Header Ads Widget

Header Ads

KANNDA MURLI 13.01.23

 

13/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ ಇಲ್ಲಿ ತಾವು ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಿಕೊಳ್ಳಬೇಕು, ಹಳೆಯ ಜಗತ್ತಿನ ಸುಖಗಳಿಂದ ಬುದ್ಧಿಯನ್ನು ತೆಗೆಯಬೇಕು, ತಮ್ಮ ಮತದಂತೆ ನಡೆಯಬಾರದು

ಪ್ರಶ್ನೆ:

ದೇವತಾ ಜನ್ಮಕ್ಕಿಂತಲೂ ಜನ್ಮ ಬಹಳ ಚೆನ್ನಾಗಿದೆ, ಹೇಗೆ?

ಉತ್ತರ:

ಜನ್ಮದಲ್ಲಿ ತಾವು ಮಕ್ಕಳು ಶಿವಬಾಬಾನ ಭಂಡಾರದಿಂದ ತಿನ್ನುತ್ತೀರಿ. ಇಲ್ಲಿ ತಾವು ಅಪಾರ ಸಂಪಾದನೆಯನ್ನು ಮಾಡಿಕೊಳ್ಳುತ್ತೀರಿ, ತಾವು ತಂದೆಯ ಆಶ್ರಯವನ್ನು ಪಡೆದಿದ್ದೀರಿ, ಜನ್ಮದಲ್ಲಿಯೇ ತಾವು ತಮ್ಮ ಲೋಕ-ಪರಲೋಕವನ್ನು ಸುಖಿಯನ್ನಾಗಿ ಮಾಡುತ್ತೀರಿ. ಸುಧಾಮನ ಹಾಗೆ ಎರಡು ಹಿಡಿ ಅವಲಕ್ಕಿಯನ್ನು ಕೊಟ್ಟು 21 ಜನ್ಮದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ.

ಗೀತೆ:  ಹತ್ತಿರವಿರಲಿ ಅಥವಾ ದೂರವಿರಲಿ.......

