Header Ads Widget

Header Ads

KANNADA MURLI 27.01.23

 

27/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಪಾರಸ ಬುದ್ಧಿಯವರಾಗಲು ತಂದೆ ಏನನ್ನು ತಿಳಿಸುತ್ತಾರೋ ಅದನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು, ಸ್ವಯಂನಲ್ಲಿ ಧಾರಣೆ ಮಾಡಿಕೊಂಡು ಅನ್ಯರಿಗೂ ಮಾಡಿಸಬೇಕು

ಪ್ರಶ್ನೆ:

ಯಾವ ಒಂದು ರಹಸ್ಯ ಬಹಳವೇ ಗುಪ್ತ, ಗೌಪ್ಯವಾದ ಹಾಗೂ ಅರ್ಥ ಮಾಡಿಕೊಳ್ಳುವುದಾಗಿದೆ?

ಉತ್ತರ:

ನಿರಾಕಾರ ತಂದೆ ಸರ್ವರ ಮಾತಾ-ಪಿತರು ಹೇಗೆ ಆಗುತ್ತಾರೆ, ಅವರು ಸೃಷ್ಟಿಯ ರಚನೆಯನ್ನು ಯಾವ ವಿಧಿಯಿಂದ ಮಾಡುತ್ತಾರೆ, ಇದು ಬಹಳವೇ ಗುಪ್ತ ಹಾಗೂ ಗೌಪ್ಯವಾದ ರಹಸ್ಯವಾಗಿದೆ. ನಿರಾಕಾರ ತಂದೆ ತಾಯಿ ಇಲ್ಲದೆ ಸೃಷ್ಟಿಯನ್ನು ರಚಿಸಲು ಸಾಧ್ಯವಿಲ್ಲ. ಅವರು ಹೇಗೆ ಶರೀರವನ್ನು ಧಾರಣೆ ಮಾಡಿಕೊಂಡು ಅವರಲ್ಲಿ ಪ್ರವೇಶ ಮಾಡಿ ಅವರ ಮುಖದಿಂದ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ, ಬ್ರಹ್ಮಾರವರು ತಾಯಿಯು ಆಗಿದ್ದಾರೆ, ತಂದೆಯು ಆಗಿದ್ದಾರೆ - ಮಾತು ಬಹಳವೇ ಅರ್ಥ ಮಾಡಿಕೊಳ್ಳುವ, ಸ್ಮರಣೆ ಮಾಡುವ ಹಾಗೂ ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ.

ಗೀತೆ:  ತಾವೇ ತಾಯಿ-ತಂದೆ.......

