Header Ads Widget

Header Ads

KANNADA MURLI 30.01.2023

 

30/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ನೀವು ಈಶ್ವರೀಯ ಸಂತಾನರಾಗಿದ್ದೀರಿ, ನಿಮ್ಮ ಜೀವನ ಅಮೂಲ್ಯವಾಗಿದೆ, ನಿಮ್ಮ ಈಶ್ವರೀಯ ಕುಲ ಬಹಳ ಶ್ರೇಷ್ಠವಾಗಿದೆ, ಸ್ವಯಂ ಭಗವಂತನೇ ನಿಮ್ಮನ್ನು ದತ್ತು ತೆಗೆದುಕೊಂಡಿದ್ದಾರೆ ಎನ್ನುವ ನಶೆಯಲ್ಲಿ ಇರಬೇಕು

ಪ್ರಶ್ನೆ:

ಶರೀರದ ಅಭಿಮಾನ ತುಂಡಾಗುವುದಕ್ಕೋಸ್ಕರ ಯಾವ ಅಭ್ಯಾಸದ ಅವಶ್ಯಕತೆ ಇದೆ?

ಉತ್ತರ:

ನಡೆಯುತ್ತಾ-ತಿರುಗಾಡುತ್ತಾ ನಾನು ಶರೀರದಲ್ಲಿ ಸ್ವಲ್ಪ ಸಮಯಕ್ಕೋಸ್ಕರ ನಿಮಿತ್ತವಾಗಿದ್ದೇನೆ ಎನ್ನುವ ಅಭ್ಯಾಸವನ್ನು ಮಾಡಿ. ಹೇಗೆ ತಂದೆ ಸ್ವಲ್ಪ ಸಮಯಕ್ಕೋಸ್ಕರ ಶರೀರದಲ್ಲಿ ಬಂದಿದ್ದಾರೆ ಹಾಗೆಯೇ ನಾನು ಆತ್ಮನೂ ಸಹ ಶ್ರೀಮತದಂತೆ ಭಾರತವನ್ನು ಸ್ವರ್ಗ ಮಾಡುವುದಕ್ಕೋಸ್ಕರ ಶರೀರವನ್ನು ಧಾರಣೆ ಮಾಡಿಕೊಂಡಿದ್ದೇನೆ. ತಂದೆ ಮತ್ತು ಆಸ್ತಿಯ ನೆನಪು ಇದ್ದಾಗ ಶರೀರದ ಅಭಿಮಾನ ತುಂಡಾಗುತ್ತದೆ. ಇದಕ್ಕೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಹೇಳಲಾಗುತ್ತದೆ. 2) ಅಮೃತವೇಳೆಯಲ್ಲಿ ಎದ್ದು ಮಧುರಾತಿ ಮಧುರವಾಗಿ ಮಾತನಾಡಿದಾಗ ಶರೀರದ ಅಭಿಮಾನ ಸಮಾಪ್ತಿ ಆಗುತ್ತದೆ.

ಗೀತೆ:  ಓಂ ನಮಃ ಶಿವಾಯಃ.......

