Header Ads Widget

Header Ads

KANNDA MURLI 06.01.23

 

06/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಕ್ರೋಧವೂ ಬಹಳ ದುಃಖದಾಯೀ ಆಗಿದೆ, ಇದು ತಮ್ಮನ್ನೂ ಸಹ ದುಃಖಿಯನ್ನಾಗಿ ಮಾಡುತ್ತದೆ, ಅನ್ಯರನ್ನೂ ಸಹ ದುಃಖಿಯನ್ನಾಗಿ ಮಾಡುತ್ತದೆ, ಆದ್ದರಿಂದ ಶ್ರೀಮತದ ಮೇಲೆ ಭೂತಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಿ

ಪ್ರಶ್ನೆ:

ಕಲ್ಪ-ಕಲ್ಪದ ಕಲೆ ಯಾವ ಮಕ್ಕಳ ಮೇಲೆ ಆಗುತ್ತದೆ? ಅವರ ಗತಿ ಏನು ಆಗುತ್ತದೆ?

ಉತ್ತರ:

ಯಾರು ತಮ್ಮನ್ನು ಬಹಳ ಬುದ್ಧಿವಂತರು ಎಂದು ತಿಳಿಯುತ್ತಾರೆ, ಶ್ರೀಮತದಂತೆ ನಡೆಯುವುದಿಲ್ಲ, ಒಳಗಡೆ ಯಾವುದಾದರೂ ವಿಕಾರ ಗುಪ್ತ ಅಥವಾ ಪ್ರತ್ಯಕ್ಷ ರೂಪದಲ್ಲಿ ಇರುತ್ತದೆ, ಅದನ್ನು ತೆಗೆಯುವುದಿಲ್ಲ ಅಂತಹವರನ್ನು ಮಾಯೆ ಮುತ್ತಿಗೆ ಹಾಕುತ್ತಲೇ ಇರುತ್ತದೆ. ಅಂತಹ ಮಕ್ಕಳ ಮೇಲೆ ಕಲ್ಪ-ಕಲ್ಪದ ಕಲೆಯಾಗಿಬಿಡುತ್ತದೆ ಅವರು ನಂತರ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅವರು ತಮಗೆ ತಾವೇ ನಷ್ಟ ಮಾಡಿಕೊಳ್ಳುತ್ತಾರೆ.

ಗೀತೆ:  ಇಂದು ಮನುಷ್ಯರು ಅಂಧಕಾರದಲ್ಲಿ ಇದ್ದಾರೆ.....

ಓಂ ಶಾಂತಿ. ಮಕ್ಕಳಿಗೆ ಗೊತ್ತಿದೆ ಬೇಹದ್ದಿನ ತಂದೆ ಯಾರಿಗೆ ಸ್ವರ್ಗದ ರಚಯಿತ ಎಂದು ಹೇಳಲಾಗುತ್ತದೆಯೋ ಅವರು ಸರ್ವರ ತಂದೆಯಾಗಿದ್ದಾರೆ. ಅವರು ಮಕ್ಕಳಿಗೆ ಸಮ್ಮುಖದಲ್ಲಿ ಕುಳಿತು ತಿಳಿಸುತ್ತಾರೆ. ತಂದೆಯು ಎಲ್ಲಾ ಮಕ್ಕಳನ್ನು ನಯನಗಳಿಂದ ನೋಡುತ್ತಾರೆ. ಅವರಿಗೆ ಮಕ್ಕಳನ್ನು ನೋಡಲು ದಿವ್ಯ ದೃಷ್ಟಿಯ ಅವಶ್ಯಕತೆ ಇಲ್ಲ. ತಂದೆಗೆ ಗೊತ್ತಿದೆ - ಪರಮಧಾಮದಿಂದ ಮಕ್ಕಳ ಬಳಿ ಬಂದಿದ್ದೇನೆ. ಮಕ್ಕಳೂ ಸಹ ಇಲ್ಲಿ ದೇಹಧಾರಿಗಳಾಗಿ ಪಾತ್ರ ಮಾಡುತ್ತಿದ್ದಾರೆ, ಮಕ್ಕಳಿಗೆ ಸಮ್ಮುಖದಲ್ಲಿ ಕುಳಿತು ಓದಿಸುತ್ತಿದ್ದೇನೆ. ಮಕ್ಕಳೂ ಸಹ ತಿಳಿದಿದ್ದಾರೆ - ಬೇಹದ್ದಿನ ತಂದೆ ಯಾರು ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಅವರು ಮತ್ತೆ ನಮಗೆ ಭಕ್ತಿ ಮಾರ್ಗದ ಪೆಟ್ಟುಗಳಿಂದ ಬಿಡಿಸಿ ನಮ್ಮ ಜ್ಯೋತಿಯನ್ನು ಬೆಳಗಿಸುತ್ತಿದ್ದಾರೆ. ಎಲ್ಲಾ ಸೇವಾಕೇಂದ್ರದ ಮಕ್ಕಳು ತಿಳಿದಿದ್ದಾರೆ ಈಗ ನಾವು ಈಶ್ವರೀಯ ಕುಲದ ಹಾಗೂ ಬ್ರಾಹ್ಮಣ ಕುಲದವರು ಆಗಿದ್ದೇವೆ. ಪರಮಪಿತ ಪರಮಾತ್ಮನಿಗೆ ಸೃಷ್ಟಿಯ ರಚಯಿತ ಎಂದು ಹೇಳಲಾಗುತ್ತದೆ. ಸೃಷ್ಟಿಯನ್ನು ಹೇಗೆ ರಚನೆ ಮಾಡಲಾಗುತ್ತದೆ ಎಂಬುದನ್ನು ತಂದೆ ಕುಳಿತು ತಿಳಿಸುತ್ತಾರೆ. ಮಕ್ಕಳಿಗೆ ಗೊತ್ತಿದೆ ಮಾತಾ-ಪಿತರ ವಿನಃ ಬೇರೆ ಯಾವ ಮನುಷ್ಯರು ಸೃಷ್ಟಿಯನ್ನು ರಚಿಸಲು ಸಾಧ್ಯವಿಲ್ಲ. ತಂದೆಯ ಮೂಲಕ ಸೃಷ್ಟಿಯನ್ನು ರಚಿಸಲಾಗುತ್ತದೆ ರೀತಿ ಹೇಳುವುದಿಲ್ಲ. ಗಾಯನವಿದೆ - ತಾವೇ ಮಾತಾ-ಪಿತರು........... ಮಾತಾ-ಪಿತರು ಸೃಷ್ಟಿಯನ್ನು ರಚಿಸಿ ನಂತರ ಯೋಗ್ಯರನ್ನಾಗಿ ಮಾಡುತ್ತಾರೆ. ಇದು ಬಹಳ ದೊಡ್ಡ ವಿಶೇಷ ಗುಣವಾಗಿದೆ. ಮೇಲಿನಿಂದ ದೇವತೆಗಳು ಬಂದು ಧರ್ಮ ಸ್ಥಾಪನೆ ಮಾಡುತ್ತಾರೆ ರೀತಿ ಅಲ್ಲ. ಹೇಗೆ ಕ್ರಿಸ್ತ ಕ್ರಿಶ್ಚಯನ್ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಅಂದಮೇಲೆ ಕ್ರಿಸ್ತನನ್ನು ಸಹ ಕ್ರಿಶ್ಚಯನ್ನರು ತಂದೆ ಎಂದು ಹೇಳುತ್ತಾರೆ. ಒಂದುವೇಳೆ ತಂದೆ ಇದ್ದಾರೆ ಅಂದಾಗ ತಾಯಿಯೂ ಸಹ ಅವಶ್ಯವಾಗಿ ಇರಬೇಕು. ಅವರುಮೇರಿಯನ್ನು ತಾಯಿ ಎಂದು ಇಟ್ಟಿದ್ದಾರೆ. ಈಗ ಮೇರಿ ಯಾರಾಗಿದ್ದರು? ಕ್ರಿಸ್ತ ಅವರ ಮೂಲಕ ಜನ್ಮ ಕೊಟ್ಟರೇನು? ಅಥವಾ ಸ್ವಯಂ ತಂದೆ ಹಾಗೂ ತಾಯಿಯಾಗಿದ್ದರೇನು? ಕ್ರಿಸ್ತನ ಹೊಸ ಆತ್ಮ ಬಂದು ಯಾರ ತನುವಿನಲ್ಲಿ ಪ್ರವೇಶ ಮಾಡಿದರೋ ಅವರ ಮುಖದಿಂದ ಪ್ರಜೆಯನ್ನು ರಚಿಸಿದರು ಅವರು ಕ್ರಿಶ್ಚಯನ್ನರು ಆದರು. ಇದೂ ಸಹ ತಿಳಿಸಲಾಗಿದೆ - ಯಾವ ಹೊಸ ಆತ್ಮ ಮೇಲಿನಿಂದ ಬರುತ್ತದೆ, ಅದು ದುಃಖವನ್ನು ಭೋಗಿಸಲು ಯಾವುದೇ ಅಂತಹ ಕರ್ಮವಿರಲಿಲ್ಲ. ಪವಿತ್ರ ಆತ್ಮ ಬರುತ್ತದೆ. ಹೇಗೆ ಪರಮಪಿತ ಪರಮಾತ್ಮ ಎಂದೂ ಸಹ ದುಃಖವನ್ನು ಭೋಗಿಸುವುದಿಲ್ಲ. ದುಃಖ ಅಥವಾ ನಿಂದನೆ ಎಲ್ಲವೂ ಸಾಕಾರ ತಂದೆಗೆ ಕೊಡುತ್ತಾರೆ. ಅಂದಮೇಲೆ ಕ್ರಿಸ್ತನನ್ನೂ ಸಹ ಯಾವಾಗ ಶಿಲುಬೆಯ ಮೇಲೆ ಏರಿಸುತ್ತಾರೆ ಆಗ ಯಾವ ತನುವಿನಲ್ಲಿ ಕೃಷ್ಣನ ಆತ್ಮ ಪ್ರವೇಶ ಆಯಿತೋ ಅವರೇ ದುಃಖವನ್ನು ಸಹನೆ ಮಾಡಿತು. ಕ್ರಿಸ್ತನ ಪವಿತ್ರ ಆತ್ಮ ದುಃಖವನ್ನು ಸಹನೆ ಮಾಡಲು ಸಾಧ್ಯವಿಲ್ಲ. ಅಂದಮೇಲೆ ಕ್ರಿಸ್ತ ತಂದೆಯಾದರು. ತಾಯಿಯನ್ನು ಎಲ್ಲಿಂದ ತರುವುದು! ನಂತರ ಮೇರಿಯನ್ನು ತಾಯಿಯನ್ನಾಗಿ ಮಾಡಿದರು. ಮೇರಿ ಕುಮಾರಿಯಾಗಿದ್ದಳು ಅವರಿಂದ ಕ್ರಿಸ್ತನ ಜನ್ಮವಾಯಿತು ಎಂದು ತೋರಿಸುತ್ತಾರೆ. ಈಗ ಕುಮಾರಿಯಿಂದ ಜನ್ಮವಾದರೆ ಅದು ಸಂಪೂರ್ಣ ಕಾನೂನ್ಗೆ ವಿರುದ್ಧವಾಗಿದೆ. ಇದೆಲ್ಲವನ್ನೂ ಶಾಸ್ತ್ರಗಳಿಂದ ತೆಗೆದುಕೊಳ್ಳುತ್ತಾರೆ. ತೋರಿಸುತ್ತಾರಲ್ಲವೇ - ಕುಂತಿ ಕನ್ಯೆ ಆಗಿದ್ದಳು ಅವಳಿಂದ ಕರಣನ ಜನ್ಮವಾಯಿತು. ಈಗ ಇದು ದಿವ್ಯದೃಷ್ಟಿಯ ವಿಚಾರವಾಗಿದೆ. ಆದರೆ ಅವರು ಕಾಪಿ ಮಾಡಿದರು. ಅಂದಮೇಲೆ ಹೇಗೆ ಬ್ರಹ್ಮಾ ತಾಯಿಯಾಗಿದ್ದಾರೆ, ಮುಖದ ಮೂಲಕ ಜನ್ಮ ನೀಡಿ ಮತ್ತೆ ಸಂಭಾಲನೆ ಮಾಡಲು ಮಮ್ಮಾರವರಿಗೆ ಕೊಟ್ಟರು ಅಂದಮೇಲೆ ಕ್ರಿಸ್ತನದೂ ಸಹ ಅದೇ ರೀತಿ. ಕ್ರಿಸ್ತನು ಪ್ರವೇಶ ಮಾಡಿ ಧರ್ಮ ಸ್ಥಾಪನೆಯನ್ನು ಮಾಡಿದರೋ ಅವರಿಗೆ ಹೇಳಬಹುದು ಕ್ರಿಸ್ತನ ಮುಖವಂಶಾವಳಿ ಸಹೋದರ-ಸಹೋದರಿಯರು. ಕ್ರಿಶ್ಚಯನ್ನರ ಪ್ರಜಾಪಿತ ಕ್ರಿಸ್ತನಾದರು. ಯಾರಲ್ಲಿ ಪ್ರವೇಶ ಮಾಡಿ ಮಕ್ಕಳಿಗೆ ಜನ್ಮ ಕೊಟ್ಟರೋ ಅವರು ತಾಯಿಯಾದರು. ನಂತರ ಸಂಭಾಲನೆ ಮಾಡಲು ಮೇರಿಗೆ ಕೊಟ್ಟರು ಅವರು ಮೇರಿಯನ್ನು ತಾಯಿ ಎಂದು ತಿಳಿದುಕೊಂಡರು. ಇಲ್ಲಂತೂ ತಂದೆ ಹೇಳುತ್ತಾರೆ ನಾನು ಇದರಿಂದ ಮುಖಸಂತಾನವನ್ನು ರಚಿಸುತ್ತೇನೆ ಎಂದಮೇಲೆ ಅವರಲ್ಲಿ ಮಮ್ಮಾರವರೂ ಸಹ ಮುಖಸಂತಾನರು ಅದರು. ಇದು ವಿಸ್ತಾರದಲ್ಲಿ ತಿಳಿಯುವಂತಹ ವಿಚಾರವಾಗಿದೆ.