ಓಂ ಶಾಂತಿ: ಯಾರಿಗೆ ತಾಯಿ-ತಂದೆ ಎಂದು ಹೇಳುತ್ತೀರೋ ಅಂದಮೇಲೆ ಆಜ್ಞೆಯನ್ನು ತಂದೆಯೇ ಕೊಡುತ್ತಾರೆ. ಇಲ್ಲಿ ತಾಯಿ-ತಂದೆ ಇಬ್ಬರೂ ಕಂಬೈಂಡ್ ಆಗುತ್ತಾರೆ. ಮಾತು ಮನುಷ್ಯರಿಗೆ ತಿಳಿದುಕೊಳ್ಳಲು ಬಹಳ ಕಷ್ಟವಾಗುತ್ತದೆ ಹಾಗೂ ಇದೇ ಮುಖ್ಯ ವಿಚಾರವಾಗಿದೆ. ನಿರಾಕಾರ ಪರಮಪಿತ ಪರಮಾತ್ಮ ಯಾರಿಗೆ ಪಿತ ಎಂದು ಹೇಳುತ್ತೀರೋ ಅವರು ತಾಯಿಯೂ ಸಹ ಆಗಿದ್ದಾರೆ, ಇದು ಅದ್ಭುತವಾದ ವಿಚಾರ. ಪರಮಪಿತ ಪರಮಾತ್ಮ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ, ಅದಕ್ಕಾಗಿ ತಾಯಿಯೂ ಸಹ ಅವಶ್ಯವಾಗಿ ಬೇಕು. ಇದು ಬಹಳ ಗುಪ್ತವಾದ ವಿಚಾರವಾಗಿದೆ. ಬೇರೆ ಯಾರ ಬುದ್ಧಿಯಲ್ಲಿಯೂ ಎಂದೂ ವಿಚಾರ ಬರಲು ಸಾಧ್ಯವಿಲ್ಲ. ಈಗ ಅವರು ಸರ್ವರ ತಂದೆಯಾಗಿದ್ದಾರೆ, ಅವಶ್ಯವಾಗಿ ತಾಯಿಯೂ ಸಹ ಬೇಕು. ತಂದೆಯಂತೂ ನಿರಾಕಾರನಾಗಿದ್ದಾರೆ, ಮತ್ತೆ ತಾಯಿ ಎಂದು ಯಾರನ್ನು ಇಡುವುದು? ಮದುವೆಯಂತೂ ಮಾಡಿಕೊಂಡಿಲ್ಲ. ಇದು ಅತೀ ಗುಹ್ಯ ಗೋಪ್ಯವಾದ, ತಿಳಿದುಕೊಳ್ಳುವ ವಿಚಾರವಾಗಿದೆ. ಹೊಸಬರು ಇದನ್ನು ತಿಳಿಯಲು ಸಾಧ್ಯವಿಲ್ಲ. ಹಳಬರೂ ಸಹ ಅರ್ಥ ಮಾಡಿಕೊಂಡು ಅದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟದ ವಿಚಾರವಾಗಿದೆ. ಮಕ್ಕಳೇ ತಾಯಿ-ತಂದೆಯ ಸ್ಮೃತಿಯಲ್ಲಿ ಇರುತ್ತಾರಲ್ಲವೇ. ಭಾರತದಲ್ಲಿ ಲಕ್ಷ್ಮೀ-ನಾರಾಯಣರಿಗೂ ತಾವೇ ತಾಯಿ-ತಂದೆ.......... ರಾಧೆ-ಕೃಷ್ಣನ ಮುಂದೆಯೂ ಹೋಗಿ ಹೇಳುತ್ತಾರೆ ತಾವೇ ತಾಯಿ-ತಂದೆ..... ಈಗ ಅವರಂತೂ ರಾಜಕುಮಾರ-ರಾಜಕುಮಾರಿಯರಾಗಿದ್ದಾರೆ. ಅವರನ್ನು ತಾಯಿ-ತಂದೆ ಎಂದು ಬುದ್ಧಿಹೀನರೂ ಸಹ ಹೇಳುವುದಿಲ್ಲ. ಮನುಷ್ಯರಿಗಂತೂ ಹೇಳುವ ಅಭ್ಯಾಸ ಆಗಿಬಿಟ್ಟಿದೆ ಆದರೆ ಮಾತುಗಳು ಭಿನ್ನವಾಗಿದೆ. ಲಕ್ಷ್ಮೀ-ನಾರಾಯಣರ ಮಕ್ಕಳು ಮಾತ್ರ ಹೇಳುತ್ತಾರೆ - ತಾಯಿ-ತಂದೆ....... ಮನುಷ್ಯರು ತಿಳಿದುಕೊಳ್ಳುತ್ತಾರೆ ಯಾರ ಬಳಿ ಬಹಳ ಹಣವಿದೆಯೋ, ಮಹಲ್-ಮಾಡಿಗಳು ಇದೆಯೋ ಅವರು ಸ್ವರ್ಗದಲ್ಲಿ ಇದ್ದಾರೆಂದು. ಅವರ ಮಕ್ಕಳು ಹೇಳುತ್ತಾರೆ - ನಮ್ಮ ತಾಯಿ-ತಂದೆಯ ಬಳಿ ಬಹಳ ಸುಖವಿದೆ. ಅವಶ್ಯವಾಗಿ ಅವರು ಹಿಂದಿನ ಜನ್ಮದಲ್ಲಿ ಏನಾದರೂ ಒಳ್ಳೆಯ ಕರ್ಮವನ್ನು ಮಾಡಿರುತ್ತಾರೆ. ಒಳ್ಳೆಯದು. ಯಾವುದು ಗಾಯನ ಮಾಡಲ್ಪಟ್ಟಿದೆ ತಾವೇ ತಾಯಿ-ತಂದೆ....... ಪರಮಪಿತ ಪರಮಾತ್ಮ ರಚಯಿತ ಒಬ್ಬರೇ ಆಗಿದ್ದಾರೆ, ಯಾರಿಗೆ ನಾವು ಮಕ್ಕಳು ಆಗಿದ್ದೇವೆಯೋ ಅವರು ನಿರಾಕಾರನಾಗಿದ್ದಾರೆ. ನಾವು ಆತ್ಮಗಳೂ ಸಹ ನಿರಾಕಾರ. ಆದರೆ ನಿರಾಕಾರ ಸೃಷ್ಟಿಯನ್ನು ಹೇಗೆ ರಚಿಸುತ್ತಾರೆ. ತಾಯಿ ಇಲ್ಲದೆ ಸೃಷ್ಟಿಯನ್ನು ರಚಿಸಲಾಗುವುದಿಲ್ಲ. ಸೃಷ್ಟಿಯನ್ನು ರಚಿಸುವುದು ವಿಚಿತ್ರವಾಗಿದೆ. ಪರಮಪಿತ ಪರಮಾತ್ಮ ಹೊಸ ಜಗತ್ತಿನ ಒಬ್ಬರೇ ರಚಯಿತನಾಗಿದ್ದಾರೆ. ಹಳೆಯ ಜಗತ್ತಿನಲ್ಲಿ ಬಂದು ಹೊಸ ಜಗತ್ತನ್ನು ರಚಿಸುತ್ತಾರೆ ಆದರೆ ಹೇಗೆ ರಚಿಸುತ್ತಾರೆ. ಇದು