Header Ads Widget

Header Ads

KANNADA MURLI 05.02.23

 

05/02/23  ಪ್ರಾತಃಮುರುಳಿ  ಓಂಶಾಂತಿ  "ಅವ್ಯಕ್ತ-ಬಾಪ್ದಾದಾ"  ರಿವೈಜ್: 09/12/93


Listen to the Murli audio file



ಏಕಾಗ್ರತಾ ಶಕ್ತಿಯಿಂದ ಧೃಡತೆಯ ಮೂಲಕ ಸಫಲತೆಯ ಪ್ರಾಪ್ತಿ

ಇಂದು ಬ್ರಾಹ್ಮಣ ಸಂಸಾರದ(ಜಗತ್ತಿನ) ರಚೈತನು ತನ್ನ ನಾಲ್ಕೂ ದಿಕ್ಕಿನಲ್ಲಿರುವಂತಹ ಬ್ರಾಹ್ಮಣ ಪರಿವಾರವನ್ನು ನೋಡುತ್ತಾ- ಇದೆಷ್ಟು ಚಿಕ್ಕದಾದ ಭಿನ್ನ ಹಾಗೂ ಅತ್ಯಂತ ಪ್ರಿಯವಾದ ಅಲೌಕಿಕ ಬ್ರಾಹ್ಮಣರ ಜಗತ್ತಾಗಿದೆ ಎಂದು ಹರ್ಷಿತವಾಗುತ್ತಿದ್ದಾರೆ. ಇಡೀ ಸೃಷ್ಟಿ ನಾಟಕದಲ್ಲಿ ಅತ್ಯಂತ ಶ್ರೇಷ್ಟವಾದ ಸಂಸಾರವಾಗಿದೆ ಏಕೆಂದರೆ ಬ್ರಾಹ್ಮಣ ಸಂಸಾರದ ಪ್ರತಿಯೊಂದು ಗತಿ-ವಿಧಿಯು ಭಿನ್ನ ಹಾಗೂ ವಿಶೇಷವಾದುದಾಗಿದೆ. ಬ್ರಾಹ್ಮಣ ಸಂಸಾರದಲ್ಲಿರುವ ಬ್ರಾಹ್ಮಣ ಆತ್ಮರೂ ಸಹ ವಿಶ್ವದಿಂದಲೂ ವಿಶೇಷ ಆತ್ಮರಾಗಿದ್ದಾರೆ ಆದ್ದರಿಂದಲೇ ವಿಶೇಷ ಆತ್ಮರುಗಳ ಸಂಸಾರ ಅಥವಾ ಜಗತ್ತಿದೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಶ್ರೇಷ್ಠ ವೃತ್ತಿ, ಶ್ರೇಷ್ಠ ದೃಷ್ಟಿ ಹಾಗೂ ಶ್ರೇಷ್ಠ ಕೃತಿಯು ವಿಶ್ವದ ಸರ್ವ ಆತ್ಮರನ್ನು ಶ್ರೇಷ್ಠರನ್ನಾಗಿ ಮಾಡುವುದಕ್ಕಾಗಿ ನಿಮಿತ್ತವಾಗಿದ್ದಾರೆ. ಪ್ರತಿಯೊಬ್ಬ ಆತ್ಮನ ಮೇಲೆ ಇದೇ ವಿಶೇಷವಾದ ಜವಾಬ್ದಾರಿಯಿದೆ ಅಂದಮೇಲೆ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅನುಭವ ಮಾಡುತ್ತೀರಾ? ಎಷ್ಟೊಂದು ಶ್ರೇಷ್ಠವಾದ ದೊಡ್ಡ ಜವಾಬ್ದಾರಿಯಾಗಿದೆ! ಇಡೀ ವಿಶ್ವದ ಪರಿವರ್ತನೆ! ಕೇವಲ ಆತ್ಮರ ಪರಿವರ್ತನೆ ಮಾಡುವುದಲ್ಲ ಆದರೆ ಪ್ರಕೃತಿಯನ್ನೂ ಪರಿವರ್ತನೆ ಮಾಡುತ್ತೀರಿ. ಸ್ಮೃತಿಯಲ್ಲಿ ಸದಾ ಇರಬೇಕು, ಇದರಲ್ಲಿ ನಂಬರ್ವಾರ್ ಇದ್ದಾರೆ. ಎಲ್ಲಾ ಬ್ರಾಹ್ಮಣ ಆತ್ಮರಲ್ಲಿ ಸದಾ ನಾವು ವಿಶೇಷ ಆತ್ಮರು, ನಂಬರ್ವನ್ ಆಗಬೇಕು ಎಂಬ ಸಂಕಲ್ಪವಿರುತ್ತದೆ ಆದರೆ ಸಂಕಲ್ಪ ಮತ್ತು ಕರ್ಮದಲ್ಲಿ ಅಂತರವಾಗಿಬಿಡುತ್ತದೆ. ಇದಕ್ಕೆ ಕಾರಣವೇನು? ಕರ್ಮ ಮಾಡುವ ಸಮಯದಲ್ಲಿ ಸದಾ ತಮ್ಮ ಸ್ಮೃತಿಯನ್ನು ಅನುಭವಿ ಸ್ಥಿತಿಯಲ್ಲಿ ತರುವುದಿಲ್ಲ. ಕೇಳುವುದು, ತಿಳಿಯುವುದು- ಇವೆರಡೂ ನೆನಪಿರುತ್ತದೆ ಆದರೆ ತಮ್ಮನ್ನು ಅದೇ ಸ್ಥಿತಿಯಲ್ಲಿ ಇಟ್ಟುಕೊಂಡು ನಡೆಯುವುದರಲ್ಲಿ, ಮೆಜಾರಿಟಿ ಕೆಲವೊಮ್ಮೆ ಅನುಭವಿ ಮತ್ತೆ ಕೆಲವೊಮ್ಮೆ ಕೇವಲ ಒಪ್ಪಿಕೊಳ್ಳುವವರು ಹಾಗೂ ತಿಳಿಯುವವರಾಗುತ್ತಾರೆ. ಅನುಭವವನ್ನು ವೃದ್ಧಿ ಮಾಡಿಕೊಳ್ಳುವುದಕ್ಕಾಗಿ ಇವೆರಡು ಮಾತುಗಳ ಮಹತ್ವವನ್ನು ವಿಶೇಷವಾಗಿ ತಿಳಿದುಕೊಳ್ಳಿರಿ- 