Header Ads Widget

Header Ads

KANNADA MURLI 24.01.23

 

24/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಸಂಗಮಯುಗದಲ್ಲಿ ಆತ್ಮ ಮತ್ತು ಪರಮಾತ್ಮನ ಮಿಲನವಾಗುತ್ತದೆ, ಸದ್ಗುರು ಒಂದೇ ಬಾರಿ ಬಂದು ನಾವು ಮಕ್ಕಳಿಗೆ ಸತ್ಯವಾದ ಜ್ಞಾನವನ್ನು ಕೊಡುತ್ತಿದ್ದಾರೆ, ಸತ್ಯವನ್ನು ಮಾತನಾಡುವುದು ಕಲಿಸುತ್ತಿದ್ದಾರೆ

ಪ್ರಶ್ನೆ:

ಯಾವ ಮಕ್ಕಳ ಅವಸ್ಥೆಯು ಬಹಳ ಫಸ್ಟ್ ಕ್ಲಾಸಾಗಿ ಇರುತ್ತದೆ?

ಉತ್ತರ:

ಯಾರ ಬುದ್ಧಿಯಲ್ಲಿ ಇದೆಲ್ಲವೂ ಸಹ ತಂದೆಯದಾಗಿದೆ ಎಂದಿರುತ್ತದೆ, ಪ್ರತಿ ಹೆಜ್ಜೆಯಲ್ಲಿ ಶ್ರೀಮತ ತೆಗೆದುಕೊಳ್ಳುವಂತಹವರು, ಸಂಪೂರ್ಣ ತ್ಯಾಗ ಮಾಡುವಂತಹ ಮಕ್ಕಳ ಅವಸ್ಥೆಯು ಬಹಳ ಫಸ್ಟ್ ಕ್ಲಾಸಾಗಿರುತ್ತದೆ. ಯಾತ್ರೆಯು ಬಹಳ ಉದ್ದವಾಗಿದೆ, ಆದ್ದರಿಂದ ಶ್ರೇಷ್ಠವಾದ ತಂದೆಯಿಂದ ಶ್ರೇಷ್ಠವಾದ ಮತವನ್ನು ತೆಗೆದುಕೊಳ್ಳಬೇಕು.

ಪ್ರಶ್ನೆ:

ಮುರಳಿಯನ್ನು ಕೇಳುವ ಸಮಯದಲ್ಲಿ ಅಪಾರವಾದ ಸುಖ ಯಾವ ಮಕ್ಕಳಿಗೆ ಅನುಭವ ಆಗುತ್ತದೆ?

ಉತ್ತರ:

ನಾವು ಶಿವತಂದೆಯ ಮುರಳಿಯನ್ನು ಕೇಳುತ್ತಿದ್ದೇವೆ. ಮುರಳಿ ಶಿವತಂದೆಯೇ ಬ್ರಹ್ಮಾ ತನುವಿನಿಂದ ತಿಳಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಅತೀ ವಿಧೇಯನಾದ ತಂದೆಯು ನಮಗೆ ಸದಾ ಸುಖಿಯನ್ನಾಗಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವುದಕ್ಕೋಸ್ಕರ ಇದನ್ನು ತಿಳಿಸುತ್ತಿದ್ದಾರೆ. ಮುರಳಿ ಕೇಳುತ್ತಿದ್ದಾಗ ಸ್ಮೃತಿ ಇದ್ದರೆ ಸುಖದ ಅನುಭವ ಆಗುತ್ತದೆ.

ಗೀತೆ:  ಪ್ರಿಯತಮ ಬಂದಿದ್ದಾರೆ ಮಿಲನ ಮಾಡಿ.......

