31/12/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ತಾವು
ಶಿವಜಯಂತಿಯ ಹಬ್ಬವನ್ನು
ಬಹಳ ವಿಜೃಂಭಣೆಯಿಂದ
ಆಚರಿಸಬೇಕು, ಇದು
ನಿಮ್ಮ ಬಹಳ
ದೊಡ್ಡ ಖುಷಿಯ
ದಿನವಾಗಿದೆ, ಸರ್ವರಿಗೂ
ತಂದೆಯ ಪರಿಚಯವನ್ನು
ನೀಡಬೇಕು”
ಪ್ರಶ್ನೆ:
ಯಾವ ಮಕ್ಕಳು ತಮಗೆ ಬಹಳ ನಷ್ಟ ಮಾಡಿಕೊಳ್ಳುತ್ತಾರೆ? ನಷ್ಟ ಯಾವಾಗ ಆಗುತ್ತದೆ?
ಉತ್ತರ:
ಯಾವ ಮಕ್ಕಳು ನಡೆಯುತ್ತಾ-ನಡೆಯುತ್ತಾ ವಿದ್ಯೆಯನ್ನು
ಬಿಟ್ಟು ಬಿಡುತ್ತಾರೆ ಅವರು ತಮಗೆ ಬಹಳ ನಷ್ಟ ಮಾಡಿಕೊಳ್ಳುತ್ತಾರೆ. ಬಾಬಾ ಪ್ರತಿನಿತ್ಯ ಇಷ್ಟೊಂದು ವಜ್ರ ರತ್ನಗಳನ್ನೇ ಕೊಡುತ್ತಾರೆ, ಗುಹ್ಯ ವಿಚಾರಗಳನ್ನು ಹೇಳುತ್ತಾರೆ, ಒಂದುವೇಳೆ ಯಾರು ಪ್ರತಿನಿತ್ಯ ಕೇಳುವುದಿಲ್ಲವೋ
ಆಗ ನಷ್ಟವಾಗುತ್ತದೆ.
ಫೇಲ್ ಆಗುತ್ತಾರೆ. ಸ್ವರ್ಗದ ಮ ಚಕ್ರಾಧಿಪತ್ಯವನ್ನು
ಕಳೆದುಕೊಳ್ಳುತ್ತಾರೆ. ಪದವಿಯೂ ಭ್ರಷ್ಟವಾಗುತ್ತದೆ.
ಗೀತೆ: ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ.........
ಓಂ ಶಾಂತಿ.
ಈ ರಾತ್ರಿ ಹಾಗೂ ಹಗಲು ಮನುಷ್ಯರಿಗಾಗಿಯೇ ಇದೆ.
ಶಿವಬಾಬಾರವರಗೆ ರಾತ್ರಿ ಹಾಗೂ ಹಗಲು ಇಲ್ಲ. ಇದು ತಾವು ಮಕ್ಕಳಿಗಾಗಿ ಇದೆ. ಮನುಷ್ಯರಿಗಾಗಿ ಇದೆ. ಬ್ರಹ್ಮನ ರಾತ್ರಿ, ಬ್ರಹ್ಮನ ಹಗಲು ಎಂದು ಗಾಯನವಿದೆ. ಶಿವನ ಹಗಲು, ಶಿವನ ರಾತ್ರಿ ಎನ್ನುವುದು ಎಂದೂ ಸಹ ಹೇಳುವುದಿಲ್ಲ. ಕೇವಲ ಒಬ್ಬ ಬ್ರಹ್ಮನಿಗಾಗಿ ಹೇಳುವುದಿಲ್ಲ, ಒಬ್ಬರಿಗಾಗಿ ರಾತ್ರಿ ಆಗುವುದಿಲ್ಲ.
ಗಾಯನವಿದೆ – ಬ್ರಹ್ಮನ ರಾತ್ರಿ. ತಮಗೆ ಗೊತ್ತಿದೆ - ಈಗ ಭಕ್ತಿಮಾರ್ಗದ ಅಂತ್ಯ,
ಘೋರ ಅಂಧಕಾರದ ಅಂತ್ಯವಾಗುತ್ತದೆ. ಯಾವಾಗ ಬ್ರಹ್ಮನ ರಾತ್ರಿ ಆಗುತ್ತದೋ ಆಗಲೇ ನಾನು ಬರುತ್ತೇನೆ,
ಈಗ ತಾವು ಹಗಲಿನ ಕಡೆಗೆ ಹೋಗಲು ಪ್ರಾರಂಭಿಸಿದ್ದೀರಿ. ಯಾವಾಗ ತಾವು ಬ್ರಹ್ಮನ ಸಂತಾನರಾಗುತ್ತೀರೋ, ಆಗ ತಮಗೆ ಬ್ರಾಹ್ಮಣರು ಎಂದು ಹೇಳಲಾಗುತ್ತದೆ. ಬ್ರಾಹ್ಮಣರ ರಾತ್ರಿ ಪೂರ್ಣವಾಗಿ ದೇವತೆಗಳ ಹಗಲು ಶುರುವಾಗುತ್ತದೆ. ಬ್ರಾಹ್ಮಣರೇ ಹೋಗಿ ದೇವತೆಗಳಾಗುತ್ತಾರೆ. ಈ ಯಜ್ಞದಿಂದ ಬಹಳ ದೊಡ್ಡ ಬದಲಾವಣೆ ಆಗುತ್ತದೆ.
ಹಳೆಯ ಜಗತ್ತು ಬದಲಾವಣೆ ಆಗಿ ಹೊಸದಾಗುತ್ತದೆ. ಕಲಿಯುಗ ಹಳೆಯಯುಗ ಸತ್ಯಯುಗ ಹೊಸಯುಗವಾಗಿದೆ. ನಂತರ ತ್ರೇತಾ - 25% ಹಳೆಯದು ದ್ವಾಪರ
50% ಹಳೆಯದು ಯುಗದ ಹೆಸರೇ ಬದಲಾಗುತ್ತದೆ.
