03/01/23 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಈ
ಸೃಷ್ಟಿ ಅಥವಾ
ಜಗತ್ತು ದುಃಖದ್ದಾಗಿದೆ
ಆದ್ದರಿಂದ ನಷ್ಟಮೋಹಿಗಳಾಗಿ
ಹೊಸ ಪ್ರಪಂಚವನ್ನು
ನೆನಪು ಮಾಡಿ.
ಬುದ್ಧಿಯೋಗವನ್ನು ಈ
ಹಳೆಯ ಪ್ರಪಂಚದಿಂದ
ತೆಗೆದುಹಾಕಿ ಹೊಸ
ಪ್ರಪಂಚದ ಕಡೆ
ಜೋಡಿಸಬೇಕು”
ಪ್ರಶ್ನೆ:
ಕೃಷ್ಣಪುರಿಗೆ ಹೋಗುವುದಕ್ಕೋಸ್ಕರ
ನೀವು ಮಕ್ಕಳು ಯಾವ ಒಂದು ತಯಾರಿಯನ್ನು ಮಾಡಿ ಮತ್ತು ಮಾಡಿಸುತ್ತೀರಿ?
ಉತ್ತರ:
ಕೃಷ್ಣಪುರಿಯಲ್ಲಿ ಹೋಗುವುದಕ್ಕೋಸ್ಕರ
ಈ ಅಂತಿಮ ಜನ್ಮದಲ್ಲಿ ಎಲ್ಲಾ ವಿಕಾರಗಳನ್ನು
ಬಿಟ್ಟು ಪಾವನರಾಗಿ ಮತ್ತು ಅನ್ಯರನ್ನೂ ಪಾವನರನ್ನಾಗಿ
ಮಾಡಿ. ಪಾವನರಾಗುವುದೇ
ದುಃಖಧಾಮದಿಂದ ಸುಖಧಾಮಕ್ಕೆ ಹೋಗುವುದಕ್ಕೋಸ್ಕರ ತಯಾರಿಯಾಗಿದೆ. ಇದು ಕೊಳಕಾದಂತಹ ಪ್ರಪಂಚವಾಗಿದೆ ಇದರಿಂದ ಬುದ್ಧಿಯೋಗವನ್ನು ತೆಗೆದುಹಾಕಿ, ಹೊಸ ಸತ್ಯಯುಗೀ ಪ್ರಪಂಚಕ್ಕೆ ಹೋಗಬೇಕೆಂದು ಸಂದೇಶವನ್ನು ಕೊಡಿ.
ಗೀತೆ: ನನಗೆ ಆಶ್ರಯವನ್ನು ಕೊಡುವಂತಹವರು....
ಓಂ ಶಾಂತಿ. ಬಾಬಾ ಎಂದು ಈ ಗೀತೆಯಲ್ಲಿ ಹೇಳುತ್ತಾರೆ. ಬೇಹದ್ದಿನ ತಂದೆಯ ಕಡೆ ನೀವು ಮಕ್ಕಳ ಬುದ್ಧಿಯು ಹೋಗುತ್ತದೆ. ಅದೇ ಮಕ್ಕಳಿಗೆ ಈಗ ಸುಖ ಸಿಗುತ್ತಿದೆ ಅಥವಾ ಸುಖಧಾಮದ ಮಾರ್ಗವು ಸಿಗುತ್ತಿದೆ. ತಂದೆಯೇ ಸ್ವರ್ಗದ 21 ಜನ್ಮಗಳಿಗೋಸ್ಕರ ಸುಖವನ್ನು ಕೊಡುತ್ತಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಈ ಸುಖದ ಪ್ರಾಪ್ತಿಗೋಸ್ಕರ ಸ್ವಯಂ ತಂದೆಯೇ ಬಂದು ಶಿಕ್ಷಣವನ್ನು ಕೊಡುತ್ತಿದ್ದಾರೆ. ಈ ಜಗತ್ತು ಅರ್ಥಾತ್ ಇಷ್ಟೆಲ್ಲಾ ಯಾವ ಮನುಷ್ಯರಿದ್ದಾರೆ ಅವರೆಲ್ಲಾ ಏನನ್ನೂ ಕೊಡಲು ಸಾಧ್ಯವಿಲ್ಲವೆಂದು ತಿಳಿಸುತ್ತಿದ್ದಾರೆ. ಇದೆಲ್ಲವೂ ರಚನೆಯಾಗಿದೆ. ಪರಸ್ಪರದಲ್ಲಿ ಎಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ ಅಂದಾಗ ರಚನೆ ಒಬ್ಬರಿಗೊಬ್ಬರಿಗೆ ಸುಖದ ಆಸ್ತಿಯನ್ನು ಕೊಡಲು ಹೇಗೆ ಸಾಧ್ಯ! ಸುಖದ ಆಸ್ತಿಯನ್ನು ಕೊಡುವಂತಹವರು ಅವಶ್ಯವಾಗಿ ಒಬ್ಬ ರಚೈತ ತಂದೆಯಾಗಿದ್ದಾರೆ. ಈ ಜಗತ್ತಿನಲ್ಲಿ ಯಾವುದೇ ಮನುಷ್ಯರು ಯಾರಿಗೂ ಸುಖವನ್ನು ಕೊಡಲು ಸಾಧ್ಯವಿಲ್ಲ. ಸುಖದಾತ, ಸದ್ಗತಿದಾತ ಒಬ್ಬರೇ ಸದ್ಗುರುವಾಗಿದ್ದಾರೆ. ಈಗ ಸುಖ ಯಾವುದನ್ನು ಬೇಡುತ್ತೀರಿ? ಸ್ವರ್ಗದಲ್ಲಿ ಬಹಳ ಸುಖಿಗಳಾಗಿದ್ದೆವು ಈಗ ನರಕದಲ್ಲಿ ದುಃಖಿಗಳಾಗಿದ್ದೇವೆಂದು ಎಲ್ಲರೂ ಮರೆತಿದ್ದಾರೆ ಅಂದಾಗ ಅವಶ್ಯವಾಗಿ ಎಲ್ಲಾ ಮಕ್ಕಳ ಮೇಲೆ ಮಾಲೀಕರಿಗೆ ದಯೆ ಬರುತ್ತದೆ. ಬಹಳ ಜನರು ಸೃಷ್ಟಿಯ ಮಾಲೀಕನಿಗೆ ಗೌರವ ಕೊಡುತ್ತಾರೆ ಆದರೆ ಅವರು ಯಾರಾಗಿದ್ದಾರೆ, ಅವರಿಂದ ಏನು ಸಿಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಮಾಲೀಕನಿಂದ ನಮಗೆ ದುಃಖ ಸಿಗುತ್ತದೆ ಎಂದಿಲ್ಲ. ಅವರನ್ನು ಸುಖ, ಶಾಂತಿಗೋಸ್ಕರ ನೆನಪು ಮಾಡುತ್ತಾರೆ. ಭಕ್ತರು ಭಗವಂತನನ್ನು ಪ್ರಾಪ್ತಿಗೋಸ್ಕರ ನೆನಪು ಮಾಡುತ್ತಾರೆ. ಸುಖ, ಶಾಂತಿಗೋಸ್ಕರ ದುಃಖಿಗಳು ನೆನಪನ್ನು ಮಾಡುತ್ತಾರೆ. ಬೇಹದ್ದಿನ ಸುಖ ಕೊಡುವಂತಹವರು ಒಬ್ಬರಾಗಿದ್ದಾರೆ ಬಾಕಿ ಹದ್ದಿನ ಅಲ್ಪಕಾಲದ ಸುಖವನ್ನು ಒಬ್ಬರಿಗೊಬ್ಬರಿಗೆ ಕೊಡುತ್ತಾರೆ. ಅದು ಯಾವುದೇ ದೊಡ್ಡ ಮಾತಲ್ಲ. ಎಲ್ಲಾ ಭಕ್ತರು ಒಬ್ಬ ಭಗವಂತನನ್ನು ಕರೆಯುತ್ತಾರೆ, ಅವಶ್ಯವಾಗಿ ಭಗವಂತ ಎಲ್ಲರಿಗಿಂತ ದೊಡ್ಡವರಾಗಿದ್ದಾರೆ, ಅವರ ಮಹಿಮೆಯೂ ಬಹಳ ದೊಡ್ಡದಾಗಿದೆ ಅಂದಾಗ ಅವರು ಬಹಳ ಸುಖವನ್ನು ಕೊಡುವಂತಹವರಾದರು. ತಂದೆ ಎಂದೂ ಮಕ್ಕಳಿಗೆ ಹಾಗೂ ಜಗತ್ತಿಗೆ ದುಃಖವನ್ನು ಕೊಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೇ ವಿಚಾರ ಮಾಡಿ, ನಾನು ಯಾವ ಸೃಷ್ಟಿ ಅಥವಾ ಜಗತ್ತನ್ನು ರಚನೆ ಮಾಡುತ್ತೇನೋ ಅದು ದುಃಖ ಕೊಡುವುದಕ್ಕೋಸ್ಕರವೇನು? ನಾನು ಸುಖ ಕೊಡುವುದಕ್ಕೋಸ್ಕರ ರಚೈತನಾಗಿದ್ದೇನೆ ಆದರೆ ಈ ನಾಟಕ ಸುಖ-ದುಃಖದ್ದಾಗಿ ಮಾಡಲಾಗಿದೆ. ಮನುಷ್ಯರು ಎಷ್ಟೊಂದು ದುಃಖಿಗಳಾಗಿದ್ದಾರೆ, ಯಾವಾಗ ಹೊಸ ಜಗತ್ತು, ಹೊಸ ಸೃಷ್ಟಿಯಾಗುತ್ತದೆ ಆಗ ಅದರಲ್ಲಿ ಸುಖವಿರುತ್ತದೆ ಎಂದು ತಂದೆಯು ಹೇಳುತ್ತಾರೆ. ಹಳೆಯ ಸೃಷ್ಟಿಯಲ್ಲಿ ದುಃಖವಿರುತ್ತದೆ. ಎಲ್ಲಾ ಹಳೆಯದು ಜಡಜಡೀಭೂತವಾಗಿದೆ. ಮೊದಲು ನಾನು ಸೃಷ್ಟಿಯನ್ನು ರಚನೆ ಮಾಡಿದಾಗ ಅದಕ್ಕೆ ಸತೋಪ್ರಧಾನವೆಂದು ಹೇಳುತ್ತಾರೆ. ಆ ಸಮಯದಲ್ಲಿ ಎಲ್ಲಾ ಮನುಷ್ಯರು ಎಷ್ಟೊಂದು ಸುಖಿಗಳಾಗಿರುತ್ತಾರೆ. ಆ ಧರ್ಮ ಈಗ ಪ್ರಾಯಲೋಪವಾಗಿರುವುದರಿಂದ ಯಾರ ಬುದ್ಧಿಯಲ್ಲೂ ಇಲ್ಲ.
