10/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ನಿಮ್ಮದೀಗ
ಮರುಜೀವ ಜನ್ಮವಾಗಿದೆ,
ನೀವು ಈಶ್ವರ
ತಂದೆಯಿಂದ ಆಸ್ತಿಯನ್ನು
ತೆಗೆದುಕೊಳ್ಳುತ್ತೀರಿ, ನಿಮಗೆ
ಬಹಳ ದೊಡ್ಡ
ಲಾಟರಿ ಸಿಗುತ್ತದೆ
ಆದ್ದರಿಂದ ಅಪಾರ
ಖುಷಿಯಲ್ಲಿರಬೇಕು”
ಪ್ರಶ್ನೆ:
ತಮಗೆ ತಾವೇ ಸಲಹೆಯನ್ನು ಕೊಟ್ಟುಕೊಂಡಾಗ ಚಿಂತೆಯು ಸಮಾಪ್ತಿಯಾಗುತ್ತದೆ, ಕೋಪ ದೂರವಾಗುತ್ತದೆ?
ಉತ್ತರ:
ನಾವು ಈಶ್ವರೀಯ ಸಂತಾನರಾಗಿದ್ದೇವೆ. ನಾವು ತಂದೆಯ ಸಮಾನ ಮಧುರವಾಗಬೇಕು. ಹೇಗೆ ತಂದೆಯು ಮಧುರರೂಪದಿಂದ ತಿಳುವಳಿಕೆಯನ್ನು
ಕೊಡುತ್ತಾರೆ, ಕೋಪ ಮಾಡಿಕೊಳ್ಳುವುದಿಲ್ಲ ಹಾಗೆಯೇ ನಾವು ಪರಸ್ಪರದಲ್ಲಿ ಮಧುರರಾಗಬೇಕು,
ಉಪ್ಪು ನೀರಾಗಬಾರದು ಏಕೆಂದರೆ ಯಾವ ಸೆಕೆಂಡ್ ಕಳೆದುಹೋಯಿತು, ಅದು ನಾಟಕದಲ್ಲಿ ಪಾತ್ರವಿದೆಯೆಂದು ತಿಳಿದುಕೊಂಡಿದ್ದೀರಿ. ಚಿಂತೆಯನ್ನು ಯಾವ ಮಾತಿಗೆ ಮಾಡುವುದು. ಈ ರೀತಿ ತಮಗೆ ತಾವೇ ತಿಳಿಸಿದಾಗ ಚಿಂತೆಯು ದೂರವಾಗುತ್ತದೆ. ಕೋಪ ಓಡಿಹೋಗುತ್ತದೆ.
ಗೀತೆ: ಇದೇ ವಸಂತ ಋತುವಾಗಿದೆ.......
ಓಂ ಶಾಂತಿ.
ಇದು ಈಶ್ವರೀಯ ಸಂತಾನರ ಖುಷಿಯ ಗಾಯನವಾಗಿದೆ. ಇಷ್ಟು ಖುಷಿಯ ಗಾಯನ ಸತ್ಯಯುಗದಲ್ಲಿ ಮಾಡುವುದಿಲ್ಲ.
ಈಗ ನಿಮಗೆ ಖಜಾನೆಯು ಸಿಕ್ಕಿದೆ.
ಇದು ಅತಿ ದೊಡ್ಡ ಲಾಟರಿಯಾಗಿದೆ.
ಯಾವಾಗ ಲಾಟರಿಯು ಸಿಗುತ್ತದೆಯೋ ಆಗ ಖುಷಿಯಾಗುತ್ತೀರಿ. ನೀವು ಈ ಲಾಟರಿಯಿಂದ ಜನ್ಮ-ಜನ್ಮಾಂತರ ಸ್ವರ್ಗದಲ್ಲಿ ಸುಖವನ್ನು ಭೋಗಿಸುತ್ತೀರಿ. ಇದು ನಿಮ್ಮ ಮರುಜೀವ ಜನ್ಮವಾಗಿದೆ. ಯಾರು ಬದುಕಿದ್ದಾಗಲೇ ಸಾಯುವುದಿಲ್ಲವೋ ಅವರಿಗೆ ಮರುಜೀವ ಜನ್ಮವೆಂದು ಹೇಳುವುದಿಲ್ಲ.
ಅವರಿಗೆ ಖುಷಿಯ ನಶೆಯು ಏರುವುದಿಲ್ಲ.
ಎಲ್ಲಿಯವರೆಗೆ ಮರುಜೀವಿಗಳಾಗುವುದಿಲ್ಲವೋ ಅರ್ಥಾತ್ ತಂದೆಯನ್ನು ತನ್ನವರನ್ನಾಗಿ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪೂರ್ಣ ಆಸ್ತಿಯು ಸಿಗುವುದಿಲ್ಲ. ಯಾರು ತಂದೆಯನ್ನು ನೆನಪು ಮಾಡುತ್ತಾರೋ ಅವರನ್ನು ತಂದೆಯೂ ನೆನಪು ಮಾಡುತ್ತಾರೆ. ನೀವು ಈಶ್ವರೀಯ ಸಂತಾನರಾಗಿದ್ದೀರಿ. ನಾವು ಈಶ್ವರ ತಂದೆಯಿಂದ ಆಸ್ತಿ ಅಥವಾ ವರವನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಶೆಯಿರಬೇಕು.
ಅದಕ್ಕೋಸ್ಕರ ಭಕ್ತರು ಭಕ್ತಿಮಾರ್ಗದಲ್ಲಿ ಪೆಟ್ಟನ್ನು ತಿನ್ನುತ್ತಾರೆ. ತಂದೆಯನ್ನು ಮಿಲನ ಮಾಡುವುದಕ್ಕೋಸ್ಕರ ಅನೇಕಾನೇಕ ಉಪಾಯಗಳನ್ನು ಮಾಡುತ್ತಾರೆ. ಎಷ್ಟೊಂದು ವೇದ, ಶಾಸ್ತ್ರ,
ಪುಸ್ತಕ ಇತ್ಯಾದಿಗಳನ್ನು ಅಪಾರವಾಗಿ ಓದುತ್ತಾರೆ ಆದರೂ ಪ್ರಪಂಚವು ದಿನ-ಪ್ರತಿದಿನ ದುಃಖಿಯಾಗುತ್ತಿದೆ. ಅದು ತಮೋಪ್ರಧಾನವಾಗಲೇಬೇಕು. ಇದು ಮುಳ್ಳಿನ ಮರವಾಗಿದೆ.
ಬಬೂಲ್ನಾಥ ಬಂದು ಮುಳ್ಳಿನಿಂದ ಹೂವನ್ನಾಗಿ ಮಾಡಿದ್ದಾರೆ. ಮುಳ್ಳು ಬಹಳ ದೊಡ್ಡ ದೊಡ್ಡದಾಗಿರುತ್ತದೆ, ಬಹಳ ಜೋರಾಗಿ ಚುಚ್ಚುತ್ತದೆ.
ಅದಕ್ಕೆ ಅನೇಕ ಪ್ರಕಾರದ ಹೆಸರುಗಳನ್ನು ಇಟ್ಟಿರುತ್ತಾರೆ. ಸತ್ಯಯುಗದಲ್ಲಿ ಇದೆಲ್ಲವೂ ಇರುವುದಿಲ್ಲ.
ಇದು ಮುಳ್ಳಿನ ಪ್ರಪಂಚವಾಗಿದೆಯೆಂದು ತಂದೆಯು ತಿಳಿಸುತ್ತಾರೆ. ಪರಸ್ಪರದಲ್ಲಿ ದುಃಖವನ್ನು ಕೊಡುತ್ತಾರೆ.
ಮನೆಯಲ್ಲಿ ಮಕ್ಕಳು ತಂದೆ, ತಾಯಿಗಳಿಗೆ ಬಹಳ ದುಃಖವನ್ನು ಕೊಡುವ ರೀತಿ ಕುಪುತ್ರ ಮಕ್ಕಳಿರುತ್ತಾರೆ. ಎಲ್ಲರೂ ಒಂದೇ ಸಮಾನವಿರುವುದಿಲ್ಲ. ಎಲ್ಲರಿಗಿಂತ ಹೆಚ್ಚು ದುಃಖ ಕೊಡುವಂತಹವರು ಯಾರು?
ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ಈ ಗುರುಗಳೇ ಪರಮಾತ್ಮನ ಮಹಿಮೆಯನ್ನು ಮರೆ ಮಾಡಿದ್ದಾರೆಂದು ತಂದೆಯು ಹೇಳುತ್ತಾರೆ. ನಾವು ಅವರಿಗೆ ಬಹಳ ಮಹಿಮೆಯನ್ನು ಮಾಡಿದ್ದೆವು.
ಅವರು ಪರಮಪಿತ ಪರಮಪೂಜ್ಯ ಪರಮಾತ್ಮನಾಗಿದ್ದಾರೆ. ಶಿವನ ಚಿತ್ರವು ಬಹಳ ಚೆನ್ನಾಗಿದೆ ಆದರೆ ಶಿವ ಜ್ಯೋತಿರ್ಬಿಂದುವಲ್ಲವೆಂದು ಬಹಳ ಜನರು ಹೇಳುತ್ತಾರೆ ಏಕೆಂದರೆ ಅವರು ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಆತ್ಮವು ಬಹಳ ಸೂಕ್ಷ್ಮವಾಗಿದೆ. ಭೃಕುಟಿಯ ಮಧ್ಯದಲ್ಲಿ ಕುಳಿತಿದೆ. ಪರಮಾತ್ಮ ಇಷ್ಟು ದೊಡ್ಡ ಆಕಾರವುಳ್ಳಂತಹ ರೀತಿಯಾಗಲು ಹೇಗೆ ಸಾಧ್ಯ?
ಬಹಳ ವಿದ್ವಾನರು,
ಆಚಾರ್ಯರು, ಪರಮಾತ್ಮನಿಗೆ ಈ ರೀತಿಯ ರೂಪವಿಲ್ಲವೆಂದಾಗ ಬಿ.ಕೆ.ಗಳನ್ನು ನೋಡಿ ನಗುತ್ತಾರೆ.
ಅವರು ಅಖಂಡಮಯ ಜ್ಯೋತಿರ್ಮಯ ತತ್ವ,
ಸಾವಿರ ಸೂರ್ಯಗಳಿಗಿಂತಲೂ ತೇಜೋಮಯವಾಗಿದೆ ಎನ್ನುವುದು ತಪ್ಪಾಗಿದೆ. ಇವರ ಸರಿಯಾದ ಮಹಿಮೆಯನ್ನು ತಂದೆಯೇ ಸ್ವಯಂ ತಿಳಿಸುತ್ತಾರೆ. ಅವರು ಮನುಷ್ಯ ಸೃಷ್ಟಿಯ ಬೀಜರೂಪವಾಗಿದ್ದಾರೆ. ಈ ಸೃಷ್ಟಿ ಒಂದು ಉಲ್ಟಾ ವೃಕ್ಷವಾಗಿದೆ.
ಸತ್ಯಯುಗ, ತ್ರೇತಾಯುಗದಲ್ಲಿ ಅವರನ್ನು ಯಾರೂ ನೆನಪು ಮಾಡುವುದಿಲ್ಲ.