1. ಸ್ವಯಂನ ಮಹತ್ವ, 2. ಸಮಯದ ಮಹತ್ವ. ಸ್ವಯಂನ ಬಗ್ಗೆ ಬಹಳಷ್ಟು ತಿಳಿದಿರುತ್ತೀರಿ. ಒಂದುವೇಳೆ ತಾವು ಯಾರು ಎಂದು ಯಾರಾದರೂ ಕೇಳಿದರೆ ಅಥವಾ ತಾವೇ ತಮ್ಮೊಂದಿಗೆ ಕೇಳಿಕೊಳ್ಳಿರಿ- ನಾನು ಯಾರು? ಎಷ್ಟು ಮಾತುಗಳ ಸ್ಮೃತಿ ಬರುತ್ತದೆ? ಒಂದು ನಿಮಿಷದೊಳಗೆ ತಮ್ಮ ಎಷ್ಟು ಸ್ವಮಾನಗಳು ನೆನಪಿಗೆ ಬರುತ್ತವೆ? ಒಂದು ನಿಮಿಷದಲ್ಲಿ ಎಷ್ಟು ನೆನಪಿಗೆ ಬರುತ್ತದೆ? ಬಹಳಷ್ಟು ನೆನಪಿಗೆ ಬರುತ್ತದೆ ಅಲ್ಲವೆ. ಸ್ವಯಂನ ಮಹತ್ವವು ಎಷ್ಟೊಂದು ಉದ್ದವಾದ ಪಟ್ಟಿಯಾಗಿದೆ! ಅಂದಮೇಲೆ ಅದನ್ನು ತಿಳಿಯುವುದರಲ್ಲಿ ಬಹಳ ಬುದ್ಧಿವಂತರಾಗಿದ್ದೀರಿ. ಎಲ್ಲರೂ ಬುದ್ಧಿವಂತರು ಅಲ್ಲವೆ? ನಂತರ ಅನುಭವ ಮಾಡುವುದರಲ್ಲೇಕೆ ಅಂತರ ಆಗಿಬಿಡುತ್ತದೆ? ಏಕೆಂದರೆ ಸಮಯದಲ್ಲಿ ಸ್ಥಿತಿಯ ಆಸನದಲ್ಲಿ ಆಸೀನರಾಗುವುದಿಲ್ಲ. ಒಂದುವೇಳೆ ಆಸನದಲ್ಲಿ ಆಸೀನರಾಗುತ್ತೀರೆಂದರೆ ಎಂತಹ ಬಲಹೀನ ಸಂಸ್ಕಾರದವರೇ ಆಗಿರಲಿ, ಯಾವುದೇ ಆತ್ಮರೇ ಆಗಿರಲಿ, ಪ್ರಕೃತಿಯೇ ಆಗಿರಬಹುದು, ಯಾವುದೇ ಪ್ರಕಾರದ ರಾಯಲ್ ಮಾಯೆಯೂ ಸಹ ಅಪ್ಸೆಟ್(ಆಸನದಿಂದ ದೂರ) ಮಾಡಲು ಸಾಧ್ಯವಿಲ್ಲ. ಹೇಗೆ ಶರೀರದ ರೂಪದಲ್ಲಿಯೂ ಬಹಳಷ್ಟು ಆತ್ಮರಿಗೆ ಒಂದು ಆಸನದಲ್ಲಿ ಅಥವಾ ಒಂದು ಸ್ಥಾನದಲ್ಲಿ ಏಕಾಗ್ರವಾಗಿ ಕುಳಿತುಕೊಳ್ಳುವ ಅಭ್ಯಾಸವಿಲ್ಲದಿದ್ದರೆ ಏನು ಮಾಡುತ್ತಾರೆ? ಅಲುಗಾಡುತ್ತಾ ಇರುತ್ತಾರೆ ಅಲ್ಲವೆ. ಅದೇರೀತಿ ಮನಸ್ಸು-ಬುದ್ಧಿಯನ್ನು ಯಾವುದಾದರೂ ಅನುಭವ ಆಸನದಲ್ಲಿ ಆಸೀನರನ್ನಾಗಿ ಮಾಡಲು ಬರದಿದ್ದರೆ, ಈಗೀಗ ಆಸೀನರಾಗುವುದು, ಈಗೀಗ ದೂರವಾಗಿಬಿಡುತ್ತಾರೆ(ಅಪಸೆಟ್ ಆಗುತ್ತಾರೆ). ಶರೀರವನ್ನು ಕುಳ್ಳರಿಸುವುದಕ್ಕಾಗಿ ಸ್ಥೂಲ ಸ್ಥಾನವಿರುತ್ತದೆ, ಹಾಗೆಯೇ ಮನಸ್ಸು-ಬುದ್ಧಿಯನ್ನು ಆಸೀನಗೊಳಿಸುವುದಕ್ಕಾಗಿ ಶ್ರೇಷ್ಠ ಸ್ಥಿತಿಗಳ ಸ್ಥಾನವಿದೆ. ಬಾಪ್ದಾದಾರವರು ಮಕ್ಕಳ ಆಟವನ್ನು ನೋಡುತ್ತಾ ಇರುತ್ತಾರೆ- ಈಗೀಗ ಮಕ್ಕಳು ಒಳ್ಳೆಯ ಸ್ಥಿತಿಯ ಅನುಭವದಲ್ಲಿ ಸ್ಥಿತರಾಗುತ್ತಾರೆ ಮತ್ತೆ ಈಗೀಗ ತಮ್ಮ ಸ್ಥಿತಿಯಿಂದ ಏರುಪೇರಿನಲ್ಲಿ ಬಂದುಬಿಡುತಾರೆ. ಹೇಗೆ ಚಿಕ್ಕಮಕ್ಕಳು ಚಂಚಲ ಮಕ್ಕಳಾಗಿದ್ದರೆ ಒಂದು ಸ್ಥಾನದಲ್ಲಿಯೇ ಹೆಚ್ಚಿನ ಸಮಯ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೀಗೆ ಕೆಲವು ಮಕ್ಕಳು ಬಾಲ್ಯದಲ್ಲಿ ಬಹಳಷ್ಟು ಆಡುತ್ತಾರೆ. ಈಗೀಗ ಬಹಳ ಏಕಾಗ್ರ ಮತ್ತು ಈಗೀಗ ಏಕಾಗ್ರತೆಗೆ ಬದಲು ಭಿನ್ನ-ಭಿನ್ನ ಸ್ಥಿತಿಗಳಲ್ಲಿ ಅಲೆದಾಡುತ್ತಾ ಇರುತ್ತಾರೆ. ಅಂದಾಗ ಸಮಯದಲ್ಲಿ ವಿಶೇಷವಾಗಿ ಸದಾ ಮನಸ್ಸು-ಬುದ್ಧಿಯ ಏಕಾಗ್ರತೆಯಲ್ಲಿ ಗಮನವಿರಬೇಕು.