ಎರಡನೆಯ ವಿಚಾರ - ತಂದೆ ತಿಳಿಸುತ್ತಾರೆ ಇಂದು ಒಂದು ಪಾರ್ಟಿ ಬರುತ್ತದೆ- ಸಸ್ಯಾಹಾರದ ಪ್ರಚಾರ ಮಾಡಲು. ಅವರಿಗೆ ತಿಳಿಸಬೇಕು ಬೇಹದ್ದಿನ ತಂದೆ ಈಗ ದೇವೀ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ ಅವರು ಪಕ್ಕಾ ಸಸ್ಯಹಾರಿಗಳು ಆಗಿದ್ದರು. ಬೇರೆ ಯಾವುದೇ ಧರ್ಮ ಇಷ್ಟು ಸಸ್ಯಹಾರಿಗಳು ಆಗಿರುವುದಿಲ್ಲ. ಈಗ ಇದನ್ನು ಹೇಳುತ್ತಾರೆ ವೈಷ್ಣವರಾಗುವುದರಲ್ಲಿ ಎಷ್ಟೊಂದು ಲಾಭವಿದೆ ಆದರೆ ಎಲ್ಲರೂ ಆಗಲು ಸಾಧ್ಯವಿಲ್ಲ ಏಕೆಂದರೆ ಬಹಳ ಅಭ್ಯಾಸವಾಗಿಬಿಟ್ಟಿದೆ ಆದರೆ ಬಿಡುವುದು ಕಷ್ಟವಾಗಿಬಿಡುತ್ತದೆ ಆದರೆ ಇದರ ಮೇಲೆ ತಿಳಿಸಬೇಕು ಬೇಹದ್ದಿನ ತಂದೆ ಯಾವ ಸ್ವರ್ಗವನ್ನು ಸ್ಥಾಪನೆ ಮಾಡಿದ್ದರೋ ಅದರಲ್ಲಿ ಎಲ್ಲರೂ ವೈಷ್ಣವರು ಎಂದರೆ ಅರ್ಥ ವಿಷ್ಣುವಿನ ವಂಶಾವಳಿ ಆಗಿದ್ದರು. ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿರುತ್ತಾರೆ. ವರ್ತಮಾನದಲ್ಲಿ ಸಸ್ಯಹಾರಿಗಳು ವಿಕಾರಿಗಳು ಆಗಿದ್ದಾರೆ. ಕ್ರಿಸ್ತನಿಗಿಂತ 3000 ವರ್ಷದ ಮೊದಲು ಭಾರತ ಸ್ವರ್ಗವಾಗಿತ್ತು. ರೀತಿ ತಿಳಿಸಬೇಕು. ತಾವು ಮಕ್ಕಳ ವಿನಃ ಬೇರೆ ಯಾರೂ ಸ್ವರ್ಗ ಎಂದರೆ ಎಂತಹ ವಸ್ತು ಎಂದು ತಿಳಿದಿರುವ ಮನುಷ್ಯರಿಲ್ಲ. ಯಾವಾಗ ಸ್ಥಾಪನೆ ಆಯಿತು? ಅಲ್ಲಿ ಯಾರು ರಾಜ್ಯಭಾರ ಮಾಡುತ್ತಿದ್ದರು? ಲಕ್ಷ್ಮೀ-ನಾರಾಯಣ ಮಂದಿರದಲ್ಲಿ ಭಲೆ ಹೋಗುತ್ತಾರೆ ಬಾಬಾರವರೂ ಹೋಗಿತ್ತಿದ್ದರು ಆದರೆ ಸ್ವರ್ಗದಲ್ಲಿ ಇವರ ರಾಜಧಾನಿ ಆಗುತ್ತದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಕೇವಲ ಮಹಿಮೆಯನ್ನು ಮಾಡುತ್ತಾರೆ ಅವರಿಗೆ ರಾಜ್ಯವನ್ನು ಯಾರು ಕೊಟ್ಟಿದರು ಇದು ಏನೂ ಗೊತ್ತಿಲ್ಲ. ಇಲ್ಲಿಯ ತನಕವೂ ಬಹಳ ಮಂದಿರಗಳನ್ನು ಮಾಡುತ್ತಾರೆ, ಏಕೆಂದರೆ ಲಕ್ಷ್ಮಿಯು ಧನವನ್ನು ಕೊಟ್ಟರು ಎಂದು ತಿಳಿದಿದ್ದಾರೆ. ಆದ್ದರಿಂದ ದೀಪಾವಳಿಯಲ್ಲಿ ವ್ಯಾಪಾರಿಗಳು ಲಕ್ಷ್ಮೀಯನ್ನು ಪೂಜಿಸುತ್ತಾರೆ. ಮಂದಿರಗಳನ್ನು ಮಾಡುವಂತಹವರಿಗೂ ಸಹ ತಿಳಿಸಬೇಕಾಗಿದೆ. ಹೇಗೆ ವಿದೇಶದವರು ಬಂದಾಗ ಅವರಿಗೆ ಭಾರತದ ಮಹಿಮೆಯನ್ನು ಹೇಳಬೇಕು, ಕ್ರಿಸ್ತನಿಗಿಂತ 3000 ವರ್ಷದ ಮೊದಲು ಭಾರತ ರೀತಿ ಸಸ್ಯಹಾರಿ ಆಗಿತ್ತು, ರೀತಿ ಯಾರೂ ಇರಲು ಸಾಧ್ಯವಿಲ್ಲ. ಅವರಲ್ಲಿ ಬಹಳ ಶಕ್ತಿ ಇತ್ತು. ದೇವೀ-ದೇವತೆಗಳ ರಾಜ್ಯ ಎಂದು ಹೇಳಲಾಗುತ್ತದೆ. ಈಗ ಅದೇ ರಾಜ್ಯ ಮತ್ತೆ ಸ್ಥಾಪನೆ ಆಗುತ್ತಿದೆ. ಇದು ಅದೇ ಸಮಯವಾಗಿದೆ. ಮಾಂಸಾಹಾರಿಗಳ ವಿನಾಶವಾಗಿ ಸಸ್ಯಹಾರಿಗಳ ಸ್ಥಾಪನೆಯಾಗುತ್ತಿದೆ. ಶಂಕರನ ಮೂಲಕ ವಿನಾಶವೂ ಸಹ ಗಾಯನವಿದೆ ನಂತರ ವಿಷ್ಣುವಿನ ರಾಜ್ಯವಾಗುತ್ತದೆ. ತಂದೆಯ ಮೂಲಕ ಸ್ವರ್ಗದ ರಾಜ್ಯವನ್ನು ಪಡೆಯಬೇಕಾದರೆ ಬಂದು ಪಡೆಯಬಹುದು. ರಮೇಶ್-ಉಷಾ ಇವರು ಇಬ್ಬರಿಗೂ ಸರ್ವೀಸ್ ಮಾಡುವ ಆಸಕ್ತಿ ಬಹಳ ಇದೆ. ಇದು ವಿಚಿತ್ರ ಜೋಡಿ ಆಗಿದೆ, ಬಹಳ ಸರ್ವೀಸೆಬಲ್ ಆಗಿದ್ದಾರೆ. ನೋಡಿ ಹೊಸ-ಹೊಸಬರು ಬರುತ್ತಾರೆ. ಹಳಬರು ತೀಕ್ಷ್ಣವಾಗಿ ಹೋಗುತ್ತಾರೆ. ಬಾಬಾ ಬಹಳ ಯುಕ್ತಿಗಳನ್ನು ಹೇಳುತ್ತಾರೆ ಆದರೆ ಒಂದಲ್ಲಒಂದು ವಿಕಾರದ ನಶೆ ಇದ್ದಾಗ ಮಾಯೆಯು ಸಂತೋಷವಾಗಿರಲು ಬಿಡುವುದಿಲ್ಲ. ಕೆಲವರಲ್ಲಿ ಕಾಮದ ಸ್ವಲ್ಪ ಅಂಶವಿರುತ್ತದೆ, ಕ್ರೋಧವಂತೂ ಅನೇಕರಲ್ಲಿ ಇದೆ. ಪರಿಪೂರ್ಣರು ಯಾರೂ ಆಗಿಲ್ಲ, ಆಗುತ್ತಿದ್ದಾರೆ. ಮಾಯೆಯೂ ಸಹ ಒಳಗಡೆ ಕಚ್ಚುತ್ತಾ ಇರುತ್ತದೆ. ರಾವಣರಾಜ್ಯವು ಪ್ರಾರಂಭ ಆದಾಗಲಿಂದ ಇಲಿಗಳು ಕಚ್ಚಲು ಶುರು ಮಾಡಿದವು. ಈಗ ಭಾರತ ಸಂಪೂರ್ಣ ಕಂಗಾಲ್ ಆಗಿದೆ. ಮಾಯೆಯು ಎಲ್ಲರನ್ನು ಕಲ್ಲುಬುದ್ಧಿಯವರನ್ನಾಗಿ ಮಾಡಿದೆ. ಒಳ್ಳೊಳ್ಳೆಯ ಮಕ್ಕಳನ್ನೂ ಸಹ ರೀತಿ ಮುತ್ತಿಗೆ ಹಾಕುತ್ತದೆ, ಆದ್ದರಿಂದ ನಮ್ಮ ಹೆಜ್ಜೆ ಹೇಗೆ ಹಿಂದೆ ಹೋಗುತ್ತದೆ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ. ನಂತರ ಸಂಜೀವಿನಿ ಮೂಲಿಕೆಯನ್ನು ಮೂಸಿ ನೋಡಿಸಿ ಪ್ರಜ್ಞೆಯಲ್ಲಿ ತರುತ್ತಾರೆ. ಕ್ರೋಧವೂ ಸಹ ದುಃಖದಾಯಿಯಾಗಿದೆ. ತಮ್ಮನ್ನೂ ಸಹ ದುಃಖಿಯನ್ನಾಗಿ ಮಾಡುತ್ತದೆ ಅನ್ಯರನ್ನೂ ಸಹ ದುಃಖಿಯನ್ನಾಗಿ ಮಾಡುತ್ತದೆ. ಕೆಲವರಲ್ಲಿ ಗುಪ್ತವಾಗಿದೆ, ಕೆಲವರಲ್ಲಿ ಪ್ರತ್ಯಕ್ಷವಾಗಿದೆ. ಎಷ್ಟೇ ತಿಳಿಸಿದರು ತಿಳಿದುಕೊಳ್ಳುವುದಿಲ್ಲ. ಈಗ ತಮ್ಮನ್ನು ಬಹಳ ಬುದ್ಧಿವಂತರು ಎಂದು ತಿಳಿದುಕೊಳ್ಳುತ್ತಾರೆ. ನಂತರ ಬಹಳ ಪಶ್ಚಾತ್ತಾಪ ಪಡುತ್ತಾರೆ. ಕಲ್ಪ-ಕಲ್ಪಕ್ಕೂ ಕಲೆಯೂ ಉಳಿದುಬಿಡುತ್ತದೆ. ಶ್ರೀಮತದಂತೆ ನಡೆದಾಗ ಬಹಳ ಲಾಭವಿದೆ ಇಲ್ಲವೆಂದರೆ ಬಹಳ ನಷ್ಟವಾಗುತ್ತದೆ. ಇಬ್ಬರ ಮತವೂ ಪ್ರಸಿದ್ಧವಾಗಿದೆ. ಶ್ರೀಮತ ಹಾಗೂ ಬ್ರಹ್ಮನ ಮತ. ಹೇಳುತ್ತಾರೆ ಬ್ರಹ್ಮನೇ ಕೆಳಗೆ ಇಳಿದು ಬಂದರೂ ಸಹ ಇವರು ಕೇಳುವುದಿಲ್ಲ... ಕೃಷ್ಣನ ಹೆಸರನ್ನೂ ಹೇಳುವುದಿಲ್ಲ. ಈಗ ಪರಮಪಿತ ಪರಮಾತ್ಮ ಸ್ವಯಂ ಮತ ಕೊಡುತ್ತಾರೆ - ಬ್ರಹ್ಮನಿಗೂ ಸಹ ಅವರಿಂದಲೇ ಮತ ಸಿಗುತ್ತದೆ. ತಂದೆಗೆ ಮಕ್ಕಳ ಮೇಲೆ ಬಹಳ ಪ್ರೀತಿ ಇದೆ. ಮಕ್ಕಳನ್ನು ಹೆಗಲಮೇಲೆ ಕೂರಿಸುಕೊಳ್ಳುತ್ತಾರೆ. ತಂದೆಗೆ ಗುರಿ ಇರುತ್ತದೆ - ಮಕ್ಕಳು ಮುಂದುವರೆದರೆ ಕುಲದ ಹೆಸರು ಬರುತ್ತದೆ ಎಂದು. ಆದರೆ ಮಗು ತಂದೆಯ ಮಾತನ್ನು ಕೇಳದಿದ್ದರೆ, ಅಣ್ಣನ ಮಾತೂ ಕೇಳದಿದ್ದರೆ ಹಿರಿಯ ತಾಯಿಯ ಮಾತನ್ನು ಕೇಳುವುದಿಲ್ಲ. ಅವರ ಸ್ಥಿತಿ ಏನಾಗಬಹುದು! ಮಾತನ್ನು ಕೇಳಲೇಬೇಡಿ. ಬಾಕಿ ಸೇವಾಧಾರಿ ಮಕ್ಕಳನ್ನು ಬಾಪ್ದಾದಾರವರು ಹೃದಯದಲ್ಲಿ ಇಟ್ಟುಕೊಳ್ಳುತ್ತಾರೆ ಅಂದಾಗ ಅವರ ಮಹಿಮೆಯನ್ನು ಸ್ವಯಂ ಬಾಬಾ ಮಾಡುತ್ತಾರೆ. ಅವರಿಗೆ ತಿಳಿಸಬೇಕು - ಭಾರತದಲ್ಲಿ ವಿಷ್ಣುವಿನ ಮನೆತನದ ರಾಜ್ಯವಿತ್ತು ಅದು ಮತ್ತೆ ಸ್ಥಾಪನೆ ಆಗುತ್ತಿದೆ. ಈಗ ಮತ್ತೆ ಬಾಬಾ ಅದೇ ಭಾರತವನ್ನು ವಿಷ್ಣುಪುರಿಯನ್ನಾಗಿ ಮಾಡುತ್ತಾರೆ.

