19/01/23 ಪ್ರಾತಃಮುರುಳಿ
ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಸಾಕಾರ
ಶರೀರವನ್ನು ನೆನಪು
ಮಾಡುವುದೂ ಸಹ
ಭೂತಾಭಿಮಾನಿ ಆಗುವುದಾಗಿದೆ,
ಏಕೆಂದರೆ ಶರೀರವೂ
ಪಂಚಭೂತಗಳಿಂದ ಕೂಡಿದೆ,
ತಾವು ಆತ್ಮಾಭಿಮಾನಿಗಳಾಗಿ
ಒಬ್ಬ ವಿದೇಹಿ
ತಂದೆಯನ್ನು ನೆನಪು
ಮಾಡಬೇಕು”
ಪ್ರಶ್ನೆ:
ಎಲ್ಲದಕ್ಕಿಂತ ಸರ್ವೋತ್ತಮ ಕಾರ್ಯ ಯಾವುದಾಗಿದೆ, ಅದು ತಂದೆಯೇ ಮಾಡುತ್ತಾರೆ?
ಉತ್ತರ:
ಪೂರ್ಣ ತಮೋಪ್ರಧಾನ ಸೃಷ್ಟಿಯನ್ನು ಸತೋಪ್ರಧಾನ ಸದಾ ಸುಖಿಯನ್ನಾಗಿ ಮಾಡುವ ಕೆಲಸ ಸರ್ವೋತ್ತಮವಾಗಿದೆ. ಇದನ್ನು ತಂದೆಯೇ ಮಾಡುತ್ತಾರೆ. ಈ ಶ್ರೇಷ್ಠ ಕಾರ್ಯದ ಕಾರಣದಿಂದಲೇ ಅವರ ಸ್ಮಾರಕವನ್ನೂ ಸಹ ಬಹಳ ಚೆನ್ನಾಗಿ ಮಾಡಿದ್ದಾರೆ.
ಪ್ರಶ್ನೆ:
ಯಾವ ಎರಡು ಶಬ್ದಗಳಲ್ಲಿ ಪೂರ್ಣ ಡ್ರಾಮಾದ ರಹಸ್ಯವು ಬರುತ್ತದೆ?
ಉತ್ತರ:
ಪೂಜ್ಯ ಹಾಗೂ ಪೂಜಾರಿ. ತಾವು ಪೂಜ್ಯರಾಗಿದ್ದಾಗ
ಪುರುಷೋತ್ತಮರಾಗಿದ್ದಿರಿ, ನಂತರ ಮಧ್ಯಮ ಕನಿಷ್ಟರಾಗುತ್ತೀರಿ. ಮಾಯೆ ಪೂಜ್ಯರಿಂದ ಪೂಜಾರಿಗಳನ್ನಾಗಿ ಮಾಡುತ್ತದೆ.
ಗೀತೆ: ಮಹಾಸಭೆಯಲ್ಲಿ ಪರಂಜ್ಯೋತಿ ಬೆಳಗಿತು.....
ಓಂ ಶಾಂತಿ.
ಭಗವಂತ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ
- ಮನುಷ್ಯರಿಗೆ ಭಗವಂತ ಎಂದು ಹೇಳುವುದು ಸಾಧ್ಯವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರ ಚಿತ್ರವಿದೆ. ಅವರಿಗೂ ಸಹ ಭಗವಂತ ಎಂದು ಹೇಳುವುದಿಲ್ಲ.
ಪರಮಪಿತ ಪರಮಾತ್ಮ ನಿವಾಸ ಅವರಿಗಿಂತಲೂ ಶ್ರೇಷ್ಠ. ಅವರಿಗೆ ಪ್ರಭು, ಈಶ್ವರ,
ಭಗವಂತ ಎಂದು ಹೇಳಲಾಗುತ್ತದೆ. ಮನುಷ್ಯರು ಯಾವಾಗ ಕೂಗುತ್ತಾರೋ ಆಗ ಅವರಿಗೆ ಯಾವುದೇ ಆಕಾರ ಅಥವಾ ಸಾಕಾರ ಮೂರ್ತಿ ಕಾಣಿಸುವುದಿಲ್ಲ. ಆದ್ದರಿಂದ ಯಾವುದಾದರೂ ಮನುಷ್ಯನ ಆಕಾರಕ್ಕೆ ಭಗವಂತ ಎಂದು ಹೇಳಿಬಿಡುತ್ತಾರೆ. ಸನ್ಯಾಸಿಗಳನ್ನು ನೋಡಿದಾಗಲೂ ಸಹ ಭಗವಂತ ಎಂದು ಹೇಳುತ್ತಾರೆ. ಆದರೆ ಸ್ವಯಂ ಭಗವಂತ ತಿಳಿಸುತ್ತಿದ್ದಾರೆ - ಮನುಷ್ಯರಿಗೆ ಭಗವಂತ ಎಂದು ಹೇಳಲು ಸಾಧ್ಯವಿಲ್ಲ.
ನಿರಾಕಾರ ಭಗವಂತನನ್ನು ಎಲ್ಲರೂ ಬಹಳ ನೆನಪು ಮಾಡುತ್ತಾರೆ.
ಯಾರು ಗುರುಗಳನ್ನು ಮಾಡುವುದಿಲ್ಲವೋ, ಚಿಕ್ಕ ಮಕ್ಕಳಾಗುತ್ತಾರೆ ಅವರಿಗೂ ಸಹ ಪರಮಾತ್ಮನನ್ನು ನೆನಪು ಮಾಡು ಎಂದು ಕಲಿಸುತ್ತಾರೆ,
ಆದರೆ ಯಾವ ಪರಮಾತ್ಮನನ್ನು ನೆನಪು ಮಾಡುವುದು ಎಂದು ಹೇಳುವುದಿಲ್ಲ. ಯಾವ ಚಿತ್ರವೂ ಬುದ್ಧಿಯಲ್ಲಿ ಇರುವುದಿಲ್ಲ. ದುಃಖದ ಸಮಯದಲ್ಲಿ ಹೇ!
ಪ್ರಭು ಎಂದು ಹೇಳುತ್ತಾರೆ. ಯಾವುದೇ ಗುರು ಅಥವಾ ದೇವತೆಯ ಚಿತ್ರ ಅವರ ಮುಂದೆ ಬರುವುದಿಲ್ಲ. ಭಲೆ ಬಹಳಷ್ಟು ಗುರುಗಳ ಸೇವೆಯನ್ನು ಮಾಡಿರಬಹುದು ಆದರೂ ಸಹ ಹೇ! ಭಗವಂತ ಎಂದು ಹೇಳಿದಾಗ ಅವರ ಗುರುಗಳು ನೆನಪಿಗೆ ಬರುವುದಿಲ್ಲ.
