04/02/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ತಂದೆಯಿಂದ
ಸರ್ವ ಸಂಬಂಧಗಳ
ಸುಖವನ್ನು ತೆಗೆದುಕೊಳ್ಳಬೇಕಾದರೆ
ಬೇರೆಲ್ಲದರಿಂದ ಬುದ್ಧಿಯ
ಪ್ರೀತಿಯನ್ನು ತೆಗೆದುಹಾಕಿ
ನನ್ನೊಬ್ಬನನ್ನೇ ನೆನಪು
ಮಾಡುವುದೇ ಗುರಿಯಾಗಿದೆ”
ಪ್ರಶ್ನೆ:
ನೀವು ಮಕ್ಕಳು ಈ ಸಮಯದಲ್ಲಿ ಯಾವ ಒಂದು ಒಳ್ಳೆಯ ಕರ್ಮವನ್ನು ಮಾಡುತ್ತೀರಿ, ಅದಕ್ಕೆ ಬದಲಾಗಿ ನೀವು ಶ್ರೀಮಂತರಾಗುತ್ತೀರಿ?
ಉತ್ತರ:
ಎಲ್ಲದಕ್ಕಿಂತ ಒಳ್ಳೆಯ ಕರ್ಮವು ಜ್ಞಾನರತ್ನಗಳ ದಾನ ಮಾಡುವುದಾಗಿದೆ. ಈ ಅವಿನಾಶಿ ಜ್ಞಾನದ ಖಜಾನೆಯು ವರ್ಗಾವಣೆಯಾಗಿ
21 ಜನ್ಮಗಳಿಗೋಸ್ಕರ ವಿನಾಶಿ ಧನವಾಗುತ್ತದೆ. ಇದರಿಂದ ಸಂಪನ್ನರಾಗುತ್ತೀರಿ.
ಯಾರು ಎಷ್ಟು ಜ್ಞಾನರತ್ನಗಳನ್ನು ಧಾರಣೆ ಮಾಡಿಕೊಂಡು ಅನ್ಯರಿಗೆ ಮಾಡಿಸುತ್ತಾರೋ ಅಷ್ಟು ಶ್ರೀಮಂತರಾಗುತ್ತಾರೆ. ಅವಿನಾಶಿ ಜ್ಞಾನರತ್ನಗಳ ದಾನ ಮಾಡುವುದು ಸರ್ವೋತ್ತಮ ಸೇವೆಯಾಗಿದೆ.
ಓಂ ಶಾಂತಿ.
ಶಿವತಂದೆಯು ತನ್ನ ಸಾಲಿಗ್ರಾಮ ಮಕ್ಕಳಿಗೆ ತಿಳಿಸಿಕೊಡುತ್ತಿದ್ದಾರೆ. ಇದು ಪರಮಾತ್ಮ ತನ್ನ ಮಕ್ಕಳಿಗೆ, ಆತ್ಮಗಳ ಪ್ರತಿ ಕೊಡುವ ಜ್ಞಾನವಾಗಿದೆ. ಆತ್ಮ,
ಆತ್ಮಕ್ಕೆ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ.
ಶಿವಪರಮಾತ್ಮನು ಕುಳಿತು ಬ್ರಹ್ಮಾ, ಸರಸ್ವತಿ ಮತ್ತು ನೀವು ಅದೃಷ್ಟ ನಕ್ಷತ್ರ ಮಕ್ಕಳ ಪ್ರತಿ ತಿಳಿಸಿಕೊಡುತ್ತಿದ್ದಾರೆ ಆದ್ದರಿಂದ ಇದಕ್ಕೆ ಪರಮಾತ್ಮನ ಜ್ಞಾನವೆಂದು ಹೇಳಲಾಗುತ್ತದೆ.
ಪರಮಾತ್ಮ ತಂದೆಯು ಒಬ್ಬರಾಗಿದ್ದಾರೆ. ಬಾಕಿ ಎಲ್ಲರೂ ರಚಯಿತನ ರಚನೆಯಾಗಿದ್ದಾರೆ ಹೇಗೆ ಲೌಕಿಕದ ತಂದೆಯು ಇವರೆಲ್ಲರೂ ನನ್ನ ರೂಪವೆಂದು ಹೇಳುವುದಿಲ್ಲ.
ಆದರೆ ಇವರು ನನ್ನ ರಚನೆಯೆಂದು ಹೇಳುತ್ತಾರೆ ಅಂದಾಗ ಈ ಆತ್ಮೀಯ ತಂದೆಗೂ ಸಹ ಪಾತ್ರವು ಸಿಕ್ಕಿದೆ.
ಅವರೇ ಮುಖ್ಯ ಪಾತ್ರಧಾರಿ, ರಚಯಿತ ಮತ್ತು ನಿರ್ದೇಶಕನಾಗಿದ್ದಾರೆ. ಆತ್ಮಕ್ಕೆ ರಚಯಿತನೆಂದು ಹೇಳಲಾಗುವುದಿಲ್ಲ. ನಿನ್ನ ಗತಿಮತಿ ನಿನಗೆ ತಿಳಿದಿದೆಯೆಂದು ಪರಮಾತ್ಮನಿಗೆ ಹೇಳುತ್ತಾರೆ. ಆ ಎಲ್ಲಾ ಗುರುಗಳಿಗೆ ತಮ್ಮತಮ್ಮದೇ ಆದ ಬೇರೆ ಮತವಿದೆ.
