Header Ads Widget

Header Ads

KANNADA MURLI 14.01.23

 

14/01/23  ಪ್ರಾತಃಮುರುಳಿ ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಈಗ ನಿಮ್ಮ ಶರೀರ ಬಹಳ ಹಳೆಯದಾಗಿದೆ, ನಿಮ್ಮ ಶರೀರವನ್ನು ಕಲ್ಪವೃಕ್ಷದ ಸಮಾನ ಮಾಡಲು ತಂದೆಯು ಬಂದಿದ್ದಾರೆ, ನೀವು ಅರ್ಧಕಲ್ಪಕ್ಕೋಸ್ಕರ ಅಮರರಾಗುತ್ತೀರಿ

ಪ್ರಶ್ನೆ:

ಅದ್ಭುತವಾದ ನಾಟಕದಲ್ಲಿ ಯಾವ ಒಂದು ಮಾತು ಬಹಳ ತಿಳಿದುಕೊಳ್ಳುವಂತದ್ದಾಗಿದೆ?

ಉತ್ತರ:

ನಾಟಕದಲ್ಲಿ ಯಾವ ಪಾತ್ರಧಾರಿಗಳಿದ್ದಾರೆ ಅವರ ಚಿತ್ರ ಕೇವಲ ಒಂದು ಬಾರಿ ನೋಡಲಾಗುತ್ತದೆ ನಂತರ ಅದೇ ದೃಶ್ಯವನ್ನು 5000 ವರ್ಷದ ನಂತರ ನೋಡಲಾಗುತ್ತದೆ. 84 ಜನ್ಮಗಳ 84 ರೂಪಗಳಾಗುತ್ತವೆ ಮತ್ತು ಎಲ್ಲವೂ ಭಿನ್ನವಾಗಿರುತ್ತದೆ. ಕರ್ಮವು ಯಾರ ಜೊತೆಯೂ ಹೊಂದುವುದಲ್ಲ. ಯಾರೆಷ್ಟು ಕರ್ಮ ಮಾಡಿದರೋ ಅವರು ನಂತರ 5000 ವರ್ಷದ ನಂತರ ಅದೇ ಕರ್ಮವನ್ನು ಮಾಡುತ್ತಾರೆ ಇದು ಬಹಳ ತಿಳಿದುಕೊಳ್ಳುವ ಮಾತಾಗಿದೆ. ಈಗ ನೀವು ಮಕ್ಕಳ ಬುದ್ಧಿಯ ಬೀಗ ತೆರೆದಿದೆ. ನೀವು ರಹಸ್ಯವನ್ನು ಎಲ್ಲರಿಗೂ ತಿಳಿಸಬೇಕು.

ಗೀತೆ:  ಭೋಲಾನಾಥನಿಗಿಂತ ಮುಗ್ಧರು ಯಾರೂ ಇಲ್ಲ......

