Header Ads Widget

Header Ads

KANNADA MURLI 23.01.23

 

23/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಪವಿತ್ರತೆಯ ವಿನಃ ಭಾರತ ಸ್ವರ್ಗವಾಗಲು ಸಾಧ್ಯವಿಲ್ಲ, ತಮಗೆ ಶ್ರೀಮತವಿದೆ, ಮನೆ ಗೃಹಸ್ಥದಲ್ಲಿ ಇರುತ್ತಾ ಪವಿತ್ರರಾಗಿ, ಎರಡು ಕಡೆ ಸಂಬಂಧವನ್ನು ನಿಭಾಯಿಸಿ

ಪ್ರಶ್ನೆ:

ಬೇರೆ ಸತ್ಸಂಗಗಳು ಹಾಗೂ ಆಶ್ರಮಗಳಿಗಿಂತ ಇಲ್ಲಿಯ ಯಾವ ಸಂಪ್ರದಾಯ ಸಂಪೂರ್ಣ ಭಿನ್ನವಾಗಿದೆ?

ಉತ್ತರ:

ಆಶ್ರಮಗಳಲ್ಲಿ ಮನುಷ್ಯರು ಹೋಗಿ ಇರುತ್ತಾರೆ. ತಿಳಿದುಕೊಳ್ಳುತ್ತಾರೆ - ಸಂಗ ಚೆನ್ನಾಗಿದೆ, ಮನೆ ಇತ್ಯಾದಿಗಳ ಗಲಾಟೆ ಇಲ್ಲ. ಅವರಿಗೆ ಗುರಿ ಏನೂ ಇಲ್ಲ. ಆದರೆ ಇಲ್ಲಿ ತಾವು ಮರುಜೀವಿಗಳಾಗುತ್ತೀರಿ, ತಮಗೆ ಮನೆ ಮಠವನ್ನು ಬಿಡಿಸುವುದಿಲ್ಲ. ಮನೆಯಲ್ಲೇ ಇದ್ದು ತಾವು ಜ್ಞಾನಾಮೃತವನ್ನು ಕುಡಿಯಬೇಕು, ಆತ್ಮೀಯ ಸೇವೆಯನ್ನು ಮಾಡಬೇಕು. ಸಂಪ್ರದಾಯ ಸತ್ಸಂಗಗಳಲ್ಲಿ ಇಲ್ಲ.

ಓಂ ಶಾಂತಿ: ಬಾಬಾ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಏಕೆಂದರೆ ಮಕ್ಕಳಿಗೆ ಗೊತ್ತಿದೆ ಇಲ್ಲಿ ತಂದೆಯೇ ತಿಳಿಸುತ್ತಾರೆಂದು. ಆದ್ದರಿಂದ ಪದೇ-ಪದೇ ಶಿವಭಗವಾನುವಾಚ ಎಂದು ಹೇಳುವುದೂ ಸಹ ಚೆನ್ನಾಗಿರುವುದಿಲ್ಲ. ಗೀತೆಯನ್ನು ಹೇಳುವವರು ಹೇಳುತ್ತಾರೆ ಕೃಷ್ಣ ಭಗವಾನುವಾಚ. ಅವರು ಇದ್ದು ಹೋಗಿದ್ದಾರೆ. ಕೃಷ್ಣ ಗೀತೆಯನ್ನು ಹೇಳಿದ್ದ, ರಾಜಯೋಗವನ್ನು ಕಲಿಸಿದ್ದ ಎಂದು ಹೇಳುತ್ತಾರೆ. ಇಲ್ಲಿ ನಮಗೆ ಶಿವಬಾಬಾ ರಾಜಯೋಗವನ್ನು ಕಲಿಸುತ್ತಿದ್ದಾರೆ. ಬೇರೆ ಯಾವುದೇ ಸತ್ಸಂಗದಲ್ಲಿ ರಾಜಯೋಗವನ್ನು ಕಲಿಸುವುದಿಲ್ಲ ಎಂದು ತಾವು ಮಕ್ಕಳು ತಿಳಿದಿದ್ದೀರಿ. ತಂದೆಯು ಹೇಳುತ್ತಾರೆ ನಾನು ತಮ್ಮನ್ನು ರಾಜರಿಗಿಂತಲೂ ರಾಜರನ್ನಾಗಿ ಮಾಡುತ್ತೇನೆ. ಅವರು ಕೇವಲ ರೀತಿ ಹೇಳುತ್ತಾರೆ - ಕೃಷ್ಣ ಭಗವಾನುವಾಚ ಮನ್ಮನಾಭವ ಎಂದು. ಯಾವಾಗ ಹೇಳಿದ್ದರು? 5000 ವರ್ಷದ ಮೊದಲು ಅಥವಾ ಕೆಲವರು ಹೇಳುತ್ತಾರೆ - ಕ್ರಿಸ್ತನಗಿಂತ 3000 ವರ್ಷದ ಮೊದಲು ಎಂದು. 2000 ವರ್ಷಗಳು ಎಂದು ಹೇಳುವುದಿಲ್ಲ ಏಕೆಂದರೆ ಮಧ್ಯದಲ್ಲಿ 1000 ವರ್ಷವಿದೆ ಅದರಲ್ಲಿ ಇಸ್ಲಾಮಿ ಬೌದ್ಧರು ಬರುತ್ತಾರೆ. ಅಂದಮೇಲೆ ಕ್ರಿಸ್ತನಿಗಿಂತ 3000 ವರ್ಷದ ಮೊದಲು ಸತ್ಯಯುಗ ಸಿದ್ಧವಾಗುತ್ತದೆ. ನಾವು ಹೇಳುತ್ತೇವೆ - ಇಂದಿಗೆ 5000 ವರ್ಷಗಳ ಮೊದಲು ಗೀತೆಯನ್ನು ಹೇಳುವಂತಹ ಭಗವಂತ ಬಂದಿದ್ದರು ಹಾಗೂ ಬಂದು ದೇವೀ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದರು. ಈಗ 5000 ವರ್ಷದ ನಂತರ ಮತ್ತೆ ಅವರು ಬರಬೇಕಾಯಿತು. ಇದು 5000 ವರ್ಷದ ಚಕ್ರವಾಯಿತು. ತಂದೆ ಇವರ ಮೂಲಕ ತಿಳಿಸುತ್ತಿದ್ದಾರೆ ಎಂದು ತಾವು ಮಕ್ಕಳಿಗೆ ತಿಳಿದಿದೆ. ಜಗತ್ತಿನಲ್ಲಿ ಅನೇಕ ಪ್ರಕಾರದ ಸತ್ಸಂಗಗಳು ಇವೆ ಅಲ್ಲಿಗೆ ಮನುಷ್ಯರು ಹೋಗುತ್ತಾರೆ. ಕೆಲವರು ಆಶ್ರಮಗಳಲ್ಲಿ ಹೋಗಿ ಇರುತ್ತಾರೆ. ಆದರೆ ನಾವು ತಾಯಿ-ತಂದೆಯ ಬಳಿ ಜನ್ಮ ಪಡೆದಿದ್ದೇವೆ ಅವರಿಂದ ನಮಗೆ ಆಸ್ತಿ ಸಿಗುತ್ತದೆ ಎಂದು ಅವರೇನೂ ತಿಳಿಯುವುದಿಲ್ಲ. ಕೇವಲ ಸಂಗ ಚೆನ್ನಾಗಿದೆ ಎಂದಷ್ಟೆ ತಿಳಿಯುತ್ತಾರೆ. ಅಲ್ಲಿ ಮನೆ-ಇತ್ಯಾದಿಯ ಯಾವುದೇ ಗಲಾಟೆ ಇರುವುದಿಲ್ಲ. ಬಾಕಿ ಅವರಿಗೆ ಯಾವುದೇ ಗುರಿ ಇರುವುದಿಲ್ಲ. ಇಲ್ಲಿ ನಾವು ತಾಯಿ-ತಂದೆಯ ಬಳಿ ಬಂದಿದ್ದೇವೆ ಎಂದು ಹೇಳುತ್ತೀರಿ. ಇದು ನಮ್ಮೆಲ್ಲರ ಮರುಜೀವಾ ಜನ್ಮವಾಗಿದೆ. ಮನುಷ್ಯರು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಅದು ಹೋಗಿ ಅವರ ಮನೆ ತುಂಬುತ್ತದೆ. ಇಲ್ಲಿ ತಂದೆ ಮನೆ, ಅತ್ತೆ ಮನೆಯನ್ನು ಬಿಟ್ಟು ಇಲ್ಲಿ ಬಂದು ಕುಳಿತುಕೊಳ್ಳಬೇಕೆಂಬ ಸಂಪ್ರದಾಯವಿಲ್ಲ. ಇಲ್ಲಿ ಗೃಹಸ್ಥದಲ್ಲಿ ಇರುತ್ತಾ ಕಮಲಪುಷ್ಪ ಸಮಾನರಾಗಿರಬೇಕು. ಕುಮಾರಿಯಾಗಿರಲಿ ಅಥವಾ ಯಾರೇ ಆಗಿರಲಿ ಅವರಿಗೆ ಮನೆಯಲ್ಲಿ ಇದ್ದು ಪ್ರತಿ ನಿತ್ಯ ಜ್ಞಾನಾಮೃತವನ್ನು ಕುಡಿಯಲು ಬನ್ನಿ ಎಂದು ಹೇಳಲಾಗುತ್ತದೆ. ಜ್ಞಾನವನ್ನು ತಿಳಿದುಕೊಂಡು ನಂತರ ಅನ್ಯರಿಗೆ ತಿಳಿಸಿ ಎರಡೂ ಕಡೆ ಸಂಬಂಧವನ್ನು ನಿಭಾಯಿಸಿ, ಗೃಹಸ್ಥ ವ್ಯವಹಾರದಲ್ಲಿ ಇರಬೇಕು. ಅಂತಿಮದವರೆಗೂ ಎರಡೂ ಕಡೆ ನಿಭಾಯಿಸಬೇಕು. ಅಂತಿಮದಲ್ಲಿ ಇಲ್ಲಿಯೇ ಇರಲಿ ಅಥವಾ ಅಲ್ಲಿಯೇ ಇರಲಿ ಮೃತ್ಯುವಂತೂ ಎಲ್ಲರಿಗೂ ಬರಲೇ ಬೇಕು. ಹೇಳುತ್ತಾರೆರಾಮ ಹೋದ, ರಾವಣ ಹೋದ............... ಎಲ್ಲರೂ ಬಂದು ಇಲ್ಲಿಯೇ ಇರಬೇಕು ರೀತಿ ಅಲ್ಲ. ಯಾವಾಗ ವಿಷಕ್ಕಾಗಿ ಸತಾಯಿಸುತ್ತಾರೋ ಆಗ ಇಲ್ಲಿ ಇರಬಹುದು. ಕನ್ಯೆಯರೂ ಮನೆಯಲ್ಲಿಯೇ ಇರಬೇಕು. ಮಿತ್ರ ಸಂಬಂಧಿಕರ ಸರ್ವೀಸ್ ಮಾಡಬೇಕು. ಸಮಾಜ ಸೇವಕರು ಅನೇಕರಿದ್ದಾರೆ. ಸರ್ಕಾರ ಎಲ್ಲರನ್ನೂ ತಮ್ಮ ಬಳಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವರು ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರುತ್ತಾರೆ. ಏನಾದರೂ ಸೇವೆಯನ್ನು ಮಾಡುತ್ತಾರೆ. ಇಲ್ಲಿ ತಾವು ಆತ್ಮೀಯ ಸೇವೆಯನ್ನು ಮಾಡಬೇಕು. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು. ಹಾ! ಯಾವಾಗ ವಿಕಾರಕ್ಕಾಗಿ ಬಹಳ ತೊಂದರೆ ಕೊಡುತ್ತಾರೆ ಆಗ ಬಂದು ಆಶ್ರಯ ಪಡೆಯಬೇಕು. ಇಲ್ಲಿ ವಿಷದ ಕಾರಣವೇ ಹೆಣ್ಣು ಮಕ್ಕಳು ಬಹಳ ಪೆಟ್ಟು ತಿನ್ನುತ್ತಾರೆ. ಬೇರೆ ಎಲ್ಲಿಯೂ ಮಾತುಗಳಿಲ್ಲ. ಇಲ್ಲಂತೂ ಪವಿತ್ರರಾಗಿರಬೇಕಾಗುತ್ತದೆ. ಸರ್ಕಾರವೂ ಪವಿತ್ರತೆಯನ್ನು ಬಯಸುತ್ತದೆ. ಆದರೆ ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಪವಿತ್ರರನ್ನಾಗಿ ಮಾಡುವ ಕಲೆ ಈಶ್ವರನಲ್ಲಿಯೇ ಇದೆ. ಸಮಯ ರೀತಿ ಇದೆ ಸರ್ಕಾರವೂ ಸಹ ಇಚ್ಛಿಸುತ್ತದೆ - ಮಕ್ಕಳ ಜನ್ಮ ಹೆಚ್ಚಾಗಬಾರದೆಂದು ಏಕೆಂದರೆ ಬಹಳ ಬಡವರಿದ್ದಾರೆ. ಅಂದಮೇಲೆ ಎಲ್ಲರೂ ಬಯಸುತ್ತಾರೆ - ಭಾರತದಲ್ಲಿ ಪವಿತ್ರತೆ ಇರಲಿ, ಮಕ್ಕಳು ಕಡಿಮೆ ಇರಲಿ.

