02/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ನೀವು
ರಾಜಋಷಿಗಳಾಗಿದ್ದೀರಿ, ನಿಮಗೆ
ಬೇಹದ್ದಿನ ತಂದೆ
ಇಡೀ ಹಳೆಯ
ಪ್ರಪಂಚದ ಸನ್ಯಾಸವನ್ನು
ಮಾಡುವುದು ಕಲಿಸುತ್ತಿದ್ದಾರೆ,
ಆದ್ದರಿಂದ ನೀವು
ರಾಜ್ಯಪದವಿಯನ್ನು ಪ್ರಾಪ್ತಿ
ಮಾಡಿಕೊಳ್ಳುತ್ತೀರಿ”
ಪ್ರಶ್ನೆ:
ಈ ಸಮಯದಲ್ಲಿ ಯಾವುದೇ ಮನುಷ್ಯರ ಕರ್ಮ ಅಕರ್ಮವಾಗುವುದಿಲ್ಲ ಏಕೆ?
ಉತ್ತರ:
ಏಕೆಂದರೆ ಇಡೀ ಪ್ರಪಂಚದಲ್ಲಿ ಮಾಯೆಯ ರಾಜ್ಯವಿದೆ, ಎಲ್ಲರಲ್ಲೂ 5 ವಿಕಾರ ಪ್ರವೇಶವಾಗಿದೆ.
ಆದ್ದರಿಂದ ಮನುಷ್ಯರು ಯಾವುದೇ ಕರ್ಮ ಮಾಡಿದರೂ ಅದು ವಿಕರ್ಮವಾಗುತ್ತದೆ. ಸತ್ಯಯುಗದಲ್ಲಿ
ಕರ್ಮ ಅಕರ್ಮವಾಗುತ್ತದೆ
ಏಕೆಂದರೆ ಅಲ್ಲಿ ಮಾಯೆ ಇರುವುದಿಲ್ಲ.
ಪ್ರಶ್ನೆ:
ಯಾವ ಮಕ್ಕಳಿಗೆ ಬಹಳ ಒಳ್ಳೆಯ ಉಡುಗೊರೆ ಸಿಗುತ್ತದೆ?
ಉತ್ತರ:
ಯಾರು ಶ್ರೀಮತದಂತೆ ಪವಿತ್ರರಾಗಿ ಕುರುಡರಿಗೆ ಊರುಗೋಲಾಗುತ್ತಾರೆಯೇ, ಎಂದೂ 5 ವಿಕಾರಗಳಿಗೆ ವಶರಾಗಿ ಕುಲಕಳಂಕಿತರಾಗುವುದಿಲ್ಲವೋ ಅಂತಹವರಿಗೆ ಬಹಳ ಒಳ್ಳೆಯ ಉಡುಗೊರೆ ಸಿಗುತ್ತದೆ. ಒಂದುವೇಳೆ ಕೆಲವರು ಪದೇ-ಪದೇ ಮಾಯೆಯಿಂದ ಸೋಲು ಅನುಭವಿಸುತ್ತಿದ್ದರೆ ಆಗ ಅವರ ಪಾಸ್ಪೋರ್ಟ್ ಕ್ಯಾನ್ಸಲ್ ಆಗುತ್ತದೆ.
ಗೀತೆ: ಓಂ ನಮಃ ಶಿವಾಯ....
ಓಂ ಶಾಂತಿ. ಎಲ್ಲರಿಗಿಂತ ಶ್ರೇಷ್ಠ ಪರಮಪಿತ ಪರಮಾತ್ಮ ಅರ್ಥಾತ್ ಪರಮಾತ್ಮ ಆಗಿದ್ದಾರೆ. ಅವರು ರಚಯಿತ ಆಗಿದ್ದಾರೆ. ಮೊದಲು ಬ್ರಹ್ಮಾ, ವಿಷ್ಣು, ಶಂಕರರನ್ನು ರಚನೆ ಮಾಡುತ್ತಾರೆ. ನಂತರ ಕೆಳಗೆ ಅಮರಲೋಕದಲ್ಲಿ ಬನ್ನಿ, ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿದೆ. ಸೂರ್ಯವಂಶಿಗಳ ರಾಜ್ಯವಿದೆ, ಚಂದ್ರವಂಶಿಗಳ ರಾಜ್ಯವಿಲ್ಲ. ಇದನ್ನು ಯಾರು ತಿಳಿಸುತ್ತಿದ್ದಾರೆ? ಜ್ಞಾನಸಾಗರ ತಿಳಿಸುತ್ತಿದ್ದಾರೆ. ಮನುಷ್ಯ-ಮನುಷ್ಯನಿಗೆ ಎಂದೂ ಸಹ ತಿಳಿಸಲು ಸಾಧ್ಯವಿಲ್ಲ. ತಂದೆಯು ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ ಅವರನ್ನು ಭಾರತವಾಸಿಗಳು ತಂದೆ-ತಾಯಿ ಎಂದು ಹೇಳುತ್ತಾರೆ ಅಂದಾಗ ಅವಶ್ಯವಾಗಿ ಪ್ರತ್ಯಕ್ಷವಾಗಿ ತಂದೆ-ತಾಯಿ ಬೇಕು. ಗಾಯನ ಮಾಡುತ್ತಾರೆ ಆದರೆ ಅವಶ್ಯವಾಗಿ ಯಾವುದೋ ಸಮಯದಲ್ಲಿದ್ದರು ಅಂದಾಗ ಮೊದಮೊದಲು ಶ್ರೇಷ್ಠಾತಿ ಶ್ರೇಷ್ಠ ಆ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಬಾಕಿ ಪ್ರತಿಯೊಬ್ಬರು ಆತ್ಮರಾಗಿದ್ದಾರೆ. ಆತ್ಮ ಯಾವಾಗ ಶರೀರದಲ್ಲಿರುತ್ತದೆಯೋ ಆಗ ದುಃಖಿ ಹಾಗೂ ಸುಖಿಯಾಗಿರುತ್ತದೆ. ಇದು ಬಹಳ ತಿಳಿದುಕೊಳ್ಳುವ ಮಾತಾಗಿದೆ. ಇವೆಲ್ಲಾ ಯಾವುದೇ ದಂತಕಥೆಗಳಲ್ಲ. ಆದರೆ ಯಾವುದೇ ಗುರು, ಗೋಸಾಯಿಗಳು ತಿಳಿಸುತ್ತಾರೋ ಅವೆಲ್ಲಾ ದಂತಕಥೆಗಳಾಗಿವೆ. ಈಗ ಭಾರತ ನರಕವಾಗಿದೆ. ಸತ್ಯಯುಗದಲ್ಲಿ ಇದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅಲ್ಲಿ ಎಲ್ಲರೂ ಸೌಭಾಗ್ಯಶಾಲಿಗಳಾಗಿದ್ದರು, ಯಾವುದೇ ದುರ್ಭಾಗ್ಯಶಾಲಿಗಳಿರಲಿಲ್ಲ. ಯಾವುದೇ ದುಃಖ, ರೋಗವಿರಲಿಲ್ಲ. ಇದು ಪಾಪಾತ್ಮಗಳ ಪ್ರಪಂಚವಾಗಿದೆ. ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದರು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಕೃಷ್ಣನಿಗೆ ಎಲ್ಲರೂ ಗೌರವ ಕೊಡುತ್ತಾರೆ. ಅವನಿಗೆ ಎರಡು ಪ್ರಕಾರದ ಭೂಗೋಳವನ್ನು ಕೊಟ್ಟಿದ್ದಾರೆ. ಕೃಷ್ಣನ ಆತ್ಮ ಹೇಳುತ್ತದೆ - ಈಗ ನಾನು ನರಕವನ್ನು ಒದೆಯುತ್ತಿದ್ದೇನೆ, ಸ್ವರ್ಗವನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದೇನೆ. ಮೊದಲು ಕೃಷ್ಣಪುರಿಯಿತ್ತು, ಈಗ ಕಂಸಪುರಿಯಿದೆ. ಇದರಲ್ಲಿ ಈ ಕೃಷ್ಣನು ಇರಲಿಲ್ಲ. ಇವರ ಅಂತಿಮಜನ್ಮ ಈ ಜನ್ಮವಾಗಿದೆ. ಆದರೆ ಈಗ ಕೃಷ್ಣನ ರೂಪವಿಲ್ಲ. ಇದೆಲ್ಲವನ್ನೂ ತಂದೆಯು ಕುಳಿತು ತಿಳಿಸುತ್ತಿದ್ದಾರೆ. ತಂದೆಯೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಈಗ ನರಕವಾಗಿದೆ ನಂತರ ಸ್ವರ್ಗವನ್ನಾಗಿ ಮಾಡಲು ತಂದೆಯು ಬರುತ್ತಾರೆ. ಇದು ಹಳೆಯ ಪ್ರಪಂಚವಾಗಿದೆ. ಇದು ಹೊಸ ಪ್ರಪಂಚವಾಗಿತ್ತು, ಈಗ ಹಳೆಯ ಪ್ರಪಂಚವಾಗಿದೆ. ಮನೆಯೂ ಸಹ ಹೊಸದರಿಂದ ಹಳೆಯದಾಗಿದೆ. ಕೊನೆಗೆ ಮುರಿದುಹೋಗುವ ಸ್ಥಿತಿಯೂ ಬರುತ್ತದೆ. ನಾನು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತೇನೆ. ನೀವು ರಾಜಋಷಿಗಳಾಗಿದ್ದೀರಿ. ರಾಜ್ಯಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕೋಸ್ಕರ ನೀವು ವಿಕಾರಗಳ ಸನ್ಯಾಸವನ್ನು ಮಾಡುತ್ತೀರಿ. ಆ ಹದ್ದಿನ ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ಆದರೆ ಹಳೆಯ ಪ್ರಪಂಚದಲ್ಲಿಯೇ ಇರುತ್ತಾರೆ. ಬೇಹದ್ದಿನ ತಂದೆಯು ನಿಮಗೆ ನರಕದ ಸನ್ಯಾಸ ಮಾಡಿಸುತ್ತಾರೆ ಮತ್ತು ಸ್ವರ್ಗದ ಸಾಕ್ಷಾತ್ಕಾರವನ್ನು ಮಾಡಿಸುತ್ತಾರೆ. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆ ಎಂದು ತಂದೆಯೇ ಹೇಳುತ್ತಾರೆ. ನೀವು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲವೆಂದು ತಂದೆಯು ಎಲ್ಲರಿಗೂ ಹೇಳುತ್ತಾರೆ. ಯಾವ ಕಾರ್ಯವನ್ನು ಮಾಡುತ್ತೇವೆ - ಒಳ್ಳೆಯದೋ ಅಥವಾ ಕೆಟ್ಟದ್ದೋ ಆ ಸಂಸ್ಕಾರದನುಸಾರ ಅವಶ್ಯವಾಗಿ ಜನ್ಮವನ್ನು ತೆಗೆದುಕೊಳ್ಳುತ್ತೇವೆ. ಕೆಲವರು ಶ್ರೀಮಂತರು, ಕೆಲವರು ಬಡವರು, ಕೆಲವರು ರೋಗಿಗಳು, ಕೆಲವರು ಆರೋಗ್ಯವಂತರಾಗುತ್ತಾರೆ. ಇದೆಲ್ಲವೂ ಹಿಂದಿನ ಜನ್ಮದ ಕರ್ಮದ ಲೆಕ್ಕಾಚಾರವಾಗಿದೆ. ಯಾರಾದರೂ ಆರೋಗ್ಯವಾಗಿದ್ದರೆ ಅವಶ್ಯವಾಗಿ ಅವರ ಹಿಂದಿನ ಜನ್ಮದಲ್ಲಿ ಆಸ್ಪತ್ರೆ ಮುಂತಾದವನ್ನು ಕಟ್ಟಿದ್ದರೆ, ದಾನ-ಪುಣ್ಯ ಹೆಚ್ಚಾಗಿ ಮಾಡಿದಾಗ ಶ್ರೀಮಂತರಾಗುತ್ತಾರೆ. ನರಕದಲ್ಲಿ ಮನುಷ್ಯರು ಯಾವುದೇ ಕರ್ಮವನ್ನು ಮಾಡಿದರೂ ಅದು ಅವಶ್ಯವಾಗಿ ವಿಕರ್ಮವಾಗುತ್ತದೆ ಏಕೆಂದರೆ ಎಲ್ಲರಲ್ಲಿಯೂ ಪಂಚವಿಕಾರಗಳಿವೆ. ಈಗ ಸನ್ಯಾಸಿಗಳು ಪವಿತ್ರರಾಗಿರುತ್ತಾರೆ, ಪಾಪವನ್ನು ಮಾಡುವುದು ಬಿಡುತ್ತಾರೆ, ಕಾಡಿನಲ್ಲಿ ಹೋಗಿ ಇರುತ್ತಾರೆ. ಆದರೆ ಅವರ ಕರ್ಮ ಅಕರ್ಮವಾಗುವುದಿಲ್ಲ. ಈ ಸಮಯದಲ್ಲಿ ಮಾಯೆಯ ರಾಜ್ಯವಿದೆ ಎಂದು ತಂದೆಯು ತಿಳಿಸುತ್ತಾರೆ ಆದ್ದರಿಂದ ಮನುಷ್ಯರು ಯಾವುದೇ ಕರ್ಮವನ್ನು ಮಾಡಿದರೂ ಅದು ಪಾಪವಾಗುತ್ತದೆ. ಸತ್ಯ ಹಾಗೂ ತ್ರೇತಾಯುಗದಲ್ಲಿ ಮಾಯೆಯಿರುವುದಿಲ್ಲ ಆದ್ದರಿಂದ ಎಂದೂ ವಿಕರ್ಮವಾಗುವುದಿಲ್ಲ, ದುಃಖವೂ ಇರುವುದಿಲ್ಲ. ಈ ಸಮಯದಲ್ಲಿ ಒಂದು ಕಡೆ ರಾವಣನ ಸರಪಳಿ, ಮತ್ತೊಂದು ಕಡೆ ಭಕ್ತಿಮಾರ್ಗದ ಸರಪಳಿ ಇದೆ. ಜನ್ಮ-ಜನ್ಮಾಂತರದಿಂದ ಪೆಟ್ಟನ್ನು ತಿನ್ನುತ್ತಲೇ ಬಂದಿದ್ದೇವೆ. ತಂದೆಯು ಹೇಳುತ್ತಾರೆ - ನಾನು ಜಪ-ತಪ ಮಾಡುವುದರಿಂದ ಸಿಗುವುದಿಲ್ಲವೆಂದು ಮೊದಲೇ ಹೇಳಿದ್ದರು. ನಾನು ಯಾವಾಗ ಭಕ್ತಿಯ ಅಂತ್ಯವಾಗುತ್ತದೆಯೋ ಆಗ ಬರುತ್ತೇನೆ. ಭಕ್ತಿಮಾರ್ಗವು ದ್ವಾಪರಯುಗದಿಂದ ಪ್ರಾರಂಭವಾಗುತ್ತದೆ. ಮನುಷ್ಯರು ದುಃಖಿಗಳಾದಾಗ ನೆನಪು ಮಾಡುತ್ತಾರೆ. ಸತ್ಯ ಹಾಗೂ ತ್ರೇತಾಯುಗದಲ್ಲಿ ಸೌಭಾಗ್ಯಶಾಲಿ ಮತ್ತು ಇಲ್ಲಿ ದುರ್ಭಾಗ್ಯಶಾಲಿಗಳಾಗಿರುತ್ತಾರೆ. ಇಲ್ಲಿ ಅಳುತ್ತಾ ಕಿರುಚಾಡುತ್ತಾ ಇರುತ್ತಾರೆ. ಇಲ್ಲಿ ಅಕಾಲಮೃತ್ಯು ಇರುತ್ತದೆ. ನಾನು ನರಕವನ್ನು ಸ್ವರ್ಗವನ್ನಾಗಿ ಮಾಡಲು ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಭಾರತ ಪ್ರಾಚೀನ ದೇಶವಾಗಿತ್ತು, ಯಾರು ಮೊದಲಿದ್ದರು ಅವರೇ ಅಂತಿಮದಲ್ಲಿರುತ್ತಾರೆ. 