08/01/23 ಪ್ರಾತಃಮುರುಳಿ ಓಂಶಾಂತಿ "ಅವ್ಯಕ್ತ-ಬಾಪ್ದಾದಾ" ರಿವೈಜ್: 23/04/93
Listen to the Murli audio file
ನಿಶ್ಚಯಬುದ್ಧಿ ಭವ, ಅಮರ ಭವ
ಇಂದು ಬಾಪ್ದಾದಾ ಸರ್ವ ಅತೀ ಸ್ನೇಹಿ, ಆದಿಯಿಂದ ಯಜ್ಞದ ಸ್ಥಾಪನೆಯ ಸಹಯೋಗಿ, ಅನೇಕ ಪ್ರಕಾರದ ಬಂದಿರುವಂತಹ ಭಿನ್ನ ಭಿನ್ನ ಸಮಸ್ಯೆಗಳ ಪೇಪರ್ನಲ್ಲಿ ನಿಶ್ಚಯಬುದ್ಧಿ ವಿಜಯಿಗಳಾಗಿ ಪಾರು ಮಡುವಂತಹ ಆದಿ ಸ್ನೇಹಿ,
ಸಹಯೋಗಿ, ಅಟಲ್,
ಅಚಲ್ ಆತ್ಮಗಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ನಿಶ್ಚಯದ ಸಬ್ಜೆಕ್ಟ್ ನಲ್ಲಿ ಪಾಸಾಗಿ ನಡೆಯುವಂತಹ ಮಕ್ಕಳ ಹತ್ತಿರ ಬಂದಿದ್ದಾರೆ. ಈ ನಿಶ್ಚಯ ಈ ಹಳೆಯ ಜೀವನದಲ್ಲಿರಬಹುದು, ಮುಂದಿನ ಜೀವನದಲ್ಲಿಯೂ ಸದಾ ವಿಜಯದ ಅನುಭವ ಮಾಡಿಸುತ್ತಿರುತ್ತದೆ. ನಿಶ್ಚಯ, ಅಮರ ಭವದ ವರದಾನ ಸದಾ ಜೊತೆಯಿರಲಿ.
ವಿಶೇಷ ಇಂದು ಬಹುಕಾಲದ ಅನುಭವಿ ವೃದ್ಧ ಆತ್ಮರಿದ್ದಾರೆ,
ಅವರ ನೆನಪು ಮತ್ತು ಸ್ನೇಹದ ಬಂಧನದಲ್ಲಿ ಬಂಧಿತರಾಗಿ ತಂದೆಯು ಬಂದಿದ್ದಾರೆ.
ನಿಶ್ಚಯದ ಶುಭಾಷಯಗಳು.
ಒಂದು ಕಡೆ ಯಜ್ಞ ಅರ್ಥಾತ್ ಪಾಂಡವರ ಕೋಟೆಯ ಅಡಿಪಾಯ (ಫೌಂಡೇಷನ)
ಆತ್ಮಗಳಿದ್ದಾರೆ ಅವರು ಮುಂದಿದ್ದಾರೆ ಮತ್ತು ಇನ್ನೊಂದು ಕಡೆ ನೀವು ಅನುಭವಿ ಆದಿ ಆತ್ಮಗಳು ಈ ಪಾಂಡವರ ಕೋಟೆಯ ಗೋಡೆಯ ಮೊದಲ ಇಟ್ಟಿಗೆಯಾಗಿದ್ದೀರಿ. ಫೌಂಡೇಷನ ಮುಂದೆ ಇದೆ ಮತ್ತು ಆದಿಯ ಇಟ್ಟಿಗೆ,
ಯಾರ ಆಧಾರದ ಮೇಲೆ ಈ ಕೋಟೆಯು ಸಮರ್ಥವಾಗಿ ಇಡೀ ವಿಶ್ವದ ಛತ್ರಛಾಯೆಯಾಗಿದೆ, ಅದೂ ಮುಂದೆಯಿದೆ. ಹೇಗೆ ತಂದೆಯು ಮಕ್ಕಳ ಸ್ನೇಹದಲ್ಲಿ “ಹಾಂ!
ಮಾಲಿಕ, ಪ್ರತ್ಯಕ್ಷ”
ಮಾಡಿ ತೋರಿಸಿದರು,
ಇದೇ ರೀತಿ ಸದಾ ಬಾಪ್ದಾದಾ ಮತ್ತು ನಿಮಿತ್ತ ಆತ್ಮಗಳ ಶ್ರೀಮತ ಅಥವಾ ಡೈರೆಕ್ಷನ್ನ್ನು ಸದಾ “ಹಾಂ!
ಪ್ರತ್ಯಕ್ಷ” ಮಾಡುತ್ತೀರಿ.
ಎಂದೂ ವ್ಯರ್ಥ ಮನಮತ ಅಥವಾ ಪರಮತವನ್ನು ಸೇರಿಸಬೇಡಿ.
ಮಾಲಿಕನ ಪ್ರತ್ಯಕ್ಷತೆಯನ್ನು ತಿಳಿದು ಶ್ರೀಮತದಂತೆ ಹಾರುತ್ತ ನಡೆಯಿರಿ.
ತಿಳಿಯಿತೇ? ಒಳ್ಳೆಯದು.
ಮಧುಬನ ನಿವಾಸಿಗಳಿಗೆ ಸೇವೆಯ ಶುಭಾಷಯವನ್ನು ನೀಡುತ್ತಾ ಬಾಪ್ ದಾದಾರವರು ಹೇಳಿದರು
–
ಒಳ್ಳೆಯದು, ವಿಶೇಷ ಮಧುಬನ ನಿವಾಸಿಗಳಿಗೆ ಬಹಳ-ಬಹಳ ಶುಭಾಷಯಗಳು. ಇಡೀ ಸೀಜûನ್ ನಲ್ಲಿ ತಮ್ಮ ಮಧುರತೆ ಹಾಗೂ ಅಥಕ್ ಸೇವೆಯಿಂದ ಸರ್ವರ ಸೇವೆಗೆ ನಿಮಿತ್ತರಾಗಿದ್ದೀರಿ. ಹಾಗಾದರೆ ಎಲ್ಲರಿಗಿಂತ ಮೊದಲು ಇಡೀ ಸೀಜûನ್ಗೆ ನಿಮಿತ್ತ ಸೇವಾಧಾರಿ ವಿಶೇಷ ಮಧುಬನ ನಿವಾಸಿಗಳಿಗೆ ಬಹಳ ಬಹಳ ಶುಭಾಷಯ. ಮಧುಬನವಾಗಿದೆ ಮಧು(ಜೇನು)
ಅರ್ಥಾತ್ ಮಧುರತೆ.
ಹಾಗಾದರೆ ಮಧುರತೆ ಸರ್ವರನ್ನು ತಂದೆಯ ಸ್ನೇಹಿಯನ್ನಾಗಿ ಮಾಡುತ್ತದೆ.
ಆದ್ದರಿಂದ ಭಲೇ ಹಾಲ್ ನಲ್ಲಿದ್ದೀರಿ,
ಭಲೇ ಹೊರಟು ಹೋಗಿರಬಹುದು ಆದರೆ ಎಲ್ಲರಿಗೆ ವಿಶೇಷ ಒಂದೊಂದು ಡಿಪಾರ್ಟ್ಮೆಂಟ್ಗೆ ಬಾಪ್ ದಾದಾರವರ ವಿಶೇಷ ಶುಭಾಷಯವನ್ನು ಸೇವೆಗೆ ನೀಡುತ್ತಿದ್ದಾರೆ ಹಾಗೂ “ಸದಾ ಅಥಕ್ ಭವ,
ಮಧುರ ಭವ’’
ಈ ವರದಾನದಿಂದ ಮುಂದುವರೆಯುತ್ತಾ, ಹಾರುತ್ತಾ,
ನಡೆಯಿರಿ.
ಅವ್ಯಕ್ತ ಬಾಪ್ ದಾದಾರವರ ಪರ್ಸನಲ್ ಮಿಲನ
1.
ಹುಡುಗಾಟಿಕೆ ನಿರ್ಬಲರನ್ನಾಗಿ ಮಾಡುತ್ತದೆ ಆದ್ದರಿಂದ ಅಲರ್ಟ್ ಆಗಿ
ಎಲ್ಲರೂ ಸಂಗಮಯುಗದ ಶ್ರೇಷ್ಠ ಆತ್ಮರಾಗಿದ್ದೀರಲ್ಲವೇ! ಸಂಗಮಯುಗದ ವಿಶೇಷತೆ ಏನಾಗಿದೆ ಯಾವುದು ಬೇರೆ ಯಾವುದೇ ಯುಗದಲ್ಲಿಲ್ಲ? ಸಂಗಮಯುಗದ ವಿಶೇಷತೆಯಾಗಿದೆ ಒಂದಾಗಿದೆ ಪ್ರತ್ಯಕ್ಷ ಫಲ ಸಿಗುವುದು ಮತ್ತು ಒಂದಕ್ಕೆ ಪದಮ ಗುಣ ಪ್ರಾಪ್ತಿಯಾಗುವ ಅನುಭವ ಈ ಜನ್ಮದಲ್ಲೇಯಾಗುತ್ತದೆ. ಪ್ರತ್ಯಕ್ಷ ಫಲ ಸಿಗುತ್ತದೆಯಲ್ಲವೇ. ಒಂದುವೇಳೆ ಒಂದು ಸೆಕೆಂಡ್ ಸಹ ಧೈರ್ಯ ಇಟ್ಟರೆ,
ಸಹಯೋಗ ಎಷ್ಟು ಸಮಯದವರೆಗೆ ಸಿಗುತ್ತಿರುತ್ತದೆ! ಯಾರಾದರೂ ಒಬ್ಬರ ಸೇವೆಯಾದರೆ ಎಷ್ಟು ಖುಷಿಯಾಗುತ್ತದೆ. ಅಂದಾಗ ಒಂದಕ್ಕೆ ಪದಮ ಗುಣ ಪ್ರಾಪ್ತಿ ಅರ್ಥಾತ್ ಪ್ರತ್ಯಕ್ಷಫಲ ಈ ಸಂಗಮದಲ್ಲಿ ಸಿಗುತ್ತದೆ. ಅಂದಾಗ ತಾಜಾ ಹಣ್ಣು ತಿನ್ನುವುದು ಇಷ್ಟವಲ್ಲವೇ.
ನೀವೆಲ್ಲರೂ ಪ್ರತ್ಯಕ್ಷಫಲ ತಾಜಾ ಹಣ್ಣು ತಿನ್ನುವವರಾಗಿದ್ದೀರಿ, ಅದಕ್ಕೆ ಶಕ್ತಿಶಾಲಿಯಾಗಿದ್ದೀರಿ. ಬಲಹೀನತೆಯಿಲ್ಲವೇ. ಎಲ್ಲರೂ ಶಕ್ತಿಶಾಲಿಯಾಗಿದ್ದೀರಿ. ಬಲಹೀನತೆಗೆ ಬರಲು ಬಿಡಬಾರದು. ಯಾವಾಗ ಆರೋಗ್ಯವಂತರಾಗಿರುವಿರಿ ಆಗ ಬಲಹೀನತೆ ಸ್ವತಃವಾಗಿ ಸಮಾಪ್ತಿಯಾಗುತ್ತದೆ. ಸರ್ವಶಕ್ತಿವಂತ ತಂದೆಯ ಮೂಲಕ ಸದಾ ಶಕ್ತಿ ಸಿಗುತ್ತಿರುತ್ತದೆ, ಅಂದಾಗ ಬಲಹೀನರು ಹೇಗೆ ಆಗುವಿರಿ. ಬಲಹೀನತೆ ಬರಲು ಸಾಧ್ಯವೇ?
ಎಂದಾದರು ತಪ್ಪಾಗಿ ಬರುತ್ತದೆಯೇ? ಯಾವಾಗ ಕುಂಭಕರ್ಣನ ನಿದ್ರೆಯಲ್ಲಿ ಹುಡುಗಾಟಿಕೆಯಿಂದ ಮಲಗಿದ್ದರೆ ಆಗ ಬರುವುದು.
ಇಲ್ಲವೆಂದರೆ ಬರುವುದಿಲ್ಲ.
ನೀವಂತು ಅಲರ್ಟ್ ಆಗಿದ್ದೀರಲ್ಲವೇ. ಹುಡುಗಾಟಿಕೆಯಾಗಿದ್ದೀರಾ? ಎಲ್ಲರೂ ಅಲರ್ಟ್ ಆಗಿದ್ದೀರಾ?
ಸದಾ ಅಲರ್ಟ್ ಆಗಿದ್ದೀರಾ? ಸಂಗಮಯುಗದಲ್ಲಿ ತಂದೆ ಸಿಕ್ಕಿದರು
– ಎಲ್ಲಾ ಸಿಕ್ಕಿ ಬಿಟ್ಟಿತು. ಅಂದಾಗ ಅಲರ್ಟ್ ಆಗಿರುತ್ತೀರಲ್ಲವೇ. ಯಾರಿಗೆ ಬಹಳ ಪ್ರಾಪ್ತಿಯಾಗುತ್ತಿರುತ್ತದೆಯೋ ಅವರು ಎಷ್ಟು ಅಲರ್ಟ್ ಆಗಿರುತ್ತಾರೆ. ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಪ್ರಾಪ್ತಿಯಾಗುತ್ತಿದ್ದರೆ ಹುಡುಗಾಟಿಕೆಯಲ್ಲಿರುತ್ತಾರೆಯೇ ಅಥವಾ ಅಲರ್ಟ್(ಎಚ್ಚರಿಕೆ)
ಇರುತ್ತ್ತಾರೆಯೇ? ನಿಮಗೆ ಒಂದು ಸೆಕೆಂಡಿನಲ್ಲಿ ಎಷ್ಟು ಸಿಗುತ್ತದೆ!
ಅಂದಾಗ ಹುಡುಗಾಟಿಕೆ ಹೇಗೆ ಬರಲು ಸಾಧ್ಯ? ತಂದೆಯು ಸರ್ವ ಶಕ್ತಿಗಳನ್ನು ಕೊಟ್ಟುಬಿಟ್ಟಿದ್ದಾರೆ. ಅವರ ಶಕ್ತಿಗಳು ಜೊತೆಯಲ್ಲಿದ್ದರೆ ಹುಡುಗಾಟಿಕೆ ಬರಲು ಸಾಧ್ಯವಿಲ್ಲ. ಸದಾ ಚುರುಕಾಗಿರಬೇಕು, ಸದಾ ಎಚ್ಚರಿಕೆಯಿಂದಿರಬೇಕು.
ಯು.ಕೆ ಅವರಿಗೆ ಬಾಪ್ದಾದಾರವರು ಓ.ಕೆ ಎಂದು ಹೇಳುತ್ತಾರೆ.
ಯಾರು ಓ.ಕೆ ಆಗಿರುತ್ತಾರೆ ಅವರು ಯಾವಾಗ ಅಲರ್ಟ್ ಆಗಿರುತ್ತಾರೆಯೋ ಆಗಲೇ ಓ.ಕೆ ಆಗಿರುತ್ತದೆಯಲ್ಲವೇ. ಅಡಿಪಾಯ ಶಕ್ತಿಶಾಲಿಯಾಗಿದೆ, ಅದಕ್ಕೆ ಏನೆಲ್ಲಾ ರಂಬೆ-ಕೊಂಬೆಗಳಿವೆಯೋ ಅವು ಸಹ ಶಕ್ತಿಶಾಲಿಯಾಗಿವೆ. ವಿಶೇಷ ಬಾಪ್ದಾದಾರವರು ಬ್ರಹ್ಮಾ ತಂದೆಯು ತಮ್ಮ ಹೃದಯದಿಂದ ಲಂಡನ್ನ ಮೊದಲ ಫೌಂಡೇಷನ ಹಾಕಿದ್ದಾರೆ. ಬ್ರಹ್ಮಾ ತಂದೆಯ ವಿಶೇಷ ಮುದ್ದು ಮಗುವಾಗಿದೆ.
ನೀವು ಪ್ರತ್ಯಕ್ಷ ಫಲದ ಸದಾ ಅಧಿಕಾರಿ ಆತ್ಮರಾಗಿದ್ದೀರಿ. ಕರ್ಮ ಮಾಡುವುದರ ಮೊದಲು ಫಲ ತಯಾರಿ ಆಗಿಯೇ ಇದೆ. ಈ ರೀತಿ ಅನುಭವವಾಗುತ್ತದೆಯೇ? ಅಥವಾ ಪರಿಶ್ರಮವೆನಿಸುತ್ತದೆಯೇ? ನರ್ತಿಸುತ್ತ-ಹಾಡುತ್ತ ಫಲವನ್ನು ತಿನ್ನುತ್ತಿರುತ್ತೀರಿ. ತಮ್ಮ ಈ ಟೈಟಲ್ನ್ನು ಸದಾ ನೆನಪಿಟ್ಟುಕೊಳ್ಳಿ – ಓ.ಕೆ.
ಇದು ಎಷ್ಟು ಒಳ್ಳೆಯ ಟೈಟಲ್ ಆಗಿದೆ. ಎಲ್ಲರೂ ಸದಾ ಓ.ಕೆ ಆಗಿರುವವರು ಮತ್ತು ಅನ್ಯರನ್ನು ತಮ್ಮ ಮುಖದಿಂದ,
ವಾಣಿಯಿಂದ, ವೃತ್ತಿಯಿಂದ ಓ.ಕೆ ಮಾಡುವವರು. ಇದೇ ಸೇವೆ ಮಾಡಬೇಕಲ್ಲವೇ!
ಒಳ್ಳೆಯದು. ಸೇವೆಯ ರುಚಿ ಚೆನ್ನಾಗಿದೆ.
ಯಾರೇ ಎಲ್ಲಿಂದಲೇ ಬಂದಿರಲಿ ಆದರೆ ಎಲ್ಲರೂ ತೀವ್ರ ಪುರುಷಾರ್ಥಿ ಮತ್ತು ಹಾರುವ ಕಲೆಯವರಾಗಿದ್ದೀರಿ. ಎಲ್ಲರಿಗಿಂತ ಹೆಚ್ಚು ಖುಷಿ ಯಾರಿಗೆ ಆಗುತ್ತದೆ? ನಶೆಯಿಂದ ಹೇಳಿ ನಾನು.
ಖುಷಿಯನ್ನು ಬಿಟ್ಟರೆ ಇನ್ನೇನಿದೆ. ‘ಖುಷಿ’
ಬ್ರಾಹ್ಮಣ ಜೀವನ ಔಷಧಿಯಾಗಿದೆ. ಔಷಧಿಯಿಲ್ಲದೇ ಹೇಗೆ ನಡೆಯುವಿರಿ.
ನಡೆಯುತ್ತಿದ್ದೀರಿ, ಔಷಧಿಯಿದೆ ಅದಕ್ಕೆ ನಡೆಯುತ್ತಿದ್ದೀರಿ. ಸ್ಥಳವು ದೊಡ್ಡದಾಗುತ್ತಿದೆ. ನೋಡಿ, ಮೊದಲು ಮೂರು ಹೆಜ್ಜೆ ಪೃಥ್ವಿ ತೆಗೆದುಕೊಳ್ಳುವುದು ದೊಡ್ಡ ಮಾತಾಗಿತ್ತು ಮತ್ತು ಈಗ ಏನೆನಿಸುತ್ತದೆ? ಸಹಜವೆನಿಸುತ್ತದೆಯಲ್ಲವೇ. ಅಂದಾಗ ಲಂಡನ್ ಅದ್ಭುತ ಮಾಡಿದೆಯಲ್ಲವೇ (ಈಗ
50 ಎಕರೆ ಜಮೀನ ಸಿಕ್ಕಿದೆ) ಧೈರ್ಯ ಕೊಡಿಸುವಂತಹವರು ಚೆನ್ನಾಗಿದ್ದಾರೆ ಮತ್ತು ಧೈರ್ಯವನ್ನು ಇಟ್ಟೂಕೊಳ್ಳುವವರು ಚೆನಾಗಿದ್ದಾರೆ.
