12/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ – ತಂದೆ
ಶಿಕ್ಷಕನು ನಿಮ್ಮನ್ನು
ಮನುಷ್ಯರಿಂದ ದೇವತೆಗಳನ್ನಾಗಿ
ಮಾಡುವ ಕಲೆಯನ್ನು
ಕಲಿಸುತ್ತಿದ್ದಾರೆ, ಅವರು
ಮಾಲೀಕರಾಗಿದ್ದಾರೆ. ನೀವು
ಪುನಃ ಶ್ರೀಮತದಂತೆ
ಅನ್ಯರನ್ನು ದೇವತೆಗಳನ್ನಾಗಿ
ಮಾಡುವ ಸೇವೆಯನ್ನು
ಮಾಡಬೇಕು”
ಪ್ರಶ್ನೆ:
ಈಗ ನೀವು ಮಕ್ಕಳು ಯಾವ ಒಂದು ಶ್ರೇಷ್ಠ ಕರ್ಮವನ್ನು ಮಾಡುತ್ತೀರೋ ಆ ಸಂಪ್ರದಾಯ ಭಕ್ತಿಮಾರ್ಗದಲ್ಲಿ
ನಡೆಯುತ್ತಾ ಬರುತ್ತದೆ?
ಉತ್ತರ:
ನೀವೀಗ ಶ್ರೀಮತದಂತೆ ತಮ್ಮ ತನು-ಮನ-ಧನವನ್ನು ವಿಶ್ವದ ಕಲ್ಯಾಣಾರ್ಥವಾಗಿ
ಅರ್ಪಣೆ ಮಾಡುತ್ತೀರಿ. ಈ ಸಂಪ್ರದಾಯ ಭಕ್ತಿಯಲ್ಲಿ ಮನುಷ್ಯರು ಈಶ್ವರಾರ್ಥವಾಗಿ ದಾನ ಮಾಡುತ್ತಾರೆ. ಅವರೇ ಪುನಃ ಅದಕ್ಕೆ ಬದಲಾಗಿ ಮತ್ತೊಂದು ಜನ್ಮದಲ್ಲಿ ರಾಜ್ಯಭಾಗ್ಯದ ಮನೆಯಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ ಮತ್ತು ನೀವು ಮಕ್ಕಳು ಸಂಗಮಯುಗದಲ್ಲಿ
ತಂದೆಗೆ ಸಹಯೋಗಿಗಳಾದಾಗ
ಮನುಷ್ಯರಿಂದ ದೇವತೆಗಳಾಗುತ್ತೀರಿ.
ಗೀತೆ: ರಾತ್ರಿಯೆಲ್ಲಾ ಮಲಗಿ ಕಳೆದಿರಿ.......
ಓಂ ಶಾಂತಿ.
ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ - ಯಾವಾಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರೋ ಆಗ ಅನ್ಯರಿಗೂ ತಿಳಿಸುತ್ತಾರೆ. ತಿಳಿದುಕೊಳ್ಳದಿದ್ದರೆ ಅನ್ಯರಿಗೆ ತಿಳಿಸಲು ಸಾಧ್ಯವಿಲ್ಲ. ಒಂದುವೇಳೆ ತಿಳಿದುಕೊಂಡು ಅನ್ಯರಿಗೆ ತಿಳಿಸದಿದ್ದರೆ ಅವರು ಏನನ್ನೂ ಸಹ ತಿಳಿದುಕೊಂಡಿಲ್ಲವೆಂದು ಅರ್ಥವಾಗಿದೆ.
ಯಾವುದೇ ಕಲೆಯನ್ನು ಕಲಿತರೆ ಅದನ್ನು ಹರಡಬೇಕು. ಈ ಕಲೆಯನ್ನು ತಂದೆ ಮಾಲೀಕನಿಂದ ಕಲಿಯಲಾಗುತ್ತದೆ. ಮನುಷ್ಯರಿಂದ ದೇವತೆಗಳನ್ನಾಗಿ ಹೇಗೆ ಮಾಡುತ್ತಾರೆ?
ದೇವತೆಗಳ ಚಿತ್ರವಿದೆ.
ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿದಾಗ ಆ ದೇವತೆಗಳು ಈಗಿಲ್ಲ.
ದೇವತೆಗಳ ಗುಣಗಾನ ಮಾಡುತ್ತಾರೆ - ಸರ್ವಗುಣ ಸಂಪನ್ನ.... ಇಲ್ಲಿ ಯಾವುದೇ ಮನುಷ್ಯರಿಗೆ ಆ ರೀತಿಯಾದ ಗುಣವಿಲ್ಲ. ಮನುಷ್ಯ ಮಂದಿರಗಳಲ್ಲಿ ಹೋಗಿ ದೇವತೆಗಳ ಗುಣಗಾನ ಮಾಡುತ್ತಾರೆ. ಭಲೆ ಸನ್ಯಾಸಿಗಳು ಪವಿತ್ರರಾಗಿರುತ್ತಾರೆ ಆದರೆ ಮನುಷ್ಯರು ಅವರ ಗುಣಗಳನ್ನು ತಿಳಿದುಕೊಳ್ಳುವುದಿಲ್ಲ. ಆ ಸನ್ಯಾಸಿಗಳು ಶಾಸ್ತ್ರ ಮುಂತಾದುವುಗಳನ್ನು ತಿಳಿಸುತ್ತಾರೆ.