ಓಂ ಶಾಂತಿ: ದುಃಖಿಗಳು ಬದುಕಿದ್ದಾರೆ ಅಂದಾಗ ಇದು ದುಃಖಧಾಮವೇ ಆಗಿದೆ. ಸುಖಿ ಜೀವಾತ್ಮಗಳು ಸುಖಧಾಮದಲ್ಲಿ ಇರುತ್ತಾರೆ. ಎಲ್ಲಾ ಭಕ್ತರು ಒಬ್ಬ ಪ್ರಿಯತಮನನ್ನೇ ನೆನಪು ಮಾಡುತ್ತಾರೆ. ಅವರಿಗೆ ಪ್ರಿಯತಮ ಎಂದು ಹೇಳುತ್ತಾರೆ. ಯಾವಾಗ ದುಃಖವಿರುತ್ತದೋ ಆಗ ನೆನಪು ಮಾಡುತ್ತಾರೆ. ಇದನ್ನು ಯಾರು ಕುಳಿತು ತಿಳಿಸುತ್ತಿದ್ದಾರೆ? ಸತ್ಯ-ಸತ್ಯ ಪ್ರಿಯತಮ ತಿಳಿಸುತ್ತಿದ್ದಾರೆ. ಸತ್ಯವಾದ ತಂದೆ, ಸತ್ಯವಾದ ಶಿಕ್ಷಕ, ಸತ್ಯವಾದ ಸದ್ಗುರು......... ಎಲ್ಲರ ಪ್ರಿಯತಮನು ಅವರೊಬ್ಬರೇ ಆಗಿದ್ದಾರೆ. ಆದರೆ ಪ್ರಿಯತಮ ಯಾವಾಗ ಬರುತ್ತಾರೆ ಎನ್ನುವುದು ಯಾರಿಗೂ ಸಹ ತಿಳಿದಿಲ್ಲ. ಸಂಗಮಯುಗದಲ್ಲಿ ಪ್ರಿಯತಮನೇ ಸ್ವಯಂ ಬಂದು ತನ್ನ ಭಕ್ತರಿಗೆ, ತನ್ನ ಮಕ್ಕಳಿಗೆ ನಾನು ಬಂದಿದ್ದೇನೆ ಎಂದು ತಿಳಿಸಿಕೊಡುತ್ತಾರೆ. ನಾನು ಬರುವುದು ಮತ್ತು ಹೋಗುವುದರ ನಡುವೆಗೆ ಸಂಗಮವೆಂದು ಹೇಳಲಾಗುತ್ತದೆ. ಎಲ್ಲರೂ ಸಹ ಅನೇಕ ಬಾರಿ ಜನನ-ಮರಣದಲ್ಲಿ ಬಂದಿದ್ದಾರೆ. ನಾನು ಒಂದೇ ಬಾರಿ ಬರುತ್ತೇನೆ. ನಾನು ಸದ್ಗುರುವೂ ಸಹ ಒಬ್ಬನೇ ಆಗಿದ್ದೇನೆ. ಬಾಕಿ ಗುರುಗಳಂತೂ ಅನೇಕರಿದ್ದಾರೆ. ಅವರಿಗೆ ಸದ್ಗುರು ಎಂದು ಹೇಳಲಾಗುವುದಿಲ್ಲ ಏಕೆಂದರೆ ಅವರು ಸತ್ಯವಾದ ಪರಮಾತ್ಮನನ್ನೂ ತಿಳಿದುಕೊಂಡಿಲ್ಲ ಮತ್ತು ಅವರು ಸತ್ಯವನ್ನು ಹೇಳುವುದಿಲ್ಲ. ಯಾರು ಸತ್ಯವನ್ನು ತಿಳಿದುಕೊಂಡಿದ್ದಾರೋ ಅವರು ಸದಾಕಾಲ ಸತ್ಯವನ್ನೇ ಹೇಳುತ್ತಾರೆ. ಸತ್ಯವನ್ನು ಹೇಳುವಂತಹ ಸದ್ಗುರು ಒಬ್ಬರೇ ಆಗಿದ್ದಾರೆ. ನಾನು ಸಂಗಮಯುಗದಲ್ಲಿ ಬರುತ್ತೇನೆ ಎಂದು ಸತ್ಯವಾದ ತಂದೆ, ಸತ್ಯವಾದ ಶಿಕ್ಷಕ ಸ್ವಯಂ ಬಂದು ತಿಳಿಸಿಕೊಡುತ್ತಾರೆ. ನಾನು ಎಷ್ಟು ಸಮಯ ಬರುತ್ತೇನೋ ಅಷ್ಟೇ ನನ್ನ ಆಯಸ್ಸಾಗಿದೆ. ಪತಿತರನ್ನು ಪಾವನ ಮಾಡಿ ಹೋಗುತ್ತೇನೆ. ನನ್ನ ಜನ್ಮವೂ ಯಾವಾಗ ಆಯಿತೋ ಆಗಿನಿಂದಲೇ ನಾನು ಸಹಜ ರಾಜಯೋಗವನ್ನು ಕಲಿಸಲು ಪ್ರಾರಂಭ ಮಾಡಿದೆ. ಯಾವಾಗ ಕಲಿಸುವುದನ್ನು ಪೂರ್ಣ ಮಾಡುತ್ತೇನೋ ಆಗ ಪತಿತ ಪ್ರಪಂಚ ವಿನಾಶವಾಗುತ್ತದೆ. ನಾನು ಹಿಂತಿರುಗಿ ಹೊರಟು ಹೋಗುತ್ತೇನೆ. ನನ್ನ ಸಮಯದಲ್ಲಿ ನಾನು ಬರುತ್ತೇನೆ, ಆದರೆ ಶಾಸ್ತ್ರದಲ್ಲಿ ಇದರ ಬಗ್ಗೆ ಯಾವುದೇ ಸಮಯವನ್ನು ತಿಳಿಸಿಲ್ಲ. ಶಿವತಂದೆಯು ಯಾವಾಗ ಜನ್ಮ ತೆಗೆದುಕೊಳ್ಳುತ್ತಾರೆ, ಎಷ್ಟು ದಿನ ಭಾರತದಲ್ಲಿ ಇರುತ್ತಾರೆ, ನಾನು ಇದೆಲ್ಲವನ್ನು ಕುಳಿತು ತಿಳಿಸಿಕೊಡುತ್ತೇನೆ. ಸಂಗಮದ ಆದಿ, ಸಂಗಮಯುಗದ ಅಂತ್ಯವೆಂದರೆ ನಾನು ಬರುವುದು ಆದಿಯಾಗಿದೆ, ಹೋಗುವುದು ಅಂತಿಮವಾಗಿದೆ. ಬಾಕಿ ಮಧ್ಯದಲ್ಲಿ ಕುಳಿತು ನಾನು ರಾಜಯೋಗವನ್ನು ತಿಳಿಸಿಕೊಡುತ್ತೇನೆ. ತಂದೆಯೇ ಸ್ವಯಂ ಕುಳಿತು ನಾನು ಇವರ ವಾನಪ್ರಸ್ಥ ಸ್ಥಿತಿಯಲ್ಲಿ ಬರುತ್ತೇನೆ ಎಂದು ಹೇಳುತ್ತಾರೆ ಅಂದಾಗ ಬೇರೆ ದೇಶ ಮತ್ತು ಬೇರೆಯವರ ತನುವಿನಲ್ಲಿ ನಾನು ಅತಿಥಿಯಾದೆನು. ನಾನು ರಾವಣನ ಪ್ರಪಂಚದಲ್ಲಿ ಅತಿಥಿ ಆಗಿದ್ದೇನಲ್ಲವೇ. ಸಂಗಮಯುಗದ ಮಹಿಮೆಯು ಬಹಳ ದೊಡ್ಡದಾಗಿದೆ ಅಂದಾಗ ತಂದೆಯು ರಾವಣನ ರಾಜ್ಯದ ವಿನಾಶ ಮಾಡಿ ರಾಮರಾಜ್ಯವನ್ನು ಸ್ಥಾಪನೆ ಮಾಡಲು ಬರುತ್ತಾರೆ. ಆದರೆ ಶಾಸ್ತ್ರಗಳಲ್ಲಿ ದಂತ ಕಥೆಗಳನ್ನು ಬಹಳಷ್ಟು ಬರೆದಿದ್ದಾರೆ. ರಾವಣನನ್ನು ಪ್ರತಿ ವರ್ಷವೂ ಸುಡುತ್ತಾರೆ. ಅಂದಾಗ ಇಡೀ ಸೃಷ್ಟಿಯೂ ಸಹ ಸಮಯದಲ್ಲಿ ಲಂಕೆಯಾಗಿದೆ. ಕೇವಲ ಸಿಲೋನ್ [ದ್ವೀಪ]ಕ್ಕೆ ಮಾತ್ರ ಲಂಕೆ ಎಂದು ಹೇಳಲಾಗುವುದಿಲ್ಲ. ಇಡೀ ಸೃಷ್ಟಿ ರಾವಣ ಇರುವಂತಹ ಸ್ಥಾನವಾಗಿದೆ ಹಾಗೂ ಶೋಕವಾಟಿಕೆಯಾಗಿದೆ. ಎಲ್ಲರೂ ದುಃಖಿಗಳಾಗಿದ್ದಾರೆ. ನಾನೇ ನಿಮ್ಮನ್ನು ಅಶೋಕವಾಟಿಕೆ ಅಥವಾ ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಸ್ವರ್ಗದಲ್ಲಿ ಎಲ್ಲಾ ಧರ್ಮಗಳು ಇರುವುದಿಲ್ಲ. ಈಗ ಯಾವ ಧರ್ಮ ಇಲ್ಲವೋ ಒಂದೇ ಧರ್ಮ ಇರುತ್ತದೆ. ಈಗ ಪುನಃ ದೇವತೆಗಳನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಿದ್ದೇನೆ, ಆದರೆ ಇದನ್ನು ಎಲ್ಲರೂ ಕಲಿತುಕೊಳ್ಳುವುದಿಲ್ಲ. ನಾನೇ ಭಾರತದಲ್ಲಿ ಬರುತ್ತೇನೆ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ಕ್ರಿಶ್ಚಯನ್ನರೂ ಸಹ ಸ್ವರ್ಗಕ್ಕೆ ಗೌರವವನ್ನು ಕೊಡುತ್ತಾರೆ. ಸ್ವರ್ಗಸ್ಥರಾದರು ಎಂದು ಹೇಳುತ್ತಾರೆ. ಭಗವಂತನ ಬಳಿಗೆ ಹೋದರು ಎನ್ನುತ್ತಾರೆ, ಆದರೆ ಸ್ವರ್ಗವನ್ನು ತಿಳಿದುಕೊಂಡಿಲ್ಲ. ಸ್ವರ್ಗ ಎನ್ನುವುದು ಬೇರೆಯಾಗಿದೆ ಯಾವಾಗ ಮತ್ತು ಹೇಗೆ ಬರುತ್ತೇನೆ ಎಂದು ತಂದೆ ತಿಳಿಸುತ್ತಾರೆ. ಬಂದು ತ್ರಿಕಾಲದರ್ಶಿಯನ್ನಾಗಿ ಮಾಡುತ್ತಾರೆ. ಬೇರೆ ಯಾರೂ ಸಹ ತ್ರಿಕಾಲದರ್ಶಿಗಳಾಗಲು ಸಾಧ್ಯವಿಲ್ಲ. ಸೃಷ್ಟಿ ಆದಿ-ಮಧ್ಯ-ಅಂತ್ಯವು ನನಗೆ ಗೊತ್ತಿದೆ. ಈಗ ಕಲಿಯುಗದ ವಿನಾಶವಾಗುತ್ತದೆ. ಈಗ ಸಂಗಮಯುಗವಾಗಿದೆ ಎಂದು ಪ್ರಭಾವದಿಂದಲೇ ಗೊತ್ತಾಗುತ್ತದೆ. ಆದರೆ ಸರಿಯಾದ ಸಮಯವನ್ನು ಯಾರೂ ಸಹ ಹೇಳುವುದಿಲ್ಲ, ಬಾಕಿ ಪೂರ್ಣರಾಜಧಾನಿ ಸ್ಥಾಪನೆ ಆಗುತ್ತದೆ. ಮಕ್ಕಳು ಕರ್ಮಾತೀತ ಸ್ಥಿತಿಯನ್ನು ಪಡೆದುಕೊಂಡಾಗ ಜ್ಞಾನವು ವಿನಾಶವಾಗುತ್ತದೆ. ಯುದ್ಧವು ಆರಂಭವಾಗುತ್ತದೆ. ನಾನೂ ಸಹ ಪಾವನರನ್ನಾಗಿ ಮಾಡುವ ಪಾತ್ರವನ್ನು ಪೂರ್ಣ ಮಾಡುತ್ತೇನೆ. ದೇವೀ-ದೇವತಾ ಧರ್ಮದ ಸ್ಥಾಪನೆಯನ್ನು ಮಾಡುವುದು ನನ್ನ ಪಾತ್ರವಾಗಿದೆ. ಭಾರತವಾಸಿಗಳಿಗೆ ಏನೂ ಸಹ ತಿಳಿದಿಲ್ಲ. ಶಿವತಂದೆಯೇ ಬಂದು ಕಾರ್ಯವನ್ನು ಮಾಡಿರುವ ಕಾರಣ ಶಿವರಾತ್ರಿಯನ್ನು ಆಚರಣೆ ಮಾಡುತ್ತಾರೆ. ಆದರೆ ಅವರು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಇದು ಸಾಧಾರಣ ಮಾತಾಗಿದೆ. ಶಿವಪುರಾಣ ಮುಂತಾದ ಯಾವುದೇ ಶಾಸ್ತ್ರದಲ್ಲಿ ಶಿವತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ ಎನ್ನುವ ಮಾತನ್ನು ಬರೆದಿಲ್ಲ. ವಾಸ್ತವದಲ್ಲಿ ಪ್ರತಿಯೊಂದು ಧರ್ಮದ ಒಂದೊಂದು ಶಾಸ್ತ್ರವಿದೆ. ಹಾಗೆಯೇ ದೇವತಾ ಧರ್ಮದ್ದೂ ಸಹ ಒಂದು ಶಾಸ್ತ್ರವಾಗಬೇಕಾಗಿದೆ, ಆದರೆ ಅದರ ರಚಯಿತ ಯಾರಾಗಿದ್ದಾರೆ! ಇದರಲ್ಲಿ ತಬ್ಬಿಬ್ಬಾಗಿದ್ದಾರೆ.

