04/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ನೀವು
ಮುತ್ತುಗಳನ್ನು ಆರಿಸುವಂತಹ
ಹಂಸಗಳಾಗಿದ್ದೀರಿ, ನಿಮ್ಮದು
ಹಂಸಮಂಡಳಿಯಾಗಿದೆ, ನೀವು
ಅದೃಷ್ಟ ನಕ್ಷತ್ರಗಳಾಗಿದ್ದೀರಿ
ಏಕೆಂದರೆ ಸ್ವಯಂ
ಜ್ಞಾನಸೂರ್ಯ ತಂದೆಯು
ನಿಮಗೆ ಸಮ್ಮುಖದಲ್ಲಿ
ಓದಿಸುತ್ತಿದ್ದಾರೆ”
ಪ್ರಶ್ನೆ:
ತಂದೆಯು ಎಲ್ಲಾ ಮಕ್ಕಳಿಗೆ ಯಾವ ಒಂದು ಪ್ರಕಾಶತೆಯನ್ನು ಕೊಟ್ಟಿದ್ದಾರೆ? ಅದರಿಂದ ನಿಮ್ಮ ಪುರುಷಾರ್ಥವು ತೀವ್ರವಾಗಿದೆ?
ಉತ್ತರ:
ತಂದೆಯು ನೀವು ಮಕ್ಕಳಿಗೆ ಈಗ ಈ ಡ್ರಾಮಾದ ಅಂತಿಮವಾಗಿದೆ. ನೀವು ಹೊಸ ಪ್ರಪಂಚಕ್ಕೆ ಹೋಗಬೇಕೆನ್ನುವ
ಪ್ರಕಾಶತೆಯನ್ನು ಕೊಟ್ಟಿದ್ದಾರೆ.
ಏನು ಸಿಗಬೇಕೋ ಅದು ಸಿಗುತ್ತದೆ ಎನ್ನುವ ರೀತಿಯಲ್ಲ ತೀವ್ರ ಪುರುಷಾರ್ಥವಿರಬೇಕು.
ಪವಿತ್ರರಾಗಿ ಅನ್ಯರನ್ನು ಪವಿತ್ರರನ್ನಾಗಿ ಮಾಡಬೇಕು ಇದೇ ಬಹಳ ದೊಡ್ಡ ಸೇವೆಯಾಗಿದೆ. ಈ ರೀತಿ ಪ್ರಕಾಶತೆಯು ಬರುವುದರಿಂದ ನೀವು ಮಕ್ಕಳ ಪುರುಷಾರ್ಥವು ತೀವ್ರವಾಗುತ್ತದೆ.
ಗೀತೆ: ನೀವು ಪ್ರೀತಿಯ ಸಾಗರರಾಗಿದ್ದೀರಿ.........
ಓಂ ಶಾಂತಿ. ಪ್ರೀತಿಯ ಸಾಗರ, ಶಾಂತಿಯ ಸಾಗರ, ಆನಂದದ ಸಾಗರ, ಬೇಹದ್ದಿನ ತಂದೆಯು ಸಮ್ಮುಖದಲ್ಲಿ ಕುಳಿತು ಶಿಕ್ಷಣವನ್ನು ಕೊಡುತ್ತಿದ್ದಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಜ್ಞಾನಸೂರ್ಯ ತಂದೆಯು ನೀವು ಅದೃಷ್ಟ ನಕ್ಷತ್ರಗಳ ಸಮ್ಮುಖದಲ್ಲಿ ಕುಳಿತು ಓದಿಸುತ್ತಿದ್ದಾರೆ. ಈಗ ಕೊಕ್ಕರೆಗಳ ಮಂಡಳಿಯೇ ಹಂಸ ಮಂಡಳಿಯಾಗಿದೆ. ಮುತ್ತುಗಳನ್ನು ಆರಿಸಲು ತೊಡಗಿದ್ದೀರಿ. ಇಲ್ಲಿ ಎಲ್ಲಾ ಸಹೋದರ-ಸಹೋದರಿಯರು ಹಂಸಗಳಾಗಿದ್ದೀರಿ ಆದ್ದರಿಂದ ಹಂಸಮಂಡಳಿ ಎಂದು ಹೇಳಲಾಗುತ್ತದೆ. ಕಲ್ಪದ ಮೊದಲಿನವರೇ ಈ ಸಮಯದಲ್ಲಿ, ಈ ಜನ್ಮದಲ್ಲಿ ಒಬ್ಬರಿಗೊಬ್ಬರನ್ನು ತಿಳಿದುಕೊಳ್ಳುತ್ತಾರೆ. ಆತ್ಮೀಯ ತಂದೆ-ತಾಯಿ ಮತ್ತು ಸಹೋದರ-ಸಹೋದರಿಯರು ಒಬ್ಬರಿಗೊಬ್ಬರನ್ನು ತಿಳಿದುಕೊಂಡಿದ್ದಾರೆ. 