Header Ads Widget

Header Ads

KANNADA MURLI 07.01.2023

 

07/01/23  ಪ್ರಾತಃಮುರುಳಿ  ಓಂಶಾಂತಿ  ಬಾಪ್ದಾದಾ  ಮಧುಬನ


Listen to the Murli audio file



 

ಮಧುರ ಮಕ್ಕಳೇ - ನಿಮಗೆ ತಂದೆಯ ಮುಖಾಂತರ ತಂದೆಯ ಲೀಲೆ ಅರ್ಥಾತ್ ನಾಟಕದ ಆದಿ-ಮಧ್ಯ-ಅಂತ್ಯದ ಜ್ಞಾನ ಸಿಕ್ಕಿದೆ, ಈಗ ನಾಟಕ ಪೂರ್ಣವಾಗುತ್ತದೆ, ನಾವು ಮನೆಗೆ ಹೋಗುತ್ತೇವೆ ಎಂದು ನಿಮಗೆ ತಿಳಿದಿದೆ

ಪ್ರಶ್ನೆ:

ಸ್ವಯಂನ್ನು ತಂದೆಯ ಬಳಿ ರಿಜಿಸ್ಟರ್ ಮಾಡಿಸಬೇಕಾದರೆ ಯಾವ ಒಂದು ನಿಯಮವಿದೆ?

ಉತ್ತರ:

ತಂದೆಯ ಬಳಿ ರಿಜಿಸ್ಟರ್ ಮಾಡಿಸಬೇಕಾದರೆ ಒಂದು ತಂದೆಯ ಮೇಲೆ ಸಂಪೂರ್ಣ ಬಲಿಹಾರಿ ಆಗಬೇಕು 2)ಭಾರತವನ್ನು ಸ್ವರ್ಗ ಮಾಡುವ ಸೇವೆಯಲ್ಲಿ ತಮ್ಮದೆಲ್ಲವನ್ನು ಸಫಲ ಮಾಡಿಕೊಳ್ಳಬೇಕು. 3)ಸಂಪೂರ್ಣ ನಿರ್ವಿಕಾರಿಗಳಾಗುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಬೇಕು ಮತ್ತು ಇದ್ದು ತೋರಿಸಬೇಕು. ಆರೀತಿಯ ಮಕ್ಕಳ ಹೆಸರು ಸರ್ವಶಕ್ತಿವಂತ ಸರ್ಕಾರದ ರಿಜಿಸ್ಟರ್ನಲ್ಲಿ ಬರುತ್ತದೆ. ನಾವು ಭಾರತವನ್ನು ಸ್ವರ್ಗ ಹಾಗೂ ರಾಜಸ್ಥಾನವನ್ನಾಗಿ ಮಾಡುತ್ತೇವೆ ಎನ್ನುವ ನಶೆ ಇರಬೇಕು. ನಾವು ಭಾರತದ ಸೇವೆಗೋಸ್ಕರ ತಂದೆಯ ಮೇಲೆ ಬಲಿಹಾರಿ ಆಗಬೇಕು.

ಗೀತೆ:  ಓಂ ನಮಃ ಶಿವಾಯ.......