ಬಹಳ ಗುಪ್ತವಿಚಾರವಾಗಿದೆ. ನಿರಾಕಾರ ತಂದೆಗೆ ನಾವು ತಾಯಿ-ತಂದೆ ಎಂದು ಹೇಳುತ್ತೇವೆ. ತಂದೆ ಸ್ವಯಂ ಹೇಳುತ್ತಾರೆ ನಾನು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತೇನೆ ಗರ್ಭದಿಂದ ಮಕ್ಕಳಿಗೆ ಜನ್ಮ ಕೊಡುವ ಮಾತಿಲ್ಲ. ಇಷ್ಟೊಂದು ಮಕ್ಕಳಿಗೆ ಜನ್ಮ ಕೊಡಲು ಆಗುವುದಿಲ್ಲ. ತಂದೆ ಹೇಳುತ್ತಾರೆ ನಾನು ಶರೀರವನ್ನು ಧಾರಣೆ ಮಾಡಿಕೊಂಡು ಇವರ ಮುಖದ ಮೂಲಕ ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತೇನೆ. ಬ್ರಹ್ಮಾ ತಂದೆಯೂ ಆಗಿದ್ದಾರೆ, ಮನುಷ್ಯ ಸೃಷ್ಟಿಯನ್ನು ರಚಿಸುವಂತಹ ತಾಯಿಯೂ ಆಗಿದ್ದಾರೆ. ಇವರ ಮುಖದ ಮೂಲಕ ದತ್ತು ತೆಗೆದುಕೊಳ್ಳುತ್ತೇನೆ. ರೀತಿ ತಂದೆ ಮಾತ್ರ ತೆಗೆದುಕೊಳ್ಳುತ್ತಾರೆ. ಸನ್ಯಾಸಿಗಳು ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಶಿಷ್ಯರು, ಅನುಯಾಯಿಗಳು ಎಂದು ಹೇಳಲಾಗುತ್ತದೆ. ಇಲ್ಲಿ ರಚನೆಯ ವಿಚಾರವಾಗಿದೆ. ಬಾಬಾ ಇವರಲ್ಲಿ ಪ್ರವೇಶ ಮಾಡುತ್ತಾರೆ, ಮುಖವಂಶಾವಳಿಗಳು ಹೇಳುತ್ತಾರೆ ತಾವು ಮಾತಾ-ಪಿತಾ........ ಅಂದಮೇಲೆ ಇವರು ತಾಯಿ ಎಂದು ಸಿದ್ಧವಾಗುತ್ತದೆ. ತಂದೆ ಇವರಲ್ಲಿ ಪ್ರವೇಶ ಮಾಡಿ ರಚಿಸುತ್ತಾರೆ. ಪ್ರಜಾಪಿತ ವೃದ್ಧನೂ ಆದರು ಹಾಗೂ ವೃದ್ಧ ತಾಯಿಯೂ ಸಹ ಆದರು. ವೃದ್ದರೇ ಬೇಕು ತಾನೇ. ಈಗ ಮಕ್ಕಳು ಮಾತಾ-ಪಿತರನ್ನು ನೆನಪು ಮಾಡಬೇಕು ಇವರ ಆಸ್ತಿ ಏನೂ ಇಲ್ಲ. ತಾವು ವಾರಸುಧಾರರಾಗುತ್ತೀರಿ, ಆದ್ದರಿಂದ ಇವರಿಗೆ ಬಾಪ್ದಾದಾ ಎಂದು ಹೇಳಲಾಗುತ್ತದೆ. ತಮಗೆ ಪ್ರಜಾಪಿತ ಬ್ರಹ್ಮನಿಂದ ಆಸ್ತಿ ಸಿಗುವುದಿಲ್ಲ. ಬ್ರಹ್ಮಾರವರೂ ಸಹ ಅವರಿಂದ ಆಸ್ತಿಯನ್ನು ಪಡೆಯುತ್ತಾರೆ. ಇವರಿಗೆ ಅಣ್ಣ ಹಾಗೂ ತಾಯಿ ಎಂದೂ ಸಹ ಹೇಳಲಾಗುತ್ತದೆ. ಇಲ್ಲವೆಂದರೆ ಮಾತಾ-ಪಿತರು ಹೇಗೆ ಸಿದ್ಧವಾಗುತ್ತಾರೆ. ಮಾತಾ-ಪಿತರಿಲ್ಲದೆ ಮಕ್ಕಳು ಹೇಗೆ ಆಗುತ್ತಾರೆ ಎಂಬುದು ಬಹಳ ಗುಹ್ಯವಾದ ತಿಳಿದುಕೊಳ್ಳುವ ಹಾಗೂ ಸ್ಮರಣೆ ಮಾಡುವ ವಿಚಾರವಾಗಿದೆ. ಬಾಬಾ ತಾವು ತಂದೆಯಾಗಿದ್ದೀರಿ, ತಾಯಿಯ ಮೂಲಕ ನಾವು ಜನ್ಮ ಪಡೆದಿದ್ದೇವೆ, ಅವಶ್ಯವಾಗಿ ಆಸ್ತಿಯೂ ಸಹ ನೆನಪು ಬರುತ್ತದೆ. ತಂದೆಯನ್ನೇ ನೆನಪು ಮಾಡಬೇಕು. ಜ್ಞಾನದಿಂದ ತಾವು ಅರ್ಥ ಮಾಡಿಕೊಳ್ಳಬಹುದು ತಂದೆ ಪತಿತ ಜಗತ್ತಿನಲ್ಲಿ ಹೇಗೆ ಬರುತ್ತಾರೆ. ಹೇಳುತ್ತಾರೆ - ಯಾರಲ್ಲಿ ನಾನು ಪ್ರವೇಶ ಮಾಡುತ್ತೇನೆಯೋ ಇವರು ನನ್ನ ಮಗುವೂ ಆಗಿದ್ದಾರೆ, ನಿಮ್ಮ ತಂದೆಯೂ ಆಗಿದ್ದಾರೆ, ತಾಯಿಯೂ ಆಗಿದ್ದಾರೆ, ತಾವು ಮಕ್ಕಳಾಗಿದ್ದೀರಿ. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿ ಸಿಗುತ್ತದೆ. ತಾಯಿಯನ್ನು ನೆನಪು ಮಾಡುವುದರಿಂದ ಆಸ್ತಿ ಸಿಗುವುದಿಲ್ಲ. ನಿರಂತರ ತಂದೆಯನ್ನು ನೆನಪು ಮಾಡಬೇಕು ಬಾಕಿ ಶರೀರವನ್ನು ಮರೆಯಬೇಕು. ಜ್ಞಾನದ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ.