ತಂದೆ ಹೇಳುತ್ತಾರೆ - ಮಕ್ಕಳೇ ಪವಿತ್ರರಾಗಿ ಆಗ ಪವಿತ್ರ ಜಗತ್ತಿಗೆ ಮಾಲೀಕರಾಗುತ್ತೀರಿ. ಮಾತುಗಳು ಅವರ ಬುದ್ಧಿಯಲ್ಲಿ ಇಲ್ಲ. ಭಾರತ ಪವಿತ್ರವಾಗಿತ್ತು ಈಗ ಅಪವಿತ್ರವಾಗಿದೆ. ಎಲ್ಲಾ ಆತ್ಮಗಳು ಪವಿತ್ರರಾಗಬೇಕೆಂದು ಸ್ವಯಂ ಇಚ್ಛಿಸುತ್ತಾರೆ. ಇಲ್ಲಿ ಬಹಳ ದುಃಖವಿದೆ. ತಾವು ಮಕ್ಕಳಿಗೆ ಗೊತ್ತಿದೆ - ಪವಿತ್ರತೆ ವಿನಃ ಭಾರತ ಸ್ವರ್ಗವಾಗಲು ಸಾಧ್ಯವಿಲ್ಲ. ನರಕದಲ್ಲಿ ದುಃಖವಿದೆ ಈಗ ನರಕವೆಂದರೆ ಬೇರೆ ಯಾವುದೇ ವಸ್ತುವಲ್ಲ. ಹೇಗೆ ಗರುಡ ಪುರಾಣದಲ್ಲಿ ತೋರಿಸಿದ್ದಾರೆ ವೈತರಣಿ ನದಿ ಇದೆ, ಅದರಲ್ಲಿ ಮನುಷ್ಯರು ಮುಳುಗುತ್ತಿದ್ದಾರೆ ಎಂದು. ರೀತಿ ಶಿಕ್ಷೆಯನ್ನು ಅನುಭವಿಸುವಂತಹ ಯಾವುದೇ ನದಿಗಳು ಇಲ್ಲ. ಶಿಕ್ಷೆಯಂತೂ ಗರ್ಭದ ಜೈಲಿನಲ್ಲಿ ಸಿಗುತ್ತದೆ. ಸತ್ಯಯುಗದಲ್ಲಿ ಶಿಕ್ಷೆಗಳು ಸಿಗುವಂತಹ ಗರ್ಭದ ಜೈಲ್ ಇರುವುದಿಲ್ಲ. ಗರ್ಭದ ಮಹಲ್ ಇರುತ್ತದೆ. ಸಮಯದಲ್ಲಿ ಇಡೀ ಜಗತ್ತು ಸಂಪೂರ್ಣ ನರಕವಾಗಿದೆ. ಇಲ್ಲಿ ಮನುಷ್ಯರು ದುಃಖಿಗಳು ರೋಗಿಗಳು ಆಗಿದ್ದಾರೆ. ಪರಸ್ಪರದಲ್ಲಿ ದುಃಖವನ್ನೇ ಕೊಡುತ್ತಿರುತ್ತಾರೆ. ಸ್ವರ್ಗದಲ್ಲಿ ಇದು ಯಾವುದೂ ಇರುವುದಿಲ್ಲ. ತಂದೆ ಈಗ ತಿಳಿಸುತ್ತಾರೆ - ನಾನು ನಿಮ್ಮೆಲ್ಲರ ಬೇಹದ್ದಿನ ತಂದೆಯಾಗಿದ್ದೇನೆ. ನಾನು ರಚಯಿತನಾಗಿದ್ದೇನೆ. ಅವಶ್ಯವಾಗಿ ಸ್ವರ್ಗ ಹೊಸ ಜಗತ್ತನ್ನು ರಚಿಸುತ್ತೇನೆ. ಸ್ವರ್ಗಕ್ಕಾಗಿ ಆದಿ ಸನಾತನ ದೇವೀ-ದೇವತಾ ಧರ್ಮವನ್ನು ರಚಿಸುತ್ತೇನೆ. ಹೇಳುತ್ತಾರೆ - ತಾವೇ ಮಾತಾ-ಪಿತರಾಗಿದ್ದೀರಿ....... ಅವರು ಕಲ್ಪ-ಕಲ್ಪದಲ್ಲೂ ರಾಜಯೋಗವನ್ನು ಕಲಿಸಿದರು. ಬ್ರಹ್ಮಾರವರ ಮೂಲಕ ಕುಳಿತು ಎಲ್ಲಾ ವೇದ-ಶಾಸ್ತ್ರಗಳ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಸಂಪೂರ್ಣ ಅವಿದ್ಯಾವಂತರಿಗೆ ಕುಳಿತು ಓದಿಸುತ್ತಾರೆ. ಹೇ! ಭಗವಂತ ಬನ್ನಿ ಎಂದು ತಾವು ಹೇಳುತ್ತಿದ್ದೀರಲ್ಲವೇ! ಪತಿತರು ಅಲ್ಲಿ ಹೋಗಲು ಸಾಧ್ಯವಿಲ್ಲ. ಪಾವನರನ್ನಾಗಿ ಮಾಡಲು ಅವಶ್ಯವಾಗಿ ಅವರು ಇಲ್ಲಿಯೇ ಬರಬೇಕಾಯಿತು. ಕಲ್ಪದ ಮೊದಲೂ ಸಹ ನಿಮಗೆ ರಾಜಯೋಗವನ್ನು ಕಲಿಸಿದ್ದೆ ಎಂದು ತಂದೆ ನೆನಪು ತರಿಸುತ್ತಾರೆ. ಕೇಳುತ್ತಾರೆ - ಮೊದಲು ಎಂದಾದರೂ ಜ್ಞಾನವನ್ನು ಪಡೆದಿದ್ದೀರಾ? ಆಗ ಹೇಳುತ್ತಾರೆ - ಹಾ! 