Header Ads Widget

Header Ads

KANNADA MURLI 03.02.23

 

03/02/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ನರನಿಂದ ನಾರಾಯಣರಾಗುವುದಕ್ಕೋಸ್ಕರ ಸತ್ಯ ಬ್ರಾಹ್ಮಣರಾಗಿ, ಯಾರಲ್ಲಿ ಯಾವುದೇ ವಿಕಾರರೂಪೀ ಶತ್ರುಗಳಿರುವುದಿಲ್ಲವೋ ಅವರೇ ಸತ್ಯವಾದ ಬ್ರಾಹ್ಮಣರು

ಪ್ರಶ್ನೆ:

ತಂದೆಯ ಗೌರವ ಯಾವ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ? ಯಾರು ಬುದ್ಧಿವಂತರಾಗಿರುತ್ತಾರೆ?

ಉತ್ತರ:

ಯಾರು ಯಜ್ಞದ ಪ್ರತಿಯೊಂದು ಕಾರ್ಯವನ್ನು ಜವಾಬ್ದಾರಿಯಿಂದ ಮಾಡುತ್ತಾರೆ. ಎಂದೂ ತಪ್ಪನ್ನು ಮಾಡುವುದಿಲ್ಲವೋ ಅವರಿಗೆ ತಂದೆಯ ಗೌರವ ಸಿಗುತ್ತದೆ. ಪಾವನರನ್ನಾಗಿ ಮಾಡುವುದು ಜವಾಬ್ದಾರಿಯೆಂದು ತಿಳಿದು ಸೇವೆಯಲ್ಲಿ ತತ್ಪರರಾಗುತ್ತಾರೆ. ನಡತೆ ಬಹಳ ಘನತೆಯಿಂದ ಇರುತ್ತದೆ. ಎಂದೂ ಹೆಸರನ್ನು ಹಾಳು ಮಾಡುವುದಿಲ್ಲ, ಆಲ್ರೌಂಡ್ ಆಗಿರುತ್ತಾರೆ. ಯಾರು ಸಂಪೂರ್ಣ ೀರ್ಣರಾಗುವ ಪ್ರಯತ್ನಪಡುತ್ತಾರೋ ಅವರೇ ಬುದ್ಧಿವಂತರಾಗಿದ್ದಾರೆ. ಎಂದೂ ದುಃಖವನ್ನು ಕೊಡುವುದಿಲ್ಲ. ಎಂದೂ ಸಹ ಉಲ್ಟಾ ಕಾರ್ಯವನ್ನು ಮಾಡುವುದಿಲ್ಲ.

ಗೀತೆ:  ಇಂದಲ್ಲಾ ನಾಳೆ ಮೋಡಗಳು ಚದುರುತ್ತವೆ.......