ಒಂದುವೇಳೆ ಗುರುವನ್ನು ನೆನಪು ಮಾಡಿ ಅವರನ್ನೇ ಭಗವಂತ ಎಂದು ಹೇಳೋಣವೆಂದರೆ ಅವರು ಮನುಷ್ಯರು ಜನನ-ಮರಣದಲ್ಲಿ ಬರುವಂತಹವರು. ಇದು ಪಂಚತತ್ವಗಳಿಂದ ಮಾಡಲ್ಪಟ್ಟ ಶರೀರವನ್ನು ನೆನಪು ಮಾಡು ಎಂದರ್ಥ.
ಇದಕ್ಕೆ ಪಂಚಭೂತ ಎಂದು ಹೇಳಲಾಗುತ್ತದೆ.
ಆತ್ಮಕ್ಕೆ ಭೂತ ಎಂದು ಹೇಳಲಾಗುವುದಿಲ್ಲ. ಅಂದಮೇಲೆ ಇದು ಒಂದು ರೀತಿ ಭೂತ ಪೂಜೆ ಆಯಿತು. ಬುದ್ಧಿಯೋಗ ಶರೀರದ ಕಡೆ ಹೋಯಿತು. ಒಂದುವೇಳೆ ಯಾವುದೇ ಮನುಷ್ಯರನ್ನು ಭಗವಂತ ಎಂದು ತಿಳಿದರೆ ಅವರಲ್ಲಿ ಯಾವ ಆತ್ಮ ಇದೆಯೋ ಅದೇ ಯಾರಿಗೂ ನೆನಪಿಗೆ ಬರುವುದಿಲ್ಲ. ಆತ್ಮ ಇಬ್ಬರಲ್ಲೂ ಇದೆ.
ನೆನಪು ಮಾಡುವಂತಹವರಲ್ಲಿಯೂ ಇದೆ. ಯಾರನ್ನು ನೆನಪು ಮಾಡುತ್ತಾರೋ ಅವರಲ್ಲಿಯೂ ಇದೆ.
ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ.
ಆದರೆ ಪರಮಾತ್ಮನಿಗೆ ಪಾಪಾತ್ಮ ಎಂದು ಹೇಳಲು ಸಾಧ್ಯವಿಲ್ಲ.
ವಾಸ್ತವಿಕವಾಗಿ ಪರಮಾತ್ಮ ಎಂದು ಹೆಸರು ಬಂದಾಗ ಬುದ್ಧಿ ನಿರಾಕಾರನ ಕಡೆ ಹೋಗುತ್ತದೆ. ನಿರಾಕಾರ ತಂದೆಯನ್ನು ನಿರಾಕಾರ ಆತ್ಮ ನೆನಪು ಮಾಡುತ್ತದೆ. ಅವರಿಗೆ ಆತ್ಮಾಭಿಮಾನಿ ಎಂದು ಹೇಳಬಹುದು. ಸಾಕಾರ ಶರೀರವನ್ನು ನೆನಪು ಮಾಡಿದರೆ ಅವರಿಗೆ ಭೂತಾಭಿಮಾನಿ ಎಂದು ಹೇಳಬಹುದು. ಭೂತ,
ಭೂತವನ್ನು ನೆನಪು ಮಾಡುತ್ತದೆ ಏಕೆಂದರೆ ತಮ್ಮನ್ನು ಆತ್ಮ ಎಂದು ತಿಳಿಯುವ ಬದಲು ಪಂಚತತ್ವಗಳ ಶರೀರ ಎಂದು ತಿಳಿಯುತ್ತಾರೆ. ಹೆಸರು ಶರೀರಕ್ಕೆ ಇಡಲಾಗುತ್ತದೆ ಆತ್ಮಕ್ಕಲ್ಲ. ತಮ್ಮನ್ನೂ ಸಹ ಪಂಚತತ್ವಗಳ ಭೂತ ಎಂದು ತಿಳಿಯುತ್ತಾರೆ. ಅವರನ್ನು ಶರೀರದ ರೂಪದಲ್ಲಿ ನೆನಪು ಮಾಡುತ್ತಾರೆ.
ಆತ್ಮಾಭಿಮಾನಿಗಳಂತೂ ಅಲ್ಲ.
ತಮ್ಮನ್ನು ನಿರಾಕಾರ ಆತ್ಮ ಎಂದು ತಿಳಿದಾಗ ನಿರಾಕಾರ ಪರಮಾತ್ಮನನ್ನು ನೆನಪು ಮಾಡುತ್ತಾರೆ. ಎಲ್ಲಾ ಆತ್ಮಗಳ ಸಂಬಂಧ ಮೊಟ್ಟಮೊದಲು ಪರಮಾತ್ಮನ ಜೊತೆ ಇದೆ.
ಆತ್ಮ ದುಃಖದಲ್ಲಿ ಪರಮಾತ್ಮನನ್ನೆ ನೆನಪು ಮಾಡುತ್ತದೆ. ಅವರ ಜೊತೆ ಸಂಬಂಧವಿದೆ.
ಅವರು ಆತ್ಮಗಳನ್ನು ಎಲ್ಲಾ ದುಃಖಗಳಿಂದ ಬಿಡಿಸುತ್ತಾರೆ. ಅವರಿಗೆ ಪರಂಜ್ಯೋತಿ ಎಂದು ಹೇಳಬಹುದು. ಯಾವುದೇ ಭಕ್ತಿಯ ವಿಚಾರವಿಲ್ಲ ಅವರಂತೂ ಪರಮಪಿತ ಪರಮ-ಆತ್ಮ ಆಗಿದ್ದಾರೆ. ಪರಂಜ್ಯೋತಿ ಎಂದು ಹೇಳುವುದರಿಂದ ಮನುಷ್ಯರು ದೀಪ ಎಂದು ತಿಳಿಯುತ್ತಾರೆ.
ಇದಂತೂ ಸ್ವಯಂ ತಂದೆ ತಿಳಿಸಿದ್ದಾರೆ
- ನಾನು ಪರಮ ಆತ್ಮನಾಗಿದ್ದೇನೆ, ಅವರ ಹೆಸರು ಶಿವ ಆಗಿದೆ. ಶಿವನಿಗೆ ರುದ್ರ ಎಂದು ಹೇಳುತ್ತಾರೆ. ಆ ನಿರಾಕಾರನಿಗೆ ಅನೇಕ ಹೆಸರುಗಳು ಇದೆ.
