28/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಒಂದೇ
ಮನ್ಮನಾಭವ ಮಹಾಮಂತ್ರದಿಂದ
ನೀವು ಬುದ್ಧಿವಂತರಾಗುತ್ತೀರಿ,
ಈ ಮಂತ್ರವೇ
ಎಲ್ಲಾ ಪಾಪಗಳಿಂದ
ಮುಕ್ತ ಮಾಡಿಸುವಂತಹದ್ದಾಗಿದೆ”
ಪ್ರಶ್ನೆ:
ಇಡೀ ಜ್ಞಾನದ ಸಾರವೇನಾಗಿದೆ, ಮನ್ಮನಾಭವದಲ್ಲಿರುವಂತಹವರ ಚಿಹ್ನೆ ಏನಾಗಿದೆ?
ಉತ್ತರ:
ಇಡೀ ಜ್ಞಾನದ ಸಾರ ನಾವೀಗ ಹಿಂತಿರುಗಿ ಮನೆಗೆ ಹೋಗಬೇಕು ಎನ್ನುವುದಾಗಿದೆ.
ಇದು ಕೊಳಕಾದ ಪ್ರಪಂಚವಾಗಿದೆ. ಇದನ್ನು ಬಿಟ್ಟು ನಾವು ನಮ್ಮ ಮನೆಗೆ ಹೋಗಬೇಕು. ಒಂದುವೇಳೆ ಈ ನೆನಪಿದ್ದಾಗ ಇದು ಮನ್ಮನಾಭವವಾಯಿತು.
ಮನ್ಮನಾಭವದಲ್ಲಿರುವಂತಹ ಮಕ್ಕಳು ಸದಾ ಜ್ಞಾನದ ವಿಚಾರಸಾಗರಮಂಥನವನ್ನು ಮಾಡುತ್ತಾರೆ. ಅವರು ತಂದೆಯ ಜೊತೆ ಮಧುರ ಮಧುರವಾಗಿ ವಾರ್ತಾಲಾಪ ಮಾಡುತ್ತಾರೆ.
ಪ್ರಶ್ನೆ:
ಯಾವ ಅಭ್ಯಾಸಕ್ಕೆ ವಶೀಭೂತ ಆಗಿರುವ ಆತ್ಮ ತಂದೆಯ ನೆನಪಿನಲ್ಲಿರಲು ಸಾಧ್ಯವಿಲ್ಲ?
ಉತ್ತರ:
ಒಂದುವೇಳೆ ಕೆಟ್ಟ ಚಿತ್ರವನ್ನು ನೋಡುವ, ಕೆಟ್ಟ ಸಮಾಚಾರವನ್ನು ಓದುವ ಅಭ್ಯಾಸವಿದ್ದರೆ
ತಂದೆಯ ನೆನಪಿರಲು ಸಾಧ್ಯವಿಲ್ಲ. ಸಿನೆಮಾ ನರಕದ ದ್ವಾರವಾಗಿದೆ. ಅದು ಭಾವನೆಗಳನ್ನು
ಹಾಳು ಮಾಡುತ್ತದೆ.
ಓಂ ಶಾಂತಿ.
ಆತ್ಮೀಯ ತಂದೆಯು ಕುಳಿತು ಆತ್ಮೀಯ ಮಕ್ಕಳಿಗೆ ತಿಳಿಸುತ್ತಾರೆ
- ಯಾರಲ್ಲಿ ತಿಳುವಳಿಕೆ ಕಡಿಮೆಯಿರುತ್ತದೆಯೋ ಅವರಿಗೆ ತಿಳಿಸಲಾಗುತ್ತದೆ. ನೀವೀಗ ಬಹಳ ಬುದ್ಧಿವಂತರಾಗಿದ್ದೀರಿ. ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಇವರು ಬೇಹದ್ದಿನ ಶಿಕ್ಷಣವನ್ನು ಕೊಡುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನೂ ಸಹ ತಿಳಿದುಕೊಂಡಿದ್ದೀರಿ. ವಿದ್ಯಾರ್ಥಿಗಳ ಬುದ್ಧಿಯಲ್ಲಿ ಜ್ಞಾನವಿರುತ್ತದೆಯಲ್ಲವೇ ಮತ್ತು ತಂದೆಯು ಅವಶ್ಯವಾಗಿ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ಇದು ಹಳೆಯ ಪ್ರಪಂಚವಾಗಿದೆ ಎಂದು ತಂದೆಗೆ ತಿಳಿದಿದೆ.
ಈ ಹಳೆಯ ಪ್ರಪಂಚದಿಂದ ನಾವು ಮಕ್ಕಳನ್ನು ಹಿಂತಿರುಗಿ ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ.
ಇಲ್ಲಿ ಕುಳಿತು ಕುಳಿತುಕೊಂಡಿದ್ದಾಗಲೇ ಮಕ್ಕಳ ಅಂತರಾಳದಲ್ಲಿ ಅವಶ್ಯವಾಗಿ ಬರುತ್ತದೆ. ಓಹೋ ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ ನಂತರ ಶಿಕ್ಷಣವನ್ನೂ ಸಹ ಬಹಳ ಶ್ರೇಷ್ಠವಾಗಿ ಕೊಡುತ್ತಾರೆಂದು ನೀವು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಇಡೀ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿದ್ದಾರೆ.
ಇದೆಲ್ಲವನ್ನೂ ನೆನಪು ಮಾಡುವುದು ಮನ್ಮನಾಭವವಾಗಿದೆ. ಇದೂ ಸಹ ಚಾರ್ಟನಲ್ಲಿ ಬರುತ್ತದೆ.