ಮನುಷ್ಯರು ಯಾವಾಗ ದುಃಖಿಗಳಾಗುತ್ತಾರೆ ಆಗ ಹೇ ಭಗವಂತ,
ಹೇ ಪರಮಪಿತ ಪರಮಾತ್ಮ ದಯೆತೋರಿ ಎಂದು ನೆನಪು ಮಾಡುತ್ತಾರೆ. ಸತ್ಯಯುಗ,
ತ್ರೇತಾಯುಗದಲ್ಲಿ ಯಾರೂ ದಯೆಯನ್ನು ಬೇಡುವುದಿಲ್ಲ.
ಆ ತಂದೆಯು ರಚೈತನಾಗಿದ್ದಾರೆ. ರಚನೆಯು ಹೊಸದಾಗಿದೆ. ಈ ತಂದೆಯ ಮಹಿಮೆಯು ಅಪರಮಪಾರವಾಗಿದೆ. ಜ್ಞಾನಸಾಗರ,
ಪತಿತ-ಪಾವನನಾಗಿದ್ದಾರೆ. ಜ್ಞಾನದ ಸಾಗರನೆಂದಾಗ ಅವಶ್ಯವಾಗಿ ಜ್ಞಾನವನ್ನು ಕೊಡುತ್ತಾರೆ. ಅವರು ಸತ್ಚಿತ್ ಆನಂದಸ್ವರೂಪನಾಗಿದ್ದಾರೆ. ಚೈತನ್ಯವಾಗಿದ್ದಾರೆ, ಜ್ಞಾನವೂ ಚೈತನ್ಯ ಆತ್ಮದಲ್ಲಿ ಧಾರಣೆಯಾಗುತ್ತದೆ. ನಾವು ಈ ಶರೀರವನ್ನು ಬಿಟ್ಟು ಹೋದಾಗ ಆತ್ಮದಲ್ಲಿ ಜ್ಞಾನದ ಸಂಸ್ಕಾರವಿರುತ್ತದೆ. ಮಗುವಾಗಿದ್ದರೂ ಸಂಸ್ಕಾರವಿರುತ್ತದೆ ಆದರೆ ಕರ್ಮೇಂದ್ರಿಯಗಳು ಚಿಕ್ಕದಾಗಿರುವ ಕಾರಣ ಮಾತನಾಡಲು ಸಾಧ್ಯವಿಲ್ಲ.
ಕರ್ಮೇಂದ್ರಿಯಗಳು ದೊಡ್ಡದಾದಾಗ ನೆನಪು ಮಾಡಿಸಿದರೆ ಸ್ಮೃತಿಯು ಬರುತ್ತದೆ.
ಚಿಕ್ಕ ಮಕ್ಕಳು ಶಾಸ್ತ್ರಗಳನ್ನು ಕಂಠಪಾಠ ಮಾಡುತ್ತಾರೆ, ಇದೆಲ್ಲವೂ ಹಿಂದಿನ ಜನ್ಮದ ಸಂಸ್ಕಾರವಾಗಿರುತ್ತದೆ. ಈಗ ತಂದೆಯು ನಮಗೆ ಜ್ಞಾನದ ಆಸ್ತಿಯನ್ನು ಕೊಡುತ್ತಿದ್ದಾರೆ. ಇಡೀ ಸೃಷ್ಟಿಯ ಜ್ಞಾನ ಇವರ ಬಳಿಯಿದೆ ಏಕೆಂದರೆ ಬೀಜರೂಪವಾಗಿದ್ದಾರೆ. ನಾವು ನಮಗೆ ಬೀಜರೂಪವೆಂದು ಹೇಳಲಾಗುವುದಿಲ್ಲ. ಬೀಜದಲ್ಲಿ ಅವಶ್ಯವಾಗಿ ವೃಕ್ಷದ ಆದಿ-ಮಧ್ಯ-ಅಂತ್ಯದ ಜ್ಞಾನವಿರುತ್ತದೆ ಅಂದಾಗ ನಾನು ಸೃಷ್ಟಿಯ ಬೀಜರೂಪವಾಗಿದ್ದೆನೆಂದು ತಂದೆಯು ಸ್ವಯಂ ಹೇಳುತ್ತಾರೆ.
ಈ ವೃಕ್ಷದ ಬೀಜವು ಮೇಲಿದೆ.
ಸತ್ಚಿತ್ ಆನಂದ ಸ್ವರೂಪ, ಜ್ಞಾನಸಾಗರ ತಂದೆಯಾಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ಅವರಲ್ಲಿದೆ. ಇಲ್ಲದಿದ್ದರೆ ಏನಾಗುತ್ತದೆ? ಶಾಸ್ತ್ರಗಳ ಜ್ಞಾನವಿರುತ್ತದೆಯೇನು? ಅದು ಬಹಳಷ್ಟು ಜನರಲ್ಲಿದೆ.
ಪರಮಾತ್ಮನು ಅವಶ್ಯವಾಗಿ ಹೊಸದನ್ನು ತಿಳಿಸುತ್ತಾರೆ.
ಅದನ್ನು ಯಾವುದೇ ವಿದ್ವಾನರು ಮುಂತಾದವರು ತಿಳಿದುಕೊಂಡಿಲ್ಲ. ಯಾರಲ್ಲಾದರೂ ಕೇಳಿ - ಈ ಸೃಷ್ಟಿರೂಪೀ ವೃಕ್ಷದ ಉತ್ಪತ್ತಿ, ಪಾಲನೆ,
ವಿನಾಶವು ಹೇಗಾಗುತ್ತದೆ?