ದೇವತೆಗಳು ಏನನ್ನೂ ಸಹ ತಿಳಿಸುವುದಿಲ್ಲ ಅವರು ಪ್ರಾಲಬ್ಧವನ್ನು ಭೋಗಿಸುತ್ತಾರೆ. ಹಿಂದಿನ ಜನ್ಮದಲ್ಲಿ ಪುರುಷಾರ್ಥವನ್ನು ಮಾಡಿ ಮನುಷ್ಯರಿಂದ ದೇವತೆಗಳಾಗುತ್ತಾರೆ ಅಂದಾಗ ಸನ್ಯಾಸಿಗಳು ಮುಂತಾದವರಲ್ಲಿ ದೇವತೆಗಳ ರೀತಿ ಗುಣವಿಲ್ಲ. ಎಲ್ಲಿ ಗುಣವಿಲ್ಲವೋ ಅಲ್ಲಿ ಅವಶ್ಯವಾಗಿ ಅವಗುಣಗಳಿವೆ.
ಸತ್ಯಯುಗ ಈ ಭಾರತದಲ್ಲಿ ಹೇಗೆ ರಾಜ-ರಾಣಿಯರೋ ಹಾಗೆಯೇ ಪ್ರಜೆಗಳು ಸರ್ವಗುಣ ಸಂಪನ್ನರಾಗಿರುತ್ತಾರೆ. ಅವರಲ್ಲಿ ಎಲ್ಲಾ ಗುಣಗಳಿರುತ್ತವೆ. ಆ ದೇವತೆಗಳ ಗುಣವನ್ನೇ ಗಾನ ಮಾಡುತ್ತಾರೆ.
ಆ ಸಮಯದಲ್ಲಿ ಬೇರೆ ಧರ್ಮವಿರುವುದಿಲ್ಲ. ಸತ್ಯಯುಗದಲ್ಲಿ ಗುಣವುಳ್ಳಂತಹ ದೇವತೆಗಳಿದ್ದರು ಆದರೆ ಕಲಿಯುಗದಲ್ಲಿ ಅವಗುಣಗಳುವುಳ್ಳಂತಹ ಮನುಷ್ಯರಿದ್ದಾರೆ. ಈಗ ಆ ರೀತಿ ಅವಗುಣವುಳ್ಳಂತಹ ಮನುಷ್ಯರನ್ನು ದೇವತೆಗಳನ್ನಾಗಿ ಯಾರು ಮಾಡುತ್ತಾರೆ. ಮನುಷ್ಯರಿಂದ ದೇವತೆಗಳೆಂದು ಗಾಯನ ಮಾಡುತ್ತಾರೆ. ಈ ಮಹಿಮೆಯು ಪರಮಪಿತ ಪರಮಾತ್ಮನದ್ದಾಗಿದೆ. ಮನುಷ್ಯರು ದೇವತೆಗಳಾಗಿದ್ದಾರೆ. ಆದರೆ ಅವರಲ್ಲಿ ಗುಣವಿದೆ ಇವರಲ್ಲಿ ಅವಗುಣವಿದೆ.
ತಂದೆಯಿಂದ ಗುಣ ಪ್ರಾಪ್ತಿಯಾಗುತ್ತದೆ ಆದ್ದರಿಂದ ಅವರಿಗೆ ಸದ್ಗುರುವೆಂದು ಹೇಳಲಾಗುತ್ತದೆ. ಮಾಯಾ ರಾವಣನಿಂದ ಅವಗುಣ ಪ್ರಾಪ್ತಿಯಾಗುತ್ತದೆ. ಇಷ್ಟು ಗುಣವಂತರು ನಂತರ ಅವಗುಣಿಗಳು ಹೇಗಾಗುತ್ತಾರೆ?
ಸರ್ವಗುಣ ಸಂಪನ್ನ ನಂತರ ಸರ್ವ ಅವಗುಣ ಸಂಪನ್ನ ಹೇಗಾಗುತ್ತಾರೆ, ಯಾರು ಮಾಡುತ್ತಾರೆ ಎನ್ನುವುದು ನೀವು ಮಕ್ಕಳಿಗೆ ತಿಳಿದಿದೆ. ನಾನು ನಿರ್ಗುಣಹಾರನಲ್ಲಿ ಯಾವುದೇ ಗುಣವಿಲ್ಲವೆಂದು ಗಾಯನ ಮಾಡುತ್ತಾರೆ. ದೇವತೆಗಳಲ್ಲಿ ಎಷ್ಟೊಂದು ಗುಣಗಳಿವೆ.
