Header Ads Widget

Header Ads

KANNADA MURLI 07.02.23

 

07/02/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಸಮಯದಲ್ಲಿ ನಿಮಗೆ ನಿರಾಕಾರಿ ಮತ ಸಿಗುತ್ತಿದೆ, ಗೀತಾಶಾಸ್ತ್ರ ನಿರಾಕಾರಿ ತಂದೆಯ ಮತದ ಶಾಸ್ತ್ರವಾಗಿದೆ, ಸಾಕಾರಿ ತಂದೆಯ ಮತವಲ್ಲ ಎನ್ನುವ ಮಾತನ್ನು ಸಿದ್ಧ ಮಾಡಿರಿ

ಪ್ರಶ್ನೆ:

ಯಾವ ಒಂದು ಗುಹ್ಯವಾದ ಮಾತನ್ನು ಬಹಳ ಯುಕ್ತಿಯಿಂದ ಫಸ್ಟ್ ಕ್ಲಾಸ್ ಮಕ್ಕಳೆ ತಿಳಿಸಲು ಸಾಧ್ಯ?

ಉತ್ತರ:

ಬ್ರಹ್ಮನೇ ಶ್ರೀಕೃಷ್ಣನಾಗುತ್ತಾರೆ, ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳಲಾಗುತ್ತದೆ ಆದರೆ ಶ್ರೀಕೃಷ್ಣನೆಂದಲ್ಲ. ನಿರಾಕಾರ ಭಗವಂತನೇ ಬ್ರಹ್ಮನ ಮುಖದಿಂದ ಬ್ರಾಹ್ಮಣರನ್ನು ರಚಿಸುತ್ತಾರೆ. ಶ್ರೀಕೃಷ್ಣ ಚಿಕ್ಕಮಗುವಾಗಿದ್ದಾನೆ. ಗೀತೆಯ ಭಗವಂತ ನಿರಾಕಾರ ಪರಮಾತ್ಮನಾಗಿದ್ದಾರೆ. ಕೃಷ್ಣನ ಆತ್ಮ ಪುರುಷಾರ್ಥವನ್ನು ಮಾಡಿ ಪ್ರಾಲಬ್ಧವನ್ನು ತೆಗೆದುಕೊಳ್ಳುತ್ತದೆ. ಇದು ಬಹಳ ಗುಹ್ಯವಾದ ಮಾತಾಗಿದೆ, ಇದನ್ನು ಫಸ್ಟ್ ಕ್ಲಾಸ್ ಮಕ್ಕಳೇ ತಿಳಿಸಲು ಸಾಧ್ಯ. 20 ಯೋಜನೆಗಳ ಜೋರಿನಿಂದ ಮಾತನ್ನು ಸಿದ್ಧ ಮಾಡಿದಾಗ ಸೇವೆಯಲ್ಲಿ ಸಫಲತೆಯಾಗುತ್ತದೆ.

ಗೀತೆ:  ಯಾರು ಬಂದರು ಇಂದು ನನ್ನ ಮನಸ್ಸಿನ ಬಾಗಿಲಿಗೆ........