5000 ವರ್ಷಗಳ ಮೊದಲು ನಾವು ಜ್ಞಾನವನ್ನು ಪಡೆದಿದ್ದೆವು. ಮಾತು ಹೊಸದಾಗಿದೆ. ಹೊಸಯುಗ, ಹೊಸ ಧರ್ಮ ಮತ್ತೆ ಸ್ಥಾಪನೆ ಆಗುತ್ತಿದೆ. ಈಶ್ವರನ ವಿನಃ ದೈವೀ ಧರ್ಮವನ್ನು ಯಾರೂ ಸ್ಥಾಪಿಸಲು ಸಾಧ್ಯವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಸ್ಥಾಪಿಸುವುದಿಲ್ಲ ಏಕೆಂದರೆ ಅವರು ದೇವತೆಗಳು ರಾಚನೆಯಾಗಿದ್ದಾರೆ. ಸ್ವರ್ಗದ ರಚಯಿತ, ಮಾತಾ-ಪಿತರು ಬೇಕು. ತಮಗೆ ಸುಖ ಐಶ್ವರ್ಯವೂ ಸಹ ಇಲ್ಲಿಯೇ ಬೇಕಾಗಿದೆ. ತಂದೆಯು ಹೇಳುತ್ತಾರೆ ನಾನು ಒಬ್ಬನೇ ರಚಯಿತನಾಗಿದ್ದೇನೆ. ನಿಮ್ಮನ್ನೂ ಸಹ ಬ್ರಹ್ಮಾರವರ ಮುಖದ ಮೂಲಕ ನಾನೇ ರಚಿಸಿದ್ದೇನೆ. ನಾನು ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದೇನೆ. ಭಲೆ ಯಾರು ಎಷ್ಟೇ ಸಾಧು-ಸಂತರು ಇರಬಹುದು, ಆದರೆ ಯಾರ ಮುಖದಿಂದಲೂ ಶಬ್ದವು ಬರುವುದಿಲ್ಲ. ಇದು ಗೀತೆಯ ಅಕ್ಷರವಾಗಿದೆ ಆದರೆ ಹಿಂದೆ ಯಾರು ಹೇಳಿದರೋ ಅವರು ಮಾತ್ರ ಹೇಳಬಹುದು. ಬೇರೆ ಯಾರೂ ಹೇಳುವುದಿಲ್ಲ. ನಿರಾಕಾರನ ಬದಲು ಕೃಷ್ಣನು ಭಗವಂತ ಎಂದು ಹೇಳಿ ಸ್ವಲ್ಪ ವ್ಯತ್ಯಾಸವಾಗಿದೆ. ತಂದೆಯು ಹೇಳುತ್ತಾರೆ ನಾನು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ. ಪರಮಧಾಮದಲ್ಲಿ ಇರುವಂತಹ ನಿರಾಕಾರ ಪರಮಾತ್ಮನಾಗಿದ್ದೇನೆ. ತಾವೂ ಸಹ ಅರ್ಥ ಮಾಡಿಕೊಳ್ಳಬಹುದು - ಸಾಕಾರ ಮನುಷ್ಯರು ತಮ್ಮನ್ನು ಬೀಜರೂಪಿ ಎಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರೂ ಸಹ ಹೇಳುವುದಿಲ್ಲ ಅಂದಮೇಲೆ ಇದು ಗೊತ್ತಿದೆ - ನಮ್ಮನ್ನು ರಚನೆ ಮಾಡುವವರು ಶಿವಬಾಬಾ ಆಗಿದ್ದಾರೆ. ನಾನು ದೈವೀ ಧರ್ಮವನ್ನು ಸ್ಥಾಪನೆ ಮಡುತ್ತಿದ್ದೇನೆ ಎಂದು ಹೇಳುವುದಕ್ಕೆ ಯಾರಿಗೂ ಶಕ್ತಿ ಇಲ್ಲ. ಭಲೆ ತಮ್ಮನ್ನು ಕೃಷ್ಣ ಎಂದು ಹೇಳಿಕೊಳ್ಳಬಹುದು, ಬ್ರಹ್ಮಾ ಎಂದು ಹೇಳಬಹುದು, ಶಂಕರ ಎಂದು ಹೇಳಬಹುದು...... ಅನೇಕರು ತಮ್ಮನ್ನು ಅವತಾರ ಎಂದು ಹೇಳಿಕೊಳ್ಳುತ್ತಾರೆ ಆದರೆ ಅದೆಲ್ಲವೂ ಸುಳ್ಳು. ಇಲ್ಲಿ ಬಂದು ಕೇಳಿದಾಗ ಖಂಡಿತ ತಂದೆ ಒಬ್ಬರೇ ಆಗಿದ್ದಾರೆ, ಆವತಾರವೂ ಸಹ ಒಬ್ಬರದೇ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ತಂದೆ ಹೇಳುತ್ತಾರೆ ನಾನು ನಿಮ್ಮನ್ನು ಜೊತೆಯಲ್ಲಿ ಕರೆದೊಯ್ಯುತ್ತೇನೆ. ರೀತಿ ಹೇಳಲೂ ಸಹ ಯಾರಿಗೂ ಶಕ್ತಿ ಇಲ್ಲ. 5000 ವರ್ಷದ ಮೊದಲು ಗೀತೆಯ ಭಗವಂತ ಶಿವಬಾಬಾರವರೇ ಹೇಳಿದರು. ಅವರೇ ಆದಿ ಸನಾತನ ಧರ್ಮದ ಸ್ಥಾಪನೆಯನ್ನು ಮಾಡಿದರು ಅವರೇ ಈಗಲೂ ಮಾಡುತ್ತಿದ್ದಾರೆ. ಸೊಳ್ಳೆಗಳ ಹಾಗೆ ಎಲ್ಲಾ ಆತ್ಮಗಳು ಹೋಗುತ್ತವೆ ಎಂದು ಗಾಯನವಿದೆ. ತಂದೆ ಮಾರ್ಗದರ್ಶಕರಾಗಿ ಎಲ್ಲರನ್ನು ಬಿಡುಗಡೆ ಮಾಡುತ್ತಾರೆ. ಈಗ ಕಲಿಯುಗದ ಅಂತ್ಯವಾಗಿದೆ. ಇದರ ನಂತರ ಸತ್ಯಯುಗ ಬರಲೇಬೇಕು. ಅಂದಮೇಲೆ ಅವಶ್ಯವಾಗಿ ಪವಿತ್ರರನ್ನಾಗಿ ಮಾಡಿ ಪವಿತ್ರ ಜಗತ್ತಿಗೆ ಕರೆದೊಯ್ಯುತ್ತಾರೆ. ಗೀತೆಯಲ್ಲಿ ಕೆಲವು ಅಕ್ಷರಗಳು ಸರಿ ಇದೆ. ಧರ್ಮಕ್ಕಾಗಿ ಶಾಸ್ತ್ರವು ಬೇಕು ಎಂದು ಗೀತಾ ಶಾಸ್ತ್ರವನ್ನು ಮಾಡುತ್ತಾರೆ. ಸರ್ವ ಶಾಸ್ತ್ರಮಯೀ ಶಿರೋಮಣಿ ನಂಬರ್ವನ್ ಮಾತೆಯಾಗಿದೆ. ಆದರೆ ಹೆಸರು ಬದಲಾಗಿದೆ. ಯಾವ ತಂದೆ ಸಮಯದಲ್ಲಿ ಪಾತ್ರ ಮಾಡುತ್ತಿದ್ದಾರೋ ಅವರು ದ್ವಾಪರಯುಗದಲ್ಲಿ ಬರೆಯುತ್ತಾರೇನು? ನಂತರ ಅದೇ ಗೀತೆ ತಯಾರಾಗುತ್ತದೆ. ಡ್ರಾಮಾದಲ್ಲಿ ಇದೇ ಗೀತೆ ನಿಗದಿಯಾಗಿದೆ. ಹೇಗೆ ತಂದೆ ಮತ್ತೆ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ ಹಾಗೆಯೇ ಶಾಸ್ತ್ರವೂ ಸಹ ನಂತರ ಅದೇ ರೀತಿ ಕುಳಿತು ಬರೆಯುತ್ತಾರೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರವಿಲ್ಲ. ತಂದೆ ಪೂರ್ಣ ಚಕ್ರದ ರಹಸ್ಯವನ್ನು ಕುಳಿತು ತಿಳಿಸುತ್ತಾರೆ. 84 ಜನ್ಮಗಳ ಚಕ್ರ ಈಗ ನಾವು ಪೂರ್ಣ ಮಾಡಿದ್ದೇವೆ ಎಂದು ನಿಮಗೆ ಅರ್ಥವಾಗಿದೆ. ಆದಿ ಸನಾತನ ದೇವೀ-ದೇವತಾ ಧರ್ಮದವರು ಹೆಚ್ಚು ಎಂದರೆ 84 ಜನ್ಮಗಳನ್ನು ಪಡೆಯುತ್ತಾರೆ. ಬಾಕಿ ಮನುಷ್ಯರದು ನಂತರ ವೃದ್ಧಿ ಆಗುತ್ತದೆ. ಅವರು ಇಷ್ಟೊಂದು ಜನ್ಮ ಪಡೆಯುತ್ತಾರೇನು? ತಂದೆ ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ - ಯಾವ ದಾದಾ ಇದ್ದಾರೆ ಯಾರ ತನುವಿನ ಆಧಾರ ಪಡೆದಿದ್ದಾರೆ ಅವರೂ ಸಹ ಅವರ ಜನ್ಮಗಳನ್ನು ತಿಳಿದಿಲ್ಲ. ಇವರು ವ್ಯಕ್ತ- ಪ್ರಜಾಪಿತ ಬ್ರಹ್ಮಾ. ಅವರು ಅವ್ಯಕ್ತರಾಗಿದ್ದಾರೆ, ಆದರೆ ಇಬ್ಬರೂ ಒಂದೇ. ತಾವೂ ಸಹ ಜ್ಞಾನದಿಂದ ಸೂಕ್ಷ್ಮ ವತನವಾಸಿ ಫರಿಸ್ಥೆಗಳು ಆಗುತ್ತಿದ್ದೀರಿ. ಸೂಕ್ಷ್ಮವತನವಾಸಿಗಳಿಗೆ ಫರಿಸ್ಥೆಗಳು ಎಂದು ಹೇಳಲಾಗುತ್ತದೆ ಏಕೆಂದರೆ ಮೂಳೆ ಮಾಂಸ ಇರುವುದಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಮೂಳೆ-ಮಾಂಸ ಇರುವುದಿಲ್ಲ ಆದರೆ ಅವರ ಚಿತ್ರವನ್ನು ಹೇಗೆ ಮಾಡುತ್ತಾರೆ. ಶಿವನ ಚಿತ್ರವನ್ನೂ ಮಾಡುತ್ತಾರೆ ಆದರೆ ಅವರು ಬಿಂದು ಆಗಿದ್ದಾರೆ. ಅವರದೂ ಸಹ ರೂಪವನ್ನು ಮಾಡುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವಾಗಿದ್ದಾರೆ. ಮನುಷ್ಯರ ಚಿತ್ರವನ್ನು ಹೇಗೆ ಮಾಡುತ್ತಾರೋ ರೀತಿ ಶಂಕರನದ್ದು ಮಾಡಲು ಸಾಧ್ಯವಿಲ್ಲ ಏಕೆಂದರೆ ಅವನಿಗೆ ಮಾಂಸ ಮೂಳೆಯ ಶರೀರವಿಲ್ಲ. ನಾವು ತಿಳಿಸುವುದಕ್ಕೋಸ್ಕರ ರೀತಿ ಸ್ಥೂಲ ಚಿತ್ರವನ್ನು ಮಾಡುತ್ತೇವೆ ಆದರೆ ತಾವು ನೋಡುತ್ತೀರಿ ಅವರು ಸೂಕ್ಷ್ಮವಾಗಿದ್ದಾರೆ ಎಂದು ಗೊತ್ತಾಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ರಾತ್ರಿ ಕ್ಲಾಸ್: 13-07-68

