Header Ads Widget

Header Ads

KANNADA MURLI (29.04.22)

 Hindi/Tamil/English/Telugu/Kannada/Malayalam

29/04/22  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ

Listen to the Murli audio file



 

ಮಧುರ ಮಕ್ಕಳೇ - ಎಷ್ಟೇ ಸಹನೆ ಮಾಡಿಕೊಳ್ಳಬೇಕಾಗುತ್ತದೆ ಆದರೆ ಈ ಅಂತಿಮ ಜನ್ಮದಲ್ಲಿ ಅಗತ್ಯವಾಗಿ ಪವಿತ್ರರಾಗಬೇಕಾಗಿದೆ, ತಂದೆಗೆ ಪವಿತ್ರತೆಯ ಸಹಯೋಗವೇ ಬೇಕಾಗಿದೆ

ಪ್ರಶ್ನೆ:

ಅಂತಿಮ ದೃಶ್ಯ ಯಾವುದಾಗಿದೆ? ಅದನ್ನು ತಿಳಿದುಕೊಳ್ಳಬೇಕೆಂದರೆ ಉತ್ತಮ ವಿಶಾಲ ಬುದ್ಧಿ ಇರಬೇಕು?

ಉತ್ತರ:

ಎಲ್ಲರೂ ಮನೆಗೆ ಹಿಂತಿರುಗುವುದು ಅಂತಿಮ ದೃಶ್ಯವಾಗಿದೆ..... ರಾಮನೂ ಹೋದ, ರಾವಣನೂ ಹೋದನೆಂದು ಹೇಳಲಾಗುತ್ತದೆ.... ಆಗ ಈ ಸೃಷ್ಟಿಯನ್ನು ಸ್ವಚ್ಛ ಮಾಡುವವರು, ಹೊಸ ಪ್ರಪಂಚಕ್ಕಾಗಿ ತಯಾರು ಮಾಡುವವರು ಕೆಲವರು ಉಳಿಯುತ್ತಾರೆ. ನಾವೂ ಸಹ ಹೋಗುತ್ತೇವೆ ನಂತರ ಎಲ್ಲಿ ವಿಜಯವಾಗುತ್ತದೆ ಅಲ್ಲಿ ಜನ್ಮವಾಗುತ್ತದೆ. ಭಾರತಕ್ಕೇ ವಿಜಯವಾಗುತ್ತದೆ, ಉಳಿದೆಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ರಾಜರು ಮುಂತಾದವರು ಯಾರು ಧನವಂತರಾಗಿರುತ್ತಾರೆ ಅವರು ಉಳಿಯುತ್ತಾರೆ. ನಾವು ಅವರ ಬಳಿ ಜನ್ಮ ತೆಗೆದುಕೊಳ್ಳುತ್ತೇವೆ. ನಂತರ ನಾವು ವಿಶ್ವದ ಮಾಲೀಕರಾಗುತ್ತೇವೆ. ಇದನ್ನು ತಿಳಿದುಕೊಳ್ಳಲು ವಿಶಾಲ ಬುದ್ಧಿಯಿರಬೇಕು.

ಗೀತೆ: ನಯನಹೀನನಿಗೆ ದಾರಿ ತೋರಿಸಿ ಪ್ರಭು......

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಹೇ ಪ್ರಭು! ನಾವು ಕುರುಡರೆಂದು ಹೇಳುತ್ತಾರೆ. ಮತ್ತೆ ಹೆಜ್ಜೆ-ಹೆಜ್ಜೆಯಲ್ಲಿ ಮೋಸಕ್ಕೊಳಗಾಗುತ್ತಾರೆ. ನಾವು ಕುರಡರ ಮಕ್ಕಳು ಕುರುಡರಾಗಿದ್ದ್ದೇವೆ, ಹೇ! ಪ್ರಭು ಬನ್ನಿ. ಗುರುಗಳ ಬಾಗಿಲಲ್ಲಿ, ಮಂದಿರಗಳ ಬಾಗಿಲಲ್ಲಿ ನದಿಗಳಲ್ಲಿ ಅಲೆದಾಡುತ್ತಾ ದುಃಖಿಗಳಾಗುತ್ತಾರೆ. ಅವರು ನಮ್ಮ ತಂದೆಯಾಗಿದ್ದಾರೆಂಬ ಅರ್ಥವನ್ನು ತಿಳಿದುಕೊಂಡಿಲ್ಲ. ಪ್ರಭುವಿಗೂ ಸಹ ಅನೇಕ ಹೆಸರುಗಳನ್ನು ಕೊಟ್ಟಿದ್ದಾರೆ. ಮತ್ತೆ ನಿರಾಕಾರನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ. ಈಗ ನಾಮ-ರೂಪದಿಂದ ಭಿನ್ನವಾಗಿರುವ ವಸ್ತು ಯಾವುದೂ ಇರುವುದಿಲ್ಲ. ಪರಮಪಿತ ಪರಮಾತ್ಮನು ಎಂದಾದರೂ ನಾಮ-ರೂಪದಿಂದ ಭಿನ್ನ ಆಗುತ್ತಾರೆಯೇ? ಎಂದು ನೀವು ಹೇಳುತ್ತೀರಿ. ನಾವು ಕುರುಡರಾಗಿದ್ದೇವೆ ಮನುಷ್ಯರು ತಮಗೆ ತಾವೇ ಹೇಳಿಕೊಳ್ಳುತ್ತಾರೆ. ತಂದೆ ಬಂದು ದಾರಿಯನ್ನು ತೋರಿಸಿದಾಗ ಸಜ್ಜನರಾಗುವರು. ಜ್ಞಾನ ಸಾಗರ ತಂದೆಯು ನೀವು ಮಕ್ಕಳಿಗೆ ಓದಿಸುತ್ತಾರೆ ಹಾಗೂ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತೋರಿಸುತ್ತಾರೆ. ಬೇರೆ ಯಾವ ಸಾಧು-ಸಂತ, ಸನ್ಯಾಸಿ ಮುಕ್ತಿ-ಜೀವನ್ಮುಕ್ತಿಯ ದಾರಿಯನ್ನು ತೋರಿಸುವುದಿಲ್ಲ. ಹಾಗಾದರೆ ನೀವು ಅವರಿಗೆ ಗುರುಗಳೆಂದು ಹೇಗೆ ಹೇಳುತ್ತೀರಿ? ನಾಟಕದಲ್ಲಿ ಅವರ ಪಾತ್ರವಿದೆ. ಭಾರತವನ್ನು ಪವಿತ್ರತೆಯಿಂದ ಕಾಪಾಡಬೇಕು. ಅವರು ಪವಿತ್ರವಾಗಿದ್ದರೂ ಸಹ ಜ್ಞಾನ-ಯೋಗದಿಂದ ಪವಿತ್ರವಾಗುವುದಿಲ್ಲ. ಔಷಧಿಯನ್ನು ತಿಂದು ಇಂದ್ರಿಯಗಳನ್ನು ನಿಯಂತ್ರಣ ಮಾಡುತ್ತಾರೆ. ಇದರಿಂದ ಯಾವುದೇ ಶಕ್ತಿ ಇರುವುದಿಲ್ಲ. ಯಾವಾಗ ಗೃಹಸ್ಥ ವ್ಯವಹಾರದಲ್ಲಿರುತ್ತಾ ಸ್ತ್ರೀ-ಪುರುಷರಿಬ್ಬರು ಸ್ವಯಂ ವರದಿಂದ ವಿವಾಹಿತರಾಗಿ ನಂತರ ಪವಿತ್ರವಾಗಿದ್ದರೆ ಆಗ ಶಕ್ತಿ ಸಿಗುತ್ತದೆ. ಅವರನ್ನು ಬಾಲ ಬ್ರಹ್ಮಾಚಾರಿ ದಂಪತಿಗಳೆಂದು ಕರೆಯಲಾಗುತ್ತದೆ. ಇಲ್ಲಿ ತಂದೆಯಿಂದಲೂ ಶಕ್ತಿ ಸಿಗುತ್ತದೆ. ಪರಮಪಿತ ಪರಮಾತ್ಮನೇ ಬಂದು ಪವಿತ್ರ ಮಾರ್ಗದ ಸ್ಥಾಪನೆ ಮಾಡುತ್ತಾರೆ. ಸತ್ಯಯುಗದಲ್ಲಿ ದೇವೀ-ದೇವತೆಗಳು ಪವಿತ್ರ ಪ್ರವೃತ್ತಿ ಮಾರ್ಗದವರಾಗಿದ್ದರು. ಅವರು ಪವಿತ್ರವಾಗಿದ್ದರೂ ಸಹ ಮಕ್ಕಳಿದ್ದರು. ಪರಮಪಿತ ಪರಮಾತ್ಮ ಕುಳಿತು ಅವರಿಗೆ ಹೇಗೆ ಶಕ್ತಿ ಕೊಡುತ್ತಾರೆ, ಆ ಶಕ್ತಿಯಿಂದ ಅವರು ಮನೆ-ಗೃಹಸ್ಥದಲ್ಲಿರುತ್ತಾ ಅಪವಿತ್ರರಾಗುವುದಿಲ್ಲ ಎಂದು ಮನುಷ್ಯರು ತಿಳಿದುಕೊಂಡಿಲ್ಲ. ದ್ರೌಪತಿಯು ದುಶ್ಯಾಸನನ್ನು ನನ್ನನ್ನು