29/01/23 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 02/12/93
Listen to the Murli audio file
ನಂಬರ್ಒನ್ ಆಗುವುದಕ್ಕೆ ಗುಣಮೂರ್ತರಾಗಿ ಗುಣದ ದಾನವನ್ನು ಮಾಡುವಂತಹ ಮಹಾದಾನಿಗಳಾಗಿ
ಇಂದು ಬೇಹದ್ದಿನ ತಾಯಿ ತಂದೆ ನಾಲ್ಕಾರು ಕಡೆ ವಿಶೇಷ ಮಕ್ಕಳನ್ನು ನೋಡಿದರು. ಏನು ವಿಶೇಷವನ್ನು ನೋಡಿದರು?
ಯಾವ ಮಕ್ಕಳು ಅಖುಟ ಜ್ಞಾನಿ,
ಅಟಲ ಸ್ವರಾಜ್ಯಾಧಿಕಾರಿ, ಅಖಂಡ ನಿರ್ವಿಘ್ನ,
ಅಖಂಡ ಯೋಗಿ,
ಅಖಂಡ ಮಹಾದಾನಿಗಳನ್ನು ಇಂತಹ ವಿಶೇಷ ಆತ್ಮಗಳು ಕೋಟಿಯಲ್ಲಿ ಕೆಲವರು ಮಾತ್ರ ಆಗಿದ್ದಾರೆ. ಜ್ಞಾನಿ,
ಯೋಗಿ ಮಹಾದಾನಿ ಎಲ್ಲರು ಆಗಿದ್ದಾರೆ ಆದರೆ ಅಖಂಡ ಕೆಲಕೆಲವರಾಗಿದ್ದಾರೆ. ಯಾರು ಅಖುಟ, ಅಟಲ ಮತ್ತು ಅಖಂಡವಾಗಿದ್ದಾರೆ ಅವರೇ ವಿಜಯಮಾಲೆಯ ವಿಜಯದ ಮಣಿಗಳು.
ಬಾಪ್ದಾದಾರವರು ಸಂಗಮಯುಗದಲ್ಲಿ ಎಲ್ಲಾ ಮಕ್ಕಳಿಗೆ
‘ಅಟಲ-ಅಖಂಡ ಭವ’ ವರದಾನವನ್ನು ಕೊಟ್ಟಿದ್ದಾರೆ. ಆದರೆ ವರದಾನವನ್ನು ಜೀವನದಲ್ಲಿ ಧಾರಣೆ ಮಾಡುವುದರಲ್ಲಿ ನಂಬರ್ವಾರ್ ಆಗಿದೆಯಲ್ಲವೇ.
ನಂಬರ್ಒನ್ ಆಗುವುದಕ್ಕೆ ಎಲ್ಲದಕ್ಕಿಂತ ಸಹಜ ವಿಧಿಯಾಗಿದೆ ಅಖಂಡ ಮಹಾದಾನಿಯಾಗಬೇಕು. ಅಖಂಡ ಮಹಾದಾನಿ ಅರ್ಥಾತ್ ನಿರಂತರ ಸೇವಾಧಾರಿ ಏಕೆಂದರೆ ಸಹಜವೇ ನಿರಂತರವಾಗುವುದಕ್ಕೆ ಸಾಧ್ಯ.
ಅಖಂಡ ಸೇವಾಧಾರಿ ಅರ್ಥಾತ್ ಅಖಂಡ ಮಹಾದಾನಿ. ದಾತನ ಮಕ್ಕಳಾಗಿದ್ದೀರಿ. ಸರ್ವ ಖಜಾನೆಗಳಿಂದ ಸಂಪನ್ನ ಶ್ರೇಷ್ಠ ಸಂಪನ್ನರಾಗಿದ್ದೀರಿ. ಸಂಪನ್ನತೆಯ ಚಿಹ್ನೆ ಅಖಂಡ ಮಹಾದಾನಿ.
ಒಂದು ಸೆಕೆಂಡ್ ಕೂಡ ದಾನ ಕೊಡದೇ ಇರಲು ಸಾಧ್ಯವಿಲ್ಲ. ದ್ವಾಪರದಿಂದ ದಾನಿ ಆತ್ಮರು ಅನೇಕ ಭಕ್ತರು ಸಹ ಆಗಿದ್ದಾರೆ ಆದರೆ ಎಷ್ಟೇ ದೊಡ್ಡದಾಗಿರಬಹುದು, ಅಖೂಟ ಖಜಾನೆಗಳ ದಾನಿಯಾಗಿಲ್ಲ.
ವಿನಾಶಿ ಖಜಾನೆಗಳು ಅಥವಾ ವಸ್ತುಗಳ ದಾನಿಯಾಗುತ್ತಾರೆ. ತಾವು ಶ್ರೇಷ್ಠ ಆತ್ಮಗಳು ಈಗ ಸಂಗಮದಲ್ಲಿ ಅಕೂಟ ಮಹಾದನಿ ಆಗುತ್ತೀರಿ. ತಮ್ಮನ್ನು ತಾವು ಕೇಳಿಕೊಳ್ಳಿ ಅಖಂಡ ದಾನಿಯಾಗಿದ್ದೀರಾ? ಅಥವಾ ಸಮಯ ಪ್ರಮಾಣ ದಾನಿಯಾಗಿದ್ದೀರಾ? ಅಖಂಡ ಮಹಾದಾನಿಗಳು ವ್ಯಸ್ತವಾಗಿರುತ್ತಾರೆ. ಮೊದಲು ಮನಸ್ಸಿನ ಮೂಲಕ ಶಕ್ತಿಗಳನ್ನು ಕೊಡುತ್ತಾರೆ,
ಶಕ್ತಿಯನ್ನು ಕೊಡುವಂತಹ ದಾನ, ವಾಣಿಯ ಮುಖಾಂತಾರ ದಾನ,
ಕರ್ಮಗಳ ಮುಖಾಂತರ ಕರ್ಮದ ದಾನ.
ಈ ಮೂರು ದಾನವನ್ನು ಕೊಡುವಂತಹ ಸಹಜ ಆಗಬಹುದು.
ಫಲಿತಾಂಶವನ್ನು ನೋಡಿದಾಗ ವಾಣಿಯ ಮುಖಾಂತರ ಜ್ಞಾನದ ದಾನವನ್ನು ಮೆಜಾರಿಟಿ ಮಾಡುತಿರುತ್ತೀರಿ. ಮನಸ್ಸಿನ ಮುಖಾಂತರ ಶಕ್ತಿಗಳ ದಾನವನ್ನು ಯಥಾ ಶಕ್ತಿ ಮಾಡುತ್ತಿರುತ್ತೀರಿ ಮತ್ತು ಕರ್ಮಸ ಮುಖಾಂತರ ಕರ್ಮದ ದಾನ ಇದನ್ನು ಬಹಳ ಕಡಿಮೆ ಮಾಡುವಂತಹವರಿದ್ದಾರೆ. ವರ್ತಮಾನ ಸಮಯ ಭಲೆ ಅಜ್ಞಾನಿ ಆತ್ಮಗಳಿರಬಹುದು ಭಲೆ ಬ್ರಾಹ್ಮಣ ಆತ್ಮಗಳಿರಬಹುದು ಇಬ್ಬರಿಗೂ ಅವಶ್ಯಕತೆ ಗುಣ ದಾನದ ಇದೆ. ವರ್ತಮಾನ ಸಮಯ ವಿಶೇಷ ಸ್ವಯಂನಲ್ಲಿ ಅಥವಾ ಬ್ರಾಹ್ಮಣ ಪರಿವಾರದಲ್ಲಿ ಈ ವಿಧಿಯಲ್ಲಿ ತೀವ್ರ ಮಾಡಿಕೊಳ್ಳಬೇಕು.