ಏಕಾಗ್ರತಾ ಶಕ್ತಿಯು ಸಹಜವಾಗಿ ನಿರ್ವಿಘ್ನರನ್ನಾಗಿ ಮಾಡಿಬಿಡುತ್ತದೆ, ಪರಿಶ್ರಮಪಡುವ ಅವಶ್ಯಕತೆಯೇ ಇರುವುದಿಲ್ಲ. ಏಕಾಗ್ರತಾ ಶಕ್ತಿಯು ಸ್ವತಹವಾಗಿಯೇಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲಎಂಬುದನ್ನು ಸದಾ ಅನುಭೂತಿ ಮಾಡಿಸುತ್ತದೆ. ಏಕಾಗ್ರತಾ ಶಕ್ತಿಯು ಸಹಜವಾಗಿ ಏಕರಸ ಸ್ಥಿತಿಯನ್ನಾಗಿ ಮಾಡುತ್ತದೆ. ಏಕಾಗ್ರತಾ ಶಕ್ತಿಯು ಸದಾ ಸಹಜವಾಗಿ ಸರ್ವರ ಬಗ್ಗೆ ಒಂದೇ ಕಲ್ಯಾಣದ ವೃತ್ತಿಯನ್ನಾಗಿ ಮಾಡಿಸುತ್ತದೆ. ಏಕಾಗ್ರತಾ ಶಕ್ತಿಯು ಸರ್ವರಪ್ರತಿ ಸಹೋದರ-ಸಹೋದರನೆಂಬ ದೃಷ್ಟಿಯನ್ನು ಸಹಜವಾಗಿ ಮಾಡಿಸುತ್ತದೆ. ಏಕಾಗ್ರತಾ ಶಕ್ತಿಯು ಪ್ರತಿಯೊಂದು ಆತ್ಮನ ಸಂಬಂಧದಲ್ಲಿ ಸಹಜರೀತಿಯಲ್ಲಿ ಸ್ನೇಹ, ಗೌರವ, ಸ್ವಮಾನದ ಕರ್ಮವನ್ನು ಮಾಡಿಸುತ್ತದೆ. ಅಂದಮೇಲೆ ಈಗ ಏನು ಮಾಡಬೇಕು? ಯಾವುದರ ಬಗ್ಗೆ ಗಮನ ಕೊಡಬೇಕು? ‘ಏಕಾಗ್ರತೆ’. ಇದರಲ್ಲಿ ಸ್ಥಿತರಾಗುತ್ತೀರಿ, ಅನುಭವವನ್ನೂ ಮಾಡುತ್ತೀರಿ ಆದರೆ ಏಕಾಗ್ರ(ಏಕರಸವಾಗಿ) ಅನುಭವಿಯಾಗುವುದಿಲ್ಲ. ಕೆಲವೊಮ್ಮೆ ಶ್ರೇಷ್ಠ ಅನುಭವದಲ್ಲಿ, ಕೆಲವೊಮ್ಮೆ ಮಧ್ಯಮ ಸ್ಥಿತಿ, ಕೆಲವೊಮ್ಮೆ ಸಾಧಾರಣವಾಗಿ, ಮೂರರಲ್ಲಿಯೇ ಸುತ್ತುತ್ತಾ ಇರುತ್ತೀರಿ. ಮನಸ್ಸು-ಬುದ್ಧಿಯು ಸದಾ ತಮ್ಮ ಆದೇಶದನುಸಾರವೇ ನಡೆಯಬೇಕು- ಇಷ್ಟು ಸಮರ್ಥರಾಗಿರಿ. ಸ್ವಪ್ನದಲ್ಲಿಯೂ ಸೆಕೆಂಡಿಗಾಗಿಯೂ ಏರುಪೇರಿನಲ್ಲಿ ಬರಬಾರದು. ಮನಸ್ಸು, ಮಾಲೀಕನನ್ನು ಪರವಶನನ್ನಾಗಿ ಮಾಡಬಾರದು.