ನಾನು ಅವಶ್ಯವಾಗಿ ಬ್ರಹ್ಮನ ಮುಖಾಂತರ ಬ್ರಾಹ್ಮಣ ಧರ್ಮವನ್ನು ರಚನೆ ಮಾಡುತ್ತೇನೆ ಎಂದು ತಂದೆಯೇ ತಿಳಿಸುತ್ತಾರೆ. ಬ್ರಹ್ಮಾಮುಖವಂಶಾವಳಿ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರಲ್ಲವೇ. ಬಹಳ ಜನರ ಹೆಸರನ್ನು ಬದಲಾಯಿಸದರು. ಅದರಲ್ಲಿ ಬಹಳಷ್ಟು ಓಡಿಹೋದರು. ಜೊತೆಯಲ್ಲಿ ಬರುತ್ತಾರೆ ಬಾಕಿ ಹೆಸರಿನಿಂದ ಏನೂ ಸಹ ಲಾಭವಿಲ್ಲ. ಅದನ್ನು ಮರೆತುಬಿಡುತ್ತಾರೆ. ವಾಸ್ತವದಲ್ಲಿ ನೀವು ತಂದೆಯ ಜೊತೆ ಯೋಗವನ್ನು ಜೋಡಿಸಬೇಕು. ಶರೀರದ ಹೆಸರು ಇರುತ್ತದೆ. ಆತ್ಮಕ್ಕೆ ಹೆಸರು ಇಲ್ಲ. ಆತ್ಮವೇ 84 ಜನ್ಮಗಳನ್ನು ಪಡೆದುಕೊಳ್ಳುತ್ತದೆ. ಪ್ರತಿಯೊಂದು ಜನ್ಮದಲ್ಲಿ ನಾಮ-ರೂಪ-ದೇಶ ಕಾಲ ಎಲ್ಲವೂ ಬದಲಾವಣೆ ಆಗುತ್ತದೆ. ಡ್ರಾಮಾದಲ್ಲಿ ಎಲ್ಲರಿಗೂ ಒಂದೇ ಬಾರಿ ಸಿಗುತ್ತದೆ. ಅದೇ ರೂಪದಲ್ಲಿ ಪುನಃ ಪಾತ್ರ ಮಾಡಲು ಸಾಧ್ಯವಿಲ್ಲ. ಅದೇ ಪಾತ್ರವನ್ನು ಪುನಃ 5000 ವರ್ಷದ ನಂತರ ಮಾಡಬೇಕಾಗುತ್ತದೆ. ಕೃಷ್ಣ ಅದೇ ನಾಮ-ರೂಪದಲ್ಲಿ ಪುನಃ ಪಾತ್ರ ಮಾಡಲು ಸಾಧ್ಯವಿಲ್ಲ. ಆತ್ಮ ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತದೆ. ಚಿತ್ರ ಮುಂತಾದವುಗಳು ಒಬ್ಬರ ರೀತಿ ಮತ್ತೊಬ್ಬರಿಗೆ ಸಿಗುವುದಿಲ್ಲ. 5 ತತ್ವಗಳ ಅನುಸಾರ ಚಿತ್ರಗಳು ಬದಲಾಗುತ್ತದೆ. ಎಷ್ಟೊಂದು ಚಿತ್ರಗಳಿದೆ ಆದರೆ ಇದೆಲ್ಲವೂ ಮೊದಲೇ ನಾಟಕದಲ್ಲಿ ನೊಂದಾವಣೆ ಆಗಿದೆ. ಇದರಲ್ಲಿ ಹೊಸದೇನೂ ಇಲ್ಲ. ಈಗ ಶಿವರಾತ್ರಿಯನ್ನು ಆಚರಣೆ ಮಾಡುತ್ತಾರೆ ಅಂದಾಗ ಅವಶ್ಯವಾಗಿ ಶಿವ ಬಂದಿದ್ದಾರೆ. ಅವರೇ ಇಡೀ ಪ್ರಪಂಚದ ಪ್ರಿಯತಮ ಆಗಿದ್ದಾರೆ. ಲಕ್ಷ್ಮೀ-ನಾರಾಯಣ ಹಾಗೂ ರಾಧೆ-ಕೃಷ್ಣ ಮತ್ತು ಬ್ರಹ್ಮಾ-ವಿಷ್ಣು ಮುಂತಾದವರು ಪ್ರಿಯತಮರಲ್ಲ. ಭಗವಂತ ಒಬ್ಬನೇ ಪ್ರಿಯತಮ ಆಗಿದ್ದಾರೆ. ಅವಶ್ಯವಾಗಿ ತಂದೆಯೇ ಆಸ್ತಿಯನ್ನು ಕೊಡುತ್ತಾರೆ, ಆದ್ದರಿಂದ ತಂದೆ ಎಲ್ಲರಿಗೂ ಪ್ರಿಯ ಆಗುತ್ತಾರೆ. ನನ್ನೊಬ್ಬನನ್ನೇ ನೆನಪು ಮಾಡಿ ಏಕೆಂದರೆ ನನ್ನಿಂದಲೇ ಆಸ್ತಿ ಸಿಗುತ್ತದೆ ಎಂದು ತಂದೆಯು ಹೇಳುತ್ತಾರೆ. ವಿದ್ಯೆಯ ಅನುಸಾರ ನಾವು ಸೂರ್ಯವಂಶೀ ದೇವತಾ ಹಾಗೂ ಚಂದ್ರವಂಶೀ ಕ್ಷತ್ರಿಯರಾಗುತ್ತೇವೆ ಎಂದು ನಿಮಗೆ ತಿಳಿದಿದೆ. ವಾಸ್ತವಿಕವಾಗಿ ಎಲ್ಲಾ ಭಾರತವಾಸಿಗಳ ಧರ್ಮ ಒಂದೇ ಆಗಬೇಕು, ಆದರೆ ದೇವತಾ ಧರ್ಮದ ಹೆಸರು ಬದಲಾವಣೆ ಆಗಿ ಹಿಂದು ಎನ್ನುವ ಹೆಸರನ್ನು ಇಟ್ಟಿದ್ದಾರೆ ಏಕೆಂದರೆ ದೈವೀ ಗುಣಗಳು ಇಲ್ಲ. ಈಗ ತಂದೆಯೇ ಕುಳಿತು ಧಾರಣೆಯನ್ನು ಮಾಡಿಸುತ್ತಾರೆ. ತಮ್ಮನ್ನು ತಾವು ಆತ್ಮ ಎಂದು ತಿಳಿದು ಅಶರೀರಿಗಳಾಗಿ ಎಂದು ಹೇಳುತ್ತಾರೆ. ನೀವು ಪರಮಾತ್ಮನಲ್ಲ. ಪರಮಾತ್ಮ ಒಬ್ಬ ಶಿವನಾಗಿದ್ದಾರೆ. ಅವರೇ ಎಲ್ಲರ ಪ್ರಿಯತಮ, ಒಂದೇ ಬಾರಿ ಸಂಗಮಯುಗದಲ್ಲಿ ಬರುತ್ತಾರೆ. ಸಂಗಮಯುಗ ಬಹಳ ಚಿಕ್ಕದಾಗಿದೆ. ಎಲ್ಲಾ ಧರ್ಮಗಳ ವಿನಾಶವಾಗುತ್ತದೆ. ಬ್ರಾಹ್ಮಣ ಕುಲವೂ ಹಿಂತಿರುಗಿ ಹೋಗುತ್ತದೆ ಏಕೆಂದರೆ ಅವರು ದೈವೀ ಕುಲದಲ್ಲಿ ವರ್ಗಾವಣೆ ಆಗಬೇಕು. ಇದು ವಿದ್ಯೆಯಾಗಿದೆ. ಕೇವಲ ವ್ಯತ್ಯಾಸವನ್ನು ನೋಡಲಾಗುತ್ತದೆ. ಅಲ್ಲಿ ವಿಷಯ ವಿಕಾರದ ವಿಷವಿದೆ. ಇಲ್ಲಿ ಜ್ಞಾನದ ಅಮೃತವಿದೆ. ಇದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಪಾಠಶಾಲೆ ಆಗಿದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆ ಅದು ಒಂದೇ ಸಲ ಕರಗಿಹೋಗುತ್ತದೆ. ಅದನ್ನು ತಂದೆಯೇ ಬಂದು ವಜ್ರದ ಸಮಾನ ಮಾಡುತ್ತಾರೆ. ಶಿವರಾತ್ರಿ ಎಂದು ಹೇಳುತ್ತಾರೆ, ರಾತ್ರಿಯಲ್ಲಿ ಶಿವ ಬರುತ್ತಾರೆ ಎಂದು ಹೇಳುತ್ತಾರೆ. ಆದರೆ ಹೇಗೆ ಬಂದರು, ಯಾರ ಗರ್ಭದಲ್ಲಿ ಬಂದರು ಅಥವಾ ಯಾವ ಶರೀರದಲ್ಲಿ ಪ್ರವೇಶ ಮಾಡಿದರು. ಗರ್ಭದಲ್ಲಿ ಬರಲು ಸಾಧ್ಯವಿಲ್ಲ. ಅವರು ಶರೀರವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಅವರು ಅವಶ್ಯವಾಗಿ ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ ಆದರೆ ಯಾವಾಗ ಹೇಗೆ ಬರುತ್ತಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಶಾಸ್ತ್ರಗಳನ್ನು ಬಹಳಷ್ಟು ಓದುತ್ತಾರೆ ಆದರೆ ಮುಕ್ತಿ-ಜೀವನ್ಮುಕ್ತಿ ಯಾರಿಗೂ ಸಿಗುವುದಿಲ್ಲ. ಇನ್ನೂ ಸಹ ತಮೋಪ್ರಧಾನರಾಗುತ್ತಾರೆ. ಅವಶ್ಯವಾಗಿ ಎಲ್ಲರೂ ಆಗಲೇ ಬೇಕು. ಎಲ್ಲಾ ಮನುಷ್ಯರು ರಂಗ ಮಂಚದಲ್ಲಿ ಅವಶ್ಯವಾಗಿ ಪ್ರತ್ಯಕ್ಷವಾಗಬೇಕು. ತಂದೆ ಅಂತಿಮದಲ್ಲಿ ಬರುತ್ತಾರೆ. ನಿನ್ನ ಗತಿ-ಮತಿ ನಿನಗೆ ತಿಳಿದಿದೆ ಎಂದು ಅವರ ಮಹಿಮೆಯನ್ನು ಗಾಯನ ಮಾಡುತ್ತಾರೆ. ನಿಮ್ಮಲ್ಲಿ ಯಾವ ಜ್ಞಾನವಿದೆ ಹೇಗೆ ನೀವು ಸದ್ಗತಿಯನ್ನು ಕೊಡುತ್ತೀರಿ ಎಂದು ನಿಮಗೆ ಗೊತ್ತಿದೆ ಎನ್ನುವ ಗಾಯನವಿದೆ. ಅಂದಾಗ ಅವರು ಅವಶ್ಯವಾಗಿ ಶ್ರೀಮತವನ್ನು ಕೊಡಲು ಬರುತ್ತಾರೆ. ಆದರೆ ಹೇಗೆ ಬರುತ್ತಾರೆ, ಯಾರ ಶರೀರದಲ್ಲಿ ಬರುತ್ತಾರೆ ಅದು ಯಾರಿಗೂ ಸಹ ಗೊತ್ತಿಲ್ಲ. ಸಾಧಾರಣ ತನುವಿನಲ್ಲಿ ನಾನು ಬರುತ್ತೇನೆ ಎಂದು ಸ್ವಯಂ ಹೇಳುತ್ತಾರೆ. ನಾನು ಬ್ರಹ್ಮಾ ಎನ್ನುವ ಹೆಸರನ್ನು ಅವಶ್ಯವಾಗಿ ಇಡಬೇಕಾಯಿತು ಇಲ್ಲವೆಂದರೆ ಬ್ರಾಹ್ಮಣರಿಗೆ ಹೇಗೆ ಜನ್ಮ ಕೊಡುವುದು? ಬ್ರಹ್ಮಾ ಎಲ್ಲಿಂದ ಬಂದರು? ಮೇಲಿನಿಂದ ಬರಲು ಸಾಧ್ಯವಿಲ್ಲ. ಅವರು ಸೂಕ್ಷ್ಮವತನವಾಸಿ ಅವ್ಯಕ್ತ, ಸಂಪೂರ್ಣ ಬ್ರಹ್ಮಾ ಆಗಿದ್ದಾರೆ. ಇಲ್ಲಿ ಅವರು ಅವಶ್ಯವಾಗಿ ವ್ಯಕ್ತದಲ್ಲಿ ಬಂದು ರಚನೆಯನ್ನು ರಚಿಸಬೇಕಾಗುತ್ತದೆ. ಇದನ್ನು ಅನುಭವದಿಂದ ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಬರುತ್ತಾರೆ ಮತ್ತು ಹೋಗುತ್ತಾರೆ. ನಾನೂ ಸಹ ನಾಟಕದಲ್ಲಿ ಬಂಧಿತನಾಗಿದ್ದೇನೆ ಮತ್ತು ನನ್ನ ಪಾತ್ರವೂ ಒಂದೇ ಬಾರಿ ಬರುವುದಾಗಿದೆ ಎಂದು ತಂದೆಯು ಹೇಳುತ್ತಾರೆ. ಭಲೆ ಪ್ರಪಂಚದಲ್ಲಿ ಬಹಳಷ್ಟು ಉಪದ್ರವಗಳು ಆಗುತ್ತವೆ. ಸಮಯದಲ್ಲಿ ಎಷ್ಟೊಂದು ಈಶ್ವರನನ್ನು ಕರೆಯುತ್ತಾರೆ ಆದರೆ ನಾನಂತೂ ನನ್ನ ಸಮಯದಲ್ಲೇ ಬರುತ್ತೇನೆ ಮತ್ತು ವಾನಪ್ರಸ್ಥ ಅವಸ್ಥೆಯಲ್ಲಿ ಬರುತ್ತೇನೆ. ಅದೇ ಆಯಸ್ಸುನಲ್ಲಿ ಎಲ್ಲಾ ಕಾರ್ಯವನ್ನು ಮಾಡಿಸುತ್ತೇನೆ. ಜ್ಞಾನ ಬಹಳ ಸಹಜವಾಗಿದೆ ಆದರೆ ಸ್ಥಿತಿಯನ್ನು ಮಾಡಿಕೊಳ್ಳುವುದರಲ್ಲಿ ಶ್ರಮವಿದೆ. ಆದ್ದರಿಂದ ಇದು ಬಹಳ ಶ್ರೇಷ್ಠವಾದ ಗುರಿಯಾಗಿದೆ ಎಂದು ಹೇಳುತ್ತಾರೆ. ತಂದೆ ಜ್ಞಾನಸಾಗರ ಆಗಿದ್ದಾರೆ ಅಂದಾಗ ಅವಶ್ಯವಾಗಿ ಅವರೇ ನಾವು ಮಕ್ಕಳಿಗೆ ಜ್ಞಾನವನ್ನು ಕೊಟ್ಟಿರಬಹುದು ಆದ್ದರಿಂದ ನಿಮ್ಮ ಗತಿ ಮತಿ ನಿಮಗೇ ಗೊತ್ತಿದೆ ಎಂಬ ಗಾಯನವಿದೆ.