ನೋಡಿ, ನಿಮ್ಮೆಲ್ಲರ ಸಹಯೋಗವಿಲ್ಲವೆಂದರೆ ಹೇಗಾಗುತ್ತಿತು.
ಎಲ್ಲಾ ಯು.ಕೆ ಯವರು ಲಕ್ಕಿ (ಅದೃಷ್ಟವಂತರು)
ಆಗಿದ್ದೀರಿ ಮತ್ತು ಸಹಯೋಗ ಕೊಡುವುದರಲ್ಲಿ ಸಾಹಸವಂತರಾಗಿದ್ದೀರಿ.
2.
ತಮ್ಮ ಸರ್ವ ಜವಾಬ್ದಾರಿಗಳನ್ನು ತಂದೆಗೆ ಕೊಟ್ಟು ನಿಶ್ಚಿಂತ ಚಕ್ರವರ್ತಿಯಾಗಿರಿ
ಸದಾ ತಮ್ಮನ್ನು ನಿಶ್ಚಿಂತ ಚರ್ಕ್ರವರ್ತಿಯೆಂದು ಅನುಭವ ಮಾಡುತ್ತೀರಾ?
ಅಥವಾ ಸ್ವಲ್ಪ ಸ್ವಲ್ಪ ಚಿಂತೆಯಿದೆಯೇ?
ಏಕೆಂದರೆ ಯಾವಾಗ ತಂದೆಯು ನಿಮ್ಮ ಜವಾಬ್ದಾರಿ ತೆಗೆದುಕೊಂಡಿದ್ದಾರೆ, ಆಗ ಜವಾಬ್ದಾರಿಯ ಚಿಂತೆ ಏಕೆ?
ಈಗ ಕೇವಲ ಜವಾಬ್ದಾರಿಯಿದೆ ತಂದೆಯ ಜೊತೆ- ಜೊತೆ ಹೋಗುತ್ತಿರುವುದಕ್ಕೆ. ಅದು ಸಹ ತಂದೆಯ ಜೊತೆ ಜೊತೆಯಿದ್ದಾರೆ,
ಒಬ್ಬರೇ ಅಲ್ಲ.
ಏನು ಚಿಂತೆಯಿದೆ?
ನಾಳೆ ಏನಾಗುವುದು ಎನ್ನುವುದರ ಚಿಂತೆಯಿದೆಯೇ?
ಕೆಲಸದ ಚಿಂತೆಯಿದೆಯೇ?
ಪ್ರಪಂಚದಲ್ಲಿ ಏನಾಗುವುದು ಎನ್ನುವುದರ ಚಿಂತೆಯಿದೆಯೇ?
ಏಕೆಂದರೆ ತಿಳಿದುಕೊಂಡಿದ್ದೀರಾ ನಮಗೆ ಏನಾಗುವುದೋ ಅದು ಒಳ್ಳೆಯದಕ್ಕೆ ಆಗುವುದು. ನಿಶ್ಚಯವಿದೆಯಲ್ಲವೇ? ಪಕ್ಕಾ ನಿಶ್ಚಯವಿದೆಯೇ ಅಥವಾ ಎಂದಾದರೂ ಅಲುಗಾಡುತ್ತದೆಯೇ? ಎಲ್ಲಿ ನಿಶ್ಚಯವಿದೆ ಪಕ್ಕಾವಿದೆಯೋ,
ಎಲ್ಲಿ ನಿಶ್ಚಯವಿದೆಯೋ ಅಲ್ಲಿ ವಿಜಯವು ನಿಶ್ಚಿತವಾಗಿದೆ. ವಿಜಯ ಆಗಿಯೇ ಇದೆ ಎನ್ನುವ ನಿಶ್ಚಯವಿದೆಯಲ್ಲವೇ. ಎಂದಾದರೂ ಯೋಚಿಸುತ್ತಿರಾ
– ಗೊತ್ತಿಲ್ಲ, ಆಗುವುದೋ ಅಥವಾ ಇಲ್ಲವೋ?
ಏಕೆಂದರೆ ಕಲ್ಪ
– ಕಲ್ಪದ ವಿಜಯಿಗಳಾಗಿದ್ದೀರಿ ಮತ್ತು ಸದಾ ಇರುವೆವು ಈ ತಮ್ಮ ನೆನಪಾರ್ಥವನ್ನು ಕಲ್ಪದ ಮೊದಲಿನದು ಈಗ ಮತ್ತೆ ನೋಡುತ್ತಿದ್ದೀರಿ. ಇಷ್ಟು ನಶೆ ಇದೆಯೇ?
ಕಲ್ಪದ ಮೊದಲು ನೀವೇ ಇದ್ದರಾ ಅಥವಾ ಬೇರೆಯವರು ಇದ್ದರಾ? ಸದಾ ಇದೇ ನೆನಪು ಇಟ್ಟುಕೊಳ್ಳಿ ನಾವು ನಿಶ್ಚಯಬುದ್ಧಿ ವಿಜಯಿ ರತ್ನರಾಗಿದ್ದೇವೆ. ಇಂತಹ ರತ್ನಗಳಾಗಿದ್ದೀರಾ ಯಾವ ರತ್ನಗಳನ್ನು ಬಾಪ್ದಾದಾರವರು ಸಹ ನೆನಪು ಮಾಡುತ್ತಾರೆ. ಈ ಖುಷಿ ಇದೆಯಾ?
ಬಹಳ ಮಜದಲ್ಲಿರುತ್ತಿರಲ್ಲವೇ. ಈ ಅಲೌಕಿಕ ದಿವ್ಯ ಶ್ರೇಷ್ಠ ಜನ್ಮ ಮತ್ತು ತಮ್ಮ ಮಧುಬನ ಮನೆಯನ್ನು ತಲುಪುವ ಶುಭಾಷಯಗಳು.
3.
ತಂದೆ ಮತ್ತು ನೀವು – ಈ ರೀತಿ ಕಂಬೈಂಡ್ ಆಗಿರಿ ಎಂದೂ ಯಾರು ಬೇರೆ ಮಾಡುವುದಕ್ಕೆ ಸಾಧ್ಯವಿಲ್ಲ.
ಎಲ್ಲರೂ ತಮ್ಮನ್ನು ಸದಾ ತಂದೆ ಮತ್ತು ನೀವು ಕಂಬೈಂಡ್ – ಈ ರೀತಿ ಅನುಭವ ಮಾಡುತ್ತೀರಾ? ಯಾರು ಕಂಬೈಂಡ್ ಆಗಿದ್ದಾರೆ ಅವರನ್ನು ಯಾರು ಎಂದೂ ಬೇರೆ ಮಾಡುವುದಕ್ಕೆ ಮಾಡಲು ಸಾಧ್ಯವಿಲ್ಲ. ನೀವು ಅನೇಕ ಬಾರಿ ಕಂಬೈಂಡ್ ಆಗಿದ್ದೀರಿ,
ಈಗಲು ಇದ್ದೀರಿ ಮತ್ತು ಮುಂದೆಯು ಇರುವಿರಿ. ಇದು ಪಕ್ಕಾ ಇದೆಯಾ?
ಇಷ್ಟು ಪಕ್ಕಾ ಕಂಬೈಂಡ್ ಆಗಿರಿ.
ಸದಾ ಸ್ಮೃತಿಯಿಟ್ಟುಕೊಳ್ಳಿ ಕಂಬೈಂಡ್ ಆಗಿದ್ದೆವು,
ಈಗಲು ಕಂಬೈಂಡ್ ಆಗಿದ್ದೇವೆ ಮತ್ತು ಕಂಬೈಂಡ್ ಆಗಿ ಇರುವೆವು. ಅನೇಕ ಬಾರಿ ಕಂಬೈಂಡ್ ಸ್ವರೂಪವನ್ನು ಬೇರೆ ಮಾಡುವ ಶಕ್ತಿ ಯಾರಲ್ಲಿಯೂ ಇಲ್ಲ.
ಪ್ರೀತಿಯ ಲಕ್ಷಣ ಏನಾಗಿದೆ? (ಕಂಬೈಂಡ್ ಆಗಿರುವುದು) ಏಕೆಂದರೆ ಶರೀರದಿಂದ ಅನಿವಾರ್ಯದಿಂದ ಬೇರೆ ಬೇರೆ ಇರಬೇಕಾಗುತ್ತದೆ. ಪ್ರೀತಿಯಿದ್ದರೂ ಅನಿವಾರ್ಯದಿಂದ ಎಲ್ಲೋ ಬೇರೆ ಇರಬೇಕಾಗುತ್ತದೆ. ಆದರೆ ಇಲ್ಲಂತು ಶರೀರದ ಮಾತೇ ಇಲ್ಲ. ಒಂದು ಸೆಕೆಂಡಿನಲ್ಲಿ ಎಲ್ಲಿಂದ ಎಲ್ಲಿಗೆ ತಲುಪಬಹುದು.
ಆತ್ಮ ಮತ್ತು ಪರಮಾತ್ಮರ ಜೊತೆಯಿದೆ.
ಪರಮಾತ್ಮ ಅಂತು ಎಲ್ಲಿಯಾದರು ಜೊತೆಯನ್ನು ನಿಭಾಯಿಸುತ್ತಾರೆ ಮತ್ತು ಪ್ರತಿಯೊಬ್ಬರೊಂದಿಗೆ ಕಂಬೈಂಡ್ ರೂಪದಿಂದ ಪ್ರೀತಿಯ ರೀತಿಯನ್ನು ನಿಭಾಯಿಸುವಂತಹವರಾಗಿದ್ದಾರೆ. ಪ್ರತಿಯೊಬ್ಬರು ಏನೆಂದು ಹೇಳುವಿರಿ
- ನನ್ನ ಬಾಬಾ ಆಗಿದ್ದಾರೆ. ಅಥವಾ ನಿಮ್ಮ ಬಾಬಾ ಆಗಿದ್ದಾರೆಂದು ಹೇಳುತ್ತೀರಾ?
ಪ್ರತಿಯೊಬ್ಬರು ನನ್ನ ಬಾಬಾ ಎಂದು ಹೇಳುವಿರಿ. ನನ್ನ ಬಾಬಾ ಎಂದು ಏಕೆ ಹೇಳುವಿರಿ?
ಅಧಿಕಾರವಿದೆ ಆಗಲೇ ಹೇಳುತ್ತಿರಲ್ಲವೇ. ಪ್ರೀತಿಯೂ ಇದೆ ಮತ್ತು ಅಧಿಕಾರವೂ ಇದೆ.
ಎಲ್ಲಿ ಪ್ರೀತಿ ಇರುತ್ತದೆ ಅಲ್ಲಿ ಅಧಿಕಾರವು ಇರುತ್ತದೆ.
ಅಧಿಕಾರದ ನಶೆ ಇದೆಯಲ್ಲವೇ. ಎಷ್ಟು ದೊಡ್ಡ ಅಧಿಕಾರ ಸಿಕ್ಕಿದೆ. ಇಷ್ಟು ದೊಡ್ಡ ಅಧಿಕಾರ ಸತ್ಯಯುಗದಲ್ಲೂ ಸಿಗುವುದಿಲ್ಲ.
ಪ್ರಾಪ್ತಿ ಇಲ್ಲಿದೆ.
ಪ್ರಾಲಬ್ದ ಸತ್ಯುಗದಲ್ಲಿದೆ ಆದರೆ ಪ್ರಾಪ್ತಿಯ ಸಮಯ ಈಗಿದೆ.
ಯಾವ ಸಮಯ ಪ್ರಾಪ್ತಿಯಾಗುತ್ತದೆಯೋ ಆ ಸಮಯದಲ್ಲಿ ಎಷ್ಟು ಖುಷಿಯಾಗುತ್ತದೆ! ಪ್ರಾಪ್ತಿಯಾಗಿ ಬಿಟ್ಟರೆ ನಂತರ ಸಾಮಾನ್ಯ ಮಾತಾಗಿ ಬಿಡುತ್ತದೆ. ಆದರೆ ಯಾವಾಗ ಪ್ರಾಪ್ತಿಯಾಗುತ್ತದೆ, ಆ ಸಮಯದ ನಶೆ ಮತ್ತು ಖುಷಿ ಅಲೌಕಿಕವಾಗಿರುತ್ತದೆ. ಅಂದಾಗ ಎಷ್ಟು ಖುಷಿ ಮತ್ತು ನಶೆ ಇರುತ್ತದೆ.
