25/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ ಮಕ್ಕಳೇ- ತಂದೆಯನ್ನು ನೆನಪು ಮಾಡುವ ಒಳ್ಳೆಯ ಪರಿಶ್ರಮ ಮಾಡಿರಿ ಏಕೆಂದರೆ ನೀವು ಸತ್ಯ ಚಿನ್ನವಾಗಬೇಕು”
ಪ್ರಶ್ನೆ:
ಒಳ್ಳೆಯ(ಸತ್ಯ) ಪುರುಷಾರ್ಥಿಗಳ ಲಕ್ಷಣಗಳೇನಾಗಿರುತ್ತವೆ?
ಉತ್ತರ:
ಯಾರು ಒಳ್ಳೆಯ ಪುರುಷಾರ್ಥಿ ಆಗಿರುತ್ತಾರೆ, ಅವರು ಹೆಜ್ಜೆ-ಹೆಜ್ಜೆಯಲ್ಲಿಯೂ ಶ್ರೀಮತದಂತೆ ನಡೆಯುತ್ತಾರೆ. ಸದಾ ಶ್ರೀಮತದಂತೆ ನಡೆಯುವವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಸದಾ ಶ್ರೀಮತದಂತೆ ನಡೆಯಲು ಬಾಬಾರವರು ಮಕ್ಕಳಿಗೆ ಹೇಳುತ್ತಾರೆ- ಏಕೆ? ಏಕೆಂದರೆ ಅವರೊಬ್ಬರೇ ಸತ್ಯ-ಸತ್ಯವಾದ ಪ್ರಿಯತಮನಾಗಿದ್ದಾರೆ. ಉಳಿದೆಲ್ಲರೂ ಅವರ ಪ್ರಿಯತಮೆಯರಾಗಿದ್ದಾರೆ.
ಓಂ ಶಾಂತಿ. ಓಂ ಶಾಂತಿಯ ಅರ್ಥವಂತು ಹೊಸ ಅಥವಾ ಹಳೆಯ ಮಕ್ಕಳು ತಿಳಿದಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವೆಲ್ಲಾ ಆತ್ಮರು ಪರಮಾತ್ಮನ ಸಂತಾನರಾಗಿದ್ದೇವೆ. ಪರಮಾತ್ಮನು ಸರ್ವಶ್ರೇಷ್ಠನಾಗಿದ್ದಾರೆ ಮತ್ತು ಎಲ್ಲರ ಬಹಳ ಪ್ರಿಯಾತಿಪ್ರಿಯವಾದ ಪ್ರಿಯತಮನಾಗಿದ್ದಾರೆ. ಮಕ್ಕಳಿಗೆ ಜ್ಞಾನ ಮತ್ತು ಭಕ್ತಿಯ ರಹಸ್ಯವನ್ನು ತಿಳಿಸಲಾಗಿದೆ. ಜ್ಞಾನವೆಂದರೆ ಹಗಲು, ಸತ್ಯಯುಗ-ತ್ರೇತಾ, ಭಕ್ತಿಯೆಂದರೆ ರಾತ್ರಿ ದ್ವಾಪರ ಮತ್ತು ಕಲಿಯುಗ. ಇದು ಭಾರತದ್ದೇ ಮಾತಾಗಿದೆ. ಅನ್ಯಧರ್ಮದವರೊಂದಿಗೆ ನಿಮ್ಮ ಸಂಬಂಧವು ಹೆಚ್ಚಾಗಿಲ್ಲ, 84 ಜನ್ಮಗಳೂ ಸಹ ನೀವೇ ಭೋಗಿಸುತ್ತೀರಿ. ಮೊಟ್ಟಮೊದಲೂ ಸಹ ನೀವು ಭಾರತವಾಸಿಗಳು ಬಂದಿದ್ದೀರಿ. 84 ಜನ್ಮಗಳ ಚಕ್ರವು ನೀವು ಭಾರತವಾಸಿಗಳಿಗಾಗಿ ಇರುವುದು. ಈ ರೀತಿ ಯಾರೂ ಹೇಳುವುದಿಲ್ಲ - ಇಸ್ಲಾಮಿ, ಬೌದ್ಧಿ ಮುಂತಾದವರೂ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲ, ಭಾರತವಾಸಿಗಳೇ ತೆಗೆದುಕೊಳ್ಳುತ್ತಾರೆ. ಭಾರತವೇ ಅವಿನಾಶಿ ಖಂಡವಾಗಿದೆ, ಇದೆಂದಿಗೂ ವಿನಾಶವಾಗುವುದಿಲ್ಲ ಮತ್ತ್ಯಾವುದೇ ಖಂಡಗಳು ಸ್ವರ್ಗವಾಗುವುದಿಲ್ಲ. ಮಕ್ಕಳಿಗೆ ತಿಳಿಸಲಾಗಿದೆ- ಹೊಸಪ್ರಪಂಚ ಸತ್ಯಯುಗದಲ್ಲಿ ಭಾರತವೇ ಇರುತ್ತದೆ, ಭಾರತವೇ ಸ್ವರ್ಗವೆಂದು ಕರೆಸಿಕೊಳ್ಳುತ್ತದೆ. ಅವರೇ ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಕೊನೆಗೆ ನರಕವಾಸಿಯಾಗುತ್ತಾರೆ, ನಂತರ ಅವರೇ ಭಾರತವಾಸಿಗಳು