ತಮಗೆ ಬಹಳ ನಶೆ ಇರಬೇಕು ಅವರು ಸುಮ್ಮನೆ ತಮ್ಮ ಹೆಸರನ್ನು ಪ್ರಖ್ಯಾತಿ ಮಾಡಿಕೊಳ್ಳಲು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಸರ್ಕಾರದಿಂದಲೇ ಖರ್ಚು ಸಿಗುತ್ತದೆ. ಸನ್ಯಾಸಿಗಳಿಗಂತೂ ಬಹಳ ಹಣ ಸಿಗುತ್ತದೆ. ಈಗಲೂ ಹೇಳುತ್ತಾರೆ ಭಾರತ ಪ್ರಾಚೀನ ಯೋಗವನ್ನು ಕಲಿಸಲು ಹೋಗುತ್ತೇವೆ ಎಂದರೆ ತಕ್ಷಣ ಹಣ ಕೊಡುತ್ತಾರೆ. ಬಾಬಾನಿಗಂತೂ ಯಾರದೇ ಹಣದ ಅವಶ್ಯಕತೆ ಇಲ್ಲ. ಇವರು ಸ್ವಯಂ ಇಡೀ ಜಗತ್ತಿಗೆ ಸಹಯೋಗ ಕೊಡುವಂತಹ ಭೋಲಾ ಭಂಡಾರಿಯಾಗಿದ್ದಾರೆ. ಮಕ್ಕಳಿಗೆ ಸಹಯೋಗ ಸಿಗುತ್ತದೆ. ಮಕ್ಕಳ ಧೈರ್ಯ, ತಂದೆಯ ಸಹಯೋಗ, ಯಾರಾದರೂ ಹೊರಗಡೆಯಿಂದ ಬಂದವರು ಹೇಳುತ್ತಾರೆ ಇದು ಆಶ್ರಮ ಏನಾದರೂ ಕೊಡಬೇಕು ಎಂದು ತಿಳಿಯುತ್ತಾರೆ. ತಾವು ಹೇಳಬೇಕು ಏಕೆ ಕೊಡುತ್ತೀರಿ? ಜ್ಞಾನವಂತೂ ಏನೂ ಕೇಳಿಲ್ಲ. ಏನೂ ಗೊತ್ತಿಲ್ಲ. ನಾವು ಬೀಜವನ್ನು ನೆಡುತ್ತಿದ್ದೇವೆ. ಸ್ವರ್ಗದಲ್ಲಿ ಫಲ ಸಿಗುತ್ತಿದೆ. ಯಾವಾಗ ಜ್ಞಾನವನ್ನು ಕೇಳುತ್ತೀರೋ ಆಗ ಇದೆಲ್ಲವೂ ಅರ್ಥವಾಗುತ್ತದೆ. ರೀತಿ ಕೋಟ್ಯಾಂತರ ಜನ ಬರುತ್ತಾರೆ. ಬಾಬಾ ಗುಪ್ತರೂಪದಲ್ಲಿ ಬಂದಿದ್ದಾರೆ ಇದು ಒಳ್ಳೆಯದು. ಕೃಷ್ಣನ ರೂಪದಲ್ಲಿ ಬಂದರೆ ಎಲ್ಲರೂ ಗುಂಪಾಗಿ ಸೇರಿಬಿಡುತ್ತಿದ್ದರು, ಒಂದೇಸಲ ಆಕರ್ಷಣೆ ಆಗುತ್ತಾರೆ. ಯಾರೂ ಮನೆಯಲ್ಲಿ ಕೂರುವುದಿಲ್ಲ. ತಾವು ಈಶ್ವರನ ಸಂತಾನರಾಗಿದ್ದೀರಿ, ಇದನ್ನು ಮರೆಯಬೇಡಿ. ತಂದೆಗೆ ಮನಸ್ಸಿನಲ್ಲಿ ಇರುತ್ತದೆ - ಮಕ್ಕಳು ಪೂರ್ಣ ಆಸ್ತಿಯನ್ನು ಪಡೆಯಲಿ ಎಂದು. ಸ್ವರ್ಗದಲ್ಲಿ ಅನೇಕರು ಬರುತ್ತಾರೆ ಆದರೆ ಧೈರ್ಯ ಮಾಡಿ ಉತ್ತಮ ಪದವಿ ಪಡೆಯುವುದು ಕೋಟಿಯಲ್ಲಿ ಕೆಲವರು ಮಾತ್ರ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್: 15-6-68