ಓಂ ಶಾಂತಿ. ಭಗವಂತ ಒಬ್ಬರಾಗಿದ್ದಾರೆ. ಎಲ್ಲರಿಗೂ ಒಬ್ಬ ತಂದೆಯಾಗಿದ್ದಾರೆ. ಆತ್ಮದ ರೂಪ ಅಷ್ಟು ದೊಡ್ಡ ಲಿಂಗದ ರೀತಿ ಇಲ್ಲ ಎಂದು ನಾವು ಮಕ್ಕಳಿಗೆ ತಿಳಿಸಿಕೊಡಲಾಗಿದೆ. ಆತ್ಮ ಬಹಳ ಚಿಕ್ಕ ನಕ್ಷತ್ರದ ಸಮಾನ ಭೃಕುಟಿಯ ಮಧ್ಯದಲ್ಲಿ ಇದೆ. ಹೇಗೆ ಮಂದಿರಗಳಲ್ಲಿ ಇಟ್ಟಿದ್ದಾರೋ ಅಷ್ಟು ದೊಡ್ಡ ಜ್ಯೋತಿರ್ಲಿಂಗವಲ್ಲ. ಹೇಗೆ ಆತ್ಮ ಹಾಗೆಯೇ ಪರಮಾತ್ಮ ತಂದೆಯೂ ಇದ್ದಾರೆ. ಆತ್ಮದ ರೂಪ ಮನುಷ್ಯನ ರೀತಿ ಅಲ್ಲ. ಆತ್ಮ ಮನುಷ್ಯನ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತದೆ. ಆತ್ಮವೇ ಎಲ್ಲವನ್ನು ಮಾಡುತ್ತದೆ. ಆತ್ಮದಲ್ಲೇ ಸಂಸ್ಕಾರವಿದೆ. ಆತ್ಮ ನಕ್ಷತ್ರವಾಗಿದೆ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರಗಳ ಅನುಸಾರ ಜನ್ಮವನ್ನು ತೆಗೆದುಕೊಳ್ಳುತ್ತದೆ ಅಂದಾಗ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಮಂದಿರಗಳಲ್ಲಿ ಲಿಂಗವನ್ನು ಇಟ್ಟಿದ್ದಾರೆ. ಆದ್ದರಿಂದ ನಾವೂ ಸಹ ತಿಳಿಸಿಕೊಡುವುದಕ್ಕೋಸ್ಕರ ಶಿವಲಿಂಗವನ್ನು ತೋರಿಸಿದ್ದೇವೆ. ಅವರ ಹೆಸರು ಶಿವ ಆಗಿದೆ. ಹೆಸರು ಇಲ್ಲದೇ ಯಾವುದೇ ವಸ್ತುವಿಲ್ಲ. ಒಂದಲ್ಲ ಒಂದು ಆಕಾರವಿರುತ್ತದೆ. ತಂದೆಯು ಪರಮಧಾಮದಲ್ಲಿ ಇರುವಂತಹವರು ಆಗಿದ್ದಾರೆ. ಹೇಗೆ ಆತ್ಮ ಶರೀರದಲ್ಲಿ ಪ್ರವೇಶವಾಗುತ್ತದೆಯೇ ನಾನೂ ಸಹ ನರಕವನ್ನು ಸ್ವರ್ಗವನ್ನಾಗಿ ಮಾಡುವುದಕ್ಕೋಸ್ಕರ ಬರಬೇಕಾಗುತ್ತದೆ ಎನ್ನುವುದು ಪರಮಾತ್ಮ ತಂದೆಯು ಹೇಳುತ್ತಾರೆ. ತಂದೆಯ ಮಹಿಮೆ ಎಲ್ಲರಗಿಂತ ಭಿನ್ನವಾಗಿದೆ. ನಾವು ಆತ್ಮಗಳು ಇಲ್ಲಿ ಪಾತ್ರವನ್ನು ಮಾಡುವುದಕ್ಕೋಸ್ಕರ ಬಂದಿದ್ದೇವೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಇದು ಬೇಹದ್ದಿನ ಅನಾದಿ ಅವಿನಾಶಿ ನಾಟಕವಾಗಿದೆ. ಇದು ಎಂದೂ ಸಹ ವಿನಾಶವಾಗುವುದಿಲ್ಲ. ಇದು ತಿರುಗುತ್ತಾ ಇರುತ್ತದೆ. ತಂದೆ ರಚಯಿತ ಒಬ್ಬರೇ ಆಗಿದ್ದಾರೆ. ರಚನೆಯೂ ಸಹ ಒಂದೇ ಆಗಿದೆ. ಇದು ಬೇಹದ್ದಿನ ಸೃಷ್ಟಿಯ ಚಕ್ರವಾಗಿದೆ. ಇದರಲ್ಲಿ ನಾಲ್ಕೂ ಯುಗಗಳಿವೆ. ಮತ್ತೊಂದು ಕಲ್ಪದ ಸಂಗಮಯುಗ ಇದರಲ್ಲಿಯೇ ತಂದೆ ಬಂದು ಪತಿತ ಪ್ರಪಂಚವನ್ನು ಪಾವನ ಮಾಡುತ್ತಾರೆ. ಚಕ್ರ ತಿರುಗುತ್ತಾ ಇರುತ್ತದೆ. ನಾವೆಲ್ಲಾ ಆತ್ಮಗಳು ಪರಮಧಾಮದಲ್ಲಿ ಇರುವಂತಹವರು ಎಂದು ನೀವು ಮಕ್ಕಳಿಗೆ ಸ್ಮೃತಿ ಬಂದಿದೆ. ಕರ್ಮಕ್ಷೇತ್ರದಲ್ಲಿ ಪಾತ್ರ ಮಾಡಲು ಬಂದಿದ್ದೇವೆ ಬೇಹದ್ದಿನ ನಾಟಕ ಪುನಾರಾವರ್ತನೆ ಆಗುತ್ತದೆ. ತಂದೆಯೇ ಬೇಹದ್ದಿನ ಮಾಲೀಕ ಆಗಿದ್ದಾರೆ. ಅವರ ಮಹಿಮೆಯು ಅಪರಮಪಾರವಾಗಿದೆ. ರೀತಿ ಮಹಿಮೆ ಬೇರೆ ಯಾರಿಗೂ ಸಹ ಇಲ್ಲ. ಅವರು ಮನುಷ್ಯ ಸೃಷ್ಟಿಯ ಬೀಜರೂಪಿ ಆಗಿದ್ದಾರೆ. ಎಲ್ಲರ ತಂದೆಯಾಗಿದ್ದಾರೆ. ನಾನು ರಾವಣ ಪ್ರಪಂಚದಲ್ಲಿ ಬರುತ್ತೇನೆ ಎಂದು ತಂದೆಯೂ ಹೇಳುತ್ತಾರೆ. ಒಂದು ಕಡೆ ಆಸುರೀ ಗುಣವುಳ್ಳಂತಹ ಸಂಪ್ರದಾಯದವರು ಮತ್ತೊಂದು ಕಡೆ ದೈವೀಗುಣವುಳ್ಳಂತಹ ಸಂಪ್ರದಾಯವಿದೆ. ಇದಕ್ಕೆ ಕಂಸಪುರಿ ಎಂದು ಹೇಳಲಾಗುತ್ತದೆ. ಕಂಸನೆಂದು ಆಸುರನಿಗೆ ಹೇಳಲಾಗುತ್ತದೆ. ಕೃಷ್ಣನಿಗೆ ದೇವತೆ ಎಂದು ಹೇಳಲಾಗುತ್ತದೆ. ಈಗ ತಂದೆಯೇ ಬಂದು ದೇವತೆಗಳನ್ನಾಗಿ ಮಾಡಿ ಎಲ್ಲರನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಶಕ್ತಿ ಬೇರೆ ಯಾರಲ್ಲೂ ಇಲ್ಲ. ತಂದೆಯೇ ಕುಳಿತು ನಾವು ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ದೈವೀಗುಣಗಳನ್ನು ಧಾರಣೆ ಮಾಡಿಸುತ್ತಾರೆ. ಇದು ತಂದೆಯ ಕರ್ತವ್ಯವಾಗಿದೆ. ಯಾವಾಗ ಎಲ್ಲರೂ ತಮೋಪ್ರಧಾನವಾಗುತ್ತಾರೆ, ನನ್ನನ್ನು ಮರೆಯುತ್ತಾರೆ. ಕೇವಲ ಮರೆಯುವುದಲ್ಲ. ನನ್ನನ್ನು ಕಲ್ಲು-ಮುಳ್ಳಲ್ಲಿ ಇದ್ದಾರೆಂದು ಹೇಳುತ್ತಾರೆ. ಅಷ್ಟೊಂದು ನಿಂದನೆ ಮಾಡುತ್ತಾರೆ. ಆಗಲೇ ನಾನು ಬರುತ್ತೇನೆ, ನನ್ನ ಹಾಗೆ ನಿಂದನೆ ಯಾರಿಗೂ ಮಾಡುವುದಿಲ್ಲ ಎಂದು ತಂದೆಯು ಹೇಳುತ್ತಾರೆ. ಆಗಲೇ ನಾನು ಬಂದು ನಿಮ್ಮನ್ನು ಬಿಡುಗಡೆ ಮಾಡುತ್ತೇನೆ. ಎಲ್ಲರನ್ನು ಸೊಳ್ಳೆಗಳ ಸಮಾನ ಕರೆದುಕೊಂಡು ಹೋಗುತ್ತೇನೆ. ಮನ್ಮನಾಭವ ಎಂದು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ನಾನು ಪರಮಪಿತ ಪರಮಾತ್ಮನನ್ನು ನೆನಪು ಮಾಡಿದಾಗ ನಿಮ್ಮ ವಿಕರ್ಮ ವಿನಾಶವಾಗುತ್ತದೆ ಎಂದು ಕೃಷ್ಣನೂ ಹೇಳಲು ಸಾಧ್ಯವಿಲ್ಲ. ಪರಮಾತ್ಮನ ಮಹಿಮೆಯನ್ನು ಮಕ್ಕಳೇ ತಿಳಿದುಕೊಳ್ಳಲು ಸಾಧ್ಯ. ಅವರೇ ಜ್ಞಾನಸಾಗರ, ಸುಖದ ಸಾಗರ ಆಗಿದ್ದಾರೆ ನಂತರ ಎರಡನೆಯ ನಂಬರಿನಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿದ್ದಾರೆ. ಬ್ರಹ್ಮನ ಮುಖಾಂತರ ಸ್ಥಾಪನೆ ಯಾರು ಮಾಡುತ್ತಾರೆ? ಕೃಷ್ಣ ಮಾಡುತ್ತಾನೇನು? ಪರಮಪಿತ ಪರಮಾತ್ಮ ಶಿವನೇ ಕುಳಿತು ಹೇಳುತ್ತಾರೆ- ಮೊದಮೊದಲು ನನಗೆ ಬ್ರಾಹ್ಮಣರು ಬೇಕು ಅಂದಾಗ ಬ್ರಹ್ಮನ ಮುಖಾಂತರ ಬ್ರಾಹ್ಮಣ ಮುಖವಂಶಾವಳಿಗಳನ್ನು ರಚನೆ ಮಾಡುತ್ತೇನೆ. ಅವರು ಕುಕವಂಶಾವಳಿಗಳಾಗಿದ್ದಾರೆ. ನೀವೀಗ ಸಂಗಮಯುಗದಲ್ಲಿ ಬ್ರಹ್ಮನ ಸಂತಾನರಾಗಿದ್ದೀರಿ. ತಂದೆಯೇ ಬಂದು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ನೀವು ಈಶ್ವರೀಯ ಕುಲದವರಾಗಿದ್ದೀರಿ. ಈಶ್ವರ ನಿರಾಕಾರ, ಬ್ರಹ್ಮಾ ಸಾಕಾರ ಆಗಿದ್ದಾರೆ. ತಂದೆ ಮೊದಮೊದಲು ಬ್ರಾಹ್ಮಣರನ್ನಾಗಿ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ದೇವತೆಗಳ ನಂತರ ಕ್ಷತ್ರಿಯ....... ಚಕ್ರ ತಿರುಗುತ್ತಿರುತ್ತದೆ ನಂತರ ಇದರಿಂದ ಬೇರೆಲ್ಲಾ ಧರ್ಮಗಳು ಬರುತ್ತವೆ. ಮುಖ್ಯವಾಗಿ ಭಾರತವಾಗಿದೆ. ಭಾರತ ಅವಿನಾಶಿ ಖಂಡವಾಗಿದೆ. ಇಲ್ಲಿ ತಂದೆಯೇ ಬಂದು ಸ್ವರ್ಗವನ್ನಾಗಿ ಮಾಡುತ್ತಾರೆ. ಅವರು ತಂದೆಯು ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ನಿಮ್ಮ ಸದ್ಗುರುವೂ ಆಗಿದ್ದಾರೆ. ಅವರಿಗೆ ಸರ್ವವ್ಯಾಪಿ ಎಂದು ಹೇಗೆ ಹೇಳಲು ಸಾಧ್ಯ. ಅವರು ನಿಮ್ಮ ತಂದೆಯಾಗಿದ್ದಾರೆ. ಪ್ರಪಂಚದಲ್ಲಿ ನೀವು ಬ್ರಾಹ್ಮಣರನ್ನು ಬಿಟ್ಟರೆ ಬೇರೆ ಯಾರೂ ತ್ರಿಕಾಲದರ್ಶಿಗಳು ಆಗಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮನ ಜೊತೆ ನಾವು ಪರಮಧಾಮದಲ್ಲಿ ಇರುತ್ತೇವೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ನಂತರ ನಂಬರ್ವಾರಾಗಿ ಕರ್ಮಕ್ಷೇತ್ರದಲ್ಲಿ ಬರುತ್ತೇವೆ. ನಂತರ ಅಂತಿಮದಲ್ಲಿ ನಾವೇ ಹೋಗುತ್ತೇವೆ. 84 ಜನ್ಮಗಳನ್ನು ಪೂರ್ಣ ಮಾಡಬೇಕಾಗಿದೆ.