ಓಂ ಶಾಂತಿ. ನೀವು ಮಕ್ಕಳಿಗೆ ಯಾರು ಶ್ರೀಮತವನ್ನು ಕೊಡುತ್ತಾರೆ? ಬೇಹದ್ದಿನ ತಂದೆ. ಅವರನ್ನು ಮಕ್ಕಳು ಇಷ್ಟು ಪಿತಾವ್ರತರಾಗಿ ನೆನಪು ಮಾಡುವುದಿಲ್ಲ. ಮಕ್ಕಳೇ, ಈಗ ಹಿಂತಿರುಗಿ ಮನೆಗೆ ಹೋಗಬೇಕೆಂದು ತಂದೆಯು ಹೇಳುತ್ತಾರೆ. ಮಕ್ಕಳು ಎಂದು ಯಾರಿಗೆ ಹೇಳುತ್ತಾರೆ? ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿರುವವರಿಗೆ ತಂದೆಯು ಮಕ್ಕಳೆಂದು ಹೇಳುತ್ತಾರೆ ಏಕೆಂದರೆ ಅವರ ಸಂತಾನದವರಾಗಿದ್ದೇವೆ. ಯಾವಾಗ ಹೊಸಸೃಷ್ಟಿಯ ರಚನೆಯಾಗುತ್ತದೆಯೋ ಆಗ ಹಳೆಯ ಸೃಷ್ಟಿಯ ಆತ್ಮಗಳು ಮನೆಗೆ ಹೋಗಬೇಕೆಂದು ತಂದೆಯು ತಿಳಿಸುತ್ತಾರೆ. ಈಗ ನೀವು ಮಕ್ಕಳು ತಂದೆ ಮತ್ತು ತಂದೆಯ ಮನೆಯನ್ನು ತಿಳಿದುಕೊಂಡಿದ್ದೀರಿ. ಕೆಲವರು ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತಾರೆ. ಶ್ರೀಮತದಂತೆ ನಡೆಯುತ್ತಾರೆ, ಕೆಲವರು ದೇಹಾಭಿಮಾನದ ಕಾರಣ ನೆನಪನ್ನು ಮಾಡುವುದಿಲ್ಲ, ಪಾವನರೂ ಆಗುವುದಿಲ್ಲ. ಈಶ್ವರೀಯ ಸಂತಾನದವರೆಂದು ಬ್ರಾಹ್ಮಣರಿಗೆ ಹೇಳಲಾಗುತ್ತದೆ. ಬ್ರಹ್ಮಾಮುಖವಂಶಾವಳಿಗಳಾಗಿದ್ದೀರಿ. ರಚಯಿತ ತಂದೆ ಎಂದು ಗಾಯನ ಮಾಡಲಾಗಿದೆ. ಬ್ರಹ್ಮನ ಮುಖಕಮಲದಿಂದ ಸಂತಾನರನ್ನು ರಚನೆ ಮಾಡುತ್ತಾರೆ. ಅವಶ್ಯವಾಗಿ ಈಶ್ವರೀಯ ಸಂತಾನ, ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆಂದು ನಿಮಗೆ ತಿಳಿದಿದೆ. ಯಾರು ಪಾವನರಾಗುತ್ತಾರೋ ಅವರಿಗೆ ಬ್ರಾಹ್ಮಣರೆಂದು ಹೇಳಲಾಗುತ್ತದೆ. ಪವಿತ್ರತೆಯ ಮೇಲೆ ಆಧಾರವಾಗಿದೆ. ಇದಕ್ಕೆ ಅಪವಿತ್ರ, ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಯಾರೆಲ್ಲಾ ಮನುಷ್ಯ ಮಾತ್ರರೂ ಪತಿತರಾಗಿದ್ದರು ಅವರೆಲ್ಲಾ ಪಾವನದ ಅರ್ಥವನ್ನು ತಿಳಿದುಕೊಂಡಿಲ್ಲ. ಕಲಿಯುಗ ಪತಿತ ಪ್ರಪಂಚವಾಗಿದೆ, ಸತ್ಯಯುಗ ಪಾವನ ಪ್ರಪಂಚವಾಗಿದೆ ಎಂದು ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗ, ತ್ರೇತಾಯುಗದಲ್ಲಿ ಪತಿತ ಮನುಷ್ಯರಿದ್ದರೆಂದು ಹೇಳುತ್ತಾರೆ. ಸೀತೆಯನ್ನು ಕದ್ದುಕೊಂಡು ಹೋದನೆಂದು ಹೇಳುತ್ತಾರೆ. ಇದೆಲ್ಲವೂ ಪಾವನ ಪ್ರಪಂಚದ ನಿಂದನೆಯಾಗಿದೆ. ಹೇಗೆ ದೃಷ್ಟಿಯೋ ಅದೇ ರೀತಿಯಾದ ಸೃಷ್ಟಿಯನ್ನು ನೋಡಲಾಗುತ್ತದೆ. ಪಾವನ ಪ್ರಪಂಚದಲ್ಲಿ ಪತಿತರಿದ್ದಾರೆ. ತಂದೆಯು ಪತಿತ ಪ್ರಪಂಚವನ್ನು ರಚಿಸಿದರೇನು? ತಂದೆಯು ಪಾವನ ಪ್ರಪಂಚವನ್ನು ಸ್ಥಾಪನೆ ಮಾಡಿದರು. ಪತಿತ ಪಾವನ ಬನ್ನಿ, ಬಂದು ಸೃಷ್ಟಿಯನ್ನು ಅದರಲ್ಲೂ ಭಾರತವನ್ನು ಪಾವನ ಮಾಡಿ ಎಂದು ಗಾಯನ ಮಾಡುತ್ತಾರೆ. ಈಗ ಬ್ರಹ್ಮಾಕುಮಾರ-ಕುಮಾರಿಯರೆಂದು ಯಾರು ಪಾವನರಾಗಿರುತ್ತಾರೋ ಅವರಿಗೆ ಹೇಳಲಾಗುತ್ತದೆ. ಪತಿತರಿಗೆ ಬ್ರಾಹ್ಮಣ-ಬ್ರಾಹ್ಮಣಿ ಅಥವಾ ಬಿ.ಕೆ.ಗಳೆಂದು ಹೇಳಲಾಗುವುದಿಲ್ಲ ಹಾಗೂ ಅವರು ಕುಖವಂಶಾವಳಿಗಳಾಗಿದ್ದಾರೆ. ನೀವು ಬ್ರಾಹ್ಮಣರು ಬ್ರಹ್ಮಾಮುಖವಂಶಾವಳಿಗಳಾಗಿದ್ದೀರಿ. ಬ್ರಹ್ಮಾಕುಖವಂಶಾವಳಿಗಳೆಂದು ಹೇಳಲಾಗುವುದಿಲ್ಲ ಏಕೆಂದರೆ ಅವರು ಪತಿತರಾಗಿದ್ದಾರೆ. ಈಗ ನೀವು ಈಶ್ವರೀಯ ಸಂತಾನದವರಾಗಿದ್ದೀರಿ ಆದ್ದರಿಂದ ನೀವೇ ಪಾವನ ಪ್ರಪಂಚದ ಮಾಲೀಕರಾಗುತ್ತೀರಿ. ಬ್ರಾಹ್ಮಣ-ಬ್ರಾಹ್ಮಣಿ ಅಥವಾ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎಂದು ಹೇಳಿಸಿಕೊಂಡು ಒಂದುವೇಳೆ ಪತಿತರಾದರೆ ಅಥವಾ ವಿಕಾರದಲ್ಲಿ ಹೋದರೆ ಅವರು ಬಿ.ಕೆ.ಗಳಲ್ಲ. ಬ್ರಾಹ್ಮಣರು ಎಂದೂ ವಿಕಾರದಲ್ಲಿ ಹೋಗುವುದಿಲ್ಲ. ವಿಕಾರದಲ್ಲಿ ಹೋಗುವಂತಹವರಿಗೆ ಶೂದ್ರರೆಂದು ಹೇಳಲಾಗುತ್ತದೆ. ಈಶ್ವರೀಯ ಸಂತಾನದವರು ಈಶ್ವರನಿಂದಲೇ ರಾಜ್ಯಪದವಿಯನ್ನು ತೆಗೆದುಕೊಳ್ಳುತ್ತಾರೆ. ರಾಜ್ಯಪದವಿಯ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕೋಸ್ಕರ ಪುರುಷಾರ್ಥವನ್ನು ಮಾಡುತ್ತಾರೆ. ನಾವು ನರನಿಂದ ನಾರಾಯಣರಾಗುವುದೇ ಲಕ್ಷ್ಯವಾಗಿದೆ.