ನನ್ನ ಬಳಿ ಯಾವ ಸುಖ-ಶಾಂತಿಯ ಖಜಾನೆ ಇದೆ ಅದನ್ನು ಮಕ್ಕಳಿಗೆ ಕೊಡುವುದಕ್ಕೋಸ್ಕರ ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಮಾತೆಯರ ಮೇಲೆ ಅತ್ಯಾಚಾರವಾಗುತ್ತಿದೆ ಆದರೂ ಇದೆಲ್ಲವೂ ಡ್ರಾಮಾದಲ್ಲಿ ನೊಂದಾವಣೆ ಆಗಿದೆ. ಆಗಲೇ ಪಾಪದ ಕೊಡ ತುಂಬುತ್ತದೆ. ಕಲ್ಪ-ಕಲ್ಪದಲ್ಲೂ ಹಾಗೆಯೇ ಪುನರಾವರ್ತನೆ ಆಗುತ್ತದೆ. ಎಲ್ಲಾ ಮಾತುಗಳನ್ನು ಈಗ ನೀವು ತಿಳಿದುಕೊಂಡಿದ್ದೀರಿ ಪುನಃ ಮರೆತುಬಿಡುತ್ತೀರಿ. ಜ್ಞಾನ ಸತ್ಯಯುಗದಲ್ಲಿ ಇರುವುದಿಲ್ಲ ಒಂದುವೇಳೆ ಇದ್ದಿದ್ದರೆ ಪರಂಪರೆಯಾಗಿ ನಡೆಯುತ್ತಿತ್ತು. ಈಗಿನ ಪುರುಷಾರ್ಥದಿಂದ ಅಲ್ಲಿ ಪ್ರಾಲಬ್ಧವನ್ನು ಪಡೆದುಕೊಳ್ಳುತ್ತೇವೆ. ಇಲ್ಲಿಯ ಪುರುಷಾರ್ಥಿ ಆತ್ಮಗಳು ಅಲ್ಲಿ ಇರುತ್ತಾರೆ. ಬೇರೆ ಆತ್ಮಗಳು ಅಲ್ಲಿ ಇರಲು ಸಾಧ್ಯವಿಲ್ಲ. ಜ್ಞಾನದ ಅವಶ್ಯಕತೆ ಇರುವವರು ಮಾತ್ರ ಬರಲು ಸಾಧ್ಯವಿದೆ. ಇದನ್ನು ಕೆಲವರು ಮಾತ್ರ ತಿಳಿದುಕೊಳ್ಳುತ್ತಾರೆ. ಬಹಳ ಚೆನ್ನಾಗಿದೆ-ಚೆನ್ನಾಗಿದೆ ಎಂದು ಹೇಳುತ್ತಾರೆ. ವಿದೇಶದಲ್ಲಿ ಇರುವಂತಹ ಬಹಳ ದೊಡ್ಡ ವ್ಯಕ್ತಿಗಳೂ ಸಹ ಬರುತ್ತಾರೆ. ಆದರೆ ಎಲ್ಲಿಯೇ ಭಟ್ಟಿ ಇದ್ದರೂ ಏನು ತಿಳಿದುಕೊಳ್ಳುತ್ತಾರೆ? ಹೇಳುತ್ತಾರೆ ನೀವು ಹೇಳುವ ಮಾತಂತೂ ಸರಿ ಇದೆ ಆದರೆ ಪವಿತ್ರವಾಗಿರಲು ಸಾಧ್ಯವಿಲ್ಲ. ಮದುವೆ ಮಾಡಿಕೊಂಡು ಒಟ್ಟಿಗೆ ಇದ್ದು ಪವಿತ್ರರಾಗಿದ್ದರೆ ಅವರಿಗೆ ಉಡುಗೊರೆಯೂ ಸಹ ಬಹಳ ಸಿಗುತ್ತದೆ. ಇದು ಸ್ಪರ್ಧೆಯಾಗಿದೆ. ಸ್ಪರ್ಧೆಯಲ್ಲಿ ಮೊದಲನೇ ನಂಬರಿನಲ್ಲಿ ಹೋಗುವುದರಿಂದ 4-5 ಲಕ್ಷ ಸಿಗುತ್ತದೆ. ಆದರೆ ಇಲ್ಲಿ 21 ಜನ್ಮಗಳಗೋಸ್ಕರ ಪೂರ್ಣ ರಾಜ್ಯಪದವಿ ಸಿಗುತ್ತದೆ. ಇದು ಕಡಿಮೆ ಮಾತೇನು? ಮುರಳಿ ಎಲ್ಲಾ ಮಕ್ಕಳ ಬಳಿ ಹೋಗುತ್ತದೆ. ಟೇಪ್ನಲ್ಲೂ ಸಹ ಕೇಳುತ್ತಾರೆ. ಶಿವತಂದೆಯೇ ಬ್ರಹ್ಮನ ತನುವಿನಿಂದ ಮುರಳಿಯನ್ನು ತಿಳಿಸುತ್ತಿದ್ದಾರೆ ಎಂದು ಹೇಳುತ್ತಾರೆ ಅಥವಾ ಶಿವತಂದೆಯೇ ಮುರಳಿಯನ್ನು ತಿಳಿಸುತ್ತಾರೆ ಎಂದು ಹೇಳುತ್ತಾರೆ ಅಂದಾಗ ಬುದ್ಧಿ ಒಂದೇ ಸಲ ಅಲ್ಲಿಗೆ ಹೋಗಬೇಕು. ಸುಖ ಅಂತರಾಳದಲ್ಲಿ ಅನುಭವವಾಗಬೇಕು. ಅತೀ ವಿಧೇಯನಾದ ತಂದೆ ನಮಗೆ ಸದಾ ಸುಖಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಅಂದಾಗ ಬಹಳಷ್ಟು ಅವರನ್ನು ನೆನಪು ಮಾಡಬೇಕು ಆದರೆ ಮಾಯೆ ನೆನಪನ್ನು ಮಾಡಲು ಬಿಡುವುದಿಲ್ಲ. ತ್ಯಾಗವೂ ಸಹ ಪೂರ್ಣವಾಗಿ ಮಾಡಬೇಕು ಎಲ್ಲವೂ ಸಹ ತಂದೆಯದಾಗಿದೆ ಎನ್ನುವ ಸ್ಥಿತಿಯನ್ನು ಫಸ್ಟ್ ಕ್ಲಾಸಾಗಿ ಇಟ್ಟುಕೊಳ್ಳಬೇಕು. ಶ್ರೀಮತವನ್ನು ಬಹಳ ಮಕ್ಕಳು ತೆಗೆದುಕೊಳ್ಳುತ್ತಾರೆ. ಶ್ರೀಮತದಿಂದ ಅವಶ್ಯವಾಗಿ ಕಲ್ಯಾಣವಾಗುತ್ತದೆ. ಮತವೂ ಶ್ರೇಷ್ಠವಾಗಿದೆ, ಯಾತ್ರೆಯೂ ಉದ್ದವಾಗಿದೆ ಆದರೆ ನೀವು ಮೃತ್ಯು ಲೋಕದಲ್ಲಿ ಬರುವುದಿಲ್ಲ. ಸತ್ಯಯುಗ ಅಮರಲೋಕವಾಗಿದೆ.