ನೀವು ಎಷ್ಟೊಂದು ಜನ್ಮಗಳಿಗೋಸ್ಕರ ಯಾವ-ಯಾವ ವರ್ಣಗಳಲ್ಲಿ ಬಂದಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಚಕ್ರ ನಡೆಯುತ್ತಿರುತ್ತದೆ. ಈಗ ನೀವು ಈಶ್ವರೀಯ ಸಂಪ್ರದಾಯದವರು ಆಗಿದ್ದೀರಿ. ಇದು ನಿಮ್ಮ ಅಮೂಲ್ಯ ಜೀವನವಾಗಿದೆ. ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ. ಬ್ರಹ್ಮನ ಮುಖಾಂತರ ತಂದೆಯೇ ಬಂದು ದತ್ತು ತೆಗೆದುಕೊಳ್ಳುತ್ತಾರೆ. ತಂದೆ ಸ್ವರ್ಗದ ರಚಯಿತ ಸ್ವಯಂ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ಇಡೀ ವಿಶ್ವದಲ್ಲಿ ಶಾಂತಿ ಸ್ಥಾಪನೆ ಮಾಡುವುದು ತಂದೆಯ ಕೆಲಸವಾಗಿದೆ. ನನ್ನ ಪಾತ್ರವಾಗಿದೆ ಎಂದು ತಂದೆಯು ಹೇಳುತ್ತಾರೆ. ನಾನೇ ನಿಮಗೆ ರಾಜಯೋಗವನ್ನು ಕಲಿಸಿ ನಿರೋಗಿಗಳನ್ನಾಗಿ ಮಾಡುತ್ತೇನೆ. ಪುನಃ ಈಗ ಪುನರಾವರ್ತನೆ ಆಗುತ್ತದೆ. ಸಸಿಯನ್ನು ನೆಡುತ್ತಿದ್ದಾರೆ. ತಂದೆ ತೋಟದ ಮಾಲೀಕರಾಗಿದ್ದಾರೆ. ಇವರ ಮುಖಾಂತರ ಸಸಿಯನ್ನು ನೆಡಿಸುತ್ತಿದ್ದಾರೆ. ತಂದೆಯೇ ಸಮ್ಮುಖದಲ್ಲಿ ಕುಳಿತು ತಿಳಿಸುತ್ತಾರೆ. ನನ್ನನ್ನು ಬಹಳ ಸಮಯದಿಂದ ಅಗಲಿ ಹೋದ ಮಕ್ಕಳೇ ನಾನು ನಿಮ್ಮನ್ನು ಸ್ವರ್ಗಕ್ಕೆ ಕಳುಹಿಸಿದ್ದೇನೆ ಎಂದು ನೆನಪು ಇದೆಯೇ? ನೀವೇ ನಂತರ 84 ಜನ್ಮಗಳನ್ನು ಪಡೆದುಕೊಂಡು ಈಗ ಬಂದು ಮಿಲನ ಮಾಡುತ್ತಿದ್ದೀರಿ. ಈಗ ತಮ್ಮನ್ನು ಆತ್ಮ ಎಂದು ತಿಳಿದು ನನ್ನೊಬ್ಬನನ್ನು ನೆನಪು ಮಾಡಿ. ನಾನು ನಿಮ್ಮನ್ನು ಇಷ್ಟವಿದ್ದರೂ, ಇಷ್ಟವಿಲ್ಲದಿದ್ದರೂ ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗುತ್ತೇನೆ. ಮೊದಲು ಆದಿ ಸನಾತನ ದೈವೀರಾಜ್ಯ ನಡೆಯಿತು, ಈಗ ಆಸುರೀರಾಜ್ಯ ನಡೆಯುತ್ತಿದೆ. ದೈವೀರಾಜ್ಯದ ನಂತರ ಪವಿತ್ರತೆಯೂ ಹೊರಟು ಹೋಯಿತು, ಒಂದೇ ಕಿರೀಟವಾಯಿತು, ಆದ್ದರಿಂದ ಇದಕ್ಕೆ ರಾಜಸ್ಥಾನ ಎಂದು ಹೆಸರು ಬಂದಿದೆ. ಈಗ ಪ್ರಜೆಗಳರಾಜ್ಯವಾಗಿದೆ. ನಂತರ ದೈವೀ ರಾಜ್ಯ ಸ್ಥಾಪನೆ ಆಗುತ್ತಿದೆ. ಆಸುರೀರಾಜ್ಯದ ವಿನಾಶಕ್ಕೋಸ್ಕರ ರುದ್ರ ಯಜ್ಞದಿಂದ ವಿನಾಶದ ಜ್ವಾಲ ಪ್ರಜ್ವಲಿತವಾಗುತ್ತದೆ. ನೀವು ಪತಿತ ಸೃಷ್ಟಿಯ ಮೇಲೆ ರಾಜ್ಯವನ್ನು ಮಾಡುವುದಿಲ್ಲ. ಇದು ಸಂಗಮಯುಗವಾಗಿದೆ. ಸತ್ಯಯುಗದಲ್ಲಿ ಎಂದೂ ರೀತಿ ಹೇಳುವುದಿಲ್ಲ. ಈಗ ನೀವು ಮಕ್ಕಳೇ ಪುರುಷಾರ್ಥವನ್ನು ಮಾಡುತ್ತಿದ್ದೀರಿ, ಮಾಡುಸುವಂತಹವರು ಯಾರಾಗಿದ್ದಾರೆ? ಶ್ರೀಮತವನ್ನು ಕೊಡುವಂತಹವರು ಸಮರ್ಥ, ಶ್ರೇಷ್ಠಾತಿಶ್ರೇಷ್ಠ ಒಬ್ಬ ತಂದೆಯಾಗಿದ್ದಾರೆ. ಅವರೇ ಬ್ರಹ್ಮನ ಮುಖಾಂತರ ಸ್ಥಾಪನೆಯನ್ನು ಮಾಡಿಸುತ್ತೇನೆ. ನಾನು ಭಾರತದ ಅತೀ ವಿಧೇಯನಾದ ಸೇವಕನಾಗಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ಅಲ್ಲಿ ಹೇಗೆ ರಾಜಾ-ರಾಣಿಯರು ಇರುತ್ತಾರೋ ಹಾಗೆಯೇ ಪ್ರಜೆಗಳೆಲ್ಲರೂ ಸುಖಿಗಳಾಗಿರುತ್ತಾರೆ. ಸ್ವಾಭಾವಿಕವಾದಂತಹ ಸುಂದರತೆ ಇರುತ್ತದೆ. ಲಕ್ಷ್ಮೀ-ನಾರಾಯಣರನ್ನು ನೋಡಿ ಎಷ್ಟೊಂದು ಸುಂದರವಾಗಿದ್ದಾರೋ, ಸ್ವರ್ಗದ ರಚಯಿತ ತಂದೆಯಾಗಿದ್ದಾರೆ. ಅವರೇ ಸ್ವರ್ಗವನ್ನು ರಚನೆ ಮಾಡುತ್ತಾರೆ. ಇಡೀ ಪ್ರಪಂಚದಲ್ಲಿ ಗೀತೆಯಲ್ಲಿ ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ ಆದರೆ ಕೃಷ್ಣನಂತೂ ಮನ್ಮನಾಭವ ನನ್ನೊಬ್ಬನನ್ನೇ ನೆನಪು ಮಾಡಿದಾಗ ವಿಕರ್ಮ ವಿನಾಶವಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತ್ಯಾವುದೇ ಉಪಾಯವಿಲ್ಲ. ಗಂಗೆ ಪತಿತಪಾವನಿ ಆಗಲು ಸಾಧ್ಯವಿಲ್ಲ. ನನ್ನನ್ನು ನೆನಪು ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ಇದೆಲ್ಲವನ್ನು ಒಬ್ಬ ತಂದೆಯೇ ಕುಳಿತು ತಿಳಿಸಿಕೊಡುತ್ತಿದ್ದಾರೆ. ತಂದೆಯು ಆತ್ಮಗಳ ಜೊತೆ ಮಾತನಾಡುತ್ತಾರೆ. ತಂದೆಯು ಎಲ್ಲರ ಸದ್ಗತಿದಾತ ಆಗಿದ್ದಾರೆ. ಅವರ ಮಂದಿರಗಳೂ ಇವೆ. ದ್ವಾಪರಯುಗದಿಂದ ಎಲ್ಲರ ಸ್ಮಾರಕಗಳು ಮಾಡಲು ಪ್ರಾರಂಭ ಮಾಡುತ್ತಾರೆ. ಸೋಮನಾಥನ ಮಂದಿರವಿದೆ ಆದರೆ ಅವರು ಏನು ಮಾಡಿ ಹೋದರು ಎನ್ನುವುದು ತಿಳಿದಿಲ್ಲ. ಅವರು ಶಿವಶಂಕರನನ್ನು ಒಂದೇ ಎಂದು ಹೇಳುತ್ತಾರೆ. ಆದರೆ ಈಗ ಶಿವ ಪರಮಧಾಮದನಿವಾಸಿ ಆಗಿದ್ದಾರೆ ಮತ್ತು ಶಂಕರ ಸೂಕ್ಷ್ಮವತನವಾಸಿಯಾಗಿದ್ದಾರೆ. ಏನನ್ನೂ ಸಹ ತಿಳಿದುಕೊಂಡಿಲ್ಲ. ಎಷ್ಟೇ ವೇದ ಶಾಸ್ತ್ರ ಮುಂತಾದವನ್ನು ಓದಿದರೂ ಜಪ-ತಪ ಮುಂತಾದವನ್ನು ಮಾಡಿದರು. ನನ್ನನ್ನು ಮಿಲನ ಮಾಡಲು ಸಾಧ್ಯವಿಲ್ಲ ಎಂದು ತಂದೆಯು ಹೇಳುತ್ತಾರೆ. ಭಲೆ ನಾನು ಭಾವನೆಗೆ ಫಲವನ್ನು ಕೊಡುತ್ತೇನೆ. ಅವರು ಅಖಂಡ ಜ್ಯೋತಿ ಬ್ರಹ್ಮಾಮಹತತ್ವವೇ ಪರಮಾತ್ಮ ಎಂದು ತಿಳಿದುಕೊಳ್ಳುತ್ತಾರೆ. ಬ್ರಹ್ಮನೂ ಸಾಕ್ಷಾತ್ಕಾರವಾದರೂ ಏನೂ ಸಹ ಪ್ರಾಪ್ತಿ ಇಲ್ಲ. ಕೆಲವರಿಗೆ ಹನುಮಂತನ, ಕೆಲವರಿಗೆ ಗಣೇಶನ ಸಾಕ್ಷಾತ್ಕಾರ ಮಾಡಿಸುತ್ತೇನೆ. ಅದು ಅಲ್ಪ ಕಾಲಕ್ಕೋಸ್ಕರ ನಾನು ಮನೋಕಾಮನೆಯನ್ನು ಪೂರ್ಣ ಮಾಡುತ್ತೇನೆ. ಅಲ್ಪಕಾಲಕ್ಕೋಸ್ಕರ ಖುಷಿ ಸಿಗುತ್ತದೆ. ಆದರೂ ಸಹ ಎಲ್ಲರೂ ತಮೋಪ್ರಧಾನವಾಗಲೇಬೇಕು. ಇಡೀ ದಿನ ಗಂಗೆಯಲ್ಲಿ ಹೋಗಿ ಕುಳಿತುಕೊಂಡರೂ ಸಹ ತಮೋಪ್ರಧಾನವಂತೂ ಎಲ್ಲರೂ ಆಗಲೇಬೇಕಾಗಿದೆ.