ಓಂ ಶಾಂತಿ. ಯಾರ ಮಹಿಮೆಯಲ್ಲಿ ಗೀತೆ ಇದೆ, ಅವರೇ ಕುಳಿತು ತಮ್ಮ ರಚನೆಯ ಮಹಿಮೆಯನ್ನು ತಿಳಿಸುತ್ತಿದ್ದಾರೆ, ಅದಕ್ಕೆ ಲೀಲೆ ಎಂದು ಹೇಳಲಾಗುತ್ತದೆ. ನಾಟಕಕ್ಕೆ ಲೀಲೆ ಎಂದು ಹೇಳಲಾಗುತ್ತದೆ ಮತ್ತು ಗುಣವಂತರ ಮಹಿಮೆಯಾಗುತ್ತದೆ ಅಂದಾಗ ಅವರ ಮಹಿಮೆ ಎಲ್ಲರಿಗಿಂತ ಭಿನ್ನವಾಗಿದೆ. ಆದರೆ ಮನುಷ್ಯರಿಗೆ ಗೊತ್ತಿಲ್ಲ. ಪರಮಪಿತ ಪರಮಾತ್ಮನ ಗಾಯನ ಬಹಳಷ್ಟು ಇದೆ. ಅವರ ಶಿವಜಯಂತಿಯೂ ಸಹ ಈಗ ಸಮೀಪದಲ್ಲಿ ಇದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಶಿವಜಯಂತಿಗೋಸ್ಕರ ಗೀತೆ ಬಹಳ ಚೆನ್ನಾಗಿ ಇದೆ. ನೀವು ಮಕ್ಕಳು ಅವರ ಲೀಲೆಯನ್ನು ಮತ್ತು ಅವರ ಮಹಿಮೆಯನ್ನು ತಿಳಿದುಕೊಂಡಿದ್ದೀರಿ ಅವಶ್ಯವಾಗಿ ಇದು ಲೀಲೆಯಾಗಿದೆ. ಅದಕ್ಕೆ ನಾಟಕವೆಂದು ಹೇಳಲಾಗುತ್ತದೆ. ದೇವತೆಗಳಿಗಿಂತಲೂ ನನ್ನ ಲೀಲೆ ಭಿನ್ನವಾಗಿದೆ ಎಂದು ತಂದೆಯೇ ಹೇಳುತ್ತಾರೆ. ಪ್ರತಿಯೊಬ್ಬರದ್ದೂ ಬೇರೆ-ಬೇರೆಯಾದ ಲೀಲೆ ಇದೆ. ಹೇಗೆ ಸರ್ಕಾರದಲ್ಲಿ ರಾಷ್ಟ್ರಪತಿಯ, ಮಂತ್ರಿಯ ಪದವಿ ಬೇರೆ-ಬೇರೆಯಾಗಿರುತ್ತದೆಯಲ್ಲವೇ. ಒಂದುವೇಳೆ ಪರಮಾತ್ಮ ಸರ್ವವ್ಯಾಪಿಯಾಗಿದ್ದರೆ ಎಲ್ಲರದೂ ಒಂದೇ ರೀತಿಯ ಪಾತ್ರವಿರುತ್ತಿತ್ತು. ಸರ್ವವ್ಯಾಪಿ ಎಂದು ಹೇಳಿರುವುದರಿಂದ ಎಲ್ಲರೂ ಹಸಿವಿನಿಂದ ಸಾಯುತ್ತಿದ್ದಾರೆ. ಮನುಷ್ಯರು ಯಾರೂ ತಂದೆಯನ್ನು, ತಂದೆಯ ಅಪರಂಪಾರ ಮಹಿಮೆಯನ್ನು ತಿಳಿದುಕೊಂಡಿಲ್ಲ. ಎಲ್ಲಿಯತನಕ ತಂದೆಯನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯತನಕ ರಚನೆಯನ್ನು ತಿಳಿದುಕೊಳ್ಳುವುದಿಲ್ಲ. ಈಗ ನೀವು ಮಕ್ಕಳು ರಚನೆಯನ್ನು ತಿಳಿದುಕೊಂಡಿದ್ದೀರಿ. ಬ್ರಹ್ಮಾಂಡ, ಸೂಕ್ಷ್ಮವತನ ಮತ್ತು ಮನುಷ್ಯ ಸೃಷ್ಟಿಯ ಚಕ್ರವನ್ನು ಬುದ್ಧಿಯಲ್ಲಿ ತಿರುಗಿಸುತ್ತಿರಬೇಕು. ಇದು ಲೀಲೆ ಅಥವಾ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಾಗಿದೆ. ಸಮಯದಲ್ಲಿ ಪ್ರಪಂಚದ ಮನುಷ್ಯರು ನಾಸ್ತಿಕರಾಗಿದ್ದಾರೆ. ಏನೂ ಸಹ ತಿಳಿದುಕೊಂಡಿಲ್ಲ ಕಾರಣ ಬಹಳ ಸುಳ್ಳನ್ನು ಬರೆದಿದ್ದಾರೆ. ಸಾಧು-ಸಂತರು ಸಮ್ಮೇಳನವನ್ನು ಮಾಡುತ್ತಾರೆ, ಈಗ ನಾಟಕವು ಪೂರ್ಣವಾಗುತ್ತದೆ ಎಂದು ಅವರಿಗೆ ಗೊತ್ತಿಲ್ಲ. ಈಗ ಅವರಿಗೆ ಸ್ವಲ್ಪ ಟಚ್ ಆಗುತ್ತದೆ. ಈಗ ನಾಟಕ ಪೂರ್ಣವಾಗುತ್ತದೆ. ಈಗ ರಾಮರಾಜ್ಯ ಬೇಕು ಎಂದು ಎಲ್ಲರೂ ಹೇಳುತ್ತಾರೆ. ಹೊಸ ಭಾರತವಾಗಲಿ ಎಂದು ಕ್ರಿಶ್ಚಿಯನ್ನರ ರಾಜ್ಯದಲ್ಲಿ ಹೇಳುವುದಿಲ್ಲ. ಈಗ ಬಹಳ ದುಃಖವಿದೆ ಅಂದಾಗ ಎಲ್ಲರೂ ಸಹ ಈಗ ಹೇ! ಪ್ರಭು ದುಃಖದಿಂದ ನಮ್ಮನ್ನು ಬಿಡಿಸಿ ಎಂದು ಕರೆಯುತ್ತಿದ್ದಾರೆ. ಎಲ್ಲರೂ ತಮ್ಮ-ತಮ್ಮ ರಾಜ್ಯವನ್ನು ಮಾಡುತ್ತಾರೆ ಎಂದು ಅವರು ತಿಳಿದುಕೊಂಡಿದ್ದಾರೆ ಆದರೆ ವಿನಾಶವಾಗಲೇ ಬೇಕು ಎನ್ನುವುದು ಯಾರೂ ಸಹ ತಿಳಿದುಕೊಂಡಿಲ್ಲ.