ಈ ದಿವ್ಯ ಗುಣ ಎಲ್ಲದಕ್ಕಿಂತ ಶ್ರೇಷ್ಠ ಪ್ರಭು ಪ್ರಸಾದವಾಗಿದೆ. ಈ ಪ್ರಸಾದವನ್ನು ಎಲ್ಲರಿಗೆ ಚೆನ್ನಾಗಿ ಹಂಚಿ.
ಯಾವಾಗ ಯಾರದೆ ಜೊತೆ ಮಿಲನ ಮಾಡುತ್ತಿರೆಂದರೆ ಒಬ್ಬಿಬರಲ್ಲಿ ಸ್ನೇಹದ ಚಿಹ್ನೆ ಸ್ಥೂಲ ಟೋಲಿಯನ್ನು ತಿನ್ನಿಸುತ್ತಿರಾ, ಹಾಗೆ ಒಬ್ಬಿಬರಲ್ಲಿ ಈ ಗುಣಗಳ ಟೋಲಿಯನ್ನು ತಿನ್ನಿಸಿ. ಈ ವಿಧಿಯಿಂದ ಯಾವ ಸಂಗಮಯುಗದ ಲಕ್ಷ್ಯವಾಗಿದೆ
– “ಫರಿಶ್ತಾ ಸೊ ದೇವತೆ”. ಇದು ಸಹಜ ಸರ್ವರಲ್ಲಿ ಪ್ರತ್ಯಕ್ಷತೆ ಕಂಡು ಬರುತ್ತದೆ. ಈ ಅಭ್ಯಾಸವನ್ನು ನಿರಂತರ ಸ್ಮೃತಿಯಲ್ಲಿಟ್ಟುಕೊಳ್ಳಬೇಕು ನಾನು ದಾತನ ಮಗು ಅಖಂಡ ಮಹಾದಾನಿ ಆತ್ಮ ಆಗಿದ್ದೇನೆ.
ಯಾವುದೇ ಆತ್ಮ ಭಲೆ ಅಜ್ಞಾನಿಯಿರ ಬಹುದು, ಭಲೆ ಬ್ರಾಹ್ಮಣರಿರಬಹುದು ಆದರೆ ಕೊಡಲೇ ಬೇಕಾಗಿದೆ.
ಬ್ರಾಹ್ಮಣಾ ಆತ್ಮಗಳಿಗೆ ಜ್ಞಾನವಂತು ಮೊದಲಿನಿಂದಲೂ ಇದೆ ಆದರೆ ಎರಡು ಪ್ರಕಾರದ ದಾತರಾಗಬಹುದು. 1 – ಯಾವ ಆತ್ಮನಿಗೆ, ಯಾವ ಶಕ್ತಿಯ ಅವಶ್ಯಕತೆಯಿದೆ ಆ ಆತ್ಮನಿಗೆ ಮನಸ್ಸಾ ಮುಖಾಂತರ ಅರ್ಥಾತ್ ಶುದ್ಧ ವೃತ್ತಿ, ಪ್ರಕಂಪನಗಳ ಮುಖಾಂತರ ಶಕ್ತಿಗಳ ದಾನ ಅರ್ಥಾತ್ ಸಹಯೋಗವನ್ನು ಕೊಡಿ.
2 – ಕರ್ಮದ ಮುಖಾಂತರ ಸದಾ ಸ್ವಯಂನ ಜೀವನದಲ್ಲಿ ಗುಣಮೂರ್ತಿಗಳಾಗಿ, ಪ್ರತ್ಯಕ್ಷ ಮಾದರಿಯಾಗಿ ಅನ್ಯರಿಗೂ ಸಹಜ ಗುಣವನ್ನು ಧಾರಣೆ ಮಾಡುವುದಕ್ಕೆ ಸಹಯೋಗವನ್ನು ಕೊಡಿ. ಇದಕ್ಕೆ ಹೇಳಲಾಗುತ್ತದೆ ಗುಣದಾನ.
ದಾನದ ಅರ್ಥವಾಗಿದೆ ಸಹಯೋಗವನ್ನು ಕೊಡುವುದು.
ಇತ್ತೀಚೆಗೆ ಬ್ರಾಹ್ಮಣ ಆತ್ಮರು ಕೇಳುವುದರ ಬದಲು ಪ್ರತ್ಯಕ್ಷ ಪ್ರಮಾಣವನ್ನು ನೋಡಲು ಇಚ್ಛಿಸುತ್ತಾರೆ. ಯಾರಿಗಾದರು ಶಕ್ತಿಯ ಧಾರಣೆ ಅಥವಾ ಗುಣ ಧಾರಣೆ ಮಾಡುವಂತಹ ಶಿಕ್ಷಣವನ್ನು ಕೊಡುವುದಕ್ಕೆ ಇಚ್ಛಿಸುತ್ತಿರೆಂದರೆ ಕೆಲವರು ಹೃದಯದಲ್ಲಿ ಯೋಚಿಸುತ್ತಾರೆ,
ಕೆಲವರು ಹೇಳುತ್ತಾರೆ ಇಂತಹ ಧಾರಣಾಮೂರ್ತರು ಯಾರಾಗಿದ್ದಾರೆ? ಹಾಗಾದರೆ ನೋಡುವುದಕ್ಕೆ ಬಯಸುತ್ತಾರೆ ಆದರೆ ಕೇಳುವುದಕ್ಕೆ ಇಷ್ಟ ಪಡುವುದಿಲ್ಲ.
ಈ ರೀತಿ ಒಬ್ಬಿಬ್ಬರಲ್ಲಿ ಹೇಳುತ್ತಿರಲ್ಲವೇ – ಯಾರಾಗಿದ್ದಾರೆ, ಎಲ್ಲರನ್ನು ನೋಡಿಬಿಟ್ಟೆ.... ಯಾವಾಗ ಯಾವುದೇ ಮಾತು ಬರುತ್ತದೆಯೆಂದರೆ ಹೇಳುತ್ತಾರೆ ಯಾರು ಆಗಿಯೇ ಇಲ್ಲ, ಎಲ್ಲವು ನಡೆಯುತ್ತದೆ. ಆದರೆ ಈ ಹುಡುಗಾಟಿಕೆಯ ಮಾತಾಗಿದೆ, ಯರ್ಥಾತ್ವಾಗಿಲ್ಲ. ಯರ್ಥಾತ್ ಯಾವುದಾಗಿದೆ?
ಫಾಲೋ ಬ್ರಹ್ಮಾ ತಂದೆ. ಹೇಗೆ ಬ್ರಹ್ಮಾ ತಂದೆಯು ಸ್ವಯಂ, ಸದಾ ತಮ್ಮನ್ನು ನಿಮಿತ್ತ ಉದಾಹರಣೆಯಾಗಿ ಮಾಡಿಕೊಂಡರು.
ಸದಾ ಈ ಲಕ್ಷ್ಯ ಲಕ್ಷಣದಲ್ಲಿ ತಂದರು – ಯಾರು ಮೊದಲು ಅವರೇ ಅರ್ಜುನ (ಒಟೆ ಸೋ ಅರ್ಜುನ)
ಅರ್ಥಾತ್ ಯಾರು ಸ್ವಯಂನ್ನು ನಿಮಿತ್ತ ಪ್ರತ್ಯಕ್ಷ ಪ್ರಮಾಣವನ್ನಾಗಿ ಮಾಡಿಕೊಳ್ಳುತ್ತಾರೆ ಅವರೇ ಅರ್ಜುನ ಅರ್ಥಾತ್ ಮೊದಲನೇಯ ನಂಬರ್ನವರು ಆಗುತ್ತಾರೆ. ಒಂದುವೇಳೆ ಫಾಲೋ ಫಾದರ ಮಾಡಬೇಕೆಂದರೆ ಅನ್ಯರನ್ನು ನೋಡಿ ಆಗುವುದರಲ್ಲಿ ನಂಬರ್ಒನ್ ಆಗುವುದಿಲ್ಲ.
ನಂಬರ್ವಾರ್ ಆಗಿಬಿಡುತ್ತೀರಿ. ನಂಬರ್ಒನ್ ಆತ್ಮನ ಚಿಹ್ನೆಯಾಗಿದೆ ಪ್ರತಿ ಶ್ರೇಷ್ಠ ಕಾರ್ಯದಲ್ಲಿ ನಾನು ನಿಮಿತ್ತನ್ನಾಗಿ ಅನ್ಯರಿಗೆ ಸರಳವಾಗುವುದಕ್ಕೆ ಮಾದರಿಯಾಗಬೇಕು. ಅನ್ಯರನ್ನು ನೋಡುವುದು, ಭಲೇ ದೊಡ್ಡವರಿಗೆ ಅಥವಾ ಚಿಕ್ಕವರಿಗೆ, ಭಲೆ ಸಮಾನದವರಿಗೆ ಆದರೆ ಅನ್ಯರನ್ನು ನೋಡಿ ಆಗುವುದರ ಮೊದಲು ಇವರು –ಇವರು ಆದರೆ ನಾನು ಆಗುವೆನು, ನಂಬರ್ಒನ್ಂತು ಅವರು ಆಗಿಬಿಡುತ್ತ್ತಾರಲ್ಲವೇ ಯಾರು ಆಗುತ್ತಾರೆ.
ಸ್ವಯಂ ಸ್ವತಃವಾಗಿ ನಂಬರ್ವಾರ್ ನಲ್ಲಿ ಬಂದುಬಿಡುತ್ತಾರೆ. ಅಖಂಡ ಮಹಾದಾನಿ ಆತ್ಮ ಸದಾ ತಮ್ಮನ್ನು ಪ್ರತಿ ಸೆಕೆಂಡ್ ಮೂರು ಮಹಾದಾನದಲ್ಲಿ ಯಾವುದಾದರು ಒಂದು ದಾನ ಮಾಡುವುದರಲ್ಲಿ ವ್ಯಸ್ತರನ್ನಾಗಿ ಇಟ್ಟುಕೊಳ್ಳುತ್ತಾರೆ. ಹೇಗೆ ಸಮಯ ಅಂತಹ ಸೇವೆಯಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅವರಿಗೆ ವ್ಯರ್ಥವನ್ನು ನೋಡುವುದರಲ್ಲಿ,
ಕೇಳುವುದರಲ್ಲಿ ಅಥವಾ ಮಾಡುವುದರಲ್ಲಿ ಸಮಯವಿರುವುದಿಲ್ಲ. ಹಾಗಾದರೆ ಮಹಾದಾನಿಗಳಾಗಿದ್ದೀರಾ? ಈಗ ಅಂಡರ್ಲೈನ್ ಮಾಡಿ ಅಖಂಡರಾಗಿದ್ದೇವೆಯೇ? ಒಂದುವೇಳೆ ಮಧ್ಯ ಮಧ್ಯದಲ್ಲಿ ದಾತಾತನದ ಖಂಡನೆಯಾಗುತ್ತದೆಯೆಂದರೆ ಖಂಡಿತ ಸಂಪೂರ್ಣರೆಂದು ಹೇಳಲಾಗುವುದಿಲ್ಲ. ವರ್ತಮಾನ ಸಮಯ ಪರಸ್ಪರದಲ್ಲಿ ವಿಶೇಷ ಕರ್ಮದ ಮುಖಾಂತರ ಗುಣದಾತರಾಗುವ ಅವಶ್ಯಕತೆಯಿದೆ.
ಪ್ರತಿಯೊಬ್ಬರು ಸಂಕಲ್ಪವನ್ನು ಮಾಡಬೇಕು ನಾನು ಸದಾ ಗುಣಮೂರ್ತನಾಗಿ ಎಲ್ಲರಿಗೆ ಗುಣಮೂರ್ತಿಯನ್ನಾಗಿ ಮಾಡುವಂತಹ ವಿಶೇಷ ಕರ್ತವ್ಯವನ್ನು ಮಾಡಲೇಬೇಕಾಗಿದೆ. ಸ್ವಯಂನ ಮತ್ತು ಸರ್ವ ನಿರ್ಬಲವನ್ನು ಸಮಾಪ್ತಿ ಮಾಡುವುದಕ್ಕೆ ಈ ವಿಧಿಯಲ್ಲಿ ಪ್ರತಿಯೊಬ್ಬರು ತಮ್ಮನ್ನು ನಿಮಿತ್ತ ಮೊದಲನೇ ನಂಬರ್ ಎಂದು ತಿಳಿದು ಮುಂದುವರೆಯುತ್ತ ಹೋಗಿ. ಜ್ಞಾನವಂತು ಬಹಳಷ್ಟಿದೆ, ಈಗ ಗುಣಗಳನ್ನು ಇಮರ್ಜ ಮಾಡಿಕೊಳ್ಳಬೇಕು, ಸರ್ವ ಗುಣ ಸಂಪನ್ನರಾಗುವುದರಲ್ಲಿ ಮತ್ತು ಮಾಡುವುದರಲ್ಲಿ ಉದಾಹರಣೆಯಾಗಬೇಕು. ಒಳ್ಳೆಯದು.
ಸರ್ವ ಅಖಂಡ ಯೋಗಿ ಆತ್ಮಗಳು,
ಸರ್ವ ಸದಾ ಗುಣಮೂರ್ತಿ ಆತ್ಮಗಳಿಗೆ,
ಸರ್ವ ಪ್ರತಿ ಸಂಕಲ್ಪ, ಪ್ರತಿ ಸೆಕೆಂಡ್, ಮಹಾದಾನಿ ಅಥವಾ ಮಹಾ ಸಹಯೋಗಿ ವಿಶೇಷ ಆತ್ಮರಿಗೆ, ಸದಾ ಸ್ವಯಂನ್ನು ಶ್ರೇಷ್ಠತೆಯಲ್ಲಿ ಮಾದರಿಯಾಗಿ ಸರ್ವ ಆತ್ಮರಿಗೆ ಸರಳ ಸಹಜ ಪ್ರೇರಣೆ ಕೊಡುವಂತಹ, ಸದಾ ಸ್ವಯಂನ್ನು ನಿಮಿತ್ತ ನಂಬರ್ಒನ್ ತಿಳಿದು ಪ್ರತ್ಯಕ್ಷ ಪ್ರಮಾಣ ಕೊಡುವಂತಹ ತಂದೆಯ ಸಮಾನ ಆತ್ಮರಿಗೆ ಬಾಪ್ದಾದಾರವರ ನೆನಪು,
ಪ್ರೀತಿ ಮತ್ತು ನಮಸ್ತೆ.
