Header Ads Widget

Header Ads

KANNADA MURLI 20.04.23

 

20/04/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ

 

ಮಧುರ ಮಕ್ಕಳೇ- ತಂದೆಯು ನಿಮಗೆ ಯಾವ ವಿದ್ಯೆಯನ್ನು ಓದಿಸುತ್ತಿದ್ದಾರೆ- ಇದು ಅವರ ಕೃಪೆಯಾಗಿದೆ, ನೀವು ಭವಿಷ್ಯದ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳಾಗಲು ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೀರಿ

ಪ್ರಶ್ನೆ:

ಮಕ್ಕಳು ತಂದೆಯ ಸಮ್ಮುಖದಲ್ಲಿ ಯಾವ ಪ್ರತಿಜ್ಞೆಯನ್ನು ಮಾಡಿದ್ದೀರಿ?

ಉತ್ತರ:

ನೀವು ಪ್ರತಿಜ್ಞೆಯನ್ನು ಮಾಡಿದ್ದೀರಿ- ಬಾಬಾ, ತಾವು ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಬಂದಿದ್ದೀರಿ. ನಾವು ತಮ್ಮ ಶ್ರೀಮತದಂತೆ ನಡೆದು ಭಾರತವನ್ನು ಸ್ವರ್ಗವನ್ನಾಗಿ ಮಾಡುವುದರಲ್ಲಿ ತಮ್ಮ ಸಹಯೋಗಿಗಳಾಗುತ್ತೇವೆ. ಪವಿತ್ರರಾಗಿ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೇವೆ.

ಗೀತೆ:  ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ........... 

ಓಂ ಶಾಂತಿ. ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಇದು ಶಾಲೆ ಅಥವ ವಿಶ್ವವಿದ್ಯಾಲಯವಾಗಿದೆ, ಯಾವ ವಿಶ್ವವಿದ್ಯಾಲಯವಾಗಿದೆ? ಈಶ್ವರೀಯ ವಿಶ್ವವಿದ್ಯಾಲಯ, ಈಶ್ವರನೇ ಓದಿಸುತ್ತಾರೆ, ಭಗವಾನುವಾಚ. ಬೇಹದ್ದಿನ ತಂದೆಯನ್ನು ಗಾಡ್ಫಾದರ್ ಎಂದು ಹೇಳಲಾಗುತ್ತದೆ. ಲೌಕಿಕ ತಂದೆಯನ್ನು ಗಾಡ್ ಎಂದು ಹೇಳುವುದಿಲ್ಲ. ಎಲ್ಲಾ ಮನುಷ್ಯರೂ ಒಬ್ಬ ಪರಮಾತ್ಮನನ್ನೇ ಗಾಡ್ಫಾದರ್ ಎಂದು ಹೇಳುತ್ತಾರೆ ಏಕೆಂದರೆ ಅವರು ಬೇಹದ್ದಿನ ತಂದೆಯಾಗಿದ್ದಾರೆ. ಇಡೀ ಸೃಷ್ಟಿಯನ್ನು ರಚಿಸುವಂತಹ ಗಾಡ್ಫಾದರ್ ಆಗಿದ್ದಾರೆ. ಲೌಕಿಕ ಮಕ್ಕಳಿಗೂ ಸಹ ತಂದೆಯಿರುತ್ತಾರೆ, ಅವರನ್ನು ಬಾಬಾ ಎಂದು ಹೇಳಲಾಗುತ್ತದೆ, ಇವರು ಬೇಹದ್ದಿನ ಪಾರಲೌಕಿಕ ಬಾಬಾ ಆಗಿದ್ದಾರೆ. ಲೌಕಿಕ ತಂದೆಯಂತೂ ಇಲ್ಲಿ ಅನೇಕರಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮ ಮಕ್ಕಳಿರುತ್ತಾರೆ ಅಂದಮೇಲೆ ಬೇಹದ್ದಿನ ತಂದೆಯಿಂದ ಅವಶ್ಯವಾಗಿ ಯಾವುದಾದರೂ ಆಸ್ತಿಯು ಸಿಗಬೇಕಲ್ಲವೆ. ನೀವಿಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ ಅಂದಮೇಲೆ ಇಲ್ಲಿ ಯಾರು ಓದಿಸುತ್ತಾರೆ? ಭಗವಾನುವಾಚ. ಅಲ್ಲಿ ಮನುಷ್ಯರು ಬ್ಯಾರಿಸ್ಟರಿ, ಇಂಜಿನಿಯರಿ, ಡಾಕ್ಟರಿ ಮುಂತಾದ ವಿದ್ಯೆಯನ್ನು ಓದಿಸುತ್ತಾರೆ ಆದರೆ ಇಲ್ಲಂತೂ ಬೇಹದ್ದಿನ ತಂದೆಯು ಬಂದು ಓದಿಸುತ್ತಾರೆ ಆದ್ದರಿಂದ ತಾವಿಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲಾಗುತ್ತದೆ.

