29/12/22 ಪ್ರಾತಃಮುರುಳಿ ಓಂಶಾಂತಿ ಬಾಪ್ದಾದಾ ಮಧುಬನ
Listen to the Murli audio file
“ಮಧುರ
ಮಕ್ಕಳೇ - ಯಾರು
ಎಷ್ಟೇ ಗುಣವಂತರಾಗಿರಲಿ,
ಮಧುರರಾಗಿರಲಿ, ಧನವಂತರಾಗಿರಲಿ,
ನೀವು ಅವರ
ಕಡೆ ಆಕರ್ಷಿತರಾಗಬಾರದು,
ಶರೀರವನ್ನು ನೆನಪು
ಮಾಡಬಾರದು”
ಪ್ರಶ್ನೆ:
ಯಾವ ಮಕ್ಕಳಿಗೆ ಜ್ಞಾನ ಸಿಗುತ್ತದೋ ಅವರ ಮುಖದಿಂದ ತಂದೆಯ ಪ್ರತಿ ಯಾವ ಮಧುರ ಮಾತು ಬರುತ್ತದೆ?
ಉತ್ತರ:
ಓಹೋ! ಬಾಬಾ ತಾವು ನಮಗೆ ಜೀವದಾನವನ್ನು
ಕೊಟ್ಟಿದ್ದೀರಿ, ಮಧುರ ಬಾಬಾ ತಾವು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯ ಜ್ಞಾನವನ್ನು ಕೊಟ್ಟು ಸರ್ವ ದುಃಖಗಳಿಂದ ದೂರ ಮಾಡಿದ್ದೀರಿ ಅಂದಾಗ ಎಷ್ಟೊಂದು ಧನ್ಯವಾದಗಳು ಹೇಳಬೇಕಾಗುತ್ತದೆ.
ಪ್ರಶ್ನೆ:
ಅಂತಿಮದಲ್ಲಿ ತಂದೆಯ ವಿನಃ ಯಾರ ಮೇಲೂ ಸೆಳೆತ ಇರಬಾರದು, ಅದಕ್ಕೋಸ್ಕರ ಏನು ಮಾಡಬೇಕಾಗಿದೆ?
ಉತ್ತರ:
ಯಾವುದೇ ವಸ್ತುವಿನ ಲೋಭಕ್ಕೆ ವಶರಾಗಿ ತಮ್ಮ ಬಳಿ ಜಾಸ್ತಿ ಇಟ್ಟುಕೊಳ್ಳಬಾರದಾಗಿದೆ ಎಂದು ತಂದೆಯು ಮಕ್ಕಳಿಗೆ ಹೇಳುತ್ತಾರೆ. ಹೆಚ್ಚಾಗಿ ಇಟ್ಟುಕೊಂಡಾಗ ಆ ಕಡೆ ಮನಸ್ಸು ಹೋಗುತ್ತದೆ. ತಂದೆಯ ನೆನಪು ಮರೆತು ಹೋಗುತ್ತದೆ.
ಗೀತೆ: ತಾಳ್ಮೆ ಇರಲಿ ಮಾನವಾ......
ಓಂ ಶಾಂತಿ.
ಮಕ್ಕಳಿಗೆ ತಾಳ್ಮೆಯನ್ನು ಯಾರು ಕೊಡುತ್ತಿದ್ದಾರೆ? ಮಕ್ಕಳ ಬುದ್ಧಿಯು ತಕ್ಷಣ ಬೇಹದ್ದಿನ ತಂದೆಯ ಕಡೆಗೆ ಹೋಗುತ್ತದೆ. ಕೇವಲ ಈ ಸಮಯದಲ್ಲಿ ಮಾತ್ರವೇ ನೀವು ಮಕ್ಕಳ ಬುದ್ಧಿಯೂ ಹೋಗುತ್ತದೆ. ಬೇಹದ್ದಿನ ತಂದೆಯ ಕಡೆಗೆ ಅನೇಕರ ಬುದ್ಧಿಯು ಹೋಗುತ್ತದೆ. ಆದರೆ ಇದು ಸಂಗಮಯುಗವಾಗಿದೆ ಎಂದು ಅವರಿಗೆ ತಿಳಿದಿಲ್ಲ. ತಂದೆ ಬಂದಿದ್ದಾರೆ ಎಂದು ಎಲ್ಲರಿಗೆ ಒಂದೇ ಬಾರಿ ಗೊತ್ತಾಗುವುದಿಲ್ಲ. ಬೇಹದ್ದಿನ ತಂದೆಯೇ ಆಸ್ತಿಯನ್ನು ಕೊಡುತ್ತಾರೆ ಆದರೆ ನೀವು ಮಕ್ಕಳು ತಂದೆಯನ್ನು ತಿಳಿದುಕೊಂಡಿದ್ದೀರಿ. ತಂದೆಯು ಬಂದಿದ್ದಾರೆ ಎಂದು ನಿಮಗೆ ತಿಳಿದಿದೆ.
ಬೇಹದ್ದಿನ ಆಸ್ತಿಯನ್ನು
5000 ವರ್ಷದ ಹಿಂದಿನಂತೆ ನಿಮಗೆ ಕೊಡುತ್ತಿದ್ದಾರೆ. ಅವರು ಮಕ್ಕಳಿಗೆ ಬೇಹದ್ದಿನ ಸ್ವರ್ಗದ ಆಸ್ತಿಯನ್ನು ಕೊಡಲು ಬರುತ್ತಾರೆ. ಅವರು ಬೇಹದ್ದಿನ ತಂದೆಯಾಗಿದ್ದರೂ ಸಹ ವಿದ್ಯೆಯನ್ನು ಓದಿಸುತ್ತಾರೆ. ಭಗವಂತ ಅಂದರೆ ತಂದೆಯಾಗಿದ್ದಾರೆ. ನಂತರ ಭಗವಾನುವಾಚ ಎಂದರೆ ಓದಿಸುತ್ತಾರೆ.
ಏನನ್ನು ಓದಿಸುತ್ತಾರೆ?
ಅದು ನೀವು ಮಕ್ಕಳಿಗೆ ತಿಳಿದಿದೆ.
ನಾವೀಗ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೇವೆ.
