31/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ನೀವು
ಬಹಳ ಅದೃಷ್ಟವಂತ
ಮಕ್ಕಳು ಏಕೆಂದರೆ
ನಿಮ್ಮ ಸಮ್ಮುಖದಲ್ಲಿ
ಸ್ವಯಂ ತಂದೆ
ಇದ್ದಾರೆ, ಅವರೇ
ನಿಮಗೆ ತಿಳಿಸುತ್ತಿದ್ದಾರೆ”
ಪ್ರಶ್ನೆ:
ಭಕ್ತಿ ಮಾರ್ಗದ ಯಾವ ಒಂದು ಸಂಸ್ಕಾರ ಈಗ ನೀವು ಮಕ್ಕಳಲ್ಲಿ ಇಲ್ಲ, ಏಕೆ?
ಉತ್ತರ:
ಭಕ್ತಿ ಮಾರ್ಗದಲ್ಲಿ ಯಾವುದೇ ದೇವಿ ಅಥವಾ ದೇವತೆಗಳ ಬಳಿ ಹೋದಾಗ ಅವರಿಂದ ಒಂದಲ್ಲ ಒಂದು ಬೇಡುತ್ತಿದ್ದೆವು. ಕೆಲವರ ಬಳಿ ಸಂಪತ್ತನ್ನು ಬೇಡುತ್ತಿದ್ದೆವು, ಕೆಲವರ ಬಳಿ ಪುತ್ರನನ್ನು ಬೇಡುತ್ತಿದ್ದೆವು,
ಈ ಬೇಡುವ ಸಂಸ್ಕಾರ ಈಗ ನೀವು ಮಕ್ಕಳಲ್ಲಿ ಇಲ್ಲ ಏಕೆಂದರೆ ತಂದೆಯೇ ಸಂಗಮದಲ್ಲಿ ನಿಮ್ಮನ್ನು ಕಾಮಧೇನು ಆಗಿ ಮಾಡಿದ್ದಾರೆ. ನೀವು ತಂದೆಯ ಸಮಾನ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಿದ್ದೀರಿ. ನೀವು ಸ್ವಯಂನ ಪ್ರತಿ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ನಿಮಗೆ ತಿಳಿದಿದೆ - ಫಲ ಕೊಡುವಂತಹವರು ಒಬ್ಬ ದಾತಾ ತಂದೆಯಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದ ಎಲ್ಲಾ ಪ್ರಾಪ್ತಿಗಳು ಆಗುತ್ತವೆ. ಆದ್ದರಿಂದ ಬೇಡುವ ಸಂಸ್ಕಾರ ಸಮಾಪ್ತಿ ಆಗುತ್ತದೆ.
ಗೀತೆ: ಓಂ ನಮಃ ಶಿವಾಯ.....
ಓಂ ಶಾಂತಿ.
ಭಗವಾನುವಾಚ: ಈಗ ಚೆನ್ನಾಗಿ ತಿಳಿದುಕೊಂಡು ನಂತರ ತಿಳಿಸುವುದಕ್ಕೋಸ್ಕರ ಒಂದೇ ಗೀತಾ ಶಾಸ್ತ್ರವಾಗಿದೆ. ಮನುಷ್ಯರೇ ಶಾಸ್ತ್ರಗಳನ್ನು ಮಾಡಿದ್ದಾರೆ ಆದರೆ ಮನುಷ್ಯರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ನಾನು
5000 ವರ್ಷದ ಮೊದಲು ನೀವು ಭಾರತವಾಸಿ ಅಗಲಿ ಹೋದ ಮಕ್ಕಳಿಗೆ ರಾಜಯೋಗವನ್ನು ಕಲಿಸಿದ್ದೆ ಎಂದು ತಂದೆಯೇ ಹೇಳುತ್ತಾರೆ.
ಅಗಲಿ ಹೋದ ಎನ್ನುವುದರ ಅರ್ಥವೇ ಆಗಿದೆ ನೀವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡು ನಂತರ ಮಿಲನ ಮಾಡಲು ಬಂದಿದ್ದೀರಿ ಎಂದು.
5000 ವರ್ಷದ ಮೊದಲು ನೀವೇ ಮಿಲನ ಮಾಡಿದ್ದೀರಿ. ನೀವೇ ಬಂದು ಬ್ರಹ್ಮನ ಮುಖವಂಶಾವಳಿ ಅರ್ಥಾತ್ ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೀರಿ. ತಂದೆಯೇ ಡೈರೆಕ್ಟ್ ಮಾತಾನಾಡುತ್ತಿದ್ದಾರೆ. ಆ ಗೀತಾ ಓದುವವರು ಮುಂತಾದವರು ಈ ಮಾತುಗಳನ್ನು ತಿಳಿಸಲು ಸಾಧ್ಯವಿಲ್ಲ.
ತಂದೆಯೇ ಡೈರೆಕ್ಟ್ ಬಂದು ತಿಳಿಸುತ್ತಿದ್ದಾರೆ ನಂತರ ಭಕ್ತಿ ಮಾರ್ಗದಲ್ಲಿ ಶಾಸ್ತ್ರಗಳನ್ನು ಮಾಡುತ್ತಾರೆ. ಈಗ ನಾಟಕ ಪೂರ್ಣವಾಗುತ್ತದೆ ನಂತರ ತಂದೆ ಬರುತ್ತಾರೆ. ಮಕ್ಕಳಿಗೆ ಹೇಳುತ್ತಾರೆ, ಯಾವ ಮಕ್ಕಳಿಗೆ? ಮುಖ್ಯವಾಗಿ ನಿಮಗೆ ಮತ್ತು ಇಡೀ ಪ್ರಪಂಚಕ್ಕೆ ಹೇಳುತ್ತಾರೆ. ಈಗ ನಿಮ್ಮ ಸಮ್ಮುಖದಲ್ಲಿ ಇದ್ದಾರೆ. ನಿಮಗೆ ಕುಳಿತು ತಂದೆಯೇ ತಮ್ಮ ಪರಿಚಯವನ್ನು ಕೊಡುತ್ತಾರೆ. ಈ ರಾಜಯೋಗ ನಿಮಗೆ ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ.