ದಾದಿ ಜಾನಕಿಯವರ ಜೊತೆ ಭೇಟಿ: (ಆಸ್ಟ್ರೇಲಿಯಾ,
ಸಿಂಗಾಪುರ್ ಇತ್ಯಾದಿಗಳ ಪ್ರವಾಸದ ಸಮಾಚಾರ ತಿಳಿಸಿದರು ಮತ್ತು ಎಲ್ಲರ ನೆನಪನ್ನು ಕೊಟ್ಟರು) ಎಲ್ಲರ ನೆನಪು ತಲುಪಿತು.
ನಾಲ್ಕಾರು ಕಡೆಯ ಮಕ್ಕಳು ಸದಾ ತಂದೆಯ ಮುಂದೆ ಇದ್ದಾರೆ ಇದರ ಪ್ರತ್ಯಕ್ಷ ಪ್ರಮಾಣವಿದೆ ಯಾವಾಗಲೇ ನೆನಪು ಮಾಡಿದಾಗ ಸಮೀಪ ಮತ್ತು ಜೊತೆಯ ಅನುಭವ ಮಾಡುತ್ತೀರಿ.
ಬಾಬಾರವರು ಹೇಳಿದರು ಹೃದಯದಿಂದ ಹೃದಯಾಭಿರಾಮ ಪ್ರತ್ಯಕ್ಷವಾಗಿದ್ದಾರೆ. ಇದಕ್ಕೆ ಹೇಳಲಾಗುತ್ತದೆ ಮಾಲೀಕರು ಪ್ರತ್ಯಕ್ಷವಾಗಿದ್ದಾರೆ, ಪ್ರತ್ಯಕ್ಷ ಮಾಲೀಕರಾಗಿದ್ದಾರೆ. ಎಲ್ಲೆ ಇರಿ ಯಾವುದೇ ಇರಲಿ ಆದರೆ ಪ್ರತಿ ಸ್ಥಾನದಲ್ಲಿ ಪ್ರತಿಯೊಬ್ಬರ ಹತ್ತಿರ ಪ್ರತ್ಯಕ್ಷರಾಗುತ್ತಾರೆ ಇ ಕಾರಣ ಮಾಲೀಕ ಪ್ರತ್ಯಕ್ಷರಾಗಿ ಬಿಡುತ್ತಾರೆ.
ಈ ಸ್ನೇಹದ ವಿಧಿ ಜನರು ತಿಳಿಯುವುದಕ್ಕೆ ಸಾಧ್ಯವಿಲ್ಲ.
ಇಲ್ಲಿ ಬ್ರಾಹ್ಮಣ ಆತ್ಮರೇ ತಿಳಿಯುತ್ತಾರೆ.
ಅನುಭವಿ ಈ ಅನುಭವವನ್ನು ತಿಳಿಯುತ್ತಾರೆ.
ತಾವು ವಿಶೇಷ ಆತ್ಮಗಳಂತು ಕಂಬೈಂಡ್ ಅಲ್ಲವೇ. ಬೇರೆ ಆಗುವುದಕ್ಕೆ ಸಾಧ್ಯವಿಲ್ಲ.
ಜನರು ಹೇಳುತ್ತಾರೆ ಎಲ್ಲಿ ನೋಡಿದರು ನೀನೆಂದರೆ ನೀನು ಮತ್ತು ತಾವು ಹೇಳುತ್ತೀರಿ - ಏನು ಮಾಡುತ್ತೀರಿ, ಎಲ್ಲಿಗೆ ಹೋಗುತ್ತೀರಿ, ತಂದೆಯಂತು ಜೊತೆಯಲ್ಲೇ ಇದ್ದಾರೆ ಅರ್ಥಾತ್ ನೀನೆಂದರೆ ನೀನೆ. ಹೇಗೆ ಕರ್ತವ್ಯ ಜೊತೆಯಿದ್ದರೆ ಪ್ರತಿ ಕರ್ತವ್ಯವನ್ನು ಮಾಡಿಸುವಂತಹವರು ಸದಾ ಜೊತೆಯಲ್ಲೇ ಇದ್ದಾರೆ ಈ ಕಾರಣ ಗಾಯನವಿದೆ ಮಾಡಿ-ಮಾಡಿಸುವಂತಹವರೆಂದು. ಹಾಗಾದರೆ ಕಂಬೈಂಡ್ ಆಗಿದ್ದೀರಲ್ಲವೇ – ಮಾಡುವಂತಹವರು ಮತ್ತು ಮಾಡಿಸುವಂತಹವರು. ಹಾಗಾದರೆ ತಮ್ಮೆಲ್ಲರ ಸ್ಥಿತಿ ಏನಾಗಿದೆ? ಕಂಬೈಂಡ್ ಆಗಿದೆಯಲ್ಲವೇ. ಮಾಡಿ-ಮಾಡಿಸುವಂತಹವರು ಮಾಡಿಸುವಂತಹವರ ಜೊತೆಯಲ್ಲಿಯೇ ಇದ್ದಾರೆ.
ಮಾಡಿಸುವಂತಹವರು ಬೇರೆಯಿಲ್ಲ.
ಇದಕ್ಕೆ ಕಂಬೈಂಡ್ ಸ್ಥಿತಿ ಎಂದು ಹೇಳಲಾಗುತ್ತದೆ. ಎಲ್ಲರು ತಮ್ಮ ತಮ್ಮ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಅನೇಕ ಆತ್ಮಗಳ ಮುಂದೆ ಮಾದರಿಯಾಗಿದ್ದೀರಿ ಸರಳ ಮಾಡುವುದಕ್ಕೆ.
ಈ ರೀತಿ ಅನಿಸುತ್ತದೆಯಲ್ಲವೇ, ಕಷ್ಟವನ್ನು ಸಹಜವನ್ನಾಗಿ ಮಾಡುವುದೇ ಫಾಲೋ ಫಾದರ್ ಆಗಿದೆ. ಈ ರೀತಿಯಲ್ಲವೇ. ಒಳ್ಳೆಯ ಪಾತ್ರವನ್ನು ಅಭಿನಯಿಸಿದ್ದೀರಲ್ಲವೇ. ಎಲ್ಲೆ ಇದ್ದೀರಿ,
ವಿಶೇಷ ಪಾತ್ರಧಾರಿಯಾಗಿ, ವಿಶೇಷ ಪಾತ್ರ ಮಾಡದೆ ಇರಲು ಸಾಧ್ಯವಿಲ್ಲ. ಇದು ಇಲ್ಲಿನ ಡ್ರಾಮಾದ ನೊಂದಣಿಯಾಗಿದೆ. ಒಳ್ಳೆಯದು.