ಪರವಶ ಆತ್ಮನ ಚಿಹ್ನೆಯಾಗಿದೆ- ಆತ್ಮನಿಗೆ ಏಕಾಗ್ರತೆ ಮಾಡುವಷ್ಟೂ ಸಮಯ ಸುಖ, ಶಾಂತಿ, ಆನಂದದ ಅನುಭೂತಿ ಮಾಡಬೇಕೆಂದು ಬಯಸಿದರೂ ಸಹ ಅನುಭೂತಿ ಆಗುವುದಿಲ್ಲ. ಬ್ರಾಹ್ಮಣ ಆತ್ಮನೆಂದಿಗೂ ಯಾರಿಗೂ ಪರವಶನಾಗಲು ಸಾಧ್ಯವಿಲ್ಲ, ತನ್ನ ಬಲಹೀನ ಸ್ವಭಾವ ಮತ್ತು ಸಂಸ್ಕಾರದಲ್ಲಿಯೂ ವಶರಾಗುವುದಿಲ್ಲ. ವಾಸ್ತವದಲ್ಲಿಸ್ವಭಾವಶಬ್ಧದ ಅರ್ಥವಾಗಿದೆ- ‘ಸ್ವಯಂನ ಭಾವಎಂದು. ಸ್ವಯಂನ ಭಾವವಂತು ಶುದ್ಧವಾಗಿರುತ್ತದೆ, ಅಶುದ್ಧವಾಗಿರುವುದಿಲ್ಲ. ‘ಸ್ವಎಂದು ಹೇಳುವುದರಿಂದ ಏನು ನೆನಪಿಗೆ ಬರುತ್ತದೆ? ಆತ್ಮಿಕ ಸ್ವರೂಪದ ನೆನಪು ಬರುತ್ತದೆಯಲ್ಲವೆ. ಹಾಗಾದರೆ ಸ್ವ-ಭಾವ ಅರ್ಥಾತ್ ಸ್ವಯಂನ ಬಗ್ಗೆ ಅಥವಾ ಸರ್ವರ ಬಗ್ಗೆ ಆತ್ಮಿಕ ಭಾವವಿರಲಿ. ಯಾವಾಗ ಬಲಹೀನತೆಗೆ ವಶರಾಗಿ ನನ್ನ ಸ್ವಭಾವ ಅಥವಾ ನನ್ನ ಸಂಸ್ಕಾರವೇ ಇಂತಹದ್ದಾಗಿದೆ, ಏನು ಮಾಡಲಿ, ನಾನಿರುವುದೇ ಹೀಗೆ...... ಎಂದು ಯೋಚಿಸುತ್ತೀರಿ, ಇಂತಹ ಶಬ್ಧಗಳನ್ನು ಎಂತಹ ಆತ್ಮನು ಮಾತನಾಡುವನು? ಶಬ್ಧ ಅಥವಾ ಸಂಕಲ್ಪವು ಪರವಶ ಆತ್ಮನದಾಗಿದೆ. ಅಂದಮೇಲೆ ಸಂಕಲ್ಪವು ಯಾವಾಗ ಬರುತ್ತದೆಯೇ ಆಗ ಶ್ರೇಷ್ಠ ಅರ್ಥದಲ್ಲಿ ಸ್ಥಿತರಾಗಿಬಿಡಿ. ಇದು ನನ್ನ ಸಂಸ್ಕಾರ.... ಎನ್ನುವುದು ಬರುತ್ತದೆಯೆಂದರೆ ಇದು ವಿಶೇಷ ಆತ್ಮನಾದ ನನ್ನ ಸಂಸ್ಕಾರವೇ, ಇದಕ್ಕೆ ನನ್ನ ಸಂಸ್ಕಾರವೆಂದು ಹೇಳುತ್ತೀರಾ? ನನ್ನದೆಂದು ಹೇಳುತ್ತೀರೆಂದರೆ ಬಲಹೀನ ಸಂಸ್ಕಾರವನ್ನೂ ಸಹ ನನ್ನದೆನ್ನುವ ಕಾರಣದಿಂದ ಬಿಡುವುದಿಲ್ಲ. ಏಕೆಂದರೆ ಇದು ನಿಯಮವಿದೆ- ಎಲ್ಲಿ ನನ್ನತನವಿರುವುದೋ ಅಲ್ಲಿ ನಮ್ಮದೆನಿಸುತ್ತಿದೆ. ಮತ್ತು ಎಲ್ಲಿ ನಮ್ಮದೆನ್ನುವುದಿರುವುದೋ ಅಲ್ಲಿ ಅಧಿಕಾರವಿರುತ್ತದೆ. ಹಾಗಾದರೆ ಬಲಹೀನ ಸಂಸ್ಕಾರವನ್ನು ನನ್ನದನ್ನಾಗಿ ಮಾಡಿಕೊಂಡರೆ, ಅದು ತನ್ನ ಅಧಿಕಾರವನ್ನು ಬಿಡುವುದಿಲ್ಲ ಆದ್ದರಿಂದ ಪರವಶರಾಗಿ ತಂದೆಯ ಮುಂದೆ ಅರ್ಜಿ ಹಾಕುತ್ತಾ ಇರುತ್ತೀರಿ- ಬಿಡಿಸಿ, ಮುಕ್ತಗೊಳಿಸಿರಿ ಎಂದು. ‘ಸಂಸ್ಕಾರಶಬ್ಧವನ್ನು ಹೇಳುತ್ತಿದ್ದಂತೆಯೇ ನೆನಪು ಮಾಡಿಕೊಳ್ಳಿರಿ- ಅನಾದಿ ಸಂಸ್ಕಾರ, ಆದಿ ಸಂಸ್ಕಾರವೇ ನನ್ನ ಸಂಸ್ಕಾರವಾಗಿದೆ. ಇದು ಮಾಯೆಯ ಸಂಸ್ಕಾರವಾಗಿದೆ ನನ್ನದಲ್ಲ. ಹಾಗಾದರೆ ಏಕಾಗ್ರತಾ ಶಕ್ತಿಯಿಂದ ಪರವಸ ಸ್ಥಿತಿಯನ್ನು ಪರಿವರ್ತನೆ ಮಾಡಿಕೊಂಡು ಮಾಲೀಕತ್ವ ಸ್ಥಿತಿಯ ಆಸನದಲ್ಲಿ ಆಸೀನರಾಗಿರಿ.

ಯೋಗದಲ್ಲಿ ಕುಳಿತುಕೊಳ್ಳುವಾಗ ಎಲ್ಲರೂ ಬಹಳ ರುಚಿಯಿಂದ ಇರುತ್ತಾರೆ ಆದರೆ ಎಷ್ಟು ಸಮಯ, ಯಾವ ಸ್ಥಿತಿಯಲ್ಲಿ ಸ್ಥಿತರಾಗಬೇಕು ಬಯಸುತ್ತಾರೆಯೋ ಅಷ್ಟು ಸಮಯ ಏಕಾಗ್ರ ಸ್ಥಿತಿಯಿರುವ ಅವಶ್ಯಕತೆಯಿದೆ. ಅದಕ್ಕಾಗಿ ಏನು ಮಾಡಬೇಕು? ಯಾವ ಮಾತಿನಲ್ಲಿ ಒತ್ತುಕೊಡುವಿರಿ? (ಏಕಾಗ್ರತೆ) ಏಕಾಗ್ರತೆಯಲ್ಲಿಯೇ ಧೃಡತೆಯಿರುತ್ತದೆ ಹಾಗೂ ಎಲ್ಲಿ ಧೃಡತೆಯಿದೆಯೋ ಅಲ್ಲಿ ಸಫಲತೆಯು ಕೊರಳಿನ ಹಾರವಿರುವುದು. ಒಳ್ಳೆಯದು!

ನಾಲ್ಕೂ ಕಡೆಯಲ್ಲಿನ ಅಲೌಕಿಕ ಬ್ರಾಹ್ಮಣ ಜಗತ್ತಿನ ವಿಶೇಷ ಆತ್ಮರಿಗೆ, ಸದಾ ಶ್ರೇಷ್ಠ ಸ್ಥಿತಿಯ ಅನುಭವದ ಆಸನದಲ್ಲಿ ಆಸೀನರಾಗಿರುವ ಆತ್ಮರಿಗೆ, ಸದಾ ಸ್ವಯಂನ ಮಹತ್ವವನ್ನು ಅನುಭವ ಮಾಡುವಂತಹ, ಸದಾ ಏಕಾಗ್ರತೆಯ ಶಕ್ತಿಯಿಂದ ಮನಸ್ಸು-ಬುದ್ದಿಯನ್ನು ಏಕಾಗ್ರಗೊಳಿಸುವಂತಾ, ಸದಾ ಏಕಾಗ್ರತೆಯ ಶಕ್ತಿಯಿಂದಲೇ ಧೃಡತೆಯ ಮೂಲಕ ಸಹಜ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಸರ್ವಶ್ರೇಷ್ಠ, ಸರ್ವ ವಿಶೇಷ, ಸರ್ವ ಸ್ನೇಹಿ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ ಬಾಪ್ದಾದಾರವರ ವ್ಯಕ್ತಿಗತ ವಾರ್ತಾಲಾಪ

