Header Ads Widget

Header Ads

KANNADA MURLI (25.04.22)

 Hindi/Tamil/English/Telugu/Kannada/Malayalam

25/04/22  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ

Listen to the Murli audio file



 

ಮಧುರ ಮಕ್ಕಳೇ ಯಾವ ಹಳೆಯ ದೇಹ ಹಾಗೂ ದೇಹದ ಸಂಬಂಧಿಗಳು ಪರಸ್ಪರ ದುಃಖ ಕೊಡುವಂತದ್ದಾಗಿದೆ, ಅವರೆಲ್ಲರನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ ಹಾಗೂ ಶ್ರೀಮತದಂತೆ ನಡೆಯಿರಿ

ಪ್ರಶ್ನೆ:

ತಂದೆಯ ಜೊತೆ-ಜೊತೆಯಲ್ಲಿ ಮನೆಗೆ ಹಿಂತಿರುಗುವುದಕ್ಕಾಗಿ ತಂದೆಯ ಯಾವ ಶ್ರೀಮತವನ್ನು ಪಾಲನೆ ಮಾಡಬೇಕಾಗಿದೆ?

ಉತ್ತರ:

ತಂದೆಯ ಶ್ರೀಮತವಾಗಿದೆ - ಮಕ್ಕಳೇ ಪವಿತ್ರರಾಗಿ, ಸಂಪೂರ್ಣ ಜ್ಞಾನ ಧಾರಣೆ ಮಾಡಿ ತಮ್ಮ ಕರ್ಮಾತೀತ ಸ್ಥಿತಿಯನ್ನು ಮಾಡಿಕೊಂಡಾಗ ತಂದೆಯ ಜೊತೆ-ಜೊತೆಯಲ್ಲಿ ಮನೆಗೆ ಹಿಂತಿರುಗಬಹುದು. ಕರ್ಮಾತೀತರಾಗುವುದಿಲ್ಲ ಎಂದರೆ ಮಧ್ಯದಲ್ಲಿಯೇ ನಿಂತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಅಂತಿಮ ಸಮಯದಲ್ಲಿ ಕೆಲವು ಆತ್ಮರು ಶರೀರವನ್ನು ಬಿಟ್ಟು ಅಲೆದಾಡುತ್ತಿರುತ್ತಾರೆ. ತಂದೆಯ ಜೊತೆಯಲ್ಲಿ ಹೋಗುವುದಕ್ಕೆ ಬದಲಾಗಿ ಇಲ್ಲಿಯೇ ಶಿಕ್ಷೆಗೆ ಗುರಿಯಾಗಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡುತ್ತಾರೆ ಆದ್ದರಿಂದ ತಂದೆಯ ಶ್ರೀಮತವಾಗಿದೆ - ಮಕ್ಕಳೇ, ತಲೆಯ ಮೇಲೆ ಯಾವ ಪಾಪದ ಹೊರೆಯಿದೆ, ಹಳೆಯ ಲೆಕ್ಕಾಚಾರವಿದೆ ಅದೆಲ್ಲವನ್ನು ಯೋಗಬಲದಿಂದ ಭಸ್ಮ ಮಾಡಿಕೊಳ್ಳಿ.

ಗೀತೆ:  ಓ ದೂರದ ಯಾತ್ರಿಕನೇ.......