ಓಂ ಶಾಂತಿ. ಮಕ್ಕಳು ಕೇಳಿದಿರಿ - ಕಣ್ಣಿನಿಂದ ತಿಳಿಯಲು ಸಾಧ್ಯವಿಲ್ಲ, ಯಾರನ್ನು? ಭಗವಂತನನ್ನು. ಕಣ್ಣು ಶ್ರೀಕೃಷ್ಣನನ್ನು ತಿಳಿದುಕೊಳ್ಳುತ್ತದೆ ಬಾಕಿ ಭಗವಂತನನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಆತ್ಮನೇ ಪರಮಾತ್ಮನನ್ನು ತಿಳಿದುಕೊಳ್ಳುತ್ತದೆ - ನಮಗೆ ಪರಮಪಿತ ಪರಮಾತ್ಮ ನಿರಾಕಾರನಾಗಿದ್ದಾರೆಂದು ಆತ್ಮಕ್ಕೆ ತಿಳಿದಿದೆ. ನಿರಾಕಾರನಾಗಿರುವ ಕಾರಣ ಕಣ್ಣಿನಿಂದ ನೋಡದಿರುವ ಕಾರಣ ಅಷ್ಟು ನೆನಪಿರುವುದಿಲ್ಲ. ಗೀತೆಯ ಶಾಸ್ತ್ರವೇ ನಿರಾಕಾರನ ಮತವಾಗಿದೆ, ಸಾಕಾರಿ ಮತವಂತೂ ಅಲ್ಲ. ಗೀತೆ ಧರ್ಮಶಾಸ್ತ್ರವಾಗಿದೆಯಲ್ಲವೆ. ಇಸ್ಲಾಮಿಗಳು ಮುಂತಾದವರದ್ದೂ ಸಹ ಧರ್ಮಶಾಸ್ತ್ರವಿದೆ. ಇಬ್ರಾಹಿಂ ಉಚ್ಛರಿಸಿದನು, ಬುದ್ಧನೂ ಉಚ್ಛರಿಸಿದನು, ಕ್ರೈಸ್ತನು ಉಚ್ಛರಿಸಿದನು. ಅವರದು ಚಿತ್ರವಿದೆ. ಗೀತೆ ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ ಅದಕ್ಕೋಸ್ಕರ ಶ್ರೀಕೃಷ್ಣನ ಚಿತ್ರವನ್ನು ತೋರಿಸಲಾಗಿದೆ ಆದರೆ ಇದೆಲ್ಲವೂ ತಪ್ಪಾಗಿದೆಯೆಂದು ತಂದೆಯೇ ತಿಳಿಸುತ್ತಾರೆ. ಗೀತೆಯನ್ನು ನಾನೇ ಉಚ್ಛರಿಸಿದೆ, ನಾನೇ ರಾಜಯೋಗವನ್ನು ಕಲಿಸಿ ಸ್ವರ್ಗವನ್ನು ಸ್ಥಾಪನೆ ಮಾಡಿದೆನು. ನಾನು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದೇನೆ. ನಾನು ನೀವು ಸರ್ವ ಆತ್ಮಗಳ ತಂದೆ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ, ನನಗೆ ವೃಕ್ಷಪತಿಯೆಂದು ಹೇಳುತ್ತಾರೆ ಆದರೆ ಶ್ರೀಕೃಷ್ಣನಿಗೆ ಹೇಳುವುದಿಲ್ಲ. ಪರಮಪಿತ ಪರಮಾತ್ಮನೇ ಮನುಷ್ಯ ಸೃಷ್ಟಿಯ ಬೀಜರೂಪ, ರಚೈತನಾಗಿದ್ದಾರೆ. ಕೃಷ್ಣನಿಗೆ ರಚೈತನೆಂದು ಹೇಳಲಾಗುವುದಿಲ್ಲ. ಅವರು ಕೇವಲ ದೈವೀಗುಣವುಳ್ಳಂತಹ ಮನುಷ್ಯನಾಗಿದ್ದಾನೆ. ಕೃಷ್ಣನಿಗೆ ಭಗವಂತನೆಂದು ಹೇಳುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಭಗವಂತ ಒಬ್ಬನಾಗಿದ್ದಾರೆ. ಕೃಷ್ಣನಿಗೆ ಎಲ್ಲರ ಪರಮಾತ್ಮನೆಂದು ಹೇಳುವುದಿಲ್ಲ. ನಾನು 5000 ವರ್ಷದ ನಂತರ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆಂದು ತಂದೆಯೇ ಹೇಳುತ್ತಾರೆ. ನಾನು ಇಡೀ ಸೃಷ್ಟಿಯ ತಂದೆಯಾಗಿದ್ದೇನೆ. ನನ್ನನ್ನು ಭಗವಂತನೆಂದು ಹೇಳುತ್ತಾರೆ. ಕೃಷ್ಣನ ಹೆಸರನ್ನು ಕೊಡುವುದರಿಂದ ಪರಮಪಿತ ಪರಮಾತ್ಮನನ್ನು ತಿಳಿದುಕೊಳ್ಳಲಾಗುವುದಿಲ್ಲ. ಇದೇ ದೊಡ್ಡ ತಪ್ಪಾಗಿದೆ. ಗೀತೆಯ ಮುಖಾಂತರ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ನಾನೇ ಸ್ಥಾಪನೆ ಮಾಡಿದೆನು. ನನಗೆ ಶಿವ ಹಾಗೂ ರುದ್ರ ಭಗವಂತನೆಂದು ಹೇಳಲಾಗುತ್ತದೆ. ಬೇರೆ ಯಾರಿಗೂ ಸೂಕ್ಷ್ಮದೇವತೆ ಹಾಗೂ ಭಗವಂತನೆಂದು ಹೇಳಲಾಗುವುದಿಲ್ಲ. ಲಕ್ಷ್ಮೀ-ನಾರಾಯಣ ಮುಂತಾದವರಿಗೆ ಪರಮಾತ್ಮನೆಂದು ಹೇಳುವುದಿಲ್ಲ. ಪರಮಾತ್ಮ ಒಬ್ಬನೆಂದು ಹೇಳಲಾಗುತ್ತದೆ. ಭಗವಂತನೇ ಬಂದು ರಾಜಯೋಗವನ್ನು ಕಲಿಸುತ್ತಿದ್ದಾರೆ ಎನ್ನುವುದು ಭಗವಾನುವಾಚವಾಗಿದೆ. ಕಲ್ಪದ ಮೊದಲು ನಾನು ನೀವು ಮಕ್ಕಳಿಗೆ ಹೇಳಿದ್ದೆನೆಂದು ತಂದೆಯು ಹೇಳುತ್ತಾರೆ. ಕೃಷ್ಣನು ಎಂದೂ ಮಕ್ಕಳೇ ಮಕ್ಕಳೇ ಎಂದು ಹೇಳುವುದಿಲ್ಲ. ಪರಮಪಿತ ಪರಮಾತ್ಮನೇ ಮಕ್ಕಳೇ ಎಂದು ಹೇಳುತ್ತಾರೆ. ಕಲ್ಪದ ಮೊದಲು ನಾನು ನೀವು ಮಕ್ಕಳಿಗೆ ದೇಹಿ ಅಭಿಮಾನಿಗಳಾಗಿ, ನಾನು ನಿರಾಕಾರನನ್ನು ತಮ್ಮ ತಂದೆ ಭಗವಂತನೆಂದು ತಿಳಿದು ನೆನಪು ಮಾಡಿರಿ ಎಂದು ನೀವು ಮಕ್ಕಳಿಗೆ ತಿಳಿಸಿದ್ದೆನು. ಸಾಕಾರಿ ತಂದೆಯು ಪ್ರಜಾಪಿತ ಬ್ರಹ್ಮನಾದರು ಏಕೆಂದರೆ ಬ್ರಹ್ಮನ ಮುಖಾಂತರವೇ ಭಗವಂತನು ಬ್ರಾಹ್ಮಣ-ಬ್ರಾಹ್ಮಣಿಯರನ್ನು ರಚಿಸಿದರು. ಶ್ರೀಕೃಷ್ಣನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ನಾನು ಬ್ರಹ್ಮನ ಮುಖಾಂತರ ಬ್ರಾಹ್ಮಣ-ಬ್ರಾಹ್ಮಣಿಯರನ್ನು ರಚಿಸುತ್ತೇನೆಂದು ತಂದೆಯು ಹೇಳುತ್ತಾರೆ. ಕೃಷ್ಣನಿಗೆ ರೀತಿ ಹೇಳಲು ಸಾಧ್ಯವಿಲ್ಲ. ಬ್ರಹ್ಮಾ ದೊಡ್ಡವರಾಗಿದ್ದಾರೆ, ಕೃಷ್ಣ ಚಿಕ್ಕಮಗುವಾಗಿದ್ದಾನೆ. ಬ್ರಹ್ಮನೇ ಕೃಷ್ಣನಾಗುತ್ತಾನೆ. ಇದು ಎಷ್ಟೊಂದು ಗುಹ್ಯವಾದ ಮಾತಾಗಿದೆ. ಇದನ್ನು ತಿಳಿಸುವುದರಲ್ಲಿ ಬಹಳ ಯುಕ್ತಿ ಬೇಕಾಗಿದೆ. ಫಸ್ಟ್ ಕ್ಲಾಸ್ ಆಗಿ ಮಕ್ಕಳೇ ತಿಳಿಸಿಕೊಡಬಹುದು. ಬಹಳ ಒಳ್ಳೆಯ ಮಗುವಾದಾಗ ಗೀತೆಯ ಭಗವಂತ ಪರಮಪಿತನಾಗಿದ್ದಾರೆಂದು ಸಿದ್ಧ ಮಾಡಿ ತಿಳಿಸಬಹುದು ಎಂದು ತಂದೆಯು ಹೇಳುತ್ತಾರೆ. ಯಾರು ಗೀತೆಯನ್ನು ರಚಿಸಿದರು ಅವರೇ ಮಕ್ಕಳಿಗೆ ರಾಜಯೋಗವನ್ನು ಕಲಿಸಿ ಮತ್ತು ಸ್ವರ್ಗವನ್ನು ರಚಿಸಿದರು. ಅವಶ್ಯವಾಗಿ ಸರ್ವಶ್ರೇಷ್ಠವಾದ ತಂದೆಯೇ ರಾಜಯೋಗವನ್ನು ತಿಳಿಸಿದರು. ಶ್ರೀಕೃಷ್ಣನೇ ಪ್ರಾಲಬ್ಧವನ್ನು ಪಡೆದುಕೊಂಡರು. ಪ್ರಾಲಬ್ಧವನ್ನು ಕೊಡುವಂತಹವರು ಪರಮಪಿತ ಪರಮಾತ್ಮನಾಗಿದ್ದಾರೆ. ಕೃಷ್ಣ ಅವರ ಮಗುವಾಗಿದ್ದಾನೆ. ಕೃಷ್ಣನ ಆತ್ಮವೇ ಪುರುಷಾರ್ಥವನ್ನು ಮಾಡಿ ಪ್ರಾಲಬ್ಧವನ್ನು ಪಡೆದುಕೊಳ್ಳುತ್ತದೆ. ಪುರುಷಾರ್ಥವನ್ನು ಮಾಡಿಸುವಂತಹವರನ್ನು ತೆಗೆದುಹಾಕಿ ಪುರುಷಾರ್ಥವನ್ನು ಮಾಡಿ ಪ್ರಾಲಬ್ಧವನ್ನು ಪಡೆದುಕೊಳ್ಳುವಂತಹವರ ಹೆಸರನ್ನು ಹಾಕಿ ಗೀತೆಯನ್ನು ಖಂಡನೆ ಮಾಡಿದ್ದಾರೆ. ಒಂದು ಗೀತೆಯನ್ನು ಅಸತ್ಯ ಮಾಡುವುದರಿಂದ ಎಲ್ಲಾ ಅಸತ್ಯವಾಗಿದೆ. ಸುಳ್ಳಿನ ಮಾಯೆ, ಸುಳ್ಳಿನ ಶರೀರವೆಂದು ಆಗ ಹೇಳಲಾಗುತ್ತದೆ.

