Header Ads Widget

Header Ads

KANNADA MURLI 09.01.23

 

09/01/23  ಪ್ರಾತಃಮುರುಳಿ ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ಮರುಜೀವಿಗಳಾದಾಗ ಎಲ್ಲವನ್ನು ಮರೆತುಹೋಗಿ, ಒಬ್ಬ ತಂದೆ ಯಾವುದನ್ನು ತಿಳಿಸುತ್ತಾರೋ ಅದನ್ನೇ ಕೇಳಿ ಮತ್ತು ತಂದೆಯನ್ನು ನೆನಪು ಮಾಡಿ, ನಿಮ್ಮ ಜೊತೆ ಕುಳಿತುಕೊಳ್ಳುತ್ತೇನೆ

ಪ್ರಶ್ನೆ:

ಸದ್ಗತಿದಾತ ತಂದೆಯು ಮಕ್ಕಳ ಸದ್ಗತಿಗೋಸ್ಕರ ಯಾವ ಒಂದು ಶಿಕ್ಷಣವನ್ನು ಕೊಡುತ್ತಾರೆ?

ಉತ್ತರ:

ಮಕ್ಕಳೇ, ಸದ್ಗತಿಯಲ್ಲಿ ಹೋಗುವುದಕ್ಕೋಸ್ಕರ ಅಶರೀರಿಗಳಾಗಿ ತಂದೆ ಮತ್ತು ಚಕ್ರವನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಯೋಗದಿಂದ ನೀವು ಸದಾ ಆರೋಗ್ಯವಂತರು, ನಿರೋಗಿಗಳಾಗುತ್ತೀರಿ ನಂತರ ನಿಮಗೆ ಯಾವುದೇ ಕರ್ಮ ತಿನ್ನುವುದಿಲ್ಲ.

ಪ್ರಶ್ನೆ:

ಯಾರ ಭಾಗ್ಯದಲ್ಲಿ ಸ್ವರ್ಗದ ಸುಖವಿಲ್ಲವೋ ಅವರ ಚಿಹ್ನೆಯಾಗಿದೆ?

ಉತ್ತರ:

ಅವರು ಜ್ಞಾನ ಕೇಳುವುದಕ್ಕೋಸ್ಕರ ನಮ್ಮ ಬಳಿ ಪುರುಸೊತ್ತಿಲ್ಲವೆಂದು ಹೇಳುತ್ತಾರೆ. ಅವರು ಎಂದೂ ಬ್ರಾಹ್ಮಣಕುಲದ ದೀಪಗಳಾಗುವುದಿಲ್ಲ. ಭಗವಂತ ಯಾವುದಾದರೂ ರೂಪದಲ್ಲಿ ಎಂದಾದರೂ ಬರುತ್ತಾರೆಂದು ಅವರಿಗೆ ತಿಳಿದಿಲ್ಲ.

ಗೀತೆ:  ನಿಮ್ಮನ್ನು ಕರೆಯಲು ನಮ್ಮ ಮನಸ್ಸು ಇಷ್ಟಪಡುತ್ತದೆ........

