Header Ads Widget

Header Ads

KANNADA MURLI 01.02.23

 

01/02/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ನಿಮ್ಮ ದೃಷ್ಟಿಯು ಯಾವುದೇ ದೇಹಧಾರಿಗಳ ಕಡೆಗೆ ಹೋಗಬಾರದು ಏಕೆಂದರೆ ನಿಮಗೆ ವಿದ್ಯೆಯನ್ನು ಓದಿಸುವಂತಹವರು ಸ್ವಯಂ ನಿರಾಕಾರ ಜ್ಞಾನಸಾಗರ ತಂದೆಯಾಗಿದ್ದಾರೆ

ಪ್ರಶ್ನೆ:

ಶ್ರೇಷ್ಠ ಪದವಿಗೋಸ್ಕರ ಯಾವ ಒಂದು ಪರಿಶ್ರಮವನ್ನು ಗೃಹಸ್ಥ ವ್ಯವಹಾರದಲ್ಲಿದ್ದರೂ ಮಾಡಬೇಕು?

ಉತ್ತರ:

ಗೃಹಸ್ಥ ವ್ಯವಹಾರದಲ್ಲಿದ್ದರೂ ಕೇವಲ ಜ್ಞಾನದ ಕಟಾರಿಯನ್ನು ನಡೆಸಬೇಕು. ಸ್ವದರ್ಶನ ಚಕ್ರಧಾರಿಗಳಾಗಿ ಮತ್ತು ಶಂಖಧ್ವನಿಯನ್ನು ಮಾಡಬೇಕು. ನಡೆಯುತ್ತಾ-ತಿರುಗಾಡುತ್ತಾ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಮತ್ತು ಅದೇ ಸುಖದಲ್ಲಿದ್ದಾಗ ಶ್ರೇಷ್ಠ ಪದವಿಯು ಸಿಗುತ್ತದೆ - ಇದೇ ಪರಿಶ್ರಮವಾಗಿದೆ.

ಪ್ರಶ್ನೆ:

ಯೋಗದಿಂದ ನಿಮಗೆ ಯಾವ ಡಬಲ್ ಲಾಭ ಸಿಗುತ್ತದೆ?

ಉತ್ತರ:

1) ಸಮಯದಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ. 2) ಮಾಡಿರುವ ವಿಕರ್ಮ ವಿನಾಶವಾಗುತ್ತದೆ.

ಗೀತೆ:  ಮಾತೆ ನೀನು ಎಲ್ಲರ ಭಾಗ್ಯವಿಧಾತೆ......