ಮಕ್ಕಳೇ ಪವಿತ್ರರಾದಾಗ ಪವಿತ್ರ ಪ್ರಪಂಚದ 21 ಜನ್ಮಗಳಿಗೋಸ್ಕರ ಮಾಲೀಕರಾಗುತ್ತಿರಿ ಎಂದು ತಂದೆ ಹೇಳುತ್ತಾರೆ. ಬೇರೆ ಯಾವುದೇ ಸತ್ಸಂಗದಲ್ಲಿ ಇಷ್ಟು ಪ್ರಾಪ್ತಿ ಆಗುವುದಿಲ್ಲ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂದು ಎಷ್ಟು ಶ್ರೀಮತದಂತೆ ನಡೆಯಬೇಕು. ವಿದ್ಯೆಯ ಕಡೆ ಗಮನವನ್ನು ಕೊಡಬೇಕು. ತಂದೆಯು ಶ್ರೇಷ್ಠಾತಿಶ್ರೇಷ್ಠ ಮತವನ್ನು ಕೊಡುತ್ತಾರೆ, ಶ್ರೀಮತದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕು. ನೀವು ಡ್ರಾಮಾದ ರಹಸ್ಯವನ್ನು ತಿಳಿದುಕೊಳ್ಳಬೇಕು ಮತ್ತು ಪುರುಷಾರ್ಥ ಮಾಡಬೇಕು. ಪುರುಷಾರ್ಥ ಮಾಡಿ ಯೋಗ್ಯರಾಗಬೇಕು. ನಾವು ತಂದೆಯ ಜೊತೆ ಸ್ವರ್ಗವನ್ನು ಸ್ಥಾಪನೆ ಮಾಡಲು ಬಂದಿದ್ದೇವೆ ಎನ್ನುವುದು ನೀವು ಮಕ್ಕಳಿಗೆ ನಶೆ ಇರಬೇಕು. ನಾವು ಅಲ್ಲಿಯ ನಿವಾಸಿಗಳಾಗಿದ್ದೇವೆ. ಶರೀರದಲ್ಲಿ ನಾವು ಸ್ವಲ್ಪ ಸಮಯಕ್ಕೋಸ್ಕರ ನಿಮಿತ್ತರಾಗಿದ್ದೇವೆ. ತಂದೆಯೂ ಸಹ ಸ್ವಲ್ಪ ಸಮಯಕ್ಕೋಸ್ಕರ ಬಂದಿದ್ದಾರೆ. ಶರೀರದ ಅಭಿಮಾನ ತುಂಡಾಗಬೇಕು. ತಮ್ಮ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಇದಕ್ಕೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಹೇಳಲಾಗುತ್ತದೆ. ನಾನು ಎಲ್ಲರನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ತಂದೆಯು ಹೇಳುತ್ತಾರೆ. ನೀವು ತಮ್ಮನ್ನು ಆತ್ಮ ಎಂದು ತಿಳಿದು ಬೆಳಿಗ್ಗೆ ಎದ್ದು ತಂದೆಯನ್ನು ನೆನಪು ಮಾಡಬೇಕು. ಅವರ ಜೊತೆ ಮಾತನಾಡಬೇಕು, ನಮ್ಮ 84 ಜನ್ಮಗಳು ಪೂರ್ಣವಾಗಿವೆ ಎಂದು ನಿಮಗೆ ತಿಳಿದಿದೆ. ಈಗ ನಾವು ಈಶ್ವರೀಯ ಸಂತಾನರಾಗಿದ್ದೇವೆ. ತಂದೆಯೇ ನಿಮ್ಮ ಜ್ಞಾನ ಬಹಳ ಅದ್ಭುತವಾಗಿದೆ. ಸ್ವರ್ಗವೂ ಎಷ್ಟೊಂದು ಅದ್ಭುತವಾಗಿದೆ. ಅದು ಶಾರೀರಿಕವಾದ ಅದ್ಭುತವಾಗಿದೆ. ಇದು ತಂದೆಯೇ ಸ್ಥಾಪನೆ ಮಾಡಿರುವ ಆತ್ಮೀಯ ಅದ್ಭುತವಾಗಿದೆ. ತಂದೆ ಕೃಷ್ಣಪುರಿಯನ್ನು ಸ್ಥಾಪನೆ ಮಾಡಲು ಬಂದಿದ್ದಾರೆ. ಲಕ್ಷ್ಮೀ-ನಾರಾಯಣರು ಪ್ರಾಲಬ್ಧವನ್ನು ಎಲ್ಲಿಂದ ಪಡೆದುಕೊಂಡರು? ತಂದೆಯ ಮುಖಾಂತರ. ಜಗದಾಂಬ ಮತ್ತು ಜಗತ್ಪಿತನ ಜೊತೆ ಮಕ್ಕಳೂ ಇದ್ದಾರೆ. ಅವರು ಬ್ರಾಹ್ಮಣರಾಗಿದ್ದಾರೆ. ಜಗದಾಂಬಾ ಬ್ರಾಹ್ಮಣಿ ಆಗಿದ್ದಾರೆ. ಅವರು ಕಾಮಧೇನು ಆಗಿದ್ದಾರೆ. ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡಿದ್ದಾರೆ. ಇದೇ ಜಗದಂಬಾ ಸ್ವರ್ಗದ ಮಹಾರಾಣಿ ಆಗುತ್ತಾರೆ. ಎಷ್ಟೊಂದು ಅದ್ಭುತವಾದ ರಹಸ್ಯವಾಗಿದೆ. ತಂದೆ ತಮ್ಮ ಅವಸ್ಥೆಯನ್ನು ಜಮಾ ಮಾಡಿಕೊಳ್ಳುವುದಕ್ಕೋಸ್ಕರ ಭಿನ್ನ-ಭಿನ್ನವಾದ ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ. ರಾತ್ರಿಯಲ್ಲಿ ಜಾಗೃತರಾಗಿ ತಂದೆಯನ್ನು ನೆನಪು ಮಾಡಿದಾಗ ಅಂತಮತಿ ಸೋ ಗತಿ ಆಗುತ್ತದೆ. ಒಂದುವೇಳೆ ಪೂರ್ಣ ಪುರುಷಾರ್ಥ ಮಾಡಿದರೆ ನೆನಪು ಇರುತ್ತದೆ ಪಾಸ್ ವಿತ್ ಆನರ್ ಆಗಬೇಕು. 