02/02/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಒಬ್ಬ
ಈಶ್ವರನ ಮತವೇ
ಶ್ರೇಷ್ಠವಾದ ಮತವಾಗಿದೆ,
ಆ ಮತದಂತೆ
ನಡೆಯುವುದರಿಂದಲೇ ನೀವು
ಸತ್ಯಚಿನ್ನವಾಗುತ್ತೀರಿ, ಬಾಕಿ
ಎಲ್ಲಾ ಮತಗಳು
ಅಸತ್ಯವಂತರನ್ನಾಗಿ ಮಾಡುತ್ತವೆ”
ಪ್ರಶ್ನೆ:
ಯಾವ ಒಂದು ಪಾತ್ರ ಒಬ್ಬ ಜ್ಞಾನಸಾಗರ ತಂದೆಯಲ್ಲಿದೆ, ಬೇರೆ ಯಾವ ಮನುಷ್ಯಾತ್ಮರಲ್ಲೂ ಇಲ್ಲ?
ಉತ್ತರ:
ನಾನು ಆತ್ಮನಲ್ಲಿ ಭಕ್ತರನ್ನು ಸಂಭಾಲನೆ ಮಾಡುವ, ಎಲ್ಲರಿಗೂ ಸುಖವನ್ನು ಕೊಡುವ ಪಾತ್ರವಿದೆಯೆಂದು ತಂದೆಯು ಹೇಳುತ್ತಾರೆ. ನಾನು ಜ್ಞಾನಸಾಗರ ತಂದೆ ಎಲ್ಲಾ ಮಕ್ಕಳ ಮೇಲೆ ಅವಿನಾಶಿ ಜ್ಞಾನದ ಮಳೆಯನ್ನು ಸುರಿಸುತ್ತೇನೆ, ಆ ಜ್ಞಾನರತ್ನಗಳಿಗೆ
ಯಾವುದೇ ಬೆಲೆಯನ್ನು ಕಟ್ಟಲಾಗುವುದಿಲ್ಲ. ನಾನು ಬಿಡುಗಡೆಯ ದಾತನಾಗಿದ್ದೇನೆ, ಆತ್ಮೀಯ ಮಾರ್ಗದರ್ಶಕನಾಗಿ
ನೀವು ಆತ್ಮಗಳನ್ನು ಹಿಂತಿರುಗಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಇದೆಲ್ಲವೂ ನನ್ನ ಪಾತ್ರವಾಗಿದೆ, ನಾನು ಯಾರಿಗೂ ದುಃಖವನ್ನು ಕೊಡುವುದಿಲ್ಲ ಆದ್ದರಿಂದ ನನ್ನನ್ನು ಎಲ್ಲರೂ ನಯನಗಳಲ್ಲಿ ಇಟ್ಟುಕೊಳ್ಳುತ್ತಾರೆ. ರಾವಣನು ದುಃಖವನ್ನು ಕೊಡುತ್ತಾನೆ ಆದ್ದರಿಂದ ಅವನ ಚಿತ್ರವನ್ನು ಮಾಡಿ ಸುಟ್ಟುಹಾಕುತ್ತಾರೆ.
ಗೀತೆ: ಯಾರು ಪ್ರಿಯತಮನ ಜೊತೆಯಲ್ಲಿದ್ದಾರೆ......
ಓಂ ಶಾಂತಿ.
ತಂದೆಯು ಓಂನ ಅರ್ಥವನ್ನು ನಾವು ಮಕ್ಕಳಿಗೆ ತಿಳಿಸುಕೊಟ್ಟಿದ್ದಾರೆ. ಓಂ ಅಂದರೆ ನಾನು ಆತ್ಮನಾಗಿದ್ದೇನೆ, ಅದರ ಅರ್ಥವು ಬಹಳ ಚಿಕ್ಕದಾಗಿದೆ.
ನಾನು ಭಗವಂತನಾಗಿದ್ದೇನೆ ಎನ್ನುವುದಲ್ಲ. ಪಂಡಿತರು ಮುಂತಾದವರಿಂದ ಕೇಳಿರಿ
– ಓಂನ ಅರ್ಥ ಏನಾಗಿದೆ? ಅಂದಾಗ ಅವರು ಬಹಳ ಉದ್ದ ಅಗಲವಾಗಿ ತಿಳಿಸುತ್ತಾರೆ ಮತ್ತು ಯಥಾರ್ತವನ್ನೂ ಸಹ ತಿಳಿಸುವುದಿಲ್ಲ. ಯಥಾರ್ತ ಮತ್ತು ಅಯಥಾರ್ತವು ಸತ್ಯ ಮತ್ತು ಅಸತ್ಯವಾಗಿದೆ. ಸತ್ಯ ಒಬ್ಬ ತಂದೆಯಾಗಿದ್ದಾರೆ ಬಾಕಿ ಈ ಸಮಯದಲ್ಲಿ ಅಸತ್ಯತೆಯ ರಾಜ್ಯವಿದೆ. ರಾಮರಾಜ್ಯವನ್ನು ಸತ್ಯತೆಯ ರಾಜ್ಯವೆಂದು ಹೇಳಲಾಗುತ್ತದೆ. ರಾವಣನ ರಾಜ್ಯವನ್ನು ಅಸತ್ಯತೆಯ ರಾಜ್ಯವೆಂದು ಹೇಳಲಾಗುತ್ತದೆ.
ಆದರೆ ಅವರು ಅಯತಾರ್ಥವನ್ನು ತಿಳಿಸುತ್ತಾರೆ.
ತಂದೆಯು ಸತ್ಯವಾಗಿದ್ದಾರೆ, ಅವರು ಎಲ್ಲರಿಗೂ ಸತ್ಯತೆಯನ್ನು ತಿಳಿಸಿ ಸತ್ಯ ಚಿನ್ನ ಮಾಡುತ್ತಾರೆ ನಂತರ ಮಾಯೆಯು ಅಸತ್ಯವನ್ನಾಗಿ ಮಾಡುತ್ತದೆ. ಮಾಯೆಯ ಪ್ರವೇಶತೆಯ ಕಾರಣ ಮನುಷ್ಯರು ಏನೆಲ್ಲಾ ಹೇಳುತ್ತಾರೋ ಅದೆಲ್ಲವೂ ಅಸತ್ಯವಾಗಿದೆ. ಅದಕ್ಕೆ ಅಸುರೀ ಮತವೆಂದು ಹೇಳಲಾಗುತ್ತದೆ. ಈಶ್ವರೀಯ ಮತವು ತಂದೆಯದ್ದಾಗಿದೆ, ಅಸುರೀ ಮತವುಳ್ಳಂತಹವರು ಅಸತ್ಯವನ್ನೇ ತಿಳಿಸುತ್ತಾರೆ.