ತಂದೆಯೇ ಮೊದಲು ರಾಜಯೋಗವನ್ನು ಕಲಿಸಿದರು,
ಈಗ ಪುನಃ ಕಲಿಸುತ್ತಿದ್ದಾರೆ. ಇದರಿಂದ ನೀವು ರಾಜರಿಗಿಂತ ರಾಜರಾಗುತ್ತೀರಿ ಬೇರೆ ಯಾರೂ ಸ್ವರ್ಗದ ಮಾಲೀಕರಾಗಲು ಸಾಧ್ಯವಿಲ್ಲ.
ನಿಮಗೆ ರಾಜಯೋಗವನ್ನು ಕಲಿಸಲು ನಾನೇ ನಿಮ್ಮ ತಂದೆ ಬಂದಿದ್ದೇನೆ. ಈಗ ತಂದೆ ನಿಮಗೆ ವೃಕ್ಷದ ಬಗ್ಗೆ ತಿಳಿಸುತ್ತಾರೆ. ಈ ತಿಳುವಳಿಕೆಯ ಅವಶ್ಯಕತೆ ಬಹಳ ಇದೆ.
ಇದಕ್ಕೆ ಕಲ್ಪವೃಕ್ಷ ಎಂದು ಹೇಳಲಾಗುತ್ತದೆ.
ಈ ಮನುಷ್ಯ ಸೃಷ್ಟಿ ರೂಪೀ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಹೇಳಲಾಗುತ್ತದೆ ಎಂದು ತಂದೆಯು ಹೇಳುತ್ತಾರೆ.
ಆ ಗೀತೆಯನ್ನು ತಿಳಿಸುವಂತಹವರು ಭಗವಂತ ಹೇಳಿದ್ದರು ಎಂದು ಹೇಳುತ್ತಾರೆ. ಆದರೆ ನೀವು ಭಗವಂತನೇ ಹೇಳುತ್ತಿದ್ದಾರೆ ಎಂದು ಹೇಳುತ್ತೀರಿ. ಇದು ಮನುಷ್ಯ ಸೃಷ್ಟಿಯ ವೃಕ್ಷವಾಗಿದೆ. ಇದರಲ್ಲಿ ಯಾವುದೇ ಹೂವು,
ಹಣ್ಣು, ಮಾವು ಇರುವುದಿಲ್ಲ. ಆ ಹೂವು, ಹಣ್ಣಿನ ವೃಕ್ಷವು ಯಾವುದಿರುತ್ತದೋ ಅದರ ಬೀಜ ಕೆಳಗೆ ಇರುತ್ತದೆ,
ವೃಕ್ಷ ಮೇಲಿರುತ್ತದೆ.
ಇದರ ಬೀಜ ಮೇಲೆ ಮತ್ತು ವೃಕ್ಷ ಕೆಳಗಿದೆ.
ಈಶ್ವರನೇ ನಮಗೆ ಜನ್ಮವನ್ನು ಕೊಟ್ಟರು ಅರ್ಥಾತ್ ತಂದೆಯೇ ಮಕ್ಕಳನ್ನು ಕೊಟ್ಟರು ಎಂದು ಹೇಳುತ್ತಾರೆ.
ತಂದೆಯೇ ಈ ಹಣವನ್ನು ಕೊಟ್ಟರು.
ಬಾಬಾ ತಾವು ನಮ್ಮ ಎಲ್ಲಾ ದುಃಖವನ್ನು ದೂರ ಮಾಡಿ. ಬಾಬಾ,
ಬಾಬಾ ಎಂದು ಹೇಳುತ್ತಿರುತ್ತಾರೆ. ಎಷ್ಟೊಂದು ಅಶಾಂತಿ ಇದೆ.
ಲಕ್ಷ್ಮೀ-ನಾರಾಯಣರ ಮುಂದೆ ಹೋಗುತ್ತಾರೆ ಅವರಿಂದ ಬೇಡುತ್ತಾರೆ.
ನಮಗೆ ಮಹಾಲಕ್ಷ್ಮಿಯ ಬಳಿ ನಮಗೆ ಹಣ ಕೊಡಿ ಎಂದು ಹೇಳುತ್ತಾರೆ.
ಇದೆಲ್ಲಾ ಬೇಡುವ ಸಂಸ್ಕಾರವಾಅಗಿದೆ. ಜಗದಾಂಬನಿಂದ ಕೆಲವರು ಪುತ್ರನನ್ನು ಬೇಡುತ್ತಾರೆ. ಕೆಲವರು ನಮ್ಮ ಕಾಯಿಲೆಯನ್ನು ದೂರ ಮಾಡಿ ಎಂದು ಹೇಳುತ್ತಾರೆ.
ಲಕ್ಷ್ಮಿಯ ಬಳಿ ಈ ರೀತಿ ಆಸೆಗಳನ್ನು ಇಟ್ಟುಕೊಳ್ಳುವುದಿಲ್ಲ. ಅವರ ಬಳಿ ಕೇವಲ ಹಣವನ್ನು ಬೇಡುತ್ತಾರೆ. ಜಗದಂಬನಿಂದ ಲಕ್ಷ್ಮಿ, ಸೋ ಪುನಃ 84 ಜನ್ಮಗಳ ಚಕ್ರವನ್ನು ಸುತ್ತು ಹಾಕಿ ನಂತರ ಜಗದಾಂಬ ಆಗುತ್ತಾರೆ ಎಂದು ನೀವು ಮಕ್ಕಳಿಗೆ ತಿಳಿದಿದೆ.
ವೃಕ್ಷದಲ್ಲಿ ನೋಡಿ ಜಗದಾಂಬ ಕುಳಿತಿದ್ದಾರೆ,
ಇವರೇ ನಂತರ ಮಹಾರಾಣಿ ಅವಶ್ಯವಾಗಿ ಆಗುತ್ತಾರೆ, ನೀವು ಮಕ್ಕಳು ರಾಜಧಾನಿಯಲ್ಲಿ ಬರುತ್ತೀರಿ. ನೀವು ಕಲ್ಪ ವೃಕ್ಷದ ಕೆಳಗೆ ಕುಳಿತಿದ್ದೀರಿ.
ಸಂಗಮಯುಗದಲ್ಲಿ ಅಡಿಪಾಯವನ್ನು ಹಾಕಲಾಗುತ್ತದೆ. ಕಾಮಧೇನುವಿನ ನೀವು ಮಕ್ಕಳು ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವಂತಹವರಾಗಿದ್ದೀರಿ. ನೀವು ಭಾರತಮಾತೆ ಶಕ್ತಿ ಸೇನೆ ಆಗಿದ್ದೀರಿ, ಇದರಲ್ಲಿ ಪಾಂಡವರೂ ಸಹ ಇದ್ದಾರೆ.
