Header Ads Widget

Header Ads

KANNADA MURLI 06.02.23

 

06/02/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ನೀವು ಬ್ರಾಹ್ಮಣರು ಈಗ ಬಹಳ ಶ್ರೇಷ್ಠವಾದ ಯಾತ್ರೆಯಲ್ಲಿ ಹೋಗುತ್ತಿದ್ದೀರಿ ಆದ್ದರಿಂದ ನಿಮಗೆ ಡಬಲ್ ಇಂಜಿನ್ ಸಿಕ್ಕಿದೆ, ಇಬ್ಬರು ಬೇಹದ್ದಿನ ತಂದೆಯರಿದ್ದಾರೆ ಅಂದಾಗ ಇಬ್ಬರು ತಾಯಿಯರೂ ಇದ್ದಾರೆ

ಪ್ರಶ್ನೆ:

ಸಂಗಮಯುಗದಲ್ಲಿ ಯಾವ ಒಂದು ಬಿರುದನ್ನು ನೀವು ಮಕ್ಕಳು ತಮಗೆ ಇಟ್ಟುಕೊಳ್ಳಲು ಸಾಧ್ಯವಿಲ್ಲ?

ಉತ್ತರ:

ಹಿಸ್ ಹೋಲಿನೆಸ್ ಅಥವಾ ಹರ್ ಹೋಲಿನೆಸ್ನ ಬಿರುದನ್ನು ನೀವು ಬಿ.ಕೆ.ಗಳು ನಿಮ್ಮ ಮೇಲೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಮತ್ತು ಬರೆಯಲೂ ಸಾಧ್ಯವಿಲ್ಲ ಏಕೆಂದರೆ ನಿಮ್ಮ ಆತ್ಮ ಭಲೆ ಪವಿತ್ರವಾಗಿರಬಹುದು ಆದರೆ ಶರೀರ ತಮೋಪ್ರಧಾನ ತತ್ವಗಳಿಂದ ಮಾಡಲ್ಪಟ್ಟಿದೆ. ಬಿರುದನ್ನು ಈಗ ನಿಮಗೆ ಕೊಡಲು ಸಾಧ್ಯವಿಲ್ಲ. ನೀವಿನ್ನೂ ಪುರುಷಾರ್ಥಿಗಳಾಗಿದ್ದೀರಿ.

ಗೀತೆ:  ದೀಪ ಮತ್ತು ಬಿರುಗಾಳಿಯ ಕಥೆಯಾಗಿದೆ.........