ಏಕೆಂದರೆ ಕೊಡುವವರು ಬೇಹದ್ದಿನವರಾಗಿದ್ದಾರೆ. ದಾತಾರು ಸಹ ಬೇಹದ್ದ ಆಗಿದ್ದಾರೆ ಮತ್ತು ಸಿಗುವುದೂ ಬೇಹದ್ದಾಗಿ ಸಿಗುತ್ತದೆ. ಹಾಗಾದರೆ ಯಾವುದರ ಮಾಲೀಕರಾಗಿದ್ದೀರಾ ಹದ್ದಿನ ಅಥವಾ ಬೇಹದ್ದಿನ? ಮೂರು ಲೋಕ ತಮ್ಮದಾಗಿಸಿಕೊಂಡಿದ್ದೀರಿ. ಏನೆಂದು ಹೇಳಲಾಗುತ್ತದೆ – ಅಧಿಕಾರಿ ಆತ್ಮಗಳು. ಯಾವುದೇ ಅಪ್ರಾಪ್ತಿಯಿದೆಯೇ? ಏನು ಗೀತೆಯನ್ನು ಹಾಡುತ್ತೀರಾ?
(ಪಡೆದುಕೊಳ್ಳಬೇಕಾಗಿರುವುದನ್ನು ಪಡೆದುಬಿಟ್ಟೆನು) ಪಡೆದುಕೊಳ್ಳಬೇಕಾಗಿರುವುದನ್ನು ಪಡೆದುಬಿಟ್ಟೆನು, ಈಗ ಪಡೆಯುವುದಕ್ಕೆ ಏನಿಲ್ಲ. ಈ ಗೀತೆಯನ್ನು ಹಾಡುತ್ತೀರಾ?
ಯಾವುದೇ ಅಪ್ರಾಪ್ತಿ ಇದೆಯೇ, ಹಣ ಬೇಕಾಗಿದೆಯೇ, ಮನೆ ಬೇಕಾಗಿದೆಯೇ! ರಾಜಕಾರಣಿಗಳ ಕುರ್ಚಿ ಬೇಕಾಗಿದೆಯೇ?
ಏನು ಬೇಕಾಗಿಲ್ಲ ಏಕೆಂದರೆ ಕುರ್ಚಿ ಇದ್ದರೂ ಒಂದು ಜನ್ಮವು ಸಹ ಭರವಸೆಯಿಲ್ಲ ಮತ್ತು ನಿಮಗೆ ಎಷ್ಟು ಗ್ಯಾರಂಟಿ ಇದೆ?
21 ಜನ್ಮಗಳ ಗ್ಯಾರಂಟಿ ಇದೆ. ಗ್ಯಾರಂಟಿ ಕಾರ್ಡ್ನ್ನು ಮಾಯೆಯು ಕಸಿದುಕೊಳ್ಳುವುದಿಲ್ಲವೇ? ಹೇಗೆ ಇಲ್ಲಿ ಪಾಸ್ಪೋರ್ಟ್ ಕಳೆದುಕೊಂಡು ಬಿಟ್ಟರೆ ಎಷ್ಟು ಕಷ್ಟವಾಗುತ್ತದೆ! ಅಂದಾಗ ಗ್ಯಾರಂಟಿ ಕಾರ್ಡ್ನ್ನು ಮಾಯೆಯು ಕಸಿದುಕೊಳ್ಳುವುದಿಲ್ಲವೇ? ಕಣ್ಣು ಮುಚ್ಚಾಲೇ ಆಡುತ್ತದೆ.
ನಂತರ ನೀವೇನು ಮಾಡುವಿರಿ? ಆದರೆ ಇಷ್ಟು ಶಕ್ತಿಶಾಲಿಗಳಾಗಿ ಮಾಯೆಗೆ ಸಾಹಸವಿರಬಾರದು.
4. ಪ್ರತಿಯೊಂದು ಕರ್ಮ ತ್ರಿಕಾಲದರ್ಶಿಗಳಾಗಿ ಮಾಡಿ
ಎಲ್ಲರೂ ತಮ್ಮನ್ನು ಸಿಂಹಾಸನಾಧಿಕಾರಿ ಆತ್ಮಗಳೆಂದು ಅನುಭವ ಮಾಡುತ್ತೀರಾ?
ಈಗ ಸಿಂಹಾಸನ ಸಿಕ್ಕಿ ಬಿಟ್ಟಿತೇ ಅಥವಾ ಭವಿಷ್ಯದಲ್ಲಿ ಸಿಗುವುದೋ, ಏನು ಹೇಳುವಿರಿ? ಎಲ್ಲರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೀರಾ? (ಹೃದಯ ಸಿಂಹಾಸನ ಬಹಳ ದೊಡ್ಡದಾಗಿದೆ) ಹೃದಯಸಿಂಹಾಸನವಂತು ದೊಡ್ಡದಾಗಿದೆ ಆದರೆ ಸತ್ಯಯುಗದ ಸಿಂಹಸನದ ಮೇಲೆ ಒಂದೇ ಸಮಯದಲ್ಲಿ ಎಷ್ಟು ಜನ ಕುಳಿತುಕೊಳ್ಳುತ್ತೀರಾ? ಸಿಂಹಾಸನದ ಮೇಲೆ ಭಲೆ ಯಾರಾದರೂ ಕುಳಿತುಕೊಳ್ಳಲಿ ಆದರೆ ಸಿಂಹಾಸನದ ಅಧಿಕಾರಿಗಳು ರಾಯಲ್ ಪರಿವಾರದಲ್ಲಂತು ಬರುತ್ತಾರಲ್ಲವೇ. ಸಿಂಹಾಸನದ ಮೇಲೆ ಒಟ್ಟಿಗೆ ಯಾರು ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ಸಮಯ ಎಲ್ಲರು ಸಿಂಹಾಸನಾಧಿಕಾರಿಯಾಗಿದ್ದಾರೆ ಈ ಕಾರಣ ಈ ಜನ್ಮದ ಮಹತ್ವವಿದೆ.
ಎಷ್ಟು ಬೇಕೋ,
ಯಾರು ಬೇಕೋ ಹೃದಯ ಸಿಂಹಾಸನ ಅಧಿಕಾರಿಗಳಂತು ಆಗಬಹುದು.
ಈ ಸಮಯ ಬೇರೆ ಯಾವುದಾದರೂ ಸಿಂಹಾಸನವಿದೆಯೇ? ಅದು ಯಾವುದಾಗಿದೆ? (ಅಕಾ ಸಿಂಹಾಸನ) ತಾವು ಅವಿನಾಶಿ ಆತ್ಮಗಳ ಸಿಂಹಾಸನ ಈ ಭೃಕುಟಿಯಾಗಿದೆ. ಬೃಕುಟಿಯ ಸಿಂಹಾಸನದ ಅಧಿಕಾರಿಗಳಾಗಿದ್ದೀರಾ ಹಾಗು ಹೃದಯ ಸಿಂಹಾಸನದ – ಅಧಿಕಾರಿಗಳು ಆಗಿದ್ದೀರಾ. ಡಬಲ್ ಸಿಂಹಾಸನಾಧಿಕಾರಿಗಳಲ್ಲವೇ! ನಶೆಯಿದೆಯಲ್ಲವೇ - ನಾನಾತ್ಮ ಭೃಕುಟಿಯ ಅಕಾಲ ಸಿಂಹಾಸನ ಅಧಿಕಾರಿಯಾಗಿದ್ದೇನೆ. ಸಿಂಹಾಸನಾಧಿಕಾರಿ ಆತ್ಮನ ಸ್ವಯಂನ ಮೇಲೆ ರಾಜ್ಯ ಇದೆ. ಈ ಕಾರಣ ಸ್ವರಾಜ್ಯ ಅಧಿಕಾರಿಗಳಾಗಿದ್ದೀರಾ. ಸ್ವರಾಜ್ಯ ಅಧಿಕಾರಿಯಾಗಿದ್ದೇನೆ – ಈ ಸ್ಮೃತಿ ಸಹಜವಾಗಿ ತಂದೆಯ ಮುಖಾಂತರ ಸರ್ವ ಪ್ರಾಪ್ತಿಗಳ ಅನುಭವ ಮಾಡಿಸುತ್ತದೆ.