ಕಲಿಯುಗಕ್ಕೆ ಎಲ್ಲರೂ ಹಳೆಯಯುಗ ಎಂದು ಹೇಳುತ್ತಾರೆ. ಯಾವ ತಂದೆ ಈಶ್ವರೀಯ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೋ ಅವರಿಗೆ ಈಶ್ವರ ಎಂದು ಹೇಳಲಾಗುತ್ತದೆ. ತಂದೆ ಹೇಳುತ್ತಾರೆ ನಾನು ಕಲ್ಪ-ಕಲ್ಪ ಸಂಗಮಯುಗದಲ್ಲಿ ಬರುತ್ತೇನೆ.
ಸಮಯವಂತೂ ಹಿಡಿಸುತ್ತದೆ.
ಇರುವುದು ಒಂದು ಸೆಕೆಂಡಿನ ವಿಚಾರ,
ಆದರೆ ವಿಕರ್ಮ ವಿನಾಶವಾಗುವುದರಲ್ಲಿ ಸಮಯ ಹಿಡಿಸುತ್ತದೆ. ಏಕೆಂದರೆ ಅರ್ಧಕಲ್ಪದ ಪಾಪ ತಲೆಯ ಮೇಲೆ ಇದೆ. ತಂದೆ ಸ್ವರ್ಗವನ್ನು ರಚಿಸಿದ ಮೇಲೆ ತಾವು ಮಕ್ಕಳೇ ಸ್ವರ್ಗಕ್ಕೆ ಮಾಲೀಕರು ಆಗುತ್ತೀರಿ.
ಆದರೆ ತಲೆಯ ಮೇಲೆ ಯಾವ ಪಾಪಗಳ ಹೊರೆ ಇದೆ ಅದನ್ನು ಇಳಿಸುವುದರಲ್ಲಿ ಸಮಯ ಬೇಕಾಗುತ್ತದೆ. ಯೋಗ ಮಾಡಬೇಕಾಗುತ್ತದೆ. ತಮ್ಮನ್ನು ಆತ್ಮ ಎಂದು ಅವಶ್ಯವಾಗಿ ತಿಳಿಯಬೇಕು.
ಮೊದಲು ಬಾಬಾ ಎಂದು ಹೇಳುತ್ತಿದ್ದಾಗ ಶರೀರದ ತಂದೆ ನೆನಪು ಬರುತ್ತಿದ್ದರು.
ಈಗ ಬಾಬಾ ಎಂದು ಹೇಳುವುದರಿಂದ ಬುದ್ಧಿ ಮೇಲೆ ಹೋಗುತ್ತದೆ. ನಾವಾತ್ಮಗಳು ಆತ್ಮೀಯ ತಂದೆಗೆ ಸಂತಾನರಾಗಿದ್ದೇವೆ ಎಂಬುದು ಬೇರೆ ಯಾರ ಬುದ್ಧಿಯಲ್ಲೂ ಬರುವುದಿಲ್ಲ.
ನಮ್ಮ ತಂದೆ,
ಶಿಕ್ಷಕ, ಗುರು ಇವರು ಮೂವರೂ ಆತ್ಮಿಕ ರೂಪದಲ್ಲಿ ಇದ್ದಾರೆ. ನೆನಪನ್ನೂ ಸಹ ಅವರನ್ನೇ ಮಾಡುತ್ತಾರೆ. ಇದು ಹಳೆಯ ಶರೀರವಾಗಿದೆ.
ಇದನ್ನು ಏನು ಶೃಂಗಾರ ಮಾಡುವುದು?
ಆದರೆ ಒಳಗಡೆ ತಿಳಿಯುತ್ತಾರೆ - ನಾವೀಗ ವನವಾಸದಲ್ಲಿ ಇದ್ದೇವೆ ಎಂದು. ಅತ್ತೆಮನೆ ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ಅಂತಿಮದಲ್ಲಿ ಏನೂ ಇರುವುದಿಲ್ಲ ನಂತರ ನಾವು ಹೋಗಿ ವಿಶ್ವದ ಮಾಲೀಕರಾಗುತ್ತೇವೆ. ಈ ಸಮಯದಲ್ಲಿ ಇಡೀ ಜಗತ್ತು ವನವಾಸದಲ್ಲಿ ಇದೆ. ಇದರಲ್ಲಿ ಏನು ಇಟ್ಟಿದ್ದೀರಿ,
ಏನೂ ಇಲ್ಲ.
ಯಾವಾಗ ಅತ್ತೆ ಮನೆ ಇತ್ತು ಆಗ ವಜ್ರವೈಢೂರ್ಯಗಳ ಮಹಲ್ ಇತ್ತು,
ಬಹಳ ವೈಭವ ಇತ್ತು. ಈಗ ಮತ್ತೆ ತಂದೆ ಮನೆಯಿಂದ ಅತ್ತೆ ಮನೆಗೆ ಹೋಗಬೇಕು.
ಈಗ ತಾವು ಯಾರ ಬಳಿ ಬಂದಿದ್ದೀರಿ? ಬಾಪ್ದಾದಾರವರ ಬಳಿ ಎಂದು ಹೇಳುತ್ತೀರಿ. ತಂದೆಯು ದಾದಾರವರಲ್ಲಿ ಪ್ರವೇಶ ಮಾಡಿದ್ದಾರೆ, ದಾದಾರವರು ಇಲ್ಲಿಯ ನಿವಾಸಿಗಳು.
ಅಂದಮೇಲೆ ಬಾಪ್ದಾದಾ ಇವರಿಬ್ಬರೂ ಕಂಬೈಂಡ್ ಆಗಿದ್ದಾರೆ. ಪರಮಪಿತ ಪರಮಾತ್ಮ ಪತಿತಪಾವನ ಆಗಿದ್ದಾರೆ. ಅವರ ಆತ್ಮ ಒಂದುವೇಳೆ ಕೃಷ್ಣನಲ್ಲಿ ಇದ್ದರೆ ಅವರು ಜ್ಞಾನ ಹೇಳಿದರೆ ಕೃಷ್ಣನಿಗೂ ಸಹ ಬಾಪ್ದಾದಾ ಎಂದು ಹೇಳಬೇಕಾಗುತ್ತದೆ, ಆದರೆ ಕೃಷ್ಣನಿಗೆ ಬಾಪ್ದಾದಾ ಎಂದು ಹೇಳುವುದು ಶೋಭಿಸುವುದಿಲ್ಲ. ಪ್ರಜಾಪಿತ ಎಂದು ಬ್ರಹ್ಮನಿಗೆ ಗಾಯನವಿದೆ.
ತಂದೆ ತಿಳಿಸುತ್ತಾರೆ
- ಇದು 5000 ವರ್ಷಗಳ ಚಕ್ರವಾಗಿದೆ.
ತಾವು ಮಕ್ಕಳು ಯಾವಾಗ ಪ್ರದರ್ಶನಿಯನ್ನು ತೋರಿಸುತ್ತೀರಿ, ಆಗ ಅದರಲ್ಲಿ ಬರೆಯಿರಿ
- ಪಾರಲೌಕಿಕ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಹೇಗೆ ಪಡೆಯಬಹುದು ಎಂಬುದನ್ನು ನಾವು ಇಂದಿಗೆ 5000 ವರ್ಷಗಳ ಮೊದಲೂ ಸಹ ಪ್ರದರ್ಶನಿಯಲ್ಲಿ ಹೇಳಿದ್ದೆವು. ಇಂದಿಗೆ
5000 ವರ್ಷದ ಮೊದಲಿನಂತೇ ಮತ್ತೆ ನಾವು ತ್ರಿಮೂರ್ತಿ ಶಿವಜಯಂತಿಯನ್ನು ಆಚರಿಸುತ್ತೇವೆ. ಈ ಅಕ್ಷರವನ್ನೂ ಸಹ ಅವಶ್ಯವಾಗಿ ಹಾಕಬೇಕು.
ಈ ಬಾಬಾ ಆದೇಶವನ್ನು ನೀಡುತ್ತಿದ್ದಾರೆ, ಅದರನುಸಾರ ನಡೆಯಬೇಕು.
ಶಿವಜಯಂತಿಗೆ ತಯಾರಿ ಮಾಡಿಕೊಳ್ಳಬೇಕು. ಹೊಸ-ಹೊಸ ಮಾತುಗಳನ್ನು ನೋಡಿ ಮನುಷ್ಯರು ಆಶ್ಚರ್ಯ ಪಡುತ್ತಾರೆ.
ಚೆನ್ನಾಗಿ ಶೋ ಮಾಡಬೇಕು. ನಾವು ತ್ರಿಮೂರ್ತಿ ಶಿವಜಯಂತಿಯನ್ನು ಆಚರಿಸುತ್ತೇವೆ. ರಜಾ ತೆಗೆದುಕೊಳ್ಳುತ್ತೇವೆ. ಶಿವಜಯಂತಿ ಅಂದು ರಜಾ ಎಲ್ಲರಿಗೂ ಇರುತ್ತದೆ.
ಕೆಲವರು ತೆಗೆದುಕೊಳ್ಳುತ್ತಾರೆ, ಕೆಲವರು ತೆಗೆದುಕೊಳ್ಳುವುದಿಲ್ಲ. ತಮಗೆ ಇದು ಬಹಳ ದೊಡ್ಡ ಹಬ್ಬವಾಗಿದೆ. ಹೇಗೆ ಕ್ರಿಶ್ಚಯನ್ನರು ಕ್ರಿಸ್ಮಸ್ ಆಚರಿಸುತ್ತಾರೆ, ಬಹಳ ಖುಷಿಯನ್ನು ಆಚರಿಸುತ್ತಾರೆ.
ತಾವು ಈಗ ಈ ಖುಷಿಯನ್ನು ಆಚರಿಸಬೇಕು. ನಾವು ಪಾರಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ಎಲ್ಲರಿಗೂ ತಿಳಿಸಬೇಕು. ಯಾರು ತಿಳಿಯುತ್ತಾರೋ ಅವರು ಖುಷಿಯನ್ನು ಆಚರಿಸುತ್ತಾರೆ.
ಸೇವಾಕೇಂದ್ರದಲ್ಲೂ ಪರಸ್ಪರ ಮಿಲನ ಮಾಡುತ್ತಾರೆ.
ಇಲ್ಲಿಗಂತೂ ಎಲ್ಲರೂ ಬರಲು ಸಾಧ್ಯವಿಲ್ಲ.
ನಾವು ಜನ್ಮದಿನವನ್ನು ಆಚರಿಸುತ್ತೇವೆ. ಶಿವಬಾಬಾರವರ ಮೃತ್ಯು ಆಗಲು ಸಾಧ್ಯವಿಲ್ಲ. ಹೇಗೆ ಶಿವಬಾಬಾ ಬಂದಿದ್ದಾರೋ ಹಾಗೆಯೇ ಹೊರಟು ಹೋಗುತ್ತಾರೆ. ಜ್ಞಾನ ಪೂರ್ಣ ಆದಮೇಲೆ ಯುದ್ಧ ಶುರುವಾಗುತ್ತದೆ. ಇವರಿಗೆ ತಮ್ಮ ಶರೀರವಂತೂ ಇಲ್ಲ.
ತಾವು ಮಕ್ಕಳು ತಮ್ಮನ್ನು ಆತ್ಮ ಎಂದು ತಿಳಿದು ಪೂರ್ಣ ಆತ್ಮಾಭಿಮಾನಿಗಳಾಗಬೇಕು. ಇದರಲ್ಲಿ ಶ್ರಮ ಪಡಬೇಕಾಗುತ್ತದೆ. ಸತ್ಯಯುಗದಲ್ಲಿ ಆತ್ಮಾಭಿಮಾನಿಗಳಾಗಿರುತ್ತಾರೆ, ಅಲ್ಲಿ ಅಕಾಲ ಮೃತ್ಯು ಇರುವುದಿಲ್ಲ. ಇಲ್ಲಿ ಕುಳಿತಿದ್ದ ಹಾಗೆಯೇ ಮೃತ್ಯು ಬರುತ್ತದೆ,
ಹೃದಯಘಾತವಾಗುತ್ತದೆ. ಈಶ್ವರನ ಲೀಲೆ ಎಂದು ಹೇಳುತ್ತಾರೆ, ಆದರೆ ಇದು ಈಶ್ವರನ ಲೀಲೆ ಅಲ್ಲ.
