30/12/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಧರ್ಮ
ಮತ್ತು ರಾಜ್ಯವನ್ನು
ಸ್ಥಾಪನೆ ಮಾಡಲು
ದೂರದೇಶದಿಂದ ತಂದೆ
ಬಂದಿದ್ದಾರೆ, ಯಾವಾಗ
ದೇವತಾ ಧರ್ಮವಿರುತ್ತದೋ
ಆಗ ದೇವತೆಗಳದೇ
ರಾಜ್ಯಭಾರವಿರುತ್ತದೆ, ಬೇರೆ
ಧರ್ಮದ ರಾಜ್ಯ
ಇರುವುದಿಲ್ಲ”
ಪ್ರಶ್ನೆ:
ಸತ್ಯಯುಗದಲ್ಲಿ ಎಲ್ಲಾ ಪುಣ್ಯ ಆತ್ಮಗಳೇ ಇರುತ್ತಾರೆ, ಯಾರೂ ಪಾಪಾತ್ಮಗಳು ಇರುವುದಿಲ್ಲ, ಅವರ ಚಿನ್ಹೆ ಏನಾಗಿದೆ?
ಉತ್ತರ:
ಅಲ್ಲಿ ಯಾವುದೇ ಕರ್ಮ ಭೋಗ (ಕಾಯಿಲೆ) ಮುಂತಾದವು ಇರುವುದಿಲ್ಲ. ಇಲ್ಲಿ ಕಾಯಿಲೆಗಳು ಮುಂತಾದವು ಸಿದ್ಧವಾಗುತ್ತದೆ.
ಆತ್ಮಗಳು ಪಾಪಗಳ ಶಿಕ್ಷೆಯನ್ನು ಕರ್ಮಭೋಗದ ರೂಪದಲ್ಲಿ ಭೋಗಿಸುತ್ತಾರೆ, ಅದಕ್ಕೆ ಕಳೆದು ಹೋದ ಲೆಕ್ಕಾಚಾರವೆಂದು ಹೇಳಲಾಗುತ್ತದೆ.
ಪ್ರಶ್ನೆ:
ತಂದೆಯ ಯಾವ ಸನ್ನೆಯನ್ನು ದೂರಾಂದೇಶಿ ಮಕ್ಕಳು ತಿಳಿದುಕೊಳ್ಳುತ್ತಾರೆ?
ಉತ್ತರ:
ಮಕ್ಕಳೇ ನಿಮ್ಮ ಬುದ್ಧಿಯೋಗವನ್ನು ಓಡಿಸಿರಿ ಎಂದು ತಂದೆಯು ಸನ್ನೆಯನ್ನು ಮಾಡುತ್ತಾರೆ. ಇಲ್ಲಿ ಕುಳಿತು ತಂದೆಯನ್ನು ನೆನಪು ಮಾಡಬೇಕು. ಪ್ರೀತಿಯಿಂದ ನೆನಪು ಮಾಡಿದಾಗ ನೀವು ತಂದೆಯ ಕೊರಳಿನ ಹಾರವಾಗುತ್ತೀರಿ.
ನಿಮ್ಮ ಪ್ರೇಮದ ಕಣ್ಣೀರು ಮಾಲೆಯ ಮಣಿ ಆಗುತ್ತದೆ.
ಗೀತೆ: ಇಂದು ಕೊನೆಗೂ ಆ ದಿನ ಬಂತು .......
ಓಂ ಶಾಂತಿ.
ಮಕ್ಕಳು ಗೀತೆಯನ್ನು ಕೇಳಿದಿರಾ? ಗೀತೆಯ ಅರ್ಥವನ್ನು ತಿಳಿದುಕೊಂಡಿದ್ದೀರಾ? ಭಾರತ ಬಹಳ ದೊಡ್ಡದಾಗಿದೆ. ಇಡೀ ಭಾರತಕ್ಕೆ ವಿದ್ಯೆಯನ್ನು ಓದಿಸಲಾಗುವುದಿಲ್ಲ. ಇದು ವಿದ್ಯೆಯಾಗಿದೆ. ಕಾಲೇಜನ್ನು ತೆರೆಯುತ್ತಿರಬೇಕು. ಇದು ಬೇಹದ್ದಿನ ತಂದೆಯ ವಿಶ್ವ ವಿದ್ಯಾಲಯವಾಗಿದೆ. ಪಾಂಡವ ಸರ್ಕಾರವೆಂದು ಇದಕ್ಕೆ ಹೇಳಲಾಗುತ್ತದೆ.
ಸಾರ್ವಭೌಮತ್ವಕ್ಕೆ ಸರ್ಕಾರವೆಂದು ಹೇಳಲಾಗುತ್ತದೆ. ಈಗ ಸಾರ್ವಭೌಮತ್ವ ಸ್ಥಾಪನೆ ಆಗುತ್ತಿದೆ ಎಂದು ನೀವು ಮಕ್ಕಳಿಗೆ ತಿಳಿದಿದೆ. ಧರ್ಮ
(+) ಸಾರ್ವಭೌಮತ್ವ. ಆಧ್ಯಾತ್ಮಿಕ ರಾಜಕೀಯ...... ದೇವೀ-ದೇವತಾ ಧರ್ಮದ ಸ್ಥಾಪನೆ ಆಗುತ್ತಿದೆ.
ಮತ್ತು ಯಾವುದೇ ಧರ್ಮದವರು ರಾಜ್ಯಭಾರವನ್ನು ಸ್ಥಾಪನೆ ಮಾಡುವುದಿಲ್ಲ.
ಅವರು ಕೇವಲ ಧರ್ಮ ಸ್ಥಾಪಕರಾಗಿದ್ದಾರೆ. ನಾನು ಆದಿ ಸನಾತನ ಧರ್ಮವನ್ನು ಮತ್ತು ರಾಜ್ಯಭಾರವನ್ನು ಸ್ಥಾಪನೆ ಮಾಡುತ್ತಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಆದ್ದರಿಂದ ಆಧ್ಯಾತ್ಮಿಕ ರಾಜಕೀಯವೆಂದು ಕರೆಯಲಾಗುತ್ತದೆ. ನೀವು ಮಕ್ಕಳು ಬಹಳ ದೂರಾಂದೇಶಿ ಮಕ್ಕಳಾಗಬೇಕು.