ಸ್ವರ್ಗವಾಸಿಯಾಗುತ್ತಾರೆ. ಈ ಸಮಯದಲ್ಲಿ ಎಲ್ಲರೂ ನರಕವಾಸಿಯಾಗಿದ್ದಾರೆ, ನಂತರ ಮತ್ತೆಲ್ಲಾ ಖಂಡಗಳ ವಿನಾಶವಾಗುತ್ತದೆ, ಭಾರತವೇ ಉಳಿದುಕೊಂಡಿರುತ್ತದೆ. ಭಾರತಖಂಡದ ಮಹಿಮೆಯು ಅಪರಮಪಾರವಾಗಿದೆ. ಹಾಗೆ ನೋಡಿದಾಗ ಪರಮಪಿತ ಪರಮಾತ್ಮನ ಮಹಿಮೆ ಮತ್ತು ಗೀತೆಯ ಮಹಿಮೆಯೂ ಅಪರಮಪಾರವಿದೆ. ಆದರೆ ಸತ್ಯಗೀತೆಯದಿದೆ. ಅಸತ್ಯ ಗೀತೆಯನ್ನು ಕೇಳುತ್ತಾ-ಕೇಳುತ್ತಾ, ಓದುತ್ತಾ-ಓದುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಇದು ಗೀತೆಯ ಪುರುಷೋತ್ತಮ ಸಂಗಮಯುಗವಾಗಿದೆ. ಭಾರತವೇ ನಂತರ ಪುರುಷೋತ್ತಮನಾಗುವುದಿದೆ. ಈಗ ಆ ಆದಿಸನಾತನ ದೇವಿ-ದೇವತಾ ಧರ್ಮದವರಿಲ್ಲ, ರಾಜ್ಯವೂ ಇಲ್ಲ, ಅಂದಮೇಲೆ ಅವರ ಯುಗವೂ ಇಲ್ಲದಂತಾಗಿದೆ. ತಂದೆಯು ತಿಳಿಸಿದ್ದಾರೆ- ಈ ತಪ್ಪೂ ಸಹ ಡ್ರಾಮಾದಲ್ಲಿದೆ. ಗೀತೆಯಲ್ಲಿ ಮತ್ತೆ ಕೃಷ್ಣನ ಹೆಸರನ್ನು ಇಡುತ್ತಾರೆ. ಯಾವಾಗ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆ, ಆಗ ಮೊಟ್ಟಮೊದಲು ಗೀತೆಯೇ ಇರುತ್ತದೆ. ಈಗ ಈ ಗೀತೆ ಮುಂತಾದ ಎಲ್ಲಾ ಶಾಸ್ತ್ರಗಳು ಸಮಾಪ್ತಿಯಾಗುವುದಿದೆ. ಬಾಕಿ ಕೇವಲ ದೇವಿ-ದೇವತಾ ಧರ್ಮವೇ ಇರುತ್ತದೆ. ಹೀಗಾಗುವುದಿಲ್ಲ- ಆಗ ಅವರ ಜೊತೆಗೆ ಗೀತಾ-ಭಾಗವತ ಮುಂತಾದವರೂ ಇರುತ್ತವೆ. ಇರುವುದಿಲ್ಲ. ಪ್ರಾಲಬ್ಧವು ಸಿಕ್ಕಿಬಿಟ್ಟಿತು, ಸದ್ಗತಿಯಾಯಿತು ಅಂದಮೇಲೆ ಮತ್ತ್ಯಾವುದೇ ಶಾಸ್ತ್ರ ಮುಂತಾದವುದರ ಅವಶ್ಯಕತೆಯೇ ಇಲ್ಲ. ಸತ್ಯಯುಗದಲ್ಲಿ ಯಾವುದೇ ಗುರು, ಶಾಸ್ತ್ರ ಮುಂತಾದವುಗಳಿರುವುದಿಲ್ಲ. ಈ ಸಮಯದಲ್ಲಂತು ಅನೇಕ ಗುರುಗಳಿದ್ದಾರೆ, ಭಕ್ತಿಯನ್ನು ಕಲಿಸುವುದಕ್ಕಾಗಿ ಇದ್ದಾರೆ. ಸದ್ಗತಿಯನ್ನು ಕೊಡುವವರಂತು ಒಬ್ಬ ಆತ್ಮಿಕ ತಂದೆಯೇ ಇದ್ದಾರೆ, ಅವರದು ಅಪರಮಪಾರ ಮಹಿಮೆಯಿದೆ. ಅವರನ್ನೇ ಸರ್ವಶಕ್ತಿವಂತ ಎಂದು ಹೇಳಲಾಗುತ್ತದೆ. ಭಾರತವಾಸಿಗಳು ಬಹಳಷ್ಟು ಅಂದರೆ ಇದನ್ನೇ ತಪ್ಪು ಮಾಡುತ್ತಾರೆ, ಹೇಳುತ್ತಾರೆ- ಅವರು ಅಂತರ್ಯಾಮಿ ಆಗಿದ್ದಾರೆ. ಎಲ್ಲರ ಆಂತರ್ಯವನ್ನು ತಿಳಿದುಕೊಂಡಿದ್ದಾರೆ. ತಂದೆಯು ಹೇಳುತಾರೆ- ಮಕ್ಕಳೇ, ನಾನು ಯಾರ ಆಂತರ್ಯವನ್ನೂ ತಿಳಿದುಕೊಂಡಿಲ್ಲ. ನನ್ನ ಕಾರ್ಯವೇ ಆಗಿದೆ- ಪತಿತರನ್ನು ಪಾವನ ಮಾಡುವುದು. ಬಾಕಿ ನಾನು ಅಂತರ್ಯಾಮಿ ಆಗಿಲ್ಲ. ಇದು ಭಕ್ತಿಮಾರ್ಗದ ಉಲ್ಟಾ ಮಹಿಮೆಯಾಗಿದೆ. ನನ್ನನ್ನು