26/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ – ಅಮೃತವೇಳೆಯ
ಶುದ್ಧ ಹಾಗೂ
ಶಾಂತ ಸಮಯದಲ್ಲಿ
ಎದ್ದು ತಂದೆಯನ್ನು
ನೆನಪು ಮಾಡಬೇಕು.
ದೇಹ ಸಹಿತ
ಎಲ್ಲವನ್ನೂ ಮರೆಯುವ
ಅಭ್ಯಾಸ ಮಾಡಬೇಕು,
ಆ ಸಮಯ
ನೆನಪು ಚೆನ್ನಾಗಿರುತ್ತದೆ”
ಪ್ರಶ್ನೆ:
ತಂದೆಯ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ತಾವು ಮಕ್ಕಳು ಯಾವ ಒಳ್ಳೆಯ ಕರ್ಮವನ್ನು ಮಾಡುತ್ತೀರಿ?
ಉತ್ತರ:
ಎಲ್ಲದಕ್ಕಿಂತ ಒಳ್ಳೆಯ ಕರ್ಮವಾಗಿದೆ - ತಂದೆ ತಮ್ಮದೆಲ್ಲವನ್ನು
[ತನು-ಮನ-ಧನ ಸಹಿತ] ಅರ್ಪಣೆ ಮಾಡಬೇಕು. ಯಾವಾಗ ತಾವು ಎಲ್ಲವನ್ನು ಅರ್ಪಣೆ ಮಾಡುತ್ತೀರಿ ಆಗ ತಂದೆ ತಮಗೆ ಪ್ರತಿಫಲವಾಗಿ ಅಷ್ಟೊಂದು ಶಕ್ತಿಯನ್ನು ಕೊಡುತ್ತಾರೆ, ಅದರಿಂದ ತಾವು ಇಡೀ ವಿಶ್ವದ ಮೇಲೆ ಸುಖ-ಶಾಂತಿಯ ಅಟಲ, ಅಖಂಡ ರಾಜ್ಯವನ್ನು ಮಾಡಬಹುದು.
ಪ್ರಶ್ನೆ:
ತಂದೆಯು ಯಾವ ಸೇವೆಯನ್ನು ಮಕ್ಕಳಿಗೆ ಕಲಿಸುತ್ತಾರೆ
ಅದನ್ನು ಬೇರೆ ಯಾವುದೇ ಮನುಷ್ಯರು ಕಲಿಸಲು ಸಾಧ್ಯವಿಲ್ಲ?
ಉತ್ತರ:
ಆತ್ಮೀಯ ಸೇವೆ, ತಾವು ಆತ್ಮಗಳಿಗೆ ವಿಕಾರಗಳ ಕಾಯಿಲೆಯಿಂದ ಬಿಡಿಸಲು ಜ್ಞಾನದ ಇಂಜಕ್ಷನ್ ಕೊಡುತ್ತೀರಿ ತಾವು ಆತ್ಮೀಯ ಸಮಾಜ ಸೇವಕರಾಗಿದ್ದೀರಿ.
ಮನುಷ್ಯರು ಶಾರೀರಿಕ ಸೇವೆ ಮಾಡುತ್ತಾರೆ, ಆದರೆ ಜ್ಞಾನದ ಇಂಜಕ್ಷನ್ ಕೊಟ್ಟು ಆತ್ಮವನ್ನು ಜಾಗೃತ ಜ್ಯೋತಿಯನ್ನಾಗಿ
ಮಾಡುವುದಿಲ್ಲ. ಈ ಸೇವೆಯನ್ನು ತಂದೆಯೇ ಮಕ್ಕಳಿಗೆ ಕಲಿಸುತ್ತಾರೆ.
ಓಂ ಶಾಂತಿ:
ಭಗವಾನುವಾಚ: ಇದಂತೂ ತಿಳಿಸಲಾಗಿದೆ ಎಂದೂ ಮನುಷ್ಯರಿಗೆ ಭಗವಂತ ಎಂದು ಹೇಳಲು ಸಾಧ್ಯವಿಲ್ಲ. ಇದು ಮನುಷ್ಯ ಸೃಷ್ಟಿ ಹಾಗೂ ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವತನದಲ್ಲಿ ಇರುತ್ತಾರೆ.
ಶಿವಬಾಬಾ ಆತ್ಮಗಳ ಅವಿನಾಶಿ ತಂದೆಯಾಗಿದ್ದಾರೆ. ವಿನಾಶೀ ಶರೀರದ ತಂದೆ ವಿನಾಶೀ ಆಗಿದ್ದಾರೆ. ಇದು ಎಲ್ಲರಿಗೆ ಗೊತ್ತಿದೆ.
ಕೇಳಲಾಗುತ್ತದೆ - ತಮ್ಮ ಈ ವಿನಾಶೀ ಶರೀರದ ತಂದೆ ಯಾರು? ಆತ್ಮದ ತಂದೆ ಯಾರು?
ಆತ್ಮ ತಿಳಿದಿದೆ
- ಅವರು ಪರಮಧಾಮದಲ್ಲಿ ಇರುತ್ತಾರೆ. ಈಗ ತಾವು ಮಕ್ಕಳನ್ನು ದೇಹಾಭಿಮಾನಿಗಳನ್ನಾಗಿ ಯಾರು ಮಾಡಿದರು? ದೇಹದ ರಚನೆ ಮಾಡಿದವರು.
ಈಗ ಆತ್ಮಾಭಿಮಾನಿಗಳನ್ನಾಗಿ ಯಾರು ಮಾಡುತ್ತಾರೆ?
ಆತ್ಮಗಳ ಅವಿನಾಶಿ ತಂದೆ. ಅವಿನಾಶಿ ಅಂದರೆ ಅದಕ್ಕೆ ಆದಿ-ಮಧ್ಯ-ಅಂತ್ಯ ಇರುವುದಿಲ್ಲ.
