Header Ads Widget

Header Ads

KANNADA MURLI 21.01.23

 

21/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ತಂದೆಯ ಆಶೀರ್ವಾದಗಳನ್ನು ತೆಗೆದುಕೊಳ್ಳಬೇಕಾದರೆ ಪ್ರತೀ ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಿರಿ, ನಡತೆ ಮತ್ತು ನಡವಳಿಕೆ ಚೆನ್ನಾಗಿರಲಿ

ಪ್ರಶ್ನೆ:

ಶಿವತಂದೆಯ ಹೃದಯದಲ್ಲಿ ಯಾರು ಏರಲು ಸಾಧ್ಯ?

ಉತ್ತರ:

ಯಾರ ಗ್ಯಾರಂಟಿ ಬ್ರಹ್ಮಾ ತಂದೆಯು ತೆಗೆದುಕೊಳ್ಳುತ್ತಾರೆ, ಮಗು ಸರ್ವೀಸೇಬಲ್ ಆಗಿದೆ, ಇವರು ಎಲ್ಲರಿಗೂ ಸುಖ ಕೊಡುತ್ತಾರೆ, ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡುವುದಿಲ್ಲ. ರೀತಿ ಯಾವಾಗ ಬ್ರಹ್ಮಾತಂದೆಯು ಹೇಳುತ್ತಾರೋ ಆಗ ಶಿವತಂದೆಯ ಹೃದಯವನ್ನು ಏರಲು ಸಾಧ್ಯ.

ಪ್ರಶ್ನೆ:

ಸಮಯದಲ್ಲಿ ಆತ್ಮಿಕ ಸೇವಕರು ತಂದೆಯ ಜೊತೆಗೆ ಯಾವ ಸೇವೆಯನ್ನು ಮಾಡುತ್ತೀರಿ?

ಉತ್ತರ:

ಇಡೀ ವಿಶ್ವವೇ ಏನು, ಆದರೆ 5 ತತ್ವಗಳನ್ನು ಪಾವನ ಮಾಡುವ ಸೇವೆಯನ್ನು ನೀವು ಆತ್ಮೀಯ ಸೇವಕರು ಮಾಡುತ್ತೀರಿ. ಆದ್ದರಿಂದ ನೀವು ಸತ್ಯ ಸತ್ಯ ಸಮಾಜ ಸೇವಕರಾಗಿದ್ದೀರಿ.

ಗೀತೆ:  ತಂದೆ-ತಾಯಿಯಿಂದ ಆಶೀರ್ವಾದವನ್ನು ತೆಗೆದುಕೊಳ್ಳಿರಿ......

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಾ. ರೀತಿ ಲೌಕಿಕದ ತಂದೆ-ತಾಯಿಯ ಆಶೀರ್ವಾದಗಳನ್ನು ಅನೇಕರು ತೆಗೆದುಕೊಳ್ಳುತ್ತಾರೆ. ಮಕ್ಕಳು ಕಾಲಿಗೆ ಬಿದ್ದಾಗ ತಂದೆ-ತಾಯಿಗಳು ಆಶೀರ್ವಾದವನ್ನು ಮಾಡುತ್ತಾರೆ. ಡಂಗುರವನ್ನು ಲೌಕಿಕದ ತಂದೆ-ತಾಯಿಗಳಿಗೋಸ್ಕರ ಬಾರಿಸುವುದಿಲ್ಲ. ಡಂಗುರ ಅರ್ಥಾತ್ ಬಹಳ ಕೇಳಿರುವುದು. ಬೇಹದ್ದಿನ ತಂದೆಗೋಸ್ಕರ ನೀವೇ ತಂದೆ, ನೀವೇ ತಾಯಿ ನಾವು ಬಾಲಕರಾಗಿದ್ದೇವೆ. ನಿಮ್ಮ ಕೃಪೆ ಹಾಗೂ ಆಶೀರ್ವಾದದಿಂದ ಸುಖದ ಆಸ್ತಿಯು ಸಿಗುತ್ತದೆಯೆಂದು ಗಾಯನ ಮಾಡುತ್ತಾರೆ. ಭಾರತದಲ್ಲಿಯೇ ಮಹಿಮೆಯನ್ನು ಗಾಯನ ಮಾಡುತ್ತಾರೆ. ಅವಶ್ಯವಾಗಿ ಭಾರತದಲ್ಲಿಯೇ ರೀತಿಯಾಗಿತ್ತು ಆದ್ದರಿಂದ ಗಾಯನ ಮಾಡುತ್ತಾರೆ. ಒಂದೇ ಸಲ ಬೇಹದ್ದಿನಲ್ಲಿ ಹೋಗಬೇಕು. ಸ್ವರ್ಗದ ರಚೈತ ಒಬ್ಬ ತಂದೆಯಾಗಿದ್ದಾರೆಂದು ಬುದ್ಧಿಯು ಹೇಳುತ್ತದೆ. ಸ್ವರ್ಗದಲ್ಲಿ ಎಲ್ಲರೂ ಸುಖಿಗಳಾಗಿದ್ದರು ಅಲ್ಲಿ ದುಃಖದ ಹೆಸರು, ಚಿಹ್ನೆಗಳಿರಲಿಲ್ಲ ಆದ್ದರಿಂದ ದುಃಖದಲ್ಲಿ ಸ್ಮರಣೆಯನ್ನು ಎಲ್ಲರೂ ಮಾಡಿದ್ದಾರೆ. ಸುಖದಲ್ಲಿ ಯಾರೂ ಮಾಡುವುದಿಲ್ಲವೆಂದು ಗಾಯನ ಮಾಡುತ್ತಾರೆ. ಅರ್ಧಕಲ್ಪ ದುಃಖದಲ್ಲಿದ್ದಾಗ ಎಲ್ಲರೂ ಸ್ಮರಣೆ ಮಾಡುತ್ತಾರೆ. ಸತ್ಯಯುಗದಲ್ಲಿ ಅಪಾರ ಸುಖವಿದ್ದಾಗ ಯಾರೂ ಸ್ಮರಣೆ ಮಾಡುವುದಿಲ್ಲ. ಮನುಷ್ಯರು ಕಲ್ಲುಬುದ್ಧಿಯವರಾಗಿರುವ ಕಾರಣ ಏನನ್ನೂ ಸಹ ತಿಳಿದುಕೊಂಡಿಲ್ಲ. ಕಲಿಯುಗದಲ್ಲಿ ಅಪಾರವಾದ ದುಃಖವಿದೆ. ಎಷ್ಟೊಂದು ಹೊಡೆದಾಟವಿದೆ. ಎಷ್ಟೇ ಓದಿ ಬರೆದಿರುವ ವಿದ್ವಾನರಾಗಿರಲಿ ಆದರೆ ಗೀತೆಗಳ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವೇ ತಂದೆ, ತಾಯಿಯೆಂದು ಗಾಯನ ಮಾಡುತ್ತಾರೆ ಆದರೆ ಅದು ಯಾವ ತಂದೆ, ತಾಯಿಯ ಮಹಿಮೆಯಾಗಿದೆ ಎಂದು ತಿಳಿದುಕೊಂಡಿಲ್ಲ. ಇದು ಅನೇಕರ ಮಾತಾಗಿದೆ. ಈಶ್ವರನ ಸಂತಾನ ಎಲ್ಲರೂ ಆಗಿದ್ದಾರೆ, ಆದರೆ ಸಮಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ. ಸುಖದ ಆಸ್ತಿ ಯಾರಿಗೂ ಇಲ್ಲ. ಕೃಪೆಯಿಂದ ಸುಖ ಸಿಗುತ್ತದೆ. ಅಕೃಪೆಯಿಂದ ದುಃಖ ಸಿಗುತ್ತದೆ. ತಂದೆಗೆ ಕೃಪಾಳು ಎಂದು ಗಾಯನ ಮಾಡಲಾಗಿದೆ. ಸಾಧು-ಸಂತರಿಗೆ ಕೃಪಾಳು ಎಂದು ಹೇಳುತ್ತಾರೆ.

ನೀವೇ ತಂದೆ, ತಾಯಿಯಾಗಿದ್ದೀರೆಂದು ಭಕ್ತಿಮಾರ್ಗದಲ್ಲಿ ಗಾಯನ ಮಾಡುತ್ತಾರೆ ಆದರೆ ಅದು ಅಯತಾರ್ಥವಾಗಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಆದರೆ ಯಾರಾದರೂ ಬುದ್ಧಿವಂತರಾದರೆ ಕೇಳುತ್ತಾರೆ - ಪರಮಾತ್ಮನಿಗೆ ಗಾಡ್ಫಾದರ್ ಎಂದು ಹೇಳಲಾಗುತ್ತದೆ ಆದರೆ ತಾಯಿಯೆಂದು ಹೇಗೆ ಹೇಳುತ್ತೀರಿ? ಅಂದಾಗ ಅವರ ಬುದ್ಧಿಯು ಜಗದಾಂಬನ ಕಡೆಗೆ ಹೋಗುತ್ತದೆ. ಯಾವಾಗ ಜಗದಂಬಾನ ಕಡೆಗೆ ಬುದ್ಧಿಯು ಹೋಗುತ್ತದೆಯೋ ಆಗ ಜಗತ್ಪಿತನ ಕಡೆಗೂ ಬುದ್ಧಿಯು ಹೋಗಬೇಕಾಗಿದೆ. ಈಗ ಬ್ರಹ್ಮಾ-ಸರಸ್ವತಿ ಇವರ್ಯಾರೂ ಭಗವಂತರಲ್ಲ. ಮಹಿಮೆಯು ಅವರದ್ದಲ್ಲ. ಅವರ ಮುಂದೆ ತಂದೆ, ತಾಯಿ ಎಂದು ಹೇಳುವುದು ತಪ್ಪಾಗಿದೆ. ಮನುಷ್ಯರು ಪರಮಪಿತ ಪರಮಾತ್ಮನಿಗೋಸ್ಕರ ಗಾಯನ ಮಾಡುತ್ತಾರೆ ಆದರೆ ಅವರು ತಂದೆ, ತಾಯಿ ಹೇಗಾದರು ಎಂದು ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಹೇಳುತ್ತಾರೆ, ತಂದೆ-ತಾಯಿಯಿಂದ ಆಶೀರ್ವಾದವನ್ನು ತೆಗೆದುಕೊಳ್ಳಿ ಅರ್ಥಾತ್ ಶ್ರೀಮತದಂತೆ ನಡೆಯಿರಿ. ಈಗ ನಡತೆ ಮತ್ತು ನಡವಳಿಕೆ ಚೆನ್ನಾಗಿದ್ದಾಗ ತಮ್ಮ ಮೇಲೆ ತಮಗೆ ಆಶೀರ್ವಾದಗಳು ಸಿಗುತ್ತವೆ. ಒಂದುವೇಳೆ ನಡವಳಿಕೆ ಚೆನ್ನಾಗಿಲ್ಲದಿದ್ದಾಗ, ಯಾರಿಗಾದರೂ ದುಃಖ ಕೊಟ್ಟರೆ, ತಂದೆ-ತಾಯಿಯನ್ನು ನೆನಪು ಮಾಡದಿದ್ದರೆ ಮತ್ತು ಅನ್ಯರಿಗೆ ಮಾಡಿಸದಿದ್ದರೆ ಆಶೀರ್ವಾದಗಳು ಸಿಗುವುದಿಲ್ಲ. ಆಗ ಅಷ್ಟು ಸುಖವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ತಂದೆಯ ಹೃದಯವನ್ನು ಏರಲು ಸಾಧ್ಯವಿಲ್ಲ. ತಂದೆಯ ಹೃದಯವನ್ನು ಏರಿದಾಗ ಶಿವತಂದೆಯ ಹೃದಯವನ್ನು ಏರಬಹುದು. ಗಾಯನ ತಂದೆ-ತಾಯಿಗಳದ್ದಾಗಿದೆ. ಬುದ್ಧಿಯು ಬೇಹದ್ದಿನ ತಂದೆ-ತಾಯಿಗಳ ಕಡೆಗೆ ಹೋಗುವುದಾಗಿದೆ. ಬ್ರಹ್ಮನ ಕಡೆ ಯಾರ ಬುದ್ಧಿಯು ಹೋಗುವುದಿಲ್ಲ. ಭಲೆ ಜಗದಂಬಾನ ಕಡೆಗೆ ಕೆಲವರದು ಹೋಗುತ್ತದೆ ಅವರ ಮೇಳವೂ ಆಗುತ್ತದೆ. ಆದರೆ ಕರ್ತವ್ಯವನ್ನು ತಿಳಿದುಕೊಂಡಿಲ್ಲ. ನಮ್ಮ ಸತ್ಯ-ಸತ್ಯ ತಾಯಿ ನಿಯಮದನುಸಾರ ಬ್ರಹ್ಮಾ ಆಗಿದ್ದಾರೆಂದು ನಿಮಗೆ ತಿಳಿದಿದೆ. ಇದನ್ನು ನೆನಪಿಟ್ಟುಕೊಂಡು ನೆನಪನ್ನು ಮಾಡಬೇಕು. ಇವರು ತಾಯಿಯೂ ಆಗಿದ್ದಾರೆ, ತಂದೆಯೂ ಆಗಿದ್ದಾರೆ, ಶಿವತಂದೆ ಬ್ರಹ್ಮಾ ಎಂದು ಬರೆಯುತ್ತಾರೆ ಅಂದಾಗ ತಾಯಿಯೂ ಆದರು, ತಂದೆಯೂ ಆದರು. ಈಗ ಮಕ್ಕಳು ತಂದೆಯ ಹೃದಯವನ್ನೇರಬೇಕು ಏಕೆಂದರೆ ಇವರಲ್ಲಿ ಶಿವತಂದೆಯು ಪ್ರವೇಶ ಮಾಡಿದ್ದಾರೆ. ಇವರು ಯಾವಾಗ ಗ್ಯಾರಂಟಿ ಕೊಡುತ್ತಾರೋ ಹಾ! ಮಗು ಬಹಳ ಒಳ್ಳೆಯ ಸೇವಾಧಾರಿಯಾಗಿದ್ದಾರೆ, ಎಲ್ಲರಿಗೂ ಸುಖ ಕೊಡುವಂತಹವರಾಗಿದ್ದಾರೆ. ಮನಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡುವುದಿಲ್ಲವೆಂದಾಗ ಶಿವತಂದೆಯ ಹೃದಯದಲ್ಲಿ ಏರಲು ಸಾಧ್ಯ. ಮನಸಾ-ವಾಚಾ-ಕರ್ಮಣಾದಿಂದ ಮಾತನಾಡಿದರೂ ಎಲ್ಲರಿಗೂ ಸುಖ ಸಿಗಬೇಕು. ದುಃಖವನ್ನು ಯಾರಿಗೂ ಕೊಡಬಾರದು. ದುಃಖ ಕೊಡುವಂತಹ ವಿಚಾರ ಮೊದಲು ಮನಸ್ಸಿನಲ್ಲಿ ಬರುತ್ತದೆ, ನಂತರ ಕರ್ಮಣದಲ್ಲಿ ಬರುವುದರಿಂದ ಪಾಪವಾಗುತ್ತದೆ. ಮನಸ್ಸಿನ ಬಿರುಗಾಳಿ ಅವಶ್ಯವಾಗಿ ಬರುತ್ತದೆ ಆದರೆ ಕರ್ಮಣದಲ್ಲಿ ಬರುವುದಿಲ್ಲ. ಒಂದುವೇಳೆ ಯಾರಾದರೂ ಬೇಜಾರಾದಾಗ ತಂದೆಯ ಜೊತೆ ಬಂದು ಕೇಳಿ - ಬಾಬಾ ಮಾತಿನಿಂದ ನನಗೆ ಬೇಜಾರಾಗುತ್ತದೆ. ಆಗ ತಂದೆಯು ತಿಳಿಸುತ್ತಾರೆ - ಯಾವುದೇ ಮಾತಿನ ಮೊದಲು ಮನಸ್ಸಿನಲ್ಲಿ ಬರುತ್ತದೆ, ಮಾತೂ ಸಹ ಕರ್ಮಣವಾಗುತ್ತದೆ. ಒಂದುವೇಳೆ ಮಕ್ಕಳಿಗೆ ತಂದೆ, ತಾಯಿಯ ಆಶೀರ್ವಾದವನ್ನು ತೆಗೆದುಕೊಳ್ಳಬೇಕಾದರೆ ಶ್ರೀಮತದಂತೆ ನಡೆಯಬೇಕು. ಯಾರು ಒಬ್ಬರನ್ನೇ ತಂದೆ-ತಾಯಿ ಎಂದು ಹೇಳುತ್ತಾರೆ ಅದು ಬಹಳ ಗುಹ್ಯವಾದ ಮಾತಾಗಿದೆ. ಬ್ರಹ್ಮಾ ತಂದೆಯೂ ಆಗಿದ್ದಾರೆ ಅಂದಾಗ ದೊಡ್ಡ ತಾಯಿಯೂ ಆಗಿದ್ದಾರೆ. ಈಗ ಬಾಬಾ ಯಾರಿಗೆ ತಾಯಿಯೆಂದು ಹೇಳುವುದು? ತಾಯಿ ಈಗ ಯಾರಿಗೆ ತಾಯಿಯೆಂದು ಹೇಳುವುದು? ತಾಯಿ ಯಾರೂ ಇಲ್ಲ. ಹೇಗೆ ಶಿವತಂದೆಗೆ ಯಾರೂ ತಂದೆಯಿಲ್ಲವೋ ಹಾಗೆಯೇ ಇವರಿಗೆ ತಮ್ಮದೇ ಆದ ಯಾರೂ ತಾಯಿಯಿಲ್ಲ.

ಮುಖ್ಯವಾದ ಮಾತನ್ನು ಮಕ್ಕಳಿಗೆ ತಿಳಿಸುತ್ತಾರೆ - ಒಂದುವೇಳೆ ಮನಸಾ-ವಾಚಾ-ಕರ್ಮಣಾ ಯಾರಿಗಾದರೂ ದುಃಖವನ್ನು ಕೊಟ್ಟರೆ ದುಃಖವನ್ನೇ ತೆಗೆದುಕೊಳ್ಳುತ್ತೀರಿ ಮತ್ತು ಪದವಿಭ್ರಷ್ಟರಾಗುತ್ತೀರಿ. ಸತ್ಯಭಗವಂತನ ಮುಂದೆ ಸತ್ಯವಾಗಿರಬೇಕು, ಇವರ ಜೊತೆಯೂ ಸತ್ಯವಾಗಿರಬೇಕು. ಮಗು ಬಹಳ ಸುಪುತ್ರವಾಗಿದೆಯೆಂದು ಅಣ್ಣನೇ ಸರ್ಟಿಫಿಕೇಟನ್ನು ಕೊಡುತ್ತಾರೆ. ತಂದೆಯ ಮಹಿಮೆಯನ್ನು ಮಾಡುತ್ತಾರೆ - ಯಾರು ಸರ್ವೀಸೇಬಲ್ ಮಕ್ಕಳಾಗಿದ್ದಾರೆ ಅವರು ತನು-ಮನ-ಧನದಿಂದ ಸರ್ವೀಸನ್ನು ಮಾಡುತ್ತಾರೆ. ಯಾರು ಎಂದೂ ಯಾರಿಗೂ ದುಃಖವನ್ನು ಕೊಡುವುದಿಲ್ಲವೋ ಅವರೇ ಬಾಪ್ದಾದಾ ಮತ್ತು ತಾಯಿಯ ಹೃದಯವನ್ನು ಏರಲು ಸಾಧ್ಯ. ಇವರ ಹೃದಯವನ್ನು ಏರುವುದು ಎಂದರೆ ಅವರ ಸಿಂಹಾಸನವನ್ನು ಏರುವುದಾಗದೆ. ಸದಾಕಾಲ ಸುಪುತ್ರ ಮಕ್ಕಳಿಗೆ ನಾವು ಸಿಂಹಾಸನವನ್ನು ಹೇಗೆ ಏರುವುದೆಂದು ವಿಚಾರ ನಡೆಯುತ್ತಿರುತ್ತದೆ. ಇದೇ ಚಿಂತೆಯಲ್ಲಿರುತ್ತಾರೆ. ಗದ್ದಿಯಂತು ನಂಬರ್ವಾರ್ ಆಗಿ ಎಂಟುಗಳಿವೆ. ನಂತರ 108 ನಂತರ 16,108 ಆಗಿವೆ. ಆದರೆ ಈಗ ನಾವು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳಬೇಕು. ಎರಡು ಕಲೆ ಕಡಿಮೆಯಾಗಿ ಗದ್ದಿಯ ಮೇಲೆ ಕುಳಿತುಕೊಂಡರೆ ಶೋಭೆಯಾಗುವುದಿಲ್ಲ. ಸುಪುತ್ರ ಮಕ್ಕಳು ಬಹಳ ಪುರುಷಾರ್ಥವನ್ನು ಮಾಡಿ. ಒಂದುವೇಳೆ ನಾವು ಮುದ್ದಾದ ತಂದೆಯಿಂದ ಸೂರ್ಯವಂಶಿಯ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲಿಲ್ಲವೆಂದರೆ ಕಲ್ಪ-ಕಲ್ಪದಲ್ಲಿಯೂ ತೆಗೆದುಕೊಳ್ಳುವುದಿಲ್ಲ. ಈಗ ಒಂದುವೇಳೆ ವಿಜಯಮಾಲೆಯಲ್ಲಿ ಬರದೇ ಇದ್ದಾಗ ಕಲ್ಪ-ಕಲ್ಪದಲ್ಲಿಯೂ ಬರುವುದಿಲ್ಲ. ಇದು ಕಲ್ಪ-ಕಲ್ಪದ ಸ್ಪರ್ಧೆಯಾಗಿದೆ. ಈಗ ಒಂದುವೇಳೆ ನಷ್ಟವಾದರೆ ಕಲ್ಪ-ಕಲ್ಪದಲ್ಲಿಯೂ ನಷ್ಟವಾಗುತ್ತದೆ. ಯಾರು ಶ್ರೀಮತದಂತೆ ತಂದೆ, ತಾಯಿಯನ್ನು ಸಂಪೂರ್ಣ ಅನುಸರಣೆ ಮಾಡಿ ಎಂದೂ ಯಾರಿಗೂ ದುಃಖ ಕೊಡುವುದಿಲ್ಲವೋ ಅವರು ಪಕ್ಕಾ ವ್ಯಾಪಾರಿಗಳಾಗಿದ್ದಾರೆ. ಅದರಲ್ಲಿಯೂ ನಂಬರ್ವನ್ ದುಃಖ ಕಾಮಕಟಾರಿ ನಡೆಸುವುದಾಗಿದೆ.

