Header Ads Widget

Header Ads

KANNADA MURLI 11.01.23

 

11/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಬುದ್ಧಿಯಯೋಗ ತಂದೆಯ ಜೊತೆ ಜೋಡಿಸಿದಾಗ ದೊಡ್ಡ ಪ್ರಯಾಣವನ್ನು ಸಹಜವಾಗಿ ಪಾರು ಮಾಡಬಹುದು

ಪ್ರಶ್ನೆ:

ತಂದೆಯ ಮೇಲೆ ಅರ್ಪಣೆ ಆಗಲು ಯಾವ ಮಾತಿನ ತ್ಯಾಗ ಅವಶ್ಯವಾಗಿ ಇದೆ?

ಉತ್ತರ:

ದೇಹಾಭಿಮಾನ. ದೇಹಾಭಿಮಾನ ಬಂತೆಂದರೆ ಸತ್ತಂತೆ, ವ್ಯಭಿಚಾರಿ ಆಯಿತು. ಆದ್ದರಿಂದ ಅರ್ಪಣೆ ಆಗುವುದರಲ್ಲಿ ಮಕ್ಕಳ ಹೃದಯ ವಿಧೀರ್ಣವಾಗುತ್ತದೆ. ಯಾವಾಗ ಅರ್ಪಣೆ ಆಗುತ್ತಾರೋ ಆಗ ಒಬ್ಬರದೇ ನೆನಪು ಇರಬೇಕು. ಅವರ ಮೇಲೆಯೇ ಬಲಿಹಾರಿ ಆಗಬೇಕು. ಅವರ ಶ್ರೀಮತದಂತೆ ನಡೆಯಬೇಕು.

ಗೀತೆ:  ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ.....

ಓಂ ಶಾಂತಿ: ಭಗವಾನುವಾಚ - ಭಗವಂತ ತನ್ನ ಮಕ್ಕಳಿಗೆ ರಾಜಯೋಗ ಹಾಗೂ ಜ್ಞಾನವನ್ನು ಕಲಿಸುತ್ತಿದ್ದಾರೆ. ಇವರು ಯಾವುದೇ ಮನುಷ್ಯರಲ್ಲ. ಗೀತೆಯಲ್ಲಿ ಬರೆಯಲಾಗಿದೆ - ಕೃಷ್ಣ ಭಗವಾನುವಾಚ. ಈಗ ಶ್ರೀಕೃಷ್ಣ ಇಡೀ ಜಗತ್ತನ್ನು ಮಾಯೆಯಿಂದ ಬಿಡುಗಡೆ ಮಾಡುವುದು ಇದು ಅಸಂಭವವಾಗಿದೆ. ತಂದೆಯೇ ಬಂದು ಮಕ್ಕಳ ಪ್ರತಿ ತಿಳಿಸುತ್ತಾರೆ. ಅವರು ತಂದೆಯನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ ಹಾಗೂ ತಂದೆಯ ಸಮ್ಮುಖದಲ್ಲಿ ಕುಳಿತಿದ್ದಾರೆ. ಕೃಷ್ಣನಿಗೆ ತಂದೆ ಎಂದು ಹೇಳಲು ಸಾಧ್ಯವಿಲ್ಲ. ತಂದೆಗೆ ಹೇಳಲಾಗುತ್ತದೆ ಪರಮಪಿತ, ಪರಮಧಾಮದಲ್ಲಿ ಇರುವಂತಹವರು. ಆತ್ಮ ಶರೀರದ ಮೂಲಕ ತಂದೆಯನ್ನು ನೆನಪು ಮಾಡುತ್ತದೆ. ನಾನು ನಿಮ್ಮ ತಂದೆ ಪರಮಧಾಮದಲ್ಲಿ ಇರುವಂತಹವನು ಎಂದು ತಂದೆ ಹೇಳುತ್ತಾರೆ. ನಾನು ಸರ್ವ ಆತ್ಮಗಳ ತಂದೆಯಾಗಿದ್ದೇನೆ. ನಾನೇ ಕಲ್ಪದ ಮೊದಲು ಬಂದು ಕಲಿಸಿದ್ದೆ - ಬುದ್ಧಿಯಯೋಗವನ್ನು ನಾನು ಪರಮಪಿತನ ಜೊತೆ ತೊಡಗಿಸಿ. ಆತ್ಮಗಳ ಜೊತೆಯೇ ಮಾತನಾಡಲಾಗುತ್ತದೆ. ಆತ್ಮ ಎಲ್ಲಿಯತನಕ ಶರೀರದಲ್ಲಿ ಬರುವುದಿಲ್ಲವೋ ಅಲ್ಲಿಯತನಕ ಕಣ್ಣುಗಳ ಮೂಲಕ ನೋಡಲು ಸಾಧ್ಯವಿಲ್ಲ, ಕಿವಿಗಳ ಮೂಲಕ ಕೇಳಲು ಸಾಧ್ಯವಿಲ್ಲ. ಆತ್ಮ ಶರೀರವಿಲ್ಲದಿದ್ದರೆ ಜಡವಾಗಿಬಿಡುತ್ತದೆ. ಆತ್ಮ ಚೈತನ್ಯವಾಗಿದೆ. ಗರ್ಭದಲ್ಲಿ ಮಗು ಇರುತ್ತದೆ ಆದರೆ ಆತ್ಮ ಅದರಲ್ಲಿ ಪ್ರವೇಶ ಮಾಡುವ ತನಕ ಅದು ಅಲುಗಾಡುವುದಿಲ್ಲ. ಅಂದಮೇಲೆ ಅಂತಹ ಚೈತನ್ಯ ಆತ್ಮಗಳ ಜೊತೆ ತಂದೆಯೇ ಮಾತನಾಡುತ್ತಾರೆ. ನಾನು ಶರೀರವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತೇನೆ, ನಾನು ಬಂದು ಸರ್ವ ಆತ್ಮಗಳನ್ನು ಕರೆದುಕೊಂಡು ಹೋಗುತ್ತೇನೆ ಎಂದು ನಂತರ ಯಾವ ಆತ್ಮಗಳು ಸಮ್ಮುಖದಲ್ಲಿ ಇರುತ್ತಾರೋ ಅವರಿಗೆ ರಾಜಯೋಗವನ್ನು ಕಲಿಸುತ್ತೇನೆ ಎಂದು ತಂದೆ ಹೇಳುತ್ತಾರೆ. ಇಡೀ ಜಗತ್ತು ರಾಜಯೋಗವನ್ನು ಕಲಿಯುವುದಿಲ್ಲ. ಕಲ್ಪದ ಮೊದಲಿನವರೇ ಕಲಿಯುತ್ತಿದ್ದಾರೆ.