ನಂಬರ್ವನ್ ವಿಕಾರವಾಗಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಎರಡನೆಯದು ಕ್ರೋಧವಾಗಿದೆ. ಕ್ರೋಧ ಇತ್ಯಾದಿ ಭೂತಗಳಿದ್ದಾಗ ಪೂರ್ಣ ಆಸ್ತಿಗೆ ಯೋಗ್ಯರಾಗುವುದಿಲ್ಲ. ಕಾಮ, ಕ್ರೋಧದ ಭೂತ ವಶರಾಗಿದ್ದಾರೆ, ಪರವಶರಾಗಿದ್ದಾರೆ ಎಂದು ಹೇಳುತ್ತಾರೆ. ತಂದೆಯನ್ನು ನೆನಪು ಮಾಡದಿರುವ ಕಾರಣ ರಾವಣನಿಗೆ ವಶವಾಗುತ್ತಾರೆ. ರೀತಿ ಕ್ರೋಧಿ, ಕಾಮಿಗಳು ನರನಿಂದ ನಾರಾಯಣರಾಗುವ ಪದವಿಯನ್ನು ಪಡೆಯುವುದಿಲ್ಲ. ಇಲ್ಲಿ ಸತ್ಯವಾದ ಬ್ರಾಹ್ಮಣರು ಬೇಕು. ಮೊದಲನೇ ನಂಬರಿನ ಭೂತ ದೇಹಾಭಿಮಾನದ್ದು ಬರುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಒಂದುವೇಳೆ ದೇಹೀ ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಿದ್ದಾಗ ತಂದೆಯ ಸಹಯೋಗ ಸಿಗುತ್ತದೆ. ಯಾರು ಎಷ್ಟು ನೆನಪು ಮಾಡುತ್ತಾರೋ ಅಷ್ಟು ಅವರಿಗೆ ಸಹಯೋಗ ಸಿಗುತ್ತದೆ. ಸತ್ಯ ಬ್ರಾಹ್ಮಣರು ಎಂದರೆ ಯಾರಲ್ಲಿ ವಿಕಾರರೂಪೀ ಶತೃಗಳಿಲ್ಲವೋ ಅವರಾಗಿದ್ದಾರೆ. ಮುಖ್ಯವಾಗಿ ದೇಹಾಭಿಮಾನದ ಕಾರಣವೇ ಬೇರೆಲ್ಲಾ ಶತ್ರುಗಳು ಬರುತ್ತವೆ. ಭಾರತವು ಶಿವಾಲಯವಾಗಿದ್ದಾಗ ದುಃಖದ ಮಾತಿರಲಿಲ್ಲ. ಇದು ಮನುಷ್ಯರಿಗೆ ತಿಳಿದಿಲ್ಲ. ಮಾಯೆಯೂ ಇದೆ, ಈಶ್ವರನೂ ಇದ್ದಾನೆ ಎಂದು ಹೇಳುತ್ತಾರೆ. ಈಶ್ವರನೂ ತನ್ನ ಸಮಯದಲ್ಲಿ ಬರುತ್ತಾನೆ, ಮಾಯೆಯೂ ತನ್ನ ಸಮಯದಲ್ಲಿ ಬರುತ್ತದೆ. ಅರ್ಧಕಲ್ಪ ಈಶ್ವರೀಯ ರಾಜ್ಯವಿದೆ, ಅರ್ಧಕಲ್ಪ ಮಾಯೆಯ ರಾಜ್ಯವಿದೆ. ತಿಳುವಳಿಕೆಯು ಶಾಸ್ತ್ರದಲ್ಲಿಲ್ಲ. ಅದು ಭಕ್ತಿಮಾರ್ಗವಾಗಿದೆ. ಜ್ಞಾನಸಾಗರ ತಂದೆ ಒಬ್ಬರಾಗಿದ್ದಾರೆ ಅವರನ್ನು ಪತಿತ-ಪಾವನನೆಂದು ಹೇಳುತ್ತಾರೆ. ಯಾರು ತಂದೆಯನ್ನು ನೆನಪು ಮಾಡುವುದಿಲ್ಲವೋ ಅವರಿಂದ ಪತಿತ ಕೆಲಸವು ಅವಶ್ಯವಾಗಿ ಆಗುತ್ತದೆ. ಅವರಿಗೆ ಬ್ರಾಹ್ಮಣ-ಬ್ರಾಹ್ಮಣಿ ಎಂದು ಹೇಳಲಾಗುವುದಿಲ್ಲ. ಇದು ಬಹಳ ಸೂಕ್ಷ್ಮ ಮಾತಾಗಿದೆ. ಶಿವತಂದೆ, ತಾತನನ್ನು ನೆನಪು ಮಾಡದಿದ್ದಾಗ ಆಸ್ತಿಯು ಸಿಗುವುದಿಲ್ಲ ನಂತರ ಅವರಿಗೆ ಹಳೆಯ ಪ್ರಪಂಚ ಸಂಬಂಧಿ, ಮಿತ್ರರೇ ನೆನಪಿಗೆ ಬರುತ್ತಾರೆ. ಒಳ್ಳೆಯ ರೀತಿಯಲ್ಲಿ ತಂದೆಯನ್ನು ನೆನಪು ಮಾಡಿದಾಗ ತಂದೆಯ ಸಹಯೋಗ ಸಿಗುತ್ತದೆ. ನೀವು ಮುರುಳಿಯನ್ನು ಹೇಳುವಾಗ ತಬ್ಬಿಬ್ಬಾದರೆ ಶಿವತಂದೆಯೇ ಪ್ರವೇಶವಾಗಿ ಮುರುಳಿಯನ್ನು ನುಡಿಸುತ್ತಾರೆ. ಶಿವತಂದೆಯ ಸಹಯೋಗ ಸಿಗುತ್ತಿದೆಯೆಂದು ತಿಳಿಯುವುದಿಲ್ಲ. ಶಿವತಂದೆಯೇ ಬಂದು ಸಹಯೋಗವನ್ನು ಕೊಡುತ್ತಾರೆಂದು ಮಕ್ಕಳು ತಿಳಿದಿಲ್ಲ. ನಾವು ಇಂದು ತುಂಬಾ ಚೆನ್ನಾಗಿ ಮುರುಳಿಯನ್ನು ತಿಳಿಸಿದೆಯೆಂದು ಮಕ್ಕಳು ತಿಳಿಯುತ್ತಾರೆ ಆದರೆ ಇಂದು ಚೆನ್ನಾಗಿ ತಿಳಿಸಿದಿರಿ, ನಾಳೆ ಏನು ಮಾಡುವಿರಿ. ಶಿವತಂದೆಯು ಹೇಳುತ್ತಿದ್ದಾರೆ ಅಥವಾ ಬ್ರಹ್ಮಾತಂದೆಯು ಹೇಳುತ್ತಿದ್ದಾರೆ ಎಂದು ನಿಮಗೆ ತಿಳಿಯುವುದಿಲ್ಲ. ಮಕ್ಕಳೇ, ನೀವು ನನ್ನ ಈಶ್ವರೀಯ ಸಂತಾನರಾಗಿದ್ದೀರಿ ಎಂದು ತಂದೆಯು ಹೇಳುತ್ತಾರೆ. ರೀತಿ ಯಾರೂ ಹೇಳಲು ಸಾಧ್ಯವಿಲ್ಲ. ನಾನೇ ಇವರಲ್ಲಿ ಪ್ರವೇಶ ಮಾಡಿ ಹೇಳುತ್ತೇನೆ. ನಾನು ಜ್ಞಾನಸಾಗರನಾಗಿದ್ದೇನೆ, ನಿಮ್ಮನ್ನು ಜ್ಞಾನಿ ಆತ್ಮಗಳನ್ನಾಗಿ ಮಾಡುತ್ತೇನೆ. ಯಾರು ತಂದೆಯ ಜೊತೆ ಯೋಗವನ್ನು ಬೆಳೆಸುತ್ತಾರೆ ಆಗಲೇ ತಂದೆಯು ಬಂದು ಸಹಯೋಗವನ್ನು ಕೊಡುತ್ತಾರೆ. ದೇಹಾಭಿಮಾನಿಗಳು ನೆನಪು ಮಾಡುವುದಿಲ್ಲ. ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ನಾನು ಚೆನ್ನಾಗಿ ಮುರುಳಿಯನ್ನು ನುಡಿಸುತ್ತೇನೆ ಎಂದು ಅಹಂಕಾರದಲ್ಲಿ ಬರಬಾರದು. ಶಿವತಂದೆಯೇ ಬಂದು ಮುರುಳಿಯನ್ನು ನುಡಿಸುತ್ತಾರೆಂದು ತಿಳಿದುಕೊಳ್ಳಬೇಕು. ಘಳಿಗೆ-ಘಳಿಗೆಗೂ ಶಿವತಂದೆಯನ್ನು ನೆನಪು ಮಾಡಬೇಕು. ಯಾರು ಪೂರ್ಣ ಯೋಗವನ್ನು ಮಾಡುವುದಿಲ್ಲವೋ ಅವರ ಕರ್ಮಭೋಗ ಪೂರ್ಣವಾಗುವುದಿಲ್ಲವೆಂದು ಬಹಳ ಮಕ್ಕಳು ತಿಳಿದುಕೊಂಡಿದ್ದಾರೆ. ಕಾಯಿಲೆಗಳು ಬಹಳಷ್ಟು ಬರುತ್ತವೆ, ವಿಕರ್ಮವು ವಿನಾಶವಾಗುವುದು.