ಹಾರುವ ಕಲೆಯಲ್ಲಿ ಹೋಗುವುದಕ್ಕಾಗಿ ಡಬಲ್ ಲೈಟ್ ಆಗಿರಿ, ಯಾವುದೇ ಆಕರ್ಷಣೆಯು ಆಕರ್ಷಿಸಬಾರದು

ಎಲ್ಲರೂ ತಮ್ಮನ್ನು ವರ್ತಮಾನ ಸಮಯದನುಸಾರ ತೀವ್ರ ಗತಿಯಿಂದ ಹಾರುವಂತಹ ಅನುಭವ ಮಾಡುತ್ತೀರಾ? ಸಮಯದ ಗತಿ ತೀವ್ರವಾಗಿದೆಯೇ ಅಥವಾ ಆತ್ಮರುಗಳ ಪುರುಷಾರ್ಥದ ಗತಿ ತೀವ್ರವಾಗಿದೆಯೇ? ಸಮಯವು ತಮ್ಮ ಹಿಂದೆ-ಹಿಂದೆ ಇದೆಯೇ ಅಥವಾ ತಾವು ಸಮಯದ ಅನುಸಾರ ನಡೆಯುತ್ತಿದ್ದೀರಾ? ಅಂತ್ಯದಲ್ಲಿ ಎಲ್ಲವೂ ಸರಿಯಾಗಿಬಿಡುತ್ತದೆ, ಸಂಪೂರ್ಣರಾಗಿಬಿಡುವೆವು, ತಂದೆಯ ಸಮಾನ ಆಗಿಬಿಡುತ್ತೇವೆ ಎಂದು ಸಮಯದ ನಿರೀಕ್ಷಣೆಯಲ್ಲಂತು ಇಲ್ಲ ಅಲ್ಲವೆ? ಏಕೆಂದರೆ ಡ್ರಾಮಾದ ಲೆಕ್ಕದಿಂದ ವರ್ತಮಾನ ಸಮಯವು ಬಹಳ ತೀವ್ರ ಗತಿಯಿಂದ ಸಾಗುತ್ತಿದೆ, ಅತಿಯಲ್ಲಿ ಹೋಗುತ್ತಿದೆ. ನೆನ್ನೆ ಏನಿತ್ತು, ಅದಕ್ಕಿಂತ ಇಂದು ಇನ್ನೂ ವೇಗವಾಗಿ ಮುಂದೆ ಹೋಗುತ್ತಿದೆ. ಇದಂತು ಗೊತ್ತಿದೆಯಲ್ಲವೆ? ಹೇಗೆ ಸಮಯವು ಅತಿಯಲ್ಲಿ ಹೋಗುತ್ತಿದೆಯೇ ಅದೇರೀತಿ ತಾವು ಶ್ರೇಷ್ಠ ಆತ್ಮರೂ ಸಹ ಪುರುಷಾರ್ಥದಲ್ಲಿ ಅತ್ಯಂತ ತೀವ್ರ ಗತಿಯಿಂದ ಸಾಗುತ್ತಿದ್ದೀರಾ? ಅಥವಾ ಕೆಲವೊಮ್ಮೆ ನಿಧಾನ, ಕೆಲವೊಮ್ಮೆ ತೀವ್ರಗತಿಯಿದೆಯೇ? ಕೆಳಗೆ ಬಂದು ನಂತರ ಮೇಲೆ ಹೋಗುತ್ತಿದ್ದೇವೆ ಎನ್ನುವಂತಿಲ್ಲವೆ. ಏರುಪೇರು ಆಗುವವರ ಗತಿಯೆಂದಿಗೂ ಸಹ ಏಕರಸವಾದ ತೀವ್ರಗತಿಯಾಗಲು ಸಾಧ್ಯವಿಲ್ಲ. ಅಂದಮೇಲೆ ಸದಾ ಸರ್ವ ಮಾತುಗಳಲ್ಲಿ ಶ್ರೇಷ್ಠ ಅಥವಾ ತೀವ್ರ ಗತಿಯಿಂದ ಹಾರುವವರಾಗಿರಿ. ಮಹಿಮೆಯಂತು ಇದೆ- ‘ತಮ್ಮ ಏರುವ ಕಲೆಯಿಂದ ಸರ್ವರ ಕಲ್ಯಾಣಆದರೆ ಈಗ ಏನು ಹೇಳುವಿರಿ? ‘ಹಾರುವ ಕಲೆ, ಸರ್ವರ ಕಲ್ಯಾಣ’. ಈಗ ಏರುವ ಕಲೆಯ ಸಮಯವೂ ಸಮಾಪ್ತಿಯಾಯಿತು, ಈಗ ಹಾರುವ ಕಲೆಯ ಸಮಯವಾಗಿದೆ ಅಂದಮೇಲೆ ಹಾರುವ ಕಲೆಯ ಸಮಯದಲ್ಲಿ ಯಾರಾದರೂ ಏರುವ ಕಲೆಯಿಂದ ತಲುಪಲು ಬಯಸಿದರೆ ತಲುಪಲು ಸಾಧ್ಯವಾಗುವುದೆ? ಇಲ್ಲ. ಆದ್ದರಿಂದ ಸದಾ ಹಾರುವ ಕಲೆಯಿರಲಿ. ಹಾರುವ ಕಲೆಯ ಲಕ್ಷಣಗಳಾಗಿವೆ- ಸದಾ ಡಬಲ್ ಲೈಟ್ ಆಗಿರುವುದು. ಡಬಲ್ ಲೈಟ್ ಆಗಿರದಿದ್ದರೆ ಹಾರುವ ಕಲೆಯಾಗಲು ಸಾಧ್ಯವಿಲ್ಲ. ಸ್ವಲ್ಪವೇನಾದರೂ ಹೊರೆಯಿದ್ದರೂ ಕೆಳಗೆ ಕರೆತರುತ್ತದೆ. ಹೇಗೆ ವಿಮಾನದಲ್ಲಿ ಹೋಗುತ್ತೀರಿ, ಹಾರುತ್ತೀರೆಂದರೆ ಅದರಲ್ಲೇನಾದರೂ ಯಂತ್ರದಲ್ಲಿ ಅಥವಾ ಇಂದನದಲ್ಲಿ ಸ್ವಲ್ಪ ಅಶುದ್ಧತೆಯಿದ್ದರೂ ಗತಿಯೇನಾಗುವುದು? ಹಾರುವ ಕಲೆಯಿಂದ ಬೀಳುವ ಕಲೆಯಲ್ಲಿ ಬಂದುಬಿಡುತ್ತದೆ. ಅದೇರೀತಿ ಇಲ್ಲಿಯೂ ಸಹ ಒಂದುವೇಳೆ ಯಾವುದೇ ಪ್ರಕಾರದ ಹೊರೆಯಿದ್ದರೆ, ಅದು ಸಂಸ್ಕಾರವಾಗಿರಬಹುದು, ವಾಯುಮಂಡಲದ್ದಾಗಿರಬಹುದು, ಯಾವುದೇ ಆತ್ಮನ ಸಂಬಂಧ-ಸಂಪರ್ಕದ ಹೊರೆಯಿದ್ದರೆ ಹಾರುವ ಕಲೆಯಿಂದ ಏರುಪೇರಿನಲ್ಲಿ ಬಂದುಬಿಡುತ್ತಾರೆ. ಹೇಳುವುದಕ್ಕೆ ನಾನು ಚೆನ್ನಾಗಿದ್ದೇನೆ ಎಂದು ಹೇಳುತ್ತಾರೆ ಆದರೆ ಕಾರಣವಿದೆಯಲ್ಲವೆ ಆದ್ದರಿಂದ ಸಂಸ್ಕಾರದ, ವ್ಯಕ್ತಿಯ, ವಾಯುಮಂಡಲದ ಬಂಧನವಿದೆ. ಆದರೆ ಕಾರಣವೇನಾದರೂ ಆಗಿರಲಿ, ಏನಾದರೂ ಆಗಿರಬಹುದು ಆದರೆ ತೀವ್ರ ಪುರುಷಾರ್ಥಿಯು ಎಲ್ಲಾ ಮಾತುಗಳನ್ನೂ ರೀತಿ ಪರಿಹರಿಸುತ್ತಾ ಮುಂದೆ ಸಾಗುತ್ತಾನೆ, ಹೇಗೆಂದರೆ ಏನೂ ಸಮಸ್ಯೆಯೇ ಇಲ್ಲವೆಂಬಂತೆ. ಪರಿಶ್ರಮವೇ ಇಲ್ಲ, ಮನೋರಂಜನೆಯ ಅನುಭವ ಮಾಡುವರು. ಇಂತಹ ಸ್ಥಿತಿಗೆ ಹೇಳಲಾಗುತ್ತದೆ- ಹಾರುವ ಕಲೆ. ಹಾಗಾದರೆ ಹಾರುವ ಕಲೆಯಿದೆಯೇ ಅಥವಾ ಕೆಲ-ಕೆಲವೊಮ್ಮೆ ಕೆಳಗೆ ಬರುವ, ಪರಿಕ್ರಮಣ ಹಾಕುವ ಮನಸ್ಸಾಗುವುದೇ! ಎಲ್ಲಿಯೂ ಸೆಳೆತವಿರಬಾರದು. ಸ್ವಲ್ಪವೂ ಯಾವುದರ ಆಕರ್ಷಣೆಯೂ ಆಕರ್ಷಿಸಬಾರದು. ರಾಕೆಟ್ ಯಾವಾಗ ಹಾರಲು ಸಾಧ್ಯವಾಗುವುದೋ ಆಗ ಧರಣಿಯ ಆಕರ್ಷಣೆಯಿಂದ ದೂರವಾಗಿಬಿಡುವುದು. ಇಲ್ಲದಿದ್ದರೆ ಮೇಲೆ ಹಾರಲು ಸಾಧ್ಯವಾಗುವುದಿಲ್ಲ. ಬಯಸದಿದ್ದರೂ ಕೆಳಗೆ ಬಂದುಬಿಡುತ್ತದೆ. ಅಂದಾಗ ಯಾವುದೇ ಆಕರ್ಷಣೆಯು ಮೇಲೆ(ಶ್ರೇಷ್ಠಮಟ್ಟಕ್ಕೆ) ಕರೆದೊಯ್ಯಲು ಸಾಧ್ಯವಿಲ್ಲ. ಸಂಪೂರ್ಣರಾಗುವುದಕ್ಕೂ ಬಿಡುವುದಿಲ್ಲ. ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿರಿ- ಸಂಕಲ್ಪದಲ್ಲಾದರೂ ಯಾವುದೇ ಆಕರ್ಷಣೆಯು ಆಕರ್ಷಿಸಬಾರದು. ತಂದೆಯ ಹೊರತು ಮತ್ತ್ಯಾವುದೇ ಆಕರ್ಷಣೆಯು ಇರಬಾರದು. ಪಾಂಡವರು ಏನು ತಿಳಿಯುವಿರಿ? ಇಂತಹ ತೀವ್ರ ಪುರುಷಾರ್ಥಿಯಾಗಿರಿ. ಆಗಲೇಬೇಕು ಅಲ್ಲವೆ. ಎಷ್ಟುಬಾರಿ ಹೀಗೆ ಆಗಿದ್ದೀರಿ? ಅನೇಕಬಾರಿ ಆಗಿದ್ದೀರಿ. ತಾವೇ ಆಗಿದ್ದಿರಾ ಅಥವಾ ಅನ್ಯರೇನಾದರೂ ಆಗಿದ್ದರೆ? ತಾವೇ ಆಗಿದ್ದೀರಿ. ಅಂದಮೇಲೆ ನಂಬರ್ವಾರ್ನಲ್ಲಿ ಬರಬಾರದಲ್ಲವೆ, ನಂಬರ್ವನ್ನಲ್ಲಿ ಬರಬೇಕು. ಮಾತೆಯರು ಏನು ಮಾಡುವಿರಿ? ನಂಬರ್ವನ್ ಆಗುವಿರೇ ಅಥವಾ ನಂಬರ್ವಾರ್ ನಲ್ಲಿ ಹೋಗುವಿರಾ? 108 ಮಾಲೆಯಲ್ಲಿ ಬಂದರೂ ನಡೆಯುತ್ತದೆಯೇ (ಒಪ್ಪಿಗೆಯೇ)? 108 ನಂಬರಿನವರಾಗುವಿರೇ ಅಥವಾ ನಂಬರ್ವನ್ ಆಗುವಿರೇ? ಒಂದುವೇಳೆ ತಂದೆಯ ಮಕ್ಕಳಾಗಿದ್ದೀರಿ, ಅಧಿಕಾರಿಯಾಗಿದ್ದೀರೆಂದರೆ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾ ಅಥವಾ ಸ್ವಲ್ಪ ಕಡಿಮೆಯೇ? ಹಾಗಾದರೆ ನಂಬರ್ವನ್ ಆಗುವಿರಲ್ಲವೇ! ದಾತಾ ಸಂಪೂರ್ಣವಾಗಿ ಕೊಡುತ್ತಿರುವರು, ಮತ್ತೆ ತೆಗೆದುಕೊಳ್ಳುವವರು ಕಡಿಮೆ ತೆಗೆದುಕೊಂಡರೆ ಏನು ಹೇಳುವರು? ಆದ್ದರಿಂದಲೇ ನಂಬರ್ವನ್ ಆಗಬೇಕಾಗಿದೆ. ನಂಬರ್ವನ್ ಭಲೆ ಒಬ್ಬರೇ ಆಗಿರಬಹುದು ಆದರೆ ನಂಬರ್ವನ್ ದರ್ಜೆಯಲ್ಲಂತು ಅನೇಕರಿದ್ದಾರಲ್ಲವೆ. ಅಂದಮೇಲೆ ಎರಡನೇ ನಂಬರಿನಲ್ಲಿ ಬರಬಾರದು. ತೆಗೆದುಕೊಳ್ಳಬೇಕೆಂದರೆ ಸಂಪೂರ್ಣವಾಗಿ ತೆಗೆದುಕೊಳ್ಳಬೇಕು, ಅರ್ಧದಷ್ಟು ತೆಗೆದುಕೊಳ್ಳುವವರಂತು ಹಿಂದಿಂದೆ ಬಹಳಷ್ಟು ಬರುವರು. ಆದರೆ ತಾವಂತು ಸಂಪೂರ್ಣ ತೆಗೆದುಕೊಳ್ಳಬೇಕು. ಎಲ್ಲರೂ ಸಂಪೂರ್ಣ ತೆಗೆದುಕೊಳ್ಳುವವರೇ ಅಥವಾ ಸ್ವಲ್ಪದರಲ್ಲಿಯೇ ಖುಷಿಪಡುವವರೇ? ಯಾವಾಗ ತೆರೆದ ಭಂಡಾರವೇ ಇದೆ ಆಗೂ ಅಕೂಟವಾಗಿದೆ ಅಂದಮೇಲೆ ಏಕೆ ಸ್ವಲ್ಪ ತೆಗೆದುಕೊಳ್ಳುವಿರಿ? ಬೇಹದ್ದಿನದಲ್ಲವೆ, 8000 ಇವರಿಗೆ ಸಿಗಬೇಕು, 10 ಸಾವಿರ ಇವರಿಗೆ ಸಿಗಬೇಕು ಎನ್ನುವಷ್ಟು ಮಿತಿಯಾಗಿಲ್ಲ, ಇಲ್ಲದಿದ್ದರೆ ಹೀಗೆ ಹೇಳುತ್ತಾರೆ- ಇವರ ಭಾಗ್ಯದಲ್ಲಿ ಇಷ್ಟೇ ಇದೆ, ಆದರೆ ತಂದೆಯ ಭಂಡಾರವು ತೆರೆದ ಭಂಡಾರವಾಗಿದೆ, ಅಕೂಟವಾಗಿದೆ. ಎಷ್ಟು ಬೇಕೋ ಅಷ್ಟೂ ತೆಗೆದುಕೊಂಡರೂ ಅಕೂಟವಾಗಿದೆ(ಖಾಲಿಯಾಗುವುದೇ ಇಲ್ಲ). ಅಕೂಟ ಖಜಾನೆಯ ಮಾಲೀಕರಾಗಿದ್ದೀರಿ ಅಂದಮೇಲೆ ಎಲ್ಲರೂ ಸದಾ ಖುಷಿಯಾಗಿರುವವರಾಗಿ ಇದ್ದೀರಾ ಅಥವಾ ಕೆಲವೊಮ್ಮೆಗೆ ಸ್ವಲ್ಪ-ಸ್ವಲ್ಪ ದುಃಖದ ಪ್ರಕಂಪನವಂತು ಬರುವುದಿಲ್ಲವೇ? ದುಃಖದ ಪ್ರಕಂಪನವು ಸ್ವಪ್ನದಲ್ಲಿಯೂ ಬರಲು ಸಾಧ್ಯವಿಲ್ಲ. ಸಂಕಲ್ಪವನ್ನಂತು ಬಿಟ್ಟುಬಿಡಿ ಆದರೆ ಸ್ವಪ್ನದಲ್ಲಿಯೂ ಬರಲು ಸಾಧ್ಯವಿಲ್ಲ. ಇದಕ್ಕೆ ನಂಬರ್ವನ್ ಎಂದು ಹೇಳಲಾಗುತ್ತದೆ. ಯಾವ ಚಮತ್ಕಾರ ಮಾಡಿ ತೋರಿಸುವಿರಿ? ಎಲ್ಲರೂ ನಂಬರ್ವನ್ನಲ್ಲಿ ಬಂದು ತೋರಿಸುವಿರಲ್ಲವೆ?

