Header Ads Widget

Header Ads

KANNADA MURLI 15.01.23

 

15/01/23  ಪ್ರಾತಃಮುರುಳಿ  ಓಂಶಾಂತಿ  "ಅವ್ಯಕ್ತ-ಬಾಪ್ದಾದಾ"  ರಿವೈಜ್: 18/11/93


Listen to the Murli audio file



ಸಂಗಮಯುಗದ ಅತೀಪ್ರಿಯರಿಂದ ಭವಿಷ್ಯದ ರಾಜ್ಯ ಅಧಿಕಾರಿಗಳು

ಇಂದು ಸರ್ವ ಮಕ್ಕಳ ಹೃದಯ ರಾಮ ತಂದೆ ತನ್ನ ನಾಲ್ಕಾರು ಕಡೆ ಇರುವಂತಹ ಸರ್ವ ಅತೀ ಪ್ರಿಯ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಮಗು ಹೃದಯರಾಮನ ಪ್ರೀತಿಗೆ ಪಾತ್ರರಾಗಿದ್ದಾರೆ. ಇದು ದಿವ್ಯ ಪ್ರಿಯ ಪರಮಾತ್ಮನ ಪ್ರೀತಿಯ ಕೋಟಿಯಲ್ಲಿ ಕೆಲವರು ಭಾಗ್ಯವಂತ ಮಕ್ಕಳು ಪ್ರಾಪ್ತಿ ಮಾಡುವುದಕ್ಕೆ ಸಾಧ್ಯ. ಅನೇಕ ಜನ್ಮ ಆತ್ಮಗಳು ಅಥವಾ ಮಹಾನ್ ಆತ್ಮಗಳ ಮುಖಾಂತರ ಪ್ರೀತಿಯ ಅನುಭವ ಮಾಡಿದ್ದೀರಿ. ಈಗ ಒಂದು ಅಲೌಕಿಕ ಜನ್ಮದಲ್ಲಿ ಪರಮಾತ್ಮನ ಪ್ರೀತಿಯ ಅಥವಾ ಅತಿ ಪ್ರೀತಿಯ ಅನುಭವವನ್ನು ಮಾಡುತ್ತಿದ್ದೀರಿ. ದಿವ್ಯ ಪ್ರೀತಿಯ ಮುಖಾಂತರ ರಾಜ ಮಗುವಾಗಿ ಬಿಟ್ಟಿದ್ದೀರಿ. ಆದ್ದರಿಂದ ಹೃದಯರಾಮನಿಗೂ ಸಹ ಅಲೌಕಿಕ ನಶೆ ಇದೆ. ನನ್ನ ಪ್ರತಿಯೊಂದು ಮಗು ರಾಜ ಮಗುವಾಗಿದ್ದಾರೆ. ರಾಜ ಮಕ್ಕಳಲ್ಲವೇ? ಪ್ರಜೆಗಳಂತೂ ಅಲ್ಲ ಅಲ್ಲವೇ? ಎಲ್ಲರೂ ತಮ್ಮ ಟೈಟಲ್ ಅನ್ನು ಏನು ಹೇಳುತ್ತೀರಾ? ರಾಜಯೋಗಿ. ಎಲ್ಲರೂ ರಾಜಯೋಗಿಗಳಾ ಅಥವಾ ಯಾರಾದರೂ ಪ್ರಜಾ ಯೋಗಿಗಳಿದ್ದೀರಾ? ಎಲ್ಲರೂ ರಾಜಯೋಗಿಗಳು ಎಂದರೆ ಪ್ರಜೆಗಳು ಎಲ್ಲಿಂದ ಬಂದರು? ರಾಜ್ಯವನ್ನು ಯಾರ ಮೇಲೆ ಮಾಡುತ್ತೀರಾ? ಪ್ರಜೆಗಳಂತೂ ಬೇಕಲ್ಲವೇ? ಹಾಗಾದರೆ ಅವರು ಪ್ರಜಾಯೋಗಿಗಳು ಯಾವಾಗ ಬರುತ್ತಾರೆ? ರಾಜ ಮಗು ಅರ್ಥಾತ್ ಈಗಲೂ ಸಹ ರಾಜರು ಹಾಗೂ ಭವಿಷ್ಯದಲ್ಲೂ ಸಹ ರಾಜರು, ಡಬಲ್ ರಾಜ್ಯವಿದೆ. ಕೇವಲ ಭವಿಷ್ಯದ ರಾಜ್ಯವಲ್ಲ. ಭವಿಷ್ಯಕ್ಕೆ ಮೊದಲು ಈಗ ಸ್ವರಾಜ್ಯ ಅಧಿಕಾರಿಗಳಾಗಿದ್ದೀರಿ. ತಮ್ಮ ಸ್ವರಾಜ್ಯದ ಕಾರೋಬಾರನ್ನು ಚೆಕ್ ಮಾಡಿಕೊಳ್ಳುತ್ತೀರಾ. ಹೇಗೆ ಭವಿಷ್ಯ ರಾಜ್ಯದ ಮಹಿಮೆಯನ್ನು ಮಾಡುತ್ತೀರಾಒಂದು ರಾಜ್ಯ, ಒಂದು ಧರ್ಮ, ಸುಖ, ಶಾಂತಿ, ಸಂಪತ್ತಿನ ಸಂಪನ್ನ ರಾಜ್ಯವಾಗಿದೆ. ತರಹ ಸ್ವರಾಜ್ಯ ಅಧಿಕಾರಿ ರಾಜರು ಸ್ವರಾಜ್ಯದ ಕಾರೋಬಾರಿನಲ್ಲಿ ಎಲ್ಲಾ ಮಾತುಗಳಲ್ಲಿ ಸದಾ ಇದೆಯೇ?

ಒಂದು ರಾಜ್ಯವಿದೆ ಅರ್ಥಾತ್ ಸದಾ ನಾನಾತ್ಮನ ರಾಜ್ಯ ಸರ್ವ ರಾಜ್ಯ ಕಾರೋಬಾರ ಕರ್ಮೇಂದ್ರಿಯಗಳ ಮೇಲಿದೆ ಅಥವಾ ಮಧ್ಯ ಮಧ್ಯದಲ್ಲಿ ಸ್ವರಾಜ್ಯದ ಬದಲು ಪರ ರಾಜ್ಯದವರು ತಮ್ಮ ಅಧಿಕಾರವನ್ನು ಮಾಡುವುದಿಲ್ಲ ತಾನೆ? ಪರರಾಜ್ಯವಾಗಿದೆಮಾಯೆಯ ರಾಜ್ಯ. ಪರರಾಜ್ಯದ ಚಿಹ್ನೆಯಾಗಿದೆ - ಪರ ಅಧೀನರಾಗಿ ಬಿಡುತ್ತೀರಾ. ಸ್ವರಾಜ್ಯದ ಚಿಹ್ನೆಯಾಗಿದೆ - ಸದಾ ಶ್ರೇಷ್ಠ ಅಧಿಕಾರಿಯ ಅನುಭವ ಮಾಡುತ್ತೀರಾ. ಪರರಾಜ್ಯ, ಪರಅಧೀನ ಅಥವಾ ಪರವಶರಾಗಿ ಮಾಡಿ ಬಿಡುತ್ತದೆ. ಯಾವಾಗ ಅನ್ಯ ರಾಜರ ಮೇಲೆ ಅಧಿಕಾರ ಪ್ರಾಪ್ತಿಯನ್ನು ಮಾಡಿದಾಗ ಮೊದಲು ರಾಜನನ್ನು ಖೈದಿಯನ್ನಾಗಿ ಮಾಡುತ್ತಾರೆ ಅರ್ಥಾತ್ ಪರ ಅಧೀನರನ್ನಾಗಿ ಮಾಡುತ್ತಾರೆ. ಹಾಗಾದರೆ ಚೆಕ್ ಮಾಡಿಕೊಳ್ಳಿ ಒಂದು ರಾಜ್ಯವಿದೆಯೇ? ಅಥವಾ ಮಧ್ಯ ಮಧ್ಯದಲ್ಲಿ ಮಾಯೆಯ ರಾಜ್ಯಾಧಿಕಾರಿ, ತಮ್ಮ ಸ್ವರಾಜ್ಯ ಅಧಿಕಾರಿ ರಾಜರುಗಳನ್ನು ಅಥವಾ ತಮ್ಮ ಯಾವುದೇ ಕರ್ಮೇಂದ್ರಿಯ ರೂಪಿ ರಾಜ ಕಾರೋಬಾರಿಯನ್ನು ಪರವಶರನ್ನಾಗಿ ಮಾಡಿಕೊಳ್ಳುವುದಿಲ್ಲವೇ? ಹಾಗಾದರೆ ಒಂದು ರಾಜ್ಯವಿದೆ ಅಥವಾ ಎರಡು ರಾಜ್ಯವಿದೆಯೇ? ತಾವು ಸ್ವರಾಜ್ಯ ಅಧಿಕಾರಿಗಳ ಲಾ ಅಂಡ್ ಆರ್ಡರ್ ನಡೆಯುತ್ತದೆಯೇ ಅಥವಾ ಮಧ್ಯ ಮಧ್ಯದಲ್ಲಿ ಮಾಯೆಯ ಆರ್ಡರ್ ನಡೆಯುತ್ತದೆಯೇ?