ಹಾಗಾದರೆ ಮೂರು ಸಿಂಹಾಸನದ ಜ್ಞಾನವಿದೆಯಲ್ಲವೇ. ಜ್ಞಾನಪೂರ್ಣರಾಗಿದ್ದೀರಲ್ಲವೇ. ಶಕ್ತಿಶಾಲಿಗಳಾಗಿದ್ದೀರಾ ಅಥವಾ ಕೇವಲ ಜ್ಞಾನಸ್ವರೂಪರಾಗಿದ್ದೀರಾ? ಎಷ್ಟು ಜ್ಞಾನಸ್ವರೂಪರಾಗಿದ್ದೀರಾ, ಅಷ್ಟೇ ಶಕ್ತಿಶಾಲಿಗಳಾಗಿದ್ದೀರಾ ಅಥವಾ ಜ್ಞಾನಪೂರ್ಣರು ಅಧಿಕರಾಗಿದ್ದೀರಾ, ಶಕ್ತಿಶಾಲಿ ಕಡಿಮೆ?
ಜ್ಞಾನದಲ್ಲಿ ಬುದ್ಧಿವಂತರಾಗಿದ್ದೀರಿ! ಜ್ಞಾನಪೂರ್ಣ ಹಾಗು ಶಕ್ತಿಶಾಲಿ ಎರಡು ಜೊತೆ ಜೊತೆಯಲ್ಲಿದೆ.
ಮೂರು ಸಿಂಹಾಸನದ ಸ್ಮೃತಿ ಸದಾ ಇರಬೇಕು.
ಜ್ಞಾನದಲ್ಲಿ ಮೂರರ ಮಹತ್ವವಿದೆ. ತ್ರಿಕಾಲದರ್ಶಿಗಳು ಆಗುತ್ತೀರಾ. ಮೂರು ಕಾಲವನ್ನು ತಿಳಿದುಕೊಳ್ಳುತ್ತೀರಾ. ಅಥವಾ ಕೇವಲ ವರ್ತಮಾನವನ್ನು ತಿಳಿದುಕೊಳ್ಳುತ್ತೀರಾ? ಯಾವುದೇ ಕರ್ಮವನ್ನು ಮಾಡುತ್ತೀರೆಂದರೆ ತ್ರಿಕಾಲದರ್ಶಿಗಳಾಗಿ ಕರ್ಮವನ್ನು ಮಾಡುತ್ತೀರಾ ಅಥವಾ ಕೇವ¯
ಒಂದು ದರ್ಶಿಗಳಾಗಿ ಕರ್ಮ ಮಾಡುತ್ತೀರಾ?
ಏನಾಗಿದ್ದೀರಾ? ಒಂದು ದರ್ಶಿನಾ ಅಥವಾ ತ್ರಿಕಾಲದರ್ಶಿನಾ? ನಾಳೆ ಏನಾಗುವುದಿದೆ ಅದನ್ನು ತಿಳಿದ್ದಿದೀರಾ? ಹೇಳುತ್ತೀರಾ
- ನಾವಂತು ಇದನ್ನು ತಿಳಿದಿದ್ದೇವೆ, ನಾಳೆ ಏನಾಗುತ್ತದೆ ಅದು ಬಹಳ ಒಳ್ಳೆಯದೇ ಆಗುತ್ತದೆ. ಇದನ್ನಂತು ತಿಳಿದಿದ್ದೀರಲ್ಲವೇ. ಹಾಗಾದರೆ ತ್ರಿಕಾಲದರ್ಶಿಗಳಾಗಿದ್ದೀರಲ್ಲವೇ. ಏನಾಗಿ ಬಿಟ್ಟಿದೆ ಅದು ಸಹ ಒಳ್ಳೆಯದು,
ಏನಾಗುತ್ತಿದೆ ಅದು ಇನ್ನೂ ಒಳ್ಳೆಯದು ಏನಾಗುವುದಿದೆ ಅದು ಇನ್ನೂ ಬಹಳ ಒಳ್ಳೆಯದು! ಈ ನಿಶ್ಚಯವಿದೆಯಲ್ಲವೇ. ಒಳ್ಳೆಯದಕ್ಕಿಂತ ಒಳ್ಳೇಯದೇ ಆಗುತ್ತದೆ.
ಕೆಟ್ಟದು ಆಗುವುದಕ್ಕೆ ಸಾಧ್ಯವಿಲ್ಲ. ಏಕೆ?
ಒಳ್ಳೆಯವರಿಗಿಂತ ಓಳ್ಳೆಯ ತಂದೆ ಸಿಕ್ಕಿದ್ದಾರೆ,
ಒಳ್ಳೆಯವರಿಗಿಂತ ಒಳ್ಳೆಯವರು ತಾವು ಆಗಿದ್ದೀರಾ.
ಒಳ್ಳೆಯದಕ್ಕಿಂತ ಒಳ್ಳೆಯ ಕರ್ಮವನ್ನು ಮಾಡುತ್ತಿದ್ದೀರಾ. ಹಾಗಾದರೆ ಎಲ್ಲವು ಒಳ್ಳೆಯ ಅಲ್ಲವೇ.
ಸ್ವಲ್ಪ ಕೆಟ್ಟದು ಸ್ವಲ್ಪ ಒಳ್ಳೆಯದಾಗಿದೆಯೇ? ಯಾವಾಗ ಗೊತ್ತಾಗಿ ಬಿಡುತ್ತದೆ ನಾನು ಶ್ರೇಷ್ಠ ಆತ್ಮನಾಗಿದ್ದೇನೆಂದು, ಆಗ ಶ್ರೇಷ್ಠ ಆತ್ಮನ ಸಂಕಲ್ಪ,
ಮಾತು, ಕರ್ಮ ಒಳ್ಳೆಯದೇ ಆಗುತ್ತದೆಯಲ್ಲವೇ. ಸದಾ ಸ್ಮೃತಿಯನ್ನು ಇಟ್ಟೂಕೊಳ್ಳಬೇಕು ಕಲ್ಯಾಣಕಾರಿ ತಂದೆ ಸಿಕ್ಕಿದಾರೆಂದರೆ ಅಲ್ಲಿ ಸದಾ ಕಲ್ಯಾಣವೇ ಕಲ್ಯಾಣವಿದೆ.