ಸೇವೆಯನ್ನು ವೃದ್ಧಿ ಮಾಡುವುದಕ್ಕೋಸ್ಕರ ಮಕ್ಕಳ 20 ಯೋಜನೆಗಳಷ್ಟು ಜೋರನ್ನು ಕೊಡಬೇಕಾಗಿದೆ. ಗೀತೆಯನ್ನು ಯಾರು ಉಚ್ಛರಿಸಿದರು? ಗೀತೆಯ ಮುಖಾಂತರ ಯಾವ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಮಾತಿನಿಂದ ನೀವು ತುಂಬಾ ಚೆನ್ನಾಗಿ ವಿಜಯಶಾಲಿಗಳಾಗಬಹುದು. ಪರಮಪಿತ ಪರಮಾತ್ಮನ ಮುಖಾಂತರ ಸ್ವರ್ಗದ ಮಾಲೀಕರಾಗುತ್ತೀರಿ. ಶ್ರೀಕೃಷ್ಣನ ಮುಖಾಂತರ ಆಗುವುದಿಲ್ಲ ಅಂದಾಗ ಮಾತಿನ ಮೇಲೆ ಪರಿಶ್ರಮಪಡಬೇಕು. ಎಲ್ಲಾ ಶಾಸ್ತ್ರಗಳು ಗೀತೆಯ ಮಕ್ಕಳಾಗಿದೆ ಅಂದಾಗ ಮಕ್ಕಳಿಂದ ಇಂದು ಆಸ್ತಿಯು ಸಿಗುವುದಿಲ್ಲ. ಆಸ್ತಿಯನ್ನು ಅವಶ್ಯವಾಗಿ ತಂದೆಯೇ ಕೊಡುತ್ತಾರೆ. ಚಿಕ್ಕಪ್ಪ, ಚಿಕ್ಕಮ್ಮ, ಮಾವ, ಗುರು ಮುಂತಾದವರಿಂದ ಆಸ್ತಿಯು ಸಿಗುವುದಿಲ್ಲ. ಬೇಹದ್ದಿನ ತಂದೆಯಿಂದಲೇ ಬೇಹದ್ದಿನ ಆಸ್ತಿಯು ಸಿಗುತ್ತದೆ. ಬರವಣಿಗೆಯನ್ನು ಸ್ವಚ್ಛವಾಗಿ ಬರೆದಾಗ ಗೀತೆಯ ಖಂಡನೆಯಾಗಿದೆಯೆಂದು ಎಲ್ಲರೂ ಸಹ ತಿಳಿದುಕೊಳ್ಳುತ್ತಾರೆ. ಗೀತೆಯನ್ನು ಖಂಡನೆ ಮಾಡಿರುವುದರಿಂದ ಭಾರತವು ಕಂಗಾಲಾಗಿದೆ, ಕವಡೆಯ ಸಮಾನವಾಗಿದೆ. ರೀತಿಯ ಬರವಣಿಗೆಯನ್ನು ಬರೆಯಿರಿ - ಭಾರತವನ್ನು ಸ್ವರ್ಗವನ್ನಾಗಿ ಮಾಡುವವರು ಯಾರಾಗಿದ್ದಾರೆ? ಸ್ವರ್ಗ ಎಲ್ಲಿದೆ? ಕಲಿಯುಗದ ನಂತರ ಸತ್ಯಯುಗ ಬರುತ್ತದೆ ಎಂದಾಗ ಅದರ ಸ್ಥಾಪನೆಯು ಅವಶ್ಯವಾಗಿ ಸಂಗಮದಲ್ಲಿಯೇ ಆಗುತ್ತದೆ. ಶಿವಭಗವಾನುವಾಚ - ನಾನು ಕಲ್ಪ-ಕಲ್ಪ, ಕಲ್ಪದ ಸಂಗಮದಲ್ಲಿ ಬರುತ್ತೇನೆ. ರೀತಿ ಸಿದ್ಧ ಮಾಡಿದಾಗ ಶಿವ ಪರಮಾತ್ಮನೇ ಎಲ್ಲಾ ದುಃಖಗಳಿಂದ ದೂರ ಮಾಡುತ್ತಾರೆ, ಶ್ರೀಕೃಷ್ಣನಲ್ಲ ಎಂದು ಎಲ್ಲರೂ ತಿಳಿಯುತ್ತಾರೆ. ಗೀತೆಯ ಭಗವಂತನನ್ನು ಯಾರು ತಿಳಿದುಕೊಳ್ಳುತ್ತಾರೋ ಅವರೇ ಬಂದು ಹೂವನ್ನು ಹಾಕುತ್ತಾರೆ ಎಲ್ಲರೂ ಹಾಕುವುದಿಲ್ಲ. ಯಾರು ತಿಳಿದುಕೊಳ್ಳುತ್ತಾರೆ ಅವರೇ ಹೂವನ್ನು ಹಾಕಿ ಬಲಿಹಾರಿಗಳಾಗುತ್ತಾರೆ. ತಂದೆಗೆ ಯಾರಾದರೂ ಹೂವನ್ನು ಕೊಟ್ಟರೆ ಅವರನ್ನು ಹೂವಾಗಬೇಕೆಂದು ತಂದೆಯು ಹೇಳುತ್ತಾರೆ. ಮುಳ್ಳು ನನ್ನ ಮೇಲೆ ಬಲಿಹಾರಿಯಾದಾಗ ನಾನು ಅವರನ್ನು ಹೂವನ್ನಾಗಿ ಮಾಡುತ್ತೇನೆ. ಬಬೂಲ್ನಾಥನೆಂದು ನನ್ನ ಹೆಸರಾಗಿದೆ - ಕಠಿಣವಾದವರನ್ನು ಹೂವನ್ನಾಗಿ ಮಾಡುತ್ತೇನೆಂದು ನನಗೆ ಹೇಳಲಾಗುತ್ತದೆ. ಶ್ರೀಕೃಷ್ಣನಂತೂ ಸ್ವಯಂ ಹೂವಾಗಿದ್ದಾರೆ ಅದು ಭಗವಂತನ ತೋಟ ಆಗಿದೆ ಇದು ಭೂತದ ಕಾಡಾಗಿದೆ. ಇದನ್ನು ಪುನಃ ದೇವತಾ ತೋಟವನ್ನಾಗಿ ತಂದೆಯೇ ಮಾಡುತ್ತಾರೆ. ನೀವೇ ಹೊಸಪ್ರಪಂಚದ ಮಾಲೀಕರಾಗುತ್ತೀರಿ. ಲಕ್ಷ್ಮೀ-ನಾರಾಯಣರಿಗೆ ದೇವತಾ ವಂಶದವರೆಂದು ಹೇಳಲಾಗುತ್ತದೆ. ಬ್ರಾಹ್ಮಣ ಕುಲದವರಿಗೆ ವಂಶಾವಳಿಯೆಂದು ಹೇಳಲಾಗುವುದಿಲ್ಲ. ಇದು ಬ್ರಾಹ್ಮಣಕುಲವಾಗಿದೆ. ಪರಮಪಿತ ಪರಮಾತ್ಮನೇ ಪ್ರಜೆಗಳನ್ನು ರಚಿಸುತ್ತಾರೆ ಆದ್ದರಿಂದ ಇವರನ್ನು ಪ್ರಜಾಪಿತನೆಂದು ಹೇಳಲಾಗುತ್ತದೆ. ಶಿವತಂದೆಗೆ ಹಾಗೂ ಶ್ರೀಕೃಷ್ಣನಿಗೆ ಪ್ರಜಾಪಿತನೆಂದು ಹೇಳಲಾಗುವುದಿಲ್ಲ. 16,108 ರಾಣಿಯರಿದ್ದರೆಂದು ಕೃಷ್ಣನ ಮೇಲೆ ಕಳಂಕವನ್ನು ಹಾಕಿದ್ದಾರೆ. ಇಲ್ಲಿ ಪ್ರಜಾಪಿತ ಬ್ರಹ್ಮನೇ ಇಷ್ಟೆಲ್ಲಾ ಮಕ್ಕಳಿಗೆ ಜನ್ಮವನ್ನು ಕೊಟ್ಟಿದ್ದಾರೆ.