ಆದ್ದರಿಂದ ಪರಮಾತ್ಮನೇ ಬಂದು ಎಲ್ಲರಿಗೂ ಒಂದೇ ಮತವನ್ನು ಕೊಡುತ್ತಿದ್ದಾರೆ. ಅವರು ಅತೀ ವಿಧೇಯನಾಗಿದ್ದಾರೆ. ಆ ಒಬ್ಬ ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕು ಮತ್ತು ಅನ್ಯರ ಜೊತೆ ನಿಮ್ಮ ಪ್ರೀತಿಯನ್ನಿಟ್ಟುಕೊಂಡಿದ್ದರೆ ಅದೆಲ್ಲವೂ ಪೆಟ್ಟು ಕೊಡುವುದಾಗಿದೆ ಆದ್ದರಿಂದ ಅವರೆಲ್ಲರಿಂದ ಬುದ್ಧಿಯೋಗವನ್ನು ತೆಗೆದುಹಾಕಬೇಕು. ನಾನು ಎಲ್ಲಾ ಸಂಬಂಧಗಳ ಸುಖವನ್ನು ಕೊಡುತ್ತೇನೆ ಕೇವಲ ನನ್ನೊಬ್ಬನನ್ನೆ ನೆನಪು ಮಾಡಿ, ಇದೇ ನಿಮ್ಮ ಗುರಿಯಾಗಿದೆ.
ನಾನು ಎಲ್ಲರ ಡಿಯರೆಸ್ಟ್ ಡ್ಯಾಡ್
(ಪ್ರೀತಿಯ ತಂದೆ)
ಆಗಿದ್ದೇನೆ, ಶಿಕ್ಷಕನಾಗಿದ್ದೇನೆ, ಗುರುವಾಗಿದ್ದೇನೆ. ತಂದೆಯ ಮುಖಾಂತರ ನಮಗೆ ಜೀವನ್ಮುಕ್ತಿಯು ಸಿಗುತ್ತದೆಯೆಂದು ನಿಮಗೆ ತಿಳಿದಿದೆ.
ಇದು ಅವಿನಾಶಿ ಜ್ಞಾನದ ಖಜಾನೆಯಾಗಿದೆ.
ಈ ಖಜಾನೆಯು ವರ್ಗಾವಣೆಯಾಗಿ 21 ಜನ್ಮಗಳಿಗೋಸ್ಕರ ವಿನಾಶಿ ಧನವಾಗುತ್ತದೆ.
21 ಜನ್ಮ ನಾವು ಬಹಳ ಸಂಪನ್ನರಾಗಿರುತ್ತೇವೆ. ಅದರಿಂದ ರಾಜರಿಗಿಂತ ರಾಜರೂ ಆಗುತ್ತೇವೆ ಕೇವಲ ಈ ಅವಿನಾಶಿ ಧನದ ದಾನ ಮಾಡಬೇಕು.
ಮೊದಲು ವಿನಾಶಿ ಧನ ದಾನ ಮಾಡುತ್ತಿದ್ದಾಗ ಅಲ್ಪಕಾಲದ ಕ್ಷಣಭಂಗುರ ಸುಖವು ಮುಂದಿನ ಜನ್ಮದಲ್ಲಿ ಸಿಗುತ್ತಿತ್ತು. ಹಿಂದಿನ ಜನ್ಮದಲ್ಲಿ ದಾನ-ಪುಣ್ಯ ಮಾಡಿರುವುದರಿಂದ ಫಲ ಸಿಕ್ಕಿದೆಯೆಂದು ಹೇಳುತ್ತಿದ್ದರು. ಆ ಫಲವು ಒಂದೇ ಜನ್ಮದಲ್ಲಿ ಸಿಗುತ್ತಿತ್ತು.
ಜನ್ಮ-ಜನ್ಮಾಂತರ ಪ್ರಾಲಬ್ಧವೆಂದು ಹೇಳಲಾಗುವುದಿಲ್ಲ. ಈಗ ನಾವು ಏನು ಮಾಡುತ್ತೇವೋ ಅದರ ಪ್ರಾಲಬ್ಧವು ಜನ್ಮ-ಜನ್ಮಾಂತರವೂ ಸಿಗುತ್ತದೆ ಅಂದಾಗ ಇದು ಅನೇಕ ಜನ್ಮಗಳ ಆಟವಾಗಿದೆ.
ಆದ್ದರಿಂದ ಪರಮಾತ್ಮನಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕು. ಎಲ್ಲದಕ್ಕಿಂತ ಒಳ್ಳೆಯ ಕರ್ಮ ಅವಿನಾಶಿ ಜ್ಞಾನದ ಖಜಾನೆಯನ್ನು ದಾನ ಮಾಡುವುದಾಗಿದೆ. ಎಷ್ಟು ಧಾರಣೆ ಮಾಡಿ ಅನ್ಯರಿಗೂ ಮಾಡಿಸುತ್ತೀರೋ ಅಷ್ಟು ಸ್ವಯಂ ಸಾಹುಕಾರರಾಗುತ್ತೀರಿ ಮತ್ತು ಅನ್ಯರನ್ನೂ ಮಾಡಿಸುತ್ತೀರಿ.
ಇದು ಸರ್ವೋತ್ತಮ ಸೇವೆಯಾಗಿದೆ. ಇದರಿಂದಲೇ ಸದ್ಗತಿಯೂ ಆಗುತ್ತದೆ.
ದೇವತೆಗಳ ರೀತಿ-ಸಂಪ್ರದಾಯವನ್ನು ನೋಡಿ.
ಹೇಗೆ ಸಂಪೂರ್ಣ ನಿರ್ವಿಕಾರಿ, ಅಹಿಂಸಾ ಪರಮೋಧರ್ಮಿಗಳಾಗಿದ್ದರು. ಸಂಪೂರ್ಣ ಪವಿತ್ರತೆಯು ಸತ್ಯಯುಗ,
ತ್ರೇತಾಯುಗದಲ್ಲಿರುತ್ತದೆ. ದೇವತೆಗಳು ಸ್ವರ್ಗದಲ್ಲಿ ಇರುವ ಕಾರಣ ಅವರನ್ನು ಶ್ರೇಷ್ಟರೆಂದು ಗಾಯನ ಮಾಡುತ್ತಾರೆ. ಯಾರು ಸೂರ್ಯವಂಶಿ ಸತ್ಯಯುಗದಲ್ಲಿರುತ್ತರೋ ಅವರೇ ಸಂಪೂರ್ಣರಾಗಿರುತ್ತಾರೆ ನಂತರ ಸ್ವಲ್ಪ ತುಕ್ಕು ಹಿಡಿಯುತ್ತದೆ.