ಒಬ್ಬ ತಂದೆಯನ್ನೇ ನೆನಪು ಮಾಡಬೇಕು ಎಂದು ನೀವು ಮಕ್ಕಳಿಗೆ ತಿಳಿಸಲಾಗಿದೆ.
ಕೊಡುವಂತಹವರು ಒಬ್ಬ ತಂದೆಯಾಗಿದ್ದಾರೆ. ಭಲೆ ನೀವು ಯಾರನ್ನೇ ಭಕ್ತಿ ಮಾಡಿ,
ನೀವು ಯಾರನ್ನೇ ನೆನಪು ಮಾಡಿ ಆದರೆ ಫಲ ಕೊಡುವಂತಹವರು ಒಬ್ಬರು ಆಗಿದ್ದಾರೆ. ಅವರು ಎಲ್ಲವನ್ನು ಕೊಡುತ್ತಾರೆ.
ಭಕ್ತಿಮಾರ್ಗದಲ್ಲಿ ನೀವೇ ನಾರಾಯಣನ ಕೃಷ್ಣನ ಪೂಜೆ ಮಾಡುತ್ತಿದ್ದೀರಿ. ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ತೂಗುತ್ತಿದ್ದಿರಿ, ಪ್ರೀತಿ ಮಾಡುತ್ತಿದ್ದಿರಿ, ಅವರಿಂದ ನೀವು ಏನು ಬೇಡುತ್ತೀರಿ?
ಕೇವಲ ನೀವು ಅವನ ರಾಜಧಾನಿಯಲ್ಲಿ ಹೋಗುತ್ತೀರಿ ಅಥವಾ ನಮಗೆ ಕೃಷ್ಣನ ರೀತಿ ಮಗು ಸಿಗುತ್ತದೆ ಎಂದು ನೀವು ಇಷ್ಟ ಪಡುತ್ತಿದ್ದಿರಿ. ರಾಧೆ-ಗೋವಿಂದನನ್ನು ಭಜನೆ ಮಾಡಿ ವೃಂದಾವನಕ್ಕೆ ಹೋಗಬೇಕು ಎಂದು ಗಾಯನ ಮಾಡುತ್ತಿದ್ದಿರಿ. ವೈಕುಂಠದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಆ ಸಮಯದಲ್ಲಿ ಯಾವುದೇ ಅಪ್ರಾಪ್ತಿಯಾದ ವಸ್ತುವು ಇಲ್ಲ. ಕೃಷ್ಣನ ರಾಜ್ಯವನ್ನು ಬಹಳ ನೆನಪು ಮಾಡುತ್ತಾರೆ.
ಭಾರತದಲ್ಲಿ ಯಾವಾಗ ರಾಜ್ಯವಿತ್ತೋ ಆಗ ಯಾವುದೇ ಬೇರೆ ರಾಜ್ಯವಿರಲಿಲ್ಲ. ಈಗ ಕೃಷ್ಣಪುರಿಯಲ್ಲಿ ಹೋಗಬೇಕು ಎಂದು ತಂದೆಯು ಹೇಳುತ್ತಾರೆ. ಕೃಷ್ಣನ ಪತ್ನಿಯಾದರೂ ಆಗಿ ಅಥವಾ ರಾಧೆಯ ಪತಿಯಾದರೂ ಆಗಿ ಎರಡೂ ಒಂದೇ ಮಾತಾಗಿದೆ. ಅಲ್ಲಿ ವಿಷ ಸಿಗುವುದಿಲ್ಲ.
ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ.
ನೀವು ಈಗ ವಿದ್ಯಾರ್ಥಿಗಳು ಆಗಿದ್ದೀರಿ,
ನರನಿಂದ ನಾರಾಯಣ,
ಬಡವರಿಂದ ರಾಜಕುಮಾರರಾಗಲು ಓದುತ್ತಿದ್ದೀರಿ. ಇಲ್ಲಿ ಕೆಲವರು ಕೋಟ್ಯಾಧಿಪತಿಗಳು ಇರಬಹುದು. 50 ಕೋಟಿಯೇ ಇರಲಿ ಆದರೆ ನಿಮಗೆ ಹೋಲಿಸಿದಲ್ಲಿ ಇವರು ಬಡವರಾಗಿದ್ದಾರೆ ಏಕೆಂದರೆ ಇವರ ಎಲ್ಲಾ ಸಂಪತ್ತು ಮಣ್ಣು ಪಾಲು ಆಗಲಿದೆ. ಯಾವುದೂ ಜೊತೆಯಲ್ಲಿ ಹೋಗುವುದಿಲ್ಲ.
ಬರೀ ಕೈಯಲ್ಲಿ ಹೋಗುತ್ತಾರೆ. ನೀವಂತೂ
21 ಜನ್ಮಗಳವರೆಗೆ ಕೈ ತುಂಬಿಸಿಕೊಂಡು ಹೋಗುತ್ತೀರಿ.
ನೀವು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ ನಂತರ ಸತ್ಯಯುಗದಲ್ಲಿ ಹೋಗಿ ರಾಜ್ಯ ಮಾಡುತ್ತೀರಿ. ನೀವು ಪುನರ್ಜನ್ಮವನ್ನು ತೆಗೆದುಕೊಂಡು ವರ್ಣಗಳಲ್ಲಿ ಬರುತ್ತೀರಿ.
ಸತ್ಯಯುಗದಲ್ಲಿ 16 ಕಲೆ,
ತ್ರೇತಾದಲ್ಲಿ 14 ಕಲೆಗಳು ನಂತರ ಭಕ್ತಿಮಾರ್ಗ ಪ್ರಾರಂಭವಾಗುತ್ತದೆ. ನಂತರ ಇಬ್ರಾಹೀಂ ಬುದ್ಧ ಬರುತ್ತಾರೆ. ಕ್ರಿಸ್ತನಿಗೆ
3000 ವರ್ಷಕ್ಕೆ ಮೊದಲು ದೇವೀ-ದೇವತೆಗಳ ರಾಜ್ಯವಿತ್ತು. ಈಗ ವೃಕ್ಷ ಸಂಪೂರ್ಣ ಹಳೆಯದಾಗಿ ಜಡೀ-ಜಡೀ ಭೂತ ಅವಸ್ಥೆಯನ್ನು ಪಡೆದಿದೆ.