ಈ ಸಮಯದಲ್ಲಿ ಆ ರೀತಿಯ ಗುಣಗಳು ಯಾರಲ್ಲೂ ಇಲ್ಲ. ಊಟ-ತಿಂಡಿ ಎಷ್ಟೊಂದು ಕೊಳಕಾಗಿದೆ. ದೇವತೆಗಳು ವೈಷ್ಣವ ಸಂಪ್ರದಾಯದವರಾಗಿದ್ದಾರೆ ಮತ್ತು ಈ ಸಮಯದ ಮನುಷ್ಯರು ರಾವಣನ ಸಂಪ್ರದಾಯದವರಾಗಿದ್ದಾರೆ. ಊಟ-ತಿಂಡಿ ಎಷ್ಟೊಂದು ಬದಲಾಗಿದೆ. ಕೇವಲ ಡ್ರೆಸ್ಸನ್ನು ನೋಡಬಾರದು.
ಊಟ-ತಿಂಡಿ ಮತ್ತು ವಿಕಾರಿತನವನ್ನು ನೋಡಲಾಗುತ್ತದೆ. ತಂದೆಯು ಸ್ವಯಂ ಭಾರತದಲ್ಲಿ ಬರುತ್ತಾರೆ. ಬ್ರಹ್ಮಮುಖವಂಶಾವಳಿ ಬ್ರಾಹ್ಮಣ-ಬ್ರಾಹ್ಮಣಿಯರ ಮುಖಾಂತರ ಸ್ಥಾಪನೆ ಮಾಡಿಸುತ್ತೇನೆ. ಇದು ಬ್ರಾಹ್ಮಣರ ಯಜ್ಞವಾಗಿದೆ.
ಅಲ್ಲಿ ವಿಕಾರೀ ಬ್ರಾಹ್ಮಣ ಕುಖವಂಶಾವಳಿ ಆದರೆ ಇಲ್ಲಿ ಮುಖವಂಶಾವಳಿಗಳಾಗಿದ್ದೇವೆ. ಇಬ್ಬರಲ್ಲೂ ಬಹಳ ಅಂತರವಿದೆ.
ಅಲ್ಲಿ ಶ್ರೀಮಂತರು ಯಜ್ಞವನ್ನು ರಚನೆ ಮಾಡುತ್ತಾರೆ ಅದರಲ್ಲಿ ಶಾರೀರಿಕ ಬ್ರಾಹ್ಮಣರಿರುತ್ತಾರೆ. ಈ ಬೇಹದ್ದಿನ ತಂದೆಯು ಶ್ರೀಮಂತರಿಗಿಂತ ಶ್ರೀಮಂತ, ರಾಜರಿಗಿಂತ ರಾಜರಾಗುತ್ತಾರೆ. ಶ್ರೀಮಂತರಿಗಿಂತ ಶ್ರೀಮಂತನೆಂದು ಏಕೆ ಹೇಳಲಾಗುತ್ತದೆ? ಏಕೆಂದರೆ ನಮಗೆ ಈಶ್ವರನೇ ಸಂಪತ್ತನ್ನು ಕೊಟ್ಟ,
ಈಶ್ವರಾರ್ಥವಾಗಿ ದಾನ ಮಾಡಿದಾಗ ಮತ್ತೊಂದು ಜನ್ಮದಲ್ಲಿ ಶ್ರೀಮಂತರಾಗುತ್ತೇವೆಂದು ಹೇಳುತ್ತಾರೆ.
ಈ ಸಮಯದಲ್ಲಿ ನೀವು ಶಿವತಂದೆಗೆ ಎಲ್ಲವೂ ತನು-ಮನ-ಧನವನ್ನು ಅರ್ಪಣೆ ಮಾಡಿದ್ದೀರಿ ಅಂದಾಗ ಎಷ್ಟೊಂದು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರಿ.
ನೀವು ಶ್ರೀಮತದಂತೆ ಇಷ್ಟು ಶ್ರೇಷ್ಠವಾದ ಕರ್ಮವನ್ನು ಕಲಿತಾಗ ನಿಮಗೆ ಅವಶ್ಯವಾಗಿ ಫಲ ಸಿಗುತ್ತದೆ.
ತನು-ಮನ-ಧನ ಎಲ್ಲವನ್ನೂ ಅರ್ಪಣೆ ಮಾಡುತ್ತೀರಿ.