ಈಗ ತಂದೆಯು ತಿಳಿಸುತ್ತಾರೆ - ಬುದ್ಧಿಯಯೋಗವನ್ನು ತಂದೆಯ ಜೊತೆ ಅಂತ್ಯದತನಕವೂ ಜೋಡಿಸುತ್ತಲೇ ಇರಬೇಕು. ಇದರಲ್ಲಿ ಯಾವುದೇ ತಡೆ ಆಗಬಾರದು. ಸ್ತ್ರೀ, ಪುರುಷರು ಮೊದಲು ಒಬ್ಬರಿನ್ನೊಬ್ಬರು ತಿಳಿದಿರುವುದಿಲ್ಲ. ಯಾವಾಗ ಇಬ್ಬರಿಗೂ ನಿಶ್ಚಿತಾರ್ಥವಾಗುತ್ತದೆ, ಆಗ ಕೆಲವರು 60-70 ವರ್ಷಗಳು ಜೊತೆಯಲ್ಲಿ ಇರುತ್ತಾರೆ. ಇಡೀ ಜೀವನ ಶರೀರ, ಶರೀರವನ್ನು ನೆನಪು ಮಾಡುತ್ತಾ ಇರುತ್ತಾರೆ. ಅವರು ಹೇಳುತ್ತಾರೆ ಇವರು ನನ್ನ ಪತಿಯಾಗಿದ್ದಾರೆ, ಅವರು ಹೇಳುತ್ತಾರೆ ಇವರು ನನ್ನ ಪತ್ನಿ ಎಂದು. ಈಗ ನಿಮ್ಮ ನಿಶ್ಚಿತಾರ್ಥವೂ ನಿರಾಕಾರನ ಜೊತೆಯಾಗಿದೆ. ನಿರಾಕಾರ ತಂದೆಯೇ ಬಂದು ನಿಶ್ಚಿತಾರ್ಥ ಮಾಡಿಸಿದ್ದಾರೆ. ಕಲ್ಪದ ಮೊದಲಿನ ಹಾಗೆ ತಾವು ಮಕ್ಕಳ ನಿಶ್ಚಿತಾರ್ಥವನ್ನು ನನ್ನ ಜೊತೆ ಮಾಡಿಕೊಳ್ಳುತ್ತೇನೆ ಎಂದು ಹೇಳಿಕೊಳ್ಳುತ್ತಾರೆ. ನಾನು ನಿರಾಕಾರ ಮನುಷ್ಯ ಸೃಷ್ಟಿಯ ಬೀಜ ರೂಪಿ ಆಗಿದ್ದೇನೆ. ಎಲ್ಲರೂ ಹೇಳುತ್ತಾರೆ ಮನುಷ್ಯ ಸೃಷ್ಟಿಯನ್ನು ಪರಮಾತ್ಮನೇ ರಚಿಸಿದ್ದಾರೆ ಅಂದಮೇಲೆ ತಮ್ಮ ತಂದೆ ಸದಾ ಪರಮಧಾಮದಲ್ಲಿ ಇರುತ್ತಾರೆ. ಈಗ ಹೇಳುತ್ತಾರೆ ನನ್ನನ್ನು ನೆನಪು ಮಾಡಿ. ಪ್ರಯಾಣವು ದೀರ್ಘವಾಗಿರುವ ಕಾರಣ ಬಹಳ ಮಕ್ಕಳು ಸುಸ್ತಾಗಿಬಿಡುತ್ತಾರೆ. ಪೂರ್ಣ ಬುದ್ಧಿಯೋಗವನ್ನು ಜೋಡಿಸಲಾಗುವುದಿಲ್ಲ. ಮಾಯೆಯ ಪೆಟ್ಟನ್ನು ಬಹಳ ತಿನ್ನುವುದರಿಂದ ಸುಸ್ತಾಗಿಬಿಡುತ್ತಾರೆ, ಸತ್ತು ಹೋಗುತ್ತಾರೆ. ನಂತರ ಕೈ ಬಿಟ್ಟುಬಿಡುತ್ತಾರೆ. ಕಲ್ಪದ ಮೊದಲೂ ಸಹ ಅದೇ ರೀತಿ ಆಗಿತ್ತು. ಇಲ್ಲಿ ಬದುಕಿರುವ ತನಕ ನೆನಪು ಮಾಡುತ್ತಲೇ ಇರಬೇಕು. ಸ್ತ್ರೀಗೆ ಪತಿ ಸತ್ತು ಹೋದರೂ ಸಹ ನೆನಪು ಇರುತ್ತದೆ. ತಂದೆ ಅಥವಾ ಪತಿ ರೀತಿ ಬಿಟ್ಟು ಹೋಗುವವರಲ್ಲ. ಹೇಳುತ್ತಾರೆ ನಾನು ತಾವು ಪ್ರಿಯತಮೆಯರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಆದರೆ ಇದರಲ್ಲಿ ಸಮಯ ಹಿಡಿಸುತ್ತದೆ, ಸುಸ್ತಾಗಬಾರದು. ಪಾಪಗಳ ಹೊರೆ ತಲೆಯ ಮೇಲೆ ಬಹಳ ಇದೆ, ಅದು ಯೋಗದಲ್ಲಿ ಇರುವುದರಿಂದಲೇ ಇಳಿಯುತ್ತದೆ. ಅಂತಿಮದಲ್ಲಿ ತಂದೆ ಅಥವಾ ಪ್ರಿಯತಮೆಯರ ವಿನಃ ಬೇರೆ ಯಾರೂ ನೆನಪಿಗೆ ಬರಬಾರದು, ರೀತಿ ಯೋಗವಿರಬೇಕು. ಒಂದುವೇಳೆ ಬೇರೆ ಏನಾದರೂ ನೆನಪು ಬಂದರೆ ಅದು ವ್ಯಭಿಚಾರವಾಗುತ್ತದೆ, ನಂತರ ಪಾಪಗಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ತಂದೆ ಹೇಳುತ್ತಾರೆ ಪರಮಧಾಮದ ಪ್ರಯಾಣಿಕರೇ ಸುಸ್ತಾಗಬೇಡಿ.