ಅಪವಿತ್ರಳನ್ನಾಗಿ ಮಾಡುತ್ತಾನೆ ಎಂದು ಭಗವಂತನನ್ನು ಕರೆದಿದ್ದಳು, ಹಾಗೆಯೇ ಇಲ್ಲಿಯೂ ಸಹ ಬಹಳ ಮಕ್ಕಳು ತಂದೆಯನ್ನು ಕೂಗುತ್ತಾರೆ. ಈಗ ಪರಮಾತ್ಮ ಬಂದು 21 ಜನ್ಮಗಳಿಗಾಗಿ ಅಪವಿತ್ರರಾಗುವುದರಿಂದ ರಕ್ಷಣೆ ಮಾಡುತ್ತಾರೆ. ಕೇವಲ ಒಬ್ಬ ದ್ರೌಪತಿ ಇರಲಿಲ್ಲ. ನೀವೆಲ್ಲರೂ ದ್ರೌಪದಿಯರಾಗಿದ್ದೀರಿ. ಒಂದುವೇಳೆ ನಿಮ್ಮ ಪತಿ ಹೊಡೆದರು, ಬೈದರು ನೀವು ಸಹನೆ ಮಾಡಿಕೊಳ್ಳಬೇಕೆಂದು ಮಕ್ಕಳಿಗೆ ತಂದೆಯಿಂದ ಶಿಕ್ಷಣ ಸಿಗುತ್ತದೆ ಏಕೆಂದರೆ ಪವಿತ್ರರಾಗದೆ, ಪವಿತ್ರ ಪ್ರಪಂಚದ ಮಾಲೀಕರಾಗಲು ಸಾಧ್ಯವಿಲ್ಲ. ಕಲ್ಪ-ಕಲ್ಪ ನೀವು ಮಾತೆಯರೇ ಶಿವಶಕ್ತಿಯರಾಗಿದ್ದೀರಿ. ಜಗದಂಬಾ ಸರಸ್ವತಿಯನ್ನು ಹುಲಿಯ ಮೇಲೆ ತೋರಿಸುತ್ತಾರೆ. ಈ ಮಹಿಮೆಯೂ ಸಹ ನಿಮ್ಮದೇ ಆಗಿದೆ. ಇದು ಪತಿತ ಪ್ರಪಂಚ ಅಥವಾ ಆಸುರಿ ಪ್ರಪಂಚವಾಗಿದೆ. ಪಾವನ ಪ್ರಪಂಚವೆಂದರೆ ಈಶ್ವರೀಯ ಪ್ರಪಂಚ. ರಾಮನೇ ಬಂದು ಇಂತಹ ರಾಮರಾಜ್ಯದ ಸ್ಥಾಪನೆ ಮಾಡುತ್ತಾರೆ. ಅದರಲ್ಲಿ ಪವಿತ್ರತೆ ಮುಖ್ಯವಾಗಿದೆ. ಕಾಮ ವಿಕಾರವು ಎಷ್ಟೊಂದು ಬಲಶಾಲಿಯಾಗಿದೆ. ಒಳ್ಳೊಳ್ಳೆಯ ಮನುಷ್ಯರೂ ಸಹ ಪವಿತ್ರವಾಗಿರುವುದು ಅಸಂಭವವೆಂದು ಹೇಳುತ್ತಾರೆ. ಅರೇ! ಸತ್ಯಯುಗದಲ್ಲಿ ದೇವೀ-ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ನೀವು ಸರ್ವಗುಣ ಸಂಪನ್ನರು, ನಾವು ನೀಚ, ಪಾಪಿಗಳೆಂದು ನೀವು ದೇವತೆಗಳ ಮಹಿಮೆ ಮಾಡುತ್ತೀರಿ. ಅವರನ್ನು ಈ ರೀತಿ ಮಾಡುವವರು ಯಾರಾದರೂ ಇರಬೇಕಲ್ಲವೇ! ತಂದೆಯು ಸಂಗಮಯುಗದಲ್ಲಿ ಬಂದು ಸತ್ಯಯುಗದ ಸ್ಥಾಪನೆ ಮಾಡಿದ್ದಾರೆ. ತಂದೆಯು ಬಂದು ಆಸುರಿ ಪ್ರಪಂಚವನ್ನು ದೈವೀ ಪ್ರಪಂಚವನ್ನಾಗಿ ಮಾಡುತ್ತಾರೆ. ಜನರು ಪತಿತ ಎಂಬುದರ ಅರ್ಥವನ್ನು ತಿಳಿದುಕೊಂಡಿಲ್ಲ. ಅರೇ! ನಾವೆಲ್ಲರೂ ಪತಿತರು, ಹೇ! ಪತಿತ ಪಾವನ ಬನ್ನಿ ಎಂದು ಕರೆಯುತ್ತೀರಿ. ಭಾರತ ಪವಿತ್ರವಾಗಿತ್ತು ಆಗ ಡಬಲ್ ಕಿರೀಟವಿತ್ತು. ಈಗ ನೀವು ಪ್ರತಿಯೊಬ್ಬರ ಜೀವನ ಚರಿತ್ರೆಯನ್ನು ತಿಳಿದುಕೊಂಡಿದ್ದೀರಿ. ನೀವೀಗ ತಂದೆಗೆ ಮಕ್ಕಳಾಗಿದ್ದೀರಿ, ನಿಮಗೆ ಪರಮಪಿತ ಪರಮಾತ್ಮನೇ ಬುದ್ಧಿಯಲ್ಲಿ ನೆನಪಿಗೆ ಬರುತ್ತಾರೆ. ಆ ತಂದೆ ನಿರಾಕಾರನಾಗಿದ್ದಾರೆ, ಪರಮಧಾಮದಲ್ಲಿದ್ದಾರೆ. ಇಂತಹ ತಂದೆಯನ್ನು ಸಂಪೂರ್ಣವಾಗಿ ತಿಳಿದುಕೊಂಡಿಲ್ಲ. ಮನುಷ್ಯರು ಈ ಸಮಯದಲ್ಲಿ ಬಹಳ ದುಃಖಿಗಳಾಗಿದ್ದಾರೆ. ಮೃತ್ಯುವನ್ನು ನೋಡಿ ಎಷ್ಟೊಂದು ಭಯ ಪಡುತ್ತಾರೆ. ಈಗ ಮೃತ್ಯು ಮುಂದೆ ಬಂದು ನಿಂತಿದೆ, ಮೊದಲು ರಕ್ತದ ನದಿಗಳು ಹರಿಯುತ್ತವೆ ನಂತರ ಹಾಲಿನ ನದಿಗಳು ಹರಿಯುತ್ತವೆ ಎಂದು ತಂದೆಯು ತಿಳಿಸುತ್ತಾರೆ.

ಈಗ ತಂದೆಯು ನಿಮ್ಮನ್ನು ವಿಷದ ಸಾಗರದಿಂದ ಮುಕ್ತಗೊಳಿಸಿ ಕ್ಷೀರ ಸಾಗರದಲ್ಲಿ ಕರೆದೊಯ್ಯುತ್ತಾರೆ. ಲಕ್ಷ್ಮೀ-ನಾರಾಯಣ ಕ್ಷೀರ ಸಾಗರ ಸತ್ಯಯುಗದಲ್ಲಿದೆ. ಇಲ್ಲಿ ಕುಡಿಯಲೂ ಸಹ ಹಾಲು ಸಿಗುವುದಿಲ್ಲ, ಹಾಲಿನ ಪುಡಿ ಸಿಗುತ್ತದೆ. ಸತ್ಯಯುಗದಲ್ಲಿ ಯಾವ ವಸ್ತುವಿಗೂ ಕೊರತೆಯಿರುವುದಿಲ್ಲ. ಅವಶ್ಯವಾಗಿ ಭಾರತವು ಮೊದಲು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಪರಸ್ಪರ ಕಚ್ಚುತ್ತಿರುತ್ತಾರೆ. ಚಹರೆಯು ಮನುಷ್ಯರಂತೆ ಇದೆ. ಆದರೆ ಚಲನೆ ಬಹಳ ಕೊಳಕಾಗಿದೆ. ಪರಸ್ಪರ ಜಗಳ ಮಾಡುತ್ತಿರುತ್ತಾರೆ. ಇದು ಪಾಪಾತ್ಮರ ಪ್ರಪಂಚವಾಗಿದೆ ಅಂದಾಗ ಸದಾಚಾರಿಗಳೆಲ್ಲಿಂದ ಬರುತ್ತಾರೆ! ಯಾರೇ ದಾನ-ಪುಣ್ಯ ಮಾಡಿದರೆಂದರೆ ಸದಾಚಾರಿಗಳಾಗುತ್ತಾರೆಯೇ? ಈಗಂತು ಎಲ್ಲರೂ ರಾವಣನ ಮತದ ಮೇಲೆ ಇದ್ದಾರೆ. ದೇವತೆಗಳು ಎಷ್ಟೊಂದು ಸುಖಿಗಳಾಗಿದ್ದರು. ರಾಮ ರಾಜ್ಯ ಮತ್ತು ರಾವಣ ರಾಜ್ಯ ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ಭಾರತವಾಸಿಗಳು ತಿಳಿದುಕೊಂಡಿಲ್ಲ. ರಾಮ ರಾಜ್ಯವನ್ನು ಬಯಸುತ್ತಾರೆ ಆದರೆ ಅದನ್ನು ಯಾರು ಸ್ಥಾಪನೆ ಮಾಡುತ್ತಾರೆಂದು ತಿಳಿದಿಲ್ಲ. ಈ ಸಮಯದಲ್ಲಿ ಮನುಷ್ಯರಿಗೆ ಹಣ ಕೊಟ್ಟರೆ ಆ ಹಣದಿಂದ ಪಾಪವನ್ನೇ ಮಾಡುತ್ತಾರೆ ಏಕೆಂದರೆ ಇದು ಪಾಪಾತ್ಮರದೇ ಪ್ರಪಂಚವಾಗಿದೆ. ಈಗ ನೀವು ತಂದೆಯ ಮತದಂತೆ ನಡೆಯಬೇಕು. ನಾವು ತಂದೆಯಿಂದ ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಆದರೆ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ, 63 ಜನ್ಮಗಳು ನೀವು ವಿಕಾರದಲ್ಲಿ ಜೀವನ ಮಾಡುತ್ತೀರಿ. ಈಗ ಈ ಒಂದು ಜನ್ಮದಲ್ಲಿ ಪವಿತ್ರತೆಯ ಸಹಯೋಗ ಕೊಡಬೇಕೆಂದರೆ ಪವಿತ್ರವಾಗಿರಬೇಕಾಗುತ್ತದೆ. ಶ್ರೀಕೃಷ್ಣನು ಸುಂದರನಾಗಿದ್ದನು ನಂತರ ಕಾಮ ಚಿತೆಯ ಮೇಲೆ ಕುಳಿತಿರುವ ಕಾರಣ ಈಗ ಶ್ಯಾಮನಾಗಿದ್ದಾನೆ. ಪುನಃ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸ್ವರ್ಗದ ಮಾಲೀಕನಾಗುತ್ತಾನೆ. ನೀವೂ ಸಹ ದೇವತೆಗಳಾಗಿದ್ದವರು ಈಗ ಅಸುರರಾಗಿದ್ದೀರಿ. ಈ ಚಕ್ರವು ಪೂಜ್ಯರಿಂದ ಪೂಜಾರಿಗಳಾಗಿ ಸುತ್ತತ್ತಲೇ ಇರುತ್ತದೆ.... ಇದನ್ನು ಸನ್ಯಾಸಿಗಳು ಆತ್ಮನೇ ಪರಮಾತ್ಮ ಎಂದು ಹೇಳುತ್ತಾರೆ. ಹೀಗೆ ಈ ಎರಡು ಮಾತುಗಳಿಗೆ ಹಗಲು-ರಾತ್ರಿಯ ಅಂತರವಿದೆ. ನಾಟಕದನುಸಾರವಾಗಿ ಎಲ್ಲರೂ ಇಳಿಯಲೇಬೇಕು. ಈಗ ನಿಮಗೆ ಗುರುಗಳಿಗೂ ಗುರು, ಪತಿಯರಿಗೂ ಪತಿಯಾದ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕು. ಪರಮಪಿತ ಪರಮಾತ್ಮನನ್ನು ಒಪ್ಪಿಕೊಳ್ಳುತ್ತೀರಲ್ಲವೇ! ಶಿವ ಜಯಂತಿಯನ್ನೂ ಸಹ ಆಚರಿಸುತ್ತೀರಿ ಆದರೆ ಶಿವತಂದೆಯು ಬಂದು ಏನು ಮಾಡುತ್ತಾರೆ! ಹೇಗೆ ಮಾಡುತ್ತಾರೆ ಎಂದು ತಿಳಿದುಕೊಂಡಿಲ್ಲ! ಸೋಮನಾಥನ ಇಷ್ಟು ದೊಡ್ಡ ಮಂದಿರವನ್ನು ಕಟ್ಟಿದಾರೆ, ಅವರು ಅಗತ್ಯವಾಗಿ ಭಾರತದಲ್ಲಿಯೇ ಬಂದಿರಬೇಕು. ಆದರೆ ಅವರು ಹೇಗೆ ಬಂದರು, ಏನು ಮಾಡಿದರು, ಏನೂ ಹೇಳುವುದಿಲ್ಲ. ಇದೂ ಸಹ ಪರಂಪರೆಯಿಂದ ನಡೆದು ಬರುತ್ತದೆ. ಗಂಗಾ ನದಿಯ ಮೇಳವನ್ನು ಕುಂಭಮೇಳ ಎಂದು ಹೇಳುತ್ತಾ ಅದನ್ನೂ ಸಹ ಪರಂಪರೆಯಿಂದ ನಡೆದು ಬಂದಿದೆ ಎಂದು ಹೇಳುತ್ತಾರೆ. ಹೀಗೆ ಎಲ್ಲವನ್ನು ಉಲ್ಟಾ ಹೇಳುತ್ತಾರೆ ಹಾಗಾದರೆ ಸತ್ಯಯುಗದಿಂದ ಪ್ರಪಂಚ ಪತಿತವಾಗಿರುತ್ತದೆಯೇ? ಏನೆಲ್ಲಾ ಹೇಳುತ್ತಾರೆ ಅದರ ಅರ್ಥವನ್ನೇ ತಿಳಿದುಕೊಂಡಿಲ್ಲ. ಇದನ್ನು ಭಕ್ತಿಮಾರ್ಗವೆಂದು ಹೇಳಲಾಗುತ್ತದೆ. ಕ್ರೈಸ್ತನು ಬಂದಿದ್ದನು, ಮತ್ತೆ ಯಾವಾಗ ಬರುತ್ತಾನೆ? ಇದು ಯಾರಿಗೂ ಗೊತ್ತಿಲ್ಲ. ಪ್ರದರ್ಶನಿಯಲ್ಲಿ ನೀವು ಸಾವಿರಾರು ಮಂದಿಗೆ ತಿಳಿಸಿಕೊಡುತ್ತೀರಿ ಆದರೆ ಕೋಟಿಯಲ್ಲಿ ಕೆಲವರು ಮಾತ್ರ ಉಳಿದುಕೊಳ್ಳುತ್ತಾರೆ.