ಇದು ಬಹಳ ಸಹಜವಾಗಿದೆ. ಭಲೆ ಏನೂ ಮಾಡದಿರಿ.
ಎದ್ದೇಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಈ ನೆನಪಿರಲಿ - ಅದ್ಭುತವಾದ ವಸ್ತುವನ್ನು ನೆನಪು ಮಾಡಬೇಕು. ತಂದೆಯನ್ನು ನೆನಪು ಮಾಡುವುದರಿಂದ,
ವಿದ್ಯೆಯನ್ನು ಓದುವುದರಿಂದ ವಿಶ್ವದ ಮಾಲೀಕರಾಗುತ್ತೇವೆಂದು ನಿಮಗೆ ತಿಳಿದಿದೆ.
ಇದೆಲ್ಲವೂ ನಿಮ್ಮ ಬುದ್ಧಿಯಲ್ಲಿ ನಡೆಯುತ್ತಿದೆ.
ಭಲೆ ಎಲ್ಲೇ ಬಸ್ಸು ಅಥವಾ ರೈಲು ಮುಂತಾದುವುಗಳಲ್ಲಿ ಕುಳಿತುಕೊಂಡಾಗಲೂ ಬುದ್ಧಿಯಲ್ಲಿ ನೆನಪಿರಬೇಕು. ಮೊದಮೊದಲು ಮಕ್ಕಳಿಗೆ ತಂದೆಯು ಬೇಕು. ನಾವು ಆತ್ಮಗಳಿಗೆ ಆತ್ಮೀಯ ಬೇಹದ್ದಿನ ತಂದೆಯಿದ್ದಾರೆಂದು ನಿಮಗೆ ತಿಳಿದಿದೆ.
ಸಹಜ ನೆನಪನ್ನು ಕೊಡಿಸುವುದಕ್ಕೋಸ್ಕರ ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ.
ನನ್ನೊಬ್ಬನನ್ನೇ ನೆನಪು ಮಾಡಿದಾಗ ಅರ್ಧಕಲ್ಪದ ನಿಮ್ಮ ವಿಕರ್ಮಗಳು ಈ ಯೋಗದ ಅಗ್ನಿಯಿಂದ ಭಸ್ಮವಾಗುತ್ತದೆ. ಜನ್ಮ-ಜನ್ಮಾಂತರದಿಂದ ಬಹಳ ಯಜ್ಞ,
ಜಪ, ತಪ ಮುಂತಾದುವುಗಳನ್ನು ಮಾಡಿದಿರಿ.
ಭಕ್ತಿಮಾರ್ಗದಲ್ಲಿ ಇದೆಲ್ಲವನ್ನೂ ಏಕೆ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ಇದರಿಂದ ಯಾವ ಪ್ರಾಪ್ತಿಯಾಗುತ್ತದೆ. ಮಂದಿರಗಳಲ್ಲಿ ಹೋಗಿ ಅಷ್ಟೊಂದು ಭಕ್ತಿಯನ್ನು ಮಾಡುತ್ತಾರೆ. ಇದು ಪರಂಪರೆಯಿಂದ ನಡೆಯುತ್ತಾ ಬಂದಿದೆ ಎಂದು ಶಾಸ್ತ್ರಗಳಲ್ಲಿ ಹೇಳುತ್ತಾರೆ.
ಸ್ವರ್ಗದಲ್ಲಿ ಯಾವುದೇ ಶಾಸ್ತ್ರವಿಲ್ಲವೆಂದು ಮನುಷ್ಯರಿಗೆ ತಿಳಿದಿಲ್ಲ. ಅವರು ಸೃಷ್ಟಿಯ ಪ್ರಾರಂಭದಿಂದಲೇ ಇದೆಲ್ಲವೂ ನಡೆಯುತ್ತಾ ಬಂದಿದೆ ಎಂದು ತಿಳಿದಿದ್ದಾರೆ. ಬೇಹದ್ದಿನ ತಂದೆಯು ಯಾರಾಗಿದ್ದಾರೆಂದು ತಿಳಿಸಲು ಸಾಧ್ಯವಿಲ್ಲ.
ಇಲ್ಲಿ ಹದ್ದಿನ ತಂದೆ ಹಾಗೂ ಹದ್ದಿನ ಶಿಕ್ಷಕರಿದ್ದಾರೆ. ಹದ್ದಿನ ಶಿಕ್ಷಕರಿದ್ದಾಗ ನೀವೆಲ್ಲರೂ ವಿದ್ಯೆಯನ್ನು ಓದಿದ್ದೀರಿ. ಅದನ್ನು ಓದಿ ನೌಕರಿ ಮುಂತಾದವನ್ನು ಮಾಡುತ್ತಾರೆ,
ಸಂಪಾದನೆಯನ್ನು ಮಾಡುತ್ತಾರೆ.
ಯಾರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೋ ಅವರಿಗೆ ಯಾರೂ ತಂದೆಯಿಲ್ಲ ಮತ್ತು ಅವರು ಬೇಹದ್ದಿನ ಶಿಕ್ಷಕರಾಗಿದ್ದಾರೆಂದು ನಿಮಗೆ ತಿಳಿದಿದೆ. ಅವರಿಗೆ ಯಾರೂ ಶಿಕ್ಷಕರಿಲ್ಲ.
ಈ ದೇವತೆಗಳಿಗೆ ಯಾರು ಓದಿಸಿದರು ಎನ್ನುವುದು ಅವಶ್ಯವಾಗಿ ನೆನಪಿಗೆ ಬರಬೇಕಲ್ಲವೇ.