ಜೊತೆ-ಜೊತೆಗೆ ಒಂದು ಧರ್ಮ, ಧರ್ಮ ಅರ್ಥಾತ್ ಧಾರಣೆ. ಹಾಗಾದರೆ ಸ್ವರಾಜ್ಯದ ಧರ್ಮ ಅಥವಾ ಧಾರಣೆ ಒಂದು ಯಾವುದಾಗಿದೆ? ‘ಪವಿತ್ರತೆ’. ಮನ, ವಚನ, ಕರ್ಮ, ಸಂಬಂಧ, ಸಂಪರ್ಕ ಎಲ್ಲಾ ಪ್ರಕಾರದ ಪವಿತ್ರತೆ ಇದಕ್ಕೆ ಹೇಳಲಾಗುತ್ತದೆಒಂದು ಧರ್ಮ ಅರ್ಥಾತ್ ಒಂದು ಧಾರಣೆ. ಸ್ವಪ್ನ ಮಾತ್ರ, ಸಂಕಲ್ಪ ಮಾತ್ರದಲ್ಲೂ ಅಪವಿತ್ರತೆ ಅರ್ಥಾತ್ ಅನ್ಯ ಧರ್ಮವಿರಬಾರದು. ಏಕೆಂದರೆ ಎಲ್ಲಿ ಪವಿತ್ರತೆ ಇದೆ ಅಲ್ಲಿ ಅಪವಿತ್ರತೆ ಅರ್ಥಾತ್ ವ್ಯರ್ಥ ಅಥವಾ ವಿಕಲ್ಪದ ಹೆಸರು, ಗುರುತೂ ಸಹ ಇರುವುದಕ್ಕೆ ಸಾಧ್ಯವಿಲ್ಲ. ಇಂತಹ ಸಮರ್ಥ ಸಾಮ್ರಾಟರಾಗಿದ್ದೀರಾ ಅಥವಾ ಬಲಹೀನ ರಾಜರಾಗಿದ್ದೀರಾ ಅಥವಾ ಕೆಲವೊಮ್ಮೆ ಬಲಹೀನರೋ, ಕೆಲವೊಮ್ಮೆ ಸಾಮ್ರಾಟರೋ? ಎಂತಹ ರಾಜರಾಗಿದ್ದೀರಾ? ಒಂದುವೇಳೆ ಚಿಕ್ಕ ರಾಜ್ಯದಲ್ಲಿ ಒಂದು ಧರ್ಮದ ರಾಜ್ಯವನ್ನು ನಡೆಸುವುದಕ್ಕೆ ಆಗುವುದಿಲ್ಲವೆಂದರೆ 21 ಜನ್ಮದ ರಾಜ್ಯಾಧಿಕಾರವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುತ್ತೀರಾ? ಸಂಸ್ಕಾರವನ್ನು ಈಗ ತುಂಬಿಕೊಳ್ಳುತ್ತಿದ್ದೀರಿ. ಈಗಿನ ಶ್ರೇಷ್ಠ ಸಂಸ್ಕಾರದಿಂದ ಭವಿಷ್ಯ ಸಂಸಾರವಾಗುತ್ತದೆ. ಹಾಗಾದರೆ ಈಗಿನಿಂದ ಒಂದು ರಾಜ್ಯ, ಒಂದು ಧರ್ಮದ ಸಂಸ್ಕಾರ ಭವಿಷ್ಯ ಸಂಸಾರದ ತಳಪಾಯವಾಗಿದೆ.

ಹಾಗಾದರೆ ಚೆಕ್ ಮಾಡಿಕೊಳ್ಳಿ - ಸುಖ, ಶಾಂತಿ, ಸಂಪತ್ತು ಅರ್ಥಾತ್ ಸದಾ ಹದ್ದಿನ ಪ್ರಾಪ್ತಿಗಳ ಆಧಾರದ ಮೇಲೆ ಸುಖವಿದೆಯೆ ಅಥವಾ ಆತ್ಮಿಕ ಅತೀಂದ್ರಿಯ ಸುಖ ಪರಮಾತ್ಮ ಸುಖಮಯ ರಾಜ್ಯವಿದೆಯೇ? ಸಾಧನೆ ಅಥವಾ ಸ್ಯಾಲ್ವೇಶನ್ ಅಥವಾ ಪ್ರಶಂಸೆಯ ಆಧಾರದ ಮೇಲೆ ಸುಖದ ಅನುಭೂತಿ ಇದೆಯೇ ಅಥವಾ ಪರಮಾತ್ಮನ ಆಧಾರದ ಮೇಲೆ ಅತೀಂದ್ರಿಯ ಸುಖಮಯದ ರಾಜ್ಯವಿದೆಯೇ? ಪ್ರಕಾರದಿಂದ ಅಖಂಡ ಶಾಂತಿಯಾವುದೇ ಪ್ರಕಾರದ ಅಶಾಂತಿಯ ಪರಿಸ್ಥಿತಿಗಳಿಂದ ಅಖಂಡ ಶಾಂತಿ ಖಂಡಿತವಾಗುವುದಿಲ್ಲ ತಾನೆ? ಅಶಾಂತಿಯ ಬಿರುಗಾಳಿ ಭಲೇ ಚಿಕ್ಕದಿರಬಹುದು ಭಲೇ ದೊಡ್ಡದಿರಲಿ ಆದರೆ ಸ್ವರಾಜ್ಯ ಅಧಿಕಾರಿಗಳಿಗೆ ಬಿರುಗಾಳಿ ಅನುಭವಿಯನ್ನಾಗಿ ಮಾಡುವುದರಲ್ಲಿ ಹಾರುವ ಕಲೆಯ ಬಹುಮಾನವಾಗಿ ಬಿಡಲಿ, ಲಿಫ್ಟ್ ಗಿಫ್ಟ್ ಆಗಿ ಬಿಡಲಿ. ಇದಕ್ಕೆ ಹೇಳಲಾಗುತ್ತದೆ ಅಖಂಡ ಶಾಂತಿ ಹಾಗಾದರೆ ಚೆಕ್ ಮಾಡಿಕೊಳ್ಳಿಅಖಂಡ ಶಾಂತಿಮಯ ಸ್ವರಾಜ್ಯವಿದೆಯೇ?

ಇದೇ ರೀತಿ ಸಂಪತ್ತಿ ಅರ್ಥಾತ್ ಸ್ವರಾಜ್ಯ ಸಂಪತ್ತಿನ ಜ್ಞಾನ, ಗುಣ ಮತ್ತು ಶಕ್ತಿಗಳಿದೆ. ಸರ್ವ ಸಂಪತ್ತಿಗಳಿಂದ ಸಂಪನ್ನ ಸ್ವರಾಜ್ಯ ಅಧಿಕಾರಿಗಳಾಗಿದ್ದೀರಾ? ಸಂಪನ್ನತೆಯ ಚಿಹ್ನೆಯಾಗಿದೆ ಸಂಪನ್ನತೆ ಅರ್ಥಾತ್ ಸದಾ ಸಂತುಷ್ಟತೆ, ಅಪ್ರಾಪ್ತಿಯ ಗುರುತು ಚಿಹ್ನೆ ಇಲ್ಲ. ಹದ್ದಿನ ಇಚ್ಛೆಗಳಿಂದ ಅವಿದ್ಯಾ ಇದಕ್ಕೆ ಹೇಳಲಾಗುತ್ತದೆ ಸಂಪತ್ತಿವಂತರು. ಮತ್ತು ರಾಜನ ಅರ್ಥವಾಗಿದೆ ದಾತ ಒಂದು ವೇಳೆ ಹದ್ದಿನ ಇಚ್ಛೆ ಅಥವಾ ಪ್ರಾಪ್ತಿಯ ಉತ್ಪತ್ತಿಯಾಗಿದೆ ಎಂದರೆ ಅವರು ರಾಜರಾಗುವ ಬದಲು ಬೇಡುವಂತಹವರು ಆಗಿ ಬಿಡುತ್ತಾರೆ. ಆದ್ದರಿಂದ ತಮ್ಮ ಸ್ವರಾಜ್ಯ ಅಧಿಕಾರವನ್ನು ಚೆನ್ನಾಗಿ ಚೆಕ್ ಮಾಡಿಕೊಳ್ಳಿ ನನ್ನ ಸ್ವರಾಜ್ಯ ಒಂದು ರಾಜ್ಯ, ಒಂದು ಧರ್ಮ, ಸುಖ ಶಾಂತಿ, ಸಂಪನ್ನವಾಗಿದೆಯೇ? ಅಥವಾ ಇಲ್ಲಿಯವರೆಗೂ ಆಗುತ್ತಿದ್ದೀರಾ? ಒಂದು ವೇಳೆ ರಾಜರಾಗುತ್ತಿದ್ದೀರಾ ಎಂದರೆ ಯಾವಾಗ ರಾಜ್ಯಾಧಿಕಾರಿ ಸ್ಥಿತಿ ಇರುವುದಿಲ್ಲವೆಂದರೆ ಸಮಯ ಏನಾಗಿದ್ದೀರಾ? ಪ್ರಜೆಗಳಾಗುತ್ತೀರಾ ಅಥವಾ ರಾಜರಲ್ಲವೇ, ಪ್ರಜೆಗಳಲ್ಲವೇ? ಈಗ ಮಧ್ಯದಲ್ಲಿಲ್ಲ ತಾನೇ. ಇದನ್ನು ಯೋಚನೆ ಮಾಡಬೇಡಿ ಅಂತಿಮದಲ್ಲಿ ಆಗಿ ಬಿಡುತ್ತೇವೆಂದು. ಒಂದುವೇಳೆ ಬಹಳ ಕಾಲದ ರಾಜ್ಯ ಭಾಗ್ಯದ ಪ್ರಾಪ್ತಿ ಇರಬೇಕೆಂದರೆ ಬಹಳ ಕಾಲದ ಸ್ವರಾಜ್ಯದ ಫಲ ಬಹಳ ಕಾಲದ ರಾಜ್ಯ. ಸಂಪೂರ್ಣ ಸಮಯದ ರಾಜ್ಯಾಧಿಕಾರದ ಆಧಾರ ವರ್ತಮಾನ ಸದಾಕಾಲದ ಸ್ವರಾಜ್ಯವಾಗಿದೆ. ತಿಳಿಯಿತೇ? ಎಂದಿಗೂ ಬಲಹೀನರಾಗಬಾರದು. ಆಗಿ ಬಿಡುತ್ತದೆ, ಆಗಿ ಬಿಡುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳಬಾರದು. ಬಾಪ್ ದಾದಾರವರ ಜೊತೆಯಲ್ಲಿ ಬಹಳ ಮಧುರವಾದ ಮಾತುಗಳಿಂದ ವಾರ್ತಾಲಾಪ ಮಾಡುತ್ತಾರೆ. ರಾಜರ ಬದಲಾಗಿ ಬಹಳ ದೊಡ್ಡ ವಕೀಲರಾಗಿ ಬಿಡುತ್ತಾರೆ. ಇಂತಿಂತಹ ಲಾ ಪಾಯಿಂಟ್ಸ್ ಅನ್ನು ತಿಳಿಸುತ್ತಾರೆ ಯಾವುದನ್ನು ತಂದೆಯು ಸಹ ಮುಗುಳ್ನಗುತ್ತಿರುತ್ತಾರೆ. ವಕೀಲರಾಗುವುದು ಒಳ್ಳೆಯದಾ ಅಥವಾ ರಾಜರಾಗುವುದು ಒಳ್ಳೆಯದಾ? ಬಹಳ ಬುದ್ಧಿವಂತಿಕೆಯಿಂದ ವಕಾಲತ್ತನ್ನು ಮಾಡುತ್ತಾರೆ. ಆದ್ದರಿಂದ ಈಗ ವಕಾಲತ್ ಮಾಡುವುದನ್ನು ಬಿಟ್ಟು ಬಿಡಿ, ರಾಜ ಮಗುವಾಗಿ. ತಂದೆಗೆ ಮಕ್ಕಳ ಮೇಲೆ ಸ್ನೇಹವಿದೆ ಕಾರಣ ಕೇಳುತ್ತಾ-ನೋಡುತ್ತಾ ಮುಗುಳ್ನಗುತ್ತಿರುತ್ತಾರೆ. ಈಗ ಧರ್ಮರಾಜನ ಹತ್ತಿರ ಕೆಲಸ ತೆಗೆದುಕೊಳ್ಳುವುದಿಲ್ಲ.

ಸ್ನೇಹ ಎಲ್ಲರನ್ನು ನಡೆಸುತ್ತಿದೆ. ಸ್ನೇಹದ ಕಾರಣವೇ ಬಂದು ತಲುಪಿದ್ದೀರಾ. ಹಾಗಾದರೆ ಸ್ನೇಹದ ಪ್ರತಿಕ್ರಿಯೆಯಲ್ಲಿ ಬಾಪ್ ದಾದಾರವರು ಪದಮಗುಣ ಸ್ನೇಹದ ರಿಟರ್ನ ಅನ್ನು ಕೊಡುತ್ತಿದ್ದಾರೆ. ದೇಶ ವಿದೇಶದ ಎಲ್ಲಾ ಮಕ್ಕಳ ಸ್ನೇಹದ ವಿಮಾನದ ಮುಖಾಂತರ ಮಧುಬನದಲ್ಲಿ ಬಂದು ತಲುಪಿದ್ದೀರಾ. ಬಾಪ್ ದಾದಾರವರು ಸಾಕಾರ ರೂಪದಲ್ಲಿ ತಮಗೆಲ್ಲರಿಗೂ ಹಾಗೂ ಸ್ನೇಹ ಸ್ವರೂಪದಿಂದ ಸರ್ವ ಮಕ್ಕಳನ್ನು ನೋಡುತ್ತಿದ್ದಾರೆ. ಒಳ್ಳೆಯದು!

ಸರ್ವರ ಸ್ನೇಹದಲ್ಲಿ ಸಮಾವೇಶವಾಗಿರುವ ಸಮೀಪ ಮಕ್ಕಳಿಗೆ, ಸರ್ವ ಸ್ವರಾಜ್ಯ ಅಧಿಕಾರಿಯಿಂದ ವಿಶ್ವ ರಾಜ್ಯಾಧಿಕಾರಿ ಶ್ರೇಷ್ಠ ಆತ್ಮಗಳಿಗೆ ಸರ್ವ ಪ್ರಾಪ್ತಿ ಸಂಪನ್ನ ಶ್ರೇಷ್ಠ ಸಂಪತ್ತಿವಾನ್ ವಿಶೇಷ ಆತ್ಮಗಳಿಗೆ ಸದಾ ಒಂದು ಧರ್ಮ, ಒಂದು ರಾಜ್ಯ ಸಂಪನ್ನ ಸ್ವರಾಜ್ಯ ಅಧಿಕಾರಿ ತಂದೆಯ ಸಮಾನ ಭಾಗ್ಯವಂತ ಆತ್ಮಗಳಿಗೆ ಭಾಗ್ಯವಿಧಾತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ.

ದಾದಿಯವರ ಜೊತೆಯಲ್ಲಿ ಮಿಲನ:

ಎಲ್ಲಾ ಕಾರ್ಯಗಳು ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆಯಲ್ಲವೇ? ಒಳ್ಳೆಯ ಉಮಂಗ ಉತ್ಸಾಹದಿಂದ ಕಾರ್ಯವಾಗುತ್ತಿದೆ. ಮಾಡಿಸುವಂತಹವರು ಮಾಡಿಸುತ್ತಿದ್ದಾರೆ ಹಾಗೂ ನಿಮಿತ್ತರಾಗಿ ಮಾಡುವಂತಹವರು ಮಾಡುತ್ತಿದ್ದಾರೆ ಇಂತಹ ಅನುಭವವಾಗುತ್ತದೆಯಲ್ಲವೇ? ಸರ್ವರ ಸಹಯೋಗದ ಬೆರಳು ಪ್ರತಿ ಕಾರ್ಯವನ್ನು ಸಹಜ ಹಾಗೂ ಸಫಲ ಮಾಡುತ್ತದೆ. ಹೇಗೆ ಆಗುತ್ತಿದೆಇದು ಅದ್ಭುತ ಅನಿಸುತ್ತದೆಯಲ್ಲವೇ. ಪ್ರಪಂಚದವರಂತೂ ನೋಡುತ್ತಾರೆ ಹಾಗೂ ಯೋಚನೆ ಮಾಡುವುದರಲ್ಲಿ ಉಳಿದು ಬಿಡುತ್ತಾರೆ ಹಾಗೂ ತಾವು ನಿಮಿತ್ತ ಆತ್ಮಗಳು ಸದಾ ಮುಂದುವರೆಯುತ್ತಾ ಹೋಗುತ್ತೀರಾ ಏಕೆಂದರೆ ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಪ್ರಪಂಚದವರಿಗಂತೂ ಪ್ರತಿ ಹೆಜ್ಜೆಯಲ್ಲಿ ಚಿಂತೆಯಿದೆ ಮತ್ತು ತಮ್ಮ ಪ್ರತಿ ಸಂಕಲ್ಪದಲ್ಲಿ ಪರಮಾತ್ಮನ ಚಿಂತನೆಯಿದೆ ಕಾರಣ ನಿಶ್ಚಿಂತರಾಗಿದ್ದೀರಿ. ನಿಶ್ಚಿಂತರಾಗಿದ್ದೀರಲ್ಲವೇ? ಒಳ್ಳೆಯದು, ಅವಿನಾಶಿ ಸಂಬಂಧವಿದೆ. ಒಳ್ಳೆಯದು. ಅದೆಲ್ಲವೂ ಸರಿಯಾಗಿ ನಡೆಯುತ್ತಿದೆಯೇ ಅಥವಾ ನಡೆಯಲೇ ಬೇಕಲ್ಲವೇ. ನಿಶ್ಚಯವಿದೆ ಹಾಗೂ ನಿಶ್ಚಿಂತತೆ ಇದೆ. ಏನಾಗುತ್ತದೆ, ಹೇಗಾಗುತ್ತದೆ ಚಿಂತೆ ಇಲ್ಲ ತಾನೆ.