ಮಕ್ಕಳು ತಂದೆಯ ಜೊತೆ ಯೋಗವನ್ನು ಇಟ್ಟುಕೊಳ್ಳಬೇಕು. ನಾವು ರಾಜಯೋಗಿಗಳಾಗಿದ್ದೇವೆ. ತಂದೆಯಿಂದ ರಾಜ್ಯವನ್ನು ಪಡೆಯಬೇಕಾಗಿದೆ.ನಾವು ನರನಿಂದ ನಾರಾಯಣರಾಗುತ್ತೇವೆ. ಯಾರು ಸೂರ್ಯವಂಶದಲ್ಲಿ ಹೋಗುತ್ತಾರೋ ಅವರ ಮನಸ್ಸಿನಲ್ಲಿ ನಾನು ಇಷ್ಟು ಓದಬೇಕೆಂದು ತಿಳಿದಿರುತ್ತದೆ. ಮೊದಲು ದಾಸ-ದಾಸಿಯರಾಗಿ ನಂತರ ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತೇವೆ ಎಂದಲ್ಲ. ತಂದೆಯನ್ನು ನೆನಪು ಮಾಡುವುದರಿಂದ ತಂದೆಯ ಸಹಯೋಗ ಸಿಗುತ್ತದೆ. ಒಂದಲ್ಲ ಒಂದು ಪಾಪಗಳಾಗುತ್ತವೆ, ತೊಂದರೆ ಮುಂತಾದವೂ ಸಹ ಆಗುತ್ತವೆ. ಅವರು ಬಹಳ ದುಃಖವನ್ನು ಕೊಡುತ್ತಾರೆ. ಲಕ್ಷ್ಮೀ-ನಾರಾಯಣರು ಸುಖವನ್ನು ಕೊಡುತ್ತಾರೆ. ಬುದ್ಧಿವಂತ ಮಕ್ಕಳು ಸಂಪೂರ್ಣ ಉತ್ತೀರ್ಣರಾಗಲು ಪ್ರಯತ್ನಪಡುತ್ತಾರೆ. ಏನು ಸಿಗುತ್ತದೆಯೋ ಅದೇ ಸಾಕು ಎಂದಲ್ಲ. ಪ್ರತಿಯೊಂದು ಮಾತಿನಲ್ಲಿ ಆಲ್ರೌಂಡ್ ಪುರುಷಾರ್ಥವನ್ನು ಮಾಡಬೇಕು. ಕೆಲಸ ಅವರದಾಗಿದೆ ನಾವೇಕೆ ಮಾಡುವುದು ಎಂದಲ್ಲ. ತಂದೆಯು ಆಲ್ರೌಂಡ್ ಕೆಲಸವನ್ನು ಮಾಡುತ್ತಾರೆ. ಮಕ್ಕಳ ನಡವಳಿಕೆಯು ಚೆನ್ನಾಗಿಲ್ಲದಿದ್ದಾಗ ಹೆಸರನ್ನು ಹಾಳು ಮಾಡುತ್ತಾರೆ. ನನ್ನವರಾಗಿ ಪುನಃ ಉಲ್ಟಾ ಕರ್ಮವನ್ನು ಮಾಡಿದರೆ ಪದವಿಭ್ರಷ್ಟರಾಗುತ್ತೀರೆಂದು ತಂದೆಯು ಹೇಳುತ್ತಾರೆ. ಬ್ರಹ್ಮಾತಂದೆಯು ಶ್ರೀಮತವನ್ನು ಕೊಡುತ್ತಾರೆ ಎಂದು ತಿಳಿದುಕೊಳ್ಳಬೇಡಿ ಕೇವಲ ಶಿವತಂದೆಯನ್ನು ನೆನಪು ಮಾಡಿ.

