ್ಧಿವಂತರಾಗಿರಬೇಕು ಏಕೆಂದರೆ ಅಲ್ಲಿ ದೊಡ್ಡ-ದೊಡ್ಡ ವಿದ್ವಾಂಸ, ಪಂಡಿತರೂ ಸಹ ಅನೇಕರು ಬರುತ್ತಾರೆ. ಸನ್ಯಾಸಿಗಳದೂ ಸಹ ಸೈನ್ಯವಿದೆಯಲ್ಲವೇ. ಎಲ್ಲರ ಮುಖ್ಯಸ್ಥರೂ ಸಹ ಬರುತ್ತಾರೆ. ನೀವು ಮಕ್ಕಳು ಇಂತಹ ಚತುರರಾಗಿರಬೇಕು, ತುಂಬಾ ಕಡಿಮೆ ಹೇಳಿದರೂ ಸಹ ಅವರಿಗೆ ಒಂದೇಸಲ ಬಾಣವೂ ನಾಟಬೇಕು. ಜಾಸ್ತಿ ಹೇಳುವ ಅವಶ್ಯಕತೆಯಿರುವುದಿಲ್ಲ ಏಕೆಂದರೆ ಅವರು ಕ್ರೋಧಿಗಳೂ ಸಹ ಅನೇಕರು ಇರುತ್ತಾರೆ. ಅವರದೂ ಸಹ ದೊಡ್ಡಸೈನ್ಯವಿದೆ. ಎಲ್ಲಿಂದಲಾದರೂ ನಿಮಂತ್ರಣ ಬಂದರೂ ಸಹ ನೀವು ಹೋಗಿ. ನಮ್ಮಲ್ಲಿ ಯಾರು-ಯಾರು ಚೆನ್ನಾಗಿ ಆಹ್ವಾನ ಮಾಡಬಲ್ಲರು ಎಂದು ನೀವು ಮಕ್ಕಳೂ ಸಹ ತಿಳಿಯಬಲ್ಲಿರಿ. ಕೇವಲ ಒಬ್ಬ ತಂದೆಯ ಅರ್ಥವನ್ನೇ ತಿಳಿಸಬೇಕಾಗಿದೆ. ಎರಡು ಶಬ್ದಗಳು ಸಾಕು- ತಂದೆ ಮತ್ತು ಆಸ್ತಿ. ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡುವುದರಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಇದನ್ನಂತೂ ಭಗವಂತನೇ ಹೇಳುತ್ತಾರೆ, ಅವರೇ ರಚಯಿತನಾಗಿದ್ದಾರೆ. ಅವರು ಸ್ವರ್ಗದ ರಚಯಿತ ಪರಮಾತ್ಮನಾಗಿದ್ದಾರೆ. ಅವರೇ ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದಾಗ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಶ್ರೀಕೃಷ್ಣನನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದಿಲ್ಲ. ಈಗ ಕೃಷ್ಣನು ಎಲ್ಲಿದ್ದಾರೆ? ಕೃಷ್ಣನಂತೂ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡಿದ್ದಾರೆ. ನಿರಾಕಾರ ತಂದೆಯಂತೂ ಅವಿನಾಶಿಯಾಗಿದ್ದಾರೆ. ಎಲ್ಲಾ ತಿಳುವಳಿಕೆಯನ್ನು