ಈಗ ನೀವು ಕಲ್ಪ ವೃಕ್ಷದ ಕೆಳಗೆ ಸಂಗಮದಲ್ಲಿ ಕುಳಿತಿದ್ದೀರಿ, ಇದಕ್ಕೆ ಕಲ್ಪದ ಸಂಗಮ ಅಥವಾ ಕಲಿಯುಗ ಮತ್ತು ಸತ್ಯಯುಗದ ಸಂಗಮ ಎಂದು ಕರೆಯಲಾಗುತ್ತದೆ. ಸತ್ಯಯುಗದ ನಂತರ ತ್ರೇತಾ,
ತ್ರೇತಾದ ನಂತರ ದ್ವಾಪರ ಮತ್ತು ಕಲಿಯುಗದ ಸಂಗಮ.
ಕಲಿಯುಗದ ನಂತರ ಮತ್ತೆ ಸತ್ಯಯುಗ ಅವಶ್ಯವಾಗಿ ಬರುತ್ತದೆ.
ಮಧ್ಯದಲ್ಲಿ ಸಂಗಮಯುಗ ಬರಲೇಬೇಕು. ಕಲ್ಪದ ಸಂಗಮಯುಗದಲ್ಲಿ ತಂದೆ ಬರುತ್ತಾರೆ. ಅವರುಗಳು ಕಲ್ಪದ ಅಕ್ಷರ ಬದಲಾಗಿ ಯುಗೆ-ಯುಗೆ ಎಂದು ಬರೆದಿದ್ದಾರೆ. ನಾನು ನಿರಾಕಾರ ಪರಮಾತ್ಮ ಜ್ಞಾನಸಾಗರ ಆಗಿದ್ದೇನೆ ಎಂದು ತಂದೆ ತಿಳಿಸುತ್ತಾರೆ. ಭಾರತದಲ್ಲಿಯೇ ಶಿವಜಯಂತಿಯ ಗಾಯನವಿದೆ.
ಕೃಷ್ಣ ಜ್ಞಾನ ಕೊಡಲು ಸಾಧ್ಯವಿಲ್ಲ.
ಕುದುರೆ ಗಾಡಿಯಲ್ಲಿ ಕೇವಲ ಶ್ರೀ ಕೃಷ್ಣನ ಚಿತ್ರವನ್ನು ತೋರಿಸಲಾಗಿದೆ ಆದರೆ ಕೃಷ್ಣ ಯಾವಾಗ ಬರುತ್ತಾರೆ? ಸ್ವರ್ಗದಲ್ಲಿ ಶ್ರೀ ಕೃಷ್ಣನ ಜೊತೆ ಬರುತ್ತೇವೆ ಎಂದು ನೀವುಗಳು ಹೇಳುತ್ತೀರಿ. ಭಕ್ತಿಮಾರ್ಗದಲ್ಲಿ ಶ್ರೀ ಕೃಷ್ಣನ ಸಾಕ್ಷಾತ್ಕಾರ ನಾನು ನಿಮಗೆ ಮಾಡಿಸುತ್ತೇನೆ ಎಂದು ತಂದೆಯು ಹೇಳುತ್ತಾರೆ. ಶ್ರೀ ಕೃಷ್ಣನ ಜಯಂತಿಯನ್ನು ಬಹಳ ಪ್ರೀತಿಯಿಂದ ಅವನ ಉಯ್ಯಾಲೆಯನ್ನು ತೂಗುತ್ತಾರೆ, ಪೂಜೆಯನ್ನು ಮಾಡುತ್ತಾರೆ. ಅವರಿಗೆ ನಿಜವಾಗಿಯೂ ಶ್ರೀಕೃಷ್ಣನೇ ಕಂಡು ಬರುತ್ತಾನೆ.
ಸಾಕ್ಷಾತ್ಕಾರವಾಗುತ್ತದೆ. ಶ್ರೀ ಕೃಷ್ಣನ ಚಿತ್ರವಿದ್ದರೆ ಅದನ್ನೇ ತೆಗೆದುಕೊಂಡು ಆಲಿಂಗನ ಮಾಡಿಕೊಳ್ಳುತ್ತಾರೆ. ಭಕ್ತಿಮಾರ್ಗದಲ್ಲಿ ನಾನೇ ನಿಮಗೆ ಸಹಾಯ ಮಾಡುತ್ತೇನೆ. ನಾನು ದಾತಾನಾಗಿದ್ದೇನೆ. ಲಕ್ಷ್ಮೀಯ ಪೂಜೆಯನ್ನು ಮಾಡುತ್ತಾರೆ.
ಅದಂತೂ ಈಗ ಕಲ್ಲಿನ ಮೂರ್ತಿಯಾಗಿದೆ.
ಅದು ಏನನ್ನು ಕೊಡುತ್ತದೆ? ನಾನೇ ಮತ್ತೆ ಕೊಡಬೇಕಾಗುತ್ತದೆ. ಸಾಕ್ಷಾತ್ಕಾರವನ್ನೂ ಸಹ ನಾನೇ ಮಾಡಿಸುತ್ತೇನೆ.
ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ.
ಪರಮಾತ್ಮನ ಆದೇಶದಂತೆ ಎಲೆ-ಎಲೆಯೂ ಸಹ ಅಲುಗಾಡುತ್ತದೆ ಎಂದು ಹೇಳುತ್ತಾರೆ ಏಕೆಂದರೆ ಎಲೆ-ಎಲೆಯಲ್ಲಿ ಪರಮಾತ್ಮನಿದ್ದಾನೆಂದು ತಿಳಿದುಕೊಂಡಿದ್ದಾರೆ. ಪರಮಾತ್ಮ ಕುಳಿತು ಎಲೆಗೆ ಆದೇಶವನ್ನು ನೀಡುತ್ತಾರೇನು!
ಇದು ನಾಟಕ ಮಾಡಲ್ಪಟ್ಟಿದೆ. ಈಗ ನೀವು ಯಾವ ರೀತಿ ಪಾತ್ರ ಮಾಡುತ್ತಿದ್ದೀರಿ ಮತ್ತೆ ಕಲ್ಪದ ನಂತರವೂ ಸಹ ಇದೇ ರೀತಿ ಮಾಡುತ್ತೀರಿ.
ಷೂಟಿಂಗ್ನಲ್ಲಿ ಏನು ಷೂಟಾಗುತ್ತದೆ ಅದೇ ಚಿತ್ರ ಕಂಡು ಬರುತ್ತದೆ. ಅದರಲ್ಲಿ ಯಾವುದೇ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಡ್ರಾಮಾವನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕು. ಬೇಹದ್ದಿನ ಸುಖ ಕಲ್ಪ-ಕಲ್ಪ ಭಾರತಕ್ಕೆ ಸಿಗುತ್ತದೆ ಎಂದು ತಂದೆ ತಿಳಿಸುತ್ತಾರೆ.
ಆದರೆ ಯಾರು ಬ್ರಾಹ್ಮಣರಾಗುತ್ತಾರೆ ಅವರೇ ಅನ್ಯ ವರ್ಣಗಳಲ್ಲಿ ಬರುತ್ತಾರೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಅನ್ಯರ ಜನ್ಮ ನಂಬರ್ವಾರ್ ಕಡಿಮೆ ಆಗುತ್ತಾ ಹೋಗುತ್ತದೆ.
ಎಷ್ಟು ಚಿಕ್ಕ-ಚಿಕ್ಕ ಮಠ ಪಂತಗಳಿವೆ. ಭಲೆ ಅವರುಗಳ ಮಹಿಮೆಯನ್ನೂ ಮಾಡುತ್ತಾರೆ - ಏಕೆಂದರೆ ಪವಿತ್ರರಾಗಿರುತ್ತಾರೆ. ಸ್ವರ್ಗದ ರಚಯಿತ ತಂದೆಯಾಗಿದ್ದಾರೆ, ಬೇರೆ ಯಾವುದೇ ಮನುಷ್ಯರು ಸ್ವರ್ಗವನ್ನು ರಚಿಸಲು ಸಾಧ್ಯವಿಲ್ಲ.
ರಾಜಯೋಗವನ್ನೂ ಸಹ ಯಾರಾದರು ಕಲಿಸಿರಬೇಕಲ್ಲವೇ?
ನೀವು ಈಗ ಕೃಷ್ಣಪುರಿಯಲ್ಲಿ ಹೋಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ಪುರುಷಾರ್ಥವನ್ನು ಯಾವಾಗಲೂ ಶ್ರೇಷ್ಠರಾಗಲು ಮಾಡಲಾಗುತ್ತದೆ.
ನೀವು ಹೇಳುತ್ತೀರಿ
- ಕೃಷ್ಣನಂತ ಮಗು ಸಿಗಲಿ, ಕೃಷ್ಣನಂತ ಪತಿ ಸಿಗಲಿ ಎಂದು. ಕೃಷ್ಣನೇ ನಾರಾಯಣನಾಗುತ್ತಾನೆ ಮತ್ತೆ ಕೃಷ್ಣನಂತಹವರು ಎಂದು ಏಕೆ ಹೇಳುತ್ತಾರೆ!
ನೀವಂತೂ ನಾರಾಯಣನಂತ ಪತಿ ಸಿಗಬೇಕು ಎಂದು ಹೇಳಬೇಕು.
ನಾನು ಲಕ್ಷ್ಮೀಯನ್ನು ವರಿಸಬೇಕೆಂದು ನಾರದನೂ ಸಹ ಹೇಳಿದ.
ರಾಧೆಗೆ ಈ ರೀತಿ ಹೇಳುವುದಿಲ್ಲ.
ನೀವು ಕೃಷ್ಣ ಪುರಿಯಲ್ಲಿ ಹೋಗಬೇಕೆಂದರೆ ಹೆಚ್ಚು ಪುರುಷಾರ್ಥ ಮಾಡಿ ಎಂದು ತಂದೆಯು ಹೇಳುತ್ತಾರೆ.
ಅದು ಕೃಷ್ಣನ ದೈವೀ ಕುಲವಾಗಿದೆ.
ಕಂಸನದು ಆಸುರೀ ಕುಲವಾಗಿದೆ. ನೀವು ಈಗ ಸಂಗಮಯುಗದಲ್ಲಿ ಇದ್ದೀರಿ. ಶೂದ್ರ ಸಂಪ್ರದಾಯದವರನ್ನು ಬ್ರಾಹ್ಮಣ-ಬ್ರಾಹ್ಮಣಿ ಎಂದು ಹೇಳಲು ಸಾಧ್ಯವಿಲ್ಲ.
ಯಾರನ್ನು ಬ್ರಾಹ್ಮಣನೆಂದು ಹೇಳುವುದಿಲ್ಲ ಅವರು ಶೂದ್ರವರ್ಣದವರಾಗಿದ್ದಾರೆ. ಇದು ಭಾರತದ ಮಾತಾಗಿದೆ.
ಭಾರತವೇ ಸ್ವರ್ಗವಾಗುತ್ತದೆ ಮತ್ತೆ ಭಾರತವೇ ನರಕವಾಗುತ್ತದೆ. ಲಕ್ಷ್ಮೀ-ನಾರಯಣರೂ ಸಹ
84 ಜನ್ಮಗಳನ್ನು ತೆಗೆದುಕೊಂಡು ರಜೋ-ತಮೋದಲ್ಲಿ ಬರಲೇಬೇಕು. ಯಾವಾಗ ಇವರೇ ಚಕ್ರದಲ್ಲಿ ಬರುತ್ತಾರೆಂದರೆ ಬುದ್ಧ ಮುಂತಾದವರು ಮರಳಿ ನಿರ್ವಾಣಧಾಮದಲ್ಲಿ ಹೇಗೆ ಹೋಗಲು ಸಾಧ್ಯ.
ಕೆಲವರು ಕೃಷ್ಣನನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ. ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣನಿದ್ದಾರೆ. ರಾಮನ ಭಕ್ತರು ರಾಮ ಸರ್ವವ್ಯಾಪಿ ಎಂದು ಹೇಳುತ್ತಾರೆ. ಅವರು ಕೃಷ್ಣನನ್ನು ಒಪ್ಪುವುದಿಲ್ಲ.
ಬಾಬಾರವರ ಬಳಿ ಒಬ್ಬರು ರಾಧಾ ಪಂತದವರು ಬಂದಿದ್ದರು,
ಎಲ್ಲಿ ನೋಡಿದರೂ ರಾಧೆಯೇ ರಾಧೆ ಎಂದು ಹೇಳುತ್ತಿದ್ದರು. ರಾಧೆ ನಮ್ಮ ಮುಂದೆ ಇದ್ದಾರೆ ಎಂದು ಹೇಳುತ್ತಾರೆ.