ಪ್ರಪಂಚವನ್ನು ಪಾವನ ಮಾಡುವ ಹೊರೆಯು ನಮ್ಮ ತಲೆಯ ಮೇಲಿದೆ ಎಂದು ಮಕ್ಕಳು ತಿಳಿದುಕೊಳ್ಳಿರಿ. ನಾವು ಜವಾಬ್ದಾರರಾಗಿದ್ದೇವೆ. ಭಾರತವನ್ನು ಪಾವನ ಮಾಡುವ ಬಹಳ ದೊಡ್ಡ ಜವಾಬ್ದಾರಿಯಿದೆ. ಯಜ್ಞದ ಪ್ರತಿಯೊಂದು ಕಾರ್ಯವನ್ನು ಜವಾಬ್ದಾರಿಯಿಂದ ಮಾಡಬೇಕು. ಯಾವುದೇ ತಪ್ಪನ್ನು ಮಾಡಬಾರದು ಆಗ ತಂದೆಯು ಗೌರವವನ್ನು ಕೊಡುತ್ತಾರೆ ಇಲ್ಲದಿದ್ದರೆ ಧರ್ಮರಾಜನು ಸೆರಮನೆಯಲ್ಲಿ ಅನುಭವಿಸದಿರುವ ಶಿಕ್ಷೆಯನ್ನು ಕೊಡುತ್ತಾರೆ. ಆದ್ದರಿಂದ ವಿನಾಶವಾಗುವುದಕ್ಕೆ ಮೊದಲೇ ಎಲ್ಲಾ ವಿಕರ್ಮಗಳನ್ನು ಯೋಗದಿಂದ ಸಮಾಪ್ತಿ ಮಾಡಿಕೊಳ್ಳಿ ಎಂದು ತಂದೆಯು ಹೇಳುತ್ತಾರೆ. ಇಲ್ಲದಿದ್ದರೆ ಜನ್ಮ-ಜನ್ಮಾಂತರ ವಿಕರ್ಮಗಳ ಶಿಕ್ಷೆಯನ್ನು ಧರ್ಮರಾಜಪುರಿಯಲ್ಲಿ ಬಹಳ ಅನುಭವಿಸಬೇಕಾಗುತ್ತದೆ ಆದ್ದರಿಂದ ಎಂದೂ ತಪ್ಪನ್ನು ಮಾಡಬೇಡಿ ಏಕೆಂದರೆ ಇದು ಅಂತಿಮ ಜನ್ಮವಾಗಿದೆ ನಂತರ ಸ್ವರ್ಗದಲ್ಲಿ ಹೋಗಬೇಕು. ಶಿಕ್ಷೆಯನ್ನು ಅನುಭವಿಸಿ ಪ್ರಜೆಗಳ ಪದವಿಯನ್ನು ಪಡೆಯುವುದಕ್ಕೆ ಪುರುಷಾರ್ಥವೆಂದು ಹೇಳುವುದಿಲ್ಲ. ಸಮಯದಲ್ಲಿ ಅಯ್ಯೋ, ಅಯ್ಯೋ ಎಂದು ಹೇಳುತ್ತಿರುತ್ತಾರೆ. ಇದನ್ನೂ ಸಹ ತಂದೆಯು ಸಾಕ್ಷಾತ್ಕಾರ ಮಾಡಿಸುತ್ತಾರೆ. ಬ್ರಾಹ್ಮಣರಾಗುವುದು ಚಿಕ್ಕಮ್ಮನ ಮನೆಯಲ್ಲವೆಂದು ಪದೇ ಪದೇ ಹೇಳುತ್ತಿರುತ್ತಾರೆ. ಈಶ್ವರನ ಮಕ್ಕಳಾದ ನಂತರ ಯಾವುದೇ ವಿಕಾರಗಳಿರಬಾರದು. ಇದರಲ್ಲಿ ಕಾಮ ಮಹಾಶತ್ರುವಾಗಿದೆ. ಯಾರು ಕಾಮಕ್ಕೆ ವಶರಾಗುತ್ತಾರೋ ಅವರಿಗೆ ಬ್ರಾಹ್ಮಣರೆಂದು ಹೇಳಲಾಗುವುದಿಲ್ಲ. ಮಾಯೆಯು ಬಹಳಷ್ಟು ಬರುತ್ತಿರುತ್ತದೆ. ಆದರೆ ಕರ್ಮೇಂದ್ರಿಯಗಳಿಂದ ಯಾವುದೇ ಕೆಲಸವನ್ನು ಮಾಡಬಾರದು. ಆಕರ್ಷಣೆಯು ಹಗುರವಾದ ನಶೆಯಾಗಿದೆ. ಇದು ಮಾಯೆಯ ನಶೆಯಾಗಿದೆ. ಇದರಿಂದ ಹೊರೆಯು ಹೆಚ್ಚಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನೀವು ವ್ಯಭಿಚಾರಿಗಳಾಗಿ ಬಿಟ್ಟಿದ್ದೀರಿ. ಈಶ್ವರನ ಸಂತಾನರಲ್ಲಿ ಕಾಮ, ಕ್ರೋಧ, ಇತ್ಯಾದಿ ಭೂತಗಳು ಇರಬಾರದು. ಭೂತಗಳು ಅಸುರೀ ಗುಣವಾಗಿದೆ. ಯಾರು ಈಶ್ವರನ ಮಕ್ಕಳಾಗಿ ಮಾಯೆಯ ಮಕ್ಕಳಾಗುವವರು ಬಹಳಷ್ಟಿದ್ದಾರೆ. ದೇಹಾಭಿಮಾನದಲ್ಲಿ ಬರುತ್ತಾರೆ. ತಂದೆಯ ಶ್ರೀಮತದಂತೆ ನಡೆಯುವುದು ಅವರ ಜವಾಬ್ದಾರಿಯಾಗಿದೆ. ಬ್ರಹ್ಮನ ಮತವೆಂದು ಗಾಯನ ಮಾಡಲಾಗಿದೆ. ಅವರ ಮತದಂತೆ ನಡೆಯುವುದರಿಂದ ತಂದೆಯು ಜವಾಬ್ದಾರರಾಗುತ್ತಾರೆ ಅಂದಾಗ ಏಕೆ ನಮ್ಮ ಜವಾಬ್ದಾರಿಯನ್ನು ಇಳಿಸಿಕೊಳ್ಳಬಾರದು. ಬಾಪ್ದಾದಾ ಇಬ್ಬರ ಮತವೂ ಪ್ರಸಿದ್ಧವಾಗಿದೆ. ತಾಯಿಯ ಮತದಂತೆ ನಡೆಯಬೇಕು ಏಕೆಂದರೆ ಮಾತೆ ಗುರುವಾಗಿದ್ದಾರೆ. ತಾಯಿ-ತಂದೆ ಬೇರೆಯಾಗಿದ್ದಾರೆ. ಸಮಯದಲ್ಲಿ ಸ್ತ್ರೀಯನ್ನು ಗುರುವನ್ನಾಗಿ ಮಾಡಿಕೊಳ್ಳುವ ಪುರಸ್ಕಾರ ನಡೆಯುತ್ತಿದೆ.