ಈ ಮಾತಿನ ಮೇಲೆಯೇ ಕೊಡುತ್ತಾರೆ. ಎಷ್ಟೊಂದು ತಪ್ಪು ಮಾಡಿಬಿಟ್ಟಿದ್ದಾರೆ. ಭಗವಾನುವಾಚ- ನಾನು ನಿಮಗೆ ವಿಶ್ವದ ಆಸ್ತಿಯನ್ನು ಕೊಡುತ್ತೇನೆ. ಕೃಷ್ಣನು ಎಲ್ಲರಿಗೆ ಆಸ್ತಿಯನ್ನು ಹೇಗೆ ಕೊಡಲು ಸಾಧ್ಯ! ಕೃಷ್ಣನು ಭಾರತದವರಾಗಿದ್ದಾರೆ. ಇಡೀ ಪ್ರಪಂಚವೇ ಪತಿತವಾಗಿದೆ. ಎಲ್ಲರ ಪತಿತ-ಪಾವನ ಒಬ್ಬ ನಿರಾಕಾರ ತಂದೆಯೇ ಆಗಿದ್ದಾರೆ. ನಿಮ್ಮ ಬುದ್ಧಿಯಲ್ಲಿ ಈ ಎಲ್ಲಾ ಮಾತುಗಳಿವೆ. ಭಕ್ತಿಯ ಪಾತ್ರದ ಜ್ಞಾನವೂ ನಿಮ್ಮಲ್ಲಿ ಇದೆ. ಮೊಟ್ಟಮೊದಲು ಶಿವನ ಪೂಜೆಯಾಗುತ್ತದೆ. ಸೋಮನಾಥ ಮಂದಿರವೂ ಸಹ ಮಾಡಲ್ಪಟ್ಟಿದೆ. ಇಷ್ಟು ದೊಡ್ಡ ಸೋಮನಾಥ ಮಂದಿರವನ್ನು ಯಾರು ಮಾಡಿಸಿದರು? ಮತ್ತ್ಯಾರಿಗೂ ಶಕ್ತಿಯಿಲ್ಲ. ಅವಶ್ಯವಾಗಿ ಆ ಸಮಯದಲ್ಲಿ ತುಂಬಾ ಸಾಹುಕಾರರಿದ್ದರು, ಅವರೇ ಈ ಮಂದಿರವನ್ನು ಮಾಡಿಸಿದರು. ನೀವು ಮಕ್ಕಳಲ್ಲಿ ಈಗ ತಿಳುವಳಿಕೆಯಿದೆ- ಅವಶ್ಯವಾಗಿ ನಾವು ತುಂಬಾ ಸಾಹುಕಾರರಾಗಿದ್ದೆವು. ಇಷ್ಟು ದೊಡ್ಡ ಸೋಮನಾಥ ಮಂದಿರವನ್ನು ಅವಶ್ಯವಾಗಿ ಮಹಾರಾಜರೇ ಮಾಡಿಸಿರಬಹುದು. ದೇವೀ-ದೇವತೆಗಳು ತಾವೇ ಪೂಜ್ಯರಾಗಿದ್ದರು, ಅವರೇ ಪೂಜಾರಿಗಳಾಗಿಬಿಟ್ಟರು ನಂತರ ಅವರೇ ಪೂಜೆಗೋಸ್ಕರ ಮಂದಿರಗಳನ್ನು ನಿರ್ಮಿಸುತ್ತಾರೆ. ಈ ರೀತಿ ಅಲ್ಲ ಯಾರೋ ಒಬ್ಬರು ಸೋಮನಾಥ ಮಂದಿರವನ್ನು ನಿರ್ಮಿಸುತ್ತಾರೆ ಎಂದಲ್ಲ. ಒಬ್ಬರು ಪ್ರಾರಂಭ ಮಾಡಿದರು ನಂತರ ಅನೇಕರು ಮಾಡಿಸಿದರು. ನಂತರ ತುಂಬಾ ಮಂದಿರಗಳ ಲೂಟಿಯಾಯಿತು. ಒಂದು ಮಂದಿರದಿಂದಲೇ ಇಷ್ಟೂ ಸಂಪತ್ತು ಸಿಕ್ಕಿತು, ಅದನ್ನು ಒಂಟೆಗಳ ಮೇಲೆ ತುಂಬಿಸಿಕೊಂಡು ಹೋದರು. ಯಾವಾಗ ಅವರು ಏರುತ್ತಾ ಹೋಗುತ್ತಾರೆ ಆಗ ಸಾಮ್ರಾಜ್ಯಕ್ಕೆ ಕೈ ಹಾಕಬೇಕೆಂದು