ಏನೆಲ್ಲಾ ಕಳೆದುಹೋಯ್ತು ಅದನ್ನು ಪುನಾರವರ್ತನೆ ಮಾಡುವುದರಿಂದ ಯಾರ ಹೃದಯ ಬಲಹೀನವಾಗಿರುತ್ತದೆ ಅವರ ಹೃದಯದ ಬಲಹೀನತೆಯು ಸಹ ಪುನಾರವರ್ತನೆ ಆಗಿಬಿಡುತ್ತದೆ, ಇದಕ್ಕಾಗಿಯೇ ಮಕ್ಕಳನ್ನು ಡ್ರಾಮಾದ ಪಟ್ಟಿಯ ಮೇಲೆ ನಿಲ್ಲಿಸಲಾಗಿದೆ. ಮುಖ್ಯ ಲಾಭವು ನೆನಪಿನಿಂದ ಇದೆ. ನೆನಪಿನಿಂದಲೇ ಆಯಸ್ಸು ಹೆಚ್ಚಿಸುವುದು. ಡ್ರಾಮಾವನ್ನು ತಿಳಿದುಕೊಂಡರೆ ಎಂದೂ ವಿಚಾರವು ನಡೆಯುವುದಿಲ್ಲ. ಡ್ರಾಮಾದಲ್ಲಿ ಸಮಯ ಜ್ಞಾನ ಕಲಿಯುವುದು ಮತ್ತು ಕಲಿಸುವುದು ನಡೆಯುತ್ತಿದೆ. ನಂತರ ಪಾತ್ರವು ಬಂಧಾಗಿ ಬಿಡುವುದು. ತಂದೆಯು ಪಾತ್ರವು ಇರುವುದಿಲ್ಲ, ನಮ್ಮ ಪಾತ್ರವು ಇರುವುದಿಲ್ಲ. ಅವರದು ಕೊಡುವ ಪಾತ್ರವು ಇರುವುದಿಲ್ಲ, ನಮ್ಮದು ತೆಗೆದುಕೊಳ್ಳುವ ಪಾತ್ರವು ಇರುವುದಿಲ್ಲ. ಅಂದಾಗ ಒಂದಾಗಿ ಬಿಡುವೆವಲ್ಲವೇ. ನಮ್ಮ ಪಾತ್ರ ಹೊಸ ಪ್ರಪಂಚದಲ್ಲಿರುವುದು. ಬಾಬಾರವರ ಪಾತ್ರ ಶಾಂತಿಧಾಮದಲ್ಲಿರುವುದು. ಪಾತ್ರದ ರೀಲ್ ತುಂಬಿದೆಯಲ್ಲವೇ, ನಮ್ಮದು ಪ್ರಾಲಬ್ದದ ಪಾತ್ರ, ಬಾಬಾರವರದು ಶಾಂತಿಧಾಮದ ಪಾತ್ರ. ಕೊಡುವುದುತೆಗೆದುಕೊಳ್ಳುವ ಪಾತ್ರವು ಪೂರ್ಣವಾಯಿತು, ಡ್ರಾಮಾವೇ ಪೂರ್ಣವಾಯಿತು. ನಂತರ ನಾವು ರಾಜ್ಯ ಮಾಡಲು ಬರುತ್ತೇವೆ, ಅಲ್ಲಿ ಪಾತ್ರವು ಬೇರೆದಾಗಿರುತ್ತದೆ. ಜ್ಞಾನವು ನಿಂತು ಬಿಡುತ್ತದೆ. ನಾವು ದೇವತೆಗಳಾಗಿ ಬಿಡುತ್ತೇವೆ. ಪಾತ್ರವೇ ಪೂರ್ಣವಾಯಿತೆಂದರೆ ಬೇರೇನು ಅಂತರವಿರುವುದಿಲ್ಲ. ಮಕ್ಕಳ ಜೊತೆಯಲ್ಲಿ ತಂದೆಯ ಪಾತ್ರವು ಇರುವುದಿಲ್ಲ. ಮಕ್ಕಳು ಜ್ಞಾನವನ್ನು ಪೂರ್ಣ ತೆಗೆದುಕೊಂಡು ಬಿಡುತ್ತಾರೆ. ಅಂದಾಗ ಅವರ ಹತ್ತಿರ ಏನು ಇರುವುದಿಲ್ಲ. ಕೊಡುವವರ ಹತ್ತಿರ ಏನು ಇರುವುದಿಲ್ಲ, ತೆಗೆದುಕೊಳ್ಳುವವರಲ್ಲಿ ಕೊರತೆಯಿಲ್ಲದಿದ್ದಾಗ ಇಬ್ಬರು ಒಬ್ಬರ ಇನ್ನೊಬ್ಬರ ಸಮಾನರಾಗುತ್ತಾರೆ. ಇದರಲ್ಲಿ ವಿಚಾರ ಸಾಗರ ಮಂಥನ ಮಾಡುವ ಬುದ್ಧಿಯಿರಬೇಕು. ವಿಶೇಷ ಪುರುಷಾರ್ಥ ನೆನಪಿನ ಯಾತ್ರೆಯದ್ದಾಗಿದೆ. ತಂದೆಯು ಕುಳಿತು ತಿಳಿಸುತ್ತಾರೆ. ಕೇಳುವುದರಲ್ಲಿ ದೊಡ್ದ ಮಾತಾಗುತ್ತದೆ, ಬುದ್ಧಿಯಲ್ಲಂತು ಸೂಕ್ಷ್ಮವಾಗಿದೆಯಲ್ಲವೇ. ಶಿವಬಾಬಾರವರ ರೂಪ ಯಾವುದು ಎಂದು ಒಳಗಡೆಯಂತು ತಿಳಿದುಕೊಂಡಿದ್ದೀರಾ. ತಿಳಿಯುವುದರಲ್ಲಿ ದೊಡ್ದ ರೂಪವಾಗಿ ಬಿಡುತ್ತದೆ. ಭಕ್ತಿ ಮಾರ್ಗದಲ್ಲಿ ದೊಡ್ಡ ಲಿಂಗವನ್ನು ಮಾಡಿಬಿಡುತ್ತಾರೆ. ಆತ್ಮವು ಚಿಕ್ಕದಾಗಿದೆ. ಇದಂತೂ ಪ್ರಕೃತಿಯಾಗಿದೆ. ಎಲ್ಲಿಯವರೆಗೆ ಅಂತ್ಯವನ್ನು ಪಡೆಯುವಿರಿ? ನಂತರ ಅಂತಿಮದಲ್ಲಿ ಬೇಅಂತ (ಅಂತ್ಯವಿಲ್ಲ) ಎಂದು ಹೇಳುತ್ತಾರೆ. ಬಾಬಾರವರು ತಿಳಿಸುತ್ತಾರೆಇಡೀ ಪಾತ್ರವು ಆತ್ಮನಲ್ಲಿ ತುಂಬಲ್ಪಟ್ಟಿದೆ. ಇದಂತೂ ಪ್ರಕೃತಿಯಾಗಿದೆ. ಅಂತ್ಯವನ್ನು ಪಡೆಯಲು ಸಾಧ್ಯವಿಲ್ಲ. ಸೃಷ್ಟಿ ಚಕ್ರದ ಅಂತ್ಯವಂತು ಪಡೆಯುತ್ತಾರೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನೀವೇ ತಿಳಿದುಕೊಂಡಿದ್ದೀರಿ. ಬಾಬಾ ಜ್ಞಾನಪೂರ್ಣರಾಗಿದ್ದಾರೆ. ಆದರು ನಾವು ಪೂರ್ಣರಾಗಿಬಿಡುವೆವು, ಪಡೆಯಲು ಏನು ಉಳಿದಿರುವುದಿಲ್ಲ. ಬಾಬಾರವರು ಇವರಲ್ಲಿ ಪ್ರವೇಶರಾಗಿ ಓದಿಸುತ್ತಾರೆ. ಅವರು ಬಿಂದುವಾಗಿದ್ದಾರೆ. ಆತ್ಮ ಅಥವಾ ಪರಮಾತ್ಮನ ಸಾಕ್ಷಾತ್ಕಾರವಗುವುದರಿಂದ ಖುಷಿಯಾಗುತ್ತದೆಯೇ. ಪರಿಶ್ರಮ ಪಟ್ಟು ತಂದೆಯನ್ನು ನೆನಪು ಮಾಡಬೇಕು ಆಗಲೇ ವಿಕರ್ಮ ವಿನಾಶವಾಗುವುದು. ಬಾಬಾರವರು ಹೇಳುತ್ತಾರೆ - ನನ್ನಲ್ಲಿ ಜ್ಞಾನವು ಬಂಧ ಆದರೆ ನಿಮ್ಮಲ್ಲಿಯೂ ಬಂಧವಾಗಿಬಿಡುವುದು. ಜ್ಞಾನವನ್ನು ಪಡೆದು ಶ್ರೇಷ್ಠರಾಗಿ ಬಿಡುತ್ತಾರೆ. ಎಲ್ಲವೂ ತೆಗೆದುಕೊಂಡು ಬಿಡುತ್ತಾರೆ ಆದರೂ ತಂದೆಯಂತು ತಂದೆಯಾಗಿದ್ದಾರಲ್ಲವೇ. ನೀವು ಆತ್ಮರು ಆತ್ಮರಾಗಿಯೇ ಇರುತ್ತೀರಿ, ತಂದೆಯಂತು ಆಗಿರುವುದಿಲ್ಲ. ಇದಂತು ಜ್ಞಾನವಾಗಿದೆ. ತಂದೆ ತಂದೆಯಾಗಿದ್ದಾರೆ, ಮಕ್ಕಳು ಮಕ್ಕಳಾಗಿದ್ದಾರೆ. ಇದೆಲ್ಲವು ವಿಚಾರ ಸಾಗರ ಮಂಥನ ಮಾಡಿ ಆಳದಲ್ಲಿ ಹೋಗುವ ಮಾತಾಗಿದೆ. ಇದನ್ನು ತಿಳಿದುಕೊಂಡಿದ್ದಾರೆಎಲ್ಲರೂ ಹೋಗಲೇಬೆಕಾಗಿದೆ. ಎಲ್ಲರೂ ಹೋಗುವವರಾಗಿದ್ದಾರೆ. ಉಳಿದ ಆತ್ಮಗಳು ಹೋಗಿ ಇರುತ್ತವೆ. ಇಡೀ ಪ್ರಪಂಚವೇ ಸಮಾಪ್ತಿ ಆಗುವುದಿದೆ, ಇದರಲ್ಲಿ ನಿರ್ಭಯರಾಗಿರಬೇಕಾಗಿದೆ. ನಿರ್ಭಯರಾಗಿರುವ ಪುರುಷಾರ್ಥವನ್ನು ಮಾಡಬೇಕಾಗಿದೆ. ಶರೀರ ಅನ್ಯ ಯಾವುದೇ ಭಾನ ಬರಬಾರದು, ಅದೇ ಅವಸ್ಥೆಯಲ್ಲಿ ಹೋಗಬೇಕು. ತಂದೆ ತಮ್ಮ ಸಮಾನರನ್ನಾಗಿ ಮಾಡುತ್ತಾರೆ, ನೀವು ಮಕ್ಕಳು ಸಹ ತಮ್ಮ ಸಮಾನರನ್ನಾಗಿ ಮಾಡುತ್ತೀರಿ. ಒಬ್ಬ ತಂದೆಯದೇ ನೆನಪಿರುವಂತಹ ಪುರುಷಾರ್ಥವನ್ನು ಮಾಡಬೇಕಾಗಿದೆ. ಈಗ ಸಮಯವಿದೆ. ರಿಹರ್ಸಲ್(ಪೂರ್ವಾಭ್ಯಾಸ) ತೀವ್ರ ಮಾಡಬೇಕು. ಪ್ರಾಕ್ಟಿಸ್ ಇಲ್ಲವೆಂದರೆ ನಿಂತು ಬಿಡುತ್ತವೆ. ಕಾಲುಗಳು ಅಲುಗಾಡಲು ಪ್ರಾರಂಭವಾಗುತ್ತವೆ ಮತ್ತು ಇದ್ದಕ್ಕಿದ್ದಂತೆ ಹೃದಯಘಾತ್ (ಹಾರ್ಟ್ಫೇಲ್)ರಾಗಲು ತೊಡಗುತ್ತಾರೆ. ತಮೋಪ್ರಧಾನ ಶರೀರವು ಹೃದಯಘಾತ್(ಹಾರ್ಟ್ಫೇಲ್) ಆಗಲು ಸಮಯ ಹಿಡಿಸುತ್ತದೆಯೇ. ಎಷ್ಟು ಅಶರೀರಿಯಾಗುತ್ತ ಹೋಗುವಿರಿ, ಬಾಬಾರವರನ್ನು ನೆನಪು ಮಾಡುತ್ತಿರುತ್ತೀರೆಂದರೆ ಸಮೀಪ ಬರುವಿರಿ. ಯೋಗದವರೇ ನಿರ್ಭಯರಾಗಿರುತ್ತಾರೆ. ಯೋಗದಿಂದ ಶಕ್ತಿ ಸಿಗುವುದು. ಜ್ಞಾನದಿಂದ ಧನ ಸಿಗುವುದು. ಮಕ್ಕಳಿಗೆ ಶಕ್ತಿ ಬೇಕು. ಶಕ್ತಿಯನ್ನು ಪಡೆಯಲು ತಂದೆಯನ್ನು ನೆನಪು ಮಾಡುತ್ತೀರಿ. ಬಾಬಾರವರು ಅವಿನಾಶಿ ಸರ್ಜನ್ ಆಗಿದ್ದಾರೆ. ಅವರೆಂದು ರೋಗಿಯಾಗಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ - ತಮ್ಮ ಅವಿನಾಶಿ ಔಷಧ ಮಾಡುತ್ತಿರುತ್ತೀರಿ. ನಾವು ಇಂತಹ ಸಂಜೀವಿನಿ ಗಿಡಮೂಲಿಕೆಯನ್ನು ಕೊಡುತ್ತೇವೆ ಯಾವುದರಿಂದ ಯಾರು ಎಂದು ಕಾಯಿಲೆ ಬಿಳುವುದಿಲ್ಲ. ಕೇವಲ ಪತಿತ-ಪಾವನ ತಂದೆಯನ್ನು ನೆನಪು ಮಡುವುದರಿಂದ ಪಾವನರಾಗಿ ಬಿಡುವಿರಿ. ದೇವತೆಗಳು ಸದಾ ನಿರೋಗಿ ಪಾವನರಾಗಿರುತ್ತಾರಲ್ಲವೇ. ಮಕ್ಕಳಿಗಂತು ಇದು ನಿಶ್ಚಯವಾಗಿದೆ ನಾವು ಕಲ್ಪ ಕಲ್ಪವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಲೆಕ್ಕವಿಲ್ಲದಷ್ಟು ಬಾರಿ ತಂದೆಯು ಬಂದಿದ್ದಾರೆ, ಹಾಗೆಯೇ ಈಗಲೂ ಬಂದಿದ್ದಾರೆ. ತಂದೆಯು ಏನು ಕಲಿಸುತ್ತಾರೆ, ತಿಳಿಸುತ್ತಾರೆಯೋ ಇದೇ ರಾಜಯೋಗವಾಗಿದೆ. ಗೀತೆಯಲ್ಲವೂ ಭಕ್ತಿ ಮಾರ್ಗದ್ದಾಗಿದೆ. ಜ್ಞಾನ ಮಾರ್ಗವನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಬಂದು ಕೆಳಗಡೆಯಿಂದ ಮೇಲೆತ್ತುತ್ತಾರೆ. ಯಾರು ಪಕ್ಕಾ ನಿಶ್ಚಯ ಬುದ್ಧಿಯವರಾಗಿದ್ದಾರೆ ಅವರೇ ಮಾಲೆಯ ಮಣಿಯಾಗುತ್ತಾರೆ. ಮಕ್ಕಳು ತಿಳಿಸುಕೊಡಿದ್ದಾರೆ ಭಕ್ತಿಯನ್ನು ಮಾಡುತ್ತ ಮಾಡುತ್ತ ನಾವು ಕೆಳಗಡೆ ಬಿಳುತ್ತ ಬಂದ್ದಿದ್ದೇವೆ. ಈಗ ತಂದೆ ಬಂದು ಸತ್ಯ ಸಂಪಾದನೆಯನ್ನು ಮಾಡಿಸುತ್ತಿದ್ದಾರೆ. ಲೌಕಿಕ ತಂದೆಯು ಪಾರಲೌಕಿಕ ತಂದೆಯು ಮಾಡಿಸುವಷ್ಟು ಸಂಪಾದನೆಯನ್ನು ಮಾಡುವುದಿಲ್ಲ. ಗುಡ್ ನೈಟ್ ಮತ್ತು ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಸರ್ವೀಸೆಬಲ್ ಆಗಲು ವಿಕಾರಗಳ ಅಂಶವನ್ನೂ ಸಹ ಸಮಾಪ್ತಿ ಮಾಡಬೇಕು. ಸರ್ವೀಸಿನ ಪ್ರತಿ ಉತ್ಸಾಹದಲ್ಲಿ ಇರಬೇಕು.