84 ಜನ್ಮಗಳ ಚಕ್ರವೆಂದು ಗಾಯನ ಮಾಡಲಾಗಿದೆ. ಸರ್ಕಾರದವರು ತ್ರಿಮೂರ್ತಿ ಚಿತ್ರವನ್ನು ಮಾಡಿದ್ದಾರೆ ಆದರೆ ಅದರಲ್ಲಿ ಬ್ರಹ್ಮ, ವಿಷ್ಣು, ಶಂಕರರಿರಬೇಕಿತ್ತು ಆದರೆ ಪ್ರಾಣಿಗಳನ್ನು ತೋರಿಸಿದ್ದಾರೆ. ತಂದೆ ರಚೈತನ ಚಿತ್ರವಿಲ್ಲ ಮತ್ತು ಕೆಳಗೆ ಚಕ್ರವನ್ನು ತೋರಿಸಿದ್ದಾರೆ. ಇದು ಚರಕವಾಗಿದೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಅದು ನಾಟಕದ ಸೃಷ್ಟಿಚಕ್ರವಾಗಿದೆ. ಈಗ ಚಕ್ರದ ಹೆಸರು ಅಶೋಕ ಚಕ್ರವೆಂದು ಹೇಳುತ್ತಾರೆ. ನೀವೀಗ ಈ ಚಕ್ರವನ್ನು ತಿಳಿದುಕೊಳ್ಳುವುದರಿಂದಲೇ ಅಶೋಕರಾಗುತ್ತೀರಿ. ಮಾತು ಸರಿಯಾಗಿದೆ ಆದರೆ ಉಲ್ಟಾಪಲ್ಟಾ ಮಾಡಿದ್ದಾರೆ. ನೀವು ಈ 84 ಜನ್ಮಗಳ ಚಕ್ರವನ್ನು ನೆನಪು ಮಾಡುವುದರಿಂದಲೇ 21 ಜನ್ಮಗಳಿಗೋಸ್ಕರ ಚಕ್ರವರ್ತಿ ರಾಜರಾಗುತ್ತೀರಿ. ಈ ಅಣ್ಣನೂ (ಬ್ರಹ್ಮನೂ) ಸಹ 84 ಜನ್ಮಗಳನ್ನು ಪೂರ್ಣ ಮಾಡಿದ್ದಾರೆ. ಇದು ಕೃಷ್ಣನ ಅಂತಿಮ ಜನ್ಮವಾಗಿದೆ. ಇವರಿಗೆ ತಂದೆಯೇ ಕುಳಿತು ತಿಳಿಸುತ್ತಿದ್ದಾರೆ. ವಾಸ್ತವಿಕವಾಗಿ ನಿಮ್ಮೆಲ್ಲರ ಅಂತಿಮ ಜನ್ಮವಾಗಿದೆ. ಭಾರತವಾಸಿ ದೇವಿ-ದೇವತಾ ಧರ್ಮದವರೇ ಪೂರ್ಣ 84 ಜನ್ಮಗಳನ್ನು ಭೋಗಿಸಬೇಕು. ಈಗ ಎಲ್ಲರ ಚಕ್ರ ಪೂರ್ಣವಾಗುತ್ತದೆ. ಇದು ನಿಮ್ಮ ಶರೀರ ಕೊಳಕಾಗಿದೆ. ಈ ಪ್ರಪಂಚವೂ ಸಹ ಕೊಳಕಾಗಿದೆ. ಆದ್ದರಿಂದ ನಿಮಗೆ ಈ ಪ್ರಪಂಚದಿಂದಲೇ ಸನ್ಯಾಸ ಮಾಡಿಸುತ್ತಿದ್ದಾರೆ. ಈ ಸ್ಮಶಾನದ ಜೊತೆ ಮನಸ್ಸಿಟ್ಟುಕೊಳ್ಳಬೇಡಿ. ಈಗ ತಂದೆ ಮತ್ತು ಆಸ್ತಿಯ ಜೊತೆ ಮನಸ್ಸಿಟ್ಟುಕೊಳ್ಳಿ. ನೀವಾತ್ಮರು ಅವಿನಾಶಿಯಾಗಿದ್ದೀರಿ, ಈ ಶರೀರವು ವಿನಾಶಿಯಾಗಿದೆ. ಈಗ ನನ್ನೊಬ್ಬನನ್ನು ನೆನಪು ಮಾಡಿದಾಗ ಅಂತಿಮಗತಿ ಸೋ ಗತಿಯಾಗಿದೆ. ಅಂತ್ಯದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡುತ್ತಾರೋ..... ಎನ್ನುವ ಗಾಯನವಿದೆ. ಈಗ ಅಂತ್ಯಕಾಲದಲ್ಲಿ ಯಾರು ಶಿವಬಾಬಾರ ಸ್ಮರಣೆ ಮಾಡುತ್ತಾರೋ ನಾರಾಯಣನ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆಂದು ತಂದೆಯು ಹೇಳುತ್ತಾರೆ. ನಾರಾಯಣನ ಪದವಿಯು ಸತ್ಯಯುಗದಲ್ಲಿ ಸಿಗುತ್ತದೆ. ತಂದೆಯನ್ನು ಬಿಟ್ಟರೆ ಈ ಪದವಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಇದು ಮನುಷ್ಯರಿಂದ ದೇವತೆಗಳಾಗುವ ಪಾಠಶಾಲೆಯಾಗಿದೆ. ಇಲ್ಲಿ ತಂದೆಯೇ ವಿದ್ಯೆಯನ್ನು ಓದಿಸುತ್ತಾರೆ. ಓಂ ನಮಃ ಶಿವಾಯ ಎನ್ನುವುದು ಅವರ ಮಹಿಮೆಯಾಗಿದೆ. ನಾವು ಅವರ ಮಕ್ಕಳಾಗಿದ್ದೇವೆಂದು ನಿಮಗೆ ತಿಳಿದಿದೆ. ಆಸ್ತಿಯನ್ನೂ ಸಹ ತೆಗೆದುಕೊಳ್ಳುತ್ತಿದ್ದೇವೆ.