ಓಂ ಶಾಂತಿ. ಭಗವಂತ ಕುಳಿತು ಭಕ್ತರಿಗೆ ತಿಳಿಸುತ್ತಾರೆ. ಭಕ್ತರೆಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ಎಲ್ಲರೂ ಭಕ್ತರಾಗಿದ್ದಾರೆ ತಂದೆಯು ಒಬ್ಬರೇ ಆಗಿದ್ದಾರೆ ಅಂದಾಗ ಒಂದು ಜನ್ಮವಾದರೂ ತಂದೆಯ ಜೊತೆಯಿದ್ದು ನೋಡಬೇಕೆಂದು ಮಕ್ಕಳಿಗೆ ಇಷ್ಟವಾಗುತ್ತದೆ. ದೇವತೆಗಳ ಜೊತೆಯೂ ಬಹಳ ಜನ್ಮಗಳು ಕಳೆದಿದ್ದೇವೆ. ಅಸುರೀ ಸಂಪ್ರದಾಯದವರ ಜೊತೆಯೂ ಸಹ ಬಹಳ ಜನ್ಮಗಳನ್ನು ಕಳೆದಿದ್ದೇವೆ. ಈಗ ಭಕ್ತರ ಮನಸ್ಸಿನಲ್ಲಿ ಒಂದು ಜನ್ಮದಲ್ಲಿ ಭಗವಂತನ ಜೊತೆಯಿರಬೇಕೆಂದು ಯೋಚಿಸುತ್ತಾರೆ. ಆದರೆ ಈಗ ನೀವು ಭಗವಂತನ ಮಕ್ಕಳಾಗಿದ್ದೀರಿ, ಮರುಜೀವಿಗಳಾದಾಗ ಭಗವಂತನ ಜೊತೆಯಿರುತ್ತೀರಿ. ಇದು ಅಮೂಲ್ಯವಾದ ಅಂತಿಮ ಜನ್ಮವಾಗಿದೆ. ಇದರಲ್ಲಿ ನೀವು ಪರಮಪಿತ ಪರಮಾತ್ಮನ ಜೊತೆ ಇರುತ್ತೀರಿ. ನಿಮ್ಮ ಜೊತೆ ಊಟವನ್ನು ಮಾಡುತ್ತೇನೆ, ನಿಮ್ಮ ಜೊತೆ ಕುಳಿತುಕೊಳ್ಳುತ್ತೇನೆ, ನಿಮ್ಮಿಂದಲೇ ಕೇಳುತ್ತೇನೆಂದು ಗಾಯನ ಮಾಡುತ್ತಾರೆ. ಯಾರು ಮರುಜೀವಿಗಳಾಗಿರುತ್ತಾರೋ ಅವರಿಗೋಸ್ಕರ ಜನ್ಮದಲ್ಲಿ ಜೊತೆಯಲ್ಲಿರುತ್ತೇನೆ. ಇದು ಶ್ರೇಷ್ಠಾತಿ ಶ್ರೇಷ್ಠ ಜನ್ಮವಾಗಿದೆ. ತಂದೆಯು ಒಂದೇ ಸಾರಿ ಬರುತ್ತಾರೆ ಮತ್ತೆಂದೂ ಬರುವುದಿಲ್ಲ. ಒಂದೇ ಬಾರಿ ಬಂದು ಮಕ್ಕಳ ಸರ್ವಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಭಕ್ತಿಮಾರ್ಗದಲ್ಲಿ ಬಹಳಷ್ಟು ಬೇಡುತ್ತಾರೆ. ಸಾಧು-ಸಂತ, ಮಹಾತ್ಮರ, ದೇವಿ-ದೇವತೆ ಮುಂತಾದವರಿಂದ ಅರ್ಧಕಲ್ಪದಿಂದ ಬೇಡುತ್ತಿದ್ದಾರೆ ಮತ್ತು ಜಪ-ತಪ ಮುಂತಾದವನ್ನು ಜನ್ಮ-ಜನ್ಮದಿಂದಲೂ ಮಾಡುತ್ತಲೇ ಬಂದಿದ್ದಾರೆ. ಎಷ್ಟೊಂದು ಶಾಸ್ತ್ರವನ್ನು ಓದುತ್ತಾರೆ. ಅನೇಕಾನೇಕ ಶಾಸ್ತ್ರ ಪುಸ್ತಕ ಮುಂತಾದವನ್ನು ಮಾಡುತ್ತಾರೆ ಸುಸ್ತಾಗುವುದಿಲ್ಲ. ಇದರಿಂದ ಭಗವಂತ ಸಿಗುತ್ತಾರೆಂದು ತಿಳಿದುಕೊಳ್ಳುತ್ತಾರೆ ಆದರೆ ನೀವು ಜನ್ಮ-ಜನ್ಮಾಂತರದಿಂದ ಏನೆಲ್ಲಾ ಓದಿದ್ದೀರಿ ಮತ್ತು ಈಗ ಏನೆಲ್ಲಾ ಶಾಸ್ತ್ರ ಮುಂತಾದವನ್ನು ಓದುತ್ತೀರಿ ಇದರಿಂದ ಯಾರೂ ನನ್ನನ್ನು ಪಡೆದುಕೊಳ್ಳಲು ಸಾಧ್ಯವಿಲ್ಲವೆಂದು ತಂದೆಯು ಹೇಳುತ್ತಾರೆ. ಬಹಳ ಪುಸ್ತಕ ಮುಂತಾದವನ್ನು ಓದುತ್ತಾರೆ. ಕ್ರಿಶ್ಚಿಯನ್ನರೂ ಸಹ ಎಷ್ಟೊಂದು ಓದುತ್ತಾರೆ. ಅನೇಕ ಭಾಷೆಗಳಲ್ಲಿ ಬಹಳ ಬರೆಯುತ್ತಾರೆ. ಮನುಷ್ಯರು ಓದುತ್ತಲೇ ಇರುತ್ತಾರೆ. ಏನೆಲ್ಲಾ ಓದಿದ್ದೀರಿ ಅದೆಲ್ಲವನ್ನೂ ಮರೆತುಬಿಡಿ ಅಥವಾ ಬುದ್ಧಿಯಿಂದ ತೆಗೆದುಹಾಕಿ ಎಂದು ತಂದೆಯು ಹೇಳುತ್ತಾರೆ. ಬಹಳ ಪುಸ್ತಕಗಳನ್ನು ಓದುತ್ತಾರೆ. ಇಂತಹವರು ಭಗವಂತನಾಗಿದ್ದಾರೆ, ಇಂತಹವರು ಅವತಾರವಾಗಿದ್ದಾರೆಂದು ಪುಸ್ತಕಗಳಲ್ಲಿದೆ. ನಾನು ಸ್ವಯಂ ಬಂದಿದ್ದೇನೆಂದು ತಂದೆಯು ಸ್ವಯಂ ಹೇಳುತ್ತಾರೆ ಅಂದಾಗ ಯಾರು ನನ್ನ ಮಕ್ಕಳಾಗುತ್ತಾರೋ ಅವರಿಗೆ ಎಲ್ಲವನ್ನೂ ಮರೆತುಬಿಡಿ ಎಂದು ಹೇಳುತ್ತೇನೆ. ಇಡೀ ಪ್ರಪಂಚದವರ ಮತ್ತು ನಿಮ್ಮ ಬುದ್ಧಿಯಲ್ಲಿ ಯಾವ ಮಾತಿರಲಿಲ್ಲವೋ ಅದನ್ನು ಈಗ ನಾನು ನಿಮಗೆ ತಿಳಿಸುತ್ತಿದ್ದೇನೆ. ಈಗ ಅವಶ್ಯವಾಗಿ ತಂದೆಯು ಏನನ್ನು ತಿಳಿಸುತ್ತಾರೋ ಅದು ಯಾವುದೇ ಶಾಸ್ತ್ರ ಮುಂತಾದುವುಗಳಲ್ಲಿಲ್ಲವೆಂದು ಮಕ್ಕಳಿಗೆ ತಿಳಿಸುತ್ತಾರೆ. ಈಗ ತಂದೆಯು ಬಹಳ ಗುಹ್ಯ ಮತ್ತು ರಮಣೀಕ ಮಾತುಗಳನ್ನು ತಿಳಿಸುತ್ತಾರೆ. ಡ್ರಾಮಾದ ಆದಿ-ಮಧ್ಯ-ಅಂತ್ಯ, ರಚೈತ ಮತ್ತು ರಚನೆಯ ಇಡೀ ಸಮಾಚಾರವನ್ನು ನಾನು ನಿಮಗೆ ತಿಳಿಸುತ್ತೇನೆ. ಒಳ್ಳೆಯದು.