ಹೊಸ ಧರ್ಮವನ್ನು ಸ್ಥಾಪನೆ ಮಾಡಲು ಬಂದಾಗ ಆ ಧರ್ಮದ ಆತ್ಮಗಳು ದೂರದಿಂದ ಬರುತ್ತಾರೆ.
ಅವರು ಕೇವಲ ಧರ್ಮ ಸ್ಥಾಪಕರಾಗಿದ್ದಾರೆ. ಆದರೆ ಇವರಿಗೆ ಧರ್ಮ ಮತ್ತು ರಾಜ್ಯ ಸ್ಥಾಪಕ ಎಂದು ಹೇಳಲಾಗುತ್ತದೆ.
ಭಾರತದಲ್ಲಿ ಅಧಿಪತ್ಯವಿತ್ತು. ಮಹಾರಾಜಾ-ಮಹಾರಾಣಿ ಇದ್ದರು. ಅಲ್ಲಿ ಮಹಾರಾಜಾ ಶ್ರೀ ನಾರಾಯಣ, ಮಹಾರಾಣಿ ಶ್ರೀ ಲಕ್ಷ್ಮಿ ಇದ್ದರು. ಅಂದಾಗ ಈಗ ನೀವು ಮಕ್ಕಳು ಶ್ರೀಮತದಂತೆ ನಡೆಯುತ್ತಿದ್ದೇವೆ ಎಂದು ಹೇಳುತ್ತೀರಿ. ನಾವು ಭಾರತವಾಸಿಗಳೇ ಈ ಹಳೆಯ ಪ್ರಪಂಚವನ್ನು ಬದಲಾವಣೆ ಮಾಡಿ ಹೊಸ ಸುಖ ಪ್ರಪಂಚವನ್ನು ಸ್ಥಾಪನೆ ಮಾಡಿ ಎಂದು ತಂದೆಯನ್ನು ಕರೆಯುತ್ತಿದ್ದೇವೆ. ಹಳೆಯ ಮನೆ ಮತ್ತು ಹೊಸ ಮನೆಗೆ ಬಹಳ ಅಂತರವಿದೆ. ನೀವು ಮಕ್ಕಳ ಬುದ್ಧಿಯಲ್ಲಿ ಹೊಸ ಮನೆಯೇ ನೆನಪಿಗೆ ಬರುತ್ತದೆ.
ಇಂದು ಮನೆಗಳೂ ಸಹ ಬಹಳ ಸುಂದರವಾಗಿರುತ್ತದೆ. ಈ ರೀತಿ ಮನೆಗಳನ್ನು ಕಟ್ಟಬೇಕೆಂದು ಯೋಚಿಸುತ್ತಿರುತ್ತಾರೆ. ನಾವು ನಮ್ಮ ಧರ್ಮ ಮತ್ತು ರಾಜ್ಯಭಾರವನ್ನು ಸ್ಥಾಪನೆ ಮಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ.
ಸ್ವರ್ಗದಲ್ಲಿ ನಾವು ವಜ್ರ ವೈಡೂರ್ಯದ ಮಹಲನ್ನು ಮಾಡುತ್ತೇವೆ.
ಅನ್ಯ ಧರ್ಮದವರು ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಕ್ರೈಸ್ತನೂ ಸಹ ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪನೆ ಮಾಡಲು ಬರುತ್ತಾರೆ.
ಯಾವಾಗ ವೃದ್ಧಿ ಆಗುತ್ತದೆ ಆಗ ಅದಕ್ಕೆ ಕ್ರಿಶ್ಚಿಯನ್ ಧರ್ಮ ಎಂದು ಹೇಳುತ್ತಾರೆ. ಆದರೆ ಈ ಸಮಯದಲ್ಲಿ ತಿಳಿದುಕೊಂಡಿಲ್ಲ. ಇಸ್ಲಾಮಿ ಮುಂತಾದ ಧರ್ಮದ ಯಾವುದೇ ಗುರುತು ಹಾಗೂ ಹೆಸರೂ ಇಲ್ಲ. ನಿಮ್ಮ ಗುರುತು ಪ್ರಾರಂಭದಿಂದ ಹಿಡಿದು ಇಲ್ಲಿಯವರೆಗೂ ನಡೆಯುತ್ತಿರುತ್ತದೆ. ಲಕ್ಷ್ಮೀ-ನಾರಾಯಣರ ಚಿತ್ರವಿದೆ.
ಇವರ ರಾಜ್ಯ ಸತ್ಯಯುಗದಲ್ಲಿ ಇತ್ತು ಎಂದು ನಿಮಗೆ ಗೊತ್ತಿದೆ. ಹಿಂದೆ ಯಾರ ರಾಜಧಾನಿ ಇತ್ತು, ಭವಿಷ್ಯದಲ್ಲಿ ಯಾರ ರಾಜಧಾನಿ ಇತ್ತು ಎನ್ನುವ ಜ್ಞಾನ ಅಲ್ಲಿ ನಿಮಗೆ ಇರುವುದಿಲ್ಲ.
ಕೇವಲ ವರ್ತಮಾನ ಸಮಯವನ್ನು ತಿಳಿದುಕೊಂಡಿರುತ್ತೀರಿ. ಈಗ ನೀವು ಭೂತಕಾಲ, ಭವಿಷ್ಯ ಕಾಲ ವರ್ತಮಾನ ಕಾಲಗಳನ್ನು ತಿಳಿದುಕೊಂಡಿದ್ದೀರಿ. ಮೊಟ್ಟ-ಮೊದಲು ನಮ್ಮ ಧರ್ಮವಿತ್ತು ನಂತರ ಈ ಧರ್ಮ ಬಂದಿತ್ತು.