ಈಗ ನೀವು ಮನುಷ್ಯರ ಮತದಂತೆ ನಡೆಯುವುದಿಲ್ಲ. ಮನುಷ್ಯ ಮತದಂತೆ ನಡೆಯುವುದರಿಂದ ಎಲ್ಲರೂ ನರಕವಾಸಿಗಳಾಗಿದ್ದೀರಿ, ಶಾಸ್ತ್ರವೂ ಸಹ ಮನುಷ್ಯರೇ ಗಾಯನ ಮಾಡಿರುವುದು. ಇಡೀ ಪ್ರಪಂಚ ಈ ಸಮಯದಲ್ಲಿ ಧರ್ಮಭ್ರಷ್ಟ, ಕರ್ಮಭ್ರಷ್ಟವಾಗಿದೆ. ದೇವತೆಗಳು ಪವಿತ್ರವಾಗಿದ್ದರು. ಈಗ ತಂದೆಯು ಹೇಳುತ್ತಾರೆ - ಒಂದುವೇಳೆ ಸೌಭಾಗ್ಯಶಾಲಿಗಳಾಗಬೇಕಾದರೆ ಪವಿತ್ರರಾಗಿ, ಪ್ರತಿಜ್ಞೆಯನ್ನು ಮಾಡಿ. ತಂದೆಯೇ ನಾವು ಪವಿತ್ರರಾಗಿ ತಂದೆಯಿಂದ ಸಂಪೂರ್ಣ ಆಸ್ತಿಯನ್ನು ಪಡೆದುಕೊಳ್ಳುತ್ತೇವೆ. ಈ ಹಳೆಯ ಪತಿತ ಪ್ರಪಂಚವು ವಿನಾಶವಾಗುತ್ತದೆ. ಜಗಳ, ಯುದ್ಧ ಏನೇನೋ ಆಗುತ್ತಿದೆ. ಕ್ರೋಧವೂ ಸಹ ಎಷ್ಟೊಂದು ಇದೆ. ಎಷ್ಟೊಂದು ದೊಡ್ಡ ದೊಡ್ಡ ಮದ್ದು-ಗುಂಡುಗಳನ್ನು ಮಾಡುತ್ತಿದ್ದಾರೆ. ಎಷ್ಟೊಂದು ಕ್ರೋಧಿ, ಲೋಭಿಗಳಾಗಿದ್ದಾರೆ. ಅಲ್ಲಿ ಶ್ರೀಕೃಷ್ಣ ಗರ್ಭಮಹಲಿನಿಂದ ಹೊರಗೆ ಬರುತ್ತಾನೆ ಎನ್ನುವುದು ನೀವು ಮಕ್ಕಳಿಗೆ ಸಾಕ್ಷಾತ್ಕಾರವಾಗಿದೆ. ಇಲ್ಲಿ ಗರ್ಭಜೈಲಾಗಿದೆ. ಹೊರಗೆ ಬರುವುದರಿಂದ ಮಾಯೆ ಪಾಪ ಮಾಡಿಸಲು ಪ್ರಾರಂಭ ಮಾಡುತ್ತದೆ. ಅಲ್ಲಿ ಗರ್ಭಮಹಲಿನಿಂದ ಮಗು ಬರುತ್ತದೆ ಆಗ ಪ್ರಕಾಶವಾಗುತ್ತದೆ. ಬಹಳ ಆರಾಮದಿಂದ ಇರುತ್ತಾರೆ. ಗರ್ಭದಿಂದ ಬರುತ್ತಲೇ ದಾಸಿಯರು ತೆಗೆದುಕೊಳ್ಳುತ್ತಾರೆ. ತಾಳವನ್ನು ಬಾರಿಸಲು ಪ್ರಾರಂಭ ಮಾಡುತ್ತಾರೆ. ಇಲ್ಲಿಗೂ ಮತ್ತು ಅಲ್ಲಿಗೂ ಎಷ್ಟೊಂದು ಅಂತರವಿದೆ.
ಈಗ ನೀವು ಮಕ್ಕಳಿಗೆ 3 ಧಾಮಗಳನ್ನು ತಿಳಿಸಿಕೊಡಲಾಗಿದೆ. ಶಾಂತಿಧಾಮದಿಂದಲೇ ಆತ್ಮಗಳು ಬರುತ್ತವೆ. ಆತ್ಮವು ನಕ್ಷತ್ರ ಸಮಾನವಿದೆ. ಅದು ಭೃಕುಟಿಯ ಮಧ್ಯದಲ್ಲಿದೆ. ಆತ್ಮದಲ್ಲಿ 84 ಜನ್ಮಗಳ ಅವಿನಾಶಿ ರೆಕಾರ್ಡ್ ತುಂಬಿದೆ. ನಾಟಕವು ಎಂದೂ ವಿನಾಶವಾಗುವುದಿಲ್ಲ ಮತ್ತು ಪಾತ್ರವೂ ಬದಲಾಗುವುದಿಲ್ಲ. ಎಷ್ಟೊಂದು ಚಿಕ್ಕ ಆತ್ಮದಲ್ಲಿ 84 ಜನ್ಮಗಳ ಪಾತ್ರವು ಸರಿಯಾಗಿ ತುಂಬಿರುವುದು ಅದ್ಭುತವಾಗಿದೆ. ಇದು ಎಂದೂ ಹಳೆಯದಾಗುವುದಿಲ್ಲ ನಿತ್ಯವೂ ಹೊಸದಾಗಿರುತ್ತದೆ. ಪುನಃ ಆತ್ಮವು ತನ್ನ ಅದೇ ಪಾತ್ರವನ್ನು ಪ್ರಾರಂಭ ಮಾಡುತ್ತದೆ. ಈಗ ನೀವು ಮಕ್ಕಳು ಆತ್ಮನೇ ಪರಮಾತ್ಮನೆಂದು ಹೇಳುವುದಿಲ್ಲ. ಹಮ್ ಸೋನ ಅರ್ಥವನ್ನು ತಂದೆಯೇ ತಿಳಿಸಿದ್ದಾರೆ. ಅವರು ನಾವು ಅಹಂಬ್ರಹ್ಮಾಸ್ಮಿ, ನಾನೇ ಪರಮಾತ್ಮನಾಗಿದ್ದೇನೆ ಮಾಯೆಯನ್ನು ರಚನೆ ಮಾಡುವವನು ಎಂದು ಉಲ್ಟಾ ಅರ್ಥವನ್ನು ಹೇಳಿದ್ದಾರೆ. ಈಗ ವಾಸ್ತವದಲ್ಲಿ ಮಾಯೆಯನ್ನು