ನಿಮಗೆ ಗೊತ್ತಿದೆ- ಭಾರತದಲ್ಲಿಯೇ ದೇವಿ-ದೇವತೆಗಳ ರಾಜ್ಯವಾಗುತ್ತದೆ. ಭಾರತವೇ ಪ್ರಾಚೀನ ಹಳೆಯದಕ್ಕಿಂತ ಹಳೆಯ ಖಂಡವಾಗಿದೆ. ಮುಖ್ಯವಾಗಿ 5 ಖಂಡಗಳಿವೆ ಅದರಲ್ಲಿ ಮೊದಲನೆಯದು ಭಾರತವಾಗಿದೆ. ಭಾರತ ಖಂಡವು ಹೊಸ ಪ್ರಪಂಚದಲ್ಲಿದ್ದಾಗ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಆಗ ಭಾರತವು ಹೊಸದಾಗಿತ್ತು. ಕೇವಲ ಭಾರತಖಂಡವೇ ಇತ್ತು, ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ದೇವಿ-ದೇವತೆಗಳು ಪವಿತ್ರರಾಗಿದ್ದರು. ಯಥಾ ರಾಜ-ರಾಣಿ ಲಕ್ಷ್ಮೀ-ನಾರಾಯಣರು ಪವಿತ್ರರಾಗಿದ್ದರು. ಭಾರತವು ಬಹಳ ಧನವಂತ ರಾಷ್ಟ್ರವಾಗಿತ್ತು, ವಜ್ರಸಮಾನವಿತ್ತು. ಈಗಂತು ಭಾರತವು ಬಹಳ ಕಂಗಾಲಾಗಿದೆ, ಕವಡೆಯ ಸಮಾನವಾಗಿದೆ. ಸ್ವರ್ಗದಲ್ಲಿ ಯುದ್ಧ, ಕಲಹಗಳೇನೂ ಇರಲಿಲ್ಲ. ನಿರ್ವಿಕಾರಿ ಭಾರತವಾಗಿತ್ತು. ಸಮಯದಲ್ಲಿ ಕಲಿಯುಗವಾಗಿರುವುದರಿಂದ ಭಾರತವು ಅಪವಿತ್ರವಾಗಿದೆ. ಎಷ್ಟೊಂದು ದುಃಖವಿದೆ. ಈಗ ಭಾರತವನ್ನು ಪುನಃ ಸ್ವರ್ಗವನ್ನಾಗಿ ಯಾರು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ಮನುಷ್ಯರಿಂದ ದೇವತೆಗಳಾಗಲು ಮತ್ತು ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ, ಹೀಗೆ ಬೇಹದ್ದಿನ ತಂದೆಯೇ ಮಾಡುತ್ತಾರೆ. ಯಾವುದೇ ಮನಷ್ಯರು ಸದ್ಗತಿ ಕೊಡಲು ಸಾಧ್ಯವಿಲ್ಲ. ಪತಿತ ಮನುಷ್ಯರು ಅನ್ಯರನ್ನು ಪಾವನ ಮಾಡಲು ಸಾಧ್ಯವಿಲ್ಲ. ಪತಿತ-ಪಾವನ ಬನ್ನಿ ಎಂದು ಸತ್ಯಯುಗದಲ್ಲಿ ಯಾರೂ ಕರೆಯುವುದಿಲ್ಲ ಏಕೆಂದರೆ ಅಲ್ಲಿ ಎಲ್ಲರೂ ಪವಿತ್ರರಾಗಿದ್ದರು, ಭಾರತವು ಸದಾ ಸುಖಿಯಾಗಿತ್ತು. ಈಗ ಪುನಃ ಭಾರತವನ್ನು ಸದಾ ಸುಖಿಯನ್ನಾಗಿ ಮಾಡುವುದು ತಂದೆಯದೇ ಕಾರ್ಯವಾಗಿದೆ. ಭಾರತವು ಶಿವಾಲಯವಾಗಿತ್ತು. ಪರಮಪಿತ ಪರಮಾತ್ಮನನ್ನು ಶಿವನೆಂದು ಹೇಳಲಾಗುತ್ತದೆ, ಅವರ ಜಯಂತಿಯನ್ನೂ ಭಾರತದಲ್ಲಿ ಆಚರಿಸುತ್ತಾರೆ. ಶಿವಪರಮಾತ್ಮ ಎಲ್ಲರ ತಂದೆಯಾಗಿದ್ದಾರೆ, ಅವರೇ ಬಂದು ಎಲ್ಲರನ್ನೂ ದುಃಖದಿಂದ ಮುಕ್ತಗೊಳಿಸುತ್ತಾರೆ. ಅಂತಹ ತಂದೆಯನ್ನು ಎಲ್ಲರೂ ಮರೆತುಹೋಗಿದ್ದಾರೆ. ಶಾಂತಿದಾತ, ಸುಖದಾತ ತಂದೆಯು ಅವರೊಬ್ಬರೇ ಆಗಿದ್ದಾರೆ. ಭಾರತವು ಸ್ವರ್ಗವಾಗಿತ್ತು, ತಾವೆಲ್ಲರೂ ಪವಿತ್ರರಾಗಿದ್ದಿರಿ, ಆಗ ಶಾಂತಿಯೂ ಇತ್ತು ಮತ್ತು ಸುಖವೂ ಇತ್ತು. ಸುಖ, ಶಾಂತಿ, ಪವಿತ್ರತೆಯೂ ಇತ್ತು. ಪವಿತ್ರತೆಯ ಶಕ್ತಿ ಸಿಗಲೆಂದು ಸನ್ಯಾಸಿಗಳೂ ಸಹ ಭಾರತಕ್ಕೆ ಸಹಯೋಗ ಕೊಡುವುದಕ್ಕೋಸ್ಕರ ಸನ್ಯಾಸ ಮಾಡುತ್ತಾರೆ. ವಿಕಾರೀ ಮನುಷ್ಯರೆಲ್ಲರೂ ಅವರಿಗೆ ತಲೆಬಾಗುತ್ತಾರೆ. ಸನ್ಯಾಸಿಗಳು ಪವಿತ್ರತೆಯ ಸಹಯೋಗದಿಂದ ಭಾರತವನ್ನು ಕೈ ಎತ್ತಿ ಹಿಡಿಯುತ್ತಾರೆ. ಭಾರತದಂತಹ ಸುಖಿ, ಪವಿತ್ರ ಖಂಡವು ಯಾವುದೂ ಇಲ್ಲ. ಶ್ರೇಷ್ಠಾತಿ ಶ್ರೇಷ್ಠವೆಂದು ಭಾರತ ಖಂಡಕ್ಕಾಗಿಯೇ ಹೇಳಲಾಗಿದೆ. ತಂದೆಯೇ ಪುನಃ ಭಾರತವನ್ನು ಹೊಸದನ್ನಾಗಿ ಮಾಡುತ್ತಾರೆ. ಯಾವುದೇ ಮನುಷ್ಯನನ್ನು ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲರಲ್ಲಿಯೂ ಈಶ್ವರನಿಲ್ಲ ಆದರೆ ಎಲ್ಲರಲ್ಲಿ ಪಂಚವಿಕಾರಗಳಿವೆ. ಪಂಚವಿಕಾರಗಳನ್ನು ರಾವಣನೆಂದು ಹೇಳಲಾಗುತ್ತದೆ. ಸಮಯದಲ್ಲಿ ರಾವಣನ ರಾಜ್ಯವಾಗಿದೆ. ಎಲ್ಲರೂ ವಿಕಾರಿ ಪತಿತರಾಗಿದ್ದಾರೆ. ಸತ್ಯಯುಗದಲ್ಲಿ ಪವಿತ್ರ ಗೃಹಸ್ಥ ಧರ್ಮವಿತ್ತು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ಭಾರತದಲ್ಲಿಯೇ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು. ಈಗ ನಾಟಕದ ಅನುಸಾರ ಪುನಃ ಭಾರತವು ಹಳೆಯದಾಗಿದೆ. ಹೊಸ ಸೃಷ್ಟಿಯೇ ಹಳೆಯ ಸೃಷ್ಟಿಯಾಗುವುದು. ಭಾರತದಲ್ಲಿ ಒಂದು ಸರ್ವಾಧಿಕಾರ ರಾಜ್ಯವಿತ್ತು, ಅದನ್ನು ಸ್ವರ್ಗವೆಂದು ಹೇಳಲಾಗುತ್ತದೆ. ಅದನ್ನು ಬೇಹದ್ದಿನ ತಂದೆಯು ಮಾತೆಯರ ಮುಖಾಂತರ ಸ್ಥಾಪನೆ ಮಾಡುತ್ತಾರೆ ಏಕೆಂದರೆ ಶಿವಶಕ್ತಿಸೇನೆಯು ಮಾತೆಯರಾಗಿದ್ದಾರೆ. ಜಗದಂಬಾರವರ ಗಾಯನವೂ ಇದೆ ಆದರೆ ಶ್ರೇಷ್ಠಾತಿಶ್ರೇಷ್ಠವಾಗಿರುವವರು ಯಾರೆಂದು ಮನುಷ್ಯರಿಗೆ ಗೊತ್ತಿಲ್ಲ. ಎಲ್ಲರಿಗಿಂತ ಶ್ರೇಷ್ಠಾತಿಶ್ರೇಷ್ಠವಾಗಿರುವವರು ಪರಮಪಿತ ಪರಮಾತ್ಮನಾಗಿದ್ದಾರೆ, ನಂತರ ಬ್ರಹ್ಮ-ವಿಷ್ಣು-ಶಂಕರನಾಗಿದ್ದಾರೆ. ಪರಮಪಿತ ಪರಮಾತ್ಮನ ಪಾತ್ರವೇನಾಗಿದೆ? ಅವರು ಬಂದು ಪತಿತ ಭಾರತವನ್ನು ಪಾವನ ಮಾಡುತ್ತಾರೆ. ಬ್ರಹ್ಮಾರವರ ಮುಖಾಂತರ ಪಾವನ ಪ್ರಪಂಚದ ಸ್ಥಾಪನೆ ಮಾಡುತ್ತಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರು ರಕ್ಷಾಬಂಧನವನ್ನು ಕಟ್ಟುತ್ತೀರಿ. ನಾವು ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೇವೆ. ಹೇ ತಂದೆಯೇ, ನಾವು ತಮ್ಮ ಶ್ರೀಮತದಂತೆ ನಡೆದು ಪವಿತ್ರರಾಗಿ ಭಾರತವನ್ನು ಪವಿತ್ರವನ್ನಾಗಿ ಮಾಡಿ, ನಂತರ ರಾಜ್ಯ ಮಾಡುತ್ತೇವೆ ಎಂದು ಹೇಳುತ್ತೀರಿ. ತಂದೆಯು ಬಂದು ಬ್ರಹ್ಮಾರವರ ಮುಖಾಂತರ ಸ್ಥಾಪನೆ ಮಾಡಿಸುತ್ತಾರೆ. ಪ್ರಜಾಪಿತ ಬ್ರಹ್ಮಾರವರು ಎಲ್ಲರ ತಂದೆಯಾಗಿದ್ದಾರೆ ಮತ್ತು ಜಗದಂಬಾ ಎಲ್ಲರ ತಾಯಿಯಾಗಿದ್ದಾರೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ... ಎಂದು ಭಾರತವಾಸಿಗಳು ಹಾಡುತ್ತಾರೆ. ಸ್ವಯಂ ತಂದೆಯೇ ಬಂದು ಓದಿಸುತ್ತಾರೆ, ಇದೇ ಅವರ ಕೃಪೆಯಾಗಿದೆ. ಇದರಿಂದ ನಾವು ಭವಿಷ್ಯದಲ್ಲಿ ಬಹಳ ಸುಖವನ್ನು ಕಾಣುತ್ತೇವೆ. ಇಲ್ಲಂತೂ ಬಹಳ ದುಃಖವಿದೆ ಆದ್ದರಿಂದ ನರಕವೆಂದು ಹೇಳಲಾಗುತ್ತದೆ. ದೈವೀಪ್ರಪಂಚವೇ ಅಸುರೀ ಪ್ರಪಂಚವಾಗುತ್ತದೆ. ದೈವೀಪ್ರಪಂಚದಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ಬೇಹದ್ದಿನ ತಂದೆಯು ಬಂದು ಮಕ್ಕಳಿಗೆ ಬೇಹದ್ದಿನ ವಿಶ್ವದ ಇತಿಹಾಸ ಭೂಗೋಳವನ್ನು ತಿಳಿಸುತ್ತಾರೆ. ಯಾವುದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.

ಮಕ್ಕಳು ಬೇಹದ್ದಿನ ತಂದೆಯೊಂದಿಗೆ ಪ್ರತಿಜ್ಞೆ ಮಾಡುತ್ತೀರಿ- ಹೇ ತಂದೆಯೇ, ತಾವು ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಬಂದಿದ್ದೀರಿ, ನಾವು ಶ್ರೀಮತದಂತೆ ನಡೆದು ಭಾರತವನ್ನು ಸ್ವರ್ಗ ಅಥವ ಶ್ರೇಷ್ಠವನ್ನಾಗಿ ಮಾಡಿದ ನಂತರ ಅದರಲ್ಲಿ ರಾಜ್ಯ ಮಾಡುತ್ತೇವೆ, ಇದನ್ನೇ ರಾಜಯೋಗದ ಶಿಕ್ಷಣವೆಂದು ಹೇಳಲಾಗುತ್ತದೆ. ಸನ್ಯಾಸಿಗಳದು ಹಠಯೋಗವಾಗಿದೆ ಆದ್ದರಿಂದ ಮನೆ-ಮಠವನ್ನು ಬಿಟ್ಟುಹೋಗುತ್ತಾರೆ ಆದರೆ ನೀವು ಬಿಡಬೇಕಾಗಿಲ್ಲ. ಹಳೆಯ ಪ್ರಪಂಚವನ್ನೇ ನೀವು ಮರೆಯಬೇಕಾಗಿದೆ. ನೀವೀಗ ಹೊಸಪ್ರಪಂಚದಲ್ಲಿ ಹೋಗುವವರಿದ್ದೀರಿ ಆದ್ದರಿಂದ ತಂದೆಯು ಮಾರ್ಗದರ್ಶಕನಾಗಿ ಬಂದಿದ್ದಾರೆ. ಅವರು ಮುಕ್ತಿದಾತ, ಎಲ್ಲರನ್ನು ದುಃಖಗಳಿಂದ ಬಿಡಿಸುವವರಾಗಿದ್ದಾರೆ. ಭಾರತವು ಶಿವತಂದೆಯ ಜನ್ಮಸ್ಥಾನವಾಗಿದೆ. ಸೋಮನಾಥ ಮಂದಿರವೂ ಇಲ್ಲಿದೆ. ಭಾರತವು ದೊಡ್ಡ ತೀರ್ಥಸ್ಥಾನವಾಗಿದೆ ಎಂಬುದನ್ನು ಮನುಷ್ಯರು ಮರೆತುಬಿಟ್ಟಿದ್ದಾರೆ. ಎಲ್ಲಾ ಮನುಷ್ಯರ ತಂದೆಯೇ ಸುಖ, ಶಾಂತಿಯನ್ನು ನೀಡುತ್ತಾರೆ, ಇದು ಅವರ ಜನ್ಮಸ್ಥಾನವಾಗಿದೆ. ಎಲ್ಲರೂ ಭಾರತದಲ್ಲಿ ಬಂದು ಶಿವನ ಮಂದಿರದಲ್ಲಿ ನಮಸ್ಕಾರ ಮಾಡಬೇಕು. ಎಲ್ಲರಿಗಿಂತ ಶ್ರೇಷ್ಠಮತವು ಭಗವಂತನ ಮತವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಶಿವತಂದೆಯು ಬೇಹದ್ದಿನ ಸುಖವನ್ನು ಕೊಡುವವರಾಗಿದ್ದಾರೆ. ತಂದೆಯಿಂದಲೇ ಸುಖವು ಸಿಗುತ್ತದೆ. ವಿನಾಶವೂ ಸಹ ಸಮ್ಮುಖದಲ್ಲಿ ನಿಂತಿದೆ. ಮಹಾಭಾರಿ ಯುದ್ಧದ ಮುಖಾಂತರ ಸುಖಧಾಮ, ಶಾಂತಿಧಾಮದ ದ್ವಾರಗಳು ತೆರೆಯಲಿವೆ. ನೀವು ಬ್ರಹ್ಮಾಕುಮಾರ-ಕುಮಾರಿಯರು ಭಾರತವನ್ನು ಸ್ವರ್ಗವನ್ನಾಗಿ ಮಾಡುವುದಕ್ಕೋಸ್ಕರ ತನು-ಮನ-ಧನದಿಂದ ಸೇವೆ ಮಾಡುತ್ತಿದ್ದೀರಿ. ಹೇಗೆ ಗಾಂಧೀಜಿಯ ಮತದಂತೆ ಎಲ್ಲರೂ ತನು-ಮನ-ಧನದಿಂದ ಸೇವೆಯನ್ನು ಮಾಡಿ. ಬ್ರಿಟಿಷರ ರಾಜ್ಯವನ್ನೇ ಓಡಿಸಿದರು ಆದರೆ ಈಗ ತುಂಬಾ ದುಃಖವಿದೆ ಅಂದಮೇಲೆ ಈಗ ರಾವಣನ ಮೇಲೆ ಜಯ ಪಡೆಯಬೇಕಾಗಿದೆ. ಅರ್ಧಕಲ್ಪ ರಾವಣರಾಜ್ಯ, ಇನ್ನು ಅರ್ಧಕಲ್ಪ ರಾಮರಾಜ್ಯವಿರುತ್ತದೆ. ದ್ವಾಪರದಿಂದಲೂ ದೇಹಾಭಿಮಾನದಲ್ಲಿ ಬರುವುದರಿಂದ ತಂದೆಯನ್ನು ಮರೆತುಬಿಡುತ್ತಾರೆ ಮತ್ತು ತಂದೆಯನ್ನು ಅರಿತುಕೊಳ್ಳದೇ ಇರುವಕಾರಣ ಜಗಳವಾಡುತ್ತಾ, ಹೊಡೆದಾಡುತ್ತಿರುತ್ತಾರೆ ಅಂದಾಗ ಭಾರತವಾಸಿಗಳು ಯಾವಾಗ ದುಃಖಿಯಾಗುತ್ತಾರೆಯೋ ಆಗಲೇ ತಂದೆಯು ಮಕ್ಕಳ ಅದೃಷ್ಟವನ್ನು ಬೆಳಗಿಸಲು ಬರುತ್ತಾರೆ. ಆದರೆ ಇಲ್ಲಿ ಯಾವುದೇ ಅಂಧಶ್ರದ್ಧೆಯ ಮಾತಿಲ್ಲ. ಇದಂತೂ ವಿದ್ಯೆಯಾಗಿದೆ, ತಂದೆಯಂತೂ ಎಲ್ಲದರ ಜ್ಞಾನವನ್ನೂ ಕೊಡುತ್ತಾರೆ ಏಕೆಂದರೆ ಅವರು ಜ್ಞಾನಸಾಗರನಾಗಿದ್ದಾರೆ. ತಂದೆಯು ತಿಳಿಸುತ್ತಾರೆ- ನನ್ನಲ್ಲಿ ಪೂರ್ಣಚಕ್ರದ ಜ್ಞಾನವಿದೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಅವರ ನಂತರ ರಾಮ-ಸೀತೆಯರ ರಾಜ್ಯವಿತ್ತು. ಹುಲಿ ಮತ್ತು ಹಸು ಒಟ್ಟಿಗೆ ನೀರು ಕುಡಿಯುತ್ತಿದ್ದವು. ಯಥಾ ರಾಜ-ರಾಣಿ ತಥಾ ಪ್ರಜೆಗಳಿದ್ದರು. ಧರ್ಮದ ಉಪಕಾರವಿತ್ತು. ಈಗಂತು ಮನೆ-ಮನೆಯಲ್ಲಿ ದುಃಖವಿದೆ. ತಂದೆಯು ಬಂದು ಎಲ್ಲರನ್ನೂ ಸುಖಿಗಳನ್ನಾಗಿ ಮಾಡುತ್ತಾರೆ. ನೀವು ಭಾರತ ಮಾತೆಯರು ಶಕ್ತಿಸೇನೆಯರಾಗಿದ್ದೀರಿ, ಮಂದಿರವು ನಿಮ್ಮ ನೆನಪಾರ್ಥವಾಗಿದೆ. ಈಗ ತಾವು ರಾಜಯೋಗದಲ್ಲಿ ಕುಳಿತಿದ್ದೀರಿ, ಇದನ್ನು ರಾಜಯೋಗದ ವಿಧಿಯೆಂದು ಹೇಳಲಾಗುತ್ತದೆ. ನಿಮಗೆ ಭಗವಂತನೇ ಓದಿಸುತ್ತಾರೆ.