ತಂದೆಯು ಯಾವುದೇ ಶಾಸ್ತ್ರಗಳನ್ನು ಓದಿಲ್ಲ.
ಈ ಬ್ರಹ್ಮಾತಂದೆಯು ಓದಿದ್ದಾರೆ. ಅವರಿಗೆ ಜ್ಞಾನಸಾಗರ, ಸರ್ವಶಕ್ತಿವಂತ ಎಂದು ಹೇಳಲಾಗುತ್ತದೆ.
ನಾನು ಎಲ್ಲಾ ವೇದ-ಶಾಸ್ತ್ರಗಳ ಆದಿಯನ್ನು ಎಲ್ಲಾ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ ಎಂದು ಸ್ವಯಂ ತಂದೆಯೇ ಹೇಳುತ್ತಾರೆ. ಇದೆಲ್ಲವೂ ನನ್ನಿಂದ ರಚನೆಯಾಗಿರುವುದಿಲ್ಲ. ಈ ಶಾಸ್ತ್ರಗಳನ್ನು ಯಾವಾಗಿನಿಂದ ಓದುತ್ತಾ ಬಂದಿದ್ದೀರಿ ಎಂದು ಕೇಳಲಾಗುತ್ತದೆ. ಅಂದಾಗ ಇದು ಪರಂಪರೆಯಿಂದ ಹೇಳುತ್ತಾರೆ. ನನಗೆ ಯಾರೂ ಸಹ ಓದಿಸುವಂತಹವರಿಲ್ಲವೆಂದು ತಂದೆಯು ಹೇಳುತ್ತಾರೆ. ನನಗೆ ಯಾರೂ ತಂದೆಯಿಲ್ಲ.
ಎಲ್ಲರೂ ಗರ್ಭದಲ್ಲಿ ಪ್ರವೇಶ ಮಾಡುತ್ತಾರೆ.
ತಾಯಿಯ ಪಾಲನೆಯನ್ನು ತೆಗೆದುಕೊಳ್ಳುತ್ತಾರೆ. ನಾನು ತಾಯಿಯ ಪಾಲನೆಯನ್ನು ತೆಗೆದುಕೊಳ್ಳಲು ತಾಯಿಯ ಗರ್ಭವನ್ನು ಪ್ರವೇಶ ಮಾಡುವುದಿಲ್ಲ. ಮನುಷ್ಯರ ಆತ್ಮ ಗರ್ಭದಲ್ಲಿ ಹೋಗುತ್ತದೆ. ಸತ್ಯಯುಗದ ಲಕ್ಷ್ಮೀ-ನಾರಾಯಣರೂ ಸಹ ಗರ್ಭದಿಂದ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಅಂದಾಗ ಅವರೂ ಸಹ ಮನುಷ್ಯರೇ ಆದರು. ನಾನು ಈ ಶರೀರದಲ್ಲಿ ಕಲ್ಪದ ಮೊದಲಿನ ರೀತಿ ಪ್ರವೇಶ ಮಾಡುತ್ತೇನೆ. ಈ ಅಕ್ಷರವನ್ನು ಯಾರೂ ಸಹ ತಿಳಿದುಕೊಳ್ಳಲಿಲ್ಲ. ಕಲ್ಪದ ಆಯಸ್ಸೂ ಸಹ ಯಾರಿಗೂ ತಿಳಿದಿಲ್ಲ. ನಾನು ನಿಮ್ಮ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಸದ್ಗುರುವೂ ಆಗಿದ್ದೇನೆ ಎಂದು ತಂದೆಯು ಕುಳಿತು ತಿಳಿಸಿಕೊಡುತ್ತಾರೆ. ತಂದೆಯು ಆಸ್ತಿಯನ್ನು ಕೊಡುವವರು ಎಂದು ನಿಮಗೆ ತಿಳಿದಿದೆ. ತಂದೆಯು ಸ್ವರ್ಗದ ಅಧಿಕಾರವನ್ನು ಕೊಡಲು ಬಂದಿದ್ದಾರೆ.
ನರಕದ ರಾಜ್ಯ ಪದವಿಯನ್ನು ಕೊಡುತ್ತಾರೆಯೇ?
ಬೇಹದ್ದಿನ ತಂದೆ ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುವಂತಹವರಾಗಿದ್ದಾರೆ. ನನ್ನ ಮತದಂತೆ ನಡೆಯಿರಿ ಎಂದು ಹೇಳುತ್ತಾರೆ. ಆಗ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ನಂತರ ದ್ವಾಪರದಿಂದ ನೀವು ರಾವಣನ ಮತದ ಮೇಲೆ ನಡೆಯುತ್ತೀರಿ.
ಸತ್ಯಯುಗದಲ್ಲಿ ಯಾವುದೇ ಮನುಷ್ಯರ ಮತ ಯಾವುದೇ ಸದ್ಗತಿಗೋಸ್ಕರ ಸಿಗುವುದಿಲ್ಲ ಮತ್ತು ಅಲ್ಲಿ ಅವಶ್ಯಕತೆಯೂ ಇಲ್ಲ. ಕಲಿಯುಗದಲ್ಲಿ ಎಲ್ಲರೂ ಗತಿ-ಸದ್ಗತಿಗೋಸ್ಕರ ಮತವನ್ನು ಬೇಡುತ್ತಾರೆ. ನಾವು ಯಾವುದೋ ಸಮಯದಲ್ಲಿ ಸ್ವರ್ಗದಲ್ಲಿ ಇದ್ದೆವು,
ಪಾವನರಾಗಿದ್ದೆವು, ಆದ್ದರಿಂದ ಹೇ ಪತಿತ-ಪಾವನ, ಹೇ ಸದ್ಗತಿದಾತ ನಮಗೆ ಸದ್ಗತಿಯನ್ನು ಕೊಡಿ ಎಂದು ಕರೆಯುತ್ತಾರೆ.