ತಂದೆ ಹಳೆಯ ಜಗತ್ತಿನಲ್ಲಿ ಬಂದು ಹೊಸ ಜಗತ್ತನ್ನು ರಚಿಸುತ್ತಾರೆ. ಹಳೆಯದನ್ನು ಸಮಾಪ್ತಿ ಮಾಡುತ್ತಾರೆ. ಇಲ್ಲವಾದರೆ ಸಮಾಪ್ತಿ ಯಾರು ಮಾಡುತ್ತಾರೆ? ಗಾಯನವಿದೆ - ಶಂಕರನ ಮೂಲಕ ಹಳೆಯ ಜಗತ್ತಿನ ವಿನಾಶ-ಇದು ಡ್ರಾಮಾದಲ್ಲಿ ನಿಗದಿಯಾಗಿದೆ. ಆದ್ದರಿಂದ ಗಾಯನದಲ್ಲಿಯೂ ಬರುತ್ತದೆ. ನಮಗಾಗಿ ಹೊಸ ರಾಜಧಾನಿಯು ಆಗುತ್ತಿದೆ ಎಂಬುದು ತಮಗೆ ಗೊತ್ತಿದೆ. ವಿನಾಶಕ್ಕೆ ಪೂರ್ಣ ತಯಾರಿಗಳು ಆಗುತ್ತಿವೆ. ತಾವು ಅನೇಕರು ರಾಜ್ಯ ಪದವಿಯನ್ನು ಪಡೆಯುತ್ತಿದ್ದೀರಿ. ಇದನ್ನು ಅಂಧಶ್ರದ್ದೆಯಿಂದ ಒಪ್ಪಿಕೊಂಡಿರುವ ವಿಚಾರವಲ್ಲ. ರಾಮನ ಸೀತೆಯನ್ನು ಕದ್ದುಕೊಂಡು ಹೋದರು ಎಂದು ಯಾರೋ ಹೇಳಿದರು, ಇದು ಸತ್ಯ ಎಂದು ಎಲ್ಲರೂ ನಂಬಿದರು. ಯಾವುದೇ ಮಾತು ಅರ್ಥವಾಗದಿದ್ದರೆ ಅರ್ಥಮಾಡಿಕೊಳ್ಳಲು ಪ್ರಯತ್ನ ಮಾಡಬೇಕು. ಇಲ್ಲವಾದರೆ ಬುದ್ದಿಹೀನರಾಗಿಯೇ ಇರಬೇಕಾಗುತ್ತದೆ. ಭಕ್ತಿ ಮಾರ್ಗದಲ್ಲಿ ಅಲ್ಪಕಾಲದ ಸುಖ ಸಿಗುತ್ತದೆ. ಅದರ ಫಲ ಅದೇ ಜನ್ಮದಲ್ಲಿ ಸಿಗುತ್ತದೆ ಅಥವಾ ಮುಂದಿನ ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ತೀರ್ಥ ಯಾತ್ರೆ ಮಾಡುತ್ತಾರೆ, ಸ್ವಲ್ಪ ಸಮಯ ಪವಿತ್ರವಾಗಿರುತ್ತಾರೆ, ಪಾಪವನ್ನು ಮಾಡುವುದಿಲ್ಲ. ದಾನ ಪುಣ್ಯವನ್ನೂ ಸಹ ಮಾಡುತ್ತಾರೆ, ಇದಕ್ಕೆ ಅಲ್ಪ ಕಾಲದ ಸುಖ ಎಂದು ಹೇಳಲಾಗುತ್ತದೆ. ಇದನ್ನು ತಾವು ಮಕ್ಕಳೇ ಅರ್ಥ ಮಾಡಿಕೊಳ್ಳುತ್ತೀರಿ ಏಕೆಂದರೆ ತಾವು ಮಂಗನಿಂದ ಮಂದಿರಕ್ಕೆ ಯೋಗ್ಯರಾಗುತ್ತಿದ್ದೀರಿ. ಸತ್ಯಯುಗದಲ್ಲಿ ತಾವು ಪಾರಸ ಬುದ್ಧಿಯವರಾಗಿದ್ದಿರಿ ಏಕೆಂದರೆ ಪಾರಸನಾಥ ಪಾರಸನಾಥನಿಯರ ರಾಜ್ಯವಿತ್ತು. ಚಿನ್ನದ ಮಹಲ್ ಇತ್ತು. ಈಗ ಬರೀ ಕಲ್ಲುಗಳಿವೆ. ಪಾರಸಬುದ್ಧಿಯಿಂದ ಕಲ್ಲು ಬುದ್ಧಿಯವರನ್ನಾಗಿ ಯಾರು ಮಾಡುತ್ತಾರೆ? 5 ವಿಕಾರಗಳೆಂಬ ರಾವಣ. ಯಾವಾಗ ಎಲ್ಲರೂ ಕಲ್ಲುಬುದ್ಧಿಯವರಾಗುತ್ತಾರೆ ಮತ್ತೆ ಚಿನ್ನದ ಬುದ್ಧಿಯವರನ್ನಾಗಿ ಮಾಡುವ ತಂದೆ ಬರುತ್ತಾರೆ. ಎಷ್ಟು ಸಹಜವಾಗಿ ತಿಳಿಸುತ್ತಾರೆ. ಬೀಜ ಹಾಗೂ ವೃಕ್ಷ ಬಾಕಿ ವಿಸ್ತಾರವಾಗಿ ತಿಳಿಸುತ್ತಿದ್ದಾರೆ, ತಿಳಿಸುತ್ತಲೇ ಇರುತ್ತಾರೆ. ಸಂಕ್ಷಿಪ್ತದಲ್ಲಿ ಹೇಳುತ್ತಾರೆ - ತಂದೆಯನ್ನು ನೆನಪು ಮಾಡಿ ಅವರಿಂದ ಆಸ್ತಿ ಸಿಗುತ್ತದೆ. ತಾಯಿಯನ್ನು ನೆನಪು ಮಾಡುವ ಅವಶ್ಯಕತೆ ಇಲ್ಲ. ತಂದೆಯು ಹೇಳುತ್ತಾರೆ - ಮಕ್ಕಳೇ ನನ್ನನ್ನೇ ನೆನಪು ಮಾಡಿ ಅಂದಮೇಲೆ ಮಕ್ಕಳು ತಾಯಿಯಿಂದ ಜನ್ಮ ಪಡೆದಿರಬಹುದು? ತಂದೆಯಿಂದ ಆಸ್ತಿಯನ್ನು ಪಡೆಯಲು ಜನ್ಮ ಪಡೆದಿರುವುದು. ತಾಯಿಯನ್ನೂ ಬಿಡಿ, ಎಲ್ಲಾ ದೇಹಧಾರಿಗಳನ್ನೂ ಬಿಡಿ ಏಕೆಂದರೆ ಈಗ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ನಾವು ಆತ್ಮಗಳು ಆತ್ಮೀಯ ತಂದೆಯ ಮಕ್ಕಳಾಗಿದ್ದೇವೆ ಹಾಗೂ ಶಾರೀರಿಕ ತಾಯಿ-ತಂದೆಗೂ ಸಹ ಮಕ್ಕಳಾಗಿದ್ದೇವೆ ಎಂಬುದು ತಾವು ಮಕ್ಕಳಿಗೆ ಅರ್ಥವಾಗಿದೆ. ಬೇಹದ್ದಿನ ತಂದೆ ಹೊಸ ಸೃಷ್ಟಿಯನ್ನು ರಚಿಸುತ್ತಾರೆ. ಭಾರತ ಸ್ವರ್ಗವಾಗಿತ್ತು ತಾನೇ. ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು. ಈಗ ಇಲ್ಲ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ತಾವು ಪ್ರತಿಯೊಂದು ಜನ್ಮದಲ್ಲಿಯೂ ಲೌಕಿಕದ ಆಸ್ತಿಯನ್ನು ಪಡೆಯುತ್ತಾ ಬಂದಿದ್ದೀರಿ, ಅದು ನರಕದಲ್ಲಿ ಇರುವ ಕ್ಷಣಿಕದ ಆಸ್ತಿ. ಸ್ವರ್ಗದಲ್ಲಿಯೂ ಕ್ಷಣಿಕದ [ಲೌಕಿಕದ] ಆಸ್ತಿ ಎಂದು ಹೇಳುವುದಿಲ್ಲ. ಅದು ಬೇಹದ್ದಿನ ಆಸ್ತಿಯಾಗಿದೆ ಏಕೆಂದರೆ ಬೇಹದ್ದಿನ ಅಂದರೆ ಅರ್ಥಾತ್ ಇಡೀ ಸೃಷ್ಟಿಗೆ ಮಾಲೀಕರು. ಆಗ ಬೇರೆ ಯಾವುದೇ ಧರ್ಮವಿರುವುದಿಲ್ಲ. ದ್ವಾಪರಯುಗದಿಂದ ಕ್ಷಣಿಕದ ಆಸ್ತಿ ಶುರುವಾಗುತ್ತದೆ. ಸತ್ಯಯುಗದಲ್ಲಿ ಬೇಹದ್ದಿನ ಆಸ್ತಿ, ತಾವು ಪ್ರಾಲಬ್ಧವನ್ನು ಭೋಗಿಸುತ್ತೀರಿ ಅಲ್ಲಿ ತಮಗೆ ಬೇಹದ್ದಿನ ರಾಜ್ಯ ಇರುತ್ತದೆ. ಯಥಾ ರಾಜಾ-ರಾಣಿ ತಥಾ ಪ್ರಜೆ. ಪ್ರಜೆಗಳೂ ಹೇಳುತ್ತಾರೆ ನಾವು ಇಡೀ ಸೃಷ್ಟಿಗೆ ಮಾಲೀಕರು. ಈಗ ಪ್ರಜೆಗಳು ನಾವು ಇಡೀ ಸೃಷ್ಟಿಗೆ ಮಾಲೀಕರು ಎಂದು ಹೇಳುವುದಿಲ್ಲ. ಈಗ ಎಲ್ಲವೂ ಸೀಮಿತವಾಗಿದೆ. ಅವರು ಹೇಳುತ್ತಾರೆ ನಮ್ಮ ಕಡೆ ನೀರು ಬರಬಾರದು, ಇದು ನಮ್ಮ ಜಾಗ. ಅಲ್ಲಿ ಪ್ರಜೆಗಳು ಹೇಳುತ್ತಾರೆ - ನಾವು ಇಡೀ ವಿಶ್ವದ ಮಾಲೀಕರು ಎಂದು. ನಮ್ಮ ಮಹಾರಾಜಾ-ಮಹಾರಾಣಿ ಲಕ್ಷ್ಮೀ-ನಾರಾಯಣರೂ ಸಹ ವಿಶ್ವದ ಮಾಲೀಕರು. ಇದನ್ನು ನಾವು ಈಗ ತಿಳಿದುಕೊಳ್ಳುತ್ತೇವೆ ಅಲ್ಲಿ ಒಂದೇ ರಾಜ್ಯವಿರುತ್ತದೆ. ಅದು ಬೇಹದ್ದಿನ ರಾಜ್ಯವಾಗಿದೆ. ಭಾರತ ಏನಾಗಿತ್ತು ಎಂಬ ವಿಚಾರ ಯಾರ ಬುದ್ಧಿಯಲ್ಲೂ ಇಲ್ಲ. ತಾವು ಮಕ್ಕಳಿಗೆ ಈಗ ಶಿಕ್ಷಣ ಸಿಗುತ್ತಿದೆ - ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಿರಿ. ನಾವು ಅವಶ್ಯವಾಗಿ ಪಡೆಯುತ್ತೇವೆ ಎಂದು ನಾವು ಹೇಳುತ್ತೇವೆ. ಬೇಹದ್ದಿನ ತಂದೆ ಸ್ವರ್ಗದ ರಚಯಿತನಾಗಿದ್ದಾರೆ. ಗಾಯನವಿದೆ - 21 ಪೀಳಿಗೆಗಳ ರಾಜ್ಯಭಾಗ್ಯ. ಪೀಳಿಗೆ ಎಂದು ಏಕೆ ಹೇಳಲಾಗುತ್ತದೆ? ಏಕೆಂದರೆ ಅಲ್ಲಿ ವೃದ್ಧರಾಗಿ ಸಾಯುತ್ತಾರೆ. ಅಲ್ಲಿ ಅಕಾಲ ಮೃತ್ಯು ಆಗುವುದಿಲ್ಲ. ಮಾತೆಯರು ಎಂದೂ ಸಹ ವಿಧವೆಯರಾಗುವುದಿಲ್ಲ. ಅಳುವುದು, ದುಃಖ ಪಡುವುದು ಇರುವುದಿಲ್ಲ. ಇಲ್ಲಿ ಎಷ್ಟೊಂದು ಅಳುತ್ತಾರೆ. ಅಲ್ಲಿ ಮಕ್ಕಳು ಅಳುವ ಅವಶ್ಯಕತೆ ಇರುವುದಿಲ್ಲ. ಇಲ್ಲಿ ಮಕ್ಕಳು ಜನ್ಮ ಪಡೆದಾಗ ಅವರನ್ನು ಅಳಿಸುತ್ತಾರೆ. ಅಲ್ಲಿ ಇಂತಹ ಯಾವುದೇ ಮಾತಿಲ್ಲ. ಇಲ್ಲಿ ಎಲ್ಲಾ ಮಕ್ಕಳು ತಿಳಿಯುತ್ತಾರೆ ನಾವೀಗ ಬೇಹದ್ದಿನ ತಂದೆಯಿಂದ ಕಲ್ಪದ ಮೊದಲಿನ ಹಾಗೆ ಆಸ್ತಿಯನ್ನು ಪಡೆಯುತ್ತಿದ್ದೇವೆ. 