ನಿಮ್ಮಲ್ಲಿ-ನಮ್ಮಲ್ಲಿ-ಎಲ್ಲರಲ್ಲೂ ರಾಧೆಯೇ ಇದ್ದಾರೆ. ಗಣೇಶನ ಪೂಜಾರಿ ನಮ್ಮಲ್ಲಿ-ನಿಮ್ಮಲ್ಲಿ ಗಣೇಶನೇ ಗಣೇಶನಿದ್ದಾರೆಂದು ಹೇಳುತ್ತಾರೆ.
ಕ್ರಿಸ್ತ ದೇವರ ಮಗನೆಂದು ಕ್ರಿಶ್ಚಯನ್ನರು ಹೇಳುತ್ತಾರೆ. ಅರೇ!
ಕ್ರಿಸ್ತ ದೇವರ ಮಗ ಅಂದಾಗ ನೀವು ಯಾರ ಮಗನಾಗಿದ್ದೀರಿ? ಅನೇಕ ಮತ-ಮತಾಂತರಗಳು ಇವೆ. ಮಾರ್ಗ ಯಾರಿಗೂ ಸಹ ಸಿಗುವುದಿಲ್ಲ. ಕೇವಲ ತಲೆ ಬಾಗಿಸಿ ಹುಡುಕುತ್ತಲೇ ಇರುತ್ತಾರೆ.
ಮುಕ್ತಿ-ಜೀವನ್ಮುಕ್ತಿಯನ್ನು ಭಗವಂತನೇ ಕೊಡುತ್ತಾರಲ್ಲವೇ! ಅವರಿಂದ ನಾವು ಏನನ್ನು ಬೇಡುವುದು ಯಾರಿಗೂ ಗೊತ್ತಿಲ್ಲ.
ತಂದೆಯನ್ನು ತಿಳಿದುಕೊಳ್ಳದೆ ಇರುವ ಕಾರಣ ಅನಾಥರಾಗಿದ್ದಾರೆ. ಮತ್ತೆ ಧನಿ ಬಂದು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಮನುಷ್ಯರು ಎಷ್ಟೊಂದು ಪೆಟ್ಟು ತಿನ್ನುತ್ತಾರೆ?
ಭಕ್ತಿಯಿಂದ ಭಗವಂತ ಸಿಗುತ್ತಾರೆಂದು ತಿಳಿದುಕೊಂಡಿದ್ದಾರೆ. ನಾನು ಬರುವುದೇ ನನ್ನ ಸಮಯದಲ್ಲಿ ಎಂದು ತಂದೆಯು ಹೇಳುತ್ತಾರೆ. ಯಾರು ಎಷ್ಟೇ ಕರೆದರೂ ನಾನು ಸಂಗಮದಲ್ಲಿಯೇ ಬರುತ್ತೇನೆ. ಒಂದೇಸಾರಿ ಭಾರತವನ್ನು ಸ್ವರ್ಗವನ್ನಾಗಿ ಮಾಡಿ ಎಲ್ಲರನ್ನು ಶಾಂತಿಯಲ್ಲಿ ಕಳಿಸುತ್ತೇನೆ.
ನಂತರ ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬರುತ್ತಾರೆ.
ಯಾರು ದೇವೀ-ದೇವತೆಗಳು ಆಗಿದ್ದರು ಅವರೇ ಆತ್ಮರು ಕುಳೀತಿದ್ದೀರಿ. ಮತ್ತೆ ರಾಜ್ಯಭಾಗ್ಯವನ್ನು ಪಡೆಯಲು ಈಗಂತೂ ದೇವೀ-ದೇವತಾ ಧರ್ಮವಿಲ್ಲ.
ಎಲ್ಲರೂ ತನ್ನನ್ನು ಹಿಂದು ಎಂದು ಹೇಳಿಕೊಳ್ಳುತ್ತಿದ್ದಾರೆ. ಡ್ರಾಮಾನುಸಾರ ಮತ್ತೆ ಏನೆಲ್ಲಾ ಆಗಿದೆಯೋ ಹೀಗೆ ಆಗುತ್ತದೆ. ಮತ್ತೆ ಅದೇ ರೀತಿ ನಾವು ಚಕ್ರದಲ್ಲಿ ಬರುತ್ತೇವೆ ಎಂಬುದನ್ನು ಲೆಕ್ಕ ತೆಗೆಯಿರಿ.
ಪ್ರತಿಯೊಬ್ಬ ಧರ್ಮದವರು ನಂತರ ಎಷ್ಟು ಜನ್ಮ ಪಡೆಯುತ್ತಾರೆ?
ವೃಕ್ಷದ ಮೇಲೆ ತಿಳಿಸುವುದು ಬಹಳ ಸಹಜವಾಗಿದೆ. ಮನುಷ್ಯರಿಗೆ ತಾನಾಗೆಯೇ ಅರ್ಥವಾಗುತ್ತದೆ. ಯಾವುದೇ ಪ್ರೇರಣೆಯಿಂದ ಈ ವಿನಾಶದ ಜ್ವಾಲೆಯ ತಯಾರಿ ಆಗುತ್ತಿದೆ. ಯುರೋಪ್ವಾಸಿ ಯಾದವರು ಬಾಂಬ್ಗಳನ್ನು ತಯಾರಿ ಮಾಡುತ್ತಿದ್ದಾರೆ. ಅವರೂ ಹೇಳುತ್ತಾರೆ
- ನಮಗೆ ಯಾರೋ ಪ್ರೇರಣೆಯನ್ನು ಕೊಡುತ್ತಾರೆ.
ನಮಗೆ ಗೊತ್ತಿದೆ
- ಇದರಿಂದ ನಾವು ನಮ್ಮ ಕುಲವನ್ನು ನಾವೇ ವಿನಾಶ ಮಾಡಿಕೊಳ್ಳುತ್ತಿದ್ದೇವೆ ಎಂದು ಆದರೂ ನಮಗೆ ಇಷ್ಟವಿಲ್ಲದಿದ್ದರೂ ನಾವು ಈ ಮೃತ್ಯುವಿನ ಸಾಮಾಗ್ರಿಗಳನ್ನು ಮಾಡುತ್ತಿದ್ದೇವೆ. ನಿಧಾನವಾಗಿ ಪ್ರಭಾವ ಬೀರುತ್ತದೆ. ನಿಧಾನವಾಗಿ ವೃಕ್ಷವೂ ದೊಡ್ಡದಾಗುತ್ತಾ ಹೋಗುತ್ತದೆ, ಕೆಲವರು ಮುಳ್ಳಿನಿಂದ ಮೊಗ್ಗು,
ಕೆಲವರು ಹೂಗಳು ಆಗುತ್ತಾರೆ. ಕೆಲವರು ಹೂಗಳು ಆಗಿದ್ದವರು ಬಿರುಗಾಳಿ ಬಂದಾಗ ಬಾಡಿ ಹೋಗುತ್ತಾರೆ.