ಆದರೆ ಸತ್ಯಯುಗದಲ್ಲಿ ಯಾರೂ ಸಹ ಈ ರೀತಿ ಕರೆಯುವುದಿಲ್ಲ. ಈಗ ತಂದೆಯು ಬಂದಿದ್ದಾರೆ ಎಂದು ನಿಮಗೆ ತಿಳಿದಿದೆ. ಬಹಳ ಸರಳವಾಗಿ ರಾಜಯೋಗ ಮತ್ತು ಸಹಜ ಜ್ಞಾನದ ಮತವನ್ನು ಕೊಡುತ್ತಿದ್ದಾರೆ. ಆದ್ದರಿಂದ ಅದು ಅವರ ಶ್ರೀಮತವಾಗಿದೆ. ಭಗವಂತ ಸರ್ವಶ್ರೇಷ್ಠ ಆಗಿದ್ದಾರೆ.
ಅವರಿಗಿಂತ ಶ್ರೇಷ್ಠರಾಗಿರುವಂತಹವರು ಯಾರೂ ಇಲ್ಲ ಮತ್ತು ನಮ್ಮ ಆತ್ಮೀಯ ತಂದೆಯಾಗಿದ್ದಾರೆ. ಆತ್ಮೀಯ ತಂದೆಯಾಗಿರುವ ಕಾರಣ ಅವರು ಆತ್ಮಗಳಿಗೆ ಜ್ಞಾನವನ್ನು ಕೊಡುತ್ತಾರೆ.
ಶಾರೀರಿಕ ತಂದೆಯಿರುವ ಕಾರಣ ಮಕ್ಕಳು ಶಾರೀರಿಕ ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಆತ್ಮಾಭಿಮಾನಿಗಳಾಗಿ ಮತ್ತು ತಂದೆಯನ್ನು ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ.
ಯಾವುದೇ ಶಾರೀರಿಕವಾದ ನೆನಪಿರಬಾರದು. ನೀವು ಆತ್ಮಗಳಾಗಿದ್ದೀರಿ, ಮನುಷ್ಯರು ಭಲೇ ಎಷ್ಟೇ ಚೆನ್ನಾಗಿರಬಹುದು, ಧನವಂತರಾಗಿರಬಹುದು, ಮಧುರರಾಗಿರಬಹುದು ಆದರೂ ಸಹ ದೇಹಧಾರಿಗಳ ನೆನಪನ್ನು ಮಾಡಬಾರದು.
ಒಬ್ಬ ಪರಮಪಿತ ಪರಮಾತ್ಮನನ್ನೇ ನೆನಪು ಮಾಡಬೇಕು. ಯಾರಾದರೂ ಸಾಹುಕಾರರ ಮಕ್ಕಳಾಗಿದ್ದರೆ ಅವರು ತಂದೆಯನ್ನೇ ನೆನಪು ಮಾಡುತ್ತಾರೆ.
ಗಾಂಧಿಜೀಯನ್ನೋ, ಶಾಸ್ತ್ರ ಮುಂತಾದುವುಗಳನ್ನು ನೆನಪು ಮಾಡುವುದಿಲ್ಲ. ಎಲ್ಲರಿಗಿಂತ ಜಾಸ್ತಿ ಪರಮಪಿತ ಪರಮಾತ್ಮನನ್ನು ನೆನಪು ಮಾಡುತ್ತಾರೆ. ಕೆಲವರು ಲಕ್ಷ್ಮೀ-ನಾರಾಯಣರನ್ನು,
ಕೆಲವರು ರಾಧೆ-ಕೃಷ್ಣರನ್ನು ನೆನಪು ಮಾಡುತ್ತಾರೆ. ಇವರು ಇಲ್ಲಿದ್ದು ಹೋದವರು ಎಂದು ತಿಳಿದುಕೊಳ್ಳುತ್ತಾರೆ. ಅವರ ಇತಿಹಾಸ,
ಭೂಗೋಳವೂ ಸಹ ಇದೆ. ತಂದೆಯೂ ಸರ್ವಶ್ರೇಷ್ಠವಾಗಿದ್ದಾರೆ. ಅವರು ಪುನಃ ಬರುತ್ತಾರೆ ನಂತರ ಇಡೀ ಪ್ರಪಂಚದ ಇತಿಹಾಸ,
ಭೂಗೋಳ ಪುನರಾವರ್ತನೆಯಾಗುತ್ತದೆ. ಕಲಿಯುಗದ ನಂತರ ಸತ್ಯಯುಗವು ಬರುತ್ತದೆ. ಇದು ಕೇವಲ ನೀವು ಮಕ್ಕಳಿಗಲ್ಲದೇ ಬೇರೆ ಯಾರಿಗೂ ಸಹ ತಿಳಿದಿಲ್ಲ. ಕೇವಲ ಇತಿಹಾಸ, ಭೂಗೋಳ ಪುನರಾವರ್ತನೆಯಾಗುತ್ತದೆ ಎಂದು ಹೇಳುತ್ತಾರೆ. ಬುದ್ಧಿಯಲ್ಲಿ ಏನೂ ಸಹ ಇಲ್ಲ. ಮೊದಲು ನೀವೂ ಸಹ ಅದೇ ರೀತಿ ಇದ್ದಿರಿ. ಅವಶ್ಯವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಆದರೆ ಎಷ್ಟು ಸಮಯ ನಡೆಯಿತು, ಏನಾಯಿತು,
ನಂತರ ಅವರು ಎಲ್ಲಿಗೆ ಹೋದರು,
ಇದೆಲ್ಲವೂ ಸಹ ಏನೂ ತಿಳಿದಿರಲಿಲ್ಲ.
ಈಗಲೂ ನಂಬರ್ವಾರ್ ಚೆನ್ನಾಗಿ ಧಾರಣೆ ಮಾಡಿಕೊಂಡು ಶ್ರೀಮತದಂತೆ ನಡೆಯುವುದು ಸರಿಯಾಗಿದೆ.
ಮನಸಾ-ವಾಚಾ-ಕರ್ಮಣ ಸಹಯೋಗವನ್ನು ಕೊಡಬೇಕು. ಜ್ಞಾನ ಮತ್ತು ಯೋಗದಿಂದ ಅನೇಕರ ಕಲ್ಯಾಣ ಮಾಡಬೇಕು.
ನೀವು ಶಕ್ತಿಸೇನೆ,
ಡಬಲ್ ಅಹಿಂಸಕರಾಗಿದ್ದೀರಿ. ನಿಮ್ಮಲ್ಲಿ ಯಾವುದೇ ಹಿಂಸೆಯಿಲ್ಲ. ನೀವು ಯಾರಿಗೂ ದುಃಖವನ್ನು ಕೊಡುವುದಿಲ್ಲ. ಹಿಂಸೆ ಅರ್ಥಾತ್ ದುಃಖ ಕೊಡುವುದು. ಮುಷ್ಟಿಯಲ್ಲಿ ಒಡೆಯುವುದು, ಕತ್ತಿವರಸೆ ಮಾಡುವುದು ಹಾಗೂ ಕಾಮ-ಕಟಾರಿ ಮಾಡುವುದು, ಇದೆಲ್ಲವೂ ದುಃಖ ಕೊಡುವುದಾಗಿದೆ.
ನೀವು ಯಾವುದೇ ಪ್ರಕಾರದ ದುಃಖವನ್ನು ಕೊಡುವುದಿಲ್ಲ. ಆದ್ದರಿಂದ ಅಹಿಂಸಾ ಪರಮೋಧರ್ಮ ಎಂದು ಹೇಳಲಾಗುತ್ತದೆ.
ಮನುಷ್ಯರು ಹಿಂಸೆಯನ್ನು ಮಾಡುತ್ತಾರೆ ಏಕೆಂದರೆ ಇದು ರಾವಣನ ರಾಜ್ಯವಾಗಿದೆ. ಮನುಷ್ಯರು ಶ್ರೀಕೃಷ್ಣನ ಚರಿತ್ರೆಗಳಲ್ಲಿ ಹಿಂಸೆಯನ್ನು ತೋರಿಸಿದ್ದಾರೆ.
ಶ್ರೀಕೃಷ್ಣ ರಾಜಕುಮಾರನಾಗಿದ್ದನು. ಅವನದು ಈ ರೀತಿಯ ಚರಿತ್ರೆ ಹಾಗೂ ಜೀವನ ಕಥೆಯ ಮಾತಿಲ್ಲ ಎಂಬುದು ನಿಮಗೆ ತಿಳಿದಿದೆ. ಈಶ್ವರನದು ಚರಿತ್ರೆಯು ಇದೆ.
ಅವರೇ ರತ್ನಾಗರ್,
ಸೌಧಾಗರ್, ಜ್ಞಾನದ ಸಾಗರ, ಜಾದುಗರ್ ಆಗಿದ್ದಾರೆ. ಅರೇ!
ನಿರಾಕಾರ ಪರಮಾತ್ಮ ವ್ಯಾಪಾರವನ್ನು ಹೇಗೆ ಮಾಡುತ್ತಾರೆ? ವ್ಯಾಪಾರಗಾರರು ಮನುಷ್ಯರಾಗಿರುತ್ತಾರಲ್ಲವೇ. ಈ ಎಲ್ಲಾ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ. ಹೇಗೆ ವ್ಯಾಪಾರಗಾರ ಮತ್ತು ರತ್ನಾಗರ ಆಗಿದ್ದಾರೆ. ಅವರನ್ನು ಏಕೆ ನೆನಪು ಮಾಡುತ್ತಾರೆ? ಹೇ ಪತಿತ-ಪಾವನ,
ಸರ್ವರ ಸದ್ಗತಿದಾತಾ,
ದುಃಖಹರ್ತ-ಸುಖಕರ್ತ ಎಂದು ಒಬ್ಬ ತಂದೆಗೆ ಮಹಿಮೆ ಮಾಡಲಾಗುತ್ತದೆ. ಈ ಮಹಿಮೆಯು ಸೂಕ್ಷ್ಮವತನವಾಸಿಗಾಗಲಿ ಅಥವಾ ಸ್ಥೂಲವತನವಾಸಿಗಾಗಲಿ ಮಾಡುವುದಿಲ್ಲ. ಈ ಮಹಿಮೆಯನ್ನು ಮೂಲವತನವಾಸಿಗೆ ಮಾಡಲಾಗುತ್ತದೆ. ಸರ್ವಶ್ರೇಷ್ಠ ತಂದೆಯಾಗಿದ್ದಾರೆ, ನಾವು ಆತ್ಮಗಳು ಅವರ ಮಕ್ಕಳಾಗಿದ್ದೇವೆ. ನಾವೆಲ್ಲರೂ ನಂಬರ್ವಾರ್ ಪಾತ್ರವನ್ನು ಮಾಡಲು ಬರುತ್ತೇವೆ.
ಈ ಜ್ಞಾನವನ್ನು ನಾನು ನಿಮಗೆ ತಿಳಿಸುತ್ತೇನೆ ಆದರೆ ಇದು ಪ್ರಾಯಲೋಪವಾಗುತ್ತದೆ ಎಂದು ತಂದೆಯು ಹೇಳುತ್ತಾರೆ. ಆ ಗೀತೆಗಳಂತೂ ಅನೇಕ ಇವೆ. ಆದರೂ ಸಹ ಹಳೆಯ ಗೀತೆಗಳೇ ಬರುತ್ತದೆ.
ನಿಮ್ಮ ಕಾಗದ ಹೊರಗೆ ಬರುವುದಿಲ್ಲ.
ಗೀತೆಗಳು ಬಹಳಷ್ಟು ಭಾಷೆಗಳಲ್ಲಿದೆ. ಸರ್ವಶ್ರೇಷ್ಠವಾಗಿರುವುದು ಗೀತೆಯಾಗಿದೆ ಆದರೆ ಅದೆಲ್ಲವನ್ನೂ ಮನುಷ್ಯರೇ ಮಾಡಿದ್ದಾರೆ.
ಯತಾರ್ಥವಾದ ಅರ್ಥ ಮಾತ್ರ ತಿಳಿದಿಲ್ಲ.
ಆದ್ದರಿಂದ ಗಾಯನ ಮಾಡಲಾಗುತ್ತದೆ - ಜ್ಞಾನಸೂರ್ಯ ಪ್ರಕಟ ಅಜ್ಞಾನ ಅಂಧಕಾರದ ವಿನಾಶ ಎನ್ನುವುದು ಈ ಸೂರ್ಯನ ಮಹಿಮೆಯಲ್ಲ ಜ್ಞಾನಸೂರ್ಯನ ಮಹಿಮೆಯಾಗಿದೆ.