ತಂದೆಯೇ ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ - ಅಲ್ಲಿ ನೀವು ಸಾಯುವುದಿಲ್ಲ ದಿನವೂ ಬರುತ್ತದೆ. ಖುಷಿಯಿಂದ ಹಳೆಯ ಶರೀರವನ್ನು ಬದಲಾಯಿಸಿ ಹೊಸ ಶರೀರವನ್ನು ತೆಗೆದುಕೊಳ್ಳುತ್ತೀರಿ. ಸರ್ಪದ ಉದಾಹರಣೆಯು ನಿಮಗೋಸ್ಕರವೇ ಇದೆ. ಭ್ರಮರಿಯ ಉದಾಹರಣೆಯು ನಿಮಗೆ ಇದೆ. ಆಮೆಯ ಉದಾಹರಣೆಯೂ ಸಹ ನಿಮಗಿದೆ. ಸನ್ಯಾಸಿಗಳು ಇದನ್ನು ಕಾಪಿ ಮಾಡಿದ್ದಾರೆ. ಭ್ರಮರಿಯ ಉದಾಹರಣೆ ಚೆನ್ನಾಗಿದೆ. ಹುಳಗಳನ್ನು ಜ್ಞಾನದ ಭೂ-ಭೂ ಮಾಡಿ ಫರಿಸ್ಥೆಗಳನ್ನಾಗಿ ಮಾಡಬೇಕು. ಪುರುಷಾರ್ಥವನ್ನು ಚೆನ್ನಾಗಿ ಮಾಡಬೇಕು. ಶ್ರೇಷ್ಠ ಪದವಿ ಅಥವಾ ಒಳ್ಳೆಯ ನಂಬರನ್ನು ತೆಗೆದುಕೊಳ್ಳಬೇಕಾದರೆ ಶ್ರಮವನ್ನು ಪಡೆಯಬೇಕು. ಭಲೆ ಕೆಲಸ ಮುಂತಾದವನ್ನು ಮಾಡಿ ಸಮಯವಂತೂ ನೊಂದಾವಣೆ ಆಗಿದೆ ಆದರೂ ಸಹ ಬಹಳ ಸಮಯ ಸಿಗುತ್ತದೆ. ತಮ್ಮ ಯೋಗದ ಚಾರ್ಟನ್ನು ನೋಡಿಕೊಳ್ಳಬೇಕು ಏಕೆಂದರೆ ಮಾಯೆ ಬಹಳಷ್ಟು ವಿಘ್ನವನ್ನು ಹಾಕುತ್ತದೆ.