ಸುತ್ತಾಡುವುದು ಬಹಳ ಒಳ್ಳೆಯದಾಗಿದೆ. ಸುತ್ತಾಡಿದ್ದೀರಿ ನಂತರ ಮಧುರವಾದ ಮನೆಗೆ ಬಂದು ಬಿಟ್ಟೀದ್ದೀರಿ. ಸೇವೇಯ ಸುತ್ತಾಟ ಅನೇಕ ಆತ್ಮರ ಪ್ರತಿ ಉಮಂಗ ಉತ್ಸಾಹದ ಸುತ್ತಾಟಿಕೆಯಲ್ಲವೇ. ಎಲ್ಲವು ಸರಿಯಿದೆಯಲ್ಲವೇ? ಒಳ್ಳೆಯದೇ ಒಳ್ಳೆಯದಿದೆ. ಡ್ರಾಮಾದ ಭಾವಿ ಅವಶ್ಯವಾಗಿ ಸೆಳೆಯುತ್ತದೆ ತಾವು ಇರುವುದಕ್ಕೆ ಇಷ್ಟ ಪಡುತ್ತೀರಿ? ಆದರೆ ಡ್ರಾಮಾದಲ್ಲಿ ಇಲ್ಲವೆಂದರೆ ಏನು ಮಾಡುವಿರಿ?
ಯೋಚಿಸಿದರು ಹೋಗಲೇ ಬೇಕಾಗುತ್ತದೆ. ಏಕೆಂದರೆ ಸೇವೆಯ ಭಾವಿವಿದ್ದರೆ ತನ್ನ ಕಾರ್ಯವನ್ನು ಮಾಡಿಸಿಬಿಡುತ್ತದೆ. ಬರುವುದು ಹೋಗುವುದು ಇದೇ ವಿಧಿಯಾಗಿದೆ. ಒಳ್ಳೆಯದು.
ಸಂಘಟನೆ ಚೆನ್ನಾಗಿದೆಯೇ?
ಅವ್ಯಕ್ತ ಬಾಪ್ದಾದಾರವರ ಜೊತೆ ವೈಯಕ್ತಿಕ ಭೇಟಿ
1.
ಪರಮಾತ್ಮನ ಪ್ರೀತಿಯ ಅನುಭವ ಮಾಡುವುದಕ್ಕೆ ದುಃಖದ ಅಲೆಗಳಿಂದ ಭಿನ್ನರಾಗಿ.
ಬಾಪ್ದಾದಾರವರು ಸಂಗಮದಲ್ಲಿ ಅನೇಕ ಖಜಾನೆಗಳನ್ನು ಕೊಟ್ಟಿದ್ದಾರೆ. ಆ ಎಲ್ಲಾ ಖಜಾನೆಗಳಲ್ಲಿ ಶ್ರೇಷ್ಠಾತಿಶ್ರೇಷ್ಠ ಖಾಜಾನೆಯಾಗಿದೆ ಸದಾ ಖುಷಿಯ ಖಜಾನೆ. ಈ ಖುಷಿಯ ಖಜಾನೆ ಸದಾ ಜೊತೆಯಲ್ಲಿ ಇರುತ್ತದೆಯೇ? ಎಂತಹದ್ದೇ ಪರಿಸ್ಥಿತಿ ಬಂದು ಬಿಡಲಿ ಆದರೆ ಖುಷಿ ಮಾತ್ರ ಹೋಗುವುದಿಲ್ಲ. ಯಾವಾಗ ಯಾವುದೇ ದುಃಖದ ಅಲೆಯ ಪರಿಸ್ಥಿತಿ ಬಂದರೂ ಖುಷಿಯಿರುತ್ತದೆಯೇ ಅಥವಾ ಸ್ವಲ್ಪ ಸ್ವಲ್ಪ ಅಲೆ ಬಂದು ಬಿಡುತ್ತದೆಯೇ?
ಏಕೆಂದರೆ ಸಂಗಮದಲ್ಲಿದ್ದೇವೆ. ಒಂದುಕಡೆಯಾಗಿದೆ ದುಃಖಧಾಮ,
ಇನ್ನೊಂದು ಕಡೆಯಾಗಿದೆ ಸುಖಧಾಮ. ದುಃಖದ ಅಲೆಯ ಅನೇಕ ಮಾತು ಎದುರುಗಡೆ ಬರುತ್ತದೆ ಆದರೆ ತಮ್ಮ ಒಳಗಡೆ ಇರಬೇಕು ದುಃಖದ ಅಲೆ ದುಃಖಿಯನ್ನಾಗಿ ಮಾಡಬಾರದು. ಹೇಗೆ ಬೇಸಿಗೆಯ ಕಾಲದಲ್ಲಿ ಬಿಸಿಯಂತು ಇರುತ್ತದೆಯಲ್ಲವೇ. ಆದರೆ ಸ್ವಯಂನ್ನು ರಕ್ಷಿಸಿಕೊಳ್ಳುವುದು ತಮ್ಮ ಮೇಲಿರುತ್ತದೆ. ದುಃಖದ ಮಾತುಗಳು ಕೇಳುವುದರಲ್ಲಿ ಬರುತ್ತದೆ ಆದರೆ ಹೃದಯದಲ್ಲಿ ಪ್ರಭಾವವಾಗಬಾರದು. ಇದಕ್ಕೋಸ್ಕರ ಹೇಳಲಾಗುತ್ತದೆ ಭಿನ್ನ ಹಾಗು ಪ್ರಭುವಿಗೆ ಪ್ರಿಯ.
ದುಃಖದ ಅಲೆಯಿಂದ ಭಿನ್ನವಾದರೆ ಆಗ ಪ್ರಭುವಿಗೆ ಪ್ರಿಯರಾಗುತ್ತೇವೆ. ಎಷ್ಟು ಭಿನ್ನ ಅಷ್ಟೇ ಪ್ರಿಯರು.
ತಮ್ಮನ್ನು ತಾವು ನೋಡಿಕೊಳ್ಳಿ ನಾನು ಎಷ್ಟು ಭಿನ್ನನಾಗಿರುತ್ತೇನೆಂದು? ಎಷ್ಟು ಭಿನ್ನನಾಗುತ್ತಾ ಹೋಗುತ್ತೀರಿ ಅಷ್ಟೇ ಸಹಜ ಪರಮಾತ್ಮನ ಪ್ರೀತಿಯ ಅನುಭವ ಮಾಡುತ್ತೀರಿ,
ಪ್ರತಿನಿತ್ಯ ಚೆಕ್ ಮಾಡಿಕೊಳ್ಳಿ ನಾನು ಎಷ್ಟು ಪ್ರಿಯನಾಗಿದ್ದೇನೆಂದು. ಏಕೆಂದರೆ ಈ ಪ್ರೀತಿ ಪರಮಾತ್ಮನ ಪ್ರೀತಿಯಾಗಿದೆ ಮತ್ತೆ ಯಾವುದೇ ಯುಗದಲ್ಲಿ ಪ್ರಾಪ್ತಿ ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಎಷ್ಟು ಪ್ರಾಪ್ತಿ ಮಾಡಿಕೊಳ್ಳಬೇಕು ಅಷ್ಟು ಈಗ ಮಾಡಿಕೊಳ್ಳಬೇಕು. ಇಂದಿಲ್ಲವೆಂದರೆ ಎಂದೆದಿಗೂ ಇಲ್ಲ.