ದೇವತೆಗಳು ಯಾವ ಸ್ವರ್ಗದ ನಿವಾಸಿಗಳಾಗಿದ್ದಾರೆಂದು ನೀವೀಗ ತಿಳಿಸುತ್ತೀರಿ. ವೈಕುಂಠದಲ್ಲಿ ಅದ್ಭುತವಾದ ಪ್ರಪಂಚವಿತ್ತು.
ಅಲ್ಲಿಗೆ ಅನ್ಯಧರ್ಮದವರು ಹೋಗಲು ಸಾಧ್ಯವಿಲ್ಲ.
ಇಲ್ಲಿ ಎಲ್ಲಾ ಧರ್ಮಗಳನ್ನು ರಚನೆ ಮಾಡುವಂತಹದ್ದು ಶ್ರೇಷ್ಠಾತಿ ಶ್ರೇಷ್ಠ ಭಾಗವತವಾಗಿದೆ.
ಈ ದೇವತಾ ಧರ್ಮವನ್ನು ಬ್ರಹ್ಮನು ಸ್ಥಾಪನೆ ಮಾಡುವುದಿಲ್ಲ.
ನಾನು ಅಪವಿತ್ರನಾಗಿದ್ದೇನೆ ಎಂದು ಹೇಳುತ್ತಾರೆ.
ನನ್ನಲ್ಲಿ ಎಲ್ಲಿಂದ ಜ್ಞಾನ ಬಂದಿತು?
ಮತ್ತು ಎಲ್ಲಾ ಪವಿತ್ರ ಆತ್ಮಗಳು ತಮ್ಮ ಧರ್ಮವನ್ನು ಸ್ಥಾಪನೆ ಮಾಡಲು ಮೇಲಿನಿಂದ ಬರುತ್ತಾರೆ.
ಇಲ್ಲಿ ಪರಮಾತ್ಮನು ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಯಾವಾಗ ಇವರ ಶರೀರದಲ್ಲಿ ಬರುತ್ತಾರೋ ಆಗ ಇವರಿಗೆ ಬ್ರಹ್ಮನೆಂದು ಹೆಸರಿಡಲಾಯಿತು. ಬ್ರಹ್ಮದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳಲಾಗುತ್ತದೆ.
ಈ ದೇವತೆಗಳಿಂದ ಮನುಷ್ಯ ಸೃಷ್ಟಿ ರಚನೆಯಾಯಿತೆ ಎಂದು ಪ್ರಶ್ನೆಯು ಬರುತ್ತದೆ.
ಇಲ್ಲ. ನಾನು ಯಾವ ಸಾಧಾರಣ ತನುವಿನಲ್ಲಿ ಬರುತ್ತೇನೋ ಅವರ ಹೆಸರನ್ನು ಬ್ರಹ್ಮನೆಂದು ಇಡಲಾಯಿತು ಎಂದು ತಂದೆಯು ಹೇಳುತ್ತಾರೆ. ಅವರು ಸೂಕ್ಷ್ಮ ಬ್ರಹ್ಮಾ ಆಗಿದ್ದಾರೆ ಹಾಗಾದರೆ ಇಬ್ಬರು ಬ್ರಹ್ಮಾ ಆದರು. ಇವರಿಗೆ ಬ್ರಹ್ಮನೆಂದು ಹೆಸರಿಡಲಾಯಿತು ಏಕೆಂದರೆ ತಂದೆಯು ಸಾಧಾರಣ ತನುವಿನಲ್ಲಿ ಬರುತ್ತಾರೆ ಮತ್ತು ಬ್ರಹ್ಮನ ಮುಖಕಮಲದಿಂದ ಬ್ರಾಹ್ಮಣರನ್ನು ರಚನೆ ಮಾಡುತ್ತೇನೆ ಎಂದು ಹೇಳುತ್ತಾರೆ. ಆದಿದೇವನಿಂದ ಮನುಷ್ಯಸೃಷ್ಟಿಯನ್ನು ರಚನೆ ಮಾಡಲಾಯಿತು. ಇವರು ಮನುಷ್ಯ ಸೃಷ್ಟಿಯ ಮೊದಲ ತಂದೆಯಾದರು ನಂತರ ವೃದ್ಧಿಯಾಗುತ್ತದೆ.
ಈಗ ನಿಮ್ಮನ್ನು ರಾಜರಿಗಿಂತ ರಾಜರನ್ನಾಗಿ ಮಾಡುತ್ತಾರೆ ಆದರೆ ಯಾರು ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಬಾಬಾ ನಾನು ನಿಮ್ಮವನಾಗಿದ್ದೇನೆ ಎನ್ನುತ್ತಾರೋ ಆಗ ಆಗಲು ಸಾಧ್ಯ. ನಾವು ರಾಜಕುಮಾರರಾಗುತ್ತೇವೆ ಎನ್ನುವ ನಿಶ್ಚಯವಿದೆ ಮತ್ತು ಚತುರ್ಭುಜದ ಸಾಕ್ಷಾತ್ಕಾರವಾಗುತ್ತದೆ. ಅವರು ಯುಗಲ್ ಆಗಿದ್ದಾರೆ.
ಚಿತ್ರಗಳಲ್ಲಿ ಬ್ರಹ್ಮನಿಗೆ
10-20 ಭುಜಗಳನ್ನು ತೋರಿಸುತ್ತಾರೆ.