ಹೊಸ ಜಗತ್ತು ಸತ್ಯಯುಗವಾಗಿತ್ತು ಎಂದು ನೀವು ಮಕ್ಕಳಿಗೆ ತಿಳಿದಿದೆ. ತಂದೆಯು ಅವಶ್ಯವಾಗಿ ಹೊಸಪ್ರಪಂಚವನ್ನು ಮಾಡುತ್ತಾರೆಂದು ಈಗ ನೀವು ಮಕ್ಕಳಿಗೆ ಆಸೆ ಇದೆ. ಮೊದಲು ಹೊಸಸೃಷ್ಟಿ, ಹೊಸ ಜಗತ್ತಿನಲ್ಲಿ ಜನ ಬಹಳ ಕಡಿಮೆಯಿದ್ದರು ಮತ್ತು ಬಹಳ ಸುಖಿಗಳಾಗಿದ್ದರು, ಆ ಸುಖ ಅಪಾರವಾಗಿತ್ತು. ಸ್ವರ್ಗ, ವೈಕುಂಠ, ಹೊಸ ಪ್ರಪಂಚವೆಂದು ಹೆಸರನ್ನು ಹೇಳಲಾಗಿದೆ ಅಂದಾಗ ಅವಶ್ಯವಾಗಿ ಅದರಲ್ಲಿ ಹೊಸ ಮನುಷ್ಯರಿರುತ್ತಾರೆ. ಅವಶ್ಯವಾಗಿ ಅಲ್ಲಿ ದೇವಿ-ದೇವತೆಗಳ ರಾಜ್ಯವನ್ನು ನಾನೇ ಸ್ಥಾಪನೆಯನ್ನು ಮಾಡುತ್ತೇನೆ. ಯಾವಾಗ ಕಲಿಯುಗದಲ್ಲಿ ಒಬ್ಬ ರಾಜರೂ ಇರುವುದಿಲ್ಲ ಆಗ ಕಂಗಾಲಾಗುತ್ತಾರೆ ನಂತರ ಒಂದೇ ಸಲ ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜಧಾನಿಯು ಎಲ್ಲಿಂದ ಬರುತ್ತದೆ? ಈ ಪ್ರಪಂಚ ಹೇಗೆ ಬದಲಾಗುತ್ತದೆ? ಆದರೆ ಬುದ್ಧಿಯಲ್ಲಿ ಏನನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ - ಮನುಷ್ಯರು ಮಾಲೀಕನಿಗೆ ದುಃಖ-ಸುಖವನ್ನು ಕೊಡುತ್ತಾರೆಂದು ದೋಷವನ್ನು ಹೊರಿಸುತ್ತಾರೆ ಆದರೆ ಈಶ್ವರನನ್ನು ನಮಗೆ ಸುಖ, ಶಾಂತಿಯನ್ನು ಕೊಡಿ ಎಂದು ನೆನಪು ಮಾಡುತ್ತಾರೆ. ಸಿಹಿಯಾದ ಮನೆಗೆ ಕರೆದುಕೊಂಡು ಹೋಗಿ ನಂತರ ಪಾತ್ರವನ್ನು ಮಾಡಲು ಅವಶ್ಯವಾಗಿ ಕಳುಹಿಸುತ್ತಾರೆ. ಕಲಿಯುಗದ ನಂತರ ಪುನಃ ಸತ್ಯಯುಗ ಅವಶ್ಯವಾಗಿ ಬರುತ್ತದೆ. ಮನುಷ್ಯರು ರಾವಣನ ಮತದಂತೆ ನಡೆಯುತ್ತಾರೆ, ಶ್ರೀಮತ ಶ್ರೇಷ್ಠ ಮತವಾಗಿದೆ. ನಾನೇ ಸಹಜ ರಾಜಯೋಗವನ್ನು ಕಲಿಸುತ್ತೇನೆ ಎಂದು ತಂದೆಯು ಹೇಳುತ್ತಾರೆ. ನಾನು ಯಾವುದೇ ಗೀತಾ ಶ್ಲೋಕ ಮುಂತಾದುವನ್ನು ಗಾಯನ ಮಾಡುವುದಿಲ್ಲ. ತಂದೆಯು ಕುಳಿತು ಗೀತೆಯನ್ನು ತಿಳಿಸುತ್ತಾರೇನು? ನಾನು ಸಹಜ ರಾಜಯೋಗವನ್ನು ಕಲಿಸುತ್ತೇನೆ. ಶಾಲೆಯಲ್ಲಿ ಗೀತೆ, ಕವಿತೆಗಳನ್ನು ತಿಳಿಸಿಕೊಡಲಾಗುತ್ತದೇನು? ಶಾಲೆಯಲ್ಲಿ ವಿದ್ಯೆಯನ್ನು ಓದಿಸಲಾಗುತ್ತದೆ. ನೀವು ಮಕ್ಕಳಿಗೆ ನಾನೇ ಓದಿಸುತ್ತಿದ್ದೇನೆ, ರಾಜಯೋಗವನ್ನು ಕಲಿಸುತ್ತಿದ್ದೇನೆ ಎಂದು ತಂದೆಯು ಹೇಳುತ್ತಾರೆ. ನನ್ನ ಜೊತೆ ಬೇರೆ ಯಾರ ಯೋಗವೂ ಇಲ್ಲ. ಎಲ್ಲರೂ ನನ್ನನ್ನು ಮರೆತಿದ್ದಾರೆ. ಇದು ನಾಟಕದಲ್ಲಿ ಮರೆಯುವುದು ನೊಂದಾವಣೆಯಾಗಿದೆ. ನಾನೇ ಬಂದು ಪುನಃ ನೆನಪನ್ನು ಕೊಡಿಸುತ್ತೇನೆ, ನಾನೇ ನಿಮ್ಮ ತಂದೆಯಾಗಿದ್ದೇನೆ. ನಿರಾಕಾರ ತಂದೆ ಅಂದಾಗ ನಿರಾಕಾರಿ ಮಕ್ಕಳಾಗಿದ್ದೇವೆ. ನಿರಾಕಾರ ಆತ್ಮಗಳು ನೀವಿಲ್ಲಿ ಪಾತ್ರವನ್ನು ಮಾಡಲು ಬರುತ್ತೀರಿ. ಎಲ್ಲಾ ನಿರಾಕಾರ ಆತ್ಮಗಳ ನಿವಾಸಸ್ಥಾನ ನಿರಾಕಾರಿ ಪ್ರಪಂಚವಾಗಿದೆ. ಅವರೇ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ಈ ಸಾಕಾರಿ ಪ್ರಪಂಚ, ಆಕಾರಿ ಪ್ರಪಂಚ ಮತ್ತು ಆ ನಿರಾಕಾರಿ ಪ್ರಪಂಚ ಎಲ್ಲದಕ್ಕಿಂತ ಮೇಲೆ ಮೂರನೆಯ ಪ್ರಪಂಚವಾಗಿದೆ. ತಂದೆಯ ಸಮ್ಮುಖದಲ್ಲಿ ಕುಳಿತು ನಾವು ಮಕ್ಕಳಿಗೆ ತಿಳಿಸುತ್ತಿದ್ದಾರೆ ನಾವೇ ಅಲ್ಲಿ ನಿವಾಸ ಮಾಡುವವರಾಗಿದ್ದೇವೆ. ಹೊಸ ಪ್ರಪಂಚವಿದ್ದಾಗ ಒಂದೇ ಧರ್ಮವಿತ್ತು, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು. ಸ್ವರ್ಗದ ರಚೈತ ಎಂದು ತಂದೆಗೆ ಹೇಳಲಾಗುತ್ತದೆ. ಕಂಸಪುರಿಯು ಕಲಿಯುಗವಾಗಿದೆ. ಸತ್ಯಯುಗ ಕೃಷ್ಣಪುರಿಯಾಗಿದೆ ಅಂದಾಗ ಈಗ ನೀವು ಕೃಷ್ಣಪುರಿಗೆ ಹೋಗಬೇಕೆಂದು ಕೇಳಬೇಕು. ಒಂದುವೇಳೆ ಕೃಷ್ಣಪುರಿಗೆ ಹೋಗಬೇಕೆಂದರೆ ಪವಿತ್ರರಾಗಿರಿ. ನಾವು ದುಃಖಧಾಮದಿಂದ ಸುಖಧಾಮಕ್ಕೆ ಹೋಗಲು ತಯಾರಿಯಾಗುತ್ತಿದ್ದೇವೆಯೋ ಹಾಗೆಯೆ ನೀವೂ ಆಗಿರಿ. ಅದಕ್ಕೋಸ್ಕರ ಅವಶ್ಯವಾಗಿ ವಿಕಾರಗಳನ್ನು ಬಿಡಬೇಕು. ಇದು ಎಲ್ಲರ ಅಂತಿಮ ಜನ್ಮವಾಗಿದೆ. ಎಲ್ಲರೂ ಹಿಂತಿರುಗಿ ಹೋಗಬೇಕು. 