ಜ್ಞಾನಸಾಗರನೇ ಒಬ್ಬ ತಂದೆಯಾಗಿದ್ದಾರೆ. ಪಾಪದ ಶಿಕ್ಷೆಯನ್ನು ಧರ್ಮರಾಜನೇ ಕೊಡುತ್ತಾರೆ. ರಾಷ್ಟ್ರಪತಿಗೂ ಸಹ ಬಹಳ ದೊಡ್ಡ ನ್ಯಾಯಾಧೀಶರು ಪ್ರತಿಜ್ಞೆಯನ್ನು ಮಾಡಿಸುತ್ತಾರೆ. ರಾಜನಿಂದ ಎಂದೂ ಸಹ ಪ್ರತಿಜ್ಞೆಯನ್ನು ಮಾಡಿಸುವುದಿಲ್ಲ ಏಕೆಂದರೆ ಅವರನ್ನು ಭಗವಂತನೇ ರಾಜರನ್ನಾಗಿ ಮಾಡುತ್ತಾರೆ. ಅವರು ಅಲ್ಪಕಾಲಕ್ಕೋಸ್ಕರ ಇದ್ದಾರೆ. ಇಲ್ಲಿ ತಂದೆಯೇ 21 ಜನ್ಮಗಳಿಗೋಸ್ಕರ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಅಲ್ಲಿ ಪ್ರತಿಜ್ಞೆಯನ್ನು ತೆಗೆದುಕೊಳ್ಳುವ ಮಾತಿಲ್ಲ. ಇದು ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ ಯಾವುದೇ ಕಾಡಿನ ವೃಕ್ಷವಲ್ಲ. ಪರಮಪಿತ ಪರಮಾತ್ಮನಿಗೆ ವೃಕ್ಷವೆಂದು ಹೇಳಲಾಗುತ್ತದೆ, ಕೃಷ್ಣನು ವೃಕ್ಷದ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ. ವೃಕ್ಷಪತಿಯೇ ತಿಳಿಸುತ್ತಾರೆ. ನರನಿಂದ ನಾರಾಯಣರನ್ನಾಗಿ ತಂದೆಯೇ ಮಾಡುತ್ತಾರೆ, ಕೃಷ್ಣನಲ್ಲ. ಮುಖ್ಯವಾಗಿ 4 ಧರ್ಮಶಾಸ್ತ್ರಗಳಿದೆ ಬಾಕಿ ಎಲ್ಲವೂ ದಂತಕಥೆಗಳಾಗಿವೆ. ಮೊದಮೊದಲನೆಯ ಧರ್ಮ ಯಾವುದು ಸ್ಥಾಪನೆಯಾಯಿತು ಮತ್ತು ಯಾರ ಮುಖಾಂತರವಾಯಿತು? ಸ್ವರ್ಗದಲ್ಲಿ ದೇವಿ-ದೇವತಾಧರ್ಮವಿತ್ತು ಅಂದಾಗ ಅವಶ್ಯವಾಗಿ ಅದನ್ನು ತಂದೆಯೇ ರಚಿಸಿದರು. ತಂದೆಯು ಹಳೆಯ ಪ್ರಪಂಚದಿಂದ ಬಿಡುಗಡೆ ಮಾಡುತ್ತಾರೆ ಏಕೆಂದರೆ ಬಹಳ ದುಃಖವಿದೆ. ಅಯ್ಯೋ, ಅಯ್ಯೋ ಎನ್ನುತ್ತಾರೆ. ತಂದೆಯಿಂದಲೇ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಬೇಕಾದರೇ ಈಗಲೇ ತೆಗೆದುಕೊಳ್ಳಿ. ಸಾಧಾರಣವಾದಂತಹ ವ್ಯಕ್ತಿಗಳು ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ಸರ್ವಪ್ರಾಪ್ತಿಯನ್ನು ಕೊಡುವಂತಹವರು ತಂದೆಯಾಗಿದ್ದಾರೆ. ಬೇಹದ್ದಿನ ತಂದೆಯೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ರೀತಿ ಉತ್ಸಾಹ ತುಂಬಬೇಕಾಗಿದೆ. ಹೇಗೆ ಬೇಟೆಗಾರರು ಯಾವುದೇ ಬೇಟೆಯನ್ನು ಮಾಡುವಾಗ ಮೊದಲು ಎಲ್ಲಾ ತಯಾರಿ ಮಾಡಿಕೊಂಡು ಬೇಟೆ ಎದುರಿಗೆ ಬಂದಾಗ ಕೇವಲ ಬೇಟೆಯಾಡುತ್ತಾರೆ. ಇಲ್ಲಿ ಮಾತೆಯರಿಂದ ಬೇಟೆಯಾಡಿಸಬೇಕು. ಬೇಟೆಯನ್ನು ಮಾತೆಯರ ಮುಂದೆ ತರಬೇಕೆಂದು ತಂದೆಯು ಹೇಳುತ್ತಾರೆ. ಮಾತೆಯರು ಬಹಳಷ್ಟಿದ್ದಾರೆ. ಹೆಸರು ಒಬ್ಬರದೇ ಪ್ರಸಿದ್ಧವಾಗುತ್ತದೆ. ನೀವು ಶಕ್ತಿಸೇನೆಯಾಗಿದ್ದೀರಿ. ಶಕ್ತಿ ವಂಶಾವಳಿಯಾಗಿದೆಯೆಂದು ಹೇಳುವುದಿಲ್ಲ. ಶಕ್ತಿಸೇನೆ ಮುಖ್ಯವಾಗಿದೆ - ಜಗದಂಬಾ, ಕಾಳಿ, ಸರಸ್ವತಿ ಬಾಕಿ ಚಂಡಿಕಾ ಮುಂತಾದಂತಹ ಉಲ್ಟಾ ಹೆಸರನ್ನು ಬಹಳಷ್ಟು ಇಟ್ಟಿದ್ದಾರೆ ಅಂದಾಗ ನೀವು ಮಕ್ಕಳು ಮಾತಿನ ಬಗ್ಗೆ ಸ್ವಚ್ಛವಾಗಿ ತಿಳಿಸಬೇಕು. ಸರ್ವಶ್ರೇಷ್ಠವಾಗಿರುವಂತಹವರು ಭಗವಂತ ನಂತರ ಬ್ರಹ್ಮಾ, ವಿಷ್ಣು, ಶಂಕರರಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಮಗಳು ಸರಸ್ವತಿಯಾಗಿದ್ದಾರೆ ಅವರಿಗೆ ಜ್ಞಾನದೇವತೆ ಎಂದು ಹೇಳಲಾಗುತ್ತದೆ. ಅಂದಾಗ ಅವರ ಮಕ್ಕಳಿಗೂ ಸಹ ಜ್ಞಾನದೇವಿಯರು ಎಂದು ಹೇಳಲಾಗುತ್ತದೆ. ಅಂತಿಮದಲ್ಲಿ ನಿಮ್ಮದೇ ವಿಜಯವಾಗುತ್ತದೆ. ಕೆಲವರು ಗೀತೆ ಮತ್ತು ವೇದಗಳಿಗೆ ಬಹಳ ಗೌರವವನ್ನು ಕೊಡುತ್ತಾರೆ ಅಂದಾಗ ಗೀತೆಯ ಪ್ರಚಾರ ಹೆಚ್ಚಾಗಿದೆ. ನಾನು ಸಂಗಮಯುಗದಲ್ಲಿ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಕೃಷ್ಣನ ಚಿತ್ರವು ಸತ್ಯಯುಗದಲ್ಲಿದೆ. ನಂತರ 84 ಜನ್ಮಗಳಲ್ಲಿ ರೂಪವು ಬದಲಾಗುತ್ತದೆ. ಯಾವಾಗ ಪರಮಪಿತ ಪರಮಾತ್ಮನೇ ಬಂದು ಆತ್ಮದ ಜ್ಞಾನವನ್ನು ತಿಳಿಸುತ್ತಾರೋ ಆಗ ಜ್ಞಾನೀತೂ ಆತ್ಮಗಳೆಂದು ಹೇಳುತ್ತಾರೆ. ಪರಮಪಿತ ಪರಮಾತ್ಮ ಜ್ಞಾನಸಾಗರ ಆಗಿದ್ದಾರೆ. ಅವರ ಮುಖಾಂತರ ನೀವು ಜ್ಞಾನೀತೂ ಆತ್ಮಗಳಾಗುತ್ತೀರಿ ಬಾಕಿ ಎಲ್ಲರೂ ಭಕ್ತಾತ್ಮರಾಗಿದ್ದಾರೆ. ನನಗೆ ಜ್ಞಾನೀತೂ ಆತ್ಮಗಳು ಪ್ರಿಯರೆಂದು ತಂದೆಯು ಹೇಳುತ್ತಾರೆ. ಗೀತೆಯ ಬಗ್ಗೆ ಇಡೀ ಮಹಿಮೆಯಿದೆ. ಧ್ಯಾನಿಗಳಿಗಿಂತ ಜ್ಞಾನಿಗಳು ಶ್ರೇಷ್ಠವಾಗಿದ್ದಾರೆ. ಧ್ಯಾನಿಗಳು ಟ್ರಾನ್ಸ ನಲ್ಲಿ ಹೋಗುತ್ತಾರೆ, ಇಲ್ಲಿ ತಂದೆಯ ಜೊತೆ ನೆನಪನ್ನು ಮಾಡುತ್ತಾರೆ. ಧ್ಯಾನದಲ್ಲಿ ಹೋಗುವುದರಿಂದ ಯಾವುದೇ ಲಾಭವಿಲ್ಲ.