ಅವರು ಈಶ್ವರಾರ್ಥವಾಗಿ ಅನ್ಯರ ಮುಖಾಂತರ ಮಾಡುತ್ತಾರೆ. ಈ ಸಂಪ್ರದಾಯ ಭಾರತದಲ್ಲಿದೆ ಅಂದಾಗ ತಂದೆಯು ನಿಮಗೆ ಬಹಳ ಒಳ್ಳೆಯ ಕರ್ಮವನ್ನು ಕಲಿಸುತ್ತಾರೆ. ನೀವು ಈ ಕರ್ತವ್ಯವನ್ನು ಕೇವಲ ಭಾರತಕ್ಕೆ ಏನು, ಇಡೀ ಪ್ರಪಂಚದ ಕಲ್ಯಾಣಾರ್ಥವಾಗಿ ಮಾಡಿದಾಗ ಅದಕ್ಕೆ ಬದಲಾಗಿ ಮನುಷ್ಯರಿಂದ ದೇವತೆಗಳಾಗುತ್ತೀರಿ. ಯಾರು ಶ್ರೀಮತದಂತೆ ಹೇಗೆ ಕರ್ಮವನ್ನು ಮಾಡುತ್ತಾರೋ ಹಾಗೆಯೆ ಫಲ ಸಿಗುತ್ತದೆ. ನಾವು ಸಾಕ್ಷಿಯಾಗಿದ್ದು ನೋಡುತ್ತೇವೆ.
ಯಾರು ಶ್ರೀಮತದಂತೆ ಮನುಷ್ಯರಿಂದ ದೇವತೆಗಳಾಗುವ ಸೇವೆಯನ್ನು ಮಾಡುತ್ತಾರೋ ಅವರ ಜೀವನ ಎಷ್ಟೊಂದು ಪರಿವರ್ತನೆಯಾಗಿದೆ ಎಂದು ಹೇಳಲಾಗುತ್ತದೆ.
ಶ್ರೀಮತದಂತೆ ನಡೆಯುವಂತಹವರು ಬ್ರಾಹ್ಮಣರಾಗಿದ್ದಾರೆ. ಬ್ರಾಹ್ಮಣರ ಮುಖಾಂತರ ಶೂದ್ರರಿಗೆ ಕುಳಿತು ರಾಜಯೋಗವನ್ನು ಕಲಿಸುತ್ತೇನೆಂದು ತಂದೆಯು ಹೇಳುತ್ತಾರೆ. 5000 ವರ್ಷದ ಮಾತಾಗಿದೆ. ಭಾರತದಲ್ಲಿಯೇ ದೇವಿ-ದೇವತೆಗಳ ರಾಜ್ಯವಿತ್ತು ಎನ್ನುವ ಚಿತ್ರವನ್ನು ತೋರಿಸಬೇಕು.
ಚಿತ್ರವಿಲ್ಲದೇ ಯಾವ ಹೊಸ ಧರ್ಮವಿದೆಯೆಂದು ತಿಳಿದುಕೊಳ್ಳಲು ಸಾಧ್ಯವಿಲ್ಲ.
ಯಾರು ವಿದೇಶದಿಂದ ಬರುತ್ತಾರೋ ಅವರಿಗೆ ಚಿತ್ರವನ್ನು ತೋರಿಸಿ ತಿಳಿಸಿದಾಗ ಈ ದೇವತೆಗಳಿಗೆ ಮಾನ್ಯತೆಯನ್ನು ಕೊಡುತ್ತಾರೆ ಅಂದಾಗ ಶ್ರೀನಾರಾಯಣ ಅಂತಿಮ
84ನೇ ಜನ್ಮದಲ್ಲಿ ಪರಮಪಿತ ಪರಮಾತ್ಮ ಪ್ರವೇಶ ಮಾಡಿದ್ದಾರೆ ಮತ್ತು ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂದು ತಿಳಿಸಬೇಕು. ಆಗ ಕೃಷ್ಣನ ಮಾತು ಹೊರಟುಹೋಗುತ್ತದೆ. ಇವರ
84ನೇ ಜನ್ಮದ ಅಂತಿಮ ಜನ್ಮವಾಗಿದೆ.
ಯಾರು ಸೂರ್ಯವಂಶೀ ದೇವತೆಗಳಾಗಿದ್ದರು ಅವರೆಲ್ಲರೂ ಬಂದು ಈಗ ರಾಜಯೋಗವನ್ನು ಕಲಿಯಬೇಕು.