ಮಧುರ ಮಕ್ಕಳೇ ಅತೀ ವಿಧೇಯನಾದ ತಂದೆಗೆ ವಿಚ್ಛೇದನವನ್ನು ಕೊಡಬೇಡಿ, ಅಷ್ಟು ಮಹಾಮೂರ್ಖರಾಗಬೇಡಿ ಎಂದು ತಂದೆಯು ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ ಆದರೆ ಮಾಯೆ ಮಾಡಿಸುತ್ತದೆ. ಮುಂದೆ ಹೋಗುತ್ತಾ ನೀವು ನೋಡುತ್ತೀರಿ ಕೆಲವರು ಬಲಿಹಾರಿಗಳಾಗಿ ಬಹಳ ಚೆನ್ನಾಗಿ ಸರ್ವೀಸನ್ನು ಮಾಡುತ್ತಾರೆ ಅವರನ್ನು ಮಾಯೆ ಬೇರೆ ಸ್ಥಿತಿಯಲ್ಲಿ ತರುತ್ತದೆ ಏಕೆಂದರೆ ಅವರು ಶ್ರೀಮತವನ್ನು ಬಿಟ್ಟು ಬಿಡುತ್ತಾರೆ ಆದ್ದರಿಂದ ರೀತಿ ಅತೀ ದೊಡ್ಡ ಮಹಾಮೂರ್ಖರಾಗಬೇಡಿ ಎಂದು ತಂದೆಯು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತಂದೆಯ ಮುಖಾಂತರ ಯಾವ ಸುಖ-ಶಾಂತಿಯ ಖಜಾನೆ ಸಿಕ್ಕಿದೆ ಅದನ್ನು ಎಲ್ಲರಿಗೂ ಕೊಡಬೇಕಾಗಿದೆ. ಜ್ಞಾನದಿಂದ ತಮ್ಮ ಸ್ಥಿತಿಯನ್ನು ಚೆನ್ನಾಗಿ ಇಟ್ಟುಕೊಳ್ಳುವ ಶ್ರಮ ಪಡಬೇಕಾಗಿದೆ.