ಪ್ರಯತ್ನ ಮಾಡಿದರು ಮತ್ತು ಅವರ ವಿಜಯವಾಯಿತು. ಈಗ ನಿಮ್ಮ ಬುದ್ಧಿಯಲ್ಲಿ ಇದೆ- ಅವಶ್ಯವಾಗಿ ಸ್ವರ್ಗವಾಗಿತ್ತು. ಧರ್ಮರಾಜನು ಸ್ಥಾಪನೆ ಮಾಡಿದರು. ಪುನಃ ಈ ದೆಹಲಿಯೂ ಸ್ವರ್ಗವಾಗುತ್ತದೆ. ಅದಕ್ಕೋಸ್ಕರ ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಈಗ ನೀವು ಕೇಳುತ್ತಿದ್ದೀರಿ ಆದ್ದರಿಂದ ಬುದ್ಧಿಯಲ್ಲಿ ನಶೆಯೇರುತ್ತದೆ. ತಿಳಿಯುತ್ತೀರಿ- ನಮ್ಮ ರಾಜ್ಯವೂ ಸ್ಥಾಪನೆಯಾಗುತ್ತಾ ಇದೆ. ನಮ್ಮ ಹೆಸರೂ ಪ್ರಸಿದ್ಧವಾಗಿದೆ. ಗುಪ್ತಸೈನ್ಯ ಎಂದು ಹೇಳಲಾಗುತ್ತದೆ. ಇಷ್ಟು ದೊಡ್ಡ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಸ್ಥೂಲಆಯುಧಗಳನ್ನು ತೆಗೆದುಕೊಳ್ಳುವುದಿಲ್ಲ, ಕಾಮಕಟಾರಿಯನ್ನು ನಡೆಸುವುದಿಲ್ಲ. ನೀವೇ ನಿರ್ವಿಕಾರಿ, ಶಕ್ತಿದಳದವರಾಗಿದ್ದೀರಿ. ನೀವೇ ಯೋಗಬಲದಿಂದ ರಾಜ್ಯವನ್ನು ಪಡೆದಿದ್ದೀರಿ. ವಿಶ್ವದ ಮಾಲೀಕರಾಗಲು ಶ್ರೀಮತದಂತೆ ನಾವು ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ. ತಿಳಿದುಕೊಂಡಿದ್ದೇವೆ- ಈಗ ಈ ನಾಟಕವೂ ಮುಕ್ತಾಯವಾಗುತ್ತದೆ ನಂತರ ಹೊಸದಾಗಿ ಪ್ರಾರಂಭವಾಗುತ್ತದೆ. ಇದು ಅವಿನಾಶಿ ನಾಟಕವಾಗಿದೆ. ಇದು ಎಂದೂ ವಿನಾಶವಾಗುವುದಿಲ್ಲ. ಬಾಕಿ ಯಾವಾಗ ಹೊಸಪ್ರಪಂಚವಾಗುತ್ತದೆ ಆಗ ಹಳೆಯ ಪ್ರಪಂಚವು ಸಮಾಪ್ತಿಯಾಗುತ್ತದೆ. ಚಕ್ರವಂತೂ ತಿರುಗುತ್ತಲೇ ಇರುತ್ತದೆ. ಇದು ಅನಾದಿ ನಾಟಕವಾಗಿದೆ. ಹೇಗೆ ಭಗವಂತನಿಗೋಸ್ಕರ ಹೇಳುತ್ತಾರೆ, ಅವರು ಸದಾ ಕರೆದಾಗ ಹಾಜರ್ ಆಗುತ್ತಾರೆ ಹಾಗೆಯೇ ಈ ನಾಟಕವೂ ಸಹ ಸುತ್ತುತ್ತಲೇ ಇರುತ್ತದೆ. ಈ ನಾಟಕದಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ನೀವು ಅರಿತುಕೊಂಡಿದ್ದೀರಿ- ಮೂಲವತನ ಮತ್ತು ಸ್ಥೂಲವತನವೂ ಇದ್ದೇ ಇದೆ. ನಂತರ ಸತ್ಯಯುಗ, ತ್ರೇತಾ ಚಕ್ರವನ್ನು ಸುತ್ತಿ ಪುನಃ ಪುನರಾವರ್ತನೆ ಆಗುತ್ತದೆ. ಇದು ಅವಿನಾಶಿ ನಾಟಕವಾಗಿದೆ. ನಾವು ಪಾತ್ರಧಾರಿಗಳೂ ಸಹ ನಾಟಕದಲ್ಲಿಯೇ ಇದ್ದೇವೆ. ಪ್ರಾರಂಭದಿಂದ ಅಂತ್ಯದತನಕ ಎಲ್ಲರ ಪಾತ್ರವಿದೆ. ಆ ಚಿಕ್ಕನಾಟಕವೂ ಹಳೆಯದಾಗಿಬಿಡುತ್ತದೆ. ಈ ನಾಟಕವು ಎಂದೂ ಹಳೆಯದಾಗುವುದಿಲ್ಲ. ಈ ಅವಿನಾಶಿ ನಾಟಕವು ಎಂದಾದರೂ ಹಳೆಯದಾಗುತ್ತದೆಯೇನು? ಇಲ್ಲ. ಬಾಕಿ ನಾವು ಪಾತ್ರದಲ್ಲಿ ಬರುತ್ತೇವೆ. ಹೊಸಬರಿಂದ ಹಳಬರಾಗಿ ನಂತರ ಹಳಬರಿಂದ ಹೊಸಬರಾಗುತ್ತೇವೆ. ಅವಶ್ಯವಾಗಿ ನಾವು ರಾಜಾ-ರಾಣಿಯಾಗಿದ್ದೇವೆ, ಈಗ ಸೇವಕರಾಗಿದ್ದೇವೆ. ಸೇವಕರಿಂದ ಪುನಃ ರಾಜರಾಗುತ್ತೇವೆ. ಸೇವಕ ಎಂದರೆ ಬಡವ್ಯಕ್ತಿ. ತಂದೆಯೇ ಬಂದು ಎಲ್ಲರಿಗೂ ಮಾರ್ಗವನ್ನು ತಿಳಿಸುತ್ತಾರೆ. ನಿಮಗೆ ತುಂಬಾ ನಶೆಯಿರಬೇಕು. ಈ ಹೊಸಜ್ಞಾನವೂ ನಿಮಗೆ ಸಿಗುತ್ತದೆ ಮತ್ತು ಸಿಗುವುದೂ ಸಹ ಒಂದೇಬಾರಿ. ಇದನ್ನೂ ಸಹ ತಿಳಿದುಕೊಂಡಿದ್ದೀರಲ್ಲವೇ. ನಾವು ಸಲಹೆಯ ಪ್ರಮಾಣ ಈ ಸೃಷ್ಟಿಯ ಮೇಲೆ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿ ಮತ್ತು ರಾಜ್ಯಭಾಗ್ಯವನ್ನು ನೆನಪು ಮಾಡಿ. ಹಾ! ಬಾಕಿ ಈ ಅತ್ಯಾಚಾರವಂತೂ ಆಗಿಯೇ ಆಗುತ್ತದೆ. ಹತ್ಯಾಚಾರವೂ ಸಹ ಕರ್ಮಭೋಗವಾಗಿದೆ. ಪುರುಷರು ಸ್ತ್ರೀಯನ್ನು ಹೊಡೆಯುತ್ತಾರೆ. ಹೀಗೆ ಯಾರಾದರು ಹೊಡೆಯುತ್ತಾರೇನು? ನೀವೂ ಸಹ ಅವರಿಗೆ ಹೊಡೆದಿರಬಹುದು. ಅದೇ ಲೆಕ್ಕಾಚರವು ಸಮಾಪ್ತಿಯಾಗುತ್ತಾ ಇದೆ. ಇದೆಲ್ಲವೂ ಕರ್ಮಗಳ ಲೆಕ್ಕಾಚಾರವಾಗಿದೆ. ಈಗ ನೀವು