ಸಂಗಮಯುಗದಲ್ಲಿಯೇ ತಂದೆ ಕುಳಿತು ತಿಳಿಸುತ್ತಿದ್ದಾರೆ. ಈಗ ನೀವು ತ್ರಿಕಾಲದರ್ಶಿಗಳು ಆಗಿದ್ದೀರಿ.
ಸತ್ಯಯುಗದಲ್ಲಿ ತ್ರಿಕಾಲದರ್ಶಿಗಳು ಆಗುವುದಿಲ್ಲ. ಅಲ್ಲಿ ಕೇವಲ ರಾಜ್ಯಭಾರವನ್ನು ಮಾಡುತ್ತೀರಿ. ಅಲ್ಲಿ ಬೇರೆ ಧರ್ಮದ ಹೆಸರು ಚಿನ್ಹೆ ಇರುವುದಿಲ್ಲ. ತಮ್ಮ ಮೋಜಿನಲ್ಲಿ ರಾಜ್ಯಭಾರವನ್ನು ಮಾಡುತ್ತಿರುತ್ತೀರಿ.
ನೀವೀಗ ಇಡೀ ಚಕ್ರವನ್ನೂ ಸಹ ತಿಳಿದುಕೊಂಡಿದ್ದೀರಿ. ಅವಶ್ಯಕವಾಗಿ ದೇವೀ-ದೇವತಾ ಧರ್ಮವಿತ್ತು ಎಂದು ಮನುಷ್ಯರಿಗೆ ತಿಳಿದಿಲ್ಲ.
ಆದರೆ ಅದು ಹೇಗೆ ಸ್ಥಾಪನೆ ಆಯಿತು, ಎಷ್ಟು ಸಮಯ ನಡೆಯಿತು ಎಂಬುದೂ ಸಹ ತಿಳಿದಿಲ್ಲ. ಆದರೆ ಸತ್ಯಯುಗದಲ್ಲಿ ಎಷ್ಟು ಜನ್ಮ ನಾವು ರಾಜ್ಯ ಭಾರ ಮಾಡಿದೆವು. ತ್ರೇತಾಯುಗದಲ್ಲಿ ಎಷ್ಟು ಜನ್ಮ ಪಡೆದುಕೊಂಡೆವು ಎನ್ನುವುದು ನಿಮಗೆ ತಿಳಿದಿದೆ.
ಆದರೆ ಅವರೂ ಸಹ ತಿಳಿದುಕೊಳ್ಳಬೇಕಾಗುತ್ತದೆ. ಬೇಹದ್ದಿನ ತಂದೆ ನಾವು ಮಕ್ಕಳಿಗೆ ಅವಶ್ಯಕವಾಗಿ ವಿದ್ಯೆಯನ್ನು ಓದಿಸುತ್ತಿದ್ದಾರೆ ಎಂದು ನಿಮಗೆ ತಿಳಿದಿದೆ. ಕೃಷ್ಣನ ಆತ್ಮ ಈಗ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಇದೆ, ಇದರಲ್ಲಿಯೇ ತಂದೆ ಬಂದು ಪ್ರವೇಶ ಮಾಡುತ್ತಾರೆ ಎಂದು ನಿಮಗೆ ತಿಳಿದಿದೆ. ಅವರ ಹೆಸರು ಬ್ರಹ್ಮಾ ಎಂದು ಇಡಲಾಗಿದೆ.
ಬ್ರಹ್ಮನಿಂದ ವಿಷ್ಣು,
ವಿಷ್ಣುವಿನಿಂದ ಬ್ರಹ್ಮ ಈ ತ್ರಿಮೂರ್ತಿಯ ಜ್ಞಾನ ಬಹಳ ಸರಳವಾಗಿದೆ. ಇವರು ನಿರಾಕಾರ ತಂದೆ ಶಿವ, ಇವರಿಂದಲೇ ಆಸ್ತಿಯೂ ಸಹ ಸಿಗುತ್ತದೆ. ನಿರಾಕಾರನಿಂದ ಆಸ್ತಿಯೂ ಹೇಗೆ ಸಿಗುತ್ತದೆ? ಇದು ಪ್ರಜಾಪಿತ ಬ್ರಹ್ಮನ ಮುಖಾಂತರ ಬ್ರಾಹ್ಮಣರಿಂದ ದೇವತೆಗಳು ಆಗುತ್ತಿದ್ದೇವೆ. ನಂತರ ಆ ದೇವತೆಗಳೇ 84 ಜನ್ಮಗಳ ನಂತರ ಬ್ರಾಹ್ಮಣರಾಗುತ್ತಾರೆ. ಈ ಚಕ್ರ ಬುದ್ಧಿಯಲ್ಲಿ ಇರಬೇಕಾಗಿದೆ.
ನಾವೇ ಬ್ರಾಹ್ಮಣ,
ಬ್ರಹ್ಮನ ಮಕ್ಕಳೇ ನಂತರ ರುದ್ರನ ಮಕ್ಕಳಾಗುತ್ತೇವೆ. ನಾವು ಆತ್ಮಗಳು ನಿರಾಕಾರೀ ತಂದೆಯ ಮಕ್ಕಳಾಗಿದ್ದೇವೆ. ತಂದೆಯನ್ನೂ ಸಹ ನೆನಪು ಮಾಡುತ್ತೇವೆ.
ಈ ಚಿತ್ರಗಳ ಬಗ್ಗೆ ಬಹಳ ಸಹಜವಾಗಿ ತಿಳಿಸಿಕೊಡಬಹುದು. ಈಗ ತಪಸ್ಸನ್ನು ಮಾಡುತ್ತಿದ್ದೀರಿ ನಂತರ ಸತ್ಯಯುಗದಲ್ಲಿ ಬರುತ್ತೀರಿ.
ನಾವು ಮನುಷ್ಯರಿಂದ ದೇವತೆಗಳಾಗುತ್ತೇವೆ ಎನ್ನುವುದು ನಿಮ್ಮ ಬುದ್ಧಿಯಲ್ಲಿ ಇರಬೇಕು. ನಂತರ ದೇವತಾ ಧರ್ಮದ ರಾಜ್ಯಭಾರವೂ ಸ್ಥಾಪನೆ ಆಗುತ್ತದೆ. ಯೋಗದಿಂದಲೇ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ಒಂದುವೇಳೆ ಈಗಲೂ ಪಾಪ ಮಾಡುತ್ತಿದ್ದರೆ ಏನಾಗುತ್ತೀರಿ?