ನಾನೇ ರಾಜಯೋಗವನ್ನು ಕಲಿಸುತ್ತೇನೆಂದು ತಂದೆಯು ಹೇಳುತ್ತಾರೆ. ಕೃಷ್ಣನಿಗೂ ಪ್ರಾಲಬ್ಧವನ್ನು ನಾನೇ ಕೊಟ್ಟೆನು. ಅವಶ್ಯವಾಗಿ ಹಿಂದಿನ ಜನ್ಮದಲ್ಲಿ ಪುರುಷಾರ್ಥವನ್ನು ಮಾಡಿದ್ದರು. ಇಡೀ ಸೂರ್ಯವಂಶಿ ರಾಜಧಾನಿಯು ನನ್ನ ಮುಖಾಂತರ ಪ್ರಾಲಬ್ಧವನ್ನು ಪಡೆದುಕೊಂಡಿತು. ದಿಲ್ವಾಡ ಮಂದಿರದ ವ್ಯತ್ಯಾಸವನ್ನು ಬರೆದಾಗ ಓದುವುದರಿಂದ ಮನುಷ್ಯರು ತಕ್ಷಣ ತಿಳಿದುಕೊಳ್ಳುತ್ತಾರೆ. ಬೇಹದ್ದಿನ ತಂದೆಯು ಜ್ಞಾನದ ಸಾಗರ ಆಗಿದ್ದಾರೆ, ಬಹಳ ಮಧುರವಾಗಿದ್ದಾರೆ. ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎನ್ನುವುದನ್ನು ಫಾರ್ಮ್ನಲ್ಲಿ ತುಂಬಿಸಬೇಕು. ಸದ್ಗುರುವನ್ನು ಬಿಟ್ಟರೆ ಅಜ್ಞಾನದ ಅಂಧಕಾರವಿದೆ. ರೀತಿ ತಂದೆಯ ಮಹಿಮೆ ಮಾಡುವುದರಿಂದ ಬುದ್ಧಿಯಲ್ಲಿ ಪ್ರೀತಿ ಬರುತ್ತದೆ. ತಂದೆಯು ಸನ್ಮುಖದಲ್ಲಿ ಬಂದು ಜನ್ಮವನ್ನು ಕೊಟ್ಟಾಗ ಪ್ರೀತಿಯು ಬರುತ್ತದೆ. ನಿಮಗೆ ಜನ್ಮವನ್ನು ಕೊಟ್ಟಿರುವ ಕಾರಣ ಪ್ರೀತಿಯಿದೆ. ತಂದೆ ಎಂದು ಹೇಳುವುದರಿಂದ ಸ್ವರ್ಗದ ನೆನಪು ಬರುತ್ತದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ನಾವು ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ವಿಶ್ವಾಸವನ್ನು ಇಟ್ಟುಕೊಳ್ಳಿ ಅಥವಾ ಇಟ್ಟುಕೊಳ್ಳದಿರಿ. ಬೇಹದ್ದಿನ ತಂದೆ ಎಲ್ಲರಿಗೂ ತಂದೆಯಾಗಿದ್ದಾರೆ. ಅವರಿಂದ ಅವಶ್ಯವಾಗಿ ಸ್ವರ್ಗದ ಆಸ್ತಿಯು ಸಿಗುತ್ತದೆ. ಕೃಷ್ಣನಿಂದ ಆಸ್ತಿಯು ಸಿಗುವುದಿಲ್ಲ. ತಂದೆಯೇ ಹೊಸಪ್ರಪಂಚದ ರಚೈತನಾಗಿದ್ದಾರೆ ಅಂದಾಗ ಅವಶ್ಯವಾಗಿ ಹೊಸಪ್ರಪಂಚದ ಆಸ್ತಿಯನ್ನು ಕೊಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಗೆ ಪ್ರಿಯರಾಗಲು ಬುದ್ಧಿಯಲ್ಲಿ ಜ್ಞಾನವನ್ನು ಧಾರಣೆ ಮಾಡಿಕೊಂಡು ಜ್ಞಾನಿತೂ ಆತ್ಮಗಳಾಗಬೇಕು. ತಂದೆಯ ಜೊತೆ ಯೋಗವನ್ನು ಜೋಡಿಸಬೇಕಾಗಿದೆ. ಧ್ಯಾನದ ಆಸ್ತಿಯನ್ನು ಇಟ್ಟುಕೊಳ್ಳಬಾರದಾಗಿದೆ.