ಇಂದು ಪ್ರಪಂಚದಲ್ಲಿ ಅಸುರೀ ಮತಗಳು ಅನೇಕ ಇವೆ.
ಗುರುಗಳೂ ಸಹ ಅನೇಕರಿದ್ದಾರೆ ಆದರೆ ಅದಕ್ಕೆ ಶ್ರೀಮತವೆಂದು ಹೇಳಲಾಗುವುದಿಲ್ಲ. ಒಬ್ಬ ಈಶ್ವರನ ಮತವೇ ಶ್ರೀಮತವಾಗಿದೆ. ನಾವು ಶ್ರೀಮತದಂತೆ ನಡೆದು ಶ್ರೇಷ್ಠರಾಗುತ್ತೇವೆಂದು ಈಗ ನೀವು ಮಕ್ಕಳಿಗೆ ತಿಳಿದಿದೆ. ಪರಮಪಿತ ಪರಮಾತ್ಮ ಎಲ್ಲರಿಗಿಂತ ಶ್ರೇಷ್ಠವಾಗಿದ್ದಾರೆ. ಅವರು ಶ್ರೇಷ್ಠಾತಿ ಶ್ರೇಷ್ಠ ಸ್ಥಾನದಲ್ಲಿ ಅವರನ್ನು ನೆನಪು ಮಾಡುತ್ತಾರೆ.
ಎಲ್ಲಾ ಭಕ್ತರು ಅವರನ್ನು ನೆನಪು ಮಾಡುತ್ತಾರೆ. ಭಕ್ತರು ಶ್ರೀಮತವನ್ನು ನೆನಪು ಮಾಡುತ್ತಾರೆ ಅಂದಾಗ ಅವಶ್ಯವಾಗಿ ಅಸುರಿ ಮತದಂತೆ ನಡೆಯುತ್ತಿದ್ದಾರೆ. ಈಗ ನೀವು ಶ್ರೀಮತದಂತೆ ಶ್ರೇಷ್ಠರಾಗುತ್ತಿದ್ದೀರಿ ನಂತರ ಅಲ್ಲಿ ಭಗವಂತನೆಂದು ಹೇಳಿ ನೆನಪು ಮಾಡುವ ಅವಶ್ಯಕತೆ ಇರಲ್ಲ. ದೇವಿ-ದೇವತೆಗಳಿಗೆ ಯಾವುದೇ ದುಃಖವಿಲ್ಲದೇ ಇರುವ ಕಾರಣ ನೆನಪನ್ನು ಮಾಡುವುದಿಲ್ಲ. ಭಕ್ತರಿಗೆ ಅಪಾರವಾದ ದುಃಖವಿದೆ,
ಈಗ ಬಹಳ ದುಃಖದ ಬೆಟ್ಟಗಳು ಕೆಳಗೆ ಬೀಳುತ್ತವೆ.
ಮಹಾಭಾರತದ ಯುದ್ಧ ಮನುಷ್ಯರಿಗೋಸ್ಕರ ದುಃಖದ ಬೆಟ್ಟವಾಗಿದೆ. ನೀವು ಮಕ್ಕಳಿಗೋಸ್ಕರ ಸುಖದ ಬೆಟ್ಟವಾಗಿದೆ. ದುಃಖದ ನಂತರ ಅವಶ್ಯವಾಗಿ ಸುಖ ಬರುತ್ತದೆ.
ಈ ವಿನಾಶದ ನಂತರ ನಿಮ್ಮ ರಾಜ್ಯವೇ ಬರುತ್ತದೆ,
ಅನೇಕ ಧರ್ಮಗಳು ವಿನಾಶವಾಗಿ ಯಾವ ಧರ್ಮವು ಈಗ ಪ್ರಾಯಲೋಪವಾಗಿದೆಯೋ ಅದರ ಸ್ಥಾಪನೆಯಾಗುತ್ತದೆ. ಅಂದರೆ ಈ ಮಹಾಭಾರತದ ಯುದ್ಧದ ಮುಖಾಂತರ ಸ್ವರ್ಗದ ಬಾಗಿಲು ತೆರೆಯುತ್ತದೆ. ಈ ಬಾಗಿಲಿನಿಂದ ಯಾರು ಹೋಗುತ್ತಾರೆ? ರಾಜಯೋಗವನ್ನು ಕಲಿಯುತ್ತಿರುವವರು. ಕಲಿಸುವಂತಹವರು ತಂದೆಯಾಗಿದ್ದಾರೆ. ಯಾರು ಪ್ರಿಯತಮನ ಜೊತೆಗಿದ್ದಾರೋ ಅವರಿಗೆ ಜ್ಞಾನದ ಮಳೆಯು ಸುರಿಯುತ್ತದೆ.
ಪ್ರಿಯತಮನೆಂದು ತಂದೆಗೆ ಹೇಳಲಾಗುತ್ತದೆ. ಆ ಮಳೆಯು ನೀರಿನ ಸಾಗರದಿಂದ ಬರುತ್ತದೆ.
ಇದು ಅವಿನಾಶಿ ಜ್ಞಾನರತ್ನಗಳ ಮಳೆಯಾಗಿದೆ.
ಯಾರು ಪ್ರಿಯತಮ ಜ್ಞಾನಸಾಗರನ ಜೊತೆಗಿದ್ದಾರೋ ಅವರಿಗೋಸ್ಕರ ಅವಿನಾಶಿ ಜ್ಞಾನರತ್ನಗಳ ಮಳೆಯಾಗಿದೆ.
ಈ ಅವಿನಾಶಿ ಜ್ಞಾನರತ್ನಗಳು ಬುದ್ಧಿರೂಪೀ ಜೋಳಿಗೆಯಲ್ಲಿ ಧಾರಣೆಯಾಗಬೇಕು.