ಯಾವಾಗ ಯಾತ್ರೆಯಲ್ಲಿ ಹೋಗುತ್ತಾರೆ, ಆಗ ಪಾಪವನ್ನು ಮಾಡುವುದಿಲ್ಲ.
ಅವಶ್ಯವಾಗಿ ಪವಿತ್ರವಾಗಿರುತ್ತಾರೆ. ದೇವತೆಗಳ ಬಳಿ ಹೋಗುತ್ತೇವೆ ಎಂದು ತಿಳಿದುಕೊಂಡಿರುತ್ತಾರೆ. ಮಂದಿರದಲ್ಲೂ ಸಹ ಸ್ನಾನ ಮಾಡಿಕೊಂಡೇ ಹೋಗುತ್ತಾರೆ.
ಸ್ನಾನ ಏಕೆ ಮಾಡುತ್ತಾರೆ? ಒಂದು ವಿಕಾರದಲ್ಲಿ ಹೋಗುತ್ತಾರೆ ಮತ್ತೊಂದು ಪಾಯಿಖಾನೆಗೆ ಹೋಗುತ್ತಾರೆ. ನಂತರ ಸ್ವಚ್ಚವಾಗಿ ದೇವತೆಗಳ ದರ್ಶನ ಮಾಡಲು ಹೋಗುತ್ತಾರೆ. ಯಾತ್ರೆಯಲ್ಲೂ ಸಹ ಎಂದೂ ಪತಿತರಾಗುವುದಿಲ್ಲ. ನಾಲ್ಕೂ ಧಾಮಗಳನ್ನು ಸುತ್ತಾಡಲು ಪಾವನರಾಗುತ್ತಾರೆ. ಅಂದಾಗ ಪವಿತ್ರತೆಯೇ ಮುಖ್ಯವಾಗಿದೆ.
ದೇವತೆಗಳು ಒಂದುವೇಳೆ ಪತಿತವಾಗಿದ್ದರೆ ಅಂತರವೇನಾಯಿತು?
ದೇವತೆಗಳು ಪಾವನರಾಗಿದ್ದಾರೆ, ನಾವು ಪತಿತವಾಗಿದ್ದೇವೆ. ತಂದೆಯು ನಮ್ಮನ್ನು ಬ್ರಹ್ಮನ ಮುಖಾಂತರ ಮಡಿಲಿಗೆ ತೆಗೆದುಕೊಂಡಿದ್ದಾರೆ ಎಂದು ನಿಮಗೆ ತಿಳಿದಿದೆ. ಅಂದಾಗ ನೀವೆಲ್ಲಾ ಆತ್ಮಗಳು ನನ್ನ ಮಕ್ಕಳಾಗಿದ್ದೀರಿ, ಆದರೆ ನಿಮಗೆ ಓದಿಸುವುದು ಹೇಗೆ?
ರಾಜಯೋಗ ಹೇಗೆ ಕಲಿಸುವುದು? ನೀವು ಮಧುರಾತಿ ಮಧುರ ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಹೇಗೆ ಮಾಡುವುದು? ತಂದೆಯು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ ಅಂದಾಗ ಭಗವಂತ ಅವಶ್ಯಕವಾಗಿ ಮಕ್ಕಳನ್ನು ಯೋಗ್ಯರನ್ನಾಗಿ ಮಾಡಿ ಆಸ್ತಿಯನ್ನು ಕೊಡುತ್ತಾರೆ. ಎಲ್ಲಿಗೆ ಯೋಗ್ಯರನ್ನಾಗಿ ಮಾಡುತ್ತಾರೆ?
ನಾನು ಸಂಗಮಯುಗದಲ್ಲಿ ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ.
ಮಧ್ಯದ ಈ ಬ್ರಾಹ್ಮಣ ಧರ್ಮ ಬೇರೆಯಾಗಿದೆ. ಶೂದ್ರ ಧರ್ಮ ಕಲಿಯುಗದಲ್ಲಿದೆ. ಸತ್ಯಯುಗದಲ್ಲಿ ದೇವತಾ ಧರ್ಮವಿದೆ. ಇದಾಗಿದೆ ಬ್ರಾಹ್ಮಣ ಧರ್ಮ.
ನೀವು ಬ್ರಾಹ್ಮಣ ಧರ್ಮದವರಾಗಿದ್ದೀರಿ. ಈ ಸಂಗಮಯುಗ ಬಹಳ ಚಿಕ್ಕದಾಗಿದೆ. ನೀವೀಗ ಇಡೀ ಚಕ್ರವನ್ನು ತಿಳಿದುಕೊಂಡಿದ್ದೀರಿ. ದೂರಾಂದೇಶಿಯವರಾಗಿದ್ದೀರಿ.
ಇದು ಬಾಬನ ರಥವಾಗಿದೆ. ಇದಕ್ಕೆ ನಂದಿಗಣವೆಂದು ಹೇಳಲಾಗುತ್ತದೆ ಎಂದು ನಿಮಗೆ ತಿಳಿದಿದೆ. ಇಡೀ ದಿನ ಇದರಲ್ಲಿ ಸವಾರಿ ಮಾಡುವುದಿಲ್ಲ ಆತ್ಮ ಶರೀರದಲ್ಲಿ ಇಡೀ ದಿನ ಸವಾರಿ ಮಾಡುತ್ತದೆ.
ಬೇರೆ ಆಗಿದ್ದಾಗ ಶರೀರ ಇರುವುದಿಲ್ಲ.
ತಂದೆಯಂತೂ ಅದರಲ್ಲಿ ಬಂದು ಹೋಗಬಹುದು ಏಕೆಂದರೆ ಅವರದ್ದು ತಮ್ಮದೇ ಆದ ಆತ್ಮವಾಗಿದೆ. ಅಂದಾಗ ಇವರಲ್ಲಿ ನಾನು ಸದಾ ಕಾಲ ಇರುವುದಿಲ್ಲ, ಸೆಕೆಂಡಿನಲ್ಲಿ ಬಂದು ಹೋಗುತ್ತೇನೆ.
ನನ್ನಷ್ಟು ವೇಗವಾದ ರಾಕೆಟ್ ಯಾವುದೂ ಸಹ ಇಲ್ಲ.
ಇಂದಿನ ದಿನ ರಾಕೆಟ್, ವಿಮಾನ ಮುಂತಾದವುಗಳು ಎಷ್ಟೊಂದು ವಸ್ತುಗಳನ್ನು ಮಾಡಿದ್ದಾರೆ.
ಆದರೆ ಆತ್ಮ ಎಲ್ಲದಕ್ಕಿಂತ ವೇಗವಾಗಿದೆ.
ಇವರು ಬಂದಿದ್ದಾರೆ ಈಗ ತಂದೆಯನ್ನು ನೆನೆಪು ಮಾಡಿರಿ.
ಆತ್ಮವು ಲೆಕ್ಕಾಚಾರದ ಅನುಸಾರ ಲಂಡನ್ನಲ್ಲಿ ಜನ್ಮ ತೆಗೆದುಕೊಳ್ಳಬೇಕಾದರೆ ಸೆಕೆಂಡಿನಲ್ಲಿ ಅಲ್ಲಿ ಹೋಗಿ ಗರ್ಭದಲ್ಲಿ ಪ್ರವೇಶ ಮಾಡುತ್ತದೆ.
ಅಂದಾಗ ಎಲ್ಲದಕ್ಕಿಂತ ವೇಗವಾಗಿ ಓಡುವುದು ಆತ್ಮ ಈಗ ಆತ್ಮ ತನ್ನ ಮನೆಗೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಆ ಶಕ್ತಿಯು ಇಲ್ಲ. ಬಲಹೀನವಾಗಿದೆ.
ಹಾರಲು ಸಾಧ್ಯವಿಲ್ಲ.
ಆತ್ಮದಲ್ಲಿ ಪಾಪದ ಹೊರೆಯು ಬಹಳಷ್ಟಿದೆ,
ಶರೀರದಲ್ಲಿ ಒಂದುವೇಳೆ ಹೊರೆಯಿದ್ದಾಗ ಅಗ್ನಿಯಿಂದ ಪವಿತ್ರವಾಗುತ್ತದೆ, ಆದರೆ ಆತ್ಮದಲ್ಲಿ ತುಕ್ಕಿರುತ್ತದೆ. ಆದ್ದರಿಂದ ಆತ್ಮವೇ ಜೊತೆಯಲ್ಲಿ ಲೆಕ್ಕಾಚಾರವನ್ನು ತೆಗೆದುಕೊಂಡು ಹೋಗುತ್ತದೆ.
ಆದ್ದರಿಂದ ಹಿಂದಿನ ಕರ್ಮಭೋಗವೆಂದು ಹೇಳಲಾಗುತ್ತದೆ.
ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ.
ಯಾರಾದರೂ ಜನ್ಮದಿಂದ ಜಗಳವಾಡುತ್ತಿದ್ದರೆ ಹಿಂದಿನ ಜನ್ಮದ ಕರ್ಮವೆಂದು ಹೇಳುತ್ತಾರೆ. ಯಾರಾದರೂ ಜನ್ಮದಿಂದಲೇ ಕುಂಟರಾಗಿದ್ದರೆ ಹಿಂದೆ ಅಂತಹ ಕರ್ಮವನ್ನು ಮಾಡಿದ್ದರು ಎಂದು ಹೇಳಬಹುದು.
ಜನ್ಮಜನ್ಮಾಂತರದ ಕರ್ಮವಿದೆ ಅಂದಾಗ ಭೋಗಿಸಲೇ ಬೇಕಾಗುತ್ತದೆ. ಸತ್ಯಯುಗದಲ್ಲಿ ಪುಣ್ಯಾತ್ಮರೇ ಇರುತ್ತಾರೆ.
ಅಲ್ಲಿ ಇಂತಹ ಮಾತುಗಳು ಇರುವುದಿಲ್ಲ.
ಇಲ್ಲಿ ಪಾಪಾತ್ಮರೇ ಇದ್ದಾರೆ. ಸನ್ಯಾಸಿಗಳಿಗೂ ಅರ್ಧಾಂಗವಾಯು (ಲಕ್ವ)
ಆದರೆ ಕರ್ಮಭೋಗವೆಂದು ಹೇಳಲಾಗುತ್ತದೆ. ಅರೇ ಮಹಾತ್ಮ ಶ್ರೀ ಶ್ರೀ 108 ಜಗದ್ಗುರುವಿಗೆ ಈ ಕಾಯಿಲೆ ಯಾಕೆ? ಕರ್ಮಭೋಗವೆಂದೇ ಹೇಳಬಹುದು. ದೇವತೆಗಳಿಗೆ ಈ ರೀತಿ ಹೇಳಲಾಗುವುದಿಲ್ಲ. ಗುರುವು ಸತ್ತರೆ (ಫಾಲೋವರ್ಸ್)
ಗಳಿಗೆ ದು:ಖವಾಗುತ್ತದೆ. ತಂದೆಯ ಬಗ್ಗೆಯೂ ಜಾಸ್ತಿ ಪ್ರೀತಿಯಿದ್ದರೆ ಅಳುತ್ತಾರೆ.
ಸ್ತ್ರೀಯರಿಗೂ ತಮ್ಮ ಪತಿಯ ಬಗ್ಗೆ ಜಾಸ್ತಿ ಪ್ರೀತಿಯಿದ್ದರೆ ಅವರೂ ಸಹ ಅಳುತ್ತಾರೆ. ದು:ಖ ಕೊಡುವಂತಹ ಪತಿಯಿದ್ದರೆ ಅಳುವುದಿಲ್ಲ.