2. ಮಾತೆಯರನ್ನು ಮುಂದಿಟ್ಟು ಅವರ ಹೆಸರನ್ನು ಪ್ರಸಿದ್ಧ ಮಾಡಬೇಕಾಗಿದೆ. ಧೈರ್ಯದಿಂದ ಗೀತೆಯ ಭಗವಂತನನ್ನು ಸಿದ್ಧ ಮಾಡಬೇಕಾಗಿದೆ. 20 ಯೋಜನೆಗಳ ಜೋರಿನಿಂದ ಸೇವೆಯ ವೃದ್ಧಿಯನ್ನು ಮಾಡಬೇಕಾಗಿದೆ.

ವರದಾನ:

ಶ್ರೇಷ್ಠ ಜೀವನದ ಸ್ಮತಿಯ ಮುಖಾಂತರ ವಿಶಾಲ ಸ್ಟೇಜ್ ಮೇಲೆ ಪಾತ್ರ ಅಭಿನಯಿಸುವಂತಹ ಹೀರೋ ಪಾತ್ರಧಾರಿ ಭವ.

ಬ್ರಹ್ಮಾ ತಂದೆ ನೀವು ಮಕ್ಕಳಿಗೆ ದಿವ್ಯ ಜನ್ಮ ಕೊಡುತ್ತಲೇ - ಪವಿತ್ರ ಭವ, ಯೋಗಿ ಭವದ ವರದಾನ ಕೊಟ್ಟಿದ್ದಾರೆ. ಜನ್ಮ ಪಡೆದೊಡನೆ ದೊಡ್ಡ ತಾಯಿಯ ರೂಪದಲ್ಲಿ ಪವಿತ್ರತೆಯ ಪ್ರೀತಿಯಿಂದ ಪಾಲನೆ ಮಾಡಿದರು. ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗಾಡಿಸಿದರು, ಸರ್ವ ಗುಣಮೂರ್ತಿ, ಜ್ಞಾನಮೂರ್ತಿ, ಸುಖ-ಶಾಂತಿ ಸ್ವರೂಪರಾಗಲು ಪ್ರತಿದಿನ ಜೋಗುಳ ಹಾಡಿದರು, ರೀತಿ ತಂದೆ-ತಾಯಿಯ ಶ್ರೇಷ್ಠ ಮಕ್ಕಳು ಬ್ರಹ್ಮಾಕುಮಾರ, ಕುಮಾರಿಯರಾಗಿದ್ದಾರೆ, ಜೀವನದ ಮಹತ್ವವನ್ನು ಸ್ಮತಿಯಲ್ಲಿಟ್ಟುಕೊಂಡು ವಿಶ್ವದ ವಿಶಾಲ ಸ್ಟೇಜ್ ಮೇಲೆ ವಿಶೇಷ ಪಾತ್ರ, ಹೀರೊ ಪಾತ್ರ ಅಭಿನಯಿಸಿ.

ಸ್ಲೋಗನ್:

ಬಿಂದು ಶಬ್ಧದ ಮಹತ್ವಿಕೆಯನ್ನು ತಿಳಿದು ಬಿಂದು ಆಗಿ, ಬಿಂದು ತಂದೆಯನ್ನು ನೆನಪು ಮಾಡುವುದೇ ಯೋಗಿಯಾಗುವುದು.