ಓಂ ಶಾಂತಿ. ಬೇಹದ್ದಿನ ತಂದೆಯು ಮಕ್ಕಳಿಗೆ ಕುಳಿತು ತಿಳಿಸುತ್ತಿದ್ದಾರೆ. ಬೇಹದ್ದಿನ ಇಬ್ಬರು ತಂದೆಯರಿದ್ದಾರೆ ಅಂದಾಗ ತಾಯಿಯರೂ ಸಹ ಇಬ್ಬರಿದ್ದಾರೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ಒಬ್ಬರು ಜಗದಂಬಾ ಮತ್ತೊಬ್ಬರು ಬ್ರಹ್ಮಾ ತಾಯಿಯಾಗಿದ್ದಾರೆ. ಇಬ್ಬರೂ ಕುಳಿತು ತಿಳಿಸುವುದರಿಂದ ನಿಮಗೆ ಡಬಲ್ ಇಂಜಿನ್ ಸಿಕ್ಕಿದ ರೀತಿಯಾಯಿತು. ಬೆಟ್ಟದ ಮೇಲೆ ಗಾಡಿ ಹೋಗುವಾಗ ಡಬಲ್ ಇಂಜಿನನ್ನು ಹಾಕುತ್ತಾರೆ. ಈಗ ನೀವು ಬ್ರಾಹ್ಮಣರು ಶ್ರೇಷ್ಠವಾದ ಯಾತ್ರೆಗೆ ಹೋಗುತ್ತಿದ್ದೀರಿ. ಈಗ ಘೋರ ಅಂಧಕಾರವಾಗಿದೆಯೆಂದು ನಿಮಗೆ ತಿಳಿದಿದೆ. ಯಾವಾಗ ಅಂತಿಮ ಸಮಯ ಬರುತ್ತದೆಯೋ ಆಗ ಬಹಳ ಹಾಹಾಕಾರವಾಗುತ್ತದೆ ಏಕೆಂದರೆ ಪ್ರಪಂಚ ಬದಲಾಗುತ್ತದೆ ಎಂದಾಗ ರೀತಿ ಆಗಲೇಬೇಕು. ರಾಜ್ಯಭಾರ ಬದಲಾಗುವಾಗಲು ಯುದ್ಧವು ನಡೆಯುತ್ತದೆ ಅಂದಾಗ ಈಗ ಹೊಸ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಘೋರ ಅಂಧಕಾರದಿಂದ ಘೋರ ಪ್ರಕಾಶತೆಯಾಗುತ್ತದೆ. ನೀವೀಗ ಇಡೀ ಚಕ್ರದ ಇತಿಹಾಸ, ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಪುನಃ ಅನ್ಯರಿಗೂ ತಿಳಿಸಬೇಕು. ಬಹಳ ಮಾತೆಯರು ಅಥವಾ ಮಕ್ಕಳು ಶಾಲೆಯಲ್ಲಿ ವಿದ್ಯೆಯನ್ನು ಓದಿಸುವವರು ಮಕ್ಕಳಿಗೆ ಕುಳಿತು ಒಂದುವೇಳೆ ಬೇಹದ್ದಿನ ಇತಿಹಾಸ, ಭೂಗೋಳವನ್ನು ತಿಳಿಸಿದರೂ ಸರ್ಕಾರವು ಬೇಸರವಾಗುವುದಿಲ್ಲ. ಅವರಲ್ಲಿ ದೊಡ್ಡವರಿಗೂ ತಿಳಿಸಿದಾಗ ಬಹಳ ಖುಷಿಯಾಗುತ್ತಾರೆ. ಎಲ್ಲಿಯವರೆಗೆ ಬೇಹದ್ದಿನ ಇತಿಹಾಸ, ಭೂಗೋಳವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮಕ್ಕಳ ಕಲ್ಯಾಣವಾಗುವುದಿಲ್ಲವೆಂದು ಅವರಿಗೆ ತಿಳಿಸಬೇಕು. ಪ್ರಪಂಚದಲ್ಲಿ ಜಯಜಯಕಾರವಾಗುವುದಿಲ್ಲ. ತಂದೆಯು ಮಕ್ಕಳಿಗೆ ಸೇವೆಯನ್ನು ಮಾಡುವ ಎಚ್ಚರಿಕೆಯನ್ನು ಕೊಡುತ್ತಾರೆ. ಒಂದುವೇಳೆ ಶಿಕ್ಷಕರಾಗಿದ್ದರೆ ತಮ್ಮ ಕಾಲೇಜಿನಲ್ಲಿ ಇಡೀ ಪ್ರಪಂಚದ ಇತಿಹಾಸ, ಭೂಗೋಳವನ್ನು ತಿಳಿಸಿಕೊಟ್ಟಾಗ ಮಕ್ಕಳು ತ್ರಿಕಾಲದರ್ಶಿಗಳಾಗುತ್ತಾರೆ ಮತ್ತು ತ್ರಿಕಾಲದರ್ಶಿಗಳಾಗುವುದರಿಂದ ಚಕ್ರವರ್ತಿಗಳೂ ಆಗುತ್ತಾರೆ. ಹೇಗೆ ತಂದೆಯು ನಿಮಗೆ ತ್ರಿಕಾಲದರ್ಶಿ, ಸ್ವದರ್ಶನಚಕ್ರಧಾರಿಗಳನ್ನಾಗಿ ಮಾಡಿದ್ದಾರೋ ಹಾಗೆಯೇ ನೀವು ಅನ್ಯರನ್ನು ತಮ್ಮ ಸಮಾನ ಮಾಡಿಕೊಳ್ಳಬೇಕು. ಈಗ ಹಳೆಯ ಪ್ರಪಂಚ ಬದಲಾವಣೆಯಾಗುತ್ತಿದೆ ಎಂದು ಅನ್ಯರಿಗೆ ತಿಳಿಸಿಕೊಡಬೇಕು. ತಮೋಪ್ರಧಾನ ಪ್ರಪಂಚದ ಬದಲಾಗಿ ಸತೋಪ್ರಧಾನವಾಗುತ್ತಿದೆ. ಒಬ್ಬ ಪರಮಪಿತ ಪರಮಾತ್ಮ ಸಹಜ ರಾಜಯೋಗ ಮತ್ತು ಸ್ವದರ್ಶನಚಕ್ರದ ಜ್ಞಾನವನ್ನು ತಿಳಿಸಿ ಸತೋಪ್ರಧಾನರನ್ನಾಗಿ ಮಾಡುತ್ತಿದ್ದಾರೆ. ಚಕ್ರದ ಬಗ್ಗೆ ತಿಳಿಸಿಕೊಡುವುದು ಬಹಳ ಸಹಜವಾಗಿದೆ. ಒಂದುವೇಳೆ ಚಕ್ರವನ್ನು ಎದುರಿಗೆ ಇಟ್ಟುಕೊಂಡಾಗ ಮನುಷ್ಯರು ಬಂದು ಸತ್ಯಯುಗದಲ್ಲಿ ಯಾರು ಯಾರು ರಾಜ್ಯ ಮಾಡುತ್ತಿದ್ದರೆಂದು ತಿಳಿದುಕೊಳ್ಳುತ್ತಾರೆ ನಂತರ ದ್ವಾಪರದಿಂದ ಹೇಗೆ ಅನೇಕ ಧರ್ಮಗಳು ವೃದ್ಧಿಯಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಅವರ ಬುದ್ಧಿಯ ಬೀಗ ಚೆನ್ನಾಗಿ ತೆರೆಯುತ್ತದೆ. ಚಕ್ರವನ್ನು ಎದುರಿಗೆ ಇಟ್ಟುಕೊಂಡು ನೀವು ಚೆನ್ನಾಗಿ ತಿಳಿಸಿಕೊಡಬಹುದು. ವಿಷಯವನ್ನು ಇಟ್ಟುಕೊಳ್ಳಬಹುದು. ನೀವು ಬಂದರೆ ನಾವು ನಿಮಗೆ ತ್ರಿಕಾಲದರ್ಶಿಗಳಾಗುವ ಮಾರ್ಗವನ್ನು ತಿಳಿಸುತ್ತೇವೆ ಅದರಿಂದ ನೀವು ರಾಜರಿಗೂ ರಾಜರಾಗುತ್ತೀರಿ. ನೀವು ಬ್ರಾಹ್ಮಣರೇ ಚಕ್ರವನ್ನು ತಿಳಿದುಕೊಳ್ಳುವುದರಿಂದ ಚಕ್ರವರ್ತಿ ರಾಜರಾಗುತ್ತೀರಿ ಆದರೆ ಚಕ್ರವನ್ನು ಬುದ್ಧಿಯಲ್ಲಿ ಯಾರು ತಿರುಗಿಸುತ್ತಾರೋ ಅವರೇ ಚಕ್ರವರ್ತಿ ರಾಜರಾಗುತ್ತಾರೆ. ತಂದೆಯು ಜ್ಞಾನಸಾಗರರಾಗಿದ್ದಾರೆ, ಅವರೇ ಕುಳಿತು ನಾವು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ ಮತ್ತು ಬೇರೆ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಈಶ್ವರನನ್ನು ಸರ್ವವ್ಯಾಪಿ ಎಂದು ತಿಳಿಯುವುದರಿಂದ ಜ್ಞಾನದ ಮಾತು ಬರುವುದಿಲ್ಲ. ಈಶ್ವರನನ್ನು ತಿಳಿದುಕೊಳ್ಳುವ ಪುರುಷಾರ್ಥವನ್ನು ಮಾಡದಿದ್ದಾಗ ಪುನಃ ಭಕ್ತಿಯನ್ನು ಮಾಡಲು ಸಾಧ್ಯವಿಲ್ಲ ಆದರೆ ಏನೇ ಹೇಳಿದರೂ ಅವರು ತಿಳಿದುಕೊಳ್ಳುವುದಿಲ್ಲ. ಸರ್ವವ್ಯಾಪಿ ಅಲ್ಲವೆನ್ನುವುದನ್ನು ಕಚ್ಛಾ ಮಕ್ಕಳು ತಿಳಿಸಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಹೇಳಿದರೆ ಎಲ್ಲರೂ ಅದಕ್ಕೆ ಮಾನ್ಯತೆಯನ್ನು ಕೊಡುತ್ತಾರೆ. ಹೇಗೆ ಯಾರಾದರೂ ಆದಿದೇವನನ್ನು ಮಹಾವೀರನೆಂದು ಹೇಳಿದಾಗ ಅದೇ ಹೆಸರು ಬರುತ್ತದೆ. ಯಾರು ಯಾವ ಹೆಸರನ್ನು ಬುದ್ಧಿಹೀನರಾಗಿ ಇಡುತ್ತಾರೋ ಅದೇ ನಡೆಯುತ್ತಾ ಬರುತ್ತದೆ. ಈಗ ತಂದೆಯು ಕುಳಿತು ತಿಳಿಸುತ್ತಿದ್ದಾರೆ - ನೀವು ಮನುಷ್ಯರಿಗೆ ನಾಟಕದ ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ದೇವತೆಗಳ ಪೂಜೆಯನ್ನು ಮಾಡುತ್ತಿದ್ದೀರಿ. ಆದರೆ ಅವರ ಕರ್ತವ್ಯವನ್ನೇ ತಿಳಿದುಕೊಂಡಿಲ್ಲವೆಂದಾಗ ಅದಕ್ಕೆ ಅಂಧಶ್ರದ್ಧೆ ಎಂದು ಹೇಳಲಾಗುತ್ತದೆ. ಇಷ್ಟೆಲ್ಲಾ ದೇವಿ-ದೇವತೆಗಳು ರಾಜ್ಯಭಾಗ್ಯವನ್ನು ತೆಗೆದುಕೊಂಡರು ಅಂದಾಗ ಅವರು ಬುದ್ಧಿವಂತರಾಗಿರುವ ಕಾರಣ ಪೂಜ್ಯರಾದರು. ನೀವೀಗ ಬ್ರಹ್ಮಾಮುಖವಂಶಾವಳಿಗಳು ಜ್ಞಾನವನ್ನು ಕೇಳಿ ಬುದ್ಧಿವಂತರಾಗುತ್ತಿದ್ದೀರಿ ಬಾಕಿ ಇಡೀ ಪ್ರಪಂಚವು ರಾವಣ ಸೆರೆಮನೆಯಲ್ಲಿ ಸಿಲುಕಿಕೊಂಡಿದ್ದಾರೆ. ಇದು ರಾವಣನ ಸೆರೆಮನೆಯಾಗಿರುವ ಕಾರಣ ಇದರಲ್ಲಿ ಎಲ್ಲರೂ ಶೋಕವಾಟಿಕೆಯಲ್ಲಿದ್ದಾರೆ. ಶಾಂತಿ ಹೇಗೆ ಪಡೆಯುವುದು ಎಂದು ಕಾರ್ಯಕ್ರಮಗಳನ್ನು ಮಾಡುತ್ತಾರೆ ಅಂದಾಗ ಅವಶ್ಯವಾಗಿ ಅಶಾಂತಿ ದುಃಖವಿರುವ ಕಾರಣ ಎಲ್ಲರೂ ಶೋಕವಾಟಿಕೆಯಲ್ಲಿದ್ದಾರೆ. ಈಗ ಶೋಕವಾಟಿಕೆಯಿಂದ ಅಶೋಕವಾಟಿಕೆಯಲ್ಲಿ ತಕ್ಷಣ ಹೋಗಲು ಸಾಧ್ಯವಿಲ್ಲ. ಸಮಯದಲ್ಲಿ ಯಾರೂ ಸಹ ಶಾಂತಿ ಹಾಗೂ ಸುಖದ ವಾಟಿಕೆಯಲ್ಲಿಲ್ಲ. ಅಶೋಕವಾಟಿಕೆ ಎಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಆದರೆ ಸಂಗಮಯುಗದಲ್ಲಿ ನಿಮ್ಮನ್ನು ಯಾರು ಸಂಪೂರ್ಣ ಪವಿತ್ರರು ಎಂದು ಹೇಳಲು ಸಾಧ್ಯವಿಲ್ಲ. ಹಿಸ್ ಹೋಲಿನೆಸ್ ಎಂದು ಯಾವುದೇ ಬಿ.ಕೆ.ಗಳು ತಮಗೆ ಹೇಳಿಕೊಳ್ಳಲು ಸಾಧ್ಯವಿಲ್ಲ ಹಾಗೂ ಬರೆಸಲೂ ಸಾಧ್ಯವಿಲ್ಲ. ಹಿಸ್ ಹೋಲಿನೆಸ್ ಹಾಗೂ ಹರ್ ಹೋಲಿನೆಸ್ ಸತ್ಯಯುಗದಲ್ಲಿರುತ್ತಾರೆ. ಕಲಿಯುಗದಲ್ಲಿ ಎಲ್ಲಿಂದ ಬರುತ್ತಾರೆ! ಭಲೆ ಆತ್ಮವು ಇಲ್ಲಿ ಪವಿತ್ರವಾಗಿರುತ್ತದೆ ಆದರೆ ಶರೀರ ಪವಿತ್ರವಾಗಿದ್ದಾಗ ಹಿಸ್ ಹೋಲಿನೆಸ್ ಎಂದು ಹೇಳಲು ಸಾಧ್ಯ ಆದ್ದರಿಂದ ತಮಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ನೀವೀಗ ಪುರುಷಾರ್ಥಿಗಳಾಗಿದ್ದೀರಿ. ಶ್ರೀ ಶ್ರೀ ಹಾಗೂ ಹಿಸ್ ಹೋಲಿನೆಸ್ ಎಂದು ಸನ್ಯಾಸಿಗಳಿಗೆ ಹೇಳಲು ಸಾಧ್ಯವಿಲ್ಲವೆಂದು ತಂದೆಯು ಹೇಳುತ್ತಾರೆ. ಭಲೆ ಆತ್ಮವು ಪವಿತ್ರವಾಗಿರುತ್ತದೆ ಆದರೆ ಪವಿತ್ರವಾದ ಶರೀರ ಎಲ್ಲಿರುತ್ತದೆ ಅಂದಾಗ ಅರ್ಧ ಪವಿತ್ರವಾಯಿತಲ್ಲವೆ. ಪತಿತ ಪ್ರಪಂಚದಲ್ಲಿ ಹಿಸ್ ಹಾಗೂ ಹರ್ ಹೋಲಿನೆಸ್ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಆತ್ಮ ಮತ್ತು ಪರಮಾತ್ಮ ಸದಾಕಾಲ ಶುದ್ಧವಾಗಿರುತ್ತದೆ ಆದರೆ ಶರೀರವು ಶುದ್ಧವಾಗಿರುವುದು ಬೇಕೆಂದು ಅವರು ತಿಳಿದುಕೊಳ್ಳುತ್ತಾರೆ. ಹಾ! ಲಕ್ಷ್ಮೀ-ನಾರಾಯಣರಿಗೆ ಹೇಳಬಹುದು ಏಕೆಂದರೆ ಅಲ್ಲಿ ಶರೀರವು ಸತೋಪ್ರಧಾನ ತತ್ವಗಳಿಂದ ಮಾಡಲ್ಪಟ್ಟಿದೆ. ಇಲ್ಲಿ ತತ್ವವೂ ತಮೋಪ್ರಧಾನವಾಗಿದೆ ಆದ್ದರಿಂದ ಸಮಯದಲ್ಲಿ ಯಾರಿಗೂ ಸಂಪೂರ್ಣ ಪಾವನರೆಂದು ಹೇಳಲಾಗುವುದಿಲ್ಲ. ರೀತಿ ಪವಿತ್ರರು ಚಿಕ್ಕ ಮಕ್ಕಳೂ ಸಹ ಇರುತ್ತಾರೆ ಆದರೆ ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು .

ನೀವೀಗ ಎಷ್ಟೊಂದು ಬುದ್ದಿವಂತರಾಗುತ್ತಿದ್ದೀರಿ ಎಂದು ತಂದೆಯು ಕುಳಿತು ತಿಳಿಸುತ್ತಿದ್ದಾರೆ. ನಿಮಗೆ ಸೃಷ್ಟಿಚಕ್ರದ ಸಂಪೂರ್ಣ ಜ್ಞಾನವಿದೆ. ಪರಮಪಿತ ಪರಮಾತ್ಮ ಚೈತನ್ಯ ವೃಕ್ಷದ ಬೀಜವಾಗಿದ್ದಾರೆ. ಅವರಲ್ಲಿ ಇಡೀ ವೃಕ್ಷದ ಜ್ಞಾನವಿದೆ ಅವರೇ ನಿಮಗೆ ಕುಳಿತು ಜ್ಞಾನವನ್ನು ತಿಳಿಸಿಕೊಡುತ್ತಿದ್ದಾರೆ. ಆದ್ದರಿಂದ ಸೃಷ್ಟಿಚಕ್ರದ ಜ್ಞಾನದಿಂದ ನೀವು ಯಾರನ್ನಾದರೂ ಪ್ರಭಾವಿತರನ್ನಾಗಿ ಮಾಡಬಹುದು. ನೀವು ಪರಮಧಾಮದಿಂದ ಬಂದು ಶರೀರ ಧಾರಣೆ ಮಾಡಿಕೊಂಡು ಪಾತ್ರವನ್ನು ಮಾಡುತ್ತಿದ್ದೀರೆಂದು ತಿಳಿಸಿಕೊಡಬೇಕು. ಈಗ ಅಂತಿಮದಲ್ಲಿ ಎಲ್ಲರೂ ಹಿಂತಿರುಗಿ ಹೋಗಿ ಪುನಃ ತಮ್ಮ ಪಾತ್ರವನ್ನು ಮಾಡಲು ಬರಬೇಕು. ಈಗ ಇಲ್ಲಿ ಯಾರು ಪುರುಷಾರ್ಥವನ್ನು ಮಾಡುತ್ತಾರೋ ಅಲ್ಲಿ ಅವರು ರಾಜ ಹಾಗೂ ಶ್ರೀಮಂತರ ಬಳಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಎಲ್ಲರೂ ನಂಬರ್ವಾರ್ ಆಗಿ ಪದವಿಯನ್ನು ತೆಗೆದುಕೊಳ್ಳುತ್ತಾರೆ ಮತ್ತು ನಂಬರ್ವಾರಾಗಿ ವರ್ಗಾವಣೆಯಾಗುತ್ತಾರೆ. ಎಲ್ಲಿ ವಿಜಯವೋ ಅಲ್ಲಿ ಜನ್ಮವೆಂದು ತೋರಿಸಿದ್ದಾರೆ. ಈಗ ವಿಚಾರಗಳನ್ನು ತೆಗೆದುಕೊಳ್ಳುವುದಿಲ್ಲ. ಮುಂದೆ ಹೋಗುತ್ತಾ ನಿಮಗೆ ಪ್ರಕಾಶತೆಯು ಸಿಗುತ್ತದೆ. ಈಗ ಯಾರು ಶರೀರವನ್ನು ಬಿಡುತ್ತಾರೋ ಅವರು ಅವಶ್ಯವಾಗಿ ಒಳ್ಳೆಯ ಮನೆಯಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಯಾವ ಮಕ್ಕಳು ಹೆಚ್ಚು ಪುರುಷಾರ್ಥವನ್ನು ಮಾಡುತ್ತಾರೋ ಅವರಿಗೆ ಖುಷಿಯು ಹೆಚ್ಚಾಗುತ್ತದೆ. ಯಾರು ಸರ್ವೀಸಿನಲ್ಲಿ ತತ್ಫರರಾಗಿರುತ್ತಾರೋ ಅವರಿಗೆ ನಶೆಯೂ ಇರುತ್ತದೆ. ನಿಮ್ಮನ್ನು ಬಿಟ್ಟರೆ ಬೇರೆ ಎಲ್ಲರೂ ಅಂಧಕಾರದಲ್ಲಿದ್ದಾರೆ ಅಂದಾಗ ಗಂಗಾಸ್ನಾನ ಮುಂತಾದವನ್ನು ಮಾಡಿದಾಗ ಯಾರ ಪಾಪವೂ ದೂರವಾಗುವುದಿಲ್ಲ. ಯೋಗದ ಅಗ್ನಿಯಿಂದಲೇ ಪಾಪವು ಭಸ್ಮವಾಗುತ್ತದೆ. ರಾವಣ ಸೆರೆಮನೆಯಿಂದ ಬಿಡಿಸುವಂತಹವರು ಒಬ್ಬ ತಂದೆಯಾಗಿದ್ದಾರೆ ಆದ್ದರಿಂದ ಪತಿತ ಪಾವನ ಎಂದು ಗಾಯನ ಮಾಡುತ್ತಾರೆ. ಆದರೆ ತಮ್ಮನ್ನು ಪಾಪಾತ್ಮರೆಂದು ತಿಳಿದುಕೊಳ್ಳುವುದಿಲ್ಲ. ಕಲ್ಪದ ಮೊದಲು ಇವರನ್ನು ನೀವು ಕನ್ಯೆಯರ ಮುಖಾಂತರ ಉದ್ಧಾರ ಮಾಡಿಸಿದ್ದೆನು ಎಂದು ತಂದೆಯು ಹೇಳುತ್ತಾರೆ. ಗೀತೆಯಲ್ಲೂ ಸಹ ಇದರ ಬಗ್ಗೆ ಬರೆದಿದ್ದಾರೆ ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಪತಿತ ಪ್ರಪಂಚದಲ್ಲಿ ಯಾರೂ ಪಾವನರಿಲ್ಲವೆಂದು ನೀವು ತಿಳಿಸಿಕೊಡಬಹುದು. ಆದರೆ ತಿಳಿಸುವುದರಲ್ಲೂ ಸಹ ಬಹಳ ಧೈರ್ಯಬೇಕು. ಈಗ ಪ್ರಪಂಚವು ಬದಲಾವಣೆಯಾಗುತ್ತಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ನೀವೀಗ ಈಶ್ವರೀಯ ಸಂತಾನದವರಾಗಿದ್ದೀರಿ. ಬ್ರಾಹ್ಮಣಕುಲ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ನೀವು ಮಕ್ಕಳಿಗೆ ಈಗ ಸ್ವದರ್ಶನಚಕ್ರದ ಜ್ಞಾನವಿದೆ ನಂತರ ವಿಷ್ಣುವಿನ ಕುಲದಲ್ಲಿ ಹೋದಾಗ ಜ್ಞಾನವಿರುವುದಿಲ್ಲ. ಈಗ ಜ್ಞಾನವಿರುವ ಕಾರಣ ನಿಮಗೆ ಸ್ವದರ್ಶನಚಕ್ರಧಾರಿಗಳೆಂದು ಹೆಸರನ್ನು ಇಡಲಾಗಿದೆ. ಎಲ್ಲಾ ಗುಹ್ಯವಾದ ಮಾತುಗಳನ್ನು ನಿಮ್ಮನ್ನು ಬಿಟ್ಟರೆ ಬೇರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಈಶ್ವರನಿಗೆ ಎಲ್ಲರೂ ಸಂತಾನರೆಂದು ಕೇವಲ ಹೇಳುತ್ತಾರೆ ಆದರೆ ಈಗ ಪ್ರತ್ಯಕ್ಷವಾಗಿ ನೀವಾಗಿದ್ದೀರಿ. ಒಳ್ಳೆಯದು.