ಈಗ ನೀವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಈಗ ಪ್ರಪಂಚದ ಪರಿವರ್ತನೆಯಾಗುತ್ತಿದೆ. ನಾವು ಸನ್ಯಾಸಿಗಳಿಗೂ ಪವಿತ್ರವಾಗಿದ್ದು ತೋರಿಸುತ್ತೇವೆಂದು ಹೇಳುತ್ತೀರಿ. ಮುಂದೆ ಸಮಯಬಂದಂತೆ ಅವರೂ ಸಹ ಇವರಿಗೆ ಶಿಕ್ಷಣ ಕೊಡುವವರು ಪರಮಪಿತ ಪರಮಾತ್ಮ ಆಗಿದ್ದಾರೆಂದು ಒಪ್ಪಿಕೊಳ್ಳುತ್ತಾರೆ. ನೀವು ಕೇವಲ ತಂದೆ ಸರ್ವವ್ಯಾಪಿಯಲ್ಲ. ಗೀತೆಯನ್ನು ಶ್ರೀಕೃಷ್ಣನು ಹೇಳುವುದಿಲ್ಲ ಎನ್ನುವುದನ್ನು ಸಿದ್ಧ ಮಾಡಿ ತಿಳಿಸಬೇಕು, ಆಗ ಅವರ ಗೌರವ ಒಮ್ಮೆಯೇ ಸಮಾಪ್ತಿಯಾಗಿ ಬಿಡುತ್ತದೆ. ಇದೆಲ್ಲವೂ ಅಂತ್ಯದಲ್ಲಿ ಆಗುತ್ತದೆ. ಪರಮಪಿತ ಪರಮಾತ್ಮನನ್ನು ತಂದೆಯಾಗಿದ್ದಾರೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮೊದಲು ಸೂಕ್ಷ್ಮವತನದಲ್ಲಿ ಬ್ರಹ್ಮಾ, ವಿಷ್ಣು, ಶಂಕರರನ್ನು ರಚನೆ ಮಾಡಲಾಗುತ್ತದೆ. ಬ್ರಹ್ಮಾ ಪ್ರಜಾಪಿತನಾಗಿದ್ದಾರೆ. ಬ್ರಹ್ಮಾ ಬ್ರಾಹ್ಮಣರಿಗೆ ಜನ್ಮ ಕೊಡುತ್ತಾರೆ. ಬ್ರಾಹ್ಮಣ ವರ್ಣ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಬ್ರಾಹ್ಮಣರು ಶಿವ ತಂದೆಯ ಮುಖವಂಶಾವಳಿ ಆಗಿದ್ದಾರೆ. ಅವರು ಕುಖ ವಂಶಾವಳಿ ಆಗಿದ್ದಾರೆ. ತಂದೆಯ ಶ್ರೀಮತದಂತೆ ನಡೆಯುವುದರಿಂದ ನೀವು ಪಾವನರಾಗುತ್ತೀರಿ. ನೀವು ದೇಹಧಾರಿಗಳನ್ನು ಮರೆಯಬೇಕು. ಇದು ಶ್ರಮವಲ್ಲವೇ! ಈಗ ನಾಟಕವು ಸಮಾಪ್ತಿಯಾಗುತ್ತದೆ. ಇರುವ ಪಾತ್ರಧಾರಿಗಳೆಲ್ಲರೂ ಹೊರಟು ಹೋಗುತ್ತಾರೆ, ನಂತರ ಬಹಳ ಕಡಿಮೆಮಂದಿ ಉಳಿಯುತ್ತಾರೆ. ರಾಮ, ರಾವಣ ಎಲ್ಲರೂ ಹೊರಟು ಹೋಗುತ್ತಾರೆ.... ನಂತರ ಯಾರು ಉಳಿದುಕೊಳ್ಳುತ್ತಾರೆ? ಎರಡೂಕಡೆಯಿಂದ ಸ್ವಲ್ಪ-ಸ್ವಲ್ಪ ಮಾತ್ರ ಉಳಿದುಕೊಳ್ಳುತ್ತಾರೆ. ಉಳಿದವರೆಲ್ಲರೂ ಮನೆಗೆ ಹಿಂತಿರುಗುತ್ತಾರೆ. ನಂತರ ಮನೆ ಮೊದಲಾದವುಗಳನ್ನು ಮಾಡುವಂತಹವರು, ಸ್ವಚ್ಚ ಮಾಡುವಂತಹವರು ಉಳಿದುಕೊಳ್ಳುತ್ತಾರೆ. ಸಮಯ ಹಿಡಿಸುತ್ತದೆಯಲ್ಲವೇ! ನಾವೂ ಸಹ ಹೊರಟು ಹೋಗುತ್ತೇವೆ. ನಿಮಗೆ ರಾಜ ಮನೆತನದಲ್ಲಿ ಜನ್ಮ ಸಿಗುತ್ತದೆ. ನಂತರ ಅವರು ಸ್ವಚ್ಛ ಮಾಡುತ್ತಾರೆ. ಎಲ್ಲಿ ವಿಜಯಿಗಳಾಗುತ್ತೀರಿ, ಅಲ್ಲಿ ಜನ್ಮವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಭಾರತದಲ್ಲಿಯೇ ವಿಜಯಿಗಳಾಗುತ್ತೀರಿ. ಉಳಿದೆಲ್ಲರೂ ಸಮಾಪ್ತಿಯಾಗುವರು. ಯಾರು ಧನವಂತರು, ರಾಜ ಮೊದಲಾದವರು ಉಳಿದುಕೊಳ್ಳುತ್ತಾರೆ. ಅವರ ಬಳಿ ನೀವು ಜನ್ಮ ತೆಗೆದುಕೊಳ್ಳುತ್ತೀರಿ. ನಂತರ ನೀವು ಇಡೀವಿಶ್ವದ ಮಾಲೀಕರಾಗುತ್ತೀರಿ. ಇಲ್ಲಿಯ ಹಣ, ಅಂತಸ್ತು, ಎಲ್ಲವೂ ಅಲ್ಲಿ ನಿಮಗೆ ಉಪಯೋಗವಾಗುತ್ತದೆ ಎಂದು ತಿಳಿದುಕೊಳ್ಳಬಾರದು. ಇಲ್ಲಿಯ ಸಂಪತ್ತು ನಯಾಪೈಸೆಗೆ ಸಮಾನವಾಗಿದೆ. ಅಲ್ಲಿ ಎಲ್ಲವೂ ಹೊಸದಾಗುತ್ತವೆ. ವಜ್ರ-ವೈಢೂರ್ಯಗಳ ಖಜಾನೆಗಳು ತುಂಬಲ್ಪಡುತ್ತವೆ. ಇಲ್ಲದಿದ್ದರೆ ಅರಮನೆ ಎಲ್ಲಿಂದ ತಯಾರಾಗುತ್ತದೆ. ಇದನ್ನು ತಿಳಿದುಕೊಳ್ಳಲು ಎಷ್ಟೊಂದು ತಿಳುವಳಿಕೆ ಇರಬೇಕು!