ಮೋಹವಿಲ್ಲವೆಂದರೆ ಭಾವಿ
(ಆಗಬೇಕಿದ್ದು ಆಯಿತು)
ಎಂದು ಹೇಳುತ್ತಾರೆ.
ನಿಮಗೂ ತಂದೆಯ ಜೊತೆ ಬಹಳ ಪ್ರೀತಿಯಿದೆ. ಅಂತ್ಯದಲ್ಲಿ ಬಾಬಾ ಹೊರಟು ಹೋದಾಗ ನೀವು ಹೇಳುತ್ತೀರಿ ಓಹೋ!
ಇಷ್ಟು ಸುಖ ಕೊಡುವಂತಹ ತಂದೆಯು ಹೊರಟುಹೋದರು ಎಂದು.
ಅಂತಿಮದಲ್ಲಿ ತಂದೆಯ ಪ್ರತಿ ಬಹಳ ಪ್ರೀತಿಯಿರುತ್ತದೆ. ತಂದೆಯು ನಮಗೆ ರಾಜ್ಯಭಾಗ್ಯವನ್ನು ಕೊಟ್ಟು ಹೊರಟುಹೋದರು ಎಂದು ನೀವು ಹೇಳುತ್ತೀರಿ. ಪ್ರೇಮದ ಕಣ್ಣೀರು ಬರುತ್ತದೆ.
ಆದರೆ ದುಃಖವಾಗುವುದಿಲ್ಲ. ಅದೇ ರೀತಿ ಇಲ್ಲೂ ಸಹ ಮಕ್ಕಳು ಬಹಳ ಸಮಯದ ನಂತರ ಬಂದು ತಂದೆಯ ಜೊತೆ ಮಿಲನ ಮಾಡಿದಾಗ ಪ್ರೀತಿಯ ಕಣ್ಣೀರು ಬರುತ್ತದೆ.
ಈ ಪ್ರೀತಿಯ ಕಣ್ಣೀರೇ ಮಾಲೆಯ ಮಣಿಯಾಗುತ್ತದೆ. ನಿಮ್ಮ ಪುರುಷಾರ್ಥವೇ ತಂದೆಯ ಕೊರಳಿನ ಮಾಲೆಯಾಗುವುದಾಗಿದೆ. ಆದ್ದರಿಂದ ತಂದೆಯನ್ನು ನೆನಪು ಮಾಡಬೇಕು.
ನೆನಪಿನ ಯಾತ್ರೆಯನ್ನು ಮಾಡುವುದೇ ತಂದೆಯ ಆದೇಶವಾಗಿದೆ. ಹೇಗೆ ಇಂತಹ ಸ್ಥಳವನ್ನು ಹೋಗಿ ಮುಟ್ಟಿ ಬನ್ನಿ ಎಂದು ಓಡಿಸುತ್ತಾರೆ. ಆದರೆ ನಂಬರ್ವಾರ್ ಇರುತ್ತಾರೆ.
ಅದೇ ರೀತಿ ಇಲ್ಲೂ ಸಹ ಯಾರು ತಂದೆಯನ್ನು ಹೆಚ್ಚು ನೆನಪು ಮಾಡುತ್ತಾರೋ ಅವರೇ ಮೊದಲು ಓಡಿಹೋಗಿ ಮೊದಲು ಸ್ವರ್ಗದಲ್ಲಿ ಬಂದು ರಾಜ್ಯವನ್ನು ಮಾಡುತ್ತಾರೆ. ನೀವೆಲ್ಲಾ ಆತ್ಮಗಳು ಬುದ್ಧಿಯೋಗದಿಂದ ಓಡುತ್ತಿದ್ದೀರಿ. ಇಲ್ಲಿ ಕುಳಿತಿದ್ದರೂ ಸಹ ಅಲ್ಲಿ ಓಡುತ್ತಿದ್ದೀರಿ. ನಾವು ಶಿವತಂದೆಯ ಮಕ್ಕಳಾಗಿದ್ದೇವೆ. ತಂದೆಯು ನನ್ನೊಬ್ಬನನ್ನೇ ನೆನಪು ಮಾಡಿ, ದೂರಾಂದೇಶಿಗಳಾಗಿ ಎಂದು ಸನ್ನೆಯನ್ನು ಮಾಡುತ್ತಾರೆ. ನೀವು ದೂರದೇಶದಿಂದ ಬಂದಿದ್ದೀರಿ.
ಇದು ಬೇರೆಯವರ ದೇಶ ವಿನಾಶವಾಗುತ್ತದೆ. ಈ ಸಮಯದಲ್ಲೇ ನೀವು ರಾವಣನ ದೇಶದಲ್ಲಿದ್ದೀರಿ, ಈ ಭೂಮಿಯೂ ರಾವಣನದ್ದಾಗಿದೆ. ನಂತರ ನೀವು ಬೇಹದ್ದಿನ ತಂದೆಯ ಭೂಮಿಗೆ ಬರುತ್ತೀರಿ.
ಅದಾಗಿದೆ ರಾಮರಾಜ್ಯ.
ರಾಮರಾಜ್ಯವನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ ನಂತರ ಅರ್ಧದಲ್ಲಿ ರಾವಣನ ರಾಜ್ಯ ಡ್ರಾಮಾನುಸಾರ ನೊಂದಾವಣೆ ಆಗಿದೆ. ಈ ಎಲ್ಲಾ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಆದ್ದರಿಂದ ನೀವು ಪ್ರಶ್ನೆಯನ್ನು ಕೇಳುತ್ತೀರಿ. ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಒಂದುವೇಳೆ ಆತ್ಮದ ತಂದೆಯು ಗಾಡ್ ಫಾದರ್ ಎಂದು ಹೇಳುತ್ತಾರೆ.
ಒಳ್ಳೆಯದು ನಿಮಗೆ ಅವರಿಂದ ಯಾವ ಆಸ್ತಿಯು ಸಿಗುತ್ತದೆ.