ಒಂದುವೇಳೆ ಆತ್ಮದ ಹಾಗೂ ಪರಮಾತ್ಮನ ಆದಿ-ಮಧ್ಯ-ಅಂತ್ಯವನ್ನು ಹೇಳಿದರೆ ಆಗ ರಚನೆಯದೂ ಸಹ ಪ್ರಶ್ನೆ ಉತ್ಪನ್ನವಾಗುತ್ತದೆ. ಅದಕ್ಕೆ ಹೇಳಲಾಗುತ್ತದೆ ಅವಿನಾಶಿ ಆತ್ಮ, ಅವಿನಾಶಿ ಪರಮಾತ್ಮ. ಆತ್ಮದ ಹೆಸರು ಆತ್ಮ ಆಗಿದೆ. ಅವಶ್ಯವಾಗಿ ಆತ್ಮಕ್ಕೆ ಗೊತ್ತಿದೆ ನಾನು ಆತ್ಮ ಎಂದು. ನಾನು ಆತ್ಮಕ್ಕೆ ದುಃಖ ಕೊಡಬೇಡಿ. ನಾನು ಪಾಪಾತ್ಮನಾಗಿದ್ದೇನೆ - ಇದು ಆತ್ಮವೇ ಹೇಳುತ್ತದೆ.
ಸ್ವರ್ಗದಲ್ಲಿ ಎಂದೂ ಸಹ ಈ ಅಕ್ಷರವನ್ನು ಆತ್ಮಗಳು ಹೇಳುವುದಿಲ್ಲ. ಈ ಸಮಯದಲ್ಲಿಯೇ ಆತ್ಮ ಪತಿತವಾಗಿದೆ ಅದೇ ಮತ್ತೆ ಪಾವನವಾಗುತ್ತದೆ. ಪತಿತ ಆತ್ಮನೇ ಪಾವನ ಆತ್ಮದ ಮಹಿಮೆ ಮಾಡುತ್ತದೆ.
ಯಾರೆಲ್ಲಾ ಮನುಷ್ಯ ಆತ್ಮರು ಇದ್ದಾರೋ ಅವರು ಪುನರ್ಜನ್ಮವನ್ನು ಅವಶ್ಯವಾಗಿ ಪಡೆಯಲೇಬೇಕು.
ಈ ಎಲ್ಲಾ ಮಾತುಗಳು ಹೊಸದಾಗಿವೆ,
ತಂದೆ ಆಜ್ಞೆಯನ್ನು ಕೊಡುತ್ತಾರೆ - ಕುಳಿತುಕೊಳ್ಳುತ್ತಾ, ನಿಲ್ಲುತ್ತಾ ನನ್ನನ್ನು ನೆನಪು ಮಾಡಿ.
ಮೊದಲು ತಾವು ಪೂಜಾರಿಗಳಾಗಿದ್ದಿರಿ. ಶಿವಾಯ ನಮಃ ಎಂದು ಹೇಳುತ್ತಿದ್ದಿರಿ ಈಗ ತಂದೆ ಹೇಳುತ್ತಾರೆ ತಾವು ಪೂಜಾರಿಗಳು ನಮಃ ಎಂದು ಬಹಳಷ್ಟು ಮಾಡಿದ್ದೀರಿ,
ಈಗ ತಮ್ಮನ್ನು ಮಾಲೀಕ, ಪೂಜ್ಯರನ್ನಾಗಿ ಮಾಡುತ್ತೇನೆ, ಪೂಜ್ಯರು ಎಂದೂ ಸಹ ನಮಸ್ತೆಯನ್ನು ಮಾಡಬೇಕಾಗಿಲ್ಲ.
ಪೂಜಾರಿಗಳು ನಮಃ ಅಥವಾ ನಮಸ್ತೆ ಎಂದು ಹೇಳುತ್ತಾರೆ.
ನಮಸ್ತೆ ಎಂದರೆ ಅರ್ಥವೇ ನಮಃ.
ತಲೆಯನ್ನು ಕೆಳಗೆ ಅವಶ್ಯವಾಗಿ ಮಾಡಬೇಕಾಗುತ್ತದೆ. ಈಗ ತಾವು ಮಕ್ಕಳು ನಮಸ್ತೆ ಎಂದು ಹೇಳುವ ಅವಶ್ಯಕತೆ ಇಲ್ಲ.
ಲಕ್ಷ್ಮೀ-ನಾರಾಯಣ ನಮಃ, ವಿಷ್ಣು ದೇವತಾಯ ನಮಃ,
ಶಂಕರ ದೇವತಾಯ ನಮಃ ಇದು ಯಾವುದೂ ಹೇಳಬೇಕಾಗಿಲ್ಲ.
ಇದು ಪೂಜಾರಿತನದ ಅಕ್ಷರವಾಗಿದೆ. ಈಗ ತಾವು ಇಡೀ ಸೃಷ್ಟಿಯ ಮಾಲೀಕರಾಗಬೇಕು,
ತಂದೆಯನ್ನೇ ನೆನಪು ಮಾಡಬೇಕು. ಅವರು ಸಮರ್ಥರೆಂದು ಎಲ್ಲರೂ ಹೇಳುತ್ತಾರೆ. ಕಾಲರಿಗೂ ಕಾಲ, ಅಕಾಲ ಮೂರ್ತಿ ಆಗಿದ್ದಾರೆ.