ಹೆಚ್ಚಾಗಿ ಇಲ್ಲದಿದ್ದರೂ ಸಹ ಕೇವಲ ಮನ್ಮನಾಭವ, ಮದ್ಯಾಜೀಭವ. ಎನ್ನುವ ಎರಡು ಅಕ್ಷರವನ್ನು ನೆನಪು ಮಾಡಿರಿ. ಅಕ್ಷರ ಭಕ್ತಿಮಾರ್ಗದ ಗೀತೆಯದ್ದಾಗಿದೆ ಆದರೆ ತಂದೆಯು ಇದರ ಅರ್ಥವನ್ನು ಚೆನ್ನಾಗಿ ತಿಳಿಸಿದ್ದಾರೆ. ಭಗವಂತನೇ ಸಹಜ ರಾಜಯೋಗವನ್ನು ಕಲಿಸಿದ್ದಾರೆ. ಕೇವಲ ನನ್ನೊಬ್ಬ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಭಕ್ತಿಯಲ್ಲಿ ಬಹಳ ನೆನಪು ಮಾಡುತ್ತಿದ್ದೆವು. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ ಆದರೆ ಏನನ್ನೂ ಸಹ ತಿಳಿದುಕೊಳ್ಳಲಿಲ್ಲವೆಂದು ಗಾಯನ ಮಾಡುತ್ತಾರೆ. ಸತ್ಯಯುಗ, ತ್ರೇತಾದಲ್ಲಿ ಸುಖದ ಪ್ರಪಂಚವಿದ್ದಾಗ ಅವಶ್ಯವಾಗಿ ಏನನ್ನು ನೆನಪು ಮಾಡುತ್ತೇವೆ? ಈಗ ಮಾಯೆಯ ರಾಜ್ಯದಲ್ಲಿ ದುಃಖವಿದ್ದಾಗ ತಂದೆಯನ್ನು ನೆನಪು ಮಾಡಬೇಕಾಗುತ್ತದೆ ಮತ್ತು ಸತ್ಯಯುಗದಲ್ಲಿ ಅಪಾರವಾದ ಸುಖದ ನೆನಪು ಬರುತ್ತದೆ. ಸುಖದ ಪ್ರಪಂಚದಲ್ಲಿ ಯಾರು ತಂದೆಯಿಂದ ಸಂಗಮಯುಗದಲ್ಲಿ ರಾಜಯೋಗ ಮತ್ತು ಜ್ಞಾನವನ್ನು ಕಲಿತಿದ್ದರು ಅವರೇ ಇದ್ದರು. ಹೇಗೆ ಅವಿಧ್ಯಾವಂತರಾಗಿದ್ದಾರೆಂದು ನೋಡಿ. ಅವರಿಗೋಸ್ಕರ ಇನ್ನೂ ಒಳ್ಳೆಯದೇ ಏಕೆಂದರೆ ಅವರ ಬುದ್ಧಿಯು ಎಲ್ಲೂ ಹೋಗುವುದಿಲ್ಲ. ಇಲ್ಲಿ ಕೇವಲ ಸುಮ್ಮನಿರಬೇಕು. ಮುಖದಿಂದ ಏನನ್ನೂ ಸಹ ಹೇಳಬಾರದು. ಕೇವಲ ತಂದೆಯನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗುತ್ತದೆ ನಂತರ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಮಾತು ಒಂದಲ್ಲ ಒಂದು ಗೀತೆಯಲ್ಲಿದೆ. ಪ್ರಾಚೀನ ಭಾರತದ ಧರ್ಮಶಾಸ್ತ್ರವು ಒಂದೇ ಆಗಿದೆ. ಇದೇ ಭಾರತ ಹೊಸದಾಗಿತ್ತು ಈಗ ಹಳೆಯದಾಗಿದೆ. ಶಾಸ್ತ್ರವು ಒಂದೇ ಇರುತ್ತದೆ. ಹೇಗೆ ಬೈಬಲ್ ಒಂದೇ ಇದೆ ಯಾವಾಗ ಕ್ರಿಶ್ಚಿಯನ್ ಧರ್ಮವು ಸ್ಥಾಪನೆಯಾಯಿತು ಆಗ ಅಂತಿಮದತನಕ ಅದೊಂದೇ ಶಾಸ್ತ್ರವಿರುತ್ತದೆ. ಕ್ರಿಸ್ತನದ್ದೂ ಬಹಳ ಮಹಿಮೆಯನ್ನು ಮಾಡುತ್ತಾರೆ. ಅವನು ಶಾಂತಿಯನ್ನು ಸ್ಥಾಪನೆ ಮಾಡಿದನೆಂದು ಹೇಳುತ್ತಾರೆ. ಈಗ ಅವನು ಬಂದು ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪನೆ ಮಾಡಿದ, ಅದರಲ್ಲಿ ಶಾಂತಿಯ ಮಾತಿರಲಿಲ್ಲ. ಏನು ಬರುತ್ತದೆಯೋ ಅದರ ಮಹಿಮೆಯನ್ನು ಮಾಡುತ್ತಾರೆ ಏಕೆಂದರೆ ತಮ್ಮ ಮಹಿಮೆಯನ್ನು ಮರೆತಿದ್ದಾರೆ. ಬುದ್ಧ, ಕ್ರಿಶ್ಚಿಯನ್ ಮುಂತಾದವರು ತಮ್ಮ ಧರ್ಮವನ್ನು ಬಿಟ್ಟು ಅನ್ಯರ ಮಹಿಮೆ ಮಾಡುವುದಿಲ್ಲ. ಭಾರತವಾಸಿಗಳ ಧರ್ಮವಿಲ್ಲ. ನಾಟಕದಲ್ಲಿ ನೊಂದಾವಣೆಯಾಗಿದೆ. ಯಾವಾಗ ನಾಸ್ತಿಕರಾಗುತ್ತೇವೆಯೋ ಆಗ ತಂದೆಯು ಬರುತ್ತಾರೆ.

ಮಕ್ಕಳು ಶಾಲೆ ಮುಂತಾದುವುಗಳಲ್ಲಿ ಯಾವ ಪುಸ್ತಕವನ್ನು ಓದಿದ್ದೀರಿ ಅದರಲ್ಲಿ ಕೇವಲ ಗುರಿ, ಉದ್ದೇಶವಿದೆಯೆಂದು ತಂದೆಯು ತಿಳಿಸುತ್ತಾರೆ, ಲಾಭವಿದೆ, ಸಂಪಾದನೆಯಾಗುತ್ತದೆ, ಪದವಿ ಸಿಗುತ್ತದೆ ಬಾಕಿ ಶಾಸ್ತ್ರ ಇತ್ಯಾದಿ ಯಾವುದನ್ನು ಓದುತ್ತಾರೋ ಅದನ್ನು ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. ವಿದ್ಯೆಗೆ ಎಂದೂ ಸಹ ಅಂಧಶ್ರದ್ಧೆ ಎಂದು ಹೇಳಲಾಗುವುದಿಲ್ಲ. ಅಂಧಶ್ರದ್ಧೆಯಿಂದ ಓದುತ್ತಾರೆಂದಲ್ಲ. ವಿದ್ಯೆಯಿಂದ ವಕೀಲರು, ಇಂಜಿನಿಯರ್ ಇತ್ಯಾದಿಗಳಾಗುತ್ತಾರೆ, ಅದಕ್ಕೆ ಅಂಧಶ್ರದ್ಧೆಯೆಂದು ಹೇಗೆ ಹೇಳಲಾಗುತ್ತದೆ. ಇದು ಪಾಠಶಾಲೆಯಾಗಿದೆ, ಇದು ಯಾವುದೇ ಸತ್ಸಂಗವಲ್ಲ. ಈಶ್ವರೀಯ ವಿಶ್ವವಿದ್ಯಾಲಯವೆಂದು ಬರೆಯಲಾಗಿದೆ ಅಂದಾಗ ಅವಶ್ಯವಾಗಿ ಈಶ್ವರನ ಬಹಳ ದೊಡ್ಡ ಈಶ್ವರೀಯ ವಿಶ್ವವಿದ್ಯಾಲಯವಿದೆ ಎಂದು ತಿಳಿದುಕೊಳ್ಳಬಹುದು. ಇದು ವಿಶ್ವಕ್ಕೋಸ್ಕರವಾಗಿದೆ. ಎಲ್ಲರಿಗೂ ದೇಹಸಹಿತ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮ ಸ್ವಧರ್ಮದಲ್ಲಿ ಸ್ಥಿತರಾಗಿ ತಮ್ಮ ತಂದೆಯನ್ನು ನೆನಪು ಮಾಡಿದಾಗ ಅಂತಿಮ ಮತಿ ಸೋ ಗತಿ ಸಿಗುತ್ತದೆಯೆಂದು ಸಂದೇಶವನ್ನು ಕೊಡಬೇಕು. ತಮ್ಮ ಚಾರ್ಟನ್ನು ಬರೆಯಬೇಕು, ನಾವು ಎಷ್ಟು ಸಮಯ ಯೋಗ ಮಾಡಿದೆವು, ಪ್ರತಿಯೊಬ್ಬರು ಪ್ರತಿನಿತ್ಯ ಚಾರ್ಟನ್ನು ಬರೆಯುತ್ತಾರೆಂದಲ್ಲ. ಸುಸ್ತಾಗುತ್ತಾರೆ. ವಾಸ್ತವದಲ್ಲಿ ಏನು ಮಾಡಬೇಕು? ಪ್ರತಿನಿತ್ಯ ತಮ್ಮ ಮುಖವನ್ನು ದರ್ಪಣದಲ್ಲಿ ನೋಡಿಕೊಳ್ಳಬೇಕು. ಆಗ ನಾನು ಲಕ್ಷ್ಮಿಯನ್ನು ಹಾಗೂ ಸೀತೆಯನ್ನು ವರಿಸಲು ಯೋಗ್ಯನಾಗಿದ್ದೇನೆಯೇ ಅಥವಾ ಪ್ರಜೆಯಲ್ಲಿ ಹೋಗುತ್ತೇನೆಯೇ ಎಂದು ತಿಳಿಯುತ್ತದೆ. ಪುರುಷಾರ್ಥ ತೀವ್ರ ಮಾಡುವುದಕ್ಕೋಸ್ಕರ ಚಾರ್ಟನ್ನು ಬರೆಯಲು ಹೇಳಲಾಗುತ್ತದೆ ಮತ್ತು ನಾವು ಎಷ್ಟು ಸಮಯ ಶಿವತಂದೆಯನ್ನು ನೆನಪು ಮಾಡಿದ್ದೇವೆಂದು ನೋಡಿಕೊಳ್ಳಬೇಕು. ಇಡೀ ದಿನಚರಿಯು ನಿಮ್ಮ ಎದುರಿಗೆ ಬರುತ್ತದೆ. ಹೇಗೆ ಬಾಲ್ಯತನದಿಂದ ಹಿಡಿದು ಇಡೀ ಆಯಸ್ಸಿನ ಜೀವನ ನೆನಪಿಗೆ ಬರುತ್ತದೆಯಲ್ಲವೇ! ಅಂದಾಗ ಒಂದು ದಿನವೂ ನೆನಪು ಬರುವುದಿಲ್ಲವೆ. ನಾವು ತಂದೆಯನ್ನು ಮತ್ತು ಚಕ್ರವನ್ನು ಎಷ್ಟು ಸಮಯ ನೆನಪು ಮಾಡುತ್ತೇವೆಂದು ನೋಡಿಕೊಳ್ಳಬೇಕು. ರೀತಿ ಅಭ್ಯಾಸ ಮಾಡುವುದರಿಂದ ರುದ್ರಮಾಲೆಯ ಮಣಿಗಳಾಗುವುದಕ್ಕೋಸ್ಕರ ಬೇಗ ವಿಜಯಶಾಲಿಗಳಾಗುತ್ತೇವೆ - ಇದು ಯೋಗದ ಯಾತ್ರೆಯಾಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ ಅಂದಾಗ ಹೇಗೆ ಕಲಿಸಲು ಸಾಧ್ಯ? ಈಗ ತಂದೆಯ ಬಳಿಗೆ ಹೋಗಬೇಕೆಂದು ನಿಮಗೆ ತಿಳಿದಿದೆ. ತಂದೆಯ ಆಸ್ತಿ ರಾಜ್ಯಭಾಗ್ಯವಾಗಿದೆ. ಆದ್ದರಿಂದ ಇದಕ್ಕೆ ರಾಜಯೋಗವೆಂದು ಹೆಸರಾಗಿದೆ.