8 ಜನರಿಗೆ ಸ್ಕಾಲರ್ಷಿಪ್ ಸಿಗುತ್ತದೆ. ನಾವು ಲಕ್ಷ್ಮೀಯನ್ನು ವರಿಸುತ್ತೇವೆ ಎಂದು ಎಲ್ಲರೂ ಹೇಳುತ್ತಾರೆ ಅಂದಾಗ ಪಾಸಾಗಿ ತೋರಿಸಬೇಕು. ತಮ್ಮನ್ನು ನೋಡಿಕೊಳ್ಳಿ ನನ್ನಲ್ಲಿ ಯಾವುದೇ ಕೋತಿಬುದ್ಧಿ ಇಲ್ಲವೇ. ಇದ್ದರೆ ಅದನ್ನು ತೆಗೆದು ಹಾಕಿರಿ. ನೋಡಿ ಇಡೀ ದಿನದಲ್ಲಿ ಯಾರಿಗೂ ದುಃಖವನ್ನು ಕೊಟ್ಟಿಲ್ಲವೇ. ಎಲ್ಲರಿಗೂ ಸುಖ ಕೊಡುವಂತಹವರು ತಂದೆಯಾಗಿದ್ದಾರೆ. ಮಕ್ಕಳೂ ಸಹ ಹಾಗೆಯೇ ಆಗಬೇಕು. ವಾಚಾ-ಕರ್ಮಣಾದಲ್ಲಿ ಯಾರಿಗೂ ದುಃಖವನ್ನು ಕೊಡಬಾರದು. ಸತ್ಯ-ಸತ್ಯ ಮಾರ್ಗವನ್ನು ತಿಳಿಸಿಕೊಡಬೇಕು. ಅದು ಹದ್ದಿನ ತಂದೆಯ ಆಸ್ತಿಯಾಗಿದೆ. ಇದು ಬೇಹದ್ದಿನ ತಂದೆಯ ಆಸ್ತಿ. ಯಾರಿಗೆ ಸಿಗುತ್ತದೆ ಅವರೇ ತಿಳಿಸಿಕೊಡುತ್ತಾರೆ. ಯಾರು ತಮ್ಮ ಧರ್ಮದವರಾಗಿರುತ್ತಾರೋ ಅವರಿಗೆ ತಕ್ಷಣ ಟಚ್ ಆಗುತ್ತದೆ. ದೈವೀಧರ್ಮ ಸ್ಥಾಪನೆ ಮಾಡಲು ನಾನು ಬ್ರಹ್ಮನ ತನುವಿನಲ್ಲಿ ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ನೀವು ಮಕ್ಕಳ ಬುದ್ಧಿಯಲ್ಲಿ ಈಗ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. ಮೊದಲು ಸೂಕ್ಷ್ಮವತನದಲ್ಲಿ ಹೋಗಿ ನಂತರ ಶಾಂತಿಧಾಮದಲ್ಲಿ ಹೋಗುತ್ತೇವೆ. ಅಲ್ಲಿಂದ ನಂತರ ಹೊಸ ಪ್ರಪಂಚದಲ್ಲಿ ಗರ್ಭ ಮಹಲ್ನಲ್ಲಿ ಬರುತ್ತೇವೆ. ಇಲ್ಲಿ ಗರ್ಭ ಜೈಲಿನಲ್ಲಿ ಬರುತ್ತೇವೆ. ಇದಕ್ಕೆ ಸುಳ್ಳಿನ ಮಾಯೆ, ಸುಳ್ಳಿನ ಶರೀರ ಎಂದು ಹೇಳಲಾಗುತ್ತದೆ. ಎಷ್ಟೊಂದು ಧರ್ಮಗ್ಲಾನಿ ಆಗಿದೆ ಎಂದು ತಂದೆಯು ಹೇಳುತ್ತಾರೆ. ಶಿವಜಯಂತಿಯನ್ನು ಮಾಡುತ್ತಾರೆ ಆದರೆ ಶಿವ ಯಾವಾಗ ಬಂದ, ಯಾರಲ್ಲಿ ಪ್ರವೇಶ ಮಾಡಿದ, ಇದು ಯಾರಿಗೂ ಸಹ ಗೊತ್ತಿಲ್ಲ. ಅವಶ್ಯವಾಗಿ ಯಾವುದೋ ಶರೀರದಲ್ಲಿ ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ತಂದೆ ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ ಮತ್ತು ತಮ್ಮ ಚಾರ್ಟನ್ನು ಇಟ್ಟುಕೊಳ್ಳಿ ಎಂದು ತಂದೆ ತಿಳಿಸುತ್ತಾರೆ. ಇಡೀ ದಿನದಲ್ಲಿ ಎಷ್ಟು ಸಮಯ ತಂದೆಯನ್ನು ನೆನಪು ಮಾಡಿದಿರಿ! ಬೆಳಿಗ್ಗೆ ಎದ್ದು ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ ನಾವು ಬೇಹದ್ದಿನ ತಂದೆಯ ಜೊತೆಗೆ ಬಂದಿದ್ದೇವೆ. ಗುಪ್ತವೇಷದಲ್ಲಿ ಭಾರತವನ್ನು ಸ್ವರ್ಗ ಮಾಡಲು. ಈಗ ನಾವೇ ಹಿಂತಿರುಗಿ ಹೋಗಬೇಕು. ಹೋಗುವ ಮೊದಲು ನಮ್ಮ ರಾಜಧಾನಿಯನ್ನು ಅವಶ್ಯವಾಗಿ ಸ್ಥಾಪನೆ ಮಾಡಬೇಕು. ಈಗ ನೀವು ಸಂಗಮಯುಗದಲ್ಲಿ ಇದ್ದೀರಿ. ಬಾಕಿ ಇಡೀ ಪ್ರಪಂಚ ಕಲಿಯುಗದಲ್ಲಿ ಇದೆ. ನೀವು ಸಂಗಮಯುಗ ಬ್ರಾಹ್ಮಣರಾಗಿದ್ದೀರಿ. ಮುಕ್ತಿ ಮತ್ತು ಜೀವನ್ಮುಕ್ತಿಯ ಉಡುಗೊರೆಯನ್ನು ತಂದೆಯು ನೀವು ಮಕ್ಕಳಿಗೆ ತರುತ್ತಾರೆ. ಸತ್ಯಯುಗದಲ್ಲಿ ಭಾರತ ಜೀವನ್ಮುಕ್ತವಾಗಿತ್ತು ಬಾಕಿ ಎಲ್ಲಾ ಆತ್ಮಗಳು ಮುಕ್ತಿಧಾಮದಲ್ಲಿ ಇದ್ದರು ತಂದೆ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದಾರೆ ಅಂದಾಗ ಅವಶ್ಯವಾಗಿ ಅದಕ್ಕೋಸ್ಕರ ಯೋಗ್ಯರನ್ನಾಗಿ ಸ್ವಯಂ ಮಾಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸದಾ ನಾವು ತಂದೆಯ ಜೊತೆ ಸ್ವರ್ಗವನ್ನು ಸ್ಥಾಪನೆ ಮಾಡಲು ನಿಮಿತ್ತರಾಗಿದ್ದೇವೆ ಎನ್ನುವ ನಶೆ ಇರಬೇಕಾಗಿದೆ. ತಂದೆ ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ.