ಮತ್ತು ಎಷ್ಟು ಸ್ವಲ್ಪ ಸಮಯ ಈ ಪರಮಾತ್ಮನ ಪ್ರೀತಿಯ ಪ್ರಾಪ್ತಿಯದಾಗಿದೆ. ಸ್ವಲ್ಪ ಸಮಯದಲ್ಲಿ ಬಹಳ ಸಮಯದಲ್ಲಿ ಅನುಭವ ಮಾಡಬೇಕಾಗಿದೆ.
ಹಾಗಾದರೆ ಮಾಡುತ್ತಿದ್ದಿರಾ? ಪ್ರಪಂಚದವರು ಖುಷಿಗೋಸ್ಕರ ಸಂಪತ್ತನ್ನು ಖರ್ಚು ಮಾಡುತ್ತಾರೆ ಮತ್ತು ತಮಗೆ ಸಹಜ ಅವಿನಾಶಿ ಖುಷಿಯ ಖಜಾನೆ ಸಿಕ್ಕಿ ಬಿಟ್ಟಿದೆ. ಏನಾದರೂ ಖರ್ಚು ಮಾಡಿದ್ದೀರೇನು?
ಖುಷಿಯ ಮುಂದೆ ಖರ್ಚು ಮಾಡುವಂತಹ ವಸ್ತು ಯಾವುದನ್ನು ಕೊಡುವುದಕ್ಕೆ ಏನಿದೆ?
ಇದೇ ಖುಷಿಯ ಗೀತೆಯನ್ನು ಹಾಡುತ್ತಾ ಇರಿ ಏನು ಪಡೆದುಕೊಳ್ಳಬೇಕಿತ್ತೋ ಅದನ್ನು ಪಡೆದುಕೊಂಡುಬಿಟ್ಟೆ. ಪಡೆದುಕೊಂಡಿದ್ದೀರಲ್ಲವೇ? ಯಾವಾಗ ಯಾವುದೇ ವಸ್ತು ಸಿಕ್ಕಿ ಬಿಡುತ್ತದೆಯೆಂದರೆ ಖುಷಿಯಲ್ಲಿ ನರ್ತನ ಮಾಡುತ್ತಿರುತ್ತಾರೆ ಅನ್ಯರಿಗೂ ಖುಷಿಯನ್ನು ಹಂಚುತ್ತಾ ಹೋಗಿ. ಎಷ್ಟು ಹಂಚುತ್ತಾಹೋಗುತ್ತೀರಿ ಅಷ್ಟು ಹೆಚ್ಚುತ್ತ ಹೋಗುತ್ತದೆ.
ಏಕೆಂದರೆ ಹಂಚುವುದು ಎಂದರೆ ಹೆಚ್ಚಿಸಿ ಕೊಳ್ಳುವುದು. ಯಾರೇ ಸಂಬಂಧದಲ್ಲಿ ಬರಲಿ ಅವರು ಅನುಭವ ಮಾಡಲಿ ಇವರಿಗೆ ಯಾವುದೋ ಶ್ರೇಷ್ಠ ಪ್ರಾಪ್ತಿ ಸಿಕ್ಕಿದೆಯೆಂದು, ಯಾವುದರ ಖುಷಿಯಿದೆ ಏಕೆಂದರೆ ಪ್ರಪಂಚದಲ್ಲಿ ಪ್ರತಿ ಸಮಯವು ದುಃಖವಿದೆ ಮತ್ತು ತಮ್ಮ ಹತ್ತಿರ ಪ್ರತಿ ಸಮಯ ಖುಷಿಯಿದೆ ದುಃಖಿಗಳಿಗೆ ಖುಷಿಯನ್ನು ಕೊಡುವುದು.
ಇದೇ ಎಲ್ಲದಕ್ಕಿಂತ ದೊಡ್ಡಕ್ಕಿಂತ ದೊಡ್ಡ ಪುಣ್ಯವಾಗಿದೆ. ಹಾಗಾದರೆ ಎಲ್ಲರು ನಿರ್ವಿಘ್ನರಾಗಿ ಮುಂದೆ ಹಾರುತ್ತ ಇದ್ದೀರಿ ಅಥವಾ ಚಿಕ್ಕ ಚಿಕ್ಕ ವಿಘ್ನಗಳು ತಡೆಯುತ್ತದೆಯೇ?
ವಿಘ್ನಗಳ ಕೆಲಸವಾಗಿದೆ ಬರುವುದು ಮತ್ತು ತಮ್ಮ ಕೆಲಸವಾಗಿದೆ ವಿಜಯದ ಪ್ರಾಪ್ತಿ ಮಾಡಿಕೊಳ್ಳುವುದು ಯಾವಾಗ ವಿಘ್ನ ತನ್ನ ಕಾರ್ಯವನ್ನು ಚೆನ್ನಾಗಿ ಮಾಡುತ್ತಿದೆ ತಾವು ಮಾ|| ಸರ್ವ ಶಕ್ತಿವಂತರು ತಮ್ಮ ವಿಜಯದ ಕಾರ್ಯವನ್ನು ಸದಾ ಸಫಲರಾಗಿ.
ಸದಾ ಈ ನೆನಪನ್ನು ಇಟ್ಟುಕೊಳ್ಳಿ ನಾವು ವಿಘ್ನ ವಿನಾಶಕ ಆತ್ಮರಾಗಿದ್ದೇವೆ. ವಿಘ್ನ ವಿನಾಶಕದ ಯಾವ ನೆನಪಾರ್ಥವಿದೆ ಅದನ್ನು ಪ್ರತ್ಯಕ್ಷ ಅನುಭವವನ್ನು ಮಾಡುತ್ತಿದ್ದಿರಲ್ಲವೇ. ಒಳ್ಳೆಯದು.
2. ಅಚಲ ಸ್ಥಿತಿಯನ್ನು ಮಾಡಿಕೊಳ್ಳುವುದಕ್ಕೆ ಮಾ|| ಸರ್ವಶಕ್ತಿವಂತ ಟೈಟಲ್ನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ
ಸ್ವಯಂನ್ನು ಸದಾ ಸರ್ವ ಖಜಾನೆಗಳಿಂದ ಸಂಪನ್ನ ಆತ್ಮ ಅನುಭವ ಮಾಡುತ್ತೀರಾ?
ಏಕೆಂದರೆ ಯಾರು ಸಂಪನ್ನರಾಗಿರುತ್ತಾರೆ ಸಂಪನ್ನತೆಯ ಲಕ್ಷಣವಾಗಿದೆ ಅವರು ಅಚಲರಾಗಿರುತ್ತಾರೆ, ಏರುಪೇರಿನಲ್ಲಿ ಬರುವುದಿಲ್ಲ. ಎಷ್ಟು ಖಾಲಿಯಿರುತ್ತದೆ ಅಷ್ಟು ಏರುಪೇರಾಗುತ್ತದೆ. ಯಾವುದೇ ಪ್ರಕಾರದ ಏರುಪೇರು,
ಭಲೆ ಸಂಕಲ್ಪದಿಂದ,
ಭಲೆ ವಾಣಿಯಿಂದ,
ಭಲೆ ಸಂಬಂಧ-ಸಂಪರ್ಕದಿಂದ, ಒಂದುವೇಳೆ ಯಾವುದೇ ಪ್ರಕಾರದ ಏರುಪೇರಾಗುತ್ತದೆ ಎಂದರೆ ಸಿದ್ಧವಾಗಿದೆ ಖಜಾನೆಗಳಿಂದ ಸಂಪನ್ನವಾಗಿಲ್ಲ. ಸಂಕಲ್ಪದಲ್ಲೂ,
ಸ್ವಪ್ನದಲ್ಲೂ ಅಚಲ.