ಕರೆಯುವುದೇ ಪತಿತ ಪ್ರಪಂಚದಲ್ಲಿ ಮತ್ತು ನಾನು ಒಂದು ಬಾರಿಯೇ ಬರುತ್ತೇನೆ, ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಬೇಕಾಗಿರುತ್ತದೆ ಮನುಷ್ಯರಿಗೆ ಇದು ಗೊತ್ತೇ ಇಲ್ಲ- ಇದೇನು ಪ್ರಪಂಚವಿದೆ, ಅದು ಹೊಸದರಿಂದ ಹಳೆಯದು, ಹಳೆಯದಿಂದ ಹೊಸದು ಯಾವಾಗ ಆಗುತ್ತದೆ. ಪ್ರತಿಯೊಂದು ವಸ್ತುವು ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರುತ್ತದೆ. ವೃದ್ಧ ಶರೀರವಾಗುತ್ತದೆ, ಅದನ್ನು ಬಿಟ್ಟುಹೋಗಿ ಮಗುವಾಗುತ್ತದೆ. ಪ್ರಪಂಚವೂ ಸಹ ಹೊಸದರಿಂದ ಹಳೆಯದಾಗುತ್ತದೆ. ಮಕ್ಕಳಿಗೆ ಗೊತ್ತಿದೆ- ಹೊಸಪ್ರಪಂಚದಲ್ಲಿ ಭಾರತವು ಎಷ್ಟು ಶ್ರೇಷ್ಠನಾಗಿತ್ತು. ಭಾರತದ ಮಹಿಮೆಯೇ ಅಪರಮಪಾರವಾಗಿದೆ. ಇಷ್ಟೂ ಧನವಂತ, ಸುಖಿ, ಪವಿತ್ರವಾದುದು ಮತ್ತ್ಯಾವುದೇ ಖಂಡಗಳದಾಗುವುದಿಲ್ಲ. ಈಗ ಸತೋಪ್ರಧಾನ ಪ್ರಪಂಚದ ಸ್ಥಾಪನೆಯಾಗುತ್ತಿದೆ. ತ್ರಿಮೂರ್ತಿಯಲ್ಲಿಯೂ ಬ್ರಹ್ಮಾ, ವಿಷ್ಣು, ಶಂಕರನನ್ನು ತೋರಿಸಲಾಗಿದೆ. ಅದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಹೇಳಬೇಕಾಗಿದೆ- ತ್ರಿಮೂರ್ತಿ ಶಿವ, ತ್ರಿಮೂರ್ತಿ ಬ್ರಹ್ಮ ಎಂದಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ರಚನೆ ಮಾಡಿದವರು ಯಾರು.... ಸರ್ವಶ್ರೇಷ್ಠನು ಶಿವತಂದೆಯಾಗಿದ್ದಾರೆ. ಹೇಳುತ್ತಾರೆ- ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ, ಶಂಕರ ದೇವತಾಯ ನಮಃ... ಶಿವ ಪರಮಾತ್ಮಾಯ ನಮಃ.... ಅಂದಮೇಲೆ ಅವರು ಶ್ರೇಷ್ಠನಾದರಲ್ಲವೆ. ಅವರು ರಚೈತನಾಗಿದ್ದಾರೆ. ಗಾಯನವೂ ಸಹ ಇದೆ- ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಬ್ರಾಹ್ಮಣರ ಸ್ಥಾಪನೆಯನ್ನು ಮಾಡುತ್ತಾರೆ, ನಂತರ ಪರಮಾತ್ಮ ತಂದೆಯ ಮೂಲಕ ಆಸ್ತಿಯೂ ಸಿಗುತ್ತದೆ. ನಂತರ ಸ್ವಯಂ ಕುಳಿತು ಬ್ರಾಹ್ಮಣರಿಗೆ ಓದಿಸುತ್ತಾರೆ ಏಕೆಂದರೆ ಅವರು ತಂದೆಯೂ ಹೌದು, ಪರಮಶಿಕ್ಷಕನೂ ಹೌದು. ಸೃಷ್ಟಿಯ ಇತಿಹಾಸ-ಭೂಗೋಳದ ಚಕ್ರವು ಹೇಗೆ ಸುತ್ತುತ್ತದೆ ಎನ್ನುವುದನ್ನು ಕುಳಿತು ತಿಳಿಸುತ್ತಾರೆ. ಅವರೇ ಜ್ಞಾನಸಾಗರನಾಗಿದ್ದಾರೆ. ಬಾಕಿ ಹೀಗಲ್ಲ- ಅವರನ್ನು ಎಲ್ಲವನ್ನೂ ಬಲ್ಲವರು. ಇದೂ ಸಹ ತಪ್ಪಾಗಿದೆ. ಭಕ್ತಿಮಾರ್ಗದಲ್ಲಿ ಯಾರೂ ಸಹ ಚರಿತ್ರೆ, ಕರ್ತವ್ಯವನ್ನೇ ತಿಳಿದುಕೊಂಡಿಲ್ಲ. ಆದ್ದರಿಂದ ಇದು ಹೇಗೆಂದರೆ ಗೊಂಬೆಗಳ ಪೂಜೆಯಾಗಿಬಿಟ್ಟಿತು. ಕಲ್ಕತ್ತಾದಲ್ಲಿ ಗೊಂಬೆಗಳ ಪೂಜೆಯು ಎಷ್ಟೊಂದಾಗುತ್ತದೆ, ನಂತರ ಅದರ ಪೂಜೆ ಮಾಡಿ, ತಿನ್ನಿಸಿ ಮುದ್ದಾಡಿ, ಸಮುದ್ರದಲ್ಲಿ ಮುಳುಗಿಸಿಬಿಡುತ್ತಾರೆ. ಶಿವತಂದೆಯು ಅತಿಪ್ರಿಯನಾಗಿದ್ದಾರೆ. ತಂದೆಯು ಹೇಳುತ್ತಾರೆ- ನನ್ನದೂ ಸಹ ಮಣ್ಣಿನ ಲಿಂಗವನ್ನು ಮಾಡಿ, ಪೂಜೆ ಮುಂತಾದವನ್ನು ಮಾಡಿ ನಂತರ ಚಲ್ಲಾಪಿಲ್ಲಿ ಮಾಡಿಬಿಡುತ್ತಾರೆ. ಮುಂಜಾನೆ ಮಾಡುತ್ತಾರೆ, ಸಂಜೆಗೆ ಸಮಾಪ್ತಿ ಮಾಡಿಬಿಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಅಂಧಶ್ರದ್ಧೆಯ ಪೂಜೆಯಾಗಿದೆ. ಮನುಷ್ಯರು ಗಾಯನ ಮಾಡುವುದೂ ಸಹ- ತಾವೇ ಪೂಜ್ಯ, ತಾವೇ ಪೂಜಾರಿ. ತಂದೆಯು ಹೇಳುತ್ತಾರೆ- ನಾನಂತು ಸದಾ ಪೂಜ್ಯನಾಗಿರುತ್ತೇನೆ. ನಾನಂತು ಬಂದು ಕೇವಲ ಪತಿತರನ್ನು ಪಾವನರನ್ನಾಗಿ ಮಾಡುತ್ತೇನೆ. 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಭಕ್ತಿಯಲ್ಲಿರುವುದು ಅಲ್ಪಕಾಲದ ಸುಖ, ಅದನ್ನು ಸನ್ಯಾಸಿಗಳು ಕಾಗವಿಷ್ಟ ಸಮಾನದ ಸುಖವೆಂದು ಹೇಳುತ್ತಾರೆ. ಸನ್ಯಾಸಿಗಳು ಮನೆಮಠವನ್ನು ಬಿಟ್ಟುಹೋಗುತ್ತಾರೆ. ಅವರದು ಅಲ್ಪಕಾಲದ ಸನ್ಯಾಸ, ಹಠಯೋಗಿಗಳಲ್ಲವೆ. ಭಗವಂತನನ್ನಂತು ತಿಳಿದುಕೊಂಡೇ ಇಲ್ಲ. ಬ್ರಹ್ಮನನ್ನು ನೆನಪು ಮಾಡುತ್ತಾರೆ. ಬ್ರಹ್ಮವಂತು ಭಗವಂತನಲ್ಲ, ಭಗವಂತನಂತು ಒಬ್ಬ ನಿರಾಕಾರ ಶಿವನಾಗಿದ್ದಾರೆ, ಅವರು ಸರ್ವ ಆತ್ಮರ ತಂದೆಯಾಗಿದ್ದಾರೆ. ಬ್ರಹ್ಮ- ನಾವಾತ್ಮರು ಇರುವ ಸ್ಥಾನವಾಗಿದೆ. ಅದು ಬ್ರಹ್ಮಾಂಡ, ಮಧುರ ಮನೆಯಾಗಿದೆ. ಅಲ್ಲಿಂದ ನಾವಾತ್ಮರು ಪಾತ್ರವನ್ನು ಅಭಿನಯಿಸಲು ಇಲ್ಲಿ ಬರುತ್ತೇವೆ. ಆತ್ಮವು ಹೇಳುತ್ತದೆ- ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆ, 84 ಜನ್ಮಗಳೂ ಸಹ ಭಾರತವಾಸಿಗಳದೇ ಆಗಿದೆ. ಯಾರು ಬಹಳ ಭಕ್ತಿಯನ್ನು ಮಾಡಿದ್ದಾರೆ, ಅವರೇ ಮತ್ತೆ ಜ್ಞಾನವನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ- ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿ ಭಲೆ ಇರಿ, ಆದರೆ ಶ್ರೀಮತದ ಅನುಸಾರ ನಡೆಯಿರಿ. ನೀವೆಲ್ಲಾ ಆತ್ಮರು ಪ್ರಿಯತಮೆಯರಾಗಿದ್ದೀರಿ, ಒಬ್ಬ ಪರಮಾತ್ಮನು ಪ್ರಿಯತಮನಿಗೆ. ದ್ವಾಪರದಿಂದ ನೀವು ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ದುಃಖದಲ್ಲಿ ಆತ್ಮವು ತಂದೆಯನ್ನು ನೆನಪು ಮಾಡುತ್ತದೆ. ಇದಿರುವುದೇ ದುಃಖಧಾಮ. ಆತ್ಮರು ಸತ್ಯಶಾಂತಿಧಾಮದ ನಿವಾಸಿಗಳಾಗಿದ್ದಾರೆ. ಆನಂತರ ಬಂದಿದ್ದು ಸುಖಧಾಮದಲ್ಲಿ, ನಂತರ ನಾವು 84 ಜನ್ಮಗಳನ್ನು ತೆಗೆದುಕೊಂಡೆವು. “ಹಮ್ ಸೋ, ಸೋ ಹಮ್”ನ ಅರ್ಥವನ್ನೂ ತಿಳಿಸಲಾಗಿದೆ. ‘ಹಮ್ ಸೋ’ನ ಅರ್ಥವೇ ಆಗಿದೆ- ನಾವು ಆತ್ಮರು ಸತ್ಯಯುಗದಲ್ಲಿ ದೇವಿ-ದೇವತೆಗಳಾಗಿದ್ದೆವು, ನಂತರ ನಾವೇ ಕ್ಷತ್ರಿಯ, ನಾವೇ ವೈಶ್ಯ, ನಾವೇ ಶೂದ್ರರಾದೆವು. ಈಗ ಮತ್ತೆ ನಾವೇ ಬ್ರಾಹ್ಮಣರಾಗಿದ್ದೇವೆ, ನಾವೇ ದೇವತೆಗಳಾಗುವುದಕ್ಕಾಗಿ ಆಗಿದ್ದೇವೆ. ಇದು ಯಥಾರ್ಥವಾದ ಅರ್ಥವಾಗಿದೆ. ಅದು ಸಂಪೂರ್ಣವಾಗಿ ತಪ್ಪಾಗಿದೆ. ತಂದೆಯು ಹೇಳುತ್ತಾರೆ- ಮನುಷ್ಯನು ರಾವಣನ ಮತದಂತೆ ನಡೆದು ಎಷ್ಟೊಂದು ಅಸತ್ಯವಾಗಿಬಿಟ್ಟಿದ್ದಾರೆ ಆದ್ದರಿಂದ ಹೇಳಿಕೆಯಿದೆ- ಸುಳ್ಳುಮಾಯೆ, ಸುಳ್ಳುಕಾಯ..... ಸತ್ಯಯುಗದಲ್ಲಿ ಹೀಗೆ ಹೇಳುವುದಿಲ್ಲ, ಅದು ಸತ್ಯಖಂಡವಾಗಿದೆ. ಅಲ್ಲಿ ಅಸತ್ಯದ ಹೆಸರು-ಚಿಹ್ನೆಗಳಿರುವುದಿಲ್ಲ. ಇಲ್ಲಿ ಮತ್ತೆ ಸತ್ಯದ ಹೆಸರಿಲ್ಲ. ಆದರೂ ಹಿಟ್ಟಿನಲ್ಲಿ ಉಪ್ಪಿನಷ್ಟು ಎಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ದೈವೀಗುಣವಿರುವ ಮನುಷ್ಯರಿದ್ದಾರೆ, ಅವರದು ದೇವತಾ ಧರ್ಮವಾಗಿದೆ. ನಂತರ ಬೇರೆ-ಬೇರೆ ಧರ್ಮಗಳಾದವು, ಅಂದರೆ ದ್ವೈತವಾಯಿತು. ದ್ವಾಪರದಿಂದ ಆಸುರಿ ರಾವಣರಾಜ್ಯವು ಪ್ರಾರಂಭವಾಗಿಬಿಟ್ಟಿತು. ಸತ್ಯಯುಗದಲ್ಲಿ ರಾವಣ ರಾಜ್ಯವಿರುವುದೇ ಇಲ್ಲ ಅಂದಮೇಲೆ 5 ವಿಕಾರಗಳೂ ಸಹ ಇರಲು ಸಾಧ್ಯವಿಲ್ಲ. ಅವರು ಸಂಪೂರ್ಣ ನಿರ್ವಿಕಾರಿಗಳು. ರಾಮ-ಸೀತೆಯನ್ನು 14 ಕಲಾ ಸಂಪೂರ್ಣ ಎಂದು ಹೇಳಲಾಗುತ್ತದೆ. ರಾಮನಿಗೆ ಬಾಣವನ್ನೇಕೆ ಕೊಟ್ಟಿದ್ದಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಹಿಂಸೆಯ ಮಾತಂತು ಇಲ್ಲ. ನೀವು ಈಶ್ವರನ ವಿದ್ಯಾರ್ಥಿಯಾಗಿದ್ದೀರಿ, ಅಂದಮೇಲೆ ತಂದೆಯೂ ಆದರು. ವಿದ್ಯಾರ್ಥಿಯಾಗಿರುವುದರಿಂದ ಅವರು ಶಿಕ್ಷಕನೂ ಆದರು. ನಂತರ ನೀವು ಮಕ್ಕಳಿಗೆ ಸದ್ಗತಿಯನ್ನು ಕೊಟ್ಟು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ ಸದ್ಗುರುವಾದರು. ತಂದೆ, ಶಿಕ್ಷಕ, ಸದ್ಗುರು ಮೂವರೂ ಆಗಿಬಿಟ್ಟರು. ಅವರಿಗೆ ನೀವು ಮಕ್ಕಳಾಗಿದ್ದೀರಿ ಅಂದಮೇಲೆ ನಿಮಗೆಷ್ಟು ಖುಷಿಯಾಗಬೇಕು! ನೀವು