ಮನುಷ್ಯ ಎರಡು ವಸ್ತುಗಳನ್ನು ಅವಶ್ಯವಾಗಿ ಬಯಸುತ್ತಾನೆ. ಒಂದಾಗಿದೆ ಶಾಂತಿ, ಇನ್ನೊಂದು ಸುಖ. ವಿಶ್ವದಲ್ಲಿ ಶಾಂತಿ ಅಥವಾ ತಮಗಾಗಿ ಶಾಂತಿ. ಮನುಷ್ಯರಿಗೆ ವಿಶ್ವದಲ್ಲಿ ಸುಖ ಅಥವಾ ತಮಗಾಗಿ ಸುಖದ ಇಚ್ಛೆಯಿರುತ್ತದೆ. ಕೇಳಬೇಕು ಈಗ ಅಶಾಂತಿಯಿದೆ ಅಂದಾಗ ಯಾವತ್ತೋ ಶಾಂತಿ ಇದ್ದಿರಬೇಕು. ಆದರೆ ಅದು ಯಾವತ್ತು ಮತ್ತು ಹೇಗಿತ್ತು, ಅಶಾಂತಿ ಏಕೆ ಆಯಿತು, ಇದು ಯಾರಿಗೂ ಗೊತ್ತಿಲ್ಲ ಏಕೆಂದರೆ ಘೋರ ಅಂಧಕಾರದಲ್ಲಿದ್ದಾರೆ. ನೀವು ಶಾಂತಿ ಮತ್ತು ಸುಖಗಾಗಿ ಎಲ್ಲರಿಗೆ ಬಹಳ ಒಳ್ಳೆಯ ದಾರಿಯನ್ನು ತೋರಿಸುತ್ತೀರಿ. ಕೇಳಿದಾಗ ಅವರಿಗೆ ಖುಷಿಯಾಗುತ್ತದೆ, ಆದರೆ ಯಾವಾಗ ಪಾವನರಾಗಬೇಕೆಂದು ಕೇಳಿದಾಗ ತಣ್ಣಗಾಗಿ ಬಿಡುತ್ತಾರೆ. ಇದು ವಿಕಾರವಾಗಿದೆ ಎಲ್ಲರ ಶತ್ರುವಾಗಿದೆ, ಮತ್ತೆ ಎಲ್ಲರ ಪ್ರಿಯವು ಆಗಿದೆ. ಇದನ್ನು ಬಿಡುವುದರಲ್ಲಿ ಹೃದಯ ವಿಧಿರ್ಣವಾಗುತ್ತದೆ. ಹೆಸರೇ ಆಗಿದೆ ವಿಷ. ಆದರೂ ಬಿಡುವುದಿಲ್ಲ. ನೀವು ಎಷ್ಟು ತಲೆಯನ್ನು ಕೆಡಿಸಿಕೊಳ್ಳುತ್ತೀರಿ ಆದರು ಸೋತು ಹೋಗುತ್ತೀರಿ. ಎಲ್ಲವು ಪವಿತ್ರತೆಯ ಮಾತಾಗಿದೆ. ಇದರಲ್ಲಿ ಬಹುತೇಕರು ಫೇಲ್ ಆಗುತ್ತಾರೆ. ಯಾರೇ ಕನ್ಯೆಯನ್ನು ನೋಡಿದರೆ ಆಕರ್ಷಣೆ ಆಗುತ್ತಾರೆ. ಕ್ರೋಧ ಅಥವಾ ಲೋಭ ಅಥವಾ ಮೋಹದ ಆಕರ್ಷಣೆವಾಗುವುದಿಲ್ಲ. ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ಜಯ ಪಡೆಯುವುದು ಮಹಾವೀರರ ಕೆಲಸವಾಗಿದೆ. ದೇಹ ಅಭಿಮಾನದ ನಂತರ ಕಾಮವೇ ಬರುತ್ತದೆ. ಇದರ ಮೇಲೆ ಜಯಗಳಿಸಬೇಕು. ಯಾರು ಪವಿತ್ರರಾಗಿರುತ್ತಾರೆ ಅವರ ಮುಂದೆ ಅಪವಿತ್ರ ಕಾಮಿ ಮನುಷ್ಯರು ತಲೇ ಬಾಗುತ್ತಾರೆ. ಹೇಳುತ್ತಾರೆ ನಾವು ವಿಕಾರಿಗಳು, ನೀವು ನಿರ್ವಿಕಾರಿಗಳು. ರೀತಿ ಹೇಳುವುದಿಲ್ಲ ನಾವು ಕ್ರೋಧಿಗಳು, ಲೋಭಿಗಳು.... ಎಲ್ಲ ಮಾತುಗಳು ವಿಕಾರದ್ದಾಗಿದೆ. ಮದುವೆಯಾಗುವುದೇ ವಿಕಾರಕ್ಕಾಗಿ, ತಂದೆ-ತಾಯಿಗಂತು ಚಿಂತೆಯಿರುತ್ತದೆ. ದೊಡ್ಡವರಾದರೆ ಹಣವನ್ನು ಕೊಡುತ್ತಾರೆ, ವಿಕಾರದಲ್ಲೂ ಸಹ ಹೋಗುತ್ತಾರೆ. ವಿಕಾರದಲ್ಲಿ ಹೋಗುವುದಿಲ್ಲವೆಂದರೆ ಜಗಳವಾಗುತ್ತದೆ. ನೀವು ಮಕ್ಕಳು ತಿಳಿಸಬೇಕಾಗುತ್ತದೆ (ದೇವತೆಗಳು) ಸಂಪೂರ್ಣ ನಿರ್ವಿಕಾರಿಗಳಾಗಿದ್ದರು ನಮ್ಮ ಹತ್ತಿರ ಗುರಿ ಉದ್ದೇಶ ಎದುರುಗಡೆ ಇದೆ. ನರದಿಂದ ನಾರಾಯಣ, ರಾಜರಿಗಿಂತ ರಾಜರಾಗಬೇಕಾಗಿದೆ. ಚಿತ್ರ ಮುಂದೆ ಇದೆ. ಇದಕ್ಕೆ ಸತ್ಸಂಗ ಎಂದು ಹೆಳಲಾಗುತ್ತದೆ. ಇದು ಪಾಠಶಾಲೆಯಾಗಿದೆ. ಸತ್ಯ ಸತ್ಸಂಗ ತಂದೆಯ ಜೊತೆಯಲ್ಲಿ ಇದ್ದಾಗ ಯಾವಾಗ ಸನ್ಮುಖದಲ್ಲಿ ರಾಜಯೋಗವನ್ನು ಕಲಿಸಿದಾಗ ಸತ್ಯವಾದ ಸಂಗ ಬೇಕಾಗಿದೆ. ಅವರೇ ಗೀತೆಯ ಜ್ಞಾನವನ್ನು ಕೊಡುತ್ತಾರೆ ಅರ್ಥಾತ್ ರಾಜಯೋಗವನ್ನು ಕಲಿಸಿಕೊಡುತ್ತಾರೆ. ತಂದೆ ಯಾವುದೇ ಗೀತೆಯನ್ನು ತಿಳಿಸುವುದಿಲ್ಲ. ಮನುಷ್ಯರು ತಿಳಿಯುತ್ತಾರೆ. ಹೆಸರು ಗೀತೆ ಪಾಠಶಾಲೆಯಾಗಿದೆ ಅಂದಾಗ ಹೋಗಿ ಗೀತೆಯನ್ನು ಕೇಳೋಣ. ಎಷ್ಟು ಆಕರ್ಷಣೆಯಾಗುತ್ತದೆ. ಇದು ಸತ್ಯವಾದ ಗೀತಾ ಪಾಠಶಾಲೆಯಾಗಿದೆ. ಎಲ್ಲಿ ಒಂದು ಸೆಕೆಂಡಿನಲ್ಲಿ ಸದ್ಗತಿ ಆರೋಗ್ಯ-ಐಶ್ವರ್ಯ ಹಾಗೂ ಸುಖ ಸಿಗುತ್ತದೆ. ಅಂದಾಗ ಕೇಳಿ ಸತ್ಯವಾದ ಗೀತಾಪಾಠಶಾಲೆಯೆಂದು ಏಕೆ ಬರೆಯುತ್ತೀರಾ? ಕೇವಲ ಗೀತಾ ಪಾಠಶಾಲೆಯೆಂದು ಬರೆಯುವುದು ಸಾಧಾರಣವಾಗುತ್ತದೆ. ಸತ್ಯವಾದ ಅಕ್ಷರವನ್ನು ಓದುವುದರಿಂದ ಆಕರ್ಷಣೆಯಾಗುತ್ತದೆ, ಬಹುಷ: ಸುಳ್ಳಾಗಿರಬಹುದು. “ಸತ್ಯಅಕ್ಷರವನ್ನು ಅವಶ್ಯವಾಗಿ ಬರೆಯಬೇಕು. ಪಾವನ ಪ್ರಪಂಚ ಸತ್ಯಯುಗಕ್ಕೆ, ಪತಿತ ಪ್ರಪಂಚ ಕಲಿಯುಗಕ್ಕೆ ಹೇಳಾಗುತ್ತದೆ. ಸತ್ಯಯುಗದಲ್ಲಿ ಇವರು ಪಾವನರಾಗಿದ್ದರು. ಹೇಗೆ ಆದರು ಕಲಿಸಿ ಕೊಡಲಾಗುತ್ತದೆ. ತಂದೆ ಬ್ರಹ್ಮಣ ಮುಖಾಂತರ ಓದಿಸುತ್ತಾರೆ, ಇಲ್ಲವೆಂದರೆ ಹೇಗೆ ಓದಿಸುವುದು. ಯಾತ್ರೆಯನ್ನು ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರು ಅವರೇ ತಿಳಿದುಕೊಳ್ಳುತ್ತಾರೆ. ಭಕ್ತಿ ಮಾರ್ಗವೆಂಬ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಭಕ್ತಿಯ ಆಡಂಭರ ಬಹಳ ಇದೆ. ಇಲ್ಲಂತು ಏನು ಇಲ್ಲ. ಕೇವಲ ಸ್ಮೃತಿಯಲ್ಲಿಟ್ಟುಕೊಳ್ಳಿಈಗ ವಾಪಸ ಹೋಗಬೇಕಾಗಿದೆ. ಪವಿತ್ರರಾಗಿ ಹೋಗಬೇಕು. ಇದಕ್ಕಾಗಿ ತಂದೆಯ ನೆನಪಿನಲ್ಲಿರಬೇಕು. ತಂದೆಯು ಯಾವ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅದನ್ನು ನೆನಪು ಮಾಡಲು ಸಾಧ್ಯವಿಲ್ಲ! ಇದು ಮುಖ್ಯ ಮಾತಾಗಿದೆ. ಎಲ್ಲರು ಇದು ಪರಿಶ್ರಮವೆಂದು ಹೇಳುತ್ತಾರೆ. ಮಕ್ಕಳು ಭಾಷಣವನ್ನು ಚೆನ್ನಾಗಿ ಮಾಡುತ್ತಾರೆ ಆದರೆ ಯೋಗದಲ್ಲಿ ಇದ್ದು ತಿಳಿಸುವುದರಿಂದ ಪ್ರಭಾವ ಚೆನ್ನಾಗಿರುತ್ತದೆ. ನೆನಪಿನಿಂದ ನಿಮಗೆ ಶಕ್ತಿ ಸಿಗುತ್ತದೆ. ಸತೋಪ್ರಧಾನರಾಗುವುದರಿಂದ ಸತೋಪ್ರಧಾನ ವಿಶ್ವದ ಮಾಲೀಕರಾಗುತ್ತೀರಾ. ನೆನಪನ್ನು ಧ್ಯಾನವೆಂದು ಹೇಳಲಾಗುತ್ತದೆಯೇ! ನಾವು ಅರ್ಧ ಗಂಟೆ ಧ್ಯಾನದಲ್ಲಿ ಕುಳಿತ್ತಿದ್ದೇವು, ಇದು ತಪ್ಪಾಗಿದೆ. ತಂದೆ ಕೇವಲ ತಿಳಿಸುತ್ತಾರೆ ನನ್ನ ನೆನಪಿನಲ್ಲಿ ಇರುತ್ತೀರಿ. ಎದುರುಗಡೆ ಕುಳಿತು ಕಲಿಸಿಕೊಡುವ ಅಗತ್ಯವಿಲ್ಲ. ಬೇಹದ್ದಿನ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು ಏಕೆಂದರೆ ಬಹಳ ಖಜಾನೆಯನ್ನು ಕೊಡುತ್ತಾರೆ. ನೆನಪಿನಿಂದ ಖುಷಿಯ ನಶೆಯು ಏರಬೇಕು. ಅತೀಂದ್ರಿಯ ಸುಖದ ಅನುಭವವಾಗಬೇಕು. ನಮ್ಮ ಜೀವನ ಬಹಳ ಅಮೂಲ್ಯವಾಗಿದೆ ಎಂದು ತಂದೆಯು ತಿಳಿಸುತ್ತಾರೆ, ಇದನ್ನು ಚೆನ್ನಾಗಿಟ್ಟುಕೊಳ್ಳಬೇಕು. ಎಷ್ಟು ಬದುಕುತ್ತೀರಾ ಅಷ್ಟು ಖಜಾನೆ ಸಿಗುತ್ತದೆ. ನಾವು ಸತೋಪ್ರಧಾನರಾದಾಗ ಪೂರ್ಣ ಖಜಾನೆ ಸಿಗುತ್ತದೆ. ಮುರುಳಿಯಲ್ಲಿಯು ಶಕ್ತಿಯಿರುತ್ತದೆ. ಖಡ್ಗದಲ್ಲಿ ಹರಿತವಿರುತ್ತದೆಯಲ್ಲವೇ. ನಮ್ಮ ನೆನಪಿನಲ್ಲಿ ಹರಿತವಿದ್ದಾಗ ಆಗ ಖಡ್ಗ ತೀಕ್ಷ್ಣವಿರಬೇಕು. ಜ್ಞಾನದಲ್ಲಿ ಇಷ್ಟೊಂದು ಹರಿತವಿರುವುದಿಲ್ಲ ಆಗ ಪ್ರಭಾವವಿರುವುದಿಲ್ಲ. ನಂತರ ಅವರ ಕಲ್ಯಾಣ ಮಾಡುವುದಕ್ಕೆ ಬಾಬಾ ಬರಬೇಕಾಗುತ್ತದೆ. ಯಾವಾಗ ನೆನಪಿನ ಹರಿತವನ್ನು ತುಂಬಿಕೊಳ್ಳುತ್ತೇವೆ ಆಗ ವಿಧ್ವಾನ ಆಚಾರ್ಯ ಮುಂತಾದವರಿಗೆ ಒಳ್ಳೆಯ ಬಾಣ ನಾಟುತ್ತದೆ. ಅದಕ್ಕೋಸ್ಕರ ಬಾಬಾ ತಿಳಿಸುತ್ತಾರೆ ಚಾರ್ಟ್ನ್ನು ಇಡಿ ಎಂದು. ಕೆಲವರು ಹೇಳುತ್ತಾರೆ ಬಾಬಾರವರನ್ನು ಬಹಳ ನೆನಪು ಮಾಡುತ್ತೇವೆ. ಮುಖ ತೆರೆಯುವುದಿಲ್ಲ. ನೀವು ನೆನಪಿನಲ್ಲಿ ಇದ್ದಾಗ ವಿಕರ್ಮ ವಿನಾಶವಾಗುತ್ತದೆ. ಒಳ್ಳೆಯದು. ಮಕ್ಕಳಿಗೆ ಗುಡ್ನೈಟ.