2. ದೈವೀಗುಣಗಳು ಧಾರಣೆ ಮಾಡಿಕೊಳ್ಳುವುದಕ್ಕೋಸ್ಕರ ದೇಹಬಾನವನ್ನು ಮರೆತು ತಮ್ಮನ್ನು ತಾವು ಆತ್ಮ ಎಂದು ತಿಳಿದು ಆಶರೀರಿಗಳಾಗಿ ಒಬ್ಬ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ.

ವರದಾನ:

ವಿಶೇಷತೆಯ ಬೀಜದ ಮೂಲಕ ಸಂತುಷ್ಟತೆ ರೂಪಿ ಫಲವನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ವಿಶೇಷ ಆತ್ಮ ಭವ

ವಿಶೇಷ ಯುಗದಲ್ಲಿ, ವಿಶೇಷತೆಯ ಬೀಜದ ಅತ್ಯುತ್ತಮ ಫಲವೆಂದರೆತೃಪ್ತಿ”. ತೃಪ್ತರಾಗುವುದು ಮತ್ತು ಎಲ್ಲರನ್ನೂ ತೃಪ್ತಿ ಪಡಿಸುವುದು ವಿಶೇಷ ಆತ್ಮದ ಸಂಕೇತವಾಗಿದೆ, ಆದ್ದರಿಂದ, ವಿಶೇಷತೆಯ ಬೀಜವನ್ನು ಅಥವಾ ಆಶೀರ್ವಾದವನ್ನು ಎಲ್ಲಾ ಶಕ್ತಿಗಳ ನೀರಿನಿಂದ ನೀರಾವರಿ ಮಾಡಿ ಮತ್ತು ಬೀಜವು ಫಲಪ್ರದವಾಗುತ್ತದೆ. ಇಲ್ಲವಾದರೆ ಹಿಗ್ಗಿದ ಮರವೂ ಆಗಾಗ ಮುರಿದು ಬೀಳುತ್ತದೆ, ಬಿರುಗಾಳಿಗೆ ಅಲುಗಾಡುತ್ತದೆ, ಅಲುಗಾಡುತ್ತದೆ, ಅಂದರೆ ಮುಂದೆ ಸಾಗಲು ಉತ್ಸಾಹ, ಉತ್ಸಾಹ, ಸಂತೋಷ ಅಥವಾ ಆಧ್ಯಾತ್ಮಿಕ ಅಮಲು ಇರುವುದಿಲ್ಲ. ಆದ್ದರಿಂದ, ಕ್ರಮಬದ್ಧವಾಗಿ ಶಕ್ತಿಯುತ ಬೀಜವನ್ನು ಫಲಪ್ರದಗೊಳಿಸಿ.

ಸ್ಲೋಗನ್:

ಅನುಭವದ ಕೊಡುಗೆಗಳನ್ನು ಹಂಚುವ ಮೂಲಕ ಅಶಕ್ತರನ್ನು ಮಾಡುವುದು - ಇದು ದೊಡ್ಡ ಪುಣ್ಯ.

 Download PDF

Post a Comment

0 Comments