ಇದು ಮನ್ಮನಾಭವವಾಗಿದೆ. ಈ ವಿದ್ಯೆಯನ್ನು ಎಲ್ಲೂ ಸಹ ಓದಿಲ್ಲ. ತಂದೆಯು ಸ್ವಯಂ ಜ್ಞಾನಪೂರ್ಣರಾಗಿದ್ದಾರೆ ಇವರಿಗೆ ಯಾರಾದರೂ ಓದಿಸಿದ್ದಾರೇನು? ಅವರು ಮನುಷ್ಯ ಸೃಷ್ಟಿಯ ಬೀಜರೂಪವಾಗಿದ್ದಾರೆ ಮತ್ತು ಚೈತನ್ಯವಾಗಿದ್ದಾರೆ, ಜ್ಞಾನಸಾಗರಾಗಿದ್ದಾರೆ. ಚೈತನ್ಯವಾಗಿರುವ ಕಾರಣ ಮನುಷ್ಯ ಸೃಷ್ಟಿರೂಪೀ ವೃಕ್ಷದ ಆದಿಯಿಂದ ಅಂತ್ಯದತನಕ ರಹಸ್ಯವನ್ನು ತಿಳಿಸುತ್ತಾರೆ.
ಅಂತಿಮದಲ್ಲಿ ಬಂದು ಆದಿಯ ಜ್ಞಾನವನ್ನು ತಿಳಿಸುತ್ತಾರೆ ಮತ್ತು ಹೇ ಮಕ್ಕಳೇ,
ಯಾವ ತನುವಿನಲ್ಲಿ ನಾವು ವಿರಾಜಮಾನನಾಗಿದ್ದೇನೋ ಅವರ ಮುಖಾಂತರ ನಾನು ಆದಿಯಿಂದ ಹಿಡಿದು ಈ ಸಮಯದತನಕ ಎಲ್ಲವನ್ನೂ ತಿಳಿಸುತ್ತೇನೆಂದು ಹೇಳುತ್ತಾರೆ.
ಅಂತಿಮದ್ದು ನಂತರ ತಿಳಿಸುತ್ತಾರೆ. ಈಗ ಅಂತ್ಯವಾಗಿದೆಯೆಂದು ಮುಂದೆ ಹೋಗುತ್ತಾ ತಿಳಿದುಕೊಳ್ಳುತ್ತೀರಿ ಏಕೆಂದರೆ ಆ ಸಮಯದಲ್ಲಿ ನೀವು ಕರ್ಮಾತೀತ ಸ್ಥಿತಿಯನ್ನು ತಲುಪುತ್ತೀರಿ ಮತ್ತು ಈ ಹಳೆಯ ಕೊಳಕಾದ ಪ್ರಪಂಚದ ವಿನಾಶವಾಗುವ ಪ್ರಭಾವನ್ನು ನೋಡುತ್ತೀರಿ. ಇದು ಹೊಸ ಮಾತೇನಲ್ಲ.
ಅನೇಕ ಬಾರಿ ನೋಡಿದ್ದೀರಿ ಮತ್ತು ನೋಡುತ್ತಲೇ ಇರುತ್ತೀರಿ.
ಕಲ್ಪದ ಮೊದಲು ರಾಜ್ಯವನ್ನು ತೆಗೆದುಕೊಂಡಿದ್ದಿರಿ ನಂತರ ಕಳೆದುಕೊಂಡು ಈಗ ಪುನಃ ತೆಗೆದುಕೊಳ್ಳುತ್ತಿದ್ದೀರಿ. ತಂದೆಯು ನಮಗೆ ವಿದ್ಯೆಯನ್ನು ಓದಿಸುತ್ತಿದ್ದಾರೆ. ನಾವೇ ವಿಶ್ವದ ಮಾಲೀಕರಾಗುತ್ತೇವೆ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಂದು ನೀವು ಮಕ್ಕಳಿಗೆ ತಿಳಿದಿದೆ.
ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುವುದಕ್ಕೋಸ್ಕರ ಅದೇ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆ ಶಿಕ್ಷಕನಾಗಿದ್ದಾರೆಂದು ನಿಮ್ಮ ಅಂತರಾಳದಲ್ಲಿ ತಿಳಿದುಕೊಂಡಿದ್ದೀರಿ. ಒಳ್ಳೆಯದು, ಒಂದುವೇಳೆ ತಂದೆಯ ನೆನಪಿಲ್ಲವೆಂದರೆ ಶಿಕ್ಷಕನನ್ನು ನೆನಪು ಮಾಡಿ. ಶಿಕ್ಷಕನನ್ನು ಮರೆಯಲು ಸಾಧ್ಯವೇನು?
ಶಿಕ್ಷಕನಿಂದ ವಿದ್ಯೆಯನ್ನು ಓದುತ್ತಾರೆ. ಮಾಯೆ ತಪ್ಪನ್ನು ಮಾಡಿಸುತ್ತದೆ ಎನ್ನುವುದು ನಿಮಗೆ ತಿಳಿದಿಲ್ಲ. ಮಾಯೆ ಕಣ್ಣುಗಳಿಗೆ ಒಂದೇ ಸಲ ಮಣ್ಣನ್ನು ಹಾಕುತ್ತದೆ. ಭಗವಂತನು ಓದಿಸುತ್ತಿದ್ದಾರೆ ಎನ್ನುವುದನ್ನು ಒಂದೇ ಸಲ ಮರೆತುಹೋಗುತ್ತಾರೆ. ತಂದೆಯು ಪ್ರತಿಯೊಂದು ಮಾತಿನ ತಿಳುವಳಿಕೆಯನ್ನು ಕೊಡುತ್ತಾರೆ.