ಬಾಬಾ ಕಲ್ಪ-ಕಲ್ಪದಲ್ಲಿಯೂ ಹೇಳಿದ್ದರು
- ಆಶ್ವರ್ಯವಾಗಿ ಕೇಳುತ್ತಾರೆ,
ಹೇಳುತ್ತಾರೆ.............. ಈಗ ಮತ್ತೆ ಬಾಬಾ ಸ್ವಯಂ ಹೇಳುತ್ತಿದ್ದಾರೆ, ನಮ್ಮ ಬಳಿ ಬರುತ್ತಾರೆ, ಬ್ರಹ್ಮಾಕುಮಾರ-ಕುಮಾರಿ ಆಗುತ್ತಾರೆ.
ಆದರೂ ಅಯ್ಯೋ ಮಾಯೆ ಒಳ್ಳೊಳ್ಳೆ ಮಕ್ಕಳನ್ನು ತಿಂದು ಹಾಕುತ್ತದೆ. ಮುಂದೆ ಹೋಗುತ್ತಾ ನೋಡುತ್ತೀರಿ ಎಂತಹ ಒಳ್ಳೊಳ್ಳೆ ಮಕ್ಕಳೂ ಸಹ ಸಮಾಪ್ತಿ ಆಗಿಬಿಡುತ್ತಾರೆ.
ಯಾವುದು ಕಳೆದು ಹೋಯಿತೋ ಅದನ್ನು ಮತ್ತೆ ಈಗ ವರ್ತಮಾನದಲ್ಲಿ ತಂದೆ ತಿಳಿಸುತ್ತಿದ್ದಾರೆ. ಮತ್ತೆ ಭಕ್ತಿಮಾರ್ಗದಲ್ಲಿ ಶಾಸ್ತ್ರಗಳನ್ನು ಮಾಡುತ್ತಾರೆ - ಈ ಡ್ರಾಮಾ ಅದೇ ರೀತಿ ಮಾಡಲ್ಪಟ್ಟಿದೆ.
ಈಗ ತಂದೆ ಬಂದು ಬ್ರಹ್ಮಾರವರ ಮೂಲಕ ಎಲ್ಲಾ ವೇದಗಳ ಸಾರವನ್ನು ತಿಳಿಸುತ್ತಿದ್ದಾರೆ. ಯಾವ ಧರ್ಮ ಸ್ಥಾಪನೆ ಮಾಡುತ್ತಾರೋ ಅದರ ಹೆಸರಿನಲ್ಲಿಯೇ ಶಾಸ್ತ್ರವನ್ನು ಮಾಡುತ್ತಾರೆ. ಅದಕ್ಕೆ ಧರ್ಮ ಶಾಸ್ತ್ರ ಎಂದು ಹೇಳಲಾಗುತ್ತದೆ.
ದೇವೀ-ದೇವತಾ ಧರ್ಮದ ಶಾಸ್ತ್ರವೂ ಒಂದೇ ಅದು ಗೀತೆ ಆಗಿದೆ.
ಪ್ರತಿಯೊಂದು ಧರ್ಮಕ್ಕೆ ಒಂದು ಶಾಸ್ತ್ರವಿರಬೇಕು. ಶ್ರೀಮತ್ಭಗವದ್ಗೀತಾ ಸರಿಯಾಗಿದೆÉ.
ಭಗವಾನುವಾಚವಾಗಿದೆ. ಭಗವಂತನೇ ಆದಿ ಸನಾತನ ದೇವೀ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದರು. ಇದು ಎಲ್ಲದಕ್ಕಿಂತ ಪ್ರಾಚೀನ ಧರ್ಮವಾಗಿದೆ. ಪ್ರತಿಯೊಂದು ಧರ್ಮಕ್ಕೂ ತನ್ನ-ತನ್ನದೇ ಶಾಸ್ತ್ರವಿದೆ.
ಹಾಗೂ ಓದುತ್ತಿರುತ್ತಾರೆ. ಈಗ ತಾವು ದೇವತೆಗಳು ಆಗುತ್ತೀರಿ ಆದರೆ ತಾವು ಶಾಸ್ತ್ರ ಓದುವ ಅವಶ್ಯಕತೆ ಇಲ್ಲ.
ಅಲ್ಲಿ ಶಾಸ್ತ್ರ ಇರುವುದೇ ಇಲ್ಲ.
ಇದೆಲ್ಲವೂ ಸಮಾಪ್ತಿ ಆಗುತ್ತದೆ ನಂತರ ಗೀತೆ ಎಲ್ಲಿಂದ ಬಂತು? ದ್ವಾಪರದಲ್ಲಿ ಮನುಷ್ಯರೇ ಕುಳಿತು ಮಾಡಿದರು, ಅದೇ ಗೀತೆ ಈಗ ಇದೆ ಮತ್ತೆ ಅದೇ ಗೀತೆಯನ್ನು ಶೋಧನೆ ಮಾಡಿ ತೆಗೆಯುತ್ತಾರೆ. ಹೇಗೆ ಕಲ್ಪದ ಮೊದಲು ಮಾಡಿದರೋ ಇದೇ ಶಾಸ್ತ್ರವನ್ನು ಮತ್ತೆ ಮಾಡುತ್ತಾರೆ. ಭಕ್ತಿಮಾರ್ಗದ ಸಾಮಾಗ್ರಿಗಳು ಆಗುತ್ತಾ ಹೋಗುತ್ತವೆ.
ತಂದೆ ತಿಳಿಸುತ್ತಾರೆ ಅಗಲಿ ಹೋಗಿ ಸಿಕ್ಕಿರುವಂತಹ ಮಕ್ಕಳೇ
- ತಂದೆಯಾದ ನನ್ನ ಶ್ರೀಮತದಂತೆ ನಡೆದು ಶ್ರೇಷ್ಠರಾಗಿ. ತಾವು ಈಗ ಸಂಗಮಯುಗದಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ, ಈಗ ಕಲಿಯುಗವನ್ನು ಸತ್ಯಯುಗವನ್ನಾಗಿ ಮಾಡಬೇಕು.