ರಚನೆ ಮಾಡುವುದಿಲ್ಲ. ಮಾಯೆ ಪಂಚವಿಕಾರವಾಗಿದೆ. ಆ ತಂದೆಯು ಮಾಯೆಯನ್ನು ರಚನೆ ಮಾಡುವುದಿಲ್ಲ. ತಂದೆಯು ಹೊಸ ಸೃಷ್ಟಿಯನ್ನು ರಚನೆ ಮಾಡುತ್ತಾರೆ. ನಾನು ಹೊಸ ಸೃಷ್ಟಿಯನ್ನು ರಚನೆ ಮಾಡುತ್ತೇನೆಂದು ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ಬೇಹದ್ದಿನ ತಂದೆ ಒಬ್ಬರೇ ಆಗಿದ್ದಾರೆ. ಓಂನ ಅರ್ಥವನ್ನೂ ಸಹ ತಂದೆಯು ತಿಳಿಸುತ್ತಾರೆ. ಆತ್ಮವು ಶಾಂತಸ್ವರೂಪವಾಗಿದೆ. ಶಾಂತಿಧಾಮದಲ್ಲಿದೆ ಆದರೆ ತಂದೆಯು ಜ್ಞಾನದ ಸಾಗರ, ಆನಂದದ ಸಾಗರ ಆದರೆ ಆತ್ಮಕ್ಕೆ ಈ ಗಾಯನವನ್ನು ಮಹಿಮೆ ಮಾಡುವುದಿಲ್ಲ. ಆತ್ಮದಲ್ಲಿ ನಾನು ಒಂದೇ ಬಾರಿ ಬರುತ್ತೆನೆಂದು ತಂದೆಯು ಹೇಳುತ್ತಾರೆ. ನಾನು ಅವಶ್ಯವಾಗಿ ಆಸ್ತಿಯನ್ನು ಕೊಡುತ್ತೇನೆ. ಈ ಬೇಹದ್ದಿನ ತಂದೆಯು ಸದಾ ಸುಖದ ಆಸ್ತಿಯನ್ನು ಕೊಡುತ್ತಾರೆ. ಪವಿತ್ರತೆಯಿದ್ದಾಗ ಸುಖ, ಶಾಂತಿಯಿತ್ತು. ಅಪವಿತ್ರತೆಯಿದ್ದಾಗ ದುಃಖ, ಅಶಾಂತಿಯಿದೆ. ತಂದೆಯೇ ಕುಳಿತು ನೀವು ಆತ್ಮ ಮೊದಮೊದಲು ಮೂಲವತನದಲ್ಲಿದ್ದೀರಿ ಎಂದು ತಿಳಿಸುತ್ತಿದ್ದಾರೆ ನಂತರ ದೇವಿ-ದೇವತಾ ಧರ್ಮದಲ್ಲಿ ಬರುತ್ತೀರಿ ನಂತರ ಕ್ಷತ್ರಿಯ ಧರ್ಮದಲ್ಲಿ ಬರುತ್ತೀರಿ. 8 ಜನ್ಮ ಸತೋಪ್ರಧಾನದಲ್ಲಿ, 12 ಜನ್ಮ ಸತೋದಲ್ಲಿ, 21 ಜನ್ಮ ದ್ವಾಪರದಲ್ಲಿ, 42 ಜನ್ಮ ಕಲಿಯುಗದಲ್ಲಿ ಈಗ ಶೂದ್ರರಾಗಿದ್ದೀರಿ. ಪುನಃ ಬ್ರಾಹ್ಮಣವರ್ಣದಲ್ಲಿ ಬರಬೇಕು ನಂತರ ದೇವತಾ ವರ್ಣದಲ್ಲಿ ಹೋಗುತ್ತೀರಿ. ನೀವೀಗ ಈಶ್ವರೀಯ ಮಡಿಲಿನಲ್ಲಿದ್ದೀರಿ. ತಂದೆಯು ಎಷ್ಟೊಂದು ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. 84 ಜನ್ಮಗಳನ್ನು ತಿಳಿದುಕೊಳ್ಳುವುದರಿಂದ ಎಲ್ಲವೂ ಬರುತ್ತದೆ. ಇಡೀ ಚಕ್ರದ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಲ್ಲಿ ಒಂದೇ ಧರ್ಮವಿತ್ತೆಂದು ನಿಮಗೆ ತಿಳಿದಿದೆ. ಸರ್ವಶಕ್ತಿವಂತನ ರಾಜ್ಯವಿತ್ತು. ನೀವೀಗ ಲಕ್ಷ್ಮೀ-ನಾರಾಯಣರ ಪದವಿಯನ್ನು ಪಡೆದುಕೊಳ್ಳುತ್ತಿದ್ದೀರಿ. ಪಾವನ ಪ್ರಪಂಚ ಸತ್ಯಯುಗವಾಗಿದೆ, ಅಲ್ಲಿ ಸ್ವಲ್ಪ ಮನುಷ್ಯರಿರುತ್ತಾರೆ. ಬಾಕಿ ಎಲ್ಲಾ ಆತ್ಮಗಳು ಮುಕ್ತಿಧಾಮದಲ್ಲಿರುತ್ತಾರೆ. ಎಲ್ಲರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಅವರನ್ನು ಯಾರೂ ತಿಳಿದುಕೊಂಡಿಲ್ಲ. ಪರಮಾತ್ಮ ಸರ್ವವ್ಯಾಪಿಯಾಗಿದ್ದಾರೆ ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ನಿಮಗೆ ಯಾರು ಹೇಳಿದರು? ಗೀತೆಯಲ್ಲಿ ಬರೆಯಲಾಗಿತ್ತು ಎಂದು ಹೇಳುತ್ತಾರೆ. ಗೀತೆಯನ್ನು ಯಾರು ಮಾಡಿದರು? ಭಗವಾನುವಾಚ - ನಾನು ಈ ಸಾಧಾರಣ ಬ್ರಹ್ಮನ ತನುವಿನ ಆಧಾರ ತೆಗೆದುಕೊಳ್ಳುತ್ತೇನೆ. ಯುದ್ಧದ ಮೈದಾನದಲ್ಲಿ ಒಬ್ಬ ಅರ್ಜುನನಿಗೆ ಕುಳಿತು ಹೇಗೆ ಜ್ಞಾನವನ್ನು ತಿಳಿಸಲಿ. ನಿಮಗೆ ಯುದ್ಧ ಹಾಗೂ ಪಗಡೆಯಾಡುವುದನ್ನು ಕಲಿಸುವುದಿಲ್ಲ. ಭಗವಂತ ಮನುಷ್ಯರಿಂದ ದೇವತೆಯನ್ನಾಗಿ ಮಾಡುವಂತಹವರಾಗಿದ್ದಾರೆ. ಅವರು ಪಗಡೆಯಾಡಿ ಯುದ್ಧ ಮಾಡಿ ಎಂದು ಹೇಗೆ ಹೇಳಲು ಸಾಧ್ಯ. ನಂತರ ದ್ರೌಪದಿಗೆ 5 ಪತಿಯರಿದ್ದರು ಎಂದು ಹೇಳುತ್ತಾರೆ ಅದು ಹೇಗೆ ಸಾಧ್ಯ. ಕಲ್ಪದ ಮೊದಲೂ ತಂದೆಯೇ ಸ್ವರ್ಗವನ್ನಾಗಿ ಮಾಡಿದ್ದರು ಈಗ ಪುನಃ ಮಾಡುತ್ತಿದ್ದಾರೆ. ಕೃಷ್ಣನ 84 ಜನ್ಮ ಪೂರ್ಣವಾಯಿತು. ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರ 84 ಜನ್ಮಗಳು ಪೂರ್ಣವಾಯಿತು. ಈಗ ನೀವು ಶೂದ್ರರಿಂದ ಬದಲಾಗಿ ಬ್ರಾಹ್ಮಣರಾಗಿದ್ದೀರಿ. ಯಾರು ಬ್ರಾಹ್ಮಣವರ್ಣದಲ್ಲಿ ಬರುತ್ತಾರೋ ಅವರೇ ಮಮ್ಮಾ ಬಾಬಾ ಎಂದು ಹೇಳುತ್ತಾರೆ. ಭಲೆ ಕೆಲವರು ಒಪ್ಪಿಕೊಳ್ಳಲಿ ಅಥವಾ ಒಪ್ಪಿಕೊಳ್ಳದಿರಲಿ ನಮ್ಮ ಗುರಿಯಂತೂ ಶ್ರೇಷ್ಠವಾಗಿದೆ ಎಂದು ತಿಳಿದುಕೊಳ್ಳಬೇಕು. ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಬರುತ್ತಾರೆ ಆದರೆ ಕಡಿಮೆ ಪದವಿಯನ್ನು ತೆಗೆದುಕೊಳ್ಳುತ್ತಾರೆ. ಅಲ್ಲಿ ಹೇಗೆ ರಾಜ-ರಾಣಿಯರೋ ಹಾಗೆ ಪ್ರಜೆಗಳೂ ಸಹ ಸುಖಿಗಳಾಗಿರುತ್ತಾರೆ. ಸ್ವರ್ಗವೆಂದು ಹೆಸರಾಗಿದೆ. ಸ್ವರ್ಗದ ರಚೈತ ತಂದೆಯು ಸ್ವರ್ಗವನ್ನು ರಚನೆ ಮಾಡುತ್ತಾರೆ ಇದು ನರಕವಾಗಿದೆ. ಎಲ್ಲಾ ಸೀತೆಯರನ್ನು ರಾವಣ ಜೈಲಿನಲ್ಲಿ ಬಂಧಿಸಿಟ್ಟಿದ್ದಾರೆ. ಎಲ್ಲಾ ಶೋಕದಲ್ಲಿ ಕುಳಿತು ಈ ರಾವಣನಿಂದ ಬಿಡಿಸಿ ಎಂದು ಭಗವಂತನನ್ನು ನೆನಪು ಮಾಡುತ್ತಿದ್ದಾರೆ. ಸತ್ಯಯುಗ ಅಶೋಕವಾಟಿಕೆಯಾಗಿದೆ. ಎಲ್ಲಿಯವರೆಗೆ ಸೂರ್ಯವಂಶಿ ರಾಜಧಾನಿ ನಿಮ್ಮದು ಸ್ಥಾಪನೆಯಾಗುವುದಿಲ್ಲವೋ ಅಲ್ಲಿಯವರೆಗೆ ವಿನಾಶವಾಗುವುದಿಲ್ಲ. ರಾಜಧಾನಿಯು ಸ್ಥಾಪನೆಯಾಗಿ, ಮಕ್ಕಳ ಕರ್ಮಾತೀತ ಸ್ಥಿತಿಯಾದಾಗ ಅಂತಿಮ ಯುದ್ಧವಾಗುತ್ತದೆ. ಅಲ್ಲಿಯತನಕ ರಿಹರ್ಸಲ್ ಆಗುತ್ತದೆ. ಈ ಯುದ್ಧದ ನಂತರ ಸ್ವರ್ಗದ ದ್ವಾರ ತೆರೆಯುತ್ತದೆ. ನೀವು ಮಕ್ಕಳು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಬೇಕು. ತಂದೆಯು ಪಾಸ್ಪೋರ್ಟ್ ನ್ನು