ಇದು ಬೇಹದ್ದಿನ ತಿಳುವಳಿಕೆಯಾಗಿದೆ, ಅದು ಹದ್ದಿನದ್ದಾಗಿದೆ. ಈ ಬೇಹದ್ದಿನ ಜ್ಞಾನ ಕಲ್ಪ-ಕಲ್ಪವೂ ನಾವು ಮಕ್ಕಳಿಗೆ ಕೊಡುತ್ತಾರೆ. ಒಳ್ಳೆಯದು.
ಹೆಚ್ಚು ಓದದಿದ್ದರೆ ಭಲೆ ತಂದೆಯ ರೂಪದಲ್ಲಿ ನೆನಪು ಮಾಡಿ. ಅವರಿಗೆ ಯಾರೂ ತಂದೆಯಿಲ್ಲ ಅವರೇ ತಂದೆಯಾಗಿದ್ದಾರೆ ಹಾಗೂ ಎಲ್ಲರೂ ಅವರ ಮಕ್ಕಳಾಗಿದ್ದೇವೆ. ಶಿವತಂದೆಯು ಯಾರ ಮಗುವಾಗಿದ್ದಾರೆಂದು ತಿಳಿಸಲು ಸಾಧ್ಯವೇ. ಅವರು ಬೇಹದ್ದಿನ ತಂದೆಯಾಗಿದ್ದಾರೆ. ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆಂದು ನೀವು ಮಕ್ಕಳಿಗೆ ತಿಳಿದಿದೆ. ಈ ನಮ್ಮ ವಿದ್ಯೆಯು ಅದ್ಭುತವಾಗಿದೆ ಮತ್ತು ನಾವು ಬ್ರಾಹ್ಮಣರೇ ಓದುತ್ತೇವೆ. ದೇವತಾ ಹಾಗೂ ಕ್ಷತ್ರಿಯ,
ವೈಶ್ಯ, ಶೂದ್ರರು ಈ ವಿದ್ಯೆಯನ್ನು ಓದುವುದಿಲ್ಲ. ತಂದೆಯ ಈ ಜ್ಞಾನ ಬಹಳ ಭಿನ್ನವಾಗಿದೆ.
ಇದನ್ನು ನಿಮ್ಮ ವಿನಃ ಬೇರೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾವು ತಮೋಪ್ರಧಾನದಿಂದ ಸತೋಪ್ರಧಾನರಾಗುತ್ತಿದ್ದೇವೆ ಎನ್ನುವ ಖುಷಿಯ ನಶೆ ನೀವು ಮಕ್ಕಳಿಗೆ ಏರುತ್ತಿದೆ. ಈ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೋಸ್ಕರ ತೀವ್ರ ಪುರುಷಾರ್ಥವನ್ನು ಮಾಡಬೇಕು.
ಸ್ವರ್ಗದಲ್ಲಿ ಎಲ್ಲರೂ ಹೋಗುತ್ತಾರೆಂದಲ್ಲ. ಒಂದುವೇಳೆ ಜ್ಞಾನ ಮತ್ತು ಯೋಗದ ಧಾರಣೆ ಇಲ್ಲವೆಂದಾಗ ಶ್ರೇಷ್ಠ ಪದವಿಯು ಸಿಗುವುದಿಲ್ಲ.
16
ಕಲೆ ಸಂಪೂರ್ಣರಾಗುವುದರಲ್ಲಿ ನೆನಪಿನ ಬಹಳ ಪರಿಶ್ರಮವನ್ನು ಪಡಬೇಕೆಂದು ತಂದೆಯು ಹೇಳುತ್ತಾರೆ.
ಯಾರಿಗಾದರೂ ದುಃಖ ಕೊಟ್ಟಿಲ್ಲವೇ ಎಂದು ನೋಡಿಕೊಳ್ಳಿ. ನಾವು ಸುಖದಾತನ ಮಕ್ಕಳಾಗಿದ್ದೇವೆ. ಎಲ್ಲರಿಗೂ ಸುಖವನ್ನೇ ಕೊಡಬೇಕು. ಮನಸ್ಸಾ-ವಾಚಾ-ಕರ್ಮಣ ಯಾರಿಗೂ ದುಃಖವನ್ನು ಕೊಡಬಾರದು. ಈ ಸಮಯದಲ್ಲಿ ನೀವು ಯಾವ ವಿದ್ಯೆಯನ್ನು ಓದಿದ್ದೀರೋ ಅದರಿಂದ ಹೂಗಳಾಗುತ್ತೀರಿ. ಈ ಸಂಪಾದನೆಯು ನಿಮ್ಮ ಜೊತೆಯಲ್ಲಿ ಬರುವಂತಹದ್ದಾಗಿದೆ. ಇದರಲ್ಲಿ ಬೇರೆ ಪುಸ್ತಕ ಮುಂತಾದವನ್ನು ಓದುವ ಅವಶ್ಯಕತೆಯಿಲ್ಲ. ಆ ವಿದ್ಯೆಯಲ್ಲಿ ಎಷ್ಟೊಂದು ಪುಸ್ತಕ ಇತ್ಯಾದಿಗಳನ್ನು ಓದಲು ತೊಡಗುತ್ತಾರೆ. ಈ ತಂದೆಯ ಜ್ಞಾನವು ಎಲ್ಲದಕ್ಕಿಂತ ಭಿನ್ನವಾಗಿದೆ ಮತ್ತು ಬಹಳ ಸಹಜವಾಗಿದೆ. ಆದರೆ ಎಲ್ಲವೂ ಗುಪ್ತವಾಗಿದೆ.
ನಿಮಗೋಸ್ಕರ ಯಾರೂ ತಿಳಿಯಲು ಸಾಧ್ಯವಿಲ್ಲ.