ಓಂ ಶಾಂತಿ. ಸತ್ಸಂಗ ಹಾಗೂ ಕಾಲೇಜು ಮುಂತಾದ ಕಡೆ ಯಾರು ಓದಿಸುತ್ತಾರೆ ಎನ್ನುವುದನ್ನು ನೋಡಬಹುದು. ಶರೀರದ ಮೇಲೆ ದೃಷ್ಟಿ ಬೀಳುತ್ತದೆ. ಕಾಲೇಜಿನಲ್ಲಿ ಇಂತಹ ಪ್ರೋಫೆಸರುಗಳು ಓದಿಸುತ್ತಾರೆ ಎಂದು ಹೇಳುತ್ತಾರೆ. ಸತ್ಸಂಗದಲ್ಲಿ ಇಂತಹ ವಿದ್ವಾಂಸರು ತಿಳಿಸುತ್ತಾರೆ ಎಂದು ಹೇಳುತ್ತಾರೆ. ಮನುಷ್ಯರ ಮೇಲೆಯೇ ದೃಷ್ಟಿಯು ಹೋಗುತ್ತದೆ ಆದರೆ ಇಲ್ಲಿ ನಿಮ್ಮ ದೃಷ್ಟಿಯು ಯಾವುದೇ ದೇಹಧಾರಿಗಳ ಕಡೆಗೆ ಹೋಗುವುದಿಲ್ಲ. ನಿಮ್ಮ ಬುದ್ಧಿಯಲ್ಲಿ ನಿರಾಕಾರ ಪರಮಪಿತ ಪರಮಾತ್ಮ ತನುವಿನ ಮುಖಾಂತರ ತಿಳಿಸುತ್ತಾರೆ ಎನ್ನುವುದಿದೆ. ತಂದೆ-ತಾಯಿ ಮತ್ತು ಬಾಪ್ದಾದಾರವರ ಕಡೆಗೆ ಬುದ್ಧಿಯು ಹೋಗುತ್ತದೆ. ಜ್ಞಾನಸಾಗರ ತಂದೆಯ ಮುಖಾಂತರ ಕೇಳಿರುವ ಜ್ಞಾನವನ್ನು ತಿಳಿಸುತ್ತೇವೆ ಎಂದು ಮಕ್ಕಳು ಹೇಳುತ್ತಾರೆ ಇದರಲ್ಲಿ ಅಂತರವಾಯಿತಲ್ಲವೇ. ಸತ್ಸಂಗದಲ್ಲಿ ಏನೇ ಕೇಳಿದರೂ ಇದನ್ನು ಇಂತಹವರು ವೇದವನ್ನು ತಿಳಿಸುತ್ತಾರೆ ಎಂದು ಹೇಳುತ್ತಾರೆ. ಮನುಷ್ಯರ ಪದವಿಯ ಮೇಲೆ ಜಾತಿ, ಪಂಥದ ಕಡೆಗೆ ದೃಷ್ಟಿಯು ಹೋಗುತ್ತದೆ. ಇವರು ಹಿಂದೂ ಆಗಿದ್ದಾರೆ, ಇವರು ಮುಸಲ್ಮಾನರಾಗಿದ್ದಾರೆ ಎನ್ನುವ ದೃಷ್ಟಿಯು ಅವರ ಕಡೆಗೆ ಹೋಗುತ್ತದೆ. ಇಲ್ಲಿ ನಿಮ್ಮ ದೃಷ್ಟಿಯು ಶಿವತಂದೆಯ ಕಡೆಗೆ ಹೋಗುತ್ತದೆ. ಶಿವತಂದೆಯೇ ವಿದ್ಯೆಯನ್ನು ಓದಿಸುತ್ತಿದ್ದಾರೆ. ಈಗ ತಂದೆಯು ಭವಿಷ್ಯದ ಹೊಸ ಪ್ರಪಂಚಕ್ಕೋಸ್ಕರ ಆಸ್ತಿಯನ್ನು ಕೊಡಲು ಬಂದಿದ್ದಾರೆ ಮತ್ತು ಹೇ ಮಕ್ಕಳೇ, ನಿಮಗೆ ಸ್ವರ್ಗಕ್ಕೋಸ್ಕರ ರಾಜಯೋಗವನ್ನು ಕಲಿಸಲು ಬಂದಿದ್ದೇನೆ ಎಂದು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಈಗ ಗೀತೆಯನ್ನು ಕೇಳಿದಿರಿ. ಗೀತೆ ಇಂದಿನದ್ದಾಗಿದೆ. ರೀತಿ ಜಗದಂಬಾ ಇದ್ದರು. ಅವಶ್ಯವಾಗಿ ಅವರೇ ಸೌಭಾಗ್ಯ ಮಾಡಿದ್ದರು ಅದಕ್ಕೋಸ್ಕರ ಮಂದಿರವನ್ನೂ ಸಹ ಕಟ್ಟಿದರು. ಆದರೆ ಅವರು ಯಾರಾಗಿದ್ದಾರೆ, ಹೇಗೆ ಬಂದರು, ಭಾಗ್ಯವನ್ನು ಯಾವ ರೀತಿ ಮಾಡಿದರು ಎನ್ನುವುದು ಯಾರೂ ತಿಳಿದುಕೊಂಡಿಲ್ಲ ಅಂದಾಗ ವಿದ್ಯೆ ಮತ್ತು ವಿದ್ಯೆಗೆ ಹಗಲು ರಾತ್ರಿಯ ಅಂತರವಿದೆ. ಇಲ್ಲಿ ಜ್ಞಾನಸಾಗರ ಪರಮಪಿತ ಪರಮಾತ್ಮ ಬ್ರಹ್ಮನ ಮುಖದ ಮುಖಾಂತರ ವಿದ್ಯೆಯನ್ನು ಓದಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ. ತಂದೆಯು ಬಂದಿದ್ದಾರೆ ಏಕೆಂದರೆ ಭಕ್ತರ ಬಳಿ ಭಗವಂತನು ಬರಲೇಬೇಕು ಇಲ್ಲದಿದ್ದರೆ ಭಕ್ತರು ಭಗವಂತನನ್ನು ಏಕೆ ನೆನಪು ಮಾಡುತ್ತಾರೆ? ಎಲ್ಲರೂ ಭಗವಂತನೆನ್ನುವುದು ತಪ್ಪಾಗಿದೆ. ಅವರು ಸರ್ವವ್ಯಾಪಿಯ ಜ್ಞಾನವುಳ್ಳಂತಹವರು ತಮ್ಮ ಮಾತನ್ನು ಸಿದ್ಧ ಮಾಡುವುದಕ್ಕೋಸ್ಕರ ತಮ್ಮ 20 ಯೋಜನೆಗಳ ಜೋರನ್ನು ಕೊಡುತ್ತಾರೆ. ನೀವು ತಿಳಿಸುವುದೇ ಬೇರೆಯಾಗಿದೆ. ಬೇಹದ್ದಿನ ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ ಆದರೆ ಸನ್ಯಾಸಿಗಳದ್ದು ವೈರಾಗ್ಯ ಮಾರ್ಗ ನಿವೃತ್ತಿ ಮಾರ್ಗವಾಗಿರುವುದರಿಂದ ಎಂದೂ ಸಹ ಆಸ್ತಿಯ ಅಧಿಕಾರ ಸಿಗುವುದಿಲ್ಲ. ಅವರು ಆಸ್ತಿಯನ್ನು ಇಷ್ಟಪಡುವುದಿಲ್ಲ. ನೀವು ಸದಾ ಸುಖದ ಆಸ್ತಿಯನ್ನು ಇಷ್ಟಪಡುತ್ತೀರಿ, ನರಕದ ಆಸ್ತಿಯೆಲ್ಲವೂ ದುಃಖದ್ದಾಗಿದೆ. ಭಲೆ ಧನವಂತರಾಗಿದ್ದರೂ ಸಹ ಅವರ ನಡವಳಿಕೆ ಕೆಟ್ಟದ್ದಾಗಿರುತ್ತದೆ. ಹಣವನ್ನು ಹಾಳು ಮಾಡುತ್ತಿರುತ್ತಾರೆ ನಂತರ ಮಕ್ಕಳು ಹಸಿವಿನಿಂದ ಸಾಯುತ್ತಾರೆ ಅಂದಾಗ ತಮ್ಮನ್ನೂ ದುಃಖಿಗಳನ್ನಾಗಿ ಮಕ್ಕಳನ್ನೂ ದುಃಖಿಗಳನ್ನಾಗಿ ಮಾಡುತ್ತಾರೆ. ಇವರು ಬೇಹದ್ದಿನ ತಂದೆಯಾಗಿರುವ ಕಾರಣ ಮಕ್ಕಳಿಗೆ ತಿಳಿಸುತ್ತಾರೆ. ಭಿನ್ನ-ಭಿನ್ನವಾದ ಅನೇಕ ತಂದೆಯರಿದ್ದಾರೆ. ಅವರಿಂದ ಅಲ್ಪಕಾಲಕ್ಕೋಸ್ಕರ ಆಸ್ತಿಯು ಸಿಗುತ್ತದೆ. ಭಲೆ ರಾಜರೂ ಸಹ ಅಲ್ಪಕಾಲದವರಾಗುತ್ತಾರೆ. ಹದ್ದಿನ ಅಲ್ಪಕಾಲದ ಸುಖವಿರುತ್ತದೆ. ಈಗ ಬೇಹದ್ದಿನ ತಂದೆಯು ಅವಿನಾಶಿ ಸುಖವನ್ನು ಕೊಡಲು ಬರುತ್ತಾರೆ. ಭಾರತವಾಸಿಗಳು ಡಬಲ್ ಕಿರೀಟಧಾರಿಗಳಾಗಿ ಸ್ವರ್ಗದ ಮಾಲೀಕರಾಗಿದ್ದವರು ಈಗ ನರಕದ ಮಾಲೀಕರಾಗಿದ್ದಾರೆ ಎಂದು ತಿಳಿಸುತ್ತಾರೆ. ನರಕದಲ್ಲಿ ದುಃಖವಿದೆ ಆದರೆ ಗರುಡಪುರಾಣದಲ್ಲಿ ತೋರಿಸಿರುವ ಹಾಗೆ ವಿಷಯವೈತರಣಿ ನದಿಯ ರೀತಿ ನದಿಗಳಿಲ್ಲ. ಹೇಗೆ ರವರವ ನರಕದ ಚಿತ್ರವನ್ನೂ ಸಹ ತೋರಿಸುತ್ತಾರೆ. ಇದೆಲ್ಲಾ ಶಿಕ್ಷೆಗಳನ್ನು ಭೋಗಿಸಬೇಕಾಗುತ್ತದೆ ಅಂದಾಗ ಅವರು ಅನೇಕ ಮಾತುಗಳನ್ನು ಬರೆದಿದ್ದಾರೆ. ಮೊದಲು ಯಾರು ಯಾವ ಅಂಗದಿಂದ ಕೆಟ್ಟ ಕೆಲಸವನ್ನು ಮಾಡುತ್ತಾರೋ ಅಂಗವನ್ನು ತುಂಡು ಮಾಡುತ್ತಿದ್ದರು. ಬಹಳ ಕಠಿಣವಾದಂತಹ ಶಿಕ್ಷೆಯೂ ಅವರಿಗೆ ಸಿಗುತ್ತಿತ್ತು. ಆದರೆ ಈಗ ಅಷ್ಟು ಕಠಿಣವಾದ ಶಿಕ್ಷೆಯು ಸಿಗುವುದಿಲ್ಲ. ನೇಣು ಶಿಕ್ಷೆ ಕಠಿಣವಾದುದ್ದಲ್ಲ, ಅದು ಬಹಳ ಸರಳವಾದುದ್ದಾಗಿದೆ. ಮನುಷ್ಯ ಅಪಘಾತವನ್ನೂ ಸಹ ಬಹಳ ಖುಷಿಯಿಂದ ಮಾಡುತ್ತಾರೆ. ಶಿವನ ಮೇಲೆ ದೇವತೆಗಳ ಮೇಲೆ ತಕ್ಷಣ ಬಲಿಹಾರಿಗಳಾಗುತ್ತಾರೆ. ಆತ್ಮ ದುಃಖಿಯಾದಾಗ ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳಬೇಕೆಂದು ಇಷ್ಟಪಡುತ್ತದೆ. ಅಪಘಾತ ಮಾಡುವಂತಹವರು ಇದನ್ನು ತಿಳಿದುಕೊಳ್ಳುವುದಿಲ್ಲ. ಅವರು ಇಲ್ಲೇ ಒಂದು ಶರೀರವನ್ನು ಬಿಟ್ಟು ನಂತರ ಇಲ್ಲಿಯೇ ಕೊಳಕಾದಂತಹ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಏಕೆಂದರೆ ಜ್ಞಾನವಿಲ್ಲ ಕೇವಲ ದುಃಖವಿರುವ ಕಾರಣ ಶರೀರವನ್ನು ವಿನಾಶ ಮಾಡುತ್ತಾರೆ. ಪುನಃ ದುಃಖಿ ಜನ್ಮವನ್ನೇ ತೆಗೆದುಕೊಳ್ಳಬೇಕಾಗುತ್ತದೆ. ನಾವೀಗ ಹೊಸಪ್ರಪಂಚಕ್ಕೆ ಯೋಗ್ಯರಾಗುತ್ತಿದ್ದೇವೆಂದು ನೀವು ಮಕ್ಕಳಿಗೆ ತಿಳಿದಿದೆ. ಜೀವಘಾತ ಮಾಡಿಕೊಳ್ಳುವಂತಹವರು ಭಿನ್ನವಾಗಿದ್ದಾರೆ. ಹೇಗೆ ಕೆಲವು ಸ್ತ್ರೀಯರು ಪತಿಯ ಹಿಂದೆ ತಮ್ಮ ಶರೀರವನ್ನು ಹೋಮ ಮಾಡುತ್ತಾರೋ ಅಂದರೆ ಸತಿಯಾಗುತ್ತಾರೆ. ಮಾತೇ ಬೇರೆಯಾಗಿದೆ. ನಾವು ಪತಿಲೋಕದಲ್ಲಿ ಹೋಗುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಅನೇಕರು ರೀತಿ ಮಾಡಿದ್ದಾರೆಂದು ಕೇಳಿದ್ದಾರೆ. ಶಾಸ್ತ್ರದಲ್ಲಿಯೂ ಸಹ ಪತಿಲೋಕದಲ್ಲಿ ಹೋಗುತ್ತಾರೆಂದು ಹೇಳುತ್ತಾರೆ ಆದರೆ ಪತಿಯು ಕಾಮಿಯಾಗಿರುತ್ತಾರೆ. ಅವರು ಪುನಃ ಮೃತ್ಯುಲೋಕದಲ್ಲಿಯೇ ಬರಬೇಕಾಗುತ್ತದೆ. ಆದರೆ ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸ್ವರ್ಗಕ್ಕೆ ಹೋಗುತ್ತೀರಿ.

ಜಗದಂಬಾ, ಜಗತ್ಪಿತ ಸ್ಥಾಪನಾರ್ಥಕವಾಗಿ ನಿಂತಿದ್ದಾರೆ, ಇವರೇ ಸ್ವರ್ಗದ ಪಾಲನಾಕರ್ತರಾಗುತ್ತಾರೆಂದು ನಿಮಗೆ ತಿಳಿದಿದೆ. ವಿಷ್ಣುಕುಲವೆಂದು ಯಾವುದಕ್ಕೆ ಹೇಳಲಾಗುತ್ತದೆಯೆಂದು ಮನುಷ್ಯರಿಗೆ ತಿಳಿದಿಲ್ಲ. ವಿಷ್ಣು ಸೂಕ್ಷ್ಮವತನವಾಸಿಯಾಗಿದ್ದಾನೆ ಆದರೆ ಅವನ ಕುಲವು ಹೇಗಾಗುತ್ತದೆ? ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿ ಪಾಲನೆ ಮಾಡುತ್ತಾರೆ ಎನ್ನುವುದು ಈಗ ನಿಮಗೆ ತಿಳಿದಿದೆ. ಇದು ಜ್ಞಾನಚಿತೆಯಾಗಿದೆ. ನೀವು ಒಬ್ಬ ಪತಿಯರ ಪತಿಯ ಜೊತೆ ಯೋಗವನ್ನು ಬೆಳೆಸುತ್ತೀರಿ ಅಂದಾಗ ಅವರು ಶಿವತಂದೆಯಾಗಿದ್ದಾರೆ, ಅವರೇ ಪತಿಯರ ಪತಿ, ತಂದೆಯರ ತಂದೆಯಾಗಿದ್ದಾರೆ. ಎಲ್ಲವೂ ಸಹ ಒಬ್ಬ ತಂದೆಯೇ ಆಗಿದ್ದಾರೆ. ಅವರಲ್ಲಿ ಸರ್ವ ಸಂಬಂಧವೂ ಬರುತ್ತದೆ. ಸಮಯದಲ್ಲಿ ಯಾರೆಲ್ಲಾ ಚಿಕ್ಕಪ್ಪ, ಮಾವ ಮುಂತಾದವರಿದ್ದಾರೆ ಅವರೆಲ್ಲರೂ ನಿಮಗೆ ದುಃಖದ ಸಲಹೆಯನ್ನು ಕೊಡುತ್ತಾರೆಂದು ತಂದೆಯು ತಿಳಿಸುತ್ತಾರೆ. ಉಲ್ಟಾ ಮಾರ್ಗದ ಅಸುರೀ ಮತವನ್ನೇ ಕೊಡುತ್ತಾರೆ. ಬೇಹದ್ದಿನ ತಂದೆಯೇ ಬಂದು ನಾವು ಮಕ್ಕಳಿಗೆ ಸುಲ್ಟಾ ಮತವನ್ನು ಕೊಡುತ್ತಿದ್ದಾರೆ. ಲೌಕಿಕದಲ್ಲಿ ತಂದೆಯೂ ಸಹ ಕಾಲೇಜಿನಲ್ಲಿ ವಿದ್ಯೆಯನ್ನು ಓದಿ ಲಾಯರ್ ಮುಂತಾದವರಾಗಿ ಎಂದು ಹೇಳುತ್ತಾರೆ. ಅದು ಉಲ್ಟಾ ಮತವಲ್ಲ. ಶರೀರ ನಿರ್ವಹಣಾರ್ಥವಾಗಿ ಅದು ಸರಿಯಾಗಿದೆ. ಅವರು ಪುರುಷಾರ್ಥವನ್ನು ಮಾಡಲೇಬೇಕು, ಅದರ ಜೊತೆಜೊತೆಗೆ ಭವಿಷ್ಯದ 21 ಜನ್ಮಗಳಿಗೋಸ್ಕರ ಶರೀರ ನಿರ್ವಹಣಾರ್ಥ ಪುರುಷಾರ್ಥವನ್ನು ಮಾಡಬೇಕು. ಅವರು ತಮ್ಮ ಶರೀರ ನಿರ್ವಹಣಾರ್ಥಕವಾಗಿಯೇ ವಿದ್ಯೆಯನ್ನು ಓದುತ್ತಾರೆ. ಸನ್ಯಾಸಿಗಳೂ ಸಹ ಶರೀರ ನಿರ್ವಹಣಾರ್ಥವಾಗಿ ಕೆಲವರು 50, ಕೆಲವರು 100, ಕೆಲವರು 1000ವನ್ನೂ ಸಂಪಾದನೆ ಮಾಡುತ್ತಾರೆ. ಒಬ್ಬ ಕಾಶ್ಮೀರದ ರಾಜ ಸತ್ತಾಗ ಆರ್ಯಸಮಾಜಿ ಮುಂತಾದವರಿಗೆ ಎಷ್ಟೊಂದು ಹಣ ಸಿಕ್ಕಿತು ಅಂದಾಗ ಇವರು ಹೊಟ್ಟೆಗೋಸ್ಕರ ಇದೆಲ್ಲವನ್ನೂ ಮಾಡುತ್ತಿದ್ದಾರೆ. ಸಂಪತ್ತಿಲ್ಲದೇ ಸುಖ ಸಿಗುವುದಿಲ್ಲ, ಹಣವಿದ್ದಾಗ ಮೋಟಾರ್ ಮುಂತಾದುವುಗಳಲ್ಲಿ ಸುತ್ತಾಡುತ್ತಾರೆ. ಮೊದಲು ಸನ್ಯಾಸಿಗಳು ಹಣಕ್ಕೋಸ್ಕರ ಸನ್ಯಾಸ ಮಾಡುತ್ತಿರಲಿಲ್ಲ ಅವರು ಕಾಡಿಗೆ ಹೋಗುತ್ತಿದ್ದರು. ಪ್ರಪಂಚದ ತೊಂದರೆಯಿಂದ ತಮ್ಮನ್ನು ದೂರ ಮಾಡಿಕೊಳ್ಳುತ್ತಿದ್ದರು ಆದರೆ ದೂರವಾಗುತ್ತಿರಲಿಲ್ಲ ಬಾಕಿ ಪವಿತ್ರವಾಗಿರುತ್ತಿದ್ದರು. ಪವಿತ್ರತೆಯ ಬಲದಿಂದ ಭಾರತವನ್ನು ಮುಂದುವರೆಸುತ್ತೀರಿ ಅವರೇ ಇದೇ ಭಾರತಕ್ಕೆ ಸುಖವನ್ನು ಕೊಟ್ಟರು. ಒಂದುವೇಳೆ ಇವರು ಪವಿತ್ರವಾಗಿಲ್ಲದೇ ಇದ್ದಿದ್ದರೆ ಭಾರತವು ಬಹಳ ವೇಶ್ಯಾಲಯವಾಗುತ್ತಿತ್ತು. ಪವಿತ್ರತೆಯನ್ನು ಕಲಿಸುವಂತಹವರು ಒಂದು ನಿವೃತ್ತಿ ಮಾರ್ಗದವರಾಗಿದ್ದಾರೆ ಮತ್ತೊಬ್ಬರು ತಂದೆಯಾಗಿದ್ದಾರೆ ಅಂದಾಗ ಅದು ನಿವೃತ್ತಿ ಮಾರ್ಗದ ಪವಿತ್ರತೆಯಾಗಿದೆ. ಇದು ಪ್ರವೃತ್ತಿ ಮಾರ್ಗದ ಪವಿತ್ರತೆಯಾಗಿದೆ. ಭಾರತದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು. ನಾವೇ ದೇವಿ-ದೇವತೆಗಳು ಪವಿತ್ರವಾಗಿದ್ದೆವು. ಈಗ ಅಪವಿತ್ರವಾಗಿದ್ದೇವೆ. ಸಂಪೂರ್ಣ ಅರ್ಧಕಲ್ಪ ಪಂಚವಿಕಾರಗಳ ಮುಖಾಂತರ ನಾವೇ ಅಪವಿತ್ರರಾಗುತ್ತೇವೆ. ಮಾಯೆ ಸ್ವಲ್ಪ-ಸ್ವಲ್ಪ ಅಪವಿತ್ರ ಮಾಡುತ್ತಾ ಪೂರ್ಣ ಅಪವಿತ್ರ ಪತಿತರನ್ನಾಗಿ ಮಾಡಿತು. ನಾವು ಪಾವನರಿಂದ ಪತಿತರು ಹೇಗಾದೆವು ಎನ್ನುವುದು ಪ್ರಪಂಚದ ಮನುಷ್ಯರಿಗೆ ತಿಳಿದಿಲ್ಲ. ಇದು ಪತಿತ ಪ್ರಪಂಚವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಕೆಲವು ಮನೆಯ ಆಯಸ್ಸು 100 ವರ್ಷವಿರುತ್ತದೆ ಅಂದಾಗ 50 ವರ್ಷ ಹೊಸದಾಗಿರುತ್ತದೆ ಇನ್ನು 50 ವರ್ಷ ಹಳೆಯದಾಗಿರುತ್ತದೆ ಎಂದು ಹೇಳುತ್ತಾರೆ. ನಿಧನಿಧಾನವಾಗಿ ಪೂರ್ಣ ಹಳೆಯದಾಗುತ್ತದೆ. ಅದೇ ರೀತಿ ಸೃಷ್ಟಿಯದ್ದೂ ಸಹ ಆಗಿದೆ. ಒಂದೇ ಬಾರಿ ಹೊಸ ಪ್ರಪಂಚದಲ್ಲಿ ಸುಖವಿರುತ್ತದೆ. ಅರ್ಧಕಲ್ಪದ ನಂತರ ಹಳೆಯದಾಗುತ್ತದೆ. ಸತ್ಯಯುಗದಲ್ಲಿ ಅಪಾರ ಸುಖವಿತ್ತೆಂದು ಗಾಯನ ಮಾಡುತ್ತಾರೆ ನಂತರ ಹಳೆಯ ಪ್ರಪಂಚವಾದಾಗ ದುಃಖ ಪ್ರಾರಂಭವಾಗುತ್ತದೆ. ರಾವಣನೇ ದುಃಖವನ್ನು ಕೊಡುತ್ತಾನೆ. ಪತಿತರನ್ನಾಗಿ ರಾವಣನೇ ಮಾಡುತ್ತಾನೆ ಆದ್ದರಿಂದ ಅವನ ಭೂತವನ್ನು ಮಾಡಿ ಸುಟ್ಟುಹಾಕುತ್ತಾರೆ. ಅವನು ದೊಡ್ಡ ಶತ್ರುವಾಗಿದ್ದಾನೆ. ಕೆಲವರು ಸರ್ಕಾದವರಿಗೆ ರಾವಣನನ್ನು ಸುಟ್ಟುಹಾಕಬೇಡಿ, ಬಹಳ ಜನರಿಗೆ ದುಃಖವಾಗುತ್ತದೆ ಎಂದು ಹೇಳಿದ್ದರು ಏಕೆಂದರೆ ರಾವಣನನ್ನು ವಿದ್ವಾನರೆಂದು ಹೇಳುತ್ತಾರೆ. ಮಂತ್ರಿಗಳು ಮುಂತಾದವರು ಯಾರೂ ತಿಳಿದುಕೊಳ್ಳುವುದಿಲ್ಲ. ಈಗ ನಿಮಗೆ ರಾವಣನ ರಾಜ್ಯ ದ್ವಾಪರಯುಗದಿಂದ ಪ್ರಾರಂಭವಾಗುತ್ತದೆ ಎಂದು ತಿಳಿದಿದೆ. ಭಾರತದಲ್ಲಿಯೇ ರಾವಣನನ್ನು ಸುಡುತ್ತಾರೆ. ದ್ವಾಪರದಿಂದ ಭಕ್ತಿ, ಅಜ್ಞಾನದ ಮಾರ್ಗವು ಪ್ರಾರಂಭವಾಯಿತೆಂದು ತಂದೆಯು ತಿಳಿಸುತ್ತಾರೆ. ಜ್ಞಾನದಿಂದ ಹಗಲು, ಭಕ್ತಿಯಿಂದ ರಾತ್ರಿಯಾಗುತ್ತಿದೆ.