ಬೇರೆ ಯಾರಿಗೂ ಇಷ್ಟೋಂದು ಹೆಸರುಗಳು ಇಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗೆ ಒಂದೇ ಹೆಸರಿದೆ.
ಯಾರೆಲ್ಲಾ ದೇಹಧಾರಿಗಳು ಇದ್ದಾರೆ, ಅವರಿಗೆಲ್ಲಾ ಒಂದೇ ಹೆಸರು ಇರುತ್ತದೆ. ಒಬ್ಬ ಈಶ್ವರನಿಗೆ ಮಾತ್ರ ಅನೇಕ ಹೆಸರುಗಳನ್ನು ಕೊಡಲಾಗಿದೆ. ಅವರ ಮಹಿಮೆ ಅಪರಮಪಾರವಾಗಿದೆ. ಮನುಷ್ಯರಿಗೆ ಒಂದೇ ಹೆಸರು ನಿಗದಿಯಾಗಿರುತ್ತದೆ. ಈಗ ತಾವು ಮರುಜೀವಿಗಳಾಗಿದ್ದೀರಿ ಅಂದಾಗ ನಿಮಗೆ ಇನ್ನೊಂದು ಹೆಸರನ್ನು ಇಡಲಾಗಿದೆ.
ಇದರಿಂದ ಹಳೆಯದೆಲ್ಲವೂ ಮರೆತು ಹೋಗುತ್ತದೆ.
ತಾವು ಪರಮಪಿತ ಪರಮಾತ್ಮನ ಮುಂದೆ ಬದುಕಿದ್ದೂ ಸಾಯುತ್ತೀರಿ.
ಅಂದಮೇಲೆ ಇದು ಮರುಜೀವಾಜನ್ಮವಾಗಿದೆ. ಅಂದಮೇಲೆ ಖಂಡಿತ ತಾಯಿ-ತಂದೆಯ ಬಳಿ ಜನ್ಮ ಪಡೆದುಕೊಂಡಿದ್ದೇವೆ. ಈ ಗುಹ್ಯವಿಚಾರಗಳು ತಂದೆಯೇ ಕುಳಿತು ನಿಮಗೆ ತಿಳಿಸುತ್ತಾರೆ.
ಜಗತ್ತಿನವರು ಶಿವನನ್ನು ತಿಳಿದಿಲ್ಲ. ಬ್ರಹ್ಮಾ-ವಿಷ್ಣು-ಶಂಕರನನ್ನು ತಿಳಿದಿದ್ದಾರೆ. ಬ್ರಹ್ಮನ ಹಗಲು, ಬ್ರಹ್ಮನ ರಾತ್ರಿ ಎಂದು ಹೇಳುತ್ತಾರೆ. ಅದನ್ನೂ ಸಹ ಕೇವಲ ಕೇಳಿದ್ದಾರಷ್ಟೆ. ಬ್ರಹ್ಮನ ಮೂಲಕ ಸ್ಥಾಪನೆ..........
ಆದರೆ ಹೇಗೆ,
ಇದು ತಿಳಿದಿಲ್ಲ.
ಈಗ ರಚಯಿತ ಹೊಸಧರ್ಮ, ಹೊಸ ಜಗತ್ತನ್ನು ರಚಿಸುತ್ತಾರೆ.
ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ.
ತಾವು ಬ್ರಾಹ್ಮಣರು ಬ್ರಹ್ಮಾರವರನ್ನು ಅಲ್ಲ,
ಪರಮಪಿತ ಪರಮಾತ್ಮನನ್ನು ನೆನಪು ಮಾಡುತ್ತೀರಿ ಏಕೆಂದರೆ ಬ್ರಹ್ಮಾರವರ ಮೂಲಕ ತಾವು ಅವರಿಗೆ ಮಕ್ಕಳಾಗಿದ್ದೀರಿ. ಹೊರಗಡೆಯವರು ದೇಹಾಭಿಮಾನಿ ಬ್ರಾಹ್ಮಣರು ಈ ರೀತಿ ತಮ್ಮನ್ನು ಬ್ರಹ್ಮನ ಮಕ್ಕಳು,
ಶಿವನ ಮೊಮ್ಮಕ್ಕಳು ಎಂದು ಹೇಳುವುದಿಲ್ಲ.
ಶಿವಬಾಬಾರವರ ಯಾವ ಜಯಂತಿಯನ್ನು ಮಾಡುತ್ತಾರೆ ಅವರ ಬಗ್ಗೆಯೇ ತಿಳಿಯದಿರುವ ಕಾರಣ ಅವರ ಬಗ್ಗೆ ಗೌರವವಿಲ್ಲ. ಅವರ ಮಂದಿರಕ್ಕೆ ಹೋಗುತ್ತಾರೆ.
ತಿಳಿಯುತ್ತಾರೆ - ಇವರು ಬ್ರಹ್ಮಾ-ವಿಷ್ಣು-ಶಂಕರ ಅಥವಾ ಲಕ್ಷ್ಮೀ-ನಾರಾಯಣರಲ್ಲ ಎಂದು. ಅವರು ನಿರಾಕಾರ ಪರಮಪಿತ ಪರಮಾತ್ಮನೇ ಎಂದು ಗೊತ್ತಿದೆ. ಬೇರೆಲ್ಲಾ ಪಾತ್ರಧಾರಿಗಳ ಪಾತ್ರ ತಮ್ಮ-ತಮ್ಮದೇ ಆಗಿದೆ, ಪುನರ್ಜನ್ಮವನ್ನು ಪಡೆಯುತ್ತಾರೆ. ಆದರೂ ಸಹ ತಮ್ಮ ಹೆಸರನ್ನೇ ಧಾರಣೆ ಮಾಡಿಕೊಳ್ಳುತ್ತಾರೆ. ಈ ಪರಮಪಿತ ಪರಮಾತ್ಮ ಒಬ್ಬರೇ ಆಗಿದ್ದಾರೆ.
ಇವರಿಗೆ ವ್ಯಕ್ತ ನಾಮ-ರೂಪವಿಲ್ಲ ಆದರೆ ಮೂಢಮತಿ ಮನುಷ್ಯರು ತಿಳಿಯುವುದಿಲ್ಲ. ಪರಮಾತ್ಮನ ಸ್ಮಾರಕವಿದೆ ಎಂದಮೇಲೆ ಅವರು ಖಂಡಿತ ಬಂದಿರಬಹುದು.