84 ಜನ್ಮಗಳು ಪೂರ್ಣವಾಯಿತು, ಈಗ ಹಿಂತಿರುಗಬೇಕು. ನಿರಂತರವಾಗಿ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡುವುದರಿಂದ ವಿಕರ್ಮವೂ ವಿನಾಶವಾಗುತ್ತದೆ. ಮನ್ಮಾನಭವದ ಅರ್ಥ ಎಷ್ಟು ಸಹಜವಾಗಿದೆ. ಗೀತೆ ಭಲೆ ಸುಳ್ಳು ಆಗಿದೆ ಆದರೆ ಅದರಲ್ಲಿ ಸ್ವಲ್ಪವಾದರೂ ಸತ್ಯವಿದೆ. ತಾವು ನಾನು ತಂದೆಯನ್ನು ನೆನಪು ಮಾಡಿ, ನನ್ನನ್ನು ನೆನಪು ಮಾಡಿ ಎಂದು ಕೃಷ್ಣ ಹೇಳುವುದಿಲ್ಲ. ತಾವು ನನ್ನ ಬಳಿ ಬರಬೇಕಾಗಿದೆ. ಪರಮಾತ್ಮ ಸರ್ವ ಆತ್ಮಗಳಿಗೂ ಈಗ ಹೇಳುತ್ತಾರೆ - ತಾವು ಎಲ್ಲಾ ಆತ್ಮಗಳು ಸೊಳ್ಳೆಗಳ ಹಾಗೆ ಬರಬೇಕಾಗಿದೆ. ಅಂದಮೇಲೆ ಆತ್ಮ ಅವಶ್ಯವಾಗಿ ಆತ್ಮ ಪರಮಾತ್ಮ ತಂದೆಯನ್ನು ಅನುಸರಿಸುತ್ತದೆ. ಕೃಷ್ಣ ದೇಹಧಾರಿ ಆಗಿದ್ದಾನೆ, ಅವರು ರೀತಿ ಹೇಳಲು ಸಾಧ್ಯವಿಲ್ಲ. ನಾನು ಆತ್ಮನನ್ನು ನೆನಪು ಮಾಡಿ ಎಂದು ಕೃಷ್ಣ ಹೇಳುವುದಿಲ್ಲ., ಅವನ ಹೆಸರೇ ಕೃಷ್ಣ ಎಂದಾಗಿದೆ. ಯಾವ ಆತ್ಮನೂ ಹೇಳಲು ಸಾಧ್ಯವಿಲ್ಲ, ಆತ್ಮಗಳೆಲ್ಲರೂ ಸಹೋದರ-ಸಹೋದರರಾಗಿದ್ದಾರೆ. ಇದಂತೂ ತಂದೆ ಹೇಳುತ್ತಾರೆ ನಾನು ನಿರಾಕಾರನಾಗಿದ್ದೇನೆ. ನಾನು ಪರಮಾತ್ಮನ ಹೆಸರು ಶಿವ. ಕೃಷ್ಣ ಹೇಗೆ ಹೇಳುತ್ತಾರೆ ಅವನಿಗೆ ಶರೀರವಿದೆ. ಶಿವಬಾಬಾರವರಿಗೆ ತಮ್ಮ ಶರೀರವಿಲ್ಲ. ಶಿವಬಾಬಾ ಹೇಳುತ್ತಾರೆ ಮಕ್ಕಳೇ ತಮಗೂ ಸಹ ಮೊದಲು ತಮ್ಮ ಶರೀರವಿರಲಿಲ್ಲ. ತಾವು ಆತ್ಮಗಳು ನಿರಾಕಾರನಾಗಿದ್ದಿರಿ, ನಂತರ ಶರೀರವನ್ನು ಪಡೆದಿರಿ. ಈಗ ತಮಗೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ಸ್ಮೃತಿ ಬಂದಿದೆ - ತಂದೆ ಸೃಷ್ಟಿಯನ್ನು ಹೇಗೆ, ಯಾವಾಗ, ಏಕೆ ರಚಿಸುತ್ತಾರೆ? ಸೃಷ್ಟಿಯಂತೂ ಇದೆ ತಾನೇ. ಬ್ರಹ್ಮಾರವರ ಮೂಲಕ ಹೊಸ ಸೃಷ್ಟಿಯ ರಚನೆ ಮಾಡುತ್ತಾರೆ ಎಂಬ ಗಾಯನವಿದೆ. ಅಂದಮೇಲೆ ಅವಶ್ಯವಾಗಿ ಹಳೆಯ ಸೃಷ್ಟಿಯಿಂದಲೇ ಹೊಸ ಸೃಷ್ಟಿಯ ರಚನೆಯನ್ನು ಮಾಡಿರಬಹುದು. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲಾಯಿತು ಎಂದೂ ಸಹ ಹೇಳುತ್ತಾರೆ. ತಂದೆಯು ಹೇಳುತ್ತಾರೆ ನಾನು ತಮ್ಮನ್ನು ವಿದ್ಯೆಯಿಂದ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ. ಪೂಜ್ಯ ದೇವತೆಗಳಾಗಿದ್ದಿರಿ, ನಂತರ ಪೂಜಾರಿಗಳಾಗಿದ್ದೀರಿ. ಮನುಷ್ಯರು 84 ಜನ್ಮಗಳನ್ನು ಹೇಗೆ ಪಡೆಯುವುದು ಎಂಬುದನ್ನು ತಿಳಿದಿಲ್ಲ. ಎಲ್ಲರೂ 84 ಜನ್ಮಗಳನ್ನು ಪಡೆಯುತ್ತಾರೇನು? ಸೃಷ್ಟಿಯಂತೂ ವೃದ್ಧಿ ಆಗುತ್ತಿರುತ್ತದೆ ಅಂದಮೇಲೆ ಎಲ್ಲರೂ ಹೇಗೆ 84 ಜನ್ಮಗಳನ್ನು ಪಡೆಯುತ್ತಾರೆ! ಖಂಡಿತ ಯಾರು ಕೊನೆಯಲ್ಲಿ ಬರುತ್ತಾರೆ ಅವರ ಜನ್ಮಗಳು ಕಡಿಮೆ ಇರುತ್ತದೆ. 25-50 ವರ್ಷದಲ್ಲಿ 84 ಜನ್ಮಗಳನ್ನು ಹೇಗೆ ಪಡೆಯುತ್ತಾರೆ? ಇದು ಸ್ವದರ್ಶನಚಕ್ರವಾಗಿದೆ, ಅವರು ಸ್ವದರ್ಶನಚಕ್ರವನ್ನು ಒಂದು ಶಸ್ತ್ರದ ರೂಪವಾಗಿ ಮಾಡಿದ್ದಾರೆ. ಈಗ ತಾವು ಆತ್ಮಗಳಿಗೆ 84 ಜನ್ಮಗಳನ್ನು ಹೇಗೆ-ಹೇಗೆ ಅನುಭವಿಸುತ್ತೇವೆ ಎಂಬುದು ಸ್ಮೃತಿ ಬಂದಿದೆ. ಈಗ ಚಕ್ರ ಪೂರ್ಣ ಆಗುತ್ತದೆ ಮತ್ತೆ ಡ್ರಾಮಾ ಪುನಾರಾವರ್ತನೆ ಆಗಬೇಕು. ಮೊಟ್ಟ ಮೊದಲು ಆದಿ ಸನಾತನ ದೇವೀ-ದೇವತಾ ಧರ್ಮ ಬೇಕು, ಅದು ಈಗ ಪ್ರಾಯಃಲೋಪವಾಗಿದೆ.