ಓಂ ಶಾಂತಿ. ಈಗ ನಿಮ್ಮ ಬುದ್ಧಿಯಿಂದ ಸರ್ವವ್ಯಾಪಿಯ ಜ್ಞಾನವು ಸಮಾಪ್ತಿಯಾಗಿದೆ. ಪರಮಪಿತ ಪರಮಾತ್ಮ ಬಂದು ಬ್ರಹ್ಮನ ಮೂಲಕ ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಚೆನ್ನಾಗಿ ತಿಳಿಸಿಕೊಡಲಾಗುವುದು. ಅವರು ರಚಯಿತನಾಗಿದ್ದಾರೆ, ಅವರನ್ನು ಪರಮಾತ್ಮನೆಂದು ಕರೆಯಲಾಗುವುದು. ಬಂದು ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ ಹಾಗೂ ಮಾಯೆಯಿಂದ ಬಿಡುಗಡೆ ಮಾಡುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ಹಳೆಯ ದೇಹ, ದೇಹದ ಮಿತ್ರ-ಸಂಬಂಧಿ ಮೊದಲಾದವರು ಪರಸ್ಪರ ದುಃಖ ಕೊಡುವವರಾಗಿರುವ ಕಾರಣ ಅವರನ್ನು ಮರೆಯಬೇಕಾಗಿದೆ. ಯಾರೇ ವೃದ್ಧರಾಗುತ್ತಾರೆಂದರೆ ಅವರಿಗೆ ಮಿತ್ರ-ಸಂಬಂಧಿಕರು ಮುಂತಾದವರು ರಾಮನನ್ನು ಜಪಿಸಲು ತಿಳಿಸುತ್ತಾರೆ. ಈಗ ಅವರೂ ಸಹ ಸುಳ್ಳನ್ನೇ ಹೇಳುತ್ತಾರೆ ಏಕೆಂದರೆ ಹೇಳುವವರೇ ಪರಮಾತ್ಮನನ್ನು ತಿಳಿದುಕೊಂಡಿರುವುದಿಲ್ಲ ಹಾಗೂ ಅವರ ಬುದ್ದಿಯಲ್ಲಿ ಪರಮಾತ್ಮನ ನೆನಪೂ ಸಹ ಇರುವುದಿಲ್ಲ. ಪರಮಾತ್ಮನನ್ನು ಸರ್ವವ್ಯಾಪಿಯೆಂದು ತಿಳಿದುಕೊಂಡಿದ್ದಾರೆ. ಒಂದುಕಡೆ ಓ ದೂರದ ಯಾತ್ರಿಕನೇ... ಎಂದು ಕರೆಯುತ್ತಾರೆ. ಆತ್ಮಗಳು ದೂರದಿಂದ ಬಂದು ಈ ಶರೀರವನ್ನು ಧಾರಣೆ ಮಾಡಿ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಇದೆಲ್ಲವನ್ನು ಮನುಷ್ಯರಿಗೇ ತಿಳಿಸಲಾಗುತ್ತದೆ. ಮನುಷ್ಯರು ಪೂಜೆ ಮಾಡಲು ಶಿವನ ಮಂದಿರವನ್ನು ನಿರ್ಮಿಸುತ್ತಾರೆ. ನಂತರ ಭಗವಂತನನ್ನು ಅಲ್ಲಿ-ಇಲ್ಲಿ ಹುಡುಕುತ್ತಾ, ನಮ್ಮಲ್ಲೂ ನಿಮ್ಮಲ್ಲೂ ವ್ಯಾಪಕನಾಗಿದ್ದಾರೆಂದು ಹೇಳಿ ಬಿಡುತ್ತಾರೆ. ಈ ರೀತಿ ಮಾಲೀಕನನ್ನು ತಿಳಿಯದಿರುವವರನ್ನು ಅನಾಥರೆಂದು ಹೇಳಲಾಗುತ್ತದೆ. ಹೇ ಭಗವಂತ ಎಂದು ನೆನಪು ಮಾಡುತ್ತಾರೆ ಹಾಗು ಕೈ ಮುಗಿಯುತ್ತಾರೆ ಆದರೆ ಅವರನ್ನು ತಿಳಿದುಕೊಂಡಿಲ್ಲ. ಅವರು ನಿರಾಕಾರ ಆಗಿದ್ದಾರೆಂದು ಸಹ ತಿಳಿದುಕೊಂಡಿದ್ದಾರೆ. ಆದರೆ ಆತ್ಮನೂ ಸಹ ನಿರಾಕಾರನಾಗಿದೆ, ಇದು ಆತ್ಮನ ಶರೀರವಾಗಿದೆ ಆದರೆ ಆತ್ಮನನ್ನು ಯಾರೂ ತಿಳಿದುಕೊಂಡಿಲ್ಲ. ಭೃಕುಟಿಯ ಮಧ್ಯದಲ್ಲಿ ಅವಿನಾಶಿ ನಕ್ಷತ್ರವು ಹೊಳೆಯುತ್ತದೆ ಎಂದು ಹೇಳುತ್ತಾರೆ. ಒಂದುವೇಳೆ ನಕ್ಷತ್ರದಂತೆ ಇರುವುದಾದರೆ ಅಷ್ಟೊಂದು ದೊಡ್ಡ ಲಿಂಗವನ್ನು ಏಕೆ ಮಾಡುತ್ತಾರೆ! ಆತ್ಮನಲ್ಲಿಯೇ 84 ಜನ್ಮಗಳ ಪಾತ್ರವಿದೆ ಎನ್ನುವುದನ್ನೂ ಸಹ ತಿಳಿದುಕೊಂಡಿಲ್ಲ. ಎಲ್ಲಾ ಕಡೆ ಹುಡುಕಾಡುತ್ತಾ ದುಃಖಿಗಳಾಗುತ್ತಾರೆ. ಬದರೀನಾಥನೂ ಭಗವಂತ, ಕೃಷ್ಣನೂ ಭಗವಂತ, ಕಲ್ಲು-ಮುಳ್ಳಲ್ಲಿಯೂ ಭಗವಂತನಿದ್ದಾರೆಂದರೆ ಮತ್ತೆ ಎಷ್ಟೊಂದು ದೂರ ದೂರದವರೆಗೂ ಹುಡುಕಲು ಏಕೆ ಹೋಗುತ್ತಾರೆ! ಯಾರು ದೇವೀ-ದೇವತಾ ಧರ್ಮದವರಲ್ಲ ಅವರು ಬ್ರಾಹ್ಮಣರೂ ಆಗುವುದಿಲ್ಲ ಹಾಗೂ ಅವರಿಗೆ ಜ್ಞಾನದ ಧಾರಣೆಯೂ ಆಗುವುದಿಲ್ಲ. ಬಹಳ ಚೆನ್ನಾಗಿದೆ ಎಂದು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಯಾವಾಗ ನೀವು ಶ್ರೀಮತದಂತೆ ನಡೆದು ಪವಿತ್ರರಾಗಿ ಜ್ಞಾನ ಧಾರಣೆ ಮಾಡಿ, ಕರ್ಮಾತೀತ ಸ್ಥಿತಿಯನ್ನು ಮಾಡಿಕೊಳ್ಳುತ್ತೀರಿ ಆಗ ನೀವು