5000 ವರ್ಷದ ಮೊದಲು ನಾವೇ ಪರಸ್ಪರದಲ್ಲಿ ಈ ನಾಮ-ರೂಪದಿಂದ ಮಿಲನವಾಗಿದ್ದೆವು ಎಂದು ನೆನಪಿದೆ. ಇದನ್ನು ನೀವು ಈಗ ಮಾತ್ರ ಹೇಳಲು ಸಾಧ್ಯ. ಇದನ್ನು ಇನ್ಯಾವುದೇ ಜನ್ಮದಲ್ಲಿ ಹೇಳಲು ಸಾಧ್ಯವಿಲ್ಲ. ಇಲ್ಲಿ ಬ್ರಹ್ಮಕುಮಾರ-ಕುಮಾರಿಯರಾಗಿರುವಂತಹವರೇ ಒಬ್ಬರಿಗೊಬ್ಬರು ತಿಳಿದುಕೊಳ್ಳುತ್ತಾರೆ. ಬಾಬಾ ನೀವೂ ಸಹ ಅವರೇ ಆಗಿದ್ದೀರಿ. ನಾವೂ ಸಹ ಅವರೇ ಆಗಿದ್ದೇವೆ. ನಾವು ಸಹೋದರ-ಸಹೋದರಿಯರು ಪುನಃ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಈಗ ತಂದೆ ಮತ್ತು ಮಕ್ಕಳು ಸಮ್ಮುಖದಲ್ಲಿ ಕುಳಿತಿದ್ದೀರಿ ನಂತರ ನಾಮ-ರೂಪ ಮುಂತಾದುವುಗಳೆಲ್ಲಾ ಬದಲಾಗುತ್ತವೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರು ನಾವು ಕಲ್ಪದ ಮೊದಲಿನ ಲಕ್ಷ್ಮೀ-ನಾರಾಯಣರಾಗಿದ್ದೇವೆ ಎಂದು ಹೇಳಲು ಸಾಧ್ಯವಿಲ್ಲ ಹಾಗೂ ಪ್ರಜೆಗಳೂ ಸಹ ಇವರು ಕಲ್ಪದ ಮೊದಲಿನ ಲಕ್ಷ್ಮೀ-ನಾರಾಯಣರು ಎಂದು ಹೇಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ಮಕ್ಕಳಿಗೆ ಮಾತ್ರ ಎಲ್ಲವೂ ತಿಳಿದಿದೆ. ಮೊದಲು ನಿಮಗೆ ಏನೂ ಸಹ ತಿಳಿದಿರಲಿಲ್ಲ. ನಾನೇ ಕಲ್ಪದ ಸಂಗಮಯುಗದಲ್ಲಿ ಬಂದು ನನ್ನ ಪರಿಚಯವನ್ನು ಕೊಡುತ್ತೇನೆ. ಇದೆಲ್ಲವನ್ನು ಬೇಹದ್ದಿನ ತಂದೆಯೊಬ್ಬರೇ ತಿಳಿಸಲು ಸಾಧ್ಯ. ಹೊಸಪ್ರಪಂಚದ ಸ್ಥಾಪನೆಯಾದ ನಂತರ ಹಳೆಯ ಪ್ರಪಂಚವು ವಿನಾಶವಾಗಲೇಬೇಕು. ಇದು ಎರಡರ ಸಂಗಮಯುಗವಾಗಿದೆ. ಇದು ಬಹಳ ಕಲ್ಯಾಣಕಾರಿಯುಗವಾಗಿದೆ. ಸತ್ಯಯುಗಕ್ಕೆ ಹಾಗೂ ಕಲಿಯುಗಕ್ಕೆ ಕಲ್ಯಾಣಕಾರಿ ಎಂದು ಹೇಳಲು ಸಾಧ್ಯವಿಲ್ಲ. ಈಗಿನ ನಿಮ್ಮ ಜೀವನ ಬಹಳ ಅಮೂಲ್ಯವಾಗಿದೆ ಎಂದು ಗಾಯನ ಮಾಡಲಾಗಿದೆ. ಈ ಜೀವನವೇ ಕವಡೆಯಿಂದ ವಜ್ರ ಸಮಾನವಾಗುತ್ತದೆ. ನೀವು ಮಕ್ಕಳು ಸತ್ಯ-ಸತ್ಯವಾದಂತಹ ಈಶ್ವರೀಯ ಸೇವಾಧಾರಿಗಳಾಗಿದ್ದೀರಿ, ಈಶ್ವರೀಯ ಗುಪ್ತಯೋಧರಾಗಿದ್ದೀರಿ. ಈಶ್ವರನೇ ಬಂದು ಮಾಯೆಯಿಂದ ನಿಮ್ಮನ್ನು ಬಿಡುಗಡೆ ಮಾಡುತ್ತಿದ್ದಾರೆ. ನಾವು ಖಾಸಾಗಿ ಈ ಪ್ರಪಂಚವನ್ನು ಮಾಯೆಯ ಬಂಧನಗಳಿಂದ ಬಿಡಿಸಬೇಕು ಎಂದು ನಿಮಗೆ ತಿಳಿದಿದೆ. ಇದೂ ಸಹ ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ಈಗ ಪ್ರಶಂಸೆಯನ್ನು ಯಾರಿಗೆ ಮಾಡುವುದು? ಯಾರ ಪಾತ್ರವು ಚೆನ್ನಾಗಿರುತ್ತದೆಯೋ ಅವರ ಹೆಸರು ಪ್ರಸಿದ್ಧಿಯಾಗುತ್ತದೆ ಅಂದಾಗ ಪ್ರಶಂಸೆಯನ್ನು ಪರಮಪಿತ ಪರಮಾತ್ಮನಿಗೆ ಮಾಡಲಾಗುತ್ತದೆ. ಈಗ ಭೂಮಿಯಲ್ಲಿ ಪಾಪಾತ್ಮರ ಹೊರೆಯು ಬಹಳಷ್ಟಿದೆ. ಸಾಸಿವೆಗಳ ಸಮಾನ ಎಷ್ಟೊಂದು ಮನುಷ್ಯರಿದ್ದಾರೆ. ಈಗ ತಂದೆಯು ಬಂದು ಹೊರೆಯನ್ನು ಇಳಿಸುತ್ತಿದ್ದಾರೆ. ಅಲ್ಲಿ ಕೇವಲ 9 ಲಕ್ಷ ಮಂದಿಯೇ ಇರುತ್ತಾರೆ ಅಂದಾಗ ಅದು 1/4 ಭಾಗವೂ ಇಲ್ಲ. ಈ ಡ್ರಾಮಾವನ್ನು ಒಳ್ಳೆಯ ರೀತಿಯಲ್ಲಿ ತಿಳಿಯಬೇಕು. ಇಲ್ಲಿ ಸರ್ವಶಕ್ತಿವಂತನೆಂದು ತಂದೆಗೆ ಹೇಳಲಾಗುತ್ತದೆ. ಅವರ ಪಾತ್ರವೂ ಸಹ ಡ್ರಾಮಾದಲ್ಲಿದೆ. ನಾನು ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಯಧಾ ಯಧಾಹೀ ಧರ್ಮಸ್ಯ ಎಂದು ಬರೆಯಲಾಗಿದೆ. ಈಗ ಅವಶ್ಯವಾಗಿ ಭಾರತದಲ್ಲಿ ಧರ್ಮಗ್ಲಾನಿಯಾಗಿದೆ. ನನ್ನ ಗ್ಲಾನಿಯನ್ನೂ ಸಹ ಮಾಡುತ್ತಾರೆ, ದೇವತೆಗಳನ್ನು ಗ್ಲಾನಿ ಮಾಡುತ್ತಾರೆ ಆದ್ದರಿಂದ ಬಹಳ ಪಾಪಾತ್ಮರಾಗಿದ್ದಾರೆ. ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ನೀವೆಲ್ಲರೂ ಡ್ರಾಮಾವನ್ನು ತಿಳಿದುಕೊಂಡಿದ್ದೀರಿ, ಬುದ್ಧಿಯಲ್ಲಿ ಚಕ್ರವನ್ನೂ ಸಹ ತಿರುಗಿಸುತ್ತಿದ್ದೀರಿ. ಈಗ ತಂದೆಯೇ ಬಂದು ನಾವು ಮಕ್ಕಳಿಗೆ ಪ್ರಕಾಶತೆಯನ್ನು ಕೊಟ್ಟಿದ್ದಾರೆ. ಇದು ಡ್ರಾಮಾದ ಅಂತಿಮವಾಗಿದೆ. ಹೊಸ ಪ್ರಪಂಚಕ್ಕೆ ಹೋಗುವುದಕ್ಕೋಸ್ಕರ ಪುರುಷಾರ್ಥವನ್ನು ಮಾಡಬೇಕು. ಏನು ಸಿಗಬೇಕೋ ಅದು ಸಿಗುತ್ತದೆ ಎಂದಲ್ಲ ಮೊದಲು ಪುರುಷಾರ್ಥವನ್ನು ಮಾಡಬೇಕು. ಪವಿತ್ರತೆಯಲ್ಲಿ ಶಕ್ತಿಯಿದೆ. ಪವಿತ್ರತೆಯ ಬಲಿಹಾರಿಯಾಗಬೇಕು. ದೇವತೆಗಳು ಪವಿತ್ರರಾಗಿರುವ ಕಾರಣ ಅಪವಿತ್ರ ಮನುಷ್ಯರು ಬಂದು ತಲೆಬಾಗುತ್ತಾರೆ, ಸನ್ಯಾಸಿಗಳಿಗೂ ತಲೆಬಾಗುತ್ತಾರೆ. ಅವರು ಪವಿತ್ರರಾಗಿರುವ ಕಾರಣ ಸತ್ತ ನಂತರ ಅವರ ಸ್ಮಾರಕವನ್ನು ಮಾಡುತ್ತಾರೆ. ಕೆಲಕೆಲವರು ಶಾರೀರಿಕ ಸೇವೆಯನ್ನು ಬಹಳಷ್ಟು ಮಾಡುತ್ತಾರೆ. ಆಸ್ಪತ್ರೆಗಳನ್ನು ತೆರೆಯುತ್ತಾರೆ ಮತ್ತು