ಓಂ ಶಾಂತಿ. ಭೋಲಾನಾಥ ಎಂದು ಸದಾ ಶಿವತಂದೆಗೆ ಹೇಳಲಾಗುತ್ತದೆ. ಶಂಕರನಿಗೆ ಹೇಳಲಾಗುವುದಿಲ್ಲ. ಅವನು ವಿನಾಶವನ್ನು ಮಾಡುತ್ತಾನೆ ಮತ್ತು ಶಿವತಂದೆ ಸ್ಥಾಪನೆ ಮಾಡುತ್ತಾರೆ. ಸ್ವರ್ಗದ ಸ್ಥಾಪನೆಯನ್ನು ಅವಶ್ಯವಾಗಿ ಮಾಡುತ್ತಾರೆ ಮತ್ತು ನರಕದ ವಿನಾಶ ಮಾಡುತ್ತಾರೆ ಅಂದಾಗ ಜ್ಞಾನಸಾಗರ, ಭೋಲಾನಾಥ ಎಂದು ಶಿವನಿಗಷ್ಟೇ ಹೇಳಲಾಗುತ್ತದೆ. ನೀವು ಮಕ್ಕಳು ಈಗ ಅನುಭವಿಗಳಾಗಿದ್ದೀರಿ. ಕಲ್ಪದ ಮೊದಲು ಅವಶ್ಯವಾಗಿ ಶಿವತಂದೆಯು ಬಂದಿದ್ದರು ಮತ್ತು ಈಗಲೂ ಅವಶ್ಯವಾಗಿ ಬಂದಿದ್ದಾರೆ. ಹೊಸ ಮನುಷ್ಯ ಸೃಷ್ಟಿಯನ್ನು ರಚನೆ ಮಾಡಲು ಅವಶ್ಯವಾಗಿ ಬರಬೇಕು. ಡ್ರಾಮಾದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಅವಶ್ಯವಾಗಿ ಇಲ್ಲಿಗೆ ಬರಲೇಬೇಕು. ಸೂಕ್ಷ್ಮವತನದಲ್ಲಿ ತಿಳಿಸಿಕೊಡುವುದಿಲ್ಲ ಏಕೆಂದರೆ ಸೂಕ್ಷ್ಮವತನದ ಭಾಷೆಯೇ ಬೇರೆಯಾಗಿದೆ. ಮೂಲವತನದಲ್ಲಿ ಭಾಷೆಯೇ ಇಲ್ಲ. ಇಲ್ಲಿ ಮಾತನಾಡುತ್ತೇವೆ. ಶಿವತಂದೆಯೇ ಸುಂದರರನ್ನಾಗಿ ಮಾಡುವವರಾಗಿದ್ದಾರೆ. ಯಾವಾಗ ಸೃಷ್ಟಿಯು ತಮೋಪ್ರಧಾನವಾಗುತ್ತದೆಯೋ ಆಗ ಎಲ್ಲರಿಗೂ ಸದ್ಗತಿಯನ್ನು ಕೊಡುವ ಭಗವಂತ ನಾನು ಇಲ್ಲಿಗೆ ಬರಬೇಕಾಗುತ್ತದೆ ಎಂದು ಹೇಳುತ್ತಾರೆ. ಸ್ಮಾರಕವೂ ಸಹ ಇಲ್ಲಿಯೇ ಇದೆ. ನಾಟಕದಲ್ಲಿ ಯಾವ ಯಾವ ಮನುಷ್ಯರ ಚಿತ್ರವಿದೆಯೋ ಅದನ್ನು ಒಂದೇ ಬಾರಿ ನೋಡಲು ಸಾಧ್ಯ. ಲಕ್ಷ್ಮೀ-ನಾರಾಯಣರ ಚಿತ್ರವನ್ನು ಸತ್ಯಯುಗದಲ್ಲಿ ಬಿಟ್ಟರೆ ಬೇರೆಲ್ಲೂ ನೋಡಲು ಸಾಧ್ಯವಾಗುವುದಿಲ್ಲ ಏಕೆಂದರೆ ಪುನರ್ಜನ್ಮವನ್ನು ತೆಗೆದುಕೊಂಡಾಗ ನಾಮ-ರೂಪ ಭಿನ್ನವಾಗುತ್ತದೆ. ಅದೇ ಲಕ್ಷ್ಮೀ-ನಾರಾಯಣರ ರೂಪವು ಒಂದೇ ಬಾರಿ ನೋಡುತ್ತೀರಿ ಪುನಃ 5000 ವರ್ಷದ ನಂತರವೇ ನೋಡುವುದು. ಹೇಗೆ ಗಾಂಧಿಯ ಚಿತ್ರವೂ ಸಹ 5000 ವರ್ಷದ ನಂತರ ನೋಡುತ್ತೀರಿ. ಅನೇಕ ಮನುಷ್ಯರಿದ್ದಾರೆ, ಈಗ ಯಾವ ಮನುಷ್ಯರ ಚಿತ್ರವನ್ನು ನೋಡುತ್ತೀರಾ ಅದನ್ನು 5000 ವರ್ಷದ ನಂತರ ನೋಡುತ್ತೀರಿ. ಕರ್ಮವು ಯಾರ ಜೊತೆಯಲ್ಲೂ ಹೊಂದುವುದಿಲ್ಲ. ಯಾರು ಯಾವ ಕರ್ಮವನ್ನು ಮಾಡಿದ್ದಾರೋ ಕರ್ಮವನ್ನು 5000 ವರ್ಷದ ನಂತರ ಮಾಡುತ್ತಾರೆ. ಇದು ಬಹಳ ತಿಳಿದುಕೊಳ್ಳುವಂತಹ ಮಾತಾಗಿದೆ. ತಂದೆಯ ಚಿತ್ರವೂ ಸಹ ಇದೆ. ಅವಶ್ಯವಾಗಿ ಮೊಟ್ಟಮೊದಲು ಸೃಷ್ಟಿಯನ್ನು ರಚನೆ ಮಾಡಲು ಅವರು ಬರುತ್ತಾರೆಂದು ನಮಗೆ ತಿಳಿದಿದೆ. ನಿಮ್ಮ ಬುದ್ಧಿಯ ಬೀಗ ತೆರೆದಿರುವುದರಿಂದ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ. ಈಗ ಅನ್ಯರ ಬುದ್ಧಿಯ ಬೀಗವನ್ನೂ ಸಹ ತೆರೆಯಬೇಕು. ನಿರಾಕಾರ ತಂದೆಯು ಅವಶ್ಯವಾಗಿ ಪರಮಧಾಮದಲ್ಲಿರುತ್ತಾರೆ. ಹೇಗೆ ಈಗ ನೀವೆಲ್ಲರೂ ತಂದೆಯ ಜೊತೆಯಲ್ಲಿದ್ದೀರಿ, ಯಾವಾಗ ನಾನು ಬರುತ್ತೇನೋ ಆಗ ನನ್ನ ಜೊತೆಗೆ ಬ್ರಹ್ಮಾ, ವಿಷ್ಣು, ಶಂಕರಿರುತ್ತಾರೆ. ಮನುಷ್ಯ ಸೃಷ್ಟಿಯು ಮೊದಲಿನಿಂದಲೇ ಇರುತ್ತದೆ. ಅದು ಹೇಗೆ ಬದಲಾಗುತ್ತದೆ, ಪುನರಾವರ್ತನೆ ಹೇಗೆ ಆಗುತ್ತದೆ. ಮೊದಲು ಅವಶ್ಯವಾಗಿ ಸೂಕ್ಷ್ಮವತನವನ್ನು ರಚಿಸಿ ನಂತರ ಸ್ಥೂಲವತನದಲ್ಲಿ ಬರುತ್ತೇವೆ ಏಕೆಂದರೆ ಯಾವ ಮನುಷ್ಯರು ದೇವತೆಗಳಾಗಿದ್ದರೋ ಅವರು ಈಗ ಶೂದ್ರರಾಗಿದ್ದಾರೆ. ಅವರನ್ನು ಈಗ ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತಿದ್ದಾರೆ. ಯಾರಿಗೆ ಕಲ್ಪದ ಮೊದಲು ನಾನು ಜ್ಞಾನವನ್ನು ಕೊಟ್ಟಿದ್ದೆನೋ ಅದು ಪುನಃ ಪುನರಾವರ್ತನೆಯಾಗುತ್ತದೆ. ಸಮಯದಲ್ಲಿ ಕುಳಿತು ರಾಜಯೋಗವನ್ನು ಕಲಿಸುತ್ತಿದ್ದೇನೆ. ಅರ್ಧಕಲ್ಪದ ನಂತರ ಭಕ್ತಿಯು ಪ್ರಾರಂಭವಾಗುತ್ತದೆ. ತಂದೆಯು ಸ್ವಯಂ ಕುಳಿತು ಹಳೆಯ ಸೃಷ್ಟಿಯು ಹೇಗೆ ಹೊಸದಾಗುತ್ತದೆ ಎಂದು ತಿಳಿಸುತ್ತಿದ್ದಾರೆ. ಅಂತಿಮದಿಂದ ಆದಿ ಹೇಗಾಗುತ್ತದೆ. ಪರಮಾತ್ಮ ಬಂದಿದ್ದರು, ಆದರೆ ಯಾವಾಗ ಮತ್ತು ಹೇಗೆ ಬಂದಿದ್ದರು ಎನ್ನುವುದು ಮನುಷ್ಯರು ತಿಳಿದುಕೊಂಡಿದ್ದಾರೆ. ಆದಿ-ಮಧ್ಯ-ಅಂತ್ಯದ ರಹಸ್ಯ ಹೇಗೆ ಬಂದಿತು ಎನ್ನುವುದು ತಿಳಿದುಕೊಂಡಿಲ್ಲ.