ಅದೇರೀತಿಯಾಗಿ ದೆಹಲಿಯನ್ನು ದಿಲ್(ಹೃದಯ) ಎಂದು ಹೇಳುತ್ತಾರೆ. ಹಾಗಾದರೆ ಎಂತಹ ಹೃದಯವಿರುತ್ತದೆಯೋ ಅದೇರೀತಿಯಲ್ಲಿ ಶರೀರವೂ ನಡೆಯುತ್ತದೆ. ಆಧಾರವಂತು ಹೃದಯವಲ್ಲವೆ. ಹೃದಯವಿರುವುದು ಹೃದಯರಾಮನ ಹೃದಯವಾಗಿದೆ. ಅಂದಮೇಲೆ ಹೃದಯದ ಸಿಂಹಾಸನವೂ ಯಥಾರ್ಥವಾಗಿರುವುದೇ ಇರಬೇಕಲ್ಲವೆ, ಏರುಪೇರಿರುವ ಸಿಂಹಾಸನವಾಗಿರಬಾರದು. ನಾವು ಹೃದಯರಾಮನ ಹೃದಯವಾಗಿದ್ದೇವೆ ಎಂದು ನಶೆಯಿದೆಯಲ್ಲವೆ, ಹಾಗಾದರೆ ಈಗ ತಮ್ಮ ಶ್ರೇಷ್ಠ ಸಂಕಲ್ಪಗಳಿಂದ ತಮ್ಮನ್ನು ಹಾಗೂ ವಿಶ್ವವನ್ನು ಪರಿವರ್ತನೆಗೊಳಿಸಿರಿ. ಸಂಕಲ್ಪ ಮಾಡಿದಿರಿ ಮತ್ತು ಕರ್ಮವಾಯಿತು ಎನ್ನುವಂತಾಗಬೇಕು, ಆದರೆ ಬಹಳಷ್ಟು ಯೋಚಿಸಿದ್ದೆವು, ಆಗಿದ್ದು ಬಹಳ ಕಡಿಮೆ ಎನ್ನುವಂತೆ ಆಗಬಾರದು, ಅಂತಹವರು ತೀವ್ರ ಪುರುಶಾರ್ಥಿಗಳಲ್ಲ. ತೀವ್ರ ಪುರುಶಾರ್ಥಿ ಎಂದರೆ ಸಂಕಲ್ಪ ಮತ್ತು ಕರ್ಮವು ಸಮಾನವಾಗಿ ಇದ್ದಾಗಲೇ ತಂದೆಯ ಸಮಾನ ಎಂದು ಹೇಳಲಾಗುತ್ತದೆ. ಖುಷಿಯಿದೆ ಹಾಗೂ ಖುಷಿಯಾಗಿ ಇರುತ್ತೇವೆ ಎಂಬ ಪರಿಪಕ್ವ ನಿಶ್ಚಯವಿದೆ ಅಲ್ಲವೆ. ಖುಷಿಯಾಗಿ ಇರುವವರೇ ಖುಷ್ನಸೀಬ್(ಅದೃಷ್ಟವಂತರು) ಆಗಿದ್ದಾರೆ. ಇದು ಪರಿಪಕ್ವವಾಗಿ ಇದೆಯೇ ಅಥವಾ ಸ್ವಲ್ಪ-ಸ್ವಲ್ಪ ಕಚ್ಚಾ ಆಗಿಬಿಡುತ್ತದೆಯೇ? ಅಪೂರ್ಣವಾದ ವಸ್ತುವು ಇಷ್ಟವಾಗುವುದೇ? ಪರಿಪಕ್ವವಾದುದನ್ನು ಇಷ್ಟಪಡುತ್ತಾರೆ. ಅಂದಮೇಲೆ ಸಂಪೂರ್ಣವಾಗಿ ಪರಿಪಕ್ವವಾಗಿ ಇರಬೇಕು.