ತಾವು ಹೇಳುತ್ತೀರಿ ಡ್ರಾಮಾದ ಲೀಲೆ,
ಡ್ರಾಮಾದಲ್ಲಿ ಅವರ ಪಾತ್ರವೇ ಹಾಗಿತ್ತು ಎಂದು. ಈಗ ಕಬ್ಬಿಣದ ಯುಗವಾಗಿದೆ,
ಹೊಸ ಜಗತ್ತು ಸ್ವರ್ಣಿಮಯುಗವಾಗಿತ್ತು. ಸತ್ಯಯುಗದ ಮಹಲ್ಗಳು ಎಷ್ಟೊಂದು ವಜ್ರಗಳಿಂದ ಶೃಂಗಾರಿತವಾಗಿತ್ತು, ಅಪಾರವಾದ ಧನ ಸಂಪತ್ತಿ ಇರುತ್ತದೆ,
ಆದರೆ ಅದರ ಪೂರ್ಣ ವೃತ್ತಾಂತವಿಲ್ಲ. ಸ್ವಲ್ಪ ಭೂಕಂಪವಾದರೆ ಎಲ್ಲವೂ ಮುರಿದು ಹೋಗುತ್ತದೆ, ಕೆಳಗೆ ಹೊರಟು ಹೋಗುತ್ತದೆ,
ಅಂದಮೇಲೆ ಈ ಮಾತುಗಳಿಂದ ಏನು ಪ್ರಯೋಜನ? ಈ ಆಹಾರ ಬುದ್ಧಿಗಾಗಿದೆ.
ನಿಮ್ಮ ಬುದ್ಧಿ ಮೇಲೆ ಹೊರಟು ಹೋಗಿದೆ. ರಚಯಿತನನ್ನು ತಿಳಿದಿರುವುದರಿಂದ ರಚನೆಯನ್ನೂ ಸಹ ತಿಳಿದಿದ್ದೀರಿ.
ಪೂರ್ಣ ಸೃಷ್ಟಿಯ ರಹಸ್ಯವೇ ಬುದ್ಧಿಯಲ್ಲಿ ಇದೆ. ಡ್ರಾಮಾದಲ್ಲಿ ಭಗವಂತನೇ ಸರ್ವ ಶ್ರೇಷ್ಠರಾಗಿದ್ದಾರೆ. ಮತ್ತೆ ಬ್ರಹ್ಮಾ-ವಿಷ್ಣು-ಶಂಕರರ ಕರ್ತವ್ಯವನ್ನೂ ಸಹ ಹೇಳಬಹುದು.
ಏನೇನು ಪಾತ್ರವಿದೆ?
ಜಗದಂಬೆಯ ಮೇಳ ಎಷ್ಟು ದೊಡ್ಡದು ನಡೆಯುತ್ತದೆ, ಜಗದಂಬಾ,
ಜಗತ್ಪಿತಾರವರ ಪರಸ್ಪರ ಸಂಬಂಧ ಏನು?
ಇದು ಯಾರಿಗೂ ಗೊತ್ತಿಲ್ಲ ಏಕೆಂದರೆ ಇದೂ ಸಹ ಗುಪ್ತ ವಿಚಾರವಾಗಿದೆ.
ತಾಯಿಯೂ ಇಲ್ಲಿ ಕುಳಿತಿದ್ದಾರೆ, ಅವರನ್ನು ದತ್ತು ಮಾಡಿಕೊಂಡಿದ್ದಾರೆ. ಆದ್ದರಿಂದ ಅವರ ಚಿತ್ರವೂ ಮಾಡಲಾಗಿದೆ.
ಅವರಿಗೆ ಜಗದಾಂಬಾ ಎಂದು ಹೇಳಲಾಗುತ್ತದೆ.
ಬ್ರಹ್ಮನ ಮಗಳು ಸರಸ್ವತಿ ಆಗಿದ್ದಾರೆ.
ಭಲೆ ತಾಯಿ ಎಂಬ ಬಿರುದೂ ಇದೆ. ಆದರೆ ಅವರು ಮಗಳು ಆಗಿದ್ದಾರೆ. ಬ್ರಹ್ಮಾಕುಮಾರೀ ಸರಸ್ವತಿ ಎಂದು ಅವರು ಸಹಿ ಮಾಡುತ್ತಿದ್ದರು. ತಾವು ಅವರಿಗೆ ಮಮ್ಮಾ ಎಂದು ಹೇಳುತ್ತಿದ್ದಿರಿ. ಬ್ರಹ್ಮನಿಗೇ ತಾಯಿ ಎಂದು ಹೇಳುವುದು ಶೋಭಿಸುವುದಿಲ್ಲ. ಇದನ್ನು ತಿಳಿಸಲು ಬಹಳ ಸ್ವಚ್ಚ ಬುದ್ಧಿ ಇರಬೇಕು. ಇದು ಗುಪ್ತ ವಿಚಾರವಾಗಿದೆ.
ತಾವು ಯಾರದೇ ಮಂದಿರಕ್ಕೆ ಹೋದರೂ ತಕ್ಷಣ ಅವರ ಕರ್ತವ್ಯವನ್ನು ತಿಳಿಯುತ್ತೀರಿ.
ಗುರುನಾನಕ್ನ ಮಂದಿರದಲ್ಲಿ ಹೋದರೂ ತಕ್ಷಣ ಕೇಳುತ್ತೀರಿ ಅವರು ಮತ್ತೆ ಯಾವಾಗ ಬರುತ್ತಾರೆ? ಅವರಿಗಂತೂ ಏನೂ ಗೊತ್ತಿಲ್ಲ.
ಏಕೆಂದರೆ ಕಲ್ಪದ ಆಯಸ್ಸನ್ನು ಬಹಳ ದೊಡ್ಡದನ್ನಾಗಿ ಮಾಡಿದ್ದಾರೆ.