ಒಳ್ಳೆಯದು. ಕೃಷ್ಣ ಭಗವಾನುವಾಚ ಎಂದು ತಿಳಿದುಕೊಳ್ಳಿ ಅಂದಾಗ ಅವನು ನಂಬರ್ವನ್ ಆಗಿದ್ದಾನೆಂದು ತಂದೆಯು ಹೇಳುತ್ತಾರೆ. ಅವರ ಮತವನ್ನು ಒಪ್ಪಿಕೊಳ್ಳಬೇಕು ಏಕೆಂದರೆ ಆಗಲೇ ಸ್ವರ್ಗದ ಮಾಲೀಕರಾಗುತ್ತೀರಿ. ಕೃಷ್ಣ ಭಗವಂತನಿಂದ ಶ್ರೀಮತದ ಶಿಕ್ಷಣವನ್ನು ಕೊಟ್ಟರೆಂದು ತಿಳಿದುಕೊಳ್ಳುತ್ತಾರೆ. ಒಳ್ಳೆಯದು ಅವರ ಮತದಂತೆ ನಡೆಯಿರಿ. ಕಾಮ ಮಹಾಶತ್ರುವಾಗಿದೆ ಎಂದು ಅವರು ಹೇಳಿದ್ದಾರೆ. ಭಲೆ ಅದನ್ನು ಗೆಲ್ಲಿರಿ. ವಿಕಾರಗಳನ್ನು ಗೆದ್ದಾಗ ಕೃಷ್ಣಪುರಿಯಲ್ಲಿ ಬರುತ್ತೀರಿ. ಈಗ ಕೃಷ್ಣನ ಮಾತಲ್ಲ ಏಕೆಂದರೆ ಕೃಷ್ಣ ಮಗುವಾಗಿದ್ದಾನೆ ಆದ್ದರಿಂದ ಅವನು ಮತವನ್ನು ಕೊಡಲು ಹೇಗೆ ಸಾಧ್ಯ. ಯಾವಾಗ ಅವನು ದೊಡ್ಡವನಾಗಿ ಸಿಂಹಾಸನದ ಮೇಲೆ ಕುಳಿತುಕೊಂಡಾಗ ಮತವನ್ನು ಕೊಡುತ್ತಾರೆ. ಮತವನ್ನು ಕೊಡುವ ಯೋಗ್ಯನಾದಾಗ ರಾಜ್ಯಭಾರವನ್ನು ಮಾಡುತ್ತಾನೆ. ನನ್ನನ್ನು ನಿರಾಕಾರಿ ಪ್ರಪಂಚದಲ್ಲಿ ನೆನಪು ಮಾಡಿ ಎಂದು ಶಿವತಂದೆಯು ಹೇಳುತ್ತಾರೆ. ಕೃಷ್ಣ ನನ್ನನ್ನು ಸ್ವರ್ಗದಲ್ಲಿ ನೆನಪು ಮಾಡಿ ಎಂದು ಹೇಳುತ್ತಾರೆ. ಕಾಮ ಮಹಾಶತ್ರುವಾಗಿದೆ ಇದರ ಮೇಲೆ ವಿಜಯಶಾಲಿಗಳಾಗಿ ಎಂದು ಹೇಳುತ್ತಾರೆ. ಅಲ್ಲಿ ವಿಷವಿರುವುದಿಲ್ಲ ಅಂದಾಗ ವಿಷವನ್ನು ಬಿಟ್ಟು ಪವಿತ್ರರಾಗಿ. ಇದೆಲ್ಲವನ್ನೂ ಕೃಷ್ಣನ ತಂದೆಯು ಕುಳಿತು ತಿಳಿಸುತ್ತಿದ್ದಾರೆ. ಒಳ್ಳೆಯದು. ಮನುಷ್ಯರೇ ನನ್ನ ಹೆಸರನ್ನು ತೆಗೆದುಹಾಕಿ ಮಗನ ಹೆಸರನ್ನು ಹಾಕಿದ್ದಾರೆ. ಅವನು ಸರ್ವಗುಣ ಸಂಪನ್ನನಾಗುತ್ತಾನೆ. ಅವರೂ ಸಹ ಗೀತೆಯಲ್ಲಿ ಕಾಮ ಮಹಾಶತ್ರುವಾಗಿದೆ ಎಂದು ಬರೆದಿದೆ ಎಂದು ಹೇಳುತ್ತಾರೆ. ಅವನಿಗೆ ಯಾರೂ ಸಹ ಗೌರವ ಕೊಡುವುದಿಲ್ಲ. ಅದರ ಮೇಲೆ ನಡೆಯುವುದಿಲ್ಲ. ಕೃಷ್ಣನು ಸ್ವಯಂ ಬಂದಾಗ ನಾವು ಅವನ ಮತದಂತೆ ನಡೆಯುತ್ತೇವೆಂದು ತಿಳಿದುಕೊಳ್ಳುತ್ತಾರೆ. ಅಲ್ಲಿಯತನಕ ಪೆಟ್ಟನ್ನು ತಿನ್ನುತ್ತಾರೆ. ಸನ್ಯಾಸಿ ಮುಂತಾದವರು ನಾನು ರಾಜಯೋಗವನ್ನು ಕಲಿಸಲು ಬಂದಿದ್ದೇನೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲವನ್ನೂ ತಂದೆಯೇ ಸಂಗಮಯುಗದಲ್ಲಿ ತಿಳಿಸುತ್ತಿದ್ದಾರೆ. ಕೃಷ್ಣ ಸತ್ಯಯುಗದಲ್ಲಿದ್ದಾನೆ ಅವನನ್ನು ರೀತಿ ಯೋಗ್ಯನನ್ನಾಗಿ ಮಾಡುವವರು ಯಾರೋ ಇದ್ದಾರೆ ಅಂದಾಗ ಶಿವತಂದೆ ಸ್ವಯಂ ಹೇಳುತ್ತಾರೆ- ಕೃಷ್ಣ ಮತ್ತು ಅವನ ಇಡಿ ಮನೆತನವನ್ನು ಈಗ ನಾನು ಸ್ವರ್ಗಕ್ಕೆ ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದೇನೆ ಎಂದು ಶಿವತಂದೆ ಹೇಳುತ್ತಾರೆ. ತಂದೆಯು ಎಷ್ಟೊಂದು ಪರಿಶ್ರಮ ಪಡುತ್ತಾರೆ, ಮಕ್ಕಳು ಸ್ವರ್ಗದಲ್ಲಿ ಹೋಗಿ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳಲು, ಇಲ್ಲದಿದ್ದರೆ ಓದಿ ಬರೆದಿರುವರ ಮುಂದೆ ಹೋಗಿ ತಲೆಯನ್ನು ಬಾಗಬೇಕಾಗುತ್ತದೆ. ತಂದೆಯಿಂದಲೇ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ನಾವು ಇಷ್ಟೊಂದು ಸುಪುತ್ರರಾಗಿದ್ದೇವೆ ಎಂದು ತಮ್ಮನ್ನು ತಾವು ಕೇಳಿಕೊಳ್ಳಿ. ಸುಪುತ್ರರೂ ಸಹ ನಂಬರ್ವಾರ್ ಆಗಿದ್ದಾರೆ. ಉತ್ತಮ, ಮಧ್ಯಮ, ಕನಿಷ್ಟ. ಯಾರು ಶ್ರೇಷ್ಠರಿರುತ್ತಾರೆ ಅವರ ಶ್ರೇಷ್ಠತನವನ್ನು ಎಂದೂ ಸಹ ಮುಚ್ಚಿಡಲು ಸಾಧ್ಯವಿಲ್ಲ. ನಾವು ಭಾರತದ ಸೇವೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ದಯೆ ಬರುತ್ತದೆ. ಸಮಾಜ ಸೇವಕರೂ ಸಹ ಉತ್ತಮ, ಮಧ್ಯಮ, ಕನಿಷ್ಟ ನಂಬರ್ವಾರಾಗಿರುತ್ತಾರೆ. ಕೆಲವರು ಬಹಳ ಲೂಟಿ ಮಾಡುತ್ತಾರೆ. ಆಹಾರವನ್ನು ತೆಗೆದುಕೊಂಡು ಬಂದು ತಿನ್ನುತ್ತಾರೆ. ಅಂದಾಗ ಅವರಿಗೆ ಸುಪುತ್ರ ಸಮಾಜ ಸೇವಕರು ಎಂದು ಹೇಗೆ ಹೇಳಲು ಸಾಧ್ಯ? ಸಮಾಜ ಸೇವಕರು ಎಂದಾಗ ತಮ್ಮನ್ನು ಸಮಾಜದ ಸೇವೆ ಮಾಡುವಂತಹವರು ಎಂದು ಹೇಳಿಕೊಳ್ಳುತ್ತಾರೆ. ಸತ್ಯ ಸೇವೆಯನ್ನು ಒಬ್ಬ ತಂದೆಯೇ ಮಾಡಲು ಸಾಧ್ಯ.

ನಾವು ತಂದೆಯ ಜೊತೆ ಆತ್ಮಿಕ ಸೇವಕರಾಗಿದ್ದೇವೆ ಎಂದು ನೀವು ಹೇಳುತ್ತೀರಿ. ಇಡೀ ಸೃಷ್ಟಿಯನ್ನೇ ಏನು ತತ್ವವನ್ನೇ ಪವಿತ್ರವನ್ನಾಗಿ ಮಾಡುತ್ತೇವೆ. ಸನ್ಯಾಸಿಗಳು ಇದನ್ನು ತಿಳಿದುಕೊಂಡಿಲ್ಲ. ಸ್ವರ್ಗವೂ ಸಮಯದಲ್ಲಿ ತಮೋಪ್ರಧಾನವಾಗಿದೆ ಅದನ್ನು ಸತೋಪ್ರಧಾನವಾಗಿ ಮಾಡಬೇಕು. ಸತೋಪ್ರಧಾನ ತತ್ವಗಳಿಂದ ನಿಮ್ಮ ಶರೀರವು ಸತೋಪ್ರಧಾನವಾಗಿರುತ್ತದೆ. ಸನ್ಯಾಸಿಗಳದ್ದು ಎಂದೂ ಸಹ ಸತೋಪ್ರಧಾನ ಶರೀರವಾಗುವುದಿಲ್ಲ. ಅವರು ರಜೋಪ್ರಧಾನ ಸಮಯದಲ್ಲಿ ಬರುತ್ತಾರೆ. ತಂದೆಯೂ ಬಹಳಷ್ಟು ತಿಳಿಸುತ್ತಾರೆ, ಆದರೆ ಮಕ್ಕಳು ಮರೆತುಹೋಗುತ್ತಾರೆ. ಯಾರು ಅನ್ಯರಿಗೆ ತಿಳಿಸುತ್ತಾರೆ, ಅವರಿಗೆ ನೆನಪು ಇರುತ್ತದೆ ದಾನ ಮಾಡಲಿಲ್ಲವೆಂದರೆ ಧಾರಣೆಯು ಆಗುವುದಿಲ್ಲ. ಯಾರು ಒಳ್ಳೆಯ ಸರ್ವೀಸನ್ನು ಮಡುತ್ತಾರೋ ಅವರ ಹೆಸರನ್ನು ಬಾಪ್ದಾದಾ ಪ್ರಸಿದ್ಧ ಮಾಡುತ್ತಾರೆ. ಸರ್ವೀಸಿನಲ್ಲಿ ಯಾರ್ಯಾರು ತೀಕ್ಷ್ಣವಾಗಿದ್ದಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಯಾರು ಸರ್ವೀಸಿನಲ್ಲಿ ಇದ್ದಾರೆ ಅವರು ಹೃದಯವನ್ನು ಏರಲು ಸಾಧ್ಯ. ಸದಾಕಾಲ ತಂದೆ-ತಾಯಿಯನ್ನು ಅನುಸರಣೆ ಮಾಡಬೇಕು. ಅವರ ಹೃದಯ ಸಿಂಹಾಸನಾಧಾರಿಗಳಾಗಬೇಕು. ಯಾರು ಸರ್ವೀಸಿನಲ್ಲಿ ಇರುತ್ತಾರೋ ಅವರು ಅನ್ಯರಿಗೂ ಸುಖವನ್ನು ಕೊಡುತ್ತಾರೆ. ನಾನು ತಂದೆಗೆ ಸುಪುತ್ರ ಮಗುವಾಗಿದ್ದೇನೆಯೇ? ಎಂದು ತಮ್ಮ ಮುಖವನ್ನು ದರ್ಪಣದಲ್ಲಿ ನೋಡಿಕೊಳ್ಳಿ ನನ್ನ ಸೇವೆಯ ಚಾರ್ಟ್ ಇದಾಗಿದೆ ಎಂದು ಸ್ವಯಂ ನೀವೇ ಬರೆಯಬಹುದಾಗಿದೆ. ನಾನು ಸರ್ವೀಸನ್ನು ಮಾಡುತ್ತಿದ್ದೇನೆ, ನೀವೇ ತೀರ್ಮಾನ ಮಾಡಿಕೊಳ್ಳಿ. ತಂದೆಗೂ ಸಹ ಗೊತ್ತಾಗಬೇಕಾಗಿದೆ - ನಾನು ಉತ್ತಮನೋ ಮಧ್ಯಮನೋ ಅಥವಾ ಕನಿಷ್ಟನೋ ಎಂದು ತನಗೆ ತಾನೇ ತೀರ್ಮಾನ ಕೊಡಬಹುದು. ಯಾರು ಮಹಾರಥಿಯಾಗಿದ್ದಾರೆ. ಯಾರು ಕುದುರೆ ಸವಾರಿಯಾಗಿದ್ದಾರೆ ಎಂಬುದನ್ನು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ಯಾರೂ ಸಹ ಮುಚ್ಚಿಡಲು ಸಾಧ್ಯವಿಲ್ಲ. ತಂದೆಗೆ ಲೆಕ್ಕಾಚಾರವನ್ನು ಕಳಿಸಿಕೊಟ್ಟಾಗ ತಂದೆ ಎಚ್ಚರಿಸುತ್ತಾರೆ. ದಿನಚರಿಯನ್ನು ಕಳಿಸದಿದ್ದರೂ ಸಹ ಎಚ್ಚರಿಕೆ ಸಿಗುತ್ತಿರುತ್ತದೆ. ಈಗ ನಿಮಗೆ ಎಷ್ಟು ಆಸ್ತಿ ಬೇಕೆಂದರೂ ಪೂರ್ಣ ತೆಗೆದುಕೊಳ್ಳಿ. ನಂತರ ಬಾಪ್ದಾದಾರವರಿಂದಲೂ ಸಹ ಸರ್ಟಿಫಿಕೇಟ್ ಸಿಗುತ್ತದೆ. ದೊಡ್ಡ ತಾಯಿ ಕುಳಿತಿದ್ದಾರೆ, ಇವರಿಂದ ಸರ್ಟಿಫಿಕೇಟ್ ಸಿಗುತ್ತದೆ. ವಿಚಿತ್ರ ತಾಯಿಗೆ ಯಾವುದೇ ತಾಯಿ ಇಲ್ಲ. ಹೇಗೆ ತಂದೆಗೆ ತಂದೆ ಇಲ್ಲ. ಮಮ್ಮಾ ಅಕ್ಕಂದಿರಲ್ಲಿ ನಂಬರ್ವನ್ ಆಗಿದ್ದಾರೆ. ಡ್ರಾಮಾದಲ್ಲಿ ಜಗದಂಬನ ಗಾಯನವಿದೆ. ಸೇವೆಯನ್ನು ಬಹಳಷ್ಟು ಮಾಡಿದ್ದಾರೆ. ಹೇಗೆ ಬಾಬಾ ಹೋಗುತ್ತಾರೆ ಮಮ್ಮಾನೂ ಸಹ ಹೋಗುತ್ತಿದ್ದರು. ಚಿಕ್ಕ-ಚಿಕ್ಕ ಹಳ್ಳಿಯಲ್ಲಿ ಸರ್ವೀಸ್ ಮಾಡುತ್ತಿದ್ದರು. ಎಲ್ಲದರಲ್ಲೂ ಮಮ್ಮಾ ಮುಂದೆ ಹೋದರು. ತಂದೆಯ ಜೊತೆಯಂತೂ ದೊಡ್ಡ ತಂದೆ ಇದ್ದಾರೆ ಆದ್ದರಿಂದ ಮಕ್ಕಳಿಗೆ ಇವರ ಸಂಭಾಲನೆಯನ್ನು ಮಾಡಬೇಕಾಗುತ್ತದೆ. ಸತ್ಯಯುಗದಲ್ಲಿ ಪ್ರಜೆಗಳು ಬಹಳ ಸುಖಿಗಳಾಗಿರುತ್ತಾರೆ. ತನ್ನ ಮಹಲ್, ಹಸುಗಳು, ಎತ್ತುಗಳು ಎಲ್ಲವೂ ಇರುತ್ತವೆ.