ಶಿವಾಲಯದಲ್ಲಿ ಹೋಗುವುದಕ್ಕೋಸ್ಕರ ನೀವು ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಸತ್ಯಯುಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ. ಪರಮಾತ್ಮನ ಸರಿಯಾದ ಹೆಸರು ಶಿವನಾಗಿದೆ. ಶಿವಜಯಂತಿ ಎಂದು ಗಾಯನ ಮಾಡಲಾಗುತ್ತದೆ. ಶಿವನಿಗೆ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ ಏಕೆಂದರೆ ಅವರು ಬಿಂದುವಾಗಿದ್ದಾರೆ. ಪರಮಪಿತ ಪರಮಾತ್ಮನ ರೂಪ ಬಿಂದುವಾಗಿದೆ. ಚಿನ್ನ ಅಥವಾ ಬೆಳ್ಳಿಯ ಚಿಕ್ಕದಾದ ನಕ್ಷತ್ರವನ್ನು ಮಾಡಿಸಿ ಹಣೆಗಿಟ್ಟುಕೊಳ್ಳುತ್ತಾರೆ. ವಾಸ್ತವದಲ್ಲಿ ಅದು ಸರಿಯಾಗಿದೆ ಮತ್ತು ಬಿಂದುವಿರುವುದೂ ಸಹ ಭೃಕುಟಿಯಾಗಿದೆ. ಆದರೆ ಮನುಷ್ಯರಿಗೆ ಜ್ಞಾನವಿಲ್ಲ. ಕೆಲವರು ತ್ರಿಶೂಲವನ್ನೂ ಸಹ ಕೊಡುತ್ತಾರೆ. ತ್ರಿನೇತ್ರಿ, ತ್ರಿಕಾಲದರ್ಶಿಯ ಗುರುತು ಅಂದರೆ ದಿವ್ಯದೃಷ್ಟಿ, ದಿವ್ಯಬುದ್ಧಿಯ ಗುರುತಾಗಿದೆ. ಈಗ ನೀವು ಮಕ್ಕಳಿಗೆ ಮಾತುಗಳ ಜ್ಞಾನವಿದೆ. ನೀವು ನಕ್ಷತ್ರವನ್ನು ಬೇಕಾದರೂ ಹಾಕಬಹುದು. ತಮ್ಮ ಚಿಹ್ನೆಯು ಬಿಳಿಯ ನಕ್ಷತ್ರವಾಗಿದೆ. ಆತ್ಮದ ರೂಪವೂ ಸಹ ಇಂತಹ ನಕ್ಷತ್ರವಾಗಿದೆ. ತಂದೆಯು ಎಲ್ಲಾ ರಹಸ್ಯವನ್ನು ತಿಳಿಸುತ್ತಿದ್ದಾರೆ. ಎಚ್ಚರಿಕೆಯನ್ನೂ ಸಹ ಕೊಡುತ್ತಿದ್ದಾರೆ. ಯಾರು ಪ್ರತಿಜ್ಞೆ ಮಾಡಿ ನಂತರ ಪಾಪದ ಕೆಲಸವನ್ನು ಮಾಡುವುದಿಲ್ಲವೋ ಅವರೇ ಬಿ.ಕೆ.ಗಳಾಗಿದ್ದಾರೆ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಯಾರ ಮನಸ್ಸಿಗೂ ದುಃಖವನ್ನು ಕೊಡಬಾರದು. ಒಂದುವೇಳೆ ದುಃಖವನ್ನು ಕೊಟ್ಟರೆ ಶಿವತಂದೆಗೆ ನಾವು ಮಕ್ಕಳಾಗುವುದಿಲ್ಲ. ತಂದೆಯು ಸುಖವನ್ನು ಕೊಡುವುದಕ್ಕೋಸ್ಕರ ಬರುತ್ತಾರೆ. ಅಲ್ಲಿ ಹೇಗೆ ರಾಜ-ರಾಣಿಯರೋ ಹಾಗೆ ಪ್ರಜೆಗಳು ಒಬ್ಬರಿಗೊಬ್ಬರು ಸುಖವನ್ನು ಕೊಡುತ್ತಾರೆ. ಇಲ್ಲಿ ಎಲ್ಲರೂ ಪತಿತರಾಗಿರುವ ಕಾರಣ ಕಾಮಕಟಾರಿಯನ್ನು ನಡೆಸುತ್ತಾರೆ. ಇದು ಒಬ್ಬರಿಗೊಬ್ಬರು ದುಃಖ ಕೊಡುವಂತಹ ಪ್ರಪಂಚವಾಗಿದೆ. ಸತ್ಯಯುಗವು ಒಬ್ಬರಿಗೊಬ್ಬರು ಸುಖವನ್ನು ಕೊಡುವ ಪ್ರಪಂಚವಾಗಿದೆ. ನಾವು ಈಶ್ವರೀಯ ಸಂತಾನರಾಗಿದ್ದೇವೆಂದು ತಿಳಿದುಕೊಳ್ಳಬೇಕು. ನಾವು ಯಾವುದೇ ಪಾಪಕರ್ಮವನ್ನು ಮಾಡಬಾರದು ಇಲ್ಲದಿದ್ದರೆ ಪುಣ್ಯಾತ್ಮಗಳ ಪ್ರಪಂಚದಲ್ಲಿ ಅಷ್ಟು ಪದವಿಯು ಸಿಗುವುದಿಲ್ಲ. ಪ್ರತಿಯೊಬ್ಬರ ನಾಡಿಯಿಂದ ಇವರು ನಮ್ಮ ಕುಲದವರು ಅಥವಾ ಅಲ್ಲವೋ ಎಂದು ತಿಳಿಯುತ್ತದೆ.