ಕೊಡುತ್ತಿದ್ದಾರೆ. ಎಷ್ಟೆಷ್ಟು ಪವಿತ್ರರಾಗಿರುತ್ತೀರೋ ಅಷ್ಟಷ್ಟು ಉಡುಗೊರೆಯು ಸಿಗುತ್ತಿರುತ್ತಿದೆ. ಮಧುರ ಬಾಬಾ ನಾನು ತಮ್ಮ ನೆನಪನ್ನು ಅವಶ್ಯವಾಗಿ ಮಾಡುತ್ತೇನೆಂದು ಪ್ರತಿಜ್ಞೆ ಮಾಡಬೇಕು. ಮುಖ್ಯವಾದ ಮಾತು ಪವಿತ್ರತೆಯದ್ದಾಗಿದೆ. ಪಂಚವಿಕಾರಗಳ ದಾನವನ್ನು ಅವಶ್ಯವಾಗಿ ಕೊಡಬೇಕು. ಕೆಲವರು ಸೋತು ಎದ್ದು ನಿಂತುಕೊಳ್ಳುತ್ತಾರೆ. ಒಂದುವೇಳೆ 2-4 ಬಾರಿ ಮಾಯೆಯು ಪೆಟ್ಟನ್ನು ಕೊಟ್ಟು ಕೆಳಗೆ ಬಿದ್ದರೆ ನಪಾಸಾಗುತ್ತಾರೆ. ಪಾಸ್ಪೋರ್ಟ್ ಕ್ಯಾನ್ಸಲ್ ಆಗುತ್ತದೆ. ಮಕ್ಕಳೇ ಕುಲಕಳಂಕಿತರಾಗಬೇಡಿ ಎಂದು ತಂದೆಯೇ ಹೇಳುತ್ತಾರೆ. ನೀವು ವಿಕಾರಗಳನ್ನು ಬಿಡಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಅವಶ್ಯವಾಗಿ ಮಾಡುತ್ತೇನೆ. ಒಳ್ಳೆಯದು,
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಸೌಭಾಗ್ಯಶಾಲಿಗಳಾಗುವುದಕ್ಕೋಸ್ಕರ ತಂದೆಯ ಜೊತೆ ಪವಿತ್ರತೆಯ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಈ ಕೊಳಕಾದ ಪ್ರಪಂಚದಿಂದ ಮನಸ್ಸನ್ನು ಇಟ್ಟುಕೊಳ್ಳಬಾರದಾಗಿದೆ.
2.
ಮಾಯೆಯ ಪೆಟ್ಟನ್ನು ಎಂದೂ ಸಹ ತಿನ್ನಬಾರದಾಗಿದೆ. ಕುಲಕಳಂಕಿತರಾಗಬಾರದಾಗಿದೆ. ಯೋಗ್ಯರಾಗಿ ಸ್ವರ್ಗದ ಪಾಸ್ಪೋರ್ಟನ್ನು ತಂದೆಯಿಂದ ತೆಗೆದುಕೊಳ್ಳಬೇಕಾಗಿದೆ.
ವರದಾನ:
ಮನಸ್ಸನ್ನು ವ್ಯಸ್ತವಾಗಿಟ್ಟು
ಕೊಳ್ಳುವ ಕಲೆಯ
ಮುಖಾಂತರ ವ್ಯರ್ಥದಿಂದ
ಮುಕ್ತವಾಗಿರುವಂತಹ ಸದಾ
ಸಮರ್ಥ ಸ್ವರೂಪ
ಭವ
ಹೇಗೆ ಇತ್ತೀಚಿನ ಜಗತ್ತಿನಲ್ಲಿ ದೊಡ್ಡ ಅಂತಸ್ತಿನಲ್ಲಿರುವವರು ತಮ್ಮ ಕಾರ್ಯದ ದಿನಚರಿಯನ್ನು ಸಮಯ ಪ್ರಮಾಣ ಸೆಟ್ ಮಾಡಿಕೊಳ್ಳುತ್ತಾರೆ
ಅದೇರೀತಿ ತಾವು ಯಾರು ವಿಶ್ವದ ನವ ನಿರ್ಮಾಣದ ಆಧಾರಮೂರ್ತಿಗಳಾಗಿರುವಿರಿ, ಬೇಹದ್ದಿನ ಡ್ರಾಮದೊಳಗೆ ಹೀರೋ ಪಾತ್ರಧಾರಿಗಳಾಗಿರುವಿರಿ. ವಜ್ರ ಸಮಾನ ಜೀವನದವರಾಗಿರುವಿರಿ. ನೀವೂ ಸಹ ತಮ್ಮ ಮನಸ್ಸು ಮತ್ತು ಬುದ್ಧಿಯನ್ನು ಸಮರ್ಥ ಸ್ಥಿತಿಯಲ್ಲಿ
ಸ್ಥಿತ ಮಾಡುವಂತಹ ಕಾರ್ಯಕ್ರಮ ಸೆಟ್ ಮಾಡಿಕೊಳ್ಳಿ. ಮನಸ್ಸನ್ನು ಬಿಝಿಯಾಗಿಟ್ಟುಕೊಳ್ಳುವ ಕಲೆ ಸಂಪೂರ್ಣ ರೀತಿಯಲ್ಲಿ ಉಪಯೋಗಿಸಿ ಆಗ ವ್ಯರ್ಥದಿಂದ ಮುಕ್ತರಾಗಿಬಿಡುವಿರಿ. ಎಂದೂ ಸಹ ಅಪ್ಸೆಟ್ ಆಗುವುದಿಲ್ಲ.
ಸ್ಲೋಗನ್:
ಡ್ರಾಮದ ಪ್ರತಿ ದೃಶ್ಯವನ್ನು ನೋಡುತ್ತಾ ಹರ್ಷಿತರಾಗಿದ್ದಾಗ
ಎಂದೂ ಸಹ ಒಳ್ಳೆಯದು ಕೆಟ್ಟದರ ಆಕರ್ಷಣೆಯಲ್ಲಿ
ಬರುವುದಿಲ್ಲ.
0 Comments