ತಾವು ವರ್ಣನೆ ಮಾಡಬಹುದು. ತಂದೆ ಹೇಳುತ್ತಾರೆ - ನೋಡಿ ನಾನು ನಿಮಗೆ ಹೇಗೆ ಓದಿಸುತ್ತೇನೆ?
ಹೇಗೆ ಬರುತ್ತೇನೆ?
ಕೃಷ್ಣನ ಮಾತು ಇಲ್ಲವೇ ಇಲ್ಲ.
ಗೀತೆಯ ಪಾಠವನ್ನು ಓದುತ್ತಿರುತ್ತಾರೆ. ಕೆಲವರು
18 ಅಧ್ಯಾಯವನ್ನು ನೆನಪು ಮಾಡಿದರೆ ಅವರಿಗೆ ಎಷ್ಟು ಮಹಿಮೆ ಆಗುತ್ತದೆ. ಒಂದು ಶ್ಲೋಕ ಹೇಳಿದರೆ ಸಾಕು ವಾಹ್!
ವಾಹ್! ಎಂದು ಹೇಳುತ್ತಾರೆ. ಇವರಂತಹ ಮಹಾತ್ಮರು ಯಾರೂ ಇಲ್ಲ ಎನ್ನುತ್ತಾರೆ.
ಈಗಿನ ಕಾಲದಲ್ಲಿ ರಿದ್ಧಿ-ಸಿದ್ಧಿ ಬಹಳಷ್ಟು ಇದೆ.
ಜಾದುವಿನ ಆಟ ಬಹಳ ತೋರಿಸುತ್ತಾರೆ.
ಜಗತ್ತಿನಲ್ಲಿ ಬಹಳ ಮೋಸವಿದೆ. ತಂದೆ ತಮಗೆ ಎಷ್ಟು ಸಹಜವಾಗಿ ತಿಳಿಸುತ್ತಾರೆ,
ಆದರೆ ಓದುವಂತಹವರ ಮೇಲೆ ಆಧಾರವಾಗಿದೆ.
ಶಿಕ್ಷಕರಂತೂ ಏಕರಸವಾಗಿ ಓದಿಸುತ್ತಾರೆ. ಯಾರು ಓದುವುದಿಲ್ಲವೋ ಅವರು ಫೇಲ್ ಆಗುತ್ತಾರೆ.
ಇದು ಅವಶ್ಯವಾಗಿ ಆಗಲೇಬೇಕು. ಪೂರ್ಣರಾಜಧಾನಿಯೂ ಸ್ಥಾಪನೆ ಆಗಬೇಕು.
ತಾವು ಈ ಜ್ಞಾನಸ್ನಾನವನ್ನು ಮಾಡಿ ಫರಿಸ್ಥಾನದ ಪರಿ ಎಂದರೆ ಅರ್ಥ ಸ್ವರ್ಗದ ಮಾಲೀಕರಾಗುತ್ತೀರಿ. ಹಗಲು-ರಾತ್ರಿಯ ವ್ಯತ್ಯಾಸವಿದೆ. ಅಲ್ಲಿ ತತ್ವವೂ ಸಹ ಸತೋಪ್ರಧಾನವಾಗಿರುವುದರಿಂದ ಶರೀರವೂ ಸಹ ಸರಿಯಾಗಿ ಆಗುತ್ತದೆ. ಸಹಜವಾದ ಸೌಂದರ್ಯವಿರುತ್ತದೆ. ಅದು ಈಶ್ವರನೇ ಸ್ಥಾಪನೆ ಮಾಡಿದ ಭೂಮಿಯಾಗಿದೆ.
ಈಗ ಆಸುರೀ ಭೂಮಿ ಇದೆ.
ಸ್ವರ್ಗ-ನರಕದಲ್ಲಿ ಬಹಳ ವ್ಯತ್ಯಾಸವಿದೆ.
ಈಗ ನಿಮ್ಮೆಲ್ಲರ ಬುದ್ಧಿಯಲ್ಲಿ ಪುರುಷಾರ್ಥದ ಅನುಸಾರವಾಗಿ ಡ್ರಾಮಾದ ಆದಿ-ಮಧ್ಯ-ಅಂತ್ಯದ ರಹಸ್ಯವಿದೆ.
ತಂದೆ ಹೇಳುತ್ತಾರೆ
- ಚೆನ್ನಾಗಿ ಪುರುಷಾರ್ಥ ಮಾಡಿ ಮಕ್ಕಳು ಹೊಸ-ಹೊಸ ಸ್ಥಾನದಲ್ಲಿ ಚಕ್ಕರ್ ಹಾಕಲು ಹೋಗಿದ್ದಾರೆ.
ಒಂದುವೇಳೆ ಒಳ್ಳೆಯ ಮಾತೆಯರು ಇದ್ದರೆ ಸರ್ವೀಸಿನಲ್ಲಿ ತೊಡಗಿಸಬೇಕು.
ಒಂದುವೇಳೆ ಸೇವಾಕೇಂದ್ರಕ್ಕೆ ಯಾರಾದರು ಬರಲಿಲ್ಲವೆಂದರೆ ಅವರಿಗೇ ಮಾಡಿಕೊಳ್ಳುತ್ತಾರೆ. ಕೆಲವರು ಓದಲು ಬರದಿದ್ದಾಗ ಅವರಿಗೆ ಪತ್ರ ಬರೆಯಬೇಕು
- ನೀವು ಓದದಿದ್ದರೆ ಇದರಿಂದ ನಿಮಗೆ ಬಹಳ ನಷ್ಟವಾಗುತ್ತದೆ. ಪ್ರತಿನಿತ್ಯ ಬಹಳ ಗುಪ್ತ ವಿಚಾರಗಳು ಬರುತ್ತಿದೆ. ಇದು ವಜ್ರ ರತ್ನಗಳಾಗಿದೆ,
ತಾವು ಓದದಿದ್ದರೆ ಫೇಲ್ ಆಗುತ್ತೀರಿ.