ನನ್ನ ಜೊತೆ-ಜೊತೆಯಲ್ಲಿ ಮನೆಗೆ ತಲುಪುತ್ತೀರಿ. ಇಲ್ಲವೆಂದರೆ ಮಧ್ಯದಲ್ಲಿಯೇ ಉಳಿದು ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕೆಲವು ಆತ್ಮಗಳು ಸತ್ತ ನಂತರ ಶರೀರ ಸಿಗದೆ ಅಲೆದಾಡುತ್ತಾ ಶಿಕ್ಷೆಯನ್ನು ಅನುಭವಿಸುತ್ತಾರೆ. ಇಲ್ಲಿ ವಿನಾಶದ ಸಮಯವು ಬಹಳ ಕೆಟ್ಟದಾಗಿರುತ್ತದೆ. ಪಾಪದ ಹೊರೆ ತಲೆಯ ಮೇಲೆ ಬಹಳಷ್ಟಿದೆ, ಎಲ್ಲರೂ ತಮ್ಮ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಲೇಬೇಕು. ಕೆಲವು ಮಕ್ಕಳಂತು ಇದುವರೆಗೂ ಯೋಗವನ್ನು ತಿಳಿದುಕೊಂಡಿಲ್ಲ. ಒಂದು ನಿಮಿಷವೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ನಿಮ್ಮ ತಲೆಯ ಮೇಲೆ ಬಹಳ ಪಾಪದ ಹೊರೆಯಿರುವ ಕಾರಣ ನನ್ನನ್ನು ನೆನಪು ಮಾಡಿ ಎಂದು ಮತ್ತೆ-ಮತ್ತೆ ತಿಳಿಸುತ್ತಾರೆ. ಪರಮಾತ್ಮ ಸರ್ವವ್ಯಾಪಿಯೆಂದು ಮನುಷ್ಯರು ಹೇಳುತ್ತಾ ಭಗವಂತನಿಗಾಗಿ ತೀರ್ಥ ಯಾತ್ರೆ ಮೊದಲಾದ ಕಡೆ ಎಷ್ಟೊಂದು ಅಲೆದಾಡುತ್ತಾರೆ. ಈ ಕರ್ಮಕಾಂಡ (ತೀರ್ಥ ಯಾತ್ರೆ) ಮಾಡುವುದರಿಂದ ಪರಮಾತ್ಮನೊಂದಿಗೆ ಮಿಲನ ಮಾಡುವ ಮಾರ್ಗ ಸಿಗುವುದೆಂದು ತಿಳಿದುಕೊಂಡಿದ್ದಾರೆ ಆದರೆ ಪತಿತ ಭ್ರಷ್ಟಾಚಾರಿಗಳು ನನ್ನ ಬಳಿ ತಲುಪಲು ಸಾಧ್ಯವಿಲ್ಲವೆಂದು ತಂದೆಯು ತಿಳಿಸುತ್ತಾರೆ. ಇಂತಹವರು ಪಾರ ನಿರ್ವಾಣ ಗೈದರೆಂದು ಅಸತ್ಯ ಹೇಳುತ್ತಾ ಇರುತ್ತಾರೆ ಆದರೆ ಯಾರು ಆ ರೀತಿ ಹೋಗಲು ಸಾಧ್ಯವಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ದುಃಖವಿದೆ ಎಂದು ನೀವೀಗ ತಿಳಿದುಕೊಂಡಿದ್ದೀರಿ. ಈ ಎಲ್ಲಾ ಶಾಸ್ತ್ರಗಳನ್ನು ಓದುತ್ತಾ ಮನುಷ್ಯರು ಇನ್ನೂ ಕೆಳಗೆ ಇಳಿಯುವಂತಾಯಿತು. ತಂದೆ ಮೇಲೆರಿಸುತ್ತಾರೆ (ಶ್ರೇಷ್ಠ), ರಾವಣನು ಬೀಳಿಸುತ್ತಾನೆ. ಈಗ ನೀವು ನನ್ನ ಮತದಂತೆ ನಡೆದು ಪವಿತ್ರರಾಗಿ ಶ್ರದ್ದೆಯಿಂದ ಓದಿದಾಗ ಸ್ವರ್ಗದಲ್ಲಿ ಹೋಗುತ್ತೀರಿ. ಇಲ್ಲವೆಂದರೆ ಸ್ವರ್ಗದಲ್ಲಿ ಶ್ರೇಷ್ಠ ಪದವಿ ಪಡೆದುಕೊಳ್ಳಲು ಸಾಧ್ಯವಿಲ್ಲವೆಂದು ತಂದೆಯು ತಿಳಿಸುತ್ತಾರೆ. ಪ್ರದರ್ಶನಿ ಚಿತ್ರಗಳಿಂದ ಎಷ್ಟೊಂದು ಸೇವೆಯಾಗುತ್ತದೆ, ಸೇವೆಯು ಇನ್ನೂ ವೃದ್ಧಿಯಾಗುವುದು. ಹಳ್ಳಿ-ಹಳ್ಳಿಯಲ್ಲಿ ಪ್ರದರ್ಶನ ಮಾಡುವುದು ಸಹ ಹೊಸ-ಹೊಸ ಯೋಜನೆಗಳಾಗಿವೆ. ತಂದೆಯು ಹೊಸ-ಹೊಸ ಪಾಯಿಂಟ್ಸ್ ಹೇಳುತ್ತಿರುತ್ತಾರೆ. ಬದುಕಿರುವವರೆಗೆ ಕಲಿಯಬೇಕು. ನಿಮ್ಮ ಗುರಿ-ಉದ್ದೇಶ ಭವಿಷ್ಯಕ್ಕಾಗಿ ಇದೆ. ನೀವು ಈ ಶರೀರವನ್ನು ಬಿಟ್ಟ ಮೇಲೆ ರಾಜಕುಮಾರ-ರಾಜಕುಮಾರಿ ಆಗುತ್ತೀರಿ. ಸ್ವರ್ಗ ಸ್ವರ್ಗವೇ ಆಗಿರುತ್ತದೆ. ಅಲ್ಲಿ ನರಕದ ಹೆಸರು-ಚಿಹ್ನೆಯಿರುವುದಿಲ್ಲ. ಈ ಭೂಮಿಯೂ ಸಹ ಪ್ರಕೃತಿ ವಿಕೋಪ ಆಗುತ್ತಾ ಹೊಸ ಭೂಮಿಯಾಗುತ್ತದೆ. ಈ ಮನೆ ಮೊದಲಾದವುಗಳೆಲ್ಲಾ ಸಮಾಪ್ತಿಯಾಗಿ ಬಿಡುತ್ತವೆ. ಚಿನ್ನದ ದ್ವಾರಿಕಾ ಸಮುದ್ರದಡಿ ಮುಳುಗಿ ಹೋಯಿತೆಂದು ಹೇಳುತ್ತಾರೆ. ಆ ರೀತಿ ಯಾವುದೂ ಸಹ ಸಮುದ್ರದ ಕೆಳಗಡೆ ಹೋಗುವುದಿಲ್ಲ ಆದರೆ ಇದು ಚಕ್ರದ ಮಾತಾಗಿದೆ. ಈ ತೀರ್ಥ ಯಾತ್ರೆ ಮೊದಲಾದವುಗಳೆಲ್ಲಾ ಭಕ್ತಿಮಾರ್ಗದ ಸಾಧನಗಳಾಗಿವೆ. ಭಕ್ತಿ ಎಂದರೆ ರಾತ್ರಿಯಾಗಿದೆ, ಈಗ ಭಕ್ತಿ ಎಂಬ ರಾತ್ರಿ ಸಮಾಪ್ತಿಯಾಗಿ ಬ್ರಹ್ಮನ ಆಗಮನದಿಂದ ದಿನ ಆರಂಭವಾಗುತ್ತದೆ. ದ್ವಾಪರ, ಕಲಿಯುಗ ಬ್ರಹ್ಮನ ರಾತ್ರಿ ಹಾಗೂ ಸತ್ಯ-ತ್ರೇತಾ ಬ್ರಹ್ಮನ ಹಗಲಾಗಬೇಕಾಗುತ್ತದೆ. ನೀವೂ ಮಕ್ಕಳಲ್ಲಿಯೂ ಸಹ ನಂಬರ್ವಾರ್ ಇದ್ದೀರಿ ಆದ್ದರಿಂದ ಎಲ್ಲರೂ ಒಂದೇರೀತಿ ಅಧ್ಯಯನ ಮಾಡಲು ಸಾಧ್ಯವಿಲ್ಲ. ಭಿನ್ನ-ಭಿನ್ನ ದರ್ಜೆಗಳಿರುತ್ತವೆ. ಪ್ರದರ್ಶನಿಯಲ್ಲಿ ಪ್ರತಿನಿತ್ಯ 5-7 ಸಾವಿರ ಮಂದಿ ಬಂದು ತಿಳಿದುಕೊಳ್ಳುತ್ತಾರೆ ಆದರೆ ಕೋಟಿಯಲ್ಲಿ ಕೆಲವರು, ಕೆಲವರಲ್ಲಿ ಕೆಲವರು ಮಾತ್ರ ಬರುತ್ತಾರೆ. ಬಾಬಾ 3-4 ಜನ ತಿಳಿದುಕೊಂಡು ಪ್ರತಿನಿತ್ಯ ಬರುತ್ತಾರೆಂದು ತಂದೆಗೆ ಪತ್ರ ಬರೆಯುತ್ತಾರೆ. ಕೆಲವರು ಏಳುದಿನದ ಪಾಠವನ್ನು ಕೇಳಿದ ನಂತರ ಬರುವುದೇ ಇಲ್ಲ. ದೇವೀ-ದೇವತಾ ಧರ್ಮದವರು ಮಾತ್ರ ಉಳಿಯುತ್ತಾರೆ. ಸಾಧಾರಣ ಬಡವರೇ ಜ್ಞಾನವನ್ನು ಪಡೆಯುತ್ತಾರೆ. ಶ್ರೀಮಂತರು ಬಹಳ ಕಷ್ಟ ಪಟ್ಟು ಜ್ಞಾನದಲ್ಲಿ ಉಳಿಯುತ್ತಾರೆ. ತುಂಬಾ ಶ್ರಮ ಪಡಬೇಕಾಗುತ್ತದೆ. ತಂದೆಗೆ ರಕ್ತದಲ್ಲಿ ಬರೆದು ಕೊಟ್ಟೂ ಸಹ ನಡೆಯುತ್ತಾ-ನಡೆಯುತ್ತಾ ಮಾಯೆಗೆ ವಶರಾಗಿ ಬಿಡುತ್ತಾರೆ. ಯುದ್ಧ ನಡೆಯುವಾಗ ರಾವಣನು ವಿಜಯಿಯಾಗಿ ಬಿಡುತ್ತಾನೆ. ಯಾರು ಅಲ್ಪಸ್ವಲ್ಪ ಜ್ಞಾನ ಕೇಳುವರು ಅವರು ಪ್ರಜೆಯಲ್ಲಿ ಹೊರಟು ಹೋಗುವರು. ತಂದೆಯವರು ಶ್ರೀಮತದಂತೆ ನಡೆಯಲು ಸಲಹೆ ಕೊಡುತ್ತಾರೆ. ಹೇಗೆ ಮಮ್ಮಾ ಬಾಬಾ ಹಾಗೂ ಅನನ್ಯ ಮಕ್ಕಳಂತೆ ಪುರುಷಾರ್ಥ ಮಾಡುತ್ತಿದ್ದಾರೆ. ಮಹಾರಥಿಗಳ ಹೆಸರನ್ನು ಬಾಬಾ ಹೇಳುತ್ತಾರಲ್ಲವೇ! ಪಾಂಡವ ಸೈನ್ಯದಲ್ಲಿ ಯಾರು, ಯಾರು ಇದ್ದಾರೆಂದು ನಿಮಗೆ ತಿಳಿದಿದೆ, ಅದೇ ರೀತಿ ಕೌರವರಲ್ಲೂ ಸಹ ಮುಖ್ಯವಾಗಿರುವವರ ಹೆಸರು ಪ್ರಸಿದ್ಧವಾಗಿದೆ. ಯುರೋಪಿಯನ್ನರು ಯಾದವರ ಹೆಸರೂ ಇದೆ. ಸಮಾಚಾರ ಪತ್ರಿಕೆಗಳಲ್ಲಿಯೂ ಸಹ ಯಾರು ಪ್ರಸಿದ್ಧವಾಗಿರುತ್ತಾರೆ ಅವರ ಹೆಸರನ್ನೇ ಹಾಕುವರು. ಅವರೆಲ್ಲರ ಬುದ್ದಿಯು ಪರಮಪಿತ ಪರಮಾತ್ಮ ಜೊತೆ ವಿಪರೀತ ಬುದ್ದಿಯಿದೆ, ಪರಮಾತ್ಮನನ್ನು ತಿಳಿದುಕೊಂಡಾಗ ಪ್ರೀತಿ ಬುದ್ದಿಯವರಾಗಬಹುದು. ಇಲ್ಲಿಯೂ ಸಹ ಪ್ರೀತಿಯಿಲ್ಲದ ಕಾರಣ ಮತ್ತೆ-ಮತ್ತೆ ಮರೆತು ಪದವಿ ಭ್ರಷ್ಟರಾಗಿ ಬಿಡುತ್ತಾರೆ. ತಂದೆಯನ್ನು ನೆನಪು ಮಾಡುತ್ತೀರಿ ಅಷ್ಟು ವಿಕರ್ಮ ವಿನಾಶವಾಗುತ್ತದೆ ಮತ್ತು ಶ್ರೇಷ್ಠ ಪದವಿ ಪ್ರಾಪ್ತಿಯಾಗುತ್ತದೆ. ಅನ್ಯರನ್ನು ತಮ್ಮ ಸಮಾನ ಮಾಡಿಕೊಂಡು ದಯಾಹೃದಯಿಗಳಾಗಿ ಕುರುಡರಿಗೆ ಊರುಗೋಲಾಗಬೇಕು. ಕೆಲವರು ಕುರುಡರು, ಕೆಲವರು ಕಿವುಡರು, ಮೂಗರೂ ಇರುತ್ತಾರೆ. ಇಲ್ಲಿಯೂ ಸಹ ಮಕ್ಕಳು ನಂಬರ್ವಾರ್ ಇದ್ದಾರೆ. ಇಂತಹವರು ಸಾಧಾರಣ ಪ್ರಜೆಗಳಲ್ಲಿ ನೌಕರ, ಚಾಕರರಾಗಬೇಕಾಗುತ್ತದೆ. ಮುಂದೆ ಹೋದಂತೆ ನೀವು ಎಲ್ಲವನ್ನು ಸಾಕ್ಷಾತ್ಕಾರ ಮಾಡುತ್ತೀರಿ. ಈಶ್ವರನನ್ನು ಸರ್ವವ್ಯಾಪಿಯೆಂದು ಹೇಳುವುದೂ ಸಹ ಯಾವುದೇ ಜ್ಞಾನವಲ್ಲ. ಈಶ್ವರ ಜ್ಞಾನಸಾಗರನಾಗಿದ್ದಾರೆ, ಅವರೇ ಬಂದು ಜ್ಞಾನ ಕೊಟ್ಟು ರಾಜಯೋಗವನ್ನು ಕಲಿಸುತ್ತಿದ್ದಾರೆ. ಶ್ರೀಕೃಷ್ಣನು 84 ಜನ್ಮ ಪೂರ್ಣ ಮಾಡಿಕೊಂಡು ರಾಜಯೋಗವನ್ನು ಕಲಿಯುತ್ತಿದ್ದಾನೆ. ಇವೆಲ್ಲ ಎಷ್ಟೊಂದು ರಹಸ್ಯಯುಕ್ತ ಮಾತುಗಳಾಗಿವೆ. ಈ ಸಮಯದಲ್ಲಿ ಎಲ್ಲರೂ ತಂದೆಯನ್ನು ಮರೆತಿರುವ ಕಾರಣ ಮಹಾನ್ ದುಃಖಿಗಳಾಗಿದ್ದಾರೆ. ಈಗ ನೀವು ಎಷ್ಟೆಷ್ಟು ಪುರುಷಾರ್ಥ ಮಾಡುತ್ತೀರಿ, ಅಷ್ಟು ನಿಮ್ಮ ಬಲಹೀನತೆಗಳು ಸಮಾಪ್ತಿಯಾಗುತ್ತವೆ ಏಕೆಂದರೆ ಗುರಿಯು ಬಹಳ ಶ್ರೇಷ್ಠವಾಗಿದೆ. ಕೋಟಿಯಲ್ಲಿ ಮುಖ್ಯವಾಗಿರುವ 8 ಆತ್ಮರು ಮಾತ್ರ ಸಂಪೂರ್ಣರಾಗುತ್ತಾರೆ. ನಂತರ 108ರ ಮಾಲೆ, 16,108ರ ಮಾಲೆಯಾಗುತ್ತದೆ. ಬಾಬಾ ಮಕ್ಕಳ ತೀವ್ರ ಪುರುಷಾರ್ಥಕ್ಕಾಗಿ ಈ ರೀತಿ ಪ್ರೋತ್ಸಾಹ ಕೊಡುತ್ತಾರೆ. ವಾಸ್ತವದಲ್ಲಿ 16,000 ಇಲ್ಲವೇ ಇಲ್ಲ. 108ರ ಮಾಲೆ ಮಾತ್ರ ಇದೆ. ಮಾಲೆಯಲ್ಲಿ ಮೊದಲು ಹೂವು ನಂತರ ಜೋಡಿ ಮಣಿ, ನಂತರ ನಂಬರ್ವಾರ್ ವಿಷ್ಣು ಮಾಲೆ ಆಗುತ್ತದೆ. ಪುರುಷಾರ್ಥ ಮಾಡಿಸುವುದಕ್ಕಾಗಿ ಇದೆಲ್ಲಾ ವಿಸ್ತಾರವನ್ನು ತಿಳಿಸುತ್ತಾರೆ. ಮಮ್ಮಾ-ಬಾಬಾರವರನ್ನು ಅನುಕರಣೆ ಮಾಡಿ ಅವರಂತೆ ಸಿಂಹಾಸನಾಧಿಕಾರಿಗಳಾಗಬೇಕು. ಏಕೆ ಹೃದಯ ವಿಧೀರ್ಣ (ಹಾರ್ಟ್ಫೇಲ್) ರಾಗುತ್ತೀರಿ? ಒಂದುವೇಳೆ ಶಾಲೆಯಲ್ಲಿ ಯಾವುದಾದರೂ ಮಗು ನಾನು ಉತ್ತೀರ್ಣವಾಗುವುದಿಲ್ಲ ಎಂದು ಹೇಳಿದರೆ ಎಲ್ಲರೂ ಅವರನ್ನು ಮಂಧ ಬುದ್ದಿಯವರೆಂದು (ಡಲ್ಹೆಡ್) ಹೇಳುತ್ತಾರೆ. ಬುದ್ದಿವಂತ ಮಕ್ಕಳು ಬಹಳ ಚೆನ್ನಾಗಿ ಓದಿ ಉತ್ತಮ ಸ್ಥಾನವನ್ನು ಪಡೆಯುತ್ತಾರೆ. ನೀವು ಪ್ರದರ್ಶನಿಯಲ್ಲಿ ಬಹಳ ಉತ್ತಮ ಸೇವೆಯನ್ನು ಮಾಡಬಹುದು. ಬಾಬಾ ನಾನು ಸೇವೆ ಮಾಡಲು ಯೋಗ್ಯನಾಗಿದ್ದೇನೆಯೇ ಎಂದು ತಂದೆಯನ್ನು ಕೇಳಬಹುದು. ತಂದೆ ನೀವಿನ್ನು ಕಲಿಯಬೇಕು ಅಥವಾ ಯೋಗ್ಯವಾಗಬೇಕೆಂದು ತಿಳಿಸುತ್ತಾರೆ. ವಿದ್ವಾನ್ ಮೊದಲಾದವರ ಮುಂದೆ ತಿಳಿಸಿಕೊಡುವವರು ಬುದ್ದಿವಂತರಾಗಿರಬೇಕು. ಯಾರು ಸ್ವಲ್ಪ ಹಗುರವಾಗಿ ತಿಳಿಸಿಕೊಡುತ್ತಾರೆ, ಅವರನ್ನು ಹಳ್ಳಿಗಳಿಗೆ ಕಳುಹಿಸಬೇಕು. ಮೊಟ್ಟ ಮೊದಲು ಭಗವಂತ ಬಂದಿದ್ದಾರೆಂಬ ನಿಶ್ಚಯ ಮಾಡಿಸಬೇಕು. ದೂರ ದೇಶದಲ್ಲಿ ಇರುವವರೇ ಬನ್ನಿ, ಬಂದು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಏಕೆಂದರೆ ನಾವು ಬಹಳ ದುಃಖಿಗಳಾಗಿದ್ದೇವೆಂದು ಕರೆಯುತ್ತಾರೆ. ಸತ್ಯಯುಗದಲ್ಲಿ ಇಷ್ಟೊಂದು ಜನಸಂಖ್ಯೆ ಇರುವುದಿಲ್ಲ. ಎಲ್ಲಾ ಆತ್ಮರು ಮುಕ್ತಿಧಾಮದಲ್ಲಿರುತ್ತಾರೆ ಏಕೆಂದರೆ ಆ ಮುಕ್ತಿಗೋಸ್ಕರ ಇಡೀ ಪ್ರಪಂಚ ಇಷ್ಟೊಂದು ಭಕ್ತಿಯನ್ನು ಮಾಡುತ್ತಿದೆ. ನಾನು ಎಲ್ಲರಿಗೂ ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ ಕೊಟ್ಟು ಕರೆದುಕೊಂಡು ಹೋಗುತ್ತೇನೆಂದು ತಂದೆಯು ತಿಳಿಸುತ್ತಾರೆ. ತಂದೆಯ ಜೊತೆ ನಿಶ್ಚಯವಾದಾಗ ಜೀವನ್ಮುಕ್ತಿಯ ಪದವಿ ಸಿಗುತ್ತದೆ ಆದರೆ ಜೀವನ್ಮುಕ್ತಿಯಲ್ಲಿ ರಾಜಾ-ರಾಣಿಯಂತಹ ಪದವಿಯನ್ನು ಪಡೆಯಲು ಪುರುಷಾರ್ಥವನ್ನು ಮಾಡಬೇಕು. ಮಮ್ಮಾ-ಬಾಬಾ ಮಹಾರಾಜಾ -ಮಹಾರಾಣಯಾಗುತ್ತಾರೆಂದರೆ ನಾವೂ ಸಹ ಪುರುಷಾರ್ಥ ಮಾಡಿ ಅಂತಹ ಪದವಿಯನ್ನೇಕೆ ಪಡೆಯಬಾರದು? ಪುರುಷಾರ್ಥ ಮಾಡುವವರು ಎಂದಿಗೂ ಗುಪ್ತವಾಗಿರುವುದಿಲ್ಲ. ರಾಜಧಾನಿ ಸ್ಥಾಪನೆಯಾಗುತ್ತಿದೆ. ಯಾರು ದೇವೀ-ದೇವತಾ ಧರ್ಮದವರಿರುತ್ತಾರೆ ಅವರು ಅಗತ್ಯವಾಗಿ ಬರುತ್ತಾರೆ. ಮಮ್ಮಾ ಬಾಬಾ ರಾಜಾ-ರಾಣಯಾಗುತ್ತಾರೆಂದರೆ ನಾವೂ ಸಹ ಪುರುಷಾರ್ಥವನ್ನೇಕೆ ಮಾಡಬಾರದು!