ಮಕ್ಕಳು ತಿಳಿದಿದ್ದೀರಿ- ಈಗ ಇರುವುದು ರಾವಣರಾಜ್ಯ. ರಾವಣನು ಭಾರತದ ಬಹಳ ದೊಡ್ಡ ಶತ್ರು. ಈ ಜ್ಞಾನವೂ ಸಹ ನೀವು ಮಕ್ಕಳಿಗೆ ಜ್ಞಾನಸಾಗರ ತಂದೆಯಿಂದ ಸಿಕ್ಕಿದ್ದಾಗಿದೆ. ಆ ತಂದೆಯೇ ಜ್ಞಾನದ ಸಾಗರ, ಆನಂದ ಸಾಗರನಾಗಿದ್ದಾರೆ. ಜ್ಞಾನಸಾಗರನಿಂದ ನೀವು ಮೋಡಗಳು ತುಂಬಿಕೊಂಡು ಹೋಗಿ ನಂತರ ಮಳೆಯನ್ನು ಸುರಿಸುತ್ತೀರಿ. ಜ್ಞಾನಗಂಗೆಯರು ನೀವಾಗಿದ್ದೀರಿ, ನಿಮ್ಮದೇ ಮಹಿಮೆಯಾಗಿದೆ. ಬಾಕಿ ನೀರಿನ ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾವನರಂತು ಯಾರೂ ಆಗುವುದೇ ಇಲ್ಲ. ಕಲುಷಿತವಾಗಿರುವ ನೀರಿನಲ್ಲಿ ಸ್ನಾನ ಮಾಡುವುದರಿಂದ ತಿಳಿಯುತ್ತಾರೆ- ನಾವು ಪಾವನರಾಗಿಬಿಡುತ್ತೇವೆ. ಹರಿಯವ ನೀರಿಗೂ ಬಹಳ ಮಹತ್ವಿಕೆಯನ್ನು ಕೊಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಸತ್ಯಯುಗ-ತ್ರೇತಾದಲ್ಲಿ ಭಕ್ತಿಯಿರುವುದಿಲ್ಲ. ಅದು ಸಂಪೂರ್ಣ ನಿರ್ವಿಕಾರಿಗಳ ಪ್ರಪಂಚವಾಗಿದೆ.
ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ನಿಮ್ಮನ್ನು ಈಗ ಪಾವನ ಮಾಡುವುದಕ್ಕಾಗಿ ಬಂದಿದ್ದೇನೆ. ಈ ಒಂದುಜನ್ಮದಲ್ಲಿ ನನ್ನನ್ನು ನೆನಪು ಮಾಡಿರಿ ಮತ್ತು ಪಾವನರಾಗುತ್ತೀರೆಂದರೆ, ನೀವು ಸತೋಪ್ರಧಾನರಾಗಿಬಿಡುತ್ತೀರಿ. ನಾನೇ ಪತಿತ-ಪಾವನನಾಗಿದ್ದೇನೆ. ಎಷ್ಟುಸಾಧ್ಯವೋ ನೆನಪಿನ ಯಾತ್ರೆಯನ್ನು ಹೆಚ್ಚಿಸಿಕೊಳ್ಳಿರಿ. ಮುಖದಿಂದ ಶಿವಬಾಬಾ, ಶಿವಬಾಬಾ ಎಂದು ಹೇಳಬಾರದು. ಹೇಗೆ ಪ್ರಿಯತಮೆ ಪ್ರಿಯತಮನನ್ನು ನೆನಪು ಮಾಡುತ್ತಾಳೆ, ಒಂದು ಬಾರಿ ನೋಡಿದಳು ಅಷ್ಟೇ, ಬುದ್ಧಿಯಲ್ಲಿ ಅವರದೇ ನೆನಪಿರುತ್ತದೆ. ಭಕ್ತಿಯಲ್ಲಿ ಯಾರು ಯಾರನ್ನು ನೆನಪು ಮಾಡುತ್ತಾರೆ, ಯಾರ ಪೂಜೆಯನ್ನು ಮಾಡುತ್ತಾರೆ ಅವರ ಸಾಕ್ಷಾತ್ಕಾರವಾಗಿಬಿಡುತ್ತದೆ. ಆದರೆ ಅದೆಲ್ಲವೂ ಇರುವುದು ಅಲ್ಪಕಾಲಕ್ಕಾಗಿ. ಭಕ್ತಿಯಿಂದ ಕೆಳಗಿಳಿಯುತ್ತಾ ಬಂದಿದ್ದೇವೆ. ಈಗಂತು ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಅಯ್ಯೊ-ಅಯ್ಯೊ ಎನ್ನುವುದಾದ ನಂತರ ಜಯಜಯಕಾರವಾಗುವುದು. ಭಾರತದಲ್ಲಿಯೇ ರಕ್ತದ ನದಿಗಳು ಹರಿಯುತ್ತವೆ. ಈಗ ಎಲ್ಲರೂ ತಮೋಪ್ರಧಾನರಾಗಿಬಿಟ್ಟಿದ್ದಾರೆ, ನಂತರ ಎಲ್ಲರೂ ಸತೋಪ್ರಧಾನರಾಗಬೇಕಾಗಿದೆ. ಆದರೆ ಆಗುವುದು ಅವರೇ, ಯಾರು ಕಲ್ಪದಮೊದಲು ದೇವತೆಗಳಾಗಿದ್ದರು. ಅವರೇ ಬಂದು ತಂದೆಯಿಂದ ಸಂಪೂರ್ಣವಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಒಂದುವೇಳೆ ಭಕ್ತಿಯನ್ನು ಕಡಿಮೆ ಮಾಡಿದ್ದರೆ, ಜ್ಞಾವನ್ನೂ ಪೂರ್ಣತೆಗೆದುಕೊಳ್ಳುವುದಿಲ್ಲ. ನಂತರ ಪ್ರಜೆಯಲ್ಲಿ ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಒಳ್ಳೆಯ ಪುರುಷಾರ್ಥಿಗಳು ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆದು ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಗುಣವೂ ಚೆನ್ನಾಗಿರಬೇಕು. ದೈವೀ ಗುಣಗಳನ್ನೂ ಧಾರಣೆ ಮಾಡಬೇಕು. ಅದು ಮತ್ತೆ 21 ಜನ್ಮಗಳು ನಡೆಯುತ್ತದೆ. ಈಗಿರುವುದು ಎಲ್ಲರಲ್ಲಿ ಆಸುರೀ ಗುಣಗಳು ಏಕೆಂದರೆ ಪತಿತ ಪ್ರಪಂಚವಲ್ಲವೆ. ನೀವು ಮಕ್ಕಳಿಗೆ ಸೃಷ್ಟಿಯ ಇತಿಹಾಸ-ಭೂಗೋಳವನ್ನೂ ತಿಳಿಸಿಬಿಟ್ಟಿದ್ದೇವೆ. ಈ ಸಮಯದಲ್ಲಿ ತಂದೆಯು ಹೇಳುತ್ತಾರೆ- ಮಕ್ಕಳೇ, ನೆನಪಿನ ವಿಷಯದಲ್ಲಿ ಬಹಳ ಪರಿಶ್ರಮಪಟ್ಟರೆ, ನೀವು ಸತ್ಯಚಿನ್ನವಾಗಿಬಿಡುತ್ತೀರಿ. ಸತ್ಯಯುಗವಿರುವುದು ಗೋಲ್ಡನೇಜ್, ಸತ್ಯಚಿನ್ನ. ನಂತರ ತ್ರೇತಾದಲ್ಲಿ ಲೋಹವು ಸೇರ್ಪಡೆಯಾಗುತ್ತದೆ, ಆದ್ದರಿಂದ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈಗಂತು ಯಾವುದೇ ಕಲೆಗಳಿಲ್ಲ. ಯಾವಾಗ ಇಂತಹ ಸ್ಥಿತಿಯುಂಟಾಗುತ್ತದೆ ಆಗ ತಂದೆಯು ಬರುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನೊಂದಣಿಯಿದೆ. ನೀವು ಪಾತ್ರಧಾರಿಗಳಲ್ಲವೆ. ನೀವು ತಿಳಿದಿದ್ದೀರಿ- ನಾವು ಇಲ್ಲಿಗೆ ಪಾತ್ರವನ್ನಭಿನಯಿಸುವುದಕ್ಕಾಗಿ ಬಂದಿದ್ದೇವೆ. ಪಾತ್ರಧಾರಿಯೇನಾದರೂ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳದಿದ್ದರೆ, ಅವರನ್ನು ಬುದ್ಧಿಹೀನರೆಂದು ಹೇಳಲಾಗುತ್ತದೆ. ಬೇಹದ್ದಿನ ತಂದೆಯು ಹೇಳುತಾರೆ- ಎಲ್ಲರೂ ಎಷ್ಟೊಂದು ಬುದ್ಧಿಹೀನರಾಗಿಬಿಟ್ಟಿದ್ದಾರೆ. ಈಗ ನಾನು ನಿಮ್ಮನ್ನು ಬುದ್ಧಿವಂತರು, ವಜ್ರಸಮಾನರನ್ನಾಗಿ ಮಾಡುವೆನು. ನಂತರ ರಾವಣನು ಬಂದು ಕವಡೆಯ ಸಮಾನ ಮಾಡುತ್ತಾನೆ, ಈಗ ಈ ಹಳೆಯ ಪ್ರಪಂಚದ ವಿನಾಶವಾಗುವುದಿದೆ. ಎಲ್ಲರನ್ನೂ ಸೊಳ್ಳೆಗಳಂತೆ ಕರೆದುಕೊಂಡು ಹೋಗುವೆನು. ನಿಮ್ಮ ಗುರಿ-ಉದ್ದೇಶವು ಮುಂದೆ ಇದೆ. ಹೀಗಾಗಬೇಕು ಆಗಲೇ ನೀವು ಸ್ವರ್ಗವಾಸಿಯಾಗುವಿರಿ. ನೀವು ಬಿ.ಕೆ.