ಏಕೆಂದರೆ ಎಷ್ಟೇಷ್ಟು ಮಾ|| ಸರ್ವ ಶಕ್ತಿವಾನ್ ಸ್ವರೂಪದ ಸ್ಮೃತಿ ಇಮರ್ಜ್ ಆಗುತ್ತದೆ ಅಷ್ಟೇ ಈ ಏರುಪೇರು ಮರ್ಜ್ ಆಗುತ್ತಾ ಹೋಗುತ್ತದೆ. ಮಾ||
ಸರ್ವ ಶಕ್ತಿವಾನನ ಸ್ಮೃತಿ ಪ್ರತ್ಯಕ್ಷ ರೂಪದಲ್ಲಿ ಇಮರ್ಜ ಆಗಬೇಕು. ಹೇಗೆ ಶರೀರದ ಉದ್ಯೋಗ ಇಮರ್ಜ್ ಆಗಿರುತ್ತದೆ,
ಮರ್ಜ್ ಆಗಿರುವುದಿಲ್ಲ,
ಅದೇ ರೀತಿ ಈ ಬ್ರಾಹ್ಮಣ ಜನ್ಮದ ಉದ್ಯೋಗ ಇಮರ್ಜ್ ರೂಪದಲ್ಲಿರಲಿ.
ಚೆಕ್ ಮಾಡಿಕೊಳ್ಳಿ ಇಮರ್ಜ್ ಇರುತ್ತದೆಯೇ ಅಥವಾ ಮರ್ಜ್ ಆಗಿಬಿಡುತ್ತದೆಯೇ? ಇಮರ್ಜ್ ಇರುತ್ತದೆಯೆಂದರೆ ಅದರ ಲಕ್ಷಣವಾಗಿದೆ ಪ್ರತಿಯೊಂದು ಕರ್ಮದಲ್ಲಿ ನಶೆಯಿರುತ್ತದೆ ಮತ್ತು ಅನ್ಯರಿಗೂ ಅನುಭವವಾಗುತ್ತದೆ ಇವರು ಶಕ್ತಿಶಾಲಿ ಆತ್ಮರಾಗಿದ್ದಾರೆ. ಹೇಳಲಾಗುತ್ತದೆ ಏರುಪೇರಿನಂದ ದೂರ ಅಚಲ.
ಅಚಲಘರ್ ತಮ್ಮದೇ ನೆನಪಾರ್ಥವಾಗಿದೆ. ತಮ್ಮ ಕರ್ತ್ವ್ಯವನ್ನು ಸದಾ ನೆನಪಿಟ್ಟುಕೊಳ್ಳಿ ನಾನು ಮಾ|| ಸರ್ವ ಶಕ್ತಿವಾನ್ ಆಗಿದ್ದೇನೆ ಏಕೆಂದರೆ ಇತ್ತೀಚೆಗೆ ಸರ್ವ ಆತ್ಮಗಳು ಅತೀ ನಿರ್ಬಲರಾಗಿದ್ದರೆ ನಿರ್ಬಲ ಆತ್ಮಗಳಿಗೆ ಶಕ್ತಿ ಬೇಕಾಗಿದೆ.
ಶಕ್ತಿ ಯಾರು ಕೊಡುತ್ತಾರೆ? ಯಾರು ಸ್ವಯಂ ಮಾ||
ಸರ್ವ ಶಕ್ತಿವಂತರಾಗಿರುತ್ತಾರೆ. ಯಾವುದೇ ಆತ್ಮನ ಜೊತೆ ಮಿಲನ ಮಾಡಿದರೆ ನಿಮ್ಮ ಮಾತುಗಳನ್ನು ತಿಳಿಸುತ್ತೀರೇನು. ಬಲಹೀನ ಮಾತುಗಳನ್ನು ತಿಳಿಸುತ್ತಿರಲ್ಲವೇ ಯಾವುದನ್ನು ಮಾಡುವುದಕ್ಕೆ ಇಷ್ಟ ಪಡುತ್ತೀರಾ ಅದನ್ನು ಮಾಡುವುದಕ್ಕೆ ಆಗುವುದಿಲ್ಲ ಇದರ ಪ್ರಮಾಣವಾಗಿದೆ ಬಲಹೀನವಾಗಿದೆ ಮತ್ತು ತಾವು ಏನು ಸಂಕಲ್ಪ ಮಾಡುತ್ತೀರಿ ಅದನ್ನು ಕಲ್ಪದಲ್ಲಿ ತರಬಹುದು.
ಮಾ|| ಸರ್ವ ಶಕ್ತಿವಂತನ ಚಿಹ್ನಯಾಗಿದೆ ಸಂಕಲ್ಪ ಮತ್ತು ಕರ್ಮ ಎರಡು ಸಮಾನವಾಗಿರುತ್ತದೆ. ಈ ರೀತಿಯಲ್ಲ ಸಂಕಲ್ಪ ಬಹಳ ಶ್ರೇಷ್ಠವಾಗಿದೆ ಮತ್ತು ಕರ್ಮ ಮಾಡುವುದರಲ್ಲಿ ಶ್ರೇಷ್ಠ ಸಂಕಲ್ಪವನ್ನು ಮಾಡುವುದಕ್ಕೆ ಆಗುವುದಿಲ್ಲವೆಂದರೆ ಇದನ್ನು ಮಾ|| ಸರ್ವ ಶಕ್ತಿವಂತರೆಂದು ಹೇಳುವುದಿಲ್ಲ.
ಚೆಕ್ ಮಾಡಿಕೊಳ್ಳಿ ಯಾವ ಶ್ರೇಷ್ಠ ಸಂಕಲ್ಪವಿರುತ್ತದೆ ಅದು ಕರ್ಮದವರೆಗೂ ಬರುತ್ತದೆಯೇ ಅಥವಾ ಬರುವುದಿಲ್ಲವೇ?
ಮಾ|| ಸರ್ವಶಕ್ತಿವಂತರ ಚಿಹ್ನೆಯಾಗಿದೆ ಯಾವ ಶಕ್ತಿ ಯಾವ ಸಮಯದಲ್ಲಿ ಅವಶ್ಯಕವಿದೆ ಆ ಸಮಯದಲ್ಲಿ ಆ ಶಕ್ತಿ ಕಾರ್ಯದಲ್ಲಿ ಬರಬೇಕು.