ವಿದ್ಯೆಯು ಬುದ್ಧಿಯಲ್ಲಿ ಧಾರಣೆಯಾಗುತ್ತದೆಯಲ್ಲವೆ. ಆತ್ಮವು ಮನ, ಬುದ್ಧಿ ಸಹಿತವಿದೆ ಆದ್ದರಿಂದ ಆತ್ಮದಲ್ಲಿ ಎಲ್ಲವೂ ಗ್ರಹಣವಾಗುತ್ತದೆ. ಹೇಗೆ ಆತ್ಮಕ್ಕೆ ಈ ಶರೀರವಿದೆಯೋ ಹಾಗೆಯೇ ಆತ್ಮದಲ್ಲಿ ಮನಸ್ಸು,
ಬುದ್ಧಿಯಿದೆ. ಬುದ್ಧಿಯಿಂದ ಎಲ್ಲವನ್ನೂ ಗ್ರಹಣ ಮಾಡುತ್ತದೆ. ಯಾವಾಗ ಯೋಗವಿರುತ್ತದೆಯೋ ಆಗ ಬುದ್ಧಿಯು ಎಲ್ಲವನ್ನೂ ಗ್ರಹಣ ಮಾಡಿಕೊಳ್ಳುತ್ತದೆ. ತಂದೆಯು ಕುಳಿತು ಬಹಳ ಸಹಜವಾದ ಮಾತುಗಳನ್ನು ತಿಳಿಸುತ್ತಿದ್ದಾರೆ. ಮನುಷ್ಯರು ಬಹಳ ಭಿನ್ನವಾದ ಮಾತುಗಳನ್ನು ತಿಳಿಸಿಕೊಡುತ್ತಾರೆ, ಶಾಸ್ತ್ರಗಳಲ್ಲಿ ಬಹಳ ಮತಗಳಿವೆ.
ಗೀತೆಯ ಪ್ರಚಾರವು ಬಹಳ ಇದೆ ಮತ್ತು ಅಧ್ಯಾಯದ ಅರ್ಥವನ್ನು ಬಹಳಷ್ಟು ಹೇಳುತ್ತಾರೆ. ಇಂದಿನ ದಿನ ಅನೇಕಾನೇಕ ಗೀತೆಗಳನ್ನು ಮಾಡಿದ್ದಾರೆ.
ಮತ್ತ್ಯಾವುದೇ ಶಾಸ್ತ್ರವಿಲ್ಲ,
ಇದಕ್ಕೆ ಇಂತಹವರ ವೇದ, ಇಂತಹವರ ಶಾಸ್ತ್ರವೆಂದು ಹೇಳುವುದಿಲ್ಲ.
ಗೀತೆಗೋಸ್ಕರ ಗಾಂಧಿಯ ಗೀತೆ, ಠಾಗೂರ್ನ ಗೀತೆ, ಜ್ಞಾನೇಶ್ವರನ ಗೀತೆ, ಅಷ್ಟವಕ್ರ ಗೀತೆ ಎಂದು ಬಹಳ ಹೆಸರುಗಳನ್ನು ಗೀತೆಗೆ ಇಟ್ಟಿದ್ದಾರೆ ಮತ್ತು ವೇದ,
ಶಾಸ್ತ್ರಗಳಿಗೆ ಇಷ್ಟೆಲ್ಲಾ ಹೆಸರುಗಳಿಲ್ಲ ಆದರೆ ಮನುಷ್ಯರು ಏನನ್ನೂ ಸಹ ತಿಳಿದುಕೊಂಡಿಲ್ಲ. ಈ ಜ್ಞಾನವು ಪ್ರಾಯಲೋಪವಾಗುತ್ತದೆ. ಈಗ ದೇವತೆಗಳ ವಂಶಾವಳಿಯು ಎಲ್ಲಿಂದ ಸಿಗುತ್ತದೆ?
ಅವಶ್ಯವಾಗಿ ಸತ್ಯಯುಗವನ್ನು ಸ್ಥಾಪನೆ ಮಾಡುವಂತಹವರೇ ಅದನ್ನು ಕೊಡುತ್ತಾರೆ.
ಈಗ ತಂದೆಯೇ ಬಂದು ನೀವು ಮಕ್ಕಳಿಗೆ ಸ್ವರ್ಗದ ರಾಜ್ಯಪದವಿಯನ್ನು ಕೊಡುತ್ತಾರೆ.
21 ಜನ್ಮಗಳಿಗೋಸ್ಕರ ಕೊಡುತ್ತಾರೆ.
ಕುಮಾರಿ 21 ಕುಲವನ್ನು ಉದ್ಧಾರ ಮಾಡುವಂತಹವಳು ಎಂದು ಗಾಯನವಿದೆ.
ಈಗ ಕುಮಾರಿ ಯಾರಾಗಿದ್ದಾರೆ? ನೀವೆಲ್ಲರೂ ಕುಮಾರ-ಕುಮಾರಿಯರಾಗಿದ್ದೀರಿ. ನೀವು ಯಾರಿಗಾದರೂ
21 ಜನ್ಮಗಳಿಗೋಸ್ಕರ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಸಬಹುದು.
ಶ್ರೀಮತದಿಂದ ಅಥವಾ ತಂದೆಯ ಮತದಿಂದ ಮಾಡಿಸಬಹುದು. ಪಾಠಶಾಲೆಯಲ್ಲಿ ಯಾರು ಓದುತ್ತಾರೋ ಅವರು ನಾವು ವಿದ್ಯಾರ್ಥಿಗಳಾಗಿದ್ದೇವೆಂದು ತಿಳಿದುಕೊಂಡಿರುತ್ತಾರೆ. ಬೇರೆ ಸತ್ಸಂಗಗಳಲ್ಲಿ ತಮ್ಮನ್ನು ವಿದ್ಯಾರ್ಥಿಗಳೆಂದು ತಿಳಿದುಕೊಳ್ಳುವುದಿಲ್ಲ. ವಿದ್ಯಾರ್ಥಿಗಳಿಗೆ ಗುರಿ-ಉದ್ದೇಶವು ಬುದ್ಧಿಯಲ್ಲಿರುತ್ತದೆ. ನೀವೆಲ್ಲರೂ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ. ಭಗವಾನುವಾಚ,
ನಾನು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದೇನೆ. ದೇವತೆಗಳ ರಾಜಧಾನಿಯಿತ್ತು, ಹೇಗೆ ರಾಜ-ರಾಣಿ,
ದೇವಿ-ದೇವತೆಗಳಿದ್ದರೋ ಹಾಗೆಯೇ ಪ್ರಜೆಗಳಿದ್ದರು. ನರನಿಂದ ನಾರಾಯಣರಾಗುತ್ತಾರೆ. ಈ ಗುರಿ-ಉದ್ದೇಶವು ಮೊದಲನೆಯದಾಗಿದೆ. ರಾಜ ರಾಮ ಹಾಗೂ ರಾಣಿ ಸೀತೆಯನ್ನಾಗಿ ಮಾಡುತ್ತಾರೆ ಎಂದಲ್ಲ, ಇದು ರಾಜಯೋಗವಾಗಿದೆ. ಈಗ ರಾಜರಿಗಿಂತ ರಾಜರನ್ನಾಗಿ ಮಾಡುತ್ತಾರೆ. ಕಲ್ಪ-ಕಲ್ಪ ನಾನೇ ಬರುತ್ತೇನೆ, ಕಳೆದುಕೊಂಡಿರುವ ರಾಜ್ಯವನ್ನು ಕೊಡುತ್ತೇನೆ.