ಸೃಷ್ಟಿಯ ರಚಯಿತ ಆಗಿದ್ದಾರೆ. ಜ್ಯೋತಿರ್ಬಿಂದು ಸ್ವರೂಪರಾಗಿದ್ದಾರೆ. ಮೊದಲು ಅವರ ಮಹಿಮೆಯನ್ನು ಮಾಡುತ್ತಿದ್ದೆವು ಆಮೇಲೆ ಹೇಳುತ್ತಿದ್ದೆವು ಸರ್ವವ್ಯಾಪಿ ಎಂದು. ನಾಯಿ,
ಬೆಕ್ಕು ಎಲ್ಲದರಲ್ಲಿಯೂ ಇದ್ದಾರೆ ಎಂದು ಹೇಳಿದಾಗ ಎಲ್ಲಾ ಮಹಿಮೆಯು ಸಮಾಪ್ತಿ ಆಗುತ್ತದೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಪಾಪಾತ್ಮಗಳು ಆಗಿದ್ದಾರೆ ಅಂದಮೇಲೆ ಪ್ರಾಣಿಗಳಿಗೆ ಏನು ಮಹಿಮೆ ಆಗುತ್ತದೆ.
ಎಲ್ಲಾ ಮನುಷ್ಯರದೇ ವಿಚಾರವಾಗಿದೆ. ಆತ್ಮ ಹೇಳುತ್ತದೆ ನಾನು ಆತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ.
ಹೇಗೆ ಆತ್ಮ ಬಿಂದುವಾಗಿದೆ ಹಾಗೆಯೇ ಪರಮಾತ್ಮನೂ ಬಿಂದುವಾಗಿದ್ದಾರೆ. ಅವರು ಹೇಳುತ್ತಾರೆ
- ನಾನು ಪತಿತರನ್ನು ಪಾವನ ಮಾಡಲು ಸಾಧಾರಣ ತನುವಿನಲ್ಲಿ ಬರುತ್ತೇನೆ ಬಂದು ಮಕ್ಕಳ ಅತೀ ವಿಧೇಯ ಸೇವಕನಾಗಿ ಸೇವೆ ಮಾಡುತ್ತೇನೆ.
ನಾನು ಆತ್ಮೀಯ ಸಮಾಜ ಸೇವೆಯನ್ನು ಮಾಡುತ್ತೇನೆ. ತಾವು ಮಕ್ಕಳಿಗೂ ಸಹ ಆತ್ಮೀಯ ಸೇವೆ ಮಾಡುವುದನ್ನು ಕಲಿಸುತ್ತೇನೆ ಬೇರೆ ಎಲ್ಲರೂ ಶಾರೀರಿಕ ಸೇವೆ ಮಾಡುವುದನ್ನು ಕಲಿಸುತ್ತಾರೆ ತಮ್ಮದು ಆತ್ಮೀಯ ಸೇವೆ ಅಗಿದೆ,
ಅದಕ್ಕೆ ಹೇಳಲಾಗುತ್ತದೆ.
ಜ್ಞಾನ ಅಂಜನವನ್ನು ಸದ್ಗುರು ನೀಡಿದರು........
ಸತ್ಯ ಸದ್ಗುರು ಅವರು ಒಬ್ಬರೇ ಆಗಿದ್ದಾರೆ. ಅವರೇ ಶಕ್ತಿವಂತರಾಗಿದ್ದಾರೆ. ಎಲ್ಲಾ ಆತ್ಮಗಳಿಗೂ ಬಂದು ಇಂಜೆಕ್ಷನ್ ಕೊಡುತ್ತಾರೆ.
ಆತ್ಮದಲ್ಲಿಯೇ ವಿಕಾರಗಳ ಕಾಯಿಲೆ ಇದೆ.
ಈ ಜ್ಞಾನದ ಇಂಜಕ್ಷನ್ ಬೇರೆ ಯಾರ ಬಳಿಯೂ ಇಲ್ಲ. ಆತ್ಮ ಪತಿತವಾಗಿದೆ, ಶರೀರವಲ್ಲ.
ಪಂಚವಿಕಾರಗಳ ಕಠಿಣ ಕಾಯಿಲೆ ಇದೆ,
ಇದಕ್ಕಾಗಿ ಇಂಜೆಕ್ಷನ್ ಜ್ಞಾನಸಾಗರ ತಂದೆಯ ವಿನಃ ಬೇರೆ ಯಾರ ಬಳಿಯೂ ಇಲ್ಲ. ತಂದೆಯೇ ಬಂದು ಆತ್ಮಗಳ ಜೊತೆ ಮಾತನಾಡುತ್ತಾರೆ - ಹೇ! ಆತ್ಮಗಳೇ ತಾವು ಜಾಗೃತ ಜ್ಯೋತಿಗಳಾಗಿದ್ದಿರಿ ಮತ್ತೆ ಮಾಯೆಯ ನೆರಳು ಬಿದ್ದಿದೆ. ನೆರಳು ಬೀಳುತ್ತಾ ತಾವು ಮಂದ ಬುದ್ಧಿಯವರಾಗಿದ್ದೀರಿ. ಬಾಕಿ ಯಾವುದೇ ಯುಧಿಷ್ಟರ ಅಥವಾ ಧೃತರಾಷ್ಟ್ರನ ಮಾತಿಲ್ಲ.
ಇದು ರಾವಣನ ಮಾತಾಗಿದೆ.
ತಂದೆ ಹೇಳುತ್ತಾರೆ ನಾನು ಬರುವುದೇ ಸಾಧಾರಣ ರೀತಿಯಲ್ಲಿ.
ನನ್ನನ್ನು ಕೆಲವರು ಮಾತ್ರ ಅರ್ಥ ಮಾಡಿಕೊಳ್ಳುತ್ತಾರೆ. ಶಿವಜಯಂತಿಯೇ ಬೇರೆ, ಕೃಷ್ಣ ಜಯಂತಿಯೇ ಬೇರೆ.
ಪರಮಪಿತ ಪರಮಾತ್ಮ ಶಿವನನ್ನು ಕೃಷ್ಣನ ಜೊತೆ ಸೇರಿಸಲು ಸಾಧ್ಯವಿಲ್ಲ. ಅವರು ನಿರಾಕಾರ, ಇವರು ಸಾಕಾರ. ನಾನು ನಿರಾಕಾರನಾಗಿದ್ದೇನೆ, ನನ್ನ ಮಹಿಮೆಯನ್ನು ಮಾಡುತ್ತಾರೆ
- ಹೇ! ಪತಿತ ಪಾವನ ಬಂದು ಈ ಭಾರತವನ್ನು ಮತ್ತೆ ಸತ್ಯಯುಗೀ ದೈವೀ ರಾಜಸ್ಥಾನವನ್ನಾಗಿ ಮಾಡಿ. ಯಾವುದೋ ಸಮಯದಲ್ಲಿ ದೈವೀ ರಾಜಸ್ಥಾನವಿತ್ತು, ಈಗ ಇಲ್ಲ. ಮತ್ತೆ ಯಾರು ಸ್ಥಾಪನೆ ಮಾಡುತ್ತಾರೆ? ಪರಮಪಿತ ಪರಮಾತ್ಮನೇ ಬ್ರಹ್ಮಾರವರ ಮೂಲಕ ಹೊಸ ಜಗತ್ತನ್ನು ಸ್ಥಾಪನೆ ಮಾಡುತ್ತಾರೆ. ಈಗ ಪತಿತ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಿದೆ, ಇದರ ಹೆಸರೇ ಸ್ಮಶಾನವಾಗಿದೆ.
ಮಾಯೆ ಎಲ್ಲರನ್ನೂ ಸಮಾಪ್ತಿ ಮಾಡಿದೆ ಈಗ ತಾವು ದೇಹ ಸಹಿತ ದೇಹದ ಸರ್ವ ಸಂಬಂಧಿಕರನ್ನು ಮರೆತು ನಾನು ಒಬ್ಬ ತಂದೆಯನ್ನು ನೆನಪು ಮಾಡಬೇಕು. ಶರೀರ ನಿರ್ವಹಣೆಗಾಗಿ ಕರ್ಮವನ್ನು ಭಲೆ ಮಾಡಿ,
ಸಮಯ ಸಿಕ್ಕಿದಾಗ ನನ್ನನ್ನು ನೆನಪು ಮಾಡುವ ಪುರುಷಾರ್ಥವನ್ನು ಮಾಡಿ. ಇದು ಒಂದೇ ಯುಕ್ತಿಯನ್ನು ತಮಗೆ ತಿಳಿಸುತ್ತಾರೆ.
ಎಲ್ಲದಕ್ಕಿಂತ ಹೆಚ್ಚಾಗಿ ನನ್ನ ನೆನಪು ತಮಗೆ ಅಮೃತವೇಳೆಯಲ್ಲಿ ಇರುತ್ತದೆ ಏಕೆಂದರೆ ಆಗ ಶಾಂತ,
ಶುದ್ಧ ಸಮಯವಾಗಿರುತ್ತದೆ. ಆ ಸಮಯದಲ್ಲಿ ಕಳ್ಳರು ಕಳ್ಳತನವನ್ನು ಮಾಡುವುದಿಲ್ಲ, ಯಾರೂ ಪಾಪ ಮಾಡುವುದಿಲ್ಲ,
ಯಾರೂ ವಿಕಾರಕ್ಕೆ ಹೋಗುವುದಿಲ್ಲ. ಇದಕ್ಕೆ ಹೇಳಲಾಗುತ್ತದೆ ಘೋರ ತಮೋಪ್ರಧಾನ ರಾತ್ರಿ.
ಈಗ ತಂದೆಯು ಹೇಳುತ್ತಾರೆ - ಮಕ್ಕಳೇ ಕಳೆದದ್ದು ಕಳೆದು ಹೋಯಿತು. ಭಕ್ತಿಮಾರ್ಗದ ಆಟ ಪೂರ್ಣವಾಯಿತು,
ಈಗ ತಮಗೆ ತಿಳಿಸಲಾಗಿದೆ - ಇದು ನಿಮ್ಮ ಅಂತಿಮ ಜನ್ಮವಾಗಿದೆ. ಸೃಷ್ಟಿಯ ವೃದ್ಧಿ ಹೇಗೆ ಆಗುತ್ತದೆ ಎಂಬ ಪ್ರಶ್ನೆ ಉತ್ಪನ್ನವಾಗಲು ಸಾಧ್ಯವಿಲ್ಲ. ವೃದ್ಧಿ ಆಗುತ್ತಲೇ ಇರುತ್ತದೆ.
ಯಾವ ಆತ್ಮಗಳ ಮೇಲಿದೆಯೋ ಅವು ಕೆಳಗಡೆ ಬರಲೇಬೇಕು.
ಎಲ್ಲರೂ ಬಂದಾಗ ವಿನಾಶ ಪ್ರಾರಂಭವಾಗುತ್ತದೆ. ನಂತರ ಎಲ್ಲರೂ ನಂಬರ್ವಾರ್ ಹೋಗಲೇಬೇಕು.
ಮಾರ್ಗದರ್ಶಕರು ಎಲ್ಲರಿಗಿಂತ ಮುಂದೆ ಇರುತ್ತಾರೆ ತಾನೇ.
ತಂದೆಗೆ ಮುಕ್ತಿ ದಾತಾ, ಪತಿತಪಾವನ ಎಂದು ಹೇಳಲಾಗುತ್ತದೆ.
ಸ್ವರ್ಗ ಪಾವನ ಜಗತ್ತಾಗಿದೆ. ಅದನ್ನು ತಂದೆಯ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ.
ಈಗ ತಾವು ತಂದೆಯ ಶ್ರೀಮತದಂತೆ ಭಾರತದ ಸೇವೆಯನ್ನು ತನು-ಮನ-ಧನದಿಂದ ಮಾಡುತ್ತೀರಿ.
ಗಾಂಧೀಜಿ ಬಯಸುತ್ತಿದ್ದರು, ಆದರೆ ಮಾಡಲು ಆಗಲಿಲ್ಲ. ಡ್ರಾಮಾದ ಲೀಲೆಯೇ ಆ ರೀತಿ ಇತ್ತು.