ಇದನ್ನು ಯಾರು ಓದಿಸುತ್ತಿದ್ದಾರೆ? ಅದ್ಭುತವಾದ ವಿದ್ಯೆಯಾಗಿದೆ ಆದ್ದರಿಂದ ಎಂದೂ ತಪ್ಪಿಸಿಕೊಳ್ಳಬೇಡಿ ಎಂದು ತಂದೆಯು ಹೇಳುತ್ತಾರೆ. ವಿದ್ಯೆಯನ್ನು ಓದುವುದನ್ನು ಎಂದೂ ಸಹ ಬಿಡಬೇಡಿ.
ತಂದೆಯ ಬಳಿ ಎಲ್ಲರ ರಿಜಿಸ್ಟರ್ ಇರುತ್ತದೆ. ತಂದೆಗೆ ಎಲ್ಲವೂ ಗೊತ್ತಾಗುತ್ತದೆ - ಇವರು 10 ತಿಂಗಳು ಗೈರು ಹಾಜರಿಯಾಗುತ್ತಾರೆ, 6 ತಿಂಗಳೂ ಆಗುತ್ತಾರೆ.
ಕೆಲವರು ನಡೆಯುತ್ತಾ-ನಡೆಯುತ್ತಾ ವಿದ್ಯೆ ಓದುವುದನ್ನು ಬಿಟ್ಟುಬಿಡುತ್ತಾರೆ. ಇದು ಬಹಳ ಅದ್ಭುತವಾದ ವಸ್ತುವಾಗಿದೆ.
ಈ ರೀತಿಯಾದ ಅದ್ಭುತವಾದ ವಸ್ತುವು ಬೇರೆ ಯಾವುದೂ ಇಲ್ಲ. ಕಲ್ಪ-ಕಲ್ಪ ನೀವು ಮಕ್ಕಳಿಗೆ ಈ ರೀತಿ ತಂದೆಯೇ ಬಂದು ಮಿಲನ ಮಾಡುತ್ತಾರೆ. ಈ ಸಾಕಾರ ತಂದೆಯೇ ಪುನರ್ಜನ್ಮದಲ್ಲಿ ಬರುತ್ತಾರೆಂದು ನಿಮಗೆ ತಿಳಿದಿದೆ.
ಈ 84 ಜನ್ಮಗಳ ಚಕ್ರವಾಗಿದೆ - ತತತ್ವಂ.
ಇದು ಆಟವಾಗಿದೆಯಲ್ಲವೆ. ಆಟವನ್ನು ಎಂದೂ ಸಹ ಮರೆಯಬಾರದು.
ಆಟವು ಸದಾಕಾಲ ನೆನಪಿನಲ್ಲಿರುತ್ತದೆ.
ಈ ಪ್ರಪಂಚವು ನರಕವಾಗಿದೆ ಮತ್ತು ಇದರಲ್ಲಿ ಖಾಸಾಗಿ ಈ ಸಿನೆಮಾ ನರಕವಾಗಿದೆಯೆಂದು ತಂದೆಯು ತಿಳಿಸುತ್ತಾರೆ. ಅಲ್ಲಿಗೆ ಹೋಗುವುದರಿಂದ ವೃತ್ತಿಗಳು ಬಹಳ ಹಾಳಾಗುತ್ತದೆ.
ಪತ್ರಿಕೆಗಳಲ್ಲೂ ಸಹ ಕೆಲಕೆಲವು ಒಳ್ಳೊಳ್ಳೆಯ ಚಿತ್ರಗಳಿದ್ದಾಗ ಆ ಕಡೆಗೆ ಬುದ್ಧಿಯು ಹೋಗುತ್ತದೆ. ಇವರು ಸುಂದರವಾಗಿದ್ದಾರೆ, ಇವರಿಗೆ ಉಡುಗೊರೆ ಸಿಗಬೇಕೆಂದು ಸಂಕಲ್ಪಗಳು ನಡೆಯುತ್ತವೆ.
ಈ ರೀತಿಯಾದರೂ ನೋಡುತ್ತೀರಿ ಏಕೆ?
ಈ ಹಳೆಯ ಪ್ರಪಂಚ ವಿನಾಶವಾಗುತ್ತದೆಯೆಂದು ಬುದ್ಧಿಯಲ್ಲಿ ತಿಳಿದುಕೊಳ್ಳಿ.
ನೀವು ಕೇವಲ ನನ್ನೊಬ್ಬನ್ನನ್ನೇ ನೆನಪು ಮಾಡಿ. ಈ ರೀತಿ ವಸ್ತುಗಳನ್ನು ನೋಡಬೇಡಿ, ಸಂಕಲ್ಪಗಳನ್ನು ಮಾಡಬೇಡಿ. ಈ ಹಳೆಯ ಪ್ರಪಂಚದ ಕೊಳಕಾದ ಶರೀರವಾಗಿದೆ.
ಅದರ ಕಡೆ ಏಕೆ ನೋಡುತ್ತೀರಿ.
ಒಬ್ಬ ತಂದೆಯನ್ನೇ ನೋಡಬೇಕು. ಮಧುರಾತಿ ಮಧುರ ಮಕ್ಕಳೇ,
ಗುರಿಯು ಶ್ರೇಷ್ಠಾತಿ ಶ್ರೇಷ್ಠವಾಗಿದೆಯೆಂದು ತಂದೆಯು ಹೇಳುತ್ತಾರೆ. ಮಾಯೆಯೂ ಸಹ ಕಡಿಮೆಯೇನಿಲ್ಲ.
ಮಾಯೆಯದ್ದೂ ಸಹ ಎಷ್ಟೊಂದು ಶೋ ಇದೆ. ಆ ಕಡೆ ವಿಜ್ಞಾನದ ಶಕ್ತಿಯಿದೆ ಮತ್ತು ಇಲ್ಲಿ ನಿಮ್ಮದು ಶಾಂತಿಯ ಶಕ್ತಿಯಾಗಿದೆ.