5000 ವರ್ಷದ ಮೊದಲು ಈ ಮಹಾಭಾರತ ಯುದ್ಧವಾಗಿತ್ತು ಎಂದು ಮರೆತಿದ್ದೀರೇನು? ಇದರಲ್ಲಿ ಎಲ್ಲಾ ಧರ್ಮಗಳು ವಿನಾಶವಾಗುತ್ತದೆ ಮತ್ತು ಒಂದು ಧರ್ಮದ ಸ್ಥಾಪನೆಯಾಗುತ್ತದೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು, ಕಲಿಯುಗದಲ್ಲಿರಲಿಲ್ಲ. ಈಗ ರಾವಣನ ರಾಜ್ಯವಾಗಿದೆ. ಇಲ್ಲಿ ಅಸುರೀ ಮನುಷ್ಯರಿದ್ದಾರೆ ನಂತರ ಅವರನ್ನು ದೇವತೆಗಳನ್ನಾಗಿ ಮಾಡಬೇಕಾಗುತ್ತದೆ ಅಂದಾಗ ಅದಕ್ಕೋಸ್ಕರ ಅಸುರೀ ಪ್ರಪಂಚದಲ್ಲಿ ಬರಬೇಕು ಹಾಗೂ ದೈವೀ ಪ್ರಪಂಚಕ್ಕೆ ಹೋಗಬೇಕು. ಅದಕ್ಕೋಸ್ಕರ ಎರಡರ ಸಂಗಮದಲ್ಲಿ ಬರುತ್ತಾರೆ. ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯೇ ನಮಗೆ ಈ ರೀತಿ ತಿಳಿಸುತ್ತಿದ್ದಾರೆ. ನಾವು ಅವರ ಶ್ರೀಮತದಂತೆ ನಡೆಯುತ್ತಿದ್ದೇವೆ. ನಾನು ಮಾರ್ಗದರ್ಶಿಯಾಗಿ ನೀವು ಮಕ್ಕಳನ್ನು ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕೋಸ್ಕರ ಬಂದಿದ್ದೇನೆ ಎಂದು ಹೇಳುತ್ತಾರೆ ಆದ್ದರಿಂದ ನನ್ನನ್ನು ಕಾಲರ ಕಾಲನೆಂದು ಹೇಳುತ್ತಾರೆ. ಕಲ್ಪದ ಮೊದಲು ಮಹಾಭಾರತದ ಯುದ್ಧವಾಗಿತ್ತು ಅದರಿಂದಲೇ ಸ್ವರ್ಗದ ದ್ವಾರವು ತೆರೆದಿತ್ತು ಆದರೆ ಎಲ್ಲರೂ ಅಲ್ಲಿಗೆ ಹೋಗಲಿಲ್ಲ. ಕೇವಲ ದೇವಿ-ದೇವತೆಗಳು ಮಾತ್ರ ಹೋದರು. ಬಾಕಿ ಎಲ್ಲರೂ ಶಾಂತಿಧಾಮದಲ್ಲೇ ಇದ್ದರು ಅಂದಾಗ ನಾನು ನಿರ್ವಾಣಧಾಮದ ಮಾಲೀಕ ಎಲ್ಲರನ್ನೂ ನಿರ್ವಾಣಧಾಮಕ್ಕೆ ಕರೆದುಕೊಂಡು ಹೋಗಲು ಬಂದಿದ್ದೇನೆ. ನೀವು ರಾವಣನ ಪಂಜರದಲ್ಲಿ ಸಿಕ್ಕಿಹಾಕಿಕೊಂಡಿದ್ದೀರಿ. ವಿಕಾರಿ ಕೊಳಕಾದ ಅಸುರೀ ಗುಣವುಳ್ಳಂತಹವರಾಗಿದ್ದೀರಿ. ಕಾಮ ಮೊದಲನೆಯ ಶತ್ರುವಾಗಿದೆ, ನಂತರ ಕ್ರೋಧ, ಲೋಭ ನಂಬರ್ವಾರ್ ಕೊಳಕಾಗಿದೆ ಅಂದಾಗ ಇಡೀ ಪ್ರಪಂಚದಿಂದ ನಷ್ಟಮೋಹಿಗಳಾದಾಗ ಸ್ವರ್ಗಕ್ಕೆ ಹೋಗುತ್ತೀರಿ. ಹೇಗೆ ತಂದೆಯು ಅಲ್ಪಕಾಲದ ಮನೆಯನ್ನು ಕಟ್ಟಿದಾಗ ಬುದ್ಧಿಯು ಆ ಕಡೆಗೆ ಹೋಗುತ್ತದೆ. ಮಕ್ಕಳೂ ಸಹ ತಂದೆ ಇದನ್ನು ಮಾಡಬೇಕು, ಅದನ್ನು ಮಾಡಬೇಕು ಚೆನ್ನಾಗಿ ಮನೆಯನ್ನು