ಅದು ಕಳೆದು ಹೋಯಿತು. ಪತಿತ ರಾಜರುಗಳ ರಾಜ್ಯ ಸಮಾಪ್ತಿ ಆಗಬೇಕಾಗಿತ್ತು ಅದರ ಹೆಸರು ಗುರುತು ಎಲ್ಲವೂ ಸಮಾಪ್ತಿ ಆಗಿದೆ.
ಅವರ ಆಸ್ತಿಯ ಹೆಸರು-ಚಿನ್ಹೆ ಯಾವುದೂ ಇಲ್ಲ.
ಸ್ವಯಂ ತಿಳಿದುಕೊಂಡಿದ್ದರು - ಲಕ್ಷ್ಮೀ-ನಾರಾಯಣರೇ ಸ್ವರ್ಗಕ್ಕೆ ಮಾಲೀಕರಾಗಿದ್ದರು ಎಂದು. ಆದರೆ ಅವರನ್ನು ಯಾರು ಆ ರೀತಿ ಮಾಡಿದರು ಎಂಬುದನ್ನು ಅವರು ಯಾರೂ ತಿಳಿದಿಲ್ಲ. ಅವಶ್ಯವಾಗಿ ಸ್ವರ್ಗದ ರಚಯಿತ ತಂದೆಯಿಂದಲೇ ಆಸ್ತಿ ಸಿಕ್ಕಿರಬೇಕು. ಬೇರೆ ಯಾರೂ ಇಷ್ಟು ದೊಡ್ಡ ಆಸ್ತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಕೌರವ ಹಾಗೂ ಪಾಂಡವರಿಬ್ಬರ ರಾಜ್ಯವನ್ನು ತೋರಿಸುತ್ತಾರೆ ಆದರೆ ಇವರಿಬ್ಬರಿಗೂ ರಾಜ್ಯವಿಲ್ಲ. ಈಗ ತಂದೆ ಮತ್ತೆ ಸ್ಥಾಪನೆ ಮಾಡುತ್ತಾರೆ.
ತಾವು ಮಕ್ಕಳಿಗೆ ಖುಷಿಯ ನಶೆ ಏರಬೇಕು. ಈಗ ನಾಟಕ ಪೂರ್ಣವಾಗುತ್ತಿದೆ. ನಾವು ಈಗ ಹಿಂತಿರುಗಿ ಹೋಗುತ್ತೇವೆ.
ನಾವು ಸಿಹಿಯಾದ ಮನೆಯಲ್ಲಿ ಇರುವವರಾಗಿದ್ದೇವೆ. ಅವರು ಹೇಳುತ್ತಾರೆ
- ಇಂತಹವರು ನಿರ್ವಾಣಕ್ಕೆ ಹೋದರು ಅಥವಾ ಜ್ಯೋತಿ-ಜ್ಯೋತಿಯಲ್ಲಿ ಸಮಾವೇಶ ಆಯಿತು ಅಥವಾ ಮೋಕ್ಷವನ್ನು ಪಡೆದರು. ಭಾರತವಾಸಿಗಳಿಗೆ ಸ್ವರ್ಗ ಇಷ್ಟವಾಗುತ್ತದೆ. ಅವರು ಹೇಳುತ್ತಾರೆ ಸ್ವರ್ಗಕ್ಕೆ ಹೋದರು ಎಂದು ತಂದೆಯು ತಿಳಿಸುತ್ತಾರೆ ಮೋಕ್ಷ ಯಾರಿಗೂ ಸಿಗುವುದಿಲ್ಲ.
ಎಲ್ಲರ ಸದ್ಗತಿದಾತ ತಂದೆಯೇ ಆಗಿದ್ದಾರೆ.
ಅವರು ಅವಶ್ಯವಾಗಿ ಎಲ್ಲರಿಗೂ ಸುಖವನ್ನೇ ನೀಡುತ್ತಾರೆ. ಒಬ್ಬರೂ ನಿರ್ವಾಣಧಾಮದಲ್ಲಿ ಕುಳಿತು ಇನ್ನೊಬ್ಬರು ದುಃಖವನ್ನು ಭೋಗಿಸುವುದನ್ನು ತಂದೆ ಸಹನೆ ಮಾಡುವುದಿಲ್ಲ.
ತಂದೆ ಪತಿತಪಾವನ ಆಗಿದ್ದಾರೆ. ಒಂದು ಮುಕ್ತಿಧಾಮ ಪಾವನ ಇನ್ನೊಂದು ಜೀವನ್ಮುಕ್ತಿಧಾಮ ಪಾವನ ಮತ್ತೆ ದ್ವಾಪರದ ನಂತರ ಎಲ್ಲರೂ ಪತಿತರಾಗಿದ್ದಾರೆ. ಪಂಚತತ್ವಗಳು ತಮೋಪ್ರಧಾನವಾಗುತ್ತವೆ ನಂತರ ತಂದೆ ಬಂದು ಪಾವನ ಮಾಡುತ್ತಾರೆ. ಮತ್ತೆ ಅಲ್ಲಿ ಪವಿತ್ರ ತತ್ವಗಳಿಂದ ನಿಮ್ಮ ಶರೀರವೂ ಸುಂದರವಾಗುತ್ತದೆ. ಸ್ವಾಭಾವಿಕವಾಗಿ ಸುಂದರತೆ ಇರುತ್ತದೆ, ಅದರಲ್ಲಿ ಆಕರ್ಷಣೆ ಇರುತ್ತದೆ.
ಕೃಷ್ಣನಲ್ಲಿ ಎಷ್ಟೊಂದು ಆಕರ್ಷಣೆ ಇದೆ.
ಹೆಸರೇ ಸ್ವರ್ಗವೆಂದ ಮೇಲೆ ಮತ್ತೇನು?