ಪ್ರತಿನಿತ್ಯ ಅಮೃತವೇಳೆಯಲ್ಲಿ ಪಾಠವನ್ನು ಪರಿಪಕ್ವ ಮಾದಿಕೊಳ್ಳಿರಿ- ಏನಾದರೂ ಆಗಲಿ ಖುಷಿಯಾಗಿರಬೇಕು, ಖುಷಿ ಪಡಿಸಬೇಕು. ಒಳ್ಳೆಯದು, ಮತ್ತಾವುದೇ ಆಟವನ್ನು ತೋರಿಸಬಾರದು. ಇದೇ ಆಟವನ್ನು ತೋರಿಸಿರಿ, ಅನ್ಯಯಾವುದೇ ಆಟವನ್ನು ಆಡಬಾರದು. ಒಳ್ಳೆಯದು.

ವರದಾನ:

ವರದಾನ: ಭಾಗ್ಯ ಮತ್ತು ಭಾಗ್ಯವಿಧಾತ ತಂದೆಯ ಸ್ಮತಿಯಲ್ಲಿರುತ್ತಾ ಭಾಗ್ಯ ಹಂಚುವಂತಹ ವಿಶಾಲ ಹೃದಯಿ ಮಹಾದಾನಿ ಭವ.

ಭಾಗ್ಯವಿಧಾತ ತಂದೆ ಮತ್ತು ಭಾಗ್ಯ ಎರಡೂ ಸಹ ನೆನಪಿನಲ್ಲಿದ್ದಾಗ ಬೇರೆಯವರನ್ನೂ ಸಹ ಭಾಗ್ಯವಾನ್ ಮಾಡುವಂತಹ ಉಮಂಗ-ಉತ್ಸಾಹ ಇರುವುದು. ಹೇಗೆ ಭಾಗ್ಯವಿಧಾತ ತಂದೆ ಬ್ರಹ್ಮಾರವರ ಮೂಲಕ ಭಾಗ್ಯವನ್ನು ಹಂಚುತ್ತಾರೆ. ಅದೇ ರೀತಿ ನೀವೂ ಸಹ ದಾತಾನ ಮಕ್ಕಳಾಗಿರುವಿರಿ, ಭಾಗ್ಯವನ್ನು ಹಂಚುತ್ತಾ ಹೋಗಿ, ಅವರು ಬಟ್ಟೆ ಹಂಚುತ್ತಾರೆ, ದವಸ-ಧಾನ್ಯ ಹಂಚುತ್ತಾರೆ, ಕೆಲವರು ಉಡುಗೊರೆ ಕೊಡುತ್ತಾರೆ..... ಆದರೆ ಅದರಿಂದ ಯಾರೂ ತೃಪ್ತರಾಗಲು ಸಾಧ್ಯವಿಲ್ಲ. ನೀವು ಭಾಗ್ಯವನ್ನು ಹಂಚಿದರೆ ಎಲ್ಲಿ ಭಾಗ್ಯವಿದೆ. ಅಲ್ಲಿ ಎಲ್ಲಾ ಪ್ರಾಪ್ತಿಗಳೂ ಇವೆ. ಹೀಗೆ ಭಾಗ್ಯ ಹಂಚುವುದರಲ್ಲಿ ವಿಶಾಲಹೃದಯಿಗಳಾಗಿ, ಶ್ರೇಷ್ಠ ಮಹಾದಾನಿಗಳಾಗಿ. ಸದಾ ಕೊಡುತ್ತಿರಿ.

ಸ್ಲೋಗನ್:

ಸ್ಲೋಗನ್: ಯಾರು ಏಕನಾಮಿಯಾಗಿರುತ್ತಾರೆ ಮತ್ತು ಎಕಾನಾಮಿಯಿಂದ ನಡೆಯುತ್ತಾರೆ ಅವರೇ ಫ್ರಭು ಪ್ರಿಯರಾಗಿದ್ದಾರೆ.

 Download PDF

 

Post a Comment

0 Comments