ಕಟ್ಟಬೇಕು ಎಂದು ಮಕ್ಕಳು ಹೇಳುತ್ತಾರೆ. ಹಾಗೆಯೇ ಬೇಹದ್ದಿನ ತಂದೆಯು ನಿಮಗೆ ಹೊಸಪ್ರಪಂಚ, ಸ್ವರ್ಗವನ್ನು ಹೇಗೆ ಮಾಡುತ್ತೇನೆಂದು ತಂದೆಯು ಹೇಳುತ್ತಾರೆ. ಅಂದಾಗ ನಿಮ್ಮ ಬುದ್ಧಿಯೋಗ ಹಳೆಯ ಪ್ರಪಂಚದಿಂದ ದೂರ ಹೋಗಬೇಕು, ಇಲ್ಲಿ ಇಟ್ಟಿರುವುದೇನು? ದೇಹವು ಹಳೆಯದಾಗಿದೆ. ಆತ್ಮದಲ್ಲಿ ತುಕ್ಕು ಹಿಡಿದುಕೊಂಡಿದೆ. ಯಾವಾಗ ಯೋಗವನ್ನು ಮಾಡುತ್ತೀರೋ ಆಗ ತುಕ್ಕು ದೂರವಾಗುತ್ತದೆ, ಜ್ಞಾನದ ಧಾರಣೆಯಾಗುತ್ತದೆ. ಈ ಬಾಬಾ ಭಾಷಣವನ್ನು ಮಾಡುತ್ತಿದ್ದಾರಲ್ಲವೇ - ಹೇ ಮಕ್ಕಳೇ ನೀವೆಲ್ಲಾ ಆತ್ಮಗಳು ನನ್ನ ರಚನೆಯಾಗಿದ್ದೀರಿ. ಆತ್ಮದ ಸ್ವರೂಪದಲ್ಲಿ ಸಹೋದರ-ಸಹೋದರರಾಗಿದ್ದೀರಿ. ಈಗ ನೀವೆಲ್ಲರೂ ನನ್ನ ಬಳಿಗೆ ಹಿಂತಿರುಗಿ ಬರಬೇಕು. ಈಗ ಎಲ್ಲರೂ ತಮೋಪ್ರಧಾನರಾಗಿದ್ದೀರಿ ಏಕೆಂದರೆ ರಾವಣನ ರಾಜ್ಯವಾಗಿದೆ. ರಾವಣನ ರಾಜ್ಯ ಯಾವಾಗ ಪ್ರಾರಂಭವಾಗುತ್ತದೆ ಎಂದು ನಿಮಗೆ ತಿಳಿದಿರಲಿಲ್ಲ. ಸತ್ಯಯುಗದಲ್ಲಿ 16 ಕಲೆಗಳಿದ್ದವು ನಂತರ 14 ಕಲೆಗಳಾಯಿತು ಅಂದಾಗ ಒಂದೇ ಸಲ 2 ಕಲೆಗಳು ಕಡಿಮೆಯಾಯಿತು ಎಂದಲ್ಲ. ನಿಧನಿಧಾನವಾಗಿ ಕೆಳಗಿಳಿಯುತ್ತದೆ. ಈಗ ಯಾವುದೇ ಕಲೆಯಿಲ್ಲ. ಪೂರ್ಣ ಗ್ರಹಣಹಿಡಿದಿದೆ. ದಾನವನ್ನು ಕೊಟ್ಟರೆ ಪೂರ್ಣ ಗ್ರಹಣ ಬಿಟ್ಟುಹೋಗುತ್ತದೆ ಎಂದು ತಂದೆಯು ಹೇಳುತ್ತಾರೆ. 5 ವಿಕಾರಗಳ ದಾನವನ್ನು ಕೊಡಿ ಮತ್ತು ಯಾವುದೇ ಪಾಪವನ್ನು ಮಾಡಬೇಡಿ. ಭಾರತವಾಸಿಗಳು ರಾವಣನನ್ನು ಸುಟ್ಟುಹಾಕುತ್ತಾರೆ ಅಂದಾಗ ಅವಶ್ಯವಾಗಿ ರಾವಣನ ರಾಜ್ಯವಾಗಿದೆ. ಆದರೆ ರಾವಣನ ರಾಜ್ಯವೆಂದು ಯಾವುದಕ್ಕೆ ಹೇಳುತ್ತೀರಿ, ರಾಮರಾಜ್ಯವೆಂದು ಯಾವುದಕ್ಕೆ ಹೇಳಲಾಗುತ್ತದೆ ಎನ್ನುವುದು ಯಾರಿಗೂ ತಿಳಿದಿಲ್ಲ. ರಾಮರಾಜ್ಯವಾಗಲಿ, ಹೊಸ ಭಾರತವಾಗಲಿ ಎಂದು ಹೇಳುತ್ತಾರೆ ಆದರೆ ಹೊಸ ಪ್ರಪಂಚ ಹೊಸ ಭಾರತ ಯಾವಾಗ ಇತ್ತೆಂದು ಯಾರಿಗೂ ತಿಳಿದಿಲ್ಲ. ಎಲ್ಲರೂ ಸ್ಮಶಾನದಲ್ಲಿ ಮಲಗಿದ್ದಾರೆ.