ಶ್ರೀಮತದನುಸಾರ ಶ್ರೇಷ್ಠಕರ್ಮವನ್ನು ಮಾಡುತ್ತಿದ್ದೀರಿ. ಈಗ ಯಾವುದೇ ಭ್ರಷ್ಟಕರ್ಮವನ್ನು ಮಾಡಬಾರದು. ಎಲ್ಲರಿಗೆ ತಂದೆಯ ಪರಿಚಯ ಕೊಡುವುದು ಎಲ್ಲದಕ್ಕಿಂತ ಶ್ರೇಷ್ಠಕರ್ಮವಾಗಿದೆ. ತಂದೆಯ ಆಜ್ಞೆಯೂ ಸಿಕ್ಕಿದೆ- ನನ್ನೊಬ್ಬನನ್ನೇ ನೆನಪು ಮಾಡಿ. ಎಲ್ಲರೂ ತಂದೆಯನ್ನೇ ಮರೆತುಬಿಟ್ಟಿದ್ದಾರೆ. ಶಿವನ ಪೂಜೆ ಮಾಡುತ್ತಾರೆ ಆದರೆ ಏನನ್ನೂ ಅರಿತುಕೊಂಡಿಲ್ಲ. ಅಮರನಾಥದಲ್ಲಿಯೂ ಸಹ ದೊಡ್ಡಲಿಂಗವನ್ನು ಮಾಡಿಟ್ಟಿದ್ದಾರೆ. ತಂದೆಯದು ಇಷ್ಟು ದೊಡ್ಡರೂಪವಿದೆಯೇನು? ಏನೂ ಗೊತ್ತಿಲ್ಲ. ಈಗ ನೀವು ಮಕ್ಕಳು ಈ ಎಲ್ಲಾ ಮಾತುಗಳನ್ನು ಯಥಾರ್ಥವಾಗಿ ಅರಿತುಕೊಂಡಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಶ್ರೀಮತನುಸಾರ ಸದಾ ಶ್ರೇಷ್ಠಕರ್ಮವನ್ನು ಮಾಡಬೇಕು. ಯಾವುದೇ ಭ್ರಷ್ಠ ಕರ್ಮವಾಗದೆ ಇರಲಿ. ಇದರ ಗಮನವನ್ನಿಡಬೇಕಾಗಿದೆ. ಅನೇಕರನ್ನು ಯೋಗಿಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ.
2) ಸತ್ಯಹೃದಯವನ್ನು ಇಟ್ಟುಕೊಳ್ಳಬೇಕಾಗಿದೆ, ಶರೀರವಂತೂ ಶವವಾಗಿದೆ- ಇದರ ಅಭಿಮಾನವನ್ನು ಬಿಡಬೇಕಾಗಿದೆ. ಸಂಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ.
|
ವರದಾನ: |
;- ಕಲ್ಪ-ಕಲ್ಪದ ವಿಜಯದ ನೊಂದಣಿಯ ಸ್ಮೃತಿಯಲ್ಲಿಟ್ಟುಕೊಂಡು ಸದಾ ನಿಶ್ಚಿಂತರಾಗಿರುವಂತಹ ನಿಶ್ಚಯಬುದ್ಧಿ
ವಿಜಯಿ ಭವ |
|
ಸ್ಲೋಗನ್: |
ಸದಾ ಖುಷಿಯ ಔಷಧಿಯ ಮೂಲಕ ಆರೋಗ್ಯವಂತ
ಖುಷಿಯ ಖಜಾನೆಯಿಂದ
ಸಂಪನ್ನ ಖುಷಿಯ ಅದೃಷ್ಟವಂತರಾಗಿ. |
Hindi/Tamil/English/Telugu/Kannada/Malayalam/Ilangai Tamil/Sinhala


0 Comments