ಶಾಲೆ-ಕಾಲೇಜುಗಳನ್ನು ಕಟ್ಟಿಸುತ್ತಾರೆ. ಅವರ ಹೆಸರು ಪ್ರಸಿದ್ಧಿಯಾಗುತ್ತದೆ. ಯಾರು ಎಲ್ಲರನ್ನು ಪವಿತ್ರ ಮಾಡುತ್ತಾರೆ ಮತ್ತು ಯಾರು ಅವರಿಗೆ ಸಹಯೋಗಿಗಳಾಗುತ್ತಾರೆ ಅವರ ಹೆಸರು ಬಹಳ ದೊಡ್ಡದಾಗಿದೆ. ಸದಾ ಪವಿತ್ರರಾಗಿರುವಂತಹ ತಂದೆಯ ಜೊತೆ ಯೋಗವನ್ನು ಬೆಳೆಸುವುದರಿಂದ ನೀವು ಪವಿತ್ರರಾಗುತ್ತೀರಿ. ನೀವು ಎಷ್ಟು ಯೋಗ ಮಾಡುತ್ತೀರೋ ಅಷ್ಟು ಪವಿತ್ರರಾಗುತ್ತೀರಿ ನಂತರ ಅಂತ್ಮತಿ ಸೋ ಗತಿಯಾಗುತ್ತದೆ. ತಂದೆಯ ಬಳಿಗೆ ಹೋಗುತ್ತೀರಿ. ಅವರು ಯಾತ್ರೆಯನ್ನು ಮಾಡುವಾಗ ನಾವು ತಂದೆಯ ಬಳಿಗೆ ಹೋಗಬೇಕೆಂದು ತಿಳಿದುಕೊಳ್ಳುವುದಿಲ್ಲ. ಆದರೂ ಸಹ ಪವಿತ್ರರಾಗಿರುತ್ತಾರೆ. ಇಲ್ಲಿ ಎಲ್ಲರೂ ಪವಿತ್ರರಾಗಬೇಕು. ಡ್ರಾಮಾವನ್ನು ತಿಳಿದುಕೊಳ್ಳುವುದು ಎಷ್ಟೊಂದು ಸಹಜವಾಗಿದೆ. ಬಹಳ ವಿಚಾರಗಳನ್ನು ತಂದೆಯು ತಿಳಿಸುತ್ತಾರೆ ನಂತರ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ಸಾಯುವ ಸಮಯದಲ್ಲಿ ಎಲ್ಲರಿಗೂ ಭಗವಂತನ ನೆನಪನ್ನು ಕೊಡಿಸುತ್ತಾರೆ. ಒಳ್ಳೆಯದು. ಭಗವಂತ ಏನು ಮಾಡುತ್ತಾರೆ? ನಂತರ ಯಾರಾದರೂ ಶರೀರವನ್ನು ಬಿಟ್ಟರೆ ಸ್ವರ್ಗವಾಸಿಗಳಾದರು ಎಂದು ಹೇಳುತ್ತಾರೆ ಇದರ ಅರ್ಥವಾಗಿದೆ - ಪರಮಾತ್ಮನ ನೆನಪಿನಲ್ಲಿ ಶರೀರವನ್ನು ಬಿಟ್ಟರೆ ವೈಕುಂಠಕ್ಕೆ ಹೋಗುತ್ತಾರೆ ಆದರೆ ಅವರು ತಂದೆಯನ್ನು ತಿಳಿದುಕೊಂಡಿಲ್ಲ. ನಾವು ತಂದೆಯನ್ನು ನೆನಪು ಮಾಡುವುದರಿಂದ ವೈಕುಂಠಕ್ಕೆ ಹೋಗುತ್ತೇವೆಂದು ಯಾರ ಬುದ್ಧಿಯಲ್ಲೂ ಇಲ್ಲ. ಅವರು ಕೇವಲ ಪರಮಾತ್ಮನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಆಂಗ್ಲಭಾಷೆಯಲ್ಲಿ ಗಾಡ್ ಫಾದರ್ ಎಂದು ಹೇಳುತ್ತಾರೆ ಆದರೆ ಇಲ್ಲಿ ಪರಮಪಿತ ಪರಮಾತ್ಮನೆಂದು ಹೇಳುತ್ತೀರಿ. ಅವರು ಎಲ್ಲರ ತಂದೆಯಾಗಿದ್ದಾರೆ. ಒಂದುವೇಳೆ ಎಲ್ಲರೂ ತಂದೆಯಾಗಿದ್ದರೆ, ಓ ಗಾಡ್ ಫಾದರ್ ಎಂದು ಹೇಳಲು ಸಾಧ್ಯವಿಲ್ಲ. ಸ್ವಲ್ಪ ವಿಚಾರವನ್ನೂ ಸಹ ಅವರು ತಿಳಿದುಕೊಳ್ಳುವುದಿಲ್ಲ. ನಿಮಗೆ ತಂದೆಯು ಸಹಜ ಮಾಡಿ ತಿಳಿಸುತ್ತಾರೆ. ಮನುಷ್ಯರು ಯಾವಾಗ ದುಃಖಿಗಳಾಗುತ್ತಾರೋ ಆಗ ತಂದೆಯನ್ನು ನೆನಪು ಮಾಡುತ್ತಾರೆ. ಮನುಷ್ಯರು ದೇಹೀ ಅಭಿಮಾನಿಗಳಾಗಿ ದೇಹಿ (ಆತ್ಮ) ಯನ್ನು ನೆನಪು ಮಾಡುತ್ತಾರೆ. ಒಂದುವೇಳೆ ಪರಮಾತ್ಮ ಸರ್ವವ್ಯಾಪಿಯಾಗಿದ್ದರೆ ಆತ್ಮವು ಏಕೆ ನೆನಪು ಮಾಡುತ್ತದೆ? ಒಂದುವೇಳೆ ಆತ್ಮ ನಿರ್ಲೇಪವಾಗಿದ್ದರೆ ಆತ್ಮವು ಏನನ್ನು ನೆನಪು ಮಾಡುತ್ತದೆ? ಭಕ್ತಿಮಾರ್ಗದಲ್ಲಿ ದುಃಖಿಯಾಗಿರುವ ಕಾರಣ ಆತ್ಮ ಪರಮಾತ್ಮನನ್ನು ನೆನಪು ಮಾಡುತ್ತದೆ. ಎಷ್ಟು ಸುಖ ಸಿಗುತ್ತದೆಯೋ ಅಷ್ಟು ನೆನಪು ಮಾಡಬೇಕಾಗುತ್ತದೆ.
ಇದು ವಿದ್ಯೆಯಾಗಿದೆ. ಇದರಲ್ಲಿ ಗುರಿ-ಉದ್ದೇಶ ಸರಿಯಾಗಿದೆ. ಇದರಲ್ಲಿ ಅಂಧಶ್ರದ್ಧೆಯ ಯಾವುದೇ ಮಾತಿಲ್ಲ. ಈ ಸಮಯದಲ್ಲಿ ಎಲ್ಲರೂ ಉಪಸ್ಥಿತರಿರುವ ಕಾರಣ ಎಲ್ಲಾ ಧರ್ಮದವರನ್ನು ತಿಳಿದುಕೊಂಡಿದ್ದೀರಿ. ಈಗ ಪುನಃ ದೇವಿ-ದೇವತಾ ಧರ್ಮದ ವ್ಯತ್ಯಾಸ ಪುನರಾವರ್ತನೆಯಾಗುತ್ತಿದೆ. ಇದು ಹೊಸ ಮಾತೇನಲ್ಲ. ಕಲ್ಪ-ಕಲ್ಪವೂ ಸಹ ನಾವು ರಾಜ್ಯವನ್ನು ತೆಗೆದುಕೊಂಡೆವು. ಹೇಗೆ ಹದ್ದಿನ ಆಟವು ಪುನರಾವರ್ತನೆಯಾಗುತ್ತದೆಯೋ ಹಾಗೆಯೇ ಈ ಬೇಹದ್ದಿನ ನಾಟಕವಾಗಿದೆ. ಅರ್ಧಕಲ್ಪದ ನಮ್ಮ ಶತ್ರು ಯಾರು? ರಾವಣ. ನಾವು ಯುದ್ಧವನ್ನು ಮಾಡಿ ರಾಜ್ಯವನ್ನು ತೆಗೆದುಕೊಳ್ಳುವುದಿಲ್ಲ, ಹಿಂಸಕ ಯುದ್ಧವನ್ನು ಮಾಡುವುದಿಲ್ಲ, ವಿಜಯಿಗಳಾಗಲು ಸೈನ್ಯವನ್ನು ತೆಗೆದುಕೊಂಡು ಬರುವುದಿಲ್ಲ. ಇದು ಸೋಲು-ಗೆಲುವಿನ ಆಟವಾಗಿದೆ ಆದರೆ ಸೋಲು ಸೂಕ್ಷ್ಮವಾಗಿದೆ ಅಂದಾಗ ವಿಜಯವೂ ಸಹ ಸೂಕ್ಷ್ಮವಾಗಿದೆ. ಮಾಯೆಯಿಂದ ಸೋಲುತ್ತೀರಿ ಮತ್ತು ಮಾಯೆಯಿಂದ ವಿಜಯಶಾಲಿಗಳಾಗುತ್ತೀರಿ. ಮನುಷ್ಯರು ಮಾಯೆಯ ಬದಲಾಗಿ ಮನಸ್ಸು ಎಂಬ ಅಕ್ಷರವನ್ನು ಹಾಕಿದ್ದಾರೆ ಅದು ಉಲ್ಟಾ ಆಗಿದೆ. ಈ ಡ್ರಾಮಾದಲ್ಲಿ ಆಟವೂ ಸಹ ಮೊದಲೇ ಮಾಡಲ್ಪಟ್ಟಿದೆ. ತಂದೆಯು ಕುಳಿತು ತನ್ನ ಪರಿಚಯವನ್ನು ತಿಳಿಸುತ್ತಿದ್ದಾರೆ. ರಚಯಿತನನ್ನು ಯಾವುದೇ ಮನುಷ್ಯರು ತಿಳಿಯದ ಕಾರಣ ಮನುಷ್ಯರು ಪರಿಚಯವನ್ನು ಕೊಡಲು ಹೇಗೆ ಸಾಧ್ಯ? ಒಬ್ಬ ರಚಯಿತನಾಗಿದ್ದಾರೆ ಬಾಕಿ ಎಲ್ಲರೂ ರಚನೆಯಾಗಿದ್ದಾರೆ ಅಂದಾಗ ಅವಶ್ಯವಾಗಿ ನಮಗೆ ರಾಜ್ಯಭಾಗ್ಯ ಸಿಗಬೇಕು. ಮನುಷ್ಯರು ಪರಮಾತ್ಮ ಸರ್ವವ್ಯಾಪಿಯಾಗಿದ್ದಾರೆ ಎಂದು ಹೇಳುತ್ತಾರೆ ಅಂದಾಗ ಎಲ್ಲರೂ ರಚೈತರಾದರು. ರಚನೆಯನ್ನು ಆರಿಸಿದ್ದಾರೆ, ಎಷ್ಟೊಂದು ಕಲ್ಲುಬುದ್ದಿ, ಎಷ್ಟೊಂದು ದುಃಖಿಗಳಾಗಿದ್ದಾರೆ. ಕೇವಲ ತಮ್ಮ ಮಹಿಮೆಯನ್ನು ಮಾಡುತ್ತಾರೆ. ನಾವೇ ವೈಷ್ಣವರಾಗಿದ್ದೆವು, ನಾವೇ ಅರ್ಧ ದೇವತೆಗಳಾಗಿದ್ದೆವು. ದೇವತೆಗಳು ವೈಷ್ಣವರಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಸಸ್ಯಾಹಾರಿಗಳ ಮುಖ್ಯ ಅರ್ಥವಾಗಿದೆ - ಅಹಿಂಸಾ ಪರಮೋಧರ್ಮ. ದೇವತೆಗಳಿಗೆ ಪಕ್ಕಾ ವೈಷ್ಣವರೆಂದು ಹೇಳಲಾಗುತ್ತದೆ. ಈ ರೀತಿ ತಮ್ಮನ್ನು ವೈಷ್ಣವರೆಂದು ಹೇಳಿಸಿಕೊಳ್ಳುವವರು ಬಹಳಷ್ಟಿದ್ದಾರೆ. ಆದರೆ ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಪಕ್ಕಾ ವೈಷ್ಣವ ಸಂಪ್ರದಾಯದವರು ಪವಿತ್ರರಾಗಿದ್ದರು. ಈಗ ಆ ವೈಷ್ಣವ ಸಂಪ್ರದಾಯದವರ ರಾಜ್ಯವು ಎಲ್ಲಿದೆ? ಈಗ ನೀವು ಬ್ರಾಹ್ಮಣರಾಗಿದ್ದೀರಿ. ನೀವೇ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾಗ ಅವಶ್ಯವಾಗಿ ಬ್ರಹ್ಮನೂ ಇರುತ್ತಾರೆ. ಆಗ ಶಿವವಂಶಿ ಪ್ರಜಾಪಿತ ಬ್ರಹ್ಮನ ಸಂತಾನರೆಂದು ಹೇಳಲಾಗುತ್ತದೆ. ಶಿವತಂದೆಯು ಬಂದಿದ್ದಾರೆಂದು ಗಾಯನ ಮಾಡಲಾಗಿದೆ. ಅವರೇ ಬ್ರಾಹ್ಮಣ ಸಂಪ್ರದಾಯದವರನ್ನು ರಚನೆ ಮಾಡಿದರು. ಅವರೇ ಬ್ರಾಹ್ಮಣರಿಂದ ದೇವತೆಗಳಾದರು. ಈಗ ನೀವು ಶೂದ್ರರಿಂದ ಬ್ರಾಹ್ಮಣರಾದಾಗ ಬ್ರಹ್ಮಾಕುಮಾರ-ಕುಮಾರಿ ಎಂದು ಹೇಳಲಾಗುತ್ತದೆ. ವಿರಾಟರೂಪದ ಚಿತ್ರದ ಬಗ್ಗೆ ನಿಮಗೆ ತಿಳಿಸಿಕೊಡಲಾಗಿದೆ. ವಿಷ್ಣುವಿನ ವಿರಾಟರೂಪವನ್ನು ತೋರಿಸಲಾಗಿದೆ. ವಿಷ್ಣು ಮತ್ತು ಅವನ ರಾಜಧಾನಿಯ ವಿರಾಟರೂಪದ ಚಕ್ರದಲ್ಲಿ ಬರುತ್ತಾರೆ. ಇದೆಲ್ಲವೂ ತಂದೆಯ ವಿಚಾರದಲ್ಲಿ ಬರುತ್ತದೆ. ನೀವು ವಿಚಾರಸಾಗರ ಮಂಥನದ ಅಭ್ಯಾಸವನ್ನು ಇಟ್ಟುಕೊಂಡಾಗ ರಾತ್ರಿಯೂ ನಿದ್ದೆ ಬರುವುದಿಲ್ಲ. ಇದೇ ಚಿಂತನೆ ನಡೆಯುತ್ತಿರುತ್ತದೆ. ಬೆಳಗ್ಗೆ ಎದ್ದು ಕಾರ್ಯವ್ಯವಹಾರದಲ್ಲಿ ತೊಡಗುತ್ತಾರೆ. ಬೆಳಗಿನ ಪ್ರಯಾಣಿಕರೇ ಎಂದು ಹೇಳುತ್ತಾರೆ. ನೀವು ಯಾರಿಗಾದರೂ ತಿಳಿಸಿದಾಗ ಓಹೋ ಎಂದು ಹೇಳುತ್ತಾರೆ. ನಾವು ಮನುಷ್ಯರಿಂದ ದೇವತೆ, ಭಿಕ್ಷುಕರಿಂದ ರಾಜಕುಮಾರರನ್ನಾಗಿ ಮಾಡಲು ಬಂದಿದ್ದೇವೆ. ಮೊದಲು ಅಲೌಕಿಕ ಸೇವೆಯನ್ನು ಮಾಡಬೇಕು ನಂತರ ಸ್ಥೂಲ ಸಂಪಾದನೆಯನ್ನೂ ಮಾಡಬೇಕು. ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ. ಮಾತೆಯರನ್ನು ಯಾರೂ ಧಿಕ್ಕಾರ ಮಾಡುವುದಿಲ್ಲ. ತರಕಾರಿಯವರು ದವಸ-ಧಾನ್ಯದವರು ನೌಕರಿ ಮುಂತಾದವರಿಗೂ ಎಲ್ಲರಿಗೂ ತಿಳಿಸಿಕೊಡಬೇಕು. ದೂರು ಕೊಡುವ ಹಾಗೆ ಸಂದೇಶ ಸಿಗದೆ ಯಾರೂ ಉಳಿಯಬಾರದು. ಸರ್ವೀಸಿನಲ್ಲಿ ಹೃದಯ ಸ್ವಚ್ಛವಾಗಿರಬೇಕು. ತಂದೆಯ ಜೊತೆ ಪೂರ್ಣ ಯೋಗ ಮಾಡಿದಾಗ ಧಾರಣೆಯಾಗುತ್ತದೆ. ಸಾಮಗ್ರಿಯನ್ನು ತುಂಬಿಕೊಂಡು ನಂತರ ದಡದಲ್ಲಿ ಹಡಗನ್ನು ವಿತರಣೆ ಮಾಡಲಾಗುತ್ತದೆ. ಅವರಿಗೆ ನಂತರ ಮನೆಯಲ್ಲಿ ಸುಖವಿರುವುದಿಲ್ಲ ಓಡುತ್ತಿರುತ್ತಾರೆ. ಈ ಚಿತ್ರವು ಬಹಳ ಸಹಯೋಗವನ್ನು ಕೊಡುತ್ತದೆ. ಎಷ್ಟು ಸ್ವಚ್ಛವಾಗಿರುತ್ತಾರೆ ಅಷ್ಟು ಶಿವತಂದೆಯು ಬ್ರಹ್ಮನ ಮುಖಾಂತರ ವಿಷ್ಣುಪುರಿಯ ಸ್ಥಾಪನೆಯನ್ನು ಮಾಡಿಸುತ್ತಾರೆ. ಇದು ರುದ್ರ ಜ್ಞಾನಯಜ್ಞವಾಗಿದೆ, ಕೃಷ್ಣ ಜ್ಞಾನಯಜ್ಞವಲ್ಲ. ಈ ರುದ್ರ ಜ್ಞಾನಯಜ್ಞದಿಂದ ವಿನಾಶದ ಜ್ವಾಲೆ ಪ್ರಜ್ವಲಿತವಾಗುತ್ತದೆ. ಕೃಷ್ಣ ಯಜ್ಞವನ್ನು ರಚನೆ ಮಾಡುವುದಿಲ್ಲ. ಅವನು 84 ಜನ್ಮವನ್ನು ತೆಗೆದುಕೊಂಡಾಗ ನಾಮ, ರೂಪ ಬದಲಾಗುತ್ತದೆ. ಬೇರೆ ಯಾವುದೇ ರೂಪದಲ್ಲಿ ಕೃಷ್ಣನಿರುವುದಿಲ್ಲ. ಯಾವಾಗ ಅದೇ ರೂಪದಲ್ಲಿ ಬರುತ್ತಾನೋ ಆಗ ಕೃಷ್ಣನ ಪಾತ್ರ ಪುನರಾವರ್ತನೆಯಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತಾ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಸತ್ಯ-ಸತ್ಯ ಈಶ್ವರೀಯ ಸೇವಾಧಾರಿಗಳಾಗಿ ಅಥವಾ ಈಶ್ವರೀಯ ಗುಪ್ತವಾದ ಯೋಧರಾಗಿ ಎಲ್ಲರನ್ನೂ ಮಾಯೆಯಿಂದ ಬಿಡುಗಡೆ ಮಾಡಬೇಕಾಗಿದೆ. ಈ ಜೀವನದಲ್ಲಿ ಕವಡೆಯಿಂದ ವಜ್ರಸಮಾನವಾಗಿ ಮಾಡಿ ಮತ್ತು ಮಾಡಿಸಬೇಕಾಗಿದೆ.