ಈಗ ನೀವು ಮಕ್ಕಳು ಡಬಲ್ ಅಹಿಂಸಕರಾಗುತ್ತೀರಿ, ನಾವು ಯಾವುದೇ ಹಿಂಸೆಯನ್ನು ಮಾಡಲು ಸಾಧ್ಯವಿಲ್ಲವೆಂದು ನೀವು ತಿಳಿದುಕೊಂಡಿದ್ದೀರಿ. ಇಲ್ಲಿ ಡಬಲ್ ಹಿಂಸೆ ಇದೆ. ಸತ್ಯಯುಗದಲ್ಲಿ ಹಿಂಸೆಯಿರುವುದಿಲ್ಲ, ಅದನ್ನೇ ಸ್ವರ್ಗ ಎಂದು ಕರೆಯಲಾಗುತ್ತದೆ. ಈ ಜ್ಞಾನವು ಶ್ರೀಮಂತರಿಗೆ ಕಷ್ಟವಾಗುತ್ತದೆ ಎಂದು ತಂದೆಯು ಹೇಳುವುದನ್ನು ನೀವು ತಿಳಿದುಕೊಂಡಿದ್ದೀರಲ್ಲವೇ! ತಂದೆಯು ಬಡವರ ಬಂಧು ಆಗಿದ್ದಾರೆ, ಶಿವ ತಂದೆಯು ದಾತನಾಗಿದ್ದಾರೆ. ಈ ಮನೆ ಮೊದಲಾದವುಗಳು ನಿಮಗಾಗಿಯೇ ಆಗಿದೆ. ನಾನು ನಿಮ್ಮನ್ನೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ. ಮತ್ತೆ ನಾನು ಈ ಹೊಸ ಮನೆಯಲ್ಲಿ ಏಕೆ ಕುಳಿತುಕೊಳ್ಳಲಿ! ಈ ತಂದೆಯು ಹೇಳಿದರು - ನಾವಂತು ಕುಳಿತುಕೊಳ್ಳುವುದಿಲ್ಲ. ಬಾಬಾ ಹೇಳಿದರು - ನಾನು ಕುಳಿತುಕೊಳ್ಳುವುದಿಲ್ಲವೆಂದರೆ ನೀವು ಹೇಗೆ ಕುಳಿತುಕೊಳ್ಳುತ್ತೀರಿ. ಶಿವ ತಂದೆಯು ಹೇಳುತ್ತಾರೆ - ಅಭೋಕ್ತ, ಅಸೋಚತ ಆಗಿದ್ದೇನೆ. ಅಭೋಕ್ತ, ಅಸೋಚತನ ಅರ್ಥವೇನಾಗಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಈಗ ನಾಟಕ ಪೂರ್ಣವಾಗುತ್ತಿದೆ, ಆದ್ದರಿಂದ ಮನೆಗೆ ಹಿಂತಿರುಗಬೇಕು ಅದಕ್ಕಾಗಿ ನೀವು ಅವಶ್ಯವಾಗಿ ಪಾವನರಾಗಬೇಕು. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು.