ಇಷ್ಟು ಶ್ರೇಷ್ಠವಾದ ಸ್ವರ್ಗದ ರಾಜ್ಯಭಾಗ್ಯವನ್ನು ಕಳೆದುಕೊಳ್ಳುತ್ತೀರಿ. ಮುರಳಿಯನ್ನು ಪ್ರತಿನಿತ್ಯ ಕೇಳಬೇಕು.
ಇಂತಹ ತಂದೆಯನ್ನು ಮರೆತುಬಿಟ್ಟರೆ - ಫೇಲ್ ಆಗಿಬಿಡುತ್ತೀರಿ ಎಂದು ನೆನಪು ಇಟ್ಟುಕೊಳ್ಳಿ.
ನಂತರ ಬಹಳ ದುಃಖ ಪಡುತ್ತೀರಿ.
ರಕ್ತದ ಕಣ್ಣೀರನ್ನು ಸುರಿಸುತ್ತೀರಿ. ಓದುವುದನ್ನು ಎಂದೂ ಸಹ ಬಿಡಬಾರದು. ತಂದೆ ರಿಜಿಸ್ಟರನ್ನು ನೋಡುತ್ತಾರೆ.
ಎಷ್ಟು ನಿಯಮಿತವಾಗಿ ಬರುತ್ತಿದ್ದೀರಿ ಎಂದು.
ಬರದಿದ್ದವರಿಗೆ ಎಚ್ಚರಿಕೆಯನ್ನು ಕೊಡಬೇಕು. ಓದುವುದಿಲ್ಲವೆಂದರೆ ಪದವಿ ಭ್ರಷ್ಟರಾಗುತ್ತೀರಿ ಎಂದು ಶ್ರೀಮತವು ಹೇಳುತ್ತದೆ. ಬಹಳ ನಷ್ಟವಾಗಿಬಿಡುತ್ತದೆ. ಈ ಶಾಲೆಯ ಹೆಸರನ್ನು ಪ್ರಸಿದ್ಧ ಮಾಡುವ ರೀತಿಯಲ್ಲಿ ನೀವು ಚೆನ್ನಾಗಿ ಓದಬೇಕು.
ಯಾರಾದರೂ ಬರದೆ ಇದ್ದರೆ ಬಿಟ್ಟುಬಿಡುವುದು ಎಂದಲ್ಲ. ನಮ್ಮ ವಿದ್ಯಾರ್ಥಿಗಳು ಹೆಚ್ಚು ತೇರ್ಗಡೆ ಆಗದಿದ್ದಾಗ ಮರ್ಯಾದೆ ಹೋಗುತ್ತದೆ ಎಂಬ ಚಿಂತೆ ಶಿಕ್ಷಕರಿಗೆ ಇರುತ್ತದೆ.
ಬಾಬಾ ಪತ್ರವನ್ನು ಬರೆಯುತ್ತಾರೆ - ನಿಮ್ಮ ಸೇವಾಕೇಂದ್ರದಲ್ಲಿ ಸರ್ವೀಸ್ ಕಡಿಮೆ ನಡೆಯುತ್ತದೆ ಎಂದರೆ ತಾವು ಮಲಗಿದ್ದೀರಿ ಎಂದರ್ಥ.
ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಈ ಹಳೆಯ ಶರೀರದ ಶೃಂಗಾರವನ್ನು ಮಾಡಬಾರದು. ವನವಾಸದಲ್ಲಿ ಇದ್ದು ಹೊಸ ಮನೆಗೆ ಹೋಗುವ ತಯಾರಿಗಳನ್ನು ಮಾಡಿಕೊಳ್ಳಬೇಕು.
2.
ಪ್ರತಿನಿತ್ಯ ಜ್ಞಾನಸ್ನಾನವನ್ನು ಮಾಡಬೇಕು. ಎಂದೂ ಸಹ ಓದನ್ನು ತಪ್ಪಿಸಿಕೊಳ್ಳಬಾರದು.
ವರದಾನ:
ಮಹಾನತೆಯ ಜೊತೆ ನಿರ್ಮಾಣತೆಯನ್ನು ಧಾರಣೆ ಮಾಡಿ ಸರ್ವರ ಮನ್ಯತೆ ಪ್ರಾಪ್ತಿ ಮಾಡಿಕೊಳ್ಳುವಂತಹ ಸುಖಧಾಯಿ ಭವ .
ಮಹಾನತೆಯ ಲಕ್ಷಣ ನಿರ್ಮಾಣತೆ ಆಗಿದೆ. ಎಷ್ಟು ಮಹಾನ್ ಅಷ್ಟೇ ನಿರ್ಮಾಣ ಏಕೆಂದರೆ ಸದಾ ಭರ್ಪೂರ್ ಆಗಿರುತ್ತಾರೆ. ಹೇಗೆ ವೃಕ್ಷ ಎಷ್ಟು ಭರ್ಪೂರ್ ಆಗಿರುತ್ತೆ ಅಷ್ಟೂ ಭಾಗಿರುತ್ತದೆ. ಹಾಗೆ ನಿಮಾಣತೆಯೆ ಸೇವೆ ಮಾಡುವುದು. ಮತ್ತು ಯಾರು ನಿರ್ಮಾಣರಾಗಿರುತ್ತಾರೆ ಅವರು ಸರ್ವರಿಂದ ಮಾನ್ಯತೆಯನ್ನು ಪಡೆಯುತ್ತಾರೆ. ಯಾರು ಅಭಿಮಾನದಲ್ಲಿರುತ್ತಾರೆ ಅವರಿಗೆ ಯಾರೂ ಮಾನ್ಯತೆಯನ್ನು ಕೊಡುವುದಿಲ್ಲ,
ಅವರಿಂದ ದೂರ ಓಡುತ್ತಾರೆ. ಯಾರು ನಿರ್ಮಾಣರಾಗಿರುತ್ತಾರೆ ಅವರು ಎಲ್ಲೇ ಹೋದರೂ, ಏನೇ ಮಾಡಿದರೂ ಅದು ಸುಖಧಾಯಿಯಾಗಿರುವುದು. ಅವರಿಂದ ಎಲ್ಲರೂ ಸುಖದ ಅನುಭೂತಿ ಮಾಡುವರು.