ಇದನ್ನು ಯಾವ ಮನುಷ್ಯರೂ ಕಸಿದುಕೊಳ್ಳುವುದಿಲ್ಲ. ಮಾಯೆಯು ಕಸಿದುಕೊಳ್ಳುತ್ತದೆ. ಈಗ ಮಾಯೆಯ ಮೇಲೆ ವಿಜಯವನ್ನು ಪಡೆದುಕೊಳ್ಳಬೇಕು. ಅಲ್ಲಿ ರಾಜರುಗಳ ಯುದ್ಧವಾಗಿದೆ,
ಒಬ್ಬರಿಗೊಬ್ಬರ ಮೇಲೆ ಯುದ್ಧವನ್ನು ಮಾಡಿ ವಿಜಯವನ್ನು ಪಡೆದುಕೊಳ್ಳುತ್ತಾರೆ, ಈಗ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ಹದ್ದಿನ ರಾಜರುಗಳ ಅನೇಕಾನೇಕ ಯುದ್ಧಗಳಾಗುತ್ತಿವೆ ಅದರಿಂದ ಹದ್ದಿನ ರಾಜಪದವಿಯು ಸಿಗುತ್ತದೆ ಮತ್ತು ಈ ಯೋಗಬಲದಿಂದ ನೀವು ವಿಶ್ವದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ. ಅದಕ್ಕೆ ಅಹಿಂಸಕ ಯುದ್ಧವೆಂದು ಹೇಳಲಾಗುತ್ತದೆ. ಯುದ್ಧ ಅಥವಾ ಸಾಯುವ ಮತ್ತು ಸಾಯಿಸುವ ಮಾತಿಲ್ಲ, ಇದು ಯೋಗಬಲವಾಗಿದೆ, ಎಷ್ಟೊಂದು ಸಹಜವಾಗಿದೆ. ತಂದೆಯ ಜೊತೆ ಯೋಗವನ್ನು ಬೆಳೆಸುವುದರಿಂದ ವಿಕರ್ಮಾಜೀತರಾಗುತ್ತೀರಿ ನಂತರ ಮಾಯೆಯ ಯುದ್ಧವಾಗುವುದಿಲ್ಲ. ಹಾತ್ಮತಾಯಿಯ ಆಟವಾಗಿದೆ.
ಬಾಯಲ್ಲಿ ಮಣಿಯನ್ನು ಹಾಕಿಕೊಂಡಾಗ ಮಾಯೆಯು ದೂರವಾಗುತ್ತದೆ. ಮಣಿಯನ್ನು ತೆಗೆದಾಗ ಮಾಯೆಯು ಬರುತ್ತದೆ ಮತ್ತು ಅಲ್ಲಾ, ಅವಲದ್ದೀನನ ನಾಟಕವಿದೆ. ಟಕಾ ಮಾಡುವುದರಿಂದ ಸ್ವರ್ಗವು ಬರುತ್ತಿತ್ತು. ಅದು ಸ್ವರ್ಗವಾಗಿದೆ ಅಂದಾಗ ತಂದೆಯೇ ಕುಳಿತು ಬ್ರಹ್ಮನ ಮುಖಾಂತರ ಸ್ವರ್ಗವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಪರಮಪಿತ ಪರಮಾತ್ಮ ನರಕವನ್ನು ಸ್ಥಾಪನೆ ಮಾಡುವುದಿಲ್ಲ.
ಒಂದುವೇಳೆ ಈ ರೀತಿಯಾಗಿದ್ದರೆ ಅವರ ಚಿತ್ರವನ್ನು ಮಾಡುತ್ತಿದ್ದರು. ಚಿತ್ರವನ್ನು ರಾವಣನದ್ದು ಮಾಡಲಾಗಿದೆ ಏಕೆಂದರೆ ರಾವಣನು ಎಲ್ಲರ ಶತ್ರುವಾಗಿದ್ದಾನೆ. ಸ್ವರ್ಗವನ್ನು ರಚನೆ ಮಾಡುವ ತಂದೆಯನ್ನು ಎಲ್ಲರೂ ನಯನಗಳಲ್ಲಿ ಇಟ್ಟುಕೊಳ್ಳುತ್ತಾರೆ. ನನ್ನನ್ನು ದುಃಖದಿಂದ ದೂರ ಮಾಡಿರಿ ಎಂದು ಭಕ್ತರು ನೆನಪು ಮಾಡುತ್ತಾರೆ ಆದ್ದರಿಂದ ನಾನು ಬಂದು ದುಃಖದಿಂದ ದೂರ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ.
ತಂದೆಯು ಮುಕ್ತಿದಾತನಾಗಿದ್ದಾರೆ, ಆತ್ಮೀಯ ಮಾರ್ಗದರ್ಶಕನಾಗಿದ್ದಾರೆ. ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಯಾರು ಪ್ರಿಯತಮನ ಜೊತೆಗಿದ್ದಾರೋ ಅವರಿಗೆ ಅವಿನಾಶಿ ಜ್ಞಾನರತ್ನಗಳ ಮಳೆಯಾಗುತ್ತದೆ.
ಆ ಜ್ಞಾನರತ್ನಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಂದೆಯು ಜ್ಞಾನಸಾಗರರಾಗಿದ್ದಾರೆ ಅಂದಾಗ ಅವಶ್ಯವಾಗಿ ಆತ್ಮದಲ್ಲಿ ಪಾತ್ರವು ತುಂಬಿದೆ.
ನನ್ನ ಆತ್ಮಕ್ಕೆ ನೀವು ಪರಮಾತ್ಮನೆಂದು ಹೇಳುತ್ತೀರಿ. ನನ್ನಲ್ಲಿಯೂ ಪಾತ್ರವು ತುಂಬಿದೆ ಎಂದು ಪರಮಪಿತ ಪರಮಾತ್ಮ ಸ್ವಯಂ ಹೇಳುತ್ತಾರೆ. ಭಕ್ತರನ್ನು ಸಂಭಾಲನೆ ಮಾಡುವುದು,
ಎಲ್ಲರಿಗೂ ಸುಖವನ್ನು ಕೊಡುವುದಾಗಿದೆ. ದುಃಖವನ್ನು ಮಾಯೆಯು ಕೊಡುತ್ತದೆ.
ಭಕ್ತರಿಗೆ ಅಲ್ಪಕಾಲಕ್ಕೋಸ್ಕರ ಸುಖ ಕೊಡುವುದು ನನ್ನ ಪಾತ್ರವಾಗಿದೆ.
ನಾನೇ ಸಾಕ್ಷಾತ್ಕಾರ ಮಾಡಿಸುತ್ತೇನೆ ಮತ್ತು ದಿವ್ಯಬುದ್ಧಿಯನ್ನು ಕೊಡುತ್ತೇನೆ.