ಈಗ ನೀವು ಮಕ್ಕಳು ಸತ್ಯಯುಗದ ವೃಕ್ಷವನ್ನು ನೋಡುತ್ತೀರಿ. ಇಲ್ಲಿ ಯಾರೂ ದೇವತೆಗಳಿಲ್ಲ ಅಂದಾಗ ತಂದೆಯೇ ಬಂದು ಎಲ್ಲವನ್ನು ತಿಳಿಸುತ್ತಾರೆ. ಅವರೇ ನಿಮ್ಮ ತಂದೆ-ತಾಯಿಯಾಗಿದ್ದಾರೆ, ಸ್ಥೂಲವಾಗಿ ಈ ತಂದೆ-ತಾಯಿ ಇದ್ದಾರೆ. ನೀವೇ ತಂದೆ-ತಾಯಿಗಳು ಎಂದು ಗಾಯನ ಮಾಡುತ್ತೀರಿ. ಅಲ್ಲಿ ಕೃಪೆಯ ಮಾತಿಲ್ಲ. ಇಲ್ಲಿ ತಂದೆ-ತಾಯಿಗಳಾಗಿ ನಂತರ ಯೋಗ್ಯರೂ ಆಗಬೇಕು. ಹೇ ಭಾರತವಾಸಿಗಳೇ, ನೀವು ದೇವತೆಗಳು ಎಷ್ಟೊಂದು ಶ್ರೀಮಂತರಾಗಿದ್ದೀರಿ, ಎಷ್ಟೊಂದು ಬುದ್ಧಿವಂತರಾಗಿದ್ದೀರಿ ಎಂದು ಮರೆತಿದ್ದೀರಿ ಎನ್ನುವುದನ್ನು ತಂದೆಯು ಸ್ಮೃತಿ ತರಿಸುತ್ತಿದ್ದಾರೆ. ಬುದ್ಧಿಹೀನರಾಗಿ ದೀವಾಳಿಯಾಗಿದ್ದೀರಿ. ಆದ್ದರಿಂದ ಬುದ್ಧಿಹೀನರನ್ನಾಗಿ ಮಾಯಾರಾವಣನೇ ನಿಮ್ಮನ್ನು ಮಾಡಿದನು. ಆದ್ದರಿಂದ ರಾವಣನನ್ನು ಸುಟ್ಟುಹಾಕುತ್ತೀರಿ. ಶತ್ರುವಿನ ಚಿತ್ರವನ್ನು ಮಾಡಿ ಸುಟ್ಟುಹಾಕುತ್ತೀರಿ. ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನ ಸಿಗುತ್ತಿದೆ ಆದರೆ ವಿಚಾರಸಾಗರ ಮಂಥನ ಮಾಡುತ್ತಿಲ್ಲ ಬುದ್ಧಿ ಅಲೆದಾಡುತ್ತಿರುತ್ತದೆ ಹಾಗೂ ಅನೇಕ ವಿಚಾರಗಳು ಭಾಷಣ ಮಾಡುವುದರಲ್ಲಿ ಮರೆತುಹೋಗುತ್ತದೆ ಪೂರ್ಣ ತಿಳಿಸುವುದಿಲ್ಲ. ತಂದೆಯೇ ಬಂದಿದ್ದಾರೆಂದು ನೀವು ತಂದೆಯ ಸಂದೇಶವನ್ನು ತಿಳಿಸಬೇಕು. ಈ ಮಹಾಭಾರತದ ಯುದ್ಧವು ನಿಮ್ಮ ಎದುರಿಗೆ ನಿಂತಿದೆ. ಎಲ್ಲರೂ ಹಿಂತಿರುಗಿ ಹೋಗಬೇಕು. ಈಗ ಸ್ವರ್ಗವು ಸ್ಥಾಪನೆಯಾಗುತ್ತಿದೆ. ದೇಹಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಬಾಕಿ ಕೇವಲ ಇಸ್ಲಾಮಿ, ಬೌದ್ಧಿ, ಮುಂತಾದವರು ಸಹೋದರ-ಸಹೋದರರಾಗಿದ್ದಾರೆ ಎಂದಲ್ಲ. ಇದೆಲ್ಲಾ ದೇಹದ ಧರ್ಮಗಳಾಗಿದೆ. ಇವರೆಲ್ಲಾ ಯಾವ ಆತ್ಮಗಳಿದ್ದಾರೆ ಅವರು ತಂದೆಯ ಸಂತಾನರಾಗಿದ್ದಾರೆ. ಇದೆಲ್ಲಾ ದೇಹದ ಧರ್ಮವನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಈ ತಂದೆಯ ಸಂದೇಶವನ್ನು ಕೊಡುವುದಕ್ಕೋಸ್ಕರ ನಾವು ಶಿವಜಯಂತಿಯನ್ನು ಆಚರಣೆ ಮಾಡುತ್ತೇವೆ. ನಾವು ಬ್ರಹ್ಮಾಕುಮಾರ-ಕುಮಾರಿಯರು ಶಿವನ ಮೊಮ್ಮಕ್ಕಳಾಗಿದ್ದೇವೆ. ನಮಗೆ ಅವರಿಂದ ಸ್ವರ್ಗದ ರಾಜಧಾನಿಯ ಆಸ್ತಿಯು ಸಿಗುತ್ತದೆ. ತಂದೆಯು ನಮಗೆ ಮನ್ಮನಾಭವದ ಸಂದೇಶವನ್ನು ಕೊಡುತ್ತಾರೆ. ಈ ಯೋಗದ ಅಗ್ನಿಯಿಂದ ವಿಕರ್ಮವು ವಿನಾಶವಾಗುತ್ತದೆ. ಅಶರೀರಿಗಳಾಗಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ಅಶರೀರಿ ಆತ್ಮವೆಂದು ತಿಳಿದು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗ ಮತ್ತು ಜ್ಞಾನದ ಧಾರಣೆಯಿಂದ ಆತ್ಮವನ್ನು ಪಾವನ ಮಾಡಬೇಕಾಗಿದೆ.
2.
ತಂದೆಯ ಜ್ಞಾನವನ್ನು ವಿಚಾರಸಾಗರ ಮಂಥನವನ್ನು ಮಾಡಿ ಎಲ್ಲರಿಗೂ ತಂದೆಯು ಸಂದೇಶವನ್ನು ಕೊಡಬೇಕಾಗಿದೆ. ಬುದ್ಧಿಯನ್ನು ಅಲೆದಾಡಲು ಬಿಡಬಾರದಾಗಿದೆ.
ವರದಾನ:
ತಂದೆಯ ಹೆಜ್ಜೆಯ
ಮೇಲೆ ಹೆಜ್ಜೆ
ಇಡುತ್ತಾ ಪರಮಾತ್ಮನ
ಆಶೀರ್ವಾದ ಪ್ರಾಪ್ತಿ
ಮಾಡಿಕೊಳ್ಳುವಂತಹ ಆಜ್ಞಾಕಾರಿ
ಭವ
ಆಜ್ಞಾಕಾರಿ ಅರ್ಥಾತ್ ಬಾಪ್ದಾದಾ ರವರ ಆಜ್ಞಾ ರೂಪಿ ಹೆಜ್ಜೆಯ ಮೇಲೆ ಹೆಜ್ಜೆ ಇಡುವಂತಹವರು. ಇಂತಹ ಆಜ್ಞಾಕಾರಿಗಳಿಗೆ ಸರ್ವ ಸಂಬಂಧಗಳಿಂದ ಪರಮಾತ್ಮನ ಆಶೀರ್ವಾದಗಳು ಸಿಗುತ್ತವೆ. ಇದೂ ಸಹ ನಿಯಮವಾಗಿದೆ. ಸಾಧಾರಣ ರೀತಿಯಲ್ಲಿಯೂ ಸಹ ಯಾರು ಯಾರದೇ ಡೈರೆಕ್ಷನ್ ಪ್ರಮಾಣ ಹಾಂ ಜೀ ಎಂದು ಹೇಳುತ್ತಾ ಕಾರ್ಯ ಮಾಡುತ್ತಿರುತ್ತಾರೆ ಮತ್ತು ಯಾರ ಕಾರ್ಯ ಮಾಡುತ್ತಾರೆ ಅವರಿಂದ ಆಶೀರ್ವಾದ ಅವರಿಗೆ ಖಂಡಿತ ಸಿಗುತ್ತಿರುತ್ತದೆ. ಇದು ಪರಮಾತ್ಮನ ಆಶೀರ್ವಾದವಾಗಿದೆ ಯಾವುದು ಆಜ್ಞಾಕಾರಿ ಆತ್ಮಗಳಿಗೆ ಸದಾ ಡಬಲ್ ಲೈಟ್ ಮಾಡಿಬಿಡುವುದು.
ಸ್ಲೋಗನ್:
ದಿವ್ಯತೆ ಮತ್ತು ಅಲೌಕಿಕತೆಯನ್ನು ತಮ್ಮ ಜೀವನದ ಶೃಂಗಾರ ಮಾಡಿಕೊಂಡಾಗ ಸಾಧಾರಣತೆ ಸಮಾಪ್ತಿಯಾಗಿ ಬಿಡುವುದು.
0 Comments