ತಮಗೆ ಗೊತ್ತಿದೆ ನಾನು ಬ್ರಹ್ಮಾರವರ ಮೂಲಕ ಆದಿ ಸನಾತನ ದೇವೀ-ದೇವತಾ ಧರ್ಮದ ಸ್ಥಾಪನೆಯನ್ನು ಮಾಡುತ್ತಿದ್ದೇನೆ ಹಾಗೂ ಶಂಕರನ ಮೂಲಕ ಸರ್ವ ಧರ್ಮಗಳ ವಿನಾಶ ಮಾಡಿಸುತ್ತೇನೆ. ಈಗ ಎಲ್ಲಾ ಧರ್ಮದವರೂ ಸೇರಿ ಹೇಗೆ ಒಂದಾಗುವುದು, ಎಲ್ಲರೂ ಶಾಂತಿಯಿಂದ ಹೇಗೆ ಇರುವುದು ಅದಕ್ಕೆ ಮಾರ್ಗವನ್ನು ಕಂಡು ಹಿಡಿಯೋಣ ಎಂಬುದರ ಬಗ್ಗೆ ಸಮ್ಮೇಳನಗಳನ್ನು ಮಾಡುತ್ತಾ ಇರುತ್ತಾರೆ. ಈಗ ಅನೇಕ ಧರ್ಮಗಳ ಏಕತೆ ಆಗಲು ಸಾಧ್ಯವಿಲ್ಲ. ಒಂದು ಮತದಿಂದ ಒಂದು ಧರ್ಮದ ಸ್ಥಾಪನೆ ಆಗುತ್ತದೆ. ಅವರೆಲ್ಲಾ ಧರ್ಮದವರು ಸರ್ವ ಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿಗಳಾದಾಗ ಪರಸ್ಪರದಲ್ಲಿ ಕ್ಷೀರಖಂಡವಾಗಿ ಇರಬಹುದು. ರಾಮರಾಜ್ಯದಲ್ಲಿ ಎಲ್ಲರೂ ಕ್ಷೀರಖಂಡವಾಗಿ ಇದ್ದರು. ಪ್ರಾಣಿಗಳೂCC ಜಗಳವಾಡುತ್ತಾ ಇರಲಿಲ್ಲ. ಇಲ್ಲಂತೂ ಮನೆ-ಮನೆಯಲ್ಲೂ ಜಗಳವಿದೆ. ಯಾವಾಗ ಯಾರು ಧಣಿ-ಧೋಣಿ [ಹೇಳುವವರು-ಕೇಳುವವರು] ಇರುವುದಿಲ್ಲ ಆಗ ಯುದ್ಧ ಮಾಡುತ್ತಾರೆ. ತಮ್ಮ ಮಾತಾ-ಪಿತರನ್ನು ತಿಳಿದುಕೊಂಡಿಲ್ಲ. ಗಾಯನ ಮಾಡುತ್ತಾರೆ - ತಾವು ಮಾತಾ-ಪಿತರು ನಾವು ಬಾಲಕರಾಗಿದ್ದೇವೆ ತಮ್ಮ ಕೃಪೆಯಿಂದ ಸುಖವೂ ಅಪಾರವಾಗಿ ಸಿಗುತ್ತದೆ.......... ಸುಖವಿತ್ತು ಆದರೆ ಈಗ ಇಲ್ಲ. ಹೇಳುತ್ತಾರೆ ಮಾತಾ-ಪಿತರ ಕೃಪೆ ಇಲ್ಲ ಎಂದು ತಂದೆಯನ್ನು ತಿಳಿದುಕೊಂಡಿಲ್ಲ ಅಂದಾಗ ತಂದೆ ಕೃಪೆ ಹೇಗೆ ಮಾಡುತ್ತಾರೆ? ಶಿಕ್ಷಕರ ಆದೇಶದಂತೆ ನಡೆದಾಗ ಕೃಪೆ ಆಗುತ್ತದೆ. ಅವರಂತೂ ಸರ್ವವ್ಯಾಪಿ ಎಂದು ಹೇಳುತ್ತಾರೆ, ಅಂದಮೇಲೆ ಯಾರು ಕೃಪೆ ಮಾಡುವುದು ಹಾಗೂ ಯಾರ ಮೇಲೆ ಮಾಡುವುದು? ಕೃಪೆ ಪಡೆಯುವವರು ಹಾಗೂ ಮಾಡುವವರು ಇಬ್ಬರೂ ಬೇಕು. ವಿದ್ಯಾರ್ಥಿಗಳು ಮೊದಲು ಶಿಕ್ಷಕರ ಬಳಿ ಬಂದು ಓದಬೇಕು. ತಮ್ಮ ಮೇಲೆ ತಾವು ಕೃಪೆಯನ್ನು ಮಾಡಿಕೊಳ್ಳಬೇಕು ನಂತರ ಶಿಕ್ಷಕರ ಆದೇಶದಂತೆ ನಡೆಯಬೇಕು. ಪುರುಷಾರ್ಥ ಮಾಡಿಸುವವರೂ ಸಹ ಬೇಕು. ಇವರು ತಂದೆಯೂ, ಶಿಕ್ಷಕರೂ, ಸದ್ಗುರುವೂ ಆಗಿದ್ದಾರೆ. ಅವರಿಗೆ ಪರಮಪಿತ, ಪರಮಶಿಕ್ಷಕ, ಪರಮ ಸದ್ಗುರು ಎಂದೂ ಸಹ ಹೇಳಲಾಗುತ್ತದೆ. ತಂದೆ ಹೇಳುತ್ತಾರೆ ನಾನು ಕಲ್ಪ-ಕಲ್ಪದಲ್ಲೂ ಸ್ಥಾಪನಾ ಕಾರ್ಯವನ್ನು ಮಾಡಿಸುತ್ತೇನೆ. ಪತಿತ ಜಗತ್ತನ್ನು ಪಾವನ ಜಗತ್ತನ್ನಾಗಿ ಮಾಡುತ್ತೇನೆ. ಸರ್ವಶಕ್ತಿವಂತರಾಗಿದ್ದಾರಲ್ಲವೇ. ಅಂದಮೇಲೆ ವಿಶ್ವದ ಸರ್ವಾಧಿಕಾರದ ರಾಜ್ಯವನ್ನು ಕಾಯಂ ಮಾಡುತ್ತಾರೆ. ಇಡೀ ಸೃಷ್ಟಿಯ ಮೇಲೆ ಒಂದೇ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಅವರಿಗೆ ಸರ್ವಾಧಿಕಾರವಿತ್ತು. ಅಲ್ಲಿ ಯಾರು ಜಗಳ-ಯುದ್ಧವನ್ನು ಮಾಡುತ್ತಿರಲಿಲ್ಲ. ಅಲ್ಲಿ ಮಾಯೆಯೇ ಇಲ್ಲ. ಅದು ಸ್ವರ್ಣಿಮಯುಗ, ಬೆಳ್ಳಿಯುಗವಾಗಿದೆ. ಸತ್ಯಯುಗ ತ್ರೇತಾಯುಗಗಳಿಗೆ ಸ್ವರ್ಗ ಅಥವಾ ವೈಕುಂಠ ಎಂದು ಹೇಳಬಹುದು. ವೃಂದಾವನಕ್ಕೆ ಹೋಗೋಣ, ರಾಧಾ ಗೋವಿಂದನನ್ನು ಭಜಿಸೋಣ.............. ಎಂದು ಎಲ್ಲರೂ ಹಾಡುತ್ತಾರೆ. ಯಾರೂ ಹೋಗುವುದಿಲ್ಲ. ಕೇವಲ ಅವಶ್ಯವಾಗಿ ನೆನಪು ಎಲ್ಲರೂ ಮಾಡುತ್ತಾರೆ. ಈಗಂತೂ ಮಾಯೆಯ ರಾಜ್ಯವಾಗಿದೆ. ಎಲ್ಲರೂ ರಾವಣನ ಮತದಂತೆ ಇದ್ದಾರೆ. ನೋಡುವುದಕ್ಕೆ ದೊಡ್ಡ-ದೊಡ್ಡ ಮನುಷ್ಯರು ಚೆನ್ನಾಗಿ ಬರುತ್ತಾರೆ. ದೊಡ್ಡ-ದೊಡ್ಡ ಬಿರುದುಗಳು ಸಿಗುತ್ತವೆ. ಸ್ವಲ್ಪ ಶಾರೀರಿಕವಾದ ಧೈರ್ಯವನ್ನು ತೋರಿಸುತ್ತಾರೆ ಹಾಗೂ ಒಳ್ಳೆಯ ಕಾರ್ಯವನ್ನು ಮಾಡುತ್ತಾರೆಂದರೆ ಬಿರುದು ಸಿಗುತ್ತದೆ. ಈಗ ತಾವು ಬ್ರಾಹ್ಮಣರಾಗಿದ್ದೀರಿ, ಅವಶ್ಯವಾಗಿ ಭಾರತದ ಸರ್ವೀಸಿನಲ್ಲಿ ಇದ್ದೀರಿ. ತಾವು ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಸ್ಥಾಪನೆ ಆದ ನಂತರ ತಮಗೆ ಬಿರುದುಗಳು ಸಿಗುತ್ತವೆ. ಸೂರ್ಯವಂಶೀ ರಾಜಾರಾಣಿ, ಚಂದ್ರವಂಶೀ ರಾಜಾರಾಣಿ ಮತ್ತೆ ನಿಮ್ಮ ರಾಜ್ಯ ನಡೆಯುತ್ತದೆ. ಅಲ್ಲಿ ಯಾರಿಗೂ ಬಿರುದು ಸಿಗುವುದಿಲ್ಲ. ಅಲ್ಲಿ ದುಃಖದ ಯಾವುದೇ ಮಾತು ಇರುವುದಿಲ್ಲ. ಬಿರುದು ಸಿಗಲು ಅಲ್ಲಿ ಯಾರೂ ಯಾರ ದುಃಖವನ್ನು ದೂರ ಮಾಡುವುದಿಲ್ಲ. ಯಾವ ಸಂಪ್ರದಾಯ ಇಲ್ಲಿ ಇರುತ್ತದೋ ಅದು ಅಲ್ಲಿ ಇರುವುದಿಲ್ಲ. ಲಕ್ಷ್ಮೀ-ನಾರಾಯಣರು ಪತಿತ ಜಗತ್ತಿನಲ್ಲಿ ಬರಲು ಸಾಧ್ಯವಿಲ್ಲ. ಸಮಯದಲ್ಲಿ ಯಾರೂ ಪಾವನ ದೇವತೆಗಳು ಇಲ್ಲ. ಇದು ಪತಿತ ಆಸುರೀ ಜಗತ್ತಾಗಿದೆ. ಅನೇಕ ಮತ-ಮತಾಂತರಗಳಲ್ಲಿ ತಬ್ಬಿಬ್ಬಾಗಿದ್ದಾರೆ. ಇಲ್ಲಂತೂ ಒಂದೇ ಶ್ರೀಮತವಾಗಿದೆ, ಇದರಿಂದ ರಾಜಧಾನಿ ಸ್ಥಾಪನೆ ಆಗುತ್ತದೆ. ಹಾ! ನಡೆಯುತ್ತಾ-ನಡೆಯುತ್ತಾ ಕೆಲವರಿಗೆ ಮಾಯೆಯ ಮುಳ್ಳು ನಾಟುತ್ತದೆ. ಅವರು ಕುಂಟುತ್ತಾ ಇರುತ್ತಾರೆ. ಆದ್ದರಿಂದ ತಂದೆ ಹೇಳುತ್ತಾರೆ - ಸದಾ ಶ್ರೀಮತದಂತೆ ನಡೆಯಿರಿ, ತಮ್ಮ ಮನ್ಮತದಂತೆ ನಡೆಯುವುದರಿಂದ ಮೋಸ ಹೋಗುತ್ತೀರಿ. ಸತ್ಯ ತಂದೆಯ ಮತದಂತೆ ನಡೆಯುವುದರಿಂದ ಸತ್ಯ ಸಂಪಾದನೆ ಆಗುತ್ತದೆ. ತಮ್ಮ ಮತದಂತೆ ನಡೆದರೆ ದೋಣಿ ನಿಂತು ಹೋಗುತ್ತದೆ. ಎಂತಹ ಮಹಾವೀರರೇ ಆಗಿರಲಿ ಶ್ರೀಮತದಂತೆ ನಡೆಯದಿರುವ ಕಾರಣ ಅದೋಗತಿಯನ್ನು ತಲುಪುತ್ತಾರೆ.