2. ತಂದೆಯ ಸಮಾನ ಸುಖ ಕೊಡುವಂತಹವರಾಗಬೇಕಾಗಿದೆ. ಎಂದೂ ಯಾರಿಗೂ ದುಃಖಿಗಳನ್ನಾಗಿ ಮಾಡಬಾರದಾಗಿದೆ. ಎಲ್ಲರಿಗೂ ಸತ್ಯವಾದ ಮಾರ್ಗವನ್ನು ತಿಳಿಸಬೇಕಾಗಿದೆ. ತಮ್ಮ ಉನ್ನತಿಗೋಸ್ಕರ ತಮ್ಮ ಚಾರ್ಟನ್ನು ಇಟ್ಟುಕೊಳ್ಳಬೇಕಾಗಿದೆ.

ವರದಾನ:

ನಿಮಿತ್ತ ಮತ್ತು ನಮ್ರಚಿತ್ತತೆಯ ವಿಶೇÀತೆಯ ಮುಖಾಂತರ ಸೇವೆಯಲ್ಲಿ ವೇಗವಾಗಿ ಮತ್ತು ಮೊದಲನೇ ನಂಬರ್ ತೆಗೆದುಕೊಳ್ಳುವಂತಹ ಸಫಲತಾಮರ್ತಿ ಭವ.