ಎಲ್ಲರಿಗೂ ಸದ್ಗತಿಯನ್ನು ಕೊಡಲು ನಾನು ಸಮ್ಮುಖದಲ್ಲಿ ಬಂದಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಮಾಯಾರಾವಣ ಎಲ್ಲರ ಶರೀರವನ್ನು ಹಾಳು ಮಾಡಿದ್ದಾನೆ ಅಂದಾಗ ಸುಂದರರನ್ನಾಗಿ ಮಾಡಲು ಅವಶ್ಯವಾಗಿ ಬರಬೇಕಾಗುತ್ತದೆ. 5000 ವರ್ಷದ ಮೊದಲು ಬ್ರಹ್ಮನ ತನುವಿನಲ್ಲಿ ಬಂದಿದ್ದೆನು ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯ ಸೃಷ್ಟಿಯನ್ನು ಅವಶ್ಯವಾಗಿ ಇಲ್ಲಿಯೇ ರಚಿಸುತ್ತಾರೆ. ಇಲ್ಲಿಯೇ ಬಂದು ಸೃಷ್ಟಿಯನ್ನು ಬದಲಾಯಿಸಿ ಕಾಯ ಕಲ್ಪವೃಕ್ಷದ ಸಮಾನ ಮಾಡುತ್ತಾರೆ. ಈಗ ನಿಮ್ಮ ಶರೀರ ಬಹಳ ಹಳೆಯದಾಗಿದೆ. ಅದನ್ನು ಈಗ ಅರ್ಧಕಲ್ಪಕ್ಕೋಸ್ಕರ ಅಮರವನ್ನಾಗಿ ಮಾಡುತ್ತೇನೆ. ಭಲೆ ಖುಷಿಯಿಂದ ಶರೀರವನ್ನು ಬದಲಾಯಿಸುತ್ತೀರಿ. ಹೇಗೆ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುತ್ತೀರಿ. ಅಲ್ಲಿ ಇಂತಹವರು ಸತ್ತರು ಎಂದು ಹೇಳುವುದಿಲ್ಲ ಏಕೆಂದರೆ ಅದನ್ನು ಸಾಯುವುದು ಎಂದು ಹೇಳುವುದಿಲ್ಲ. ಹೇಗೆ ನೀವು ಬದುಕಿದ್ದರೂ ಸಾಯುತ್ತೀರಿ ಅಂದಾಗ ವಾಸ್ತವಿಕವಾಗಿ ನೀವು ಸಾಯುತ್ತೀರೇನು. ನೀವು ಶಿವತಂದೆಯವರಾಗುತ್ತೀರಿ. ನೀವು ನನ್ನ ಕಣ್ಮಣಿಗಳು, ಅಗಲಿ ಸಿಕ್ಕಿದ ಮಕ್ಕಳು ಎಂದು ತಂದೆಯು ಹೇಳುತ್ತಾರೆ. ಶಿವತಂದೆಯು ಹೇಳುತ್ತಾರೆ ಅಂದಾಗ ಬ್ರಹ್ಮಾತಂದೆಯು ಹೇಳುತ್ತಾರೆ. ಅವರು ನಿರಾಕಾರಿ ತಂದೆ, ಇವರು ಸಾಕಾರಿ ತಂದೆಯಾಗಿದ್ದಾರೆ. ಈಗ ನೀವು ಹೇಳುತ್ತೀರಿ - ಬಾಬಾ ತಾವು ಅವರೇ ಆಗಿದ್ದೀರಿ, ನಾವೂ ಸಹ ಅವರೇ ಆಗಿದ್ದೇವೆ ಯಾರು ಮೊದಲು ಮಿಲನ ಮಾಡಿದ್ದೇವೆ. ನಾನೇ ಬಂದು ಸ್ವರ್ಗವನ್ನು ಸ್ಥಾಪನೆ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ ಅಂದಾಗ ರಾಜ್ಯಪದವಿಯು ಅವಶ್ಯವಾಗಿ ಬೇಕು ಆದ್ದರಿಂದ ರಾಜಯೋಗವನ್ನು ಕಲಿಸುತ್ತಿದ್ದೇನೆ ನಂತರ ರಾಜಪದವಿಯು ಸಿಗುತ್ತದೆ. ಅಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಶಾಸ್ತ್ರ ಇತ್ಯಾದಿ ಎಲ್ಲವೂ ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ, ಓದುತ್ತಿರುತ್ತಾರೆ. ಹೇಗೆ ದೊಡ್ಡ ವ್ಯಕ್ತಿಗಳು ಇತಿಹಾಸ, ಭೂಗೋಳವನ್ನು ಬರೆದಾಗ ಅದನ್ನು ನಂತರ ಓದುತ್ತಾರೆ. ಅಪಾರವಾದ ಪುಸ್ತಕಗಳಿವೆ. ಮನುಷ್ಯರು ಓದುತ್ತಲೇ ಇರುತ್ತಾರೆ. ಸ್ವರ್ಗದಲ್ಲಿ ಇದೆಲ್ಲವೂ ಏನೂ ಇರುವುದಿಲ್ಲ. ಅಲ್ಲಿ ಭಾಷೆಯೂ ಸಹ ಒಂದೇ ಇರುತ್ತದೆ ಅಂದಾಗ ನಾನು ಸೃಷ್ಟಿಯನ್ನು ಹೊಸದನ್ನಾಗಿ ಮಾಡಲು ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ಮೊದಲು ಹೊಸದಾಗಿತ್ತು, ಈಗ ಹಳೆಯದಾಗಿದೆ. ನನ್ನ ಎಲ್ಲಾ ಮಕ್ಕಳನ್ನು ಮಾಯೆಯು ಸುಟ್ಟುಹಾಕಿ ಬೂದಿಯನ್ನಾಗಿ ಮಾಡಿದೆ. ಅಲ್ಲಿ ಸಾಗರನ ಮಕ್ಕಳನ್ನು ತೋರಿಸುತ್ತಾರೆ ಆದರೆ ನಾವು ಜ್ಞಾನಸಾಗರನಿಗೆ ಮಕ್ಕಳಾಗಿದ್ದೇವೆ. ಭಲೆ ವಾಸ್ತವದಲ್ಲಿ ಎಲ್ಲರೂ ಮಕ್ಕಳಾಗಿದ್ದೇವೆ ಆದರೆ ಪ್ರತ್ಯಕ್ಷವಾಗಿ ನೀವು ಮಕ್ಕಳಾಗಿದ್ದೀರಿ. ನಿಮ್ಮ ಕಾರಣದಿಂದಲೇ ತಂದೆಯು ಬರುತ್ತಾರೆ, ನಾನು ಬಂದಿದ್ದೇನೆಂದು ಹೇಳುತ್ತಾರೆ ನಂತರ ನೀವು ಮಕ್ಕಳಿಗೆ ಪ್ರಜ್ಞೆ ಬರುತ್ತದೆ. ಯಾರು ಬಹಳ ಕಪ್ಪಾಗಿದ್ದರು, ಕಲ್ಲುಬುದ್ಧಿಯವರಾಗಿದ್ದರು, ಅವರನ್ನು ಚಿನ್ನದ ಬುದ್ಧಿಯವರನ್ನಾಗಿ ಮಾಡಲು ಬರುತ್ತೇನೆ. ಜ್ಞಾನದಿಂದ ನಾವು ಪಾರಸಬುದ್ಧಿಯವರಾಗಿ ಹೇಗೆ ಆಗುತ್ತೇವೆ ಎನ್ನುವುದು ನಿಮಗೆ ತಿಳಿದಿದೆ. ಯಾವಾಗ ನೀವು ಪಾರಸಬುದ್ಧಿಯವರಾಗುತ್ತೀರೋ ಆಗ ಪ್ರಪಂಚವು ಕಲ್ಲಿನಪುರಿಯಿಂದ ಬದಲಾಗಿ ಪಾರಸಪುರಿಯಾಗುತ್ತದೆ. ಅದಕ್ಕೋಸ್ಕರವೇ ತಂದೆಯು ಪುರುಷಾರ್ಥವನ್ನು ಮಾಡಿಸುತ್ತಿದ್ದಾರೆ ಅಂದಾಗ ತಂದೆಯು ಮನುಷ್ಯ ಸೃಷ್ಟಿಯನ್ನು ರಚನೆ ಮಾಡುವುದಕ್ಕೋಸ್ಕರ ಇಲ್ಲಿಗೆ ಬರಬೇಕಾಗುತ್ತದೆ. ಯಾರ ತನುವಿನಲ್ಲಿ ಬರುತ್ತಾರೋ ಅವರ ಮುಖಾಂತರ ಮುಖವಂಶಾವಳಿಗಳನ್ನು ರಚಿಸುತ್ತಾರೆ ಅಂದಾಗ ಇವರು ತಾಯಿಯಾದರು. ಇದು ಎಷ್ಟೊಂದು ಗುಹ್ಯವಾದ ಮಾತಾಗಿದೆ. ಇವರು ಪುರುಷರಾಗಿದ್ದಾರೆ, ಇವರಲ್ಲಿ ತಂದೆಯು ಬರುವುದರಿಂದ ತಾಯಿ ಹೇಗಾದರು ಎನ್ನುವುದರಲ್ಲಿ ಅವಶ್ಯವಾಗಿ ತಬ್ಬಿಬ್ಬಾಗುತ್ತಾರೆ.