ಡ್ರಾಮಾದ ಅನುಸಾರ ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕು. ನೀವು ಮಕ್ಕಳು ಈಗ ಸಮ್ಮುಖದಲ್ಲಿ ಕೇಳುತ್ತಿದ್ದೀರಿ. ಬೇರೆ ಮಕ್ಕಳು ಈ ಟೇಪ್ನ ಮುಖಾಂತರ ಕೇಳಿದಾಗ ನಾವು ತಂದೆ-ತಾಯಿಯ ಜೊತೆ ಪುನಃ ದೇವತೆಗಳಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ಈ ಸಮಯದಲ್ಲಿ 84ನೇ ಜನ್ಮದಲ್ಲಿ ಅವಶ್ಯವಾಗಿ ಪೂರ್ಣ ಭಿಕ್ಷುಕರಾಗಬೇಕು. ಆತ್ಮವು ತಂದೆಗೆ ಎಲ್ಲವನ್ನೂ ಸಮರ್ಪಣೆ ಮಾಡುತ್ತದೆ. ಈ ಶರೀರ ಅಶ್ವವಾಗಿದೆ,
ಇದನ್ನು ಸ್ವಾಹಾ ಮಾಡಬೇಕು. ನಾನು ತಂದೆಯ ಮಗುವಾಗಿದ್ದೇನೆಂದು ಆತ್ಮ ಸ್ವಯಂ ಹೇಳುತ್ತದೆ. ನಾನಾತ್ಮ ಈ ಜೀವದ ಮುಖಾಂತರ ಪರಮಪಿತ ಪರಮಾತ್ಮನ ಶ್ರೀಮತದ ಅನುಸಾರ ಸೇವೆಯನ್ನು ಮಾಡುತ್ತಿದ್ದೇನೆ.
ಯೋಗವನ್ನು ಕಲಿಸಿ ಮತ್ತು ಸೃಷ್ಟಿಚಕ್ರ ಹೇಗೆ ತಿರುಗುತ್ತದೆ ಎಂದು ಅದನ್ನೂ ತಿಳಿಸಿ ಎಂದು ತಂದೆಯು ಹೇಳುತ್ತಾರೆ.
ಯಾರು ಇಡೀ ಚಕ್ರವನ್ನು ಪಾಸ್ ಮಾಡಿದ್ದಾರೋ ಅವರೇ ಈ ಮಾತುಗಳನ್ನು ತಕ್ಷಣ ತಿಳಿದುಕೊಳ್ಳುತ್ತಾರೆ. ಯಾರು ಈ ಚಕ್ರದಲ್ಲಿ ಬರುವುದಿಲ್ಲವೋ ಅವರು ಉಳಿದುಕೊಳ್ಳಲು ಸಾಧ್ಯವಿಲ್ಲ. ಇಡೀ ಸೃಷ್ಟಿ ಬರುತ್ತದೆ ಎಂದಲ್ಲ. ಇದರಲ್ಲಿ ಪ್ರಜೆಗಳು ಅನೇಕರು ಬರುತ್ತಾರೆ. ರಾಜ-ರಾಣಿಯರು ಒಬ್ಬರಾಗಿದ್ದಾರೆ. ಹೇಗೆ ಲಕ್ಷ್ಮೀ-ನಾರಾಯಣ ಒಂದೇ ಎಂದು ಗಾಯನ ಮಾಡಲಾಗಿದೆ, ರಾಮ-ಸೀತೆಯರಿಗೂ ಒಂದೇ ಎಂದು ಗಾಯನ ಮಾಡಲಾಗಿದೆ. ರಾಜಕುಮಾರ-ರಾಜಕುಮಾರಿಯರಿಗೂ ಬೇರೆ ಇರುತ್ತಾರೆ. ಮುಖ್ಯವಾಗಿ ಒಂದೇ ಇರುತ್ತದೆಯಲ್ಲವೆ ಅಂದಾಗ ಆ ರೀತಿ ರಾಜ-ರಾಣಿಯರಾಗಬೇಕಾದರೆ ಬಹಳ ಶ್ರಮಪಡಬೇಕು. ಸಾಕ್ಷಿಯಾಗಿದ್ದು ನೋಡಿದಾಗ ಇವರು ಶ್ರೀಮಂತ ರಾಜಕುಲದವರಾಗಿದ್ದಾರೆ ಹಾಗೂ ಬಡಕುಲದವರಾಗಿದ್ದಾರೆ ಎನ್ನುವುದು ತಿಳಿಯುತ್ತದೆ.
ಕೆಲವರು ಮಾಯೆಯಿಂದ ಹೇಗೆ ಸೋಲುತ್ತಾರೆ.
ಹೇಗೆ ಓಡಿ ಹೋಗುತ್ತಾರೆ ಎನ್ನುವುದು ತಿಳಿಯುತ್ತದೆ. ಮಾಯೆ ಒಂದೇ ಸಾರಿ ತಿನ್ನುತ್ತದೆ. ಆದ್ದರಿಂದ ತಂದೆಯು ಕೇಳುತ್ತಾರೆ
- ಸದಾ ಖುಷಿಯಾಗಿದ್ದೀರಾ? ಮಾಯೆಯ ಪೆಟ್ಟನ್ನು ತಿನ್ನುವುದರಿಂದ ಮೂರ್ಛಿತ ಅಥವಾ ಖಾಯಿಲೆ ಬರುವುದಿಲ್ಲವೇ! ಕೆಲವರು ಆ ರೀತಿ ಕಾಯಿಲೆಯುಳ್ಳಂತಹವರಾಗುತ್ತಾರೆ ನಂತರ ಮಕ್ಕಳು ಅವರ ಬಳಿಯೇ ಹೋಗಿ ಜ್ಞಾನ, ಯೋಗದ ಸಂಜೀವಿನಿ ಮೂಲಿಕೆಯನ್ನು ಕೊಟ್ಟು ಬದುಕಿಸುತ್ತಾರೆ. ಜ್ಞಾನ, ಯೋಗದಲ್ಲಿ ಇಲ್ಲದಿರುವುದರ ಕಾರಣ ಮಾಯೆ ಒಂದೇ ಸಲ ಕಲೆಯುಳ್ಳಂತಹ ಶರೀರವನ್ನು ಸಮಾಪ್ತಿ ಮಾಡುತ್ತದೆ ಆಗ ಶ್ರೀಮತವನ್ನು ಬಿಟ್ಟು ಮನಮತದಲ್ಲಿ ನಡೆಯುತ್ತಾರೆ.