ಇದು ಪತಿತ ಪ್ರಪಂಚವಾಗಿದೆ. ತಂದೆಯು ಪತಿತ ಪ್ರಪಂಚವನ್ನು ರಚಿಸುವುದಿಲ್ಲ. ಇದನ್ನು ಯಾರಿಗಾದರೂ ತಿಳಿಸಲು ಸಹಜವಾಗಿದೆ. ಚಿತ್ರವನ್ನೂ ಸಹ ತೋರಿಸಬೇಕಾಗಿದೆ. ತ್ರಿಮೂರ್ತಿಯ ಚಿತ್ರ ಬಹಳ ಚೆನ್ನಾಗಿದೆ.
ತ್ರಿಮೂರ್ತಿ ಶಿವನ ಚಿತ್ರ ನಿಯಮದನುಸಾರ ಎಲ್ಲೂ ಇಲ್ಲ.
ಬ್ರಹ್ಮನಿಗೆ ಗಡ್ಡವನ್ನು ತೋರಿಸಿದ್ದಾರೆ. ವಿಷ್ಣು ಮತ್ತು ಶಂಕರನಿಗೆ ತೋರಿಸಿಲ್ಲ. ಅವರನ್ನು ದೇವತೆ ಎಂದು ತಿಳಿದುಕೊಳ್ಳುತ್ತಾರೆ. ಬ್ರಹ್ಮಾ ಪ್ರಜಾಪಿತ ಆಗಿದ್ದಾರೆ.
ಕೆಲವರು ಒಂದು ರೀತಿ, ಕೆಲವರು ಇನ್ನೊಂದು ರೀತಿ ಮಾಡಿದ್ದಾರೆ. ನೀವು ಮಕ್ಕಳ ಬುದ್ಧಿಯಲ್ಲಿ ಈ ಎಲ್ಲಾ ಮಾತುಗಳೂ ಇವೆ,
ಇನ್ನ್ಯಾರ ಬುದ್ಧಿಯಲ್ಲೂ ಸಹ ಬರುವುದಿಲ್ಲ.
ಅವರು ಭಾವುಕರಾಗಿರುತ್ತಾರೆ. ರಾವಣನನ್ನು ಏಕೆ ಸುಡುತ್ತಾರೆ ಎಂಬುದೂ ಸಹ ತಿಳಿದಿಲ್ಲ.
ರಾವಣನು ಯಾರಾಗಿದ್ದಾನೆ?
ಯಾವಾಗಿನಿಂದ ಬಂದನು?
ಅನಾದಿಕಾಲದಿಂದ ಸುಡುತ್ತಿದ್ದೇವೆ ಎಂದು ಹೇಳುತ್ತಾರೆ.
ಇವನು ಅರ್ಧಕಲ್ಪದ ಶತ್ರುವಾಗಿದ್ದಾನೆ ಎಂದು ನಿಮಗೆ ತಿಳಿದಿದೆ.
ಪ್ರಪಂಚದಲ್ಲಿ ಅನೇಕ ಮತಗಳಿವೆ. ಯಾರು ಏನನ್ನು ತಿಳಿಸುತ್ತಾರೋ ಅದಕ್ಕೆ ಹೆಸರನ್ನು ಇಡುತ್ತಾರೆ. ಕೆಲವರು ಮಹಾವೀರ ಎಂದು ಹೆಸರಿಟ್ಟಿದ್ದಾರೆ. ಈಗ ಮಹಾವೀರನೆಂದರೆ ಹನುಮಂತನನ್ನು ತೋರಿಸಲಾಗುತ್ತದೆ. ಇಲ್ಲಿ ಆದಿ ದೇವ ಮಹಾವೀರ ಎಂದು ಹೆಸರನ್ನು ಏಕೆ ಇಡಲಾಗಿದೆ? ಮಂದಿರದಲ್ಲಿ ಮಹಾವೀರ, ಮಾಹಾವೀರಿಣಿ ಮತ್ತು ನೀವು ಮಕ್ಕಳು ಕುಳಿತಿದ್ದೀರಿ.
ಅವರು ಮಾಯೆಯ ಮೇಲೆ ವಿಜಯಿಗಳು ಆಗಿರುವ ಕಾರಣ ಮಹಾವೀರ ಎಂದು ಹೇಳಲಾಗುತ್ತದೆ. ನೀವೂ ಸಹ ಅನಾಯಸವಾಗಿ ತಮ್ಮ ಜಾಗದಲ್ಲಿ ಹೋಗಿ ಕುಳಿತಿದ್ದೀರಿ.
ಅದು ನಿಮ್ಮ ಸ್ಮಾರಕವಾಗಿದೆ, ಆದ್ದರಿಂದ ತಂದೆಯು ಹೇಳುತ್ತಾರೆ ಇದಕ್ಕೆ ಚೈತನ್ಯ ದಿಲ್ವಾಡ ಎಂದು ಹೆಸರು ಇಡಲಾಗಿದೆ.
ಅದು ಜಡವಾಗಿದೆ.
ಎಲ್ಲಿಯವರೆಗೆ ಚೈತನ್ಯದವರ ಬಳಿ ಬಂದು ತಿಳಿದುಕೊಳ್ಳುತ್ತಾರೋ ಅಲ್ಲಿಯವರೆಗೆ ಚಿತ್ರ ಅವಶ್ಯಕವಾಗಿ ಹಾಕಲೇ ಬೇಕು.
ದಿಲ್ವಾಡ ಮಂದಿರದ ರಹಸ್ಯವನ್ನು ಬಹಳ ಚೆನ್ನಾಗಿ ತಿಳಿಸಿಕೊಡಬಹುದು. ಇವರು ವಿದ್ಯೆಯನ್ನು ಓದಿ ಹೋಗಿದ್ದಾರೆ.
ಆದ್ದರಿಂದ ಭಕ್ತಿ ಮಾರ್ಗದಲ್ಲಿ ಅವರ ಸ್ಮಾರಕವನ್ನು ಮಾಡಲಾಗಿದೆ.