ಇವರು ತಂದೆ-ತಾಯಿ ಆಗಿದ್ದಾರೆಂದು ಸಿದ್ಧ ಮಾಡಿ ತಿಳಿಸಬೇಕು. ಬ್ರಹ್ಮಾ, ಸರಸ್ವತಿ ಇಬ್ಬರೂ ಕಲ್ಪವೃಕ್ಷದ ಕೆಳಗೆ ಕುಳಿತಿದ್ದಾರೆ. ರಾಜಯೋಗವನ್ನು ಕಲಿಯುತ್ತಿದ್ದಾರೆ ಅಂದಾಗ ಅವಶ್ಯವಾಗಿ ಅವರಿಗೆ ಗುರು ಬೇಕಾಗುತ್ತದೆ. ಬ್ರಹ್ಮಾ, ಸರಸ್ವತಿ ಮತ್ತು ಮಕ್ಕಳು ಎಲ್ಲರಿಗೂ ರಾಜಋಷಿಗಳೆಂದು ಹೇಳಲಾಗುತ್ತದೆ. ತಂದೆಯೇ ಬಂದು ರಾಜ್ಯಪದವಿಗೋಸ್ಕರ ರಾಜಯೋಗ ಮತ್ತು ಜ್ಞಾನವನ್ನು ತಿಳಿಸುತ್ತಾರೆ. ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಇದು ಬೇರೆಯವರ ರಾಜಯೋಗವಲ್ಲ. ಅಲ್ಲಿ ಕೇವಲ ಯೋಗವನ್ನು ಕಲಿಯಿರಿ ಎಂದು ಹೇಳುತ್ತಾರೆ. ಹಠಯೋಗವು ಅನೇಕ ಪ್ರಕಾರವಾಗಿದೆ. ರಾಜಯೋಗವನ್ನು ಸನ್ಯಾಸಿಗಳು, ಸಾಧುಗಳು ಕಲಿಸಲು ಸಾಧ್ಯವಿಲ್ಲ. ಭಗವಂತನೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾನು ಕಲ್ಪ-ಕಲ್ಪದಲ್ಲಿಯೂ ಮನುಷ್ಯ ಸೃಷ್ಟಿಯ ಹೊಸ ರಚನೆಯನ್ನು ಮಾಡಲು ಬರಬೇಕಾಗುತ್ತದೆ ಎಂದು ಹೇಳುತ್ತಾರೆ. ಪ್ರಳಯವಂತೂ ಆಗುವುದಿಲ್ಲ ಒಂದುವೇಳೆ ಪ್ರಳಯವಾದರೆ ನಾನು ಬರುವುದಾದರೂ ಹೇಗೆ? ನಿರಾಕಾರ ತಂದೆಯು ಬಂದು ಏನು ಮಾಡುತ್ತಾರೆ? ಸೃಷ್ಟಿಯು ಮೊದಲಿಂದಲೇ ಇದೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತರೂ ಇದ್ದಾರೆ, ಭಗವಂತನನ್ನು ಕರೆಯುತ್ತಿದ್ದಾರೆ, ಇದರಿಂದ ಭಕ್ತರಿದ್ದಾರೆಂದು ಸಿದ್ಧವಾಗುತ್ತದೆ. ಯಾವಾಗ ಭಕ್ತರು ಬಹಳ ದುಃಖಿಗಳಾಗುತ್ತಾರೆ, ಕಲಿಯುಗದ ಅಂತ್ಯವಾಗುತ್ತದೆಯೋ ಆಗ ಭಗವಂತ ಬರುತ್ತಾರೆ. ರಾವಣರಾಜ್ಯ ಸಮಾಪ್ತಿಯಾಗುತ್ತದೆ. ಆಗಲೇ ನಾನು ಬರಬೇಕಾಗುತ್ತದೆ. ಅವಶ್ಯವಾಗಿ ಸಮಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ. ಮಹಾಭಾರತದ ಯುದ್ಧವು ನಿಮ್ಮ ಎದುರಿಗೆ ನಿಂತಿದೆ.

ಇದು ಪಾಠಶಾಲೆಯಾಗಿದೆ, ಇಲ್ಲಿ ಗುರಿ-ಉದ್ದೇಶವೂ ಸಹ ಇದೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ನಂತರ ಒಂದೇ ಕಿರೀಟವುಳ್ಳಂತಹವರ ರಾಜ್ಯವಾಯಿತು ನಂತರ ಬೇರೆ ಬೇರೆ ಧರ್ಮಗಳು ವೃದ್ಧಿಯನ್ನು ಪಡೆಯಿತು ನಂತರ ರಾಜ್ಯಭಾರ ಇತ್ಯಾದಿಗಳನ್ನು ಮುಂದುವರೆಸುವುದಕ್ಕೋಸ್ಕರ ಯುದ್ಧ ಮುಂತಾದುವನ್ನು ಮಾಡಲಾಯಿತೆಂದು ನೀವು ಮಕ್ಕಳಿಗೆ ತಿಳಿದಿದೆ. ಯಾವುದೆಲ್ಲಾ ಕಳೆದುಹೋಯಿತು ಅದು ಪುನಃ ಪುನರಾವರ್ತನೆಯಾಗುತ್ತದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಲಕ್ಷ್ಮೀ-ನಾರಾಯಣರ ರಾಜ್ಯ ಆರಂಭವಾಗುತ್ತದೆ. ತಂದೆಯು ಪ್ರಪಂಚದ ಇತಿಹಾಸ, ಭೂಗೋಳದ ರಹಸ್ಯವನ್ನು ಪೂರ್ಣ ತಿಳಿಸುತ್ತಿದ್ದಾರೆ. ವಿಸ್ತಾರವಾಗಿ ಹೋಗುವ ಅವಶ್ಯಕತೆಯಿಲ್ಲ. ನಾವು ಸೂರ್ಯವಂಶಿಗಳಾಗಿದ್ದೆವು ಅಂದಾಗ ಅವಶ್ಯವಾಗಿ ಪುನರ್ಜನ್ಮವನ್ನು ಸೂರ್ಯವಂಶದಲ್ಲಿಯೇ ತೆಗೆದುಕೊಳ್ಳುತ್ತೇವೆ ಎಂದು ನಿಮಗೆ ತಿಳಿದಿದೆ. ನಾಮ-ರೂಪವು ಬದಲಾಗುತ್ತದೆ. ತಂದೆ-ತಾಯಿಯರು ಬೇರೆಯವರು ಸಿಗುತ್ತಾರೆ. ಇಡೀ ನಾಟಕವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು. ತಂದೆಯು ಹೇಗೆ ಬರುತ್ತಾರೆ ಎನ್ನುವುದನ್ನು ತಿಳಿದುಕೊಂಡಿದ್ದೀರಿ ಆದರೆ ಮನುಷ್ಯರ ಬುದ್ಧಿಯಲ್ಲಿ ಅದೇ ಗೀತೆಯ ಜ್ಞಾನವಿದೆ. ಮೊದಲು ನಮ್ಮ ಬುದ್ಧಿಯಲ್ಲೂ ಸಹ ಅದೇ ಹಳೆಯ ಗೀತೆಯ ಜ್ಞಾನವಿತ್ತು. ಈಗ ತಂದೆಯು ಗುಹ್ಯವಾದ ಮಾತುಗಳನ್ನು ತಿಳಿಸುತ್ತಿದ್ದಾರೆ. ಅದನ್ನು ಕೇಳುತ್ತಾ-ಕೇಳುತ್ತಾ ಇಡೀ ರಹಸ್ಯವನ್ನು ತಿಳಿದುಕೊಂಡೆವು. ಮೊದಲು ನಮ್ಮ ಜ್ಞಾನ ಬೇರೆಯಿತ್ತು ಎಂದು ಮನುಷ್ಯರು ಹೇಳುತ್ತಾರೆ. ಈಗ ಬಹಳ ಚೆನ್ನಾಗಿದೆ. ಹೇಗೆ ಗೃಹಸ್ಥ ವ್ಯವಹಾರದಲ್ಲಿದ್ದೂ ಕಮಲಪುಷ್ಪ ಸಮಾನವಾಗಿರಬೇಕು ಎನ್ನುವುದನ್ನು ತಿಳಿದುಕೊಂಡಿದ್ದೀರಿ. ಇದು ಎಲ್ಲರ ಅಂತಿಮ ಜನ್ಮವಾಗಿದೆ. ಎಲ್ಲರೂ ಸಾಯಲೇಬೇಕು. ನೀವು ಪವಿತ್ರರಾಗುವ ಪ್ರತಿಜ್ಞೆಯನ್ನು ಮಾಡಿದಾಗ 21 ಜನ್ಮಗಳಿಗೋಸ್ಕರ ಸ್ವರ್ಗದ ಮಾಲೀಕರಾಗುತ್ತೀರೆಂದು ಸ್ವಯಂ ಬೇಹದ್ದಿನ ತಂದೆಯು ಹೇಳುತ್ತಾರೆ. ಇಲ್ಲಿ ಯಾರು ಪದಮಾಪತಿಗಳಾಗಿದ್ದಾರೋ ಅವರೂ ಸಹ ದುಃಖಿಗಳಾಗಿದ್ದಾರೆ. ಅವರ ಶರೀರ ಕಲ್ಪವೃಕ್ಷದ ಸಮಾನವಾಗಿಲ್ಲ. ನಿಮ್ಮ ಶರೀರವು ಕಲ್ಪವೃಕ್ಷವಾಗಿದೆ. ನೀವು 21 ಜನ್ಮಗಳು ಸಾಯುವುದಿಲ್ಲ. ಇಲ್ಲಿ ಅವರೇ ಬರುತ್ತಾರೆ. ಯಾರು ಸೂರ್ಯವಂಶಿ, ಚಂದ್ರವಂಶಿ, ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿದ್ದರು ಎಂದು ತಂದೆಯು ಹೇಳುತ್ತಾರೆ. ಆದ್ದರಿಂದ ರಾಧೆ-ಕೃಷ್ಣ, ನಾರಾಯಣ ಎಲ್ಲರನ್ನೂ ಕಪ್ಪಾಗಿ ತೋರಿಸುತ್ತಾರೆ. ಈಗ ಎಲ್ಲರೂ ಕಪ್ಪಾಗಿದ್ದಾರೆ. ಕಾಮಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗುತ್ತಾರೆ. ಈಗ ನೀವು ಕಾಮಚಿತೆಯಿಂದ ಇಳಿದು ಜ್ಞಾನಚಿತೆಯ ಮೇಲೆ ಕುಳಿತಿದ್ದೀರಿ. ವಿಷದ ಆಯುಧವನ್ನು ದೂರ ಮಾಡಿ ಜ್ಞಾನಾಮೃತದ ಕಂಕಣವನ್ನು ಕಟ್ಟಿಕೊಂಡಿದ್ದೀರಿ. ನೀವು ಶುಭಕಾರ್ಯವನ್ನು ಮಾಡುತ್ತಿದ್ದೀರೆಂದು ಅನ್ಯರು ತಿಳಿದುಕೊಳ್ಳಬೇಕು. ಎಲ್ಲಿಯತನಕ ಕುಮಾರ-ಕುಮಾರಿಯರಾಗಿದ್ದೀರಿ ಅಲ್ಲಿಯತನಕ ಪತಿತರೆಂದು ಅವರಿಗೆ ಹೇಳಲಾಗುವುದಿಲ್ಲ. ನೀವು ಕೆಟ್ಟದ್ದನ್ನು ಎಂದೂ ಮಾಡಬೇಡಿ ಎಂದು ತಂದೆಯು ಹೇಳುತ್ತಾರೆ. ಮುಂದೆ ಹೋಗುತ್ತಾ ಅನೇಕರು ಬರುತ್ತಾರೆ, ಬಂದು ಇದು ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ನೀವು ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲೂ ಸಹ ಬ್ರಾಹ್ಮಣರೇ ನಿಶ್ಚಿತಾರ್ಥವನ್ನು ಮಾಡಿಸುತ್ತಾರೆ. ರಾಜರ ಬಳಿಯೂ ಸಹ ಬ್ರಾಹ್ಮಣರಿರುತ್ತಾರೆ. ಅವರಿಗೆ ರಾಜಗುರುವೆಂದು ಹೇಳುತ್ತಾರೆ. ಇಂದಿನ ದಿನ ಸನ್ಯಾಸಿಗಳು ಕಂಕಣವನ್ನು ಕಟ್ಟಿಕೊಳ್ಳುತ್ತಾರೆ. ನೀವು ಯಾವಾಗ ಜ್ಞಾನದ ಮಾತುಗಳನ್ನು ತಿಳಿಸುತ್ತೀರೋ ಆಗ ಜನರು ಬಹಳ ಖುಷಿಯಾಗುತ್ತಾರೆ. ತಕ್ಷಣ ರಾಖಿಯನ್ನೂ ಸಹ ಕಟ್ಟಿಸಿಕೊಳ್ಳುತ್ತಾರೆ ನಂತರ ಮನೆಯಲ್ಲಿ ಜಗಳವೂ ಸಹ ಆಗುತ್ತದೆ.