ಈ ಸೂರ್ಯ ಬಿಸಿಲನ್ನು ಕೊಡುತ್ತಾನೆ,
ಸಾಗರ ನೀರನ್ನು ಕೊಡುತ್ತದೆ, ಆದರೆ ಅವರ ಹೆಸರನ್ನು ಇದರ ಮೇಲೆ,
ಇದರ ಹೆಸರನ್ನು ಅವರ ಮೇಲೆ ಇಟ್ಟಿದ್ದಾರೆ. ಜ್ಞಾನಸಾಗರನಿಗೆ ಜ್ಞಾನಸೂರ್ಯನೆಂದು ಹೇಳಲಾಗುತ್ತದೆ.
ನಮ್ಮ ಅಂಧಕಾರ ಈಗ ದೂರವಾಯಿತು ಎಂದು ಈಗ ನಿಮಗೆ ತಿಳಿದಿದೆ.
ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ಯಾವಾಗ ರಚೈತ ತಂದೆಯ ಪಾತ್ರವನ್ನು ತಿಳಿದುಕೊಳ್ಳುತ್ತೀರೋ ಆಗ ಅನ್ಯರ ಪಾತ್ರವನ್ನೂ ಸಹ ಅವಶ್ಯಕವಾಗಿ ತಿಳಿದುಕೊಳ್ಳುತ್ತೀರಿ. ನಿಮಗೆ ಈಗ ಜ್ಞಾನ ಸಿಗುತ್ತಿದೆ. ಈ ತಂದೆಯು ಬಹಳ ಪ್ರೀತಿಯುಳ್ಳವರೆಂದು ನಿಮಗೆ ತಿಳಿದಿದೆ. ನಮಗೆ ಜೀವದಾನವನ್ನು ಕೊಡುತ್ತಿದ್ದಾರೆ, ದುಃಖದಿಂದ ದೂರ ಮಾಡುತ್ತಿದ್ದಾರೆ, ಮೃತ್ಯುವಿನ ಬಂಧನ ಬಿಡಿಸುತ್ತಾರೆ.
ಕೆಲವರು ಮೃತ್ಯುವಿನಿಂದ ತಪ್ಪಿಸಿಕೊಳ್ಳುತ್ತಾರೆ ಆಗ ನಮಗೆ ವೈದ್ಯರು ಜೀವದಾನ ಕೊಟ್ಟರು ಎಂದು ಹೇಳುತ್ತಾರೆ.
ಆದರೆ ನಿಮಗೆ ಒಂದೇ ಬಾರಿ ಈ ರೀತಿ ಜೀವದಾನ ಸಿಗುತ್ತದೆ.
ಯಾವುದರಿಂದ ನಿಮಗೆ ಎಂದೂ ಸಹ ಕಾಯಿಲೆ ಬರುವುದಿಲ್ಲ.
ಇಂತಹವರು ನಮಗೆ ಜೀವದಾನವನ್ನು ಕೊಟ್ಟರು ಎಂದು ಹೇಳಬಹುದು ಇದು ತುಂಬಾ ಹೊಸ ಮಾತಾಗಿದೆ.
ಈಗ ನೀವು ಬದುಕಿದ್ದಾಗಲೇ ತಂದೆಯ ಮಕ್ಕಳಾಗಿದ್ದೀರಿ. ಕೆಲಕೆಲವರನ್ನು ಮಾಯಾ ರಾವಣ ತನ್ನ ಕಡೆಗೆ ಆಕರ್ಷಣೆ ಮಾಡುತ್ತಾನೆ.
ರಾವಣರೂಪೀ ಮೃತ್ಯುವು ಬಂದಿತು ಎಂದು ಹೇಳಲಾಗುತ್ತದೆ. ಈಶ್ವರೀಯ ಮಡಿಲಿನಲ್ಲಿ ಬಂದು ಪುನಃ ಅಸುರೀ ಮಡಿಲಿಗೆ ಹೊರಟುಹೋಗುತ್ತಾರೆ. ಮೃತ್ಯುವಂತೂ ಬರಲಿಲ್ಲ ಆದರೆ ಬದುಕಿದ್ದಂತೆಯೇ ಈಶ್ವರನ ಮಕ್ಕಳಾದರು,
ನಂತರ ಬದುಕಿದ್ದಾಗಲೇ ರಾವಣನ ಕಡೆಗೆ ಹೊರಟುಹೋಗುತ್ತಾರೆ. ಇಲ್ಲಿ ಧರ್ಮಾತ್ಮರಾದರು ಆದರೆ ಅಲ್ಲಿ ಹೋಗಿ ಅಧರ್ಮಿಗಳಾಗುತ್ತಾರೆ. ಇಲ್ಲಿ ಸಂಗಮದಲ್ಲಿ ಧರ್ಮದ ರಾಜ್ಯವಿದೆ, ಅಲ್ಲಿ ಅಧರ್ಮದ ರಾಜ್ಯವಿದೆ.
ಸತ್ಯಯುಗದಲ್ಲಿ ಒಂದೇ ಧರ್ಮವಿದೆ. ಕಲಿಯುಗದಲ್ಲಿ ಅಧರ್ಮದ ರಾಜ್ಯವಿದೆ,
ಕೌರವ ರಾಜ್ಯವಾಗಿದೆ.
ಪಾಂಡವರ ಜೊತೆ ಕೃಷ್ಣ ಇದ್ದನು ಎಂದು ಹೇಳುತ್ತಾರೆ ಆದರೆ ನಿಮ್ಮ ಜೊತೆ ಶಿವತಂದೆಯಿದ್ದಾರೆ. ಪಗಡೆಯ ಆಟದ ಮಾತೇ ಇಲ್ಲ.