ಸ್ಲೋಗನ್:
ಉದಾಸಿತನಕ್ಕೆ ವಿಚ್ಚೇದನ ಕೊಡುವುದಕ್ಕೊಸ್ಕರ ಖುಷಿಯ ಖಜಾನೆಯನ್ನು ಸದಾ ಜೊತೆಯಲ್ಲಿಟ್ಟುಕೊಳ್ಳಿ.
ಮಾತೇಶ್ವರಿಯವರ ಮಧುರ
ಮಹಾವಾಕ್ಯಗಳು
ಗೀತೆ - ನಯನಹೀನರಿಗೆ ದಾರಿ ತೋರಿಸಿ ಪ್ರಭು......
ಈಗ ಮನುಷ್ಯರು ಏನು ಗೀತೆಯನ್ನು ಹಾಡುತ್ತಾರೆ - ನಯನಹೀನರಿಗೆ ದಾರಿ ತೋರಿಸಿ, ಎಂದಮೇಲೆ ದಾರಿಯನ್ನು ತೋರಿಸುವವರು ಒಬ್ಬರೇ ಪರಮಾತ್ಮ ಎಂದಾಯಿತು, ಆದ್ದರಿಂದಲೇ ಪರಮಾತ್ಮನನ್ನು ಕರೆಯುತ್ತಾರೆ ಹಾಗೂ ಯಾವ ಸಮಯ ಪ್ರಭುವಿಗೆ ದಾರಿ ತೋರಿಸು ಎಂದು ಹೇಳುತ್ತಾರೆ.
ಹಾಗಾದರೆ ಅವಶ್ಯವಾಗಿ ಮನುಷ್ಯರಿಗೆ ದಾರಿಯನ್ನು ತೋರಿಸಲು ಸ್ವಯಂ ಪರಮಾತ್ಮ ನಿರಾಕಾರ ರೂಪದಿಂದ ಸಾಕಾರ ರೂಪದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ. ಆಗಲೇ ಸ್ಥೂಲವಾಗಿ ದಾರಿಯನ್ನು ತೋರಿಸಲಾಗುವುದು, ಬರದೇ ದಾರಿಯನ್ನು ತೋರಿಸಲು ಸಾಧ್ಯವಿಲ್ಲ. ಈಗ ಮನುಷ್ಯರು ಗೊಂದಲದಲ್ಲಿದ್ದಾರೆ ಆ ಗೊಂದಲದಲ್ಲಿರುವವರಿಗೆ ದಾರಿ ಬೇಕಾಗಿದೆ.
ಆದ್ದರಿಂದ ಪರಮಾತ್ಮನನ್ನು ಕರೆಯುತ್ತಾರೆ ನಯನಹೀನರಿಗೆ ದಾರಿ ತೋರಿಸು ಪ್ರಭು ಎಂದು....
ಇವರಿಗೆ ಹೇಳಲಾಗುತ್ತದೆ ಅಂಬಿಗ ಎಂದು ಯಾರು ಈ ದಡದಿಂದ ಅಥವಾ ಈ 5 ತತ್ವಗಳ ಸೃಷ್ಠಿಯಿಂದ ಪಾರು ಮಾಡಿಸಿ ಆ ದಡಕ್ಕೆ ಅರ್ಥಾತ್
5 ತತ್ವಗಳಿಂದ ದೂರ
6ನೇ ತತ್ವ ಅಖಂಡ ಜ್ಯೋತಿ ಮಹತತ್ವದಲ್ಲಿ ಕರೆದುಕೊಂಡು ಹೋಗುತ್ತಾರೆ ಎಂದ ಮೇಲೆ ಪರಮಾತ್ಮನು ಯಾವಾಗ ಆ ತೀರದಿಂದ ಈ ತೀರಕ್ಕೆ ಬರಬೇಕಾಗುತ್ತದೆ ಆಗಲೇ ಕರೆದುಕೊಂಡು ಹೋಗಲು ಸಾಧ್ಯ.
ಪರಮಾತ್ಮನು ಸಹ ತನ್ನ ಧಾಮದಿಂದ ಇಲ್ಲಿಗೆ ಬರಬೇಕಾಗುತ್ತದೆ, ಆಗಲೇ ಪರಮಾತ್ಮನನ್ನು ಅಂಬಿಗ ಎಂದು ಹೇಳುತ್ತಾರೆ. ಅವರೇ ನಮ್ಮ ದೋಣಿಯನ್ನು(ಆತ್ಮರೂಪಿ ದೋಣಿಯನ್ನು)
ಮತ್ತೊಂದೆಡೆಗೆ ಕರೆದುಕೊಂಡು ಹೋಗುತ್ತಾರೆ. ಈಗ ಪರಮಾತ್ಮನೊಂದಿಗೆ ಯೋಗ ಯಾರು ಇಡುತ್ತಾರೋ ಅವರನ್ನೇ ಕರೆದುಕೊಂಡು ಹೋಗುತ್ತಾರೆ. ಬಾಕಿ ಯಾರು ಉಳಿದುಕೊಂಡು ಬಿಡುತ್ತಾರೆ ಅವರು ಧರ್ಮರಾಜನ ಶಿಕ್ಷೆಗಳನ್ನು ತಿಂದು ನಂತರ ಮುಕ್ತರಾಗುತ್ತಾರೆ.
2.
ಮುಳ್ಳುಗಳ ಪ್ರಪಂಚದಿಂದ ಬನ್ನಿ ಹೂಗಳ ತೋಟಕ್ಕೆ, ಈಗ ಈ ಕರೆ ಕೇವಲ ಪರಮಾತ್ಮನಿಗಾಗಿ ಹೇಳುತ್ತಾರೆ. ಯಾವಾಗ ಮನುಷ್ಯ ಅತೀ ದುಃಖಿಯಾಗುತ್ತಾನೆ ಆಗ ಪರಮಾತ್ಮನನ್ನು ನೆನಪು ಮಾಡುತ್ತಾರೆ, ಪರಮಾತ್ಮ ಈ ಮುಳ್ಳುಗಳ ಪ್ರಪಂಚದಿಂದ ಹೂಗಳ ತೋಟಕ್ಕೆ ಕರೆದುಕೊಂಡು ಹೋಗು ಎಂದು,
ಇದರಿಂದ ಸಿದ್ಧವಾಗುತ್ತದೆ - ಅವಶ್ಯವಾಗಿ ಹೂಗಳ ಪ್ರಪಂಚವು ಯಾವುದೋ ಇತ್ತು. ಈಗ ಇದಂತೂ ಎಲ್ಲಾ ಮನುಷ್ಯರು ತಿಳಿದುಕೊಂಡಿದ್ದಾರೆ - ಈಗಿನ ಯಾವ ಸಂಸಾರವಿದೆ ಅದು ಮುಳ್ಳುಗಳಿಂದ ತುಂಬಿಕೊಂಡಿದೆ.