ಸ್ವರ್ಗವನ್ನು ರಚಿಸಿರಬಹುದು.
ಇಲ್ಲವೆಂದರೆ ಸ್ವರ್ಗವನ್ನು ಯಾರು ರಚಿಸುತ್ತಾರೆ.
ಈಗ ಮತ್ತೆ ಬಂದು ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ. ಇದಕ್ಕೆ ಯಜ್ಞ ಎಂದು ಹೇಳಲಾಗುತ್ತದೆ ಏಕೆಂದರೆ ಇದರಲ್ಲಿ ಸ್ವಾಹ ಆಗಬೇಕಾಗಿದೆ. ಯಜ್ಞವಂತೂ ಬಹಳ ಮನುಷ್ಯರು ರಚಿಸುತ್ತಾರೆ. ಅದೆಲ್ಲವೂ ಭಕ್ತಿಮಾರ್ಗದ ಸ್ಥೂಲ ಯಜ್ಞವಾಗಿದೆ. ಪರಮಪಿತ ಪರಮಾತ್ಮ ಸ್ವಯಂ ಬಂದು ಯಜ್ಞವನ್ನು ರಚಿಸುತ್ತಾರೆ. ಮಕ್ಕಳಿಗೆ ಓದಿಸುತ್ತಾರೆ. ಯಜ್ಞ ರಚಿಸಿದಾಗ ಅದರಲ್ಲಿ ಬ್ರಾಹ್ಮಣರು ಶಾಸ್ತ್ರ ಕಥೆ ಇತ್ಯಾದಿಗಳನ್ನು ಹೇಳುತ್ತಾರೆ. ಈ ತಂದೆಯಂತೂ ಜ್ಞಾನಪೂರ್ಣರಾಗಿದ್ದಾರೆ. ಹೇಳುತ್ತಾರೆ
- ಗೀತೆ-ಭಾಗವತ ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿದೆ. ಈ ಸ್ಥೂಲ ಯಜ್ಞವೂ ಸಹ ಭಕ್ತಿಮಾರ್ಗದ್ದಾಗಿದೆ. ಈ ಸಮಯವೇ ಭಕ್ತಿ ಮಾರ್ಗದ್ದು.
ಕಲಿಯುಗ ಅಂತ್ಯವಾಗುತ್ತದೋ ಭಕ್ತಿಯ ಅಂತ್ಯವೂ ಬಂದಾಗ ಭಗವಂತ ಬಂದು ಮಿಲನ ಮಾಡುತ್ತಾರೆ ಏಕೆಂದರೆ ಅವರೇ ಭಕ್ತಿಯ ಫಲವನ್ನು ನೀಡುವವರು.
ಅವರಿಗೆ ಜ್ಞಾನಸೂರ್ಯ ಎಂದು ಹೇಳಲಾಗುತ್ತದೆ.
ಜ್ಞಾನಚಂದ್ರಮ, ಜ್ಞಾನಸೂರ್ಯ ಹಾಗೂ ಜ್ಞಾನದ ಅದೃಷ್ಟ ನಕ್ಷತ್ರಗಳು.
ಒಳ್ಳೆಯದು ತಂದೆ ಜ್ಞಾನಸೂರ್ಯನಾಗಿದ್ದಾರೆ ನಂತರ ಜ್ಞಾನಚಂದ್ರಮ ತಾಯಿಯೂ ಬೇಕು. ಯಾವ ತನುವಿನಲ್ಲಿ ಪ್ರವೇಶ ಮಾಡಿದ್ದಾರೋ ಅವರು ಜ್ಞಾನಚಂದ್ರಮ ತಾಯಿಯಾದರು ಹಾಗೂ ಬಾಕಿ ಉಳಿದೆಲ್ಲಾ ಮಕ್ಕಳು ಅದೃಷ್ಟ ನಕ್ಷತ್ರಗಳು ಆಗಿದ್ದಾರೆ. ಈ ಲೆಕ್ಕದಿಂದ ಜಗದಾಂಬನೂ ಸಹ ಅದೃಷ್ಟ ನಕ್ಷತ್ರವಾಗಿದ್ದಾರೆ ಏಕೆಂದರೆ ಅವರೂ ಸಹ ಮಗು ತಾನೇ.
ನಕ್ಷತ್ರಗಳಲ್ಲಿ ಕೆಲವು ತೀಕ್ಷ್ಣವಾಗಿಯೂ ಇರುತ್ತದೆ.
ಹಾಗೆಯೇ ಇಲ್ಲೂ ಸಹ ನಂಬರ್ವಾರ್ ಆಗಿದ್ದಾರೆ. ಅದು ಸ್ಥೂಲ ಆಕಾಶದ ಸೂರ್ಯಚಂದ್ರ ಹಾಗೂ ನಕ್ಷತ್ರಗಳು ಮತ್ತು ಇದು ಜ್ಞಾನದ ವಿಚಾರವಾಗಿದೆ. ಹೇಗೆ ಆ ನೀರಿನ ನದಿಗಳು ಇದೆಯೋ ಹಾಗೆಯೇ ಇವು ಜ್ಞಾನದ ನದಿಗಳು,
ಇವು ಜ್ಞಾನಸಾಗರದಿಂದ ಬಂದಿವೆ.
ಈಗ ಶಿವಜಯಂತಿಯನ್ನು ಆಚರಿಸುತ್ತಾರೆ, ಅಂದಮೇಲೆ ಇಡೀ ಸೃಷ್ಟಿಯ ತಂದೆ ಬರುತ್ತಾರೆ.
ಬಂದು ಅವಶ್ಯವಾಗಿ ಸ್ವರ್ಗವನ್ನು ರಚಿಸುತ್ತಾರೆ.
ತಂದೆ ಬರುವುದೇ ಆದಿ ಸನಾತನ ದೇವೀ-ದೇವತಾ ಧರ್ಮವನ್ನು ಸ್ಥಾಪನೆ ಮಾಡಲು, ಅದು ಈಗ ಪ್ರಾಯಃಲೋಪವಾಗಿದೆ. ಸರ್ಕಾರವೂ ಸಹ ಯಾವುದೇ ಧರ್ಮವನ್ನು ಒಪ್ಪಿಕೊಳ್ಳುವುದಿಲ್ಲ. ನಮ್ಮದು ಯಾವುದೇ ಧರ್ಮವಿಲ್ಲ ಎಂದು ಹೇಳುತ್ತದೆ.