ಅದಕ್ಕೆ ಜ್ಞಾನದ ಮೂರನೆಯ ನೇತ್ರವೆಂದು ಹೇಳಲಾಗುತ್ತದೆ. ಅದರಿಂದ ನಿಮ್ಮ ಬುದ್ಧಿಯ ಗಾಡ್ರೇಜ್ ಬೀಗ ತೆರೆಯಲ್ಪಡುತ್ತದೆ. ನನ್ನ ಪಾತ್ರ ಯಾರು ತಂದೆಯ ಜೊತೆಗಿದ್ದಾರೋ ಅವರಿಗೆ ಜ್ಞಾನದ ಮಳೆಯನ್ನು ಸುರಿಸುವುದಾಗಿದೆ. ಈಗ ಇಷ್ಟೆಲ್ಲಾ ಮಕ್ಕಳನ್ನು ಹೇಗೆ ಜೊತೆಯಲ್ಲಿ ಇಟ್ಟುಕೊಳ್ಳುವುದು? ನೀವೆಲ್ಲರೂ ತಂದೆಯನ್ನು ನೆನಪು ಮಾಡುವುದೇ ತಂದೆಯ ಜೊತೆಯಲ್ಲಿ ಇರುವುದಾಗಿದೆ. ಕೆಲವರು ಲಂಡನ್, ಕೆಲವರು ಬೇರೆ ಕಡೆ,
ಆದರೂ ಎಲ್ಲಿ ಜೊತೆಯಿದ್ದಾರೆ? ಅವರಿಗೂ ಮುರುಳಿ ಹೋಗುತ್ತದೆ.
ಯಾರು ಬುದ್ಧಿವಂತರಾಗಿರುತ್ತರೋ ಅವರು ಒಂದು ವಾರದಲ್ಲಿಯೇ ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಅಂತಹವರಿಗೆ ತಂದೆಯು ಸ್ವದರ್ಶನಚಕ್ರಧಾರಿಯನ್ನಾಗಿ ಮಾಡುತ್ತಾರೆ.
84 ಜನ್ಮಗಳ ರಹಸ್ಯವನ್ನು ಈಗ ನೀವು ಮಕ್ಕಳಿಗೆ ತಿಳಿಸಿಕೊಡಲಾಗಿದೆ. ಯಾವ ಸ್ವದರ್ಶನ ಚಕ್ರವನ್ನು ತಿರುಗಿಸುವುದರಿಂದ ಮಾಯಾ ರಾವಣ ತಲೆಯನ್ನು ಕತ್ತರಿಸುತ್ತಾರೆ ಅರ್ಥಾತ್ ಅವರ ಮೇಲೆ ವಿಜಯವನ್ನು ಪಡೆಯುತ್ತಾರೆ. ಬಾಕಿ ತಲೆಯನ್ನು ಕತ್ತರಿಸುವ ಮಾತಿಲ್ಲ ಆದರೆ ಅಲ್ಲಿ ಹಿಂಸಕವಾದ ಅಸ್ತ್ರ, ಶಸ್ತ್ರಗಳನ್ನು ತೋರಿಸಿದ್ದಾರೆ. ವಾಸ್ತವದಲ್ಲಿ ನಿಮ್ಮ ಮುಖವೇ ಶಂಖುವಾಗಿದೆ. ಚಕ್ರವನ್ನು ತಿರುಗಿಸುವುದು ಬುದ್ಧಿಯ ಕೆಲಸವಾಗಿದೆ. ಅಂದಾಗ ಈ ಅಲಂಕಾರವನ್ನು ಭಕ್ತಿಮಾರ್ಗದಲ್ಲಿ ಬಹಳಷ್ಟು ಕೊಟ್ಟಿದ್ದಾರೆ. ಶಾಸ್ತ್ರ ಮುಂತಾದವು ಯಾವುದೆಲ್ಲಾ ಭಕ್ತಿಮಾರ್ಗದಲ್ಲಿ ನಡೆಯುತ್ತಿದೆಯೋ ಡ್ರಾಮಾನುಸಾರ ಪುನಃ ನಡೆಯುತ್ತದೆ. ಸತ್ಯವಾದ ಗೀತೆಯು ಯಾರಾದರೂ ಕೈಯಲ್ಲಿ ಬಂದರೆ ಅದರಲ್ಲೂ ಸಹ ಬರೆಯುತ್ತಾರೆ ಬಾಕಿ ಎಲ್ಲವೂ ಸಹ ಹಿಂದಿನದ್ದೇ ಬರುತ್ತದೆ.
ಕೆಲವೊಂದು ಅಕ್ಷರಗಳು ಇಲ್ಲಿಯದ್ದೇ ಬರುತ್ತದೆ.
ಭಗವಾನುವಾಚ ಸರಿಯಾಗಿದೆ.
ರಾಜಯೋಗವೂ ಸರಿಯಾಗಿದೆ.
ಈಗ ಹಿಂತಿರುಗಿ ಹೋಗಬೇಕೆಂದು ತಂದೆಯು ಹೇಳುತ್ತಾರೆ. ಈ ಶರೀರ ಸಹಿತ ಎಲ್ಲವನ್ನು ಮರೆಯಬೇಕು,
ಇದಕ್ಕೆ ಬದಲಾಗಿ ನಿಮಗೆ ಪವಿತ್ರವಾದ ಶರೀರವು ಸಿಗುತ್ತದೆ.
ಆತ್ಮವೂ ಸಹ ಪವಿತ್ರವಾಗುತ್ತದೆ. ಧನವೂ ಸಹ ನಿಮ್ಮ ಬಳಿ ಬಹಳಷ್ಟಿರುತ್ತದೆ. ಅದರಿಂದ ನಿಮಗೆ ಬಹಳ ಲಾಭವಾಗುತ್ತದೆ,
ಆಗ ಅದಕ್ಕೆ ಶುದ್ಧವೆಂದು ಹೇಳಲಾಗುತ್ತದೆ.
ಇದರಿಂದ ಇಡೀ ಭಾರತವು ಶುದ್ಧವಾಗುತ್ತದೆ. ಭಾರತವಾಸಿಗಳು ರಾಮರಾಜ್ಯ,
ಒಂದೇ ಸರ್ಕಾರ,
ಒಂದೇ ಭಾಷೆ,
ಒಂದೇ ಮತ,
ಅದ್ವೈತ ಮತವಿರಲಿ ಎಂದು ಇಷ್ಟಪಡುತ್ತಾರೆ. ಅದ್ವೈತದ ಅರ್ಥ ದೇವತೆಯಾಗುವುದಾಗಿದೆ. ಇದು ಅಸುರೀ ಮತವಾಗಿದೆ.