ನೀವು ಗುಪ್ತವಾದ ಶಿವಶಕ್ತಿ ಸೇನೆಯಾಗಿದ್ದೀರಿ. ನಿಮ್ಮ ಬಳಿ ಯಾವುದೇ ಆಯುಧಗಳಿಲ್ಲ, ದೇವಿಯರ ಬಳಿ ಬಹಳಷ್ಟು ಆಯುಧಗಳನ್ನು ತೋರಿಸುತ್ತಾರೆ. ಇಲ್ಲಿ ಎಲ್ಲವೂ ಜ್ಞಾನದ ಮಾತಾಗಿದೆ. ಇಲ್ಲಿ ಯೋಗಬಲದ ಮಾತಾಗಿದೆ. ನೀವು ಯೋಗಬಲದಿಂದ ವಿಶ್ವದ ರಾಜ್ಯಪದವಿಯನ್ನು ಪಡೆದುಕೊಳ್ಳುತ್ತೀರಿ ಆದರೆ ಬಾಹುಬಲದಿಂದ ಹದ್ದಿನ ರಾಜ್ಯಪದವಿಯು ಸಿಗುತ್ತದೆ. ಬೇಹದ್ದಿನ ರಾಜ್ಯಪದವಿಯನ್ನು ಬೇಹದ್ದಿನ ಮಾಲೀಕನೇ ಕೊಡುತ್ತಾರೆ. ಯುದ್ಧದ ಮಾತಂತೂ ಇಲ್ಲ. ನಾನು ಹೇಗೆ ಯುದ್ಧವನ್ನು ಮಾಡಿಸಲಿ ಎಂದು ತಂದೆಯು ಹೇಳುತ್ತಾರೆ. ನಾನು ಯುದ್ಧ, ಜಗಳವನ್ನು ದೂರ ಮಾಡುವುದಕ್ಕೋಸ್ಕರ ಬರುತ್ತೇನೆ ನಂತರ ಅದರ ಹೆಸರು, ಚಿಹ್ನೆಯೂ ಇರುವುದಿಲ್ಲ ಆಗ ಪರಮಾತ್ಮನನ್ನು ಎಲ್ಲರೂ ನೆನಪು ಮಾಡುತ್ತಾರೆ. ನನ್ನ ಗೌರವವನ್ನು ಕಾಪಾಡಿ ಎಂದು ಹೇಳುತ್ತಾರೆ ನಂತರ ಒಬ್ಬನಲ್ಲಿ ನಿಶ್ಚಯವಿಲ್ಲದಿದ್ದಾಗ ಬೇರೆ ಬೇರೆಯವರನ್ನು ಹಿಡಿದುಕೊಳ್ಳುತ್ತಾರೆ. ನಮ್ಮಲ್ಲಿಯೇ ಭಗವಂತನಿದ್ದಾನೆ ನಂತರ ತಮ್ಮ ಮೇಲು ನಿಶ್ಚಯ ಇಟ್ಟುಕೊಳ್ಳುವುದಿಲ್ಲ. ಗುರುಗಳನ್ನು ಮಾಡಿಕೊಳ್ಳುತ್ತಾರೆ. ಯಾವಾಗ ನಿಮ್ಮಲ್ಲಿಯೇ ಭಗವಂತನಿದ್ದಾನೆ ಅಂದಾಗ ಗುರುಗಳನ್ನು ಏಕೆ ಮಾಡಿಕೊಳ್ಳುತ್ತೀರಿ? ಕಲ್ಪದ ಮೊದಲು ನಾನು ಹೀಗೆಯೇ ಬಂದಿದ್ದೆನೆಂದು ತಂದೆಯು ಹೇಳುತ್ತಾರೆ. ಈಗ ರಚಯಿತ ತಂದೆಯು ಕುಳಿತು ಹೇಗೆ ರಚನೆಯನ್ನು ಮಾಡುತ್ತೇನೆಂದು ತಿಳಿಸುತ್ತಿದ್ದಾರೆ, ಇದು ನಾಟಕವಾಗಿದೆ. ಎಲ್ಲಿಯತನಕ ಚಕ್ರವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯತನಕ ಮುಂದೆ ಏನಾಗುತ್ತದೆಯೆಂದು ಹೇಗೆ ತಿಳಿದುಕೊಳ್ಳುತ್ತೀರಿ. ಇದು ಕರ್ಮಕ್ಷೇತ್ರವಾಗಿದೆಯೆಂದು ಹೇಳುತ್ತಾರೆ. ನಾವು ನಿರಾಕಾರಿ ಪ್ರಪಂಚದಿಂದ ಪಾತ್ರ ಮಾಡಲು ಬಂದಿದ್ದೇವೆ ಅಂದಾಗ ಇಡೀ ನಾಟಕದ ರಚಯಿತ, ನಿರ್ದೇಶಕ ಯಾರೆಂಬುದು ತಿಳಿದುಕೊಳ್ಳಬೇಕಾಗಿದೆ. ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ. ನಾಟಕವು ಹೇಗೆ ಮಾಡಲ್ಪಟ್ಟಿದೆ. ಸೃಷ್ಟಿಚಕ್ರ ಹೇಗೆ ವೃದ್ಧಿಯಾಗುತ್ತದೆ ಎಂದು ನಿಮಗೆ ತಿಳಿದಿದೆ. ಯಾವಾಗ ಕಲಿಯುಗದ ಅಂತಿಮವಾಗುತ್ತದೆಯೋ ಆಗ ಅವಶ್ಯವಾಗಿ ಸತ್ಯಯುಗದ ಸ್ಥಾಪನೆಯಾಗುತ್ತದೆ. ಚಕ್ರದ ತಿಳುವಳಿಕೆಯು ಬಹಳ ಸರಿಯಾಗಿದೆ. ಯಾರು ಬ್ರಾಹ್ಮಣಕುಲದವರಾಗಿದ್ದಾರೋ ಅವರೇ ತಿಳಿದುಕೊಳ್ಳುತ್ತಾರೆ ನಂತರ ಪ್ರಜಾಪಿತನಿದ್ದಾರೆ ಅಂದರೆ ತಮ್ಮ ಕುಲವು ವೃದ್ಧಿಯಾಗುತ್ತದೆ. ವೃದ್ಧಿಯಂತೂ ಆಗಲೇಬೇಕು. ಕಲ್ಪದ ಮೊದಲಿನ ರೀತಿ ಎಲ್ಲರೂ ಪುರುಷಾರ್ಥವನ್ನು ಮಾಡಲೇಬೇಕು. ನಾವೀಗ ಸಾಕ್ಷಿಯಾಗಿ ನೋಡಬೇಕು. ನಾವು ಎಲ್ಲಿಯತನಕ ಯೋಗ್ಯರಾಗಿದ್ದೇವೆ ಎಂದು ಪ್ರತಿಯೊಬ್ಬರು ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಿ. ಸತ್ಯಯುಗದ ರಾಜಧಾನಿಯಲ್ಲಿ ಯಾವ ಪದವಿಯನ್ನು ಪಡೆದುಕೊಳ್ಳುತ್ತೇವೆ? ಇದು ಕಲ್ಪ-ಕಲ್ಪದ ಆಟವಾಗಿದೆ. ನೀವು ಬೇಹದ್ದಿನ ಆತ್ಮೀಯ ಸಮಾಜ ಸೇವಕರಾಗಿದ್ದೀರಿ. ನೀವು ಸುಪ್ರೀಂ ಪರಮಪಿತ ಪರಮಾತ್ಮನ ಮತದಂತೆ ನಡೆಯುತ್ತಿದ್ದೀರಿ. ರೀತಿ ಒಳ್ಳೊಳ್ಳೆಯ ವಿಚಾರಗಳನ್ನು ಧಾರಣೆ ಮಾಡಿಕೊಳ್ಳಬೇಕು. ತಂದೆಯೇ ಬಂದು ಮೃತ್ಯುವಿನ ಪಂಜರದಿಂದ ಬಿಡಿಸುತ್ತಿದ್ದಾರೆ. ಅಲ್ಲಿ ಮೃತ್ಯುವಿನ ಹೆಸರಿರುವುದಿಲ್ಲ, ಇದು ಮೃತ್ಯುಲೋಕವಾಗಿದೆ, ಅದು ಅಮರಲೋಕವಾಗಿದೆ. ಇಲ್ಲಿ ಆದಿ-ಮಧ್ಯ-ಅಂತ್ಯ ದುಃಖವಿದೆ ಆದರೆ ಅಲ್ಲಿ ದುಃಖದ ಹೆಸರು, ಚಿಹ್ನೆಯಿರುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ನಾವು ನಿರಾಕಾರಿ ಮತ್ತು ಸಾಕಾರಿ ಇಬ್ಬರು ತಂದೆಗೆ ಅಗಲಿ ಸಿಕ್ಕಿದಂತಹ ಕಣ್ಮಣಿಗಳಾಗಿದ್ದೇವೆ, ನಾವು ಶಿವತಂದೆಗೆ ಬದುಕ್ಕಿದ್ದಂತೆಯೇ ಅಧಿಕಾರಿಗಳಾಗಿದ್ದೇವೆ ಎನ್ನುವ ನಶೆಯಲ್ಲಿರಬೇಕಾಗಿದೆ.