ಇದು ಅವರು ಸರಿಯಾಗಿ ಹೇಳುತ್ತಾರೆ.
ತಂದೆಯು ಹೇಳುತ್ತಾರೆ ಭಾರತದ ಆದಿ ಸನಾತನ ದೇವೀ-ದೇವತಾ ಧರ್ಮವು ಪ್ರಾಯಃಲೋಪವಾಗಿದೆ. ಧರ್ಮದಲ್ಲಿ ಶಕ್ತಿ ಇರುತ್ತದೆ.
ಭಾರತವಾಸಿಗಳು ತಮ್ಮ ದೈವೀ ಧರ್ಮದಲ್ಲಿ ಇದ್ದಾಗ ಬಹಳ ಸುಖಿಗಳು ಆಗಿದ್ದರು.
ವಿಶ್ವದಲ್ಲಿ ಸರ್ವಾಧಿಕಾರ ರಾಜ್ಯವಿತ್ತು. ಪುರುಷೋತ್ತಮರು ರಾಜ್ಯಭಾರ ಮಾಡುತ್ತಿದ್ದರು. ಶ್ರೀ ಲಕ್ಷ್ಮೀ-ನಾರಾಯಣರಿಗೆ ಪುರುಷೋತ್ತಮರು ಎಂದು ಹೇಳಲಾಗುತ್ತದೆ.
ನಂಬರ್ವಾರಾಗಿ ಶ್ರೇಷ್ಠರು ಕನಿಷ್ಟರು ಆಗಿಬಿಡುತ್ತಾರೆ. ಸರ್ವೋತ್ತಮ ಪುರುಷ,
ಉತ್ತಮ ಪುರುಷ,
ಮಧ್ಯಮ, ಕನಿಷ್ಟ ಪುರುಷರು ಆಗಿಬಿಡುತ್ತಾರೆ. ಮೊಟ್ಟಮೊದಲು ಎಲ್ಲರಿಗಿಂತ ಸರ್ವೋತ್ತಮ ಪುರುಷರು ಯಾರಾಗಿತ್ತಾರೋ ಅವರೇ ನಂತರ ಮಧ್ಯಮ,
ಕನಿಷ್ಟರಾಗುತ್ತಾರೆ. ಅಂದಮೇಲೆ ಲಕ್ಷ್ಮೀ-ನಾರಾಯಣರಿಗೆ ಪುರುಷೋತ್ತಮರು. ಎಲ್ಲಾ ಪುರುಷರಲ್ಲಿ ಉತ್ತಮರು ನಂತರ ಕೆಳಗೆ ಇಳಿದಾಗ ದೇವತೆಗಳಿಂದ ಕ್ಷತ್ರಿಯರು, ಕ್ಷತ್ರಿಯರಿಂದ ನಂತರ ವೈಶ್ಯರು,
ಶೂದ್ರರಿಂದ ಕನಿಷ್ಟರಾಗುತ್ತಾರೆ. ಸೀತಾರಾಮನಿಗೂ ಸಹ ಪುರುಷೋತ್ತಮರು ಎಂದು ಹೇಳುವುದಿಲ್ಲ. ಎಲ್ಲಾ ರಾಜರಿಗೂ ರಾಜರು,
ಸರ್ವೋತ್ತಮ ಸತೋಪ್ರಧಾನ ಪುರುಷೋತ್ತಮರು ಲಕ್ಷ್ಮೀ-ನಾರಾಯಣರು ಆಗಿದ್ದಾರೆ.
ಈ ಎಲ್ಲಾ ಮಾತುಗಳು ಬುದ್ಧಿಯಲ್ಲಿ ಇದೆ. ಹೇಗೆ ಈ ಸೃಷ್ಟಿಯ ಚಕ್ರ ನಡೆಯುತ್ತದೆ,
ಮೊಟ್ಟಮೊದಲು ಉತ್ತಮರು ನಂತರ ಮಧ್ಯಮರು,
ಕನಿಷ್ಟರಾಗುತ್ತಾರೆ. ಈ ಸಮಯದಲ್ಲಿ ಇಡೀ ಜಗತ್ತು ತಮೋಪ್ರಧಾನವಾಗಿದೆ, ಇದೆಲ್ಲವನ್ನು ತಂದೆಯೇ ತಿಳಿಸುತ್ತಾರೆ. ಯಾರ ಜಯಂತಿಯನ್ನು ಈಗ ಆಚರಿಸುತ್ತೇವೆಯೋ ಅವರು ಇಂದಿಗೆ 5000 ವರ್ಷದ ಮೊದಲು ಬಂದಿದ್ದರು ಎಂಬುದನ್ನು ನೀವು ಹೇಳಬಹುದು ಇಲ್ಲವೆಂದರೆ ಶಿವಜಯಂತಿಯನ್ನು ಏಕೆ ಆಚರಿಸುತ್ತಾರೆ? ಪರಮಪಿತ ಪರಮಾತ್ಮ ಅವಶ್ಯವಾಗಿ ಮಕ್ಕಳಿಗೆ ಉಡುಗೊರೆಯನ್ನು ತರುತ್ತಾರೆ ಹಾಗೂ ಸರ್ವೋತ್ತಮ ಕಾರ್ಯವನ್ನು ಮಾಡುತ್ತಾರೆ. ಪೂರ್ಣ ತಮೋಪ್ರಧಾನ ಸೃಷ್ಟಿಯನ್ನು ಸತೋಪ್ರಧಾನ ಸದಾ ಸುಖಿಯನ್ನಾಗಿ ಮಾಡುತ್ತಾರೆ.
ಅವರು ಎಷ್ಟು ಶ್ರೇಷ್ಠರೋ ಅವರ ಸ್ಮಾರಕವೂ ಅಷ್ಟೇ ಶ್ರೇಷ್ಠವಾಗಿತ್ತು. ಅವರ ಮಂದಿರವನ್ನು ಲೂಟಿ ಮಾಡಿಕೊಂಡು ಹೋದರು.
ಮನುಷ್ಯರು ಧನಕ್ಕಾಗಿಯೇ ಆಕ್ರಮಣ ಮಾಡುತ್ತಾರೆ.