ಕಾಳಿಗೂ ಸಹ ಎಷ್ಟೊಂದು ಭುಜಗಳನ್ನು ತೋರಿಸುತ್ತಾರೆ ಆದರೆ ಅಷ್ಟೊಂದು ಭುಜಗಳಿರುವ ವಸ್ತು ಯಾವುದೂ ಇಲ್ಲ. ಇದೆಲ್ಲವೂ ಅಸ್ತ್ರ-ಶಸ್ತ್ರಗಳಾಗಿವೆ. ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ ಬಾಕಿ ಬ್ರಹ್ಮನಿಗೆ ಇಷ್ಟೆಲ್ಲಾ ಭುಜಗಳನ್ನು ತೋರಿಸಿದಾಗ ತಿಳಿದುಕೊಳ್ಳುತ್ತಾರೆ - ಬ್ರಹ್ಮನ ಇಷ್ಟೆಲ್ಲಾ ಮಕ್ಕಳು ಈ ರೀತಿ ಭುಜಗಳಾಗಿದ್ದಾರೆ ಬಾಕಿ ಕಾಳಿ ಮುಂತಾದವು ಏನೂ ಇಲ್ಲ.
ಹೇಗೆ ಕೃಷ್ಣನಿಗೆ ಕಪ್ಪಾಗಿ ಮಾಡಿದ್ದಾರೋ ಹಾಗೆಯೇ ಕಾಳಿಯ ಚಿತ್ರವನ್ನು ಕಪ್ಪಾಗಿ ಮಾಡಿದ್ದಾರೆ. ಈ ಜಗದಂಬಾ ಬ್ರಾಹ್ಮಣಿಯಾಗಿದ್ದಾರೆ ಅಂದಾಗ ನಾವೀಗ ನಮ್ಮನ್ನು ಭಗವಂತ ಅಥವಾ ಅವತಾರವೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ.
ಕೇವಲ ನನ್ನೊಬ್ಬನನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ವಾಸ್ತವದಲ್ಲಿ ಎಲ್ಲಾ ಶಿವಕುಮಾರರು ಸಾಲಿಗ್ರಾಮವಾಗಿದ್ದಾರೆ ನಂತರ ಮನುಷ್ಯ ತನುವಿನಲ್ಲಿ ಬರುವುದರಿಂದ ನಿಮಗೆ ಬ್ರಹ್ಮಾಕುಮಾರ-ಬ್ರಹ್ಮಕುಮಾರಿಯರೆಂದು ಹೇಳಲಾಗುತ್ತದೆ. ಬ್ರಹ್ಮಾಕುಮಾರ-ಕುಮಾರಿಯರು ನಂತರ ವಿಷ್ಣುಕುಮಾರ-ಕುಮಾರಿಯರಾಗುತ್ತಾರೆ. ತಂದೆಯು ರಚನೆ ಮಾಡುವುದರಿಂದ ಪಾಲನೆಯನ್ನೂ ಸಹ ಅವರೇ ಮಾಡುತ್ತಾರೆ. ಈ ರೀತಿಯಾದ ಪ್ರೀತಿಯ ತಂದೆಗೆ ನೀವು ವಾರಸುಧಾರರಾಗಿ, ಅವರ ಜೊತೆ ನೀವು ವ್ಯಾಪಾರ ಮಾಡುತ್ತೀರಿ.
ಈ ಬ್ರಹ್ಮಾರವರು ಮಧ್ಯದಲ್ಲಿ ದಲ್ಲಾಳಿಯಾಗಿದ್ದಾರೆ.
ಬ್ರಹ್ಮಾ ಪವಿತ್ರ ಸರ್ಕಾರವಾಗಿದ್ದಾರೆ. ಅವರು ಈ ಸರ್ಕಾರವನ್ನು ಪಾಂಡವ ಸರ್ಕಾರವನ್ನಾಗಿ ಮಾಡಲು ಬಂದಿದ್ದಾರೆ.
ಇದು ನಮ್ಮ ಶ್ರೇಷ್ಠ ಸೇವೆಯಾಗಿದೆ.
ಸರ್ಕಾರದ ಪ್ರಜೆಗಳನ್ನು ಮನುಷ್ಯರಿಂದ ದೇವತೆಗಳನ್ನಾಗಿ ತಂದೆಯ ಸಹಯೋಗದಿಂದ ಮಾಡುತ್ತೇವೆ ಅಂದಾಗ ನಾವು ಅವರ ಸೇವಕರಾಗಿದ್ದೇವೆ. ನಾವು ವಿಶ್ವದ ಸೇವಕರಾಗಿದ್ದೇವೆ. ನಾವು ತಂದೆಯ ಜೊತೆಗೆ ಇಡೀ ಪ್ರಪಂಚದ ಸೇವೆಯನ್ನು ಮಾಡಲು ಬಂದಿದ್ದೇವೆ.
ನಾವು ಏನನ್ನೂ ಸಹ ತೆಗೆದುಕೊಳ್ಳುವುದಿಲ್ಲ. ವಿನಾಶಿ ಧನ,
ಮಹಲ್ ಇತ್ಯಾದಿ ನಾವು ಏನು ಮಾಡಲು ಸಾಧ್ಯ?
ನಮಗೆ ಕೇವಲ ಮೂರು ಹೆಜ್ಜೆ ಭೂಮಿ ಸಾಕು.
ನಿಮಗೆ ಈಗ ಸತ್ಯ-ಸತ್ಯ ಜ್ಞಾನ ಸಿಗುತ್ತಿದೆ.
ಶಾಸ್ತ್ರಗಳ ಜ್ಞಾನಕ್ಕೆ ಜ್ಞಾನವೆಂದು ಹೇಳುವುದಿಲ್ಲ ಅದು ಭಕ್ತಿಯಾಗಿದೆ.
ಜ್ಞಾನವೆಂದರೆ ಸದ್ಗತಿಯಾಗಿದೆ.
ಸದ್ಗತಿಯೆಂದರೆ ಮುಕ್ತಿ-ಜೀವನ್ಮುಕ್ತಿಯಾಗಿದೆ. ಎಲ್ಲಿಯತನಕ ಜೀವನ್ಮುಕ್ತರಾಗುವುದಿಲ್ಲವೋ ಅಲ್ಲಿಯತನಕ ಮುಕ್ತರಾಗಲು ಸಾಧ್ಯವಿಲ್ಲ.