ಅವರು ಮುಕ್ತಿಯನ್ನು ಪಡೆದುಕೊಳ್ಳಲು ಇಷ್ಟಪಡುತ್ತಾರೆ. ಇಲ್ಲಿ ನಿಮ್ಮ ಗುರಿ, ಉದ್ದೇಶ ಜೀವನ್ಮುಕ್ತಿಗೆ ಹೋಗುವುದಾಗಿದೆ.
ಜೀವನ್ಮುಕ್ತಿಯನ್ನು ಪಡೆದುಕೊಳ್ಳಲು ಯಾರೂ ಮಾರ್ಗವನ್ನು ತಿಳಿಸಲು ಸಾಧ್ಯವಿಲ್ಲ.
ಸನ್ಯಾಸಿಗಳು ಮುಂತಾದವರು ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಗೃಹಸ್ಥ ವ್ಯವಹಾರದಲ್ಲಿದ್ದೂ ಪವಿತ್ರರಾಗಿ ಎಂದು ಯಾರಿಗೂ ತಿಳಿಸಲು ಸಾಧ್ಯವಿಲ್ಲ.
ಈ ಒಬ್ಬ ತಂದೆಯೇ ತಿಳಿಸುತ್ತಾರೆ.
ಭಕ್ತಿಮಾರ್ಗದಲ್ಲಿ ಸಮಯ ವ್ಯರ್ಥವಾಗಿಯೇ ಹೋಗುತ್ತದೆ.
ಎಷ್ಟೊಂದು ತಪ್ಪನ್ನು ಮಾಡಿದ್ದಾರೆ. ತಪ್ಪನ್ನು ಮಾಡುತ್ತಾ-ಮಾಡುತ್ತಾ ಮುಗ್ಧರಾಗಿದ್ದಾರೆ. ಈ ಅಂತಿಮ ಜನ್ಮ
100% ತಪ್ಪನ್ನು ಮಾಡುವ ಜನ್ಮವೇ ಆಗಿದೆ.
ಸ್ವಲ್ಪವೂ ಬುದ್ಧಿಯು ಕೆಲಸ ಮಾಡುವುದಿಲ್ಲ.
ಈಗ ತಂದೆಯೇ ನಿಮಗೆ ತಿಳಿಸುತ್ತಾರೆ ಆಗ ನೀವು ತಿಳಿದುಕೊಳ್ಳುತ್ತೀರಿ. ನೀವೀಗ ತಿಳಿದುಕೊಂಡಿದ್ದೀರೆಂದಾಗ ಅನ್ಯರಿಗೂ ಸಹ ತಿಳಿಸಬೇಕು.
ಖುಷಿಯ ನಶೆಯು ನಿಮಗಿರಬೇಕು. ಈ ತಂದೆಗೆ ಯಾರೂ ತಂದೆಯಿಲ್ಲ, ಯಾರೂ ಶಿಕ್ಷಕರಿಲ್ಲ. ಹಾಗಾದರೆ ಅವರು ಎಲ್ಲಿಂದ ಕಲಿತರೆಂದು ಮನುಷ್ಯರು ಆಶ್ಚರ್ಯಪಡುತ್ತಾರೆ. ಇವರಿಗೆ ಯಾರೋ ಗುರುಗಳಿರಬಹುದು. ಬಹಳಷ್ಟು ಜನ ತಿಳಿದುಕೊಳ್ಳುತ್ತಾರೆ. ಒಂದುವೇಳೆ ಇವರೂ ಗುರುಗಳಿಂದ ಕಲಿತಿದ್ದೇ ಆದರೆ ಗುರುವಿಗೆ ಬೇರೆ ಶಿಷ್ಯರು ಇರಬೇಕಾಗಿತ್ತು.
ಕೇವಲ ಇವರೊಬ್ಬರೇ ಶಿಷ್ಯರಾಗಲು ಸಾಧ್ಯವಿಲ್ಲ.
ಗುರುವಿಗೆ ಬಹಳ ಶಿಷ್ಯರಿರುತ್ತಾರೆ. ಆಗಾಖಾನನಿಗೂ ಸಹ ಎಷ್ಟೊಂದು ಶಿಷ್ಯರಿದ್ದರು. ಅವನು ಗುರುವಿಗೆ ನೋಡಿ ಎಷ್ಟೊಂದು ಗೌರವವನ್ನು ಇಡುತ್ತಿದ್ದರು. ಅವನನ್ನು ವಜ್ರಗಳಿಂದ ತುಲಾಭಾರ ಮಾಡಿದರು. ನೀವು ಯಾವುದರಿಂದ ತುಲಾಭಾರ ಮಾಡುತ್ತೀರಿ? ಇವರು ಎಲ್ಲರ ಸುಪ್ರೀಂ ಆಗಿದ್ದಾರೆ. ಇವರ ಭಾರ ಎಷ್ಟಾಗುತ್ತದೆ?
ನೀವು ಏನು ಮಾಡುತ್ತೀರಿ? ತೂಕ ಮಾಡಿದಾಗ ಎಷ್ಟಾಗುತ್ತದೆ?
ಯಾವುದಾದರೂ ವಸ್ತುವನ್ನು ಹಾಕಲು ಸಾಧ್ಯವೇ?