ಭಗವಂತನ ಮಹಾವಾಕ್ಯವಾಗಿದೆ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಭಗವಂತನೆಂದು ಒಬ್ಬ ನಿರಾಕಾರನಿಗೆ ಹೇಳಲಾಗುತ್ತದೆ ಅಂದಾಗ ಯಾವಾಗ ಬಂದು ರಾಜಯೋಗವನ್ನು ಕಲಿಸಿದರು. ಅವಶ್ಯವಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ಹೊಸ ಪ್ರಪಂಚಕ್ಕೋಸ್ಕರ ಹಳೆಯ ಪ್ರಪಂಚದಲ್ಲಿ ಬರಬೇಕಾಗುತ್ತದೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದೇನೆ. ಎಲ್ಲಿಗೋಸ್ಕರ? ನರಕಕ್ಕೋಸ್ಕರವೇನು? ಪಾವನ ಪ್ರಪಂಚಕ್ಕೋಸ್ಕರವಾಗಿದೆ. ಭಗವಾನುವಾಚ- ನಾನು ನಿಮ್ಮನ್ನು ರಾಜರ ಮೇಲೆ ರಾಜರನ್ನಾಗಿ ಮಾಡುತ್ತೇನೆ. ಈಗ ಯಾವಾಗ ಬಂದಿದ್ದರು, ಅವರು ಯಾರಾಗಿದ್ದಾರೆ, ಅವರು ಯಾವಾಗ ಬರುತ್ತಾರೆ ಎನ್ನುವುದನ್ನು ತಿಳಿಸಿ. ಅವಶ್ಯವಾಗಿ ಸತ್ಯಯುಗಕ್ಕೋಸ್ಕರವೇ ಕಲಿಸುತ್ತಾರೆ. ಇದು ಬಹಳ ಸಹಜವಾಗಿದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೇಗೆ ಕಾದ ಹೆಂಚಿನ ಹಾಗೆ. ಇವರು ನಮ್ಮ ಸೂರ್ಯವಂಶಿ, ಚಂದ್ರವಂಶಿ ರಾಜ್ಯದವರಲ್ಲವೆಂದು ತಿಳಿದುಕೊಳ್ಳಬೇಕು. ಬಾಕಿ ಪ್ರಜೆಗಳಂತೂ ಬಹಳಷ್ಟು ಆಗುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಯಾರ ಮನಸ್ಸಿಗೂ ದುಃಖವನ್ನು ಕೊಡಬಾರದಾಗಿದೆ. ಎಂದೂ ಯಾವುದೇ ಪಾಪದ ಕೆಲಸವನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಸದಾ ಸುಖವನ್ನು ಕೊಡುವವರಾಗಬೇಕು.