ಪರಮಾತ್ಮನ ಮಹಿಮೆ ಬಹಳ ಮಾಡುತ್ತಾರೆ,
ಅಕಾಲಮೂರ್ತಿ.............. ನಂತರ ಅವರನ್ನು ಕಲ್ಲು-ಮಣ್ಣಿನಲ್ಲಿ ಹಾಕಿದ್ದಾರೆ.
ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ತಂದೆ ಯಾವಾಗ ಬರುತ್ತಾರೋ ಆಗ ತಿಳಿಸುತ್ತಾರೆ.
ಲೌಕಿಕ ತಂದೆಯೂ ಸಹ ಯಾವಾಗ ಮಕ್ಕಳನ್ನು ರಚಿಸುತ್ತಾರೋ ಆಗ ತಂದೆಯ ಜೀವನ ಚರಿತ್ರೆಯು ಅವರಿಗೆ ಗೊತ್ತಾಗುತ್ತದೆ. ತಂದೆಯ ವಿನಃ ಮಕ್ಕಳಿಗೆ ಹೇಗೆ ಗೊತ್ತಾಗುತ್ತದೆ? ಈಗ ತಂದೆಯು ಹೇಳುತ್ತಾರೆ
- ಲಕ್ಷ್ಮೀ-ನಾರಾಯಣರನ್ನು ವರಿಸಬೇಕಾದರೆ ಪ್ರಯತ್ನ ಮಾಡಬೇಕು. ಬಹಳ ದೊಡ್ಡ ಗುರಿಯಾಗಿದೆ
- ಬಹಳ ಭಾರೀ ಸಂಪಾದನೆ ಇದೆ.
ಸತ್ಯಯುಗದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು,
ಪವಿತ್ರ ರಾಜಸ್ಥಾನವಿತ್ತು, ಅದು ಈಗ ಅಪವಿತ್ರವಾಗಿದೆ, ಎಲ್ಲರೂ ವಿಕಾರಿಗಳಾಗಿದ್ದಾರೆ. ಇದು ಆಸುರೀ ಜಗತ್ತಾಗಿದೆ,
ಲಂಚವು ಬಹಳ ಹೆಚ್ಚಾಗಿದೆ. ರಾಜ್ಯದಲ್ಲಿ ಶಕ್ತಿ ಬೇಕು,
ಈಶ್ವರೀಯ ಶಕ್ತಿಯು ಇಲ್ಲವೇ ಇಲ್ಲದಾಗಿದೆ.
ಪ್ರಜೆಗಳ ಮೇಲೆ ಪ್ರಜಾ ರಾಜ್ಯವಿದೆ,
ಯಾರು ಚೆನ್ನಾಗಿ ದಾನ-ಪುಣ್ಯ ಮಾಡುತ್ತಾರೋ ಅವರಿಗೆ ರಾಜಮನೆತನದಲ್ಲಿ ಜನ್ಮ ಸಿಗುತ್ತದೆ. ಆ ಕರ್ಮದ ಶಕ್ತಿ ಇರುತ್ತದೆ. ಈಗ ತಾವು ಬಹಳ ಶ್ರೇಷ್ಠ ಕರ್ಮವನ್ನು ಮಾಡುತ್ತೀರಿ. ತಾವು ತಮ್ಮದೆಲ್ಲವನ್ನೂ ಶಿವಬಾಬಾನಿಗೆ ಅರ್ಪಣೆ ಮಾಡಬೇಕಾಗುತ್ತದೆ. ತಾವು ಅವರಿಂದ ಶಕ್ತಿಯನ್ನು ಧಾರಣೆ ಮಾಡಿಕೊಂಡು ಸುಖ-ಶಾಂತಿಯ ಅಖಂಡ ಅಟಲ ರಾಜ್ಯವನ್ನು ಮಾಡುತ್ತೀರಿ. ಪ್ರಜೆಗಳಲ್ಲಿ ಏನೂ ಶಕ್ತಿ ಇಲ್ಲವಾಗಿದೆ. ಧನವನ್ನು ದಾನ ಮಾಡಿರುವುದರಿಂದ ಎಂ.ಎಲ್.ಎ ಇತ್ಯಾದಿ ಆಗಿದ್ದಾರೆ ಎಂದಲ್ಲ.
ಧನವನ್ನು ದಾನ ಮಾಡುವುದರಿಂದ ಧನವಂತರ ಮನೆಯಲ್ಲಿ ಜನ್ಮ ಸಿಗುತ್ತದೆ. ಈಗ ಯಾರದೂ ರಾಜ್ಯವಿಲ್ಲ.
ಬಾಬಾ ತಮಗೆ ಎಷ್ಟೊಂದು ಶಕ್ತಿ ಕೊಡುತ್ತಾರೆ. ನಾವು ನಾರಾಯಣನನ್ನು ವರಿಸುತ್ತೇವೆ ಎಂದು ತಾವು ಹೇಳುತ್ತೀರಿ. ನಾವು ಮನುಷ್ಯರಿಂದ ದೇವತೆಗಳು ಆಗುತ್ತಿದ್ದೇವೆ. ಇದು ಎಲ್ಲವೂ ಹೊಸ-ಹೊಸ ಮಾತುಗಳು.
ನಾರದನ ಮಾತು ಈಗಿನದೇ ಆಗಿದೆ.
ರಾಮಾಯಣ ಇತ್ಯಾದಿಯೂ ಈ ಸಮಯದ್ದೇ ಆಗಿದೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಶಾಸ್ತ್ರಗಳು ಇರುವುದಿಲ್ಲ.
ಎಲ್ಲಾ ಶಾಸ್ತ್ರಗಳ ಸಂಬಂಧ ಈಗ ಇದೆ. ಮಠ-ಪಂಥಗಳೆಲ್ಲವೂ ನಂತರ ಬರುತ್ತವೆ ಇದನ್ನು ತಾವು ವೃಕ್ಷದಲ್ಲಿ ನೋಡುತ್ತೀರಿ. ಮುಖ್ಯವಾಗಿ ಬ್ರಾಹ್ಮಣ ವರ್ಣ,
ದೇವತಾ ವರ್ಣ,
ಕ್ಷತ್ರಿಯ ವರ್ಣ..........