ನಾವು ಜೀವನ್ಮುಕ್ತರಾಗುತ್ತೇವೆ ಬಾಕಿ ಎಲ್ಲರೂ ಮುಕ್ತರಾಗುತ್ತಾರೆ ಆಗ ನಿಮ್ಮ ಗತಿಮತಿ ನಿಮಗೆ ತಿಳಿದಿದೆ ಎಂದು ಹೇಳುತ್ತೇವೆ. ನಂತರ ಅದರಲ್ಲಿ ಪರಮಾತ್ಮ ಸರ್ವವ್ಯಾಪಿಯಾಗಿದ್ದಾರೆ ಎನ್ನುವ ಮಾತಿರುವುದಿಲ್ಲ. ಕಲ್ಪಕಲ್ಪದಲ್ಲಿಯೂ ನಾನು ನನ್ನ ಮತದಿಂದ ಎಲ್ಲರ ಸದ್ಗತಿಯನ್ನು ಮಾಡುತ್ತೇನೆ ಎಂದು ತಂದೆಯು ಹೇಳುತ್ತಾರೆ. ಸದ್ಗತಿಯ ಜೊತೆಗೆ ಗತಿಯೂ ಸಿಗುತ್ತದೆ. ಹೊಸ ಪ್ರಪಂಚದಲ್ಲಿ ಸ್ವಲ್ಪ ಇರುತ್ತಾರೆ. ಹೃದಯದಲ್ಲಿ ಸೂರ್ಯ, ಹೃದಯದಲ್ಲಿ ಚಂದ್ರ, ಹೃದಯದಲ್ಲಿಯೇ
9 ಲಕ್ಷ ನಕ್ಷತ್ರಗಳಿವೆ ಎಂದು ಮೊದಲು ಹೇಳುತ್ತಿದ್ದೆವು ಆದರೆ ಈ ಸಮಯದಲ್ಲಿ ಹೃದಯದಲ್ಲಿ ಸೂರ್ಯನಿದ್ದಾನೆ, ಹೃದಯದಲ್ಲಿ ಶಿವನಿದ್ದಾನೆ ಈಗ ಅದರ ವಿಸ್ತಾರವಿದೆ ನಂತರ ಹೃದಯದಲ್ಲಿ ಮಮ್ಮಾ,
ಬಾಬಾ ಮತ್ತು ಅದೃಷ್ಟ ನಕ್ಷತ್ರಗಳಿದ್ದಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ಸ್ವಲ್ಪ ಸಂಖ್ಯೆಯಿರಬೇಕೆಂದು ವಿವೇಕವು ಹೇಳುತ್ತದೆ.
ಅದು ನಂತರ ವೃದ್ಧಿಯಾಗುತ್ತದೆ ಅಂದಾಗ ಇದೆಲ್ಲವೂ ತಿಳಿದುಕೊಳ್ಳುವ ಮಾತಾಗಿದೆ. ಯಾರು ಎಷ್ಟು ಪವಿತ್ರರಾಗುತ್ತಾರೋ ಅಷ್ಟು ಧಾರಣೆಯಾಗುತ್ತದೆ. ಅಪವಿತ್ರತೆಯಿಂದ ಧಾರಣೆಯು ಕಡಿಮೆಯಾಗುತ್ತದೆ. ಮೊದಲು ಪವಿತ್ರತೆಯಾಗಿದೆ, ನಮ್ಮಲ್ಲಿ ಕ್ರೋಧದ ಭೂತವಿದ್ದರೆ ಮಾಯೆಯಿಂದ ಸೋಲನ್ನನುಭವಿಸಬೇಕಾಗುತ್ತದೆ ಏಕೆಂದರೆ ಇದು ಯುದ್ಧವಾಗಿದೆ.
ಮಾಲೀಕನಿಗೆ ಪೂರ್ಣ ಕೈಯನ್ನು ಕೊಡಬೇಕಾಗಿದೆ ಇಲ್ಲದಿದ್ದರೆ ಮಾಯೆಯು ಬಹಳ ಪ್ರಭಲವಾಗಿರುತ್ತದೆ. ಯಾರ ಕೈಯಲ್ಲಿ ಕೈಯಿರುತ್ತದೆಯೋ ಅವರಿಗೆ ಮಳೆಯಾಗುತ್ತದೆ. ಹೇಗೆ ತಂದೆಯು ಸಾಕ್ಷಿಯಾಗಿ ಪಾತ್ರವನ್ನು ಮಾಡುತ್ತಿದ್ದಾರೆ ಮತ್ತು ನೋಡುತ್ತಿದ್ದಾರೆ. ತಂದೆ-ತಾಯಿ ಮತ್ತು ಅದೃಷ್ಟ ನಕ್ಷತ್ರಗಳು ಯಾರು ಅನನ್ಯ ಮಕ್ಕಳಾಗಿದ್ದಾರೋ ಅವರನ್ನು ಅನುಸರಣೆ ಮಾಡಬೇಕೆಂದು ನಿಮಗೆ ತಿಳಿದಿದೆ. ಮುರುಳಿ ಓದುವುದನ್ನು ಎಂದೂ ಬಿಡಬಾರದೆಂದು ತಿಳಿಸಿಕೊಡಲಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ರಾತ್ರಿಕ್ಲಾಸ್- 23/12/58
ನೋಡಿ- ಸರ್ವಶಕ್ತಿವಂತ ತಂದೆಗೆ ಎಷ್ಟೆಲ್ಲಾ ಆತ್ಮಿಕ ಕಾರ್ಖಾನೆ(ಸೇವಾಕೇಂದ್ರ)ಗಳಿವೆ.