ತಂದೆಯು ಬಂದು ನೀವು ಮಾತೆಯರ ಮುಖಾಂತರ ಎಲ್ಲರ ಅದೃಷ್ಟವನ್ನು ಬೆಳಗಿಸುತ್ತಾರೆ. ಪರಮಪಿತ ಪರಮಾತ್ಮನಿಗೆ ವಂದನೆ ಮಾಡಬೇಕು. ದೇವತೆಗಳಿಗೂ ವಂದನೆಯನ್ನು ಮಾಡುತ್ತಾರೆ. ಪತಿತ ಮನುಷ್ಯರಾದ ಸನ್ಯಾಸಿಗಳಿಗೂ ವಂದನೆ ಮಾಡುತ್ತಾರೆ. ನೀವು ಮಾತೆಯರಿಗೆ ವಂದೇಮಾತರಂ ಎಂದು ಹೇಳಲಾಗುತ್ತದೆ ಏಕೆಂದರೆ ನೀವು ಮಾತೆಯರ ಮುಖಾಂತರವೇ ಭಾರತವು ಸ್ವರ್ಗವಾಗುತ್ತದೆ. ಪವಿತ್ರತೆಯಿಲ್ಲದೇ ಸುಖವು ಸಿಗಲು ಸಾಧ್ಯವಿಲ್ಲ. ಯಾರು ತಂದೆಯ ಮಕ್ಕಳಾಗುತ್ತಾರೆ, ತಂದೆಯ ನೆನಪು ಮಾಡುತ್ತಾರೆ, ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯ ಸಂಗವನ್ನು ಸೇರುತ್ತಾರೆ ಅವರೇ ಶಿವತಂದೆಯ ಬಳಿ ಹೋಗುತ್ತಾರೆ. ಭಾರತದಲ್ಲಿಯೇ ತಂದೆಯು ಅವತರಣೆ ಮಾಡುತ್ತಾರೆ. ನೀವು ಎಷ್ಟೊಂದು ದುಃಖಿಯಾಗಿದ್ದಿರಿ! ಇಲ್ಲಿ ಸುಖವನ್ನು ಪಡೆಯುವುದಕ್ಕೋಸ್ಕರ ಅನೇಕ ಮಕ್ಕಳು ಬಂದಿದ್ದೀರಿ. ತಾವು ಎಲ್ಲರ ಆತ್ಮಿಕ ಸಮಾಜಸೇವೆಯನ್ನು ಮಾಡುತ್ತೀರಿ ಅಂದಾಗ ಗುಪ್ತಸೇನೆಯಾಗಿದ್ದೀರಿ, ರಾವಣನ ಮೇಲೆ ಜಯವನ್ನು ಪಡೆದು ಸ್ವರ್ಗದ ಮಾಲೀಕರಾಗುತ್ತೀರಿ. ನಿರಾಕಾರ ತಂದೆಯು ನಿರಾಕಾರ ಆತ್ಮಗಳೊಂದಿಗೆ ಮಾತನಾಡುತ್ತಾರೆ, ಆತ್ಮವು ಕರ್ಮೇಂದ್ರಿಯಗಳ ಮುಖಾಂತರ ಕೇಳುತ್ತದೆ. ಆತ್ಮನಲ್ಲಿ 84 ಜನ್ಮಗಳ ಸಂಸ್ಕಾರವಿದೆ. ಮೊದಲಿನವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಅಂತ್ಯದವರು ಕಡಿಮೆ ತೆಗೆದುಕೊಳ್ಳುತ್ತಾರೆ. ಭಾರತವು ಕಿರೀಟಧಾರಿಯಾಗಿತ್ತು. ಭಾರತವೇ ಕಂಗಾಲಾಗಿದೆ. ಈಗ ಮತ್ತೆ ಕಿರೀಟಧಾರಿಯಾಗುತ್ತಾ ಇದೆ. ಇಲ್ಲಿಗೆ 5000 ವರ್ಷಗಳ ಹಿಂದೆ ಯಾವ ಯುದ್ಧವಾಗಿತ್ತೋ, ಯಾವುದರಿಂದ ಭಾರತವು ಸ್ವರ್ಗವಾಗಿತ್ತೋ ಈಗ ಅದೇ ಯುದ್ಧವಾಗಿದೆ. ನಿಮ್ಮದು ರಾಜಯೋಗದ ವಿದ್ಯೆಯಾಗಿದೆ ಆದರೆ ಸನ್ಯಾಸಿಗಳದು ಹಠಯೋಗವಾಗಿದೆ. ನೀವು ಮಕ್ಕಳು ಹಳೆಯ ಪ್ರಪಂಚವನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗಾಗ್ನಿಯಿಂದಲೇ ನಿಮ್ಮ ಪಾಪಗಳು ಭಸ್ಮವಾಗುತ್ತವೆ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಮ್ಮ ತನು-ಮನ-ಧನದಿಂದ ಆತ್ಮಿಕ ಸಮಾಜಸೇವೆ ಮಾಡಬೇಕಾಗಿದೆ. ರಾವಣನ ಮೇಲೆ ಜಯ ಪಡೆದು ಭಾರತವನ್ನು ಸ್ವರ್ಗ ಮಾಡಬೇಕಾಗಿದೆ.