ಸೇವೆಯಲ್ಲಿ ಮುಂದುವರೆಯುತ್ತಾ ಒಂದುವೇಳೆ ನಿಮಿತ್ತ ಮತ್ತು ನಮ್ರಚಿತ್ತತೆಯ ವಿಶೇಷತೆ ಸ್ಮತಿಯಲ್ಲಿದ್ದಾಗ ಸಫಲತಾ ಸ್ವರೂಪರಾಗಿ ಬಿಡುವಿರಿ. ಹೇಗೆ ಸೇವೆಯ ಓಡಾಟದಲ್ಲಿ ಚತುರರಾಗಿರುವಿರಿ ಅದೇ ರೀತಿ ಎರಡು ವಿಶೇಷತೆಗಳಲ್ಲಿ ಚತುರರಾಗಿ, ಇದರಿಂದ ಸೇವೆಯಲ್ಲಿ ವೇಗ ಮತ್ತು ಮೊದಲನೆ ನಂಬರ್ ನಲ್ಲಿ ಬಂದು ಬಿಡುವಿರಿ. ಬ್ರಾಹ್ಮಣ ಜೀವನದ ರ್ಯಾದೆಯ ಗೆರೆಯ ಒಳಗೆ ಇರುತ್ತಾ, ಸ್ವಯಂ ಅನ್ನು ಆತ್ಮೀಯ ಸೇವಾಧಾರಿ ಎಂದು ತಿಳಿದು ಸೇವೆ ಮಾಡಿ ಆಗ ಸಫಲತಾಮರ್ತಿ ಆಗಿ ಬಿಡುವಿರಿ. ಪರಿಶ್ರಮ ಪಡುವ ಅಗತ್ಯವಿರುವುದಿಲ್ಲ.

ಸ್ಲೋಗನ್:

ಯಾರು ಸದಾ ಬುದ್ಧಿಯ ಮುಖಾಂತರ ಜ್ಞಾನರತ್ನಗಳನ್ನು ಧಾರಣೆ ಮಾಡುತ್ತಾರೆ ಅವರೇ ಸತ್ಯ ಹೋಲಿ ಹಂಸಗಳಾಗಿದ್ದಾರೆ.

 Download PDF

 

Post a Comment

0 Comments