ಈ ರೀತಿಯಿದೆಯೇ ಅಥವಾ ಆಹ್ವಾನ ಮಾಡುತ್ತಿರಾ, ಸ್ವಲ್ಪ ಸಮಯದ ನಂತರ ಬರುತ್ತದೆಯೇ? ಯಾವಾಗ ಯಾವುದೇ ಮಾತು ಪೂರ್ಣವಾಗಿ ಬಿಡುತ್ತದೆ,
ನಮ್ತರ ಸ್ಮೃತಿಯಲ್ಲಿ ಬಂದರೆ ಈ ರೀತಿಯಲ್ಲ, ಈ ರೀತಿ ಮಾಡಿದರೆ,
ಇದಕ್ಕೆ ಹೇಳಲಾಗುತ್ತದೆ ಸಮಯದಲ್ಲಿ ಕೆಲಸದಲ್ಲಿ ಬರಲಿಲ್ಲವೆಂದು. ಹೇಗೆ ಸ್ಥೂಲ ಕರ್ಮೇಂದ್ರಿಯಗಳು ಆಡರ್ನಂತೆ ನಡೆಯುತ್ತವೆಯಲ್ಲವೇ, ಕೈಯನ್ನು ಯಾವಾಗ ಬೇಕೋ, ಹೇಗೆ ಬೇಕೋ, ಅಲ್ಲಿ ನಡೆಸಬಹುದಲ್ಲವೇ, ಇದೇ ರೀತಿ ಸೂಕ್ಷ್ಮ ಶಕ್ತಿಗಳು ಇಷ್ಟು ಕಂಟ್ರೋಲ್ನಲ್ಲಿ ಇರಬೇಕು ಯಾವ ಸಮಯದಲ್ಲಿ ಯಾವ ಶಕ್ತಿ ಬೇಕೋ ಕಾರ್ಯದಲ್ಲಿ ತೊಡಗಿಸಬೇಕೋ ಈ ರೀತಿ ಕಂಟ್ರೋಲಿಗ್ ಪಾವರ್ ಇದೆಯೇ?
ಈ ರೀತಿ ಯೋಚನೆ ಮಾಡುವುದಿಲ್ಲವೇ ಇಷ್ಟವಂತು ಇರಲಿಲ್ಲ ಆದರೆ ಆಗಿಹೋಯಿತು.
ಸದಾ ತನ್ನ ಕಂಟ್ರೋಲಿಗ್ ಪಾವರ್ನ್ನು ಚೆಕ್ ಮಾಡಿಕೊಳ್ಳುತ್ತ ಶಕ್ತಿಶಾಲಿಯಾಗುತ್ತಾ ಹೋಗಿ.
ಎಲ್ಲರು ಹಾರುವ ಕಲೆಯವರಾಗಿದ್ದೀರಾ ಅಥವಾ ಇಳಿಯುವ ಕಲೆಯವರಾಗಿದ್ದೀರಾ, ಯಾರಾದರು ಹಾರುವ ಕಲೆಯವರು? ಅಥವಾ ಕೆಲವೊಮ್ಮೆ ಹಾರುವುದು ಕೆಲವೊಮ್ಮೆ ಇಳಿಯುವುದು,
ಕೆಲವೊಮ್ಮೆ ನಡೆಯುವ ಕಲೆಯಾಗಿ ಬಿಡುತ್ತದೆಯೇ?
ಬದಲಾವಣೆಯಾಗುತ್ತದೆ ಅಥವಾ ಮುಂದೆವರೆಯುತ್ತಾ ಹೋಗುತ್ತೀರಾ?
ಯಾವುದೇ ವಿಘ್ನ ಬಂದರೆ ಎಷ್ಟು ಸಮಯದಲ್ಲಿ ವಿಜಯಿಗಳಾಗುತ್ತಿರಾ? ಸಮಯ ಹಿಡಿಸುತ್ತದೆಯಲ್ಲವೇ? ಏಕೆಂದರೆ ಜ್ಞಾನಪೂರ್ಣರಾಗಿದ್ದೀರಲ್ಲವೇ. ವಿಘ್ನಗಳದ್ದು ಜ್ಞಾನವಿದೆ ಜ್ಞಾನದ ಶಕ್ತಿಯಿಂದ ವಿಘ್ನ ಯುದ್ಧ ಮಾಡುವುದಿಲ್ಲ ಆದರೆ ಸೋತು ಬಿಡುತ್ತೀರಿ. ಇದಕ್ಕೆ ಮಾ|| ಸರ್ವಶಕ್ತಿವಾನ್ ಎಂದು ಹೆಳಲಾಗುತ್ತದೆ.
ಹಾಗಾದರೆ ಅಮೃತವೇಳೆಯಿಂದ ಈ ಕರ್ತವ್ಯವನ್ನು ಇಮರ್ಜ್ ಮಾಡಿಕೊಳ್ಳಿ ಮತ್ತು ನಂತರ ಇಡೀ ದಿನ ಚೆಕ್ ಮಾಡಿಕೊಳ್ಳಿ.
ಒಳ್ಳೆಯದು.
ವರದಾನ:
ವರದಾನ: ಸಹನ
ಶಕ್ತಿಯ ಕವಚ
ತೊಟ್ಟು, ಸಂಪರ್ಣ
ಸ್ಟೇಜ್ ಅನ್ನು
ವರಿಸುವಂತಹ ವಿಘ್ನಜೀತ್
ಭವ.
ತಮ್ಮ ಸಂಪರ್ಣ ಸ್ಟೇಜ್ನ್ನು ವರಿಸುವುದು ರ್ಥಾತ್ ಪ್ರಾಪ್ತಿ ಮಾಡಿಕೊಳ್ಳುವುದಕ್ಕೋಸ್ಕರ ಹುಡುಗಾಟಿಕೆಯ
ನಾಟಕ ಆಡುವುದನ್ನು ಬಿಟ್ಟು ಸಹನ ಶಕ್ತಿಯಲ್ಲಿ ಶಕ್ತಿಶಾಲಿಯಾಗಿ. ಸಹನಶಕ್ತಿಯೇ ಸರ್ವ ವಿಘ್ನಗಳಿಂದ ರಕ್ಷಿಸಲ್ಪಡುವ ಕವಚವಾಗಿದೆ. ಯಾರು ಈ ಕವಚವನ್ನು ತೊಟ್ಟಿರುವುದಿಲ್ಲ ಅವರು ನಾಜೂಕಾಗಿ ಬಿಡುತ್ತಾರೆ. ನಂತರ ತಂದೆಯ ಮಾತನ್ನು ತಂದೆಗೇ ಹೇಳುತ್ತಾರೆ, ಕೆಲವೊಮ್ಮೆ ಬಹಳ ಉಮಂಗ-ಉತ್ಸಾಹದಲ್ಲಿರುತ್ತಾರೆ, ಕೆಲವೊಮ್ಮೆ ಹೃದಯವಿಧರ್ಣರಾಗಿ ಬಿಡುತ್ತಾರೆ. ಈಗ ಈ ಏಳುವ ಇಳಿಯುವ ಏಣಿಯನ್ನು ಬಿಟ್ಟು ಸದಾ ಉಮಂಗ-ಉತ್ಸಾಹದಲ್ಲಿರಿ. ಆಗ ಸಂಪರ್ಣ ಸ್ಟೇಜ್ ಸಮೀಪ ಬಂದು ಬಿಡುವುದು.
ಸ್ಲೋಗನ್:
ಸ್ಲೋಗನ್: ನೆನಪು ಮತ್ತು ಸೇವೆಯ ಶಕ್ತಿಯಿಂದ ಅನೇಕ ಆತ್ಮರುಗಳ ಮೇಲೆ ದಯೆ ತೋರಿಸುವುದೇ ದಯಾ ಹೃದಯಿಗಳಾಗುವುದು.
0 Comments