ಈಗ ಜಗದಂಬಾನ ಗೀತೆಯನ್ನು ಗಾಯನ ಮಾಡುತ್ತಾರೆ. ಆದರೆ ಸೌಭಾಗ್ಯವಿದಾತ ಹೇಗಿದ್ದಾರೆ ಎಂಬುದನ್ನು ಅರಿತುಕೊಂಡಿಲ್ಲ. ಎಷ್ಟು ದೊಡ್ಡ ಮೇಳವು ಸೇರುತ್ತದೆ ಆದರೆ ಜಗದಂಬಾ ಯಾರಾಗಿದ್ದಾರೆ ಎಂಬುದನ್ನು ಅರಿತುಕೊಂಡಿಲ್ಲ. ಬಂಗಾಳದಲ್ಲಿ ಕಾಳಿಯನ್ನೂ ಸಹ ಬಹಳ ನಂಬುತ್ತಾರೆ ಆದರೆ ಕಾಳಿ ಮತ್ತು ಜಗದಂಬಾನಲ್ಲಿ ಏನು ವ್ಯತ್ಯಾಸವಿದೆ ಎಂಬುದು ಅವರಿಗೆ ಗೊತ್ತಿಲ್ಲ. ಜಗದಂಬನನ್ನು ಬೆಳ್ಳಗೆ ತೋರಿಸುತ್ತಾರೆ, ಕಾಳಿಯನ್ನು ಕಪ್ಪು ಮಾಡಿಬಿಟ್ಟಿದ್ದಾರೆ. ಜಗದಂಬನೇ ಲಕ್ಷ್ಮಿಯಾಗುತ್ತಾರೆ ಆದ್ದರಿಂದ ಬೆಳ್ಳಗಿದ್ದಾರೆ ನಂತರ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ ಕಪ್ಪಾಗಿಬಿಡುತ್ತಾರೆ. ಆದ್ದರಿಂದ ಮನುಷ್ಯರು ಇಷ್ಟೊಂದು ಗೊಂದಲಕ್ಕೊಳಗಾಗುತ್ತಾರೆ. ವಾಸ್ತವದಲ್ಲಿ ಕಾಳಿ ಅಥವಾ ಜಗದಂಬಾ ಒಬ್ಬರೇ ಆಗಿದ್ದಾರೆ. ಇದನ್ನು ಮನುಷ್ಯರು ಅರಿತುಕೊಂಡೇ ಇಲ್ಲ. ಇದಕ್ಕೇ ಅಂಧಶ್ರದ್ಧೆ ಎಂದು ಹೇಳಲಾಗುವುದು. ಈಗ ನಿಮಗೆ ತಿಳಿದಿದೆ - ಹಿಂದೆ ಯಾವ ಜಗದಂಬಾ ಇದ್ದರೋ ಅವರೇ ಭಾರತದ ಭಾಗ್ಯವನ್ನು ರೂಪಿಸಿದ್ದರು. ತಾವೂ ಸಹ ಭಾರತದ ಸೌಭಾಗ್ಯವನ್ನು ರೂಪಿಸುತ್ತಾ ಇದ್ದೀರಿ. ಮಾತೆಯರದೇ ಮುಖ್ಯ ಹೆಸರಿದೆ. ಮಾತೆಯರು ಸನ್ಯಾಸಿಗಳ ಉದ್ಧಾರವನ್ನೂ ಸಹ ಮಾಡಬೇಕಾಗಿದೆ. ಇದೂ ಸಹ ನಿಗಧಿಯಾಗಿದೆ. ಇವರಿಗೂ ಜ್ಞಾನದ ಬಾಣವನ್ನು ಹೊಡೆಯಿರಿ ಎಂದು ಪರಮಪಿತ ಪರಮಾತ್ಮನು ಆದೇಶವನ್ನು ನೀಡಿದ್ದಾರೆ. ನೀವು ಮಕ್ಕಳು ಸನ್ಯಾಸಿಗಳು ಮುಂತಾದವರೊಂದಿಗೆ ಮಿಲನ ಮಾಡುತ್ತೀರೆಂದರೆ ನೀವು ತಿಳಿಸಬಹುದು - ನನಗೆ ಜ್ಞಾನಸಾಗರ ಪರಮಪಿತ ಪರಮಾತ್ಮ ಓದಿಸುತ್ತಾರೆ. ತಾವು ಹದ್ದಿನ ಸನ್ಯಾಸಿಗಳಾಗಿದ್ದೀರಿ, ನಾವು ಬೇಹದ್ದಿನ ಸನ್ಯಾಸಿಗಳಾಗಿದ್ದೇವೆ. ಯಾವಾಗ ನಿಮ್ಮ ಹಠಯೋಗವು ಪೂರ್ಣವಾಗುತ್ತದೆಯೋ ಆಗಲೇ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಹಠಯೋಗ ಮತ್ತು ರಾಜಯೋಗ ಎರಡೂ ಒಟ್ಟಿಗಿರಲು ಸಾಧ್ಯವಿಲ್ಲ ಆದ್ದರಿಂದ ಈಗ ಸಮಯವಂತೂ ಹೆಚ್ಚಿಗೆ ಇಲ್ಲ, ತುಂಬಾ ಕಡಿಮೆ ಸಮಯವಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನವಾಗಿರಿ. ಬ್ರಾಹ್ಮಣರೇ ಕಮಲಪುಷ್ಫ ಸಮಾನವಿರಬೇಕಾಗಿದೆ. ಕುಮಾರಿಯರಂತೂ ಪವಿತ್ರರು, ಕಮಲಪುಷ್ಫ ಸಮಾನವಾಗಿಯೇ ಇದ್ದಾರೆ ಬಾಕಿ ಯಾರು ವಿಕಾರದಲ್ಲಿ ಹೋಗುತ್ತಾರೆ, ಅವರಿಗೆ ತಂದೆಯು ಪವಿತ್ರರಾಗಿ ಎಂದು ತಿಳಿಸುತ್ತಾರೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನವಾಗಿ. ಪ್ರತಿಯೊಬ್ಬರೂ ಸ್ವದರ್ಶನಚಕ್ರಧಾರಿಗಳಾಗಿ ಶಂಖನ್ನು ಊದಿ. ಜ್ಞಾನ ಕಟಾರಿಯನ್ನು ನಡೆಸುತ್ತೀರೆಂದರೆ ದೋಣಿಯು ಪಾರಾಗಿಬಿಡುವುದು. ಇದರಲ್ಲಿ ಪರಿಶ್ರಮವಿದೆ, ಪರಿಶ್ರಮವಿಲ್ಲದೇ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ನಡೆಯುತ್ತಾ-ತಿರುಗಾಡುತ್ತಾ ಅದೇ ಬೇಹದ್ದಿನ ಸುಖದಲ್ಲಿರಿ ಹಾಗೂ ತಂದೆಯನ್ನು ನೆನಪು ಮಾಡಿ. ಯಾರು ಬಹಳ ಸುಖವನ್ನು ಕೊಡುತ್ತಾರೋ ಅವರ ನೆನಪಿರುತ್ತದೆಯಲ್ಲವೇ. ಈಗ ತಾವು ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕು. ಅವರ ಪರಿಚಯವನ್ನೇ ನೀಡಬೇಕು. ನೀವು ರೀತಿ ತಿಳಿಸಿ - ತಾವು ರಾಜ ವಿದ್ಯೆಯನ್ನು ಜನ್ಮದಲ್ಲಿ ಓದಿ ಬ್ಯಾರಿಸ್ಟರ್ ಮುಂತಾದವರಾಗುತ್ತೀರಿ. ಒಳ್ಳೆಯದು. ತಿಳಿದುಕೊಳ್ಳಿ, ಓದುತ್ತಾ-ಓದುತ್ತಾ ಅಥವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾ ನಿಮ್ಮ ಆಯಸ್ಸು ಪೂರ್ಣವಾಗಿ ಶರೀರ ಬಿಟ್ಟರೆ ವಿದ್ಯೆಯು ಇಲ್ಲಿಯೇ ಸಮಾಪ್ತಿಯಾಗಿಬಿಡುವುದು. ಇನ್ನೂ ಕೆಲವರು ಪರೀಕ್ಷೆಯನ್ನು ತೇರ್ಗಡೆ ಮಾಡಿ ಲಂಡನ್ನಿಗೆ ಹೋದರು, ಅಲ್ಲಿ ಶರೀರವನ್ನು ಬಿಟ್ಟರೆಂದರೆ ವಿದ್ಯೆಯು ಸಮಾಪ್ತಿಯಾಗಿಬಿಡುವುದು. ಅದು ವಿನಾಶಿ ವಿದ್ಯೆಯಾಗಿದೆ. ಇದು ಅವಿನಾಶಿ ವಿದ್ಯೆಯಾಗಿದೆ. ವಿದ್ಯೆಯು ಎಂದೂ ವಿನಾಶವಾಗುವುದಿಲ್ಲ. ನಾವು ಹೊಸ ಪ್ರಪಂಚದಲ್ಲಿ ಬಂದು ರಾಜ್ಯ ಮಾಡಬೇಕೆಂದು ನಿಮಗೆ ಗೊತ್ತಿದೆ. ವಿನಾಶಿ ಸುಖದ ಇಚ್ಚೆ ಅಲ್ಪಕಾಲದ ಸುಖವಾಗಿದೆ, ಅದು ಅದೃಷ್ಟದಲ್ಲಿದ್ದರೆ ಮಾತ್ರ. ಎಷ್ಟು ಸಮಯ ಸುಖವು ನಡೆಯುತ್ತದೆ ಎಂದು ಗೊತ್ತಿರುವುದಿಲ್ಲ. ಆದರೆ ಇಲ್ಲಿನ ಸುಖವು ನಿಶ್ಚಿತವಾಗಿದೆ. ಪರೀಕ್ಷೆಯು ಪೂರ್ಣವಾಯಿತೆಂದರೆ ನೀವು ಹೋಗಿ 21 ಜನ್ಮಗಳ ರಾಜ್ಯಭಾರ ಮಾಡುತ್ತೀರಿ. ಹದ್ದಿನ ತಂದೆ, ಶಿಕ್ಷಕ, ಗುರುವಿನಿಂದ ಹದ್ದಿನ ಆಸ್ತಿಯು ಸಿಗುತ್ತದೆ. ಗುರುವಿನಿಂದ ಶಾಂತಿ ಸಿಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಕರ್ಮೇಂದ್ರಿಯಗಳಿಂದ ಕರ್ಮ ಮಾಡುತ್ತಾ ಮಾಡುತ್ತಾ ಸುಸ್ತಾದಾಗ ಆತ್ಮ ಶರೀರದಿಂದ ಭಿನ್ನವಾಗುತ್ತದೆ. ಶಾಂತಿಯು ನಿಮ್ಮ ಸ್ವಧರ್ಮವಾಗಿದೆಯೆಂದು ತಂದೆಯು ಹೇಳುತ್ತಾರೆ. ಇವು ಕರ್ಮೇಂದ್ರಿಯಗಳಾಗಿವೆ, ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಸುಮ್ಮನೆ ಕುಳಿತುಕೊಳ್ಳಿ. ನಾವು ಅಶರೀರಿಯಾಗಿದ್ದೇವೆ. ತಂದೆಯ ಜೊತೆ ಯೋಗವನ್ನು ಜೋಡಿಸಿದಾಗ ವಿಕರ್ಮ ವಿನಾಶವಾಗುತ್ತದೆ. ಭಲೆ ಯಾವುದೇ ಸನ್ಯಾಸಿಗಳಿಂದ ನಿಮಗೆ ಶಾಂತಿ ಸಿಗುತ್ತದೆ ಆದರೆ ವಿಕರ್ಮ ವಿನಾಶವಾಗುವುದಿಲ್ಲ. ಇಲ್ಲಿ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಾಜೀತರಾಗುತ್ತೀರಿ. ಒಳ್ಳೆಯದು ಯಾವುದೆಂದರೆ ಶಾಂತವಾಗಿ ಕುಳಿತುಕೊಳ್ಳುವುದು, ಅದರಿಂದ ವಿಕರ್ಮವು ವಿನಾಶವಾಗುತ್ತದೆ ಮತ್ತು ಡಬಲ್ ಲಾಭವಿದೆ. ಹಳೆಯ ವಿಕರ್ಮವೂ ವಿನಾಶವಾಗುತ್ತದೆ. ಯೋಗಬಲವಿಲ್ಲದಿದ್ದರೆ ಹಳೆಯ ವಿಕರ್ಮ ಯಾವುದೇ ಪರಿಸ್ಥಿತಿಯಲ್ಲಿ ವಿಕರ್ಮ ವಿನಾಶವಾಗುವುದಿಲ್ಲ. ಪ್ರಾಚೀನ ಯೋಗ ಭಾರತದ್ದೆಂದು ಗಾಯನ ಮಾಡಲಾಗಿದೆ. ಅದರಿಂದ ಜನ್ಮ-ಜನ್ಮಾಂತರದ ವಿಕರ್ಮ ವಿನಾಶವಾಗುತ್ತದೆ. ಇದನ್ನು ಬಿಟ್ಟರೆ ಬೇರೆ ಯಾವುದೇ ಉಪಾಯವಿಲ್ಲ. ಈಗ ವೃದ್ಧಿಯಾಗುವುದೂ ಸಹ ಸಮಾಪ್ತಿಯಾಗುತ್ತದೆ. ಸರ್ಕಾರವೂ ಸಹ ಜನಸಂಖ್ಯೆ ವೃದ್ಧಿಯಾಗಬಾರದೆಂದು ಇಷ್ಟಪಡುತ್ತಾರೆ. ನಾವು ಅಷ್ಟು ಕಡಿಮೆ ವೃದ್ಧಿಯನ್ನು ಮಾಡುತ್ತೇವೆ ಅಂದರೆ ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತಾರೆ ಬಾಕಿ ಎಲ್ಲರೂ ಮನೆಯಲ್ಲಿರುತ್ತಾರೆ. ಮನುಷ್ಯರು ವಿನಾಶವಾಗುತ್ತದೆ ಎಂದು ತಿಳಿಯುತ್ತಾರೆ. ಆದರೆ ಯುದ್ಧವು ಸಮಾಪ್ತಿಯಾಗುವುದನ್ನು ನೋಡಿ ಆಗುತ್ತದೆಯೋ ಇಲ್ಲವೋ ಎಂದು ತಿಳಿಯುತ್ತಾರೆ ಮತ್ತೆ ಸುಮ್ಮನಾಗುತ್ತಾರೆ. ಮಕ್ಕಳೇ, ಸಮಯ ಬಹಳ ಕಡಿಮೆಯಿದೆ ಆದ್ದರಿಂದ ತಪ್ಪನ್ನು ಮಾಡಬೇಡಿ ಎಂದು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಶರೀರದಿಂದ ಭಿನ್ನವಾಗಿ ಅಶರೀರಿಗಳಾಗಿ ಸತ್ಯ ಶಾಂತಿಯ ಅನುಭವ ಮಾಡಬೇಕಾಗಿದೆ. ತಂದೆಯ ನೆನಪಿನಿಂದ ಸ್ವಯಂ ಅನ್ನು ವಿಕರ್ಮಾಜೀತರನ್ನಾಗಿ ಮಾಡಿಕೊಳ್ಳಬೇಕಾಗಿದೆ.