ಹೇ! ಗಾಡ್ ಫಾದರ್ ದಯೆ ತೋರಿಸಿ ಎಂದು ಮನುಷ್ಯರು ಹೇಳುತ್ತಾರೆ. ತಂದೆ ಹೇಳುತ್ತಾರೆ ಒಳ್ಳೆಯದು ನಿಮ್ಮನ್ನು ದುಃಖದಿಂದ ಬಿಡುಗಡೆ ಮಾಡಿ ಸುಖಿಯನ್ನಾಗಿ ಮಾಡುತ್ತೇನೆ. ಸರ್ವರನ್ನು ಸುಖಿಯನ್ನಾಗಿ ಮಾಡುವುದೇ ತಂದೆಯ ಕೆಲಸವಾಗಿದೆ. ಆದ್ದರಿಂದ ನಾನು ಕಲ್ಪ-ಕಲ್ಪದಲ್ಲೂ ಬರುತ್ತೇನೆ, ಬಂದು ಭಾರತವನ್ನು ವಜ್ರ ಸಮಾನವಾಗಿ ಮಾಡುತ್ತೇನೆ. ಬಹಳ ಸುಖಿಯನ್ನಾಗಿ ಮಾಡುತ್ತೇನೆ. ಬಾಕಿ ಎಲ್ಲರನ್ನು ಮುಕ್ತಿಧಾಮಕ್ಕೆ ಕಳುಹಿಸುತ್ತೇನೆ. ಭಕ್ತರು ಭಗವಂತನನ್ನು ಮಿಲನ ಮಾಡಲು ಇಚ್ಛಿಸುತ್ತಾರೆ ಏಕೆಂದರೆ ಸುಖದ ವಿಚಾರದಲ್ಲಿ ಕಾಗವಿಷ್ಟ ಸಮಾನ ಎಂದು ಹೇಳಿಬಿಟ್ಟಿದ್ದಾರೆ ಹಾಗೂ ಇನ್ನೊಬ್ಬರು ಹೇಳುತ್ತಾರೆ ಡ್ರಾಮಾದ ಆಟದಲ್ಲಿ ಮತ್ತೆ ಬರಲೇಬಾರದು ಮೋಕ್ಷವನ್ನು ಪಡೆಯಬೇಕು. ಈಗ ಮೋಕ್ಷವಂತೂ ಯಾರಿಗೂ ಸಿಗುವುದಿಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ಡ್ರಾಮಾ ಆಗಿದೆ. ಇಡೀ ಸೃಷ್ಟಿಯ ಇತಿಹಾಸ-ಭೂಗೋಳವನ್ನು ಹೇಗೆ ಪುನರಾವರ್ತನೆ ಆಗುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದಕ್ಕೆ ಸ್ವದರ್ಶನಚಕ್ರ ಎಂದು ಹೇಳಲಾಗುತ್ತದೆ. ಸ್ವದರ್ಶನಚಕ್ರದಿಂದ ಎಲ್ಲರ ಶಿರವನ್ನು ತುಂಡರಿಸಿದರು ಎಂದು ತೋರಿಸುತ್ತಾರೆ, ಕಂಸ ವಧೆಯ ನಾಟಕವನ್ನು ತೋರಿಸುತ್ತಾರೆ. ರೀತಿ ಏನೂ ಇಲ್ಲ. ಇಲ್ಲಿ ಹಿಂಸೆಯು ಮಾತೂ ಸ್ವಲ್ಪವೂ ಇಲ್ಲವಾಗಿದೆ. ಇದು ವಿದ್ಯೆಯಾಗಿದೆ. ಓದಬೇಕು, ತಂದೆಯಿಂದ ಆಸ್ತಿ ಪಡೆಯಬೇಕು. ತಂದೆಯಿಂದ ಆಸ್ತಿ ಪಡೆಯಲು ಯಾರನ್ನಾದರೂ ಕೊಲೆ ಮಾಡುತ್ತಾರೇನು? ಅದು ಲೌಕಿಕದ ಅಸ್ತಿ, ಇದು ಪಾರಲೌಕಿಕ ತಂದೆಯಿಂದ ಪಾರಲೌಕಿಕ ಆಸ್ತಿಯನ್ನು [ಅಪಾರವಾದ] ಪಡೆಯಬೇಕು. ಗೀತೆಯಲ್ಲಿ ಯುದ್ಧ ಇತ್ಯಾದಿಯ ಎಷ್ಟೊಂದು ವಿಚಾರಗಳನ್ನು ಬರೆದಿದ್ದಾರೆ. ರೀತಿ ಏನೂ ಇಲ್ಲ. ಪಾಂಡವರ ಯುದ್ಧ ವಾಸ್ತವಿಕವಾಗಿ ಯಾರ ಜೊತೆಯೂ ಇಲ್ಲ. ಇದು ಯೋಗಬಲದಿಂದ ತಂದೆಯಿಂದ ತಾವು ಮಕ್ಕಳು ಆಸ್ತಿ ಪಡೆಯುತ್ತಿದ್ದೀರಿ ಹೊಸ ಜಗತ್ತಿಗಾಗಿ. ಇದರಲ್ಲಿ ಯುದ್ಧದ ಯಾವುದೇ ಮಾತಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಯಿಂದ 21 ಪೀಳಿಗೆಗಳ ಆಸ್ತಿಯನ್ನು ಪಡೆಯಲು ನಿರಂತರವಾಗಿ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡುವ ಪುರುಷಾರ್ಥವನ್ನು ಮಾಡಬೇಕು. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು.