ಮಾಯೆ ಒಂದೇ ಸಲ ಮೂರ್ಛಿತರನ್ನಾಗಿ ಮಾಡುತ್ತದೆ. ವಾಸ್ತವದಲ್ಲಿ ಈ ಜ್ಞಾನ ಸಂಜೀವಿನಿಯಾಗಿದೆ. ಇದರಲ್ಲಿ ಮಾಯೆಯ ಮೂರ್ಛಿತತನ ದೂರವಾಗುತ್ತದೆ. ಈ ಎಲ್ಲಾ ಮಾತುಗಳು ಈ ಸಮಯದ್ದಾಗಿದೆ.
ಸೀತೆಯರು ನೀವಾಗಿದ್ದೀರಿ,
ರಾಮನು ಬಂದು ಮಾಯಾರಾವಣನಿಂದ ಬಿಡಿಸುತ್ತಿದ್ದಾರೆ. ಹೇಗೆ ಮಕ್ಕಳನ್ನು ಸಿಂಧ್ ಪ್ರಾಂತ್ಯದಲ್ಲಿ ಬಿಡಿಸಲಾಯಿತು. ರಾವಣನ ಜನರು ಪುನಃ ಕದ್ದು ಕರೆದುಕೊಂಡು ಹೋಗುತ್ತಿದ್ದರು. ಈಗ ನಿಮಗೆ ಮಾಯೆಯ ಬಂಧನದಿಂದ ಬಿಡಿಸಲಾಗುತ್ತಿದೆ ತಂದೆಗೆ ದಯೆ ಬರುತ್ತದೆ. ಹೇಗೆ ಮಾಯೆ ಜೋರಾಗಿ ಹೊಡೆದು ಮಕ್ಕಳ ಬುದ್ಧಿಯನ್ನು ಒಂದೇ ಸಲ ತಿರುಗಿಸುತ್ತದೆ ಎಂದು ನೋಡುತ್ತಾರೆ.
ರಾಮನಿಂದ ಬುದ್ಧಿಯನ್ನು ತಿರುಗಿಸಿ ರಾವಣನ ಕಡೆಗೆ ಮಾಡುತ್ತದೆ.
ಹೇಗೆ ಒಂದು ಗೊಂಬೆಯಿದೆ - ಒಂದು ಕಡೆ ರಾಮ,
ಮತ್ತೊಂದು ಕಡೆ ರಾವಣ. ಅದಕ್ಕೆ ಆಶ್ಚರ್ಯವಾಗಿ ತಂದೆಗೆ ಮಕ್ಕಳಾಗುತ್ತಾರೆ, ನಂತರ ರಾವಣನ ಮಕ್ಕಳಾಗುತ್ತಾರೆ ಎಂದು ಹೇಳಲಾಗುತ್ತದೆ.
ಮಾಯೆ ಬಹಳ ದೊಡ್ಡ ಶತ್ರುವಾಗಿದೆ.
ಇಲ್ಲಿಯ ರೀತಿ ತುಂಡು ಮಾಡುತ್ತಾ ಊಟವನ್ನು ಹಾಳು ಮಾಡುತ್ತದೆ ಆದ್ದರಿಂದ ಶ್ರೀಮತವನ್ನು ಎಂದೂ ಬಿಡಬಾರದು. ಏರುವುದು ಕಷ್ಟವಾಗಿದೆ. ನಿಮ್ಮ ಮತವೆಂದರೆ ರಾವಣನ ಮತವಾಗಿದೆ. ಅದರಂತೆ ನಡೆದಾಗ ಬಹಳ ಪೆಟ್ಟನ್ನು ತಿನ್ನುತ್ತಾರೆ.
ಬಹಳ ಹೆಸರನ್ನು ಹಾಳು ಮಾಡುತ್ತಾರೆ.