ತಂದೆಗೆ ಹೇಳುತ್ತಿರಲ್ಲವೇ ವಿಶ್ವ ಕಲ್ಯಾಣಕಾರಿ ಹಾಗು ತಾವು ಮಾ|| ವಿಶ್ವಕಲ್ಯಾಣಕಾರಿಗಳಾಗಿದ್ದೀರಲ್ಲವೇ. ಯಾರು ವಿಶ್ವಕಲ್ಯಾಣವನ್ನು ಮಾಡುವವರು ಆಗಿದ್ದಾರೆ ಅವರ ಅಕಲ್ಯಾಣ ಆಗುವುದಕ್ಕೆ ಸಾಧ್ಯವೇ ಇಲ್ಲ.
ಇದಕ್ಕಾಗಿ ಈ ನಿಶ್ಚಯವನ್ನು ಇಟ್ಟೂಕೊಳ್ಳಬೇಕು ಪ್ರತಿ ಸಮಯ,
ಪ್ರತಿ ಕಾರ್ಯ,
ಪ್ರತಿ ಸಂಕಲ್ಪ ಕಲ್ಯಾಣಕಾರಿಯಾಗಿದೆಯೇ. ಸಂಗಮಯುಗಕ್ಕೂ ಹೆಸರನ್ನು ಕೊಡಲಾಗುತ್ತದೆ ಕಲ್ಯಾಣಕಾರಿ ಯುಗವೆಂದು ಹಾಗಾದರೆ ಅಕಲ್ಯಾಣ ಆಗುವುದೇ ಇಲ್ಲ.
ಹಾಗಾದರೆ ಏನು ನೆನಪಿಟ್ಟುಕೊಳ್ಳುತ್ತೀರಾ? ಏನಾಗುತ್ತಿದೆ ಅದು ಒಳ್ಳೆಯದು ಹಾಗು ಏನಾಗುವುದಿದೆ ಅದು ಬಹಳ-ಬಹಳ ಒಳ್ಳೆಯದು.
ಅಂದಾಗ ಈ ಸ್ಮೃತಿ ಸದಾ ಮುಂದುವರೆಸುತ್ತಿರುತ್ತದೆ. ಒಳ್ಳೆಯದು,
ಎಲ್ಲರೂ ಮೂಲೆ-ಮೂಲೆ ತಂದೆಯ ಬಾವುಟವನ್ನು ಹಾರಿಸುತ್ತಿದ್ದೀರಾ. ಎಲ್ಲರೂ ಬಹಳ ಸಾಹಸ ಹಾಗು ತೀವ್ರ ಪುರುಷಾರ್ಥದಿಂದ ಮುಂದುವರೆಯುತ್ತಿದ್ದೀರಿ ಹಾಗು ಮುಂದುವರೆಯುತ್ತ ಇರುತ್ತೀರಿ.
ಭವಿಷ್ಯ ಕಾಣಿಸುತ್ತದೆಯಲ್ಲವೇ. ಯಾರದರೂ ಕೇಳಲಿ ತಮ್ಮ ಭವಿಷ್ಯ ಏನಾಗಿದೆ ಎಂದು?
ಆಗ ಹೇಳಿ ನಮಗೆ ಗೊತ್ತಿದೆ ಎಂದು, ಬಹಳ ಒಳ್ಳೆಯದಾಗಿದೆ. ಒಳ್ಳೆಯದು.
ವರದಾನ:
ತಮ್ಮ ಮಸ್ತಕದಲ್ಲಿ
ಶ್ರೇಷ್ಠ ಭಾಗ್ಯದ
ಗೆರೆಯನ್ನು ನೋಡುತ್ತಾ
ಸರ್ವಚಿಂತೆಗಳಿಂದ ಮುಕ್ತ
ನಿಶ್ಚಿಂತ ಚಕ್ರವರ್ತಿ
ಭವ
ನಿಶ್ಚಿಂತವಾಗಿರುವ ಬಾಧ್ಷಾಹಿ ಎಲ್ಲಾ ಬಾದ್ಷಾಹಿಗಳಿಗಿಂತಲೂ ಶ್ರೇಷ್ಠವಾಗಿದೆ.
ಒಂದುವೇಳೆ ಯಾರಾದರೂ ಕಿರೀಟ ಧರಿಸಿ ಸಿಂಹಾಸನದ ಮೇಲೆ ಕುಳಿತು ಚಿಂತೆ ಮಾಡತ್ತಿದ್ದರೆ ಇದು ಸಿಂಹಸನವಾಯಿತೊ
ಅಥವಾ ಚಿಂತೆಯೋ? ಭಾಗ್ಯವಿಧಾತ ಭಗವಂತನು ನಿಮ್ಮ ಮಸ್ತಕದ ಮೇಲೆ ಶ್ರೇಷ್ಠ ಭಾಗ್ಯದ ಗೆರೆಯನ್ನು ಎಳೆದಿದ್ದಾರೆ,
ನಿಶ್ಚಿಂತಚಕ್ರವರ್ತಿ ಆಗುವಿರಿ. ಆದ್ದರಿಂದ ಸದಾ ತಮ್ಮ ಮಸ್ತಕದ ಮೇಲೆ ಶ್ರೇಷ್ಠ ಭಾಗ್ಯದ ಗೆರೆಯನ್ನು ನೋಡುತ್ತಿರಿ- ವ್ಹಾ! ನನ್ನ ಶ್ರೇಷ್ಠ ಈಶ್ವರೀಯ ಭಾಗ್ಯ, ಇದೇ ಹೆಮ್ಮೆಯಲ್ಲಿದ್ದಾಗ ಎಲ್ಲಾ ಚಿಂತೆಗಳೂ ಸಮಾಪ್ತಿಯಾಗಿಬಿಡುವುದು.
ಸ್ಲೋಗನ್:
ಏಕಾಗ್ರತೆಯ ಶಕ್ತಿಯ ಮುಖಾಂತರ ಆತ್ಮಗಳನ್ನು ಆಹ್ವಾನ ಮಾಡಿ ಆತ್ಮೀಯ ಸೇವೆ ಮಾಡುವುದೇ ಸತ್ಯ ಸೇವೆಯಾಗಿದೆ.
0 Comments