ರಾಜ್ಯಭಾರ ಕೌರವರದ್ದೂ ಅಲ್ಲ, ಪಾಂಡವರದ್ದೂ ಅಲ್ಲ. ತಂದೆಯೇ ಬಂದು ಧರ್ಮದ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ರಾಮರಾಜ್ಯ ಬೇಕೆಂದು ಇಷ್ಟಪಡುತ್ತಾರೆ. ನೀವು ಸ್ವರ್ಗವಾಸಿಗಳಾದಿರಿ ಅರ್ಥಾತ್ ಇದು ನರಕವಾಗಿದೆ. ಆದರೆ ಯಾರಿಗಾದರೂ ಸೀದಾ ನರಕವಾಸಿಗಳಾಗಿದ್ದೀರಿ ಎಂದು ಹೇಳಿದಾಗ ಜಗಳವಾಡುತ್ತಾರೆ. ತಂದೆಯೇ ಕುಳಿತು ನಾವು ಮಕ್ಕಳಿಗೆ ತಿಳಿಸುತ್ತಾರೆ. ಬೇಹದ್ದಿನ ತಂದೆಗೆ ನಿರಾಕಾರ ಭಗವಂತ ಎಂದು ಹೇಳಲಾಗುತ್ತದೆ. ಹದ್ದಿನ ತಂದೆಗೆ ಭಗವಂತ ಎಂದು ಹೇಳಲಾಗುವುದಿಲ್ಲ. ಕೃಷ್ಣನಿಗೆ ಜ್ಞಾನಸಾಗರ,
ಪತಿತ-ಪಾವನ ಎಂದು ಹೇಳಲಾಗುವುದಿಲ್ಲ. ಅವರ ಮಹಿಮೆಯನ್ನು ಕೇವಲ ನೀವು ಬ್ರಾಹ್ಮಣರು ತಿಳಿದುಕೊಂಡಿದ್ದೀರಿ. ನಿಮಗೆ ತಂದೆಯೇ ಬಂದು ತನ್ನ ಸಮಾನ ಮಾಡಿಕೊಳ್ಳುತ್ತಿದ್ದಾರೆ. ತಂದೆಗೂ ಸಹ ಇದು ತಿಳಿದಿದೆ. ನೀವು ಮಕ್ಕಳಿಗೂ ಸಹ ಆಸ್ತಿ ಸಿಗುತ್ತಿದೆ ಎಂದು ತಿಳಿದಿದೆ.
ಹೇಗೆ ಲೌಕಿಕ ತಂದೆಯ ಮುಖಾಂತರ ಆಸ್ತಿ ಸಿಗುತ್ತದೆ ಆದರೆ ಅಲ್ಲಿ ಬೇರೆ ಬೇರೆಯಾಗಿರುತ್ತದೆ. ಇಲ್ಲಿ ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿದಿದೆ. ನಮಗೆ ಬೇಹದ್ದಿನ ತಂದೆಯು ಆಸ್ತಿಯನ್ನು ಕೊಡಲು ಬಂದಿದ್ದಾರೆ ಎನ್ನುವ ಶಾಲೆ ಹಾಗೂ ಸತ್ಸಂಗಗಳೂ ಯಾವುದೂ ಇಲ್ಲ. ಇಲ್ಲಿ ತಂದೆಯೇ ರಾಜಯೋಗವನ್ನು ಕಲಿಸಿಕೊಡುತ್ತಿದ್ದಾರೆ ಮತ್ತು ನರನಿಂದ ನಾರಾಯಣರನ್ನಾಗಿ ಮಾಡುತ್ತಾರೆ. ಅವಶ್ಯವಾಗಿ ಕಲಿಯುಗದ ಅಂತ್ಯ,
ಸತ್ಯಯುಗದ ಆದಿಯ ನಡುವೆ ಸಂಗಮಯುಗದಲ್ಲಿ ನೀವು ಪುರುಷಾರ್ಥವನ್ನು ಮಾಡಿ ನರನಿಂದ ನಾರಾಯಣರಾಗುತ್ತೀರಿ. ನರನಿಂದ ನಾರಾಯಣ, ನಾರಿಯಿಂದ ಶ್ರೀಲಕ್ಷ್ಮಿ ಆಗುವುದಕ್ಕೋಸ್ಕರ ಈ ರಾಜಯೋಗವನ್ನು ನಾವು ತಂದೆಯಿಂದ ಕಲಿಯುತ್ತಿದ್ದೇವೆ. ನರ ನಾರಾಯಣರ ಮಂದಿರವನ್ನೂ ಸಹ ಕಟ್ಟುತ್ತಾರೆ.
ಅವರಿಗೆ ನಾಲ್ಕು ಭುಜಗಳನ್ನು ತೋರಿಸಿದ್ದಾರೆ ಏಕೆಂದರೆ ಅವರು ಜೊತೆಯಲ್ಲಿದ್ದಾರೆ. ನಾರಿ ಲಕ್ಷ್ಮಿಯ ಮಂದಿರವಿಲ್ಲ.
ನಾರಿ ಲಕ್ಷ್ಮಿಯನ್ನು ದೀಪಾವಳಿಯಲ್ಲಿ ಆಹ್ವಾನ ಮಾಡುತ್ತಾರೆ. ಅವರಿಗೆ ಮಹಾಲಕ್ಷ್ಮಿ ಎಂದು ಹೇಳುತ್ತಾರೆ. ನೀವು ಲಕ್ಷ್ಮಿಯ ಮೂರ್ತಿಗೆ ನಾಲ್ಕು ಭುಜಗಳಿಲ್ಲದೇ ತೋರಿಸುವುದಿಲ್ಲ ಏಕೆಂದರೆ ಇದು ಯುಗಲ್ ವಿಷ್ಣುವಿನ ರೂಪವಾಗಿದೆ,
ಅದನ್ನು ಎಲ್ಲರೂ ಪೂಜೆ ಮಾಡುತ್ತಾರೆ.
ಆದ್ದರಿಂದ ನಾಲ್ಕು ಭುಜಗಳನ್ನು ತೋರಿಸುತ್ತಾರೆ.
ಇದೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ.
ಮನುಷ್ಯರು ಏನನ್ನೂ ಸಹ ತಿಳಿದುಕೊಂಡಿಲ್ಲ. ಭಗವಂತನನ್ನು ಹುಡುಕುತ್ತಿದ್ದಾರೆ, ಪೆಟ್ಟನ್ನು ತಿನ್ನುತ್ತಾರೆ.