ಇದರ ಆಯಸ್ಸು ಎಷ್ಟಿದೆ? ಇದು ಯಾರ ಬುದ್ಧಿಯಲ್ಲೂ ಸಹ ಇಲ್ಲ.
ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ.
ಸರ್ವಶಾಸ್ತ್ರಮಯಿ ಶಿರೋಮಣಿ ಒಂದೇ ಗೀತೆಯಾಗಿದೆ ಬಾಕಿ ಎಲ್ಲವೂ ಅದರ ಚಿಕ್ಕ ಮಕ್ಕಳಾಗಿದೆ. ಗೀತೆಯನ್ನು ಓದುವುದರಿಂದ ಏನನ್ನೂ ಸಹ ತಿಳಿದುಕೊಳ್ಳುವುದಿಲ್ಲ ಅಂದಾಗ ಶಾಸ್ತ್ರಗಳನ್ನು ಓದುವುದರಿಂದ ಲಾಭವೇನು?
ಆಸ್ತಿಯು ಅವಶ್ಯವಾಗಿ ಗೀತೆಯಿಂದ ಸಿಗುತ್ತದೆ.
ಈಗ ತಂದೆಯು ಇಡೀ ನಾಟಕದ ರಹಸ್ಯವನ್ನು ತಿಳಿಸುತ್ತಾರೆ.
ತಂದೆಯು ಕಲ್ಲುಬುದ್ಧಿಯವರಿಂದ ಚಿನ್ನದ ಬುದ್ಧಿಯವರನ್ನಾಗಿ ಮಾಡಿ ಪಾರಸನಾಥರನ್ನಾಗಿ ಮಾಡುತ್ತಾರೆ. ಈಗ ಎಲ್ಲರೂ ಕಲ್ಲುಬುದ್ಧಿಯವರು, ಕಲ್ಲಿನನಾಥರಾಗಿದ್ದಾರೆ ಆದರೆ ಅವರು ತಮಗೆ ದೊಡ್ಡ ದೊಡ್ಡ ಬಿರುದುಗಳನ್ನು ಕೊಟ್ಟುಕೊಂಡು ತಮ್ಮನ್ನು ಪಾರಸಬುದ್ಧಿಯವರೆಂದು ತಿಳಿದು ಕುಳಿತುಕೊಳ್ಳುತ್ತಾರೆ. ನನ್ನ ಮಹಿಮೆಯು ಎಲ್ಲರಿಗಿಂತ ಭಿನ್ನವಾಗಿದೆಯೆಂದು ತಂದೆಯು ಹೇಳುತ್ತಾರೆ.
ನಾನು ಜ್ಞಾನದ ಸಾಗರ, ಆನಂದದ ಸಾಗರ, ಸುಖದ ಸಾಗರನಾಗಿದ್ದೇನೆ. ಈ ರೀತಿಯ ಮಹಿಮೆಯನ್ನು ದೇವತೆಗಳಿಗೆ ಹೇಳಲು ಸಾಧ್ಯವಿಲ್ಲ. ಭಕ್ತರು ದೇವತೆಗಳ ಮುಂದೆ ಹೋಗಿ ತಾವು ಸರ್ವಗುಣ ಸಂಪನ್ನರೆಂದು ಹೇಳುತ್ತಾರೆ. ತಂದೆಯದು ಒಂದೇ ಮಹಿಮೆಯಾಗಿದೆ.
ಅದನ್ನು ನಾವು ತಿಳಿದುಕೊಂಡಿದ್ದೇವೆ. ಈಗ ಮಂದಿರಗಳಿಗೆ ಹೋದಾಗ ಇವರು ಪೂರ್ಣ
84 ಜನ್ಮಗಳನ್ನು ತೆಗೆದುಕೊಂಡಿದ್ದಾರೆನ್ನುವ ಜ್ಞಾನ ನಮ್ಮ ಬುದ್ಧಿಯಲ್ಲಿದೆ. ಎಷ್ಟೊಂದು ಖುಷಿಯಿದೆ.
ಮೊದಲು ಈ ಸಂಕಲ್ಪ ಬರುತ್ತಿತ್ತೆ?
ನಮಗೆ ಈ ರೀತಿ ಮಾಡುತ್ತಾರೆಂದು ಈಗ ನಿಮಗೆ ತಿಳಿದಿದೆ. ಬುದ್ಧಿಯಲ್ಲಿ ಬಹಳ ಪರಿವರ್ತನೆಯು ಬಂದಿದೆ. ಪರಸ್ಪರದಲ್ಲಿ ಬಹಳ ಮಧುರವಾಗಿರಿ ಎಂದು ತಂದೆಯು ತಿಳಿಸುತ್ತಾರೆ. ಉಪ್ಪು ನೀರಾಗಬೇಡಿ. ತಂದೆಯು ಎಂದೂ ಯಾರಿಗೂ ಕೋಪ ಮಾಡುವುದಿಲ್ಲ.
ಬಹಳ ಮಧುರರೂಪದಿಂದ ತಿಳಿಸಿಕೊಡುತ್ತಾರೆ. ಒಂದು ಸೆಕೆಂಡ್ ಪಾಸ್ ಆದರೂ ಅದು ನಾಟಕದ ಪಾತ್ರದಲ್ಲಿತ್ತೆಂದು ಹೇಳುತ್ತಾರೆ. ಅದರ ಚಿಂತನೆ ಏನು ಮಾಡಬೇಕು. ಇದೇ ರೀತಿ ತಮಗೆ ತಿಳಿಸಿಕೊಡಬೇಕು. ನೀವು ಈಶ್ವರೀಯ ಸಂತಾನರು ಕಡಿಮೆಯೇನು. ನಾವು ಈಶ್ವರೀಯ ಸಂತಾನರು ಅವಶ್ಯವಾಗಿ ಈಶ್ವರನ ಬಳಿ ಇರುತ್ತೇವೆಂದು ನಿಮಗೆ ತಿಳಿದಿದೆ.
ಈಶ್ವರನು ನಿರಾಕಾರನಾಗಿದ್ದಾನೆ ಅಂದಾಗ ಅವನ ಸಂತಾನರೂ ನಿರಾಕಾರರಾಗಿರುತ್ತಾರೆ. ಅದೇ ಸಂತಾನರು ಈಗ ಶರೀರವನ್ನು ತೆಗೆದುಕೊಂಡು ಪಾತ್ರ ಮಾಡುತ್ತಿದ್ದಾರೆ. ಸ್ವರ್ಗದಲ್ಲಿ ಮನುಷ್ಯರು ದೇವಿ-ದೇವತಾ ಧರ್ಮದವರಾಗಿದ್ದರು. ಒಂದುವೇಳೆ ಎಲ್ಲರ ಲೆಕ್ಕವನ್ನು ತೆಗೆದಾಗ ಎಷ್ಟೊಂದು ತಲೆಯನ್ನು ಕೆಡಿಸಿಕೊಳ್ಳಬೇಕು ಆದರೂ ನಂಬರ್ವಾರ್ ಸಮಯದನುಸಾರ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಮನುಷ್ಯರು ಮೊದಲು ನಾಯಿ, ಬೆಕ್ಕು ಹಾಗೆ ಜನ್ಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಯುತ್ತಿದ್ದರು. ಈಗ ಬುದ್ಧಿಯಲ್ಲಿ ರಾತ್ರಿ-ಹಗಲಿನ ವ್ಯತ್ಯಾಸ ಬಂದಿದೆ. ಇದೆಲ್ಲವೂ ಧಾರಣೆ ಮಾಡುವಂತಹ ಮಾತಾಗಿದೆ. ಈಗ
84 ಜನ್ಮಗಳನ್ನು ಪೂರ್ಣ ಮಾಡಿದಿರೆಂದು ಸರಳವಾಗಿ ತಿಳಿಸುತ್ತಾರೆ. ಈಗ ಇದು ಛೀ ಛೀ ಶರೀರವಾಗಿದೆ.
ಇದನ್ನು ಬಿಡಬೇಕು.
ಇದು ಎಲ್ಲರ ಜಡಜಡೀಭೂತ ಹಳೆಯ ಶರೀರವಾಗಿದೆ. ತಮೋಪ್ರಧಾನ ಶರೀರವಾಗಿದೆ. ಇದರಿಂದ ಮಮತೆಯನ್ನು ತೆಗೆದುಹಾಕಿ.
ಹಳೆಯ ಶರೀರವನ್ನು ನೆನಪು ಏಕೆ ಮಾಡಬೇಕು? ಈಗ ತಮ್ಮ ಹೊಸ ಶರೀರವನ್ನು ನೆನಪು ಮಾಡಿ. ಅದು ಸತ್ಯಯುಗದಲ್ಲಿ ಸಿಗುತ್ತದೆ ವಯಾ ಮುಕ್ತಿಧಾಮಕ್ಕೆ ಹೋಗಿ ಸತ್ಯಯುಗಕ್ಕೆ ಬರಬೇಕು. ನಾವು ಜೀವನ್ಮುಕ್ತಿಯಲ್ಲಿ ಹೋಗುತ್ತೇವೆ ಬೇರೆಲ್ಲರೂ ಮುಕ್ತಿಧಾಮಕ್ಕೆ ಹೋಗುತ್ತಾರೆ. ಆಹಾಕಾರದ ನಂತರ ಜಯಜಯಕಾರವಾಗುತ್ತದೆ. ಅಷ್ಟು ಜನರು ಸಾಯುತ್ತಾರೆ ಅದಕ್ಕೆ ನಿಮಿತ್ತರು ಕಾರಣರಾಗುತ್ತಾರೆ. ಪ್ರಕೃತಿವಿಕೋಪಗಳು ಬರುತ್ತವೆ.
ಕೇವಲ ಸಾಗರ ಮಾತ್ರ ಎಲ್ಲಾ ಖಂಡಗಳನ್ನು ವಿನಾಶ ಮಾಡುವುದಿಲ್ಲ. ಎಲ್ಲವೂ ವಿನಾಶವಾಗಲೇಬೇಕು. ಬಾಕಿ ಭಾರತ ಅವಿನಾಶಿ ಖಂಡವು ಉಳಿದುಕೊಳ್ಳುತ್ತದೆ ಏಕೆಂದರೆ ಶಿವತಂದೆಯ ಜನ್ಮಸ್ಥಳವಾಗಿದೆ. ಇದು ಎಲ್ಲದಕ್ಕಿಂತ ದೊಡ್ಡ ಸ್ಥಾನವಾಗಿದೆ. ತಂದೆಯು ಎಲ್ಲರ ಸದ್ಗತಿಯನ್ನು ಮಾಡುವವರೆಂದು ಎಲ್ಲಾ ಮನುಷ್ಯರಿಗೆ ತಿಳಿದಿಲ್ಲ.
ಅವರು ತಿಳಿದುಕೊಳ್ಳದೇ ಇರುವುದೂ ಸಹ ನಾಟಕದಲ್ಲಿ ನೊಂದಾವಣೆಯಾಗಿದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ,
ನೀವು ಏನನ್ನೂ ತಿಳಿದಿರಲಿಲ್ಲ, ನಾನು ನಿಮಗೆ ರಚೈತ ಮತ್ತು ರಚನೆ ಅಥವಾ ಮನುಷ್ಯಸೃಷ್ಟಿಯ ಆದಿ-ಮಧ್ಯ-ಅಂತ್ಯ ಇಡೀ ಭೇದವನ್ನು ತಿಳಿಸುತ್ತೇನೆ.
ಅದನ್ನು ಋಷಿ-ಮುನಿಗಳು ಬೇಅಂತ್ಯವಿಲ್ಲ,
ಅಂತ್ಯವಿಲ್ಲವೆಂದು ಹೇಳುತ್ತಾರೆ.
ಇಡೀ ಪ್ರಪಂಚದ
5 ವಿಕಾರ ಬಹಳ ದೊಡ್ಡ ಶತ್ರುವಾಗಿದ್ದಾನೆಂದು ಯಾರಿಗೂ ತಿಳಿದಿಲ್ಲ.
ಯಾವ ರಾವಣನನ್ನು ಭಾರತವಾಸಿಗಳು ವರ್ಷ ವರ್ಷ ಸುಟ್ಟುಹಾಕುತ್ತಾರೆ ಅವರು ಶಾರೀರಿಕವಾದ,
ಆತ್ಮೀಕವಾದ ತಂದೆಯನ್ನು ತಿಳಿದುಕೊಂಡಿಲ್ಲ. ವಿಕಾರಗಳದ್ದು ಯಾವುದೇ ರೂಪವಿಲ್ಲ.
ಈ ವಿಕಾರಗಳ ಸ್ಥಿತಿ ಉತ್ತಮ,
ಮಧ್ಯಮ, ಕನಿಷ್ಠವಾಗಿರುತ್ತದೆ. ಕೆಲವರಲ್ಲಿ ಕಾಮದ ನಶೆ ಒಂದೇ ಸಲ ತಮೋಪ್ರಧಾನವಾಗಿರುತ್ತದೆ, ಕೆಲವರಲ್ಲಿ ರಜೋವಿನ ನಶೆಯಿರುತ್ತದೆ,
ಕೆಲವರಲ್ಲಿ ಸತೋವಿನ ನಶೆಯಿರುತ್ತದೆ, ಕೆಲವರು ಬಾಲಬ್ರಹ್ಮಾಚಾರಿಗಳಾಗಿರುತ್ತಾರೆ. ಸಂಭಾಲನೆ ಮಾಡುವುದೂ ಸಹ ಒಂದು ಜಂಜಾಟವಾಗಿದೆಯೆಂದು ತಿಳಿದುಕೊಳ್ಳುತ್ತಾರೆ. ಸನ್ಯಾಸಿಗಳಲ್ಲಿ ಬಾಲಬ್ರಹ್ಮಾಚಾರಿಗಳು ಒಳ್ಳೆಯವರೆಂದು ಹೇಳುತ್ತಾರೆ. ಸರ್ಕಾರದವರಿಗೂ ಒಳ್ಳೆಯದು ಏಕೆಂದರೆ ಮಕ್ಕಳ ವೃದ್ಧಿಯಾಗುವುದಿಲ್ಲ. ಪವಿತ್ರತೆಯ ಶಕ್ತಿಯು ಸಿಗುತ್ತದೆ ಎನ್ನುವುದು ಗುಪ್ತವಾಗಿದೆ. ಸನ್ಯಾಸಿಗಳೂ ಪವಿತ್ರವಾಗಿರುತ್ತಾರೆ, ಚಿಕ್ಕ ಮಕ್ಕಳೂ ಪವಿತ್ರವಾಗಿರುತ್ತಾರೆ, ವಾನಪ್ರಸ್ಥಿಗಳೂ ಪವಿತ್ರವಾಗಿರುತ್ತಾರೆ ಅಂದಾಗ ಪವಿತ್ರತೆಯ ಬಲ ಸಿಗುತ್ತಿರುತ್ತದೆ. ಮಕ್ಕಳು ಇಷ್ಟು ಆಯಸ್ಸಿನವರೆಗೆ ಪವಿತ್ರರಾಗಿರಬೇಕೆಂದು ನಿಯಮವಿದೆ ಅದರಿಂದ ಬಲವು ಸಿಗುತ್ತದೆ.
ನೀವು ಸತೋಪ್ರಧಾನ ಪವಿತ್ರವಾಗಿದ್ದೀರಿ. ಈ ಅಂತಿಮ ಜನ್ಮದಲ್ಲಿ ನೀವು ತಂದೆಯ ಜೊತೆ ಪ್ರತಿಜ್ಞೆ ಮಾಡಿರಿ. ನೀವು ಸತ್ಯಯುಗದ ಸ್ಥಾಪನೆಯನ್ನು ಮಾಡುವವರಾಗಿದ್ದೀರಿ ಯಾರು ಮಾಡುತ್ತೀರಿ ಅವರು ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಅದು ನಂಬರ್ವಾರ್ ಪುರುಷಾರ್ಥದ ಅನುಸಾರವಾಗಿದೆ.
ಇದು ಈಶ್ವರೀಯ ಕುಟುಂಬವಾಗಿದೆ. ಈಶ್ವರನ ಜೊತೆ ನಾವು ಕಲ್ಪದಲ್ಲಿ ಒಂದು ಬಾರಿ ಮಾತ್ರ ಇರುತ್ತೇವೆ ನಂತರ ದೈವೀ ಮನೆತನದಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತೇವೆ. ಈ ಒಂದು ಜನ್ಮ ದುರ್ಲಭವಾಗಿದೆ.