ತಂದೆಗೆ ಮಕ್ಕಳು ಈ ರೀತಿ ಪತ್ರ ಬರೆಯುತ್ತಾರೆ - ಬಾಬಾ, ನಾನು ಒಮ್ಮೊಮ್ಮೆ ಸೇವಾಕೇಂದ್ರಕ್ಕೆ ಹೋಗುತ್ತೇನೆ. ಈಗ ನನ್ನ ಮಗಳ ವಿವಾಹ ಮಾಡಬೇಕಾಗಿರುವ ಕಾರಣ ಯಾರಾದರೂ ಜ್ಞಾನದಲ್ಲಿರುವ ಹುಡುಗನನ್ನು ಹುಡುಕಿ ಕೊಡಿ. ಕೆಲವು ಮಕ್ಕಳಿಗೆ ತಾನು ವಿವಾಹವಾಗುವ ಇಷ್ಟವಿಲ್ಲದ ಕಾರಣ ಬಹಳ ಪೆಟ್ಟು ತಿನ್ನುತ್ತಾರೆ. ಅಬಲೆಯರ ಮೇಲೆ ಹತ್ಯಾಚಾರಗಳಾಗುತ್ತದೆ. ಆಗ ತಂದೆಯು ಬರೆಯುತ್ತಾರೆ - ತಂದೆ, ತಾಯಿ ಹಾಗೂ ಮಕ್ಕಳು ಮೂವರು ತಂದೆಯ ಬಳಿ ಕರೆದುಕೊಂಡು ಬಂದರೆ ತಂದೆಯು ತಿಳಿಸುತ್ತಾರೆ. ಆಧರಣೀಯ ಪಿತಾಶ್ರಿ ಎಂದು ಬರೆಯುತ್ತೀರೆಂದರೆ ತಂದೆಯ ಬಳಿ ಬಂದು ಬಿಡಬೇಕು. ಒಂದುವೇಳೆ ಟಿಕೆಟ್ಗಾಗಿ ಹಣವಿಲ್ಲದಿದ್ದರೆ ತಂದೆಯಿಂದ ಪಡೆದುಕೊಳ್ಳಿ ಏಕೆಂದರೆ ತಂದೆಯ ಸಮ್ಮುಖದಲ್ಲಿ ಬರುವುದರಿಂದ ಶ್ರೀಮತ ಸಿಗುತ್ತದೆ. ಕುಮಾರಿ ಜೀವನವನ್ನು ಘಾತ ಮಾಡಬಾರದು ಏಕೆಂದರೆ ಇನ್ನೂ ಪಾಪಾತ್ಮರಾಗಿ ಬಿಡುವರು. ತಂದೆಯ ಶ್ರೀಮತದಂತೆ ನಡೆದು ಪವಿತ್ರರಾಗಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಜೀವನ್ಮುಕ್ತಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ಹೇಗೆ ತಾಯಿ-ತಂದೆ ಮಹಾರಾಜಾ-ಮಹಾರಾಣಿ ಆಗುತ್ತಾರೆ, ಅವರನ್ನು ಅನುಸರಿಸಿ ಸಿಂಹಾಸನಾಧಿಕಾರಿ ಆಗಬೇಕು. ಬುದ್ದಿವಂತರಾಗಿ ಚೆನ್ನಾಗಿ ಅಧ್ಯಯನ ಮಾಡಬೇಕು.

2. ತಂದೆಯ ಜೊತೆ ಸತ್ಯ ಪ್ರೀತಿಯನ್ನು ಇಡಬೇಕು. ದಯಾಹೃದಯಿಗಳಾಗಿ ಕುರಡರಿಗೆ ಮಾರ್ಗವನ್ನು ತೋರಿಸಬೇಕು. ತಂದೆಯ ಸಮ್ಮುಖದಲ್ಲಿ ಶ್ರೀಮತವನ್ನು ಪಡೆದು ಪಾಪಾತ್ಮನಾಗುವುದರಿಂದ ತಮ್ಮನ್ನು ತಾವು ರಕ್ಷಿಸಿಕೊಂಡು ಅನ್ಯರನ್ನು ರಕ್ಷಿಸಬೇಕು.

ವರದಾನ:

ಮಾಯೆ ಅಥವಾ ಪ್ರಕೃತಿಯ ಭಿನ್ನ-ಭಿನ್ನ ಕಾರ್ಟೂನ್ ಶೋ...ವನ್ನು ಸಾಕ್ಷಿಯಾಗಿ ನೋಡುವಂತಹ ಸಂತೋಷಿ ಆತ್ಮ ಭವ.
ಸಂಗಮಯುಗದಲ್ಲಿ ಬಾಪ್ದಾದಾರವರ ವಿಶೇಷ ಕೊಡುಗೆ ಸಂತುಷ್ಟತೆಯಾಗಿದೆ. ಸಂತೋಷಿ ಆತ್ಮನ ಮುಂದೆ ಅಲುಗಾಡಿಸುವಂತಹ ಅಥವಾ ಏರುಪೇರು ಮಾಡುವಂತಹ ಪರಿಸ್ಥಿತಿಯೇ ಇರಲಿ, ಅದು ಈ ರೀತಿ ಅನುಭವವಾಗುವುದು - ಹೇಗೆಂದರೆ ಕೀಲು ಗೊಂಬೆ ಆಟವೆಂಬಂತೆ. ವರ್ತಮಾನದಲ್ಲಿ ಇದೊಂದು ಫ್ಯಾಷನ್ ಆಗಿದೆ. ಅಂದಮೇಲೆ ಯಾವಾಗ ಯಾವುದೇ ಪರಿಸ್ಥಿತಿಯೇ ಬರಲಿ ಅದನ್ನೂ ಈ ರೀತಿ ತಿಳಿದುಕೊಳ್ಳಬೇಕು - ಬೇಹದ್ದಿನ ಪರದೆಯ ಮೇಲೆ ಕೀಲು ಗೊಂಬೆ ಆಟವು ನಡೆಯುತ್ತಿದೆ. ಇದೊಂದು ಮಾಯೆ ಅಥವಾ ಪ್ರಕೃತಿಯ ಆಟದ ಶೋ ಆಗಿದೆ, ಇದನ್ನು ಸಾಕ್ಷಿ ಸ್ಥಿತಿಯಲ್ಲಿ ಸ್ಥಿತರಾಗಿದ್ದು, ತಮ್ಮ ಗೌರವದ ಸ್ಥಾನದಲ್ಲಿರುತ್ತಾ, ಸಂತುಷ್ಠತೆಯ ಸ್ವರೂಪದಲ್ಲಿದ್ದು ನೋಡುತ್ತಿರಿ, ಆಗ ಸಂತೋಷಿ ಆತ್ಮವೆಂದು ಹೇಳಲಾಗುವುದು.