ಟೀಚರ್ಸ್ಗೆ ಯಾವುದಾದರೂ ಚಿಂತೆಯಿದೆಯೇ? ಸೆಂಟರ್ ಹೇಗೆ ವೃದ್ಧಿಯಾಗುವುದು ಚಿಂತೆಯಿದೆಯೇ? ಇಲ್ಲವಲ್ಲವೇ? ನಿಶ್ಚಿಂತರಾಗಿದ್ದೀರಾ? ಚಿಂತನೆ ಮಾಡುವುದು ಬೇರೆ ಮಾತಾಗಿದೆ, ಚಿಂತೆ ಮಾಡುವುದು ಬೇರೆ ಮಾತಾಗಿದೆ. ಸೇವೆ ವೃದ್ಧಿ ಮಾಡುವ ಚಿಂತನೆ ಅರ್ಥಾತ್ ಪ್ಲಾನ್ ಭಲೇ ಮಾಡಿ. ಆದರೆ ಚಿಂತೆಯಿಂದ ಎಂದೂ ಸಫಲತೆ ಸಿಗುವುದಿಲ್ಲ. ನಡೆಸುವಂತಹವರು ನಡೆಸುತ್ತಿದ್ದಾರೆ, ಮಾಡಿಸುವಂತಹವರು ಮಾಡಿಸುತ್ತಿದ್ದಾರೆ ಕಾರಣ ಎಲ್ಲವೂ ಸಹಜವಾಗಲೇಬೇಕು, ಕೇವಲ ನಿಮಿತ್ತರಾಗಿ ಸಂಕಲ್ಪ, ತನು, ಮನ, ಧನ ಸಫಲ ಮಾಡುತ್ತಾ ಹೋಗಿ. ಯಾವ ಸಮಯದಲ್ಲಿ ಯಾವ ಕಾರ್ಯವಾಗುತ್ತದೆ ಅದು ನಮ್ಮ ಕಾರ್ಯವಾಗಿದೆ. ಯಾವಾಗ ನಮ್ಮ ಕಾರ್ಯವಿದೆ, ನನ್ನ ಕಾರ್ಯವೆಂದರೆ ಎಲ್ಲಿ ನನ್ನತನವಿರುತ್ತದೆ ಅಲ್ಲಿ ಎಲ್ಲವೂ ಸ್ವತಃವಾಗಿ ಆಗಿ ಬಿಡುತ್ತದೆ. ಹಾಗಾದರೆ ಈಗ ಬ್ರಾಹ್ಮಣ ಪರಿವಾರದಲ್ಲಿ ಯಾವ ವಿಶೇಷ ಕಾರ್ಯವಿದೆ? ಟೀಚರ್ಸ್ ತಿಳಿಸಿ. ಬ್ರಾಹ್ಮಣ ಪರಿವಾರದಲ್ಲಿ ಈಗ ವಿಶೇಷ ಕಾರ್ಯ ಯಾವುದಾಗಿದೆ, ಯಾವುದರಲ್ಲಿ ಸಫಲ ಮಾಡುತ್ತೀರಾ (ಜ್ಞಾನ ಸರೋವರದಲ್ಲಿ) ಎಲ್ಲವನ್ನು ಸ್ವಾಹ ಮಾಡುತ್ತೀರಿ. ಪರಿವಾರದಲ್ಲಿ ಯಾವ ವಿಶೇಷ ಕಾರ್ಯವಾಗುತ್ತದೆ ಎಲ್ಲರ ಗಮನ ಎಲ್ಲಿರುತ್ತದೆ? ವಿಶೇಷ ಕಾರ್ಯದ ಕಡೆ ಗಮನ ಹೋಗುತ್ತದೆ ಬ್ರಾಹ್ಮಣ ಪರಿವಾರದಲ್ಲಿ ದೊಡ್ದದಕ್ಕಿಂತ ದೊಡ್ಡ ಕಾರ್ಯ ವರ್ತಮಾನ ಸಮಯ ಇದೇ ಆಗಿದೆ. ಪ್ರತೀ ಸಮಯ ತಮ್ಮ ತಮ್ಮದೇ ಆಗಿದೆ, ವರ್ತಮಾನ ಸಮಯ ದೇಶ ವಿದೇಶದ ಸರ್ವ ಬ್ರಾಹ್ಮಣ ಪರಿವಾರದ ಸಹಯೋಗ ವಿಶೇಷ ಕಾರ್ಯದಲ್ಲಿದೆಯಲ್ಲವೇ ಅಥವಾ ತಮ್ಮ ತಮ್ಮ ಸೆಂಟರ್ನಲ್ಲಿದೆಯೇ? ಎಷ್ಟು ದೊಡ್ಡ ಕಾರ್ಯ ಅಷ್ಟೇ ದೊಡ್ಡ ಹೃದಯ ಹಾಗೂ ಎಷ್ಟು ದೊಡ್ಡ ಹೃದಯವಿರುತ್ತದೆಯಲ್ಲವೇ ಅಷ್ಟೇ ಸ್ವತಃವಾಗಿ ಸಂಪನ್ನತೆ ಆಗುತ್ತದೆ. ಒಂದು ವೇಳೆ ಚಿಕ್ಕ ಹೃದಯವಿದ್ದರೆ ಯಾವುದು ಬರಬೇಕಾಗಿರುತ್ತದೆ ಅದೂ ಸಹ ನಿಂತು ಬಿಡುತ್ತದೆ, ಯಾವುದು ಆಗಬೇಕಾಗಿರುತ್ತದೆ ಅದೂ ಸಹ ನಿಂತು ಬಿಡುತ್ತದೆ. ಹಾಗೂ ದೊಡ್ಡ ಹೃದಯದಿಂದ ಅಸಂಭವವೂ ಸಂಭವವಾಗಿ ಬಿಡುತ್ತದೆ ಮಧುಬನದ ಜ್ಞಾನ ಸರೋವರವಿದೆ ಅದು ನಿಮ್ಮದಾಗಿದೆಯೇ? ಯಾರದಾಗಿದೆ? ಮಧುಬನದ್ದಲ್ಲವೇ? ಗುಜರಾತಿನದಂತೂ ಅಲ್ಲವೇ ಅಲ್ಲ, ಮಧುಬನದ್ದಾಗಿದೆ? ಮಹಾರಾಷ್ಟದ್ದಾಗಿದೆಯೇ? ವಿದೇಶದ್ದಾಗಿದೆಯೇ ಎಲ್ಲರದ್ದಾಗಿದೆ. ಬೇಹದ್ದಿನ ಸೇವೆಯ ಬೇಹದ್ದಿನ ಸ್ಥಾನದ ಅನೇಕ ಆತ್ಮಗಳಿಗೆ ಬೇಹದ್ದಿನ ಆಸ್ತಿಯನ್ನು ಕೊಡಿಸುವಂತಹದ್ದಾಗಿದೆ. ಸರಿಯಾಗಿದೆಯಲ್ಲವೇ. ಒಳ್ಳೆಯದು.

ಮನ, ವಚನ, ಕರ್ಮ, ಸಂಬಂಧ, ಸಂಪರ್ಕ ಎಲ್ಲಾ ಪ್ರಕಾರದ ಪವಿತ್ರತೆ ಇದಕ್ಕೆ ಹೇಳಲಾಗುತ್ತದೆಒಂದು ಧರ್ಮ, ಒಂದು ಧಾರಣೆ. ಎಲ್ಲಿ ಪವಿತ್ರತೆ ಇರುತ್ತದೆ ಅಲ್ಲಿ ಅಪವಿತ್ರತೆ ಅರ್ಥಾತ್ ವ್ಯರ್ಥ ಅಥವಾ ವಿಕಲ್ಪದ ಹೆಸರು ಗುರುತು ಇರುವುದಕ್ಕೆ ಸಾಧ್ಯವಿಲ್ಲ.