ತಾವು ಮಕ್ಕಳಿಗೆ ಎಷ್ಟೊಂದು ಖುಷಿ ಇರಬೇಕು - ಬೇಹದ್ದಿನ ತಂದೆ ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಮಕ್ಕಳಿಗೂ ಸ್ವರ್ಗದ ರಾಜ್ಯಪದವಿ ಬೇಕು ಎಂಬ ವಿಚಾರವನ್ನು ತಾವು ಯಾರಿಗೆ ಬೇಕಾದರೂ ಹೇಳಬಹುದು. ಭಾರತವಾಸಿಗಳು ಅದಕ್ಕಾಗಿಯೇ ನೆನಪು ಮಾಡುತ್ತಾರೆ. ಭಗವಂತನನ್ನು ನೆನಪು ಮಾಡಲು ಭಕ್ತಿ ಮಾಡುತ್ತಾರೆ. ಕೃಷ್ಣಪುರಿಗೆ ಹೋಗಲು ಇಚ್ಛಿಸುತ್ತಾರೆ. ಅದಕ್ಕೆ ಸ್ವರ್ಗ ಎಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕೃಷ್ಣನ ರಾಜ್ಯವಿತ್ತು ಎಂಬುವುದನ್ನು ಯಾರೂ ತಿಳಿದಿಲ್ಲ. ಮತ್ತೆ ಕಲಿಯುಗ ಪೂರ್ಣವಾಗುತ್ತದೆ. ಸತ್ಯಯುಗ ಬರುತ್ತದೆ ಆಗ ಮತ್ತೆ ಕೃಷ್ಣನ ರಾಜ್ಯವಾಗುತ್ತದೆ. ಇದಂತೂ ಎಲ್ಲರಿಗೂ ಗೊತ್ತಿದೆ. ಎಲ್ಲರೂ ಶಿವಪರಮಾತ್ಮನ ಸಂತಾನರಾಗಿದ್ದೇವೆ. ನಂತರ ಪರಮಾತ್ಮನೇ ಹೊಸ ಸೃಷ್ಟಿಯನ್ನು ರಚನೆ ಮಾಡುತ್ತಾರೆ. ಅವಶ್ಯವಾಗಿ ಬ್ರಹ್ಮನ ಮುಖದ ಮೂಲಕವೇ ರಚಿಸುತ್ತಾರೆ. ಬ್ರಹ್ಮಾಮುಖವಂಶಾವಳಿ ಅವಶ್ಯವಾಗಿ ಬ್ರಾಹ್ಮಣ ಕುಲಭೂಷಣರಾಗುತ್ತಾರೆ. ಅದು ಸಂಗಮದ ಸಮಯವಾಗುತ್ತದೆ. ಸಂಗಮಯುಗ ಕಲ್ಯಾಣಕಾರಿಯಾಗಿದೆ. ಪರಮಾತ್ಮನೇ ಕುಳಿತು ರಾಜಯೋಗವನ್ನು ಕಲಿಸುತ್ತಾರೆ ಈಗ ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ಕೆಲವರು ಕೇಳುತ್ತಾರೆ - ಬ್ರಹ್ಮನ ತನುವಿನಲ್ಲಿ ಪರಮಾತ್ಮನೇ ಬಂದು ರಾಜಯೋಗ ಕಲಿಸುತ್ತಾರೆ ಎಂದು ಹೇಗೆ ಒಪ್ಪುವುದು. ತಾವೂ ಸಹ ಬ್ರಹ್ಮಾಮುಖವಂಶಾವಳಿ ಆಗಿ ರಾಜಯೋಗವನ್ನು ಕಲಿತಾಗ ತಾನಾಗಿಯೇ ತಮಗೆ ಅನುಭವ ಆಗುತ್ತದೆ. ಇದರಲ್ಲಿ ಅಂಧಶ್ರದ್ದೆಯ ಯಾವುದೇ ಮಾತಿಲ್ಲ. ಇಡೀ ಜಗತ್ತಿನಲ್ಲಿ ಅಂಧಶ್ರದ್ದೆ ಇದೆ. ಅದರಲ್ಲಿಯೂ ಭಾರತದಲ್ಲಿ ಗೊಂಬೆಗಳ ಪೂಜೆ ಬಹಳ ಇದೆ. ಬ್ರಹ್ಮನಿಗೆ ಎಷ್ಟೊಂದು ಭುಜಗಳನ್ನು ತೋರಿಸುತ್ತಾರೆ ಈಗ ಅದು ಹೇಗೆ ಆಗಲು ಸಾಧ್ಯ. ಬ್ರಹ್ಮನಿಗೆ ಬಹಳಷ್ಟು ಮಕ್ಕಳಿದ್ದಾರೆ. ನಾಲ್ಕು ಭುಜಗಳನ್ನು ತೋರಿಸುತ್ತಾರೆ 2 ಲಕ್ಷ್ಮಿಯದು 2 ನಾರಾಯಣನದಾಗಿದೆ. ಹಾಗೆಯೇ ಬ್ರಹ್ಮನಿಗೂ ಸಹ ಎಷ್ಟೊಂದು ಮಕ್ಕಳಿದ್ದಾರೆ. ನಾಲ್ಕು ಕೋಟಿ ಮಕ್ಕಳಿದ್ದಾಗ 8 ಕೋಟಿ ಭುಜ ಆಗುತ್ತದೆ ಆದರೆ ರೀತಿ ಇಲ್ಲ. ಬಾಕಿ ಪ್ರಜೆಗಳಂತೂ ಬಹಳಷ್ಟು ಆಗುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗದಿಯಾಗಿದೆ. ತಂದೆ ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಕೊನೆಗೂ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಅನೇಕ ಪ್ರಕಾರದ ಯೋಜನೆಗಳನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ತಾವು ಮಕ್ಕಳಿÀಗಾಗಿ ತಂದೆಯದು ಒಂದೇ ಯೋಜನೆ ಇದೆ, ರಾಜಧಾನಿ ಈಗ ಸ್ಥಾಪನೆ ಆಗುತ್ತಿದೆ. ಯಾರೆಷ್ಟು ಶ್ರಮ ಪಟ್ಟು ತಮ್ಮ ಸಮಾನ ಮಾಡಿಕೊಳ್ಳುತ್ತಾರೋ ಅಷ್ಟೇ ಉತ್ತಮ ಪದವಿಯನ್ನು ಪಡೆಯುತ್ತಾರೆ. ತಂದೆಗೆ ಜ್ಞಾನಪೂರ್ಣ, ಆನಂದಸಾಗರ ಹಾಗೂ ದಯಾಹೃದಯಿ ಎಂದು ಹೇಳುತ್ತಾರೆ. ಡ್ರಾಮಾದಲ್ಲಿ ನನ್ನ ಪಾತ್ರವೂ ಇದೆ ಎಂದು ತಂದೆ ಹೇಳುತ್ತಾರೆ. ಮಾಯೆ ಎಲ್ಲರ ಮೇಲೆ ನಿರ್ದಯಿ ಆಗಿದೆ. ತಂದೆ ಬಂದು ದಯೆ ತೋರಿಸಬೇಕಾಗುತ್ತದೆ. ತಾವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ. ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತೇನೆ. ಜ್ಞಾನಪೂರ್ಣರಿಗೆ ಜ್ಞಾನಸಾಗರ ಎಂದು ಹೇಳಲಾಗುತ್ತದೆ. ತಾವು ಮಕ್ಕಳು ತಿಳಿದಿದ್ದೀರಿ ಯಾರಿಗೆ ಬೇಕಾದರೂ ತಿಳಿಸಬಹುದು. ನಾವು ನಿರಾಕಾರ ಪರಮಪಿತ ಪರಮಾತ್ಮನಿಗೆ ಮಾನ್ಯತೆ ಕೊಡುತ್ತೇವೆ. ಮೊಟ್ಟಮೊದಲು ಅವರ ಮಹಿಮೆಯನ್ನು ಮಾಡಬಹುದು - ಅವರು ಬಂದು ರಾಜಯೋಗದ ಮೂಲಕ ಸ್ವರ್ಗವನ್ನು ರಚಿಸುತ್ತಾರೆ ನಂತರ ಸ್ವರ್ಗವಾಸಿಗಳ ಮಹಿಮೆಯನ್ನು ಮಾಡಬೇಕು. ಭಾರತ ಸ್ವರ್ಗವಾಗಿತ್ತು ಆಗ ಎಲ್ಲರೂ ಸರ್ವಗುಣಸಂಪನ್ನ, 16 ಕಲಾ ಸಂಪೂರ್ಣ......... ಆಗಿದ್ದರು.. 5000 ವರ್ಷಗಳ ಮಾತಾಗಿದೆ. ಪರಮಾತ್ಮನ ಮಹಿಮೆ ಎಲ್ಲರಿಗಿಂತ ಭಿನ್ನವಾಗಿದೆ, ಆದರೂ ಸಹ ದೇವತೆಗಳ ಮಹಿಮೆ ಇದೆ. ಇದರಲ್ಲಿ ಅಂಧಶ್ರದ್ದೆಯ ಮಾತಿಲ್ಲ. ಇಲ್ಲಂತೂ ಎಲ್ಲಾ ಮಕ್ಕಳಿದ್ದಾರೆ, ಶಿಷ್ಯರಲ್ಲ. ಇದಂತೂ ಪರಿವಾರವಾಗಿದೆ. ನಾವು ಈಶ್ವರನ ಪರಿವಾರದವರು. ನಾವೆಲ್ಲಾ ಆತ್ಮಗಳು ಪರಮಪಿತ ಪರಮಾತ್ಮನ ನಿಜವಾದ ಮಕ್ಕಳಾಗಿದ್ದೇವೆ ಅಂದಮೇಲೆ ಪರಿವಾರವಾಯಿತಲ್ಲವೇ. ನಿರಾಕಾರ ಮತ್ತೆ ಸಾಕಾರದಲ್ಲಿ ಬರುತ್ತಾರೆ ಸಮಯದಲ್ಲಿ ಇದು ವಿಚಿತ್ರ ಪರಿವಾರವಾಗಿದೆ, ಇದರಲ್ಲಿ ಸಂಶಯದ ಮಾತಿಲ್ಲ. ಎಲ್ಲರೂ ಶಿವನ ಸಂತಾನರಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಸಂತಾನರೆಂದೂ ಸಹ ಗಾಯನವಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಹೊಸ ಸೃಷ್ಟಿಯ ಸ್ಥಾಪನೆ ಆಗುತ್ತದೆ. ಹಳೆಯ ಸೃಷ್ಟಿ ಸಮ್ಮುಖದಲ್ಲಿ ಇದೆ. ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಬ್ರಹ್ಮಾಮುಖವಂಶಾವಳಿ ಆಗದ ವಿನಃ ತಂದೆಯ ಆಸ್ತಿ ಸಿಗಲು ಸಾಧ್ಯವಿಲ್ಲ. ಬ್ರಹ್ಮನ ಬಳಿ ಜ್ಞಾನವಿಲ್ಲ. ಜ್ಞಾನಸಾಗರ ಶಿವಬಾಬಾ ಆಗಿದ್ದಾರೆ. ಅವರಿಂದಲೇ ನಾವು ಆಸ್ತಿಯನ್ನು ಪಡೆಯುತ್ತೇವೆ. ನಾವು ಮುಖವಂಶಾವಳಿಗಳು ಎಲ್ಲರೂ ರಾಜಯೋಗ ಕಲಿಯುತ್ತಿದ್ದೇವೆ. ನಮ್ಮೆಲ್ಲರಿಗೂ ಓದಿಸುವವರು ಶಿವಬಾಬಾ. ಅವರು ಬ್ರಹ್ಮಾರವರ ತನುವಿನಲ್ಲಿ ಬಂದು ಓದಿಸುತ್ತಾರೆ. ಪ್ರಜಾಪಿತ ಬ್ರಹ್ಮಾ ಯಾರು ವ್ಯಕ್ತರಾಗಿದ್ದಾರೆ ಅವರು ಸಂಪೂರ್ಣರಾದಾಗ ಫರಿಸ್ಥೆಯಾಗುತ್ತಾರೆ. ಸೂಕ್ಷ್ಮವತನವಾಸಿಗಳಿಗೆ ಫರಿಸ್ಥೆ ಎಂದು ಹೇಳಲಾಗುತ್ತದೆ. ಅಲ್ಲಿ ಮೂಳೆ-ಮಾಂಸ ಇರುವುದಿಲ್ಲ. ಮಕ್ಕಳು ಸಾಕ್ಷಾತ್ಕಾರ ಮಾಡಿಕೊಂಡಿದ್ದಾರೆ. ತಂದೆಯು ಹೇಳುತ್ತಾರೆ ಭಕ್ತಿ ಮಾರ್ಗದ ಅಲ್ಪಕಾಲದ ಸುಖವೂ ಸಹ ನನ್ನಿಂದಲೇ ತಮಗೆ ಸಿಗುತ್ತದೆ. ನಾನು ಒಬ್ಬನೇ ದಾತನಾಗಿದ್ದೇನೆ. ಆದ್ದರಿಂದ ಈಶ್ವರನ ಪ್ರತಿ ಅರ್ಪಣೆ ಮಾಡುತ್ತಾರೆ. ಈಶ್ವರನೇ ಫಲ ಕೊಡುತ್ತಾರೆಂದು ತಿಳಿದಿದ್ದಾರೆ. ಸಾಧುಸನ್ಯಾಸಿಗಳ ಹೆಸರನ್ನು ಹೇಳುವುದಿಲ್ಲ. ಕೊಡುವಂತಹ ತಂದೆ ಒಬ್ಬರೇ ಆಗಿದ್ದಾರೆ. ನಿಮಿತ್ತ ಮಾತ್ರ ಯಾರ ಮೂಲಕನಾದರೂ ಕೊಡಿಸುತ್ತಾರೆ, ಏಕೆಂದರೆ ಅವರ ಮಹಿಮೆಯನ್ನು ಹೆಚ್ಚಿಸಲು. ಅದೆಲ್ಲವೂ ಅಲ್ಪಕಾಲದ ಸುಖವಾಗಿದೆ. ಇದು ಬೇಹದ್ದಿನ ಸುಖ. ಹೊಸ-ಹೊಸ ಮಕ್ಕಳು ಬರುತ್ತಾರೆ ಅವರು ತಿಳಿಯುತ್ತಾರೆ - ಯಾರ ಮತದ ಮೇಲೆ ನಾವು ಇಷ್ಟು ದಿನ ನಡೆಯುತ್ತಿದ್ದೆವೋ ಅವರಿಗೂ ಜ್ಞಾನವನ್ನು ತಿಳಿಸಬೇಕು. ಸಮಯದಲ್ಲಿ ಎಲ್ಲರೂ ಮಾಯೆಯ ಮತದಲ್ಲಿ ಇದ್ದಾರೆ. ಇಲ್ಲಿ ತಮಗೆ ಈಶ್ವರೀಯ ಮತ ಸಿಗುತ್ತದೆ. ಮತ ಅರ್ಧಕಲ್ಪ ನಡೆಯುತ್ತದೆ ಏಕೆಂದರೆ ಸತ್ಯಯುಗ-ತ್ರೇತಾಯುಗದಲ್ಲಿ ನಾವು ಇದರ ಪ್ರಾಲಬ್ಧವನ್ನು ಭೋಗಿಸುತ್ತೇವೆ. ಅಲ್ಲಿ ಉಲ್ಟಾ ಮತ ಇರುವುದಿಲ್ಲ ಏಕೆಂದರೆ ಮಾಯೆಯೇ ಇರುವುದಿಲ್ಲ. ಉಲ್ಟಾ ಮತ ನಂತರ ಶುರುವಾಗುತ್ತದೆ. ಈಗ ಬಾಬಾ ನಮ್ಮನ್ನು ತಮ್ಮ ಸಮಾನ ತ್ರಿಕಾಲದರ್ಶಿ, ತ್ರಿಲೋಕನಾಥರನ್ನಾಗಿ ಮಾಡುತ್ತಾರೆ. ಬ್ರಹ್ಮಾಂಡಕ್ಕೂ ಮಾಲೀಕರಾಗುತ್ತೇವೆ ನಂತರ ಸೃಷ್ಟಿಗೆ ನಾವೇ ಮಾಲೀಕರಾಗುತ್ತೇವೆ. ತಂದೆಯು ತಮಗಿಂತಲೂ ಮಕ್ಕಳ ಮಹಿಮೆಯನ್ನು ಹೆಚ್ಚು ಮಾಡುತ್ತಾರೆ. ಇಡೀ ಸೃಷ್ಟಿಯಲ್ಲಿ ಮಕ್ಕಳಿಗಾಗಿ ಶ್ರಮ ಪಟ್ಟು ಅವರನ್ನು ತಮಗಿಂತಲೂ ಶ್ರೇಷ್ಠ ಮಾಡುವ ತಂದೆಯನ್ನು ಎಂದಾದರೂ ನೋಡಿದ್ದೀರಿ. ಹೇಳುತ್ತಾರೆ - ತಾವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ ನಾನು ಅನುಭವಿಸುವುದಿಲ್ಲ. ಬಾಕಿ ದಿವ್ಯದೃಷ್ಟಿಯ ಬೀಗದ ಕೈಯನ್ನು ನನ್ನ ಕೈಯಲ್ಲಿ ಇಟ್ಟುಕೊಳ್ಳುತ್ತೇನೆ. ಭಕ್ತಿಮಾರ್ಗದಲ್ಲಿಯೂ ಸಹ ನನಗೆ ಕೆಲಸಕ್ಕೆ ಬರುತ್ತದೆ. ಈಗಲೂ ಬ್ರಹ್ಮನ ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ, ಬ್ರಹ್ಮನ ಬಳಿ ಹೋಗಿ ರಾಜಯೋಗವನ್ನು ಕಲಿತು ಭವಿಷ್ಯದಲ್ಲಿ ರಾಜಕುಮಾರರಾಗಿ ಎಂದು ತಂದೆಯು ಹೇಳುತ್ತಾರೆ. ಇದಂತೂ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ. ರಾಜಕುಮಾರರೆಂದರೆ ಎಲ್ಲರೂ ಕಿರೀಟಧಾರಿಗಳಾಗಿರುತ್ತಾರೆ. ಬಾಕಿ ಮಕ್ಕಳಿಗೆ ಇದು ಗೊತ್ತಾಗುವುದಿಲ್ಲ. ಸೂರ್ಯವಂಶಿ ರಾಜಕುಮಾರನ ಸಾಕ್ಷಾತ್ಕಾರವಾಯಿತೋ ಅಥವಾ ಚಂದ್ರವಂಶೀ ರಾಜಕುಮಾರನೋ, ಯಾರು ತಂದೆಯ ಮಕ್ಕಳಾಗುತ್ತಾರೋ ಅವರು ರಾಜಕುಮಾರ-ಕುಮಾರಿ ಅವಶ್ಯವಾಗಿ ಆಗುತ್ತಾರೆ. ಇದರಲ್ಲಿ ಹಿಂದೆ-ಮುಂದೆ ಆಗಬಹುದು. ಚೆನ್ನಾಗಿ ಪುರುಷಾರ್ಥ ಮಾಡಿದರೆ ಸೂರ್ಯವಂಶಿ ಆಗುತ್ತಾರೆ ಇಲ್ಲವೆಂದರೆ ಚಂದ್ರವಂಶಿ. ಕೇವಲ ರಾಜಕುಮಾರರನ್ನು ನೋಡಿ ಖುಷಿ ಆಗಬಾರದು ಇದೆಲ್ಲವೂ ಪುರುಷಾರ್ಥದ ಮೇಲೆ ಆಧಾರವಾಗಿದೆ. ಬಾಬಾ ಪ್ರತಿಯೊಂದು ವಿಚಾರವನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ಇದರಲ್ಲಿ ಅಂಧಶ್ರದ್ದೆಯ ಮಾತಿಲ್ಲ. ಇದು ಈಶ್ವರೀಯ ಪರಿವಾರವಾಗಿದೆ. ಲೆಕ್ಕದಿಂದ ಅವರೂ ಸಹ ಈಶ್ವರನ ಸಂತಾನರಾಗಿದ್ದಾರೆ. ಅದರೆ ಅವರು ಕಲಿಯುಗದಲ್ಲಿ ಇದ್ದಾರೆ, ತಾವು ಸಂಗಮಯುಗದಲ್ಲಿ ಇದ್ದೀರಿ. ಯಾರ ಬಳಿ ಆದರೂ ಹೋದಾಗ ಹೇಳಿ ನಾವು ಶಿವವಂಶಿ, ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರೇ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಬೇರೆಯವರಿಗೆ ಚೆನ್ನಾಗಿ ತಿಳಿಸಲು ಶ್ರಮ ಪಡಬೇಕು. 100-50 ಜನಗಳಿಗೆ ತಿಳಿಸಿದರೆ ಅವರಿಂದ ಒಬ್ಬರು ಸಿಗುತ್ತಾರೆ. ಯಾರ ಅದೃಷ್ಟದಲ್ಲಿ ಇರುತ್ತದೋ ಕೋಟಿಯಲ್ಲಿ ಕೆಲವರು ಬರುತ್ತಾರೆ. ತಮ್ಮ ಸಮಾನ ಮಾಡಿಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಶ್ರೀಮಂತರ ಮಾತು ಎಲ್ಲರೂ ಕೇಳುತ್ತಾರೆ. ಮಂತ್ರಿ ಬಳಿಗೆ ಹೋದಾಗ ಅವರು ಕೇಳುತ್ತಾರೆ ನಿಮ್ಮ ಬಳಿ ಯಾರಾದರೂ ಮಂತ್ರಿಗಳು ಬರುತ್ತಾರೇನು? ಹೌದು ಬರುತ್ತಾರೆ ಎಂದು ಹೇಳಿದಾಗ ಒಳ್ಳೆಯದು ನಾವೂ ಬರುತ್ತೇವೆ ಎಂದು ಹೇಳುತ್ತಾರೆ.