ಈ ರೀತಿ ಎಲ್ಲಾ ಸೇವಾಕೇಂದ್ರಗಳಲ್ಲಿಯೂ ಇದ್ದಾರೆ. ತಮಗೂ ತೊಂದರೆ ಮಾಡಿಕೊಳ್ಳುತ್ತಾರೆ. ಸರ್ವೀಸ್ ಮಾಡುವಂತಹ ರೂಪಭಸಂತರು ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ದೈವೀ ರಾಜಧಾನಿಯನ್ನು ಈಗ ಸ್ಥಾಪನೆಯಾಗುತ್ತಿದೆ. ಇದರಲ್ಲಿ ಎಲ್ಲರೂ ತಮ್ಮ ತಮ್ಮ ಪಾತ್ರವನ್ನು ಅವಶ್ಯವಾಗಿ ಮಾಡಬೇಕು.
ಸ್ಪರ್ಧೆಯನ್ನು ಮಾಡಿದಾಗ ತಮ್ಮ ಕಲ್ಯಾಣವನ್ನು ಮಾಡಿಕೊಳ್ಳಬೇಕು. ಕಲ್ಯಾಣವೆಂದರೆ ಒಂದೇ ಸಲ ಸ್ವರ್ಗದ ಮಾಲೀಕರಾಗುವುದಾಗಿದೆ. ಹೇಗೆ ತಂದೆ-ತಾಯಿ ಸಿಂಹಾಸನಧಾರಿಗಳಾಗುತ್ತಾರೋ ಹಾಗೆಯೇ ನಾವು ಮಕ್ಕಳು ಅದೇ ರೀತಿಯಾಗಿ ತಂದೆಯನ್ನು ಅನುಸರಣೆ ಮಾಡಬೇಕು, ಇಲ್ಲದಿದ್ದರೆ ನೀವು ತಮ್ಮ ಪದವಿಯನ್ನು ಕಡಿಮೆ ಮಾಡಿಕೊಳ್ಳುತ್ತೀರಿ. ತಂದೆಯು ಈ ಚಿತ್ರಗಳನ್ನು ಇಟ್ಟುಕೊಳ್ಳುವುದಕ್ಕೋಸ್ಕರ ಮಾಡಿಲ್ಲ.
ಇದರಿಂದ ಬಹಳ ಸರ್ವೀಸನ್ನು ಮಾಡಬೇಕು.
ಇದರಿಂದ ದೊಡ್ಡ ದೊಡ್ಡ ಶ್ರೀಮಂತರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟುತ್ತಾರೆ
- ಇವರು ಯಾವಾಗ ಬಂದರೆಂದು ಯಾರಿಗೂ ಗೊತ್ತಿಲ್ಲ. ಇವರು ಭಾರತವನ್ನು ಹೇಗೆ ಸುಖಿಯನ್ನಾಗಿ ಮಾಡಿದರು.
ಎಲ್ಲರೂ ಇವರನ್ನು ಏಕೆ ನೆನಪು ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ.
ಒಂದು ದಿಲ್ವಾಡ ಮಂದಿರವಿರಬೇಕಾಗಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಇದೊಂದೇ ಮಂದಿರವಾಗಿದೆ, ಲಕ್ಷ್ಮೀ-ನಾರಾಯಣರ ಮಂದಿರದಿಂದ ಏನಾಗುತ್ತದೆ. ಅವರು ಕಲ್ಯಾಣಕಾರಿಗಳಲ್ಲ. ಶಿವನ ಮಂದಿರಗಳನ್ನು ಮಾಡುತ್ತಾರೆ.
ಅದು ಅರ್ಥರಹಿತವಾಗಿ ಅವರ ಕರ್ತವ್ಯವನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಕೇವಲ ಮಂದಿರವನ್ನು ಮಾಡಿ ಕರ್ತವ್ಯವನ್ನು ತಿಳಿದುಕೊಳ್ಳದಿದ್ದರೆ ಏನೆಂದು ಹೇಳಲಾಗುತ್ತದೆ? ಯಾವಾಗ ಸ್ವರ್ಗದಲ್ಲಿ ದೇವತೆಗಳಿರುತ್ತಾರೋ ಆಗ ಮಂದಿರಗಳಿರುವುದಿಲ್ಲ. ಯಾರು ಮಂದಿರಗಳನ್ನು ಮಾಡುತ್ತಾರೋ ಅವರನ್ನು ಲಕ್ಷ್ಮೀ-ನಾರಾಯಣರು ಯಾವಾಗ ಬಂದರು ಎಂದು ಕೇಳಿ ಅವರು ಯಾವ ಸುಖವನ್ನು ಕೊಟ್ಟರು ಎನ್ನುವುದೂ ಸಹ ತಿಳಿದುಕೊಂಡಿಲ್ಲ. ಇದರಿಂದ ಸಿದ್ಧವಾಗುತ್ತದೆ. ಯಾರಲ್ಲಿ ಅವಗುಣವಿದೆಯೋ ಅವರು ಗುಣವಂತರ ಮಂದಿರಗಳನ್ನು ಕಟ್ಟುತ್ತಾರೆ. ಅಂದಾಗ ಮಕ್ಕಳಿಗೆ ಬಹಳ ಸರ್ವೀಸಿನ ಬಗ್ಗೆ ಆಸಕ್ತಿಯಿರಬೇಕು. ತಂದೆಗೆ ಸರ್ವೀಸಿನ ಬಗ್ಗೆ ಬಹಳ ಆಸಕ್ತಿಯಿರುವುದರಿಂದ ಈ ರೀತಿಯ ಚಿತ್ರಗಳನ್ನು ಮಾಡಿದ್ದಾರೆ.