2. ಬುದ್ಧಿಯಲ್ಲಿ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಬೇಕು. ನಾವು ಪೂಜ್ಯರಾಗಿದ್ದೆವು ನಂತರ ಪೂಜಾರಿಗಳಾದೆವು, 84 ಜನ್ಮಗಳ ಚಕ್ರ ಪೂರ್ಣ ಮಾಡಿದೆವು. ಮತ್ತೆ ಡ್ರಾಮಾ ಪುನಾರಾವರ್ತನೆ ಆಗಬೇಕು, ನಾವೇ ಪೂಜಾರಿಗಳಿಂದ ಪೂಜ್ಯರಾಗಬೇಕು - ಸ್ಮೃತಿಯೇ ಸ್ವದರ್ಶನ ಚಕ್ರವಾಗಿದೆ.

ವರದಾನ:

ಸಮಾನತೆಯ ಮುಖಾಂತರ ಸಮೀಪತೆಯ ಸೀಟ್ ಪಡೆದು ಫಸ್ಟ್ ಡಿವಿಶನ್ನಲ್ಲಿ ಬರುವಂತಹ ವಿಜಯೀ ರತ್ನ ಭವ.
ಸಮಯದ ಸಮೀಪತೆಯ ಜೊತೆ-ಜೊತೆ ಈಗ ಸ್ವಯಂನ್ನು ತಂದೆ ಸಮಾನ ಮಾಡಿಕೊಳ್ಳಿ. ಸಂಕಲ್ಪ, ಮಾತು, ಕರ್ಮ ಸಂಸ್ಕಾರ ಮತ್ತು ಸೇವೆ ಎಲ್ಲದರಲ್ಲಿಯೂ ತಂದೆಯ ತರಹ ಸಮಾನರಾಗುವುದು ರ್ಥಾತ್ ಸಮೀಪ ಬರುವುದು. ಪ್ರತಿ ಸಂಕಲ್ಪದಲ್ಲಿ ತಂದೆಯ ಜೊತೆಯ, ಸಹಯೋಗದ ಸ್ನೇಹದ ಅನುಭವ ಮಾಡಿ. ಸದಾ ತಂದೆಯ ಜೊತೆ ಮತ್ತು ಕೈಯಲ್ಲಿ ಕೈನ ಅನುಭೂತಿ ಮಾಡಿ. ಆಗ ಫಸ್ಟ್ ಡಿವಿಜನ್ ನಲ್ಲಿ ಬಂದು ಬಿಡುವಿರಿ. ನಿರಂತರ ನೆನಪು ಮತ್ತು ಸಂಪರ್ಣ ಸ್ನೇಹ ಒಬ್ಬ ತಂದೆಯ ಜೊತೆ ಇದ್ದಾಗ ವಿಜಯ ಮಾಲೆಯ ವಿಜಯೀ ರತ್ನ ಆಗಿ ಬಿಡುವಿರಿ. ಈಗಲೂ ಚಾನ್ಸ್ ಇದೆ, ಟೂ ಲೇಟ್ನ ಬೋರ್ಡ್ ಇನ್ನು ಹಾಕಿಲ್ಲ.

ಸ್ಲೋಗನ್:

ಸುಖದಾತ ಆಗಿ ಅನೇಕ ಆತ್ಮರನ್ನು ದುಃಖ ಅಶಾಂತಿಯಿಂದ ಮುಕ್ತ ಮಾಡುವಂತಹ ಸೇವೆ ಮಾಡುವುದೇ ಸುಖದೇವಾ ಆಗುವುದಾಗಿದೆ.

 Download PDF

Post a Comment

0 Comments