ಅವ್ಯಕ್ತ ಬಾಪ್ ದಾದಾರವರ ವೈಯಕ್ತಿಕ ಮಿಲನ

1. ಸ್ವ ಪರಿವರ್ತನೆಯ ವೈಬ್ರೇಷನ್ಸ್ ವಿಶ್ವ ಪರಿವರ್ತನೆಯನ್ನು ಮಾಡಿಸುತ್ತದೆ

ಎಲ್ಲರೂ ತಮ್ಮನ್ನು ಖುಷಿಯ ಅದೃಷ್ಠಶಾಲಿ ಆತ್ಮಗಳೆಂದು ಅನುಭವ ಮಾಡುತ್ತೀರಾ? ಖುಷಿಯ ಭಾಗ್ಯವೇನಿದೆ ಸ್ವಪ್ನದಲ್ಲೂ ಸಹ ಇರಲಿಲ್ಲ ಅದನ್ನು ಪ್ರಾಪ್ತಿ ಮಾಡಿಕೊಂಡೆವು. ಹಾಗಾದರೆ ಎಲ್ಲರ ಹೃದಯ ಇದೇ ಗೀತೆಯನ್ನು ಹಾಡುತ್ತಿದೆ ಎಲ್ಲರಗಿಂತ ಖುಷಿಯ ಅದೃಷ್ಠಶಾಲಿಯಾಗಿದ್ದೇನೆ ಎಂದರೆ ಅಂದ ಮೇಲೆ ನಾನಾಗಿದ್ದೇನೆ. ಇದು ಮನಸ್ಸಿನ ಗೀತೆಯಾಗಿದೆ ಮುಖದ ಗೀತೆಯನ್ನು ಹಾಡುವುದಕ್ಕೆ ಪರಿಶ್ರಮ ಪಡಬೇಕಾಗುತ್ತದೆ. ಆದರೆ ಮನಸ್ಸಿನ ಗೀತೆಯನ್ನು ಎಲ್ಲರೂ ಹಾಡಬಹುದು ಎಲ್ಲದಕ್ಕಿಂತ ದೊಡ್ಡದಕ್ಕಿಂತ ದೊಡ್ಡ ಖಜಾನೆಯಾಗಿದೆ ಖುಷಿಯ ಖಜಾನೆ. ಏಕೆಂದರೆ ಖುಷಿ ಯಾವಾಗ ಇರುತ್ತದೆ ಎಂದರೆ ಎಲ್ಲಿ ಪ್ರಾಪ್ತಿ ಇರುತ್ತದೆ. ಒಂದು ವೇಳೆ ಅಪ್ರಾಪ್ತಿಯಿದ್ದರೆ ಎಷ್ಟೇ ಯಾರು ಯಾರಿಗಾದರು ಖುಷಿಯಾಗಿರುವುದಕ್ಕೆ ಹೇಳಿದರೆ ಎಷ್ಟಾದರೂ ಆರ್ಟಿಫಿಶಿಯಲ್ ಖುಷಿಯಾಗಿರುವುದಕ್ಕೆ ಪ್ರಯತ್ನ ಪಡಲಿ ಆದರೆ ಇರುವುದಕ್ಕೆ ಸಾಧ್ಯವಿಲ್ಲ ಹಾಗಾದರೆ ತಾವು ಸದಾ ಖುಷಿಯಾಗಿರುತ್ತೀರಾ ಅಥವಾ ಕೆಲವು ಕೆಲವೊಮ್ಮೆ ಇರುತ್ತೀರಾ. ಯಾವಾಗ ಚಾಲೆಂಜ್ ಮಾಡುತ್ತೀರಾ ನಾವು ಭಗವಂತನ ಮಕ್ಕಳಾಗಿದ್ದೇವೆ, ಹಾಗಾದರೆ ಎಲ್ಲಿ ಭಗವಂತನಿದ್ದಾರೆ ಅಲ್ಲಿ ಯಾವುದೇ ಅಪ್ರಾಪ್ತಿ ಇರುವುದಕ್ಕೆ ಸಾಧ್ಯವೇ? ಹಾಗಾದರೆ ಖುಷಿಯೂ ಸಹ ಸದಾ ಇದೆ ಏಕೆಂದರೆ ಸದಾ ಸರ್ವ ಪ್ರಾಪ್ತಿ ಸ್ವರೂಪವಾಗಿದೆ. ಬ್ರಹ್ಮಾತಂದೆಯವರದು ಯಾವ ಗೀತೆಯಾಗಿತ್ತು? ಏನನ್ನು ಪಡೆಯಬೇಕಾಗಿತ್ತೋಅದನ್ನು ಪಡೆದುಕೊಂಡೆವು. ಇದು ಕೇವಲ ಬ್ರಹ್ಮ ತಂದೆಯ ಗೀತೆಯಾಗಿದೆಯೇ ಅಥವಾ ತಮ್ಮೆಲ್ಲರದ್ದಾ? ಕೆಲವು ಕೆಲವೊಮ್ಮೆ ಸ್ವಲ್ಪ ದುಃಖದ ಅಲೆಗಳು ಬಂದು ಬಿಡುತ್ತದೆಯೇ? ಎಲ್ಲಿಯವರೆಗೂ ಬರುತ್ತದೆ? ಈಗ ಸ್ವಲ್ಪ ಸಮಯವೂ ಸಹ ದುಃಖದ ಅಲೆಯೂ ಬರಬಾರದು. ಯಾವಾಗ ವಿಶ್ವ ಪರಿವರ್ತನೆಗೆ ನಿಮಿತ್ತರಾಗಿದ್ದೀರೆಂದರೆ ತನ್ನ ಪರಿವರ್ತನೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲವೇ. ಇನ್ನೂ ಸಮಯ ಬೇಕಾಗಿದೆಯೇ, ಫುಲ್ ಸ್ಟಾಪ್ ಇಡಿ. ಇಂತಹ ಶ್ರೇಷ್ಠ ಸಮಯ, ಶ್ರೇಷ್ಠ ಪ್ರಾಪ್ತಿಗಳು, ಶ್ರೇಷ್ಠ ಸಂಬಂಧ ಇಡೀ ಕಲ್ಪದಲ್ಲಿ ಸಿಗುವುದಕ್ಕೆ ಸಾಧ್ಯವಿಲ್ಲ. ಹಾಗಾದರೆ ಮೊದಲು ಸ್ವ ಪರಿವರ್ತನೆಯನ್ನು ಮಾಡಿಕೊಳ್ಳಿ. ಸ್ವ ಪರಿವರ್ತನೆಯ ವೈಬ್ರೇಷನ್ಸ್ ವಿಶ್ವ ಪರಿವರ್ತನೆಯನ್ನು ಮಾಡಿಸುತ್ತದೆ.

ಡಬಲ್ ವಿದೇಶಿ ಆತ್ಮಗಳ ವಿಶೇಷತೆ ಆಗಿದೆ ಫಾಸ್ಟ್ ಲೈಫ್. ಹಾಗಾದರೆ ಪರಿವರ್ತನೆಯಲ್ಲಿ ಫಾಸ್ಟ್ ಇದ್ದೀರಾ? ವಿದೇಶದಲ್ಲಿ ಯಾರಾದರೂ ಹೆಚ್ಚು ಕಡಿಮೆ ನಡೆಯುತ್ತಾರೆಂದರೆ ಚೆನ್ನಾಗಿ ಇರುವುದಿಲ್ಲ ತಾನೇ. ಹಾಗಾದರೆ ವಿಶೇಷತೆಯ ಪರಿವರ್ತನೆಯನ್ನು ತನ್ನಿರಿ. ಒಳ್ಳೆಯದಲ್ಲವೇ. ಮುಂದುವರೆಯುತ್ತಿದ್ದೀರಾ ಹಾಗೂ ಮುಂದುವರೆಯುತ್ತಲೇ ಇರುತ್ತೀರಿ. ಗುರುತಿಸುವ ದೃಷ್ಠಿ ಬಹಳ ತೀಕ್ಷ್ಣವಾಗಿದೆ. ಯಾವುದರಿಂದ ತಂದೆಯನ್ನು ಗುರುತಿಸಿದ್ದೀರಿ. ಈಗ ಪುರುಷಾರ್ಥದಲ್ಲೂ ತೀವ್ರ, ಸೇವೆಯಲ್ಲೂ ತೀವ್ರ ಹಾಗೂ ಗುರಿಯಲ್ಲಿ ಸಂಪೂರ್ಣರಾಗಿ ಬಂದು ತಲುಪುವುದರಲ್ಲೂ ತೀವ್ರ. ಫಸ್ಟ್ ನಂಬರ್ ನಲ್ಲಿ ಬರಬೇಕಲ್ಲವೇ? ಹೇಗೆ ಬ್ರಹ್ಮಾತಂದೆ ಫಸ್ಟ್ ಆದರಲ್ಲವೇ ಹಾಗಾದರೆ ಬ್ರಹ್ಮಾತಂದೆಯ ಜೊತೆ ಫರ್ಸ್ಟಿನ ಜೊತೆಯಲ್ಲಿ ಫರ್ಸ್ಟಿನಲ್ಲಿ ಬರುತ್ತೀರಿ. ಬ್ರಹ್ಮಾತಂದೆಯ ಜೊತೆಯಲ್ಲಿ ಪ್ರೀತಿಯಿದೆಯಲ್ಲವೇ. ಒಳ್ಳೆಯದು ಮಾತೆಯರು ಅದ್ಭುತ ಮಾಡುತ್ತೀರಲ್ಲವೇ. ಯಾವುದನ್ನು ಪ್ರಪಂಚದವರು ಅಸಂಭವವೆಂದು ತಿಳಿಯುತ್ತಾರೆ ಅದನ್ನು ಅವರು ಸಹಜವಾಗಿ ಮಾಡಿ ತೋರಿಸಿ ಬಿಟ್ಟರು. ಇಂತಹ ಅಧ್ಬುತ ಮಾಡುತ್ತಿದ್ದೀರಲ್ಲವೇ. ಪ್ರಪಂಚದವರು ತಿಳಿಯುತ್ತಾರೆ ಮಾತೆಯರು ನಿರ್ಬಲರಾಗಿದ್ದಾರೆಂದು, ಏನನ್ನು ಮಾಡುವುದಕ್ಕೆ ಸಾಧ್ಯವಿಲ್ಲ ತಾವು ಅಸಂಭವವನ್ನು ಸಂಭವ ಮಾಡಿಸಿ ವಿಶ್ವ ಪರಿವರ್ತನೆಯಲ್ಲಿ ಎಲ್ಲರಿಗಿಂತ ಮುಂದುವರೆಯುತ್ತಿದ್ದೀರಲ್ಲವೇ. ಪಾಂಡವರು ಏನು ಮಾಡುತ್ತಿದ್ದೀರಾ? ಅಸಂಭವವನ್ನು ಸಂಭವ ಮಾಡುತ್ತಿದ್ದೀರಲ್ಲವೇ. ಪವಿತ್ರತೆಯ ಬಾವುಟವನ್ನು ಹಾರಿಸುತ್ತಿದ್ದೀರಲ್ಲವೇ. ಕೈಯಲ್ಲಿ ಚೆನ್ನಾಗಿ ಬಾವುಟವನ್ನು ಇಟ್ಟುಕೊಂಡಿದ್ದೀರಾ ಅಥವಾ ಕೆಲವೊಮ್ಮೆ ಕೆಳಗೆ ಹೋಗಿ ಬಿಡುತ್ತದೆಯೇ? ಸದಾ ಪವಿತ್ರತೆಯ ಚಾಲೆಂಜ್ ಬಾವುಟವನ್ನು ಹಾರಿಸುತ್ತಾ ಇರಿ.