2. ಯೋಗಬಲದಿಂದ ವಿಶ್ವದ ರಾಜ್ಯಪದವಿಯನ್ನು ತೆಗೆದುಕೊಳ್ಳಬೇಕಾಗಿದೆ. ಪವಿತ್ರತೆಯ ರಕ್ಷಾಬಂಧನವನ್ನು ಕಟ್ಟಿಕೊಂಡಾಗ ಸಹನೆಯನ್ನು ಮಾಡಬೇಕಾಗಿದೆ. ಪತಿತರಂತೂ ಎಂದೂ ಆಗಬಾರದಾಗಿದೆ.

ವರದಾನ:

ಸುಖ ಸಾಗರ ತಂದೆಯ ಸ್ಮೃತಿಯ ಮುಖಾಂತರ ದುಃಖದ ಪ್ರಪಂಚದಲ್ಲಿದ್ದರೂ ಸಹ ಸುಖ ಸ್ವರೂಪ ಭವ


ಸದಾ ಸುಖ ಸಾಗರ ತಂದೆಯ ಸ್ಮೃತಿಯಲ್ಲಿದ್ದಾಗ ಸುಖ ಸ್ವರೂಪರಾಗಿಬಿಡುವಿರಿ. ಪ್ರಪಂಚದಲ್ಲಿ ಎಷ್ಟೇ ದುಃಖ ಅಶಾಂತಿಯ ಪ್ರಭಾವ ವಿರಲಿ ಆದರೆ ನೀವು ನ್ಯಾರಾ ಮತ್ತು ಪ್ಯಾರಾ ಆಗಿರುವಿರಿ, ಸುಖದ ಸಾಗರನ ಜೊತೆ ಇರುವಿರಿ ಆದ್ದರಿಂದ ಸದಾ ಸುಖಿ, ಸದಾ ಸುಖದ ಉಯ್ಯಾಲೆಯಲ್ಲಿ ತೂಗಾಡುವಂತಹವರು. ಮಾಸ್ಟರ್ ಸುಖ ಸಾಗರನ ಮಕ್ಕಳಿಗೆ ದುಃಖದ ಸಂಕಲ್ಪವು ಸಹ ಬರಲು ಸಾಧ್ಯವಿಲ್ಲ ಏಕೆಂದರೆ ದುಃಖದ ಪ್ರಪಂಚದಿಂದ ದೂರಹೋಗಿ ಸಂಗಮದಲ್ಲಿ ಬಂದು ಮುಟ್ಟಿರುವಿರಿ. ಎಲ್ಲಾ ಹಗ್ಗಗಳನ್ನೂ ತುಂಡುಮಾಡಿ ಸುಖ ಸಾಗರನ ಅಲೆಯಲ್ಲಿ ತೇಲಾಡುತ್ತಿರಿ.

ಸ್ಲೋಗನ್:

ಮನಸ್ಸು ಮತ್ತು ಬುದ್ಧಿಯನ್ನು ಒಂದೇ ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತ ಮಾಡುವುದೇ ಏಕಾಂತವಾಸಿಗಳಾಗುವುದು.

Download PDF

 

Post a Comment

0 Comments