ಓಂ ಶಾಂತಿ. ಗೀತೆಯ ಅರ್ಥ ಎಷ್ಟು ಚೆನ್ನಾಗಿದೆ. ತಂದೆ ಕುಳಿತು ಮಕ್ಕಳಿಗೆ ತಿಳಿಸುತ್ತಿದ್ದಾರೆ - ನಾವು ತನುವುನಿಂದ ಹತ್ತಿರ ಇರಬಹುದು ಅಥವಾ ದೂರ ಇರಬಹುದು ಏಕೆಂದರೆ ಸಮ್ಮುಖದಲ್ಲಿ ಯೋಗದ ಶಿಕ್ಷಣವನ್ನು ಕೊಡುತ್ತಿದ್ದಾರೆ. ಪ್ರೇರಣೆಯಿಂದ ಕೊಡುವುದಿಲ್ಲ ತಾನೇ! ನಾನು ಹತ್ತಿರ ಇರಬಹುದು, ದೂರವಿರಬಹುದು - ನೆನಪಂತೂ ನನ್ನನ್ನೇ ಮಾಡಬೇಕು. ಭಗವಂತನ ಬಳಿ ಹೋಗಲು ಭಕ್ತಿ ಮಾಡುತ್ತಾರೆ. ತಂದೆ ಕುಳಿತು ತಿಳಿಸುತ್ತಾರೆ - ಹೇ! ಜೀವಾತ್ಮಗಳೇ, ಶರೀರದಲ್ಲಿ ನಿವಾಸ ಮಾಡುವಂತಹ ಆತ್ಮಗಳೇ, ಆತ್ಮಗಳ ಜೊತೆ ಪರಮಪಿತ ಪರಮಾತ್ಮ ಕುಳಿತು ಮಾತನಾಡುತ್ತಾರೆ. ಪರಮಾತ್ಮ ತಂದೆ ಆತ್ಮಗಳ ಜೊತೆ ಅವಶ್ಯವಾಗಿ ಮಿಲನ ಮಾಡುತ್ತಾರೆ, ಆದ್ದರಿಂದ ಜೀವಾತ್ಮಗಳು ಭಗವಂತನನ್ನು ನೆನಪು ಮಾಡುತ್ತಾರೆ ಏಕೆಂದರೆ ಎಲ್ಲರೂ ದುಃಖಿಗಳಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಈಗ ತಾವು ಮಕ್ಕಳು ತಿಳಿದಿದ್ದೀರಿ ನಾವು ಬಹಳ ಹಳೆಯ ಭಕ್ತರು. ಎಲ್ಲರಿಗಿಂತ ನಮ್ಮನ್ನು ಮಾಯೆ ಹಿಡಿದುಕೊಂಡಿದೆ, ಆಗಿನಿಂದಲೂ ಭಗವಂತ ಶಿವನ ನೆನಪನ್ನು ಪ್ರಾರಂಭಿಸಿದೆವು. ಏಕೆಂದರೆ ಶಿವಬಾಬಾರವರೇ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದರು, ಅಂದಮೇಲೆ ಅವರ ಸ್ಮಾರಕವನ್ನು ಮಾಡಿ ಭಕ್ತಿ ಮಾಡುತ್ತಾರೆ. ಈಗ ತಮಗೆ ಗೊತ್ತಿದೆ - ತಂದೆ ಸಮ್ಮುಖದಲ್ಲಿ ಬಂದಿದ್ದಾರೆ ನಮ್ಮನ್ನು ಕರೆದೊಯ್ಯಲು, ಏಕೆಂದರೆ ಈಗ ತಂದೆಯ ಬಳಿಗೆ ಹೋಗಬೇಕಾಗಿದೆ. ಇಲ್ಲಿ ಇರುವ ತನಕ ಹಳೆಯ ಶರೀರವನ್ನು, ಹಳೆಯ ಜಗತ್ತನ್ನು ಬುದ್ಧಿಯಿಂದ ಮರೆಯಬೇಕು ಹಾಗೂ ನೆನಪಿನಲ್ಲಿ ಇರಬೇಕು. ಯೋಗಾಗ್ನಿಯಿಂದ ಪಾಪ ಭಸ್ಮವಾಗುತ್ತದೆ. ಇದರಲ್ಲಿ ಶ್ರಮವಿದೆ. ಪದವಿಯಂತೂ ಬಹಳ ದೊಡ್ಡದಿದೆ. ವಿಶ್ವದ ಮಾಲೀಕರಾಗಬೇಕು. ಮನುಷ್ಯರು ಹೇಳುತ್ತಾರೆ - ಶಿವಬಾಬಾ ವಿಶ್ವದ ಮಾಲೀಕರೆಂದು. ಆದರೆ ಇಲ್ಲ, ವಿಶ್ವದ ಮಾಲೀಕರು ಮನುಷ್ಯರೇ ಆಗುತ್ತಾರೆ. ತಂದೆಯೇ ಕುಳಿತು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ಹೇಳುತ್ತಾರೆ ತಾವೇ ವಿಶ್ವದ ಮಾಲೀಕರಾಗಿದ್ದಿರಿ, ನಂತರ 84 ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಈಗ ಕವಡೆಗೂ ಮಾಲೀಕರಲ್ಲ. ಮೊದಲ ಜನ್ಮಕ್ಕೆ ಹಾಗೂ ಈಗಿನ ಅಂತ್ಯದ ಜನ್ಮಕ್ಕೆ ನೋಡಿ ಹಗಲು ರಾತ್ರಿಯಷ್ಟು ವ್ಯತ್ಯಾಸವಿದೆ. ತಂದೆ ಬಂದು ಸಾಕ್ಷಾತ್ಕಾರ ಮಾಡಿಸುವ ತನಕ ಯಾರಿಗೂ ನೆನಪು ಬರಲು ಸಾಧ್ಯವಿಲ್ಲ. ಜ್ಞಾನ ಬುದ್ಧಿಯಿಂದಲೇ ಸಾಕ್ಷಾತ್ಕಾರ ಆಗುತ್ತದೆ. ಯಾರು ಬುದ್ಧಿವಂತ ಮಕ್ಕಳಿದ್ದಾರೆ, ನಿತ್ಯ ತಂದೆಯನ್ನು ನೆನಪು ಮಾಡುತ್ತಾರೆ ಅವರಿಗೆ ಬಹಳ ಖುಷಿ ಆಗುತ್ತದೆ. ಇಲ್ಲಿ ತಾವು ಕೇಳುತ್ತಿರುವುದೆಲ್ಲವೂ ಹೊಸ ಮಾತುಗಳಾಗಿವೆ. ಮನುಷ್ಯರಂತೂ ಏನನ್ನೂ ತಿಳಿದಿಲ್ಲ. ಅವರು ಸುಳ್ಳನ್ನೇ ಹೇಳುತ್ತಿದ್ದಾರೆ ಹಾಗೂ ಎಲ್ಲಾ ಕಡೆ ಅಲೆದಾಡುತ್ತಿದ್ದಾರೆ. ತಮ್ಮನ್ನು ಅಲೆದಾಡುವುದರಿಂದ ಬಿಡಿಸಲಾಗಿದೆ. ತಂದೆಯು ಹೇಳುತ್ತಾರೆ - ತಾವು ಆತ್ಮಗಳಾಗಿದ್ದೀರಿ, ನಾನು ತಂದೆಯನ್ನು ನೆನಪು ಮಾಡುತ್ತಿರಿ. ಬುದ್ಧಿಯಲ್ಲಿ ಇದೇ ವಿಚಾರವಿರಲಿ - ನಾವು ಆತ್ಮಗಳು ತಂದೆಯ ಬಳಿಗೆ ಹೋಗಬೇಕು, ಸೃಷ್ಟಿ ನಮಗಾಗಿ ಅಲ್ಲ. ಹಳೆಯ ಸೃಷ್ಟಿ ಸಮಾಪ್ತಿ ಆಗುತ್ತಿದೆ. ನಂತರ ನಾವು ಸ್ವರ್ಗದಲ್ಲಿ ಬಂದು ಹೊಸ ಮಹಲನ್ನು ಮಾಡುತ್ತೇವೆ. ಇದೇ ವಿಚಾರ ಹಗಲು-ರಾತ್ರಿ ನಡೆಯಬೇಕು. ತಂದೆ ತಮ್ಮ ಅನುಭವ ಹೇಳುತ್ತಾರೆ. ರಾತ್ರಿ ಮಲಗಿದ್ದಾಗಲೂ ಇದೇ ವಿಚಾರಗಳು ನಡೆಯುತ್ತವೆ. ನಾಟಕ ಈಗ ಪೂರ್ಣ ಆಗುತ್ತದೆ, ಹಳೆಯ ಬಟ್ಟೆಯನ್ನು ಬಿಡಬೇಕು. ಹಾ! ವಿಕರ್ಮಗಳ ಹೊರೆ ಬಹಳ ಇದೆ, ಆದ್ದರಿಂದ ನಿರಂತರವಾಗಿ ತಂದೆಯನ್ನು ನೆನಪು ಮಾಡಬೇಕು. ತಮ್ಮ ಸ್ಥಿತಿಯನ್ನು ದರ್ಪಣದಲ್ಲಿ ನೋಡಿಕೊಳ್ಳಬೇಕು - ನಮ್ಮ ಬುದ್ಧಿ ಎಲ್ಲದರಿಂದ ದೂರವಾಗಿದೆಯೇ? ವ್ಯವಹಾರ ಇತ್ಯಾದಿಗಳನ್ನು ಮಾಡುತ್ತಿದ್ದರೂ ಸಹ ಬುದ್ಧಿಯಿಂದ ಕೆಲಸ ಮಾಡಬಹುದು. ತಂದೆಗೂ ಎಷ್ಟೊಂದು ಚಿಂತೆ ಇದೆ. ಮಕ್ಕಳೂ ಬಹಳ ಇದ್ದಾರೆ. ಅವರ ಯೋಚನೆಯನ್ನು ಮಾಡಲೇ ಬೇಕಾಗುತ್ತದೆ. ಮಕ್ಕಳಿಗೆ ಆಶ್ರಯ ಕೊಡಬೇಕು. ಬಹಳ ದುಃಖಿಗಳು ತಾನೇ! ಗಲಾಟೆಗಳು ಆದಾಗ ಎಷ್ಟೊಂದು ಜನ ದುಃಖಿಗಳಾಗಿ ಸಾಯುತ್ತಾರೆ. ಸಮಯ ಬಹಳ ಕೆಟ್ಟದ್ದಾಗಿದೆ. ಮಕ್ಕಳಿಗೆ ಆಶ್ರಯ ಕೊಡಲು ಮನೆಗಳನ್ನು ಮಾಡುತ್ತಿರುವುದು. ಇಲ್ಲಿ ಎಲ್ಲರೂ ತಮ್ಮ ಮಕ್ಕಳೇ ಇರುತ್ತಾರೆ. ಯಾವುದೇ ಭಯವಿಲ್ಲ ಹಾಗೂ ಯೋಗಬಲವೂ ಇರುತ್ತದೆ. ಮಕ್ಕಳಿಗೆ ಸಾಕ್ಷಾತ್ಕಾರ ಆಗಿದೆ, ಯಾರು ತಂದೆಯನ್ನು ಚೆನ್ನಾಗಿ ನೆನಪು ಮಾಡುತ್ತಾರೋ ಅವರ ರಕ್ಷಣೆಯನ್ನು ತಂದೆಯು ಮಾಡುತ್ತಾರೆ. ಶತೃವಿಗೆ ಭಯಂಕರ ರೂಪವನ್ನು ತೋರಿಸಿ ಓಡಿಸುತ್ತಾರೆ. ತಾವು ಶರೀರ ಇರುವ ತನಕ ಯೋಗದಲ್ಲಿ ಇರಬೇಕು. ಇಲ್ಲವೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ದೊಡ್ಡ ವ್ಯಕ್ತಿಯ ಮಗು ಶಿಕ್ಷೆ ಅನುಭವಿಸಬೇಕಾದಾಗ ತಲೆಯನ್ನು ಕೆಳಗೆ ಮಾಡಬೇಕಾಗುತ್ತದೆ. ತಾವೂ ಸಹ ತಲೆ ಕೆಳಗೆ ಮಾಡಬೇಕಾಗುತ್ತದೆ. ಮಕ್ಕಳಿಗೆ ಮಾತ್ರ ಇನ್ನೂ ಕಠಿಣ ಶಿಕ್ಷೆ ಇರುತ್ತದೆ. ಕೆಲವರು ಹೇಳುತ್ತಾರೆ - ಈಗಂತೂ ಮಾಯೆಯ ಸುಖವನ್ನು ಅನುಭವಿಸೋಣ, ಮುಂದೆ ಏನಾಗುತ್ತದೋ ನೋಡೋಣ ಎಂದು. ಅನೇಕರಿಗೆ ಹಳೆಯ ಜಗತ್ತಿನ ಸುಖ ಪ್ರಿಯವಾಗಿದೆ. ಇಲ್ಲಿ ತಾವು ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಉತ್ತಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಅನುಸರಿಸಬೇಕಾಗುತ್ತದೆ, ತಾಯಿ-ತಂದೆಯ ಆದೇಶದಂತೆ ನಡೆಯಬೇಕು. ತಮ್ಮ ಮತ ಅಂದರೆ ರಾವಣನ ಮತ ಎಂದು ಅರ್ಥ. ಅಂದಮೇಲೆ ಅದು ಅದೃಷ್ಟಕ್ಕೆ ಗೆರೆ ಎಳೆಯುವಂತಹದ್ದಾಗಿರುತ್ತದೆ. ಬಾಬಾನನ್ನು ಕೇಳಿದರೆ ಬಾಬಾ ತಕ್ಷಣ ಹೇಳುತ್ತಾರೆ - ಇದು ಆಸುರೀ ಮತವಾಗಿದೆ. ಶ್ರೀಮತವಲ್ಲ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ಬೇಕು. ನೋಡಿಕೊಳ್ಳಬೇಕು - ಎಲ್ಲಾದರೂ ಉಲ್ಟಾ ಕರ್ಮವನ್ನು ಮಾಡಿ ತಂದೆಯ ನಿಂದನೆಯನ್ನು ಮಾಡಿಸುತ್ತಿಲ್ಲವೇ? ಯಾವಾಗ ಅಂತಹ ಲಕ್ಷಣಗಳು ಬರುತ್ತವೋ ಆಗಲೇ ದೇವೀ-ದೇವತೆಗಳು ಆಗುತ್ತೀರಿ. ಅಲ್ಲಿ ತಾನಾಗಿಯೇ ಲಕ್ಷಣಗಳು ಬಂದುಬಿಡುತ್ತವೆ ಎಂದು ತಿಳಿಯಬೇಡಿ. ಇಲ್ಲಿಯೇ ಬಹಳ ಮಧುರವಾದ ನಡವಳಿಕೆ ಬೇಕು. ಒಂದುವೇಳೆ ಬ್ರಹ್ಮಾತಂದೆಯೇ ಹೇಳಿದರೂ ಸಹ - ಶಿವಬಾಬಾರವರೇ ಜವಾಬ್ದಾರಿ ಎಂದು ತಿಳಿದುಕೊಳ್ಳಿ. ಒಂದುವೇಳೆ ಏನಾದರೂ ನಷ್ಟವಾದರೂ ಪರವಾಗಿಲ್ಲ. ಅದು ಡ್ರಾಮಾದಲ್ಲಿ ಇತ್ತು ಅಂದಾಗ ನಿಮ್ಮ ಮೇಲೆ ದೋಷವಿಲ್ಲ. ಸ್ಥಿತಿ ಬಹಳ ಚೆನ್ನಾಗಿರಬೇಕು. ತಾವು ಭಲೆ ಇಲ್ಲಿ ಕುಳಿತಿದ್ದೀರಿ, ನಾವು ಬ್ರಹ್ಮಾಂಡದ ಮಾಲೀಕರು ಅಲ್ಲಿಯ ನಿವಾಸಿಗಳು ಎಂಬುದು ಬುದ್ಧಿಯಲ್ಲಿ ಇರಲಿ. ರೀತಿ ಮನೆಯಲ್ಲಿ ಇರುತ್ತಾ, ವ್ಯವಹಾರ ಮಾಡುತ್ತಿದ್ದರೂ ಭಿನ್ನರಾಗುತ್ತೀರಿ. ಹೇಗೆ ಸನ್ಯಾಸಿಗಳು ಗೃಹಸ್ಥದಿಂದ ದೂರವಾಗುತ್ತಾರೆ, ತಾವು ಇಡೀ ಹಳೆಯ ಜಗತ್ತಿನಿಂದ ದೂರವಾಗುತ್ತೀರಿ. ಹಠಯೋಗದ ಸನ್ಯಾಸ ಹಾಗೂ ಸನ್ಯಾಸಕ್ಕೂ ಹಗಲು-ರಾತ್ರಿಯ ವ್ಯತ್ಯಾಸವಿದೆ. ರಾಜಯೋಗವನ್ನು ತಂದೆಯೇ ಕಲಿಸುತ್ತಾರೆ. ಸನ್ಯಾಸಿಗಳು ಕಲಿಸಲು ಸಾಧ್ಯವಿಲ್ಲ ಏಕೆಂದರೆ ಮುಕ್ತಿ-ಜೀವನ್ಮುಕ್ತಿಯ ದಾತ ಒಬ್ಬರೇ ಆಗಿದ್ದಾರೆ. ಸರ್ವರ ಮುಕ್ತರು ಈಗ ಆಗಲೇಬೇಕಾಗಿದೆ ಏಕೆಂದರೆ ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಸಾಧುಗಳು ನಾವು ಹಿಂತಿರುಗಬೇಕೆಂದು ಸಾಧನೆ ಮಾಡುತ್ತಾರೆ. ಇಲ್ಲಿ ದುಃಖಿಗಳು ಆಗಿದ್ದಾರೆ. ನಾವು ಜ್ಯೋತಿಗಳು ಜ್ಯೋತಿಯಲ್ಲಿ ಸಮಾವೇಶ ಆಗುತ್ತೇವೆ ಎಂದು ಕೆಲವರು ಹೇಳುತ್ತಾರೆ. ಹೀಗೆ ಅನೇಕ ಮತಗಳು ಇವೆ.