ಎಲ್ಲಾ ಮಧುರಾತಿ ಮಧುರ ಮಕ್ಕಳಿಗೆ ನೆನಪು, ಪ್ರೀತಿ, ಬೆಳಗಿನ ವಂದನೆಗಳು. ತಂದೆಯ ಕರ್ತವ್ಯ ಮಕ್ಕಳನ್ನು ನೆನಪು ಮಾಡುವುದಾಗಿದೆ ಮತ್ತು ಮಕ್ಕಳ ಕರ್ತವ್ಯ ತಂದೆಯನ್ನು ನೆನಪು ಮಾಡುವುದಾಗಿದೆ ಆದರೆ ಮಕ್ಕಳು ಅಷ್ಟು ನೆನಪನ್ನು ಮಾಡುವುದಿಲ್ಲ. ಒಂದುವೇಳೆ ಅಷ್ಟು ನೆನಪನ್ನು ಮಾಡಿದರೆ ಅಹೋ ಸೌಭಾಗ್ಯವೆಂದು ಹೇಳಲಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್ -08/04/68

ಇದು ಈಶ್ವರೀಯ ಮಿಷನ್ ನಡೆಯುತ್ತಿದೆ. ಯಾರು ನಮ್ಮ ದೇವಿ-ದೇವತಾ ಧರ್ಮದವರಾಗಿರುತ್ತಾರೆಯೋ ಅವರೇ ಬಂದುಬಿಡುತ್ತಾರೆ. ಹೇಗೆ ಅವರದು ಕ್ರಿಶ್ಚಿಯನ್ನರನ್ನಾಗಿ ಮಾಡುವ ಮಿಷನ್(ಟ್ರಸ್ಟ್/ಸಂಸ್ಥೆ) ಇದೆ. ಅಲ್ಲಿ ಯಾರು ಕ್ರಿಶ್ಚಿಯನ್ನರಾಗುತ್ತಾರೆಯೋ ಅವರಿಗೆ ಕ್ರಿಶ್ಚಿಯನ್ ರಾಜ್ಯದಲ್ಲಿ ಸುಖವು ಸಿಗುತ್ತದೆ. ಒಳ್ಳೆಯ ವೇತನವು ಸಿಗುತ್ತದೆ ಆದ್ದರಿಂದ ಬಹಳಷ್ಟು ಕ್ರಿಶ್ಚಿಯನ್ನರಾಗಿಬಿಡುತ್ತಾರೆ. ಭಾರತವಾಸಿಗಳು ಅಷ್ಟು ವೇತನವನ್ನು ಕೊಡಲು ಸಾಧ್ಯವಿಲ್ಲ. ಇಲ್ಲಿ ಭ್ರಷ್ಟಾಚಾರವು ಬಹಳಷ್ಟೇ ಇದೆ. ಮಧ್ಯದಲ್ಲಿ ಲಂಚವನ್ನು ತೆಗೆದುಕೊಂಡಿಲ್ಲವೆಂದರೆ ನೌಕರಿಯಿಂದಲೇ ಜವಾಬು ಕೊಡುತ್ತಾರೆ. ಮಕ್ಕಳು ತಂದೆಯಬಳಿ ಕೇಳುತ್ತಾರೆ- ಇಂತಹ ಸಂದರ್ಭದಲ್ಲಿ ಏನು ಮಾಡುವುದು? ಬಾಬಾರವರು ಹೇಳುತ್ತಾರೆ- ಯುಕ್ತಿಯಿಂದ ಕೆಲಸವನ್ನು ಮಾಡಿರಿ, ನಂತರ ಶುಭಕಾರ್ಯದಲ್ಲಿ ಉಪಯೋಗಿಸಿರಿ.