ನಿಮ್ಮ ರಾಜಧಾನಿ ಸ್ಥಾಪನೆ ಮಾಡುವುದರಲ್ಲಿ ಕಷ್ಟವಿದೆ. ನಿಂದನೆಗಳನ್ನೂ ಸಹ ಕೇಳಬೇಕಾಗುತ್ತದೆ ಏಕೆಂದರೆ ಕಳಂಕಿಗಳು ಆಗಲೇಬೇಕಾಗುತ್ತದೆ. ಈಗ ನೀವೆಲ್ಲರೂ ಸಹ ನಿಂದನೆಯನ್ನು ಕೇಳುತ್ತೀರಿ.
ಎಲ್ಲರಿಗಿಂತ ಜಾಸ್ತಿ ನಿಂದನೆ ನನ್ನದಾಗಿದೆ.
ನಂತರ ಪ್ರಜಾಪಿತ ಬ್ರಹ್ಮನಿಗೆ ನಿಂದನೆ ಮಾಡುತ್ತಾರೆ. ಮಿತ್ರ ಸಂಬಂಧಿ ಎಲ್ಲರೂ ಸಹ ಹಿಂತಿರುಗುತ್ತಾರೆ. ವಿಷ್ಣು ಹಾಗೂ ಶಂಕರನಿಗೆ ನಿಂದನೆ ಮಾಡುವುದಿಲ್ಲ. ನಾನು ನಿಂದನೆಯನ್ನು ಕೇಳುತ್ತೇನೆ ಎಂದು ತಂದೆಯು ಹೇಳುತ್ತಾರೆ. ನೀವು ಮಕ್ಕಳಾದಾಗ ನೀವೂ ಸಹ ಭಾಗವನ್ನು ತೆಗೆದುಕೊಳ್ಳಬೇಕು. ನೀವು ಇಲ್ಲದಿದ್ದರೆ ಇವರು ತಮ್ಮ ಕಾರ್ಯದಲ್ಲೇ ಇದ್ದರು ನಿಂದನೆಯ ಮಾತಿಲ್ಲ. ಎಲ್ಲರಿಗಿಂತ ಜಾಸ್ತಿ ನಿಂದನೆ ತಂದೆಗೆ ಮಾಡುತ್ತಾರೆ.
ತಮ್ಮ ಧರ್ಮ ಕರ್ಮವನ್ನು ಮರೆತಿದ್ದಾರೆ.
ಆದರೂ ಸಹ ತಂದೆ ಎಷ್ಟೊಂದು ತಿಳಿಸಿಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ದೂರಾಂದೇಶಿಗಳಾಗಬೇಕಾಗಿದೆ. ನೆನಪಿನ ಯಾತ್ರೆಯಿಂದ ವಿಕರ್ಮಗಳನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಯಾತ್ರೆಯಲ್ಲಿ ಯಾವುದೇ ಪಾಪಕರ್ಮಗಳನ್ನು ಮಾಡಬಾರದಾಗಿದೆ.
2.
ಮಹಾವೀರರಾಗಿ ಮಾಯೆಯ ಮೇಲೆ ವಿಜಯವನ್ನು ಗಳಿಸಬೇಕಾಗಿದೆ. ನಿಂದನೆಗಳಿಂದ ಭಯ ಪಡಬಾರದಾಗಿದೆ,
ಕಳಂಕಿಧರರಾಗಬೇಕಾಗಿದೆ.
ವರದಾನ:
ಸರ್ವ ಶಕ್ತಿಗಳ
ಅನುಭವ ಮಾಡುತ್ತಾ
ಸಮಯದಲ್ಲಿ ಸಿದ್ಧಿ
ಪ್ರಾಪ್ತಿಮಾಡಿಕೊಳ್ಳುವಂತಹ ನಿಶ್ಚಿತ
ವಿಜಯಿ ಭವ
ಸರ್ವ ಶಕ್ತಿಗಳಿಂದ ಸಂಪನ್ನ ನಿಶ್ಚಯ ಬುದ್ಧಿ ಮಕ್ಕಳ ವಿಜಯ ನಿಶ್ಚಿತವಾಗಿಯೇ
ಇರುವುದು. ಹೇಗೆ ಯಾರ ಬಳಿಯಲ್ಲಾದರೂ ಧನದ, ಬುದ್ಧಿಯ ಹಾಗೂ ಸಂಬಂಧ-ಸಂಪರ್ಕದ ಶಕ್ತಿ ಇದ್ದಲ್ಲಿ ಅವರಿಗೆ ನಿಶ್ಚಯವಿರುವುದು ಇದು ಯಾವ ದೊಡ್ಡ ಮಾತು! ನಿಮ್ಮ ಬಳಿಯಂತೂ ಎಲ್ಲಾ ಶಕ್ತಿಗಳು ಇವೆ. ಎಲ್ಲದಕ್ಕಿಂತಲೂ
ದೊಡ್ಡ ಧನ ಅವಿನಾಶಿ ಧನ ಸದಾ ಜೊತೆಯಲ್ಲಿದೆ , ಆದ್ದರಿಂದ ಧನದ ಶಕ್ತಿಯೂ ಸಹ ಇದೆ, ಬುದ್ಧಿ ಮತ್ತು ಸ್ಥಾನ-ಮಾನದ ಶಕ್ತಿಯೂ ಸಹಾ ಇದೆ, ಕೇವಲ ಅದನ್ನು ಉಪಯೋಗಿಸಿ, ಸ್ವಯಂನ ಪ್ರತಿಯಾಗಿ ಕಾರ್ಯದಲ್ಲಿ ತೊಡಗಿಸಿ ಆಗ ಸಮಯದಲ್ಲಿ ವಿಧಿಯ ಮೂಲಕ ಸಿದ್ಧಿ ಪ್ರಾಪ್ತಿಯಾಗುವುದು.
ಸ್ಲೋಗನ್:
ವ್ಯರ್ಥ ನೋಡುವ ಹಾಗೂ ಕೇಳುವ ಹೊರೆ ಸಮಾಪ್ತಿ ಮಾಡುವುದೇ ಡಬಲ್ ಲೈಟ್ ಆಗುವುದಾಗಿದೆ.
0 Comments