2. ನಾವು ಈಶ್ವರೀಯ ಸಂತಾನರಾಗಿದ್ದೇವೆ, ಶ್ರೀಮತದಂತೆ ಭಾರತವನ್ನು ವಿಷ್ಣುಪುರಿ ಮಾಡುತ್ತಿದ್ದೇವೆ, ಅಲ್ಲಿ ಎಲ್ಲರೂ ಪಕ್ಕಾ ವೈಷ್ಣವರಾಗಿರುತ್ತಾರೆ - ನಶೆಯಲ್ಲಿ ಇರಬೇಕು.

ವರದಾನ:

ದುಃಖದ ಚಕ್ರಗಳಿಂದ ಸದಾ ಮುಕ್ತರಾಗಿರುವಂತಹ ಮತ್ತು ಎಲ್ಲರನ್ನು ಮುಕ್ತ ಮಾಡುವಂತಹ ಸ್ವದರ್ಶನ ಚಕ್ರಧಾರಿ ಭವ
ಯಾವ ಮಕ್ಕಳು ಕರ್ಮೇಂದ್ರಿಯಗಳ ವಶರಾಗಿ ಹೇಳುತ್ತಾರೆ ಇಂದು ಕಣ್ಣು, ಇಂದು ಮುಖವು ಅಥವಾ ದೃಷ್ಠಿಯು ಮೋಸ ಮಾಡಿ ಬಿಟ್ಟಿತು ಎಂದು, ಅಂದರೆ ಮೋಸ ಹೋಗುವುದು ಅರ್ಥಾತ್ ದುಃಖದ ಅನುಭೂತಿಯಾಗುವುದು. ಪ್ರಪಂಚದವರು ಹೇಳುತ್ತಾರೆ- ಇಷ್ಟವಿರಲಿಲ್ಲ ಆದರೆ ಚಕ್ರದಲ್ಲಿ ಬಂದುಬಿಟ್ಟೆ ಎಂದು. ಆದರೆ ಯಾರು ಸ್ವದರ್ಶನ ಚಕ್ರಧಾರಿ ಮಕ್ಕಳಿದ್ದಾರೆ ಅವರು ಎಂದೂ ಯಾವುದೇ ಮೋಸದ ಚಕ್ರದೊಳಗೆ ಬರಲು ಸಾಧ್ಯವಿಲ್ಲ. ಅವರಂತೂ ದುಃಖದ ಚಕ್ರದಿಂದ ಮುಕ್ತರಾಗಿರುವಂತಹ ಮತ್ತು ಎಲ್ಲರನ್ನೂ ಮುಕ್ತ ಮಾಡುವಂತಹವರು, ಮಾಲೀಕರಾಗಿ ಸರ್ವ ಕರ್ಮೇಂದ್ರಿಗಳಿಂದ ಕರ್ಮ ಮಾಡಿಸುವಂತಹವರಾಗಿದ್ದಾರೆ.

ಸ್ಲೋಗನ್:

ಅಕಾಲ ಸಿಂಹಾಸನಧಾರಿಯಾಗಿ ತಮ್ಮ ಶ್ರೇಷ್ಠ ಘನತೆಯಲ್ಲಿದ್ದಾಗ ಎಂದೂ ಬೇಸರವಾಗುವುದಿಲ್ಲ.

 Download PDF

Post a Comment

0 Comments