ಶ್ರೀಮತವನ್ನು ಬಿಟ್ಟರೆ ಬೇರೆಲ್ಲಾ ಅಸುರೀ ಮತವಾಗಿದೆ. ಆ ಕಾರಣದಿಂದ ಪರಸ್ಪರದಲ್ಲಿ ಯುದ್ಧ, ಜಗಳಗಳನ್ನು ಮಾಡುತ್ತಿರುತ್ತಾರೆ. ಈಶ್ವರನ ಮಕ್ಕಳಾಗದಿರುವ ಕಾರಣ ಅನಾಥರಾಗಿರುತ್ತಾರೆ. ಸತ್ಯಯುಗದಲ್ಲಿ ದೇವತೆಗಳು ಶ್ರೀಮಂತರಾಗಿರುತ್ತಾರೆ, ಅಲ್ಲಿ ಎಂದೂ ಪ್ರಾಣಿಗಳು ಜಗಳವಾಡುವುದಿಲ್ಲ. ಆದರೆ ಇಲ್ಲಿ ಎಲ್ಲವೂ ಯುದ್ಧ,
ಜಗಳವನ್ನು ಮಾಡುತ್ತಿರುತ್ತದೆ. ಸತ್ಯಯುಗದಲ್ಲಿ ಎಲ್ಲರಿಗೂ ಬೇಹದ್ದಿನ ಸುಖವಿರುತ್ತದೆ.
ನಾವು ತಂದೆಯಿಂದ ಈಶ್ವರೀಯ ಜನ್ಮಸಿದ್ಧ ಅಧಿಕಾರವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಈಶ್ವರ ಸಮ್ಮುಖದಲ್ಲಿದ್ದಾರೆ - ನಾನು ಕಲ್ಪ-ಕಲ್ಪದಲ್ಲಿ ಸ್ವರ್ಗವನ್ನು ಸ್ಥಾಪನೆ ಮಾಡಲು ಬರುತ್ತೇನೆಂದು ಹೇಳುತ್ತಾರೆ. ನೀವು ಮಕ್ಕಳಿಗೋಸ್ಕರ ಅದ್ಭುತವಾದ ಉಡುಗೊರೆಯನ್ನು ತಂದಿದ್ದೇನೆ.
ನನ್ನ ಮುದ್ದಾದ ಅಗಲಿ ಸಿಕ್ಕಿದ ಮಕ್ಕಳೇ 5000 ವರ್ಷದ ನಂತರ ಬಂದು ಮಿಲನ ಮಾಡುತ್ತೀರಿ ಎಂದು ತಂದೆಯು ಹೇಳುತ್ತಾರೆ. ಈ ರೀತಿ ಬೇರೆ ಯಾರೂ ಸಹ ಹೇಳಲು ಸಾಧ್ಯವಿಲ್ಲ.
ಭಲೆ ತಮ್ಮನ್ನು ಬ್ರಹ್ಮ, ವಿಷ್ಣು,
ಶಂಕರ ಎಂದು ಹೇಳಿಸಿಕೊಳ್ಳುತ್ತಾರೆ ಆದರೆ ಈ ವಿಚಾರಗಳನ್ನು ಯಾರಿಗೂ ಹೇಳಲು ಬರುವುದಿಲ್ಲ. ಈ ರೀತಿಯಾಗಿ ಕಾಪಿ ಮಾಡಲು ಯಾರಿಗೂ ಸಾಧ್ಯವಿಲ್ಲ. ನನ್ನ ಮುದ್ದಾದ ಅಗಲಿ ಸಿಕ್ಕಿದ ಮಕ್ಕಳೇ,
5000 ವರ್ಷದ ನಂತರ ಪುನಃ ಬಂದು ನೀವು ಮಿಲನ ಮಾಡುತ್ತೀರಿ ಎಂದು ತಂದೆಯು ಹೇಳುತ್ತಾರೆ.
ಕೇವಲ ನೀವು ಮಾತ್ರವಲ್ಲ, ಬಹಳ ಮಕ್ಕಳು ಮಿಲನ ಮಾಡುತ್ತಿದ್ದಾರೆ. ರಾಜಧಾನಿ ಸ್ಥಾಪನೆ ಮಾಡುವುದರಲ್ಲಿ ಬಹಳ ಪರಿಶ್ರಮವಿದೆ.
ರಾಜ-ರಾಣಿ ಒಬ್ಬರಾಗಿದ್ದಾರೆ. ಅವರ ಮಕ್ಕಳು ವೃದ್ಧಿಯನ್ನು ಪಡೆದುಕೊಳ್ಳುತ್ತಾರೆ. ಭಾರತದಲ್ಲಿ ರಾಜಕುಮಾರ-ರಾಜಕುಮಾರಿಯರು ಎಷ್ಟೊಂದು ಜನರಿದ್ದರು.
2 ಲಕ್ಷವಿದ್ದರು, ಪ್ರಜೆಗಳು
40-50 ಕೋಟಿ ಎಂದು ತಿಳಿದುಕೊಳ್ಳಿ ಅಂದಾಗ ಗುರಿಯು ಬಹಳ ದೊಡ್ಡದಾಗಿದೆ. ಇದು ತಂದೆಯ ವಿಶ್ವವಿದ್ಯಾಲಯವಾಗಿದೆ ಆದ್ದರಿಂದ ಎಷ್ಟೊಂದು ಚೆನ್ನಾಗಿ ಪುರುಷಾರ್ಥವನ್ನು ಮಾಡಬೇಕು. ರಾಜರಿಗಿಂತ ರಾಜರಾಗಿ ಅಥವಾ ಪ್ರಜೆಗಳಾದರೂ ಆಗಿ ಎಂದು ತಂದೆಯು ಹೇಳುತ್ತಾರೆ. ಆದರೆ ಯಾರು ಕಲ್ಪದ ಮೊದಲು ಆಗಿದ್ದರೋ ಅವರೇ ಆಗುತ್ತಾರೆ.
ನಾವು ಸಾಕ್ಷಿಯಾಗಿದ್ದು ಯಾರು ಯಾವ ಪ್ರಕಾರದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆಂದು ನೋಡಬೇಕು.
ಕೆಲವರು ಒಂದೇ ಸಲ ಹಿಡಿದುಕೊಳ್ಳುತ್ತಾರೆ. ಅತೀ ವಿಧೇಯ ತಂದೆಯಾಗಿದ್ದಾರೆ. ಹೇಗೆ ಅಯಸ್ಕಾಂತದ ಬಳಿ ಸೂಜಿ ಆಕರ್ಷಿತವಾಗುತ್ತದೆ. ಕೆಲವು ಸೂಜಿಗಳಲ್ಲಿ ಬಹಳ ತುಕ್ಕು ಹಿಡಿದಿರುತ್ತದೆ. ಕೆಲವು ಕಡಿಮೆ ತುಕ್ಕು ಹಿಡಿದಿರುತ್ತದೆ. ಸಮೀಪದಲ್ಲಿ ಇರುವಂತಹವರು ಒಂದೇ ಸಲ ಬಂದು ಮಿಲನ ಮಾಡುತ್ತಾರೆ,
ಸ್ವಚ್ಛವಾದ ಸೂಜಿಯು ತಕ್ಷಣ ಆಕರ್ಷಿತವಾಗುತ್ತದೆ. ತಂದೆಯು ತುಕ್ಕನ್ನು ಬಿಡಿಸಿ ನೀವು ಮಕ್ಕಳನ್ನು ತನ್ನ ಜೊತೆಯಲ್ಲಿ ಇಟ್ಟುಕೊಳ್ಳುವ ರೀತಿ ಹೊಳಪಾಗಿ ಮಾಡುತ್ತಾರೆ. ನೀವು ರುದ್ರಮಾಲೆಯ ಮಣಿಗಳಾಗಬೇಕು.
ಗಾಯನವಿದೆ ಆದರೆ ಈ ಮಾಲೆಯು ಯಾರದ್ದಾಗಿದೆ ಎಂದು ಯಾರಿಗೂ ಸಹ ತಿಳಿದಿಲ್ಲ. ನನ್ನ ಮಾಲೆಯಲ್ಲಿ ಯಾರು ಇರುತ್ತಾರೋ ಅವರು ಸ್ವರ್ಗದ ಮಾಲೀಕರಾಗುತ್ತಾರೆಂದು ತಂದೆಯು ತಿಳಿಸುತ್ತಾರೆ.
ಭಕ್ತರ ಮಾಲೆಯನ್ನು ನೀವು ತಿಳಿದುಕೊಂಡಿದ್ದೀರಿ ಅದು ರಾವಣನ ಮಾಲೆಯಾಗಿದೆ. ಮೊದಲು ರಾವಣನ ಮಾಲೆಯಲ್ಲಿ ಯಾರು ಬರುತ್ತಾರೆ,
ಪೂಜ್ಯರಿಂದ ಪೂಜಾರಿ ಯಾರಾಗುತ್ತಾರೆ? ತಾವೇ ಮೊದಲು ಪೂಜ್ಯರು ನಂತರ ಪೂಜಾರಿಗಳಾಗುತ್ತೀರಿ. ಇದು ಎಷ್ಟೊಂದು ತಿಳಿದುಕೊಳ್ಳುವ ಮಾತಾಗಿದೆ.
ನೀವು ಮಹಾದಾನಿಗಳಾಗಿದ್ದೀರಿ. ದೇಹಸಹಿತ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಬೇಕು. ಸನ್ಯಾಸಿಗಳು ಮಹಾದಾನಿಗಳೆಂದು ಹೇಳಲಾಗುವುದಿಲ್ಲ ಏಕೆಂದರೆ ಅವರು ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ನೀವು ಎಲ್ಲವನ್ನೂ ಈಶ್ವರನಿಗೆ ಅರ್ಪಣೆ ಮಾಡುತ್ತೀರಿ.
ಪ್ರತಿಯೊಂದು ವಸ್ತುವೂ ಸಹ ಭಗವಂತನದ್ದೇ ಅಂದಾಗ ನನ್ನದೆಲ್ಲವೂ ನೀವು ಮಕ್ಕಳಿಗೋಸ್ಕರವಾಗಿದೆ ಎಂದು ತಂದೆಯು ಹೇಳುತ್ತಾರೆ. ಮನುಷ್ಯರು ಸತ್ತಾಗ ಎಲ್ಲಾ ಸಾಮಗ್ರಿಗಳನ್ನು ಸ್ಮಶಾನವಾಸಿಗೆ ಕೊಡುತ್ತಾರೆ ಆದರೆ ನಾನೂ ಸ್ಮಶಾನವಾಸಿಯಾಗಿದ್ದೇನೆಂದು ತಂದೆಯು ಹೇಳುತ್ತಾರೆ. ನಿಮ್ಮ ಬಳಿಯಿರುವ ಹಳೆಯ ಕೆಟ್ಟತನವನ್ನು ದಾನ ಮಾಡಿ. ತಂದೆಯ ಮೇಲೆ ಬಲಿಹಾರಿಗಳಾಗುತ್ತೀರಿ. ಕೆಲಸವಂತೂ ನಿಮ್ಮದಾಗಿದೆ,
ತಂದೆಯು ಮನೆ ಇತ್ಯಾದಿಗಳನ್ನು ತನಗೋಸ್ಕರ ಕಟ್ಟಿಸಿಕೊಳ್ಳುವುದಿಲ್ಲ ಏಕೆಂದರೆ ಶಿವತಂದೆಯು ದಾತನಾಗಿದ್ದಾರೆ. ಇಡೀ ಸ್ವರ್ಗದ ರಾಜಧಾನಿಯನ್ನು ನಿಮಗೆ ಕೊಡುತ್ತಿದ್ದಾರೆ ಆದ್ದರಿಂದ ನಿಮಗೆ ವ್ಯಾಪಾರಸ್ಥನೆಂದು ಹೇಳಲಾಗುತ್ತದೆ. ಇದು ಎಷ್ಟೊಂದು ಮಧುರಾತಿ ಮಧುರ ಮಾತಾಗಿದೆ.
ಪರೀಕ್ಷೆಯು ಪೂರ್ಣವಾಗುವಂತಿದೆ. ತಂದೆಗೆ ಕೊನೆಗೆ ಪರೀಕ್ಷೆ ಯಾವಾಗ ಪೂರ್ಣವಾಗುತ್ತದೆಯೆಂದು ಮಕ್ಕಳು ಕೇಳುತ್ತಾರೆ. ಯಾವಾಗ ನೀವು ಸಾಯುತ್ತೀರೋ,
ಜ್ಞಾನಪೂರ್ಣವಾಗುತ್ತದೆಯೋ ಆಗ ಈ ವಿನಾಶ ಪ್ರಾರಂಭವಾಗುತ್ತದೆ ಎಂದು ತಂದೆಯು ಹೇಳುತ್ತಾರೆ ನಂತರ ನಿಮ್ಮ ಬಾಯಿಯಲ್ಲಿ ಚಿನ್ನದ ಚಮಚವಿರುತ್ತದೆ. ನಂತರ ಜನ್ಮವನ್ನು ತೆಗೆದುಕೊಳ್ಳುತ್ತೀರಿ ಮತ್ತು ಚಿನ್ನದ ಚಮಚ ಸಿಗುತ್ತದೆ.