ಈಗ ತಾವು ಮಕ್ಕಳು ಸದ್ಗತಿಯನ್ನು ಪಡೆಯಬೇಕು. ಶ್ರೀಮತದಂತೆ ನಡೆಯದೇ ದುರ್ಗತಿಯನ್ನು ಹೊಂದಿದರೆ ನಂತರ ಬಹಳ ಪಶ್ಚಾತ್ತಾಪ ಪಡೆಯಬೇಕಾಗುತ್ತದೆ. ನಂತರ ಧರ್ಮರಾಜ ಪುರಿಯಲ್ಲಿ ಶಿವಬಾಬಾ ಇವರ ತನುವಿನಲ್ಲಿ ಕುಳಿತು ತಿಳಿಸುತ್ತಾರೆ - ನಾನು ನಿಮಗೆ ಬ್ರಹ್ಮನ ತನುವಿನ ಮೂಲಕ ಎಷ್ಟೊಂದು ತಿಳಿಸಿದೆ, ಓದಿಸಿದೆ, ಎಷ್ಟೊಂದು ಶ್ರಮ ಪಟ್ಟೆ. ಶ್ರೀಮತದಂತೆ ನಡೆಯುತ್ತೇವೆ ಎಂದು ನಿಶ್ಚಯ ಪತ್ರವನ್ನೂ ಬರೆದಿರಿ, ಆದರೆ ನಡೆಯಲಿಲ್ಲ. ಶ್ರೀಮತವನ್ನು ಎಂದೂ ಸಹ ಬಿಡಬಾರದು. ಏನೇ ಆಗಲಿ, ತಂದೆಗೆ ಹೇಳುವುದರಿಂದ ಎಚ್ಚರಿಕೆ ಸಿಗುತ್ತಾ ಇರುತ್ತದೆ. ಯಾವಾಗ ತಂದೆಯನ್ನು ಮರೆಯುತ್ತೀರೋ ಆಗ ಮುಳ್ಳು ಚುಚ್ಚಿಕೊಳ್ಳುತ್ತದೆ. ಮಕ್ಕಳು ಸದ್ಗತಿ ಮಾಡುವಂತಹ ತಂದೆಯಿಂದಲೇ ಮೂರು ಅಡಿ ದೂರ ಓಡುತ್ತಾರೆ. ಹಾಡುತ್ತಾರೆ - ಅರ್ಪಣೆ ಆಗುತ್ತೇನೆ, ಬಲಿ ಆಗುತ್ತೇನೆ. ಆದರೆ ಯಾರ ಮೇಲೆ? ಸನ್ಯಾಸಿಗಳ ಮೇಲೆ ಬಲಿ ಆಗುತ್ತೇನೆ ರೀತಿಯಂತೂ ಬರೆದಿಲ್ಲ! ಅಥವಾ ಬ್ರಹ್ಮಾ-ವಿಷ್ಣು-ಶಂಕರನ ಮೇಲೆ ಬಲಿ ಆಗುತ್ತೇನೆ ಅಥವಾ ಕೃಷ್ಣನಿಗೆ ಬಲಿ ಆಗುತ್ತೇನೆ. ಪರಮಪಿತ ಪರಮಾತ್ಮನಿಗೆ ಅರ್ಪಣೆ ಆಗಬೇಕೇ ವಿನಃ ಯಾವುದೇ ಮನುಷ್ಯರ ಮೇಲೆ ಅಲ್ಲ. ಆಸ್ತಿ ಸಿಗುವುದೇ ತಂದೆಯಿಂದ. ತಂದೆ ಮಕ್ಕಳಿಗೆ ಅರ್ಪಣೆ ಆಗುತ್ತಾರೆ. ಪಾರಲೌಕಿಕ ತಂದೆಯೂ ಸಹ ಹೇಳುತ್ತಾರೆ, ನಾನು ಅರ್ಪಣೆ ಆಗಲು ಬಂದಿದ್ದೇನೆ ಆದರೆ ತಂದೆಯ ಮೆಲೆ ಅರ್ಪಣೆ ಆಗುವುದರಲ್ಲಿ ಮಕ್ಕಳ ಹೃದಯ ಎಷ್ಟೊಂದು ವಿಧೀರ್ಣವಾಗುತ್ತದೆ. ದೇಹಾಭಿಮಾನದಲ್ಲಿ ಬಂದರೆಂದರೆ ಸತ್ತಂತೆ, ವ್ಯಭಿಚಾರವಾಯಿತು. ಒಬ್ಬ ತಂದೆಯದೇ ನೆನಪು ಇರಬೇಕು. ಅವರ ಮೇಲೆ ಬಲಿಹಾರಿ ಆಗಬೇಕು. ಈಗ ನಾಟಕ ಪೂರ್ಣವಾಗುತ್ತದೆ. ಈಗ ನಾವು ಹಿಂತಿರುಗಬೇಕು. ಬಾಕಿ ಮಿತ್ರ ಸಂಬಂಧಿಕರು ಎಲ್ಲರೂ ಸ್ಮಶಾನವಾಸಿಗಳಾಗುತ್ತಾರೆ. ಅವರನ್ನೇನು ನೆನಪು ಮಾಡುತ್ತೀರಿ. ಇದರಲ್ಲಿ ಬಹಳ ಅಭ್ಯಾಸ ಬೇಕು. ಗಾಯನವಿದೆ ಏರಿದರೆ ಅಮೃತರಸ...... ಜೋರಾಗಿ ಬಿದ್ದರೆ ಪದವಿಯನ್ನು ಕಳೆದುಕೊಳ್ಳುತ್ತಾರೆ. ಸ್ವರ್ಗದಲ್ಲಿ ಬರುವುದಿಲ್ಲ, ರೀತಿ ಅಲ್ಲ, ಆದರೆ ರಾಜಾ-ರಾಣಿ ಆಗುವುದರಲ್ಲಿ ಹಾಗೂ ಪ್ರಜೆಗಳಾಗುವುದರಲ್ಲಿ ವ್ಯತ್ಯಾಸವಿದೆ ತಾನೇ! ಇಲ್ಲಿನ ಬೇಡರನ್ನು, ಮಂತ್ರಿಯನ್ನು ನೋಡಿ, ವ್ಯತ್ಯಾಸವಿದೆಯಲ್ಲವೇ. ಆದ್ದರಿಂದ ಪೂರ್ಣ ಪುರುಷಾರ್ಥವನ್ನು ಮಾಡಬೇಕು. ಕೆಲವರು ಬಿದ್ದರೆ ಒಂದೇ ಸಲ ಪತಿತರಾಗಿಬಿಡುತ್ತಾರೆ. ಶ್ರೀಮತದಂತೆ ನಡೆಯದಿದ್ದರೆ ಮಾಯೆಯೂ ಮೂಗನ್ನು ಹಿಡಿದು ಒಂದೇ ಸಲ ಹಳ್ಳದಲ್ಲಿ ಹಾಕಿಬಿಡುತ್ತದೆ. ಬಾಪ್ದಾದಾರವರ ಮಕ್ಕಳಾಗಿ ನಂತರ ದ್ರೋಹಿಗಳಾಗುವುದೆಂದರೆ ಮಾಯೆಯನ್ನು ಹೆದರಿಸುವುದಾಗಿದೆ. ಆದ್ದರಿಂದ ತಂದೆಯು ಹೇಳುತ್ತಾರೆ ಹೆಜ್ಜೆ-ಹೆಜ್ಜೆಗೂ ಜೋಪಾನವಾಗಿ ನಡೆಯಿರಿ. ಈಗ ಮಾಯೆಯ ಅಂತ್ಯವಾಗುತ್ತಿದೆ, ಮಾಯೆ ಅನೇಕರನ್ನು ಬೀಳಿಸುತ್ತದೆ. ಆದ್ದರಿಂದ ಮಕ್ಕಳು ಎಚ್ಚರಿಕೆಯಿಂದ ಇರಬೇಕು. ಮಾರ್ಗವೂ ಸ್ವಲ್ಪ ದೊಡ್ಡವಾಗಿದೆ, ಪದವಿಯೂ ಬಹಳ ದೊಡ್ಡದಾಗಿದೆ. ಒಂದುವೇಳೆ ದ್ರೋಹಿಗಳಾದರೆ ಶಿಕ್ಷೆಯೂ ಸಹ ಬಹಳ ಭಾರಿ ಇದೆ. ಯಾವಾಗ ಧರ್ಮರಾಜ ಬಾಬಾ ಶಿಕ್ಷೆ ಕೊಡುತ್ತಾರೆ ಆಗ ಬಹಳ ಚೀರಾಡುತ್ತಾರೆ. ಅದು ಕಲ್ಪ-ಕಲ್ಪಕ್ಕಾಗಿ ಕಾಯಂ ಆಗಿಬಿಡುತ್ತದೆ. ಮಾಯೆ ಬಹಳ ಪ್ರಬಲವಾಗಿದೆ. ತಂದೆಗೆ ಸ್ವಲ್ಪ ಅಗೌರವ ಕೊಟ್ಟರೂ ಸಹ ಅವರು ಸತ್ತಂತೆ. ಗಾಯನವಿದೆ ಸದ್ಗುರುವಿನ ನಿಂದಕರು ಪದವಿ ಪಡೆಯಲು ಸಾಧ್ಯವಿಲ್ಲ. ಕಾಮವಶರಾಗಿ, ಕ್ರೋಧವಶರಾಗಿ ಉಲ್ಟಾ ಕರ್ಮವನ್ನು ಮಾಡುತ್ತಾರೆಂದರೆ ತಂದೆಯ ನಿಂದನೆಯನ್ನು ಮಾಡಿಸುತ್ತಾರೆ ಹಾಗೂ ಶಿಕ್ಷೆಗೆ ನಿಮಿತ್ತರಾಗುತ್ತಾರೆ. ಒಂದುವೇಳೆ ಹೆಜ್ಜೆ-ಹೆಜ್ಜೆಯಲ್ಲಿ ಪದಮಗಳ ಸಂಪಾದನೆ ಇದೆ ಎಂದಮೇಲೆ ಪದಮದಷ್ಟು ನಷ್ಟವೂ ಸಹ ಇದೆ. ಒಂದುವೇಳೆ ಸರ್ವೀಸಿನಿಂದ ಜಮಾ ಆಗಿದ್ದಾಗ ಉಲ್ಟಾ ಕರ್ಮವಿದ್ದಾಗ ಅದು ಜಮಾ ಆಗುವುದಿಲ್ಲ. ಬಾಬನ ಬಳಿ ಎಲ್ಲಾ ಲೆಕ್ಕವಿರುತ್ತದೆ. ಈಗ ಸಮ್ಮುಖದಲ್ಲಿ ಓದಿಸುತ್ತಿದ್ದಾರೆ ಅಂದಮೇಲೆ ಎಲ್ಲಾ ಲೆಕ್ಕವೂ ಅವರ ಕೈಯಲ್ಲಿಯೇ ಇದೆ. ಬಾಬಾ ಹೇಳುತ್ತಾರೆ ಯಾವುದೇ ಮಗು ಶಿವಬಾಬಾರವರನ್ನು ಅಗೌರವಿಸಬಾರದು, ಬಹಳ ವಿಕರ್ಮವಾಗಿಬಿಡುತ್ತದೆ. ಯಜ್ಞ ಸೇವೆಯಲ್ಲಿ ಮೂಳೆ-ಮೂಳೆಯನ್ನೂ ಕೊಡಬೇಕಾಗುತ್ತದೆ. ದದೀಚಿಯ ಋಷಿಯ ಉದಾಹರಣೆ ಇದೆಯಲ್ಲವೇ! ಅಂತಹವರಿಗೂ ಸಹ ಪದವಿ ಸಿಗುತ್ತದೆ. ಇಲ್ಲವೆಂದರೆ ಪ್ರಜೆಗಳಲ್ಲಿಯೂ ಭಿನ್ನ-ಭಿನ್ನ ಪದವಿ ಇದೆ. ಪ್ರಜೆಯಲ್ಲೂ ಸಹ ನೌಕರ-ಚಾಕರ ಎಲ್ಲರೂ ಬೇಕು. ಭಲೆ ಅಲ್ಲಿ ದುಃಖವಿರುವುದಿಲ್ಲ, ಆದರೆ ನಂಬರ್ವಾರ್ ಪದವಿಯಂತೂ ಇದ್ದೇ ಇದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ನೆನಪಿನ ಯಾತ್ರೆಯಲ್ಲಿ ಸುಸ್ತಾಗಬಾರದು, ಅಂತಿಮದಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರದೇ ನೆನಪು ಬರಬಾರದು. ರೀತಿ ಸತ್ಯ ನೆನಪಿನ ಅಭ್ಯಾಸವನ್ನು ಮಾಡಬೇಕು.