2. ಪ್ರತಿ ದಿನ ಅಮೃತವೇಳೆ ಕಂಬೈಂಡ್ ಸ್ವರೂಪದ ಸ್ಮೃತಿಯ ತಿಲಕವನ್ನು ಇಟ್ಟುಕೊಳ್ಳಿ

ಸದಾ ತಮ್ಮನ್ನು ಸಹಜಯೋಗಿಯ ಅನುಭವ ಮಾಡುತ್ತೀರಾ? ಎಂತಹ ಪರಿಸ್ಥಿತಿಯೇ ಕಷ್ಟಕರವಾಗಿ ಅನುಭವ ಮಾಡಿಸುವಂತದ್ದಿರಬಹುದು ಆದರೆ ಕಷ್ಟವನ್ನು ಸಹ ಸಹಜವನ್ನಾಗಿ ಮಾಡುವಂತಹ ಸಹಜಯೋಗಿಗಳಾಗಿದ್ದೀರಾ ರೀತಿ ಇದ್ದೀರಾ ಅಥವಾ ಪರಿಶ್ರಮದ ಸಮಯದಲ್ಲಿ ಪರಿಶ್ರಮದ ಅನುಭವ ಆಗುತ್ತದೆಯೇ? ಸದಾ ಸಹಜವಾಗಿದೆಯೇ? ಪರಿಶ್ರಮವಾಗುವ ಕಾರಣ ತಂದೆಯ ಜೊತೆಯನ್ನು ಬಿಟ್ಟು ಬಿಡುತ್ತೀರಲ್ಲವೇ. ಯಾವಾಗ ಒಂಟಿಯಾಗುತ್ತೀರಾ ಆಗ ನಿರ್ಬಲರಾಗಿಬಿಡುತ್ತೀರಾ ಹಾಗೂ ನಿರ್ಬಲತೆಯನ್ನು ಸಹಜ ಮಾತಿನಲ್ಲಿ ಪರಿಶ್ರಮ ಸಹಜವಾದ ಮಾತೂ ಸಹ ಪರಿಶ್ರಮ ಅನಿಸುತ್ತದೆಯೇ. ಆದ್ದರಿಂದ ಬಾಪ್ ದಾದಾರವರು ಮೊದಲೇ ತಿಳಿಸಿದ್ದರು ಸದಾ ಕಂಬೈಂಡ್ ರೂಪದಲ್ಲಿರಿ. ಕಂಬೈಂಡ್ ಆಗಿರುವವರನ್ನು ಯಾರೂ ಬೇರೆ ಮಾಡುವುದಕ್ಕೆ ಸಾಧ್ಯವಿಲ್ಲ. ಹೇಗೆ ಸಮಯ ಆತ್ಮ ಹಾಗೂ ಶರೀರ ಕಂಬೈಂಡ್ ಆಗಿದೆ ಹಾಗೆ ತಂದೆ ಹಾಗೂ ನಾವು ಕಂಬೈಂಡ್ ಆಗಿರಬೇಕು. ಮಾತೆಯರು ಏನೆಂದು ತಿಳಿದುಕೊಳ್ಳುತ್ತೀರಾ? ಕಂಬೈಂಡ್ ಆಗಿದ್ದೀರಾ? ಅಥವಾ ಕೆಲವೊಮ್ಮೆ ಬೇರೆ, ಕೆಲವೊಮ್ಮೆ ಕಂಬೈಂಡ್? ಇಂತಹ ಜೊತೆತನ ಮತ್ತೆಂದಿಗಾದರೂ ಮಿಲನವಾಗುತ್ತದೆಯೇ? ಆದರೂ ಏಕೆ ಜೊತೆಯನ್ನು ಬಿಟ್ಟು ಬಿಡುತ್ತೀರಾ? ಕೆಲಸವನ್ನು ಏನು ಕೊಟ್ಟಿದ್ದೇವೆ? ಕೇವಲ ಇದನ್ನು ನೆನಪು ಮಾಡಿ ಎಂದು, ‘ನನ್ನ ಬಾಬಾ’. ಇದರಲ್ಲಿ ಸಹಜವಾದ ಕಾರ್ಯ ಯಾವುದಿರಬಹುದು? ಪರಿಶ್ರಮವಿದೆಯೇ? (63 ಜನ್ಮದ ಸಂಸ್ಕಾರವಿದೆ) ಈಗ ಹೊಸ ಜನ್ಮ ಆಯಿತಲ್ಲವೇ. ಹೊಸ ಜನ್ಮ ಹೊಸ ಸಂಸ್ಕಾರ. ಈಗ ಹಳೆಯ ಜನ್ಮದಲ್ಲಿದ್ದೀರಾ ಅಥವಾ ಹೊಸ ಜನ್ಮದಲ್ಲಿದ್ದೀರಾ? ಅಥವಾ ಅರ್ಧ ಅರ್ಧ ಇದೆಯೇ? ಅಂದ ಮೇಲೆ ಹೊಸ ಜನ್ಮದ ಸಂಸ್ಕಾರವಿದೆಯೇ ಅಥವಾ ವಿಸ್ಮೃತಿ ಇದೆಯೇ? ನಂತರ ಹೊಸದನ್ನು ಬಿಟ್ಟು ಹಳೆಯದರಲ್ಲಿ ಏಕೆ ಹೋಗುತ್ತೀರಾ? ಹೊಸ ವಸ್ತು ಇಷ್ಟವಾಗುತ್ತದೆಯೇ ಅಥವಾ ಹಳೆಯ ವಸ್ತು ಇಷ್ಟವಾಗುತ್ತದೆಯೇ? ನಂತರ ಹಳೆಯದರಲ್ಲಿ ಏಕೆ ಹೊರಟು ಹೋಗುತ್ತೀರಾ? ಪ್ರತಿನಿತ್ಯ ಅಮೃತವೇಳೆಯಲ್ಲಿ ಸ್ವಯಂನ್ನು ಬ್ರಾಹ್ಮಣ ಜೀವನದ ಸ್ಮೃತಿಯ ತಿಲಕವನ್ನಿಟ್ಟುಕೊಳ್ಳಿ. ಹೇಗೆ ಭಕ್ತರು ತಿಲಕವನ್ನು ಅವಶ್ಯವಾಗಿ ಇಡುತ್ತಾರೆ ಹಾಗಾದರೆ ತಾವು ಸ್ಮೃತಿಯ ತಿಲಕವನ್ನಿಟ್ಟುಕೊಳ್ಳಿ. ಅದರಂತೆ ನೋಡಿ ಮಾತೆಯರು ಯಾವ ತಿಲಕವನ್ನಿಡುತ್ತಾರೆ ಅವರು ಜೊತೆಯ ತಿಲಕವನ್ನಿಡುತ್ತಾರೆ. ಹಾಗಾದರೆ ಸ್ಮೃತಿಯನ್ನಿಡಿ ನಾವು ಕಂಬೈಂಡ್ ಆಗಿದ್ದೇವೆಂದರೆ ಜೊತೆಯ ತಿಲಕವನ್ನು ಸದಾ ಇಡಬೇಕು. ಒಂದು ವೇಳೇ ಯುಗಲ್ ಆಗಿದ್ದರೆ ತಿಲಕವನ್ನು ಇಡುತ್ತಾರಲ್ಲವೇ, ಒಂದು ವೇಳೆ ಯುಗಲ್ ಆಗಿಲ್ಲದಿದ್ದರೆ ತಿಲಕವನ್ನಿಡುವುದಿಲ್ಲ. ಇದು ಜೊತೆಯ ತಿಲಕವಾಗಿದೆ. ಹಾಗಾದರೆ ಪ್ರತಿನಿತ್ಯ ಸ್ಮೃತಿಯ ತಿಲಕವನ್ನಿಡುತ್ತೀರಾ ಅಥವಾ ಮರೆತು ಹೋಗುತ್ತೀರಾ? ಕೆಲವೊಮ್ಮೆ ಇಡುವುದನ್ನು ಮರೆತು ಬಿಡಬಹುದು, ಕೆಲವೊಮ್ಮೆ ಅಳಿಸಿ ಹೋಗಬಹುದು. ಯಾರು ಸುಮಂಗಲಿಯರಾಗಿದ್ದಾರೆ, ಜೊತೆಯಿರುತ್ತಾರೆ ಅಥವಾ ಕೆಲವೊಮ್ಮೆ ಮರೆತು ಹೋಗುವುದಿಲ್ಲವೇ. ಹಾಗಾದರೆ ಜೊತೆಗಾರರನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿ.