ಭಲೆ ಚಿತ್ರಗಳನ್ನು ಶಿವತಂದೆಯು ಮಾಡಿಸುತ್ತಾರೆ.
ಆದರೆ ಇಬ್ಬರ ಬುದ್ಧಿಯೂ ಸಹ ನಡೆಯುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಜ್ಞಾನ, ಯೋಗದ ಸಂಜೀವಿನಿ ಮೂಲಿಕೆಯಿಂದ ಸ್ವಯಂನ್ನು ಮಾಯೆಯ ಮೂರ್ಛಿತತನದಿಂದ ದೂರ ಮಾಡಿಕೊಳ್ಳಬೇಕಾಗಿದೆ. ಮನ್ಮತದಂತೆ ಎಂದೂ ಸಹ ನಡೆಯಬಾರದಾಗಿದೆ.
2.
ರೂಪಭಸಂತರಾಗಿ (ಜ್ಞಾನದ ಮಳೆಯನ್ನು ಸುರಿಸುವವರು)
ಸರ್ವೀಸನ್ನು ಮಾಡಬೇಕಾಗಿದೆ.
ತಂದೆ-ತಾಯಿಯನ್ನು ಅನುಸರಣೆ ಮಾಡಿ ಸಿಂಹಾಸನಾಧಾರಿಗಳಾಗಬೇಕಾಗಿದೆ.
ವರದಾನ:
ತಮ್ಮ ಶಕ್ತಿಶಾಲಿ
ಸ್ಥಿತಿಯ ಮೂಲಕ
ದಾನ ಮತ್ತು
ಪುಣ್ಯ ಮಾಡಿಕೊಳ್ಳುವಂತಹ
ಪೂಜ್ಯನೀಯ ಮತ್ತು
ಗಾಯನಯೋಗ್ಯ ಭವ
ಅಂತಿಮ ಸಮಯದಲ್ಲಿ ಯಾವಾಗ ಬಲಹೀನ ಆತ್ಮರು ತಾವು ಸಂಪೂರ್ಣ ಆತ್ಮರ ಮೂಲಕ ಪ್ರಾಪ್ತಿಯ ಅನುಭವವನ್ನು ಸ್ವಲ್ಪವೇ ಮಾಡುತ್ತೀರೆಂದರೆ, ಇದೇ ಅಂತಿಮ ಅನುಭವದ ಸಂಸ್ಕಾರವನ್ನು
ತೆಗೆದುಕೊಂಡುಹೋಗಿ, ಅರ್ಧಕಲ್ಪಕ್ಕಾಗಿ
ತಮ್ಮ ಮನೆಯಲ್ಲಿ ವಿಶ್ರಾಮಿಗಳಾಗುತ್ತೀರಿ ಮತ್ತು ನಂತರ ದ್ವಾಪರದಲ್ಲಿ ಭಕ್ತರಾಗಿ ತಮ್ಮ ಪೂಜೆ ಹಾಗೂ ಗಾಯನ ಮಾಡುವರು ಆದ್ದರಿಂದ ಅಂತ್ಯದಲ್ಲಿನ ಬಲಹೀನ ಆತ್ಮರ ಬಗ್ಗೆ ಮಹಾದಾನಿ ವರದಾನಿಯಾಗಿದ್ದು
ಅನುಭವದ ದಾನ ಮತ್ತು ಪುಣ್ಯವನ್ನು ಮಾಡಿರಿ. ಈ ಸೆಕೆಂಡಿನ ಶಕ್ತಿಶಾಲಿ ಸ್ಥಿತಿಯ ಮೂಲಕ ಮಾಡಿರುವ ದಾನ ಮತ್ತು ಪುಣ್ಯವು ಅರ್ಧಕಲ್ಪಕ್ಕಾಗಿ ಪೂಜ್ಯನೀಯ ಮತ್ತು ಗಾಯನಯೋಗ್ಯರನ್ನಾಗಿ ಮಾಡಿಬಿಡುತ್ತದೆ.
ಸ್ಲೋಗನ್:
ಪರಿಸ್ಥಿತಿಗಳಲ್ಲಿ ಗಾಬರಿಯಾಗುವ ಬದಲು ಸಾಕ್ಷಿಯಾಗಿಬಿಡುತ್ತೀರೆಂದರೆ ವಿಜಯಿಗಳಾಗಿಬಿಡುತ್ತೀರಿ.
0 Comments