ಒಳ್ಳೆಯದು. ಮಕ್ಕಳೇ ಖುಷಿಯಾಗಿರಿ, ಪ್ರಸನ್ನರಾಗಿರಿ. ಮರೆಯಲೂಬಾರದು, ನೆನಪು ಇಟ್ಟುಕೊಳ್ಳಲೂಬಾರದು ಏಕೆಂದರೆ ಶಿವಬಾಬಾರವರನ್ನೇ ನೆನಪು ಮಾಡಬೇಕು. ನಿಮ್ಮ ಶರೀರವನ್ನೂ ಮರೆಯಬೇಕು ಅಂದಮೇಲೆ ಅನ್ಯರನ್ನು ಹೇಗೆ ನೆನಪು ಮಾಡುವುದು? ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ಯಾರನ್ನೂ ಸಹ ಬೇಸರ ಮಾಡಬಾರದು. ಮನಸಾ, ವಾಚಾ, ಕರ್ಮಣಾ ಎಲ್ಲರಿಗೂ ಸುಖ ಕೊಟ್ಟು ತಂದೆ ಮತ್ತು ಪರಿವಾರದ ಆಶೀರ್ವಾದವನ್ನು ತೆಗೆದುಕೊಳ್ಳಬೇಕು.

2. ಸುಪುತ್ರ ಮಗುವಾಗಿ ಭಾರತದ ಆತ್ಮೀಯ ಸೇವೆಯನ್ನು ಮಾಡಬೇಕು. ದಯಾ ಹೃದಯಿ ಆಗಿ ಆತ್ಮೀಯ ಸಮಾಜ ಸೇವಕನಾಗಬೇಕು. ತನು-ಮನ-ಧನದಿಂದ ಸೇವೆ ಮಾಡಬೇಕು. ಸತ್ಯತಂದೆಯ ಜೊತೆ ಸತ್ಯವಾಗಿರಬೇಕು.