ಈ ಈಶ್ವರೀಯ ಕುಲ ಉತ್ತಮವಾಗಿದೆ,
ಬ್ರಾಹ್ಮಣಕುಲ ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಕೆಳಮಟ್ಟದ ಕುಲದಿಂದ ನಾವು ಶ್ರೇಷ್ಠ ಬ್ರಾಹ್ಮಣಕುಲದವರಾಗಿದ್ದೇವೆ, ಯಾವಾಗ ಶಿವತಂದೆಯು ಬ್ರಹ್ಮನನ್ನು ರಚನೆ ಮಾಡುತ್ತಾರೋ ಆಗ ಬ್ರಾಹ್ಮಣರನ್ನು ರಚನೆ ಮಾಡುತ್ತಾರೆ.
ಎಷ್ಟೊಂದು ಖುಷಿಯಿರಬೇಕು.
ನಾವು ತಂದೆಯ ಸರ್ವೀಸಿನಲ್ಲಿದ್ದೇವೆ. ನಾವು ಈಶ್ವರನ ಸಂತಾನರಾಗಿದ್ದೇವೆ ಮತ್ತು ಈಶ್ವರನ ಶ್ರೀಮತದಂತೆ ನಡೆಯುತ್ತೇವೆ.
ತಮ್ಮ ನಡತೆಯಿಂದ ಅವರ ಹೆಸರನ್ನು ಪ್ರಸಿದ್ಧಿ ಮಾಡಬೇಕು.
ಅವರು ಅಸುರೀ ಗುಣವುಳ್ಳಂತಹವರು, ನೀವು ದೈವೀಗುಣವುಳ್ಳಂತಹವರಾಗಿದ್ದೀರೆಂದು ತಂದೆಯು ಹೇಳುತ್ತಾರೆ. ಯಾವಾಗ ನೀವು ಸಂಪೂರ್ಣರಾಗುತ್ತೀರೋ ಆಗ ನಿಮ್ಮ ನಡುವಳಿಕೆ ಬಹಳ ಚೆನ್ನಾಗಿರುತ್ತದೆ. ದೈವೀಗುಣವು ನಂಬರ್ವಾರ್ ಅನುಸಾರವಿರುತ್ತದೆ, ಅಸುರೀಗುಣವುಳ್ಳಂತಹವರು ನಂಬರ್ವಾರ್ ಆಗಿದ್ದಾರೆ. ಬಾಲಬ್ರಹ್ಮಾಚಾರಿಗಳೂ ಇದ್ದಾರೆ, ಸನ್ಯಾಸಿಗಳು ಪವಿತ್ರರಾಗಿ ಬಹಳ ಚೆನ್ನಾಗಿರುತ್ತಾರೆ. ಬಾಕಿ ಅವರು ಯಾರಿಗೂ ಸದ್ಗತಿಯನ್ನು ಮಾಡುವುದಿಲ್ಲ.
ಒಂದುವೇಳೆ ಯಾರಾದರೂ ಗುರುಗಳು ಸದ್ಗತಿಯನ್ನು ಮಾಡಿದರೆ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ ಆದರೆ ಸ್ವಯಂ ಬಿಟ್ಟು ಹೊರಟು ಹೋಗುತ್ತಾರೆ. ಇಲ್ಲಿ ತಂದೆಯು ನಿಮ್ಮನ್ನ ನನ್ನ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆಂದು ತಂದೆಯು ಹೇಳುತ್ತಾರೆ.
ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವುದಕ್ಕೋಸ್ಕರ ನಾನು ಬಂದಿದ್ದೇನೆ ಆದರೆ ಅವರು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಗೃಹಸ್ಥಿಗಳ ಬಳಿ ಸ್ವಯಂ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಸಂಸ್ಕಾರದ ಕಾರಣ ಸನ್ಯಾಸಿಗಳ ಗುಂಪಿನಲ್ಲಿ ಬರುತ್ತಾರೆ. ನಾಮ,
ರೂಪ ಪ್ರತಿಯೊಂದು ಜನ್ಮದಲ್ಲಿ ಬದಲಾಗುತ್ತದೆ.
ಸತ್ಯಯುಗದಲ್ಲಿ ಇಲ್ಲಿಯ ಪುರುಷಾರ್ಥದ ಅನುಸಾರ ಜನ್ಮವು ಸಿಗುತ್ತದೆ.
ನಾವು ಈ ಪದವಿಯನ್ನು ಹೇಗೆ ಪಡೆದುಕೊಂಡೆವೆಂದು ಅಲ್ಲಿ ನಮಗೆ ತಿಳಿಯುವುದಿಲ್ಲ. ಯಾರು ಕಲ್ಪದ ಮೊದಲು ಪುರುಷಾರ್ಥಿಗಳಾಗಿದ್ದರೋ ಅವರೇ ಈಗಲೂ ಆಗುತ್ತಾರೆ.