ನೀವೆಲ್ಲರೂ ರಾಜಋಷಿಗಳಾಗಿದ್ದೀರಿ ಅವರೆಲ್ಲರೂ ಹಠಯೋಗ ಋಷಿಗಳಾಗಿದ್ದಾರೆ. ಅವರು ಪವಿತ್ರವಾಗಿರುತ್ತಾರೆ ರಾಜ್ಯಭಾಗ್ಯಕ್ಕೋಸ್ಕರ ರಾಜ, ರಾಣಿ, ಪ್ರಜೆಗಳು ಎಲ್ಲರೂ ಸಹ ಬೇಕು. ಸನ್ಯಾಸಿಗಳಿದ್ದಾಗ ರಾಜ, ರಾಣಿಯರಿರುವುದಿಲ್ಲ. ಅವರದು ಹದ್ದಿನ ವೈರಾಗ್ಯವಾಗಿದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಅವರು ಮನೆ-ಮಠವನ್ನು ಬಿಟ್ಟು ವಿಕಾರಿ ಪ್ರಪಂಚದಲ್ಲಿರುತ್ತಾರೆ. ಪ್ರಪಂಚದ ನಂತರ ಸ್ವರ್ಗ ದೈವೀ ತೋಟವಾಗುತ್ತದೆ ಅಂದಾಗ ಅದೇ ನೆನಪಿಗೆ ಬರುತ್ತದೆ. ಮಾತು ನೀವು ಮಕ್ಕಳ ಬುದ್ಧಿಯಲ್ಲಿರಬೇಕು. ಬಹಳ ಮಕ್ಕಳು ಚಾರ್ಟನ್ನು ಬರೆಯುವುದಿಲ್ಲ. ನಡೆಯುತ್ತಾ-ನಡೆಯುತ್ತಾ ಸುಸ್ತಾಗುತ್ತಾರೆ. ಮಕ್ಕಳೇ ತಮ್ಮ ಬಳಿ ನೋಟ್ ಮಾಡಿಕೊಳ್ಳಿ - ನಾವು ಎಷ್ಟು ಸಮಯ ಅತೀ ವಿಧೇಯನಾದಂತಹ ತಂದೆಯನ್ನು ನೆನಪು ಮಾಡಿದೆವು? ಯಾವ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಯಾವಾಗ ರಾಜ್ಯಭಾಗ್ಯದ ಆಸ್ತಿ ತೆಗೆದುಕೊಳ್ಳಬೇಕೋ ಆಗ ಪ್ರಜೆಗಳನ್ನು ಮಾಡಿಕೊಳ್ಳಬೇಕು. ತಂದೆಯು ಸ್ವರ್ಗದ ರಚೈತನಾಗಿದ್ದಾರೆ ಅಂದಾಗ ಅವರಿಂದ ಸ್ವರ್ಗದ ಆಸ್ತಿಯನ್ನು ಏಕೆ ತೆಗೆದುಕೊಳ್ಳಬಾರದು? ಬಹಳ ಜನರಿಗೆ ಸ್ವರ್ಗದ ಆಸ್ತಿಯು ಸಿಗುತ್ತದೆ ಬಾಕಿ ಎಲ್ಲರಿಗೆ ಶಾಂತಿಯು ಸಿಗುತ್ತದೆ. ಮಕ್ಕಳೇ, ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯಿರಿ ಎಂದು ಎಲ್ಲರಿಗೂ ಹೇಳುತ್ತಾರೆ. ನೀವು ಅಶರೀರಿಗಳಾಗಿ ಬಂದಿರಿ, 84 ಜನ್ಮಗಳನ್ನು ಭೋಗಿಸಿದಿರಿ ಈಗ ಪುನಃ ಅಶರೀರಿಗಳಾಗಿ. ನೀವು ಕ್ರೈಸ್ತನ ಹಿಂದೆ ಬಂದಿದ್ದೀರೆಂದು ಕ್ರಿಶ್ಚಿಯನ್ ಧರ್ಮದವರಿಗೆ ಹೇಳಲಾಗುತ್ತದೆ. ನೀವು ಶರೀರವಿಲ್ಲದೇ ಬಂದಿದ್ದೀರಿ, ಇಲ್ಲಿ ಶರೀರವನ್ನು ತೆಗೆದುಕೊಂಡು ಪಾತ್ರವನ್ನು ಮಾಡುತ್ತಿದ್ದೀರಿ. ಈಗ ನಿಮ್ಮ ಪಾತ್ರವು ಪೂರ್ಣವಾಗುತ್ತಿದೆ. ಕಲಿಯುಗದ ಅಂತ್ಯ ಬಂದಿದೆ. ಈಗ ನೀವು ತಂದೆಯನ್ನು ನೆನಪು ಮಾಡಿ. ಮುಕ್ತಿಧಾಮದವರು ಕೇಳಿ ಬಹಳ ಸಂತೋಷಪಡುತ್ತಾರೆ ಏಕೆಂದರೆ ಅವರು ಮುಕ್ತಿಯನ್ನು ಇಷ್ಟಪಡುತ್ತಾರೆ. ಜೀವನ್ಮುಕ್ತಿಯನ್ನು ಪಡೆದ ನಂತರ ದುಃಖದಲ್ಲಿ ಬರಬೇಕು ಆದ್ದರಿಂದ ಮುಕ್ತಿಯಲ್ಲಿರುವುದೇ ಒಳ್ಳೆಯದು ಎಂದು ತಿಳಿದುಕೊಳ್ಳಬೇಕು. ಸುಖವು ಬಹಳಷ್ಟಿದೆ ಎಂದು ಅವರಿಗೆ ಗೂತ್ತಿಲ್ಲ. ನಾವು ಆತ್ಮಗಳು ಪರಂಧಾಮದಲ್ಲಿದ್ದೇವು ಎಂದು ನಿಮಗೆ ತಿಳಿದಿದೆ. ಆದರೆ ಈಗ ಪರಂಧಾಮವನ್ನು ಮರೆತಿದ್ದೇವೆ. ತಂದೆಯೇ ಬಂದು ಎಲ್ಲಾ ಸಂದೇಶವಾಹಕರನ್ನು ಕಳುಹಿಸುತ್ತಾರೆ. ವಾಸ್ತವದಲ್ಲಿ ಯಾರೂ ಕಳುಹಿಸುವುದಿಲ್ಲ, ಇದೆಲ್ಲವೂ ನಾಟಕ ಮಾಡಲ್ಪಟ್ಟಿದೆ. ನಾವು ಇಡೀ ನಾಟಕವನ್ನು ತಿಳಿದುಕೊಂಡಿದ್ದೇನೆ. ನೀವು ಮಕ್ಕಳ ಬುದ್ಧಿಯಲ್ಲಿ ತಂದೆ ಮತ್ತು ಚಕ್ರದ ನೆನಪಿದೆ ಅಂದಾಗ ನೀವು ಚಕ್ರವರ್ತಿ ರಾಜರು ಅವಶ್ಯವಾಗಿ ಆಗುತ್ತೀರಿ. ಇಲ್ಲಿ ದುಃಖ ಬಹಳಷ್ಟಿದೆ ಆದ್ದರಿಂದ ಮುಕ್ತಿಯನ್ನು ಇಷ್ಟಪಡುತ್ತಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಎರಡು ಅಕ್ಷರ ಗತಿ-ಸದ್ಗತಿಯು ನಡೆಯುತ್ತಾ ಬಂದಿದೆ. ಆದರೆ ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಎಲ್ಲರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಬಾಕಿ ಎಲ್ಲರೂ ಪತಿತರಾಗಿದ್ದಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಇಡೀ ಪ್ರಪಂಚ ಪತಿತವಾಗಿದೆ. ಅಕ್ಷರಗಳಲ್ಲಿ ಕೆಲವರು ಚರ್ಚೆ ಮಾಡುತ್ತಾರೆ. ಶರೀರವನ್ನು ಮರೆತುಬಿಡಿ ಎಂದು ತಂದೆಯು ಹೇಳುತ್ತಾರೆ. ನಿಮ್ಮನ್ನು ಅಶರೀರಿಗಳಾಗಿ ಕಳುಹಿಸಿದ್ದೆನು ಈಗ ಅಶರೀರಿಗಳಾಗಿ ನನ್ನ ಜೊತೆ ಬರಬೇಕು. ಇದಕ್ಕೆ ಜ್ಞಾನ ಅಥವಾ ಶಿಕ್ಷಣವೆಂದು ಹೇಳಲಾಗುತ್ತದೆ. ಶಿಕ್ಷಣದಿಂದಲೇ ಸದ್ಗತಿಯಾಗುತ್ತದೆ. ಯೋಗದಿಂದ ನೀವು ಸದಾ ಆರೋಗ್ಯವಂತರಾಗುತ್ತೀರಿ. ನೀವು ಸತ್ಯಯುಗದಲ್ಲಿ ಬಹಳ ಸುಖಿಗಳಾಗಿದ್ದಿರಿ ಯಾವುದೇ ವಸ್ತುವಿನ ಕೊರತೆಯಿರಲಿಲ್ಲ. ದುಃಖ ಕೊಡುವಂತಹ ಯಾವುದೇ ವಿಕಾರವಿರಲಿಲ್ಲ. ಮೋಹಜೀತ ರಾಜನ ಕಥೆಯನ್ನು ತಿಳಿಸುತ್ತಾರೆ - ನಾನು ನಿಮಗೆ ಯಾವ ಕರ್ಮವನ್ನು ಭೋಗಿಸುವುದಿಲ್ಲವೋ ರೀತಿಯ ಕರ್ಮವನ್ನು ಕಲಿಸುತ್ತೇನೆಂದು ತಂದೆಯು ತಿಳಿಸುತ್ತಾರೆ. ಅಲ್ಲಿ ರೀತಿಯ ಚಳಿಯಿರುವುದಿಲ್ಲ. ಈಗ 5 ತತ್ವಗಳು ತಮೋಪ್ರಧಾನವಾಗಿದೆ ಅಲ್ಲಿ ಎಂದೂ ಬಹಳ ಬಿಸಿಲು, ಬಹಳ ಚಳಿ - ರೀತಿಯ ಅಪಾಯಗಳಿರುವುದಿಲ್ಲ. ವಸಂತ ಋತುವಿರುತ್ತದೆ. ಸ್ವಭಾವ ಸತೋಪ್ರಧಾನವಾಗಿರುತ್ತದೆ, ಈಗಿನ ಸ್ವಭಾವ ತಮೋಪ್ರಧಾನವಾಗಿದೆ ಅಂದಾಗ ಒಳ್ಳೆಯ ವ್ಯಕ್ತಿಗಳಾಗಲು ಹೇಗೆ ಸಾಧ್ಯ. ಇಷ್ಟೆಲ್ಲಾ ದೊಡ್ಡ ದೊಡ್ಡ ಭಾರತದ ಮಾಲೀಕರು ಸನ್ಯಾಸಿಗಳ ಹಿಂದೆ ತಿರುಗುತ್ತಿರುತ್ತಾರೆ, ಅವರ ಬಳಿ ಮಕ್ಕಳು ಹೋದರೆ ನಮಗೆ ಪುರುಸೊತ್ತಿಲ್ಲವೆಂದು ಹೇಳುತ್ತಾರೆ. ಅವರ ಅದೃಷ್ಟದಲ್ಲಿ ಸ್ವರ್ಗದ ಸುಖವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಬ್ರಾಹ್ಮಣಕುಲದ ಜ್ಯೋತಿಯಾಗುವುದಿಲ್ಲ. ಭಗವಂತ ಯಾರು? ಹೇಗಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ. ಶಿವಜಯಂತಿಯನ್ನು ಆಚರಣೆ ಮಾಡುತ್ತಾರೆ. ಆದರೆ ಶಿವನನ್ನು ಎಲ್ಲರೂ ಭಗವಂತನೆಂದು ತಿಳಿದುಕೊಳ್ಳುವುದಿಲ್ಲ ಒಂದುವೇಳೆ ಪರಮಪಿತ ಪರಮಾತ್ಮನೆಂದು ತಿಳಿದುಕೊಂಡಿದ್ದರೆ ಶಿವಜಯಂತಿಯ ದಿನ ರಜಾದಿನವನ್ನು ಕೊಡುತ್ತಿದ್ದರು. ನನ್ನ ಜನ್ಮವು ಭಾರತದಲ್ಲಿಯೇ ಆಗುತ್ತದೆಯೆಂದು ತಂದೆಯು ಹೇಳುತ್ತಾರೆ. ಮಂದಿರಗಳು ಇಲ್ಲಿಯೂ ಇದೆ. ಅವಶ್ಯವಾಗಿ ಯಾವುದೋ ಶರೀರದಲ್ಲಿ ಪ್ರವೇಶ ಮಾಡಿದ್ದಾರೆ. ಧಕ್ಷಪ್ರಜಾಪತಿ ಯಜ್ಞವನ್ನು ರಚನೆ ಮಾಡಿದ್ದಾರೆಂದು ತೋರಿಸುತ್ತಾರೆ ಅಂದಾಗ ಅವರು ಇಲ್ಲಿ ಬಂದಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ. ನಾನು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರನ್ನು ರಚನೆ ಮಾಡುತ್ತೇನೆಂದು ತಂದೆಯು ಸ್ವಯಂ ಹೇಳುತ್ತಾರೆ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಸಹಜವಾಗಿ ತಿಳಿಸುತ್ತಾರೆ. ಇದನ್ನು ಯಾರಿಗೆ ಬೇಕಾದರೂ ಸಹ ತಿಳಿಸಬಹುದು ಆದರೆ ಮಾಯೆಯು ನೆನಪನ್ನು ಮಾಡಲು ಬಿಡುವುದಿಲ್ಲ ಏಕೆಂದರೆ ಅರ್ಧಕಲ್ಪದ ಶತ್ರುವಾಗಿದೆ. ಶತ್ರುವಿನ ಮೇಲೆ ವಿಜಯವನ್ನು ಪಡೆದುಕೊಳ್ಳಬೇಕು. ಭಕ್ತಿಮಾರ್ಗದಲ್ಲಿ ಮನುಷ್ಯರು ಚಳಿಯಲ್ಲಿ ಸ್ನಾನ ಮಾಡಲು ಹೋಗುತ್ತಾರೆ, ಎಷ್ಟೊಂದು ಪೆಟ್ಟನ್ನು ತಿನ್ನುತ್ತಾರೆ, ದುಃಖವನ್ನು ಸಹನೆ ಮಾಡುತ್ತಾರೆ. ಇಲ್ಲಿ ಪಾಠಶಾಲೆಯಿದೆ, ಓದಬೇಕು. ಇದರಲ್ಲಿ ಪೆಟ್ಟನ್ನು ತಿನ್ನುವ ಯಾವುದೇ ಮಾತಿಲ್ಲ, ಅಂಧಶ್ರದ್ದೆಯ ಮಾತಿಲ್ಲ. ಮನುಷ್ಯರು ಬಹಳ ಅಂಧಶ್ರದ್ಧೆಯ ಮಾತಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಎಷ್ಟೊಂದು ಗುರು ಮುಂತಾದವರನ್ನು ಮಾಡಿಕೊಂಡಿದ್ದಾರೆ ಆದರೆ ಮನುಷ್ಯರು ಎಂದೂ ಮನುಷ್ಯರಿಗೆ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಯಾವ ಮನುಷ್ಯರು ಗುರುಗಳನ್ನು ಮಾಡಿಕೊಳ್ಳುತ್ತಾರೆ ಅವರು ಅಂಧಶ್ರದ್ಧೆಯಲ್ಲಿದ್ದಾರೆ. ಇಂದಿನ ದಿನ ಚಿಕ್ಕ ಮಕ್ಕಳಿಗೂ ಗುರುಗಳನ್ನು ಮಾಡಿಸುತ್ತಾರೆ. ವಾನಪ್ರಸ್ಥದಲ್ಲಿ ಗುರುಗಳನ್ನು ಮಾಡಿಕೊಳ್ಳುವ ನಿಯಮವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ತೀವ್ರ ಪುರುಷಾರ್ಥಕ್ಕೋಸ್ಕರ ನೆನಪಿನ ಚಾರ್ಟನ್ನು ಅವಶ್ಯವಾಗಿ ಇಟ್ಟುಕೊಳ್ಳಬೇಕಾಗಿದೆ. ಪ್ರತಿನಿತ್ಯ ದರ್ಪಣದಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳಬೇಕಾಗಿದೆ. ನಾನು ಅತೀ ವಿಧೇಯ ತಂದೆಯನ್ನು ಎಷ್ಟು ಸಮಯ ನೆನಪು ಮಾಡುತ್ತೇನೆಂದು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ.