 

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯಗಳು- 15/01/57

1. ಮೊಟ್ಟಮೊದಲು ಇದನ್ನು ತಿಳಿದುಕೊಳ್ಳುವುದು ಅವಶ್ಯಕತೆಯಿದೆ- ಏನೆಂದರೆ, ನಮ್ಮ ಸತ್ಯವಾದ ಲಕ್ಷ್ಯವೇನಾಗಿದೇ? ಅದನ್ನೂ ಸಹ ಬುದ್ಧಿಯಲ್ಲಿ ಬಹಳಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು, ಆಗಲೇ ಸಂಪೂರ್ಣವಾಗಿ ಲಕ್ಷ್ಯದಲ್ಲಿ ಸ್ಥಿತರಾಗಲು ಸಾಧ್ಯವಾಗುವುದು. ನಮ್ಮ ಸತ್ಯವಾದ ಲಕ್ಷ್ಯವಾಗಿದೆ- ನಾನು ಆತ್ಮನು ಪರಮಾತ್ಮನ ಸಂತಾನನಾಗಿರುವೆನು. ಸತ್ಯವಾಗಿ ಕರ್ಮಾತೀತನಾಗಿದ್ದೇನೆ, ನಂತರ ತನ್ನನ್ನು ತಾನೇ ಮರೆಯುವುದರಿಂದ ಕರ್ಮಬಂಧನದಲ್ಲಿ ಬಂದುಬಿಟ್ಟೆವು, ಈಗ ಮತ್ತೆ ನೆನಪು ಬರುವುದರಿಂದ, ಈಶ್ವರನ ಯೋಗದಲ್ಲಿರುವುದರಿಂದ ನಾವು ಮಾಡಿರುವಂತಹ ವಿಕರ್ಮವನ್ನು ವಿನಾಶ ಮಾಡಿಕೊಳ್ಳುತ್ತಿದ್ದೇವೆ. ಅಂದಮೇಲೆ ನಮ್ಮ ಲಕ್ಷ್ಯವಾಯಿತು- ನಾನು ಆತ್ಮನು ಪರಮಾತ್ಮನ ಸಂತಾನನಾಗಿದ್ದೇನೆ. ಉಳಿದಿರುವವರ್ಯಾರೂ ಸಹ ನಮಗೆ ನಾವೇ ದೇವತೆಗಳೆಂದು ತಿಳಿದುಕೊಂಡು, ಲಕ್ಷ್ಯದಲ್ಲಿ ಸ್ಥಿತರಾಗುತ್ತೀರೆಂದರೆ ಪರಮಾತ್ಮನ ಶಕ್ತಿಯು ಸಿಗುತ್ತದೆ- ಎಂಬ ಜ್ಞಾನವು ಇನ್ಯಾರಿಂದಲೂ ಸಿಗಲು ಸಾಧ್ಯವಿಲ್ಲ. ಮತ್ತು ನಿಮ್ಮ ವಿಕರ್ಮವೂ ವಿನಾಶವಾಗುವುದಿಲ್ಲ, ಈಗ ಇದಂತು ನಮಗೆ ಸಂಪೂರ್ಣವಾದ ಜ್ಞಾನವಿದೆ, ನಾನು ಆತ್ಮನು ಪರಮಾತ್ಮನ ಸಂತಾನನು, ಕರ್ಮಾತೀತನಾಗಿರುವೆನು, ಭವಿಷ್ಯದಲ್ಲಿ ಹೋಗಿ ಜೀವನ್ಮುಕ್ತ ದೇವಿ-ದೇವತಾ ಪದವಿಯನ್ನು ಪಡೆಯುವೆನು, ಲಕ್ಷ್ಯದಲ್ಲಿರುವುದರಿಂದ ಶಕ್ತಿಯು ಸಿಕ್ಕಿಬಿಡುತ್ತದೆ. ಈಗ ಮನುಷ್ಯರು ಏನನ್ನು ಬಯಸುತ್ತಾರೆ, ಅದಾಗಿದೆ- ನಮಗೆ ಸುಖ-ಶಾಂತಿ, ಪವಿತ್ರತೆಯು ಬೇಕು, ಅದೂ ಸಹ ಯಾವಾಗ ಸಂಪೂರ್ಣವಾಗಿ ಯೋಗವಿರುತ್ತದೆಯೋ ಆಗಲೇ ಪ್ರಾಪ್ತಿಯಾಗುತ್ತದೆ. ಉಳಿದಂತೆ ದೇವತಾ ಪದವಿಯಂತು ತಮ್ಮ ಭವಿಷ್ಯದ ಪ್ರಾಲಬ್ಧವಾಗಿದೆ, ತಮ್ಮ ಪುರುಷಾರ್ಥವೇ ಬೇರೆಯಾಗಿದೆ ಮತ್ತು ತಮ್ಮ ಪ್ರಾಲಬ್ಧವೇ ಬೇರೆಯಾಗಿದೆ. ಅಂದಮೇಲೆ ಲಕ್ಷ್ಯವೂ ಬೇರೆಯಾಗಿದೆ, ತಾವು ಲಕ್ಷ್ಯದಲ್ಲಿರಬಾರದು- ನಾನು ಪವಿತ್ರ ಆತ್ಮನಂತು ಅಂತ್ಯದಲ್ಲಿ ಪರಮಾತ್ಮನಾಗಿಬಿಡುತ್ತೇನೆ, ಹೀಗಲ್ಲ. ಆದರೆ ನಾವು ಪರಮಾತ್ಮನೊಂದಿಗೆ ಯೋಗನ್ನಿಟ್ಟು ಪವಿತ್ರ ಆತ್ಮನಾಗಬೇಕಾಗಿದೆ, ಬಾಕಿ ಆತ್ಮನೇನು ಪರಮಾತ್ಮನಾಗುವುದಿಲ್ಲ.