2. ತಂದೆಯಿಂದ ಶಕ್ತಿ ತೆಗೆದುಕೊಂಡು ಈ ಅಂತಿಮ ಜನ್ಮದಲ್ಲಿ ಸ್ತ್ರೀ-ಪುರುಷರು ಜೊತೆಯಲ್ಲಿದ್ದರೂ ಪವಿತ್ರರಾಗಿ ತೋರಿಸಬೇಕು. ಬೇಹದ್ದಿನ ತಂದೆ ಸಿಕ್ಕಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರ ಶ್ರೀಮತದಂತೆ ನಡೆಯಬೇಕು.

ವರದಾನ:

ತಮ್ಮ ದೇವತಾ ಸಂಸ್ಕಾರಗಳನ್ನು ಪ್ರತ್ಯಕ್ಷಗೊಳಿಸುತ್ತಾ ದಿವ್ಯತೆಯ ಅನುಭವ ಮಾಡಿಸುವಂತಹ ವ್ಯರ್ಥದಿಂದ ಮುಗ್ಧ, ಅವಿದ್ಯಾ ಸ್ವರೂಪ ಭವ.
ಯಾವಾಗ ತಾವು ಮಕ್ಕಳು ತಮ್ಮ ಸತ್ಯಯುಗದ ರಾಜ್ಯದಲ್ಲಿದ್ದಿರೆಂದರೆ, ವ್ಯರ್ಥ ಅಥವಾ ಮಾಯೆಯಿಂದ ಅವಿದ್ಯಾ ಆಗಿದ್ದಿರಿ. ಆದ್ದರಿಂದ ದೇವತೆಗಳನ್ನು ಮಹಾನ್ ಆತ್ಮರೆಂದು ಹೇಳಲಾಗುತ್ತದೆ. ಅಂದಮೇಲೆ ತಮ್ಮಲ್ಲಿ ಅದೇ ಸಂಸ್ಕಾರವನ್ನು ಪ್ರತ್ಯಕ್ಷಗೊಳಿಸುತ್ತಾ, ವ್ಯರ್ಥದ ಅವಿದ್ಯಾ ಸ್ವರೂಪರಾಗಿದೆ. ಸಮಯ, ಶ್ವಾಸ, ನುಡಿ, ಕರ್ಮ, ಎಲ್ಲದರಲ್ಲಿಯೂ ವ್ಯರ್ಥದ ಅವಿದ್ಯಾ ಅರ್ಥಾತ್ ಮುಗ್ಧರಾಗಿ ಬಿಡಿ. ಯಾವಾಗ ವ್ಯರ್ಥದ ಅವಿದ್ಯಾ ಆಗುತ್ತದೆಯೋ ಆಗ ದಿವ್ಯತೆಯು ಸ್ವತಹವಾಗಿ ಹಾಗೂ ಸಹಜವಾಗಿಯೇ ಅನುಭವವಾಗುವುದು. ಆದ್ದರಿಂದ ಪುರುಷಾರ್ಥವನ್ನಂತು ಮಾಡುತ್ತಿದ್ದೇವೆ ಎಂದಷ್ಟೇ ಯೋಚಿಸಬಾರದು ಆದರೆ ಪುರುಷ (ಆತ್ಮ) ನಾಗಿದ್ದು ಈ ರಥದ ಮೂಲಕ ಕಾರ್ಯವನ್ನು ಮಾಡಿಸಿರಿ. ಒಂದು ಬಾರಿ ಮಾಡಿದ ತಪ್ಪು ಇನ್ನೊಮ್ಮೆ ಆಗಬಾರದು.

ಸ್ಲೋಗನ್:

ಯಾರು ಮುಳ್ಳುಗಳ ಮಧ್ಯದಲ್ಲಿದ್ದರೂ ಭಿನ್ನ ಹಾಗೂ ಪ್ರಿಯವಾಗಿರುತ್ತಾರೆಯೋ ಅವರು ಆತ್ಮಿಕ ಗುಲಾಬಿ ಆಗಿದ್ದಾರೆ.