2. ಏನೆಲ್ಲಾ ಓದಿದ್ದೇವೆ ಅದೆಲ್ಲವನ್ನೂ ಮರೆತು ಸುಮ್ಮನಿರಬೇಕಾಗಿದೆ. ಮುಖದಿಂದ ಏನನ್ನೂ ಸಹ ಹೇಳಬಾರದಾಗಿದೆ. ತಂದೆಯ ನೆನಪಿನಿಂದ ವಿಕರ್ಮವನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ.

ವರದಾನ:

ಪ್ರತಿ ಮಾತಿನಲ್ಲಿಯೂ ಮುಖದಿಂದ ಅಥವಾ ಮನಸ್ಸಿನಿಂದ ಬಾಬಾ-ಬಾಬಾ ಎಂದು ಹೇಳುತ್ತಾ ನನ್ನತನವನ್ನು ಸಮಾಪ್ತಿ ಮಾಡುವಂತಹ ಸಫಲತಾ ಮೂರ್ತಿ ಭವ


ತಾವು ಅನೇಕ ಆತ್ಮಗಳ ಉಮಂಗ-ಉತ್ಸಾಹವನ್ನು ಹೆಚ್ಚಿಸುವುದರಲ್ಲಿ ನಿಮಿತ್ತ ಮಕ್ಕಳು ಎಂದೂ ಸಹ ನನ್ನತನದಲ್ಲಿ ಬರಬೇಡಿ. ನಾನು ಮಾಡಿದೆ, ಅಲ್ಲಾ. ಬಾಬಾ ನಿಮಿತ್ತ ಮಾಡಿದ್ದಾರೆ. ನಾನು ಎನ್ನುವುದರ ಬದಲು ನನ್ನ ಬಾಬಾ, ನಾನು ಮಾಡಿದೆ, ನಾನು ಹೇಳಿದೆ, ಇದಲ್ಲಾ. ಬಾಬಾ ಮಾಡಿಸಿದರು, ಬಾಬಾ ಮಾಡಿದರು ಎಂದಾಗ ಸಫಲತಾ ಮೂರ್ತಿಗಳಾಗಿಬಿಡುವಿರಿ. ಎಷ್ಟು ನಿಮ್ಮ ಮುಖದಿಂದ ಬಾಬಾ-ಬಾಬಾ ಎಂದು ಹೊರಬರುವುದು ಅಷ್ಟೂ ಅನೇಕರನ್ನು ಬಾಬಾನ ಮಕ್ಕಳಾಗಿ ಮಾಡಲು ಸಾಧ್ಯ. ಎಲ್ಲರ ಮುಖದಿಂದ ಇದೇ ಹೊರಬರಲಿ ಇವರ ನಡೆ-ನುಡಿಯಲ್ಲಿ ಕೇವಲ ಬಾಬಾ ಇದ್ದಾರೆ ಎಂದು.

ಸ್ಲೋಗನ್:

ಸಂಗಮಯುಗದಲ್ಲಿ ನಿಮ್ಮ ತನು-ಮನವನ್ನು ಸಫಲ ಮಾಡಿಕೊಳ್ಳುವುದು ಮತ್ತು ಸರ್ವ ಖಜಾನೆಗಳನ್ನು ಹೆಚ್ಚಿಸಿಕೊಳ್ಳುವುದೇ ಬುದ್ಧಿವಂತಿಕೆಯಾಗಿದೆ.

Download PDF

Post a Comment

0 Comments