ತಂದೆ ತಿಳಿಸಿದ್ದಾರೆ - ಕೆಲವು ಮಕ್ಕಳಿದ್ದಾರೆ, ಅವರಿಗೆ ಹಳೆಯ ಸಂಬಂಧಿಗಳೇ ನೆನಪು ಬರುತ್ತಿರುತ್ತಾರೆ. ಜಗತ್ತಿನ ಸುಖಗಳ ಆಸೆಯಾಯಿತೆಂದರೆ ಅವರು ಸತ್ತಂತೆ. ನಂತರ ಅವರ ಕಾಲು ಇಲ್ಲಿ ನಿಲ್ಲಲು ಸಾಧ್ಯವಿಲ್ಲ. ಮಾಯೆಯು ಬಹಳ ದುರಾಸೆಯನ್ನು ತರುತ್ತದೆ. ಒಂದು ಗಾದೆಯಿದೆ- ಭಗವಂತನನ್ನು ನೆನಪು ಮಾಡಿ ಇಲ್ಲವಾದರೆ ಮಾಯೆ ಬರುತ್ತದೆ. ಮಾಯೆಯೂ ಸಹ ಗಿಡುಗನ ಹಾಗೆ ಯುದ್ಧ ಮಾಡುತ್ತದೆ. ಈಗ ತಂದೆ ಬಂದಿದ್ದಾರೆ ಎಂದಮೇಲೆ ಈಗಲೂ ಪುರುಷಾರ್ಥವನ್ನು ಮಾಡಿ ಉತ್ತಮ ಪದವಿಯನ್ನು ಪಡೆಯದಿದ್ದರೆ ಕಲ್ಪ-ಕಲ್ಪಾಂತರಕ್ಕೂ ಪಡೆಯುವುದಿಲ್ಲ. ಇಲ್ಲಿ ತಂದೆಯ ಬಳಿ ತಮಗೆ ಯಾವುದೇ ದುಃಖವಿಲ್ಲ, ಹಳೆಯ ದುಃಖದ ಜಗತ್ತನ್ನು ಮರೆಯಬೇಕಾಗಿದೆ. ಇಡೀ ದಿನದ ದಿನಚರಿಯನ್ನು ನೋಡಿಕೊಳ್ಳಬೇಕು. ಎಷ್ಟು ಸಮಯ ತಂದೆಯನ್ನು ನೆನಪು ಮಾಡಿದೆ? ಯಾರಿಗೆ ಜೀವದಾನವನ್ನು ನೀಡಿದೆ? ತಂದೆಯು ತಮಗೆ ಜೀವದಾನವನ್ನು ನೀಡಿದ್ದಾರೆ ತಾನೇ! ತಾವು ಸತ್ಯಯುಗ-ತ್ರೇತಾಯುಗದ ತನಕ ಅಮರರಾಗಿರುತ್ತೀರಿ. ಇಲ್ಲಿ ಯಾರಾದರೂ ಸತ್ತರೆ ಎಷ್ಟೊಂದು ಅಳುತ್ತಾರೆ. ಸ್ವರ್ಗದಲ್ಲಿ ದುಃಖದ ಹೆಸರಿಲ್ಲ. ಹಳೆಯ ಪೆÇರೆಯನ್ನು ಬಿಟ್ಟು ಹೊಸದನ್ನು ಪಡೆಯುತ್ತೇವೆ ಎಂದು ತಿಳಿಯುತ್ತಾರೆ. ಉದಾಹರಣೆಯು ನಿಮಗೆ ಅನ್ವಯಿಸುತ್ತದೆ. ಸನ್ಯಾಸಿಗಳು ಉದಾಹರಣೆಯನ್ನು ಕೊಡುವುದಿಲ್ಲ. ಅವರು ಹಳೆಯ ಜಗತ್ತನ್ನು ಮರೆಯುತ್ತಾರೇನು? ಅವರಂತೂ ಹಣವನ್ನು ಕೂಡಿಡುತ್ತಿದ್ದಾರೆ. ಇಲ್ಲಿ ತಾವು ಏನನ್ನು ತಂದೆಗೆ ನೀಡುತ್ತೀರೋ ಅದನ್ನು ಅವರು ತಿನ್ನುವುದಿಲ್ಲ ಹಾಗೂ ತಮ್ಮ ಬಳಿ ಇಟ್ಟುಕೊಳ್ಳುವುದಿಲ್ಲ. ಅದರಿಂದ ಮಕ್ಕಳ ಪಾಲನೆಯನ್ನು ಮಾಡುತ್ತಾರೆ. ಆದ್ದರಿಂದ ಇದು ಶಿವಬಾಬಾರವರ ಸತ್ಯ-ಸತ್ಯ ಭಂಡಾರ ಆಗಿದೆ, ಭಂಡಾರದಿಂದ ತಿನ್ನುವಂತಹವರು ಇಲ್ಲಿಯೂ ಸುಖಿಗಳು ನಂತರ ಜನ್ಮ-ಜನ್ಮಾಂತರಕ್ಕು ಸುಖಿಗಳಾಗುತ್ತಾರೆ.