ಹೊರದೇಶದಿಂದ ಬಂದದ್ದೂ ಸಹ ಹಣಕ್ಕಾಗಿಯೇ,
ಆ ಸಮಯದಲ್ಲಿ ಬಹಳ ಸಂಪತ್ತು ಇತ್ತು. ಆದರೆ ಮಾಯಾ ರಾವಣನೂ ಭಾರತವನ್ನು ಕವಡೆ ಸಮಾನ ಮಾಡಿದ.
ತಂದೆ ಬಂದು ವಜ್ರ ಸಮಾನ ಮಾಡುತ್ತಾರೆ. ಇಂತಹ ಶಿವತಂದೆಯನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಸರ್ವವ್ಯಾಪಿ ಎಂದು ಹೇಳುತ್ತಾರೆ. ಇದೂ ಸಹ ತಪ್ಪಾಗಿದೆ.
ಧೋಣಿಯನ್ನು ಪಾರು ಮಾಡುವಂತಹ ಸದ್ಗುರು ಒಬ್ಬರೇ ಆಗಿದ್ದಾರೆ.
ಮುಳಿಗಿಸುವವರು ಅನೇಕರು ಇದ್ದಾರೆ. ಎಲ್ಲರೂ ವಿಷಯಸಾಗರದಲ್ಲಿ ಮುಳುಗಿದ್ದಾರೆ.
ಆಗಲೇ ಹೇಳುವುದು
- ಈ ದುಃಖದ ಜಗತ್ತು, ವಿಷಯ ಸಾಗರದ ಕಡೆ ಕರೆದೊಯ್ಯಿರಿ. ಗಾಯನವಿದೆ
- ವಿಷ್ಣುವು ಕ್ಷೀರಸಾಗರದಲ್ಲಿ ಇರುತ್ತಾರೆ. ಸ್ವರ್ಗವನ್ನು ಕ್ಷೀರಸಾಗರ ಎಂದು ಹೇಳಲಾಗುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಾರೆ.
ವಿಷ್ಣು ಕ್ಷೀರಸಾಗರದಲ್ಲಿ ವಿಶ್ರಾಮ ಮಾಡುತ್ತಾರೆ ಎಂದಲ್ಲ. ಮನುಷ್ಯರು ದೊಡ್ಡ ಕೊಳವನ್ನು ಮಾಡಿ ಅದರ ಮಧ್ಯದಲ್ಲಿ ವಿಷ್ಣುವಿನ ಚಿತ್ರವನ್ನು ಇಡುತ್ತಾರೆ.
ವಿಷ್ಣುವಿನ ಚಿತ್ರವನ್ನು ಬಹಳ ದೊಡ್ಡದನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರು ಅಷ್ಟು ಎತ್ತರವಾಗಿರುವುದಿಲ್ಲ. ಬಹಳ ಎಂದರೆ 6 ಅಡಿ ಇರುತ್ತಾರೆ. ಪಾಂಡವರ ಚಿತ್ರವನ್ನೂ ಸಹ ಬಹಳ ದೊಡ್ಡದಾಗಿ ಮಾಡುತ್ತಾರೆ. ರಾವಣನ ಭೂತವನ್ನೂ ಸಹ ಎಷ್ಟು ದೊಡ್ಡದಾಗಿ ಮಾಡುತ್ತಾರೆ. ದೊಡ್ಡ ಹೆಸರಿದ್ದಾಗ ಚಿತ್ರವನ್ನೂ ದೊಡ್ಡದಾಗಿ ಮಾಡುತ್ತಾರೆ.
ಬಾಬಾನ ಹೆಸರು ಭಲೆ ದೊಡ್ಡದಿದೆ ಆದರೆ ಅವರ ಚಿತ್ರ ಚಿಕ್ಕದಿದೆ.
ತಿಳಿಸುವುದುಕ್ಕಾಗಿ ಇಷ್ಟು ದೊಡ್ಡ ರೂಪವನ್ನು ಕೊಡಲಾಗಿದೆ. ತಂದೆಯು ಹೇಳುತ್ತಾರೆ ನನ್ನದು ಇಷ್ಟು ದೊಡ್ಡ ರೂಪವಿಲ್ಲ. ಹೇಗೆ ಆತ್ಮ ಚಿಕ್ಕದಾಗಿದೆಯೋ ಹಾಗೆಯೇ ನಾನು ಪರಮಾತ್ಮನೂ ಸಹ ನಕ್ಷತ್ರವಾಗಿದ್ದೇನೆ. ಅವರಿಗೆ ಪರಮಾತ್ಮ ಎಂದು ಹೇಳಲಾಗುತ್ತದೆ, ಅವರು ಸರ್ವ ಶ್ರೇಷ್ಠರಾಗಿದ್ದಾರೆ. ಅವರಲ್ಲಿಯೇ ಪೂರ್ಣ ಜ್ಞಾನ ತುಂಬಿದೆ,
ಅವರ ಮಹಿಮೆಯನ್ನು ಹಾಡಲಾಗುತ್ತದೆ - ಅವರು ಮನುಷ್ಯ ಸೃಷ್ಟಿಯ ಬೀಜರೂಪಿ, ಜ್ಞಾನಸಾಗರ,
ಚೈತನ್ಯ ಆತ್ಮ ಆಗಿದ್ದಾರೆ. ಆದರೆ ಕರ್ಮೇಂದ್ರಿಯಗಳಿದ್ದಾಗ ಮಾತನಾಡುತ್ತಾರೆ. ಹೇಗೆ ಮಗು ಚಿಕ್ಕ ಕರ್ಮೇಂದ್ರಿಯಗಳಿದ್ದಾಗ ಮಾತನಾಡುವುದಿಲ್ಲ ದೊಡ್ಡದು ಆದಾಗ ಶಾಸ್ತ್ರ ಇತ್ಯಾದಿಗಳನ್ನು ನೋಡಿದಾಗ ಹಿಂದಿನ ಸಂಸ್ಕಾರಗಳ ಸ್ಮೃತಿ ಬರುತ್ತದೆ.
ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ನಾನು ಮತ್ತೆ
5000 ವರ್ಷಗಳ ನಂತರ ತಮಗೆ ಅದೇ ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಕೃಷ್ಣ ರಾಜಯೋಗವನ್ನು ಕಲಿಸುವುದಿಲ್ಲ.