ಧಾರಣೆಗಾಗಿ ಮುಖ್ಯಸಾರ:

1. ಮನೆಯಲ್ಲಿ ಇರುತ್ತಾ ಆತ್ಮೀಯ ಸೇವೆಯನ್ನು ಮಾಡಬೇಕು. ಪವಿತ್ರರಾಗಬೇಕು ಹಾಗೂ ಪವಿತ್ರರನ್ನಾಗಿ ಮಾಡಬೇಕು.

2. ರೌರವ ನರಕದಲ್ಲಿ ಇರುತ್ತಾ ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯಬೇಕು. ಯಾರಿಗೂ ದುಃಖ ಕೊಡಬಾರದು.

ವರದಾನ:

ತಮ್ಮ ಸರ್ವ ವಿಶೇಷತೆಗಳನ್ನು ಕರ್ಯದಲ್ಲಿ ತೊಡಗಿಸಿ ಅವುಗಳ ವಿಸ್ತಾರ ಮಾಡುವಂತಹ ಸಿದ್ಧಿ ಸ್ವರೂಪ ಭವ.

ಎಷ್ಟೆಷ್ಟು ತಮ್ಮ ವಿಶೇಷತೆಗಳನ್ನು ಮನಸಾ ಸೇವೆ ಅಥವಾ ವಾಣಿ ಮತ್ತು ರ್ಮದ ಸೇವೆಯಲ್ಲಿ ತೊಡಗಿಸುವಿರಿ. ಆಗ ಅದೇ ವಿಶೇಷತೆ ವಿಸ್ತಾರವನ್ನು ಹೊಂದುತ್ತಾ ಹೋಗುವುದು. ಸೇವೆಯಲ್ಲಿ ತೊಡಗಿಸುವುದು ರ್ಥಾತ್ ಒಂದು ಬೀಜದಿಂದ ಅನೇಕ ಫಲವನ್ನು ಪ್ರಕಟ ಮಾಡುವುದು. ಶ್ರೇಷ್ಠ ಜೀವನದಲ್ಲಿ ಏನು ಜನ್ಮ ಸಿದ್ಧ ಅಧಿಕಾರದ ರೂಪದಲ್ಲಿ ವಿಶೇಷತೆಗಳು ಸಿಕ್ಕಿವೆ ಅದನ್ನು ಕೇವಲ ಬೀಜರೂಪದಲ್ಲಿಡಬೇಡಿ, ಸೇವೆ ಎಂಬ ಧರಣಿಯಲ್ಲಿ ಹಾಕಿ ಅದರ ಫಲ ಸ್ವರೂಪ ಅರ್ಥಾತ್ ಸಿದ್ಧಿ ಸ್ವರೂಪದ ಅನುಭವ ಮಾಡುವಿರಿ.

ಸ್ಲೋಗನ್:

ವಿಸ್ತಾರವನ್ನು ನೋಡದೆ ಸಾರವನ್ನು ನೋಡಿ ಮತ್ತು ಸ್ವಯಂನಲ್ಲಿ ಸಮಾವೇಶ ಮಾಡಿಕೊಂಡುಬಿಡಿ - ಇದೇ ತೀವ್ರ ಪುರುಷಾರ್ಥವಾಗಿದೆ.

 Download PDF

 

Post a Comment

0 Comments