ಗ್ರೂಪ್ ಸುಂದರ ಹೂಗುಚ್ಛವಾಗಿದೆ ಭಿನ್ನ ಹೂವಿನ ಹೂಗುಚ್ಛ ಶೋಭನಿಕವಾಗಿದೆಯಲ್ಲವೇ. ಹಾಗಾದರೆ ಯಾರೆಲ್ಲಾ ಇದ್ದೀರಾ, ಎಲ್ಲಿಂದಲಾದರೂ ಬಂದಿರಬಹುದು, ಎಲ್ಲರೂ ಒಬ್ಬಿಬ್ಬರಿಗಿಂತ ಪ್ರಿಯರಾಗಿದ್ದೀರಲ್ಲವೇ. ಎಲ್ಲರೂ ಸಂತುಷ್ಟರಾಗಿದ್ದೀರಲ್ಲವೇ? ಸದಾ ಜೊತೆಯಿದ್ದೀರಾ ಹಾಗೂ ಸದಾ ಸಂತುಷ್ಟರಾಗಿದ್ದೀರಾ. ಅಷ್ಟೇ. ಇದು ಒಂದೇ ಶಬ್ದ ನೆನಪಿಟ್ಟುಕೊಳ್ಳಬೇಕು ಕಂಬೈಂಡ್ ಆಗಿದ್ದೇವೆ ಹಾಗೂ ಸದಾ ಕಂಬೈಂಡ್ ಆಗಿ ಜೊತೆಯಲ್ಲಿರುತ್ತೇವೆ. ಆದರೆ ಜೊತೆಯಲ್ಲಿರುತ್ತೇವೆಂದರೆ ಜೊತೆಯಲ್ಲಿ ನಡೆಯಬೇಕು, ಜೊತೆಯಲ್ಲಿರಬೇಕು, ಜೊತೆಯಲ್ಲಿ ನಡೆಯಬೇಕು. ಯಾರ ಜೊತೆ ಪ್ರೀತಿಯಿರುತ್ತದೆ ಅವರಿಂದ ದೂರ ಆಗುವುದಕ್ಕೆ ಸಾಧ್ಯವಿಲ್ಲ. ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪ ಜೊತೆಯಲ್ಲಂತೂ ಇದ್ದೀರಲ್ಲವೇ. ಒಳ್ಳೆಯದು.

ವರದಾನ:

ಬ್ಯಾಲೆನ್ಸ್ ವಿಶೇಷತೆಗಳನ್ನು ಧಾರಣೆ ಮಾಡಿ ಸರ್ವರಿಗೆ ಬ್ಲೆಸ್ಸಿಂಗ್(ಆಶೀರ್ವಾದ) ಮಾಡುವಂತಹ ಶಕ್ತಿಶಾಲಿ, ಸೇವಾಧಾರಿ ಭವ


ಈಗ ತಾವು ಶಕ್ತಿಶಾಲಿ ಆತ್ಮಗಳ ಸೇವೆ ಆಗಿದೆ ಸರ್ವರಿಗೆ ಬ್ಲೆಸ್ಸಿಂಗ್(ಆಶೀರ್ವಾದ) ಮಾಡುವುದು. ಇಲ್ಲಾ ಕಣ್ಣುಗಳಿಂದ ಕೊಡಿ, ಇಲ್ಲಾ ಮಸ್ತಕ ಮಣಿಯ ಮುಖಾಂತರ ಕೊಡಿ. ಹೇಗೆ ಸಾಕಾರ ಬ್ರಹ್ಮಾ ತಂದೆಯನ್ನು ಕೊನೆಯ ಕರ್ಮಾತೀತ ಸಮಯದಲ್ಲಿ ನೋಡಿದಿರಿ-ಹೇಗೆ ಬ್ಯಾಲೆನ್ಸ್ ವಿಶೇಷತೆ ಇತ್ತು ಮತ್ತು ಬ್ಲೆಸ್ಸಿಂಗ್ನ ಕಮಾಲ್ ಇತ್ತು. ಆದ್ದರಿಂದ ಫಾಲೋ ಫಾದರ್ ಮಾಡಿ-ಇದೇ ಸಹಜ ಮತ್ತು ಶಕ್ತಿಶಾಲಿ ಸೇವೆಯಾಗಿದೆ. ಇದರಲ್ಲಿ ಸಮಯವೂ ಕಡಿಮೆ, ಪರಿಶ್ರಮವೂ ಕಡಿಮೆ ಮತ್ತು ಪಲಿತಾಂಶವೂ ಹೆಚ್ಚು ಸಿಗುವುದು. ಆದ್ದರಿಂದ ಆತ್ಮಿಕ ಸ್ವರೂಪದಿಂದ ಎಲ್ಲರಿಗೂ ಆಶೀರ್ವಾದ(ಬ್ಲೆಸ್ಸಿಂಗ್) ಮಾಡುತ್ತಾ ಹೋಗಿ.

ಸ್ಲೋಗನ್:

ವಿಸ್ತಾರವನ್ನು ಸೆಕೆಂಡ್ನಲ್ಲಿ ಸಮಾವೇಶ ಮಾಡಿಕೊಂಡು ಜ್ಞಾನದ ಸಾರದ ಅನುಭವ ಮಾಡಿಸುವುದೇ ಲೈಟ್-ಮೈಟ್ ಹೌಸ್ ಆಗಬೇಕು.

 

ಸೂಚನೆ: ಇಂದು ಅಂತರಾಷ್ಟ್ರೀಯ ಯೋಗ ದಿವಸ 3ನೇಯ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ- ಸಹೋದರಿಯರು ಸಂಜೆ 6:30 ರಿಂದ 7:30 ರವರೆಗೆ ವಿಶೇಷ ಯೋಗಾಭ್ಯಾಸದ ಸಮಯದ ಲೈಟ್ ಮೈಟ್ ಸ್ವರೂಪದಲ್ಲಿ ಸ್ಥಿತರಾಗಿ ಲೈಟ್ ಹೌಸ್ ಆಗಿ ಇಡೀ ಗ್ಲೋಬ್ ಮೇಲೆ ಶಾಂತಿ ಮತ್ತು ಶಕ್ತಿಯ ಸಕಾಶವನ್ನು ಹರಡಿಸಿ.

Download PDF

Post a Comment

0 Comments