ಕೃಷ್ಣ ಪ್ರಾಲಬ್ಧವನ್ನು ಭೋಗಿಸುತ್ತಾರೆ. 8 ಜನ್ಮ ಸೂರ್ಯವಂಶೀ, 12 ಜನ್ಮ ಚಂದ್ರವಂಶೀ ಮತ್ತೆ
63 ಜನ್ಮಗಳು ವೈಶ್ಯ,
ಶೂದ್ರವಂಶೀ ಆಗುತ್ತಾನೆ.
ಈಗ ಎಲ್ಲರದ್ದೂ ಇದು ಅಂತಿಮ ಜನ್ಮವಾಗಿದೆ. ಈ ಕೃಷ್ಣನ ಆತ್ಮವೂ ಕೇಳುತ್ತಿದೆ. ತಾವು ಕೇಳುತ್ತಿದ್ದೀರಿ. ಇದು ಸಂಗಮಯುಗೀ ಬ್ರಾಹ್ಮಣ ವರ್ಣವಾಗಿದೆ ನಂತರ ತಾವು ಬ್ರಾಹ್ಮಣರಿಂದ ಹೋಗಿ ದೇವತೆಗಳು ಆಗುತ್ತೀರಿ ಅಂದರೆ ಬ್ರಾಹ್ಮಣ ಧರ್ಮ ಹಾಗೂ ಸೂರ್ಯವಂಶೀ ದೇವತಾ ಧರ್ಮ ಹಾಗೂ ಚಂದ್ರವಂಶೀ ಕ್ಷತ್ರಿಯ ಧರ್ಮ ಈ ಮೂರರ ಸ್ಥಾಪಕ ಒಬ್ಬರೇ ಪರಮಪಿತ ಪರಮಾತ್ಮ ಆಗಿದ್ದಾರೆ. ಅಂದಮೇಲೆ ಈ ಮೂರರ ಶಾಸ್ತ್ರವೂ ಸಹ ಒಂದೇ ಆಗಬೇಕು.
ಬೇರೆ-ಬೇರೆ ಶಾಸ್ತ್ರಗಳು ಇಲ್ಲ.
ಬ್ರಹ್ಮಾ ಎಷ್ಟು ದೊಡ್ಡವರೆಂದರೆ ಅವರು ಸರ್ವರ ತಂದೆಯಾಗಿದ್ದಾರೆ, ಪ್ರಜಾಪಿತ. ಅವರದ್ದೂ ಯಾವುದೇ ಶಾಸ್ತ್ರವಿಲ್ಲ.
ಒಂದು ಗೀತೆಯಲ್ಲಿಯೇ ಭಗವಂತನ ಮಹಾವಾಕ್ಯಗಳು ಇವೆ. ಬ್ರಹ್ಮಾ ಭಗವಾನುಚ ಅಲ್ಲ.
ಇದು ಶಿವಭಗವಾನುವಾಚ ಬ್ರಹ್ಮಾರವರ ಮೂಲಕ,
ಇದರಿಂದ ಶೂದ್ರರನ್ನು ಪರಿವರ್ತನೆ ಮಾಡಿ ಬ್ರಾಹ್ಮಣರನ್ನಾಗಿ ಮಾಡಲಾಗುತ್ತದೆ.
ಬ್ರಾಹ್ಮಣರೇ ದೇವತೆಗಳು ಹಾಗೂ ಯಾರು ಫೇಲ್ ಆಗುತ್ತಾರೋ ಅವರು ಕ್ಷತ್ರಿಯರು ಆಗುತ್ತಾರೆ. 2 ಕಲೆ ಕಡಿಮೆ ಆಗುತ್ತದೆ.
ಎಷ್ಟು ಚೆನ್ನಾಗಿ ತಂದೆ ತಿಳಿಸುತ್ತಾರೆ.
ಪರಮಪಿತ ಪರಮಾತ್ಮ ಸರ್ವ ಶ್ರೇಷ್ಠರಾಗಿದ್ದಾರೆ ನಂತರ ಬ್ರಹ್ಮಾ-ವಿಷ್ಣು-ಶಂಕರ.
ಇವರಿಗೆ ಪುರುಷೋತ್ತಮ ಎಂದು ಹೇಳುವುದಿಲ್ಲ.
ಯಾರು ಪುರುಷೋತ್ತಮರಾಗುತ್ತಾರೋ ಅವರೇ ನಂತರ ಕನಿಷ್ಟರಾಗುತ್ತಾರೆ. ಮನುಷ್ಯರಲ್ಲಿ ಸರ್ವೋತ್ತಮರೆಂದರೆ ಲಕ್ಷ್ಮೀ-ನಾರಾಯಣರು,
ಅವರಿಗೆ ಮಂದಿರವಿದೆ ಆದರೆ ಅವರ ಮಹಿಮೆಯನ್ನು ಯಾರೂ ತಿಳಿದಿಲ್ಲ. ಕೇವಲ ಪೂಜೆ ಮಾಡುತ್ತಿರುತ್ತಾರೆ. ಈಗ ನೀವು ಪೂಜಾರಿಗಳಿಂದ ಪೂಜ್ಯರಾಗುತ್ತಿದ್ದೀರಿ ನಂತರ ಮಾಯೆ ನಿಮ್ಮನ್ನು ಪೂಜಾರಿಗಳನ್ನಾಗಿ ಮಾಡುತ್ತದೆ. ಡ್ರಾಮಾ ಆ ರೀತಿ ಮಾಡಲ್ಪಟ್ಟಿದೆ. ನಾಟಕ ಪೂರ್ಣವಾದಾಗ ನಾನು ಬರಬೇಕಾಗುತ್ತದೆ ನಂತರ ತಾನಾಗಿಯೇ ವೃದ್ಧಿ ಆಗುವುದು ನಿಂತು ಹೋಗುತ್ತದೆ ಮತ್ತೆ ತಾವು ಮಕ್ಕಳು ಬಂದು ತಮ್ಮ-ತಮ್ಮ ಪಾತ್ರವನ್ನು ಪುನರಾವರ್ತನೆ ಮಾಡಬೇಕು.
ಈ ಪರಮಪಿತ ಪರಮಾತ್ಮ ಸ್ವಯಂ ಕುಳಿತು ತಿಳಿಸುತ್ತಾರೆ,
ಇವರ ಜಯಂತಿಯನ್ನು ಭಕ್ತಿ ಮಾರ್ಗದಲ್ಲಿ ಆಚರಿಸಲಾಗುತ್ತದೆ. ಇಲ್ಲಿಯತನಕ ಆಚರಿಸುತ್ತಲೇ ಬಂದಿದ್ದಾರೆ.