2. ಅವಿನಾಶಿ ಪ್ರಾಲಬ್ಧವನ್ನು ಮಾಡಿಕೊಳ್ಳುವುದಕ್ಕೋಸ್ಕರ ಅವಿನಾಶಿ ವಿದ್ಯೆಯ ಕಡೆ ಪೂರ್ಣ ಗಮನವನ್ನು ಕೊಡಬೇಕಾಗಿದೆ. ಎಲ್ಲಾ ಉಲ್ಟಾ ಮತಗಳನ್ನು ಬಿಟ್ಟು ಒಬ್ಬ ತಂದೆಯ ಸುಲ್ಟಾ ಮತದಂತೆ ನಡೆಯಬೇಕಾಗಿದೆ.

ವರದಾನ:

ಉನ್ನತವಾದ ಸ್ಟೇಜ್ ಮೇಲೆ ಇರುತ್ತಾ ಪ್ರಕೃತಿಯ ಹಲ್ಚಲ್ನ ಪ್ರಭಾವದಿಂದ ದೂರವಿರುವಂತಹ ಪ್ರಕೃತಿಜೀತ್ ಭವ.

ಮಾಯಾಜೀತ್ ಅಂತೂ ಆಗುತ್ತಿರುವಿರಿ, ಆದರೆ ಈಗ ಪ್ರಕೃತಿಜೀತ್ ಸಹ ಆಗಬೇಕಾಗಿದೆ. ಏಕೆಂದರೆ ಈಗ ಪ್ರಕೃತಿಯ ಹಲ್ಚಲ್ ಬಹಳ ಆಗುವುದಿದೆ. ಕೆಲವೊಮ್ಮೆ ಸಮುದ್ರದ ಜಲ ತಮ್ಮ ಪ್ರಭಾವ ತೋರಿಸುವುದು, ಕೆಲವೊಮ್ಮೆ ಧರಣಿ ತಮ್ಮ ಫ್ರಭಾವವನ್ನು ತೋರಿಸುವುದು. ಒಂದುವೇಳೆ ಪ್ರಕೃತಿಜೀತ್ ಆಗಿ ಬಿಟ್ಟರೆ ಪ್ರಕೃತಿಯ ಯಾವುದೇ ಹಲ್ಚಲ್ ನಿಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಸದಾ ಸಾಕ್ಷಿಯಾಗಿರುತ್ತ ಎಲ್ಲಾ ಆಟವನ್ನು ನೋಡುವಿರಿ. ಹೇಗೆ ಫರಿಶ್ತಾವನ್ನು ಸದಾ ಎತ್ತರವಾದ ಬೆಟ್ಟದ ಮೇಲೆ ತೋರಿಸುತ್ತಾರೆ, ಅದೇ ರೀತಿ ನೀವು ಫರಿಶ್ತಾ ಸದಾ ಉನ್ನತವಾದ ಸ್ಟೇಜ್ ಮೇಲಿದ್ದಾಗ ಎಷ್ಟು ಮೇಲಿರುವಿರಿ, ಅಷ್ಟೂ ಹಲ್ಚಲ್ ನಿಂದ ಸ್ವತಃ ದೂರ ಹೋಗಿ ಬಿಡುವಿರಿ.

ಸ್ಲೋಗನ್:

ತಮ್ಮ ಶ್ರೇಷ್ಠ ವೈಬ್ರೇಷನ್ನಿಂದ ಸರ್ವ ಆತ್ಮರುಗಳ ಸಹಯೋಗದ ಅನುಭೂತಿ ಮಾಡಿಸುವುದೂ ಸಹ ತಪಸ್ಯ ಆಗಿದೆ.

 Download PDF

 

Post a Comment

0 Comments