ಇಲ್ಲಿ 30-40 ವರ್ಷ ವಿದ್ಯೆಯನ್ನು ಓದುತ್ತಾರೆ.
ಆದರೆ ಅದರ ಫಲವು ಇಲ್ಲಿಯೇ ಸಿಗುತ್ತದೆ. ನಿಮ್ಮದು ಭವಿಷ್ಯಕ್ಕೋಸ್ಕರವಾಗಿದೆ. ಭವಿಷ್ಯದ ಜನ್ಮವು ನಿಮಗೆ ಸಿಕ್ಕಿದಾಗ ನೀವು ರಾಜಕುಮಾರರಾಗುತ್ತೀರಿ ಅಂದಾಗ ಯಾವಾಗ ವಿನಾಶ ಪ್ರಾರಂಭವಾಗುತ್ತದೆಯೋ ಆಗ ಪರೀಕ್ಷೆಯು ಪೂರ್ಣವಾಗುತ್ತದೆ. ಒಂದುಕಡೆ ವಿದ್ಯೆಯು ಪೂರ್ಣವಾಗುತ್ತದೆ ಮತ್ತೊಂದು ಕಡೆ ವಿನಾಶ ಪ್ರಾರಂಭವಾಗುತ್ತದೆ ಬಾಕಿ ರಿಹರ್ಸಲ್ ಆಗುತ್ತಿರುತ್ತದೆ. ನೀವು ಈ ರೀತಿಯ ಫಲವನ್ನು ಹೊಸ ಪ್ರಪಂಚದಲ್ಲಿ ತೆಗೆದುಕೊಳ್ಳುತ್ತೀರಿ. ಅಲ್ಲಿ ಆತ್ಮ, ಶರೀರ,
ರಾಜ್ಯಭಾಗ್ಯ ಎಲ್ಲವೂ ಹೊಸದಿರುತ್ತದೆ. ಇದು ಬಹಳ ಗುಹ್ಯವಾದ,
ಧಾರಣೆ ಮಾಡಿಕೊಳ್ಳುವ ಮಾತಾಗಿದೆ. ವಿದ್ಯೆ ಓದುವುದನ್ನು ಎಂದೂ ಸಹ ಮರೆಯಬಾರದು.
ಅದ್ಭುತವಾದ ಮಾತನ್ನು ತಂದೆಯೇ ತಿಳಿಸಿಕೊಡುತ್ತಾರೆ. ನಿಧಾನವಾಗಿ ಬರುವಂತಹವರು ತಕ್ಷಣ ಯೋಗ ಮತ್ತು ಜ್ಞಾನದಲ್ಲಿ ತೊಡಗುತ್ತಾರೆ. ಆಗ ಅವರು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಶರೀರ ಮತ್ತು ಆತ್ಮ, ಎರಡನ್ನೂ ಪವಿತ್ರವನ್ನಾಗಿ ಮಾಡಿಕೊಳ್ಳುವುದಕ್ಕೋಸ್ಕರ ಈ ಹಳೆಯ ಶರೀರ ಸಹಿತ ಎಲ್ಲವನ್ನೂ ಮರೆಯಬೇಕಾಗಿದೆ. ದೇಹ ಸಹಿತ ತಂದೆಯ ಮೇಲೆ ಪೂರ್ಣ ಬಲಿಹಾರಿಗಳಾಗಿ ಮಹಾದಾನಿಗಳಾಗಬೇಕಾಗಿದೆ.
2.
ತಂದೆಯ ಶ್ರೀಮತದಂತೆ ನಡೆದು ಬೇಹದ್ದಿನ ಸುಖವನ್ನು ತೆಗೆದುಕೊಳ್ಳಬೇಕಾಗಿದೆ. ಈ ಶುದ್ಧ ಲೋಭವನ್ನಿಟ್ಟುಕೊಳ್ಳಿಬೇಕಾಗಿದೆ, ಇದರಿಂದ ಇಡೀ ವಿಶ್ವವು ಸುಖಿಯಾಗುತ್ತದೆ ಬಾಕಿ ಅಶುದ್ಧ ಲೋಭವನ್ನು ತ್ಯಾಗ ಮಾಡಬೇಕಾಗಿದೆ.
ವರದಾನ:
ಅಮೃತವೇಳೆಯ ಮಹತ್ವವನ್ನು
ತಿಳಿದು ಮಹಾನರಾಗುವಂತಹ
ವಿಶೇಷ ಸೇವಾಧಾರಿ
ಭವ.
ಸೇವಾಧಾರಿ ಅರ್ಥಾತ್ ಕಣ್ಣು ತೆರೆಯಿತು ಮತ್ತು ಸದಾ ತಂದೆಯ ಜೊತೆ, ತಂದೆಯ ಸಮಾನ ಸ್ಥಿತಿಯ ಅನುಭವ ಮಾಡಿದಿರಿ. ವಿಶೇಷ ವರದಾನದ ಸಮಯವನ್ನು ಯಾರು ತಿಳಿದಿರುತ್ತಾರೆ ಮತ್ತು ವರದಾನಗಳನ್ನು
ಅನುಭವ ಮಾಡುತ್ತಾರೆಯೋ,
ಅವರೇ ವಿಶೇಷ ಸೇವಾಧಾರಿ ಆಗಿದ್ದಾರೆ. ಒಂದುವೇಳೆ ಇದರ ಅನುಭವವಿಲ್ಲವೆಂದರೆ ಸಾಧಾರಣ ಸೇವಾಧಾರಿಯಾದರು, ವಿಶೇಷವಲ್ಲ. ಯಾರಿಗೆ ಅಮೃತವೇಳೆಯ, ಸಂಕಲ್ಪದ, ಸಮಯದ ಮತ್ತು ಸೇವೆಯ ಮಹತ್ವವಿದೆ, ಹೀಗೆ ಸರ್ವ ಮಹತ್ವಗಳನ್ನು
ತಿಳಿದುಕೊಳ್ಳುವವರು ಮಹಾನರಾಗುತ್ತಾರೆ
ಮತ್ತು ಅನ್ಯರಿಗೂ ಸಹ ಮಹತ್ವವನ್ನು ತಿಳಿಸುತ್ತಾ ಮಹಾನರನ್ನಾಗಿ ಮಾಡುತ್ತಾರೆ.
ಸ್ಲೋಗನ್:
ಜೀವನದ ಮಹಾನತೆಯು ಸತ್ಯತೆಯ ಶಕ್ತಿಯಾಗಿದೆ, ಅದರಿಂದ ಸರ್ವ ಆತ್ಮರೂ ಸ್ವತಹವಾಗಿ ಬಾಗುತ್ತಾರೆ.


0 Comments