ಅಲ್ಲಿ ಮದುವೆ ಹೇಗಾಗುತ್ತದೆ ಎಂದು ಮಕ್ಕಳಿಗೆ ಸಾಕ್ಷಾತ್ಕಾರ ಮಾಡಿಸಿದ್ದಾರೆ. ದೊಡ್ಡ ದೊಡ್ಡ ಮೈದಾನವಿರುತ್ತದೆ. ತೋಟ ಮುಂತಾದುವುಗಳಿರುತ್ತವೆ. ಈಗ ಭಾರತದಲ್ಲಿ ಯೇ ಕೋಟ್ಯಾಂತರ ಜನರಿದ್ದಾರೆ. ಅಲ್ಲಿ ಕೇವಲ ಸ್ವಲ್ಪ ಲಕ್ಷವಿರುತ್ತಾರೆ, ಅಲ್ಲಿ ಇಷ್ಟೊಂದು ಅಂತಸ್ತಿನ ಮನೆಯಿರುವುದಿಲ್ಲ ಆದರೆ ಇಲ್ಲಿದೆ ಏಕೆಂದರೆ ಜಾಗವಿಲ್ಲ. ಅಲ್ಲಿ ಬಹಳ ಬಿಸಿಲಿರುವುದಿಲ್ಲ, ಅಲ್ಲಿ ದುಃಖದ ಚಿಹ್ನೆಯಿರುವುದಿಲ್ಲ, ಅಲ್ಲಿ ಬೆಟ್ಟಗಳ ಮೇಲೆ ಹೋಗುವಷ್ಟು ಬಿಸಿಲಿರುವುದಿಲ್ಲ, ಸ್ವರ್ಗವೆಂದು ಹೆಸರಾಗಿದೆ.
ಈ ಸಮಯದಲ್ಲಿ ಮನುಷ್ಯರು ಮುಳ್ಳಿನ ಕಾಡಿನಲ್ಲಿದ್ದಾರೆ. ಎಷ್ಟು ಸುಖವನ್ನು ಇಷ್ಟಪಡುತ್ತಾರೆ ಅಷ್ಟು ದುಃಖವು ವೃದ್ಧಿಯಾಗುತ್ತದೆ. ಈಗ ಬಹಳ ದುಃಖವಿದೆ.
ಯುದ್ಧವಾದರೆ ರಕ್ತದ ನದಿಗಳು ಹರಿಯುತ್ತವೆ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.
ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ತಮ್ಮ ನಡವಳಿಕೆ ಮತ್ತು ದೈವೀಗುಣಗಳಿಂದ ತಂದೆಯ ಹೆಸರನ್ನು ಪ್ರಸಿದ್ಧಿ ಮಾಡಬೇಕಾಗಿದೆ.
ಅಸುರೀ ಅವಗುಣಗಳನ್ನು ತೆಗೆದುಹಾಕಬೇಕಾಗಿದೆ.
2.
ಈ ಹಳೆಯ ಜಡಜಡೀಭೂತ ಶರೀರದ ಮೇಲೆ ಅವಶ್ಯವಾಗಿ ಮಮತೆಯನ್ನು ಇಟ್ಟುಕೊಳ್ಳಬಾರದಾಗಿದೆ. ಹೊಸ ಸತ್ಯಯುಗೀ ಶರೀರವನ್ನು ನೆನಪು ಮಾಡಬೇಕಾಗಿದೆ. ಪವಿತ್ರತೆಯ ಗುಪ್ತ ಸಹಯೋಗವನ್ನು ಕೊಡಬೇಕಾಗಿದೆ.
ವರದಾನ:
ಆತ್ಮೀಯತೆಯ ಶಕ್ತಿಯ
ಮುಖಾಂತರ ದೂರವಿರುವಂತಹ
ಆತ್ಮಗಳಿಗೆ ಸಮೀಪತೆಯ
ಅನುಭವ ಮಾಡಿಸುವಂತಹ
ಮಾಸ್ಟರ್ ಸರ್ವ
ಶಕ್ತಿವಾನ್ ಭವ
ಹೇಗೆ ವಿಜ್ಞಾನದ ಸಾಧನಗಳ ಮುಖಾಂತರ ದೂರವಿರುವ ಪ್ರತಿ ವಸ್ತು ಸಮೀಪತೆಯ ಅನುಭವ ವಾಗುವುದು, ಅದೇರೀತಿ ದಿವ್ಯ ಬುದ್ಧಿಯ ಮುಖಾಂತರ ದೂರದ ವಸ್ತು ಸಮೀಪದ ಅನುಭವ ಮಾಡಲು ಸಾಧ್ಯ. ಹೇಗೆ ಜೊತೆಯಲ್ಲಿರುವ ಆತ್ಮಗಳನ್ನು ಸ್ಪಷ್ಟವಾಗಿ ನೋಡುವಿರಿ, ಮಾತನಾಡುವಿರಿ,
ಸಹಯೋಗ ಕೊಡುವಿರಿ ಹಾಗೂ ತೆಗೆದುಕೊಳ್ಳುವಿರಿ, ಅದೇ ರೀತಿ ಆತ್ಮೀಯತೆಯ ಶಕ್ತಿಯ ಮುಖಾಂತರ ದೂರವಿರುವಂತಹ ಆತ್ಮಗಳಿಗೆ ಸಮೀಪತೆಯ ಅನುಭವ ಮಾಡಲು ಸಾಧ್ಯ. ಅದಕ್ಕಾಗಿ ಕೇವಲ ಮಾಸ್ಟರ್ ಸರ್ವಶಕ್ತಿವಾನ್, ಸಂಪನ್ನ ಮತ್ತು ಸಂಪೂರ್ಣ ಸ್ಥಿತಿಯಲ್ಲಿ
ಸ್ಥಿತರಾಗಿರಿ ಮತ್ತು ಸಂಕಲ್ಪ ಶಕ್ತಿಯನ್ನು ಸ್ವಚ್ಛ ಮಾಡಿಕೊಳ್ಳಿ.
ಸ್ಲೋಗನ್:
ನಿಮ್ಮ ಪ್ರತಿ ಸಂಕಲ್ಪ, ಮಾತು ಮತ್ತು ಕರ್ಮದ ಮುಖಾಂತರ ಬೇರೆಯವರಿಗೆ ಪ್ರೇರಣೆ ಕೊಡುವಂತಹವರು ಪ್ರೇರಣಾ ಮೂರ್ತಿಯಾಗಳಾಗಿರುವರು.
0 Comments