ಯಾವ ಕಾರಣ ಮನುಷ್ಯರು ದುಃಖ ಮತ್ತು ಅಶಾಂತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಹೂಗಳ ಪ್ರಪಂಚವನ್ನು ನೆನಪು ಮಾಡಿಕೊಳ್ಳುತ್ತಾರೆ. ಎಂದ ಮೇಲೆ ಅವಶ್ಯವಾಗಿ ಒಂದು ಪ್ರಪಂಚ ಹೀಗೂ ಇತ್ತು ಯಾವುದರ ಸಂಸ್ಕಾರ ಆತ್ಮನಲ್ಲಿ ತುಂಬಿಕೊಂಡಿದೆ. ಈಗ ನಾವು ಇದನ್ನಂತೂ ತಿಳಿದುಕೊಂಡಿದ್ದೇವೆ - ದುಃಖ ಅಶಾಂತಿ ಇದೆಲ್ಲವೂ ಕರ್ಮಬಂಧನದ ಲೆಕ್ಕಾಚಾರಗಳಾಗಿವೆ. ರಾಜನಿಂದ ಹಿಡಿದು ಬಡವರವರೆಗೂ ಪ್ರತಿಯೊಬ್ಬ ಮನುಷ್ಯ ಮಾತ್ರ ಈ ಲೆಕ್ಕಾಚಾರಗಳಲ್ಲಿ ಸಂಪೂರ್ಣವಾಗಿ ಬಂಧಿಸಲ್ಪಟ್ಟಿದ್ದಾರೆ ಆದ್ದರಿಂದ ಪರಮಾತ್ಮನಂತೂ ಸ್ವಯಂ ಹೇಳುತ್ತಾರೆ ಈಗಿನ ಸಂಸಾರ ಕಲಿಯುಗವಾಗಿದೆ, ಎಂದ ಮೇಲೆ ಅದೆಲ್ಲವೂ ಕರ್ಮ ಬಂಧನಗಳಿಂದ ಮಾಡಲ್ಪಟ್ಟಿದೆ ಹಾಗೂ ಮೊದಲಿನ ಸಂಸಾರ ಸತ್ಯಯುಗದ್ದಾಗಿತ್ತು. ಯಾವುದನ್ನು ಹೂಗಳ ಪ್ರಪಂಚವೆಂದು ಹೇಳುತ್ತಾರೆ ಅದಾಗಿದೆ ಕರ್ಮಬಂಧನ ರಹಿತ ಜೀವನ್ಮುಕ್ತ ದೇವಿ ದೇವತೆಯರ ರಾಜ್ಯ,
ಯಾವುದು ಈಗಿಲ್ಲ.
ಈಗ ಜೀವನ್ಮುಕ್ತಿ ಇದರ ಅರ್ಥ ಹೀಗಲ್ಲ - ನಾವು ದೇಹದಿಂದ ಮುಕ್ತರಾಗಿದ್ದೆವು. ಅವರಿಗೆ ಯಾವುದೇ ದೇಹದ ಭಾನವಿರಲಿಲ್ಲ,
ಆದರೆ ಅವರು ದೇಹದಲ್ಲಿದ್ದರೂ ಸಹ ದುಃಖವನ್ನು ಪ್ರಾಪ್ತ ಮಾಡುತ್ತಿರಲಿಲ್ಲ. ಅಲ್ಲಿ ಯಾವುದೇ ಕರ್ಮಬಂಧನದ ಮಾತು ಇರಲಿಲ್ಲ.
ಅವರು ಜೀವನ ತೆಗೆದುಕೊಳ್ಳುತ್ತಾ, ಜೀವನ ಬಿಡುತ್ತಾ ಆದಿ ಮಧ್ಯ ಅಂತ್ಯ ಸುಖವನ್ನೇ ಪ್ರಾಪ್ತ ಮಾಡಿಕೊಳ್ಳುತ್ತಿದ್ದರು ಎಂದ ಮೇಲೆ ಜೀವನ್ಮುಕ್ತಿಯ ಅರ್ಥವಾಗಿದೆ ಜೀವನವಿದ್ದರೂ ಕರ್ಮಾತೀತ, ಈಗ ಇಡೀ ಪ್ರಪಂಚ
5 ವಿಕಾರಗಳಿಂದ ಪೂರ್ತಿಯಾಗಿ ಬಂಧಿಸಲ್ಪಟ್ಟಿದೆ. 5 ವಿಕಾರಗಳ ಪೂರ್ಣ ಪೂರ್ಣ ವಾಸ್ತವ್ಯವಿದೆ, ಆದರೆ ಮನುಷ್ಯರಲ್ಲಿ ಇಷ್ಟು ಶಕ್ತಿಯಿಲ್ಲ ಈ
5 ವಿಕಾರಗಳ ಭೂತವನ್ನು ಗೆಲ್ಲಲು, ಆದ್ದರಿಂದಲೇ ಪರಮಾತ್ಮ ಸ್ವಯಂ ಬಂದು ನಮ್ಮನ್ನು
5 ಭೂತಗಳಿಂದ ಬಿಡಿಸುತ್ತಾರೆ ಹಾಗೂ ಭವಿಷ್ಯ ಪ್ರಾಲಬ್ಧ ದೇವಿ ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸುತ್ತಾರೆ.
ಒಳ್ಳೆಯದು. ಓಂ ಶಾಂತಿ...
0 Comments