ಬ್ರಾಹ್ಮಣರ ಜುಟ್ಟು ಪ್ರಸಿದ್ಧವಾಗಿದೆ. ಈ ಬ್ರಾಹ್ಮಣ ವರ್ಣ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಇದರ ವರ್ಣನೆ ಶಾಸ್ತ್ರದಲ್ಲಿ ಇಲ್ಲ.
ವಿರಾಠ ರೂಪದಲ್ಲಿಯೂ ಸಹ ಬ್ರಾಹ್ಮಣರನ್ನು ಹಾರಿಸಿಬಿಟ್ಟಿದ್ದಾರೆ. ಡ್ರಾಮಾದಲ್ಲಿ ಈ ರೀತಿ ನಿಗದಿಯಾಗಿದೆ. ಪ್ರಪಂಚದವರು ಭಕ್ತಿಯಿಂದ ನಾವು ಕೆಳಗಡೆ ಇಳಿಯುತ್ತೇವೆ ಎಂಬುದು ತಿಳಿದಿಲ್ಲ.
ಭಕ್ತಿಯಿಂದಲೇ ಭಗವಂತ ಸಿಗುತ್ತಾರೆ ಎಂದು ಹೇಳುತ್ತಾರೆ. ಅನೇಕರು ಕೂಗುತ್ತಾರೆ, ದುಃಖದಲ್ಲಿ ಸ್ಮರಣೆ ಮಾಡುತ್ತಾರೆ,
ಅದರಲ್ಲಿ ತಾವು ಅನುಭವಿಗಳು ಆಗಿದ್ದೀರಿ.
ಅಲ್ಲಿ ದುಃಖದ ಮಾತಿಲ್ಲ. ಇಲ್ಲಿ ಎಲ್ಲರಲ್ಲಿ ಕ್ರೋಧವಿದೆ,
ಒಬ್ಬರಿಗೊಬ್ಬರು ಗುಂಡು ಹಾಕುತ್ತಿರುತ್ತಾರೆ.
ಈಗ ತಾವು ಶಿವಾಯ ನಮಃ ಎಂದು ಹೇಳುವುದಿಲ್ಲ.
ಶಿವ ನಿಮ್ಮ ತಂದೆಯಾಗಿದ್ದಾರೆ ತಾನೇ.
ತಂದೆಗೆ ಸರ್ವವ್ಯಾಪಿ ಎಂದು ಹೇಳುವುದರಿಂದ ಸಹೋದರತ್ವವೂ ಹೊರಟು ಹೋಗುತ್ತದೆ. ಭಾರತದಲ್ಲಿ ಬಹಳ ಚೆನ್ನಾಗಿ ಹೇಳುತ್ತಾರೆ - ಹಿಂದುಗಳು ಹಾಗೂ ಚೈನಾದವರು ಸಹೋದರರು, ಚೈನಾದವರು ಹಾಗೂ ಮುಸಲ್ಮಾನರು ಸಹೋದರರು ಎಂದು.
ಸಹೋದರರು ಅಂತೂ ಹೌದು ತಾನೇ.
ಒಬ್ಬ ತಂದೆಯ ಮಕ್ಕಳಾಗಿದ್ದೇವೆ. ಈ ಸಮಯದಲ್ಲಿ ತಮಗೆ ಗೊತ್ತಿದೆ ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ. ಇದು ಬ್ರಾಹ್ಮಣರ ವಂಶ ಮತ್ತೆ ಸ್ಥಾಪನೆ ಆಗುತ್ತಿದೆ. ಈ ಬ್ರಾಹ್ಮಣ ಧರ್ಮದಿಂದ ದೇವೀ-ದೇವತಾ ಧರ್ಮವೂ ಬರುತ್ತದೆ.
ದೇವೀ-ದೇವತಾ ಧರ್ಮದಿಂದ ಕ್ಷತ್ರಿಯ ಧರ್ಮ. ಕ್ಷತ್ರಿಯರಿಂದ ಮತ್ತೆ ಇಸ್ಲಾಮಿ ಧರ್ಮ ಬರುತ್ತದೆ.
ನಂತರ ಬೌದ್ಧಿ,
ಕ್ರಿಶ್ಚಯನ್ ಬರುತ್ತಾರೆ.
ಈ ರೀತಿ ವೃದ್ಧಿ ಆಗುತ್ತಾ-ಆಗುತ್ತಾ ವೃಕ್ಷ ದೊಡ್ಡದಾಗಿದೆ. ಇದು ಬೇಹದ್ದಿನ ವಂಶವಾಗಿದೆ,
ಅಲ್ಲಿ ಲೌಕಿಕದ್ದು ಅಥವಾ ಹದ್ದಿನದು.
ಈ ವಿಸ್ತಾರವಾಗಿರುವ ವಿಚಾರಗಳು ಯಾರಿಗೆ ಧಾರಣೆ ಆಗುವುದಿಲ್ಲವೋ ಅವರಿಗಾಗಿ ತಂದೆ ಸಹಜ ಯುಕ್ತಿಯನ್ನು ಹೇಳುತ್ತಾರೆ. ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿ,
ಆಗ ಅವಶ್ಯವಾಗಿ ಸ್ವರ್ಗದಲ್ಲಿ ಬರುತ್ತೀರಿ.
ಬಾಕಿ ಉತ್ತಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾದರೆ ಅದಕ್ಕಾಗಿ ಪುರುಷಾರ್ಥವನ್ನು ಮಾಡಬೇಕು.