2.
ಹೇಗೆ ತಂದೆಯು ವಿಚಾರಸಾಗರ ಮಂಥನ ಮಾಡುತ್ತಾರೋ ಹಾಗೆ ಜ್ಞಾನದ ವಿಚಾರಸಾಗರ ಮಂಥನ ಮಾಡಬೇಕಾಗಿದೆ. ಕಲ್ಯಾಣಕಾರಿಗಳಾಗಿ ಅಲೌಕಿಕ ಸೇವೆಯಲ್ಲಿ ತತ್ಫರರಾಗಬೇಕಾಗಿದೆ. ಮನಸ್ಸಿನ ಸತ್ಯತೆಯಿಂದ ಸೇವೆಯನ್ನು ಮಾಡಬೇಕಾಗಿದೆ.
ವರದಾನ:
ಸಣ್ಣ ಪುಟ್ಟ
ಅವಜ್ಞೆಗಳ ಹೊರೆಯನ್ನು
ಸಮಾಪ್ತಿ ಮಾಡಿ
ಸದಾ ಸಮರ್ಥರಾಗಿರುವಂತಹ
ಶ್ರೇಷ್ಠ ಚರಿತ್ರವಾನ್
ಭವ
ಹೇಗೆ ಅಮೃತವೇಳೆ ಏಳುವಂತಹ ಆಜ್ಞೆಯಿದೆ ಅಂದರೆ ಎದ್ದು ಕುಳಿತುಕೊಳ್ಳುವಿರಿ ಆದರೆ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಿಲ್ಲ, ಮಧುರವಾದ ಸೈಲೆನ್ಸ್ ನ ಜೊತೆ ನಿದ್ರೆ ಮಿಕ್ಸ್ ಆಗಿಬಿಡುವುದು.
2- ತಂದೆಯ ಆಜ್ಞೆಯಾಗಿದೆ
ಯಾವುದೇ ಆತ್ಮಕ್ಕೆ ದುಃಖ ಕೊಡಬೇಡಿ, ದುಃಖ ತೆಗೆದುಕೊಳ್ಳಬೇಡಿ, ಇದರಲ್ಲಿ ದುಃಖ ಕೊಡುವುದಿಲ್ಲ ಆದರೆ ತೆಗೆದುಕೊಂಡುಬಿಡುವಿರಿ. 3- ಕ್ರೋಧ ಮಾಡುವುದಿಲ್ಲ
ಆದರೆ ಆವೇಷದಲ್ಲಿ ಬಂದುಬಿಡುವಿರಿ, ಇಂತಹ ಸಣ್ಣ-ಪುಟ್ಟ ಅವಜ್ಞೆಗಳು ಮನಸ್ಸನ್ನು ಭಾರಿ ಮಾಡಿಬಿಡುವುದು. ಈಗ ಇದನ್ನು ಸಮಾಪ್ತಿ ಮಾಡಿ ಆಜ್ಞಾಕಾರಿ ಚರಿತ್ರೆಯ ಚಿತ್ರವನ್ನು ಮಾಡಿ ಆಗ ಹೇಳಲಾಗುವುದು
ಸದಾ ಸಮರ್ಥ ಚರಿತ್ರವಾನ್ ಆತ್ಮ.
ಸ್ಲೋಗನ್:
ಸಮ್ಮಾನ ಬೆಡುವ ಬದಲು ಎಲ್ಲರಿಗೂ ಸಮ್ಮಾನ ಕೊಡಿ ಆಗ ಎಲ್ಲರಿಂದ ಸಮ್ಮಾನ ಸಿಗುತ್ತಿರುವುದು.
0 Comments