ಅಲ್ಲಿಂದ ಪ್ರತಿಯೊಬ್ಬರಿಗೂ ಆತ್ಮಿಕ ರತ್ನಗಳು ಸಿಗುತ್ತವೆ. ಬಾಬಾರವರು ಎಲ್ಲಾ ಕಾರ್ಖಾನೆಗಳ ಮಾಲೀಕ. ಮ್ಯಾನೇಜರುಗಳು ಸಂಭಾಲನೆ ಮಾಡುತ್ತಿದ್ದಾರೆ, ಅಂಗಡಿಯನ್ನು ನಡೆಸುತ್ತಿದ್ದಾರೆ. ಅಂಗಡಿಯೆಂದಾದರೂ ಹೇಳಿ,
ಆಸ್ಪತ್ರೆಯೆಂದಾದರೂ ಹೇಳಿ.....
ಇದು ನೀವು ಬ್ರಾಹ್ಮಣ ಪರಿವಾರವೂ ಆಗಿದೆ. ನೀವು ತಮ್ಮ ಜೀವನವನ್ನು ಓದುವುದರಿಂದ ರೂಪಿಸಿಕೊಳ್ಳಬೇಕು. ಇದರಲ್ಲಿ ಆತ್ಮಿಕ ಹಾಗೂ ಶಾರೀರಿಕವಾಗಿ ಎರಡೂ ಒಟ್ಟಿಗೆ ಇದೆ. ಎರಡೂ ಬೇಹದ್ದಿನದಾಗಿದೆ. ಮತ್ತು ಅಲ್ಲಿ ಆತ್ಮಿಕ,
ಶಾರೀರಿಕ ಎರಡೂ ಅಲ್ಪಕಾಲದ್ದಾಗಿದೆ. ಗುರುಜನರು ಶಾಸ್ತ್ರ ಮುಂತಾದವೇನೆಲ್ಲಾ ಶಿಕ್ಷಣವನು ಕೊಡುತ್ತಾರೆಯೋ,
ಅದೆಲ್ಲವೂ ಹದ್ದಿನದಾಗಿದೆ.
ನಾವು ಯಾವುದೇ ಮನುಷ್ಯರನ್ನು ಗುರುವೆಂದು ಒಪ್ಪುವುದಿಲ್ಲ. ನಮಗಿರುವುದು ಒಬ್ಬರೇ ಸದ್ಗುರು,
ಯಾರು ಒಂದೇ ರಥದಲ್ಲಿ ಬರುತ್ತಾರೆ.
ಗಳಿಗೆ-ಗಳಿಗೆಗೂ ಅವರನ್ನು ನೆನಪು ಮಾಡಿದಾಗಲೇ ವಿಕರ್ಮಗಳು ವಿನಾಶವಾಗುತ್ತವೆ. ನಿಮಗೆ ಹಣ ಎಲ್ಲವೂ ಆ ಗ್ರಾಂಡ್ಫಾದರ್ನಿಂದ ಸಿಗುತ್ತದೆ ಆದ್ದರಿಂದ ಅವರನ್ನು ನೆನಪು ಮಾಡಬೇಕು. ಯಾವುದರಿಂದ ವಿಕರ್ಮವಾಗಿಬಿಡುತ್ತದೆಯೋ, ಅಂತಹ ಯಾವುದೇ ಕರ್ಮವನ್ನೂ ಮಾಡಬಾರದು. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ, ಇಲ್ಲಿ ಕರ್ಮವು ವಿಕರ್ಮವಾಗುತ್ತದೆ ಏಕೆಂದರೆ
5 ಭೂತಗಳಿವೆ. ನಾವು ಫುಲ್ ಸೇಫ್ ಆಗಿದ್ದೇವೆ. ಬಾಬಾರವರು ಹೇಳುವರು- ವಿಕಾರಗಳನ್ನು ದಾನದಲ್ಲಿ ಕೊಟ್ಟುಬಿಡಿ,
ನಂತರವೇನಾದರೂ ತೆಗೆದುಕೊಂಡಿರೆಂದರೆ ನಷ್ಟವಾಗಿಬಿಡುತ್ತದೆ. ಈ ರೀತಿ ತಿಳಿದುಕೊಳ್ಳಬಾರದು- ಬಚ್ಚಿಟ್ಟುಕೊಂಡು ಮಾಡುತ್ತೇವೆಂದರೆ ಯಾರಿಗಾದರೂ ಗೊತ್ತಾಗುತ್ತದೆಯೇನು! ಧರ್ಮರಾಜನಿಗಂತು ಗೊತ್ತಾಗುತ್ತದೆಯಲ್ಲವೆ! ಈ ಸಮಯದಲ್ಲಿಯೇ ಬಾಬಾರವರನ್ನು ಅಂತರ್ಯಾಮಿಯೆಂದು ಹೇಳಲಾಗುತ್ತದೆ, ಪ್ರತಿಯೊಂದು ಮಕ್ಕಳ ರಿಜಿಸ್ಟರ್ನ್ನೂ ಸಹ ಅವರು ನೋಡಬಲ್ಲರು. ನಾವು ಮಕ್ಕಳ ಆಂತರ್ಯವನ್ನು ತಿಳಿದುಕೊಳ್ಳುವವರಾಗಿದ್ದಾರೆ ಆದ್ದರಿಂದ ಬಚ್ಚಿಡಬಾರದು. ಹಾಗೆಯೇ ಮಕ್ಕಳು ಪತ್ರವನ್ನು ಬರೆಯುತ್ತಾರೆ- ಬಾಬಾ,
ನಮ್ಮಿಂದ ತಪ್ಪಾಯಿತು ಕ್ಷಮಿಸಿಬಿಡಿ. ಧರ್ಮರಾಜನ ಸಭೆಯಲ್ಲಿ ಶಿಕ್ಷೆಯನ್ನು ಕೊಡಬೇಡಿ. ಹೇಗೆಂದರೆ ಡೈರೆಕ್ಟ್ ಶಿವತಂದೆಗೇ ಬರೆಯುತ್ತಾರೆ. ಬಾಬಾರವರ ಹೆಸರಿನಲ್ಲಿ ಈ(ಬ್ರಹ್ಮಾ) ಪೋಸ್ಟ್ ಬಾಕ್ಸ್ ನಲ್ಲಿ ಪತ್ರವನ್ನು ಕೊಡುತ್ತಾರೆ.