ಇಲ್ಲಿ ಎಲ್ಲರೂ ತಂದೆಯನ್ನು ಕರೆಯುತ್ತಾರೆ- ಬಂದು ನಾವು ಪತಿತರನ್ನು ಪಾವನ ಮಾಡಿರಿ, ಮುಕ್ತಗೊಳಿಸಿರಿ, ಮನೆಗೆ ಕರೆದುಕೊಂಡು ಹೋಗಿರಿ. ತಂದೆಯವರು ಖಂಡಿತವಾಗಿಯೂ ಕರೆದುಕೊಂಡು ಹೋಗುವರಲ್ಲವೆ. ಮನೆಗೆ ಹೋಗುವುದಕ್ಕಾಗಿಯೇ ಇಷ್ಟೂ ಭಕ್ತಿ ಮುಂತಾದವೆಲ್ಲವನ್ನೂ ಮಾಡುತ್ತಾರೆ. ಆದರೆ ಯಾವಾಗ ತಂದೆಯು ಬರುತ್ತಾರೆಯೋ ಆಗಲೇ ಕರೆದುಕೊಂಡು ಹೋಗುವರು. ಭಗವಂತನಂತು ಇರುವುದೇ ಒಬ್ಬರು. ಆದರೆ ಎಲ್ಲರಲ್ಲಿಯೂ ಭಗವಂತನು ಬಂದು ಹೇಳುತ್ತಾರೆ ಎನ್ನುವಹಾಗಲ್ಲ. ಅವರು ಬರುವುದೇ ಸಂಗಮದಲ್ಲಿ. ಈಗ ನೀವು ಅಂತಂತಹ ಮಾತುಗಳನ್ನು ಒಪ್ಪುವುದಿಲ್ಲ. ಇದಕ್ಕೆಮುಂದೆ ಒಪ್ಪುತ್ತಿದ್ದಿರಿ. ಈಗ ನೀವು ಭಕ್ತಿಯನ್ನು ಮಾಡುವುದಿಲ್ಲ. ನೀವು ಹೇಳುತ್ತೀರಿ- ನಾವೂ ಮುಂಚೆ ಪೂಜೆಯನ್ನು ಮಾಡುತ್ತಿದ್ದೆವು, ಈಗ ತಂದೆಯು ನಮ್ಮನ್ನು ಪೂಜ್ಯದೇವತೆಯನ್ನಾಗಿ ಮಾಡುವುದಕ್ಕಾಗಿ ಬಂದಿದ್ದಾರೆ. ನೀವು ಇದನ್ನು ಸಿಖ್ಖರಿಗೂ ತಿಳಿಸಿರಿ. ಗಾಯನವಿದೆಯಲ್ಲವೆ- ಮನುಷ್ಯರಿಂದ ದೇವತೆಯನ್ನು ಮಾಡಿದರು......... ದೇವತೆಗಳ ಮಹಿಮೆಯಿದೆಯಲ್ಲವೆ. ದೇವತೆಗಳಂತು ಇರುವುದೇ ಸತ್ಯಯುಗದಲ್ಲಿ, ಈಗಿರುವುದು ಕಲಿಯುಗ. ತಂದೆಯವರೂ ಸಹ ಸಂಗಮಯುಗದಲ್ಲಿ ಪುರುಷೋತ್ತಮರಾಗುವುದಕ್ಕಾಗಿಯೇ ಶಿಕ್ಷಣವನ್ನು ಕೊಡುತ್ತಾರೆ. ದೇವತೆಗಳಂತು ಎಲ್ಲರಿಗಿಂತಲೂ ಉತ್ತಮರು, ಆದ್ದರಿಂದಲೇ ಇಷ್ಟೂ ಪೂಜಿಸುತ್ತಾರೆ. ಯಾರ ಪೂಜೆಯನ್ನು ಮಾಡುತ್ತಾರೆಯೋ, ಅವರು ಯಾವಾಗಲೋ ಇದ್ದರು, ಈಗಿಲ್ಲ. ತಿಳಿಯುತ್ತಾರೆ- ಇವರ ರಾಜಧಾನಿಯು ಹಿಂದೆ ಇತ್ತು. ಈಗಂತು ನೀವು ಗುಪ್ತವಾಗಿದ್ದೀರಿ. ನಾವು ವಿಶ್ವದ ಮಾಲೀಕರಾಗುವವರು ಎಂದು ಯಾರಾದರೂ ತಿಳಿದುಕೊಳ್ಳುವರೇನು! ನೀವು ತಿಳಿದುಕೊಂಡಿದ್ದೀರಿ- ವಿದ್ಯೆಯನ್ನು ಓದಿ ಹೀಗೆ ಆಗುತ್ತೇವೆ. ವಿದ್ಯೆಯ ಮೇಲೆ ಸಂಪೂರ್ಣವಾಗಿ ಗಮನವನ್ನು ಕೊಡಬೇಕಾಗಿದೆ. ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಬಾಬಾರವರು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಅಂದಮೇಲೆ ನೆನಪನ್ನೇಕೆ ಮಾಡಬಾರದು. ನಂತರ ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ.

ಇನ್ನೊಂದು- ರಾತ್ರಿಕ್ಲಾಸ್ 09/04/68

ಇತ್ತೀಚೆಗೆ ಬಹಳಷ್ಟು ಇದೇ ಸಮ್ಮೇಳನವನ್ನು ಮಾಡುತ್ತಿರುತ್ತಾರೆ- ವಿಶ್ವದಲ್ಲಿ ಶಾಂತಿಯನ್ನು ತರುವುದು ಹೇಗೆ! ಅವರಿಗೆ ತಿಳಿಸಬೇಕು- ನೋಡಿ, ಸತ್ಯಯುಗದಲ್ಲಿ ಒಂದೇಧರ್ಮ, ಒಂದೇರಾಜ್ಯ, ಅದ್ವೈತ ಧರ್ಮವಿತ್ತು. ಮತ್ತ್ಯಾವುದೇ ಧರ್ಮವೇ ಇರಲಿಲ್ಲ, ಯಾವುದರಿಂದ ಚಪ್ಪಾಳೆ ಹೊಡೆಯಲಾಗುತ್ತದೆ. ಇದ್ದಿದ್ದೇ ರಾಮರಾಜ್ಯ, ಆದ್ದರಿಂದಲೇ ವಿಶ್ವದಲ್ಲಿ ಶಾಂತಿಯಿತ್ತು. ನೀವು ಬಯಸುತ್ತೀರಿ- ವಿಶ್ವದಲ್ಲಿ ಶಾಂತಿಯಾಗಲಿ ಎಂದು. ಅದಂತು ಸತ್ಯಯುಗದಲ್ಲಿತ್ತು. ಆನಂತರ ಅನೇಕ ಧರ್ಮಗಳಾಗುವುದರಿಂದ ಅಶಾಂತಿ ಆಯಿತು. ಆದರೆ ಇದನ್ನು ಯಾರೇ ಆಗಲಿ ಎಲ್ಲಿಯವರೆಗೆ ತಿಳಿಯುವುದಿಲ್ಲವೋ, ಅಲ್ಲಿಯವರೆಗೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಮುಂದೆನಡೆದಂತೆ ವಾರ್ತಾಪತ್ರಿಕೆಗಳಲ್ಲಿಯೂ ಬರುತ್ತದೆ, ನಂತರ ಸನ್ಯಾಸಿಗಳು ಮುಂತಾದವರದೂ ಸಹ ಕಿವಿಗಳು ತೆರೆಯುತ್ತದೆ. ನೀವು ಮಕ್ಕಳಿಗಂತು ತೃಪ್ತಿಯಿದೆ- ನಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಇದೇ ನಶೆಯೂ ಇದೆ. ಮ್ಯೂಸಿಯಂನ ಶೋ ನೋಡುತ್ತಾ ಬಹಳಮಂದಿ ಬರುವರು. ಒಳಗೆ ಬಂದು ಆಶ್ಚರ್ಯಚಕಿತರೂ ಆಗುವರು. ಹೊಸ-ಹೊಸ ಚಿತ್ರಗಳ ಬಗ್ಗೆ ಹೊಸ-ಹೊಸ ತಿಳುವಳಿಕೆಯನ್ನು ಕೇಳಿಸಿಕೊಳ್ಳುವರು.

ಇದಂತು ಮಕ್ಕಳಿಗೆ ಗೊತ್ತಿದೆ- ಯೋಗವಿರುವುದು ಮುಕ್ತಿ-ಜೀವನ್ಮುಕ್ತಿಗಾಗಿ. ಅದನ್ನಂತು ಮನುಷ್ಯರ್ಯಾರೂ ಸಹ ಕಲಿಸಲು ಸಾಧ್ಯವಿಲ್ಲ. ಇದನ್ನೂ ಬರೆಯಬೇಕು- ಪರಮಪಿತ ಪರಮಾತ್ಮನನ್ನು ಬಿಟ್ಟು ಮತ್ತ್ಯಾರೂ ಸಹ ಮುಕ್ತಿ-ಜೀವನ್ಮುಕ್ತಿಗಾಗಿ ಯೋಗವನ್ನು ಕಲಿಸಲು ಸಾಧ್ಯವೇ ಇಲ್ಲ. ಸರ್ವರ ಸದ್ಗತಿದಾತನಿರುವುದೇ ಒಬ್ಬರು. ಇದನ್ನು ಸ್ಪಷ್ಟವಾಗಿ ಬರೆದುಬಿಡಬೇಕು. ಸನ್ಯಾಸಿಗಳು ಏನನ್ನು ಕಲಿಸುತ್ತಾರೆಂದು ಮನುಷ್ಯರು ಭಲೆ ಓದಲಿ. ಯೋಗ-ಯೋಗವೆಂದೇನು ಹೇಳುತ್ತಾರೆ, ವಾಸ್ತವದಲ್ಲಿ ಯೋಗವನ್ನು ಯಾರೂ ಸಹ ಕಲಿಸಲು ಸಾಧ್ಯವಿಲ್ಲ. ಮಹಿಮೆಯಿರುವುದಂತು ಒಬ್ಬರದೇ ಇದೆ. ವಿಶ್ವದಲ್ಲಿ ಶಾಂತಿಸ್ಥಾಪನೆಯನ್ನು ಮಾಡುವುದು ಅಥವ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುವುದಂತು ತಂದೆಯವರದೇ ಕಾರ್ಯವಾಗಿದೆ. ಅಂತಂತಹ ವಿಚಾರಗಳ ಮಥನಮಾಡುತ್ತಾ ಅಂಶವನ್ನು ತಿಳಿಸಬೇಕಾಗಿದೆ. ಹೀಗೆ ಬರೆಯಬೇಕು, ಮಾತು ಮನುಷ್ಯರಿಗೆ ನೇರವಾಗಿ, ಸ್ಪಷ್ಟವಾಗಿ ನಾಟಿಬಿಡಲಿ. ಪ್ರಪಂಚವಂತು ಬದಲಾಗಲೇಬೇಕು, ಇದಿರುವುದೇ ಮೃತ್ಯುಲೋಕ. ಹೊಸಪ್ರಪಂಚವನ್ನು ಅಮರಲೋಕವೆಂದು ಕರೆಯಲಾಗುತ್ತದೆ. ಅಮರಲೋಕದಲ್ಲಿ ಮನುಷ್ಯರು ಹೇಗೆ ಅಮರರಾಗಿರುತ್ತಾರೆ, ಇದೂ ಸಹ ಆಶ್ಚರ್ಯವಲ್ಲವೆ. ಅಲ್ಲಿ ಆಯಸ್ಸು ಸಹ ಧೀರ್ಘವಾಗಿರುತ್ತದೆ ಮತ್ತು ಸಮಯದಲ್ಲಿ (ಆಯಸ್ಸು ಪೂರ್ಣವಾದಮೇಲೆ) ತಾವಾಗಿಯೇ ಶರೀರವನ್ನು ಬದಲಾಯಿಸಿಬಿಡುತ್ತಾರೆ, ಹೇಗೆಂದರೆ ವಸ್ತ್ರವನ್ನು ಬದಲಾಯಿಸುವಂತೆ ಮಾಡುತ್ತಾರೆ. ಇದೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.