ತಮ್ಮ ಜನ್ಮ ಬಹಳ ಅಮೂಲ್ಯವಾಗಿದೆ. ದೇವತಾ ಜನ್ಮಕ್ಕಿಂತಲೂ ತಾವು ಇಲ್ಲಿ ಸುಖಿಗಳಾಗಿದ್ದೀರಿ ಏಕೆಂದರೆ ತಂದೆಯ ಆಶ್ರಯದಲ್ಲಿ ಇದ್ದೀರಿ. ಇಲ್ಲಿಂದಲೇ ತಾವು ಅಪಾರ ಸಂಪಾದನೆಯನ್ನು ಮಾಡಿಕೊಳ್ಳುತ್ತೀರಿ ಅದನ್ನು ನಂತರ ಜನ್ಮ-ಜನ್ಮಾಂತರಕ್ಕಾಗಿ ಅನುಭವಿಸುತ್ತೀರಿ. ಸುಧಾಮನಿಗೂ ಸಹ ಎರಡು ಹಿಡಿ ಅವಲಕ್ಕಿಯ ಬದಲಾಗಿ 21 ಜನ್ಮಗಳಿಗಾಗಿ ಮಹಲು ಸಿಗುತ್ತದೆ. ಲೋಕ ಹಾಗೂ ಪರಲೋಕ ಎರಡೂ ಜನ್ಮ- ಜನ್ಮಾಂತರಕ್ಕಾಗಿ ಸುಖಿಯಾಗುತ್ತದೆ. ಆದ್ದರಿಂದ ಜನ್ಮ ಬಹಳ ಚೆನ್ನಾಗಿದೆ. ಕೆಲವರು ಹೇಳುತ್ತಾರೆ ಬೇಗ ವಿನಾಶವಾಗಲಿ ನಾವು ಸ್ವರ್ಗಕ್ಕೆ ಹೋಗೋಣವೆಂದು. ಆದರೆ ಇನ್ನೂ ಬಹಳ ಖಜಾನೆಯನ್ನು ತಂದೆಯಿಂದ ಪಡೆಯಬೇಕಾಗಿದೆ. ಈಗ ರಾಜಧಾನಿ ಎಲ್ಲಿ ತಯಾರಾಗಿದೆ. ಮತ್ತೆ ವಿನಾಶವನ್ನು ಬೇಗ ಹೇಗೆ ಮಾಡಿಸುತ್ತಾರೆ! ಮಕ್ಕಳು ಈಗ ಯೋಗ್ಯರು ಎಲ್ಲಿ ಆಗಿದ್ದಾರೆ! ಈಗ ತಂದೆ ಓದಿಸಲು ಬರುತ್ತಿದ್ದಾರೆ. ತಂದೆಯ ಸೇವೆಯಂತೂ ಅಪರಮಪಾರವಾಗಿದೆ. ತಂದೆಯ ಮಹಿಮೆಯೂ ಸಹ ಅಪಾರವಾಗಿದೆ. ಎಷ್ಟು ಶ್ರೇಷ್ಠನಾಗಿದ್ದೇನೆಯೋ ಅಷ್ಟೆ ಶ್ರೇಷ್ಠ ಸೇವೆಯನ್ನು ಮಾಡುತ್ತೇನೆ. ಅದಕ್ಕಾಗಿಯೇ ನನ್ನ ಸ್ಮಾರಕವಿದೆ. ಸರ್ವ ಶ್ರೇಷ್ಠ ಗದ್ದಿ ತಂದೆಯದಾಗಿದೆ ಯಾರು ಎಷ್ಟು ಪುರುಷಾರ್ಥ ಮಾಡುತ್ತಾರೋ ಅಷ್ಟು ತಮ್ಮ ಭಾಗ್ಯವನ್ನು ಮಾಡಿಕೊಳ್ಳುತ್ತಾರೆ. ಇದು ಅವಿನಾಶಿ ಜ್ಞಾನ ರತ್ನಗಳ ಸಂಪಾದನೆ, ಸಂಪಾದನೆ ಅಲ್ಲಿ ಅಪಾರವಾದ ಧನ ಸಂಪತ್ತು ಆಗುತ್ತದೆ. ಮಕ್ಕಳು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು. ತಂದೆಯನ್ನು ಇಲ್ಲಿಯೂ ನೆನಪು ಮಾಡಿ ಮತ್ತು ಅಲ್ಲಿಯೂ ನೆನಪು ಮಾಡಿ. ಮನಸ್ಸಿನ ದರ್ಪಣದಲ್ಲಿ ನೋಡಿಕೊಳ್ಳಬೇಕು - ನಾನು ಎಲ್ಲಿಯತನಕ ತಂದೆಯ ಸುಪುತ್ರ ಮಗುವಾಗಿದ್ದೇನೆ. ಕುರುಡರಿಗೆ ಮಾರ್ಗ ತೋರಿಸುತ್ತೇನೆ. ತಮ್ಮ ಜೊತೆ ಮಾತನಾಡಿಕೊಳ್ಳುವುದರಿಂದ ಖುಷಿ ಆಗುತ್ತದೆ. ಹೇಗೆ ಬಾಬಾ ಅನುಭವ ಹೇಳುತ್ತಾರೆ - ಮಲಗಿದ್ದಾಗಲೂ ಸಹ ಮಾತನಾಡುತ್ತೇನೆ. ಬಾಬಾ ತಮ್ಮದಂತೂ ಕಮಾಲ್ ಆಗಿದೆ. ಭಕ್ತಿ ಮಾರ್ಗದಲ್ಲಿ ನಾವು ನಿಮ್ಮನ್ನು ಮರೆತು ಹೋಗುತ್ತೇವೆ. ಆಸ್ತಿ ತಮ್ಮಿಂದಲೇ ಪಡೆಯುತ್ತೇವೆ. ಆದರೂ ಸತ್ಯಯುಗದಲ್ಲಿ ಇದನ್ನು ಮರೆತು ಹೋಗುತ್ತೇವೆ. ಬುದ್ಧುಗಳು ಆಜ್ಞಾನಿಗಳು ಆಗಿಬಿಡುತ್ತೇವೆ. ಈಗ ತಂದೆಯು ಎಷ್ಟು ಜ್ಞಾನಿಗಳನ್ನಾಗಿ ಮಾಡಿದ್ದಾರೆ. ಹಗಲು ರಾತ್ರಿಯ ವ್ಯತ್ಯಾಸವಿದೆ. ಈಶ್ವರ ಸರ್ವವ್ಯಾಪಿ ಆಗಿದ್ದಾರೆ ಎಂಬುದು ಜ್ಞಾನವೇನು? ಜ್ಞಾನ ಸೃಷ್ಟಿಚಕ್ರದ ಜ್ಞಾನ ಬೇಕಾಗಿದೆ. ಈಗ ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿ ಹಿಂತಿರುಗುತ್ತೇವೆ ನಂತರ ನಾವು ಜೀವನ್ಮುಕ್ತಿಯಲ್ಲಿ ಬರಬೇಕಾಗಿದೆ. ಡ್ರಾಮಾದಿಂದ ಹೊರಗೆ ಬರಲು ಸಾಧ್ಯವಿಲ್ಲ. ನಾವು ಜೀವನ್ಮುಕ್ತಿಯ ಪ್ರಯಾಣಿಕರಾಗಿದ್ದೇವೆ.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್: 16-12-68

ಕೆಲವರನ್ನು ಬಾಬಾ ಮಕ್ಕಳೇ ಎಂದು ಹೇಳುತ್ತಾರೆ, ಕೆಲವರನ್ನು ತಾಯಿ ಎಂದು ಹೇಳುತ್ತಾರೆ; ಅವಶ್ಯಕವಾಗಿ ಸ್ವಲ್ಪ ವ್ಯತ್ಯಾಸವಿದೆ. ಕೆಲವರ ಸರ್ವಿಸ್ನಿಂದ ಸುಗಂಧ ಬರುತ್ತದೆ, ಕೆಲವರಂತು ಎಕ್ಕದ ಹೂವಿನಂತೆ ಇದ್ದಾರೆ. ಇಲ್ಲಿ ತಂದೆ ತಿಳಿಸುತ್ತಾರೆ ನೀವು ಹೇಗೆ ನನ್ನ ಜೊತೆಯಲ್ಲಿ ಬಂದಿದ್ದೀರಿ. ಮೇಲಿನಿಂದ ತಂದೆ ಬಂದಿದ್ದಾರೆ ವಿಶ್ವವನ್ನು ಪಾವನ ಮಾಡುವುದಕ್ಕೆ. ನಮ್ಮದು ಸಹ ಇದೇ ಕರ್ತವ್ಯವಾಗಿದೆ. ಅಲ್ಲಿಂದ ಯಾರು ಮೊದಲು ಬರುತ್ತಾರೆ ಅವರು ಪವಿತ್ರರಾಗಿದ್ದಾರೆ. ಹೊಸ ಆತ್ಮರು ಬರುತ್ತಾರೆಂದರೆ ಅವಶ್ಯಕವಾಗಿ ಸುಗಂಧವನ್ನು ಕೊಡುತ್ತಿರುತ್ತಾರೆ. ಹೂದೋಟಕ್ಕು ಹೊಲಿಕೆ ಮಾಡಲಾಗುತ್ತದೆ. ಹೇಗೆ ಸರ್ವಿಸ್ ಹಾಗೆ ಸುಗಂಧ ಭರಿತ ಹೂವು. ವಿವೇಕವು ಹೇಳುತ್ತದೆ ಶಿವಬಾಬಾರವರ ಮಕ್ಕಳೆಂದು ಹೇಳಿದಮೇಲೆ ಹಾಗು ಹಕ್ಕುದಾದಾರರಾಗುತ್ತೇವೆ. ಒಂದು ಸುಗಂಧ ಬರಬೇಕಲ್ಲವೇ. ಹಕ್ಕುದಾರರಾಗಿದ್ದೀರಿ ಆಗ ಎಲ್ಲರಿಗೆ ನಮಸ್ಕಾರವನ್ನು ಮಾಡುತ್ತೇವೆ. ನೀವು ವಿಶ್ವದ ಮಾಲೀಕರು ನಿಸ್ಸಂದೇಹವಾಗಿ ಇರುತ್ತೀರಿ, ಆದರೆ ವಿದ್ಯೆಯಲ್ಲಿ ವ್ಯತ್ಯಾಸ ಬಹಳ ಇರುತ್ತದೆ ಇದು ಅವಶ್ಯಕವಾಗಿ ಇರಲೇ ಬೇಕಾಗಿದೆ. ಮಕ್ಕಳಿಗೆ ನಿಶ್ಚಯವಾಗಿ ಬಿಡುತ್ತದೆ ಇವರು ಬಾಬಾ ಆಗಿದ್ದಾರೆ ಹಾಗು ಚಕ್ರವು ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ ಹಾಗು ಹೆಚ್ಚು ಏಕೆ ತಿಳಿಸಬೇಕು. ತಂದೆಯಿಲ್ಲದೆ ಸ್ವದರ್ಶನ ಚಕ್ರಧಾರಿಯನ್ನಾಗಿ ಯಾರು ಮಾಡಲು ಸಾಧ್ಯವಿಲ್ಲ. ಆಗುವುದು ಸೂಚನೆಯಿಂದ. ಯಾರು ಕಲ್ಪದ ಮೊದಲು ಆಗಿದ್ದರು ಅವರೇ ಆಗುತ್ತಾರೆ. ಅನೇಕಾನೇಕ ಮಕ್ಕಳು ಬರುತ್ತಾರೆ. ಪವಿತ್ರತೆಯ ಮೇಲೆ ಎಷ್ಟೊಂದು ಅತ್ಯಾಚಾರವಾಗುತ್ತದೆ. ಯಾರ ಮುಖಾಂತರ ತಂದೆಯು ಗೀತೆಯನ್ನು ತಿಳಿಸುತ್ತಾರೆ ಅವರಿಗೆ ಎಷ್ಟು ನಿಂದನೆ ಮಾಡುತ್ತಾರೆ. ಶಿವಾಬಾಬಾರವರಿಗೂ ನಿಂದನೆ ಮಾಡುತ್ತಾರೆ. ಮೀನು-ಮೊಸಳೆಯ ಅವತಾರ ಹೇಳುವುದು ಸಹ ನಿಂದನೆಯಾಗಿದೆ. ತಿಳಿದುಕೊಳ್ಳದೇ ಇರುವ ಕಾರಣ ತಂದೆಯ ಮೇಲೆ, ನಿಮ್ಮ ಮೇಲೆ, ಎಷ್ಟೊಂದು ಕಳಂಕವನ್ನು ಹಾಕುತ್ತಾರೆ! ಮಕ್ಕಳು ಎಷ್ಟೊಂದು ತಲೆ ಚಚ್ಚಿಕೊಳ್ಳುತ್ತಾರೆ. ವಿದ್ಯೆಯಿಂದ ಕೆಲವರು ಬಹಳ ಸಾಹುಕಾರರಾಗುತ್ತಾರೆ, ಎಷ್ಟೊಂದು ಸಂಪಾದನೆ ಮಾಡುತ್ತಾರೆ! ಒಂದೊಂದು ಆಪ್ರೇಷನ್ಗೆ 2 ಸಾವಿರ, 4 ಸಾವಿರ ಸಿಗುತ್ತದೆ. ಕೆಲವರಿಗೆ ಕುಟುಂಬದ ಪಾಲನೆ ಮಾಡುವುದಕ್ಕು ಆಗುವುದಿಲ್ಲ. ಚಿಂತೆಯಿದೆಯಲ್ಲವೇ. ಕೆಲವರು ಜನ್ಮ ಜನ್ಮಾಂತರ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಾರೆ. ಕೆಲವರು ಜನ್ಮ ಜನ್ಮಾಂತರಕ್ಕಾಗಿ ಬಡವರಾಗುತ್ತಾರೆ. ತಂದೆ ತಿಳಿಸುತ್ತಾರೆ ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತೇನೆ. ಈಗ ನೀವು ಎಲ್ಲ ಮಾತಿನಲ್ಲಿ ಹೇಳುತ್ತೀರಾ ಡ್ರಾಮಾವೆಂದು. ಎಲ್ಲರದು ಪಾತ್ರವಿದೆ. ಏನು ಕಳೆದುಹೋಯಿತು ಸೋ ಡ್ರಾಮಾ ಏನಿರುತ್ತದೆ ಅದು ಡ್ರಾಮಾದಲ್ಲಿದೆ. ಡ್ರಾಮಾನುಸಾರ ಏನೆಲ್ಲಾ ಆಗುತ್ತದೆ ಸರಿಯಾಗಿಯೇ ಆಗುತ್ತದೆ. ನೀವು ಎಷ್ಟೇ ತಿಳಿಸಿರಿ, ತಿಳಿದುಕೊಳ್ಳುವುದೇ ಇಲ್ಲ. ಇದರಲ್ಲಿ ಮ್ಯಾನರ್ಸ್ ಒಳ್ಳೆಯದಿರಬೇಕು. ಪ್ರತಿಯೊಬ್ಬರು ತಮ್ಮ ಒಳಗಡೆ ನೋಡಿಕೊಳ್ಳಬೇಕು. ಯಾವುದೇ ಕೊರತೆಯಿಲ್ಲವೇ? ಮಾಯೆ ಬಹಳ ಕಟೋರವಾಗಿದೆ. ಅದನ್ನು ಹೇಗಾದರೂ ಮಾಡಿ ತೆಗೆಯಬೇಕಾಗಿದೆ. ಎಲ್ಲಾ ಕೊರತೆಗಳನ್ನು ತೆಗೆದುಹಾಕಬೇಕಾಗಿದೆ. ತಂದೆ ತಿಳಿಸುತ್ತಾರೆ ಬಂಧನದಲ್ಲಿರುವವರು ಎಲ್ಲರಿಗಿಂತ ಹೆಚ್ಚು ನೆನಪಿನಲ್ಲಿರುತ್ತಾರೆ. ಅವರೇ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಎಷ್ಟು ಹೆಚ್ಚು ಒದೆ ತಿನ್ನುತ್ತಾರೆ ಅಷ್ಟು ಹೆಚ್ಚು ನೆನಪಿನಲ್ಲಿರುತ್ತಾರೆ. ಅಯ್ಯೋ ಶಿವಬಾಬಾ ಎಂದು ಹೇಳುತ್ತಾರೆ. ಜ್ಞಾನದಿಂದ ಶಿವಬಾಬಾರವರನ್ನು ನೆನಪು ಮಾಡುತ್ತಿರಬೇಕು ಅಂತಹವರ ಚಾರ್ಟ್ ಚೆನ್ನಾಗಿರುತ್ತದೆ. ಯಾರು ರೀತಿ ಒದೆ ತಿಂದು ಬರುತ್ತಾರೆ ಅವರು ಸರ್ವಿಸ್ನಲ್ಲೂ ಸಹ ಒಳ್ಳೆಯ ರೀತಿಯಲ್ಲಿ ತೊಡಗುತ್ತಾರೆ. ತಮ್ಮ ಜೀವನವನ್ನು ಶ್ರೇಷ್ಠಾವನ್ನಾಗಿ ಮಾಡಿಕೊಳ್ಳುವುದಕ್ಕೆ ಸರ್ವಿಸ್ನ್ನು ಮಾಡುತ್ತಾರೆ. ಸರ್ವಿಸ್ ಮಾಡುವುದಿಲ್ಲವೆಂದರೆ ಮನಸ್ಸು ತಿನ್ನುತ್ತಿರುತ್ತದೆ. ಮನಸ್ಸು ಉತ್ಸಾಹದಲ್ಲಿ ಬರುತ್ತದೆನಾವು ಸರ್ವಿಸ್ ಮಾಡಬೇಕೆಂದು. ಭಲೆ ತಿಳಿಯುತ್ತಾರೆ ಸೆಂಟರ್ನ ಬಿಟ್ಟು ಹೋಗಬೇಕಾಗುತ್ತದೆ, ಆದರೆ ಪ್ರದರ್ಶಿನಿಯಲ್ಲಿ ಬಹಳಷ್ಟು ಸರ್ವಿಸ್ ಇದೆಯೆಂದರೆ ಚಿಂತಿಸದೆ ಹೋಗಬೇಕು. ಎಷ್ಟು ನಾವು ದಾನ ಮಾಡುತ್ತೇವೆ ಅಷ್ಟು ಬಲ ತುಂಬುತ್ತಿರುತ್ತದೆ. ದಾನವನ್ನು ಅವಶ್ಯಕವಾಗಿ ಮಾಡಬೇಕು. ಇದಾಗಿದೆ ಅವಿನಾಶಿ ಜ್ಞಾನರತ್ನ. ಯಾರ ಹತ್ತಿರವಿರುತ್ತದೆ ದಾನ ಮಾಡುತ್ತಾರೆ. ಮಕ್ಕಳು ಈಗ ಇಡೀ ಸೃಷ್ಟಿಯ ಆದಿ, ಮಧ್ಯ, ಅಂತ್ಯದ ಜ್ಞಾನ ನೆನಪಿಗೆ ಬಂದುಬಿಡಬೇಕು. ಇಡೀ ಚಕ್ರ ಸುತ್ತುತ್ತಿರಬೇಕು. ತಂದೆಯು ಸೃಷ್ಟಿಯ ಆದಿ, ಮಧ್ಯ, ಅಂತ್ಯವನ್ನು ತಿಳಿದುಕೊಳ್ಳುವವರಿದ್ದಾರೆ. ಅವಶ್ಯವಾಗಿ ಜ್ಞಾನದ ಸಾಗರರಾಗಿದ್ದಾರೆ. ಸೃಷ್ಟಿಯ ಚಕ್ರವನ್ನು ತಿಳಿಯುವವರಾಗಿದ್ದಾರೆ. ಪ್ರಪಂಚಕ್ಕಾಗಿ ಸಂಪೂರ್ಣ ಹೊಸ ಜ್ಞಾನವಾಗಿದೆ. ಯಾವುದು ಹಳೆದಾಗುವುದೇ ಇಲ್ಲ. ಅದ್ಬುತವಾದ ಜ್ಜಾನವಾಗಿದೆಯಲ್ಲವೇ ಯಾವುದನ್ನು ತಂದೆಯೇ ತಿಳಿಸುತ್ತಾರೆ. ಯಾರು ಎಷ್ಟೇ ಸಾಧು ಮಹಾತ್ಮರು ಏರುವ ಕಲೆಯಲ್ಲಿ ಹೋಗುವುದಕ್ಕೆ ಸಾಧ್ಯವಿಲ್ಲ. ತಂದೆಯ ವಿನಃ ಮನುಷ್ಯರಿಗೆ ಗತಿ ಸದ್ಗತಿಯನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಮನುಷ್ಯರು ಅಥವಾ ದೇವತೆಗಳು ಸಹ ಕೊಡುವುದಕ್ಕೆ ಸಾಧ್ಯವಿಲ್ಲ. ಕೇವಲ ಒಬ್ಬ ತಂದೆ ಮಾತ್ರ ಕೊಡಲು ಸಾಧ್ಯ. ದಿನ-ಪ್ರತಿದಿನ ವೃದ್ಧಿಯಾಗಲೇ ಬೇಕಾಗಿದೆ. ಬಾಬಾರವರು ತಿಳಿಸಿದ್ದಾರೆ ಬೆಳಗ್ಗೆ ಲಕ್ಷ್ಮೀ-ನಾರಾಯಣರ ಚಿತ್ರ, ಏಣಿಯ ಟ್ರಾನ್ಸ್ ಲೈಟ್ ಕೂಡ ಇರಬೇಕಾಗಿದೆ. ಕರೆಂಟಿನ ಇಂತಹ ಯಾವುದಾದರು ಒಂದು ವಸ್ತುವಿರಬೇಕು ಯಾವುದರಿಂದ ಹೊಳಪು ಬರುತ್ತಿರಬೆಕು. ಸ್ಲೋಗನ್ನ್ನು ಸಹ ಹೇಳುತ್ತ ಹೋಗಿ. ರಾಜಯೋಗ ಪರಮಪಿತ ಪರಮಾತ್ಮನೇ ಭಗೀರಥದ ಮುಖಾಂತರ ಕಲಿಸಿಕೊಡುತ್ತಿದ್ದಾರೆ. ಮತ್ತ್ಯಾರು ರಾಜಯೋಗವನ್ನು ಕಲಿಸಿ ಕೊಡುವುದಕ್ಕೆ ಸಾದ್ಯವಿಲ್ಲ, ಇಂತಹ ಮಾತುಗಳನ್ನು ಬಹಳ ಕೇಳುತ್ತೀರಿ. ಒಳ್ಳೆಯದು. ಮಧುರ-ಮಧುರ ಮಕ್ಕಳಿಗೆ ಗುಡ್ನೈಟ್.