2. ಸತ್ಯ ತಂದೆಯ ಮತದಂತೆ ನಡೆದು ಸತ್ಯ ಸಂಪಾದನೆಯನ್ನು ಮಾಡಬೇಕು. ತಮ್ಮ ಮನ್ಮತದಂತೆ ನಡೆಯಬಾರದು. ಸದ್ಗುರುವಿನ ನಿಂದನೆಯನ್ನು ಎಂದೂ ಸಹ ಮಾಡಿಸಬಾರದು. ಕಾಮ, ಕ್ರೋಧಕ್ಕೆ ವಶರಾಗಿ ಯಾವುದೇ ಉಲ್ಟಾ ಕರ್ಮವನ್ನು ಮಾಡಬಾರದು.

ವರದಾನ:

ಸಂಕಲ್ಪ ಶಕ್ತಿಯ ಮುಖಾಂತರ ಪ್ರತಿ ಕರ್ಮದಲ್ಲಿ ಸಫಲರಾಗಿ ಸಿದ್ಧಿ ಪ್ರಾಪ್ತಿ ಮಾಡಿಕೊಳ್ಳುವಂತಹ ಸಫಲತಾಮೂರ್ತಿ ಭವ


ಸಂಕಲ್ಪ ಶಕ್ತಿಯ ಮುಖಾಂತರ ಬಹಳಷ್ಟು ಕಾರ್ಯ ಸಹಜವಾಗಿ ಸಫಲವಾಗುವಂತಹ ಸಿದ್ಧಿಯ ಅನುಭವವಾಗುವುದು. ಹೇಗೆ ಸ್ಥೂಲ ಆಕಾಶದಲ್ಲಿ ಬಿನ್ನ-ಬಿನ್ನ ನಕ್ಷತ್ರಗಳನ್ನು ನೋಡುವಿರಿ ಅದೇ ರೀತಿ ವಿಶ್ವದ ವಾಯುಮಂಡಲದ ಆಕಾಶದಲ್ಲಿ ನಾಲ್ಕೂ ಕಡೆ ಹೊಳೆಯುತ್ತಿರುವ ಸಫಲತೆಯ ನಕ್ಷತ್ರ ಯಾವಾಗ ಕಂಡುಬರುವುದೆಂದರೆ ಯಾವಾಗ ನಿಮ್ಮ ಸಂಕಲ್ಪ ಶ್ರೇಷ್ಠ ಮತ್ತು ಶಕ್ತಿಶಾಲಿಯಾಗಿರುವುದು ಆಗ, ಸದಾ ಒಬ್ಬ ತಂದೆಯ ಅಂತರಾಳದಲ್ಲಿ ಮುಳುಗಿಹೋಗಿರುತ್ತಾರೆ, ತಮ್ಮ ಆತ್ಮೀಯ ಕಣ್ಣುಗಳು, ಆತ್ಮೀಯ ಮೂರ್ತಿ ದಿವ್ಯ ದರ್ಪಣ ಆಗುವುದು. ರೀತಿ ದಿವ್ಯ ದರ್ಪಣವೇ ಅನೆಕ ಆತ್ಮಗಳಿಗೆ ಆತ್ಮೀಕ ಸ್ವರೂಪದ ಅನುಭವ ಮಾಡಿಸುವಂತಹ ಸಫಲತಾ ಮೂರ್ತಿ ಗಳಾಗುವುದು.

ಸ್ಲೋಗನ್:

ನಿರಂತರ ಈಶ್ವರೀಯ ಸುಖದ ಅನುಭವ ಮಾಡುವಂತಹವರೆ ನಿಶ್ಚಿಂತ ಚಕ್ರವರ್ತಿಗಳು.

 Download PDF

Post a Comment

0 Comments