ಗಳು ಈ ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಆದರೆ ಮನುಷ್ಯರ ಬುದ್ಧಿಯು ತಮೋಪ್ರಧಾನವಾಗಿರುವ ಕಾರಣದಿಂದ ಇಷ್ಟನ್ನೂ ತಿಳಿಯುವುದೇ ಇಲ್ಲ- ಇಷ್ಟೆಲ್ಲಾ ಬಿ.ಕೆ.ಗಳಿದ್ದಾರೆ ಅಂದಮೇಲೆ ಖಂಡಿತವಾಗಿಯೂ ಪ್ರಜಾಪಿತ ಬ್ರಹ್ಮನೂ ಇರಬೇಕು. ಬ್ರಾಹ್ಮಣರಾಗಿದ್ದಾರೆ ಶಿಖೆ. ಬ್ರಾಹ್ಮಣರೇ ಮತ್ತೆ ದೇವತಾ, ಚಿತ್ರದಲ್ಲಿ ಬ್ರಾಹ್ಮಣರನ್ನು, ಶಿವನನ್ನು ಮಾಯಾ ಮಾಡಿಬಿಟ್ಟಿದ್ದಾರೆ. ಬ್ರಾಹ್ಮಣರೀಗ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರವಾದ ಅಗಲಿ ಸಿಕ್ಕಿರುವ ಮಕ್ಕಳಿಗೆ ಮಾತಾಪಿತ ಬಾಪ್ದಾದಾರವರ ನಂಬರ್ವಾರ್ ಪುರುಷಾರ್ಥದನುಸಾರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕತಂದೆಯ ಆತ್ಮಿಕಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಜ್ಞಾನಸಾಗರನಿಂದ ಮೋಡಗಳು ತುಂಬಿಕೊಂಡು ಜ್ಞಾನದ ಮಳೆಯನ್ನು ಸುರಿಸಬೇಕಾಗಿದೆ. ಎಷ್ಟು ಸಾಧ್ಯವೋ ನೆನಪಿನ ಯಾತ್ರೆಯನ್ನೂ ಹೆಚ್ಚಿಸಬೇಕಾಗಿದೆ. ನೆನಪಿನಿಂದಲೇ ಸತ್ಯಚಿನ್ನವಾಗಬೇಕಾಗಿದೆ.
2. ಶ್ರೀಮತದ ಅನುಸಾರವಾಗಿ ನಡೆದು ಒಳ್ಳೆಯ ಚಲನೆ ಮತ್ತು ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತ್ಯಖಂಡದಲ್ಲಿ ಹೋಗುವುದಕ್ಕಾಗಿ ಬಹಳ-ಬಹಳ ಸತ್ಯವಂತರಾಗಬೇಕಾಗಿದೆ.
ವರದಾನ:
ವಿಶೇಷತೆಗಳನ್ನು ನೋಡುವ ಕನ್ನಡಕ ತೊಟ್ಟುಕೊಳ್ಳುವಂತಹ ಸಂಬಂಧ-ಸಂರ್ಕದಲ್ಲಿ ಬರುವಂತಹ ವಿಶ್ವ ಪರಿರ್ತಕ ಭವ.
ಪರಸ್ಪರ ಒಬ್ಬರಿಬ್ಬರ ಜೊತೆ ಸಂಬಂಧ ಅಥವಾ ಸಂರ್ಕದಲ್ಲಿ ಬರುತ್ತಾ ಪ್ರತಿಯೊಬ್ಬರ ವಿಶೇಷತೆಗಳನ್ನು ನೋಡಿ. ವಿಶೇಷತೆಗಳನ್ನು ನೋಡುವಂತಹದೇ ದೃಷ್ಠಿ ಧಾರಣೆ ಮಾಡಿ. ಹೇಗೆ ಇತ್ತೀಚಿಗೆ ಕನ್ನಡಕ ಒಂದು ಫ್ಯಾಷನ್ ಮತ್ತು ಅನಿವರ್ಯತೆಯಾಗಿದೆ. ಆದ್ದರಿಂದ ವಿಶೇಷತೆಗಳನ್ನು ನೋಡುವಂತಹ ಕನ್ನಡಕ ತೊಟ್ಟುಕೊಳ್ಳಿ. ಬೇರೆ ಏನೂ ಕಾಣಲೇಬಾರದು. ಹೇಗೆ ಕೆಂಪು ಕನ್ನಡಕ ತೊಡುವುದರಿಂದ ಹಸಿರು ವಸ್ತುವೂ ಸಹಾ ಕೆಂಪಗೆ ಕಾಣುವುದು. ಆದ್ದರಿಂದ ವಿಶೇಷತೆಗಳ ಕನ್ನಡಕದ ಮೂಲಕ ಕೊಳಕನ್ನು ನೋಡದೆ ಕಮಲವನ್ನು ನೋಡುವುದರಿಂದ ವಿಶ್ವ ಪರಿರ್ತನೆಯ ವಿಶೇಷ ಕರ್ಯಕ್ಕೆ ನಿಮಿತ್ತರಾಗಿ ಬಿಡುವಿರಿ.
ಸ್ಲೋಗನ್:
ಪರಚಿಂತನೆ ಮತ್ತು ಪರರ್ಶನದ ಧೂಳಿನಿಂದ ಸದಾ ದೂರವಿದ್ದಾಗ ಕಲ್ಮಶವಿಲ್ಲದ ಅಮೂಲ್ಯ ವಜ್ರ ಆಗಿ ಬಿಡುವಿರಿ.
0 Comments