ಧಾರಣೆಗಾಗಿ ಮುಖ್ಯಸಾರ:

1. ನಾಟಕ ಈಗ ಪೂರ್ಣವಾಗುತ್ತಿದೆ, ಆದ್ದರಿಂದ ಹಳೆಯ ಜಗತ್ತಿನಿಂದ ಭಿನ್ನರಾಗಿರಬೇಕು. ಶ್ರೀಮತದಂತೆ ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಬೇಕು. ಎಂದೂ ಯಾವುದೇ ಉಲ್ಟಾ ಕರ್ಮವನ್ನು ಮಾಡಬಾರದು.

2. ಅವಿನಾಶಿ ಜ್ಞಾನರತ್ನಗಳ ಸಂಪಾದನೆಯನ್ನು ಮಾಡಿಕೊಳ್ಳಬೇಕು ಹಾಗೂ ಮಾಡಿಸಬೇಕು. ಒಬ್ಬ ತಂದೆಯ ನೆನಪಿನಲ್ಲಿ ಇದ್ದು ಸುಪುತ್ರನಾಗಿ ಅನೇಕರಿಗೆ ಮಾರ್ಗವನ್ನು ಹೇಳಬೇಕು.

ವರದಾನ:

ತ್ಯಾಗ ಮತ್ತು ತಪಸ್ಸಿನ ವಾತಾವರಣದ ಮುಖಾಂತರ ವಿಘ್ನ ವಿನಾಶಕರಾಗುವಂತಹ ಸತ್ಯ ಸೇವಾಧಾರಿ ಭವ


ಹೇಗೆ ತಂದೆಗೆ ಎಲ್ಲದಕ್ಕೂ ದೊಡ್ಡದರಲ್ಲಿ ದೊಡ್ಡ ಟೈಟಲ್ ಇದೆ ವಿಶ್ವ ಸೇವಾಧಾರಿ. ಅದೇರೀತಿ ಮಕ್ಕಳೂ ಸಹ ವರ್ಲ್ಡ್ ಸರ್ವೆಂಟ್ (ವಿಶ್ವ ಸೇವಾಧಾರಿಗಳು) ಅರ್ಥಾತ್ ಸೇವಾಧಾರಿ. ಸೇವಾಧಾರಿ ಅರ್ಥಾತ್ ತ್ಯಾಗಿ ಮತ್ತು ತಪಸ್ವಿ. ಎಲ್ಲಿ ತ್ಯಾಗ ಮತ್ತು ತಪಸ್ಯೆಯಿದೆ ಅಲ್ಲಿ ಭಾಗ್ಯವಂತು ಅವರ ಹಿಂದೆ ದಾಸಿಯಾಗಿ ಬಂದೇಬರುವುದು. ಸೇವಾಧಾರಿ ಕೊಡುವಂತಹವರಾಗಿದ್ದಾರೆ, ತೆಗೆದುಕೊಳ್ಳುವವರಲ್ಲ ಆದ್ದರಿಂದ ಸದಾ ನಿರ್ವಿಘ್ನರಾಗಿರುತ್ತಾರೆ. ಆದ್ದರಿಂದ ಸೇವಾಧಾರಿ ಎಂದು ತಿಳಿದು ತ್ಯಾಗ ಮತ್ತು ತಪಸ್ಯದ ವಾತಾವರಣ ಮಾಡುವುದರಿಂದ ಸದಾ ವಿಘ್ನ-ವಿನಾಶಕರಾಗಿರುತ್ತಾರೆ.

ಸ್ಲೋಗನ್:

ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಸಾಧನವಾಗಿದೆ- ಸ್ವ ಸ್ಥಿತಿಯ ಶಕ್ತಿ.

 Download PDF

Post a Comment

0 Comments