ತಪ್ಪನ್ನು ಹೇಳುವುದರಿಂದ ಅರ್ಧಶಿಕ್ಷೆಯು ಕಡಿಮೆಯಾಗಿಬಿಡುತ್ತದೆ. ಇಲ್ಲಿ ಪವಿತ್ರತೆಯು ಬಹಳ ಇರಬೇಕು.
ಸರ್ವಗುಣ ಸಂಪನ್ನ,
16 ಕಲಾಸಂಪನ್ನರು ಇಲ್ಲಿಯೇ ಆಗಬೇಕು. ಅದರ ರಿಹರ್ಸಲ್ ಇಲ್ಲಿ ಆಗುತ್ತದೆ, ನಂತಹ ಅಲ್ಲಿ ಪ್ರಾಕ್ಟಿಕಲ್ ಪಾತ್ರವನ್ನಭಿನಯಿಸಬೇಕಾಗಿದೆ. ತಮ್ಮನ್ನು ಪರಿಶೀಲನೆ ಮಾಡಬೇಕು-
ಯಾವುದೇ ವಿಕರ್ಮವಂತು ಮಾಡುವುದಿಲ್ಲವೇ? ಸಂಕಲ್ಪವಂತು ಬಹಳಷ್ಟೇ ಬರುತ್ತದೆ,
ಮಾಯೆಯೂ ಬಹಳಷ್ಟು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತದೆ, ಭಯಪಡಬೇಡಿ. ಬಹಳ ನಷ್ಟಮಾಡುತ್ತದೆ, ವ್ಯಾಪಾರವೇ ನಡೆಯುವುದಿಲ್ಲ, ಕಾಲು ಮುರಿದುಹೋಗುತ್ತದೆ, ರೋಗಗ್ರಸ್ಥರಾಗಿಬಿಡುತ್ತಾರೆ..... ಏನಾದರೂ ಆಗಲಿ,
ತಂದೆಯ ಕೈಯನ್ನಂತು ಬಿಡಬಾರದು. ಅನೇಕಪ್ರಕಾರದ ಪರೀಕ್ಷೆಗಳು ಬರುತ್ತವೆ.
ಮೊಟ್ಟಮೊದಲು ಬಾಬಾರವರ ಮುಂದೆ ಬರುತ್ತದೆ ಆದ್ದರಿಂದ ಬಾಬಾರವರು ಹೇಳುತ್ತಾರೆ- ಬಹಳ ಉಷಾರಾಗಿ ಇರಿ.
ಶಕ್ತಿಶಾಲಿಯಾಗಿ ಇರಬೇಕು.
ನೋಡಿ, ಭಾರತದಲ್ಲಿ ಎಲ್ಲರಿಗೂ ಇಷ್ಟು ರಜೆಗಳೇನು ಸಿಗುತ್ತದೆಯೋ,
ಅಷ್ಟು ಇನ್ನೆಲ್ಲಿಯೂ ಸಿಗುವುದಿಲ್ಲ ಆದ್ದರಿಂದ ಇಲ್ಲಿ ನಮಗೆ ಒಂದು ಸೆಕೆಂಡ್ ಸಹ ಬಿಡುವು ಸಿಗುವುದಿಲ್ಲ ಏಕೆಂದರೆ ಬಾಬಾರವರು ಹೇಳುತ್ತಾರೆ-
ಶ್ವಾಸ-ಶ್ವಾಸವೂ ನೆನಪಿನಲ್ಲಿರಿ. ಒಂದೊಂದು ಶ್ವಾಸವು ಅಮೂಲ್ಯವಾದುದು.
ಅಂದಮೇಲೆ ವ್ಯರ್ಥವಾಗಿ ಹೇಗೆ ಕಳೆಯುತ್ತೀರಿ!
ಯಾರು ವ್ಯರ್ಥ ಮಾಡುವರೋ ಅವರು ಪದವಿಯನ್ನು ಕಳೆದುಕೊಳ್ಳುತ್ತಾರೆ. ಈ ಜನ್ಮದ ಒಂದೊಂದು ಶ್ವಾಸವು ಅಮೂಲ್ಯವಾದುದು. ರಾತ್ರಿ-ಹಗಲು ಬಾಬಾರವರ ಸೇವೆಯಲ್ಲಿಯೇ ಇರಬೇಕು.
ನೀವು ಸರ್ವಶಕ್ತಿವಂತ ತಂದೆಗೆ ಪ್ರಿಯತಮೆಯರೇ ಅಥವಾ ಅವರ ರಥಕ್ಕೆ ಪ್ರಿಯತಮೆಯರೇ?
ಅಥವಾ ಇಬ್ಬರ ಮೇಲೂ ಇದೆಯೇ?