ವರದಾನ:

ಮಾತಿನ ಮೇಲೆ ಡಬಲ್ ಅಂಡರ್ ಲೈನ್ ಮಾಡಿ ಪ್ರತಿ ಮಾತನ್ನು ಅಮೂಲ್ಯ ಮಾಡುವಂತಹ ಮಾಸ್ಟರ್ ಸದ್ಗುರು ಭವ

ನೀವು ಮಕ್ಕಳ ಮಾತು ಹೀಗಿರಲಿ ಅದನ್ನು ಕೇಳುವವರು ಚಾತ್ರಕರಾಗಿರಬೇಕು ಇವರು ಏನಾದರೂ ಸ್ವಲ್ಪ ಮಾತನಾಡಲಿ ಅದನ್ನು ನಾವು ಕೇಳೋಣ ಎಂದುಇದಕ್ಕೆ ಹೇಳಲಾಗುವುದು ಅಮೂಲ್ಯ ಮಹಾವಾಕ್ಯ. ಮಹಾವಾಕ್ಯಗಳು ಹೆಚ್ಚಾಗಿರುವುದಿಲ್ಲ. ಯಾವಾಗ ಬೇಕೋ ಆಗ ಮಾತನಾಡುತ್ತಿರುವುದಕ್ಕೆ ಮಹಾವಾಕ್ಯ ಎಂದು ಹೇಳಲಾಗುವುದಿಲ್ಲ. ನೀವು ಸದ್ಗುರುವಿನ ಮಕ್ಕಳು ಮಾಸ್ಟರ್ ಸದ್ಗುರು ಆಗಿರುವಿರಿ ಆದ್ದರಿಂದ ನಿಮ್ಮ ಒಂದೊಂದು ಮಾತು ಮಹಾವಾಕ್ಯವಾಗಿರಬೇಕು. ಯಾವ ಸಮಯ ಯಾವ ಸ್ಥಾನದಲ್ಲಿ ಯಾವ ಮಾತು ಅವಶ್ಯಕವಾಗಿರುತ್ತೆ, ಯುಕ್ತಿಯುಕ್ತವಾಗಿರುತ್ತೆ ಸ್ವಯಂಗೆ ಹಾಗೂ ಬೇರೆ ಆತ್ಮರಿಗೆ ಲಾಭದಾಯಕವಾಗಿದೆಯೊ, ಅಂತಹ ಮಾತನ್ನೇ ಆಡಿ. ಮಾತಿನ ಮೇಲೆ ಡಬ್ಬಲ್ ಅಂಡರ್ ಲೈನ್ ಮಾಡಿ.

ಸ್ಲೋಗನ್:

ಶುಭಚಿಂತಕಮಣಿಯಾಗಿ, ನಿಮ್ಮ ಕಿರಣಗಳಿಂದ ವಿಶ್ವವನ್ನು ಬೆಳಗಿಸುತ್ತಾ ಹೋಗಿ.

 Download PDF

Post a Comment

0 Comments