ಸ್ವರ್ಗದಲ್ಲಿ ಯಾರದೇ ಜಯಂತಿಯನ್ನು ಆಚರಿಸುವುದಿಲ್ಲ. ಕೃಷ್ಣ, ರಾಮ ಇವರ ಯಾರದೂ ಜಯಂತಿಯನ್ನು ಆಚರಿಸುವುದಿಲ್ಲ. ಅವರು ಸ್ವಯಂ ಅಲ್ಲಿ ಇರುತ್ತಾರೆ.
ಇಲ್ಲಿ ಯಾರು ಇದ್ದು ಹೋದರು ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಅಲ್ಲಿ ವರ್ಷ-ವರ್ಷವೂ ಜನ್ಮದಿನವನ್ನು ಆಚರಿಸುವುದಿಲ್ಲ. ಅಲ್ಲಿ ಸದಾ ಖುಷಿಯೇ-ಖುಷಿ ಇರುತ್ತದೆ, ಜನ್ಮದಿನವನ್ನು ಏಕೆ ಆಚರಿಸುತ್ತಾರೆ?
ಮಗುವಿನ ಹೆಸರನ್ನು ತಂದೆ-ತಾಯಿ ಹೇಳುತ್ತಾರೆ. ಅಲ್ಲಿ ಗುರುಗಳು ಇರುವುದಿಲ್ಲ.
ವಾಸ್ತವಿಕವಾಗಿ ಈ ಮಾತುಗಳ ಸಂಬಂಧ ಜ್ಞಾನ-ಯೋಗದ ಜೊತೆ ಇಲ್ಲ.
ಬಾಕಿ ಅಲ್ಲಿಯ ಸಂಪ್ರದಾಯವೇನು ಎಂಬುದನ್ನು ಕೇಳಿದಾಗ ಬಾಬಾ ಹೇಳುತ್ತಾರೆ ಅಲ್ಲಿಯ ನಿಯಮ ಏನು ಇರುತ್ತದೆಯೋ ಅದರಂತೆ ನಡೆಯುತ್ತದೆ, ನೀವು ಕೇಳುವ ಅವಶ್ಯಕತೆ ಇಲ್ಲ. ಮೊದಲು ಶ್ರಮಪಟ್ಟು ತಮ್ಮ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಿ. ಯೋಗ್ಯರಾಗಿ,
ನಂತರ ಕೇಳಿ.
ಡ್ರಾಮಾದಲ್ಲಿ ಯಾವುದಾದರೂ ನಿಯಮವಿರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ತಮ್ಮನ್ನು ನಿರಾಕಾರ ಆತ್ಮ ಎಂದು ತಿಳಿದು ನಿರಾಕಾರ ತಂದೆಯನ್ನು ನೆನಪು ಮಾಡಬೇಕು, ಯಾವುದೇ ದೇಹಧಾರಿಯನ್ನು ಅಲ್ಲ.
ಮರುಜೀವಿಗಳಾಗಿ ಹಳೆಯ ಮಾತುಗಳನ್ನು ಬುದ್ಧಿಯಿಂದ ಮರೆಯಬೇಕು.
2.
ತಂದೆ ರಚಿಸಿರುವ ಈ ರುದ್ರ ಯಜ್ಞದಲ್ಲಿ ಸಂಪೂರ್ಣ ಸ್ವಾಹ ಆಗಬೇಕು.
ಶೂದ್ರರನ್ನು ಬ್ರಾಹ್ಮಣ ಧರ್ಮದಲ್ಲಿ ಪರಿವರ್ತಿಸುವ ಸೇವೆ ಮಾಡಬೇಕು.
ವರದಾನ:
ದಿನಚರಿಯ ಸೆಟಿಂಗ್
ಮತ್ತು ತಂದೆಯ
ಜೊತೆಯ ಮೂಲಕ
ಪ್ರತಿಯೊಂದು ಕಾರ್ಯವನ್ನು
ಅಕ್ಯುರೇಟ್ ಆಗಿ
ಮಾಡುವಂತಹ ವಿಶ್ವಕಲ್ಯಾಣಕಾರಿ
ಭವ
ಪ್ರಪಂಚದಲ್ಲಿ ಯಾರೇ ಗಣ್ಯವ್ಯಕ್ತಿಯಾಗಿರುತ್ತಾರೆ, ಅವರ ದಿನಚರಿಯ ಸೆಟಿಂಗ್ ಇರುತ್ತದೆ. ಯಾವಾಗ ದಿನಚರಿಯ ಸೆಟಿಂಗ್ ಇರುತ್ತದೆ, ಆಗ ಯಾವುದೇ ಕಾರ್ಯವು ಅಕ್ಯುರೇಟ್ ಆಗಿ ಆಗುತ್ತದೆ. ಸೆಟಿಂಗ್ನಿಂದ ಸಮಯ, ಶಕ್ತಿಯೆಲ್ಲವೂ ಉಳಿತಾಯವಾಗಿಬಿಡುತ್ತದೆ, ಒಬ್ಬ ವ್ಯಕ್ತಿಯು 10 ಕಾರ್ಯಗಳನ್ನು ಮಾಡಬಹುದು. ಅಂದಮೇಲೆ ತಾವು ವಿಶ್ವಕಲ್ಯಾಣಕಾರಿ
ಜವಾಬ್ದಾರ ಆತ್ಮರು, ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ದಿನಚರಿಯ ಸೆಟಿಂಗ್ ಮಾಡಿರಿ ಮತ್ತು ತಂದೆಯ ಜೊತೆ ಸದಾ ಕಂಬೈಂಡ್ ಆಗಿರಿ. ಸಾವಿರ ಭುಜಧಾರಿ ತಂದೆಯು ತಮ್ಮೆಲ್ಲರ ಜೊತೆಯಿದ್ದಾರೆ ಅಂದಮೇಲೆ ಒಂದು ಕಾರ್ಯಕ್ಕೆ ಬದಲಾಗಿ ಸಾವಿರ ಕಾರ್ಯಗಳನ್ನು ಅಕ್ಯುರೇಟ್ ಆಗಿ ಮಾಡಬಹುದು.
ಸ್ಲೋಗನ್:
ಸರ್ವ ಆತ್ಮರ ಪ್ರತಿ ಶುದ್ಧ ಸಂಕಲ್ಪಗಳನ್ನು
ಮಾಡುವುದೇ ವರದಾನಿ ಮೂರ್ತಿಯಾಗುವುದಾಗಿದೆ.
0 Comments