ಮಧುರಾತಿ ಮಧುರ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆ ಹಾಗೂ ದಾದಾರವರ ನೆನಪು-ಪ್ರೀತಿ, ಶುಭರಾತ್ರಿ ಮತ್ತು ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸೃಷ್ಟಿಚಕ್ರದ ಜ್ಞಾನದಿಂದ ಸ್ವಯಂ ತ್ರಿಕಾಲದರ್ಶಿಗಳಾಗಿ ಮತ್ತು ಸ್ವದರ್ಶನ ಚಕ್ರಧಾರಿಗಳಾಗಬೇಕು ಮತ್ತು ಅನ್ಯರನ್ನು ಮಾಡುವ ಸೇವೆಯನ್ನು ಮಾಡಬೇಕಾಗಿದೆ.

2. ಸಂಗಮಯುಗದಲ್ಲಿ ಶೋಕವಾಟಿಕೆಯಿಂದ ಸುಖ-ಶಾಂತಿಯ ವಾಟಿಕೆಯಲ್ಲಿ ಕರೆದುಕೊಂಡು ಹೋಗಲು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

ವರದಾನ:

ಜ್ಞಾನದ ರಮಣೀಕತೆಯಿಂದ ಸ್ಮರಣೆ ಮಾಡುತ್ತಾ ಮುಂದುವರೆಯುವಂತಹ ಸದಾ ಹರ್ಷಿತ, ಅದೃಷ್ಠಶಾಲಿ ಭವ.

ಇದು ಕೇವಲ ಆತ್ಮ, ಪರಮಾತ್ಮನ ಒಣ ಜ್ಞಾನ ಅಲ್ಲ. ಬಹಳ ರಮಣೀಕ ಜ್ಞಾನವಾಗಿದೆ, ಕೇವಲ ಪ್ರತಿದಿನ ತಮ್ಮ ಹೊಸ-ಹೊಸ ಟೈಟಲ್ ಗಳನ್ನು ನೆನಪಿನಲ್ಲಿಟ್ಟುಕೊಳ್ಳಿ - ನಾನು ಆತ್ಮ ಅಂತೂ ಆಗಿರುವೆ. ಆದರೆ ಯಾವ ಆತ್ಮ ಆಗಿರುವೆ, ಕೆಲವೊಮ್ಮ ಕಲಾಕಾರ ಆತ್ಮ, ಕೆಲವೊಮ್ಮೆ ವ್ಯಾಪಾರಿ ಆತ್ಮನಾಗಿರುವೆ..... ಹೀಗೀಗೆ ರಮಣೀಕತೆಯಿಂದ ಮುಂದುವರೆಯುತ್ತಾ ಇರಿ. ಹೇಗೆ ತಂದೆ ಸಹಾ ರಮಣೀಕವಾಗಿದ್ದಾರೆ. ನೋಡಿ ಕೆಲವೊಮ್ಮೆ ಡೋಭಿಯಾಗಿ ಬಿಡುತ್ತಾರೆ. ಕೆಲವೊಮ್ಮೆ ವಿಶ್ವದ ರಚೈತ, ಕೆಲವೊಮ್ಮೆ ವಿಧೇಯ ಸೇವಕ.... ಅದೇ ರೀತಿ ಹೇಗೆ ತಂದೆ ಹಾಗೆ ಮಕ್ಕಳು.... ಅದೇ ರೀತಿ ರಮಣೀಕ ಜ್ಞಾನದ ಸ್ಮರಣೆ ಮಾಡುತ್ತಾ ಹರ್ಷಿತವಾಗಿರಿ, ಆಗ ಹೇಳಲಾಗುವುದು ಅದೃಷ್ಠಶಾಲಿಗಳು.

ಸ್ಲೋಗನ್:

ಸತ್ಯ ಸೇವಾಧಾರಿ ಅವರೇ ಆಗಿದ್ದಾರೆ ಯಾರ ಪ್ರತಿ ನಾಡಿ ಅರ್ಥಾತ್ ಸಂಕಲ್ಪದಲ್ಲಿ ಸೇವೆಯ ಉಮಂಗ-ಉತ್ಸಾಹದ ರಕ್ತ ತುಂಬಿರುವುದು.

 Download PDF

 

Post a Comment

0 Comments