ತಾವು ಮಕ್ಕಳು ತಿಳಿದಿದ್ದೀರಿ - ಶಿವಬಾಬಾರವರು ತಿಳಿಸುತ್ತಾರೆ ಹಾಗೂ ಬ್ರಹ್ಮಾ ತಂದೆಯು ತಿಳಿಸುತ್ತಾರೆ. ಇದೇ ನಮ್ಮ ನಿಮ್ಮೆಲ್ಲರ ಬುದ್ಧಿಯಲ್ಲಿ ಇದೆ.
ಭಲೆ ನಾವು ಶಾಸ್ತ್ರ ಇತ್ಯಾದಿಗಳನ್ನು ಓದಿದ್ದೇವೆ ಆದರೆ ಇವುಗಳಿಂದ ಭಗವಂತ ಸಿಗುವುದಿಲ್ಲ ಎಂಬುದು ನಮಗೆ ಗೊತ್ತಿದೆ.
ತಂದೆಯು ತಿಳಿಸುತ್ತಾರೆ -
ಮಧುರಾತಿ ಮಧುರ ಮಕ್ಕಳೇ ಶಿವಬಾಬಾರವರನ್ನು ಹಾಗೂ ಆಸ್ತಿಯನ್ನು ನೆನಪು ಮಾಡಿ.
ಬಾಬಾ ತಾವು ಬಹಳ ಮಧುರರಾಗಿದ್ದೀರಿ, ತಮ್ಮದು ಚಮತ್ಕಾರವಾಗಿದೆ, ಈ ರೀತಿ ಬಾಬಾನ ಮಹಿಮೆಯನ್ನು ಮಾಡಬೇಕು. ತಾವು ಮಕ್ಕಳಿಗೆ ಈಶ್ವರೀಯ ಲಾಟರಿ ಸಿಕ್ಕಿದೆ.
ಈಗ ಜ್ಞಾನ ಹಾಗೂ ಯೋಗದ ಶ್ರಮ ಪಡಬೇಕು.
ಇದರಲ್ಲಿ ಜಬರ್ದಸ್ತ್ ಬಹುಮಾನ ಸಿಗುತ್ತದೆ ಅಂದಮೇಲೆ ಪುರುಷಾರ್ಥವನ್ನು ಮಾಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಈಗ ನಾಟಕ ಪೂರ್ಣವಾಗುತ್ತಿದೆ, ನಾವು ನಮ್ಮ ಮಧುರ ಮನೆಯಲ್ಲಿ ಹೋಗುತ್ತಿದ್ದೇವೆ, ಈ ಸ್ಮೃತಿಯಿಂದ ಖುಶಿಯ ನಶೆ ಸದಾ ಏರಿರಲಿ.
2.
ಕಳೆದದ್ದು ಕಳೆದು ಹೋಯಿತು ಈ ಅಂತಿಮ ಜನ್ಮದಲ್ಲಿ ತಂದೆಗೆ ಪವಿತ್ರತೆಯ ಸಹಯೋಗವನ್ನು ಕೊಡಬೇಕು.
ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬೇಕು.
ವರದಾನ:
ಸರ್ವ ಹಳೆಯ
ಖಾತೆಗಳನ್ನು ಸಂಕಲ್ಪ
ಮತ್ತು ಸಂಸ್ಕಾರ
ರೂಪದಿಂದಲ್ಲೂ ಸಮಾಪ್ತಿ
ಮಾಡುವಂತಹ ಅಂತರ್ಮುಖಿ
ಭವ
ಬಾಪ್ದಾದಾ ಮಕ್ಕಳ ಎಲ್ಲಾ ಲೆಕ್ಕವನ್ನು ಈಗ ಸ್ವಚ್ಛವಾಗಿ ನೋಡಲು ಇಷ್ಟ ಪಡುತ್ತಾರೆ. ಸ್ವಲ್ಪವು ಹಳೆಯ ಖಾತೆ ಅರ್ಥಾತ್ ಬಾರ್ಹಮುಖತೆಯ
ಖಾತೆಯು ಸಂಕಲ್ಪ ಮತ್ತು ಸಂಸ್ಕಾರ ರೂಪದಲ್ಲೂ ಕೂಡ ಉಳಿದುಕೊಳ್ಳಬಾರದು. ಸದಾ ಸರ್ವ ಬಂಧನ ಮುಕ್ತ ಮತ್ತು ಯೋಗಯುಕ್ತ – ಇದಕ್ಕೆ ಹೇಳಲಾಗುತ್ತದೆ ಅಂತರ್ಮುಖಿ ಇದಕ್ಕೋಸ್ಕರ ಸೇವೆಯನ್ನು ಇನ್ನೂ ಚೆನ್ನಾಗಿ ಮಾಡಿ. ಆದರೆ ಬಾರ್ಹಮುಖತೆಯಿಂದ
ಅಂತರ್ಮುಖಿಗಳಾಗಿ ಮಾಡಿ. ಅಂತರ್ಮುಖತೆಯ ಚಹರೆಯ ಮುಖಾಂತರ ತಂದೆಯ ಹೆಸರನ್ನು ಪ್ರಸಿದ್ಧ ಮಾಡಿ, ಆತ್ಮಗಳು ತಂದೆಯವರಾಗ ಬೇಕು – ಈ ರೀತಿ ಪ್ರಸನ್ನಚಿತ್ತರನ್ನಾಗಿ ಮಾಡಿ.
ಸ್ಲೋಗನ್:
ತನ್ನ ಪರಿವರ್ತನೆಯ ಮುಖಾಂತರ ಸಂಕಲ್ಪ, ಮಾತು, ಸಂಬಂಧ - ಸಂಪರ್ಕದಲ್ಲಿ ಸಫಲತೆಯನ್ನುಪ್ರಾಪ್ತಿ ಮಾಡಿಕೊಳ್ಳುವುದೇ ಸಫಲತಾಮೂರ್ತರಾಗುವುದಾಗಿದೆ.
0 Comments