ಶಿವತಂದೆಯು ಬಿಂದಿಯಾಗಿದ್ದಾರೆ. ಇಂದಿನ ದಿನ ತೂಕವನ್ನು ಬಹಳಷ್ಟು ಮಾಡುತ್ತಾರೆ. ತುಲಾಭಾರವನ್ನು ಕೆಲವರು ಚಿನ್ನದಲ್ಲಿ,
ಕೆಲವರು ಬೆಳ್ಳಿಯಲ್ಲಿ,
ಕೆಲವರು ಬಿಳಿಯ ಬಂಗಾರದಲ್ಲಿ ಮಾಡುತ್ತಾರೆ.
ಬಿಳಿಯ ಚಿನ್ನ ಚಿನ್ನಕ್ಕಿಂತಲೂ ಬಹಳ ಬೆಲೆಯಿರುತ್ತದೆ. ಈಗ ತಂದೆಯೇ ತಿಳಿಸುತ್ತಿದ್ದಾರೆ - ಆ ಶಾರೀರಿಕವಾದ ಗುರುಗಳು ನಿಮಗೆ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಸದ್ಗತಿಯಲ್ಲಿ ಕರೆದುಕೊಂಡು ಹೋಗುವವರು ಒಬ್ಬ ತಂದೆಯೇ ಆಗಿದ್ದಾರೆ ಅವರನ್ನು ಯಾವುದರಲ್ಲಿ ತುಲಾಭಾರ ಮಾಡುತ್ತೀರಿ. ಮನುಷ್ಯರು ಕೇವಲ ಭಗವಂತ ಭಗವಂತನೆಂದು ಹೇಳುತ್ತಿರುತ್ತಾರೆ ಆದರೆ ಅವರು ತಂದೆಯಾಗಿದ್ದಾರೆ, ಶಿಕ್ಷಕರಾಗಿದ್ದಾರೆ ಎನ್ನುವುದನ್ನು ತಿಳಿದುಕೊಂಡಿಲ್ಲ. ಅವರು ಕುಳಿತುಕೊಂಡಿರುವುದೂ ಸಹ ಎಷ್ಟೊಂದು ಸಾಧಾರಣವಾಗಿದೆ. ಮಕ್ಕಳ ಮುಖವನ್ನು ನೋಡುವುದಕ್ಕೋಸ್ಕರ ಸ್ವಲ್ಪ ಮೇಲೆ ಕುಳಿತುಕೊಳ್ಳುತ್ತಾರೆ. ಸಹಯೋಗಿ ಮಕ್ಕಳನ್ನು ಬಿಟ್ಟರೆ ನಾನು ಸ್ಥಾಪನೆಯನ್ನು ಹೇಗೆ ಮಾಡಲಿ?
ಯಾರು ಹೆಚ್ಚು ಸಹಯೋಗವನ್ನು ಕೊಡುತ್ತಾರೆ ಅವರನ್ನು ತಂದೆಯು ಅವಶ್ಯವಾಗಿ ಪ್ರೀತಿ ಮಾಡುತ್ತಾರೆ. ಲೌಕಿಕದಲ್ಲಿಯೂ ಒಂದು ಮಗು
2000 ಸಂಪಾದನೆಯನ್ನು ಮಾಡುತ್ತದೆ ಮತ್ತೊಂದು 1000ವನ್ನು ಸಂಪಾದನೆ ಮಾಡುತ್ತದೆ ಅಂದಾಗ ತಂದೆಯ ಪ್ರೀತಿಯು ಯಾವುದರ ಮೇಲಿರುತ್ತದೆ. ಆದರೆ ಇಂದಿನ ದಿನ ತಂದೆಯು ಎಲ್ಲಿದ್ದಾರೆಂದು ಮಕ್ಕಳು ಕೇಳುತ್ತಾರೆ.
ಬೇಹದ್ದಿನ ತಂದೆಯು ನೋಡುತ್ತಾರೆ - ಇಂತಹ ಮಕ್ಕಳು ಬಹಳ ಚೆನ್ನಾಗಿ ಸಹಯೋಗಿಗಳಾಗಿದ್ದಾರೆ. ಮಕ್ಕಳನ್ನು ನೋಡಿ ನೋಡಿ ತಂದೆಯು ಹರ್ಷಿತರಾಗುತ್ತಾರೆ. ಆತ್ಮವು ಖುಷಿಯಾಗುತ್ತದೆ. ಕಲ್ಪ-ಕಲ್ಪದಲ್ಲಿ ನಾನು ಬರುತ್ತೇನೆ ಮತ್ತು ಮಕ್ಕಳನ್ನು ನೋಡಿ ಬಹಳ ಖುಷಿಯಾಗುತ್ತದೆ. ಕಲ್ಪ-ಕಲ್ಪ ಇವರು ನನ್ನ ಸಹಯೋಗಿಗಳಾಗುತ್ತಾರೆಂದು ತಿಳಿದುಕೊಂಡಿದ್ದೇನೆ. ಈ ತಂದೆಯ ಪ್ರೀತಿಯು ಕಲ್ಪ-ಕಲ್ಪದ್ದಾಗಿದೆ. ಎಲ್ಲೇ ಕುಳಿತಿದ್ದರೂ ತಂದೆಯು ನಮ್ಮ ತಂದೆಯಾಗಿದ್ದಾರೆ, ಶಿಕ್ಷಕನಾಗಿದ್ದಾರೆ, ಗುರುವಾಗಿದ್ದಾರೆ ಎನ್ನುವುದನ್ನು ಯೋಚಿಸಿ.
ಸ್ವಯಂ ಎಲ್ಲವೂ ಆಗಿದ್ದಾರೆ ಆದ್ದರಿಂದ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ.
ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ ಏಕೆಂದರೆ 21 ಜನ್ಮಗಳಿಗೋಸ್ಕರ ತಂದೆಯು ಜೀವನದ ನೌಕೆಯನ್ನು ಪಾರು ಮಾಡುತ್ತಾರೆ. ಈ ರೀತಿ ಸ್ಮರಣೆ ಮಾಡುತ್ತಾ ಮಕ್ಕಳಿಗೆ ಖುಷಿ ಆಗಬೇಕು.
ನಾವು ಈ ರೀತಿ ತಂದೆಯ ಸೇವೆಯನ್ನು ಮಾಡಬೇಕೆಂದು ಖುಷಿಯಾಗಬೇಕು. ತಂದೆಯ ಪರಿಚಯವನ್ನು ಎಲ್ಲರಿಗೂ ಕೊಡಬೇಕು. ಇವರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆಯೇ ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಾರೆ.
ತಂದೆಯೇ ನಮ್ಮೆಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಈ ರೀತಿ ತಿಳುವಳಿಕೆಯಿಂದ ಸರ್ವವ್ಯಾಪಿಯೆಂದು ಹೇಳಲು ಸಾಧ್ಯವಿಲ್ಲ. ವಿನಾಶಕಾಲದಲ್ಲಿ ವಿಪರೀತ ಬುದ್ಧಿ ವಿನಶ್ಯಂತಿ ಎಂದು ತಂದೆಯು ಹೇಳುತ್ತಾರೆ.
ಇದೆಲ್ಲವೂ ವಿನಾಶವಾಗುತ್ತದೆ ಬಾಕಿ ನೀವು ವಿಜಯಿಗಳಾಗುತ್ತೀರಿ. ನೀವು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಆತ್ಮಗಳ ತಂದೆಯು ಆತ್ಮಗಳಿಗೆ ಕುಳಿತು ತಿಳಿಸುತ್ತಿದ್ದಾರೆ. ಈ ರೀತಿ ಅದ್ಭುತವಾದ ಮಾತುಗಳನ್ನು ಎಲ್ಲರಿಗೂ ತಿಳಿಸಬೇಕು.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಸುಖದಾತನಿಗೆ ನಾವು ಮಕ್ಕಳಾಗಿದ್ದೇವೆ. ನಾವು ಎಲ್ಲರಿಗೂ ಸುಖವನ್ನು ಕೊಡಬೇಕಾಗಿದೆ. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದಾಗಿದೆ.
2.
ವಿದ್ಯೆ ಮತ್ತು ಓದಿಸುವಂತಹವರು ಎರಡು ಅದ್ಭುತವಾಗಿದೆ. ಈ ರೀತಿ ಅದ್ಭುತವಾದ ವಿದ್ಯೆಯನ್ನು ಎಂದೂ ಸಹ ಮಿಸ್ ಮಾಡಿಕೊಳ್ಳಬಾರದಾಗಿದೆ. ಬರದೆ ಇರಬಾರದಾಗಿದೆ (ಆಬ್ಸೆಂಟ್ ಆಗಬಾರದು).
ವರದಾನ:
ಸದಾ ಪ್ರತಿ
ದಿನ ಸ್ವ
ಉತ್ಸಾಹದಲ್ಲಿರುವುದು ಮತ್ತು
ರ್ವರಿಗೆ ಉತ್ಸಾಹ
ಕೊಡಿಸುವಂತಹ ಆತ್ಮೀಯ
ಸೇವಾಧಾರಿ ಭವ.
ಬಾಪ್ದಾದಾ ಎಲ್ಲಾ ಆತ್ಮೀಯ ಸೇವಾಧಾರಿ ಮಕ್ಕಳಿಗೆ ಸ್ನೇಹದ ಈ ಉಡುಗೊರೆ ಕೊಡುತ್ತಾರೆ, “ಮಕ್ಕಳೇ ಪ್ರತಿ ದಿನ ಸ್ವ ಉತ್ಸಾಹದಲ್ಲಿರಿ
ಮತ್ತು ಸರ್ವರನ್ನು ಉತ್ಸಾಹದಲ್ಲಿ ತರುವಂತಹ ಉತ್ಸವವನ್ನು ಆಚರಿಸಿ” ಇದರಿಂದ ಸಂಸ್ಕಾರ ಮಿಲನ ಮಾಡುವಂತಹ, ಸಂಸ್ಕಾರ ಅಳಿಸುವಂತಹ ಏನು ಪರಿಶ್ರಮ ಮಾಡಬೇಕಾಗುವುದು ಅದು ಬಿಟ್ಟು ಹೋಗುವುದು. ಈ ಉತ್ಸವವನ್ನು ಸದಾ ಆಚರಿಸಿ ಆಗ ಎಲ್ಲಾ ಸಮಸ್ಯೆಗಳು ಸಮಾಪ್ತಿಯಾಗಿ
ಬಿಡುವುದು. ನಂತರ ಸಮಯವನ್ನೂ ಸಹ ಕೊಡುವ ಅಗತ್ಯವಿಲ್ಲ, ಶಕ್ತಿಯನ್ನೂ ತೊಡಗಿಸುವ ಅಗತ್ಯವಿಲ್ಲ. ಖುಷಿಯಲ್ಲಿ ನಾಟ್ಯ ಮಾಡುವ, ಹಾರುವಂತಹ ಫರಿಸ್ತಾ ಆಗಿ ಬಿಡುವಿರಿ.
ಸ್ಲೋಗನ್:
ಡ್ರಾಮಾದ ರಹಸ್ಯವನ್ನು ತಿಳಿದು ನತಿಂಗ್ ನ್ಯೂನ ಪಾಠ ಪಕ್ಕಾ ಮಾಡುವಂತಹವರೇ
ನಿಶ್ಚಿಂತ ಚಕ್ರರ್ತಿ ಆಗಿದ್ದಾರೆ.
0 Comments