ತಂದೆ ಹೇಳುತ್ತಾರೆ - ನಾನು ಸಾಧಾರಣನಾಗಿದ್ದೇನೆ ಅಂದಮೇಲೆ ಕೆಲವರು ಮಾತ್ರ ಶ್ರೀಮಂತರು ಬರುತ್ತಾರೆ. ಅಂತಿಮದಲ್ಲಿ ಅವಶ್ಯವಾಗಿ ಬರಲೇಬೇಕು. ತಾವು ಮಕ್ಕಳಿಗೆ ಬಹಳ ನಶೆ ಇರಬೇಕು - ಅವರಿಗೆ ತಿಳಿಸಬೇಕು ನಾವು ತನು-ಮನ-ಧನದಿಂದ ಭಾರತದ ಸೇವೆಯನ್ನು ಮಾಡುತ್ತೇವೆ. ತಾವು ಭಾರತದ ಸೇವೆಗಾಗಿಯೇ ಬಲಿ ಆಗಿದ್ದೀರಲ್ಲವೇ. ಇಂತಹ ಮಹಾದಾನಿಗಳು ಯಾರೂ ಇರುವುದಿಲ್ಲ. ಅವರಂತೂ ಹಣ ಕೂಡಿಟ್ಟು ಮನೆ ಇತ್ಯಾದಿಗಳನ್ನು ಮಾಡುತ್ತಿದ್ದಾರೆ. ಕೊನೆಗೆ ಇದೆಲ್ಲವೂ ಮಣ್ಣಿನಲ್ಲಿ ಸೇರಿ ಹೋಗುತ್ತದೆ. ನಾವು ಎಲ್ಲವನ್ನು ಬಾಬಾನ ಮೇಲೆ ಅರ್ಪಣೆ ಮಾಡಬೇಕು, ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ಎಲ್ಲವನ್ನು ತೊಡಗಿಸಬೇಕು. ನಂತರ ಆಸ್ತಿಯನ್ನೂ ಸಹ ತಾವೇ ಪಡೆಯುತ್ತೀರಿ. ತಮಗೆ ನಶೆ ಏರಿದೆ - ನಾವು ಸರ್ವ ಶಕ್ತಿವಂತನ ಮಕ್ಕಳಾಗಿದ್ದೇವೆ. ನಾವು ಅವರ ಬಳಿ ರಿಜಿಸ್ಟರ್ ಆಗಿದ್ದೇವೆ. ಬಾಬಾನ ಬಳಿ ರಿಜಿಸ್ಟರ್ ಆಗುವುದರಲ್ಲಿಯೇ ಬಹಳ ಶ್ರಮವಿದೆ. ಯಾವಾಗ ಸಂಪೂರ್ಣ ನಿರ್ವಿಕಾರಿಯಾಗಿ ಇರುತ್ತೇವೆ ಹಾಗೂ ರೀತಿ ಇದ್ದು ತೋರಿಸುತ್ತೇವೆ ಆಗ ಬಾಬಾ ಅವರನ್ನು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ನಾವು ಭಾರತವನ್ನು ಸ್ವರ್ಗ ಅಥವಾ ರಾಜಸ್ಥಾನವನ್ನಾಗಿ ಮಾಡುತ್ತಿದ್ದೇವೆ, ನಾವು ಅದರ ಮೇಲೆ ರಾಜ್ಯ ಮಾಡುತ್ತೇವೆ ಎಂಬ ನಶೆ ತಾವು ಮಕ್ಕಳಿಗೆ ಇರಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:

1. ನಾವು ಈಶ್ವರನ ಸಂತಾನರಾಗಿದ್ದೇವೆ ಒಬ್ಬ ಈಶ್ವರನ ಪರಿವಾರವಾಗಿದ್ದೇವೆ. ನಮಗೆ ಈಗ ಈಶ್ವರನ ಮತ ಸಿಗುತ್ತಿದೆ, ಆತ್ಮೀಯ ನಶೆಯಲ್ಲಿರಬೇಕು. ಉಲ್ಟಾ ಮತದಂತೆ ನಡೆಯಬಾರದು.

2. ಭಾರತದ ಸೇವೆಗಾಗಿ ಬ್ರಹ್ಮಾ ತಂದೆಯ ಸಮಾನ ಸಂಪೂರ್ಣ ಅರ್ಪಣೆ ಆಗಬೇಕು. ತನು-ಮನ-ಧನವನ್ನು ಭಾರತವನ್ನು ಸ್ವರ್ಗ ಮಾಡುವುದರಲ್ಲಿ ಸಫಲ ಮಾಡಬೇಕು. ಸಂಪೂರ್ಣ ದಾನಿಗಳಾಗಬೇಕು.

ವರದಾನ:

ಪರಮಾತ್ಮನ ಪ್ರೀತಿಯ ಛತ್ರಛಾಯೆಯಲ್ಲಿ ಸದಾ ಸುರಕ್ಷಿತರಾಗಿರುವಂತಹ ದುಃಖದ ಅಲೆಗಳಿಂದ ಮುಕ್ತ ಭವ


ಹೇಗೆ ಕಮಲ ಪುಷ್ಪ ಕೊಳಕಿನ ನೀರಿನಲ್ಲಿದ್ದರೂ ಸಹ ಬಿನ್ನವಾಗಿರುವುದು. ಮತ್ತು ಎಷ್ಟು ನ್ಯಾರಾ ಅಷ್ಟೇ ಎಲ್ಲರಿಗೂ ಪ್ರೀಯರಾಗಿರುವರು. ಅದೇ ರೀತಿ ತಾವು ಮಕ್ಕಳು ದುಃಖದ ಪ್ರಪಂಚದಿಂದ ನ್ಯಾರಾ ಮತ್ತು ತಂದೆಗೆ ಪ್ಯಾರಾ ಆಗಿರುವಿರಿ, ಪರಮಾತ್ಮ ಪ್ರೀತಿ ಛತ್ರಛಾಯೆಯಾಗಿಬಿಡುವುದು. ಮತ್ತು ಯಾರ ಮೇಲೆ ಪರಮಾತ್ಮ ಛತ್ರಛಾಯೆಯಿದೆ ಅವರನ್ನು ಯಾರು ಏನೂ ಮಾಡಲು ಸಾಧ್ಯ! ಇದಕ್ಕಾಗಿ ಹೆಮ್ಮೆ ಇಂದಿರಿ ನಾನು ಪರಮಾತ್ಮನ ಛತ್ರಛಾಯೆಯಲ್ಲಿರುವವನು, ದುಃಖದ ಅಲೆ ನಮ್ಮನ್ನು ಸ್ಪರ್ಷ ಮಾಡಲು ಸಹ ಸಾಧ್ಯವಿಲ್ಲ.

ಸ್ಲೋಗನ್:

ಯಾರು ತಮ್ಮ ಶ್ರೇಷ್ಠ ಚರಿತ್ರೆಯ ಮುಖಾಂತರ ಬಾಪ್ದಾದಾ ಹಾಗೂ ಬ್ರಾಹ್ಮಣ ಕುಲದ ಹೆಸರು ಪ್ರಸಿದ್ದ ಮಾಡುತ್ತಾರೆ ಅವರೇ ಕುಲದೀಪಕರಾಗಿದ್ದಾರೆ.

 Download PDF

Post a Comment

0 Comments