ಭಗವಂತನು ಮೇಲಿದ್ದಾರೆ,
ಅವರನ್ನು ಹುಡುಕುವ ಅವಶ್ಯಕತೆಯೇನಿದೆ. ಮಂದಿರದಲ್ಲಿ ಯಾವ ಕೃಷ್ಣನ ಚಿತ್ರವಿದೆ, ಆ ಚಿತ್ರವನ್ನು ಮನೆಯಲ್ಲೇ ಇಟ್ಟುಕೊಂಡು ಏಕೆ ಪೂಜೆ ಮಾಡುವುದಿಲ್ಲ?
ಮಂದಿರದಲ್ಲಿಯೇ ಏಕೆ ಹೋಗುತ್ತಾರೆ? ಮಂದಿರಗಳಿಗೆ ಹೋಗಿ ಹಣವನ್ನು ಇಟ್ಟು ದಾನವನ್ನು ಮಾಡುತ್ತಾರೆ. ಮನೆಯಲ್ಲಿದ್ದರೆ ದಾನವನ್ನು ಯಾರಿಗೆ ಮಾಡುವುದು? ಇದೆಲ್ಲವೂ ಭಕ್ತಿಮಾರ್ಗದ ಸಂಪ್ರದಾಯವಾಗಿದೆ. ನೀವು ಯಾವುದೇ ಚಿತ್ರವನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ ಎಂದು ತಂದೆಯು ಹೇಳುತ್ತಾರೆ.
ನೀವು ಚಿತ್ರವನ್ನು ಇಟ್ಟುಕೊಳ್ಳಲು ಶಿವತಂದೆಯನ್ನು ತಿಳಿದುಕೊಂಡಿಲ್ಲವೇ? ಏನು ಚಿತ್ರವನ್ನು ಇಟ್ಟುಕೊಂಡರೆ ಮಾತ್ರ ನೆನಪು ಮಾಡಲು ಸಾಧ್ಯವೇ?
ತಂದೆಯು ಬದುಕಿದ್ದಾರೆ ಆದರೂ ಮಕ್ಕಳು ಏಕೆ ಚಿತ್ರವನ್ನು ಇಟ್ಟುಕೊಳ್ಳುತ್ತೀರಿ? ತಂದೆಯು ನಿಮಗೆ ಜ್ಞಾನವನ್ನು ತಿಳಿಸುತ್ತಿದ್ದಾರೆ ಆದರೂ ಚಿತ್ರವನ್ನು ಇಟ್ಟುಕೊಂಡು ಏನು ಮಾಡುತ್ತೀರಿ?
ವೃದ್ಧರಾಗಿರುವ ಕಾರಣ ನೆನಪು ಮರೆತುಹೋಗುತ್ತದೆ. ಆದ್ದರಿಂದ ಚಿತ್ರಗಳನ್ನು ಇಟ್ಟುಕೊಳ್ಳಲಾಗುವುದು. ಯಾವುದೇ ದೇಹಧಾರಿಗಳನ್ನು ನೆನಪು ಮಾಡಿದಾಗ ಅಂತಿಮ ಸಮಯದಲ್ಲೂ ಸಹ ಅವರೇ ನೆನಪಿಗೆ ಬರುತ್ತಾರೆ. ಸ್ವಲ್ಪ ಅಂಶಮಾತ್ರ ಇದ್ದರೂ ಸಹ ಅವರು ನಿಮಗೆ ನೆನಪಿಗೆ ಬರುತ್ತಾರೆ. ಭಲೆ ನೀವು ಎಷ್ಟೇ ಶಿವತಂದೆಯ ಚಿತ್ರವನ್ನು ಇಟ್ಟುಕೊಂಡರೂ ಸೆಳೆತ ಇರುವವರ ಕಡೆಗೆ ಬುದ್ಧಿಯು ಹೋಗುತ್ತಿರುತ್ತದೆ. ಆದ್ದರಿಂದ ಮಕ್ಕಳೇ,
ಪೂರ್ಣ ನಷ್ಟಮೋಹಿಗಳಾಗಿ ಎಂದು ತಂದೆಯು ಹೇಳುತ್ತಾರೆ. ಯಾವುದೇ ವಸ್ತುವಿನಲ್ಲಿ ಮೋಹವಿದ್ದಾಗ ಎರಡು, ನಾಲ್ಕು ಜೊತೆ ಚಪ್ಪಲಿಯಿದ್ದಾಗ ಅದೇ ನೆನಪಿಗೆ ಬರುತ್ತದೆ. ಆದ್ದರಿಂದ ಹೆಚ್ಚಾಗಿ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬೇಡಿ ಎಂದು ಹೇಳಲಾಗುತ್ತದೆ ಏಕೆಂದರೆ ಬುದ್ಧಿಯು ಅದರಲ್ಲಿಯೇ ಹೊರಟುಹೋಗುತ್ತದೆ. ತಂದೆಯ ವಿನಃ ಯಾರನ್ನೂ ಸಹ ನೆನಪು ಮಾಡಬಾರದು.
ಲೋಭ ಬರುತ್ತದೆಯಲ್ಲವೇ. ನಾವು ಒಳ್ಳೊಳ್ಳೆಯ ವಸ್ತುಗಳನ್ನು ಇಟ್ಟುಕೊಳ್ಳಬೇಕು, 2-4 ಜೊತೆ ಚಪ್ಪಲಿಗಳನ್ನು ಇಟ್ಟುಕೊಳ್ಳಬೇಕು, ಗಡಿಯಾರವನ್ನು ಇಟ್ಟುಕೊಳ್ಳಬೇಕು, ಸ್ವಲ್ಪ ಹಣವನ್ನು ಇಟ್ಟುಕೊಳ್ಳಬೇಕು, ಇದೆಲ್ಲವನ್ನೂ ಇಟ್ಟುಕೊಂಡರೆ ಅದೇ ನೆನಪಿಗೆ ಬರುತ್ತದೆ. ನಿಮ್ಮ ಬಳಿ ಏನಿದೆಯೆಂದು ತಂದೆಗೆ ತಿಳಿದಿರಬೇಕು.
ವಾಸ್ತವಿಕವಾಗಿ ನಿಮ್ಮ ಬಳಿ ಏನೂ ಸಹ ಇಟ್ಟುಕೊಳ್ಳಬಾರದು. ಏನು ಸಿಗುತ್ತದೆ,
ಅದನ್ನೇ ಇಟ್ಟುಕೊಳ್ಳಬೇಕು. ಒಬ್ಬ ತಂದೆಯ ವಿನಹ ಬೇರೆ ಯಾವುದೂ ನೆನಪಿಗೆ ಬರಬಾರದು. ಇಷ್ಟು ಅಭ್ಯಾಸವಾದಾಗಲೇ ವಿಶ್ವದ ಮಾಲೀಕರಾಗಲು ಸಾಧ್ಯ.
ರಾಧೆ-ಕೃಷ್ಣರು ವಿಶ್ವದ ಮಾಲೀಕರಾಗಿದ್ದರು ಎನ್ನುವುದು ಯಾರಿಗೂ ಸಹ ತಿಳಿದಿಲ್ಲ.
ಕೇವಲ ಭಾರತದಲ್ಲಿ ರಾಜ್ಯ ಮಾಡಿ ಹೋದರು ಎಂದು ಹೇಳುತ್ತಾರೆ. ಜಮುನಾ ನದಿಯ ದಡದಲ್ಲಿ ಅವರ ಮಹಲ್ ಇತ್ತು, ಅವರೇ ಇಡೀ ವಿಶ್ವದ ಮಾಲೀಕರಾಗಿದ್ದರು ಎನ್ನುವುದು ನಿಮ್ಮ ಬುದ್ಧಿಯಲ್ಲಿದೆ. ಬೇಹದ್ದಿನ ತಂದೆಯೇ ಬೇಹದ್ದಿನ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ.
ಪ್ರಜೆ ಮತ್ತು ರಾಜರಲ್ಲಿ ಬಹಳಷ್ಟು ಅಂತರವಿದೆ. ಇಲ್ಲಿ ನೀವು ನರನಿಂದ ನಾರಾಯಣರಾಗಲು ಪೂರ್ಣ ಅನುಸರಣೆ ಮಾಡಬೇಕು.
ಬಡವರಿಂದ ಶ್ರೀಮಂತರಾಗಬೇಕು. ಅಷ್ಟು ನೀವು ಪುರುಷಾರ್ಥವನ್ನು ಮಾಡಬೇಕಾಗಿದೆ.
ಖುಷಿಯಿಂದ ವಿದ್ಯೆಯನ್ನು ಓದಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ.
ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1.
ಜ್ಞಾನ, ಯೋಗದಿಂದ ಎಲ್ಲರಿಗೂ ಸಹಯೋಗವನ್ನು ಕೊಡಬೇಕಾಗಿದೆ. ಡಬಲ್ ಅಹಿಂಸಕರಾಗಬೇಕಾಗಿದೆ. ಅನ್ಯರಿಗೆ ದುಃಖವನ್ನು ಕೊಡಬಾರದಾಗಿದೆ.
2.
ನಷ್ಟಮೋಹಿಗಳಾಗಬೇಕಾಗಿದೆ. ಯಾವುದೇ ವಸ್ತುವಿನಲ್ಲಿ ನಿಮ್ಮ ಬುದ್ಧಿಯ ಸೆಳೆತವನ್ನು ಇಟ್ಟುಕೊಳ್ಳಬಾರದಾಗಿದೆ. ಒಬ್ಬ ತಂದೆಯ ನೆನಪಿನಲ್ಲಿ ಸದಾ ಇರುವ ಅಭ್ಯಾಸವನ್ನು ಇಟ್ಟುಕೊಳ್ಳಬೇಕಾಗಿದೆ.
ವರದಾನ:
ಬ್ರಾಹ್ಮಣ ಜೀವನದಲ್ಲಿ
ನೆನಪು ಮತ್ತು
ಸೇವೆಯ ಆಧಾರದ
ಮೂಲಕ ಶಕ್ತಿಶಾಲಿಯಾಗುವಂತಹ
ಮಾಯಾಜೀತ್ ಭವ
.
ಬ್ರಾಹ್ಮಣ ಜೀವನದ ಆಧಾರವಾಗಿದೆ ನೆನಪು ಮತ್ತು ಸೇವೆ. ಒಂದು ವೇಳೆ ನೆನಪು ಮತ್ತು ಸೇವೆಯ ಆಧಾರ ಬಲಹೀನತೆಯಾಗಿದ್ದಲ್ಲಿ ಬ್ರಾಹ್ಮಣ ಜೀವನ ಕೆಲವೊಮ್ಮೆ ತೀವ್ರವಾಗಿ ಚಲಿಸುವುದು, ಕೆಲವೊಮ್ಮೆ ನಿಧಾನವಾಗಿ ಚಲಿಸುವುದು. ಯಾರದೇ ಸಹಯೋಗ ಸಿಗಲಿ, ಯಾರದೇ ಜೊತೆ ಸಿಗಲಿ, ಯಾವುದೇ ಪರಿಸ್ಥಿತಿ ಇದ್ದಲ್ಲಿ ಆಗ ಚಲಿಸುವುದು ಇಲ್ಲದೇ ಹೋದರೆ ಸಡಿಲವಾಗಿ ಬಿಡುವುದು ಆದ್ದರಿಂದ ನೆನಪು ಮತ್ತು ಸೇವೆ ಎರಡರಲ್ಲೂ ತೀವ್ರಗತಿ ಅವಶ್ಯಕವಿದೆ. ನೆನಪು ಮತ್ತು ನಿಸ್ವಾರ್ಥ ಸೇವೆ ಇದ್ದಲ್ಲಿ ಮಾಯಾಜೀತ್ ಆಗುವುದು ಬಹಳ ಸಹಜವಾಗಿದೆ ನಂತರ ಪ್ರತಿ ಕರ್ಮದಲ್ಲಿ ವಿಜಯ ಕಂಡು ಬರುವುದು.
ಸ್ಲೋಗನ್:
ಯಾರು ಸರ್ವ ಶಕ್ತಿಗಳಿಂದ ಸಂಪನ್ನರಾಗಿರುತ್ತಾರೆ ಅವರೇ ವಿಘ್ನ-ವಿನಾಶಕರಾಗುತ್ತಾರೆ.
0 Comments