2. ಅವಿನಾಶಿ ಈಶ್ವರನ ಜ್ಞಾನಕ್ಕೆ ಅನೇಕ ಹೆಸರನ್ನಿಡಲಾಗಿದೆ. ಕೆಲವರು ಜ್ಞಾನವನ್ನು ಅಮೃತವೆಂದೂ ಹೇಳುತಾರೆ, ಕೆಲವರು ಜ್ಞಾನವನ್ನು ಅಂಜನವೆಂದೂ ಹೇಳುತ್ತಾರೆ. ಗುರುನಾನಕರು ಹೇಳುತ್ತಾರೆ- ಜ್ಞಾನಅಂಜನವನ್ನು ಗುರು ಕೊಟ್ಟರು ಎಂದು, ಕೆಲವರು ಜ್ಞಾನವನ್ನು ಮಳೆಯೆಂದೂ ಹೇಳುತ್ತಾರೆ ಏಕೆಂದರೆ ಜ್ಞಾನದಿಂದಲೇ ಇಡೀ ಸೃಷ್ಟಿಯು ಹಚ್ಚಹಸಿರಾಗಿಬಿಡುತ್ತದೆ. ಯಾರೆಲ್ಲಾ ತಮೋಪ್ರಧಾನ ಮನುಷ್ಯರಾಗಿದ್ದಾರೆ, ಅವರು ಸತೋಗುಣಿ ಮನುಷ್ಯರಾಗಿಬಿಡುತ್ತಾರೆ ಮತ್ತು ಜ್ಞಾನಅಂಜನದಿಂದ ಅಂಧಕಾರವೆಲ್ಲವೂ ನಶಿಸಿಹೋಗುತ್ತದೆ. ಇದೇ ಜ್ಞಾನವನ್ನು ಮತ್ತೆ ಅಮೃತವೆಂದೂ ಹೇಳುತ್ತಾರೆ, ಅದರಿಂದ ಮನುಷ್ಯರು ಐದು ವಿಕಾರಗಳ ಅಗ್ನಿಯಲ್ಲಿ ಸುಡುತ್ತಿದ್ದಾರೆ, ಅದರಿಂದ ಶೀತಲರಾಗಿಬಿಡುತ್ತಾರೆ. ನೋಡಿ- ಗೀತೆಯಲ್ಲಿ ಪರಮಾತ್ಮನು ಸ್ಪಷ್ಟವಾಗಿ ಹೇಳುತ್ತಾರೆ- ಕಾಮೇಷು, ಕ್ರೋಧೇಷು ಅದರಲ್ಲಿಯೂ ಮುಖ್ಯವಾದುದು ಕಾಮ, ಅದೇ ಐದೂ ವಿಕಾರಗಳಲ್ಲಿ ಮುಖ್ಯವಾದ ಬೀಜವಾಗಿದೆ. ಬೀಜದಿಂದ ಮತ್ತೆ ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದವು ಉತ್ಪತ್ತಿಯಾಗುತ್ತದೆ, ಅದರಿಂದ ಮನುಷ್ಯರ ಬುದ್ಧಿಯು ಭ್ರಷ್ಟವಾಗಿಬಿಡುತ್ತದೆ. ಈಗ ಅದೇ ಬುದ್ಧಿಯಲ್ಲಿ ಜ್ಞಾನದ ಧಾರಣೆಯಾಗುತ್ತದೆ, ಯಾವಾಗ ಜ್ಞಾನದ ಧಾರಣೆಯು ಸಂಪೂರ್ಣವಾಗಿ ಬುದ್ಧಿಯಲ್ಲಿ ಧಾರಣೆಯಾಗಿಬಿಡುತ್ತದೆಯೋ, ಆಗಲೇ ವಿಕಾರಗಳ ಬೀಜವು ಸಮಾಪ್ತಿಯಾಗಿಬಿಡುತ್ತದೆ. ಬಾಕಿ ಸನ್ಯಾಸಿಗಳಂತು ತಿಳಿಯುತ್ತಾರೆ- ವಿಕಾರಗಳನ್ನು ವಶಮಾಡಿಕೊಳ್ಳುವುದು ಬಹಳ ಕಠಿಣವಾದ ಮಾತಾಗಿದೆ. ಈಗ ಜ್ಞಾನವಂತು ಸನ್ಯಾಸಿಗಳಲ್ಲಿ ಇಲ್ಲವೇ ಇಲ್ಲ. ಅಂದಮೇಲೆ ಇಂತಹ ಶಿಕ್ಷಣವನ್ನು ಕೊಡುವುದು ಹೇಗೆ? ಕೇವಲ ಹಾಗೆಯೇ ಹೇಳುತ್ತಾರೆ- ಮರ್ಯಾದೆಯಲ್ಲಿರಿ. ಆದರೆ ಸತ್ಯವಾದ ಮರ್ಯಾದೆಯು ಯಾವುದಾಗಿತ್ತು? ಮರ್ಯಾದೆಯಂತು ಇತ್ತೀಚೆಗೆ ಸಮಾಪ್ತಿಯಾಗಿಬಿಟ್ಟಿದೆ, ಸತ್ಯಯುಗಿ-ತ್ರೇತಾಯುಗಿ ದೇವಿ-ದೇವತೆಗ ಮರ್ಯಾದೆಯೆಲ್ಲಿ! ಅವರು ಗೃಹಸ್ಥದಲ್ಲಿದ್ದರೂ ನಿರ್ವಿಕಾರಿ ಪ್ರವೃತ್ತಿಯಲ್ಲಿದ್ದರು. ಈಗ ಸತ್ಯವಾದ ಮರ್ಯಾದೆಯೆಲ್ಲಿದೆ! ಇತ್ತೀಚೆಗಂತು ಉಲ್ಟಾವಿಕಾರಿಯ ಮರ್ಯಾದೆಯನ್ನು ಪಾಲನೆ ಮಾಡುತ್ತಿದ್ದಾರೆ, ಒಬ್ಬರಿನ್ನೊಬ್ಬರಿಗೂ ಸಹ ಅಂತಹದ್ದನ್ನೇ ಕಲಿಸುತ್ತಾರೆ- ಮರ್ಯಾದೆಯಲ್ಲಿ ನಡೆಯಿರಿ ಎಂದು. ಮನುಷ್ಯರ ಮೊದಲ ಕರ್ತವ್ಯವೇನಾಗಿದೆ, ಅದನ್ನಂತು ಯಾರೂ ಅರಿತುಕೊಂಡಿಲ್ಲ, ಮರ್ಯಾದೆಯಲ್ಲಿರಿ ಎಂದಷ್ಟೇ ಪ್ರಚಾರ ಮಾಡುತ್ತಿರುತ್ತಾರೆ ಅಷ್ಟೇ, ಆದರೆ ಇಷ್ಟೂ ತಿಳಿದುಕೊಂಡಿಲ್ಲ- ಮನುಷ್ಯರು ಮೊದಲ ಮರ್ಯಾದೆಯು ಯಾವುದಾಗಿದೆ? ಮನುಷ್ಯರ ಮೊದಲ ಮರ್ಯಾದೆಯಾಗಿದೆ- ನಿರ್ವಿಕಾರಿಯಾಗುವುದು, ಒಂದುವೇಳೆ ಯಾರೊಂದಿಗೆ ಹೀಗೆ ಕೇಳಬೇಕು- ನೀವು ಮರ್ಯಾದೆಯಂತೆ ಇರುತ್ತೀರಾ? ಆಗ ಹೇಳಿಬಿಡುತ್ತಾರೆ- ವರ್ತಮಾನದ ಕಲಿಯುಗೀ ಸೃಷ್ಟಿಯಲಿ ನಿರ್ವಿಕಾರಿಗಳಾಗಿರುವ ಸಾಹಸವೇ ಇಲ್ಲ. ಈಗ ಮುಖದಿಂದ ಹೇಳಿರಿ- ಮರ್ಯಾದೆಯಲ್ಲಿರಿ, ನಿರ್ವಿಕಾರಿಯಾಗಿರಿ, ಇದರಿಂದಂತು ಯಾರೂ ಸಹ ನಿರ್ವಿಕಾರಿಯಾಗಲು ಸಾಧ್ಯವಿಲ್ಲ. ನಿರ್ವಿಕಾರಿಯಾಗುವುದಕ್ಕೆ ಮೊದಲು ಜ್ಞಾನದ ಖಡ್ಗದಿಂದ, ಐದೂ ವಿಕಾರಗಳ ಬೀಜವನ್ನು ಸಮಾಪ್ತಿ ಮಾಡಬೇಕು, ಆಗಲೇ ವಿಕರ್ಮವು ಭಸ್ಮವಾಗಲು ಸಾಧ್ಯವಾಗುತ್ತದೆ. ಒಳ್ಳೆಯದು. ಓಂ ಶಾಂತಿ.

Download  PDF

Post a Comment

0 Comments