ಸ್ಲೋಗನ್:

ಯಾವುದೇ ಪ್ರಕಾರದ ಡಿಫೆಕ್ಟ್ (ಬಲಹೀನತೆ)ನಿಂದ ದೂರವಿರುವುದೇ ಪರ್ಫೆಕ್ಟ್ (ಬಲಶಾಲಿ/ಸಮರ್ಥ) ಆಗುವುದಾಗಿದೆ.

 ಮಾಟೇಶ್ವರಿ ಜೀ ಅವರ ಅಮೂಲ್ಯ ಮಹಾವಾಕ್ಯ - "ದೇವರ ನಿಜವಾದ ಮಗುವಾಗಲು ಯಾರಿಗೂ ಅನುಮಾನ ಬರಬಾರದು".

ಮಕ್ಕಳೇ, ದೇವರು ಈ ಜಗತ್ತಿಗೆ ಇಳಿದಾಗ, ನಾವು ಆ ದೇವರಿಗೆ ದೃಢವಾದ ಕೈಯನ್ನು ನೀಡಬೇಕು, ಆದರೆ ನಿಜವಾದ ಮಗು ಮಾತ್ರ ಬಾಬಾಗೆ ದೃಢವಾದ ಕೈಯನ್ನು ನೀಡಬಲ್ಲದು. ಯಾವತ್ತೂ ಈ ತಂದೆಯ ಕೈ ಬಿಡಬೇಡ ನೀನು ಬಿಟ್ಟರೆ ಸಾವಿಗೆ ಕಾರಣವೆಲ್ಲಿ? ನೀವು ದೇವರ ಕೈಯನ್ನು ಹಿಡಿದಾಗ, ನಾನು ಬಿಡಬೇಕು ಅಥವಾ ಯಾವುದೇ ಸಂದೇಹವಿಲ್ಲ ಎಂದು ಯಾವುದೇ ಸೂಕ್ಷ್ಮವಾಗಿ ಯೋಚಿಸಬಾರದು. ನಾವು ದಾಟುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಅಪ್ಪನಿಗೆ ಗೊತ್ತಿಲ್ಲದ ಕಾರಣ ಅಪ್ಪನ ಮುಂದೆ ಬರುವ ಕೆಲವು ಮಕ್ಕಳಿದ್ದಾರೆ, ಅವರೂ ಸಹ ಯಾರ ಬಗ್ಗೆಯೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆ. ಅಂತಹ ಆಲೋಚನೆ ಬಂದರೆ, ಅಂತಹ ಅಯೋಗ್ಯ ಮಗುವನ್ನು ತಂದೆ ಹೇಗೆ ನೋಡಿಕೊಳ್ಳುತ್ತಾರೆ, ಆಗ ಮಾಯೆಯು ಅವನನ್ನು ಬೀಳಿಸಲು ಬಹಳ ಪ್ರಯತ್ನಿಸಿದಾಗ ಅವನು ಬಿದ್ದಂತೆ! ಈಗ ಇದು ಸಹ ಅಗತ್ಯವಾಗಿದೆ, ನಾವು ದೇವರೊಂದಿಗೆ ಹೆಚ್ಚು ನಿರ್ದಯರಾಗಿ ಮುಂದುವರಿಯುತ್ತೇವೆ, ಹೆಚ್ಚು ಮಾಯಾ ನಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತದೆ. ಜೋಡಿಯು ಪೂರ್ಣವಾದರೆ, ದೇವರು ಎಷ್ಟು ಬಲಶಾಲಿಯೋ, ಆಗ ಮಾಯೆಯು ಸಹ ಬಲಶಾಲಿಯಾಗಿ ಕಾಣಿಸಿಕೊಳ್ಳುತ್ತದೆ, ಆದರೆ ದೇವರು ಕೂಡ ತುಂಬಾ ಬಲಶಾಲಿ ಎಂದು ನಿಮ್ಮಲ್ಲಿ ದೃಢವಾದ ನಂಬಿಕೆಯನ್ನು ಹೊಂದಿದ್ದೀರಿ, ಕೊನೆಯಲ್ಲಿ ಅವನ ಗೆಲುವು. ಈ ನಂಬಿಕೆಯಲ್ಲಿ ನೆಲೆ ನಿಲ್ಲಬೇಕು, ಮಾಯೆಯು ತನ್ನ ಬಲವನ್ನು ತೋರಿಸಬೇಕು, ದೇವರ ಮುಂದೆ ತನ್ನ ದೌರ್ಬಲ್ಯವನ್ನು ತೋರಿಸುವುದಿಲ್ಲ, ಅವಳು ಒಂದು ಬಾರಿ ದುರ್ಬಲಳಾದರೆ, ಅದು ಹಾಳಾಗುತ್ತದೆ, ನೀವು ಆ ಕೈಯನ್ನು ಹಿಡಿದರೆ ಅದು ಅದು ಅವರ ವಿಜಯವೆಂಬಂತೆ, ದೇವರು ನಮ್ಮ ಒಡೆಯನಾಗಿದ್ದಾಗ, ಅವನ ಕೈ ಬಿಡುವ ಯಾವುದೇ ನಿರ್ಣಯವಾಗಬಾರದು. ನಿನ್ನ ಕೈ ಬಿಟ್ಟರೆ ದೊಡ್ಡ ಮೂರ್ಖನಾಗುತ್ತೀಯ, ಅದಕ್ಕೇ ದೇವರು ಹೇಳುತ್ತಾನೆ ಮಕ್ಕಳೇ, ನಾನೇ ಸಮರ್ಥನಾದಾಗ ನೀವೂ ನನ್ನ ಜೊತೆಗಿದ್ದರೆ ಖಂಡಿತಾ ಸಮರ್ಥರಾಗುತ್ತೀರಿ. ಅರ್ಥವಾಯಿತು ಮಗು. ಸರಿ - ಓಹ್ ಶಾಂತಿ.

Download PDF

Hindi/Tamil/English/Telugu/Kannada/Malayalam

Post a Comment

0 Comments