2. ಅಪಾರ ಸುಖವನ್ನು ಪಡೆಯುವುದಕ್ಕೋಸ್ಕರ ಪವಿತ್ರತೆಯ ಪ್ರತಿಜ್ಞೆ ಮಾಡಿ ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ.

ವರದಾನ:

ಸ್ವಯಂ ಅನ್ನು ಬೇಹದ್ಧಿನ ಸ್ಟೆಜ್ ಮೇಲಿರುವೆ ಎಂದು ತಿಳಿದು ಸದಾ ಶ್ರೇಷ್ಠ ಪಾತ್ರ ಅಭಿನಯಿಸುವಂತಹ ಹೀರೋ ಪತ್ರಧಾರಿ ಭವ

ನೀವೆಲ್ಲರೂ ವಿಶ್ವದ ಷೋಕೇಸ್ನಲ್ಲಿರುವಂತಹ ಷೋಪೀಸ್ ಆಗಿರುವಿರಿ, ಬೆಹದ್ಧಿನ ಅನೆಕ ಆತ್ಮಗಳ ಮಧ್ಯೆ ದೊಡ್ಡದರಲ್ಲಿ ದೊಡ್ಡ ಸ್ಟೇಜ್ ಮೇಲಿರುವಿರಿ. ಇದೇ ಸ್ಮೃತಿಯಿಂದ ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮ ಹೀಗೆ ಮಾಡಿ ವಿಶ್ವದ ಆತ್ಮಗಳು ನಮ್ಮನ್ನು ನೋಡುತ್ತಿವೆ ಎಂದು ಆಗ ನಿಮ್ಮ ಪ್ರತಿ ಪಾತ್ರ ಶ್ರೇಷ್ಠವಾಗುವುದು ಮತ್ತು ಹೀರೊ ಪಾತ್ರಧಾರಿಯಾಗಿಬಿಡುವಿರಿ. ನೀವೆಲ್ಲರೂ ನಿಮಿತ್ತ ಆತ್ಮಗಳಿಂದ ಪ್ರಾಪ್ತಿಯ ಭಾವನೆ ಇಡುತ್ತೀರಿ ಎಂದಾಗ ಸದಾ ದಾತಾನ ಮಕ್ಕಳು ಕೊಡುತ್ತಿರಿ ಮತ್ತು ಸರ್ವರ ಆಸೆಗಳನ್ನು ಪೂರ್ಣಮಾಡುತ್ತಿರಿ.

ಸ್ಲೋಗನ್:

ಸತ್ಯತೆಯ ಶಕ್ತಿ ಜೊತೆಯಲ್ಲಿದ್ದಾಗ ಖುಷಿ ಮತ್ತು ಶಕ್ತಿ ಪ್ರಾಪ್ತಿಯಾಗುತ್ತಿರುವುದು.

 Download PDF

 

Post a Comment

0 Comments