2. ಕರ್ಮೇಂದ್ರಿಯಗಳಿಂದ ಯಾವುದೇ ಉಲ್ಟಾಕರ್ಮವನ್ನು ಮಾಡಬಾರದಾಗಿದೆ. ತಂದೆ ಮತ್ತು ಅಣ್ಣನ ಮತದಂತೆ ನಡೆದು ತಮ್ಮ ಹೊರೆಯನ್ನು ಕೆಳಗಿಳಿಸಿಕೊಳ್ಳಬೇಕಾಗಿದೆ.

ವರದಾನ:

ಅಮೃತವೇಳೆಯಿಂದ ಹಿಡಿದು ರಾತ್ರಿಯವರೆಗೂ ಮರ್ಯಾದಾ ಪೂರ್ವಕವಾಗಿ ನಡೆಯುವಂತಹ ಮರ್ಯಾದಾ ಪುರುಷೋತ್ತಮ ಭವ.

ಸಂಗಮಯುಗದ ಮರ್ಯಾದೆಗಳೇ ಪುರುಷೋತ್ತಮರಾಗಿ ಮಾಡುವುದು. ಆದ್ದರಿಂದ ಮರ್ಯಾದಾ ಪುರುಷೋತ್ತಮ ಎಂದು ಕರೆಯಲಾಗುವುದು. ತಮೋಗುಣಿ ವಾಯುಮಂಡಲ, ವೈಭ್ರೇಷನ್ನಿಂದ ಸುರಕ್ಷಿತವಾಗಿರಲು ಸಹಜ ಸಾಧನ ಮರ್ಯಾದೆಗಳಾಗಿವೆ. ಮರ್ಯಾದೆಗಳ ಒಳಗೆ ಇರುವಂತಹ ಪರಿಶ್ರಮದಿಂದ ಸುರಕ್ಷಿತರಾಗಿರುವಿರಿ. ಪ್ರತಿ ಹೆಜ್ಜೆಗಾಗಿ ಬಾಪ್ದಾದಾರವರ ಮುಖಾಂತರ ಮರ್ಯಾದೆಗಳು ಸಿಕ್ಕಿವೆ, ಅದರ ಪ್ರಮಾಣ ಹೆಜ್ಜೆ ಇಡುವುದರಿಂದ ಸ್ವತಃ ಮರ್ಯಾದಾ ಪುರುಷೋತ್ತಮ ಆಗಿ ಬಿಡುವಿರಿ. ಆದ್ದರಿಂದ ಅಮೃತವೇಳೆಯಿಂದ ರಾತ್ರಿಯವರೆಗೆ ಮರ್ಯಾದಾಪೂರ್ವಕವಾದ ಜೀವನವಿದ್ದಾಗ ಹೇಳಲಾಗುವುದು ಪುರುಷೋತ್ತಮ ಅರ್ಥಾತ್ ಸಾಧಾರಣ ಪುರುಷರಿಗಿಂತಲೂ ಉತ್ತಮ ಆತ್ಮರು.

ಸ್ಲೋಗನ್:

ಯಾರು ಯಾವುದೇ ಮಾತಿನಲ್ಲಿ ಸ್ವಯಂ ಅನ್ನು ಮೋಲ್ಡ್ ಮಾಡಿಕೊಳ್ಳುತ್ತಾರೆ, ಅವರೇ ಸರ್ವರ ಆಶೀರ್ವಾದಗಳಿಗೆ ಪಾತ್ರರಾಗುತ್ತಾರೆ.

 Download PDF

 

Post a Comment

0 Comments