ಅವರು ಕಲ್ಪದ ಆಯಸ್ಸನ್ನು ದೀರ್ಘ ಮಾಡಿ ಎಲ್ಲರನ್ನು ಘೋರಾಂಧಕಾರದಲ್ಲಿ ಹಾಕಿದ್ದಾರೆ.
ಮನುಷ್ಯರಂತೂ ತಬ್ಬಿಬ್ಬು ಆಗಿದ್ದಾರೆ. ಡ್ರಾಮಾನುಸಾರ ತಾವು ಮಕ್ಕಳೇ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ.
ಬಾಬಾ ಬಹಳ ಯುಕ್ತಿಗಳನ್ನು ಹೇಳಿದ್ದಾರೆ.
ಕೇವಲ ತಂದೆಯನ್ನು ನೆನಪು ಮಾಡಿ ಚಾರ್ಟ್ ಇಡಿ.
ಅಡಿಗೆ ಮಾಡುವ ಸಮಯದಲ್ಲಿಯೂ ನೆನಪು ಮಾಡಿ. ಅಡಿಗೆ ಮಾಡುವ ಸಮಯದಲ್ಲಿ ಪತಿ, ಮಗು ನೆನಪು ಬರುತ್ತಾರೆ,
ಶಿವಬಾಬಾ ಏಕೆ ನೆನಪು ಬರಲು ಸಾಧ್ಯವಿಲ್ಲ! ಇದು ನಿಮ್ಮ ಕೆಲಸವಾಗಿದೆ ಬಾಬಾ ಬುದ್ಧಿಯ ಏಣಿಯನ್ನು ಕೊಡುತ್ತಾರೆ.
ನೀವು ಹತ್ತಿ ಅಥವಾ ಹತ್ತದೆ ಇರಿ, ಇದು ನಿಮ್ಮ ಇಷ್ಟ.
ಎಷ್ಟು ನೆನಪು ಮಾಡುತ್ತೀರೋ ಅಷ್ಟು ಏಣಿಯನ್ನು ಹತ್ತುತ್ತಾ ಹೋಗುತ್ತೀರಿ, ಇಲ್ಲವಾದರೆ ಅಷ್ಟೊಂದು ಸುಖ ಸಿಗುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಕೃಷ್ಣಪುರಿಗೆ ಹೋಗಲು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು.
ಶೂದ್ರತನದ ಸಂಸ್ಕಾರವನ್ನು ಪರಿವರ್ತನೆ ಮಾಡಿಕೊಂಡು ಪಕ್ಕಾ ಬ್ರಾಹ್ಮಣರಾಗಬೇಕು.
2.
ಬುದ್ಧಿಬಲದಿಂದ ನೆನಪಿನ ಏಣಿಯನ್ನು ಹತ್ತಬೇಕು.
ಏಣಿಯನ್ನು ಹತ್ತುವುದರಿಂದಲೇ ಅಪಾರ ಸುಖದ ಅನುಭವವಾಗುತ್ತದೆ.
ವರದಾನ:
ಅಟೆನ್ಷನ್ ಮತ್ತು
ಚೆಕ್ಕಿಂಗ್ನ ವಿಧಿಯ
ಮುಖಾಂತರ ವ್ಯರ್ಥದ
ಖಾತೆಯನ್ನು ಸಮಾಪ್ತಿ
ಮಾಡುವಂತಹ ಮಾಸ್ಟರ್
ಸರ್ವ ಶಕ್ತಿವಾನ್
ಭವ.
ಬ್ರಾಹ್ಮಣ ಜೀವನದಲ್ಲಿ ವ್ಯರ್ಥ ಸಂಕಲ್ಪ, ವ್ಯರ್ಥ ಮಾತು, ವ್ಯರ್ಥ ಕರ್ಮ ಬಹಳ ಸಮಯವನ್ನು ವ್ರ್ಥವಾಗಿ ಕಳೆದು ಬಿಡುತ್ತೆ. ಎಷ್ಟು ಸಂಪಾದನೆ ಮಾಡಲು ಇಚ್ಛಿಸುವಿರೊ
ಅಷ್ಟು ಮಾಡಲು ಸಾಧ್ಯವಿಲ್ಲ. ವ್ಯರ್ಥದ ಖಾತೆ ಸಮರ್ಥರನ್ನಾಗಲು ಬಿಡುವುದಿಲ್ಲ. ಆದ್ದರಿಂದ ಈ ಸ್ಮತಿಯಲ್ಲಿರಿ ನಾನು ಮಾಸ್ಟರ್ ಸರ್ವ ಶಕ್ತಿವಾನ್ ಆಗಿರುವೆನು. ಶಕ್ತಿ ಇದ್ದಲ್ಲಿ ಏನು ಇಚ್ಛೆ ಪಡುವಿರೊ ಅದನ್ನು ಮಾಡಲು ಸಾಧ್ಯ. ಕೇವಲ ಪದೇ-ಪದೇ ಗಮನ ಕೊಡಿ. ಹೇಗೆ ಕ್ಲಾಸ್ನ ಸಮಯದಲ್ಲಿ ಅಮೃತವೇಳೆ ನೆನಪಿನ ಸಮಯದಲ್ಲಿ ಗಮನ ಕೊಡುವಿರಿ, ಹಾಗೆ ಮಧ್ಯ-ಮಧ್ಯದಲ್ಲಿಯೂ ಸಹ ಗಮನ ಕೊಡಿ ಹಾಗೂ ಚೆಕ್ಕಿಂಗ್ನ ವಿಧಿಯನ್ನು ತಮ್ಮದಾಗಿಸಿಕೊಂಡಾಗ ವ್ಯರ್ಥದ ಖಾತೆ ಸಮಾಪ್ತಿಯಾಗಿ ಬಿಡುವುದು.
ಸ್ಲೋಗನ್:
ರಾಜಋಷಿಯಾಗಬೇಕಾದರೆ ಬ್ರಾಹ್ಮಣ ಆತ್ಮಗಳ ಆಶರ್ವಾದಗಳಿಂದ ತಮ್ಮ ಸ್ಥಿತಿಯನ್ನು ನಿರ್ವಿಘ್ನವನ್ನಾಗಿ ಮಾಡಿಕೊಳ್ಳಿ.
0 Comments