 

ಮಾತೇಶ್ವರಿ ಜೀಯವರ ಅಮೂಲ್ಯ ಮಹಾವಾಕ್ಯ

ಅನೇಕ ಮನುಷ್ಯರು ಪ್ರಶ್ನೆ ಕೇಳುತ್ತಾರೆ, ನಾವು ಆತ್ಮಗಳು ಎಂಬುದಕ್ಕೆ ಪುರಾವೆ ಏನು! ಈಗ ಇದನ್ನು ವಿವರಿಸಲಾಗಿದೆ, ಅಹಂಕಾರ ಆತ್ಮವು ಆ ದೇವರ ಮಗು ಎಂದು ನಾವು ಹೇಳಿದಾಗ, ಈಗ ಇದು ನಿಮ್ಮನ್ನು ಕೇಳುವ ವಿಷಯವಾಗಿದೆ. ಇಡೀ ದಿನ ನಾನು ಹೇಳುತ್ತಲೇ ಇದ್ದೇನೆ, ಆ ಶಕ್ತಿ ಯಾವುದು ಮತ್ತು ನಂತರ ನಾವು ನೆನಪಿಸಿಕೊಳ್ಳುವ ನಮ್ಮವರು ಯಾರು? ಯಾರನ್ನಾದರೂ ನೆನಪಿಸಿಕೊಂಡಾಗ, ಆತ್ಮಗಳಿಗೆ ಖಂಡಿತವಾಗಿಯೂ ಅವನಿಂದ ಏನಾದರೂ ಬೇಕು, ಯಾವಾಗಲೂ ಅವನನ್ನು ನೆನಪಿಟ್ಟುಕೊಳ್ಳುವುದರಿಂದ ಮಾತ್ರ, ನಾವು ಅವನ ಮೂಲಕ ಅದನ್ನು ಪಡೆಯುತ್ತೇವೆ. ನೋಡಿ, ಒಬ್ಬ ವ್ಯಕ್ತಿ ಏನು ಮಾಡಿದರೂ ಮನಸ್ಸಿನಲ್ಲಿ ಒಳ್ಳೆಯ ಆಸೆ ಇರಬೇಕು, ಕೆಲವರಿಗೆ ಸುಖದ ಆಸೆ, ಕೆಲವರಿಗೆ ಶಾಂತಿಯ ಆಸೆ, ಹೀಗೆ ಆಸೆ ಬಂದಾಗ ಅದನ್ನು ತೆಗೆದುಕೊಳ್ಳುವವರು ಖಂಡಿತಾ ಇರುತ್ತಾರೆ ಮತ್ತು ಆ ಆಸೆಯಿಂದ ನೆರವೇರಿತು.ನಿಶ್ಚಯವಾಗಿಯೂ ಅವನು ಕೊಡುವವನು, ಅದಕ್ಕಾಗಿಯೇ ಅವನು ನೆನಪಿಸಿಕೊಳ್ಳುತ್ತಾನೆ. ಈಗ ನೀವು ಈ ರಹಸ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬೇಕು, ಅವನು ಯಾರು? ಈ ಮಾತನಾಡುವ ಶಕ್ತಿ, ನಾನು ಆತ್ಮವೇ ಆಗಿದ್ದೇನೆ, ಅದರ ಆಕಾರವು ಬೆಳಕಿನ ಬಿಂದುವಿನಂತಿದೆ, ಒಬ್ಬ ವ್ಯಕ್ತಿಯು ಭೌತಿಕ ದೇಹವನ್ನು ತೊರೆದಾಗ, ಅದು ಬಿಡುತ್ತದೆ. ಈ ಕಣ್ಣುಗಳಿಂದ ಅದು ಗೋಚರಿಸದಿದ್ದರೂ, ಈಗ ಅದು ಭೌತಿಕ ರೂಪವನ್ನು ಹೊಂದಿಲ್ಲ ಎಂದು ಸಾಬೀತಾಗಿದೆ, ಆದರೆ ಮಾನವರು ಖಂಡಿತವಾಗಿಯೂ ಆತ್ಮವನ್ನು ತೊರೆದಿದ್ದಾರೆ ಎಂದು ಭಾವಿಸುತ್ತಾರೆ. ಹಾಗಾಗಿ ನಾವು ಆ ಆತ್ಮವನ್ನು ಮಾತ್ರ ಕರೆಯುತ್ತೇವೆ, ಯಾವ ಆತ್ಮವು ಬೆಳಕಿನ ಮೂರ್ತರೂಪವಾಗಿದೆ, ಆದ್ದರಿಂದ ಖಂಡಿತವಾಗಿ ಆ ಆತ್ಮವನ್ನು ಸೃಷ್ಟಿಸಿದ ದೇವರು ಸಹ ಅದರ ಸ್ವರೂಪಕ್ಕೆ ಅನುಗುಣವಾಗಿರುತ್ತಾನೆ, ಅದು ಏನೇ ಇರಲಿ, ಅವರ ಜನ್ಮ ಒಂದೇ ಆಗಿರುತ್ತದೆ. ಹಾಗಾದರೆ ನಾವು ಆತ್ಮಗಳು ಆ ಪರಮಾತ್ಮನನ್ನು ನಮ್ಮೆಲ್ಲರ ಆತ್ಮಗಳಲ್ಲಿ ಪರಮಾತ್ಮನೆಂದು ಏಕೆ ಕರೆಯುತ್ತೇವೆ? ಏಕೆಂದರೆ ಅವುಗಳ ಮೇಲೆ ಮಾಯೆಯ ಲೇಪವಿಲ್ಲ. ನಮ್ಮ ಉಳಿದ ಆತ್ಮಗಳು ಅವುಗಳ ಮೇಲೆ ಮಾಯೆಯ ಲೇಪನವನ್ನು ಹೊಂದಿರಬೇಕು ಏಕೆಂದರೆ ನಾವು ಹುಟ್ಟು ಮತ್ತು ಸಾವಿನ ಚಕ್ರದಲ್ಲಿ ಬರುತ್ತೇವೆ. ಈಗ ಇದೇ ಆತ್ಮಕ್ಕೂ ಪರಮಾತ್ಮನಿಗೂ ಇರುವ ವ್ಯತ್ಯಾಸ. ಸರಿ - ಓಹ್ ಶಾಂತಿ.

Download PDF

Hindi/Tamil/English/Telugu/Kannada/Malayalam

Post a Comment

0 Comments