ಅವಶ್ಯವಾಗಿ ಇಬ್ಬರ ಪ್ರಿಯತಮೆ ಆಗಿರಬೇಕಾಗುತ್ತದೆ. ಬುದ್ದಿಯಲ್ಲಿ ಇದಿರುತ್ತದೆ-
ಅವರು ಈ ರಥದಲ್ಲಿದ್ದಾರೆ. ಆಕಾರಣದಿಂದ ನೀವು ಇದರಮೇಲೆ ಪ್ರಿಯತಮೆಯರಾದಿರಿ. ಶಿವನ ಮಂದಿರದಲ್ಲಿಯೂ ಸಹ ನಂದಿಯನ್ನು ಇಡಲಾಗಿರುತ್ತದೆ. ಅದಕ್ಕೂ ಪೂಜೆ ಮಾಡಲಾಗುತ್ತದೆ. ಎಷ್ಟೊಂದು ಗುಹ್ಯವಾದ ಮಾತುಗಳಾಗಿವೆ,
ಯಾರು ಪ್ರತಿನಿತ್ಯದಲ್ಲಿ ಕೇಳಿಸಿಕೊಳ್ಳುವುದಿಲ್ಲ ಅವರು ಕೆಲಕೆಲವು ಪಾಯಿಂಟ್ಸ್ನ್ನು ಮಿಸ್ ಮಾಡಿಕೊಂಡುಬಿಡುತ್ತಾರೆ. ಪ್ರತಿನಿತ್ಯವೂ ಕೇಳುವವರು ಯಾವುದೇ ಪಾಯಿಂಟ್ಸ್ನಲ್ಲಿ ಫೇಲ್ ಆಗುವುದಿಲ್ಲ.
ನಡುವಳಿಕೆಯೂ ಒಳ್ಳೆಯದಿರುತ್ತದೆ. ಬಾಬಾರವರ ನೆನಪಿನಲ್ಲಿ ಬಹಳ ಲಾಭವಿದೆ.
ನಂತರ ಬಾಬಾರವರ ಜ್ಞಾನವನ್ನು ನೆನಪು ಮಾಡಬೇಕಾಗಿದೆ. ಯೋಗದಲ್ಲಿಯೂ ಲಾಭವಿದೆ, ಜ್ಞಾನದಲ್ಲಿಯೂ ಲಾಭವಿದೆ. ಬಾಬಾರವರನ್ನು ನೆನಪು ಮಾಡಬೇಕು,
ಇದರಲ್ಲಿ ಬಹಳ ಲಾಭವಿದೆ ಏಕೆಂದರೆ ವಿಕರ್ಮ ವಿನಾಶ ಆಗುತ್ತದೆ ಮತ್ತು ಪದವಿಯೂ ಸಹ ಶ್ರೇಷ್ಠವಾದುದು ಸಿಗುತ್ತದೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಶುಭರಾತ್ರಿ, ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಶ್ವಾಸ-ಶ್ವಾಸ ತಂದೆಯನ್ನು ನೆನಪು ಮಾಡಬೇಕಾಗಿದೆ. ಒಂದು ಶ್ವಾಸವನ್ನೂ ವ್ಯರ್ಥವಾಗಿ ಕಳೆದುಕೊಳ್ಳಬಾರದಾಗಿದೆ. ವಿಕರ್ಮವಾಗುವ ರೀತಿ ಯಾವುದೇ ಕರ್ಮವನ್ನು ಮಾಡಬಾರದಾಗಿದೆ.
2.
ಮಾಲೀಕನ ಕೈಯಲ್ಲಿ ಕೈಯನ್ನು ಕೊಟ್ಟು ಸಂಪೂರ್ಣ ಪಾವನರಾಗಬೇಕಾಗಿದೆ. ಎಂದೂ ಕ್ರೋಧಕ್ಕೆ ವಶೀಭೂತರಾಗಿ ಮಾಯೆಯಿಂದ ಸೋಲನ್ನನುಭವಿಸಬಾರದಾಗಿದೆ. ಶಕ್ತಿಶಾಲಿಗಳಾಗಬೇಕಾಗಿದೆ.
ವರದಾನ:
ಸಮರ್ಥ ಸ್ಥಿತಿಯ
ಆಸನದ ಮೇಲೆ
ಕುಳಿತು ವ್ಯರ್ಥ
ಮತ್ತು ಸಮರ್ಥದ
ನಿರ್ಣಯ ಮಾಡುವಂತಹ
ಸ್ಮತಿ ಸ್ವರೂಪ
ಭವ.
ಈ ಜ್ಞಾನದ ಎಸೆನ್ಸ್ ಆಗಿದೆ ಸ್ಮತಿ ಸ್ವರೂಪರಾಗುವುದು. ಪ್ರತಿ ಕಾರ್ಯ ಮಾಡುವುದರ ಮೊದಲು ಈ ವರದಾನದ ಮೂಲಕ ಸಮರ್ಥ ಸ್ಥಿತಿಯ ಆಸನದ ಮೇಲೆ ಕುಳಿತು ನಿರ್ಣಯ ಮಾಡಿ ಇದು ವ್ಯರ್ಥವೊ ಅಥವಾ ಸಮರ್ಥವೊ ಎಂದು ತಿಳಿದು ಕರ್ಮದಲ್ಲಿ ತನ್ನಿ, ಕರ್ಮ ಮಾಡಿದ ನಂತರ ಚೆಕ್ ಮಾಡಿ ಕರ್ಮದ ಆದಿ, ಮಧ್ಯ ಮತ್ತು ಅಂತ್ಯ ಮೂರೂ ಕಾಲ ಸಮರ್ಥವಾಗಿತ್ತಾ?
ಈ ಸಮರ್ಥ ಸ್ಥಿತಿಯ ಆಸನವೇ ಆಗಿದೆ ಹಂಸ ಆಸನ, ಇದರ ವಿಶೇಷತೆಯೇ ಆಗಿದೆ ನಿರ್ಣಯ ಶಕ್ತಿ. ನಿರ್ಣಯ ಶಕ್ತಿಯ ಮೂಲಕ ಸದಾ ಮರ್ಯಾದಾ ಪುರುಷೋತ್ತಮ ಸ್ಥಿತಿಯಲ್ಲಿ ಮುಂದುವರೆಯುತ್ತಾ
ಹೋಗುವಿರಿ.
ಸ್ಲೋಗನ್:
ಅನೇಕ ಪ್ರಕಾರದ ಮಾನಸಿಕ ರೋಗವನ್ನು ದೂರ ಓಡಿಸುವಂತಹ ಸಾಧನವಾಗಿದೆ –ಸೈಲೆನ್ಸ್ ನ ಶಕ್ತಿ.
0 Comments